ಒಳ್ಳೆಯ ಅಸ್ತಿವಾರ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
    Download Formats:

ಅಧ್ಯಾಯ 0
ಈ ಪುಸ್ತಕವೂ ನೀವೂ

ದೇವರು ಆದಿಯಿಂದಲೂ ಉದ್ದೇಶಿಸಿದಂತೆ ಮನುಷ್ಯನು ಈಗ ಜೀವಿಸಲು ಸಾಧ್ಯ ಎಂಬ ಸುವಾರ್ತೆಯು ಒಂದು ಶುಭ ಸಮಾಚಾರವಾಗಿದೆ. ಕ್ರಿಸ್ತನ ಅಧಿಕಾರಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವವನೇ ಸತತವಾಗಿ ಜಯದ ಜೀವಿತವನ್ನು ಜೀವಿಸಲು ಸಾಧ್ಯ. ಆದರೂ ಕ್ರಿಸ್ತನನ್ನು ತಮ್ಮ ರಕ್ಷಕನನ್ನಾಗಿ ಅಂಗೀಕರಿಸಿಕೊಂಡಿರುವ ಅನೇಕರು ಸುವಾರ್ತೆಯು ನೀಡುವ ಈ ಮಹಿಮೆಯುಳ್ಳ ಜೀವಿತವನ್ನು ಪ್ರವೇಶಿಸುತ್ತಿಲ್ಲ.

ಅದು ಯಾಕೆ

ಅವರು ತಮ್ಮ ಕ್ಯ್ರೆಸ್ತ ಜೀವಿತದ ಪ್ರಾರಂಭದಲ್ಲಿ ಒಳ್ಳೆಯ ಅಸ್ತಿವಾರವನ್ನು ಹಾಕದಿರುವುದೇ ಅದರ ಪ್ರಧಾನ ಕಾರಣವಾಗಿರುತ್ತದೆ.

ನಾವು (ಕ್ರಿಸ್ತನಲ್ಲಿ) ಹೊಸದಾಗಿ ಹುಟ್ಟಿದ ಮೇಲೆ ಜೀವಿಸುವ ಜೀವಿತವನ್ನು ಕಟ್ಟಲ್ಪಡುತ್ತಿರುವ ಒಂದು ಮನೆಗೆ ಹೋಲಿಸಬಹುದು. ನಮ್ಮೆಲ್ಲರಿಗೂ ತಿಳಿದಂತೆ ಮನೆಯ ಬಹು ಮುಖ್ಯವಾದ ಭಾಗವು ಅಸ್ತಿವಾರವಾಗಿರುತ್ತದೆ. ಒಂದು ವೇಳೆ ಮೂರನೇ ಮಹಡಿಯಲ್ಲಿ ಬಿರುಕಿದ್ದರೆ, ಅದರ ಕಾರಣ ಸಾಮಾನ್ಯವಾಗಿ ತಪ್ಪಾದ ಅಸ್ತಿವಾರವೆಂದು ಗುರುತಿಸಬಹುದು.

ಇದು ನಮ್ಮ ಜೀವಿತಕ್ಕೂ ಅನ್ವಯಿಸಲು ಸಾಧ್ಯ. ಕ್ರಿಸ್ತನಲ್ಲಿ ಭರವಸೆಯಿಟ್ಟು ನಾವು ಪ್ರಾರಂಭದಲ್ಲಿ ತಪ್ಪಾಗಿ ಹಾಕಿದ ಅಸ್ತಿವಾರದ ಪರಿಣಾಮಗಳನ್ನು ಅನೇಕ ವರ್ಷಗಳ ತರುವಾಯ ಅನುಭವಿಸಲು ಸಾಧ್ಯ.

ಪಾಪದ ಮೇಲಿನ ಜಯದ ಜೀವಿತವನ್ನು ಹೊಸ ಒಡಂಬಡಿಕೆಯು ವಾಗ್ದಾನ ಮಾಡುತ್ತದೆ. ರೋಮಾ. 6:14 ರಲ್ಲಿರುವ ದೇವರ ವಾಗ್ದಾನವನ್ನು ನೋಡಿರಿ: ”ಯಾಕಂದರೆ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಷ್ಟೇ''.

ಅದು ನಮಗೆ ಸತತವಾದ ಆನಂದದ ಜೀವಿತ ಹಾಗೂ ಚಿಂತೆಯಿಂದ ಪೂರ್ಣ ಬಿಡುಗಡೆ ಹೊಂದಿದ ಜೀವಿತವನ್ನು ಜೀವಿಸುವಂತೆ ಆಜ್ಞಾಪಿಸುತ್ತದೆ. ಫಿಲಿಪ್ಪಿ. 4:4,6 ನೋಡಿರಿ, “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ... ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ...

ದೇವರು ನಮಗೆ ಮಾಡಲು ಸಾಧ್ಯವಾಗುವುದನ್ನು ಮಾತ್ರ ಆಜ್ಞಾಪಿಸುತ್ತಾನೆ ಎಂದು ಜ್ಞಾಪಕದಲ್ಲಿಟ್ಟುಕೊಳ್ಳಿರಿ.

ಆದುದರಿಂದ ದೇವರ ಆಜ್ಞೆಗಳು ಒಂದು ರೀತಿಯಲ್ಲಿ ನಾವು ಪಾಲಿಸುವಂತೆ ಆತನು ನಮಗೆ ‘ಕೃಪೆ’ನೀಡುವ ವಾಗ್ದಾನಗಳಾಗಿರುತ್ತವೆ. ಆದಕಾರಣ ಮೇಲಿನ ಆಜ್ಞೆಗಳು ನಾವು ಸತತವಾದ ಆನಂದದ ಜೀವಿತ ಹಾಗೂ ಚಿಂತೆಯಿಂದ ಸಂಪೂರ್ಣ ಬಿಡುಗಡೆ ಹೊಂದಿದ ಜೀವಿತವನ್ನು ಜೀವಿಸಲು ಸಾಧ್ಯಗೊಳಿಸಿರುವಂತಹ ವಾಗ್ದಾನಗಳಾಗಿರುತ್ತವೆ.

ಹೊಸ ಒಡಂಬಡಿಕೆಯಲ್ಲಿ ಇನ್ನೂ ಇಂಥಹ ಅನೇಕ ಮಹಿಮೆಯುಳ್ಳ ವಾಗ್ದಾನಗಳಿವೆ. ಸುವಾರ್ತೆಯು ನಿಜವಾಗಿಯೂ ಒಳ್ಳೆಯ ಸಮಾಚಾರವೆಂದು ತೋರಿಸಲು ನಾವು ಈ ಮೇಲೆ ತಿಳಿಸಿರುವ ವಾಗ್ದಾನಗಳಷ್ಟೇ ಸಾಕು.

ಆದರೂ ಸುವಾರ್ತೆಯನ್ನು ಸ್ವೀಕರಿಸಿರುವುದಾಗಿ ಹೇಳಿಕೊಳ್ಳುವ ಬಹುಪಾಲು ಕ್ಯ್ರೆಸ್ತರು ಮೇಲಿನ ವಚನಗಳು ವರ್ಣಿಸುವ ಜೀವಿತದ ಮಾದರಿಯನ್ನು ಜೀವಿಸದೆ ಹೋಗಿದ್ದಾರೆಂಬುದು ದುಃಖಕರವಾದ ಸತ್ಯವಾಗಿದೆ.

ನಿಮ್ಮ ಜೀವಿತಕ್ಕಿರುವ ದೇವರ ಪೂರ್ಣ ಉದ್ದೇಶವು ನೆರವೇರುವಂತೆ ನೀವು ನಿಮ್ಮ ಜೀವಿತದಲ್ಲಿ ಒಳ್ಳೆಯ ಅಸ್ತಿವಾರವನ್ನು ಹಾಕಲು ನೆರವಾಗುವುದೇ, ಈ ಪುಸ್ತಕದ ಉದ್ದೇಶವಾಗಿದೆ.

ಹಾಗಾದರೆ ನೀವು ಓದುವುದನ್ನು ಮುಂದುವರಿಸಿರಿ ಮತ್ತು ಪವಿತ್ರಾತ್ಮನು ನಿಮ್ಮ ಹೃದಯದೊಂದಿಗೆ ಮಾತನಾಡುವಂತೆ ಅನುಮತಿಸಿರಿ.

ಇದು ನಿಮ್ಮ ಜೀವಿತದಲ್ಲಿ ಸಂಪೂರ್ಣ ಒಂದು ಹೊಸ ಅಧ್ಯಾಯದ ಪ್ರಾರಂಭವಾಗಿರಲು ಸಾಧ್ಯ...

ಅಧ್ಯಾಯ 1
ಮಾನಸಾಂತರ

ಕುರಿಹಟ್ಟಿಯ ಪ್ರವೇಶಕ್ಕೆ ಸರಿಯಾದ ಮಾರ್ಗವು ಬಾಗಿಲಿನ ಮೂಲಕವೇ ಎಂದು ಯೇಸು ಹೇಳಿದ್ದನು. ಆದರೆ ಕೆಲವರು ಮತ್ತೆಲ್ಲಿಂದಾದರೂ ಹತ್ತಿಬರುವರು ಎಂತಲೂ ಆತನು ಹೇಳಿದ್ದನು (ಯೋಹಾ. 10:1).

ಮನುಷ್ಯನು ರಕ್ಷಿಸಲ್ಪಡುವಂತೆ ದೇವರು ಮಾಡಿದ ಮಾರ್ಗವು, "ಮಾನಸಾಂತರ" ಹಾಗೂ"ಕರ್ತನಾದ ಯೇಸು ಕ್ರಿಸ್ತನ ಮೇಲಿನ ನಂಬಿಕೆ"ಯ ಮೂಲಕವೇ ಆಗಿರುತ್ತದೆ. ಅದು ಏಕಮಾತ್ರ ಮಾರ್ಗವಾಗಿದೆ. ಬೇರೆ ಮಾರ್ಗದಿಂದ ಹತ್ತಿ ಬರಲು ಪ್ರಯತ್ನಿಸುವ ಮನುಷ್ಯನನ್ನು ದೇವರು ಎಂದಿಗೂ ಸ್ವೀಕರಿಸಲಾರನು.

ಕರ್ತನ ಮಾರ್ಗವನ್ನು ಸಿದ್ಧಪಡಿಸಲು ಬಂದ ಸ್ನಾನಿಕನಾದ ಯೋಹಾನನು ಮಾನಸಾಂತರವನ್ನು ಸಾರಿದನು. ಅದು ಇಸ್ರಾಯೇಲ್ ರಾಷ್ಟ್ರವು ಯೇಸುವನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸಲು ಸಿದ್ಧಪಡಿಸಿದ್ದ ಏಕ ಮಾತ್ರ ಮಾರ್ಗವಾಗಿತ್ತು. ನಮಗೂ ಕೂಡ ಇದಲ್ಲದೆ ಬೇರೆ ಮಾರ್ಗವಿಲ್ಲ.

ಮಾನಸಾಂತರವೂ ನಂಬಿಕೆಯೂ

ಈ ದಿನದ ವಿಶ್ವಾಸಿಗಳಲ್ಲಿ ಬಹಳಷ್ಟು ಜನರಿಗೆ, ಆದಿ ಕ್ರೆ ಸ್ತರಲ್ಲಿದ್ದ ಆಳ ಇಲ್ಲವೆ ಪ್ರತಿಷ್ಠೆ ಅಥವಾ ಶಕ್ತಿ ಇದ್ದಂತೆ ಕಾಣುವುದಿಲ್ಲ.

ಇದಕ್ಕೆ ಕಾರಣ ಏನಾಗಿರುವುದೆಂದು ನೀವು ಭಾವಿಸುತ್ತೀರಿ1

ಅವರು ಸರಿಯಾಗಿ ಮಾನಸಾಂತರ ಹೊಂದದಿರುವುದೇ ಪ್ರಧಾನ ಕಾರಣವಾಗಿರುತ್ತದೆ.

ಅವರು ಕ್ರಿಸ್ತನಲ್ಲಿ ಸರಿಯಾಗಿ ನಂಬಿದ್ದಾರೆ. ಆದರೆ ಮೊದಲು ಮಾನಸಾಂತರ ಪಡದೇ ನಂಬಿದ್ದಾರಷ್ಟೇ. ಆದುದರಿಂದ ಅವರ ಪರಿವರ್ತನೆಯು ಆಳವಿಲ್ಲದ್ದಾಗಿದೆ.

ಒಂದು ಪ್ರಸಿದ್ಧ ಇಂಗ್ಲಿಷ್ ಸ್ತುತಿಪದವು ಹೀಗಿದೆ:

"ನಿಜವಾಗಿ ನಂಬುವ ಅತೀ ಕೆಟ್ಟ ಅಪರಾಧಿಯು

ಯೇಸುವಿನಿಂದ ಆ ಗಳಿಗೆಯಲ್ಲಿಯೇ ಕ್ಷಮೆ ಹೊಂದುವನು

ಅದು ನಿಜವಾಗಿಯೂ ಸತ್ಯವೇ1 ಅತೀ ಕೆಟ್ಟ ಅಪರಾಧಿಯು, ಕೇವಲ"ನಿಜವಾಗಿ ನಂಬುವುದರಿಂದ ಕ್ಷಮೆಯನ್ನು ಹೊಂದಲು ಸಾಧ್ಯವೇ1

ಅವನು ಮೊದಲು ಮಾನಸಾಂತರ ಹೊಂದಬೇಕಾಗಿಲ್ಲವೇ1

ನಿಜವಾದ ನಂಬಿಕೆಯಲ್ಲಿ ಮಾನಸಾಂತರವೂ ಅಡಕವಾಗಿದೆಯೆಂದು ನೀವು ಹೇಳಬಹುದು. ಆದರೆ ಅದನ್ನು ವಿವರಿಸಿ ಹೇಳದಿದ್ದರೆ, ಆ ಅತೀ ಕೆಟ್ಟ ಅಪರಾಧಿಯು ಕೇವಲ ನಂಬಿದ್ದರಿಂದ ತಾನು ಹೊಸದಾಗಿ ಹುಟ್ಟಿರುವುದಾಗಿ ಭಾವಿಸಿಕೊಂಡು ಹೊರಟುಹೋಗುವನು ಮತ್ತು ಅವನು ವಂಚಿಸಲ್ಪಟ್ಟವನಾಗಿ ಹೋಗುವನು.

ಯೇಸು ತಾನೇ ಸಾರಿದ ಸಂದೇಶವು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ (ಮಾರ್ಕ. 1:15). ಆತನು ತನ್ನ ಅಪೋಸ್ತಲರಿಗೂ ಅದೇ ಸಂದೇಶವನ್ನು ನೀಡಲು ಆಜ್ಞಾಪಿಸಿದನು (ಲೂಕ. 24:47). ಅವರೂ ಅದನ್ನೇ ಮಾಡಿದರು (ಅ.ಕೃ. 20:20).

ಈ ವಿಷಯವಾಗಿ ದೇವರ ವಾಕ್ಯವು ಬಹು ಸ್ಪಷ್ಟವಾಗಿದೆ. ನೀವು ನಿಜವಾಗಿಯೂ ಪರಿವರ್ತನೆ ಹೊಂದಿ ಆರೋಗ್ಯವಾಗಿರಬೇಕಾದರೆ, ಮಾನಸಾಂತರವನ್ನೂ, ನಂಬಿಕೆಯನ್ನೂ ಪ್ರತ್ಯೇಕಿಸಬಾರದು. ದೇವರು ಇವೆರಡನ್ನೂ ಕೂಡಿಸಿದ್ದಾನೆ. ಮತ್ತು ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು.

ಮಾನಸಾಂತರ ಹಾಗೂ ನಂಬಿಕೆ ಇವು ಕ್ಯ್ರೆಸ್ತ ಜೀವಿತಕ್ಕೆ ಅಗತ್ಯವಾಗಿರುವ ಅಸ್ತಿವಾರದ, ಮೊದಲ ಎರಡು ಅನುಭವಗಳಾಗಿರುತ್ತವೆ ಇಬ್ರಿ. 6:1). ನೀವು ಸರಿಯಾಗಿ ಮಾನಸಾಂತರ ಹೊಂದದಿದ್ದರೆ ನಿಮ್ಮ ಅಸ್ತಿವಾರವು ತಪ್ಪಾಗಿಯೇ ಇರುವುದು. ತರುವಾಯ ನಿಮ್ಮ ಇಡೀ ಕ್ಯ್ರೆಸ್ತ ಜೀವಿತವೇ ಅಲ್ಲಾಡುವಂಥದ್ದಾಗಿರುವುದು.

"ಕರ್ತನ ಭಯವೇ ಜ್ಞಾನಕ್ಕೆ ಮೂಲವು ಎಂದು ಸತ್ಯವೇದವು ಹೇಳುತ್ತದೆ. (ಜ್ಞಾನೋ. 9:11) ನಾವು ನಿಜವಾಗಿಯೂ ಕರ್ತನಿಗೆ ಭಯಪಡುವವರಾಗಿದ್ದರೆ, "ಕೆಟ್ಟದ್ದನ್ನು ತೊರೆದು ಬಿಡುವೆವು(ಜ್ಞಾನೋ. 3:7).

ಆದುದರಿಂದ ಯಾರು, ಮಾನಸಾಂತರಪಟ್ಟು ಕೆಟ್ಟದ್ದನ್ನು ತೊರೆಯಲಿಲ್ಲವೋ ಅಂಥವರು ಕ್ಯ್ರೆಸ್ತ ಜೀವಿತದ ಅ ಆ ಇ’ಈ (ಅಕ್ಷರಮಾಲೆ) ಯನ್ನೇ ಕಲಿತಿಲ್ಲ.

ನಕಲು ಮತ್ತು ನಿಜವಾದ ಮಾನಸಾಂತರ

ನೀವು ಮಾನಸಾಂತರಪಟ್ಟಿದ್ದರೆ, ನಿಮ್ಮ ಮಾನಸಾಂತರವು ನಿಜವಾದದ್ದೆಂದು ನೀವು ಖಚಿತಪಡಿಸಿಕೊಳ್ಳಬೇಕು. ಸ್ಯೆತಾನನು ಜನರನ್ನು ವಂಚಿಸಲು ತನ್ನ ನಕಲು ಮಾನಸಾಂತರವನ್ನು ಇಟ್ಟುಕೊಂಡಿದ್ದಾನೆ.

ಬಹಳ ಜನರು, "ನೀನು (ತಪ್ಪು ಮಾಡಿ) ಸಿಕ್ಕಿ ಹಾಕಿಕೊಳ್ಳಬಾರದು! ಎಂಬ ಕೇವಲ ಒಂದೇ ಆಜ್ಞೆಯಿಂದ ಜೀವಿಸುತ್ತಿದ್ದಾರೆಂದು ಸೆತಾನನಿಗೆ ತಿಳಿದಿದೆ. ಆದುದರಿಂದ ಯಾರಿಂದಲೂ ಸಿಕ್ಕಿಹಾಕಿಕೊಳ್ಳದೆ ಪಾಪ ಮಾಡುವಂಥ ಮಾರ್ಗ ವಿಧಾನಗಳನ್ನು ಅವನು ಅವರಿಗೆ ಕಲಿಸಿಕೊಡುತ್ತಿದ್ದಾನೆ.

ಒಬ್ಬ ಕಳ್ಳನು ಸಹ ಸಿಕ್ಕಿ ಬಿದ್ದಾಗ ಪಶ್ಚಾತ್ತಾಪಪಡುವವನಾಗಿದ್ದಾನೆ. ಆದರೆ ಅದು ಮಾನಸಾಂತರವಲ್ಲ.

ನಕಲಿ ಮಾನಸಾಂತರವನ್ನು ಹೊಂದಿದವರ ಕೆಲವು ಉದಾಹರಣೆಗಳನ್ನು ಸತ್ಯವೇದದಲ್ಲಿ ನಾವು ಕಾಣುತ್ತೇವೆ.

ಅರಸನಾದ ಸೌಲನು ದೇವರಿಗೆ ಅವಿಧೇಯನಾದಾಗ, ತಾನು ಪಾಪಮಾಡಿರುವುದನ್ನು ಸಮುವೇಲನ ಮುಂದೆ ಒಪ್ಪಿಕೊಂಡನು. ಆದರೆ ಅದು ಜನರಿಗೆ ಗೊತ್ತಾಗಬಾರದೆಂದು ಅವನು ಅಪೇಕ್ಷಿಸಿದನು. ಅವನು ಜನರ ಗೌರವವನ್ನು ಇನ್ನೂ ಹುಡುಕುವವನಾಗಿದ್ದನು, ಹಾಗೂ ನಿಜವಾಗಿಯೂ ಮಾನಸಾಂತರಪಟ್ಟಿರಲಿಲ್ಲ. ಮತ್ತು ತಾನು ಸಿಕ್ಕಿಹಾಕಿಕೊಂಡದ್ದರಿಂದ ವಿಷಾದಿಸಿದನು (1 ಸಮು. 15:24-30). ಅವನಿಗೂ, ತಾನು ತಪ್ಪಿಬಿದ್ದಾಗ ಬಹಿರಂಗವಾಗಿ ತನ್ನ ಪಾಪವನ್ನು ಒಪ್ಪಿಕೊಂಡ ಅರಸನಾದ ದಾವೀದನಿಗೂ ವ್ಯತ್ಯಾಸವಿದೆ (ಕೀರ್ತನೆ. 50).

ಅರಸನಾದ ಆಹಾಬನು ಸೌಲನಂಥವನೇ. ದೇವರು ಅವನನ್ನು ನ್ಯಾಯತೀರ್ಪಿಗೆ ಒಳಪಡಿಸುವನೆಂದು ಎಲೀಯನು ಎಚ್ಚರಿಸಿದಾಗ ಅವನು ತನಗಾಗಿ ವಿಷಾದಿಸಿದನು ಅವನು ಗೋಣಿತಟ್ಟನ್ನು ಸಹ ತೊಟ್ಟುಕೊಂಡು ತನ್ನ ಪಾಪಗಳಿಗಾಗಿ ದುಃಖಿಸಿದನು (1 ಅರಸು. 21:27-29). ಆದರೆ ಅವನು ನಿಜವಾಗಿ ಪಶ್ಚಾತ್ತಾಪಪಡಲಿಲ್ಲ. ಅವನು ಕೇವಲ ದೇವರ ನ್ಯಾಯತೀರ್ಪಿಗೆ ಹೆದರಿದನಷ್ಟೆ!

ಇಸ್ಕಾರಿಯೋತ ಯೂದನು ನಕಲು ಮಾನಸಾಂತರಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದ್ದಾನೆ. ಅವನು ಯೇಸುವಿಗೆ ಮರಣ ದಂಡನೆಯ ತೀರ್ಪಾದುದನ್ನು ತಿಳಿದುಕೊಂಡಾಗ ವಿಷಾದಿಸಿ, "ನಾನು ಪಾಪ ಮಾಡಿದೆನು ಅಂದನು(ಮತ್ತಾ. 27:3-6). ಆದರೆ ಅವನು ತನ್ನ ಅರಿಕೆಯನ್ನು ಯಾಜಕರ ಮುಂದೆ ಮಾಡಿದನು - ಇಂದಿಗೂ ಕೆಲವರು ಇದನ್ನೇ ಮಾಡುತ್ತಿದ್ದಾರೆ! ತಾನು ಏನು ಮಾಡಿದನೋ, ಅದಕ್ಕಾಗಿ ಅವನು ವಿಷಾದಿಸಿರಬಹುದು. ಆದರೆ ಅವನು ಮಾನಸಾಂತರಪಡಲಿಲ್ಲ. ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದರೆ, ಅವನು ಕರ್ತನಲ್ಲಿ ಮುರಿಯಲ್ಪಟ್ಟವನಾಗಿ ಕ್ಷಮಾಪಣೆಯನ್ನು ಕೇಳುತ್ತಿದ್ದನು. ಆದರೆ ಆತನು ಅದನ್ನು ಮಾಡಲಿಲ್ಲ.

ಈ ಉದಾಹರಣೆಗಳಿಂದ ಯಾವುದು ಮಾನಸಾಂತರವಲ್ಲ ಎಂದು ಬಹಳಷ್ಟು ಕಲಿತುಕೊಳ್ಳಲು ಸಾಧ್ಯ.

"ವಿಗ್ರಹಗಳನ್ನು ತ್ಯಜಿಸಿ ದೇವರ ಕಡೆಗೆತಿರುಗಿಕೊಳ್ಳುವುದೇ ನಿಜವಾದ ಮಾನಸಾಂತರ. (1 ಥೆಸ. 1:9).

ಅನ್ಯ ಜನರ ದೇವಾಲಯಗಳಲ್ಲಿ ಕಾಣ ಬರುವ ಮರ ಹಾಗೂ ಕಲ್ಲಿನಿಂದ ಮಾಡಿದವುಗಳು ಮಾತ್ರ ವಿಗ್ರಹಗಳಲ್ಲ. ನೋಡಲು ವಿಕಾರವಾಗೇನೂ ಇರದಿದ್ದರೂ ಅಷ್ಟೇ ಅಪಾಯಕರವಾದ ವಿಗ್ರಹಗಳನ್ನು ಜನರು ಇಂದು ಆರಾಧಿಸುತ್ತಾರೆ. ಅವು ಯಾವುವೆಂದರೆ, ಭೋಗ, ಸುಖ, ಹಣ, ಸ್ವಗೌರವ, ಸ್ವ-ಚಿತ್ತ ಇತ್ಯಾದಿ.

ಅನೇಕ ವರ್ಷಗಳಿಂದ ನಾವೆಲ್ಲರೂ ಇವುಗಳನ್ನು ಆರಾಧಿಸುತ್ತಾ ಬಂದಿದ್ದೇವೆ. ಈ ವಿಗ್ರಹಗಳ ಆರಾಧನೆಯನ್ನು ನಿಲ್ಲಿಸಿ, ಇವುಗಳನ್ನು ತ್ಯಜಿಸಿ ದೇವರ ಕಡೆಗೆ ತಿರುಗಿಕೊಳ್ಳುವುದೇ ನಿಜವಾದ ಮಾನಸಾಂತರ.

ನಿಜವಾದ ಮಾನಸಾಂತರದಲ್ಲಿ ನಮ್ಮ ಇಡೀ ವ್ಯಕ್ತಿತ್ವವು, ಅಂದರೆ, ನಮ್ಮ ಮನಸ್ಸು, ಭಾವೋದ್ವೇಗ ಹಾಗೂ ನಮ್ಮ ಚಿತ್ತವು ಒಳಪಟ್ಟಿರುತ್ತವೆ.

ಮೊದಲನೆಯದಾಗಿ, ಮಾನಸಾಂತರದ ಅರ್ಥವು - ನಾವು ಪಾಪ ಹಾಗೂ ಲೋಕದ ವಿಷಯವಾಗಿ ನಮ್ಮ ಮನಸ್ಸನ್ನು ಮಾರ್ಪಡಿಸಿಕೊಳ್ಳುವುದಾಗಿದೆ. ನಮ್ಮ ಪಾಪವು ನಮ್ಮನ್ನು ದೇವರಿಂದ ಪ್ರತ್ಯೇಕಿಸಿದೆ ಎಂದು ಗ್ರಹಿಸಬೇಕಾಗಿದೆ. ಮಾತ್ರವಲ್ಲದೆ ಈ ಲೋಕದ ಇಡೀ ಜೀವನ ಮಾರ್ಗವೇ ದೇವರಿಗೆ ವಿರುದ್ಧವಾಗಿದೆಯೆಂದೂ ನಾವು ಕಾಣುತ್ತೇವೆ ಮತ್ತು ನಾವು ದೇವರನ್ನು ಸನ್ಮಾನಿಸದ ಅಂಥಹ ಜೀವನ ಮಾರ್ಗದಿಂದ ತಿರುಗಿಕೊಳ್ಳಬಯಸುತ್ತೇವೆ.

ಎರಡನೆಯದಾಗಿ, ಮಾನಸಾಂತರದಲ್ಲಿ ನಮ್ಮ ಭಾವೋದ್ವೇಗವೂ ಒಳಗೊಂಡಿದೆ. ನಾವು ಜೀವಿಸಿದ್ದ ಮಾರ್ಗದ ವಿಷಯವಾಗಿ ವಿಷಾದಿಸುವಂಥದಾಗಿದೆ. (2 ಕೊರಿ. 7:10). ನಾವು ನಮ್ಮ ಗತಕಾಲದ ನಡವಳಿಕೆಯನ್ನು ದ್ವೇಷಿಸುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಯಾರಿಗೂ ಕಾಣದಂತೆ ನಮ್ಮಲ್ಲಿಯೇ ಕಂಡುಬರುವ ದೊಡ್ಡ ಕೆಡುಕುಗಳಿಗಾಗಿ ನಾವು ಹೇಸಿಕೊಳ್ಳುತ್ತೇವೆ (ಯೆಹೆಜ್ಕೇಲ 36:31)

ನಾವು ಜೀವಿಸಿದ ಮಾರ್ಗದಿಂದ ದೇವರನ್ನು ಬಹಳವಾಗಿ ನೋಯಿಸಿದ್ದಕ್ಕಾಗಿ ಅತ್ತು ಗೋಳಾಡುತ್ತೇವೆ. ತಮ್ಮ ಪಾಪಗಳ ಅರುಹನ್ನು ಹೊಂದಿದ ಸತ್ಯವೇದದ ಅನೇಕ ಪುರುಷರ ಪ್ರತಿಕ್ರಿಯೆ ಇದೇ ಆಗಿತ್ತು. ದಾವೀದ (ಕೀರ್ತನೆ. 50), ಯೋಬ (ಯೋಬ. 42:6) ಮತ್ತು ಪೇತ್ರನು (ಮತ್ತಾಯ 26:75) ತಮ್ಮ ಪಾಪಗಳಿಗಾಗಿ ಮಾನಸಾಂತರಪಟ್ಟಾಗ ವ್ಯಥೆಗೊಂಡು ಅತ್ತರು.

ನಾವು ನಮ್ಮ ಪಾಪಗಳಿಗಾಗಿ ದುಃಖಿಸಿ ಅಳುವಂತೆ ಯೇಸುವೂ, ಅಪೋಸ್ತಲರೂ ನಮ್ಮನ್ನು ಫ್ರೋತ್ಸಾಹಿಸಿದ್ದಾರೆ (ಮತ್ತಾಯ 5:4, ಯಾಕೋಬ 4:9). ಇದೇ ದೇವರ ಕಡೆಗೆ ಹಿಂದಿರುಗುವ ಮಾರ್ಗವಾಗಿದೆ.

ಕೊನೆಯದಾಗಿ, ಮಾನಸಾಂತರದಲ್ಲಿ ನಮ್ಮ ಚಿತ್ತವು ಒಳಪಟ್ಟಿರುತ್ತದೆ.‘ಸ್ವಂತ ಮಾರ್ಗವನ್ನೇ’ ಬಯಸುವ ಆ ನಮ್ಮ ಹಟಮಾರಿತನದ ಸ್ವ-ಚಿತ್ತವನ್ನು ಯೇಸುವಿಗೆ ಅಧೀನಪಡಿಸಿ, ಯೇಸುವನ್ನು ನಮ್ಮ ಜೀವಿತದ ಒಡೆಯನನ್ನಾಗಿ ಮಾಡಬೇಕು. ಅಂದರೆ, ಇನ್ನು ಮುಂದೆ ದೇವರು ಏನೇನು ಮಾಡಬೇಕೆಂದು ನಮ್ಮಿಂದ ಬಯಸುತ್ತಾನೋ, ಅದು ಎಷ್ಟೇ ವೆಚ್ಚವುಳ್ಳದ್ದೂ, ದೀನಾವಸ್ಥೆಯುಳ್ಳದ್ದು ಆಗಿದ್ದರೂ ನಾವು ಅದನ್ನು ಮಾಡಲು ಸಿದ್ಧ ಮನಸ್ಸುಳ್ಳವರಾಗಿರಬೇಕೆಂದು ಇದರ ಅರ್ಥ.

ತಪ್ಪಿಹೋದ ಮಗನು ತನ್ನ ತಂದೆ ಏನೇ ಹೇಳಿದರೂ ಅದನ್ನು ಮಾಡಲು ಸಿದ್ದಮನಸ್ಸುಳ್ಳವನಾಗಿಯೂ ಮುರಿಯಲ್ಪಟ್ಟವನಾಗಿಯೂ, ಅಧೀನತೆಯುಳ್ಳವನಾಗಿಯೂ ಮನೆಗೆ ಹಿಂದಿರುಗಿದನು. ಇದೇ ನಿಜವಾದ ಮಾನಸಾಂತರ (ಲೂಕ. 15:11-24).

ನಾವು ಮಾಡಿರುವ ಪ್ರತಿಯೊಂದು ಪಾಪವನ್ನು ದೇವರಿಗೆ ಅರಿಕೆ ಮಾಡಬೇಕಾಗಿಲ್ಲ. ಹೇಗೂ ಅವೆಲ್ಲವನ್ನು ಜ್ಞಾಪಕಮಾಡಿಕೊಳ್ಳುವದೂ ಅಸಾಧ್ಯಕರವೇ! ತಪ್ಪಿಹೋದ ಮಗನು ಹಾಗೆ ಮಾಡಲಿಲ್ಲ. ಅವನು ಹೇಳಿದ್ದು ಇಷ್ಟೇ, "ಅಪ್ಪಾ... ಪಾಪ ಮಾಡಿದ್ದೇನೆ. ನಾವು ಸಹ ಹೇಳಬೇಕಾಗಿರುವುದು ಅಷ್ಟೇ.

ಆದರೆ ಇಸ್ಕರಿಯೋತ ಯೂದನು ಸಹ, "ಪಾಪ ಮಾಡಿದೆನು ಎಂದು ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಆದರೂ ಅವನ ಅರಿಕೆಗೂ ತಪ್ಪಿ ಹೋದ ಮಗನ ಅರಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ದೇವರು ಕೇವಲ ನಾವು ಹೇಳುವ ಮಾತುಗಳನ್ನಷ್ಟೇ ಗಮನಿಸುವವನಲ್ಲ. ಆತನು ನಮ್ಮ ಮಾತುಗಳ ಹಿಂದಿರುವ ನಮ್ಮ ಮನೋಭಾವವನ್ನು ವಿವೇಚಿಸಿ, ಅದಕ್ಕೆ ತಕ್ಕಂತೆ ನಮ್ಮೊಂದಿಗೆ ವ್ಯವಹರಿಸುವನಾಗಿದ್ದಾನೆ.

ನಿಜವಾದ ಮಾನಸಾಂತರದ ಫಲ

ಮಾನಸಾಂತರಕ್ಕೆ ತಕ್ಕಂಥ ಫಲಗಳನ್ನು ತೋರಿಸುವಂತೆ ಸ್ನಾನಿಕ ಯೋಹಾನನು ಫರಿಸಾಯರಿಗೆ ಹೇಳಿದನು (ಮತ್ತಾ. 3:8). ನಾವು ನಿಜವಾಗಿಯೂ ಮಾನಸಾಂತರಪಟ್ಟಿದ್ದರೆ ನಮ್ಮ ಜೀವನದ ಮಾರ್ಗವೇ ಬದಲಾಗುವುದು.

ನಾವು ಮಾನಸಾಂತರಪಟ್ಟ ನಂತರ ಮಾಡತಕ್ಕ ಪ್ರಥಮ ಸಂಗತಿಗಳಲ್ಲಿ ಒಂದು ಯಾವುದೆಂದರೆ, ನಾವು ನಮ್ಮ ಜೀವಿತದಲ್ಲಿ ಮಾಡಿರುವ ತಪ್ಪುಗಳಿಂದಾದ ನಷ್ಟವನ್ನು ಭರ್ತಿ ಮಾಡುವಂಥದ್ದು.

ಯೇಸುವು ಜಕ್ಕಾಯನ ಮನೆಯನ್ನು ಪ್ರವೇಶಿಸಿದ ಕೂಡಲೇ ಅವನು(ಜಕ್ಕಾಯನು) ತನ್ನ ಪಾಪದ ಮನವರಿಕೆಯನ್ನು ಹೊಂದಿದನು ಎಂದು ಸುವಾರ್ತೆಯಲ್ಲಿ ನಾವು ಓದುತ್ತೇವೆ (ಲೂಕ 19:1-10). ಜಕ್ಕಾಯನು ಹಣವನ್ನು ಪ್ರೀತಿಸಿದ ಮನುಷ್ಯನಾಗಿದ್ದನು. ಆದರೆ ಮಾನಸಾಂತರದಲ್ಲಿ ಏನು ಅಡಕವಾಗಿದೆ ಎಂದು ಅವನು ಅರ್ಥಮಾಡಿಕೊಂಡಿದ್ದನು. ‘ತಾನು ಜೀವನದಲ್ಲಿ ಮಾಡಿದ ಎಲ್ಲಾ ತಪ್ಪುಗಳನ್ನು ಸರಿಪಡಿಸಬೇಕಾಗಿದೆ’ ಎಂದು ತಿಳಿದುಕೊಂಡಿದ್ದನು.

ಇದರಿಂದಾಗಿ ಅವನಿಗೆ ಬಹಳಷ್ಟು ಹಣ ನಷ್ಟವಾಗಿರಲಿಕ್ಕಿತ್ತು. ಏಕೆಂದರೆ ಅವನು ತನ್ನ ಸಂಪೂರ್ಣವಾದ, ಹೃದಯಾಂತರಾಳದಿಂದ ಮಾನಸಾಂತರವನ್ನು ಹೊಂದಲು ತೀರ್ಮಾನಿಸಿದನು. ಆದ್ದರಿಂದ ಅವನು ತನ್ನ ಹಣದಲ್ಲಿ ಅರ್ಧವನ್ನು ಬಡವರಿಗೂ ಹಾಗೂ ತಾನು ಮೋಸಮಾಡಿದವರಿಗೆ ನಾಲ್ಕರಷ್ಟೂ ಹಿಂದಕ್ಕೆ ಕೊಡುವುದಾಗಿ ಕರ್ತನಿಗೆ ಹೇಳಿದನು.

ಜಕ್ಕಾಯನು ನಷ್ಟ ಭರ್ತಿ ಮಾಡುವುದಾಗಿ ಹೇಳಿದಾಗ ಮಾತ್ರವೇ, ಆ ಮನೆಗೆ ರಕ್ಷಣೆ ಬಂತೆಂದು ಯೇಸು ಹೇಳಿದನು. ನಷ್ಟ ಭರ್ತಿ ಮಾಡಲು ಮನಸುಳ್ಳವರಾಗಿರುವುದು ನಿಜವಾಗಿಯೂ ರಕ್ಷಣೆ ಹೊಂದಿರುವುದರ ಲಕ್ಷಣಗಳಲ್ಲಿ ಒಂದಾಗಿದೆ.(ಲೂಕ. 19:1-10).

ಯೇಸು ಬೋಧಿಸಿದ ಆ ಸಾಮ್ಯದಲ್ಲಿ ಬುದ್ಧಿವಂತ ಮನುಷ್ಯನು ಆಳವಾಗಿ ಅಗೆದು, ಉಸುಬಿನ ಪದರಿನ ಕೆಳಗಿದ್ದ ಬಂಡೆಯ ಮೇಲೆ ತನ್ನ ಅಸ್ತಿವಾರವನ್ನು ಹಾಕಿದ್ದನು. (ಲೂಕ. 6:48) ಬುದ್ಧಿಹೀನನು ಸಹ ಅದೇ ಜಾಗದಲ್ಲಿ ತನ್ನ ಮನೆಯನ್ನು ಕಟ್ಟಿಕೊಂಡಿದ್ದನು. ಆದರೆ ಅವನು ಸಾಕಷ್ಟು ಆಳವಾಗಿ ಅಗೆಯಲಿಲ್ಲ. ಅವನು ತನ್ನ ಅಸ್ತಿವಾರವನ್ನು ಮೇಲ್ಪದರದ ಉಸುಬಿನ(ಮರಳಿನ) ಮೇಲೆ ಹಾಕಿದ್ದನು.

ಈ ಸಾಮ್ಯವನ್ನು ನಾವು ನಿಜ ಹಾಗೂ ನಕಲು ಮಾನಸಾಂತರಕ್ಕೆ ಅನ್ವಯಿಸಬಹುದು. ನಾವು ನಮ್ಮ ಜೀವಿತದಲ್ಲಿ ನಷ್ಟ ಭರ್ತಿ ಮಾಡುವುದರಲ್ಲಿ ಶ್ರಮವನ್ನು ತೆಗೆದುಕೊಂಡಾಗ ಮಾತ್ರವೇ ಆಳವಾಗಿ ಅಗೆಯುತ್ತೇವೆ.

ನಾವು ಕ್ರಿಸ್ತನ ಕಡೆಗೆ ಬಂದ ಕೂಡಲೇ, ನಾವು ಪರಿವರ್ತನೆ ಹೊಂzದೆ ಇದ್ದ ಆ ಹಿಂದಿನ ಜೀವಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪ್ರಾರಂಭದಲ್ಲಿಯೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ಈ ವಿಷಯಗಳನ್ನು ನಾವು ಗಂಭೀರವಾಗಿ ಗಮನಿಸದೇ ಇದ್ದು, ಇವನ್ನು ಸರಿಪಡಿಸಲು ಪ್ರಯತ್ನಿಸದಿದ್ದರೆ ನಮ್ಮ ಅಸ್ತಿವಾರವು ಬಲಹೀನವಾಗಿಯೇ ಉಳಿಯುವುದು ಮತ್ತು ಒಂದು ದಿನ ನಮ್ಮ ಮನೆಯೂ ಕುಸಿದು ಬೀಳುವುದು.

ನಷ್ಟ ಭರ್ತಿ ಮಾಡುವುದರಲ್ಲಿ ಒಳಗೊಂಡಿರುವುದೇನು1

ನೀವು ಸರಕಾರಕ್ಕೆ ತೆರಿಗೆ ಪಾವತಿಸುವುದರಲ್ಲಿ ಮೋಸ ಮಾಡಿದ್ದರೆ ಈಗ ನೀವು ಅದನ್ನು ಹಿಂದಕ್ಕೆ ಕಟ್ಟಬೇಕೆಂದು ಇದರ ಅರ್ಥ. ಕೆಲವೊಮ್ಮೆ ಸಂಬಂಧಪಟ್ಟ ಒಂದು ವಿಭಾಗಕ್ಕೆ ಹಣವನ್ನು ಹಿಂದಕ್ಕೆ ಕಟ್ಟಲು ಸಾಧ್ಯವಾಗದಿರಬಹುದು, ಆದರೆ ನಾವು ದೇವರಿಗೆ ವಿಧೇಯರಾಗಲು ಮನಸ್ಸುಳ್ಳವರಾಗಿದ್ದರೆ ಅದಕ್ಕೊಂದು ಮಾರ್ಗವಿರುವುದಷ್ಟೆ! ನಾವು ಅಂಚೆ ಚೀಟಿ ಇಲ್ಲವೆ ರೆ ಲ್ವೆ ಟಿಕೆಟುಗಳನ್ನು ಖರೀದಿಸಿ ಅವುಗಳನ್ನು ಹರಿದು ಹಾಕುವುದರ ಮೂಲಕ ನಾವು ಸರಕಾರಕ್ಕೆ ಬಾಕಿ ಇರುವ (ಹಿಂದಿರುಗಿಸಬಹುದಾದ) ಹಣವು ಅದಕ್ಕೆ ಹಿಂದಿರುಗುವುದನ್ನು ನಿಶ್ಚಯಪಡಿಸಿಕೊಳ್ಳಬೇಕು.

ನೀವು ಜನರಿಗೆ ಮೋಸ ಮಾಡಿದ್ದರೆ ಹಿಂದಕ್ಕೆ ಕೊಡುವ ಸಮಯದಲ್ಲಿ ಕ್ಷಮೆ ಕೇಳಬೇಕು. ನಿಮ್ಮ ಜೀವಿತದಲ್ಲಿ ಹೇಗೆ ಬದಲಾವಣೆ ಬಂದಿತೆಂದೂ ಅವರಿಗೆ ಹೇಳುವವರಾಗಿರ್ರಿ. ಇದನ್ನೆಲ್ಲಾ ನಿಮ್ಮಷ್ಟಕ್ಕೆ ನೀವೇ ಮಾಡಲು ನಿಮಗೆ ಧೆ ರ್ಯವಿಲ್ಲದಿದ್ದರೆ, ನಷ್ಟ ಭರ್ತಿ ಮಾಡುವಾಗ, ಒಬ್ಬ ಸಹೋದರನನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿರಿ.

ನೀವು ನಿಮ್ಮ ಸಾಲವನ್ನೆಲ್ಲಾ ಒಂದೇ ಸಲ ಹಿಂದಿರುಗಿಸಲಾಗದಿದ್ದರೆ, ಚಿಂತಿಸಬೇಡಿರಿ. ಅದನ್ನು ಕಂತುಗಳಲ್ಲಿ ಕಟ್ಟಿರಿ. ಅದು ಐದು-ಐದು ರೂಪಾಯಿಗಳಂತೆ ಆದರೂ ಸರಿಯೇ! ಹಿಂದಿರುಗಿಸುವುದನ್ನು ಪ್ರಾರಂಭಿಸಿರಿ! ದೇವರು ಜಕ್ಕಾಯನನ್ನು ಅಂಗೀಕರಿಸಿದ್ದು, ಅವನು ತನ್ನ ಎಲ್ಲಾ ಸಾಲವನ್ನು ಕೊಟ್ಟು ಮುಗಿಸಿದ ಮೇಲೆ ಅಲ್ಲ-ಅವನು ಹಿಂದಿರುಗಿ ಕೊಡುವುದಾಗಿ ತೀರ್ಮಾನಿಸಿದ ದಿನವೇ!

ನಿಮ್ಮಿಂದ ವಂಚಿಸಲ್ಪಟ್ಟವರು ಈಗ ಎಲ್ಲಿ ಜೀವಿಸುತ್ತಿದ್ದಾರೆಂದು ನಿಮಗೆ ತಿಳಿಯದಿದ್ದರೆ, ಆ ಹಣವನ್ನು ಎಲ್ಲಾ ಹಣದ ಮೂಲ ಮಾಲೀಕನಾಗಿರುವ ದೇವರಿಗೆ ಹಿಂದಕ್ಕೆ ಕೊಡಿರಿ. ಆ ನಿಯಮವನ್ನು ದೇವರೇ ಇಸ್ರಾಯೇಲರಿಗೆ ನೀಡಿದ್ದರು. (ಅರಣ್ಯ. 5:6-8).

