ದೇವರ ಪರಿಪೂರ್ಣ ಚಿತ್ತವನ್ನು ದೃಡಪಡಿಸಿಕೊಳ್ಳುವದು

Article Body: 

ನಾವು ಯಾವುದೇ ನಿರ್ಣಯಿಸಬೇಕಾದ ಸಂಗತಿಯನ್ನು ಎದುರಿಸಬೇಕಾದಾಗ, ಮತ್ತು ಅದು ದೇವರ ಚಿತ್ತವೇ ಅಥವಾ ಇಲ್ಲವೇ ಎಂದು ಖಚಿತವಿಲ್ಲದೆ ಇರುವಾಗ ಈ ಹತ್ತು ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳುವುದು ಒಳ್ಳೆಯದು, ಈ ಹತ್ತು ಪ್ರಶ್ನೆಗಳಿಗೆ ನಾವು ಯಥಾರ್ಥವಾಗಿ ಉತ್ತರಿಸುವಾಗ ದೇವರ ಚಿತ್ತ ಯಾವುದೆಂದು ಸ್ಪಷ್ಟವಾಗುತ್ತದೆ

1. ನನಗೆ ತಿಳಿದ ಮಟ್ಟಿಗೆ ಇದು ಯೇಸುವಿನ ಮತ್ತು ಅಪೋಸ್ತಲರ ಯಾವುದೇ ಭೋಧನೆಗೆ ಅಥವಾ ಹೊಸ ಒಡಂಬಡಿಕೆಯ ಆತ್ಮಕ್ಕೆ ವಿರುದ್ಧವಾಗಿದೆಯೋ? (2 ತಿಮೋತಿ 3:16,17)

2. ಇದು ನಾನು ನಿಸ್ಸಂದೇಹ ಮನಸಾಕ್ಷಿಯಿಂದ ಮಾಡಬಹುದಂಥದ್ದಾಗಿದೆಯೋ? (1 ಯೋಹಾನ 3:21)

3. ಇದು ನಾನು ದೇವರ ಮಹಿಮೆಗಾಗಿ ಮಾಡಬಹುದಂಥದ್ದಾಗಿದೆಯೋ? (1 ಕೊರಿಂಥ 10:31)

4. ಇದು ನಾನು ಯೇಸುವಿನ ಅನ್ಯೋನ್ಯತೆಯಲ್ಲಿ(ಜೊತೆಗೂಡಿ) ಮಾಡಬಹುದಂಥÀದ್ದೋ? (ಕೊಲೊಸ್ಸೆ 3:17)

5. ಇದನ್ನು ಮಾಡುವಾಗ, ದೇವರು ನನ್ನನ್ನು ಆಶೀರ್ವದಿಸುವಂತೆ ಕೇಳಕೊಳ್ಳಬಹುದೇ? (2 ಕೊರಿಂಥ 9:8)

6. ಇದನ್ನು ಮಾಡುವುದರ ಮೂಲಕ ನನ್ನ ಆತ್ಮಿಕ ಮೊನೆ (ತೀಕ್ಷ್ಣತೆ) ಯಾವುದಾದರೂ ರೀತಿಯಲ್ಲಿ ಮೊಂಡಾಗುತ್ತದೆಯೋ? (2 ತಿಮೊ 2:15)

7. ನನಗೆ ತಿಳಿದ ಮಟ್ಟಿಗೆ ಇದು ಆತ್ಮಿಕವಾಗಿ ಲಾಭದಾಯಕವೂ ಮತ್ತು ಭಕ್ತಿವೃದ್ಧಿ ಮಾಡುವಂತದ್ದಾಗಿ ಇರುವುದೋ? (1 ಕೊರಿ 6:12, 10:23)

8. ಇದನ್ನು ಮಾಡುವ ಸಮಯದಲ್ಲಿ ಒಂದು ವೇಳೆ ಯೇಸು ಭೂಲೋಕಕ್ಕೆ ಆಗಮಿಸಿದರೆ ನಾನು ಸಂತೋಷಿಸುತ್ತೇನೆಯೇ? (1 ಯೋಹಾನ 2:28)

9. ಇದರ ವಿಷಯದಲ್ಲಿ ಜ್ಞಾನಭರಿತ ಹಾಗು ಆತ್ಮಿಕ ಸಹೊದರರು ಏನೆಂದು ಯೋಚಿಸುತ್ತಾರೆ? (ಜ್ಞಾನೋ. 11:14, 15:22, 24:6)

10. ನಾನು ಇದನ್ನು ಮಾಡುವದು ಇತರರಿಗೆ ತಿಳಿದಾಗ, ದೇವರ ಹೆಸರಿಗೆ ಅವಮಾನ ತರುವದೋ ಅಥವಾ ನನ್ನ ಸಾಕ್ಷಿಯು ಹಾಳಾಗುವದೋ? (ರೋಮ 2:24, 2 ಕೊರಿ 8:21)

11. ಇದನ್ನು ನಾನು ಮಾಡುವದು ಇತರರು ತಿಳಿದಾಗ, ಅದು ಅವರ ಅತ್ಮಿಕ ಜೀವಿತದಲ್ಲಿ ಎಡವುವಂತೆ ಮಾಡುತ್ತದೋ? (ರೋಮಾ 14:13, 1 ಕೊರಿಂಥ 8:9)

12. ಇದನ್ನು ನಾನು ಮಾಡಲು ನನ್ನ ಆತ್ಮದಲ್ಲಿ ಸಮಾದಾನವಿದೆಯೋ? (1 ಯೋಹಾ 2:27)

(ಕೊಟ್ಟಿರುವ ದೇವರ ವಾಕ್ಯವನ್ನು ನೋಡಿ ಮತ್ತು ಧ್ಯಾನಿಸಿ)

(ಈ ಪ್ರಶ್ನೆಗಳ ಪಟ್ಟಿಯ ಪ್ರತಿಯನ್ನು ನಿಮ್ಮ ಬೈಬಲಿನಲ್ಲಿ ಸುಲಭ ತೀರ್ಮಾನಕ್ಕಾಗಿ ಇಟ್ಟುಕೊಳ್ಳೀರಿ)