ಕ್ರಿಸ್ಮಸ್ ! ಈಸ್ಟರ್ !ಕ್ರೈಸ್ತತ್ವವೋ? ಮೂರ್ತಿಪೂಜಕವೋ ?

Article Body: 

ಸತ್ಯವೇದದಲ್ಲಿ, ಜನರು `ಕುರಿಗಳಿಗೆ' ಹೋಲಿಸಲ್ಪಟ್ಟಿದ್ದಾರೆ. ಕುರಿಗಳು, ಯಾವ ಪ್ರಶ್ನೆಯನ್ನು ಕೇಳದೆ ಕುರುಡಾಗಿ ಹಿಂಬಾಲಿಸುವ ಸ್ವಭಾವವುಳ್ಳದ್ದಾಗಿವೆ. ಆದರೆ ಕರ್ತನಾದ ಯೇಸುವು - ಪ್ರತಿಯೊಂದನ್ನೂ ದೇವರ ವಾಕ್ಯಕ್ಕೆ ಹೊಂದಿಸಿ, ಪರಿಶೋಧಿಸುವಂತೆ ನಮಗೆ ಕಲಿಸಿಕೊಟ್ಟಿದ್ದಾರೆ. ಮಾನವ ಸಂಪ್ರದಾಯಗಳನ್ನು ಯಾವಾಗಲೂ ಹೆಚ್ಚಿಸಿ ಹೊಗಳಿದವರು ಫರಿಸಾಯರು ಆಗಿದ್ದರು. ಆದರೆ ದೇವರ ವಾಕ್ಯವನ್ನು ಯಾವಾಗಲೂ ಸನ್ಮಾನಿಸಿ ಹೊಗಳಿದಾತನು ನಮ್ಮ ಯೇಸು ಸ್ವಾಮಿಯು ಆಗಿದ್ದರು. ಹೌದು, ``ಮನುಷ್ಯನು ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು''. (ಮತ್ತಾಯ 4:4). ದೇವರ ವಾಕ್ಯವೋ? ಇಲ್ಲವೇ ಮಾನವ ಸಂಪ್ರದಾಯವೋ? ಎಂಬುದೇ ಯೇಸುಸ್ವಾಮಿಯು ಫರಿಸಾಯರೊಂದಿಗೆ ಹೋರಾಡಿದ ಯುದ್ಧವಾಗಿತ್ತು. ಅದು ಇಂದಿಗೂ ಮುಂದುವರೆಯುತ್ತಿರುವ ಯುದ್ಧವಾಗಿದೆ. ನಿಷ್ಕಳಂಕವಾದ ದೇವರ ವಾಕ್ಯದಿಂದ ಮನುಷ್ಯ ಸಂಪ್ರದಾಯವನ್ನು ಪ್ರತ್ಯೇಕಿಸುವಂತೆಯೇ ನಾವು ಸಹ ಕರೆಯಲ್ಪಟ್ಟಿದ್ದೇವೆ.

ಕ್ರಿಸ್ಮಸ್ !

ಮೊದಲನೆಯದಾಗಿ ಕ್ರಿಸ್ಮಸ್ ವಿಷಯವಾಗಿ ನೋಡೋಣ. ಇಂದು ಅನೇಕರು ಯೇಸುಕ್ರಿಸ್ತನ ಜನ್ಮದಿನವನ್ನು `ಕ್ರಿಸ್ಮಸ್, ಹಬ್ಬವೆಂದು ಕೊಂಡಾಡುತ್ತಾರೆ! ಎಲ್ಲಾ ಧರ್ಮಕ್ಕೆ ಸೇರಿದ ವ್ಯಾಪಾರಿಗಳೂ `ಕ್ರಿಸ್ಮಸ್' ಹಬ್ಬವನ್ನು ಹಂಬಲಿಸಿ ಎದುರು ನೋಡುತ್ತಾರೆ. ಯಾಕೆಂದರೆ ಅದು ಅವರಿಗೆ ಒಳ್ಳೇ ಲಾಭವನ್ನು ದೊರಕಿಸುವ ಕಾಲ! ಕ್ರಿಸ್ಮಸ್ ಕಾರ್ಡುಗಳಿಗಾಗಿಯೂ, ಕ್ರಿಸ್ಮಸ್ ಕೊಡುಗೆಗಳಿಗಾಗಿಯೂ ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಲ್ಪಡುತ್ತದೆಯಲ್ಲವೇ? ಮಾತ್ರವಲ್ಲದೆ ಕ್ರಿಸ್ಮಸ್ ದಿವಸದಲ್ಲಿ ಮದ್ಯಪಾನ ಅಂಗಡಿಯ ವ್ಯಾಪಾರವೂ ಹೆಚ್ಚುತ್ತದೆ. ಅಪಘಾತಗಳು ಸಹ ಕ್ರಿಸ್ಮಸ್ ಕಾಲದಲ್ಲಿ ಹೆಚ್ಚಾಗುತ್ತವೆ.

ಈ ಕ್ರಿಸ್ಮಸ್ ನಿಜವಾಗಿಯೂ ದೇವರ ಮಗನ ಜನ್ಮ ದಿನವೋ? ಇಲ್ಲವೇ `ಮತ್ತೊಬ್ಬ ಯೇಸುವಿನ' (2 ಕೊರಿಂಥ 11:4) ಜನ್ಮ ದಿನವೋ?

1. ದೇವರ ವಾಕ್ಯದ ಆಧಾರದ ಪ್ರಕಾರ ದೇವರು ತಾನೇ ಯೇಸುವಿನ ಜನ್ಮ ದಿನವನ್ನು ಮರೆಮಾಡಿದ್ದಾನೆ; ಯಾಕೆಂದರೆ ಈ ಜನ್ಮದಿನವನ್ನು ತನ್ನ ಸಭೆಯು ಆಚರಿಸುವದನ್ನು ಇಷ್ಟಪಡಲಿಲ್ಲವೆಂಬ ಸತ್ಯವು ಇದರಿಂದ ಸ್ಪಷ್ಟವಾಗುತ್ತದೆ.