ಅನ್ಯಾಯವಾಗಿ ನಾವು ಪಡೆದುಕೊಂಡ ಹಣ ಯಾಕೆ ನಮ್ಮ ಹತ್ತಿರ ಇರಬೇಕು1 ದೇವರು ಅಂಥಾ ಹಣವನ್ನು ಆಶೀರ್ವದಿಸಲಾರನು.

ನಾವು ಯಾರನ್ನಾದರೂ ನೋಯಿಸಿದ್ದರೆ ಇಲ್ಲವೆ ಯಾರಿಗಾದರೂ ಹಾನಿ ಮಾಡಿದ್ದರೆ, ಮತ್ತು ಅದರಲ್ಲಿ ಹಣವು ಒಳಪಡದಿದ್ದಲ್ಲಿ, ನಾವು ಹೋಗಿ ಆ ವ್ಯಕ್ತಿಯಿಂದ ಕ್ಷಮಾಪಣೆಯನ್ನು ಕೇಳಬೇಕು.

ತಾವು ಸರಕಾರಕ್ಕೆ ಮೋಸಮಾಡಿದ ತೆರಿಗೆ ಹಾಗೂ ಸುಂಕದ ನಷ್ಟವನ್ನು ಭರ್ತಿಮಾಡಲು, ಅನೇಕ ತಿಂಗಳು ಹಣವನ್ನು ಕೂಡಿಸಿ, ತರುವಾಯ ತಮ್ಮ ಬ್ಯಾಂಕಿನಲ್ಲಿದ್ದದ್ದೆಲ್ಲವನ್ನು ಖಾಲಿ ಮಾಡಿದ ಸಹೋದರರನ್ನು ನಾನು ಬಲ್ಲೆನು. ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾಗಿರುವವರೇ ದೇವರಿಗಾಗಿ ಮಹಾ ಕಾರ್ಯಗಳನ್ನು ಮಾಡುವರು.

ತಮ್ಮ ಪದವಿ - ಸರ್ಟಿಫಿಕೇಟುಗಳೊಂದಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳ ಬಳಿ ಹೋಗಿ ತಾವು ಅಂತಿಮ ಪರೀಕ್ಷೆಗಳಲ್ಲಿ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿರುವ ಕೆಲವರನ್ನು ನಾನು ಬಲ್ಲೆನು. ಅವರು ಸ್ಪಷ್ಟ ಮನಸ್ಸಾಕ್ಷಿಯುಳ್ಳವರಾಗಿ ಇರುವುದರ ಸಲುವಾಗಿ ಅಗತ್ಯವಿದ್ದಲ್ಲಿ, ತಮ್ಮ ಪದವಿಗಳನ್ನೂ ತ್ಯಾಗ ಮಾಡಲು ಸಿದ್ಧರಿದ್ದರು. ದೇವರು ಅಂಥವರಿಗೆ ಅಸಾಧಾರಣವಾದ ರೀತಿಯಲ್ಲಿ ಅಧಿಕಾರಿಗಳ ಮುಂದೆ ದಯೆ ತೋರಿಸಿದ್ದರಿಂದ ಅವರು ಕ್ಷಮಾಪಣೆಯನ್ನು ಹೊಂದಿದ್ದಾರೆ. ನಿಮ್ಮ ವಿಷಯದಲ್ಲಿ ದೇವರು ನಿಮ್ಮ ಸರ್ಟಿಫಿಕೇಟನ್ನು ವಿಶ್ವವಿಧ್ಯಾಲಯವು ತೆಗೆದುಕೊಳ್ಳುವಂತೆ ಅನುಮತಿಸಬಹುದು! ಆದರೆ ಅದು ನಿಮಗೆ ದೇವರ ಪರಿಪೂರ್ಣ ಚಿತ್ತವಾಗಿರುವುದಷ್ಟೆ.

ಅನೇಕ ವರ್ಷಗಳ ಹಿಂದೆ ಒಂದು ಸ್ಟಾಂಪನ್ನು ಕದ್ದುಕೊಂಡದ್ದಕ್ಕಾಗಿ ಅವರಿಗೆ ಕ್ಷಮಾಪಣೆಯ ಪತ್ರವನ್ನು ಬರೆದ ಒಬ್ಬ ಸಹೋದರನನ್ನು ಬಲ್ಲೆನು. ಒಂದು ವಸ್ತುವಿನ ಕ್ರಯವು ಎಷ್ಟೇ ಕಡಿಮೆಯಾಗಿದ್ದರೂ ಕಳ್ಳತನವು ಕಳ್ಳತನವೇ. ಚಿಕ್ಕ ವಿಷಯಗಳಲ್ಲಿಯೇ ನಮ್ಮ ನಂಬಿಗಸ್ತಿಕೆಯು ಪರೀಕ್ಷಿಸಲ್ಪಡುತ್ತದೆ.

ನೀವು ನಿಮ್ಮ ಗತಕಾಲದ ಜೀವಿತದಲ್ಲಿ ಮಾಡಿದ ಚಿಕ್ಕ ತಪ್ಪುಗಳನ್ನು ನಿಮ್ಮ ನೆನಪಿನಲ್ಲಿ ಕೆದರಿಕೊಳ್ಳಲು ಪ್ರಯತ್ನಿಸಿ ಈಗ ನಿಮ್ಮನ್ನು ನೀವೇ ಪೀಡಿಸಿಕೊಳ್ಳಿರಿ ಎಂದು ನಾನು ನಿಮಗೆ ಸಲಹೆ ನೀಡುತ್ತಿಲ್ಲ. ನೀವು ಅದನ್ನು ಮಾಡುವ ಅವಶ್ಯವಿಲ್ಲ. ಸರಿಪಡಿಸಿಕೊಳ್ಳಲು ಅವಶ್ಯವಾದವುಗಳನ್ನು ದೇವರು ನಿಮಗೆ ನೆನಪಿಸುವನು; ಹೀಗೆ ದೇವರು ನಿಮಗೆ ನೆನಪಿಸುವಂಥದ್ದನ್ನು ಮಾತ್ರವೇ ನೀವು ಸರಿಪಡಿಸಬೇಕಾಗುವುದು.

ನೀವು ಮಾಡಿದ ಕೆಲವು ತಪ್ಪುಗಳು ಬಹು ಕ್ಲಿಷ್ಟವಾಗಿದ್ದು, ಸಂಪೂರ್ಣವಾಗಿ ನೀವು ಸರಿಪಡಿಸಲಾಗದಂಥವುಗಳಾಗಿರಬಹುದು. ಅಂಥ ವಿಷಯಗಳಲ್ಲಿ ನೀವು ಕೇವಲ ನಿಮ್ಮ ದುಃಖವನ್ನು ದೇವರಿಗೆ ವ್ಯಕ್ತಪಡಿಸಿ ಆತನ ಕರುಣೆಯನ್ನು ಕೇಳಬೇಕಷ್ಟೆ.

ಏನೇ ಇದ್ದರೂ ನಾವು ಯಾವುದಾದರೂ ಒಂದು ವಿಷಯವನ್ನು ಕೇವಲ ಸರಿಪಡಿಸಲಾಗಲಿಲ್ಲ ಎಂಬ ಕಾರಣಕ್ಕಾಗಿ ಸೆ ತಾನನು ನಮ್ಮನ್ನು ಸದಾಕಾಲ ಅಪರಾಧ ಭಾವನೆ ಹಾಗೂ ಆತ್ಮನಿಂದನೆಗೊಳಪಡಿಸಲು ನಾವು ಅನುಮತಿಸಬಾರದು. ದೇವರು ನಮ್ಮ ಪರಿಸ್ಥಿತಿಯನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡವನಾಗಿದ್ದಾನೆ. ಆತನು ನಮ್ಮನ್ನು ಪೀಡಿಸುವುದಿಲ್ಲ. ನಿಮಗೆ ಸಿದ್ದ ಮನಸ್ಸಿದ್ದರೆ, ನೀವು ನಿಮ್ಮಿಂದ ಆದದ್ದನ್ನು ಕೊಟ್ಟರೆ ಇಲ್ಲವೆ ಏನೂ ಕೊಡಲಾಗದಿದ್ದರೂ ದೇವರು ಅದನ್ನು ಅಂಗೀಕರಿಸುವನು (2 ಕೊರಿ. 8:12).

ಇಷ್ಟೊಂದು ಕರುಣೆಯುಳ್ಳ ದೇವರಿಗೆ ಸ್ತೋತ್ರವಾಗಲಿ!

ದೇವರನ್ನು ಸನ್ಮಾನಿಸುವವರನ್ನು ಆತನು ಸನ್ಮಾನಿಸುವನು (1 ಸಮು. 2:30).ನಾವು ಚಿಕ್ಕ ವಿಷಯಗಳಲ್ಲಿಯೂ ನಂಬಿಗಸ್ತರಾಗಿರುವುದು’ ಆತನನ್ನು ಸನ್ಮಾನಿಸುವ ಒಂದು ಮಾರ್ಗವಾಗಿದೆ.

ನಾವು ನಷ್ಟ ಭರ್ತಿ ಮಾಡದಿದ್ದರೆ, ನಾವು ನಮ್ಮ ಜೀವಮಾನವೆಲ್ಲಾ ಪಾಪದ ಸರಪಣಿಯನ್ನು ನಮ್ಮೊಂದಿಗೆ ಎಳೆಯುವವರಾಗಿರುವೆವು. ನಾವು ನಮ್ಮ ಮಾನ, ನಮ್ಮ ಪದವಿ ಹಾಗೂ ಉದ್ಯೋಗಕ್ಕಿಂತಲೂ ಸ್ಪಷ್ಟ ಮನಸ್ಸಾಕ್ಷಿಗೆ ಬೆಲೆ ಕೊಡುತ್ತೇವೋ ಇಲ್ಲವೋ ಎಂದು ದೇವರು ನಮ್ಮನ್ನು ಪರೀಕ್ಷಿಸುವನು.

ಬಹಳ ಜನರು ಈ ಪರೀಕ್ಷೆಯಲ್ಲಿ ಸೋಲುತ್ತಾರೆ. ಆದರೆ, ಈ ಭೂಮಿಯ ಮೇಲೆ ಎಲ್ಲಕ್ಕಿಂತಲೂ ಮಿಗಿಲಾಗಿ ದೇವರನ್ನೇ ಪ್ರೀತಿಸುತ್ತಾ ಉಳಿದಿರುವ ಕೆಲವರು ಪ್ರತಿಯೊಂದು ಸಂತತಿ(ಪೀಳಿಗೆ)ಯಲ್ಲಿಯೂ ಇದ್ದಾರೆ. ಅದಕ್ಕಾಗಿ ದೇವರಿಗೆ ಸ್ತೋತ್ರ.

ಇತರರನ್ನು ಕ್ಷಮಿಸುವುದು

ನಮ್ಮನ್ನು ಯಾವುದೇ ರೀತಿಯಲ್ಲಿ ಹಾನಿ ಮಾಡಿದವರನ್ನು ಕ್ಷಮಿಸುವುದು ಸಹ ಮಾನಸಾಂತರದಲ್ಲಿ ಒಳಪಟ್ಟಿರುತ್ತದೆ.

"ನೀವು ಇತರರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ ಎಂದು ಯೇಸು ಹೇಳಿದ್ದಾನೆ (ಮತ್ತಾ. 6:15).

ನಾವು ಕೇವಲ ಬಾಹ್ಯವಾಗಿ ಅಲ್ಲ ನಮ್ಮ ಹೃದಯಾಂತರಾಳದಿಂದ ಇತರರನ್ನು ಕ್ಷಮಿಸಬೇಕೆಂದು ಯೇಸು ಹೇಳಿದ್ದಾನೆ. (ಮತ್ತಾ. 18:35).

ನಾವು ಇತರರನ್ನು ಮನಃಪೂರ್ವಕವಾಗಿಯೂ ಸಂಪೂರ್ಣವಾಗಿಯೂ ಕ್ಷಮಿಸದಿದ್ದಲ್ಲಿ, ದೇವರಿಂದ ಕ್ಷಮಿಸಲ್ಪಡುವುದು ಅಸಾಧ್ಯ.

ಇತರರು ನಮಗೆ ಮಾಡಿರುವುದನ್ನು ನಾವು ಮರೆಯಲು ಸಾಧ್ಯವಾಗದಿರಬಹುದು. ಆದರೆ ನಮಗೆ ಮಾಡಿದ ಕೆಟ್ಟದ್ದನ್ನು ನೆನಪು ಮಾಡಿಕೊಳ್ಳುವ ಶೋಧನೆ ಎದುರಾಗುವಾಗ ಅದನ್ನು ನಿರಾಕರಿಸಲು ಖಂಡಿತವಾಗಿಯೂ ನಮಗೆ ಸಾಧ್ಯ.

ಬಹುಶಃ ನಿಮ್ಮನ್ನು ಎಷ್ಟೋ ಕೆಟ್ಟದಾಗಿ ಹಾನಿ ಮಾಡಿದ ಒಬ್ಬರನ್ನು ಮನುಃಪೂರ್ವಕವಾಗಿ ಕ್ಷಮಿಸುವುದು ನಿಮಗೆ ನಿಜವಾಗಿಯೂ ಕಷ್ಟಕರವಾಗಿ ಕಾಣುತ್ತಿರಬಹುದು. ಕ್ಷಮಿಸುವುದಕ್ಕೆ ದೇವರ ಸಹಾಯವನ್ನು ಬೇಡಿರಿ; ಆಗ ಯಾರನ್ನೇ ಆಗಲಿ, ಕ್ಷಮಿಸುವಂತೆ ಆತನು ನಿಮಗೆ ಬಯಕೆಯನ್ನೂ ಶಕ್ತಿಯನ್ನೂ ಕೊಡಲು ಸಿದ್ಧನಿದ್ದಾನೆಂದು ನೀವು ಕಂಡುಕೊಳ್ಳುವಿರಿ.

ದೇವರು ನಮ್ಮ ಕೋಟ್ಯಾಂತರ ಪಾಪಗಳನ್ನು ಉಚಿತವಾಗಿ ಕ್ಷಮಿಸಿರುವುದನ್ನು ನಾನು ಆಲೋಚಿಸುವಾಗ,ನಾವೂ ಇತರರನ್ನೂ ಅದೇ ರೀತಿಯಾಗಿ ಕ್ಷಮಿಸುವುದು ನಮಗೆ ಕಷ್ಟಕರವಾಗಿರಲಾರದು. ನಾವು ಇತರರನ್ನು ಕ್ಷಮಿಸದಿರುವಾಗಲೇ ಸೆ ತಾನನು ನಮ್ಮನ್ನು ವಂಚಿಸಿ ನಷ್ಟಪಡಿಸುವನು (ನಮ್ಮ ಮೇಲೆ ಅಧಿಕಾರವನ್ನು ಹೊಂದುವನು).

ಪೌಲನು"ಕ್ಷಮಾಪಣೆ ಯ ಬಗ್ಗೆ ಹೇಳಿದ ಮೇಲೆ, "ಸ್ಯೆತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು ಎಂದು ಹೇಳುತ್ತಾನೆ (2 ಕೊರಿ. 2:10-11).

ಸ್ಯೆತಾನನ ವಿಷಯದಲ್ಲಿ ಬದಲಾದ ಮನೋಭಾವನೆ

ನಾವು ಸರಿಪಡಿಸಿಕೊಳ್ಳತಕ್ಕ ಇನ್ನೊಂದು ಕ್ಷೇತ್ರವಿದೆ. ಅದು ಸ್ಯೆತಾನನೊಂದಿಗೂ ದುರಾತ್ಮಗಳೊಂದಿಗೂ ಸಂಪರ್ಕವಿಟ್ಟುಕೊಂಡಿರುವ ಕ್ಷೇತ್ರವೇ.

ನೀವು ಜೋತಿಷ್ಯ, ವಿಗ್ರಹಾರಾಧನೆ, ಹಸ್ತಮುದ್ರಿಕ, ಮಾಟಮಂತ್ರ ಮುಂತಾದವುಗಳಲ್ಲಿ ಕೆ ಹಾಕಿದ್ದರೆ; ಅಥವಾ ರಾಕ್ ಸಂಗೀತ ಹಾಗು ಹಾನಿಕರವಾದ ಮಾದಕ ಔಷಧಿಯಲ್ಲಿ ನೀವು ಅಭಿರುಚಿಯುಳ್ಳವರಾಗಿದ್ದರೆ, ನೀವು ಇಂತಾದವುಗಳಲ್ಲಿ ತಿಳಿಯದೇ ಸಂಪರ್ಕವಿಟ್ಟುಕೊಂಡಿದ್ದರೂ ಸೆ ತಾನನೊಂದಿಗಿರುವ ಈ ಸಂಪರ್ಕವನ್ನು ನೀವು ತ್ಯಜಿಸಿಬಿಡುವುದು ಅವಶ್ಯ.

ಮೊಟ್ಟ ಮೊದಲನೆಯದಾಗಿ ನಿಮ್ಮಲ್ಲಿರುವ ಎಲ್ಲಾ ವಿಗ್ರಹಗಳನ್ನೂ, ಮಂತ್ರವಿದ್ಯೆಯ ಪುಸ್ತಕಗಳನ್ನೂ, ತಾಯಿತ ಮುಂತಾದವುಗಳನ್ನೂ ನಾಶಮಾಡಬೇಕು. (ಅದನ್ನು ಮಾರಿಬಿಡುವುದಲ್ಲ ನಾಶ ಮಾಡಿಬಿಡಬೇಕು) (ಅ.ಕೃ. 19:19 ನೋಡಿ). ಅನಂತರ ನೀವು, "ಕರ್ತನಾದ ಯೇಸುವೇ, ನಾನು ತಿಳಿದೋ ತಿಳಿಯದೆಯೋ ಸ್ಯೆತಾನನೊಂದಿಗೆ ಇಟ್ಟುಕೊಂಡಿದ್ದ ಪ್ರತಿ ಸಂಪರ್ಕವನ್ನೂ ಬಿಟ್ಟು ಬಿಡುತ್ತೇನೆ ಎಂದು ಹೇಳಿ ಪ್ರಾರ್ಥಿಸಬೇಕು.

ತರುವಾಯ ಸೆ ತಾನನಿಗೆ, "ಸ್ಯೆತಾನನೇ, ನನ್ನ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಹೆಸರಿನಲ್ಲಿ ನಿನ್ನನ್ನು ಎದುರಿಸುತ್ತೇನೆ, ನೀನು ಇನ್ನೆಂದೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಏಕೆಂದರೆ, ಈಗ ನಾನು ಕರ್ತನಾದ ಯೇಸುವಿಗೆ ಸೇರಿದವನಾಗಿದ್ದೇನೆಎಂದು ನೇರವಾಗಿ ಹೇಳಿರಿ. ಯಾಕೋಬ 4:7 ರಲ್ಲಿ, "ದೇವರಿಗೆ ಒಳಗಾಗಿರಿ; ಸ್ಯೆತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು ಎಂದು ಹೇಳಲ್ಪಟ್ಟಿದೆ. ಹೀಗೆ ಸ್ಯೆತಾನನಿಗೆ ಇನ್ನೆಂದಿಗೂ ನಿಮ್ಮ ಮೇಲೆ ಹಿಡಿತವಿರುವುದಿಲ್ಲ.

ನಾವು ಕರ್ತನೊಂದಿಗೆ ಸಾಗಿ ನಡೆದರೆ, ಆತನು ನಮ್ಮ ಜೀವಿತದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚೆಚ್ಚಾಗಿ ಬೆಳಕನ್ನು ಕೊಡುವನು. ಅದು ನಮ್ಮ ವಸ್ತ್ರ(ವೇಷ-ಭೂಷಣ)ದಲ್ಲಿ ಕಂಡು ಬರುವ ಲೌಕಿಕತನದಲ್ಲಾಗಲಿ, ಸಂಭಾಷಣೆಯಲ್ಲಾಗಲಿ, ನಮ್ಮ ಸ್ವರದ ಒರಟುತನದಲ್ಲಾಗಲಿ, ನಮ್ಮ ಓದುವ ಅಭ್ಯಾಸದಿಂದ ನಮ್ಮನ್ನು ಮಲಿನ ಮಾಡಿಕೊಳ್ಳುವುದರಲ್ಲಾಗಲಿ ಇರಬಹುದು. ಹೀಗೆ ನಾವು ಯಾವಾಗಲೂ ಮಾನಸಾಂತರಪಟ್ಟು ಶುದ್ಧೀಕರಿಸಿಕೊಳ್ಳತಕ್ಕ ಕ್ಷೇತ್ರಗಳನ್ನು ಕಂಡುಕೊಳ್ಳುವೆವು.

ನಾವು ಈ ನಿರಂತರ-ಮಾನಸಾಂತರದ ಮಾರ್ಗದಲ್ಲಿಯೇ ನಮ್ಮ ಜೀವಿತದ ಎಲ್ಲಾ ದಿನಗಳನ್ನು ಕಳೆಯಬೇಕು.

ಅಧ್ಯಾಯ 2
ನಂಬಿಕೆ

ಮಾನಸಾಂತರವು ನಮ್ಮ ಕ್ರೆ ಸ್ತ ಜೀವಿತದ ಅಸ್ತಿವಾರದಲ್ಲಿರುವ ಪ್ರಥಮ ಭಾಗ. ‘ನಂಬಿಕೆ’ ಅಥವಾ ವಿಶ್ವಾಸವು ಎರಡನೆಯ ಭಾಗ.

ದೇವರಲ್ಲಿ ನಂಬಿಕೆಯಿಡುವುದು ಅಂದರೆ, ನಮ್ಮ ಭಾವನೆಗಳು ಅಥವಾ ಇತರರು ನಮಗೆ ಏನೇ ಹೇಳಿದರೂ, ದೇವರು ತನ್ನ ವಾಕ್ಯದಲ್ಲಿ ಹೇಳಿರುವುದನ್ನು ನಾವು ನಂಬುವುದೂ ಆತನ ಮೇಲೆ ಭರವಸೆಯಿಡುವುದೂ ಆಗಿರುತ್ತದೆ. ಇದು ಅಷ್ಟು ಸರಳವಾದದ್ದಾಗಿದೆ.

ದೇವರ ವಿಷಯವಾಗಿ ಮೂರು ಸತ್ಯಾಂಶಗಳು ಇಲ್ಲಿವೆ:

  • (1) ಆತನು ನಮ್ಮನ್ನು ಮಿತಿಯಿಲ್ಲದೆ ಪ್ರೀತಿಸುತ್ತಾನೆ;
  • (2) ಆತನು ಸರ್ವ ಜ್ಞಾನಿಯಾಗಿದ್ದಾನೆ;
  • ಹಾಗೂ
  • (3) ಆತನು ಸರ್ವಶಕ್ತನಾಗಿದ್ದಾನೆ.

    ಈ ಸತ್ಯಾಂಶಗಳನ್ನು ನಂಬುವುದು ಕಷ್ಟವೇ1 ಇಲ್ಲ. ಹಾಗಾದರೆ ನಾವು ಹೃದಯಪೂರ್ವಕವಾಗಿ ದೇವರ ಮೇಲೆ ಭರವಸೆಯಿಡುವುದು ನಮಗೆ ಕಷ್ಟಕರವಾಗಬಾರದು.

    ಹವ್ವಳು ಏದೇನ್ ತೋಟದಲ್ಲಿ ಸೆ ತಾನನ ಮಾತಿಗೆ ಕಿವಿಗೊಟ್ಟಾಗ, ಅದು ನಂಬಿಕೆಯ ಸೋಲಾಗಿತ್ತು. ‘ದೇವರ ಆಜ್ಞೆಗಳು ತನ್ನ ಒಳ್ಳೆಯದಕ್ಕಾಗಿಯೇ’ ಎಂದು ಆಕೆಯು ನಂಬಲಿಲ್ಲ; ಆಕೆಯ ಮೇಲೆ ದೇವರಿಗಿದ್ದ ಪರಿಪೂರ್ಣ ಪ್ರೀತಿಯಲ್ಲಿ ಆಕೆಯು ನಂಬದ ಕಾರಣ ದೇವರಿಗೆ ಅವಿಧೇಯಳಾದಳು.

    ದೇವರ ವರಗಳನ್ನು ಹೊಂದಲು ನಂಬಿಕೆ

    ನಮಗೆ ಕೊಡುವುದಕ್ಕಾಗಿ ದೇವರ ಬಳಿಯಲ್ಲಿ ಅನೇಕ ಅದ್ಭುತವಾದ ವರಗಳಿವೆ... ಆತನು ಕೊಡುವ ವರಗಳೆಲ್ಲವೂ ಕೃಪೆಯ ವರಗಳೇ! ಆದರೆ, ಈ ದಿವ್ಯ ವರಗಳನ್ನು ಸ್ವೀಕರಿಸಿಕೊಳ್ಳಲು ನಮಗೆ ‘ನಂಬಿಕೆ’ಯು ಬಹು ಅವಶ್ಯವಾಗಿರುತ್ತದೆ.

    “ನಂಬಿಕೆಯ ಮೂಲಕ ಕೃಪೆಯಿಂದಲೇ ನಾವು ರಕ್ಷಣೆಯನ್ನು ಹೊಂದುವೆವು(ಎಫೆ. 2:8) ಎಂದು ಸತ್ಯವೇದವು ಹೇಳುತ್ತದೆ. ಮೇಲಿನಿಂದ ಸಮೃದ್ಧಿಯಾದ ಆಶೀರ್ವಾದಗಳನ್ನು ತುಂಬಿಕೊಂಡು ನಮ್ಮ ಕಡೆಗೆ ಬರುವ ದೇವರ ಹಸ್ತವೇ ಕೃಪೆಯು. ದೇವರ ಕೆ ಯಲ್ಲಿರುವ ಆಶೀರ್ವಾದಗಳನ್ನು ಪಡೆದುಕೊಳ್ಳಲು ಮೇಲ್ಗಡೆ (ದೇವರ ಕಡೆ) ಚಾಚಲ್ಪಡುವ ನಮ್ಮ ಕೆ ಯೇ ನಂಬಿಕೆ!

    ಎಲ್ಲಕ್ಕಿಂತಲೂ ಮೊದಲು ದೇವರು ನಮಗೆ ಪಾಪ ಕ್ಷಮಾಪಣೆಯನ್ನು ಕೊಡುತ್ತಾನೆ. ನಾವು ಯಥಾರ್ಥವಾಗಿ ಮಾನಸಾಂತರಪಟ್ಟಿದ್ದರೆ, ದೇವರು ಉಚಿತವಾಗಿ ನಮಗೆ ನೀಡುವ ಪಾಪ ಕ್ಷಮಾಪಣೆಯನ್ನು ನಾವು ನಮ್ಮ ಕೆ ಯನ್ನು ಚಾಚಿ ಆತನಿಂದ ಪಡೆದುಕೊಳ್ಳಬೇಕಷ್ಟೆ. ಇದನ್ನು ಹೊಂದುವುದಕ್ಕಾಗಿ ನಾವು ಪ್ರಯಾಸಪಡಬೇಕಾಗಿಲ್ಲ ಅಥವಾ ಅದಕ್ಕಾಗಿ ಯಾವ ಬೆಲೆಯನ್ನೂ ತೆರಬೇಕಾಗಿಲ್ಲ. ಇದರ ಬೆಲೆಯು ಈಗಾಗಲೇ ಕಲ್ವಾರಿಯಲ್ಲಿ ತೆರಲ್ಪಟ್ಟಿದೆ. ಈಗ ನಾವು ಮಾಡಬೇಕಾದುದು ಇಷ್ಟೇ ; “ತಂದೆಯೇ, ನಿನಗೆ ಕೃತಜ್ಞತೆಯುಎಂದು ಹೇಳಿ ಇದನ್ನು ಸ್ವೀಕರಿಸುವುದು! ಇದೇ ನಂಬಿಕೆ!!

    ದೇವರು ನೀಡುವುದನ್ನು ನಾವು ಸ್ವೀಕರಿಸದಿದ್ದರೆ, ವಾಸ್ತವಿಕವಾಗಿ(ನಿಜವಾಗಿಯೂ) ನಾವು ಆತನಿಗೆ ಅವಮಾನ ಮಾಡುತ್ತಿದ್ದೇವೆ. ನಾವು ಆತನ ವರಗಳನ್ನು ತಿರಸ್ಕರಿಸುತ್ತಿದ್ದೇವೆ. ತಮ್ಮ ಮಕ್ಕಳಿಗೆ ಕೊಡಲೆಂದು ಉಡುಗೊರೆಗಳುಳ್ಳ ಕೆ ಗಳನ್ನು ಅವರ ಕಡೆ ಚಾಚಿ, ಮಕ್ಕಳು ಆ ಉಡುಗೊರೆಗಳನ್ನು ಕ್ಯೆ ಚಾಚಿ ತೆಗೆದುಕೊಳ್ಳುವಾಗ ತಮ್ಮ ಕ್ಯೆಗಳನ್ನು ಹಿಂದಕ್ಕೆಳೆದುಕೊಂಡು ಮಕ್ಕಳನ್ನು ಕಾಡಿಸುವ ಕೆಲವು ಜನರಂತೆ ದೇವರು ಸಹ ನಮ್ಮನ್ನು ಕಾಡಿಸುತ್ತಿದ್ದಾನೆ ಎಂದು ಬಹುಶಃ ನಾವು ಯೋಚಿಸಬಹುದು! ಆದರೆ ದೇವರು ಅಂಥಾ ಜನರಂತೆ ಕೀಳೂ, ನೀಚನೂ, ಕೆಡುಕನೂ ಅಲ್ಲ. ಆತನು ನಮ್ಮನ್ನು ಪ್ರೀತಿಸುವ ತಂದೆ. ಆತನು ನಿಜವಾಗಿಯೂ ಒಳ್ಳೆಯ ವರಗಳನ್ನು ನಮಗೆ ನೀಡ ಬಯಸುತ್ತಾನೆ.

    ಆದುದರಿಂದ, ನಾವು ಏನೇ ಮಾಡಿದರೂ-“ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯಎಂದು ಸತ್ಯವೇದವು ಹೇಳುತ್ತದೆ (ಇಬ್ರಿ. 11.6).

    ನಾವು ದೇವರಲ್ಲಿ ಭರವಸೆಯಿಟ್ಟಿರೆ, ಆತನು ನಮ್ಮ ಪಾಪಗಳನ್ನು ಕ್ಷಮಿಸುವುದಲ್ಲದೆ, ಆತನು ಪಾಪಕ್ಕೆ ನಮ್ಮ ಮೇಲಿರುವ ಅಧಿಕಾರದಿಂದಲೂ ನಮ್ಮನ್ನು ಬಿಡುಗಡೆ ಮಾಡುವನು.

    ನಾವು ನಂಬಿಕೆಯನ್ನು ಪಡೆಯುವುದು ಹೇಗೆ1 ಅದಕ್ಕೆ ಒಂದೇ ಒಂದು ಮಾರ್ಗವಿದೆ. “ಸಾರಿದ ವಾರ್ತೆಯೇ ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ ಅಂದರೆ “ನಂಬಿಕೆಯು ಕ್ರಿಸ್ತನ ವಾಕ್ಯವನ್ನು ಆಲಿಸುವುದರಿಂದ ಬರುವುದು ಎಂದು ಸತ್ಯವೇದವು ಹೇಳುತ್ತದೆ (ರೋಮಾ. 10:17). ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ನಾವು ದೇವರ ವಾಕ್ಯದ ಮೂಲಕ ದೇವರೊಡನೆ ಸಂಬಂಧವನ್ನು ಕಂಡುಕೊಂಡಾಗ, ನಮಗೆ ನಂಬಿಕೆಯು ಸಿಗುತ್ತದೆ. ಆ ರೀತಿಯಾಗಿಯೇ ನಮ್ಮ ನಂಬಿಕೆಯೂ ಹೆಚ್ಚಾಗುವುದು.

    ದೇವರ ವಾಕ್ಯದ ಮೂಲಕ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತು, ಪುನಃ ಜೀವಿತನಾಗಿ ಎದ್ದನೆಂದು ನಾವು ತಿಳಿಯುವೆವು; ಮತ್ತು ನಾವು ಮಾನಸಾಂತರಪಟ್ಟು ಆತನಲ್ಲಿ ಭರವಸೆಯಿಟ್ಟರೆ, ಪೂರ್ಣವಾದ ಹಾಗೂ ಉಚಿತವಾದ ಪಾಪಕ್ಷಮಾಪಣೆಯನ್ನು ನಾವು - ಕೂಡಲೇ ಹೊಂದಲು ಸಾಧ್ಯ. ಇದು ಸತ್ಯವೆಂದು ಅನಂತರ ಪವಿತ್ರಾತ್ಮನು ನಮ್ಮ ಹೃದಯದಲ್ಲಿ ಸಾಕ್ಷಿ ಕೊಡುವನು. ದೇವರ ವಾಕ್ಯ ಹಾಗೂ ಪವಿತ್ರಾತ್ಮ - ಈ ಎರಡೂ ಸಾಕ್ಷಿಗಳ ಮೂಲಕ ದೇವರು ನಮ್ಮನ್ನು ಕ್ಷಮಿಸಿದ್ದಾನೆಂದೂ, ನಿಜವಾಗಿಯೂ ನಾವು ಆತನ ಮಕ್ಕಳೆಂದೂ ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯ ಎಂಬುದನ್ನೂ ನಾವು ತಿಳಿಯುವೆವು.

    ನಂಬಿಕೆಯ ನಿಶ್ಚಯ

    ನಾವು ನಿಜವಾಗಿಯೂ ಆತನ ಮಕ್ಕಳೆಂದು ನಮ್ಮ ಹೃದಯದಲ್ಲಿ ಸಂಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಆ ಸತ್ಯಾಂಶದ ವಿಷಯವಾಗಿ ನಾವು ಎಂದೂ ಸಂದೇಹಪಡಬಾರದೆಂದು ದೇವರು ಅಪೇಕ್ಷಿಸುತ್ತಾನೆ.

    ನಮ್ಮನ್ನು ಸಂದೇಹದಲ್ಲಿರಿಸಬೇಕೆಂದು ಸ್ಯೆತಾನನು ತನ್ನಿಂದ ಆದಷ್ಟು ಪ್ರಯತ್ನ ಮಾಡುವನು. ಆದರೆ ದೇವರು ತನ್ನ ವಾಕ್ಯದಲ್ಲಿನ ಅನೇಕ ವಾಗ್ದಾನಗಳನ್ನು ನಮಗೆ ಕೊಟ್ಟು ನಿಶ್ಚಯಪಡಿಸಿರುವುದರಿಂದ ನಾವು ಎಂದೂ ಸಂದೇಹದಲ್ಲಿ ಇರಬೇಕಾದ ಅವಶ್ಯವಿಲ್ಲ.

    ಈ ಕೆಲವು ವಾಗ್ದಾನಗಳನ್ನು ನೋಡಿರಿ: ಯೇಸು ಹೇಳಿದ್ದು,“ನನ್ನ ಬಳಿಗೆ ಬರುವವನನ್ನು ನಾನು ತಳ್ಳಿ ಬಿಡುವುದೇ ಇಲ್ಲ... ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜವಾಗಿಯೂ ಹೇಳುತ್ತೇನೆ (ಯೋಹಾ. 6:37,47).

    “ಯಾರೆಲ್ಲ ಆತನನ್ನು (ಕರ್ತನಾದ ಯೇಸುವನ್ನು) ಅಂಗೀಕರಿಸಿದರೋ ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರಕೊಟ್ಟನು(ಯೋಹಾ. 1:12).

    “ನಾನು ಅವರ ದುಷ್ಕೃತ್ಯಗಳ ವಿಷಯವಾಗಿ ಕ್ಷಮೆಯುಳ್ಳವನಾಗಿರುವೆನು, ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ(ಇಬ್ರಿ. 8:12) ಎಂದು ಕರ್ತನು ಹೇಳುತ್ತಾನೆ.

    ದೇವರ ವಾಗ್ದಾನಗಳಲ್ಲಿ ನಮಗಿರುವ ನಂಬಿಕೆಯನ್ನು, ನಾವು ನದಿಯನ್ನು ದಾಟುವಾಗ ನಮ್ಮ ಪಾದಗಳನ್ನು ಬಲವಾದ ಸೇತುವೆಯ ಮೇಲಿಡುವುದಕ್ಕೆ ಹೋಲಿಸಬಹುದು. ಸೇತುವೆ ಬಲವಾಗಿದ್ದರೆ, ನಮ್ಮ ಪಾದಗಳು ಬಲಹೀನವಾಗಿದ್ದರೂ ಏನೂ ತೊಂದರೆಯಿರುವುದಿಲ್ಲ. ಹಾಗಾದರೆ ಬಲವಾದ ನಂಬಿಕೆಯೆಂದರೇನು1 ಬಲಶಾಲಿಯಾದ ದೇವರಲ್ಲಿಯೂ ಆತನ ವಾಗ್ದಾನಗಳಲ್ಲಿಯೂ ಭರವಸೆ ಇಡುವುದೇ ನಂಬಿಕೆಯಾಗಿದೆ.

    ನಮ್ಮ ಭಾವನೆಗಳು ಅನೇಕ ಸಲ ನಮ್ಮನ್ನು ವಂಚಿಸುತ್ತವೆ. ನಾವು ಅವುಗಳಲ್ಲಿ ಎಂದೂ ನಮ್ಮ ಭರವಸೆಯಿಡಬಾರದು. ಸತ್ಯ, ನಂಬಿಕೆ ಹಾಗು ಭಾವನೆ ಎಂಬ ಮೂವರು ಮನುಷ್ಯರ ಕುರಿತಾಗಿ ಒಂದು ಸಾಮ್ಯವಿದೆ. ಅವರು ಒಂದು ಇಕ್ಕಟ್ಟಾದ ಗೋಡೆಯ ಮೇಲೆ ಒಬ್ಬರ ಹಿಂದೊಬ್ಬರು ನಡೆಯತ್ತಿದ್ದರಂತೆ. ಸತ್ಯವು ಮುಂದಾಗಿಯೂ ಅವನ ಹಿಂದೆ ನಂಬಿಕೆಯೂ ಕೊನೆಯಲ್ಲಿ ಭಾವನೆಯೂ ನಡೆಯುತ್ತಿದ್ದರು. ನಂಬಿಕೆಯು ತನ್ನ ಮುಂದೆ ನಡೆದ ಸತ್ಯದ ಮೇಲೆ ದೃಷ್ಟಿಯಿಟ್ಟ ತನಕ ಎಲ್ಲವು ಸರಿಯಾಗಿತ್ತು. ಭಾವನೆಯು ಅವನನ್ನು ಪೂರ್ಣವಾಗಿ ಹಿಂಬಾಲಿಸಿದನು. ಆದರೆ ನಂಬಿಕೆಯು ತನ್ನ ಹಿಂದೆ ಭಾವನೆಯು ಹೇಗೆ ಬರುತ್ತಿದ್ದಾನೆಂದು ಹಿಂದಿರುಗಿ ನೋಡಿದ ತಕ್ಷಣವೇ ಅವನು ಎಡವಿಬಿದ್ದು ಸತ್ತು ಹೋದನು; ಭಾವನೆಯು ಸಹ ಸತ್ತು ಹೋದನು. ಸತ್ಯನಾದರೋ ಯಾವ ತೊಂದರೆಯೂ ಇಲ್ಲದೆ ಗೋಡೆಯ ಮೇಲೆ ನಡೆಯುತ್ತಾ ಹೋದನು.

    ಈ ಸಾಮ್ಯದ ಪಾಠವು ಸ್ಪಷ್ಟವಾಗಿದೆ. ದೇವರ ವಾಕ್ಯದಲ್ಲಿ ಬದಲಾಗದ ಸತ್ಯಾಂಶಗಳಿವೆ. ನಮ್ಮ ನಂಬಿಕೆಯು ದೇವರ ವಾಕ್ಯವನ್ನು ಮಾತ್ರವೇ ಸ್ಥಿರವಾಗಿ ದೃಷ್ಟಿಸುವುದಾದರೆ, ನಾವು ಬಿದ್ದು ಹೋಗುವ ಅಪಾಯವೇ ಇಲ್ಲ; ಭಾವನೆಗಳು ತಾವಾಗಿಯೇ ಹಿಂಬಾಲಿಸುವುವು. ಆದರೆ ನಾವು ನಮ್ಮ ಭಾವನೆಗಳನ್ನು ದೃಷ್ಟಿಸಲು ಪ್ರಾರಂಭಿಸುವುದಾದರೆ, ಆಗ ನಾವು ಸುಲಭವಾಗಿ ಎಡವಿ ನಿರಾಶೆ ಹಾಗೂ ಖಂಡನೆಯ(ನಿಂದನೆ) ಪ್ರಪಾತದಲ್ಲಿ ಬಿದ್ದು ಹೋಗುವೆವು.

    ನಂಬಿಕೆಯ ಅರಿಕೆ

    ನಾವು ನಂಬುವುದನ್ನು ಅರಿಕೆ ಮಾಡಬೇಕೆಂದು ಸತ್ಯವೇದವು ಹೇಳುತ್ತದೆ. ಅದೇನೆಂದರೆ “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ. ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆ ಮಾಡುವುದರ ಮೂಲಕ ರಕ್ಷಣೆಯಾಗುತ್ತದೆ(ರೋಮಾ. 10:9,10).

    ನಮ್ಮ ಬಾಯಿಯ ಅರಿಕೆಯು ಪ್ರಾಮುಖ್ಯವಾದದ್ದು. ದೇವರ ವಾಕ್ಯವನ್ನು ಅರಿಕೆ ಮಾಡುವುದು ಅಂದರೆ, ದೇವರು ಹೇಳುವುದನ್ನೇ ಹೇಳುವುದಾಗಿದೆ. ಅದು ಕಷ್ಟಕರವಾದದ್ದಲ್ಲ; ಯಾಕೆಂದರೆ, ಅದರ ಅರ್ಥ ದೇವರ ವಾಗ್ದಾನಗಳಿಗೆ “ಆಮೆನ್(ಹಾಗೆಯೇ ಆಗುವುದು) ಎಂದು ಹೇಳುವಂಥದ್ದಾಗಿದೆ.

    ಮೊದಲ ಬಾರಿಗೆ ‘ನಂಬು”ಎಂಬ ಪದವನ್ನು ಸತ್ಯವೇದದಲ್ಲಿ ಉಪಯೋಗಿಸಿರುವುದು ಆದಿಕಾಂಡ 15 ರಲ್ಲಿ. ಅಲ್ಲಿ ನಾವು ನೋಡುತ್ತೇವೆ, ದೇವರು ಮಕ್ಕಳಿಲ್ಲದ ಅಬ್ರಾಮನಿಗೆ ಹೇಳಿದ್ದೇನೆಂದರೆ, “ಆಕಾಶದಲ್ಲಿರುವ ನಕ್ಷತ್ರಗಳಷ್ಟು ಮಕ್ಕಳನ್ನು ನೀನು ಹೊಂದುವೆ ಎಂದು; ಮತ್ತು ಅಲ್ಲಿ ಹೇಳಲ್ಪಟ್ಟಿದೆ, ‘ಅಬ್ರಾಮನು ಕರ್ತನನ್ನು ನಂಬಿದನೆಂದು(ವ. 6). ಇಲ್ಲಿರುವ ’‘ನಂಬು”ಎಂಬ ಪದವು, ಮೂಲ ಇಬ್ರೀಯ ಬಾಷೆಯ ‘ಅಮನ್”ಪದವಾಗಿರುತ್ತದೆ, ಇದರಿಂದಲೇ ‘ಆಮೇನ್”ಎಂಬ ಪದವನ್ನು ಪಡೆದಿದ್ದೇವೆ. ಅದರರ್ಥವು ’‘ಹಾಗೆಯೇ ಆಗಲಿ” ಎಂದು. ಹೀಗೆ ಅಬ್ರಾಮನು ಮಾಡಿದ್ದಿಷ್ಟೇ - ದೇವರ ವಾಗ್ದಾನಕ್ಕೆ ’‘ಆಮೇನ್” ಎಂದು ಹೇಳಿದನು.

    ದೇವರಿಗೆ ‘ಆಮೆನ್’ ಎಂದು ಹೇಳುವಂಥದ್ದೇ ನಿಜವಾದ ನಂಬಿಕೆಯಾಗಿರುತ್ತದೆ.

    ಅಬ್ರಾಮನು ದೇವರು ತನಗೆ ತರುವಾಯ ಕೊಟ್ಟ ‘ಅಬ್ರಹಾಮ’ ಎಂಬ ಹೊಸ ಹೆಸರಿನಿಂದ ತನ್ನನ್ನು ಕರೆದುಕೊಂಡನೆಂದು ಮುಂದೆ ನಾವು ಓದುತ್ತೇವೆ (‘ಅಬ್ರಹಾಮ’ಅಂದರೆ ‘ಜನಾಂಗಗಳ ತಂದೆ’ಎಂದು ಅರ್ಥ). ಅವನ ಹೆಂಡತಿಯಾದ ಸಾರಳಿಗೆ ಇನ್ನೂ ಮಕ್ಕಳಿರಲಿಲ್ಲ, ಆದರೂ ಅದು ಅಬ್ರಹಾಮನಿಗೆ ಯಾವ ವ್ಯತ್ಯಾಸವನ್ನು ಮಾಡಲಿಲ್ಲ. ಇನ್ನೂ ಆತನು ತನ್ನನ್ನು ‘ಜನಾಂಗಗಳ ತಂದೆ’ಯೆಂದೇ ಕರೆದುಕೊಂಡನು. ಯಾಕೆಂದರೆ, ದೇವರು ಹೇಳಿದ್ದನ್ನು ಆತನು ನಂಬಿದನು. (ಆದಿ.17:5).

    ಅದೇ ನಂಬಿಕೆಯ ಅರಿಕೆ - ‘ದೇವರ ವಾಗ್ದಾನವು ನೆರವೇರುವುದನ್ನು ನಾವು ಕಾಣದಿದ್ದರೂ, ದೇವರು ಹೇಳಿದ್ದನ್ನು ಅರಿಕೆ ಮಾಡುವುದು’.

