ಸ್ತ್ರೀಯೇ, ನೀನೇಕೆ ಅಳುತ್ತಿರುವೆ?

ಬರೆದಿರುವವರು :   ಡಾ!! ಅನ್ನಿ ಪೂನೆನ್ ಭಾಗಗಳು :   ಶಿಷ್ಯಂದಿರಿಗೆ
    Download Formats:

ಅಧ್ಯಾಯ 0
ಈ ಪುಸ್ತಕ ಮತ್ತು ನೀವು

ತನ್ನನ್ನು ರೂಪಿಸಿದಾತನಿಂದ ಸ್ತ್ರೀಯು ಸೂಕ್ಷ್ಮ ಗುಣದಿಂದ ಆಶೀರ್ವದಿಸಲ್ಪಟ್ಟಿದ್ದಾಳೆ. ಆಕೆಗೆ ಬಹಳ ಆಳವಾದ ವೇದನೆಯನ್ನು ತಾಳುವಷ್ಟು ಸಾಮರ್ಥ್ಯ ಹಾಗೂ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಅಸಾಧಾರಣ ಗ್ರಹಣ ಶಕ್ತಿ ಇದೆ. ಹೀಗೆ ಈಕೆಯು ಇತರರ ನೋವನ್ನು ಕನಿಕರದಿಂದಲೂ ಮತ್ತು ಆಸಕ್ತಿ ವಹಿಸುತ್ತಲೂ ಉಪಶಮನ ಮಾಡಬಲ್ಲಳು.

ಆದರೆ ಈ ಸೂಕ್ಷ್ಮತೆಯು ಸಹ ಆಕೆಯ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಇತರರಿಗೆ ಆಗುವಂತೆ ಆಕೆಗೂ ಸಹ ದುಃಖಕರ ಸಂಗತಿಗಳು ಬರುತ್ತವೆ. ಮತ್ತು ಈಗ ಆಕೆಗೆ ಸಹಾಯದ ಅವಶ್ಯಕತೆ ಒದಗಿದೆ.

ಕಣ್ಣೀರಿನ ಸಮುದ್ರದಲ್ಲಿ ಅವರ ದುಃಖ ಮುಳುಗಿಹೋಗುತ್ತದೆಯೋಎಂಬಂತೆ ಕೆಲವು ಸ್ತ್ರೀಯರು ವಾರಗಟ್ಟಲೆ ಅಳುತ್ತಾರೆ. ಇನ್ನೂ ಕೆಲವರು ಅಂತರಂಗದಲ್ಲೇ ಅತ್ತು ತಮ್ಮ ದುಃಖದ ಭಾರದಿಂದ ಕುಂದಿಹೋಗುತ್ತಾರೆ. ಅನೇಕ ಸ್ತ್ರೀಯರು ತಮ್ಮ ಸಮಸ್ಯೆ ಪರಿಹಾರವಾದ ನಂತರವೂ ಆ ಉದ್ವೇಗಕರ ಗಾಯದ ಕಲೆಗಳನ್ನು ಮರೆಯುವದಿಲ್ಲ.

ಆದರೆ ನಮ್ಮನ್ನು ಆಳವಾಗಿ ಪ್ರೀತಿಸುವ ಸಾರ್ವಭೌಮ ದೇವರು ಯಾವ ಉದ್ದೇಶಕ್ಕಾಗಿ ದುಃಖ ಮತ್ತು ಕಷ್ಟಗಳನ್ನು ನಮ್ಮ ಜೀವಿತಗಳಲ್ಲಿ ಅನುಮತಿಸಿದ್ದಾನೋ ಅದು ಒಳ್ಳೇಯ ಉದ್ದೇಶಕ್ಕಾಗಿ ಪರಿವರ್ತಿಸಬಹುದು. ಕಷ್ಟಗಳು ನಮ್ಮ ನಡತೆಯನ್ನು ರೂಪಿಸುತ್ತವೆ. ಒಬ್ಬ ಸ್ತ್ರೀಯು ತನ್ನ ದುಃಖಗಳ ನಡುವೆ ದೇವರಿಂದ ಕಲಿತ್ತಿದ್ದರ ನಿಮಿತ್ತ ಒಂದು ಗಂಧದ ಮರವು ತನ್ನಲ್ಲಿರುವ ಸುವಾಸನೆಯನ್ನು ತನ್ನನ್ನು ಕಡಿಯುವ ಕೊಡಲಿಗೆ ಕೊಡುವಂತೆ ತನಗೆ ಕೇಡು ಮಾಡಿದ ಅನೇಕರಿಗೆ ಆಶೀರ್ವಾದವಾಗಿರಬಹುದು.

ದೇವ ಮಹಿಳೆಯಾಗಲು, ಒಬ್ಬಳು ಅನೇಕ ಕಷ್ಟಗಳನ್ನು ಎದುರಿಸಲು ಸಿದ್ಧವಿರಬೇಕು.

ಆದರೆ ಆ ಕಷ್ಟಗಳು ನಮ್ಮನ್ನು ಪೂರ್ಣವಾಗಿ ಮುಳುಗಿಸಲು ಬಿಡಬಾರದು.