ಮೊದಲನೆಯದಾಗಿ ನಾವು ದೇವರ ವಾಕ್ಯವನ್ನು ಸೂಕ್ಷ್ಮವಾಗಿ ನೋಡೋಣ. ಬೆತ್ಲೆಹೇಮಿನಲ್ಲಿ ಯೇಸುವು ಜನಿಸಿದ ಆ ರಾತ್ರಿಯಲ್ಲಿ, ಯೂದಾಯ ಸೀಮೆಯ ಹೊಲದಲ್ಲಿ ಕುರುಬರು ಕುರಿ ಹಿಂಡನ್ನು ಕಾಯುತ್ತಿದ್ದರೆಂದು, ಸತ್ಯವೇದವು ಹೇಳುತ್ತದೆ. ಆದರೆ ಪಾಲೆಸ್ತೀನಿನಲ್ಲಿ ಅಕ್ಟೋಬರ್ ತಿಂಗಳಿಂದ ಫೆಬ್ರವರಿ ತಿಂಗಳವರೆಗೆ ಬಹು ಚಳಿ ಹಾಗೂ ಮಳೆಯಿರುವ ಕಾಲವಾಗಿರುವುದು. ಆದುದರಿಂದ ಪಾಲೆಸ್ತೀನಿನ ಕುರುಬರು ಈ ಕಾಲದಲ್ಲಿ ತಮ್ಮ ಕುರಿ ಹಿಂಡನ್ನು ತೆರೆದ ಹೊಲದಲ್ಲಿ ಕಾಯುವದಿಲ್ಲ. ಇದರ ಪ್ರಕಾರವಾಗಿ ಯೇಸುಸ್ವಾಮಿಯು ಮಾರ್ಚ್ ತಿಂಗಳಿಂದ ಸೆಪ್ಟಂಬರ್ ತಿಂಗಳ ಮಧ್ಯದಲ್ಲಿ ನಿಶ್ಚಯವಾಗಿ ಜನಿಸಿರಬೇಕು. ಹಾಗಾದರೆ ಡಿಸೆಂಬರ್ 25ನೇ ತಾರೀಖು ? ಹೌದು, ಅದು ಖಂಡಿತವಾಗಿ ಸತ್ಯವೇದವು ಹೇಳುವ `ಮತ್ತೊಬ್ಬ ಯೇಸುವಿನ' ಜನ್ಮ ದಿನವಾಗಿದೆ ! ಸತ್ಯವೇದವನ್ನು ವಿಚಾರಿಸದ ಕ್ರೈಸ್ತರನ್ನು ಸೈತಾನನು ಎಷ್ಟು ಚೆನ್ನಾಗಿ ವಂಚಿಸಿದ್ದಾನೆ ನೋಡಿದಿರಾ !!

ಒಂದು ವೇಳೆ ನಾವು ಯೇಸುವಿನ ಸರಿಯಾದ ಜನ್ಮದಿನವನ್ನು ತಿಳಿದುಕೊಂಡಾಗ್ಯೂ, ತನ್ನ ಜನರು ಈ ಜನ್ಮದಿನವನ್ನು ಆಚರಿಸುವುದು ದೇವರ ಚಿತ್ತವೋ? ನಿಶ್ಚಯವಾಗಿ ಯೇಸುವಿನ ತಾಯಿಯಾದ ಮರಿಯಳಿಗೆ, ಯೇಸುವಿನ ಜನ್ಮದಿನವು ತಿಳಿದಿರಬೇಕು. ಈ ಮರಿಯಳು, ಪಂಚಾಶತ್ತಮ ದಿನದನಂತರ ಅಪೋಸ್ತಲರೊಂದಿಗೆ ಅನೇಕ ವರ್ಷಗಳಿದ್ದಳು. ಹಾಗಿದ್ದರೂ, ಒಂದು ಸುವಾರ್ತೆಯಲ್ಲಿಯೂ ಯೇಸುವಿನ ಜನ್ಮ ದಿನದ ತಾರೀಖನ್ನು ತಿಳಿಸಲಿಲ್ಲವೇ ? ಯಾಕೆ ? ಪ್ರಿಯರೇ, ಯೇಸುವಿನ ಜನ್ಮ ದಿನದ ತಾರೀಖನ್ನು ದೇವರು ತಾನೇ ಬಹಿರಂಗವಾಗಿ ಮರೆಮಾಡಿರುತ್ತಾನೆ. ಯಾಕೆಂದರೆ, ಈ ಜನ್ಮ ದಿನವನ್ನು ತನ್ನ ಸಭೆಯು ಆಚರಿಸುವದು ದೇವರ ಚಿತ್ತವಲ್ಲ.

ಇಹಲೋಕದ ದುಷ್ಟ ಅರಸರಾಗಿದ್ದ ಫರೋಹನು ಮತ್ತು ಹೆರೋದನು ತಮ್ಮ ಜನ್ಮ ದಿನವನ್ನು ಆಚರಿಸಿದರು (ಆದಿ. 40:20; ಮಾರ್ಕ 6:21) ಎಂದು ಸತ್ಯವೇದವು ಹೇಳುತ್ತದೆ. ಈ ದುಷ್ಟರೊಂದಿಗೆ ಯೇಸುವಿನ ಜನ್ಮ ದಿನವನ್ನು ಸೇರಿಸಲು ದೇವರು ಬಯಸಲಿಲ್ಲ.

ಹಳೆಯ ಒಡಂಬಡಿಕೆಯಲ್ಲಿ ದೇವರು ಪ್ರತ್ಯೇಕವಾದ ಕೆಲವು ದಿನಗಳನ್ನು ಪರಿಶುದ್ಧ ದಿನಗಳಾಗಿ ಆಚರಿಸಲು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದನು. ಆದರೆ ಅವು ಕೇವಲ ಛಾಯೆಯಾಗಿತ್ತು ( ಕೊಲೊ. 2:16, 17 ). ಈಗಲಾದರೋ ನಾವು ಕ್ರಿಸ್ತನಲ್ಲಿ ನಿಜಸ್ವರೂಪವನ್ನು ಪಡೆದುಕೊಂಡಿದ್ದೇವೆ. ಆದುದರಿಂದ ನಮ್ಮ ಜೀವಿತದ ಪ್ರತಿದಿನವೂ ಕ್ರಿಸ್ತನಲ್ಲಿ ಪರಿಶುದ್ಧವಾಗಿರಬೇಕೆಂಬದು ದೇವರ ಚಿತ್ತವಾಗಿದೆ. ಈ ಹೊಸ ಒಡಂಬಡಿಕೆಯ ಮೇರೆಗೆ ಸಬ್ಬತ್ ದಿನವು ಸಹ ಗತಿಸಿಹೋಗಿದೆ.