    ನಾವು ಮಾಡಬೇಕೆಂದು ದೇವರು ನಮ್ಮಿಂದ ಅಪೇಕ್ಷಿಸುವುದೆಲ್ಲಾ ಅಷ್ಟು ಮಾತ್ರವೇ ಆಗಿರುತ್ತದೆ. ಅದು - ಆತನು ತನ್ನ ವಾಕ್ಯದಲ್ಲಿ ಹೇಳಿದ್ದನ್ನೇ ಹೇಳುವಂಥದು! ನಾವು ದೇವರ ವಾಗ್ದಾನಗಳನ್ನು ಅರಿಕೆ ಮಾಡುವಾಗ ನಮಗೆ ದೇವರ ಮೇಲಿರುವ ನಮ್ಮ ನಂಬಿಕೆಯನ್ನು ಸೂಚಿಸುತ್ತೇವೆ; ಆಗ ದೇವರು ನಮ್ಮ ಪರವಾಗಿ ಕೆಲಸ ಮಾಡಲು ಸಾಧ್ಯ.

    “ನಮ್ಮ ಅರಿಕೆಯ ಮಾತಿನಿಂದ” ನಾವು ಸೆ ತಾನನನ್ನು ಜಯಿಸಲು ಸಾಧ್ಯ (ಪ್ರಕ. 12:11). ದೂರುಗಾರನಾದ ಸ್ಯೆತಾನನು ನಮ್ಮ ರಕ್ಷಣೆಯ ನಿಶ್ಚಯವನ್ನೂ ದೇವರ ಮುಂದಿರುವ ನಮ್ಮ ಧೆ ರ್ಯವನ್ನೂ ಯಾವಾಗಲೂ ಕದ್ದುಕೊಳ್ಳಲು ಪ್ರಯತ್ತಿಸುತ್ತಾನೆ. ನಾವು ಸೆ ತಾನನನ್ನು ಜಯಿಸಬೇಕಾದರೆ, ದೇವರ ವಾಗ್ದಾನಗಳನ್ನು ನೇರವಾಗಿ ಅವನಿಗೆ ಉಲ್ಲೇಖಿಸಬೇಕು.

    ಯೇಸು ತಾನೇ ಸೆ ತಾನನಿಗೆ ಪವಿತ್ರವಾಕ್ಯವನ್ನು ಉಲ್ಲೇಖಿಸಿ, “....ಎಂದು ಬರೆದಿದೆ... ಎಂಬುದಾಗಿ ಸಹ ಬರೆದಿದೆ... ಎಂಬುದಾಗಿ ಬರೆದಿದೆ.....(ಮತ್ತಾ. 4:1-11) ಎಂದು ಹೇಳಿ ಅವನನ್ನು ಜಯಿಸಿದನು.

    ನಾವು ದೇವರ ವಾಕ್ಯದಲ್ಲಿ ಸಂದೇಹಪಟ್ಟರೆ, ದೇವರನ್ನು ನಾವು ಸುಳ್ಳುಗಾರನನ್ನಾಗಿ ಮಾಡುತ್ತೇವೆ. ಆದರೆ ದೇವರ ವಾಕ್ಯವನ್ನು ಸ್ಯೆತಾನಗೆ ಅರಿಕೆ ಮಾಡುವಾಗ, ದೇವರೊಂದಿಗೂ ಆತನ ವಾಕ್ಯದೊಂದಿಗೂ ಸೇರಿಕೊಂಡವರಾಗಿ ಸ್ಯೆತಾನನನ್ನು ಅವನ ಸುಳ್ಳುಗಳನ್ನೂ ಎದುರಿಸುವವರಾಗಿದ್ದೇವೆ. ನಮ್ಮ ಸನ್ನಿವೇಶಗಳಿಗೂ ನಮ್ಮ ಭಾವನೆಗಳಿಗೂ ಹೊರತಾಗಿ ನಾವು ದೇವರು ಹೇಳಿದ್ದು ಸತ್ಯ ಎಂದು ನಂಬುವುದಾಗಿ ಸ್ಯೆತಾನನಿಗೆ ಈ ರೀತಿಯಾಗಿ ಸಹ ನಾವು ಹೇಳುತ್ತೇವೆ.

    ಇದೇ ನಂಬಿಕೆಯು ಅರಿಕೆಯಾಗಿರುತ್ತದೆ.

  • ಅಧ್ಯಾಯ 3
    ಆಯ್ಕೆ ಮತ್ತು ನೀತೀಕರಣ

    ‘ದೇವರು ತನ್ನ ಮಕ್ಕಳನ್ನು ಆರಿಸಿಕೊಂಡದ್ದು’ ಹಾಗೂ ‘ಅವರನ್ನು ನೀತಿವಂತರೆಂದು ನಿರ್ಣಯಿಸುವುದು’ ಇವು ಹೊಸ ಒಡಂಬಡಿಕೆಯು ನಮಗೆ ಉಪದೇಶಿಸುವ ಎರಡು ಮಹಿಮೆಯುಳ್ಳ ಸತ್ಯಾಂಶಗಳಾಗಿವೆ.

    ಆಯ್ಕೆ

    ನಾವು ಆತನ ಮಕ್ಕಳಾಗಿರುವಂತೆ ದೇವರು ತನ್ನ ಪೂರ್ವ ಜ್ಞಾನಾನುಸಾರವಾಗಿ ನಮ್ಮನ್ನು ಆರಿಸಿಕೊಂಡಿದ್ದಾನೆ ಎಂದು ಸತ್ಯವೇದವು ಹೇಳುತ್ತದೆ. (1 ಪೇತ್ರ. 1:1,2). ಅಂದರೆ, ಯಾರೆಲ್ಲಾ ಆತನ ಮಕ್ಕಳಾಗುವರು ಎಂದು ದೇವರು ನಿತ್ಯತ್ವದ ಗತಕಾಲದಲ್ಲಿಯೇ ತಿಳಿದಿದ್ದನು ಎಂದು ಇದರ ಅರ್ಥ.

    ದೇವರು, “ನಮ್ಮನ್ನು ಜಗದುತ್ಪತ್ತಿಗೆ ಮುಂಚೆಯೇ ಕ್ರಿಸ್ತನಲ್ಲಿ ಆರಿಸಿಕೊಂಡನು ಎಂದು ಸಹ ಸತ್ಯವೇದವು ಹೇಳುತ್ತದೆ. (ಎಫೆ. 1:4). ಆದಾಮನು ಸೃಷ್ಟಿಸಲ್ಪಡುವುದಕ್ಕೆ ಮೊದಲೇ, ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನೂ ಆತನ ಮಕ್ಕಳೆಂದು ಹೆಸರೆಸರಾಗಿ ತಿಳಿದಿದ್ದನು ಮತ್ತು ನಮ್ಮ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿದ್ದವು (ಪ್ರಕ. 13:8). ಇವು ನಮಗೆ ಅತಿಶಯವಾದ ಭದ್ರತೆಯನ್ನು ಕೊಡಬೇಕಾದ ಸತ್ಯಾಂಶಗಳಾಗಿವೆ.

    ನಾವು ನಿಂತಿರುವ ದೇವರ ಅಸ್ತಿವಾರಕ್ಕೆ ಎರಡು ಸುತ್ತಿನ ಮುದ್ರೆಯಿದೆಯೆಂದು ಸತ್ಯವೇದವು ಹೇಳುತ್ತದೆ. ದೇವರ ಕಡೆಯ ಮುದ್ರೆಯು “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ ನಮ್ಮ ಕಡೆಯಿರುವ ಮುದ್ರೆಯು, “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಮಾರ್ಗತನವನ್ನು ಬಿಟ್ಟು ಬಿಡಬೇಕುಎಂತಲೂ ತಿಳಿಸುತ್ತದೆ (2 ತಿಮೊ. 2:19).

    ದೇವರು ತನ್ನ ಮಕ್ಕಳನ್ನು ಜಗದುತ್ಪತ್ತಿಗೆ ಮುಂಚೆಯೇ ತಿಳಿದಿರುತ್ತಾನೆ. ನಾವು ನಿಜವಾಗಿ ಮಾನಸಾಂತರಪಟ್ಟು ಆತನ ಕಡೆಗೆ ತಿರುಗಿಕೊಂಡಾಗ ಮಾತ್ರ ನಾವು ಆತನ ಮಕ್ಕಳಾಗುತ್ತೇವೆ ಎಂದು ತಿಳಿದಿರುತ್ತೇವೆ. ದೇವರು ತನ್ನ ಮಕ್ಕಳನ್ನು ಆರಿಸಿಕೊಂಡು, ಅದೇ ಸಮಯದಲ್ಲಿ ಮನುಷ್ಯನು ಆತನನ್ನು ಆರಿಸಿಕೊಳ್ಳುವುದಕ್ಕಾಗಿ ಇಲ್ಲವೇ ಆರಿಸಿಕೊಳ್ಳದೆ ಇರುವುದಕ್ಕಾಗಿ ಸ್ವಾತಂತ್ರವನ್ನು ಕೊಡುವುದು ಹೇಗೆಂದು ಮಿತಿಯುಳ್ಳ ನಮ್ಮ ಮನಸ್ಸು ಗ್ರಹಿಸಲಾರದು. ನಮ್ಮ ತಿಳುವಳಿಕೆಯಲ್ಲಿ ಇವು ಸಂಧಿಸದಂಥ ಎರಡು ಸಮಾನಾಂತರ ರೇಖೆಗಳಾಗಿರುತ್ತವೆ. ಸಮಾನಾಂತರ ರೇಖೆಗಳು ಅಪರಿಮಿತದಲ್ಲಿ ಸಂಧಿಸುತ್ತವೆ ಎಂದು ಗಣಿತದಲ್ಲಿ ಅರ್ಥ ವಿವರಣೆಯು ಇರುವಂತೆ ಆ ಅಪರಿಮಿತವು ದೇವರ ಮನಸ್ಸಾಗಿರುತ್ತದೆ.

    ಯಾರೋ ಒಬ್ಬರು ಇದನ್ನು ಈ ರೀತಿಯಾಗಿ ವಿವರಿಸಿದ್ದಾರೆ: “ಜೀವನದ ಮಾರ್ಗದಲ್ಲಿ ನೀವು ಸಾಗಿ ನಡೆಯುವಾಗ, ಒಂದು ದಿನ ತೆರೆದ ಬಾಗಿಲನ್ನೂ ಮತ್ತು ಅದರ ಮೇಲೆ ‘ಯಾರೆಲ್ಲ ಮಾನಸಾಂತರಪಟ್ಟು ಕ್ರಿಸ್ತನನ್ನು ನಂಬುತ್ತಾರೋ ಅವರು ಇಲ್ಲಿ ಪ್ರವೇಶಿಸಿ ನಿತ್ಯಜೀವನವನ್ನು ಪಡೆಯಬಹುದು’ ಎಂದು ಬರೆದಿರುವದನ್ನೂ ಕಾಣುವಿರಿ.ನೀವು ಒಳಗೆ ಪ್ರವೇಶಿಸುತ್ತೀರಿ. ಹಿಂತಿರುಗಿ ನೋಡುವಾಗ,‘ಜಗದುತ್ಪತ್ತಿಗೆ ಮುಂಚೆಯೇ ದೇವರಿಂದ ನೀವು ಕ್ರಿಸ್ತನಲ್ಲಿ ಆರಿಸಲ್ಪಟ್ಟವರಾಗಿದ್ದೀರಿ’ಎಂದು ಅದೇ ಬಾಗಿಲಿನ ಹಿಂಭಾಗದಲ್ಲಿ ಬರೆದಿರುವುದನ್ನು ಕಾಣುವಿರಿ.

    ನೀತೀಕರಣ

    ಪಾಪಕ್ಷಮಾಪಣೆಯು ನಮ್ಮ ಗತಕಾಲದ ದೋಷವನ್ನು ತೆಗೆದು ಹಾಕುತ್ತದೆ. ಆದರೆ ಅದು ನಮ್ಮನ್ನು ಸಂಪೂರ್ಣವಾಗಿ ಪವಿತ್ರರನ್ನಾಗಿ ಮಾಡುವುದಿಲ್ಲ. ಆದುದರಿಂದ ನಾವು ಸಂಪೂರ್ಣವಾಗಿ ಪವಿತ್ರರಾಗಿರುವ ದೇವರ ಮುಂದೆ ಇನ್ನೂ ನಿಲ್ಲಲಾರೆವು. ಆದಕಾರಣ ದೇವರು ನಮಗಾಗಿ ಇನ್ನು ಏನೋ ಮಾಡಬೇಕಾಗಿತ್ತು.

    ಆತನು ನಮ್ಮನ್ನು ನೀತೀಕರಿಸಬೇಕಾಗಿತ್ತು!

    ನೀತೀಕರಣ ಅಂದರೆ, ದೇವರು ಕ್ರಿಸ್ತನ ಸಂಪೂರ್ಣವಾದ ನೀತಿಯನ್ನು ನಮ್ಮ ಲೆಕ್ಕಕ್ಕೆ ಹಾಕುವಂಥದಾಗಿದೆ. ಅದರ ಪರಿಣಾಮವಾಗಿ, ಕ್ರಿಸ್ತನು ದೇವರ ಮುಂದೆ ಎಷ್ಟು ಸಂಪೂರ್ಣನಾಗಿ(ಪರಿಪೂರ್ಣನಾಗಿ) ನಿಂತಿದ್ದಾನೋ ನಾವೂ ಅಷ್ಟೇ ಸಂಪೂರ್ಣವಾಗಿ ನಿಲ್ಲಲು ಸಾಧ್ಯ! ಇದೊಂದು ದಿಗ್ಭ್ರಮೆಗೊಳಿಸುವ ಸತ್ಯಾಂಶವಲ್ಲವೇ1 ಆದರೂ ಇದು ಸತ್ಯ! ಇದು ಒಬ್ಬ ಭಿಕ್ಷುಕನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಜಮೆ ಮಾಡಿರುವಂಥ ಘಟನೆಯಂತಿದೆ - ಅವನಾದರೋ ಆ ಹಣಕ್ಕಾಗಿ ದುಡಿಯಲಿಲ್ಲ ಅಥವಾ ಅದಕ್ಕಾಗಿ ಅವನು ಅರ್ಹನಲ್ಲ. ಆದರೆ ಅವನಿಗೆ ಅದು ಉಚಿತ ಕೊಡುಗೆಯಾಗಿ ಕೊಡಲ್ಪಟ್ಟಿದೆ!

    ನೀತಿವಂತರಾಗಿ ನಿರ್ಣಯಿಸಲ್ಪಡುವುದು ಅಂದರೆ, ನಾವು ನಮ್ಮ ಇಡೀ ಜೀವಿತದಲ್ಲಿ ಪಾಪವೇ ಮಾಡಿಲ್ಲದವರಂತೆಯೂ ಈಗಿನ ನಮ್ಮ ಜೀವಿತದಲ್ಲಿ ಸಂಪೂರ್ಣವಾಗಿ ನೀತಿವಂತರಾಗಿದ್ದವರಂತೆಯೂ ದೇವರಿಂದ ಅಂಗೀಕರಿಸ- ಲ್ಪಟ್ಟಿರುವುದೇ ಆಗಿರುತ್ತದೆ.

    “ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ಈಗ ನೆಲೆಗೊಂಡಿರುವ ದೇವರ ಕೃಪಾಶ್ರಯದಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಆತನ ಸಾನಿಧ್ಯದಲ್ಲಿ ನಿಂತಿರುವೆವು (ರೋಮಾ. 5:2) ಎಂದು ದೇವರವಾಕ್ಯವು ಹೇಳುತ್ತದೆ. ಈಗ ನಾವು ದೇವರ ಸನ್ನಿಧಿಗೆ ಯಾವಾಗಾಲೂ ಯಾವ ಭಯವೂ ಹಿಂಜರಿಕೆಯೂ ಇಲ್ಲದವರಾಗಿ ಬರಲು ಸಾಧ್ಯ. ದೇವರು ತಾನೇ ಅದಕ್ಕಾಗಿ ಬಾಗಿಲನ್ನು ತೆರೆದಿಟ್ಟಿದ್ದಾನೆ.

    ಏದೇನ್ ತೋಟದಲ್ಲಿ, ಆದಾಮ ಹವ್ವಂದಿರು ಪಾಪ ಮಾಡಿದ ಕೂಡಲೆ ಅವರು ದೋಷಿಗಳಾಗಿಯೂ ನಾಚಿಕೆಯುಳ್ಳವರಾಗಿಯೂ ತಮ್ಮನ್ನು ಅಂಜೂರದ ಎಲೆಗಳಿಂದ ಮುಚ್ಚಿಕೊಂಡರು. ದೇವರು ಆ ಅಂಜೂರದ ಎಲೆಗಳನ್ನು ತೆಗೆದು, ಒಂದು ಪ್ರಾಣಿಯನ್ನು ಕೊಂದು ಅದರ ಚರ್ಮವನ್ನು ಅವರಿಗೆ ಹೊದಿಸಿದನು.

    ಆ ಅಂಜೂರದ ಎಲೆಗಳು ನಮ್ಮ ಸ್ವಂತ ಒಳ್ಳೆಯ ಕಾರ್ಯಗಳ (ಸತ್ಕಾರ್ಯಗಳ) ಚಿತ್ರಣವಾಗಿದೆ. ಆ ಅಂಜೂರದ ಎಲೆಗಳಂತೆ ನಮ್ಮ ಸತ್ಕಾರ್ಯಗಳು ದೇವರ ಮುಂದೆ ನಮ್ಮ ಬೆತ್ತಲೆತನವನ್ನು ಮುಚ್ಚಲಾರವು. ಯಾಕೆಂದರೆ, “ನಮ್ಮ ಸತ್ಕಾರ್ಯಗಳು ದೇವರ ದೃಷ್ಟಿಯಲ್ಲಿ ಹೊಲಸು ಬಟ್ಟೆಯಂತೆಇವೆ” ಎಂದು ಸತ್ಯವೇದವು ಹೇಳುತ್ತದೆ (ಯೆಶಾ. 64:6). ಆ ಕೊಲ್ಲಲ್ಪಟ್ಟ ಪ್ರಾಣಿಯು, ಕ್ರಿಸ್ತನು ನಮ್ಮ ಪಾಪಗಳಿಗಾಗಿ ಮರಣ ಹೊಂದಿದ್ದನ್ನು ಸೂಚಿಸುವ ಚಿತ್ರಣವಾಗಿದೆ. ಆ ಚರ್ಮವು, ನಾವು ಹೊದ್ದುಕೊಳ್ಳುವಂತೆ ನಮಗೆ ಕೊಡಲ್ಪಟ್ಟ ಕ್ರಿಸ್ತನ ಸಂಪೂರ್ಣ ನೀತಿಯನ್ನು ಸೂಚಿಸುವ ಚಿತ್ರಣವಾಗಿದೆ (ಆದಿ. 3:7,20).

    ನೀತೀಕರಣವು ದೇವರ ಉಚಿತವಾದ ವರವಾಗಿದೆ. ತನ್ನ ಸ್ವಂತ ಕಾರ್ಯಗಳ ಆಧಾರದಿಂದ ಯಾರೂ ದೇವರ ಮುಂದೆ ನೀತಿವಂತರೆಂದು ನಿರ್ಣಯಿಸಲ್ಪಡುವುದಿಲ್ಲ. “ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಡುವುದಕ್ಕೋಸ್ಕರ ನಾವೇ ಉತ್ತಮರಾಗುವುದಕ್ಕೆ ಪ್ರಯತ್ನಿಸೋಣ” ಎಂಬುದು ಅತಿರೇಖವಾದ ತಪ್ಪಾಗಿರುತ್ತದೆ (ತಪ್ಪಾದ ತಿಳುವಳಿಕೆ).

    ಆದರೂ ಅದಕ್ಕೆ ಎದುರಾಗಿರುವ ಮತ್ತೊಂದು ಅತಿರೇಖವಾದ ತಪ್ಪು ಇನ್ನೊಂದಿದೆ. ಅದು, “ನಾವು ಆರಿಸಲ್ಪಟ್ಟವರೂ ನೀತಿವಂತರೆಂದು ನಿರ್ಣಯಿಸಲ್ಪಟ್ಟವರೂ ಆದಮೇಲೆ, ಈಗ ನಾವು ಪಾಪಮಾಡಿದರೂ ಪರವಾಗಿಲ್ಲ”ಎಂದು ಭಾವಿಸುವುದು. ತಾವು ದೇವರಿಂದ ಆರಿಸಲ್ಪಟ್ಟವರೂ ನೀತಿಕರಿಸಲ್ಪಟ್ಟವರೂ ಆಗಿರುವುದರಿಂದ ಪಾಪವನ್ನು ಹಗುರವಾಗಿ ತೆಗೆದುಕೊಂಡಿರುವವರು ದೇವರು ಆರಿಸಲ್ಪಟ್ಟವರೊಂದಿಗೆ ಸೇರಿದವರಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರಷ್ಟೆ! (ರೋಮಾ. 4:5 ನ್ನು ಯಾಕೋಬ. 2:24 ರೊಂದಿಗೆ ಹೋಲಿಸಿ ನೋಡಿರಿ).

    ನಾವು ಆರಿಸಲ್ಪಟ್ಟದ್ದನ್ನೂ ನೀತಿವಂತರೆಂದು ನಿರ್ಣಯಿಸಲ್ಪಟ್ಟಿದ್ದನ್ನೂ ನಿಶ್ಚಯಪಡಿಸಿಕೊಂಡ ತರುವಾಯ ಸ್ಯೆತಾನನು ನಮ್ಮ ಮೇಲೆ ಹೊರಿಸುವ ದೂರುಗಳ ಪರಿಣಾಮವು ಕುಂದಿಹೋಗುವುದು. ಯಾಕೆಂದರೆ, ‘ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು1’ (ರೋಮಾ. 8:31). ನಾವು ದೇವರಿಂದ ತಿರಸ್ಕರಿಸಲ್ಪಟ್ಟವರೂ ಖಂಡಿಸಲ್ಪಟ್ಟವರೂ ಆಗಿದ್ದೇವೆಂದು ನಮ್ಮ ಜೀವಿತದಲ್ಲಿ ಇನ್ನೆಂದಿಗೂ ಭಾವಿಸುವ ಅವಶ್ಯಕತೆಯೇ ಇಲ್ಲ.

    “ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು1 ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ“ (ರೋಮಾ. 8:33). ಹಲ್ಲೆಲೂಯಾ!

    ಸುವಾರ್ತೆಯ ಒಳ್ಳೇ ಸಮಾಚಾರವು ಎಷ್ಟು ಅಮೂಲ್ಯವಾಗಿದೆಯಲ್ಲಾ1 ವಿಶ್ವಾಸಿಗಳು ದೇವರಿಂದ ಆರಿಸಲ್ಪಟ್ಟವರೂ ನೀತಿಕರಿಸಲ್ಪಟ್ಟವರೂ ಆಗಿದ್ದಾರೆಂಬುದನ್ನು ತಿಳಿಯುವಂತೆ ಸೆ ತಾನನು ಅನೇಕರನ್ನು ತಡೆದಿರುವುದು ಆಶ್ಚರ್ಯವಲ್ಲವೇ1!

    ಅಧ್ಯಾಯ 4
    ಶಿಷ್ಯತ್ವ

    ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರೆಂದು ಅಪೊಸ್ತಲರಿಗೆ ಯೇಸು ಹೇಳಿದಾಗ ಅವರಿಗೆ ಆತನು ಹೇಳಿದ ವಿಷಯವಾಗಿ ತಮ್ಮ ಮನಸ್ಸಿನಲ್ಲಿ ಯಾವ ಸಂದೇಹವೂ ಇರಲಿಲ್ಲ (ಮತ್ತಾಯ. 28:19). ಯಾಕೆಂದರೆ ‘ತನ್ನ ಶಿಷ್ಯರಾಗಿರುವುದು ಅಂದರೇನು’ ಎಂದು ಆತನು ಅವರಿಗೆ ಮೊದಲೇ ವಿವರಿಸಿದ್ದನು.

    ಲೂಕ 14:25-35 ರಲ್ಲಿ ಬಹು ಸ್ಪಷ್ಟವಾಗಿ ಶಿಷ್ಯತ್ವದ ಮೂರು ಷರತ್ತುಗಳನ್ನು ಪವಿತ್ರಗ್ರಂಥವು ಪ್ರಕಟಿಸುತ್ತದೆ. ‘ಒಬ್ಬ ಮನುಷ್ಯನು ಗೋಪುರವೊಂದನ್ನು ಕಟ್ಟಲು ಅಸ್ತಿವಾರ ಹಾಕಿಯೂ, ಅದನ್ನು ಕಟ್ಟಿ ಮುಗಿಸಲಾರದೆ ಹೋದನು; ಯಾಕೆಂದರೆ ಅವನಿಗೆ ಕಟ್ಟಡದ ಹಣವನ್ನು ಭರಿಸಲಾಗಲಿಲ್ಲ’ ಎಂಬುದರ ಕುರಿತಾಗಿ ಇಲ್ಲಿ ಯೇಸು ಮಾತನಾಡುತ್ತಾನೆ (ವಚನಗಳು 28-30). ಇದರಿಂದ ಶಿಷ್ಯತ್ವವು ವೆಚ್ಚವುಳ್ಳದೆಂದು ಖಚಿತವಾಗುತ್ತದೆ. ಕಟ್ಟಡವನ್ನು ಕಟ್ಟಲು ಪ್ರಾರಂಭಿಸುವುದಕ್ಕೆ ಮುಂಚೆಯೇ ಕೂತುಕೊಂಡು ಅದರ ವೆಚ್ಚವನ್ನು ಮೊದಲು ಎಣಿಸಬೇಕೆಂದು ಯೇಸು ಸ್ವಾಮಿಯು ನಮಗೆ ಹೇಳುತ್ತಾರೆ.

    ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ಅನೇಕ ವರ್ಷಗಳಾದ ಮೇಲೆ ಶಿಷ್ಯತ್ವವು ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಕಾದಿರಬೇಕೆಂದು ದೇವರು ಅಪೇಕ್ಷಿಸುವುದಿಲ್ಲ. ಜನರು ಯೇಸುವಿನ ಬಳಿ ಬಂದ ಕೂಡಲೇ ಆತನು ಶಿಷ್ಯತ್ವದ ವೆಚ್ಚದ ಕುರಿತಾಗಿ ಅವರಿಗೆ ಹೇಳಿದ್ದಾನೆ.

    ‘ಶಿಷ್ಯನಾಗುವುದಕ್ಕೆ ಮನಸ್ಸಿಲ್ಲದ ವಿಶ್ವಾಸಿಯು ರುಚಿಯನ್ನು ಕಳೆದುಕೊಂಡ ಉಪ್ಪಿನಂತೆ ದೇವರಿಗೆ ಉಪಯೋಗವಿಲ್ಲದವನು’ ಎಂದು ಯೇಸು ಹೇಳಿದನು (ಲೂಕ. 14:35).

    ನಮ್ಮ ಸಂಬಂಧಿಕರನ್ನು ‘ಹಗೆ ಮಾಡುವುದು’

    ಶಿಷ್ಯತ್ವದ ಮೊದಲನೆಯ ಷರತ್ತೇನೆಂದರೆ ‘ನಮಗೆ ನಮ್ಮ ಸಂಬಂಧಿಕರ ಮೇಲಿರುವ ಸ್ವಾಭಾವಿಕವಾದ, ಅತಿಯಾದ ಪ್ರೀತಿಯಿಂದ ನಮ್ಮನ್ನು ಕಡಿದುಕೊಳ್ಳುವುದು’.

    ಯೇಸು ಹೇಳಿದ್ದು, “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ ತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನೂ ಸಹ ಹಗೆ ಮಾಡದಿದ್ದರೆ, ಅವನು ನನ್ನ ಶಿಷ್ಯನಾಗಿರಲಾರನು (ಲೂಕ. 14:26).

    ಇವು ಬಲವಾದ ಮಾತುಗಳಲ್ಲವೇ1 ‘ಹಗೆ’ ಮಾಡುವುದುಅಂದರೇನು1 ಕೊಲೆ ಮಾಡುವುದಲ್ಲವೇ1 (1 ಯೋಹಾ. 3:15). ಹೌದು, ನಮ್ಮ ಸಂಬಂಧಿಕರಿಗಾಗಿ ನಮಗಿರುವ ಸ್ವಾಭಾವಿಕವಾದ ಮಮತೆಯನ್ನು ಮರಣಕ್ಕೆ ಒಪ್ಪಿಸಬೇಕೆಂದು ಇದರ ಅರ್ಥ.

    ಅಂದರೆ, ನಾವು ಅವರನ್ನು ಪ್ರೀತಿಸಬಾರದು ಎಂದು ಇದರ ಅರ್ಥವೇ1 ಇಲ್ಲ. ಖಂಡಿತವಾಗಿ ಇದರ ಅರ್ಥ ಹಾಗಿಲ್ಲ. ಅವರಿಗಾಗಿ ನಮಗಿರುವ ನಮ್ಮ ಮಾನವೀಯವಾದ ಮಮತೆಯನ್ನು ನಾವು ಬಿಟ್ಟು ಕೊಡುವಾಗ, ದೇವರು ಅದರ ಬದಲಾಗಿ ನಮ್ಮಲ್ಲಿ ಅವರಿಗಾಗಿ ದೆ ವಿಕವಾದ ಪ್ರೀತಿಯನ್ನು ತುಂಬುವನು. ಆಗ ಸಂಬಂಧಿಕರಿಗಿರುವ ನಮ್ಮ ಪ್ರೀತಿಯು ಶುದ್ಧವಾಗಿರುವುದು. ಅಂದರೆ ನಾವು ಯಾವಾಗಲೂ ದೇವರನ್ನೇ ಪ್ರಥಮವಾಗಿ ಪ್ರೀತಿಸುವವರಾಗುವೆವು; ನಮ್ಮ ಸಂಬಂಧಿಕರನ್ನಲ್ಲ.

    ಅನೇಕರು ತಮ್ಮ ತಂದೆ, ತಾಯಿ, ಹೆಂಡತಿ ಮುಂತಾದವರನ್ನು ನೋಯಿಸಲು ಹೆದರುವುದರಿಂದ ದೇವರಿಗೆ ವಿಧೇಯರಾಗುವುದಿಲ್ಲ. ಕರ್ತನು ನಮ್ಮ ಜೀವಿತದಲ್ಲಿ ಪ್ರಥಮ ಸ್ಥಾನದಲ್ಲಿರಲು ಹಕ್ಕುಳ್ಳವನಾಗಿದ್ದಾನೆ. ನಾವು ಆತನಿಗೆ ಆ ಸ್ಥಾನವನ್ನು ಕೊಡದಿದ್ದರೆ, ನಾವು ಆತನ ಶಿಷ್ಯರಾಗಿರಲು ಸಾಧ್ಯವೇ ಇಲ್ಲ.

    ಯೇಸುವಿನ ಉದಾಹರಣೆಯನ್ನೇ ನೋಡಿರಿ. ಆತನು ವಿಧವೆಯಾಗಿದ್ದ ತನ್ನ ತಾಯಿಯನ್ನು ತನ್ನ ಜೀವನದ ಕೊನೆಯವರೆಗೆ ಪ್ರೀತಿಸಿದರೂ ಸಹ ಚಿಕ್ಕ ವಿಷಯದಲ್ಲಿಯೂ ಕೂಡ ಆಕೆಯು ತನ್ನ ತಂದೆಯ ಚಿತ್ತವನ್ನು ನೆರವೇರಿಸುವುದರಲ್ಲಿ ತನ್ನ ಮೇಲೆ ಯಾವುದೇ ರೀತಿಯ ಪ್ರಭಾವವನ್ನು ಬೀರಲು ಆತನು ಆಕೆಗೆ ಅನುಮತಿಸಲಿಲ್ಲ. ಕಾನಾ ಊರಿನ ಮದುವೆಯಲ್ಲಿ ಯೇಸು ತನ್ನ ತಾಯಿಯಿಂದ ಪ್ರಭಾವಿತನಾಗಲು ನಿರಾಕರಿಸಿದುದು ಇದಕ್ಕೆ ನಿದರ್ಶನವಾಗಿದೆ. (ಯೋಹಾ. 2:4).

    ನಾವು ನಮ್ಮ ಸಹೋದರರನ್ನು ಹೇಗೆ ‘ಹಗೆ’ ಮಾಡಬೇಕೆಂಬುದನ್ನು’ ಸಹ ಯೇಸು ನಮಗೆ ಉಪದೇಶಿಸಿದ್ದಾನೆ. ಪೇತ್ರನು ಆತನನ್ನು ಶಿಲುಬೆಯ ಹಾದಿಯಿಂದ ಬೇರೆಡೆ ನಡೆಯುವುದಕ್ಕೆ ಪ್ರಯತ್ನಿಸಿದಾಗ, ಆತನು ತಿರುಗಿಕೊಂಡು, ಬಹು ತೀಕ್ಷ್ಣವಾದ ಮಾತುಗಳಿಂದ ಅವನನ್ನು ಗದರಿಸಿದನು. ಆತನು ಹೇಳಿದ್ದೇನೆಂದರೆ: “111ತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದಿ (ಮತ್ತಾ. 16:23). ಪೇತ್ರನು ಈ ಸಲಹೆಯನ್ನು ತನ್ನ ಮಾನವೀಯ ಪ್ರೀತಿಯಿಂದ ಹೇಳಿದ್ದನು. ಆದರೆ ಅವನ ಸಲಹೆಯು ತನ್ನ ತಂದೆಯ ಚಿತ್ತಕ್ಕೆ ವಿರುದ್ದವಾಗಿದ್ದುದರಿಂದ ಯೇಸು ಅವನನ್ನು ಗದರಿಸಿದನು.

    ಯೇಸುವಿನ ಪ್ರೀತಿಯಲ್ಲಿ ತಂದೆಯು ಯಾವಾಗಲೂ ಪರಮ ಶ್ರೇಷ್ಠನಾಗಿದ್ದನು. ನಾವು ಸಹ ಅದೇ ಮನೋಭಾವವುಳ್ಳವರಾಗಿರುವುದನ್ನು ಆತನು ಅಪೇಕ್ಷಿಸುತ್ತಾನೆ. ಆತನ ಪುನರುತ್ಥಾನದ ತರುವಾಯ, ಭೂಮಿಯಲ್ಲಿರುವ ಎಲ್ಲವುಗಳಿಗಿಂತಲೂ ಹೆಚ್ಚಾಗಿ ತನ್ನನ್ನು ಪ್ರೀತಿಸುವನೋ ಎಂದು ಯೇಸುವು ಪೇತ್ರನನ್ನು ಕೇಳಿದನು (ಯೋಹಾ. 21:15-17). ಕರ್ತನನ್ನು ಪರಮ ಶ್ರೇಷ್ಠವಾಗಿ ಪ್ರೀತಿಸುವವರಿಗೆ ಮಾತ್ರ ಸಭೆಯಲ್ಲಿ ಜವಾಬ್ದಾರಿ ಕೊಡಲ್ಪಡುವುದು.

    ಎಫೆಸ ಸಭೆಯ ನಾಯಕನು ಕರ್ತನಿಗಾಗಿ ತನಗಿದ್ದ ಮೊದಲಿನ ಪ್ರೀತಿಯನ್ನು ಕಳೆದುಕೊಂಡದ್ದರಿಂದ ತಿರಸ್ಕರಿಸಲ್ಪಡುವ ಅಪಾಯದಲ್ಲಿದ್ದನು. (ಪ್ರಕ. 2:1-5).

    “ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ1 ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ(ಕೀರ್ತ. 73:25) ಎಂದು ನಾವು ಕೀರ್ತನೆಗಾರನೊಂದಿಗೆ ಸೇರಿ ಹೇಳುವುದಾದರೆ, ನಿಜವಾಗಿಯೂ ಶಿಷ್ಯತ್ವದ ಪ್ರಥಮ ಷರತ್ತನ್ನು ನಾವು ನೆರವೇರಿಸಿದ್ದೇವೆ.

    ಯೇಸು ನಮ್ಮಿಂದ ಹಕ್ಕಾಗಿ ಅಪೇಕ್ಷಿಸುವ ಪ್ರೀತಿಯು ಕೇವಲ ಭಾವೋದ್ವೇಗದ, ಶೃಂಗಾರ ಭಾವದ ಇಲ್ಲವೇ ಮಾನವೀಯವಾದ ಮಮತೆಯಿಂದ ಆತನಿಗೆ ಭಕ್ತಿ ಗೀತೆಗಳನ್ನು ಹಾಡಲು ಪ್ರೇರಿಸುವಂಥದಲ್ಲ, ಇಲ್ಲ. ನಾವು ಆತನನ್ನು ಪ್ರೀತಿಸುವುದಾದರೆ, ಆತನಿಗೆ ವಿಧೇಯರಾಗಿರುವೆವು. (ಯೋಹಾ. 14:21).

    ನಮ್ಮ ಸ್ವಂತ ಪ್ರಾಣವನ್ನು ಹಗೆ ಮಾಡುವುದು

    ‘ನಾವು ನಮ್ಮ ಸ್ವಾರ್ಥ ಜೀವಿತವನ್ನು ಹಗೆ ಮಾಡುವುದು’ ಶಿಷ್ಯತ್ವದ ಎರಡನೆಯ ಷರತ್ತಾಗಿರುತ್ತದೆ. ಯೇಸು ಹೇಳಿದ್ದೇನೆಂದರೆ: “ಯಾವನಾದರೂ ನನ್ನ ಬಳಿಗೆ ಬಂದು... ತನ್ನ ಪ್ರಾಣವನ್ನು ಸಹ ಹಗೆ ಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು (ಲೂಕ. 14:26).

    ಆತನು ಇದನ್ನು ಪುನಃ ವಿಸ್ತರಿಸಿ ಹೇಳಿದ್ದು,“ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು (ಲೂಕ 14:27).

    ಇದು, ಯೇಸುವಿನ ಎಲ್ಲಾ ಉಪದೇಶಗಳಲ್ಲಿಯೇ ಅಲ್ಪವಾಗಿ ಅರ್ಥ ಮಾಡಿಕೊಳ್ಳಲ್ಪಟ್ಟದ್ದಾಗಿದೆ.

    ‘ಶಿಷ್ಯನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಳ್ಳುವವನಾಗಿದ್ದಾನೆ’ ಎಂದು ಆತನು ಹೇಳಿದನು (ಲೂಕ. 9:23). ಸತ್ಯವೇದವನ್ನು ಓದುವುದಕ್ಕಿಂತಲೂ ಇಲ್ಲವೆ ದಿನಾಲೂ ಪ್ರಾರ್ಥಿಸುವುದಕ್ಕಿಂತಲೂ, ಬಹು ಪ್ರಾಮುಖ್ಯವಾದದ್ದು ಯಾವುದೆಂದರೆ, ‘ನಾವು ನಮ್ಮನ್ನು ನಿರಾಕರಿಸಿ ನಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಳ್ಳುವುದು’. ನಾವು ನಮ್ಮ ಸ್ವಾರ್ಥವನ್ನು ನಿರಾಕರಿಸುವುದೆಂದರೆ ನಾವು ಆದಾಮನಿಂದ ಬಾಧ್ಯವಾಗಿ ಪಡಕೊಂಡ ಜೀವಿತವನ್ನು - ಅಂದರೆ ನಮ್ಮ ಸ್ವಂತ ಜೀವಿತವನ್ನು ಹಗೆ ಮಾಡುವುದಾಗಿದೆ. ಶಿಲುಬೆಯನ್ನು ಹೊತ್ತುಕೊಳ್ಳುವುದೆಂದರೆ, ಆ ಸ್ವಾರ್ಥ ಜೀವಿತವನ್ನು ಮರಣಕ್ಕೆ ಒಪ್ಪಿಸಬೇಕೆಂದು ಅರ್ಥ. ನಾವು ಅದನ್ನು ಸಾಯಿಸುವುದಕ್ಕೆ ಮೊದಲು ಆ ಜೀವಿತವನ್ನು ದ್ವೇಷಿಸಬೇಕು.

    ಕ್ರಿಸ್ತನ ಜೀವಿತಕ್ಕೆ ಮುಖ್ಯ ವೆ ರಿಯು ನಮ್ಮ ಸ್ವಾರ್ಥ ಜೀವಿತವೇ. ಸತ್ಯವೇದವು ಈ ಜೀವಿತವನ್ನು ‘ಮಾಂಸ’ (ಶರೀರಭಾವ) ಎಂದು ಕರೆಯುತ್ತದೆ. ನಾವು ನಮ್ಮ ಸ್ವಂತ ದಾರಿ, ನಮ್ಮ ಸ್ವಂತ ಭೋಗ, ನಮ್ಮ ಸ್ವಂತ ಲಾಭ ಮುಂತಾದವುಗಳನ್ನು ಹುಡುಕಲೆಂದು ನಮ್ಮನ್ನು ಶೋಧಿಸುವ, ಸಕಲ ವಿಧವಾದ ದುರಾಶೆಗಳ ಉಗ್ರಾಣವೇ ಆ (ಶರೀರ)ಮಾಂಸವಾಗಿರುತ್ತದೆ.

    ನಾವು ಪ್ರಾಮಾಣಿಕವಾಗಿದ್ದರೆ, ನಮ್ಮ ಉತ್ತಮ ಕಾರ್ಯಗಳು ಸಹ, ದುರಾಶೆಗಳಿಂದ ಉದಯಿಸಿದ ಕೆಟ್ಟ ಉದ್ದೇಶಗಳ ಮೂಲಕ ಮಲಿನವಾಗಿವೆ ಎಂದು ಒಪ್ಪಿಕೊಳ್ಳುವೆವು. ನಾವು ಈ ಶರೀರ(ಮಾಂಸ)ಭಾವವನ್ನು ಹಗೆ ಮಾಡದಿದ್ದರೆ, ನಾವು ಕರ್ತನನ್ನು ಎಂದಿಗೂ ಹಿಂಬಾಲಿಸಲಾರೆವು.

    ಈ ಕಾರಣದಿಂದಲೇ ಯೇಸುಸ್ವಾಮಿಯು, ‘ನಾವು ನಮ್ಮ ಜೀವಿತವನ್ನು ಹಗೆ ಮಾಡಬೇಕು ಇಲ್ಲವೇ ಕಳೆದುಕೊಳ್ಳಬೇಕು’ ಎಂಬ ವಿಷಯವಾಗಿ ಬಹಳ ಮಾತಾಡಿದನು.

    ಈ ಹೇಳಿಕೆಯು ಸುವಾರ್ತೆಗಳಲ್ಲಿ ಆರು ಸಾರಿ ಪುನರಾವರ್ತಿಸಲ್ಪಟ್ಟಿದೆ ಎಂಬ ಸತ್ಯಾಂಶವನ್ನು ನೋಡಿರಿ (ಮತ್ತಾ. 10:39, 16:25 ಮಾರ್ಕ. 8:35, ಲೂಕ. 9:24, 14:26, ಯೋಹಾ. 12:25).ಸುವಾರ್ತೆಗಳಲ್ಲಿ ಹೆಚ್ಚಾಗಿ ಪುನರಾವರ್ತಿಸಲ್ಪಟ್ಟ ಹೇಳಿಕೆಗಳಲ್ಲಿ ಇದೂ ಒಂದಾಗಿರುತ್ತದೆ. ಆದರೂ ಇದು ಬಹಳ ಕಡಿಮೆಯಾಗಿ ಸಾರಲ್ಪಡುವಂಥದ್ದೂ ಬಹಳ ಕಡಿಮೆಯಾಗಿ ಅರ್ಥಮಾಡಿಕೊಂಡಂಥದ್ದೂ ಆಗಿದೆ!

    ‘ನಿಮ್ಮ ಸ್ವಂತ ಜೀವಿತವನ್ನು ಹಗೆ ಮಾಡುವುದು’ ಅಂದರೆ- ನಿಮ್ಮ ಸ್ವಂತ ಹಕ್ಕು ಹಾಗು ಸೌಲಭ್ಯಗಳನ್ನು ಹುಡುಕುವುದನ್ನೇ ಬಿಟ್ಟುಬಿಡುವುದು, ನಿಮ್ಮಕೀರ್ತಿ-ಗೌರವಗಳನ್ನು ಹುಡುಕದಿರುವುದು ಹಾಗೂ ನಿಮ್ಮ ಮಹತ್ವಾಕಾಂಕ್ಷೆ, ಅಭಿರುಚಿಗಳನ್ನು ಬಿಟ್ಟುಬಿಡುವುದು, ಮತ್ತು ನಿಮ್ಮ ಸ್ವಂತ ಮಾರ್ಗವನ್ನು ಹುಡುಕುವಂಥದನ್ನು ಬಿಟ್ಟುಬಿಡುವುದೂ ಆಗಿರುತ್ತದೆ. ಈ ಮಾರ್ಗದಲ್ಲಿ ನೀವು ಸಾಗುವುದಕ್ಕೆ ಮನಸ್ಸಿದ್ದರೆ ಮಾತ್ರ ನೀವು ಯೇಸುವಿನ ಶಿಷ್ಯರಾಗಿರಲು ಸಾಧ್ಯ.

    ನಮಗಿರುವುದನ್ನೆಲ್ಲ ಬಿಟ್ಟುಕೊಡುವುದು

    ಶಿಷ್ಯತ್ವದ ಮೂರನೆಯ ಷರತ್ತು - ನಮಗಿರುವುದನ್ನೆಲ್ಲಾ ಬಿಟ್ಟು ಬಿಡುವುದು. ಯೇಸು ಹೇಳಿದ್ದು : “ಹಾಗೆಯೇ, ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು (ಲೂಕ. 14:33).

    ‘ನಮಗಿರುವುದನ್ನೆಲ್ಲಾ’ ಅಂದರೆ ನಮಗೆ ಸ್ವಂತವಾಗಿರುವಂಥವುಗಳನ್ನು. ಅವುಗಳನ್ನೆಲ್ಲಾ ಬಿಟ್ಟುಬಿಡುವುದೆಂದರೆ, ನಾವು ಯಾವುದನ್ನೂ, ಎಂದೂ ನಮ್ಮ ಸ್ವಂತವೆಂದು ಭಾವಿಸಬಾರದು.

    ಇದರ ದೃಷ್ಟಾಂತವನ್ನು ಅಬ್ರಹಾಮನ ಜೀವಿತದಲ್ಲಿ ನೋಡುತ್ತೇವೆ. ಇಸಾಕನು ಅವನ ಸ್ವಂತ ಮಗನಾಗಿದ್ದನು. ಒಂದು ದಿನ ಅಬ್ರಹಾಮನು ಇಸಾಕನನ್ನು ಬಲಿಯನ್ನಾಗಿ ಅರ್ಪಿಸಬೇಕೆಂದು ದೇವರು ಕೇಳಿದನು. ಅಬ್ರಹಾಮನು ವಿಧೇಯನಾಗಿ, ಇಸಾಕನನ್ನು ಯಜ್ಞವೇದಿಯ ಮೇಲಿಟ್ಟು ಅವನನ್ನು ಕೊಲ್ಲುವುದಕ್ಕೆ ಸಿದ್ಧನೆಂದು ಖಚಿತಪಡಿಸಿದ್ದರಿಂದ, ದೇವರು ಅವನನ್ನು ತಡೆದು ಯಜ್ಞವು ಅವಶ್ಯವಿಲ್ಲವೆಂದನು (ಆದಿ. 22).

    ಅದರ ತರುವಾಯ ಅಬ್ರಹಾಮನು ಇಸಾಕನನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದರೂ ಅವನನ್ನು ತನ್ನ ಸ್ವಂತವೆಂದು ಸ್ವಾಧೀನ ಮಾಡಿಕೊಳ್ಳಲಿಲ್ಲ. ಈಗ ಇಸಾಕನು ದೇವರಿಗೆ ಸೇರಿದವನಾಗಿದ್ದನು.

    ಇದೇ- ‘ನಮಗಿರುವುದನ್ನೆಲ್ಲಾ ಬಿಟ್ಟುಬಿಡುವುದು’ ಎಂಬುದರ ಅರ್ಥ. ನಮಗೆ ಇರುವಂಥದೆಲ್ಲವನ್ನೂ ನಾವು ಯಜ್ಞವೇದಿಯ ಮೇಲಿಟ್ಟು ದೇವರಿಗೆ ಒಪ್ಪಿಸಿಬೇಕು.

    ಅವುಗಳಲ್ಲಿ ಕೆಲವನ್ನು ನಾವು ಉಪಯೋಗಿಸಿಕೊಳ್ಳುವಂತೆ ದೇವರು ನಮ್ಮನ್ನು ಅನುಮತಿಸಬಹುದು. ಆದರೆ ಅವು ನಮ್ಮ ಸ್ವಂತವೆಂದು ಇನ್ನೆಂದಿಗೂ ನಾವು ಯೋಚಿಸಬಾರದು. ನಾವು ನಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೂ, ಮನೆಯು ದೇವರದೇ ಎಂದು ನಾವು ಯೇಚಿಸಬೇಕು. ಮತ್ತು ಆತನು ಬಾಡಿಗೆಯಿಲ್ಲದ ಮನೆಯಲ್ಲಿ ಉಚಿತವಾಗಿ ವಾಸಿಸಲು ನಮ್ಮನ್ನು ಅನುಮತಿಸಿದ್ದಾನಲ್ಲವೇ! ಇದೇ ನಿಜ ಶಿಷ್ಯತ್ವ.

    ನಮಗಿರುವಂಥ ಎಲ್ಲವನ್ನೂ ಆ ರೀತಿಯಾಗಿ ನಾವು ನಡೆಸಿಕೊಂಡಿದ್ದೇವೋ1 ನಮಗಿರುವಂಥದೆಲ್ಲವೂ ಅಂದರೆ, ನಮ್ಮ ಬ್ಯಾಂಕ್ ಲೆಕ್ಕ, ಆಸ್ತಿ, ಉದ್ಯೋಗ, ಅರ್ಹತೆಗಳು, ವರಗಳು ಹಾಗೂ ಸಾಮರ್ಥ್ಯಗಳು, ಹೆಂಡತಿ, ಮಕ್ಕಳು, ಮತ್ತು ಭೂಮಿಯಲ್ಲಿ ನಾವು ಬೆಲೆಯುಳ್ಳವು ಎಂದಣಿಸುವ ಪ್ರತಿಯೊಂದೂ ಒಳಪಟ್ಟಿರುತ್ತದೆ. ನಾವು ನಿಜ ಶಿಷ್ಯರಾಗಿರಬಯಸುವುದಾದರೆ, ಇವೆಲ್ಲವನ್ನೂ ಯಜ್ಞವೇದಿಯ ಮೇಲಿಡಬೇಕು.

    ನಾವು ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕೆಂದು ಆತನು ಅಪೇಕ್ಷಿಸುತ್ತಾನೆ. ಮತ್ತಾ. 5:8 ರಲ್ಲಿ ಅದನ್ನೇ ‘ನಿರ್ಮಲಚಿತ್ತರು’ (ಶುದ್ಧ ಹೃದಯವುಳ್ಳವರು)’ಎಂದು ಹೇಳಲ್ಪಟ್ಟಿದೆ. ಶುದ್ಧ ಮನಸ್ಸಾಕ್ಷಿಯಿದ್ದರೆ ಸಾಲದು. ನಾವು ಪಾಪವನ್ನು ಬಿಟ್ಟುಬಿಟ್ಟಿದ್ದೇವೆನ್ನುವುದು ಮಾತ್ರ ಶುದ್ಧ ಮನಸ್ಸಾಕ್ಷಿಯ ಅರ್ಥ. ನಿರ್ಮಲ ಚಿತ್ತವೆಂದರೆ ನಾವು ಎಲ್ಲವನ್ನು ಬಿಟ್ಟುಕೊಡುವುದು ಎಂದರ್ಥ!

    ಆದ್ದರಿಂದ ನಿಜ ಶಿಷ್ಯತ್ವವು ಈ ಕೆಳಗಿನ ವಿಷಯಗಳಲ್ಲಿ ಆಳವಾದ ಮನೋಭಾವನೆಯ ಮಾರ್ಪಾಟವನ್ನು ಒಳಗೊಂಡಿರುತ್ತದೆ.

  • (ಅ) ನಮ್ಮ ಸಂಬಂಧಿಕರು ಹಾಗೂ ಪ್ರಿಯರು
  • (ಆ) ನಮ್ಮ ಸ್ವಾರ್ಥ- ಜೀವಿತ, ಹಾಗೂ
  • (ಇ) ನಮಗಿರುವಂಥ ಎಲ್ಲವುಗಳು.
  • ನಾವು ಈ ವಿಷಯಗಳನ್ನು ನಮ್ಮ ಕ್ರೆ ಸ್ತ ಜೀವಿತದ ಪ್ರಾರಂಭದಲ್ಲಿಯೇ ಸರಿಯಾಗಿ ಅಥೆ ಸಿ ಅವನ್ನು ಸರಿಪಡಿಸದಿದ್ದರೆ, ನಾವು ಒಳ್ಳೆಯ ಅಸ್ತಿವಾರವನ್ನು ಹಾಕುವುದು ಅಸಾಧ್ಯ.

    ಅಧ್ಯಾಯ 5
    ನೀರಿನ ದೀಕ್ಷಾಸ್ನಾನ

    ಯೇಸು ಪರಲೋಕಕ್ಕೆ ಏರಿಹೋಗುವುದಕ್ಕೆ ಮುಂಚೆ ತನ್ನ ಶಿಷ್ಯರಿಗೆ ಆಜ್ಞಾಪಿಸಿದ ಕಡೆಯ ಸಂಗತಿಗಳಲ್ಲಿ ಒಂದು ಇದಾಗಿತ್ತು:

  • (ಅ) ಹೊರಟುಹೋಗಿ ಶಿಷ್ಯರನ್ನು ಮಾಡಿ,
  • (ಆ) ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,
  • (ಇ) ಆತನು ಆಜ್ಞಾಪಿಸಿದನ್ನೆಲ್ಲಾ ಪಾಲಿಸಲು ಅವರಿಗೆ ಉಪದೇಶಿಸಿ.
  • ಇಲ್ಲಿ ಕ್ರಮವು ಪ್ರಾಮುಖ್ಯ. ಶಿಷ್ಯರಾಗಲು ಮನಸ್ಸುಳ್ಳವರಿಗೆ ಮಾತ್ರ ದೀಕ್ಷಾಸ್ನಾನ ಮಾಡಿಸಬೇಕೇ ಹೊರತು ಬೇರೆ ಯಾರಿಗೂ ಅಲ್ಲ.

    ಚಿಕ್ಕ ಮಕ್ಕಳು ಯೇಸುವಿನ ಬಳಿ ಬಂದಾಗ, ಆತನು ಅವರ ತಲೆಯ ಮೇಲೆ ಕೆ ಯಿಟ್ಟು ಅವರನ್ನು ಆಶೀರ್ವದಿಸಿದನು (ಮಾರ್ಕ. 10:13-16 ನೋಡಿರಿ). ಆದರೆ ಮಾನಸಾಂತರಪಟ್ಟ ವಯಸ್ಕರು ಆತನ ಬಳಿ ಬಂದಾಗ, ಆತನು ಅವರನ್ನು ತನ್ನ ಶಿಷ್ಯರ ಮೂಲಕ ದೀಕ್ಷಾಸ್ನಾನ ಮಾಡಿಸಿದನು (ಯೋಹಾ. 4:1,2 ನೋಡಿರಿ).

    ಆದರೆ ಇಂದು ಅನೇಕ ‘ಸಭೆಗಳಲ್ಲಿ’ ನಾವು ಕಾಣುವುದೇನು1 ಶಿಶುಗಳಿಗೆ ದೀಕ್ಷಾಸ್ನಾನ ಕೊಡುತ್ತಾರೆ, ಪ್ರಾಯಸ್ತರ ತಲೆ ಮೇಲೆ ಕೆ ಇಡುತ್ತಾರೆ(ದೃಡಿಕರಣದಲ್ಲಿ)! ಯೇಸು ಹೇಳಿದ್ದಕ್ಕೆ ಇದು ತದ್ವಿರುದ್ದವಾಗಿದೆ.

    ಪಂಚಾಶತ್ತಮ ದಿನದಂದು, ಅನೇಕರು ತಮ್ಮ ಪಾಪಗಳ ಮನವರಿಕೆ ಹೊಂದಿ ಪ್ರೇತ್ರನ ಬಳಿ ಬಂದಾಗ ಅವನು, “ದೇವರ ಕಡೆಗೆ ತಿರುಗಿಕೊಂಡು...ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ ಎಂದು ಹೇಳಿದನು. ಮಾತ್ರವಲ್ಲದೆ, “ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನ ಮಾಡಿಸಿಕೊಂಡರು ಎಂದೂ ದಾಖಲೆಯು ಹೇಳುತ್ತದೆ (ಅ.ಕೃ. 2: 38, 41).

    ದೇವರ ವಾಕ್ಯವನ್ನು ಬುದ್ದಿಪೂರ್ವಕವಾಗಿ ಅಂಗೀಕರಿಸಲು ಸಾಮರ್ಥ್ಯವುಳ್ಳವರು ಹಾಗೂ ಮಾನಸಾಂತರಪಟ್ಟವರು ಮಾತ್ರ ದೀಕ್ಷಾಸ್ನಾನ ಮಾಡಿಸಿಕೊಂಡರು ಎಂಬುದು ಇದರಿಂದ ಸ್ಪಷ್ಟವಾಗಿದೆ. ‘ಅಪೋಸ್ತಲರ ಕೃತ್ಯಗಳಲ್ಲಿ’ ದಾಖಲಾಗಿರುವ ಪ್ರತಿಯೊಂದು ಘಟನೆಯೂ ಇದೇ ರೀತಿಯಾಗಿಯೇ ಇತ್ತು.

    ದೀಕ್ಷಾಸ್ನಾನದ ಅರ್ಥವೇನು

    ರೋಮಾ. 6:1-7 ರಲ್ಲಿ ದೀಕ್ಷಾಸ್ನಾನದ ಅರ್ಥವು ಸ್ಪಷ್ಟವಾಗಿ ವಿವರಿಸಲ್ಪಟ್ಟಿದೆ.‘ನಮ್ಮ ಪೂರ್ವ ಸ್ವಭಾವವು (ಹಳೇ ಮನುಷ್ಯನು) ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟು, ನಾವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮರಣದಲ್ಲಿ ಹೂಳಲ್ಪಟ್ಟೆವು’ ಎಂದು ಅದರಲ್ಲಿ ನಮಗೆ ಹೇಳಲ್ಪಟ್ಟಿದೆ. ನಮ್ಮ ಪರಿವರ್ತನೆ ಹೊಂದದ ದಿನಗಳಲ್ಲಿ ಪಾಪ ಮಾಡಬೇಕೆಂದು ಬಯಸುತ್ತಿದ್ದ, ನಮ್ಮ ಮನಸ್ಸೆ ಆ ಹಳೆಯ ಮನುಷ್ಯನು! ಅದು ಕ್ರಿಸ್ತನೊಂದಿಗೆ ಶಿಲುಬೆಗೆ ಜಡಿಯಲ್ಪಟ್ಟಿದೆ.

    ನಾವು ಈ ಸತ್ಯದ ನಂಬಿಕೆಯಲ್ಲಿ ಜೀವಿಸುವುದಕ್ಕೆ ಮುಂಚೆ ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿಲ್ಲ. ದೇವರು ಹೇಳಿದ್ದನ್ನು ನಾವು ನಂಬಿದರೆ ಸಾಕು. ಕ್ರಿಸ್ತನು ತಾನೇ ಕಲ್ವಾರಿಯಲ್ಲಿ ಶಿಲುಬೆಗೆ ಹಾಕಲ್ಪಟ್ಟನೆಂದು ದೇವರ ವಾಕ್ಯವು ಹೇಳಿದ್ದನ್ನು ನಾವು ಎಷ್ಟು ನಿಶ್ಚಯವಾಗಿ ನಂಬಿದ್ದೇವೋ ಅದೇ ರೀತಿಯಾಗಿ ದೇವರ ವಾಕ್ಯವು ಹೇಳುವಂತೆ ‘ನಮ್ಮ ಹಳೆಯ ಮನುಷ್ಯನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದಾನೆ’ ಎಂಬುದನ್ನೂ ನಾವು ನಂಬಬೇಕು. ಈ ಎರಡೂ ಸತ್ಯಗಳನ್ನು ನಾವು ನಂಬಿಕೆಯಿಂದ ಅಂಗೀಕರಿಸಬೇಕು.

    ಹಳೆಯ ಮನುಷ್ಯನು’ ಮತ್ತು ’ಮಾಂಸವು(ಶಾರೀರಿಕ ಸ್ವಭಾವ)’ ಇವೆರಡೂ ಒಂದೇಯಲ್ಲ. ದೇವರ ಚಿತ್ತವನ್ನು ವಿರೋಧಿಸುವಂತೆ ನಮ್ಮಲ್ಲಿ ಭದ್ರವಾಗಿ ನೆಲೆಗೊಂಡಿರುವ ದುರಾಶೆಗಳೇ ಮಾಂಸವು. ನಾವು ನಮ್ಮ ಸಾಯುವ ದಿನದವರೆಗೆ ಇದನ್ನು ಹೊತ್ತುಕೊಂಡಿರಬೇಕು. ನಾವು, ಈ ಮಾಂಸವನ್ನು, ನಮ್ಮ ಮನೆಗೆ ಪ್ರವೇಶ ಮಾಡಲು ಪ್ರಯತ್ನಿಸುವ ಕಳ್ಳರಗುಂಪಿಗೆ ಹೋಲಿಸಬಹುದು. ಕಳ್ಳರು ಮನೆಯೊಳಗೆ ಪ್ರವೇಶಿಸುವಂತೆ ಆಗಾಗ್ಗೆ ಬಾಗಿಲು ತೆರೆಯುವ ಅಪನಂಬಿಗಸ್ತನಾದ ಆಳೇ ಆ ಹಳೆಯ ಮನುಷ್ಯನು.ಈಗ ಆ ಅಪನಂಬಿಗಸ್ತನಾದ ಆಳು ಕೊಲ್ಲಲ್ಪಟ್ಟಿದ್ದಾನೆ. ಆದರೂ ಕಳ್ಳರು ಇನ್ನೂ ಪುಷ್ಟಿಯಾಗಿಯೂ ಆರೋಗ್ಯವಾಗಿಯೂ ಇದ್ದಾರೆ! ಆದರೆ ಈಗ ನಮಗೆ ಹೊಸ ಆಳು ಬಂದಿದ್ದಾನೆ; ಅವನು ಕಳ್ಳರ ವಿರೋಧವಾಗಿ ಬಾಗಿಲನ್ನು ಮುಚ್ಚುವುದಕ್ಕೆ ಶ್ರಮಿಸುವವನಾಗಿದ್ದಾನೆ.

    ದೀಕ್ಷಾಸ್ನಾನದಲ್ಲಿ ನಾವು ಹಳೆಯ ಮನುಷ್ಯನ (ಅಂದರೆ, ಪಾಪ ಮಾಡುವ ಬಯಕೆ) ಮರಣ ಹಾಗೂ ಹೂಳಲ್ಪಡುವಿಕೆ, ಮತ್ತು ‘ನಾವು ಇನ್ನು ಮುಂದೆ ಹೊಸಬರಾಗಿ ನಡೆದುಕೊಳ್ಳಬೇಕೆಂದು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿದ್ದೇವೆ’ (ರೋಮಾ. 6:4) ಎಂಬುದಕ್ಕೆ ಸಾಕ್ಷಿ ನೀಡುತ್ತೇವೆ.

    ನೋಹನ ಕಾಲದಲ್ಲಿ ಬಂದ ಪ್ರವಾಹವು ಸಹ ದೀಕ್ಷಾಸ್ನಾನಕ್ಕೆ ಸಂಕೇತವಾಗಿದೆ. (1 ಪೇತ್ರ. 3:20, 21). ಇಡೀ ಲೋಕವು ಆ ಪ್ರವಾಹದ ಮೂಲಕ ದೇವರಿಂದ ನಾಶವಾಯಿತು. ನೋಹನು ಆ ನಾವೆಯ ಮೂಲಕ ಹೋಗಿ ಅದರೊಳಗಿಂದ ಹೊರಗೆ ಹೊಸದಾದ ಒಂದು ಲೋಕದೊಳಗೆ ಬಂದನು. ಹಳೆಯ ಲೋಕವೂ, ಅದರೊಳಗಿದ್ದ ಪ್ರತಿಯೊಂದೂ ಪ್ರವಾಹದಲ್ಲಿ ಹೂಳಲ್ಪಟ್ಟಿತು. ಇದನ್ನೇ ನಾವು ದೀಕ್ಷಾಸ್ನಾನದಲ್ಲಿಯೂ ಸಾಕ್ಷೀಕರಿಸುತ್ತೇವೆ. ಅದು, ಲೋಕದಿಂದ (ಅಂದರೆ, ಲೋಕದ ಆಡಂಬರಗಳು ಹಾಗೂ ಲೋಕದ ಸ್ನೇಹಿತರು ಇವೆಲ್ಲವುಗಳಿಂದ) ನಾವು ಈಗ ಬೇರ್ಪಟ್ಟು ನೀರಿನೊಳಗಿಂದ ಹೊಸ ಲೋಕದೊಳಗೆ ಬರುತ್ತಿದ್ದೇವೆ ಎಂದು ಹೇಳುವಂಥದೇ ಆಗಿದೆ.

    ದೀಕ್ಷಾಸ್ನಾನದ ವಿಧಾನ

    ಈಗ ನಾವು ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳವುದು ಹೇಗೆ1 ಎಂಬ ಪ್ರಶ್ನೆಗೆ ಬರುತ್ತೇವೆ.

    ದೀಕ್ಷಾಸ್ನಾನಕ್ಕೆ ಇಂಗ್ಲೀಷಿನಲ್ಲಿ’‘ಬ್ಯಾಪ್ಟಿಸಂ’ ಎಂದು ಬಳಸಿರುವ ಪದವು ಮೂಲ ಇಂಗ್ಲೀಷ್ ಪದವಲ್ಲ. ಹೊಸ ಒಡಂಬಡಿಕೆಯು ಬರೆಯಲ್ಪಟ್ಟ ಮೂಲ ಭಾಷೆಯು ಗ್ರೀಕ್ ಆಗಿರುತ್ತದೆ; ‘ಬ್ಯಾಪ್ಟಿಸಂ’ ಎಂಬ ಇಂಗ್ಲೀಷ್ ಪದ ’‘ಬಾಪ್ಟೋ’ ಎಂಬ ಗ್ರೀಕ್ ಪದದಿಂದ ರೂಪುಗೊಂಡಿದೆ; ಅದರ ಅರ್ಥವು, ‘ದ್ರವಪದಾರ್ಥದಿಂದ ಪೂರ್ಣವಾಗಿ ಹೊದಿಸುವುದು”ಇಲ್ಲವೆ ’ಮುಳುಗಿಸುವುದು’. ಇದನ್ನು ನೀರಿನಲ್ಲಿ ಮುಳುಗಿಸುವುದು ಎಂದೇ ಅಪೋಸ್ತಲರು ಸಹ ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಯಾರ ತಲೆಯ ಮೇಲಾದರೂ ನೀರನ್ನು ಚಿಮುಕಿಸುವುದು ಖಂಡಿತವಾಗಿಯೂ ದೀಕ್ಷಾಸ್ನಾನವಲ್ಲ.

    ಫಿಲಿಪ್ಪನು ಇಥಿಯೋಪಿಯಾದ ಕಂಚುಕಿಗೆ ದೀಕ್ಷಾಸ್ನಾನ ಮಾಡಿಸುವ ಬಗ್ಗೆ,‘ಇಬ್ಬರೂ ನೀರಿನೊಳಗೆ ಇಳಿದರು... ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದರು ’ಎಂದು ಬರೆಯಲ್ಪಟ್ಟಿದೆ (ಅ.ಕೃ. 8:38,39).

    ಯೇಸುವಿನ ದೀಕ್ಷಾಸ್ನಾನದ ಬಗ್ಗೆಯೂ, ‘ಆತನು ಸ್ನಾನ ಮಾಡಿಸಿಕೊಂಡ ಮೇಲೆ ನೀರಿನೊಳಗಿಂದ ಮೇಲಕ್ಕೆ ಬಂದನು’ ಎಂದು ಅದೇ ರೀತಿಯಾಗಿ ಬರೆದಿದೆ (ಮಾರ್ಕ. 1:10).

    ಹೊಸ ಒಡಂಬಡಿಕೆಯಲ್ಲಿ ದೀಕ್ಷಾಸ್ನಾನವು ಯಾವಾಗಲೂ ಮುಳುಗಿಸುವುದರ ಮೂಲಕವೇ ಕೊಡಲ್ಪಟ್ಟಿತು. ದೀಕ್ಷಾಸ್ನಾನವು ‘ಹೂಣಿಡಲ್ಪಡುವಿಕೆ’ ಆಗಿರುವುದರಿಂದ ಅದನ್ನು ಮುಳುಗಿಸುವುದರ ಮೂಲಕ ಮಾತ್ರವೇ ಸೂಚಿಸಲು ಸಾಧ್ಯವೆಂಬುದು ಸ್ಪಷ್ಟವಾಗಿದೆ. ಯಾಕೆಂದರೆ ನಾವು ಸತ್ತವರ ತಲೆಯ ಮೇಲೆ ಮಣ್ಣನ್ನು ಮಾತ್ರ ಚಿಮುಕಿಸದೆ, ಅವರನ್ನು ಸಂಪೂರ್ಣವಾಗಿ ಮಣ್ಣಲ್ಲಿಟ್ಟು ಹೂಳಿಡುತ್ತೇವಲ್ಲಾ!

    ಯಾರು ಇನ್ನೆಂದಿಗೂ ಪಾಪ ಮಾಡಲು ಬಯಸುವುದಿಲ್ಲವೋ - ಅಂದರೆ ಯಾರಲ್ಲಿ ಹಳೆಯ ಮನುಷ್ಯನು ಸತ್ತಿದ್ದಾನೋ ಅವರು ಮಾತ್ರ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಯೋಗ್ಯತೆ ಹೊಂದಿದವರೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸತ್ತವರು ಮಾತ್ರವೇ ಹೂಳಿಡಲ್ಪಡತಕ್ಕವರು! ಎಂದು ಇನ್ನು ಹೇಳಬೇಕೆ1 ಸಾಯದ ಮನುಷ್ಯನನ್ನು ಹೂಣಿಡುವುದು ಅಪರಾಧ!

    ತ್ಯ್ರಯೇಕ ನಾಮದಲ್ಲಿ ದೀಕ್ಷಾಸ್ನಾನ

    ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಬೇಕೆಂದು ಯೇಸು ನಮಗೆ ಆಜ್ಞಾಪಿಸಿದನು (ಮತ್ತಾ. 28:19). ದೇವರು ಒಬ್ಬನೇ ಆಗಿರುವುದರಿಂದ ಹೆಸರು - ಏಕವಚನದಲ್ಲಿದೆ. ದೇವರು ಒಬ್ಬನೇ ಆದರೂ, ಒಬ್ಬರಿಗಿಂತಲೂ ಮತ್ತೊಬ್ಬರು ವ್ಯತ್ಯಾಸವಾಗಿರುವ ಮೂರು ವ್ಯಕ್ತಿಗಳಲ್ಲಿ ದೇವರು ಇದ್ದಾನೆಂದು ಯೇಸು ಪ್ರಕಟಿಸಿದ್ದಾನೆ.

    ನಮ್ಮ ಪಾಪಗಳಿಗಾಗಿ ಸತ್ತದ್ದು - ತಂದೆಯಲ್ಲ, ಪವಿತ್ರಾತ್ಮನೂ ಅಲ್ಲ - ಮಗನೇ ಸತ್ತದ್ದು. ಯೇಸು ಪರಲೋಕಕ್ಕೆ ಏರಿ ಹೋದಾಗ, ಪವಿತ್ರಾತ್ಮನ ಬಲಗಡೆಯಲ್ಲಿ ಅಲ್ಲ, ತಂದೆಯ ಬಲಗಡೆಯಲ್ಲಿ ಕುಳಿತುಕೊಂಡನು. ಅದೇ ರೀತಿಯಾಗಿ ಶಿಷ್ಯರಿಗೆ ಸಹಾಯಕನಾಗಿ ಕಳುಹಿಸಲ್ಪಟ್ಟಾತನು ತಂದೆಯಲ್ಲ, ಪವಿತ್ರಾತ್ಮನೇ. ಇವೆಲ್ಲವೂ ಮೂಲ ಪಾಠಗಳಾಗಿ ಕಾಣಬಹುದು. ಆದರೂ ದೇವತ್ವದಲ್ಲಿರುವ ಮೂರು ವ್ಯಕ್ತಿಗಳ ಕುರಿತಾಗಿಯೂ, ನಮ್ಮ ವಿಮೋಚನೆಯಲ್ಲಿ ಅವರ ಅನುಪಮ ಸೇವೆಗಳ ಕುರಿತಾಗಿಯೂ ನಾವು ಗಲಿಬಿಲಿಯಾಗದಿರುವುದು ಅವಶ್ಯ.

    ‘ಅಪೊಸ್ತಲರು ಜನರನ್ನು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿದರು’ ಎಂದು ಅಪೋಸ್ತಲರ ಕೃತ್ಯಗಳಲ್ಲಿ ಆಗಾಗ್ಗೆ ಓದುತ್ತೇವೆ (ಅ.ಕೃ. 2:38 ಮುಂತಾದವು). ಯೇಸು ಮತ್ತಾ. 28:19 ರಲ್ಲಿ ಆಜ್ಞಾಪಿಸಿದ್ದನ್ನು ಇದರೊಂದಿಗೆ ಹೊಂದಿಸಿಕೊಳ್ಳುವುದು ಹೇಗೆ1

    ಪವಿತ್ರ ಗ್ರಂಥದಲ್ಲಿ ಎರಡು ಹೇಳಿಕೆಗಳು ಒಂದುಕ್ಕೊಂದು ವಿರುದ್ಧವಾಗಿ ತೋರಿಬಂದರೆ ಆ ಎರಡು ಹೇಳಿಕೆಗಳೂ ಸತ್ಯವೇ ಎಂದು ನಾವು ಅವುಗಳನ್ನು ಸೂಕ್ಷ್ಮವಾಗಿ ಅಭ್ಯಾಸಿಸುವುದರಲ್ಲಿ ತಿಳಿದುಕೊಳ್ಳುವೆವು.

    ತಂದೆ, ಮಗ ಹಾಗೂ ಪವಿತ್ರಾತ್ಮರು ಅನ್ಯಧರ್ಮೀಯರ ತ್ರಿಮೂರ್ತಿಗಳಲ್ಲ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಅಪೊಸ್ತಲರು ‘ಮಗನಾಗಿರುವಾತನು ಯೇಸುಕ್ರಿಸ್ತನೇ’ ಎಂದು ಗುರುತಿಸುತ್ತಿದ್ದರು. ಈ ಕಾರಣದಿಂದಲೇ, ತಂದೆಯ, ಮಗನಾಗಿರುವ ಕರ್ತನಾದ ಯೇಸುಕ್ರಿಸ್ತನ ಹಾಗೂ ಪವಿತ್ರಾತ್ಮನ ಹೆಸರಿನಲ್ಲಿ ಅಪೊಸ್ತಲರು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದರು. ಇದೇ ಯೇಸುಕ್ರಿಸ್ತನ ನಾಮದಲ್ಲಿನ ದೀಕ್ಷಾಸ್ನಾನವೆಂದು ಕರೆಯಲ್ಪಟ್ಟಿತು.

    ನಂಬಿಕೆಯ ವಿಧೇಯತೆ

    ಶಿಷ್ಯನ ಜೀವಿತದಲ್ಲಿ ‘ದೀಕ್ಷಾಸ್ನಾನವು’ ವಿಧೇಯತೆಯ ಮೊದಲನೆಯ ಹೆಜ್ಜೆಯಾಗಿದ್ದು, ಅದು ಜೀವಮಾನದಲ್ಲೆಲ್ಲ ವಿಧೇಯತೆಯಲ್ಲೇ ನಡೆಸಬೇಕು ; ಈ ವಿಧೇಯತೆಯು ನಂಬಿಕೆಯಿಂದ ಬಂದ ವಿಧೇಯತೆಯಾಗಿರಬೇಕೇ ಹೊರತು ವೆ ಚಾರಿಕತೆಯಿಂದ (ಕಾರಣಾಂತರಗಳಿಂದ) ಬರುವಂಥ ವಿಧೇಯತೆಯಾಗಿರಬಾರದು.

    ಯೇಸು ತನ್ನ ಸ್ವಂತ ವಿಚಾರದ ಮೇಲೆ ನಂಬಿಕೊಂಡಿದ್ದರೆ, ಆತನು ಸ್ನಾನಿಕನಾದ ಯೇಹಾನನ ಬಳಿ ದೀಕ್ಷಾಸ್ನಾನಕ್ಕಾಗಿ ಹೋಗುತ್ತಿರಲಿಲ್ಲ. ವಿಶೇಷವಾಗಿ ಆತನು ಪಾಪವನ್ನೇ ಮಾಡದ ಕಾರಣ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಇರಲು ಆತನ ವಿಚಾರವು ಅನೇಕ ಕಾರಣಗಳನ್ನು ಕೊಟ್ಟಿರಬಹುದು. ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಯೋಹಾನನಿಗೂ ಅರ್ಥವಾಗಿರಲಿಲ್ಲ. ಆದರೆ ಯೇಸು ವಾಗ್ವಾದಗಳ ವಿಚಾರವನ್ನು ಬದಿಗಿಟ್ಟು ಪವಿತ್ರಾತ್ಮನ ಸ್ವರಕ್ಕೆ ಸುಮ್ಮನೆ ವಿಧೇಯನಾದನು (ಮತ್ತಾ. 3:15)

    “ಸ್ವಬುದ್ದಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಕರ್ತನಲ್ಲಿ ಭರವಸೆಯಿಡು ಎಂದು ದೇವರ ವಾಕ್ಯವು ಹೇಳುತ್ತದೆ (ಜ್ಞಾನೊ. 3:5). ‘ಸ್ವಬುದ್ದಿಯು’ ನಂಬಿಕೆಯ ಪ್ರಥಮ ವ್ಯರಿಯಾಗಿದೆ - ಯಾಕೆಂದರೆ ಮಾನವೀಯ ಸ್ವಬುದ್ದಿಯು ಆತ್ಮಿಕ ಸತ್ಯಗಳನ್ನು ಗ್ರಹಿಸಲಾರದು.

    ನಾವು ದೀಕ್ಷಾಸ್ನಾನ ಮಾಡಿಸಿಕೊಳ್ಳುವಾಗ, ನೀರಿನಲ್ಲಿ ಕೊನೆಯದಾಗಿ ಮುಳುಗುವ ನಮ್ಮ ದೇಹದ ಅಂತ್ಯಭಾಗವು ತಲೆಯ ಮೇಲಿನ ಭಾಗವೇ ಆಗಿರುತ್ತದೆ. - ಅದು ಸಾಂಕೇತಿಕವಾಗಿದೆ! ಹೌದು, ನಮ್ಮಲ್ಲಿ ಮರಣಕ್ಕೆ ಒಪ್ಪಿಸಲು ಬಹು ಕಷ್ಟಕರವಾದ ಭಾಗವು ನಮ್ಮ ಮೇಲೆ ಅಧಿಕಾರ ಮಾಡುವ ಸ್ವಬುದ್ದಿಯು! ತಮ್ಮ ಸ್ವಬುದ್ದಿಯು ಹೇಳಿದ ಪ್ರಕಾರ ಜೀವಿಸುವವರೇ ಆದಾಮನ ಮಕ್ಕಳು. ‘ನಾವು ನಮ್ಮ ಸ್ವಬುದ್ದಿಯನ್ನು ನಂಬಿಕೊಳ್ಳುವಂಥ ಜೀವನದ ಮಾರ್ಗಕ್ಕೆ ಸತ್ತಿದ್ದೇವೆ ಮತ್ತು ಈಗ ನಾವು ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತೇವೆ’ ಎಂದು ದೀಕ್ಷಾಸ್ನಾನದಲ್ಲಿ ಸಾಕ್ಷಿ ನೀಡುತ್ತೇವೆ (ಮತ್ತಾ. 4:4 ರೋಮಾ. 1:17).

    “ದೀಕ್ಷಾಸ್ನಾನವೇ1... ಅದು ಕೇವಲ ಚಿಕ್ಕ ವಿಷಯ!” ಎಂದು ಕೆಲವು ಕ್ರೆ ಸ್ತರು ಅಲ್ಪವಾಗಿ ಭಾವಿಸುತ್ತಾರೆ. ನಾಮಾನನು ತನಗೆ ಕುಷ್ಟರೋಗ ವಾಸಿಯಾಗಲು ಏಳು ಸಾರಿ ಯೋರ್ದನ್ ನದಿಯಲ್ಲಿ ಮುಳುಗಬೇಕೆಂದು ಎಲಿಷನು ಹೇಳಿದ್ದನ್ನು ಪ್ರಾರಂಭದಲ್ಲಿ ಅಲ್ಪವಾಗಿ ಪರಿಗಣಿಸಿದನು. ಆದರೆ ಆ ಚಿಕ್ಕ ಆಜ್ಞೆಗೆ ಅವನು ಪೂರ್ಣ ವಿಧೇಯನಾದಾಗಲೇ ಅವನು ಸ್ವಸ್ಥನಾದನು (2 ಅರಸು. 5:10-14). ಹೌದು, ಚಿಕ್ಕ ವಿಷಯಗಳಲ್ಲಿಯೇ ದೇವರು ನಮ್ಮ ವಿಧೇಯತೆಯನ್ನು ಪರೀಕ್ಷಿಸುತ್ತಾನೆ.

    ದೇವರಿಗೆ ವಿಧೇಯರಾಗುವುದಕ್ಕೆ ತಡಮಾಡಬಾರದು. ನಿಮ್ಮ ಹಳೆಯ ಮನುಷ್ಯನು ನಿಜವಾಗಿಯೂ ಸತ್ತಿದ್ದರೆ, ಅವನನ್ನು ಕೂಡಲೇ ಹೂಳಿಡಬೇಕು, ಸತ್ತ ಮನುಷ್ಯನನ್ನು ಹೂಳಿಡದೆ ಇರುವುದು ಅಪರಾಧವಾಗಿದೆ! ಈಗ ನೀನೇಕೆ ಸಾವಕಾಶ ಮಾಡುತ್ತೀ1 ಎದ್ದು.... ದೀಕ್ಷಾಸ್ನಾನಮಾಡಿಸಿಕೋ... (ಅ.ಕೃ.22:16)..

    ಅಧ್ಯಾಯ 6
    ಪವಿತ್ರಾತ್ಮನ ದೀಕ್ಷಾಸ್ನಾನ

    ವಿಶ್ವಾಸಿಗಳಾದ ನಮಗೆ ಎರಡು ಮೂಲ ಅವಶ್ಯಕತೆಗಳಿವೆ. ಮೊದಲನೆಯದು ನಮ್ಮ ಗತಕಾಲಕ್ಕೆ ಸಂಬಂಧಿಸಿದ ನಮ್ಮ ಪಾಪದ ಕ್ಷಮಾಪಣೆಯಾಗಿದೆ. ಎರಡನೆಯದು ನಮ್ಮ ಭವಿಷ್ಯತ್ಕಾಲಕ್ಕೆ ಸಂಬಂಧಿಸಿದ್ದು - ಅದು ದೇವರನ್ನು ಮೆಚ್ಚಿಸುವ ಜೀವಿತವನ್ನು ಜೀವಿಸಲು ಸಮರ್ಥರಾಗಿರುವುದು. ನಮ್ಮ ಮೊದಲನೆಯ ಅವಶ್ಯಕತೆಯು ಕ್ರಿಸ್ತನ ಮರಣದಿಂದ ಪರಿಹಾರವಾಗಿದೆ. ಎರಡನೆಯ ಅವಶ್ಯಕತೆಯನ್ನು ಪೂರೆ ಸಲು ದೇವರು ನಮಗೆ ಪವಿತ್ರಾತ್ಮನ ಶಕ್ತಿಯನ್ನು ಕೊಡುತ್ತಾರೆ.

    ಜೀವಿತ ಹಾಗೂ ಸೇವೆಗಾಗಿ ಬಲ

    ಮೊದಲನೆಯ ಅವಶ್ಯಕತೆಯನ್ನು ನಮ್ಮಷ್ಟಕ್ಕೆ ನಾವೇ ಎಂದೂ ಪರಿಹಾರ ಮಾಡಿಕೊಳ್ಳಲು ಸಾದ್ಯವಿಲ್ಲದವರಾಗಿದ್ದೆವು, ಆದ್ದರಿಂದ ದೇವರೇ ಅದನ್ನು ಪೂರೆ ಸಬೇಕಾಗಿತ್ತು. ಅದೇ ರೀತಿಯಾಗಿ ಎರಡನೆಯದೂ ಆಗಿರುತ್ತದೆ. ನಾವು ನಮ್ಮ ಸ್ವಂತ ಬಲದಲ್ಲಿ ದೇವರನ್ನು ಮೆಚ್ಚಿಸುವ ಜೀವಿತವನ್ನಾಗಲಿ ಆತನ ಚಿತ್ತವನ್ನು ಪೂರೆ ಸುವುದನ್ನಾಗಲಿ ಮಾಡಲಾರೆವು. ಕೆಲವರು ತಮ್ಮ ಕ್ರೆ ಸ್ತ ಜೀವಿತದ ಪ್ರಾರಂಭದಲ್ಲಿಯೇ ಜ್ಞಾನ ಹೊಂದಿ ಇದನ್ನು ಒಪ್ಪಿಕೊಳ್ಳುವುದರಿಂದ ದೇವರ ಶಕ್ತಿಯನ್ನು ನೇರವಾಗಿ ಹುಡುಕುತ್ತಾರೆ. ಇತರರು ಅನೇಕ ವರ್ಷಗಳು ಪ್ರಯತ್ನಪಡುತ್ತಾ ಆಗಾಗ್ಗೆ ಬಿದ್ದು, ಅನಂತರ ಶಕ್ತಿ ಹೊಂದಲು ದೇವರ ಕಡೆಗೆ ತಿರಿಗಿಕೊಳ್ಳುವ - ಕಠಿಣ ಮಾರ್ಗದ ಮೂಲಕ ಈ ಜೀವಿತವನ್ನು ಕಂಡುಕೊಳ್ಳುತ್ತಾರೆ.

    ದುಃಖಕರವಾದದ್ದೇನೆಂದರೆ, ಕೆಲವರು ಎಷ್ಟೋ ಸಾರಿ ಪುನಃ ಪುನಃ ಬಿದ್ದು, ಈ ಜೀವಿತದಲ್ಲಿ ಜಯಶಾಲಿಗಳಾಗಿ ಜೀವಿಸಲು ಸಾಧ್ಯವೇ ಇಲ್ಲವೆಂದು ಯೋಚಿಸಿ ಕೊನೆಗೆ ಸೋಲಿನ ಜೀವಿತಕ್ಕೆ ತಮ್ಮನ್ನು ಒಪ್ಪಿಸಿಕೊಡುವವರಾಗಿದ್ದಾರೆ.

    ನಾವು ಕರ್ತನ ಸೇವೆ ಮಾಡುವುದಕ್ಕೂ ಆತನಿಗೆ ಸಾಕ್ಷಿ ಕೊಡುವುದಕ್ಕೂ ಇದು ಅನ್ವಯಿಸುತ್ತದೆ. ಬಹಳಷ್ಟು ವಿಶ್ವಾಸಿಗಳು ತಮ್ಮ ಮನ ಪರಿವರ್ತನೆಯಾದ ಕೂಡಲೇ ಕರ್ತನಿಗೆ ಸಾಕ್ಷಿಯಾಗಿರಬೇಕೆಂದು ಅಪೇಕ್ಷಿಸುತ್ತಾರೆ, ಆದರೆ ಸಾಕ್ಷಿಕೊಡಲು ತಮ್ಮ ಬಾಯಿಯನ್ನು ತೆರೆಯಲು ಕಷ್ಟಕರವಾಗಿರುವದನ್ನು ಅವರು ಕಂಡುಕೊಳ್ಳುತ್ತಾರೆ. ಇದು ತಮ್ಮ ವ್ಯಕ್ತಿತ್ವದ ಗುಣವೆಂದು ಭಾವಿಸಿ, ಕ್ರಿಸ್ತನಿಗಾಗಿ ಬಲವಾದ ಸಾಕ್ಷಿಗಳಾಗಿರುವ ನಿರೀಕ್ಷೆಯನ್ನು ಬಿಟ್ಟು ಬಿಡುತ್ತಾರೆ.

    ದೇವರು ಪವಿತ್ರಾತ್ಮನ ಶಕ್ತಿಯನ್ನು ತಮಗೆ ವಾಗ್ದಾನ ಮಾಡಿರುವುದನ್ನು ಇನ್ನು ಕೆಲವರು ಗ್ರಹಿಸಿ, ಆತನನ್ನು ಈ ಶಕ್ತಿಗಾಗಿ ಹುಡುಕಿ ಪಡೆದುಕೊಳ್ಳುತ್ತಾರೆ. ಅಂಥವರು ಧೆ ರ್ಯ ತುಂಬಿದವರಾಗಿ, ಅದ್ಭುತ ವರಗಳನ್ನು ಪಡೆದವರಾಗಿಯೂ ಇದ್ದು ಕ್ರಿಸ್ತನಿಗಾಗಿ ನಾಚಿಕೊಳ್ಳದೆ ಪರಿಣಾಮಕಾರಿಯಾದ ಬೆಂಕಿಯಂಥ ಸಾಕ್ಷಿಗಳಾಗಿರುತ್ತಾರೆ.

    ಆತ್ಮನಿಂದ ಹುಟ್ಟುವುದು ಒಂದು ಅನುಭವ. ಹಾಗೆಯೇ ನಾವು ದೇವರ ಮಕ್ಕಳಾಗುವುದು ಕೂಡ. ಆದರೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ (ಮುಳುಗಿಸಿ) ಮಾಡಿಸಿಕೊಳ್ಳುವುದು ಬೇರೊಂದು ಅನುಭವವಾಗಿರುತ್ತದೆ. ಆಗ ನಾವು ಶಕ್ತಿದಾಯಕರಾಗಿ ದೇವರು ನಮ್ಮನ್ನು ಏನಾಗಿರಬಯಸುತ್ತಾನೋ ಮತ್ತು ಏನು ಮಾಡಬಯಸುತ್ತಾನೋ ಅದೇ ಪ್ರಕಾರ ಇರುವೆವು.

    ನಮ್ಮ ಹೊಸ ಒಡಂಬಡಿಕೆಯ ಜನ್ಮಸಿದ್ದಹಕ್ಕು

    ಹಳೆ ಒಡಂಬಡಿಕೆಯ ಕಾಲದಲ್ಲಿ ಪವಿತ್ರಾತ್ಮನು ದೇವರಿಗಾಗಿ ಒಂದು ನಿರ್ದಿಷ್ಟ ಕಾರ್ಯವನ್ನು ಪೂರೆ ಸಲು ಶಕ್ತರಾಗುವಂತೆ ಕೆಲವರ ಮೇಲೆ ಮಾತ್ರ ಬಂದನು. ಹೊಸ ಒಡಂಬಡಿಕೆಯ ಕಾಲದಲ್ಲಾದರೋ ಎಲ್ಲರೂ ಪವಿತ್ರಾತ್ಮನನ್ನು ಹೊಂದಲು ಸಾಧ್ಯ. ಯೇಸುವಿನ ಮಹಿಮೆಯನ್ನು ನಮಗೆ ತೋರಿಸಿ, ನಮ್ಮನ್ನು ಆತನ ಸಾರೂಪ್ಯಕ್ಕೆ ರೂಪಾಂತರಿಸಲು ಪವಿತ್ರಾತ್ಮನು ಬಂದನು.

    ಯೇಸು ನೆರವೇರಿಸಲು ಬಂದ ಎರಡು ಸೇವೆಗಳ ಕುರಿತಾಗಿ ಸ್ನಾನಿಕನಾದ ಯೋಹಾನನು ಸೂಚಿಸಿದನು. ಒಂದು - ಆತನು ಪಾಪಗಳನ್ನು ನಿವಾರಿಸುವುದು ಮತ್ತೊಂದು ಆತನು ಜನರನ್ನು ಪವಿತ್ರಾತ್ಮನಲ್ಲಿ ಸ್ನಾನ ಮಾಡಿಸುವುದು (ಯೋಹಾ. 1:29,33). ನಾವು ಇವೆರಡನ್ನೂ ಅನುಭವಿಸಬೇಕು.