ಹಾಗಿದ್ದರೆ, ಈ ಕ್ರಿಸ್ಮಸ್ ಹಾಗು ಈಸ್ಟರ್ ಕ್ರೈಸ್ತತ್ವದಲ್ಲಿ ಪ್ರವೇಶಿಸಿದ್ದು ಹೇಗೆ ? ಯಾವರೀತಿಯಾಗಿ ಸೈತಾನನ ಕುಯುಕ್ತಿಯಿಂದ ಶಿಶು ದೀಕ್ಷಾಸ್ನಾನ, ಸಭಾಪಾಲಕ ಸ್ಥಾನ ಮುಂತಾದ ಮೂಢ ಮಾನವ ಸಂಪ್ರದಾಯಗಳು ಸಭೆಯಲ್ಲಿ ಪ್ರವೇಶಿಸಿದವೋ - ಹಾಗೆಯೇ ಈ ಕ್ರಿಸ್ಮಸ್ ಹಾಗು ಈಸ್ಟರ್ ಸಹ ಪ್ರವೇಶಿಸಿಬಿಟ್ಟಿವೆ !!

2. ಚರಿತ್ರೆಯ ಪ್ರಕಾರವಾಗಿ, ಡಿಸೆಂಬರ್ 25ನೇ ತಾರೀಖು ಸೂರ್ಯ ದೇವರ ಜನ್ಮ ದಿನವಾಗಿರುತ್ತದೆ ! ಇದನ್ನು ಇನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ತಾರೀಖು, ಬಾಬೆಲಿನ `ಸೆಮಿರಮಿಸ್' ಎಂಬಾಕೆಯು ಅನೈತಿಕವಾಗಿ ಹಡೆದ ನಿಮ್ರೋದನ ಜನ್ಮ ದಿನವಾಗಿದೆ !! ಅಂದಿನಿಂದ ಪ್ರಾರಂಭಿಸಿದ `ತಾಯಿ-ಮಗನ' ಆರಾಧನೆ ಇಂದು ಕ್ರಿಸ್ಮಸ್ ಎಂಬ ಹೆಸರಿನಲ್ಲಿ ಮುಂದುವರಿಯುತ್ತಿದೆ. !!!

4ನೇ ಶತಮಾನದಲ್ಲಿ ಚಕ್ರವರ್ತಿಯಾದ ಕಾನ್ಸ್‍ಟನ್‍ಟೈನ್ ಕ್ರೈಸ್ತ ಧರ್ಮವನ್ನು ರೋಮಾ ಸರ್ಕಾರದ ಧರ್ಮವನ್ನಾಗಿ ಪ್ರಕಟಿಸಿದನು. ಆಗ ಅನೇಕರು ತಮ್ಮ ಹೃದಯದಲ್ಲಿ ಯಾವ ಮಾರ್ಪಾಟವೂ ಇಲ್ಲದೆ ``ಹೆಸರಿಗಾಗಿ'' ಕ್ರೈಸ್ತರಾಗಿ ಮಾರ್ಪಟ್ಟರು. ಆ ರೀತಿಯಾಗಿ ಅವರು ಮಾರ್ಪಟ್ಟಿದ್ದಾಗ್ಯೂ, ತಾವು ಆರಾಧಿಸುತ್ತಿದ್ದ ಸೂರ್ಯದೇವರ ಎರಡು ಮಹಾಹಬ್ಬಗಳನ್ನು ಬಿಟ್ಟು ಬಿಡಲು ಅವರಿಗೆ ಮನಸಿರಲಿಲ್ಲ. ಈ ಎರಡು ಮಹಾಹಬ್ಬಗಳು ಯಾವವೆಂದರೇ 1) ಸೂರ್ಯದೇವರ ಜನ್ಮ ದಿನವಾದ ಡಿಸೆಂಬರ್ 25 ನೇ ತಾರೀಖು. ಈ ದಿವಸದಲ್ಲಿಯೇ ದಕ್ಷಿಣ ಗೋಳದಲ್ಲಿ ಬಿದ್ದ ಸೂರ್ಯನು ತಿರುಗಿ ತನ್ನ ಪ್ರಯಾಣವನ್ನು ಮುಂಚೆ ತಾನಿದ್ದ ಸ್ಥಳಕ್ಕೆ ತಿರುಗುವನು. 2) ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಆಚರಿಸುವ ವಸಂತಕಾಲ ಹಬ್ಬ. ಅಂದರೆ ಚಳಿಗಾಲ ತೀರಿ, ತಮ್ಮ ಸೂರ್ಯದೇವರಿಂದ ಬೆಚ್ಚಗಿರುವ ಬೇಸಿಗೆ ಕಾಲವು ಕಾಣಿಸುವ ದಿವಸ. ಇವರು ತಮ್ಮ ಸೂರ್ಯದೇವರಿಗೆ `ಯೇಸು' ಎಂದು ಹೆಸರು ಬದಲಾಯಿಸಿ ತಮ್ಮ ಎರಡು ಪ್ರಧಾನ ಹಬ್ಬಗಳಲ್ಲಿ ಒಂದನ್ನು ಕ್ರಿಸ್ಮಸ್ ಎಂತಲೂ, ಮತ್ತೊಂದನ್ನು ಈಸ್ಟರಾಗಿಯೂ ಬದಲಾಯಿಸಿ ಕ್ರೈಸ್ತ ಹಬ್ಬಗಳನ್ನು ಮುಂದುವರಿಸಿ ಆಚರಿಸುವವರಾದರು. !!!

ಅಧಿಕಾರ ಪೂರ್ವಕವಾದ ಚರಿತ್ರೆಯನ್ನು ದಾಖಲು ಪಡಿಸಿರುವ `ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕಾ' ಪುಸ್ತಕವು ಕ್ರಿಸ್ಮಸ್ ಹೇಗೆ ಪ್ರಾರಂಭವಾಯಿತೆಂದು ಈ ರೀತಿಯಾಗಿ ಪ್ರಕಟಿಸುತ್ತದೆ.