    ಹೊಸ ಒಡಂಬಡಿಕೆಯಲ್ಲಿರುವ ಪ್ರಥಮ ವಾಗ್ದಾನವು: ‘ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡುಗಡೆಗೊಳಿಸುವನು’ (ಮತ್ತಾ. 1:21)ಎಂದು. ಹೊಸ ಒಡಂಬಡಿಕೆಯಲ್ಲಿರುವ ದ್ವಿತೀಯ ವಾಗ್ದಾನ: ‘ಆತನು ಪವಿತ್ರಾತ್ಮನಲ್ಲಿ... ನಿಮಗೆ ಸ್ನಾನ ಮಾಡಿಸುವನು’(ಮತ್ತಾ. 3:11) ಎಂದು.

    ಹೊಸ ಒಡಂಬಡಿಕೆಯು ಇವೆರಡು ವಾಗ್ದಾನಗಳಿಂದ ಆರಂಭವಾಗಿರುವುದು ನಿಜವಾಗಿಯೂ ಪ್ರಾಮುಖ್ಯವಾದದ್ದು. ಹೊಸ ಒಡಂಬಡಿಕೆಯು, ದೇವರು ಮನುಷ್ಯನೊಂದಿಗೆ ವ್ಯವಹರಿಸುವ ಹೊಸ ಕಾಲಾವಧಿಯ ಪ್ರಾರಂಭವಾಗಿತ್ತು. ಹಾಗಾದರೆ, ‘ನಮ್ಮ ಪಾಪಗಳಿಂದ ರಕ್ಷಿಸಲ್ಪಟ್ಟು ಪವಿತ್ರಾತ್ಮನಿಂದ ಸ್ನಾನ ಮಾಡಿಸಲ್ಪಡುವುದು’ ದೇವರ ಮಕ್ಕಳಾಗಿರುವ ನಮಗೆ ಇಮ್ಮಡಿ ಜನ್ಮಸಿದ್ದ ಹಕ್ಕಾಗಿದೆ. ಖಂಡಿತವಾಗಿ ದೇವರು ನಮಗೆ ಪೂರ್ಣ ಜನ್ಮಸಿದ್ದ ಹಕ್ಕನ್ನು ಕೊಡುತ್ತಾನೆಯೇ ಹೊರತು ಕೇವಲ ಅರ್ಧ ಜನ್ಮಸಿದ್ದ ಹಕ್ಕನ್ನಲ್ಲ.

    ಹೊಸ ಒಡಂಬಡಿಕೆಯ ಐದು ಪುಸ್ತಕಗಳಲ್ಲಿ ಪ್ರತಿಯೊಂದೂ ಪವಿತ್ರಾತ್ಮನ ವಾಗ್ದಾನದಿಂದ ಪ್ರಾರಂಭವಾಗುತ್ತದೆ (ಮತ್ತಾ. 3:11; ಮಾರ್ಕ. 1:8; ಲೂಕ. 3:16; ಯೋಹಾನ 1:33; ಅ.ಕೃ. 1:5). ಆದರೂ ಎಷ್ಟೋ ಕ್ರೆ ಸ್ತರು ಇದನ್ನು ತಮ್ಮ ಹಕ್ಕನ್ನಾಗಿ ಸ್ವೀಕರಿಸಲು ಅಸಡ್ಡೆ ತೋರುವವರಾಗಿದ್ದಾರೆ.

    ಜೀವಕರವಾದ ನೀರಿನ ಬುಗ್ಗೆಗಳು

    ‘ದೇವರ ಸಿಂಹಾಸನದಿಂದ ಭೂಮಿಯ ಮೇಲೆ ಹರಿಯುವ ನದಿಯಂತೆ’ ಎಂಬುದಾಗಿ ಹೊಸ ಒಡಂಬಡಿಕೆಯು ‘ಪವಿತ್ರಾತ್ಮ’ನನ್ನು ಚಿತ್ರಿಸುತ್ತದೆ (ಪ್ರಕ. 22:1; ಅ.ಕೃ. 2:33). ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದೆಂದರೆ ಈ ಜಲಪಾತದಲ್ಲಿ ಮುಳುಗಿಸಲ್ಪಡುವುದಾಗಿದೆ. “ನೀರಡಿಕೆಯಾದವರೆಲ್ಲ ತನ್ನ ಬಳಿ ಬಂದು, ಪವಿತ್ರಾತ್ಮನನ್ನು ಸ್ವೀಕರಿಸುವುದರ ಮೂಲಕ ಅವರ ಅಂತರಾಳದಿಂದ ಈ ಜೀವಕರವಾದ ಹೊಳೆಗಳು ಹರಿಯುವಂತಾಗಲಿ”, ಎಂದು ಯೇಸುವು ಹೇಳಿದನು. (ಯೋಹಾ. 7:37).

    ಬಹಳಷ್ಟು ಕ್ರೆ ಸ್ತ ವಿಶ್ವಾಸಿಗಳ ಅನುಭವವನ್ನು ಒಂದು ಕೆ ಪಂಪಿನಿಂದ ನೀರೆತ್ತುವುದಕ್ಕೆ ಹೋಲಿಸಬಹುದು. ಅಂದರೆ, ಕ್ಯೆ ಪಂಪಿನಿಂದ ಸ್ವಲ್ಪವೇ ನೀರನ್ನು ಬಹಳ ಪ್ರಯಾಸಪಟ್ಟು ಎತ್ತುವಂತೆ ಬಹಳಷ್ಟು ಜನರು ತಮ್ಮ ಹೋರಾಟದ (ಪಾಪದ ವಿರುದ್ಧ) ಜೀವಿತದ ಮೂಲಕ ಒಣಗಿದ ಹೃದಯದಿಂದ ಕೆಲವೇ ಹನಿಗಳ ಆಶೀರ್ವಾದಗಳನ್ನು ಪಡೆಯುವವರಾಗಿದ್ದಾರೆ.. ಆದರೂ ಅದು ಹಾಗಿರಬೇಕಾದ ಅವಶ್ಯಕತೆಯಿಲ್ಲ. ಒಂದುವೇಳೆ ನಮ್ಮ ಒಣ ಜೀವಿತವು ಕರ್ತನ ಕಡೆ ನಡೆಸಿದರೆ, ನಮ್ಮ ಜೀವಿತವು ಬೇರೆಯೇ ರೀತಿಯಾಗಿರುತ್ತಿತ್ತು. ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಆಶೀರ್ವಾದದ ಹೊಳೆಗಳು ನಮ್ಮಿಂದ ಹರಿಯುತ್ತಿರಬೇಕೆಂಬುದೇ ನಮ್ಮ ಜೀವಿತಕ್ಕೆ ಇರುವ ದೇವರ ಚಿತ್ತವಾಗಿದೆ.

    ಇದಕ್ಕಾಗಿ, ನಮ್ಮ ಮೊದಲನೆಯ ಹೆಜ್ಜೆಯು ನಾವು (ಪವಿತ್ರಾತ್ಮನ ಸ್ನಾನಕ್ಕಾಗಿ) ನಮ್ಮ ಅವಶ್ಯಕತೆಯನ್ನು ಒಪ್ಪಿಕೊಳ್ಳುವುದೇ ಆಗಿರುತ್ತದೆ. ಎಷ್ಟೋ ವಿಶ್ವಾಸಿಗಳು (ಪದ) ಶಬ್ದಗಳ ವಿಷಯವಾಗಿ ಬುದ್ದಿಯಿಲ್ಲದ ವಾಗ್ವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಮಗೆ ಅವಶ್ಯವಾದದ್ದು ಸರಿಯಾದ ವ್ಯಾಖ್ಯಾನವಲ್ಲ, ಬದಲಾಗಿ ಶಕ್ತಿಯೇ ಆಗಿರುತ್ತದೆ. ನಮ್ಮ ವ್ಯಾಖ್ಯಾನ ಸರಿಯಾಗಿದ್ದು ನಾವು ಒಂದು ವೇಳೆ ಒಣಗಿಹೋಗಿರುವ ಎಲುಬುಗಳಂತಿದ್ದರೆ ಪ್ರಯೋಜನವೇನು1 ‘ಆಶೀರ್ವಾದದ ಹೊಳೆಗಳು ನಮ್ಮ ಮೂಲಕ ಹರಿಯುತ್ತಾ ಇಲ್ಲ’ ಎಂದು ಅರಿಕೆಮಾಡಿ ದೇವರ ಬಳಿಗೆ ಯಥಾರ್ಥವಾಗಿ ಬರುವುದು ಉತ್ತಮ. ಆ ಮೊದಲನೆಯ ಹೆಜ್ಜೆಯನ್ನಿಟ್ಟ ತರುವಾಯ, ನಾವು ಕೇಳಿಕೊಂಡದ್ದನ್ನು ದೇವರು ಕೊಡುತ್ತಾನೆಂದು ನಾವು ಭರವಸೆಯಿಡಬೇಕು.

    ನಾವು ಪವಿತ್ರಾತ್ಮನಿಂದ ದೀಕ್ಷಾಸ್ನಾನ ಪಡೆಯುವದಕ್ಕೆ ಅವಶ್ಯವಾದದ್ದೇನೆಂದರೆ, ‘ದಾಹ’ (ದೇವರನ್ನು ಮಹಿಮೆಪಡಿಸಬೇಕೆಂಬ ಆಳವಾದ ಮಹಾ ಬಯಕೆಯಿಂದ ಹುಟ್ಟಿ ಬರುವ ತೀಕ್ಷ್ಣವಾದ ಆಶೆ) ಹಾಗೂ ‘ನಂಬಿಕೆ’ (ದೇವರು, ವಾಗ್ದಾನ ಮಾಡಿದ್ದನ್ನು ನಮಗೆ ಕೊಟ್ಟೇ ಕೊಡುತ್ತಾನೆಂಬ ಸಂಪೂರ್ಣ ಭರವಸೆ) ಇವಿಷ್ಟೆ. ಹಾಗಿದ್ದರೆ, ನಾವು ದಾಹದಿಂದಲೂ, ನಂಬಿಕೆಯಿಂದಲೂ ಈ ಬಲಕ್ಕಾಗಿ ಕೇಳಿಕೊಳ್ಳೋಣ; ದೇವರು ನಮ್ಮ ಬಿನ್ನಹವನ್ನು ತಿರಸ್ಕರಿಸಲಾರನು.

    ಶಕ್ತಿಯಿಂದ ತುಂಬಿಸಲ್ಪಡುವಿಕೆ

    ಯೇಸುವನ್ನು ಹಿಂಬಾಲಿಸುವುದಕ್ಕಾಗಿ ಅಪೊಸ್ತಲರು ಪ್ರತಿಯೊಂದನ್ನೂ ತ್ಯಜಿಸಿದರು. ಆದರೂ ಅವರು ಹೊರಟು ಹೋಗಿ ದೇವರು ತಮಗಾಗಿ ನೇಮಿಸಿದ ಸೇವೆಯನ್ನು ನೆರವೇರಿಸುವ ಮೊದಲು ಪವಿತ್ರಾತ್ಮನ ದೀಕ್ಷಾಸ್ನಾನಕ್ಕಾಗಿ ಕಾಯಬೇಕಾಗಿತ್ತು.

    ಯೇಸು ಸಹ ತನ್ನ ಬಹಿರಂಗ ಸೇವೆಯನ್ನು ಪ್ರಾರಂಭಿಸುವುದಕ್ಕೆ ಮುಂಚೆ ಪವಿತ್ರಾತ್ಮನಿಂದಲೂ ಶಕ್ತಿಯಿಂದಲೂ ಅಭಿಷೇಕಿಸಲ್ಪಡುವ ಅವಶ್ಯಕತೆ ಇತ್ತು (ಅ.ಕೃ. 10:38). ಆತನಿಗೇ ಈ ಅಭಿಷೇಕವನ್ನು ಹೊಂದುವ ಅವಶ್ಯಕತೆ ಇದ್ದಿತ್ತಾದರೆ, ನಮಗೆ ಎಷ್ಟೋ ಹೆಚ್ಚಾಗಿ ಇದರ ಅವಶ್ಯಕತೆ ಇರುವುದಲ್ಲವೇ1

    ಯೇಸು ತನ್ನ ಅಪೋಸ್ತಲರು ಶಕ್ತಿಯಿಂದ ತುಂಬಿಸಲ್ಪಡುವ’ ತನಕ ಯೆರೂಸಲೇಮಿನಲ್ಲಿಯೇ ಕಾದಿರಬೇಕೆಂದು ಹೇಳಿದ್ದನು (ಲೂಕ. 24:49). ಆತನು ಪರಲೋಕಕ್ಕೆ ಏರಿ ಹೋಗುವುದಕ್ಕೆ ಮುಂಚೆಯೂ ಪವಿತ್ರಾತ್ಮನು ಅವರ ಮೇಲೆ ಬಂದಾಗ ಅವರು ಶಕ್ತಿಯನ್ನು ಹೊಂದಿಕೊಳ್ಳುವರು’ಎಂದು ಪುನಃ ಹೇಳಿದನು (ಅ.ಕೃ. 1:8). ಪಂಚಾಶತ್ತಮ ದಿನದಂದು ಪವಿತ್ರಾತ್ಮನು ಅವರ ಮೇಲೆ ಸುರಿಸಲ್ಪಟ್ಟನು ಮತ್ತು ಭಯಭೀತರಾಗಿದ್ದ ಆ ಮನುಷ್ಯರು ಕರ್ತನಿಗಾಗಿ ಧೆ ರ್ಯವುಳ್ಳ, ಬೆಂಕಿಯ ಸಾಕ್ಷಿಗಳಾಗಿ ಕೂಡಲೇ ಮಾರ್ಪಟ್ಟರು (ಅ.ಕೃ. 2:1-4). ಅವರು ಏನು ಹೊಂದುವರು ಎಂದು ಯೇಸು ಹೇಳಿದ್ದನೋ, ಅದನ್ನೇ ಅವರು ವಾಸ್ತವವಾಗಿ ಹೊಂದಿದರು _ ಅದು ‘ಬಲ’ವಾಗಿತ್ತು.

    ನಾವು ಕ್ರೆ ಸ್ತ ಜೀವಿತವನ್ನು ಜೀವಿಸಲು ಬಹಳವಾಗಿ ಅವಶ್ಯವಾಗಿರುವುದು ಕೇವಲ ಉಪದೇಶವಲ್ಲ ಮುಖ್ಯವಾಗಿ ದೇವರ ಶಕ್ತಿಯೇ ಆಗಿದೆ. ಪವಿತ್ರಾತ್ಮನಲ್ಲಿನ ಸ್ನಾನವು ನಮಗೆ ಭಕ್ತಿಗಾಗಿ ಶಕ್ತಿಯನ್ನೂ, ಸೇವೆಗಾಗಿ ಬಲವನ್ನೂ ಕೊಡುತ್ತದೆ.

    ಆತ್ಮನ ಕಾರ್ಯದ ವಿವಿಧತೆ

    ಪವಿತ್ರ ಗ್ರಂಥದಲ್ಲಿ ಪವಿತ್ರಾತ್ಮನು ಗಾಳಿಗೆ ಹೋಲಿಸಲ್ಪಟ್ಟಿದ್ದಾನೆ; ಗಾಳಿಯು ವಿವಿಧ ಸಮಯಗಳಲ್ಲಿ ವಿವಿಧ ರೀತಿಯಾಗಿ(ಕಡೆಗೆ) ಬೀಸುತ್ತದೆ. ‘ಆತ್ಮನಿಂದ ಹುಟ್ಟಿದವರೆಲ್ಲರು ಅದರಂತೆಯೇ’ ಎಂದು ಯೇಸು ಹೇಳಿದನು (ಯೋಹಾ. 3:8). ಆದುದರಿಂದ ಪವಿತ್ರಾತ್ಮನಲ್ಲಿ ಸ್ನಾನ ಹೊಂದಿದ ಪ್ರತಿಯೊಬ್ಬ ವಿಶ್ವಾಸಿಯ ಬಾಹ್ಯ ಅನುಭವದ ವಿವರಗಳು ಬೇರೆ ಬೇರೆಯಾಗಿರುವುವು. ಆದರೆ ಆಂತರಿಕವಾಗಿ ಶಕ್ತಿಯ ತುಂಬಲ್ಪಡುವಿಕೆಯೇ(ಆದರೆ ಆಂತರ್ಯದಲ್ಲಿ ಪವಿತ್ರಾತ್ಮನ ಬಲದಿಂದ ತುಂಬಿಸಲ್ಪಡುವುದೇ) ನಿಜವಾಗಿಯೂ ಪ್ರಾಮುಖ್ಯವಾದದ್ದು.

    ನಾವು ಕ್ರಿಸ್ತನ ಶರೀರವಾಗಿರುವ ಸಭೆಯನ್ನು ಕಟ್ಟುವುದರಲ್ಲಿ ಪರಿಣಾಮಕಾರಿಯಾಗಿ ಆತನ ಸೇವೆ ಮಾಡುವಂತೆ ದೇವರು ನಮಗೆ ಶಕ್ತಿಯ ವರಗಳನ್ನು’ಕೊಡುತ್ತಾನೆ. ನಮ್ಮಲ್ಲಿ ಪ್ರತಿಯೊಬ್ಬನು ಯಾವ-ಯಾವ ವರವನ್ನು ಹೊಂದಿದವನಾಗಿರಬೇಕೆಂಬುದನ್ನು ತೀರ್ಮಾನಿಸುವವನು ಆತನೇ.

    ವಿಶ್ವಾಸಿಗಳು ಭಕ್ತಿವೃದ್ದಿ, ಪ್ರೋತ್ಸಾಹ ಹಾಗೂ ಸಂತೆ ಸುವಿಕೆಯನ್ನು ಹೊಂದುವಂತೆ ದೇವರ ವಾಕ್ಯವನ್ನು ಶಕ್ತಿದಾಯಕವಾಗಿ ಮಾತನಾಡುವುದು ಪ್ರವಾದನೆಯ ವರವಾಗಿದ್ದು, ಇದು ಉಪಯುಕ್ತವಾದದ್ದಾಗಿದೆ (1 ಕೊರಿ. 14:1-5). ಸಭಾಸೇವೆ, ಬೋಧಿಸುವಿಕೆ, ಸ್ವಸ್ಥತೆ, ಬುದ್ಧಿ ಹೇಳುವುದು, ದಾನ ಕೊಡುವುದು, ನಾಯಕತ್ವ ನಡೆಸುವುದು ಮುಂತಾದ ವರಗಳು ಸಹ ಇವೆ (ರೋಮಾ. 12:6-8; 1 ಕೊರಿ. 12:8-10). ತಿಳಿಯದ ಭಾಷೆಗಳನ್ನಾಡುವುದೂ(ಅನ್ಯ ಭಾಷೆಯನ್ನಾಡುವ ವರ) ಸಹ ದೇವರು ಕೊಟ್ಟಿರುವ ಮತ್ತೊಂದು ವರವಾಗಿದ್ದು, ಅದರಿಂದ ನಾವು ನಮ್ಮ ಮನಸ್ಸು ಮತ್ತು ನಮ್ಮ ಭಾಷೆಯ ಮಿತಿಯಿಲ್ಲದೆ ಪ್ರಾರ್ಥಿಸಲು ಮತ್ತು ಆತನಿಗೆ ಸ್ತೋತ್ರಮಾಡಲು ಅದು ನಮ್ಮನ್ನು ಶಕ್ತರನ್ನಾಗಿಸುವುದು.

    ನೀವು ‘ಪವಿತ್ರಾತ್ಮನಲ್ಲಿ ಸ್ನಾನ’ ಹೊಂದಿಲ್ಲದವರಾಗಿದ್ದರೆ, ದೇವರನ್ನು ಹುಡುಕುವವರಾಗಿರಿ ಮತ್ತು ಆ ನಿಮ್ಮ ಜನ್ಮಸಿದ್ದ ಹಕ್ಕನ್ನು, ಹಕ್ಕುಳ್ಳವರಾಗಿ ಆತನನ್ನು ಕೇಳಿರಿ. ಇದರ ಖಾತರಿ(ನಿಶ್ಚಿತತೆ)ಯನ್ನು ಸಹ ಆತನು ನಿಮಗೆ ಕೊಡಬೇಕೆಂದು ಬೇಡಿಕೊಳ್ಳಿರಿ. “ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮನನ್ನು ಕೊಡುವನಲ್ಲವೇ1... ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ (ಲೂಕ. 11:13; ಯಾಕೋಬ 4:2).

    ಆದಕಾರಣ ಯಾಕೋಬನು ಪೆನೀಯೇಲಿನಲ್ಲಿ ದೇವರಿಗೆ, ‘ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವುದಿಲ್ಲ’ಎಂದು ಹೇಳಿದಂತೆ, ನಾವೂ ಹೃದಯಪೂರ್ವಕವಾಗಿ ದೇವರಿಗೆ ಮೊರೆಯಿಡೋಣ (ಆದಿ. 32:26).

    ದೇವರಲ್ಲಿ ಪಕ್ಷಪಾತವಿಲ್ಲ. ಇತರರಿಗೆ ಆತನು ಏನೇನು ಮಾಡಿದ್ದಾನೋ ಅದನ್ನೇ ಆತನು ನಿಮಗಾಗಿ ಮಾಡಲಿದ್ದಾನೆ. ಇಂದಿಗೂ ಆತನು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ (ಇಬ್ರಿ. 11:6). ಆತನನ್ನು ಮಹಿಮೆಪಡಿಸಲು ಬಯಸುವವರೆಲ್ಲರಿಗೂ ಆತನು ಪವಿತ್ರಾತ್ಮನ ಪರಿಪೂರ್ಣತೆಯನ್ನು ಕೊಡಲು ಹೆಚ್ಚು ಕಾತರದಿಂದಿದ್ದಾನೆ.

    ಅಧ್ಯಾಯ 7
    ಶುದ್ಧೀಕರಣ

    ಸುವಾರ್ತೆಯ ಸಂದೇಶದ ಸಾರಾಂಶವು ಪಾಪದಲ್ಲಿ ಸಿಕ್ಕಿಬಿದ್ದ ಸ್ತ್ರೀಗೆ ಯೇಸು ಹೇಳಿದ ಈ ಎರಡು ಮಾತುಗಳಲ್ಲಿ ಅಡಕವಾಗಿದೆ: (ಅ) ‘ನಾನು ನಿನಗೆ ಶಿಕ್ಷೆ ವಿಧಿಸುವುದಿಲ್ಲ, (ಆ) ‘ಇನ್ನು ಮೇಲೆ ಪಾಪ ಮಾಡಬೇಡ.’ (ಯೋಹಾ.8:11).

    ನೀತೀಕರಣವು ಕ್ರಿಸ್ತೀಯ ಓಟದ ಪಂದ್ಯದ ಆರಂಭದ ಗೆರೆಯಾಗಿದೆ ಮತ್ತು ಶುದ್ದೀಕರಣವು ಓಟದ ಪಂದ್ಯದಲ್ಲಿ ನೇಮಿಸಿದ ಹಾದಿಯಾಗಿದೆ. ‘ಶುದ್ದೀಕರಣ’ ವೆಂದರೆ ಪ್ರತ್ಯೇಕಿಸಲ್ಪಡುವುದು. ಆದ್ದರಿಂದ ಪಾಪದಿಂದಲೂ, ಲೋಕದಿಂದಲೂ, ಹಾಗೂ ನಮ್ಮ ಸ್ವಂತ ಸ್ವಾರ್ಥ ಜೀವಿತದಿಂದಲೂ ನಾವು ಹೆಚ್ಚೆಚ್ಚಾಗಿ ಪ್ರತ್ಯೇಕಿಸಲ್ಪಡುವ ದಾರಿಯೇ ಶುದ್ಧೀಕರಣವಾಗಿದೆ.

    ಯಾವ ರೀತಿಯಾಗಿ ಪ್ರತಿಯೊಬ್ಬ ಓಟಗಾರನೂ ಆರಂಭದ ಗೆರೆಗೆ ಬರುವ ಇಡೀ ಉದ್ದೇಶವು ಓಟದಲ್ಲಿ ಭಾಗವಹಿಸಬೇಕೆಂದಿರುವಂತೆಯೇ, ನಾವು ಕ್ರಿಸ್ತನ ಕಡೆ ಬಂದಿರುವ ಇಡೀ ಉದ್ದೇಶವು ಪವಿತ್ರೀಕರಿಸಲ್ಪಡಬೇಕೆಂಬುದಾಗಿದೆ. ಓಟಗಾರನು ಇತರರೊಂದಿಗೆ ಸೇರಿ ಪ್ರಾರಂಭದ ಗೆರೆಗೆ ಬಂದ ಮೇಲೆ ಓಟದಲ್ಲಿ ಭಾಗವಹಿಸಲು ಅವನಿಗೆ ಇಷ್ಟವಿಲ್ಲದಿದ್ದರೆ ಪ್ರಯೋಜನವೇನು1

    ನಮಗಾಗಿ ದೇವರ ಉದ್ದೇಶ

    ನಮ್ಮಲ್ಲಿ ಹೆಚ್ಚಿನವರು ಮೊದಲು ಕ್ರಿಸ್ತನ ಕಡೆಗೆ ಬಂದದ್ದು ತಮಗೇನಾದರೂ ಸಹಾಯ ಪಡೆದುಕೊಳ್ಳಬೇಕೆಂಬ ಸ್ವಾರ್ಥ ಉದ್ದೇಶದಿಂದಾಗಿರುತ್ತದೆ - ಒಂದು ವೇಳೆ ನಮ್ಮ ಸ್ವಸ್ಥತೆ, ಅಥವಾ ನರಕದಿಂದ ಬಿಡುಗಡೆ ಹೊಂದುವದು ಆಗಿರಬಹುದು. ದೇವರು ಆ ಸ್ವಾರ್ಥ ಉದ್ದೇಶದ ಹೊರತಾಗಿಯೂ ನಮ್ಮನ್ನು ಸ್ವೀಕರಿಸಿಕೊಂಡನು. ತಪ್ಪಿ ಹೋದ ಮಗನು ತಂದೆಯ ಬಳಿ ಬಂದ ಉದ್ದೇಶವು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದೇ ಆಗಿದ್ದರೂ, ತಂದೆಯು ಅವನನ್ನು ಬಹಳವಾಗಿ ಪ್ರೀತಿಸಿದ್ದರಿಂದ ಅವನನ್ನು ಮತ್ತೆ ಸ್ವೀಕರಿಸಿಕೊಂಡನಲ್ಲವೇ, ದೇವರು ಅಷ್ಟು ಒಳ್ಳೆಯವನಾಗಿದ್ದಾನೆ!

    ನಾವು ಸ್ವರ್ಗಕ್ಕೆ ಹೋಗುವುದು ಮಾತ್ರ ಸಾಕು ಎಂದು ನಾವು ಕ್ರೆ ಸ್ತ ಜೀವಿತದಲ್ಲಿ ಮುಂದುವರಿಯುವುದಾದರೆ, ಅದು ನಿಜವಾಗಿಯೂ ದುಃಖಕರವಾದದ್ದು. ನಾವು ನಮ್ಮ ಜೀವಿತಕ್ಕಾಗಿರುವ ದೇವರ ಉದ್ದೇಶವನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳುವಾಗ, ಅದನ್ನು ಪೂರ್ಣವಾಗಿ ಪೂರೆ ಸಲು ಬಯಸುವವರಾಗಿರಬೇಕು. ’ಕರೆಯಲ್ಪಟ್ಟವರು ನಿರೀಕ್ಷಿಸುವ ಪದವಿ’ ಎಂಥದ್ದೆಂದು ಎಫೆಸದ ಕ್ರೆ ಸ್ತರು ತಿಳಿದುಕೊಳ್ಳಲು ಅವರ ಮನೋನೇತ್ರವು ಬೆಳಗಿಸಲ್ಪಡುವಂತೆ ಪೌಲನು ಅವರಿಗಾಗಿ ಪ್ರಾರ್ಥಿಸಿದನು (ಎಫೆ. 1:18).

    ರೋಮಾ. 8:29,30 ರಲ್ಲಿ, ಆತನ ಕರೆಯುವಿಕೆಯ ನಿರೀಕ್ಷೆಯು ಏನೆಂದು ಈ ರೀತಿಯಾಗಿ ನಮಗೆ ಹೇಳಲ್ಪಟ್ಟಿದೆ: ದೇವರು, ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು ಅವರಲ್ಲಿ ಆತನೇ ಹಿರಿಯವನಾಗಿರಬೇಕೆಂದು ಉದ್ದೇಶಿಸಿ, ತಾನು ಯಾರನ್ನು ತನ್ನವರೆಂದು ಮೊದಲು ತಿಳಿದುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವುದಕ್ಕೆ ಮೊದಲೇ ನೇಮಿಸಿದನು.

    ಇಲ್ಲಿ ನಾವು ಯೇಸುವಿನ ಸಾರೂಪ್ಯವುಳ್ಳವರಾಗಿರುವುದಕ್ಕಾಗಿ ಆತನ ಸಹೋದರರಾಗಿರುವುದೂ ದೇವರ ಉದ್ದೇಶವಾಗಿದೆ ಎಂದು ಓದುತ್ತೇವೆ. ಹೆಚ್ಚೆಚ್ಚಾಗಿ ಯೇಸುವಿನಂತೆ ಆಗುವುದೇ ಶುದ್ದೀಕರಣ ಆಗಿರುತ್ತದೆ. ನಮಗೆ ಮುಂದಾಗಿ ಓಡಿದ ಯೇಸುವಿನ ಮೇಲೆ ದೃಷ್ಟಿಯಿಟ್ಟು ಈ ಕೆ ಸ್ತ ಓಟವನ್ನು ಓಡುವಂತೆ ನಾವೆಲ್ಲರೂ ಉತ್ತೇಜಿಸಲ್ಪಟ್ಟಿದ್ದೇವೆ (ಇಬ್ರಿ. 12:1, 2).

    ಪಾಪದ ಅಂತ್ಯ

    ಈ ಓಟದಲ್ಲಿನ ಪ್ರಥಮ ಹೆಜ್ಜೆಯು ತಿಳಿದಿರುವ ಪಾಪಗಳನ್ನು ಮಾಡುವುದನ್ನು ನಿಲ್ಲಿಸುವುದಾಗಿದೆ. ಹಳೆಯ ಓಡಂಬಡಿಕೆಯ ಕಾಲದಲ್ಲಿ ಪಾಪವನ್ನು ತ್ಯಜಿಸಲು ಉತ್ತೇಜನವಿರಲಿಲ್ಲ. ಆದರೆ ಹೊಸ ಒಡಂಬಡಿಕೆಯಲ್ಲಿ, ‘ದೋಷಾರೋಪಣೆಯಿಂದ ಬಿಡುಗಡೆ’ ಮತ್ತು ‘ಪಾಪವನ್ನು ತ್ಯಜಿಸುವುದು’ ಇವೇ ಯೇಸುವು ಬೋಧಿಸಿದ ಸುವಾರ್ತೆಯ ಸಾರಾಂಶವೆಂದು ಎಲ್ಲಾ ಅಪೋಸ್ತಲರೂ ಒಪ್ಪುವವರಾಗಿದ್ದಾರೆ.

    ಪೌಲನು, “ಪಾಪ ಮಾಡುವದನ್ನು ಬಿಟ್ಟುಬಿಡಿರಿಎಂದು ಹೇಳುತ್ತಾನೆ (1 ಕೊರಿ. 15:34). ಯೋಹಾನನು ‘ನೀವು ಪಾಪ ಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ’ ಎಂತಲೂ, (1 ಯೋಹಾ. 2:1) ಪೇತ್ರನು ಸಹ, ‘ಪಾಪದ ವಶದಿಂದ ತಪ್ಪಿಸಿಕೊಳ್ಳಬೇಕು’ ಎಂದೂ ಪ್ರಬೋಧಿಸುತ್ತಾರೆ (1 ಪೇತ್ರ. 4:1).

    ನಂಬಿಕೆಯಿಂದ ನೀತೀಕರಣ ಹೊಂದುವುದನ್ನು ವಿವರಿಸಿದ ಮೇಲೆ ಪೌಲನು ಈ ಪ್ರಶ್ನೆಯನ್ನು ಕೇಳುತ್ತಾನೆ, “ಹಾಗಾದರೆ ಏನು ಹೇಳೋಣ1 ದೇವರ ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ1 (ರೋಮಾ. 6:1). ಒಂದು ಸಾರಿಯಾದರೂ ಪಾಪವನ್ನು ಮಾಡಬಹುದೋ1ಅಕ್ಷರಶಃ ಭಾಷಾಂತರದ ಈ ಎರಡು ಪ್ರಶ್ನೆಗಳಿಗೂ ಉತ್ತರವು “ಖಂಡಿತವಾಗಿ ಇಲ್ಲಾ’ಎಂಬುದೇ ಆಗಿರುವುದು (ರೋಮಾ. 6:15). ಇಲ್ಲಾ. ನಮಗೆ ಅರಿವಿದ್ದು(ತಿಳಿದೂ), ನಾವು ಒಂದು ಸಾರಿಯೂ ಇನ್ನೆಂದಿಗೂ ಪಾಪ ಮಾಡಬಾರದು.

    ಇದು ಭಾರವಾದ, ಹೊರೆಯಂತಿರುವ ಸಂದೇಶವಾಗಿದೆಯೋ1 ಇದು ಪಾಪ ಮಾಡುತ್ತಾ ಇರಬಯಸುವವರಿಗೆ ಮಾತ್ರ ಭಾರವಾಗಿರಲು ಸಾಧ್ಯ! ಪಾಪದಿಂದ ಅಸ್ವಸ್ಥರಾಗಿ ಪಾಪದ ಸೆರೆಯಲ್ಲಿ ದಣಿದಿರುವವರಿಗೆ ಇದು ಆನಂದಕರವಾದ ಬಿಡುಗಡೆಯ ಸಂದೇಶವಾಗಿರುವುದು. ಯಾವ ಕೆ ದಿಯಾದರೂ ತಾನು ಬಿಡುಗಡೆಯಾಗುವನೆಂಬ ಸಂದೇಶವನ್ನು ಕೇಳಿಸಿಕೊಂಡರೆ ಹರ್ಷಗೊಳ್ಳುವನು. ಅದು ಅವನಿಗೆ ಭಾರವಾಗಿ ಅನ್ನಿಸುವುದೇ1 ಇಲ್ಲವಲ್ಲಾ1

    “ಸೆರೆಯಲ್ಲಿದ್ದವರು (ಪಾಪದಿಂದ) ಬಿಡುಗಡೆಯಾಗುವುದನ್ನು ಪ್ರಸಿದ್ಧಿಪಡಿಸುವುದಕ್ಕೂ (ಸ್ಯೆತಾನನಿಂದ) ಕುಗ್ಗಿಸಲ್ಪಟ್ಟವರನ್ನು ಬಿಡುಗಡೆ ಮಾಡುವುದಕ್ಕೂಯೇಸು ಅಭೀಷೇಕಿಸಲ್ಪಟ್ಟನು (ಲೂಕ. 4:18).

    ಹೊಸ ಒಡಂಬಡಿಕೆಯ ಮಹಿಮೆಯುಳ್ಳ ವಾಗ್ದಾನವು ಹೀಗಿದೆ: “ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ಯಾಕೆಂದರೆ ನೀವು (ಹಳೆ ಒಡಂಬಡಿಕೆಗೆ) ಧರ್ಮಶಾಸ್ತ್ರಕ್ಕೆ ಅಧೀನರಲ್ಲ. (ಯೇಸುವಿನಿಂದ ಸ್ಥಾಪಿಸಲ್ಪಟ್ಟ ಹೊಸ ಒಡಂಬಡಿಕೆಯ) ಕೃಪೆಗೆ ಅಧೀನರಾಗಿದ್ದೀರಷ್ಟೇ (ರೋಮಾ. 6:14). ಜಯದ ಪ್ರಥಮ ಹೆಜ್ಜೆಯು ನಿಮಗೆ ಇಂಥಾ ಜೀವಿತವನ್ನು ಜೀವಿಸಲು ಸಾಧ್ಯವೆಂದು ನಂಬುವುದೇ ಆಗಿರುತ್ತದೆ.

    ಶೋಧನೆ ಮತ್ತು ಪಾಪ

    ಯಾಕೋಬ 1:14, 15 ವಚನಗಳು, ಪಾಪದ ಮತ್ತು ಶೋಧನೆಯ ನಡುವಿನ ವ್ಯತ್ಯಾಸವನ್ನು ಬಹು ಸ್ಪಷ್ಟವಾಗಿ ತಿಳಿಯಪಡಿಸುತ್ತವೆ. ಅದರಲ್ಲಿ,“ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳಾಗಿ ಪ್ರೇರೇಪಿಸಲ್ಪಡುತ್ತಾನೆ. ಆಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ ಎಂದಿದೆ. ನಮ್ಮ ಮಾಂಸದಲ್ಲಿರುವ ಆಶೆಯನ್ನು ನಾವು ಬಸುರಾಗಲು ಅನುಮತಿಸುವ ತನಕ ಪಾಪವು ನಮ್ಮ ಹೃದಯದಲ್ಲಿ ಹುಟ್ಟುವುದಿಲ್ಲ. ಆಶೆಯು ನಮ್ಮ ಮನಸ್ಸಿನಲ್ಲಿ ಒಂದು ಯೋಚನೆಯನ್ನು ಹೊಳೆಯ ಮಾಡುವಾಗ, ನಾವು ಶೋಧಿಸಲ್ಪಡುತ್ತೇವೆ. ನಮ್ಮ ಮನಸ್ಸು ಆ ಶೋಧನೆಯೊಂದಿಗೆ ಸಮ್ಮತಿಸುವಾಗ, ಅದು ಗರ್ಭಧರಿಸಲ್ಪಟ್ಟು ಪಾಪವು ಹುಟ್ಟುತ್ತದೆ.

    ಶೋಧಿಸಲ್ಪಡುವುದಷ್ಟೇ ನಮ್ಮನ್ನು ಕೆಟ್ಟವರನ್ನಾಗಿ ಮಾಡಲಾರದು. ಯೇಸು ಸಹ ಶೋಧಿಸಲ್ಪಟ್ಟನು. ಆದರೆ ಆತನು ಯಾವ ರೀತಿಯಲ್ಲಿಯೂ ಒಂದು ಸಾರಿಯೂ ಎಂದೂ ಪಾಪ ಮಾಡಲಿಲ್ಲ. ಆದ್ದರಿಂದ ಆತನು ಸಂಪೂರ್ಣವಾಗಿ ಶುದ್ಧನಾಗಿದ್ದನು.

    “ಆತನುಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತುಮತ್ತು ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು ಎಂದು ಯೇಸುವಿನ ವಿಷಯವಾಗಿ ಪವಿತ್ರ ಗ್ರಂಥವು ಹೇಳುತ್ತದೆ (ಇಬ್ರಿ. 2:17, 4:15). ಅವನು ನಮ್ಮ ಹಾಗೆಯೇ ಶೋಧಿಸಲ್ಪಟ್ಟನು, ಆದರೆ ಪಾಪ ಮಾತ್ರ ಮಾಡಲಿಲ್ಲ.

    ಅದೇನು ಅಷ್ಟು ಆಶ್ಚರ್ಯವಾಗಿ ನಮ್ಮಲ್ಲಿ ಕೆಲವರಿಗೆ ಕಾಣದಿರಬಹುದು; ಯಾಕೆಂದರೆ ಯೇಸು ದೇವರಾಗಿದ್ದುದರಿಂದ ಪಾಪವನ್ನು ಸುಲಭವಾಗಿಯೂ ಸ್ವಾಭಾವಿಕವಾಗಿಯೂ ಜಯಿಸಿರಬಹುದೆಂದು ನಾವು ಭಾವಿಸಬಹುದು. ಆದರೆ ‘ಅವನು ದೇವರಿಗೆ ಸರಿಸಮಾನನಾಗಿರುವ ಸೌಲಭ್ಯದಿಂದ ತನ್ನನ್ನು ಬರಿದುಮಾಡಿಕೊಂಡುಭೂಮಿಗೆ ಬಂದ’ನೆಂಬುದನ್ನು ನೆನಪಿಸಿಕೊಳ್ಳಬೇಕು (ಫಿಲಿಪ್ಪಿ. 2:6,7). ಅವನು ದೇವರಾಗಿದ್ದರೂ ಭೂಮಿಯಲ್ಲಿ ಮನುಷ್ಯನಾಗಿದ್ದನು. ಇಂದು ಆತನು ನಮಗೆ ಕೊಡುವ ಅದೇ ಪವಿತ್ರಾತ್ಮನ ಬಲ ಮಾತ್ರವೇ ಆತನಿಗೂ ದೊರಕಿತ್ತು.

    ಆದುದರಿಂದಲೇ ನಾವು, ‘ಯೇಸುವನ್ನು ದೃಷ್ಟಿಸಿನಮ್ಮ ಓಟವನ್ನು ಓಡಬೇಕು’ ಎಂದು ಹೇಳಲ್ಪಟ್ಟಿದ್ದೇವೆ. ಇಂದು ನಾವು ಪ್ರೋತ್ಸಾಹ ಹೊಂದಿರಲು ಸಾಧ್ಯ, ಯಾಕೆಂದರೆ ನಮಗೆ ಎದುರಾಗುವ ಪ್ರತಿ ಶೋಧನೆಯನ್ನು ಅವನು ಮನುಷ್ಯನಾಗಿ ತಾನೂ ಜಯಿಸಿದ್ದಾನೆ (ಇಬ್ರಿ. 12:2-4). ಹೀಗೆ ನಾವು ಹಿಂಬಾಲಿಸುವುದಕ್ಕೆ, ಆತನು ನಮಗೆ ಮುಂದಾಗಿ ಹೋದಾತನೂ (ಓಡಿದಾತನೂ), ಮಾದರಿಯೂ ಆಗಿದ್ದಾನೆ (ಇಬ್ರಿ. 6:20).

    ಇದು ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥವು...“ ಕ್ರಿಸ್ತನು ಮಾಂಸಧಾರಿಯಾಗಿ ಪ್ರತ್ಯಕ್ಷನಾದನು... ಆತ್ಮದಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು (1 ತಿಮೊ. 3:16). ಅವನಿಗೆ ನಮ್ಮ ಮಾಂಸ(ಶರೀರ)ವಿದ್ದರೂ, ತನ್ನ ಆತ್ಮವನ್ನು ಅವನು ಜೀವಮಾನವೆಲ್ಲಾ ಶುದ್ಧ(ಪವಿತ್ರ)ವಾಗಿಟ್ಟುಕೊಂಡನು.

    ‘ನಾವು ಸಹ ಆತನಂತೆ ಜಯಹೊಂದಲು ಸಾಧ್ಯ’ವೆಂದು ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಇದೇ. ಯಾಕೆಂದರೆ, ಆತನು ಮಾಂಸದಲ್ಲಿ ನಮಗೋಸ್ಕರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿಯಲ್ಲಿಆತನನ್ನು ಹಿಂಬಾಲಿಸಲು ಈಗ ನಮಗೆ ಸಾಧ್ಯ (ಇಬ್ರಿ. 10:20). ಇದೇ ಶುದ್ದೀಕರಣದ ಮಾರ್ಗವಾಗಿದೆ.

    ಹಳೆಯ ಮನುಷ್ಯ ಮತ್ತು ಹೊಸ ಮನುಷ್ಯ

    ಕಳ್ಳರು ಮನೆಯಲ್ಲಿ ಪ್ರವೇಶಿಸುವಂತೆ ಅನುಮತಿಸುವ ಅಪನಂಬಿಗಸ್ತನಾದ ಆಳೇ ‘ಆ ಹಳೆಯ ಮನುಷ್ಯನೆಂದು ಈಗಾಗಲೇ ನೋಡಿದೆವು. ಆದರೂ ಆ ಹಳೆಯ ಮನುಷ್ಯನು ಶಿಲುಬೆಗೆ ಹಾಕಲ್ಪಟ್ಟು, ಹೂಳಲ್ಪಟ್ಟಿದ್ದಾನೆ. ಈಗ ನಮ್ಮೊಳಗಿರುವ ಹೊಸ ಮನುಷ್ಯನು, “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ ಎಂದು ಹೇಳುವವನಾಗಿದ್ದಾನೆ (ಇಬ್ರಿ. 10:7).

    ಆದರೂ ದುಃಖಕರವಾದ ಸಾಧ್ಯತೆಯೇನೆಂದರೆ ಯೇಸುವಿನ ಒಬ್ಬ ಶಿಷ್ಯನು ಸಹ ಪಾಪ ಮಾಡಲು ಸಾಧ್ಯವಿದೆಯೆಂದು ನಮಗೆ ತಿಳಿದಿದೆ. ಒಂದು ದಿನ ಬೆಕ್ಕೊಂದು ಅಕಸ್ಮಿಕವಾಗಿ ಕೆಸರಿನಲ್ಲಿ ಬೀಳುವುದಕ್ಕೂ, ಹಂದಿಯು ಕೆಸರಿನಲ್ಲಿಯೇ ಬಿದ್ದಿರಲು ಬಯಸುವುದಕ್ಕೂ ಇರುವ ವ್ಯತ್ಯಾಸವಿದ್ದಂತೆ, ವಿಶ್ವಾಸಿಯು ಪಾಪದಲ್ಲಿ ಬೀಳುವುದಕ್ಕೂ ಅವಿಶ್ವಾಸಿಯು ಪಾಪದಲ್ಲಿ ಬೀಳುವುದಕ್ಕೂ ವ್ಯತ್ಯಾಸವಿದೆ! ಬೆಕ್ಕು ಕೆಸರನ್ನು ಇಷ್ಟಪಡದಿದ್ದರೂ, ಆಕಸ್ಮಿಕವಾಗಿ ಅದರಲ್ಲಿ ಬೀಳಬಹುದು. ಹಂದಿಯಾದರೋ ಅದನ್ನು ತಾನಾಗಿಯೇ ಬಯಸುತ್ತದೆ. ಇದೆಲ್ಲಾ ಸ್ವಭಾವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ‘ಪರಿಶುದ್ದತೆಯನ್ನು ಪ್ರೀತಿಸಿ ಪಾಪವನ್ನು ದ್ವೇಷಿಸುವ ಹೊಸ ಸ್ವಭಾವ’ವನ್ನು ಹೊಂದಿದವನು ಯೇಸುವಿನ ಶಿಷ್ಯನು.

    ಹಳೆಯ ಮನುಷ್ಯನು ಪಾಪ ಮಾಡಬಯಸುತ್ತಾನೆ. ಹೊಸ ಮನುಷ್ಯನು ಎಂದೂ ಪಾಪ ಮಾಡಬಯಸುವುದಿಲ್ಲ. ಆದರೆ ಹೊಸ ಮನುಷ್ಯನು ಸಾಕಷ್ಟು ಬಲವುಳ್ಳವನಾಗಿ ಇರದಿದ್ದರೆ, ಅವನು ಮಾಂಸ(ಶರೀರ)ದಲ್ಲಿನ ಆಶೆಗಳಿಗೆ ವಿರುದ್ಧವಾಗಿ ತನ್ನ ಹೃದಯದ ಬಾಗಿಲನ್ನು ಮುಚ್ಚಲಾರನು. ಅದು ಅವನು ಆ ಆಶೆಗಳನ್ನು ಬಯಸುವುದರಿಂದಲ್ಲ. ಇಲ್ಲವೇ ಇಲ್ಲ. ಅವುಗಳನ್ನು ಎದುರಿಸಲು ಅವನು ಸಾಕಷ್ಟು ಬಲವುಳ್ಳವನಾಗಿಲ್ಲ. ಇದಕ್ಕೆ ಕಾರಣ ಅವನು ತನ್ನನ್ನು ಸಾಕಷ್ಟು ದೇವರ ವಾಕ್ಯದಿಂದ ಪೋಷಿಸದಿರಬಹುದು, ಇಲ್ಲವೆ ಅವನು ತನ್ನನ್ನು ಪ್ರಾರ್ಥನೆಯಿಂದ ಬಲಪಡಿಸದೆ ಇದ್ದಿರಬಹುದು.

    ಆದ್ದರಿಂದ ಪಾಪ ಮಾಡುವುದಕ್ಕೂ ಪಾಪದಲ್ಲಿ ಬೀಳುವುದಕ್ಕೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ನಾವು ತಿಳಿದಿರುವುದು ಪ್ರಾಮುಖ್ಯ; ಯಾಕೆಂದರೆ, ಆಗ ಮಾತ್ರ ನಾವು ನಮ್ಮ ಹೃದಯದಲ್ಲಿ ಮೂಡುವ ಅನೇಕ ಅನಗತ್ಯವಾದ ಖಂಡನೆಯ ಭಾವನೆಗಳನ್ನು ತಡೆಗಟ್ಟಲು ಸಾಧ್ಯವಾಗುವುದು.

    ಯೋಹಾನನು ತನ್ನ ಪ್ರಥಮ ಪತ್ರಿಕೆಯಲ್ಲಿ ಇದನ್ನು ಸ್ಪಷ್ಟಪಡಿಸುತ್ತಾನೆ. “ಪಾಪ ಮಾಡುವವನು (ಅಂದರೆ, ತಿಳಿದೂ ಪಾಪ ಮಾಡುವವನು) ಸ್ಯೆತಾನನಿಂದ ಹುಟ್ಟಿದವನಾಗಿದ್ದಾನೆ (1 ಯೋಹಾ. 3:8). ವಿಶ್ವಾಸಿಗಳಿಗಾದರೋ ಯೋಹಾನನು ಹೀಗೆಂದು ಬರೆಯುತ್ತಾನೆ : “ಯಾವನಾದರೂ ಪಾಪ ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸುಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣೆ ಮಾಡುವ ಯಜ್ಞವಾಗಿದ್ದಾನೆ (1 ಯೋಹಾ. 2:1,2).

    ತಿಳಿದ ಪಾಪ ಮತ್ತು ತಿಳಿಯದ ಪಾಪ

    ಪಾಪದಲ್ಲಿ ಬೀಳುವುದಕ್ಕೂ ಪಾಪವುಳ್ಳವರಾಗಿರುವುದಕ್ಕೂ ವ್ಯತ್ಯಾಸವಿದೆ. ಪಾಪವುಳ್ಳವರಾಗಿರುವುದು ಅಂದರೆ, ನಮಗೆ ತಿಳಿದಿದ್ದೂ ಪಾಪ ಮಾಡುವುದಾಗಿದೆ. ತಿಳಿಯದ ಪಾಪವು ಅಂದರೆ, ನಮಗಿಂತಲೂ ಹೆಚ್ಚು ಪರಿಪಕ್ವತೆಯುಳ್ಳವರು ನಮ್ಮಲ್ಲಿ ಪಾಪವನ್ನು ಗಮನಿಸಲು ಶಕ್ತರಾಗಿದ್ದರೂ, ನಮಗೆ ಅದರ ಬಗ್ಗೆ ಅರಿವು ಇಲ್ಲದಿರುವುದಾಗಿದೆ. ಆದರೆ ಅಂಥಾ ತಿಳಿಯದ ಪಾಪವು ನಮ್ಮನ್ನು ಎಂದೂ ಖಂಡಿಸಬೇಕಾಗಿಲ್ಲ. ಯಾಕೆಂದರೆ ದೇವರ ವಾಕ್ಯವು, “ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವುದಿಲ್ಲ (ರೋಮಾ. 5:13). ಎಂದು ಹೇಳುತ್ತದೆ. (ನಮ್ಮ ಜಾಗೃತ ಮನಸ್ಸಿನಲ್ಲಿ ಪಾಪದ ಅರಿವು ಇಲ್ಲದಿರುವಾಗ ದೇವರು ನಮ್ಮ ಪಾಪವನ್ನು ಲೆಕ್ಕಿಸುವುದಿಲ್ಲ ಎಂಬುದು ಸಹ ಇದರ ಅರ್ಥವಾಗಿರುತ್ತದೆ.)

    ನಾವು ಬೆಳಕಿನಲ್ಲಿ ನಡೆಯುವವರಾಗಿದ್ದರೆ, ನಮ್ಮ ಮರಣದ ದಿನದವರೆಗೆ ಅರಿವಿಲ್ಲದ ಪಾಪಗಳು ಪೂರ್ತಿ ಬಿಟ್ಟುಹೋಗದಿದ್ದರೂ ಕ್ರಮೇಣ ಕಡಿಮೆಯಾಗುತ್ತಾ ಬರುವವು. ಈ ಕಾರಣದಿಂದಲೇ ಯೋಹಾನನು, “ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಮಾಡಿಕೊಳ್ಳುತ್ತೇವೆ, ಮತ್ತು ಸತ್ಯವೆಂಬುದು ನಮ್ಮಲ್ಲಿಲ್ಲ ಎಂದು ಹೇಳುತ್ತಾನೆ (1 ಯೋಹಾ, 1:8). ತನ್ನಲ್ಲಿ ಪಾಪ ಇಲ್ಲವೆಂದು ಹೇಳುವವನು ತಾನು ಈಗಾಗಲೇ ಕ್ರಿಸ್ತನ ಹಾಗೆ ಪರಿಪೂರ್ಣನಾಗಿದ್ದೇನೆಂದು ಸಾಧಿಸುವವನಾಗಿದ್ದಾನೆ. ಆದರೆ ಕ್ರಿಸ್ತನು ಪ್ರತ್ಯಕ್ಷನಾದಾಗ ಮಾತ್ರ “ನಾವು ಆತನ ಹಾಗಿರುವೆವು ಎಂದು ದೇವರ ವಾಕ್ಯವು ಹೇಳುತ್ತದೆ. ಅದಕ್ಕಿಂತ ಮುಂಚೆ ಹಾಗಿರಲಾರೆವು(1 ಯೋಹಾ. 3:2). ಯಾರು ಪೂರ್ಣವಾಗಿ ಶುದ್ಧೀಕರಿಸಲ್ಪಟ್ಟಿದ್ದೇವೆಂತಲೂ, ಈಗಾಗಲೇ ಪರಿಪೂರ್ಣರಾಗಿದ್ದೇವೆಂತಲೂ ಸಾಧಿಸುತ್ತಾರೋ ಅವರು ಕೇವಲ ತಮ್ಮನ್ನು ತಾವೇ ವಂಚಿಸಿಕೊಳ್ಳವವರಾಗಿದ್ದಾರೆ.

    ಆದರೂ ತಿಳಿಯದ ಪಾಪವು ತೊಳೆಯಲ್ಪಡುವ ಅವಶ್ಯಕತೆಯಿದೆ; ಆದಕಾರಣ ನಾವು ಬೆಳಕಿನಲ್ಲಿ ನಡೆಯುವುದರಿಂದ ‘ಯೇಸುವಿನ ರಕ್ತವು ಸಕಲ (ತಿಳಿಯದ) ಪಾಪವನ್ನು ನಿವಾರಣೆ ಮಾಡಿ ನಮ್ಮನ್ನು ಪರಿಶುದ್ಧೀಕರಿಸುತ್ತದೆ ’ (1 ಯೋಹಾ. 1:7). ಹೀಗೆ ನಾವು ಯಾವ ಭಯವೂ ಇಲ್ಲದವರಾಗಿ ಅಪರಿಮಿತವಾದ(ನಿತ್ಯನಾದ) ಪವಿತ್ರ ದೇವರ ಸನ್ನಿಧಿಯಲ್ಲಿ ಧೆ ರ್ಯವಾಗಿ ಈಗ ನಿಂತುಕೊಳ್ಳಲು ಸಾಧ್ಯ.

    ನಮ್ಮನ್ನು ನೀತೀಕರಿಸುವುದಕ್ಕೆ, ಕ್ರಿಸ್ತನ ರಕ್ತವು ಅಷ್ಟು ಶಕ್ತಿಯುಳ್ಳದ್ದಾಗಿದೆ. ಹಲ್ಲೆಲೂಯಾ!

    ಕರುಣೆ ಮತ್ತು ಕೃಪೆ

    ‘ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು (ಕೃಪೆಯು) ನಮಗೆ ದೊರೆಯುವಂತೆಯೂ ಕೃಪಾಸನದ ಮುಂದೆ ಧೆ ರ್ಯವಾಗಿ ಬರಲು’ ಹೇಳಲ್ಪಟ್ಟಿದ್ದೇವೆ (ಇಬ್ರಿ.4:16) ಕೃಪೆಯೂ ಕರುಣೆಯೂ ಒಂದೇಯಲ್ಲ. ‘ಕರುಣೆ’ಯು ಪಾಪಕ್ಷಮಾಪಣೆಯನ್ನು ಸೂಚಿಸುವಂಥದಾಗಿದೆ. ಇದು ನಮ್ಮ ಗತಕಾಲಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ‘ಕೃಪೆ’ಯು ನಮಗೆ ಅವಶ್ಯಕತೆಯ ಸಮಯದಲ್ಲಿ ಬೇಕಾಗಿರುವುದಾಗಿದೆ ಮತ್ತು ಇದು ನಮ್ಮ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ.

    ನಮ್ಮ ಅವಶ್ಯಕತೆಯ ಸಮಯವು ಶೋಧನೆಯ ಸಮಯವೇ ಆಗಿರುತ್ತದೆ. ಅದು ಪೇತ್ರನು ಗಲಿಲಾಯದ ಸಮುದ್ರದಲ್ಲಿ ಮುಳುಗಿದಂತೆ ನಾವು ಬೀಳಲಿರುವ ಸಮಯವಾಗಿರುತ್ತದೆ (ಮತ್ತಾ. 14:30). ಆ ಸಮಯದಲ್ಲಿಯೇ ನಾವು ಕೃಪೆಗಾಗಿ ಮೊರೆಯಿಡಬೇಕು ಮತ್ತು ಯಾವ ರೀತಿಯಾಗಿ ಯೇಸು ಸ್ವಾಮಿಯು ತನ್ನ ಕೆ ಯನ್ನು ಚಾಚಿ ಕೂಡಲೇ ಪೇತ್ರನನ್ನು ಎತ್ತಿದನೋ ಅದೇ ರೀತಿಯಾಗಿ ನಾವು ಸಹ ಬೀಳದೆ ನಿಂತುಕೊಳ್ಳುವಂತೆ ಕೃಪೆಯನ್ನು ಪಡೆದುಕೊಳ್ಳುವೆವು.

    ನಾವು ಬೀಳದಂತೆ ದೇವರು ಕಾಯುವನು ಎಂದು ದೇವರ ವಾಕ್ಯದಲ್ಲಿ ನಮಗೆ ಖಾತರಿಯನ್ನು ನೀಡುವ ಆಶ್ಚರ್ಯಕರವಾದ ವಾಗ್ದಾನಗಳಿವೆ. ಅವುಗಳಲ್ಲಿ ಈ ಕೆಲವನ್ನು ನೋಡಿರಿ.

    ಮೊಟ್ಟಮೊದಲನೆಯದಾಗಿ ನಾವು ಜಯಿಸಲು ಅಸಾಧ್ಯವಾದ ಬಹು ಬಲವಾದ ಶೋಧನೆಯಿಂದ ಶೋಧಿಸಲ್ಪಡುವುದನ್ನು ದೇವರು ಎಂದಿಗೂ ಅನುಮತಿಸುವುದಿಲ್ಲವೆಂದು ವಾಗ್ದಾನ ಮಾಡುತ್ತಾನೆ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು (1 ಕೊರಿ. 10:13).

    ‘ಎಡವಿಬೀಳದಂತೆ ನಿಮ್ಮನ್ನು ಕಾಪಾಡುವುದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ ಹರ್ಷದೊಡನೆ ನಿಲ್ಲಿಸುವುದಕ್ಕೂ ಶಕ್ತನಾಗಿರುವ ನಮ್ಮ ರಕ್ಷಕ...’ಎಂದು ದೇವರ ವಾಕ್ಯವು ಹೇಳುತ್ತದೆ (ಯೂದ. 1:24).

    ಇವು ಮತ್ತು ದೇವರ ವಾಕ್ಯದಲ್ಲಿ ನಮಗೆ ಕೊಡಲ್ಪಟ್ಟಿರುವ ಇನ್ನೂ ಅನೇಕ ಆಶ್ಚರ್ಯಕರವಾದ ವಾಗ್ದಾನಗಳು ನಮಗಿರುವುದರಿಂದ ನಾವು ಇನ್ನೆಂದೂ ಪಾಪ ಮಾಡುವ ಅವಶ್ಯವಿಲ್ಲ. 1ಪೇತ್ರ 4:2ರಲ್ಲಿ ಹೇಳಲ್ಪಟ್ಟಿರುವಂತೆ ‘ನಾವು ಉಳಿದಿರುವ ನಮ್ಮ ಜೀವಮಾನ ಕಾಲದಲ್ಲಿ ದೇವರ ಚಿತ್ತದ ಪ್ರಕಾರ ಮಾತ್ರ ಬದುಕುವುದಕ್ಕೆ ಪ್ರಯತ್ನ ಮಾಡೋಣ’.

    ಪ್ರಗತಿಪರ ಶುದ್ಧೀಕರಣ

    ಯೇಸು ಆಜ್ಞಾಪಿಸಿದ್ದನ್ನೆಲ್ಲಾ ವಿಧೇಯರಾಗುವಂತೆ(ಕೆ ಕೊಳ್ಳುವಂತೆ) ಇತರರಿಗೆ ಉಪದೇಶ ಮಾಡಲು ಆತನು ತನ್ನ ಅಪೊಸ್ತಲರಿಗೆ ಹೇಳಿದ್ದಾನೆ (ಮತ್ತಾ. 28:20). ಕರ್ತನನ್ನು ಪ್ರೀತಿಸುವ ಒಬ್ಬ ವ್ಯಕ್ತಿಯು ಮೊಟ್ಟಮೊದಲನೆದಾಗಿ ಆ ಆಜ್ಞೆಗಳು ಏನೇನಾಗಿರುತ್ತವೆ ಎಂದು ಹೃದಯಪೂರ್ವಕವಾಗಿ ಕಂಡುಕೊಂಡು ಆನಂತರ ಅವುಗಳಂತೆ ನಡೆಯಲು ಪ್ರಯತ್ನಿಸುವನು (ಯೋಹಾ. 14:21).

    ಧರ್ಮಶಾಸ್ತ್ರದಲ್ಲಿ ದೇವರು ಮನುಷ್ಯನಿಗೆ ಆಜ್ಞೆಗಳನ್ನು ಕೊಟ್ಟಿದ್ದರೂ ಅವುಗಳಿಗೆ ವಿಧೇಯರಾಗಿರಲು ಶಕ್ತಿಯನ್ನು ಕೊಟ್ಟಿರಲಿಲ್ಲ. ಹಾಗಾದರೆ ದೇವರು ಯಾಕೆ ಆಜ್ಞೆಗಳನ್ನು ಕೊಟ್ಟನು1 ಮನುಷ್ಯನು ದೇವರ ಮಟ್ಟಕ್ಕೆ ಬರಲು ಆತನಿಗೆ ಸಾಧ್ಯವಿಲ್ಲವೆಂಬುದನ್ನು ತಾನು ಕಂಡು ಹಿಡಿಯುವಂತೆಯೂ, ಹೀಗೆ ತನಗೊಬ್ಬ ರಕ್ಷಕನ ಹಾಗು ಸಹಾಯಕನ ಅವಶ್ಯಕತೆಯನ್ನು ಕಾಣುವಂತೆಯೂ ದೇವರು ಆಜ್ಞೆಗಳನ್ನು ಕೊಟ್ಟನು. ನಾವು...ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ(ಗಲಾ. 3:24).

    ಅದರೆ ಈಗ ದೇವರು ಮನುಷ್ಯನೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ. ಆತನು ನಮಗೆ ಆಜ್ಞೆಗಳನ್ನು ಮಾತ್ರವಲ್ಲ, ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ಮಾದರಿಯನ್ನು ಸಹ ಕೊಟ್ಟಿದ್ದಾನೆ. ‘ದೇವರ ಎಲ್ಲಾ ಆಜ್ಞೆಗಳನ್ನು ನಾವು ಪಾಲಿಸಲು ನಮಗೆ ಸಾಧ್ಯ’ವೆಂದು ಯೇಸು ತನ್ನ ಭೂಲೋಕದ ಜೀವಿತದಲ್ಲಿ ತೋರಿಸಿಕೊಟ್ಟಿದ್ದಾನೆ.

    ದೇವರು ತನ್ನ ಆಜ್ಞೆಗಳನ್ನು ನಮ್ಮ ಮನಸ್ಸಿನಲ್ಲಿ ಹಾಕುವುದಾಗಿಯೂ ಮತ್ತು ಅವುಗಳನ್ನು ನಮ್ಮ ಹೃದಯದಲ್ಲಿ ಬರೆಯುವುದಾಗಿಯೂ ಹೊಸ ಒಡಂಬಡಿಕೆಯಲ್ಲಿ ವಾಗ್ದಾನ ಮಾಡಿರುತ್ತಾರೆ (ಇಬ್ರಿ. 8:10). ಆತನು ಇದನ್ನು ನಮ್ಮಲ್ಲಿ ವಾಸಿಸುತ್ತಿರುವ ಪವಿತ್ರಾತ್ಮನ ಮೂಲಕ ನಮಗೆ ತೋರಿಸುವುದಲ್ಲದೆ ಅದನ್ನು ಮಾಡುವುದಕ್ಕೆ ಬಯಕೆಯನ್ನೂ ಎಲ್ಲದಕ್ಕೂ ವಿಧೇಯರಾಗುವುದಕ್ಕೆ ಕೃಪೆಯನ್ನೂ ನಮಗೆ ಕೊಡುತ್ತಾನೆ.

    ನಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡುವಾತನು ದೇವರು ತಾನೇ ಆಗಿರುತ್ತಾನೆ (1 ಥೆಸ. 5:23). ನಾವು ನಮ್ಮಷ್ಟಕ್ಕೆ ನಾವೇ ಅದನ್ನು ಮಾಡಿಕೊಳ್ಳಲಾರೆವು. ನಾವು ಆತನ ಮೇಲೆ ಅವಲಂಬಿಸಿರಬೇಕು. ಆತನೇ ತನ್ನ ಚಿತ್ತವನ್ನು, ನಾವು ಅದನ್ನು ನೆರವೇರಿಸುವಂತೆ ಬಯಕೆಯನ್ನೂ, ಸಾಮರ್ಥ್ಯವನ್ನೂ ಕೊಟ್ಟು ನಮ್ಮಲ್ಲಿ ಕಾರ್ಯಸಾಧಿಸುವಾತನಾಗಿದ್ದಾನೆ. ಆದರೆ ನಾವು ನಮ್ಮ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಕಾರ್ಯಸಾಧಿಸುವವರಾಗಿರಬೇಕು (ಫಿಲಿಪ್ಪಿ. 2:12,13) ಆದಕಾರಣ ದೇವರು ನಮ್ಮೊಳಗೆ ಕಾರ್ಯಮಾಡುತ್ತಿರುವುದನ್ನು ನಾವು ಹೊರಗೆ ಕಾರ್ಯಸಾಧಿಸುತ್ತಿರಬೇಕು. ಯಾಕೆಂದರೆ ದೇವರು ನಮ್ಮನ್ನು ಯಾಂತ್ರಿಕ ಗೊಂಬೆಗಳನ್ನಾಗಿ ಮಾಡಲಿಲ್ಲ!

    ದೇವರು ಪಾಪದ ಅಪರಾಧದಿಂದ ನಮ್ಮನ್ನು ಶುದ್ಧೀಕರಿಸುತ್ತಾನೆ. ಆದರೆ “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವುದಕ್ಕೆ ಪ್ರಯತ್ನಿಸೋಣ(2 ಕೊರಿ. 7:1) ನಮ್ಮೊಳಗಿರುವ ಮಲಿನತ್ವದ ಮೇಲೆ ನಮಗೆ ಬೆಳಕು ಸಿಗುವಾಗ ಈ ವಾಕ್ಯದಲ್ಲಿ ಹೇಳಲ್ಪಟ್ಟಿರುವುದನ್ನು ನಾವು ಮಾಡಬೇಕು.

    ಈ ರೀತಿಯಾಗಿ ನಾವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶಮಾಡುವುದಾದರೆ (ರೋಮಾ. 8:13), ಪವಿತ್ರಾತ್ಮನ ಫಲಗಳಾಗಿರುವ ಪ್ರೀತಿ, ಸಂತೋಷ, ಸಮಾಧಾನ, ಶಾಂತಿ, ತಾಳ್ಮೆ, ದಯೆ, ಒಳ್ಳೆಯತನ, ನಂಬಿಗಸ್ತತನ, ಸಾಧುತ್ವ, ಸ್ವ-ಹತೋಟಿ ಮುಂತಾದವುಗಳು ನಮ್ಮಲ್ಲಿ ಹೆಚ್ಚೆಚ್ಚಾಗಿ ಕಾಣಿಸಿಕೊಳ್ಳುವವು. ಇದೇ ನಾವು ಕ್ರಿಸ್ತನ ಹಾಗೆ ರೂಪಾಂತರಿಸಲ್ಪಡುವುದಾಗಿರುತ್ತದೆ.

    ಹೀಗೆ ನಮ್ಮ ಮಾರ್ಗವು ಹೆಚ್ಚೆಚ್ಚುತ್ತಾ ಬರುವ ಬೆಳಕಿನಂತಾಗುವುದು. (ಜ್ಞಾನೋ. 4:18). ಇದು ದೇವರು ನಮಗಾಗಿ ಒದಗಿಸಿ ಕೊಡುವ ಬಹು ಮಹಿಮೆಯುಳ್ಳ ಶುದ್ಧೀಕರಣದ ಮಾರ್ಗವು.

    ಅಧ್ಯಾಯ 8
    ದೇವರ ವಾಕ್ಯ ಮತ್ತು ಪ್ರಾರ್ಥನೆ

    ಆಹಾರ ಮತ್ತು ಗಾಳಿ ಇವೆರಡೂ ಹೊಸದಾಗಿ ಹುಟ್ಟಿದ ಮಗುವಿಗೆ ಅವಶ್ಯವಾಗಿರುತ್ತವೆ. ಆತ್ಮಿಕ ಜನನವನ್ನು ಅನುಭವಿಸುವವರಿಗೂ ಇವೆರಡು ಅನ್ವಯಿಸುತ್ತವೆ. ಹೊಸದಾಗಿ ಹುಟ್ಟಿದ ದೇವರ ಮಗುವೂ ಉಣ್ಣುವ ಹಾಗೂ ಉಸಿರಾಡುವ ಅವಶ್ಯಕತೆಯುಳ್ಳದ್ದಾಗಿದೆ.

    ‘ದೇವರ ವಾಕ್ಯವು- ಮಗುವಿನ ಆಹಾರವೂ’, ‘ಪ್ರಾರ್ಥನೆಯು- ಅದರ ಜೀವೋಶ್ವಾಸವೂ’ ಆಗಿದೆ.

    ದೇವರ ವಾಕ್ಯ-ನಮ್ಮ ಆತ್ಮಿಕ ಆಹಾರ

    ಮಗುವಿಗೆ ಪ್ರಾರಂಭದಲ್ಲಿ ಹಾಲಿನ ಅವಶ್ಯಕತೆಯಿದ್ದು, ತರುವಾಯ ಗಟ್ಟಿಯಾದ ಆಹಾರದ ಅವಶ್ಯಕತೆ ಯಿರುತ್ತದೆ. ಸತ್ಯವೇದವು ಹಾಲು ಮತ್ತು ಗಟ್ಟಿ ಆಹಾರವನ್ನು ಒಳಗೊಂಡಿದೆ. ಹಾಲಿನ ಆಹಾರವು -‘ಕ್ರಿಸ್ತನ ವಿಷಯವಾದ ಪ್ರಾಥಮಿಕ ಬೋಧನೆ ’ಯೆಂದೂ (ಇಬ್ರಿ. 6:1); ಮತ್ತು ಗಟ್ಟಿಯಾದ ಆಹಾರವು-‘ನೀತಿಯ ಜೀವನದ ಬೋಧನೆ’ಯೆಂದೂ(ಇಬ್ರಿ. 5:13) ಕರೆಯಲ್ಪಟ್ಟಿವೆ.

    ದೇವರು ನಮಗೆ ಕೊಡುವ ಬೆಳಕಿಗೆ ಎಷ್ಟು ಬೇಗನೆ ವಿಧೇಯರಾಗುತ್ತೇವೋ ಅಷ್ಟು ಬೇಗನೆ ನಾವು ಗಟ್ಟಿಯಾದ ಆಹಾರವನ್ನು ಸೇವಿಸಬಹುದು.

    ನಮ್ಮ ಆತ್ಮಿಕ ಬೆಳವಣೆಗೆಯು ‘ನಂಬಿಕೆ ಹಾಗೂ ವಿಧೇಯತೆ’ಯ ಮೇಲೆ ಅವಲಂಬಿಸಿದೆ.

    ನಾವು ದೇವರ ಮೇಲೆ ಅವಲಂಬಿತರಾಗಿರುವಂತೆ ಆತನು ನಮಗೆ ವಾಗ್ದಾನಗಳನ್ನು ತನ್ನ ವಾಕ್ಯದಲ್ಲಿ ಕೊಟ್ಟಿದ್ದಾನೆ. ಆತನಿಗೆ ವಿಧೇಯರಾಗುವುದಕ್ಕೆ ಆತನು ನಮಗೆ ಆಜ್ಞೆಗಳನ್ನು ನೀಡಿರುತ್ತಾನೆ. ನಾವು ಕ್ರಮವಾಗಿ ದೇವರ ವಾಕ್ಯವನ್ನು ಧ್ಯಾನಿಸಿ, ಆತನಲ್ಲಿ ಭರವಸೆಯಿಟ್ಟು ಆತನಿಗೆ ವಿಧೇಯರಾದರೆ, ಎಂದಿಗೂ ಎಲೆಗಳು ಒಣಗದ ಮರದಂತೆ ನಾವು ದೇವರಲ್ಲಿ ಆಳವಾಗಿ ಬೇರೂರಿರುವೆವು. ಆಗ ನಾವು ಮಾಡುವ ಪ್ರತಿಯೊಂದರಲ್ಲಿಯೂ ಸಫಲವಾಗುವಂತೆ ದೇವರು ನಮ್ಮನ್ನು ಆಶೀರ್ವದಿಸುವನು (ಕೀರ್ತ. 1:2,3).

    ನಾವು ದೇವರ ವಾಕ್ಯವನ್ನು ಕೇವಲ ಬುದ್ದಿಯ ಅಧ್ಯಯನದಿಂದ ಮಾತ್ರ ಅರ್ಥಮಾಡಿಕೊಳ್ಳಲಾರೆವು. ನಮಗೆ ಪವಿತ್ರಾತ್ಮನ ಪ್ರಕಟನೆಯು ಅತ್ಯವಶ್ಯವಾಗಿದೆ. “ಆತ್ಮಿಕ ಸತ್ಯಗಳು ಜ್ಞಾನಿಗಳಿಗೂ ಬುದ್ಧಿವಂತರಿಗೂ ಮರೆ ಮಾಡಲ್ಪಟ್ಟು ಶಿಶುಗಳಿಗೆ ಪ್ರಕಟವಾಗಿವೆ ಎಂದು ಯೇಸು ಹೇಳಿದನು (ಮತ್ತಾ. 11:25).

    ಬುದ್ಧಿವಂತರಿಗೂ ಜ್ಞಾನಿಗಳಿಗೂ ಇಲ್ಲದಂಥದ್ದೇನೋ ಒಂದು ಶಿಶುಗಳಿಗೆ ಇದೆ. ಅದೇನು1

    ‘ಒಂದು ಶುದ್ಧ ಹೃದಯ’!

    ದೇವರು ತಲೆ(ಬುದ್ದಿಶಕ್ತಿ)ಯನ್ನಲ್ಲ, ಹೃದಯವನ್ನೇ ನೊಡುವಂಥವನಾಗಿದ್ದಾನೆ. ದೇವರ ವಾಕ್ಯಕ್ಕೆ ನಡುಗುವವರೂ ದೀನರೂ ಆಗಿರುವವರಿಗೆ ಮಾತ್ರ ಆತನು ಪ್ರಕಟನೆಯನ್ನು ಕೊಡುತ್ತಾನೆ (ಯೆಶಾ. 66:2).

    ದೇವರ ಚಿತ್ತದಂತೆ ನಡೆಯುವುದಕ್ಕೆ ಯಾರಿಗೆ ಮನಸ್ಸಿದೆಯೋ ಅಂಥವರು ದೇವರ ವಾಕ್ಯವನ್ನು ಅರ್ಥ ಮಾಡಿಕೊಳ್ಳುವರೆಂದು ಯೇಸು ಹೇಳಿದನು (ಯೋಹಾ. 7:17).

    ದೇವರ ವಾಕ್ಯವು - ಆತ್ಮನ ಕತ್ತಿ(ಖಡ್ಗ)

    ನಾವು ನಮ್ಮ ಯುದ್ಧದಲ್ಲಿ ಸೆ ತಾನನಿಗೆ ವಿರುದ್ಧವಾಗಿ ಉಪಯೋಗಿಸುವ ಆಯುಧವು ‘ದೇವರ ವಾಕ್ಯ’ವಾಗಿದೆ.

    ಇದನ್ನು ‘ಪವಿತ್ರಾತ್ಮನ ಕತ್ತಿ’ ಎಂದು ಕರೆಯಲ್ಪಟ್ಟಿದೆ (ಎಫೆ. 6:17).

    ಯೇಸುವಿಗೆ ಮರುಭೂಮಿಯಲ್ಲಿ ಉಂಟಾದ ಕಡೆಯ ಮೂರು ಶೋಧನೆಗಳಲ್ಲಿಯೂ ಆತನು ತಾನೇ, ಈ ಆಯುಧವನ್ನು ಬಹು ಪರಿಣಾಮಕಾರಿಯಾಗಿ ಉಪಯೋಗಿಸಿದನು. ಆತನು ಸ್ಯೆತಾನನ ಶೋಧನೆಯನ್ನು ಪ್ರತಿ ಸಾರಿಯೂ “ಎಂಬುದಾಗಿ ಬರೆದಿದೆ... ಎನ್ನುವುದರಿಂದ ಎದುರಿಸಿದನು (ಮತ್ತಾ. 4:4,7,10).

    ಹಾಗೆಯೇ ಆತನು ಜಯಿಸಿದನು. ಅದೇ ರೀತಿ ನಾವೂ ಜಯಿಸಲು ಸಾಧ್ಯ.

    ಸ್ಯೆತಾನನು ದೂರುಗಾರನು. ಅವನ ದೂರಿಗೂ ಪವಿತ್ರಾತ್ಮನ ಮನವರಿಕೆಗೂ ಇರುವ ವ್ಯತ್ಯಾಸವನ್ನು ನಾವು ವಿವೇಚಿಸುವವರಾಗಿರಬೇಕು.ಸ್ಯೆತಾನನು ಯಾವಾಗಲೂ ನಮ್ಮನ್ನು ಬೆದರಿಸಿ, ತನ್ನ ದೂರುಗಳಿಂದ ನಮ್ಮನ್ನು ಖಂಡನೆಯ ಭಾವನೆಗೆ ನಡೆಸುತ್ತಾನೆ. ಪವಿತ್ರಾತ್ಮನ ಮನವರಿಕೆಯಾದರೋ, ಯಾವಾಗಲೂ ಶಾಂತವಾಗಿಯೂ ನಿರೀಕ್ಷಾಭರಿತವಾಗಿಯೂ ಇರುವುದು.

    ನಾವು ದೂರುಗಾರನನ್ನು ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ನಮ್ಮ ವಾಕ್ಯದ ಬಲದಿಂದಲೂಮಾತ್ರ ಜಯಿಸಲು ಸಾಧ್ಯ (ಪ್ರಕ. 12:11). ‘ನಾವು ಕ್ರಿಸ್ತನ ರಕ್ತದಿಂದ ಶುದ್ಧೀಕರಿಸಲ್ಪಟ್ಟು ಪೂರ್ಣವಾಗಿ ನೀತಿಕರಿಸಲ್ಪಟ್ಟವರಾಗಿದ್ದೇವೆ’ ಎಂಬ ನಮ್ಮ ಸಾಕ್ಷಿಯನ್ನು ಸೆ ತಾನನಿಗೆ ಕೊಡುವಾಗ ಮಾತ್ರವೇ ‘ನಮ್ಮ ಗತಕಾಲದ ಪಾಪಗಳ ವಿಷಯವಾಗಿರುವ ಅವನ ದೂರುಗಳನ್ನು ಜಯಿಸಲು ಸಾಧ್ಯ’“...ಎಂಬುದಾಗಿ ಬರೆದಿದೆ ಎಂದು ಯೇಸು ಉಪಯೋಗಿಸಿದ ಅದೇ ಆಯುಧವನ್ನೇ ನಾವೂ ಉಪಯೋಗಿಸಬೇಕು.

    ‘ಸೆ ತಾನನಿಗೆ ದೇವರ ವಾಕ್ಯವನ್ನು ಅರಿಕೆ ಮಾಡುವುದರಿಂದ’ ಸೆ ತಾನನ ದೂರುಗಳನ್ನು ಮಾತ್ರವಲ್ಲದೆ ನಿರಾಶೆ, ಚಿಂತೆ ಹಾಗೂ ಸೆ ತಾನನು ನಮ್ಮ ಮನಸ್ಸಿನಲ್ಲಿ ತರುವ ಅನೇಕ ಶೋಧನೆಗಳನ್ನು ಸಹ ಜಯಿಸುವ ಮಾರ್ಗವಾಗಿದೆ.

    ಸರಿಯಾದ ವಾಕ್ಯವನ್ನು ತಕ್ಕ ಸಮಯದಲ್ಲಿ ಪವಿತ್ರಾತ್ಮನು ನಮ್ಮ ಮನಸ್ಸಿಗೆ ತರುವಂತೆ, ‘ನಾವು ದೇವರ ವಾಕ್ಯವನ್ನು ತಿಳಿದಿರುವುದು’ ಈ ಕಾರಣದಿಂದಲೇ ಬಹು ಪ್ರಾಮುಖ್ಯವಾದದ್ದು.

    ನಾವು ದೇವರ ವಾಕ್ಯವನ್ನು ಪ್ರತಿದಿನವು ಧ್ಯಾನ ಮಾಡುವಾಗ, ಸ್ವಲ್ಪ ಸಮಯ ದೇವರು ನಮ್ಮೊಂದಿಗೆ ಮಾತನಾಡಬೇಕೆಂದು ನಾವು ಕೇಳಿಕೊಳ್ಳುವುದು ಒಳ್ಳೆಯದು. ದೇವರ ವಾಕ್ಯವನ್ನು ನಾವು ನಮ್ಮ ಹೃದಯದಲ್ಲಿ ಬಚ್ಚಿಡುವುದಾದರೆ, ನಾವು ಆತನಿಗೆ ವಿರೋಧವಾಗಿ ಪಾಪ ಮಾಡದಂತೆ ಅದು ನಮ್ಮನ್ನು ಕಾಯುವುದು (ಕೀರ್ತ. 119:11).

    ನಮ್ಮ ಜೀವಿತಕ್ಕಾಗಿರುವ ದೇವರ ಯೋಜನೆ

    ನಮ್ಮ ಜೀವಿತಕ್ಕಾಗಿ ದೇವರು ಪರಿಪೂರ್ಣವಾದ ಯೋಜನೆಯನ್ನು ಇಟ್ಟಿದ್ದಾನೆ. ನಾವು ಅದನ್ನು ನೆರವೇರಿಸುವಂತೆ ಆತನು ಮಾರ್ಗದರ್ಶನವನ್ನು ನೀಡಬಯಸುತ್ತಾನೆ. ಆ ಯೋಜನೆಯನ್ನು ಪೂರ್ಣವಾಗಿ ಪೂರೆ ಸುವ ಜೀವಿತವೇ ಭೂಲೋಕದಲ್ಲಿಯೇ ಅತಿ ಆಶೀರ್ವಾದದಾಯಕವಾದ ಜೀವಿತವಾಗಿರುತ್ತದೆ. ಉದ್ಯೋಗವನ್ನು ಆರಿಸಿಕೊಳ್ಳುವುದರಲ್ಲಿ ಇಲ್ಲವೆ, ಮದುವೆಯ ವಿಷಯದಲ್ಲಿ ದೇವರು ಈಗಾಗಲೇ ನಮಗಾಗಿಟ್ಟಿರುವ ಯೋಜನೆಯನ್ನು ನಾವು ಆರಿಸಿಕೊಳ್ಳುವುದು ಎಷ್ಟು ಅದ್ಭುತವಾದದ್ದು! ನಾವು ಆತನ ಮಾರ್ಗವನ್ನು ಆರಿಸಿಕೊಳ್ಳುವುದಾದರೆ, ಸೆ ತಾನವು ನಮಗಾಗಿ ಸಿದ್ಧಮಾಡಿರುವ ಅನೇಕ ಆತಂಕಗಳನ್ನು ನಾವು ತಡೆಗಟ್ಟಲು ಸಾಧ್ಯ. ದೇವರು ತನ್ನ ಆ ಯೋಜನೆಗೆ ತನ್ನ ವಾಕ್ಯದಿಂದಲೇ ಪ್ರಧಾನವಾಗಿ ನಮಗೆ ಮಾರ್ಗದರ್ಶನ ಮಾಡುತ್ತಾನೆ.

    ದೇವರ ಚಿತ್ತವನ್ನು ಕಂಡು ಹಿಡಿಯುವುದು ವಿಶಾಲವಾದ ವಿಷಯ ಮತ್ತು ಅದರ ವಿಷಯವಾಗಿ ’ದೇವರ ಚಿತ್ತವನ್ನು ಕಂಡು ಹಿಡಿಯುವುದು’ ಎಂಬ ಶಿರೋನಾಮೆಯುಳ್ಳ ನನ್ನ ಒಂದು ಪುಸ್ತಕದಲ್ಲಿ ವಿವರವಾಗಿ ಬರೆದಿದ್ದೇನೆ.

    ವಿವಾಹವನ್ನು ಆತ್ಮಿಕ ರೀತಿಯಿಂದ ಅರ್ಥಮಾಡಿಕೊಳ್ಳವುದರ ಕುರಿತಾಗಿ‘ಲೆ ಂಗಿಕತೆ, ಪ್ರೀತಿ ಹಾಗೂ ವಿವಾಹ ’ಎಂಬ ನನ್ನ ಮತ್ತೊಂದು ಪುಸ್ತಕದಲ್ಲಿ ಬರೆದಿರುತ್ತೇನೆ.

    ಪ್ರಾರ್ಥನೆ - ದೇವರೊಂದಿಗೆ ಮಾತಾಡುವುದು

    ದೇವರೊಡನೆ ಸಂಪರ್ಕಿಸುವದು ಎರಡುಮಾರ್ಗದ(ಇಬ್ಬದಿ) ವಿಷಯವಾಗಿರುತ್ತದೆ. ಮೊದಲನೆಯದಾಗಿ, ದೇವರು ತನ್ನ ವಾಕ್ಯದ ಮೂಲಕ ನಮ್ಮೊಡನೆ ಮಾತಾಡುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಎರಡನೆಯದಾಗಿ, ನಾವು ಆತನೊಡನೆ ಮಾತಾಡುತ್ತೇವೆ.

    ಆದರೆ ದೇವರಿಗೆ ಕೇವಲ ಬೇಡಿಕೆಗಳನ್ನು ಮಾತ್ರ ಮಾಡುವುದು (ಬೇಡುವುದು) ಪ್ರಾರ್ಥನೆಯಲ್ಲ. ವಧುವು ವರನೊಂದಿಗೆ ಅನ್ಯೋನ್ಯತೆಯಲ್ಲಿ ಇರುವಂತೆಯೇ, ಪ್ರಾರ್ಥನೆಯ ಮುಖ್ಯ ಭಾಗವು ‘ನಾವು ದೇವರೊಡನೆ ಅನ್ಯೋನ್ಯತೆಯುಳ್ಳವರಾಗಿ ಇರುವುದೇ’ ಆಗಿರುತ್ತದೆ.

    ವಧುವು ವರನೊಂದಿಗೆ ಹೇಗೆ ಮಾತಾಡಬೇಕೆಂದು ನಿಯಮಗಳಿಲ್ಲ.

    ಆದರೆ ಒಂದು ಶಿಸ್ತಿಗಾಗಿ ನಮ್ಮ ಪ್ರಾರ್ಥನೆಗಳಲ್ಲಿ ಇವು ಅಡಕವಾಗಿರುವುದು ಒಳ್ಳೆಯದೆ:

  • 1. ನಮ್ಮ ತಂದೆ ಯಾರಾಗಿದ್ದಾನೋ ಅದಕ್ಕಾಗಿ ಸ್ತೋತ್ರ;
  • 2. ಪಾಪ ಮತ್ತು ಅಪಜಯದ ಅರಿಕೆ;
  • 3. ದೇವರ ರಾಜ್ಯದ ಕುರಿತಾಗಿ ಮನವಿಗಳು;
  • 4. ನಮ್ಮ ಸ್ವಂತ ಅವಶ್ಯಕತೆಯ ಕುರಿತಾಗಿ ಮನವಿಗಳು;
  • 5. ಇತರರ ಅವಶ್ಯಕತೆಗಳಿಗಾಗಿ ವಿಜ್ಞಾಪನೆ;
  • 6. ದೇವರು ಏನು ಮಾಡಿದ್ದಾನೋ ಅದಕ್ಕಾಗಿ ಕೃತಜ್ಞತೆ;
  • 7. ದೇವರು ಏನು ಮಾಡಲಿದ್ದಾನೋ ಅದಕ್ಕಾಗಿಯೂ ಕೃತಜ್ಞತೆ.
  • ಯಾವಾಗಲೂ ಪ್ರಾರ್ಥಿಸಬೇಕೆಂದುಯೇಸು ನಮಗೆ ಹೇಳಿದನು (ಲೂಕ. 18:1).

    ಅನುದಿನದ ಜೀವಿತದ ಚಿಕ್ಕ ವಿಷಯಗಳ ಕುರಿತಾಗಿಯೂ ದೇವರೊಂದಿಗೆ ಮಾತಾಡಲು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಹೀಗೆ ನಾವು ಇಡೀ ದಿನ ಪ್ರಾರ್ಥನೆಯ ಆತ್ಮದಲ್ಲಿರುವೆವು. ಈ ರೀತಿಯಾಗಿ ಮಾತಾಡುವುದು ನಮಗೆ ಆಚಾರವಾಗಿರದೆ ಆನಂದಕರವಾಗಿರುವುದು. ದೇವರು ನಮ್ಮ ಹೃದಯಗಳಲ್ಲಿ ಆಶ್ಚರ್ಯಕರವಾದ ಮಾರ್ಗಗಳಿಂದ ಮಾತನಾಡುವುದನ್ನೂ ನಾವು ಕಂಡುಕೊಳ್ಳುವೆವು.

    ಆದರೆ ಇವು, ಪ್ರಾರ್ಥನಾ ಶಾಲೆಯಲ್ಲಿ ಅಕ್ಷರ ಮಾಲೆಯ ಪಾಠಗಳಷ್ಟೆ. ನಾವು ನಂಬಿಗಸ್ತರಾಗಿದ್ದಂತೆ, ಇನ್ನೂ ಮುಂದೆ ಪ್ರಗತಿ ಹೊಂದುವೆವು.

    ಯಾವಾಗಲಾದರೂ ಸರಿಯೇ, ನಾವು ಪ್ರಾರ್ಥನೆಯನ್ನು ಒಣಗಿದ, ಬರಿದಾದ ಆಚಾರವಾಗಿ ನಾಶಹೊಂದುವುದಕ್ಕೆ ಬಿಡಬಾರದು. ಪ್ರಾರ್ಥನೆಯು ಉಸಿರಾಡುವುದಕ್ಕೆ ಸಮವಾಗಿದೆ. ನಮಗೆ ಉಸಿರಾಡಲು ಕಷ್ಟವೆನಿಸಿದರೆ, ಆಗ ಏನೋ ತಪ್ಪಾಗಿದೆ ಎಂದು ನಮಗೆ ಗೊತ್ತಾಗುತ್ತದೆ. ದೇವರು ಎಂದಿಗೂ ಪ್ರಾರ್ಥನೆಯು ಒಣಗಿದಂತೆಯೂ ನಿರುತ್ಸಾಹದಿಂದ ಕೂಡಿದ್ದಾಗಿಯೂ ಇದ್ದರೆ ಇಷ್ಟಪಡನು.