``ಡಿಸೆಂಬರ್ 25 ನೇ ತಾರೀಖು `ಬಿಲ್ಲೊಗಾಲಸಿನ' ತಪ್ಪದೆ ಮಾಡುವ ಸೂರ್ಯನ `ಪುರಾಣ ಹಬ್ಬ' (ಒiಣhಡಿಚಿiಛಿ ಜಿeಚಿsಣ) ದಿನವಾಗಿರುತ್ತದೆ. ಕ್ರಿಸ್ಮಸ್ ಕಾಲದ ಆಚಾರಗಳ ಕ್ರೈಸ್ತ ಕಾಲಕ್ಕೆ ಮುಂಚೆಯೇ ಇದ್ದ ಪುರಾಣಗಳಿಂದಲೂ, ಆಚಾರ ಪದ್ಧತಿಗಳಿಂದಲೂ ಅವಲಂಭಿಸಿ ಬಂದ ಮಾರ್ಗರೀತಿಯಾಗಿರುತ್ತದೆ. ಕ್ರಿಸ್ತನು ಜನಿಸಿದ ಸರಿಯಾದ ವರ್ಷವನ್ನಾಗಲಿ, ತಾರೀಖನ್ನಾಗಲಿ ತೃಪ್ತಿಕರವಾದ ರೀತಿಯಲ್ಲಿ ಎಂದೂ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಆದರೆ, ಕ್ರಿ.ಶ. 440 ನೇ ಇಸವಿಯಲ್ಲಿದ್ದ ಚರ್ಚ್ ಪಾದರಿಗಳು ಕ್ರಿಸ್ತನು ಹುಟ್ಟಿದ ಕಾರ್ಯಕ್ರಮವನ್ನು ಆಚರಿಸುವದಕ್ಕೆ ಒಂದು ತಾರೀಖನ್ನು ನಿರ್ಣಯಿಸಿದರು. ಯಾವರೀತಿಯಾಗಿ ? ಅವರು ಬಹು ಬುದ್ಧಿವಂತರಾಗಿ (?), ಜನರಿಂದ ಅವಲಂಭಿಸಿ ಆಚರಿಸಲ್ಪಟ್ಟು ಅವರ ಮನಸ್ಸಿನಲ್ಲಿ ನೆಲೆಯಾಗಿದ್ದ ``ಸೂರ್ಯದೇವರ ಜನ್ಮದಿನ''ವನ್ನು ``ಕ್ರಿಸ್ತನ ಜನ್ಮ ದಿನವೆಂದು'' ನೇಮಿಸಿದರು. ಲೋಕವೆಲ್ಲಾ ಇರುವ ಅನ್ಯಜನರ ದೇಶದಲ್ಲಿ ಕ್ರೈಸ್ತ ಧರ್ಮವು ಹಬ್ಬಿದ ಬಳಿಕ, ಈ `ಸೂರ್ಯ ದೇವರ ಜನ್ಮದಿನವನ್ನು ಆಚರಿಸುವ ಅಭ್ಯಾಸವು' ಕ್ರೈಸ್ತತ್ವದೊಂದಿಗೆ ಬಲವಾಗಿ ಇಜ್ಜೋಡಾಯಿತು'' ಆಧಾರ: (Mother and child) 1953 ವರ್ಷದ ಮುದ್ರಣ, 5ನೇ ಭಾಗ ಪುಟ (642-643).

ಈ ಮೂರ್ತಿಪೂಜಕ ಆಚಾರಗಳು, ನಿಮ್ರೋದನಿಂದ ಪ್ರಾರಂಭಿಸಲ್ಪಟ್ಟು ಬಾಬೆಲಿನ ಮತದಿಂದ ಉಂಟಾಗಿರುತ್ತದೆ (ಆದಿಕಾಂಡ 10:8-10). ಅವನು ತೀರಿಹೋದ ಮೇಲೆ, ಅವನ ಹೆಂಡತಿಯಾದ ಸೆಮಿರಮಿಸ್ ತನ್ನ ಅನೈತಿಕ ಜೀವನದಿಂದ ಒಂದು ಮಗುವನ್ನು ಹಡೆದಳು. ಆ ಮಗುವಿನ ವಿಷಯವಾಗಿ, ನಿಮ್ರೋದನು ಪುನಃ ಜೀವಹೊಂದಿ ಜನಿಸಿದ್ದಾನೆ ಎಂದು ಪ್ರಕಟಿಸಿದಳು. ಈ ರೀತಿಯಾಗಿ, ತಾಯಿ-ಮಗ, (ಒoಣheಡಿ ಚಿಟಿಜ ಅhiಟಜ) ಎಂಬ ಆರಾಧನೆಯು ಬಾಬೆಲಿನಲ್ಲಿ ಪ್ರಾರಂಭಿಸಿತು!! ಅದೇ ಆರಾಧನೆಯನ್ನು, 2000 ವರ್ಷಗಳ ನಂತರ ರೋಮನ್ ಕ್ಯಾಥೋಲಿಕರು ``ಮರಿಯಮ್ಮ-ಯೇಸು'' ಎಂದು ಬದಲಾಯಿಸಿಕೊಂಡರು. ಪ್ರೊಟೆಸ್ಟಂಟರು ಇದಕ್ಕೆ ಹೊರತಾಗಿಲ್ಲ ! ಅವರು ಕ್ರಿಸ್ಮಸ್ ಕಾಲದಲ್ಲಿ ಹಾಡುವ, `ಮಂಗಳ ಶ್ರೀ ರಾತ್ರಿಯಲ್ಲಿ (Siಟeಟಿಣ ಓighಣ) ಮುಂತಾದ ಹಾಡುಗಳಲ್ಲಿ `ತಾಯಿ-ಮಗನ' ಆರಾಧನೆಯನ್ನು ಹಾಡುತ್ತಾರೆ! ಈ ಬಾಬೆಲಿನ ಮಾರ್ಗವು ಕ್ರೈಸ್ತತ್ವದಲ್ಲಿ ಎಷ್ಟು ಆಳವಾಗಿ ಹಬ್ಬಿದೆ ನೋಡಿರಿ! ಈ `ಶಿಶು-ದೇವರ' ಜನ್ಮದಿನವು, ಪೂರ್ವದ ಬಾಬೆಲಿನವರಿಂದ ಡೆಸೆಂಬರ್ 25ನೇ ತಾರೀಖಿನಂದೇ ಆಚರಿಸಲ್ಪಟ್ಟಿತು.

3. `ಕ್ರಿಸ್ಮಸ್ ಮರವು' ಸಂಪೂರ್ಣವಾಗಿ ಮೂರ್ತಿಪೂಜೆಯ ಮೂಲವಾಗಿರುತ್ತದೆ.