    ಆದರೆ ನಾವು ಪ್ರಗತಿ ಹೊಂದುತ್ತಾ ಹೋದರೆ, ಪ್ರಾರ್ಥನೆಯು ಕಠಿಣವಾದ ಕೆಲಸವೆಂದು ಕಂಡುಕೊಳ್ಳುವೆವು. ನಾವು ಪ್ರಾರ್ಥಿಸುವಂತೆ ದೇವರು ನಮ್ಮ ಹೃದಯದಲ್ಲಿಡುವ ಚಿಕ್ಕ ಭಾರಗಳಲ್ಲಿ ನಂಬಿಗಸ್ತರಾಗಿದ್ದರೆ, ದೇವರು ಹೆಚ್ಚೆಚ್ಚಾಗಿ ತನ್ನ ಭಾರಗಳನ್ನು ನಮಗೆ ಕೊಡುವುದನ್ನು ಕಂಡುಕೊಳ್ಳುವೆವು. ಹೀಗೆ ಇತರರಿಗೆ ಆಶಿರ್ವಾದಪ್ರದವಾಗಿ ನಾವು ದೇವರೊಂದಿಗೆ ಜೊತೆಕೆಲಸಗಾರರಾಗುತ್ತೇವೆ.

    “ಯೇಸು, ಬಲವಾಗಿ ಕೂಗುತ್ತಾ, ಕಣ್ಣೀರನ್ನು ಸುರಿಸುತ್ತಾಪ್ರಾರ್ಥನೆ ಮಾಡಿದನು (ಇಬ್ರಿ. 5:7). ಒಮ್ಮೆ ಆತನು ಗೆತ್ಸೆಮನೆಯಲ್ಲಿ ಪ್ರಾರ್ಥಿಸಿದಾಗ ಆತನ ಬೆವರು ರಕ್ತದ ದೊಡ್ಡಹನಿಗಳಂತಾದವು (ಲೂಕ. 22:44). ಆತನ ಪ್ರಾರ್ಥನೆಯು ಅಷ್ಟು ತೀಕ್ಷ್ಣವಾಗಿತ್ತು.

    ಒಮ್ಮೆ ಆತನು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿಯೇ ಕಳೆದನು (ಲೂಕ. 6:12). ಆತನು ಆಗಾಗ ಅರಣ್ಯಕ್ಕೆ ಹೋಗಿ ಪ್ರಾರ್ಥಿಸುವ ಅಭ್ಯಾಸವುಳ್ಳವನಾಗಿದ್ದನು (ಲೂಕ. 5:16). ಯಾರೋ ಒಬ್ಬರು ಹೇಳಿರುವಂತೆ, ‘ಪ್ರವಾಸಿಗಳು ಹೊಸ ಊರಿಗೆ ಬಂದಾಗಲೆಲ್ಲಾ ಅಲ್ಲಿರುವ ವಿಶೇಷ ತಾಣಗಳನ್ನು ವೀಕ್ಷಿಸುವಂತೆ, ಯೇಸು ಹೊಸ ಸ್ಥಳಕ್ಕೆ ಹೋದಾಗೆಲ್ಲಾ ಆತನು ಪ್ರಾರ್ಥನೆ ಮಾಡುವುದಕ್ಕೆ ಪ್ರಶಾಂತವಾದ ಹೊಸ ಸ್ಥಳವನ್ನು ಯಾವಾಗಲೂ ಹುಡುಕುತ್ತಿದ್ದನು’.

    ಪ್ರಾರ್ಥನೆಯು ಎಷ್ಟು ಪ್ರಾಮುಖ್ಯವಾದದ್ದೆಂದು ಯೇಸುವಿನ ಮಾದರಿಯು ನಮಗೆ ತೋರಿಸುವಂಥದ್ದಾಗಿದೆ. ಆತನೇ ಅಷ್ಟೊಂದು ಪ್ರಾರ್ಥಿಸುವ ಅವಶ್ಯಕತೆಯಲ್ಲಿದ್ದಿರುವಾಗ, ನೀವು ಮತ್ತು ನಾನು ಇನ್ನೂ ಎಷ್ಟೋ ಹೆಚ್ಚಾಗಿ ಅದರ ಅವಶ್ಯಕತೆಯುಳ್ಳವರಾಗಿದ್ದೇವಲ್ಲವೇ1

    ಹಾಗಾದರೆ ಸೋಮಾರಿತನದ ಮೇಲೆ ಯುದ್ಧ ಮಾಡಿ, ಎಷ್ಟೇ ವೆಚ್ಚ(ಕಷ್ಟ)ವಾದರೂ ‘ಪ್ರಾರ್ಥನೆಯ ಸ್ತ್ರೀ ’ಅಥವಾ ‘ಪ್ರಾರ್ಥನೆಯ ಪುರುಷ ’ನಾಗಿರಲು ತೀರ್ಮಾನಿಸಿರಿ.

    ಅಧ್ಯಾಯ 9
    ಅನ್ಯೋನ್ಯತೆ ಮತ್ತು ಸಭೆ

    ‘ದೇವರು ನಮ್ಮನ್ನು ಕ್ರಿಸ್ತನ ಸಾರೂಪ್ಯಕ್ಕೆ ರೂಪಾಂತರಿಸಲು ಬಯಸುವವನಾಗಿದ್ದಾನೆ’ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಈ ರೂಪಾಂತರವು, ನಾವು ಯೇಸುವಿನ ಇತರ ಶಿಷ್ಯರಿಂದ ಪ್ರತ್ಯೇಕವಾಗಿರುವುದರಿಂದ ನಮ್ಮಲ್ಲಿ ಆಗುವಂಥದಲ್ಲ. ನಾವು ಅವರೊಂದಿಗೆ ಸೇರಿರುವುದರಿಂದ ರೂಪಾಂತರಿಸಲ್ಪಡುತ್ತೇವೆ.

    ನಾವು ದೇವರನ್ನು ಅವಲಂಬಿಸಿ ಜೀವಿಸುವುದನ್ನು ಮಾತ್ರವಲ್ಲ, ಇತರರೊಂದಿಗೆ ಅನ್ಯೋನ್ಯತೆಯಲ್ಲಿ ಜೀವಿಸುವುದನ್ನು ಸಹ ದೇವರು ಅಪೇಕ್ಷಿಸುತ್ತಾನೆ. ಹಳೆ ಒಡಂಬಡಿಕೆಯ ಕಾಲದಲ್ಲಿ ದೇವರು, ಒಬ್ಬ ಮೋಶೆ, ಒಬ್ಬ ಎಲೀಯನು ಇಲ್ಲವೆ ಒಬ್ಬ ಸ್ನಾನಿಕನಾದ ಯೋಹಾನನು ಮುಂತಾದವರ ಮುಖಾಂತರ ಕಾರ್ಯ ಮಾಡುತ್ತಿದ್ದನು. ಆದರೆ ಹೊಸ ಒಡಂಬಡಿಕೆಯ ಈ ಕಾಲದಲ್ಲಿ, ಕ್ರಿಸ್ತನ ಶಿರಸ್ಸತ್ವಕ್ಕೆ (ತಲೆಗೆ)ಅಧೀನರಾಗಿರುವ ಶಿಷ್ಯರ ಶರೀರವನ್ನು (ಸಭಾಕೂಟವನ್ನು) ದೇವರು ಬಯಸುವವನಾಗಿದ್ದಾನೆ. ಇದೇ ‘ಸಭೆ’ಎಂಬ ‘ಕ್ರಿಸ್ತನ ದೇಹ’ವಾಗಿರುತ್ತದೆ (ಎಫೆ. 3:22,23; 2:14-16).

    ಕ್ರಿಸ್ತನ ದೇಹವಾಗಿರುವ ಸಭೆ

    ಸಭೆಯು ಒಂದು ಕಟ್ಟಡ ಇಲ್ಲವೆ ಒಂದು ಪಂಗಡವಲ್ಲ. ‘ಸಭೆ’ಎಂಬ ಪದಕ್ಕೆ ಮೂಲ ಗ್ರೀಕ್ ಭಾಷೆಯಲ್ಲಿ ’ಎಕ್ಲೆಷಿಯ’ ಎಂಬ ಪದ ಬಳಸಲ್ಪಟ್ಟಿದೆ. ಇಲ್ಲಿ ಈ ಪದದ ಅರ್ಥವು, ‘ಲೋಕದೊಳಗಿಂದ ದೇವರ ಸ್ವಾಧೀನವಾಗಿರಲೆಂದೇ ಕರೆಯಲ್ಪಟ್ಟ ಜನರ ಸಮೂಹ’ ವಾಗಿರುತ್ತದೆ.

    ಈ ಲೋಕದಾದ್ಯಂತ ದೇವರ ಕರೆಗೆ ತಮ್ಮನ್ನು ಅರ್ಪಿಸಿಕೊಂಡು, ಪಾಪದಿಂದಲೂ, ಪ್ರಪಂಚದಿಂದಲೂ ಬೇರ್ಪಟ್ಟಿರುವವರು ಕ್ರಿಸ್ತನ ದೇಹವಾದ ‘ಸಭೆ’ಯಾಗಿರುತ್ತಾರೆ. ಪ್ರತಿಸ್ಥಳದಲ್ಲಿ ಆತನ ದೇಹದ ಅಂಗಾಂಗಗಳಾದ ಇವರು ಒಟ್ಟಾಗಿ ಆತನನ್ನು (ಆತನ ದೇಹವನ್ನು) ತಾವಿರುವ ಸ್ಥಳಗಳಲ್ಲೇ ಪ್ರತಿಬಿಂಬಿಸಬಹುದು (ತೋರಿಸಬಹುದು)..

    ಮೊದಲನೆಯ ಕ್ರಿಸ್ತನ ದೇಹವು- (ಯೇಸು ಈ ಧರೆಯಲ್ಲಿ ಮನುಷ್ಯನಾಗಿ ಜೀವಿಸಿದಾಗ) ಅದು ‘ಭೌತಿಕ (ರಕ್ತ-ಮಾಂಸದ) ದೇಹ’ವಾಗಿತ್ತು. ಆ ದೇಹದಲ್ಲಿ ದೇವರು ತನ್ನನ್ನು ಲೋಕಕ್ಕೆ ತೋರಿಸಿಕೊಂಡನು. ಯೇಸು ತನ್ನನ್ನು ತಾನು ಬಹು ಪರಿಪೂರ್ಣವಾಗಿ ತಂದೆಗೆ ಒಳಪಟ್ಟು ಜೀವಿಸಿದ್ದರಿಂದ, ತನ್ನ ಜೀವಿತದ ಅಂತ್ಯದಲ್ಲಿ, ಆತನು, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಅಂದನು (ಯೋಹಾ. 14:9).

    ಈಗ ನಮ್ಮ ಕರೆಯುವಿಕೆಯು, ನಮ್ಮ ಸುತ್ತಲಿರುವ ಲೋಕಕ್ಕೆ ನಾವು ಯೇಸುವನ್ನು ಒಟ್ಟಾಗಿ ಪ್ರತಿನಿಧಿಸುವಂಥದ್ದಾಗಿದೆ. ಯಾವ ಒಬ್ಬ ವ್ಯಕ್ತಿಯೂ ಯೇಸುವನ್ನು ಒಬ್ಬಂಟಿಗನಾಗಿ ಸಾಕಷ್ಟು ಪ್ರತಿನಿಧಿಸಲಾರನು. ನಮಗೆ ಪರಸ್ಪರ ಒಬ್ಬರಿಗೊಬ್ಬರ ಅವಶ್ಯವಿದೆ. ನಮ್ಮಲ್ಲಿ ಉತ್ತಮರು ಸಹ ಸಮತೋಲನ ಇಲ್ಲದವರಾಗಿದ್ದಾರೆ. ನಮ್ಮಲ್ಲಿ ಕೆಲವರಿಗೆ ಬಲವಾದ ಅಂಶಗಳಿವೆ, ಅದೇ ರೀತಿಯಾಗಿ ಬಲಹೀನತೆಗಳೂ ಇವೆ. ನಾವು ಕ್ರಿಸ್ತನನ್ನು ಒಂದು ಕ್ಷೇತ್ರದಲ್ಲಿ ಉತ್ತಮವಾಗಿ ಪ್ರತಿಬಿಂಬಿಸಬಹುದು, ಆದರೆ ಇನ್ನೊಂದು ಕ್ಷೇತ್ರದಲ್ಲಿ ಆ ರೀತಿಯಾಗಿ ಮಾಡಲು ಸಾಧ್ಯವಿಲ್ಲ.

    ಆದರೆ ನಾವು ಒಟ್ಟಾಗಿರುವಾಗ ಒಬ್ಬರಲ್ಲಿರುವ ಬಲಹೀನತೆಗಳು ಇತರರಲ್ಲಿರುವ ಬಲವಾದ ಅಂಶಗಳಿಂದ ಸಮತೋಲನವಾಗುವುದನ್ನು ಕಾಣುವೆವು. ನಾವು ಪರಸ್ಪರ ಪ್ರೀತಿ ಹಾಗೂ ಅಧೀನತೆಯಲ್ಲಿ ಜೀವಿಸುವವರಾಗಿದ್ದರೆ, ಕ್ರಿಸ್ತನು ಅವಿಶ್ವಾಸದ ಲೋಕಕ್ಕೆ ನಮ್ಮ ಮುಖಾಂತರ ಪೂರ್ಣವಾಗಿ ಪ್ರತಿಬಿಂಬಿಸಲ್ಪಡಲು ಸಾಧ್ಯ. ಇದೇ ‘ಸಭೆ’ಗಾಗಿ ಇರುವ ದೇವರ ಉದ್ದೇಶ.

    ಸ್ಥಳೀಯ ಸಭೆಯಲ್ಲಿ ಭಾಗಿಯಾಗಿರುವುದು

    ನೀವು ಪರಿವರ್ತನೆ ಹೊಂದಿದ ಕೂಡಲೇ, ನೀವು ಯೇಸುವಿನ ಹೆಜ್ಜೆ ಜಾಡಿನಲ್ಲಿ ನಡೆಯುವುದಕ್ಕೂ ದೇವರ ವಾಕ್ಯವನ್ನು ಪಾಲಿಸಿ ನಡೆಯುವುದಕ್ಕೂ ಕಾತರರಾಗಿರುವ ಶಿಷ್ಯಂದಿರ ಅನ್ಯೋನ್ಯತೆಗೆ ಸೇರುವುದನ್ನು ಕಂಡುಕೊಳ್ಳುವ ಅವಶ್ಯಕತೆಯಲ್ಲಿದ್ದೀರಿ.

    ಈ ವಿಷಯದಲ್ಲಿಯೇ, ಹೊಸದಾಗಿ ಪರಿವರ್ತನೆ ಹೊಂದಿದ ವ್ಯಕ್ತಿಯು ಇಂದು ಕ್ರೆ ಸ್ತತ್ವದಲ್ಲಿರುವ ಎಷ್ಟೊಂದು ಗುಂಪುಗಳು ಹಾಗೂ ಸಭಾವಿಭಾಗಗಳನ್ನು ನೋಡಿ ಬೆರಗಾಗುವ ಸಾಧ್ಯತೆಯಿದೆ. ಜಗತ್ತಿನಲ್ಲಿ ತಾವೇ ಕ್ರಿಸ್ತನ ಏಕಮಾತ್ರ ನಿಜವಾದ ಪ್ರತಿನಿಧಿಗಳು ಎಂದು ಹಕ್ಕು ಸಾಧಿಸಿಕೊಳ್ಳುವ, ವಿವಿಧ ಉಪದೇಶಗಳನ್ನು ಹೊಂದಿರುವ ಅನೇಕಾನೇಕ ಪಂಗಡಗಳು ಇವೆ!

    ಇವರಲ್ಲಿ ಬಹಳಷ್ಟು ಜನರು, ‘ನೀವು ಈ ಗುಂಪುಗಳಿಗೆ ಸೇರಿಕೊಳ್ಳದಿದ್ದರೆ ನೀವು ಕ್ರಿಸ್ತನ ದೇಹಕ್ಕೆ ಭಾಗಿಯಾಗಿರಲು ಸಾಧ್ಯವೇ ಇಲ್ಲ’ವೆಂದು ತಮ್ಮ ಬೆ ಬಲುಗಳನ್ನು ಬಲವಾಗಿ ಗುದ್ದಿ ನಿಮಗೆ ರುಜುವಾತು ಮಾಡುವವರೂ ಆಗಿದ್ದಾರೆ!

    ಅವರ ಗುಂಪಿನಲ್ಲಿಲ್ಲದಿರುವ ಹಾಗೂ ಅವರ ವಿಚಿತ್ರ ಉಪದೇಶಗಳನ್ನು ಇದ್ದಂತೆ ಒಪ್ಪಿಕೊಳ್ಳದ ಅನೇಕ ಮಕ್ಕಳು ದೇವರಿಗಿದ್ದಾರೆಂದು ಅವರ ಮನವೊಪ್ಪಿಸುವುದು ಎಷ್ಟೋ ಅಸಾಧ್ಯಕರವಾಗಿರುವುದು! ಪೂರ್ವ ಕಲ್ಪಿತ ಅಭಿಪ್ರಾಯದ ಶಕ್ತಿ ಹಾಗಿದೆ! ಇಂದು ಕ್ರೆ ಸ್ತತ್ವವನ್ನು ಕಾಡುತ್ತಿರುವ ಬಹು ದೊಡ್ಡ ಪೀಡೆಯೆಂದರೆ -ಫರಿಸಾಯತನವೂ, ದುರುಪದೇಶಕರ ಪಂಗಡವೂ ಆಗಿರುತ್ತದೆ. ನೀವು ಇವರ ಬಲೆಗೆ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರವಾಗಿರಬೇಕು.

    ಕರ್ತನನ್ನು ಪ್ರೀತಿಸಿ ಆತನನ್ನು ಯಥಾರ್ಥವಾಗಿ ಹಿಂಬಾಲಿಸಬಯಸುವ ಎಲ್ಲರೊಂದಿಗೆ ತೆರೆದ ಹೃದಯವುಳ್ಳವರಾಗಿರಿ. ಆದರೆ ಅವರು ದೇವರು ತಮಗೆ ಕೊಟ್ಟ ಬೆಳಕಿನ ಪ್ರಕಾರವಾಗಿ ನಡೆಯುತ್ತಿದ್ದರೆ, ಅದು ಅಷ್ಟೇನೂ ಗಂಭೀರವಾದದ್ದಲ್ಲ. ದೇವರು ನಮಗೆ ಕೊಟ್ಟಿರುವ ಬೆಳಕಿನ ಪ್ರಕಾರ ಅವರೂ ನಡೆಯಬೇಕೆಂದು ನಾವು ಪ್ರತಿಪಾದಿಸಬಾರದು.

    ದೇವರ ಎಲ್ಲಾ ಮಕ್ಕಳನ್ನು ಸ್ವೀಕರಿಸುವುದು

    ದೇವರಿಗೆ ಎಷ್ಟು ಮಕ್ಕಳಿದ್ದಾರೋ ಅಷ್ಟೂ ಸಹೋದರ ಸಹೋದರಿಯರು ನಮಗಿರಬೇಕು.

    ದೇವರು ತಾನೇ ಸ್ವೀಕರಿಸಿಕೊಂಡ ಎಲ್ಲರನ್ನೂ ನಾವು ಸ್ವೀಕರಿಸಿಕೊಂಡು ಹೃದಯಪೂರ್ವಕವಾಗಿ ಸ್ವಾಗತಿಸಬೇಕು (ರೋಮಾ. 14:1, 15:7). ಯೇಸು ಯಾರನ್ನಾದರೂ ತನ್ನ ಸಹೋದರನೆಂದು ಕರೆಯಲು ನಾಚಿಕೆಪಡದಿರುವಾಗ ನಾವೂ ನಾಚಿಕೆಪಡಬಾರದು. (ಇಬ್ರಿ. 2:11).

    ಅನ್ಯೋನ್ಯತೆಯ ವಿಷಯದಲ್ಲಿ ವಿಶ್ವಾಸಿಗಳು ಎರಡು ರೀತಿಯ ಅತಿರೇಖಗಳಿಗೆ ಬಲಿಯಾಗಲು ಸಾಧ್ಯ. ಸತ್ಯದ ವಿಷಯದಲ್ಲಿ ಸಲುಗೆಯ ಭಾವನೆಯನ್ನು ತೋರಿ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವುದು ಒಂದು. ಮತ್ತೊಂದು, ಅನ್ಯೋನ್ಯತೆಯನ್ನು ಕಂಡುಕೊಳ್ಳುವುದಕ್ಕೆ ಮುಂಚೆಯೇ ಎಲ್ಲಾ ವಿಷಯಗಳಲ್ಲೂ ಏಕತೆಯಿರಬೇಕೆಂದು ಆಗ್ರಹಿಸುವುದು. ನೀವು ಜ್ಞಾನಿಗಳಾಗಿದ್ದರೆ, ಇವೆರಡೂ ಅತಿರೇಖಗಳಿಂದ ದೂರವಾಗಿರುವಿರಿ.

    ದೇವರ ಸೇವೆಯು ಯಾವ ರೀತಿಯಾಗಿ ಮಾಡಬೇಕೆಂದು ಒಪ್ಪಿಕೊಳ್ಳದವರೊಂದಿಗೆ (ಒಟ್ಟಿಗೆ) ಸೇರಿ ನಮಗೆ ಸೇವೆ ಮಾಡಲಾಗದು ಎಂಬುದು ಸ್ಪಷ್ಟವಾಗಿದೆ. ಒಬ್ಬರೊಂದಿಗೆ ಅನ್ಯೋನ್ಯತೆಯಿಂದಿರುವ ಮುಂಚೆಯೇ, ಅವರೂ ಸಹ ನಾವು ನಂಬಿರುವಂತೆಯೇ, ಉಪದೇಶದ ಅಲ್ಪ ವಿವರಗಳಲ್ಲೂ ನಮ್ಮಂತೆಯೆ ನಂಬಬೇಕೆಂದು ಬಲವಂತ ಮಾಡಬಾರದು. ಹೀಗೆ ನಾವು ಇತರರೊಂದಿಗೆ ಸೇರಿ ಕರ್ತನ ಸೇವೆ ಮಾಡುವುದಕ್ಕೂ ಅವರೊಂದಿಗೆ ಅನ್ಯೋನ್ಯತೆಯಿಂದಿರುವುದಕ್ಕೂ ವ್ಯತ್ಯಾಸವಿದೆ.

    ಹೇಗಿದ್ದರೂ, ನೀವು ನಿಮ್ಮ ಸ್ಥಳದಲ್ಲಿ ಆತ್ಮಿಕ ಮನೆಯಾಗಿರುವಂಥ ಸಭೆಯನ್ನು ಕಂಡುಕೊಂಡು, ನಿಮ್ಮನ್ನು ಅದಕ್ಕೆ ಸಮರ್ಪಿಸಿಕೊಂಡವರಾಗಿರಬೇಕು.

    ಹೊಸ ಒಡಂಬಡಿಕೆಯ ಸಭೆ

    ನಿಮ್ಮ ಸ್ಥಳದಲ್ಲಿ ಎಷ್ಟೋ ಸಭೆಗಳುಇರುವಾಗ, ನೀವು ಇದುವರೆಗೂ ಅರ್ಥ ಮಾಡಿಕೊಂಡಂತೆ, ಹೊಸ ಒಡಬಂಡಿಕೆಗೆ ಬಹು ಸಮೀಪವಾಗಿರುವ ಸಭೆಯನ್ನು ನೀವು ಹುಡುಕಬೇಕು. ನೀವು ಹೊಸ ಒಡಂಬಡಿಕೆಯನ್ನು ಕಾಲಕ್ರಮೇಣವಾಗಿ ಹೆಚ್ಚಿನ ರೀತಿಯಲ್ಲಿ ಅರ್ಥಮಾಡಿಕೊಂಡಾಗ, ಒಂದು ’ಸಭೆಯನ್ನು’ ಬಿಟ್ಟು ದೇವರ ವಾಕ್ಯಕ್ಕೆ ಬಹುವಾಗಿ ಸರಿಬೀಳುವ ಮತ್ತೊಂದನ್ನು ಸೇರಬಯಸಬಹುದು.

    ಆತ್ಮಿಕವಾಗಿ ಬೆಳೆಯುತ್ತಿರುವ ಮತ್ತು ತನ್ನ ಜೀವಿತದಲ್ಲಿ ದೇವರ ವಿಷಯಗಳೇ ಉನ್ನತವಾಗಿದ್ದು , ದೇವರ ದೃಷ್ಟಿಯಲ್ಲಿ ಉತ್ತಮವಾದದ್ದು ಯಾವುದೋ ಅದನ್ನೇ ಆಗಬೇಕೆಂದು ಬಯಸುವ ವ್ಯಕ್ತಿಗೆ ಅಂಥಾ ಭಾವನೆಯು ಸ್ವಾಭಾವಿಕವಾದದ್ದು. ನಿಮ್ಮ ಪ್ರತಿ ಕ್ಷೇತ್ರದಲ್ಲಿಯೂ ದೇವರ ಅತ್ಯುತ್ತಮಕ್ಕಿಂತ ಕಡಿಮೆಯಾಗಿರುವ ಯಾವುದರೊಂದಿಗೂ ನೀವು ನೆಲೆಗೊಳ್ಳಬೇಡಿರಿ. ಆಗ ಮಾತ್ರವೇ ನೀವು ನಿತ್ಯತ್ವದಲ್ಲಿ ದುಃಖಪಡಲಾರಿರಿ.

    ಹೊಸ ಒಡಂಬಡಿಕೆಯ ಸಭೆಗೆ ಯಾವುದೇ ಪ್ರತ್ಯೇಕ ಹೆಸರಿರುವುದಿಲ್ಲ. ಅನ್ಯೋನ್ಯತೆಯಲ್ಲಿರುವ ಜನರು ಪವಿತ್ರಾತ್ಮನಿಂದ ಯೇಸು ಕ್ರಿಸ್ತನ ನಾಮದಲ್ಲಿ ಒಟ್ಟಿಗೆ ಸೇರಿಸಲ್ಪಟ್ಟಿರುವವರೇ -‘ಹೊಸ ಒಡಂಬಡಿಕೆಯ ಸಭೆಯವರು’. ಕರ್ತನಾದ ಯೇಸು ಅಂಥವರ ಒಗ್ಗೂಡುವಿಕೆಯಲ್ಲಿ ಮಾತ್ರ ತಾನಿರುವುದಾಗಿ ವಾಗ್ದಾನ ಮಾಡಿದ್ದಾನೆ (ಮತ್ತಾ.18:20).

    ನೀವು ಭಾಗಿಯಾಗಿರುವ ಸಭೆಯು ಸತ್ಯವೇದವನ್ನು ‘ದೇವರ ವಾಕ್ಯ’ವೆಂತಲೂ ಅದು ಜೀವಿತ ಹಾಗೂ ನಂಬಿಕೆಗೆ ’ಏಕ ಮಾತ್ರ’ ಅಸ್ತಿವಾರವೆಂತಲೂ ಸ್ವೀಕರಿಸುವ ಸಭೆಯಾಗಿರಬೇಕು. ಅನೇಕ ದುರುಪದೇಶಕರ ಗುಂಪುಗಳು, ಸತ್ಯವೇದ ಮಾತ್ರವೇ ತಮ್ಮ ಆಧಾರವೆಂದು ಹಕ್ಕು ಸಾಧಿಸುತ್ತಿದ್ದರೂ, ತಮ್ಮ ನಾಯಕರ ಬರವಣಿಗೆಗಳನ್ನು ಅದರಷ್ಟೇ ಸಮಾನವಾಗಿ ಆಧಾರವನ್ನಾಗಿಸಿ ಬೋಧಿಸುವುದನ್ನು ಆಗಾಗ್ಗೆ ನೋಡಬಹುದು. ನೀವು ಅವರೊಂದಿಗೆ ಅನ್ಯೋನ್ಯವಾಗಿರುವಾಗ, ಅವರು ದೇವರ ವಾಕ್ಯಕ್ಕಿಂತಲೂ ಹೆಚ್ಚಾಗಿ ತಮ್ಮ ನಾಯಕರುಗಳ ಉಪದೇಶಗಳಿಗೆ ಬಂಧಿಗಳಾಗಿರುವುದನ್ನು ನೀವು ಕಾಣುವಿರಿ. ಅವರಲ್ಲಿ ಅನೇಕ ಒಳ್ಳೆಯ ಸಂಗತಿಗಳಿರಬಹುದು. ಆದರೆ ನೀವು ಅವರೊಂದಿಗೆ ಸೇರಿಕೊಂಡರೆ, ಅವರ ದುರುಪದೇಶಕರ ಮನೋಭಾವನೆಗಳು ನಿಮ್ಮನ್ನೂ ಗುಲಾಮತನಕ್ಕೆ ಎಳೆಯುವುದನ್ನು ನೀವು ಬೇಗನೆ ಕಂಡುಕೊಳ್ಳುವಿರಿ.

    ದೇವರ ಸಭೆಯಲ್ಲಿ ಎಲ್ಲಾ ವಿಶ್ವಾಸಿಗಳು ಸಮಾನವಾಗಿ ‘ದೇವರ ಯಾಜಕರು’ ಆಗಿದ್ದಾರೆ. ಯಾಕೆಂದರೆ ದೇವರು ನಮ್ಮೆಲ್ಲರನ್ನು ಯಾಜಕರನ್ನಾಗಿ ಮಾಡಿದ್ದಾರೆ (1 ಪೇತ್ರ 2:9). ಯಾವ ‘ಸಭೆಯಲ್ಲಿ’ ವಿಶೇಷ ವರ್ಗದ ಯಾಜಕರು ಅಥವಾ ‘ಸಭಾಪಾಲಕರು’ ಮಾತ್ರ ದೇವರ ವಾಕ್ಯವನ್ನು ಬೋಧಿಸಲು ಅರ್ಹರು ಎಂಬ ಬೋಧನೆ ಇದೆಯೋ ಅಂಥ ಸಭೆ ದೇವರ ಚಿತ್ತಕ್ಕೆ ವಿರುದ್ಧವಾದುದು.

    ಯಾವಾಗಲೂ (ಒಬ್ಬರಿಗಿಂತಲೂ ಹೆಚ್ಚಾಗಿರುವ) ಹಿರಿಯರ ಕೆ ಯಲ್ಲಿ ಸಭೆಯ ನಾಯಕತ್ವವನ್ನು ದೇವರು ನೇಮಿಸಿದ್ದಾನೆ. ಆದರೆ ಈ ಹಿರಿಯರು ‘ಪೂರ್ಣಕಾಲ ಸೇವಕ’ರಾಗಿರಬೇಕಾದ ಅವಶ್ಯವಿಲ್ಲ (ಅ.ಕೃ. 14:23; ತೀತ. 1:5).

    ಹೊಸ ಒಡಂಬಡಿಕೆಯ ಸಭಾಕೂಟಗಳಲ್ಲಿ, ದೇವರ ವಾಕ್ಯವನ್ನು ಮಾತಾಡುವುದೇ ಪ್ರಾಮುಖ್ಯವಾಗಿರತಕ್ಕದ್ದು. ಎಲ್ಲಾ ವಿಶ್ವಾಸಿಗಳೂ ತಮ್ಮ ಪರಿಪಕ್ವತೆ ಹಾಗು ಆತ್ಮಿಕ ವರಕ್ಕನುಸಾರವಾಗಿ ಅಂಥ ಸಭೆಯಲ್ಲಿ ದೇವರ ವಾಕ್ಯವನ್ನು ಹಂಚಿಕೊಳ್ಳಲು ಸ್ವಾತಂತ್ರವುಳ್ಳವರಾಗಿರುತ್ತಾರೆ.

    ಮಾತಾಡಿದ ವಾಕ್ಯವು ಪವಿತ್ರಾತ್ಮನಿಂದ ಪ್ರೇರಿಸಲ್ಪಟ್ಟದ್ದಾಗಿದ್ದರೆ, ಅದು ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಾಂತ್ವನವನ್ನೂ ಕೊಡುವುದು. ಮತ್ತು ಅಂಥಾ ವಾಕ್ಯವು, ‘ಮನುಷ್ಯರ ಹೃದಯದ ರಹಸ್ಯ’ಗಳನ್ನು ಬಯಲಾಗುವಂತೆ ಮಾಡಿ, ದೇವರೇ ಇದನ್ನು ಮಾತಾಡುತ್ತಿದ್ದಾನೆಂದು ಜನರು ಒಪ್ಪಿಕೊಳ್ಳುವ ರೀತಿಯಲ್ಲಿ ಸಭೆಯನ್ನು ನಡೆಸುವುದು (೧ ಕೊರಿ. 14:3, 24-31).

    ‘ಹೊಸ ಒಡಂಬಡಿಕೆಯ ಸಭೆ’ಯ ಮುಖ್ಯ ಸೇವೆಯು- ‘ಶಿಷ್ಯರನ್ನು ಮಾಡಿ ಅವರು ಯೇಸುವಿನ ಆಜ್ಞೆಗಳನ್ನು ಸಂಪೂರ್ಣವಾಗಿ ಕೆ ಕೊಂಡು ನಡೆಯುವಂತೆ ಅವರಿಗೆ ಉಪದೇಶ ಮಾಡುವುದೇ’ ಆಗಿರುತ್ತದೆ (ಮತ್ತಾ. 28:19,20). ಅಂಥಾ ಸಭೆಯ ಸ್ಪಷ್ಟವಾದ ಗುರುತು - ಅದರ ಸದಸ್ಯರು ಪರಸ್ಪರ ಪ್ರೀತಿಯಿಂದಿರುವುದಾಗಿದೆ. ಇದನ್ನೇ ಯೇಸು ಯೋಹಾನ 13:35 ರಲ್ಲಿ ಹೀಗೆಂದು ತಿಳಿಸಿದನು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು.

    ಎಲ್ಲಿ ವಾಕ್ಯವು ಶಕ್ತಿದಾಯಕವಾಗಿ ಸಾರಲ್ಪಡುತ್ತಿದೆಯೋ, ಎಲ್ಲಿ ದೇವರ ಪ್ರೀತಿಯು ಆಳುತ್ತಿದೆಯೋ, ಎಲ್ಲಿ ಕರ್ತನ ಸನ್ನಿಧಾನವು ಅನುಭವಿಸಲ್ಪಡುತ್ತಿದೆಯೋ ಅಂಥಾ ಸಭೆಯಲ್ಲಿ ನೀವು (ನಿಮ್ಮ ಸ್ಥಳದಲ್ಲಿ) ಭಾಗಿಯಾಗಿರಬೇಕು.

    ಅನ್ಯೋನ್ಯತೆಯ ಪ್ರಾಮುಖ್ಯತೆ

    ನಾವು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಬಯಸಿದರೆ, ಇತರರೊಂದಿಗೆ ಪ್ರೀತಿ ಅನ್ಯೋನ್ಯತೆಯಲ್ಲಿ ಒಟ್ಟಿಗೆ ಜೀವಿಸಲು ಪ್ರಯತ್ನಿಸುವಾಗಲೇ, ನಾವು ನಮ್ಮನ್ನು ಎಷ್ಟೊಂದು ನಿರಾಕರಿಸಬೇಕಾಗಿರುವುದು ಮತ್ತು ಪ್ರತಿದಿನವೂ ಶಿಲುಬೆಯನ್ನು ಹೊತ್ತುಕೊಳ್ಳಬೇಕಾಗಿರುವುದು ಎಂಬುದನ್ನು ಕಂಡುಕೊಳ್ಳುವೆವು.

    ದೇವರ ಮಕ್ಕಳ ಮಧ್ಯದಲ್ಲಿ ಯಾವಾಗಲೂ ವಿಭಜನೆಯನ್ನು ತರಲು ಸ್ಯೆತಾನನು ಕಾರ್ಯನಿರತನಾಗಿದ್ದಾನೆ. ನಾವು ಆತ್ಮಿಕ ಪರಿಪಕ್ವತೆಯುಳ್ಳವರಾಗಿದ್ದರೆ ಅಂಥಾ ವಿಭಜನೆಗಳು ನಮ್ಮ ನಡುವೆಯೂ ಇತರರ ನಡುವೆಯೂ ಬಾರದಂತೆ ತಡೆಗಟ್ಟಲು ಯಾವಾಗಲೂ ಎಚ್ಚರವುಳ್ಳವರಾಗಿರುವೆವು. ಕ್ರಿಸ್ತನ ಶರೀರದಲ್ಲಿ ಅನ್ಯೋನ್ಯತೆಯು ನಾಶವಾದರೆ, ದೇವರಿಗೂ ನಮಗೂ ದೊಡ್ಡ ನಷ್ಟವಾಗುತ್ತದೆ.

    ಸಭೆಯ ಐಕ್ಯತೆಯಲ್ಲಿ ಅತಿಶಯವಾದ ಶಕ್ತಿಯಿದೆ. ಐಕ್ಯವಾಗಿರುವ ಸಭೆಯು ಮಾತ್ರವೇ ಸ್ಯೆತಾನನನ್ನು ಜಯಿಸಲು ಸಾಧ್ಯ. ಯೇಸು ಹೇಳಿದ್ದು, “ಎಲ್ಲಿ ಇಬ್ಬರಾದರೂ ವಿಶ್ವಾಸಿಗಳು ತಮ್ಮ ಆತ್ಮದಲ್ಲಿ ಸಂಪೂರ್ಣವಾಗಿ ಐಕ್ಯಮತದಿಂದಿರುವುದಾದರೆ, ಅವರು ತಂದೆಯನ್ನು ಏನು ಬೇಡಿಕೊಂಡರೂ ಅದು ಅವರಿಗೆ ದೊರಕುವದು.- ಯಾಕಂದರೆ ಅವರು ಪವಿತ್ರಾತ್ಮನಿಂದ ಒಂದಾಗಿದ್ದಾರೆ. ಅಂತಹ ಅನ್ಯೋನ್ಯತೆಯು ಆಕಾಶಮಂಡಲದಲ್ಲಿರುವ ಸ್ಯೆತಾನನ ದಳಗಳನ್ನು, ಭೂಮಿಯ ಮೇಲಿರುವ ಆತನ ಶಕ್ತಿಯನ್ನೂ ಬಂಧಿಸುತ್ತದೆ. ಅವರ ಪ್ರಾರ್ಥನೆಯ ಮೂಲಕ ಅವರು ಸ್ಯೆತಾನನ ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಬಲ್ಲರು.(ಮತ್ತಾಯ 18:18-20 ಮುಕ್ತ ಅನುವಾದ)

    ಈ ಕಾರಣದಿಂದಲೇ ಸ್ಯೆತಾನನು ವಿಶ್ವಾಸಿಗಳ ನಡುವೆ ವಿಭಜನೆಯನ್ನು ತರುತ್ತಾನೆ. ಈ ರೀತಿಯಾಗಿಯೇ ಅವನು ಸಭೆಯೊಳಗೆ ಗುಂಪುಗಳನ್ನೂ ಪಂಗಡಗಳನ್ನೂ ರೂಪಿಸುತ್ತಾನೆ. ಒಂದು ಐಕ್ಯವಾಗಿರುವ ಸಭೆಯು ಸ್ಯೆತಾನನ ರಾಜ್ಯದ ಮೇಲೆ ದಾಳಿ ಮಾಡದಂತೆ ಅವನು ಅದನ್ನು ಭದ್ರಪಡಿಸುತ್ತಾನೆ. ನಾವು ಸ್ಯೆತಾನನ ತಂತ್ರಗಳ ಬಗ್ಗೆ ಎಚ್ಚರವಾಗಿರಬೇಕು ಮತ್ತು ಅವುಗಳ ವಿಷಯವಾಗಿ ಅಜ್ಞಾನಿಗಳಾಗಿರಬಾರದು.

    ಕ್ರಿಸ್ತನ ಭೌತಿಕ ಶರೀರದಲ್ಲಿ ಆತನ ಕೆ ಕಾಲುಗಳು ಒಟ್ಟಾಗಿ ಕೆಲಸ ಮಾಡಲಾಗದಿದ್ದರೆ ಎಂಥಾ ಮಿತಿಯಿರುತಿತ್ತು ಎಂಬುದನ್ನು ಯೋಚಿಸಿರಿ. ಆತನು ದೇವರ ಮಹಿಮೆಯನ್ನು ತಾನು ಈ ಲೋಕಕ್ಕೆ ಪ್ರಕಟಪಡಿಸಿಕೊಂಡಂತೆ, ಆತನಿಗೆ ಪ್ರಕಟಪಡಿಸಲು ಸಾಧ್ಯವಾಗುತ್ತಿರಲಿಲ್ಲ. ವಿಶ್ವಾಸಿಗಳಾದ ನಾವು ವಿಭಜಿತರಾಗಿದ್ದರೆ, ಕ್ರಿಸ್ತನು ತನ್ನ ಆತ್ಮಿಕ ದೇಹವಾಗಿರುವ ‘ಸಭೆ’ಯಲ್ಲಿ ಶಿರಸ್ಸಾಗಿ ಎಷ್ಟೊಂದು ಮಿತಿಯುಳ್ಳವನಾಗಿದ್ದಾನೆ.

    ಇದರಿಂದ ನಾವೂ ಸಹ ನಷ್ಟ ಹೊಂದುತ್ತೇವೆ. ನೀವು ದೇವರ ಒಬ್ಬ ಮಗುವಿನಿಂದ ನಿಮ್ಮನ್ನು ಬೇರ್ಪಡಿಸಿಕೊಂಡವರಾಗಿದ್ದರೆ, ಆ ದೇವರ ಮಗುವಿನಿಂದ ಮಾತ್ರವೇ ನಿಮಗೆ ಬರತಕ್ಕ ದೇವರ ಐಶ್ವರ್ಯವನ್ನು ನೀವು ಕಳೆದುಕೊಳ್ಳುವವರಾಗಿದ್ದೀರಿ. ನೀವು ಕ್ರಿಸ್ತನ ಪ್ರೀತಿಯನ್ನು ದೇವಜನರೆಲ್ಲರೊಂದಿಗೆಮಾತ್ರ ಗ್ರಹಿಸಲು ಸಾಧ್ಯ (ಎಫೆ. 3:17-19).

    (ಕ್ರೆ ಸ್ತ ಅನ್ಯೋನ್ಯತೆಯ ಪ್ರಾಮುಖ್ಯತೆಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಲು, ‘ಕ್ರಿಸ್ತನಲ್ಲಿ ಒಂದು ದೇಹ ’ ಎಂಬ ನನ್ನ ಪುಸ್ತಕವನ್ನು ಓದಿರಿ.)

    ಅಧ್ಯಾಯ 9
    ನನ್ನೊಂದಿಗೆ ತಾಳ್ಮೆಯಿಂದಿರಿ

    "ನನ್ನೊಂದಿಗೆ ತಾಳ್ಮೆಯಿಂದಿರು" ಎಂದು ಒಬ್ಬ ಸೇವಕನು ತನ್ನ ಜೊತೆ-ಸೇವಕನಿಂದ ಕರುಣೆಯನ್ನು ಬೇಡಿಕೊಂಡನು (ಮತ್ತಾ. 18:29). ನಮ್ಮೊಟ್ಟಿಗೆ ಜೀವಿಸುವಂತ ಅನೇಕರಿಂದ ಪ್ರತಿದಿನವೂ ಇದೇ ಕೂಗು ಗೃಹಿಣಿಯರು ಮತ್ತು ತಾಯಂದಿರಾದ ನಮಗೆ ಬರುತ್ತದೆ. ಆದರೆ ಈ ಕೂಗನ್ನು ಕೇಳಿಸಿಕೊಳ್ಳುವುದಕ್ಕೆ ನಮ್ಮಲ್ಲಿ ಇತರರ ಬಗ್ಗೆ ಅನುಕಂಪದ ಆತ್ಮವಿರಬೇಕು. ಯಾಕೆಂದರೆ ಇದು ಬಾಯಿಯಿಂದ ಹೇಳದಿರುವ ಕೂಗಾಗಿದೆ.

    ಬಹುಶಃ ನಮ್ಮ ಮಕ್ಕಳು ಕಲಿಯುವುದರಲ್ಲಿ ಚುರುಕಾಗಿ ಇಲ್ಲದಿರಬಹುದು ಮತ್ತು ಅವರಿಗೆ ಯಾವುದೋ ವಿಷಯವನ್ನು ಕಲಿಸಲು ನಾವು ಪದೇ ಪದೇ ಪ್ರಯತ್ನಿಸುತ್ತಿರಬಹುದು, ಮತ್ತು ಅವರು ಕಲಿಯುತ್ತಿಲ್ಲವೆಂದು ನಮ್ಮ ತಾಳ್ಮೆಯು ಬಹಳವಾಗಿ ಕುಗ್ಗಿರಬಹುದು. "ನಾನು ಕಲಿಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ, ನನ್ನೊಂದಿಗೆ ಸ್ವಲ್ಪ ತಾಳ್ಮೆಯಿಂದಿರು," ಎಂಬ ಸ್ವರವಿಲ್ಲದ ಅವರ ಕೂಗನ್ನು ನಾವು ಕೇಳಿಸಿಕೊಂಡರೆ, ಆಗ ನಾವು ಅವರ ಮೇಲೆ ಸಿಟ್ಟಾಗುವ ಶೋಧನೆಯನ್ನು ಜಯಿಸಲು ಸಾಧ್ಯವಾಗಬಹುದು.