ಈ ಸೆಮಿರಮಿಸ್ ಎಂಬಾಕೆಯೇ ಗಗನದ ಒಡತಿಯಾಗಿ (ಯೆರೆಮೀಯ 44:19) ಮಾರ್ಪಟ್ಟು ಅನೇಕ ಶತಮಾನಗಳ ನಂತರ ಎಫೆಸದವರಿಂದ ಅರ್ತೆಮೀದೇವಿಯಾಗಿ ಆರಾಧಿಸಲ್ಪಟ್ಟಳು (ಅ.ಕೃತ್ಯ. 19:28). ಈ ಸೆಮಿರಮಿಸ್‍ಳು, ನಿಮ್ರೊದನು ಪುನಃ ಜೀವಹೊಂದಿ ಭೂಲೋಕಕ್ಕೆ ಪರಲೋಕದ ಕೊಡುಗೆಗಳನ್ನು ತಂದಿದ್ದಾನೆ' ಎಂಬುದನ್ನು ಎತ್ತಿ ತೋರಿಸುವದಕ್ಕೆ ಗುರುತಾಗಿ, `ಸತ್ತು ಬಿದ್ದ ಒಂದು ಮರದ ಬುಡದಿಂದ ಯಾವಾಗಲೂ ಹಸಿರಾಗಿರುವ ಒಂದು ಪೂರ್ಣ ಮರವು ಒಂದೇ ರಾತ್ರಿಯಲ್ಲಿ ಬೆಳೆದು ಬಿಟ್ಟಿದೆ' ಎಂದು ಪ್ರಕಟಿಸಿದಳು! ಅಂದಿನಿಂದ ಸೂಜಿ ಎಲೆಯ ಮರವನ್ನು ಕಡಿದು, ಅದರಲ್ಲಿ ಕೊಡುಗೆಗಳನ್ನು ತೂಗು ಹಾಕುವ ಅಭ್ಯಾಸವು ಪ್ರಾರಂಭಿಸಿತು. ಹೌದು, ಅದೇ ಇಂದು ಕ್ರಿಸ್ಮಸ್ ಮರವಾಗಿದೆ !

ಕರ್ತನು ಹೀಗೆ ಹೇಳುತ್ತಾನೆ - ``ಜನಾಂಗಗಳ ಆಚರಣೆಯನ್ನು ಅಭ್ಯಾಸಿಸದಿರಿ...., ಜನಾಂಗಗಳ ಕಟ್ಟಳೆಗಳು ಬರಿದೇ; ಅರಣ್ಯದ ಮರವನ್ನು ಕತ್ತರಿಸುವರು....ಅದನ್ನು ಬೆಳ್ಳಿ ಬಂಗಾರಗಳಿಂದ ಭೂಷಿಸುತ್ತಾರೆ; ಅಲುಗದ ಹಾಗೆ ಮೊಳೆಗಳಿಂದ ಸುತ್ತಿಗೆಯಿಂದ ಭದ್ರಪಡಿಸುತ್ತಾರೆ''!! (ಯೆರೆಮೀಯ 10:2-4).

ಈಸ್ಟರ್ !

`ಈಸ್ಟರ್' ಎಂಬ ಪದವು, ಗಗನದ ಒಡತಿಯ ಬಿರುದುಗಳಲ್ಲಿ ಒಂದಾಗಿರುವ, `ಇಸ್ತರ್' `ಅಷ್ಟೋರೆತ್' ಎಂಬ ಹೆಸರುಗಳಿಂದ ಉಂಟಾದದ್ದಾಗಿದೆ. 1 ಅರಸು 11:5 ನೇ ವಚನದ ಪ್ರಕಾರ, ಇದು ಸೊಲೊಮೋನನು ಆರಾಧಿಸಿ ಬಂದ ಒಂದು ವಿಗ್ರಹವಾಗಿದೆ. ಈ ಹೆಸರು, ವಿವಿಧ ರಾಷ್ಟ್ರಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ಮಾರ್ಪಡಿಸಿ ಹೇಳಲ್ಪಡುತ್ತದೆ.

1. ಚರಿತ್ರೆಯ ಪ್ರಕಾರವಾಗಿ, `ಈಸ್ಟರ್'-`ಯುಸ್ತರ್' ಎಂಬದು ವಸಂತಕಾಲದ ದೇವತೆಯು ! ಚಳಿಗಾಲವು ಸತ್ತು ಸೂರ್ಯನ ಮುಖವು ಕಾಣುವ ಮಹಾ ಸಂತೋಷದ ಹಬ್ಬವಿದು. ಇದೇ ಇಂದು ಕ್ರೈಸ್ತರಿಗೆ `ಕ್ರಿಸ್ತನ ಪುನರುತ್ಧಾನದ' ಹಬ್ಬವಾಗಿದೆ.

`ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕ' ಈ ರೀತಿಯಾಗಿ ಹೇಳುತ್ತದೆ:

``ಈಸ್ಟರ್ ಎಂಬ ಆಂಗ್ಲ ಪದವು ಜರ್ಮನಿನ `ಆಸ್ಟರ್'- ಎಂಬ ಪದದಿಂದ ಬಂದದ್ದಾಗಿದೆ: ಇದರಿಂದ, ಮಧ್ಯ ಯೂರೋಪಿನ ಟಿಯುಟಾನಿಕ್ ಕುಲದವರಿಗೆ, ಕ್ರೈಸ್ತತ್ವವು ಬಹು ಋಣವುಳ್ಳದ್ದಾಗಿದೆ (!). ಕ್ರೈಸ್ತ ಧರ್ಮವು ಟಿಯುಟಾನಿಕ್‍ನಲ್ಲಿ ಹಬ್ಬಿದಾಗ, ಅಲ್ಲಿನ ಜನರು ಆಚರಿಸಿದ `ವಸಂತ ಕಾಲ ಹಬ್ಬಕ್ಕೆ' ಸಂಬಂಧಿಸಿದ ಅನ್ಯಶಾಸ್ತ್ರಗಳು ಹಾಗೂ ಅಭ್ಯಾಸಗಳು ಈ ಈಸ್ಟರ್ ಎಂಬ ಕ್ರೈಸ್ತರ ಮಹಾ ಹಬ್ಬದೊಂದಿಗೆ ಸೇರಿ ಇಜ್ಜೋಡಾಯಿತು. ``ಪುನರುತ್ಥಾನದ ಹಬ್ಬವು ಈ ವಸಂತ ಕಾಲದಲ್ಲಿಯೇ ನಿರ್ಣಯಿಸಲ್ಪಟ್ಟಿತು. ಹೇಗಂದರೆ ಚಳಿಗಾಲವು ಸತ್ತು ಸೂರ್ಯನ ಮುಖವು ಕಾಣಿಸಿ, ಹೊಸ ವರ್ಷದ ಪ್ರಾರಂಭವನ್ನು ಸನ್ಮಾನಿಸುವಂತೆ ಸೂಚಿಸುವ ಟಿಯುಟಾನಿನ ಮಹೋತ್ಸವದ ಹಬ್ಬದೋಂದಿಗೆ, ಮರಣವನ್ನು ಜಯಿಸಿ ಪುನರುತ್ಥಾನವಾದ ಜೀವನವನ್ನು ಆಚರಿಸುವ ಹಬ್ಬವನ್ನು ನಿರ್ಣಯಿಸುವುದು `ದೇವಾಲಯದವರಿಗೆ' ಬಹು ಸುಲಭವಾಗಿತ್ತು. `ಯುಸ್ತರ್' ಇಲ್ಲವೇ `ಅಷ್ಟೋರೆತ್' ಎಂಬ ವಸಂತದ ದೇವತೆಯೇ, ಕ್ರೈಸ್ತರ ಪರಿಶುದ್ಧ ದಿನಕ್ಕೆ ಹೆಸರನ್ನು ದಾನ ಮಾಡಿರುತ್ತಾಳೆ. ಮೊಟ್ಟೆಯನ್ನು ಕೃತಾರ್ಥತೆ ಹಾಗೂ ಹೊಸತನದ ಗುರುತಾಗಿ ಉಪಯೋಗಿಸುವುದು ಪೂರ್ವ ಐಗುಪ್ತರ ಹಾಗೂ ಪಾರಶಿಯರ ಅಭ್ಯಾಸವಾಗಿದೆ. ಇವರು ಸಹ ವಸಂತಕಾಲದ ಹಬ್ಬದಂದು ಮೊಟ್ಟೆಗಳಿಗೆ ಬಣ್ಣವನ್ನು ಹಾಕಿ ಅದನ್ನು ಉಣ್ಣುವ ಆಚಾರವನ್ನಿಟ್ಟುಕೊಂಡಿದ್ದರು. ಹೀಗೆ ಮೊಟ್ಟೆಯನ್ನು ಒಂದು ಜೀವಿಸುವುದರ ಗುರುತಾಗಿ ಭಾವಿಸಿದ ಪ್ರಾಚೀನ `ವಿಚಾರವು' ಅದೇ ಮೊಟ್ಟೆಯು ಪುನರುತ್ಥಾನದ ಗುರುತಾಗಿರುವ `ವಿಚಾರಕ್ಕೆ' ರೂಪಗೊಂಡಿತು. ಪೂರ್ವಕಾಲದ ಮೂಢ ನಂಬಿಕೆಯ ಪ್ರಕಾರವಾಗಿಯೇ, ಈಸ್ಟರಿನ ಮುಂಜಾನೆ ಸೂರ್ಯನು ಸ್ವರ್ಗದಲ್ಲಿ ನೃತ್ಯ ಮಾಡುವುದಾಗಿ ಭಾವಿಸಿದರು. ಈ ನಂಬಿಕೆಯ ಆಧಾರದಿಂದಲೇ ಅನ್ಯರು ವಸಂತಕಾಲದ ಹಬ್ಬದಂದು, ಸೂರ್ಯನಿಗೆ ಆರಾಧನೆ ಮಾಡುವುದಕ್ಕಾಗಿ ಸೇರಿ ಬಂದವರು ಸಹ ನೃತ್ಯ ಮಾಡುವರು....ಈ ಹೆಜ್ಜೆಯನ್ನೇ ಪ್ರೊಟೆಸ್ಟಂಟ್ ಸಭೆಯವರು ಈಸ್ಟರ್ ಮುಂಜಾನೆಯಂದು ``ಸೂರ್ಯೋದಯ ಆರಾಧನೆಗಳನ್ನು'' (Suಟಿ ಡಿise Seಡಿviಛಿes) ನಡೆಸುವ ಅಭ್ಯಾಸವನ್ನು ಕ್ರೈಗೊಂಡಿದ್ದಾರೆ''. (1959 ನೇ ವರ್ಷದ ಮುದ್ರಣ, ಭಾಗ-7, ಪುಟ 859, 860 Encyclopedia britanica)

2. ಈಸ್ಟರ್ ಮೊಟ್ಟೆಯ ಮೂರ್ತಿಪೂಜಕತ್ವವನ್ನು ಗಮನಿಸಿರಿ !

ಒಂದು ಮೊಟ್ಟೆಯು, ಪರಲೋಕದಿಂದ ಯುಪ್ರಟೀಸ್ ನದಿಯಲ್ಲಿ ಬಿದ್ದಾಗ ಅದರಿಂದ ತಮ್ಮ `ಅಷ್ಟೋರೆತ್' ದೇವತೆಯು ಹೊರಗೆ ಬಂದಳೆಂದು ಬಾಬೆಲಿನವರು ನಂಬುತ್ತಾರೆ. ಆದುದರಿಂದಲೇ ವಸಂತಕಾಲ ಹಬ್ಬದಂದು ಸೂರ್ಯ ಆರಾಧನೆಯನ್ನು ಮಾಡುವ ಸೂಚನೆಗಾಗಿ ಮೊಟ್ಟೆಗಳನ್ನು ಹಂಚಿಕೊಳ್ಳುವುದು ಪ್ರಾರಂಭವಾಯಿತು. 4 ನೇ ಶತಮಾನದಲ್ಲಿ ಕ್ರೈಸ್ತರು ಸಹ ಈ ಅಭ್ಯಾಸವನ್ನು ಅನುಸರಿಸ ಲಾರಂಭಿಸಿದರು. ಅದರ ಪ್ರಕಾರವಾಗಿ ಈಸ್ಟರ್ ಆಚರಿಸುವಾಗ ``ಈಸ್ಟರ್ ಮೊಟ್ಟೆಗಳನ್ನು'' ಉಪಯೋಗಿಸುವುದು ಮುಂದುವರಿದಿದೆ. ಹೌದು, ಯಾವ ರೀತಿಯಾಗಿ ಕೋಳಿ ಮರಿಯು ಮೊಟ್ಟೆಯೊಳಗಿಂದ ಹೊರಗೆ ಬರುತ್ತದೋ ಹಾಗೆ ಕ್ರಿಸ್ತನು ಸಮಾಧಿಯಿಂದ ಹೊರಗೆ ಬಂದನೆಂದು ತಿಳಿಸುವ ಈ ಈಸ್ಟರ್ ಮೊಟ್ಟೆಯು ಎಂಥಾ ಮೂರ್ಖತನಕ್ಕೆ ನಡಿಸಿದೆ !!