    ಬಹುಶಃ ನಮ್ಮ ಮನೆ ಕೆಲಸದ ಹೆಂಗಸು ತೃಪ್ತಿಕರವಾಗಿ ಕೆಲಸ ಮಾಡದಿರಬಹುದು, ಮತ್ತು ಅವಳಲ್ಲಿ ಸ್ವಚ್ಚತೆ ಇಲ್ಲದಿರಬಹುದು. ಹಾಗಾಗಿ ನಾವು ಆಕೆಯೊಂದಿಗೆ ಕಠಿಣವಾಗಿ ನಡೆದುಕೊಳ್ಳುವ ಶೋಧನೆಯನ್ನು ಎದುರಿಸುತ್ತೇವೆ. ಆದರೆ ಅವಳ ಸ್ವರವಿಲ್ಲದ ಕೂಗು, "ನನ್ನೊಂದಿಗೆ ತಾಳ್ಮೆಯಿಂದಿರಿ, ನನಗೆ ಇನ್ನೊಂದು ಅವಕಾಶ ಕೊಡಿ ಮತ್ತು ನಾನು ನನ್ನನ್ನು ತಿದ್ದಿಕೊಳ್ಳುತ್ತೇನೆ," ಎಂದು ಆಗಿರುತ್ತದೆ - ಮತ್ತು ನಾವು ಇದನ್ನು ತಿಳಿದುಕೊಂಡರೆ, ಆಗ ಸಾತ್ವಿಕತೆಯಿಂದ ಮೃದುವಾಗಿ ನಡೆಯುವ ಒಂದು ಅವಕಾಶ ನಮಗೆ ಸಿಗುತ್ತದೆ.

    ಇಲ್ಲವೇ ನಮ್ಮ ವಯಸ್ಸಾದ ತಂದೆ ತಾಯಿ ಈಗ ಮುದುಕರೂ, ಬಲಹೀನರೂ ಆಗಿದ್ದು, ನಮ್ಮ ಮೇಲೆ ಅವಲಂಬಿತರಾಗಿರಬಹುದು. ಅವರ ಹೃದಯದ ಒಳಗಿನ ನುಡಿಯಲಾರದ ಕೂಗು ಏನೆಂದರೆ, "ನನ್ನೊಂದಿಗೆ ತಾಳ್ಮೆಯಿಂದಿರು". ನಿನಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ, ಆದರೆ ಏನು ಮಾಡಲಿ, ನಿನ್ನ ಹೊರತಾಗಿ ನನಗೆ ಬೇರೆ ಆಶ್ರಯವಿಲ್ಲ." ನಮ್ಮಲ್ಲಿ ಅವರ ಭಾವನೆಗಳನ್ನು ಅರಿತುಕೊಳ್ಳುವ ಚುರುಕುತನವಿದ್ದರೆ, ನಾವು ಅವರ ಹೃದಯದ ಕೂಗಿಗೆ ಕಿವಿಗೊಟ್ಟು, ಅವರ ಆತ್ಮಗೌರವಕ್ಕೆ ಹಾನಿ ಮಾಡದೆ ಮತ್ತು ಅವರು ನಮ್ಮನ್ನೇ ಆಶ್ರಯಿಸಿದ್ದಾರೆಂಬ ಭಾವನೆ ಅವರಿಗೆ ಬಾರದಂತೆ ಎಚ್ಚರವಹಿಸಿ, ಅವರಿಗೆ ಅವಶ್ಯವಾದ ಸಹಾಯವನ್ನು ಒದಗಿಸುತ್ತೇವೆ.

    "ತಾಳ್ಮೆಯು ಪರಿಪೂರ್ಣತೆಗೆ ಬರಲಿ; ಆಗ ನೀನು ಶಿಕ್ಷಿತನೂ ಪರಿಪೂರ್ಣನೂ ಆಗುವೆ, ಮತ್ತು ನಿನಗೆ ಯಾವುದರಲ್ಲೂ ಕಡಿಮೆಯಿರುವುದಿಲ್ಲ"

    ಬಹುಶಃ ಸಭೆಯಲ್ಲೂ ನಮಗೆ ಇತರ ಸಹೋದರಿಯರ ನಡತೆ ಒಂದು ಶೋಧನೆಯಾಗಿರಬಹುದು. ಆ ಸಹೋದರಿಯರ ಹೃದಯದಲ್ಲಿ ಒಂದು ಕೂಗು ಇದೆ, "ನನಗೆ ಸ್ವಲ್ಪ ತಾಳ್ಮೆಯನ್ನು ತೋರಿಸಿರಿ, ನನ್ನಲ್ಲಿ ಇನ್ನೂ ಜ್ಞಾನದ ದೊಡ್ಡ ಕೊರತೆಯಿದೆ." ನಾವು ಇದನ್ನು ಅರ್ಥ ಮಾಡಿಕೊಂಡರೆ, ಆಗ ಅವರು ಸಹ ನಮ್ಮಂತೆಯೇ ಪರಿಪೂರ್ಣತೆಗಾಗಿ ತವಕಿಸುತ್ತಿದ್ದಾರೆ, ಎಂಬುದನ್ನು ನಾವು ಗ್ರಹಿಸುತ್ತೇವೆ.

    ಇಂತಹ ಸಂದರ್ಭಗಳಲ್ಲಿ ಆ ಕರುಣೆಯಿಲ್ಲದ ಸೇವಕನಂತೆ ನಡೆದುಕೊಳ್ಳಲು ನಮ್ಮೆಲ್ಲರ ಸಹಜ ಮಾನವ ಗುಣವು ನಮ್ಮನ್ನು ಪ್ರೇರೇಪಿಸುತ್ತದೆ. ಇಂತಹ ಕ್ಷಣದಲ್ಲಿ ನಾವು ದೇವರಿಂದ ಎಷ್ಟು ಕ್ಷಮಿಸಲ್ಪಟ್ಟಿದ್ದೇವೆ ಮತ್ತು ಇತರರು ನಮ್ಮ ಸ್ವಂತ ಮೂರ್ಖತನದ ತಪ್ಪುಗಳನ್ನು ಸಹಿಸಿಕೊಳ್ಳಲು ಎಷ್ಟು ತಾಳ್ಮೆ ತೋರಿಸಿದ್ದಾರೆಂದು ನಾವು ಮತ್ತೊಮ್ಮೆ ಜ್ಞಾಪಿಸಿಕೊಳ್ಳಬೇಕಿದೆ.

    ಆದ್ದರಿಂದ ನಮ್ಮ ಜೊತೆ-ಸೇವಕರು, ಯೌವನಸ್ಥರು ಮತ್ತು ವಯಸ್ಸಾದವರು ನಮ್ಮಿಂದ ತಾಳ್ಮೆಗಾಗಿ ಕೂಗಿ ಬೇಡುತ್ತಿರುವ ಧ್ವನಿಯನ್ನು ಕೇಳಿಸಿಕೊಳ್ಳಲು ನಮ್ಮ ಆತ್ಮಿಕ ಕಿವಿಗಳು ಯಾವಾಗಲೂ ಚುರುಕಾಗಿ ಇರಬೇಕು.

    "ತಾಳ್ಮೆಯು ಪರಿಪೂರ್ಣತೆಗೆ ಬರಲಿ; ಈ ರೀತಿಯಾಗಿ ನೀನು ಶಿಕ್ಷಿತನೂ ಪರಿಪೂರ್ಣನೂ ಆಗುವೆ, ಮತ್ತು ನಿನಗೆ ಯಾವುದರಲ್ಲೂ ಕಡಿಮೆಯಿರುವುದಿಲ್ಲ"(ಯಾಕೋಬ. 1:4).

    ಅಧ್ಯಾಯ 10
    ಈ ಯುಗದ ಸಮಾಪ್ತಿ

    ಮರಣಾನಂತರದ ಜೀವಿತ ಹಾಗೂ ಭವಿಷ್ಯಕ್ಕಾಗಿ ಇರುವ ದೇವರ ಯೋಜನೆಯ ಕುರಿತಾಗಿ ಹಳೆ ಒಡಂಬಡಿಕೆಯಲ್ಲಿ ಸ್ಪಷ್ಟವಾದ ತಿಳುವಳಿಕೆಯಿರಲಿಲ್ಲ. ಆದರೆ ಯೇಸು ಇವೆರಡು ವಿಷಯಗಳ ಕುರಿತಾಗಿ ಬಹು ಸ್ಪಷ್ಟವಾಗಿ ಉಪದೇಶಿಸಿದನು. ಈ ವಿಷಯಗಳ ಕುರಿತಾಗಿರುವ ಸತ್ಯವನ್ನು ನಾವು ತಿಳಿದಿರುವುದು ಒಳ್ಳೆಯದು.

    ಮರಣದ ನಂತರ ಏನು1

    ಯೇಸು ಮರಣವನ್ನು ಜಯಿಸಿರುವುದರಿಂದ ಕ್ರಿಸ್ತನ ಶಿಷ್ಯನಿಗೆ ಮರಣದ ಭಯವು ಇರುವುದಿಲ್ಲ. ಯಾಕೆಂದರೆ ಮರಣವು ಸೋಲಿಸಲ್ಪಟ್ಟ ವ್ಯರಿಯು. ನಾವು ಎಂದಿಗೂ ಮರಣ ಭಯವಿಲ್ಲದವರಾಗಿರಲು, ಯೇಸು ಮರಣಹೊಂದಿ ಸೆ ತಾನನ ಶಕ್ತಿಯನ್ನು ಅಡಗಿಸಿಬಿಟ್ಟಿದ್ದಾನೆಂದು ಸತ್ಯವೇದವು ಹೇಳುತ್ತದೆ (ಇಬ್ರಿ. 2:14,15). ಈಗ ಮರಣದ ಬೀಗದಕೆ ಯೇಸುವಿನ ಕೆ ಯಲ್ಲಿದೆ (ಪ್ರಕ. 1:18). ಈಗ ಆತನು ಮಾತ್ರವೇ ಮರಣದ ಬಾಗಿಲನ್ನು ತನ್ನ ಶಿಷ್ಯರಿಗಾಗಿ ತೆರೆಯಲು ಸಾಧ್ಯ. ಸ್ಯೆತಾನನು ಅವರನ್ನು ಮುಟ್ಟಲು ಸಾಧ್ಯವಿಲ್ಲ.

    ಒಬ್ಬ ಮನುಷ್ಯನು ಸತ್ತಾಗ ಸಂಭವಿಸುವುದೇನು1 ಯೇಸು ಐಶ್ವರ್ಯವಂತನ ಹಾಗೂ ಲಾಜರನ ವಿಷಯವಾಗಿ ಮಾತಾಡಿದಾಗ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕೊಟ್ಟನು. ನಾವು ಮುಂದುವರಿಯುವುದಕ್ಕೆ ಮುಂಚೆ ನೀವು ಈಗಲೇ ಲೂಕ. 16:19 ರಿಂದ 31 ವಚನಗಳನ್ನು ಓದುವುದು ಒಳ್ಳೆಯದು....

    ಇದೊಂದು ಸಾಮ್ಯವಲ್ಲ - ಯಾಕೆಂದರೆ ಯೇಸು ಇದರಂತೆ ಯಾವ ಸಾಮ್ಯದಲ್ಲಿಯೂ ಮನುಷ್ಯನ ಹೆಸರನ್ನು ಉಪಯೋಗಿಸಲಿಲ್ಲ. ಐಶ್ವರ್ಯವಂತನೂ ಲಾಜರನೂ ಇಸ್ರಾಯೇಲಿನಲ್ಲಿ ಜೀವಿಸಿದ್ದ ನಿಜವಾದ ವ್ಯಕ್ತಿಗಳು.

    ಸತ್ತವರು ಎರಡು ಸ್ಥಳಕ್ಕೆ ಮಾತ್ರ ಹೋಗುವರೆಂದು ಯೇಸು ಈ ಭಾಗದಲ್ಲಿ ಸ್ಪಷ್ಟಪಡಿಸುತ್ತಾನೆ. ಒಂದು ಅಬ್ರಹಾಮನ ಎದೆ ಎಂದು ಕರೆಯಲ್ಪಡುವ, ಸಾಂತ್ವನಪಡೆಯುವ ಸ್ಥಳವಾಗಿರುವ ಪರದೆ ಸು(ಪರಲೋಕ). ಮತ್ತೊಂದು ಸಂಕಟ ಹಾಗೂ ಪೀಡಿಸುವಿಕೆಯ ಸ್ಥಳವಾಗಿರುವ ನರಕ. ಒಬ್ಬ ವ್ಯಕ್ತಿಯು ಸತ್ತ ಕೂಡಲೇ, ಅವನ ದೇಹವು ಹೂಳಿಡುವುದಕ್ಕೆ ಮುಂಚೆಯೇ ಅವನ ಪ್ರಾಣವು ತಕ್ಷಣವೇ ಇವೆರಡು ಸ್ಥಳಗಳಲ್ಲಿ ಒಂದಕ್ಕೆ ಸೇರುವುದು. ಮತ್ತು ಅವನಿಗೆ ತನ್ನ ಸುತ್ತಮುತ್ತಲಿನ ಹೊಸ ಸ್ಥಳದ ಕುರಿತಾಗಿ ಎಚ್ಚರವಿರುವುದು. ಅವನಿಗೆ ದೇಹವಿಲ್ಲದಿದ್ದರೂ ಸಾಂತ್ವನ ಇಲ್ಲವೆ ನೋವಿನ ಕುರಿತಾಗಿ ಪ್ರಜ್ಞೆಯುಳ್ಳವನಾಗಿರುವನು.

    ಮನುಷ್ಯನು ಆತ್ಮ, ಪ್ರಾಣ ಹಾಗು ಶರೀರ ಈ ಮೂರು ಭಾಗಗಳಿಂದ ರಚಿಸಲ್ಪಟ್ಟಿದ್ದಾನೆ. (1 ಥೆಸ 5:23). ಮರಣದ ಸಮಯದಲ್ಲಿ ಪ್ರಾಣ ಹಾಗು ಆತ್ಮವು ದೇಹದಿಂದ ಪ್ರತ್ಯೇಕಿಸಲ್ಪಟ್ಟು ಪರದೆ ಸು ಇಲ್ಲವೆ ನರಕಕ್ಕೆ ಹೋಗುತ್ತದೆ.

    ಯೇಸು ಶಿಲುಬೆಯಲ್ಲಿ ತೂಗಾಡುತ್ತಿರುವಾಗ, ಮಾನಸಾಂತರ ಪಟ್ಟ ಆ ದುಷ್ಕರ್ಮಿಯೂ ಆ ದಿನವೇ ಆತನ ಸಂಗಡ ಪರದೆ ಸಿನಲ್ಲಿರುವುದಾಗಿ ಹೇಳಿದನು. ಯೇಸು ಮತ್ತು ಆ ದುಷ್ಕರ್ಮಿಯ ಆತ್ಮಗಳು ಅವರ ದೇಹಗಳನ್ನು ಬಿಟ್ಟ ಕೂಡಲೇ ಪರದೆ ಸಿಗೆ ಸೇರಿದವು. ಯೇಸು ತನ್ನ ಮರಣಾನಂತರ, ’ಭೂಗರ್ಭದಲ್ಲಿ’ ಮೂರು ರಾತ್ರಿ ಹಾಗೂ ಮೂರು ಹಗಲುಗಳಿರುವುದಾಗಿ ಹೇಳಿದ್ದನು (ಮತ್ತಾ. 12:40). ಪರದೆ ಸು ಆ ಕಾಲದಲ್ಲಿ ಭೂಗರ್ಭದಲ್ಲಿತ್ತು ಎಂದು ನಾವು ಇದರಿಂದ ತಿಳಿಯುತ್ತೇವೆ. ಆದರೆ ಕ್ರಿಸ್ತನು ಪುನರುತ್ಥಾನವಾದಾಗ’‘ಭೂಮಿಯ ಅಧೋ ಭಾಗಕ್ಕೆ’ ಇಳಿದು ಬಹು ಜನರನ್ನು ಸೆರೆಹಿಡಿದುಕೊಂಡು ತನ್ನ ಸ್ಥಾನಕ್ಕೆ ಏರಿದನೆಂದು’ ಹೇಳಲ್ಪಟ್ಟಿದೆ (ಎಫೆ. 4:8,9). ಆತನು ಪರದೆ ಸನ್ನೂ ಅದರಲ್ಲಿದ್ದ ಎಲ್ಲಾ ಆತ್ಮಗಳನ್ನೂ ದೇವರ ಸಾನಿಧ್ಯವಾಗಿರುವ ಮೂರನೆಯ ಸ್ವರ್ಗಕ್ಕೆ ಸಾಗಿಸಿದ್ದಾನೆ.

    2ನೇ ಕೊರಿಂಥ. 12 ರಲ್ಲಿ,ನಾವು ವಚನ 2 ಹಾಗೂ ವಚನ 4 ಇವೆರಡನ್ನು ಹೋಲಿಸುವಾಗ ಪರದೆ ಸು ಈಗ ಮೂರನೆಯ ಆಕಾಶದಲ್ಲಿ ನೆಲೆಯಾಗಿದೆ ಎಂದು ತಿಳಿಯುತ್ತೇವೆ. ಈ ಸ್ಥಳಕ್ಕೆ ಯೇಸುವಿನ ಶಿಷ್ಯನು ಸತ್ತಕೂಡಲೇ ಹೋಗುವವನಾಗಿದ್ದಾನೆ. (ಫಿಲಿ. 1:23).

    ಕ್ರಿಸ್ತನ ಬರುವಿಕೆಯ ಸೂಚನೆಗಳು

    ಕ್ರಿಸ್ತನು ಭೂಮಿಗೆ ಹಿಂದಿರುಗುವುದಕ್ಕೆ ಮುಂಚೆ ನಡೆಯಲಿರುವ ಕೆಲವು ಘಟನೆಗಳ ಕುರಿತಾಗಿ ಸತ್ಯವೇದವು ನಮಗೆ ಹೇಳುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:

  • 1. ಯುದ್ಧಗಳು, ಬರಗಳು, ಭೂಕಂಪಗಳು (ಮತ್ತಾ. 24:7).ಇವು ಭೂಮಿಯಲ್ಲಿ ಎಲ್ಲಾ ಕಾಲಗಳಲ್ಲಿಯೂ ಸಂಭವಿಸುತ್ತಲೇ ಇವೆ. ಆದರೆ ಎರಡನೆಯ ಪ್ರಪಂಚದ ಮಹಾಯುದ್ಧದ ತರುವಾಯ (1939-1945) ಅವುಗಳು ಬಹಳವಾಗಿ ಹೆಚ್ಚುತ್ತಿವೆ.
  • 2. ಇದ್ದಕ್ಕಿದ್ದಂತೆ ಜಗತ್ತಿನಲ್ಲಿ ಜ್ಞಾನವು ಹೆಚ್ಚಾಗುವುದು ಮತ್ತು ಲೋಕದಾದ್ಯಂತ ಪ್ರಯಾಣಿಸುವಿಕೆಯೂ ಹೆಚ್ಚಾಗುವುದು. (ದಾನಿ. 12:4). ಕಳೆದ ಐವತ್ತು ವರ್ಷಗಳಿಂದ ಹಿಂದೆಂದೂ ಇಲ್ಲದಷ್ಟು ಮಟ್ಟಿಗೆ ಜ್ಞಾನದಲ್ಲಿಯೂ ಪ್ರಯಾಣದಲ್ಲಿಯೂ ಮಹಾ ವೃದ್ಧಿಯಾಗಿವೆ.
  • 3. ಮನುಷ್ಯರು ಭೋಗಗಳನ್ನೇ ಪ್ರೀತಿಸುವವರಾಗಿರುವರು (2 ತಿಮೊ. 3:4). ಅನೆ ತಿಕತೆಯು ನಮ್ಮ ಕಾಲದಲ್ಲಿ ವಿಶೇಷವಾದ ಕೆಡುಕಾಗಿದೆ.ಟಿ.ವಿ.ಯಲ್ಲಿನ ಅಶ್ಲೀಲ ಸಿನೆಮಾ ಹಾಗು ವಿಡಿಯೋ ಟೇಪುಗಳೆಲ್ಲವೂ ಅನೆ ತಿಕತೆಯ ಹೆಚ್ಚಳಕ್ಕೆ ಸ್ಯೆತಾನನ ಉದ್ದೇಶವನ್ನು ಸಾಧಿಸುತ್ತಿವೆ.
  • 4. ಮನುಷ್ಯರು ಅಹಂಕಾರಿಗಳೂ, ದೂಷಕರೂ, ತಂದೆ-ತಾಯಿಗಳಿಗೆ ಅವಿಧೇಯರೂ ಆಗಿರುವರು. (2 ತಿಮೊ. 3:2-4).ಇಂದು ಮನೆಗಳಲ್ಲಿಯೂ, ಶಾಲೆಗಳಲ್ಲಿಯೂ, ಕಾಲೇಜುಗಳಲ್ಲಿಯೂ, ಕಾರ್ಖಾನೆಗಳಲ್ಲಿಯೂ ದಂಗೆಯ/ತಿರುಗಿಬೀಳುವಿಕೆಯ ಆತ್ಮವು ನಮ್ಮ ಸುತ್ತಲಿರುವುದನ್ನು ಕಾಣುತ್ತೇವೆ.
  • 5. ವಿಶ್ವಾಸಿಗಳು ನಂಬಿಕೆಯಿಂದ ಬಿದ್ದು ಹೋಗುವರು (1 ತಿಮೊ. 4:1) ದುರುಪದೇಶಕರ ಪಂಗಡಗಳ ವಂಚನೆಗೆ ಇಂದು ಎಷ್ಟೋ ವಿಶ್ವಾಸಿಗಳು ತುತ್ತಾಗುವುದನ್ನೂ ನಾವು ಬಹಳವಾಗಿ ಕಾಣುತ್ತಿದ್ದೇವೆ.
  • 6. ಇಸ್ರೇಲ್ ರಾಷ್ಟ್ರದ ಪುನಃ ಹುಟ್ಟುವಿಕೆ. ಅಂಜೂರದ ಮರವು ಚಿಗುರುವುದು ಇಸ್ರೇಲಿಗೆ ಸಾಂಕೇತಿಕವಾಗಿದೆ (ಲೂಕ. 21:29-32).ಕ್ರಿ.ಶ. 70 ರಿಂದ ಯೊಹೂದ್ಯರು ಲೋಕದ ಎಲ್ಲಾ ಕಡೆಗಳಲ್ಲಿಯೂ ಚದುರಿಸಲ್ಪಟ್ಟಿದ್ದರು. ಈ ಅಂಜೂರದ ಮರವು ಸುಮಾರು 19 ಶತಮಾನಗಳ ವರೆಗೆ ಬತ್ತಿ ಹೋಗಿತ್ತು. ಆದರೆ ೧೯೪೮ ರ ಮೇ ತಿಂಗಳಲ್ಲಿ ಇಸ್ರೇಲ್ ರಾಷ್ಟ್ರವು ಪುನಃ ಹುಟ್ಟಿತು. “ತಕ್ಕ ಸಮಯವು ಪೂರೆ ಸಲ್ಪಡುವ ತನಕ ಯೆರುಸಲೇಮ್ ಪಟ್ಟಣವು ಅನ್ಯ ಜನಾಂಗಗಳ ಸ್ವಾಧೀನವಾಗಿರುವುದು ಎಂದು ಯೇಸು ಕ್ರಿಸ್ತನು ಹೇಳಿದ್ದನು (ಲೂಕ. 21:24). 1967 ಜೂನ್ ತಿಂಗಳು, ಇಸ್ರೇಲ್, ಯೆರುಸಲೇಮ್ ಪಟ್ಟಣವನ್ನು ಇಪ್ಪತ್ತು ಶತಮಾನಗಳಲ್ಲಿಯೇ ಪ್ರಥಮಬಾರಿಯಾಗಿ ಸ್ವಾಧೀನಮಾಡಿಕೊಂಡಿತು.
  • ಜಗತ್ತಿನಲ್ಲಿ ಈಗ ಸಂಭವಿಸುತ್ತಿರುವುದನ್ನು ನೋಡುವುದು ಬಹಳ ಕುತೂಹಲಕಾರಿಯಾಗಿದೆ. ಎಲ್ಲಾ ಘಟನೆಗಳು ಕ್ರಿಸ್ತನ ಬರುವಿಕೆಯನ್ನೇ ಸೂಚಿಸುತ್ತಿವೆ.

    ಪ್ರಥಮ ಪುನರುತ್ಧಾನವೂ ಕ್ರಿಸ್ತನ ನ್ಯಾಯಾಸನವೂ

    ಕ್ರಿಸ್ತನು ಬಂದಾಗ, ರೆಪ್ಪೆ ಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಎಂದೂ ನಾಶವಾಗದ ಹಾಗೂ ಸಾಯದ ಹೊಸ ದೇಹಗಳನ್ನು ನಾವು ಪಡೆದುಕೊಳ್ಳುವೆವು (1 ಕೊರಿ. 15:51-53). ಯೇಸು ಪುನರುತ್ಥಾನವಾದ ಮೇಲೆ ಆತನಿಗಿದ್ದ ದೇಹದಂತೆಯೇ ಹೊಸ ದೇಹಗಳು ನಮಗಿರುವುವು (ಫಿಲಿ. 3:20-21). ಕ್ರಿಸ್ತನಲ್ಲಿ ಸತ್ತವರು ಸಹ ತಮ್ಮ ಸಮಾಧಿಗಳಿಂದ ಹೊಸ ದೇಹಗಳೊಂದಿಗೆ ಎದ್ದು ಬರುವರು. ಆದರೂ ಜೀವದಿಂದಿರುವ ಯೇಸುವಿನ ಶಿಷ್ಯರು ಕರ್ತನನ್ನು ಸಂಧಿಸಲು ಆಕಾಶಕ್ಕೆ ಎತ್ತಲ್ಪಡುವರು. (1 ಥೆಸ. 4:13-17).

    ಅನಂತರ ಕ್ರಿಸ್ತನು ತನ್ನ ನ್ಯಾಯಾಸನವನ್ನು ಸ್ಥಾಪಿಸುವನು. ಆಗ ನಾವು ಭೂಲೋಕದಲ್ಲಿನ ನಮ್ಮ ನಂಬಿಗಸ್ತಿಕೆಯ ಜೀವಿತಕ್ಕಾಗಿ ವೆ ಯಕ್ತಿಕವಾಗಿ ನ್ಯಾಯತೀರ್ಪನ್ನು ಪಡೆದವರಾಗಿ ಪ್ರತಿಫಲವನ್ನು ಹೊಂದುವೆವು.

    ಯಾರ‍್ಯಾರು ನಂಬಿಗಸ್ತರಾಗಿದ್ದಾರೋ ಅವರಿಗಾಗಿ ಆ ದಿನದಲ್ಲಿ ಕಿರೀಟಗಳು ಬಹುಮಾನವಾಗಿ ಕೊಡಲ್ಪಡುವವು ಎಂದು ಸತ್ಯವೇದವು ಹೇಳುತ್ತದೆ. ಆ ಸಮಯದಲ್ಲಿ ಕರ್ತನು ತನ್ನ ಶಿಷ್ಯರಿಗಾಗಿ ಕೊಡುವ ಕಿರೀಟಗಳ ವಿವರವನ್ನು ನೀವು 2 ಕೊರಿಂಥ. 5:10; 1 ಕೊರಿಂಥ. 3:11-15, 4:5; 2 ತಿಮೊಥೆ. 4:8 ಹಾಗು 1 ಪೇತ್ರ. 5:4ರಲ್ಲಿ ಓದಬಹುದು.

    “ಆ ದಿನದಲ್ಲಿ ಮೊದಲಿನವರಾಗಿರುವ ಅನೇಕರು ಕಡೆಯವರೂ, ಕಡೆಯವರಾಗಿರುವ ಅನೇಕರು ಮೊದಲಿನವರೂ ಆಗಿರುವರು ಎಂದು ಓದುತ್ತೇವೆ. (ಮತ್ತಾ. 19:30). ಭೂಲೋಕದಲ್ಲಿ ಬಹು ಆತ್ಮಿಕರಾಗಿ ಕಾಣಿಸಿಕೊಂಡ ಅನೇಕರು ಅಂದು ದೇವರ ದೃಷ್ಟಿಯಲ್ಲಿ ನಂಬಿಗಸ್ತರಲ್ಲದವರಾಗಿ ಕಾಣಿಸುವರು. ನಾವು ಉನ್ನತರೆಂದು ಭಾವಿಸದ ಇತರರು ಅಂದು ದೇವರ ದೃಷ್ಟಿಯಲ್ಲಿ ನಂಬಿಗಸ್ತರಾಗಿ ಕಾಣಿಸಲ್ಪಡುವರು. ಆ ದಿನದಲ್ಲಿ ಅಪನಂಬಿಗಸ್ತನಾಗಿದ್ದ, ಲೋಕ ಪ್ರಸಿದ್ಧನಾದ ಬೋಧಕನಿಗಿಂತಲೂ, ಅನಕ್ಷರಸ್ಥ- ನಂಬಿಗಸ್ತಳಾದ ವಿಧವೆಯು ಪ್ರಾಮುಖ್ಯತೆಯನ್ನು ಹೊಂದುವಳು!

    ಆ ದಿನದಲ್ಲಿ ಮನುಷ್ಯರು ಬೆಲೆಯುಳ್ಳದ್ದೆಂದು ಎಣಿಸುವ ಹಣ ಹಾಗೂ ಪ್ರಸಿದ್ಧತೆ (ಸ್ಥಾನ-ಮಾನ) ಮುಂತಾದ ಅನೇಕ ಸಂಗತಿಗಳು ದೇವರ ಮುಂದೆ ಬೆಲೆಯಿಲ್ಲದ್ದಾಗಿರುವುದನ್ನು ನಾವು ಕಂಡು ಹಿಡಿಯುವೆವು; ಮತ್ತು ಮನುಷ್ಯರು ಬೆಲೆ ಕೊಡದಂಥ ಸದ್ಗುಣಗಳಾದ -ಪರಿಶುದ್ಧತೆ, ದೀನತೆ, ನಿಸ್ವಾರ್ಥತೆ, ಕರುಣೆ ಹಾಗು ಒಳ್ಳೆಯತನ ಮುಂತಾದ ಗುಣಗಳು ದೇವರ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದ್ದೆಂದು ತಿಳಿಯುವೆವು.

    ಆಗ ಸತ್ಯವೇದವು ಕರೆಯುವ ‘ಯಜ್ಞದ ಕುರಿಯಾದಾತನ ವಿವಾಹವು’ ಅಂದರೆ, ನಂಬಿಗಸ್ತರಾಗಿ ತಮ್ಮನ್ನು ನಿರಾಕರಿಸಿ ಶಿಲುಬೆಯನ್ನು ದಿನಾಲು ಹೊತ್ತುಕೊಂಡು ಆತನ ಶಿಷ್ಯರಾಗಿ ಭೂಮಿಯಲ್ಲಿ ಆತನನ್ನು ಹಿಂಬಾಲಿಸಿದವರು ಆತನಿಗೆ ಮದುಮಗಳಾಗಿ ಯೇಸು ಕ್ರಿಸ್ತನೊಂದಿಗೆ ಆತ್ಮಿಕವಾಗಿ ಮದುವೆಯಾಗುವರು (ಪ್ರಕ. 19:8-10). ಆ ದಿನದಲ್ಲಿ ನಾವು, ‘ನಮ್ಮ ಕರ್ತನಿಗಾಗಿಯೂ ಆತನ ಸುವಾರ್ತೆಗಾಗಿಯೂ ಅನುಭವಿಸಿದ - ಅಪಾರ್ಥತೆ, ಪರಿಹಾಸ್ಯ, ನಾಚಿಕೆ, ಹಿಂಸೆ, ಹಾಗೂ ಮರಣವು ಸಾರ್ಥಕವಾಯಿತು’ ಎಂದು ನೋಡುವೆವು.

    ಸಾವಿರ ವರ್ಷಗಳ ಆಳ್ವಿಕೆ

    ಏದೇನ್ ತೋಟದಲ್ಲಿನ ಪರಿಸ್ಥಿತಿಯು ಭೊಲೋಕವೆಲ್ಲಾ ವ್ಯಾಪಿಸಿ ಸಾವಿರ ವರ್ಷಗಳ ಸಮಾಧಾನದ ಆಳ್ವಿಕೆಯು ಪ್ರಾರಂಭವಾಗುವುದು. ಆಗ ಸಿಂಹವು ಕುರಿಯೊಂದಿಗೆ ಸಮಾಧಾನವಾಗಿ ಮಲಗಿರುವುದು ಮತ್ತು ಮಗುವು, ಸರ್ಪದೊಂದಿಗೆ ಭಯಪಡದೆ ಆಟವಾಡುತ್ತಿರುವುದು (ಯೆಶಾ. 11:6-9).

    ಆಗ ಯೇಸು ಯೆರೂಸಲೇಮಿನ ಅರಸನಾಗಿ ಇಡೀ ಭೂಮಿಯನ್ನಾಳುವನು (ಜೆಕ. 14:9-21). ಆಗ ಭೂಮಿಯ ಕಡೆಗೆ ಸೆ ತಾನನಿಗೆ ಪ್ರವೇಶವಿಲ್ಲದೆ ಆತನು ಬಂಧನದಲ್ಲಿಡಲ್ಪಡುವನು. ಆ ಸಾವಿರ ವರ್ಷಗಳ ಅಂತ್ಯದಲ್ಲಿ, ಭೂಮಿಯಲ್ಲಿರುವ ಪರಿವರ್ತನೆ ಹೊಂದದವರು ಪರೀಕ್ಷಿಸಲ್ಪಡುವಂತೆ ಆ ವರ್ಷಗಳ ತರುವಾಯ ಸೆ ತಾನನಿಗೆ ಪುನಃ ಸ್ವಲ್ಪ ಕಾಲ ಬಿಡುಗಡೆಯಾಗುವುದು. ಪುನಃ ಜನರ ಮಹಾ ಸಮೂಹವು ಸೆ ತಾನನನ್ನು ಹಿಂಬಾಲಿಸುವದು. ಕ್ರಿಸ್ತನು ೧೦೦೦ ವರ್ಷ ಸಮಾಧಾನದ ಆಳ್ವಿಕೆಯನ್ನು ಮಾಡಿದ್ದರೂ, ಆ ಜನರು ಕ್ರಿಸ್ತನು ತಮ್ಮ ಮೇಲೆ ಆಳುವುದನ್ನು ಇಷ್ಟಪಡುತ್ತಾಯಿಲ್ಲ ಎಂಬುದನ್ನು ದೇವರು ಈ ರೀತಿಯಾಗಿ ದೇವದೂತರಿಗೂ ಮನುಷ್ಯರಿಗೂ ಪ್ರದರ್ಶಿಸುವನು. ಮನುಷ್ಯನ ಅಂಧತ್ವವೂ, ಹಟಮಾರಿತನವೂ ದುರ್ಮಾರ್ಗತನವೂ ಹೀಗಿರುವುವು. ಆದರೆ ದೇವರು ಆ ತಿರುಗಿಬೀಳುವ ಸಮೂಹದ ಮೇಲೆ ನ್ಯಾಯತೀರ್ಪನ್ನು ಕೊಡುವನು. ಮತ್ತು ನರಕದಲ್ಲಿ ವಿಶಾಲವಾಗಿರುವ ಬೆಂಕಿಯ ಕೆರೆಯಲ್ಲಿ ಸೆ ತಾನನು ದೊಬ್ಬಲ್ಪಡುವನು (ಪ್ರಕ. 20:7-10).

    ಎರಡನೆಯ ಪುನರುತ್ಥಾನ ಮತ್ತು ಅಂತಿಮ ನ್ಯಾಯತೀರ್ಪು

    ತರುವಾಯ ದೇವರು ಎಲ್ಲಾ ಅವಿಶ್ವಾಸಿಗಳಿಗೆ ತೀರ್ಪು ಮಾಡುವುದಕ್ಕಾಗಿ ತನ್ನ ನ್ಯಾಯಾಸನವನ್ನು ಸ್ಥಾಪಿಸುವನು. ಇದು ಎರಡನೆಯ ಪುನರುತ್ಥಾನವು. ಸತ್ತವರು ತಮ್ಮ ಸಮಾಧಿಗಳಿಂದ ಎಬ್ಬಿಸಲ್ಪಡುವರು. ಅವಿಶ್ವಾಸಿಗಳು ದೇವರ ಮುಂದೆ ನಿಂತು ತೀರ್ಪು ಪಡೆಯುವುದಕ್ಕಾಗಿ, ಅವರೆಲ್ಲರ ಆತ್ಮಗಳು ನರಕದಿಂದ ಅವರವರ ದೇಹಗಳಿಗೆ ಹಿಂದಿರುಗುವುವು. ಅವರವರ ಕೃತ್ಯಗಳ ಪ್ರಕಾರ ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವಂತೆಯೇ ಅವರಿಗೆ ತೀರ್ಪಾಗುವುದು (ಪ್ರಕ. 20:12).

    ‘ನಮ್ಮ ಜ್ಞಾಪಕವು’- ಭೂಲೋಕದ ಜೀವಿತದಲ್ಲಿ ನಾವು ಯೋಚಿಸಿದ, ಹೇಳಿದ ಹಾಗು ಮಾಡಿದ ಪ್ರತಿಯೊಂದನ್ನೂ, ನಮ್ಮ ಉದ್ದೇಶ ಹಾಗು ಮನೋಭಾವವನ್ನೂ ದಾಖಲೆ ಮಾಡುವ ನಂಬಿಗಸ್ತ ವಿಡಿಯೋ ಟೇಪಿನಂತಿದೆ. ಆ ದಿನದಲ್ಲಿ ಇಡೀ ಲೋಕವೇ ಈ ಅವಿಶ್ವಾಸಿಗಳ ಗುಪ್ತ ಜೀವಿತವನ್ನು ಕಾಣುವಂತೆ ದೇವರು ವಿಡಿಯೋ ಟೇಪನ್ನು ನಡೆಸುವನು(ಮತ್ತೆ ತೋರಿಸುವನು). ಇದೇ ತಾನು ಅವಿಶ್ವಾಸಿಗಳನ್ನು ನಿತ್ಯತ್ವದ ನ್ಯಾಯತೀರ್ಪಿಗೆ ಒಳಪಡಿಸುವುದರಲ್ಲಿ ಸಂಪೂರ್ಣನೂ, ನೀತಿವಂತನೂ ಆಗಿದ್ದಾನೆಂದು ಪ್ರತಿಯೊಬ್ಬರೂ ತಿಳಿಯುವಂತೆ ದೇವರು ತೋರಿಸುವ ವಿಧಾನವಾಗಿರುವುದು.

    ಯಾರ‍್ಯಾರ ಹೆಸರುಗಳು ಜೀವಬಾದ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ ಅವರು, ಭೂಲೋಕದಲ್ಲಿ ತಾವು ಸೇವೆ ಮಾಡಿದ ಸೆ ತಾನನೊಂದಿಗೆ ಬೆಂಕಿಯ ಕೆರೆಗೆ ದೊಬ್ಬಲ್ಪಡುವರು (ಪ್ರಕ. 20:15).

    ಸಮಯದ ಅಂತ್ಯ

    ತರುವಾಯ ಸಮಯವು ಮುಕ್ತಾಯವಾಗಿ, ನಿತ್ಯತ್ವವು ಪ್ರಾರಂಭವಾಗುವುದು. ವಿಮೋಚಿಸಲ್ಪಟ್ಟ ಸ್ತ್ರೀ -ಪುರುಷರು ನೂತನ ಆಕಾಶ ಹಾಗು ನೂತನ ಭೂಮಂಡಲವನ್ನು ಪ್ರವೇಶಿಸುವರು ಮತ್ತು ಕ್ರಿಸ್ತನ ಮದುಮಗಳು ತನ್ನ ಸರ್ವ ಪ್ರಭೆಯೊಂದಿಗೆ ಪ್ರಕಾಶಿಸುವಳು.(ಪ್ರಕಟನೆ 21).

    ದೇವರು ಪುನಃ ಉಂಟು ಮಾಡುವ ಪರಿಪೂರ್ಣ ಆಕಾಶ ಹಾಗು ಭೂಮಿಯಿಂದ ಸೆ ತಾನನೂ ಎಲ್ಲಾ ಅವಿಶ್ವಾಸಿಗಳೂ ತೆಗೆದು ಹಾಕಲ್ಪಡುವರು. ಆ ಮಹಿಮೆಯುಳ್ಳ ಹೊಸ ವಿಶ್ವದಲ್ಲಿ ಪಾಪವು ತನ್ನ ಅಸಹ್ಯ ತಲೆಯನ್ನು ಎತ್ತುವುದೇ ಇಲ್ಲ ಮತ್ತು ನಮ್ಮ ಮಾಂಸದಲ್ಲಿ (ಶರೀರದಲ್ಲಿ) ಆಶೆಗಳೇ ಇರುವುದಿಲ್ಲ. ನಿತ್ಯತ್ವಕ್ಕಾಗಿ ದೇವರ ಚಿತ್ತವನ್ನೇ ಆನಂದಪೂರ್ವಕವಾಗಿ ಆರಿಸಿಕೊಂಡ ಜನರಿಂದ ಪರಲೋಕವು ತುಂಬಿರುವುದು.

    ಜಯಶಾಲಿಯಾಗಲು ಕರೆ

    ಪೇತ್ರನು ಹೇಳಿದ್ದು, “ಇವೆಲ್ಲವುಗಳು (ಅಂದರೆ, ಈಗಿನ ಭೂಮ್ಯಾಕಾಶಗಳು) ಹೀಗೆ ಲಯವಾಗಿ ಹೋಗುವುದರಿಂದ...ನಾವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ...(2 ಪೇತ್ರ 3:11,12).

    ಈ ಕಡೆಯ ದಿನಗಳಿಗಾಗಿ ಇರುವ ಆತ್ಮನ ಸಂದೇಶವು ಈ ಒಂದೇ ಮಾತಿನಲ್ಲಿ ಅಡಕವಾಗಿದೆ - “ಜಯ ಹೊಂದು (ನೋಡಿ ಪ್ರಕ. 2:7,11,17,26; 3:5,12,21; 21:7).

    ಅವಿಶ್ವಾಸಿಗಳಿಗಾಗಿ ಈ ದಿನಗಳ ಪ್ರಸಂಗಗಳಲ್ಲಿ ಕಾಣಸಿಗದ ಬಹು ಪ್ರಮುಖ ಅಂಶವಾದ ‘ಮಾನಸಾಂತರ’ಎಂಬ ವಿಷಯದೊಂದಿಗೆ ನಾವು ಈ ಪುಸ್ತಕವನ್ನು ಆರಂಭಿಸಿದೆವು.

    ವಿಶ್ವಾಸಿಗಳಿಗಾಗಿ ಇಂದಿನ ಪ್ರಸಂಗಗಳಲ್ಲಿ ಕಾಣಸಿಗದ ಬಹು ಪ್ರಮುಖ ಅಂಶವಾದ ‘ಜಯಶಾಲಿಯಾಗು’ಎಂಬ ಮಾತಿನೊಂದಿಗೆ ಈ ಪುಸ್ತಕವನ್ನು ಅಂತ್ಯಗೊಳಿಸುತ್ತೇವೆ.

    ಮನುಷ್ಯನು ಪಾಪದಲ್ಲಿ ಬಿದ್ದಂದಿನಿಂದ ದೇವರು ಅವನಿಗೆ ನೀಡುತ್ತಿರುವ ಕರೆಯು ಜಯಶಾಲಿಯಾಗಿರಬೇಕೆಂಬುದೇ. ದೇವರು ಕಾಯಿನನಿಗೆ, ಪಾಪವು ನಿನ್ನನ್ನು ಹಿಡಿಯಬೇಕೆಂದು (ಹೃದಯದ) ಬಾಗಿಲಲ್ಲಿ ಹೊಂಚಿಹಾಕಿಕೊಂಡಿರುವುದು; ಆದರೆ ನೀನು ಅದನ್ನು ಜಯಿಸಬೇಕುಎಂದು ಹೇಳಿದನು. (ಆದಿ. 4:7). ಸತ್ಯವೇದದ ಕಡೆಯ ಪುಸ್ತಕದಲ್ಲಿಯೂ ಆ ಕರೆಯು ಪುನರಾವರ್ತಿಸಲ್ಪಟ್ಟಿದೆ.“ಜಯಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು, ಅವನು ನನಗೆ ಮಗನಾಗಿರುವನು (ಪ್ರಕ. 21:7).

    ದೇವರ ಉದ್ದೇಶಗಳನ್ನು ನೇರವೇರಿಸುವವರಾಗಿ, ಆತನೊಂದಿಗೆ ಅನ್ಯೋನ್ಯತೆಯಲ್ಲಿ ಜೀವಿಸುವ ಜೀವಿತದ ಮಹಿಮೆಯನ್ನು ಈ ಭೂಲೋಕದಲ್ಲಿ ಯಾವುದಕ್ಕೂ ಹೋಲಿಸಲಾಗದು. ಯೇಸು ಈ ಭೂಮಿಯಲ್ಲಿ ಜೀವಿಸಿದ ಜೀವಿತವು ಬಹು ಅದ್ಭುತಕರವಾದದ್ದೂ, ಬಹು ಮಹಿಮೆಯುಳ್ಳದ್ದೂ ಮತ್ತು ಯಾವ ಮನುಷ್ಯನೂ ಜೀವಿಸದಷ್ಟು ಸಂತೋಷಕರವಾದದ್ದೂ ಆಗಿದೆ. ಆತನು ಲೋಕ ಪ್ರಸಿದ್ದನಾಗಲಿ, ಐಶ್ವರ್ಯವಂತನಾಗಲಿ ಆಗಿರಲಿಲ್ಲ. ಆದರೆ ಆತನು ದೇವರ ಮಹಿಮೆಯನ್ನು ತನ್ನ ಜೀವಿತದ ಮೂಲಕ ಪ್ರಕಾಶಪಡಿಸಿದನು.

    ಸುವಾರ್ತೆಯ ಒಳ್ಳೆ ಸುದ್ಧಿ ಏನೆಂದರೆ, ನೀವು ಸಹ ಆ ಮಹಿಮೆಯನ್ನು ಪ್ರಕಾಶಿಸಲು ಸಾಧ್ಯ. ನಿಮ್ಮ ಭೂಲೋಕದ ಎಲ್ಲಾ ದಿನಗಳಲ್ಲಿಯೂ ನೀವು ಜಯಶಾಲಿಯಾಗಿರಲು ಸಾಧ್ಯ. ಹಾಗಾದರೆ ಎಲ್ಲ ಸಮಯಗಳಲ್ಲಿಯೂ ನಿತ್ಯತ್ವದ ಮೌಲ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೀವಿಸುವ ‘ನಂಬಿಗಸ್ತ’ರಾಗಿ ನೀವು ಏಕೆ ಇರಬಾರದು1 ಆಮೆನ್.