3. ಶುಭ ಶುಕ್ರವಾರದ `ಹಾಟ್ ಕ್ರಾಸ್ ಬನ್ನಿನ' ಮೂರ್ತಿ ಪೂಜಕತ್ವವನ್ನು ಗಮನಿಸಿರಿ !!

ಕ್ರಿಸ್ತ ಪೂರ್ವ ಅನೇಕ ವರ್ಷಗಳ ಹಿಂದೆ, ``ಬವುನ್ಸ್'' ಎಂಬದಾಗಿ ಕರೆಯಲ್ಪಡುವ ಪವಿತ್ರ ಹೋಳಿಗೆಗಳನ್ನು ಗಗನದ ಒಡತಿಗೆ ಅನ್ಯಜನರು ಅರ್ಪಿಸುತ್ತಿದ್ದರು. (ಯೆರೆಮಿ 7:18). ಅನ್ಯಜನರ ಈ `ಬವುನ್ಸ್' ಹೋಳಿಗೆಗಳು ಶುಭ ಶುಕ್ರವಾರದಂದು `ಬಿಸಿ-ಶಿಲುಬೆಯು ಬನ್' (ಊoಣ-ಅಡಿoss ಃuಟಿ) ಎಂಬ ರೂಪವನ್ನು ಹೊಂದಿ ಕ್ರೈಸ್ತತ್ವದಲ್ಲಿ ಆಚರಿಸಲ್ಪಡುತ್ತಿದೆ !

ದೇವರ ವಾಕ್ಯವೋ? ಇಲ್ಲವೇ ಮಾನವ ಸಂಪ್ರದಾಯವೋ?

ಈ ಕ್ರಿಸ್ಮಸ್ ಈಸ್ಟರ್ ಆಚರಿಸುವುದಕ್ಕೆ ಹಿನ್ನಲೆಯು, ದೇವರ ವಾಕ್ಯದಿಂದ ಯಾವ ಆಧಾರವೂ ಇಲ್ಲ. ಆದರೆ ಮಾನವ ಸಂಪ್ರದಾಯವು ಕುಯುಕ್ತಿಯಾಗಿ ಅಡಕವಾಗಿದೆ. ದೇವರ ವಾಕ್ಯವನ್ನು ಅನೇಕ ವಿಷಯಗಳಲ್ಲಿ ಯಥಾರ್ಥವಾಗಿ ಕ್ರೈಗೊಂಡು ನಡೆಯುವ ದೇವ ಜನರು ಸಹ ಕ್ರಿಸ್ಮಸ್ ಈಸ್ಟರನ್ನು ಆಚರಿಸುತ್ತಿರುವದರಿಂದ, ಮಾನವ ಸಂಪ್ರದಾಯದ ಶಕ್ತಿಯು ಅಂಥವರ ಮೇಲೆ ಎಷ್ಟು ಬಲವಾಗಿದೆಯೆಂದು ನಾವು ತಿಳಿದುಕೊಳ್ಳಬಹುದು !

ಕ್ರಿಸ್ಮಸ್ ಈಸ್ಟರ್ ಹಬ್ಬಗಳ ಮೂಲವು ಮೂರ್ತಿ ಪೂಜಕದ ಹಿನ್ನೆಲೆಯೆಂದು ಎನ್‍ಕ್ಲೋಪೀಡಿಯಾ ಬ್ರಿಟಾನಿಕಾ, ಮುಂತಾದ ಚರಿತ್ರೆಯ ಗ್ರಂಥ ಕರ್ತರಿಗೂ ಸ್ಪಷ್ಟವಾಗಿ ತಿಳಿದಿರುವಾಗ, ಅನೇಕ ವಿಶ್ವಾಸಿಗಳು ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲವೆಂಬದು ಆಶ್ಚರ್ಯದ ಸಂಗತಿ ! ಒಂದು ಕತ್ತೆಯನ್ನು ನೀವು ಸಿಂಹವೆಂದು ಕರೆದರೂ, ಕತ್ತೆಯು ಕತ್ತೆಯೇ ಆಗಿರುವದು ! ಅದರಂತೆಯೇ ಅನ್ಯ ಹಬ್ಬದ ಹೆಸರುಗಳನ್ನು ಬದಲಾಯಿಸಿರುವುದರಿಂದ ಅದು ಕ್ರೈಸ್ತತ್ವವಾಗಿರಲು ಸಾಧ್ಯವಿಲ್ಲ ! ಕ್ರಿಸ್ಮಸ್, ಈಸ್ಟರಿಗೂ, ಗಣೇಶ ಚತುರ್ಥಿ, ಆಯುಧ ಪೂಜೆ, ದೀಪಾವಳಿಗೂ ಯಾವ ವ್ಯತ್ಯಾಸವೂ ಇಲ್ಲ !!!

ನಾವು ಕಂಡ ಸತ್ಯದ ಪ್ರಕಾರ, ಕ್ರಿಸ್ಮಸ್ ದಿನದಂದು ಕ್ರೈಸ್ತರು ಆಸಕ್ತಿಯಿಂದ ಆಚರಿಸುವ ಜನ್ಮ ದಿನವು ಮತ್ತೊಬ್ಬ ಯೇಸುವಾದ ಬಾಬೆಲಿನ ನಿಮ್ರೋದನ ಜನ್ಮದಿನವೇ ಎಂಬುದು ಬಹು ಸ್ಪಷ್ಟವಾಗಿದೆ ! ಅದರಂತೆಯೇ ಈಸ್ಟರ್ ದಿನದಂದು ಆಚರಿಸುವ `ಪುನರುತ್ಥಾನವು' ಮತ್ತೊಬ್ಬ ಯೇಸುವಾದ ಉತ್ತರಗೋಳದಲ್ಲಿ ಉಷ್ಟಕಾಲವನ್ನು ಉದಯಿಸಲು ಮಾಡುವ ಸೂರ್ಯದೇವರ `ಪುನರುತ್ಥಾನವೇ' ಆಗಿರುತ್ತದೆ. ಈ ನಿಮ್ರೋದಿಗೂ ಸೂರ್ಯದೇವರಿಗೂ ಹಿಂದೆ ನಿಜವಾಗಿಯೂ ``ಸೈತಾನನು'' ನಿಂತು ನಿಮ್ಮ ಆರಾಧನೆಯನ್ನು ಅಂಗೀಕರಿಸುತ್ತಿದ್ದಾನೆ ! ಇದೇ ಸತ್ಯ !

ಇಸ್ರಾಯೇಲ್ಯರು ತಮ್ಮ ಚಿನ್ನದ ಬಸವನನ್ನು `ಯೆಹೋವನು' ಎಂದು ಕರೆದರು. ಆದರೆ ನಿಜವಾಗಿಯೂ ಅವರ ಆರಾಧನೆಯನ್ನು ಅಂಗೀಕರಿಸಿದವನು ಸೈತಾನನು (ವಿಮೋಚ. 32:4,6). ಕ್ರಿಸ್ಮಸ್ ಈಸ್ಟರ್ ಆಚರಿಸುವವರು ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳತಕ್ಕದ್ದು.

ಯೇಸು ಸ್ವಾಮಿಯು ಪಿತೃಗಳ ಸಂಪ್ರದಾಯಕ್ಕೆ ವಿರೋಧವಾಗಿ ಮಾತಾಡಿದ್ದರಿಂದಲೇ ವಿರೋಧಿಸಲ್ಪಟ್ಟನು. ನಾವು ಸಹ ಯೇಸು ಸ್ವಾಮಿಯನ್ನು ಹಾಗೆಯೇ ಹಿಂಬಾಲಿಸುವದಾದರೆ ನಾವೂ ವಿರೋಧಿಸಲ್ಪಡುವೆವು !

ಕೆಲವರು ರೋಮಾ 14:5,6 ವಚನಗಳನ್ನು ಸೂಚಿಸಿ ದಿನವನ್ನು ವಿಶೇಷಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ದಿನವೆಂಬದು ಯೆಹೂದ್ಯರ `ಸಬ್ಬತ್' ದಿನವನ್ನು ಸೂಚಿಸುತ್ತದೆ. ಹೊಸ ಒಡಂಬಡಿಕೆಯ ಬೆಳಕನ್ನು ಹೊಂದಿದ ಯೊಹೂದ್ಯರ ವಿಷಯವಾಗಿ ಪೌಲನು ಬೆಳಕನ್ನು ಹೊಂದಿದ ವಿಶ್ವಾಸಿಗಳಿಗೆ ಸಹಿಸಿಕೊಳ್ಳುವಂತೆ ಇಲ್ಲಿ ಬರೆಯುತ್ತಿದ್ದಾನೆ. ಆದರೆ ಇಲ್ಲಿ ಕ್ರಿಸ್ಮಸ್ ಅಥವಾ ದೀಪಾವಳಿ; ಇಲ್ಲವೇ ಕ್ರಿಸ್ಮಸ್ ಈಸ್ಟರ್ ಅಥವಾ ಗಣೇಶ ಚತುರ್ಥಿಯನ್ನು ಆಚರಿಸಲು ಇಲ್ಲಿ ಪೌಲನು ಉಪದೇಶಿಸಲಿಲ್ಲ !

ಕೆಲವರು ಭಯಭಕ್ತಿಯುಳ್ಳ ದೇವರ ಸೇವಕರೇ ಕ್ರಿಸ್ಮಸ್ ಈಸ್ಟರನ್ನು ಆಚರಿಸುತ್ತಿದ್ದಾರಲ್ಲಾ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ದೇವರ ವಾಕ್ಯವೇ ನಮಗೆ ಮಾರ್ಗದರ್ಶಕವು; ಕೆಲವು ವಚನಗಳನ್ನು ಕೈಗೊಂಡು ಸ್ವಲ್ಪ ಮಾನವ ಸಂಪ್ರದಾಯವನ್ನು ಕೈಗೊಂಡು ನಡೆಯುವವರು ನಮಗೆ ಮಾದರಿಯಲ್ಲ !

ಗಮನಿಸಿರಿ ದಾವೀದನು ಭಕ್ತಿವಂತನಾಗಿದ್ದನು. ಆದರೆ ಮೋಶೆ ಕಾಲದಲ್ಲಿ ಉಂಟು ಮಾಡಿದ ತಾಮ್ರದ ಸರ್ಪವನ್ನು ಇಸ್ರಾಯೇಲ್ಯರು ಆರಾಧಿಸುವುದು ದೇವರ ಚಿತ್ತವಲ್ಲವೆಂಬ ಬೆಳಕನ್ನು (ಪ್ರಕಟನೆಯನ್ನು) ಹೊಂದದೆ 40 ವರ್ಷಗಳವರೆಗೆ ಆ ಆರಾಧನೆಯನ್ನು ಅನುಮತಿಸಿದ್ದನು. ಆದರೆ ಯುವಕನಾದ ಹಿಜ್ಕೀಯನಿಗೆ ಪ್ರಕಟನೆಯು ಸಿಕ್ಕಿದ್ದರಿಂದ ಅದನ್ನು ಸಂಪೂರ್ಣವಾಗಿ ನಾಶಮಾಡಿ ಅದನ್ನು ನಿಲ್ಲಿಸಿದನು (2 ಅರಸು 18:1-4). ಹಾಗೆಯೇ ನಾವು ಭಕ್ತಿಯುಳ್ಳ ಇತರ ದೇವರ ಸೇವಕರಲ್ಲಿನ ಒಳ್ಳೆದನ್ನು ಹಿಂಬಾಲಿಸೋಣ. ಆದರೆ ಅವರಿಗೆ ಪ್ರಕಟವಾಗದಿರುವ ಮಾನವ ಸಂಪ್ರದಾಯವನ್ನು ಹಿಂಬಾಲಿಸದೆ ಇರೋಣ.

ಕಿವಿಯುಳ್ಳವರೇ ಕೇಳಿರಿ !