ನನ್ನ ಅನೇಕ ಸ್ನೇಹಿತರು ಬಹಳ ಆಳವಾದ ದು:ಖಗಳಲ್ಲಿ ಮತ್ತು ವೇದನೆಗಳಲ್ಲಿ ಹಾದು ಹೋಗಿದ್ದಾರೆ. ಕೆಲವು ಪರಿಸ್ಥಿತಿಗಳಲ್ಲಿ ಅವರ ಸಂಕಟಗಳ ಆಳವನ್ನು ನಾನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಅವರ ಕಷ್ಟಗಳನ್ನು ’ಕೇಳುವ ಕಿವಿಗಳಿಂದ ಕೇಳಿಸಿಕೊಳ್ಳುವುದು’ ಅವರ ಜೊತೆ ಮಾತನಾಡುವುದು, ಅವರಿಗೆ ಬರೆಯುವುದು ಮತ್ತು ಅವರಿಗೆ ಸ್ನೇಹಿತಳಾಗಿರುವುದು ನನ್ನನ್ನು ಅಪಾರವಾಗಿ ಅಭಿವೃದ್ಧಿ ಪಡಿಸಿದೆ. ಸಂಕಟಗಳನ್ನು ಸರಿಯಾಗಿ ನಾವು ನಿರ್ವಹಿಸಿದರೆ ಉತ್ತಮ ವ್ಯಕ್ತಿಗಳಾಗಿರುತ್ತೇವೆ ಎಂಬುದನ್ನು ನಾನು ಕಂಡುಕೊಂಡೆ. ಸಂಕಟಗಳ ಶಾಲೆಯಲ್ಲಿ ನಾವು ಅದ್ವೀತಿಯ ವಿದ್ಯಾಭ್ಯಾಸವನ್ನು ಹೊಂದುತ್ತೇವೆ. ನಡತೆಯಲ್ಲಿ ಕ್ರಿಸ್ತನ ಸ್ವಭಾವವನ್ನು ಹೊಂದುವುದೇ ಅಂತ್ಯದ ಬಿರುದು.

ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು ,(ಯೋಬ 23:10).

ಆದರೆ ಬಂಗಾರವನ್ನು ಶುದ್ಡೀಕರಿಸಿದ ಬೆಂಕಿಯು ಮಣ್ಣನ್ನು ಸಹ ಗಟ್ಟಿ ಮಾಡುತ್ತದೆ. ಒಬ್ಬ ಸ್ತ್ರೀಯು ಸಹ ತನ್ನ ಸಂಕಟಗಳಿಂದ ಕಠಿಣವಾಗಿ, ಇತರರ ಮತ್ತು ದೇವರ ವಿರುದ್ಧ ಅಂತ್ಯವಿಲ್ಲದ ದೂರುಗಳಿಂದ ತನ್ನ ಜೀವಿತವನ್ನು ಜೀವಿಸಬಹುದು!

ಬಹು ಮಟ್ಟಿಗೆ ನಮ್ಮ ಎಲ್ಲಾ ಕಷ್ಟಗಳು ಮತ್ತು ಸಂಕಟಗಳು ನಮ್ಮ ಹತೋಟಿ ಇಲ್ಲದೆ ಸಂಭವಿಸುವ ಘಟನೆಗಳು. ಆದರೆ ಕರ್ತನು ಅದನ್ನು ನಮ್ಮ ಲಾಭಕ್ಕಾಗಿ ಬದಲಾಯಿಸಿ ನಮ್ಮೊಳಗೆ ಯಾವುದೋ ಒಳ್ಳೆಯದು ಸಂಭವಿಸುವಂತೆ ಮಾಡುತ್ತಾನೆ. (ರೋಮ 8:28). ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತದೆ ಎಂದು ನಮಗೆ ಗೊತ್ತಿದೆ.

ಪುನುರುತ್ಥಾನದ ಬೆಳಗ್ಗೆ ಮಗ್ದಲದ ಮರಿಯಳು ಆತನ ಸಮಾಧಿಯ ಹತ್ತಿರ ಅಳುತ್ತಿರುವಾಗ ಯೇಸುವು ಆಕೆಯನ್ನು ಸಂಧಿಸಿದಂತೆಯೇ, ಈ ದಿನ ಸ್ತ್ರೀಯರಾದ ನಮ್ಮನ್ನು ಸಂಧಿಸುತ್ತಾನೆ. ನಮ್ಮನ್ನು ಸಹ ಆತನು ಇದೇ ಪ್ರಶ್ನೆಯನ್ನು ಕೇಳುತ್ತಾನೆ: ಸ್ತ್ರೀಯೇ ನೀನು ಯಾಕೆ ಅಳುತ್ತಿರುವೆ?’

”ನಮಗೆ ಸಂಭವಿಸುವಂತದ್ದು ಪ್ರತಿಯೊಂದು ಆತನಿಗೆ ಗೊತ್ತಿದೆ” (ಯೋಬ.23:10 ಸರಳ ಭಾಷಾಂತರ). ಆತನು ತಿಳುವಳಿಕೆ ಇಲ್ಲದವನಲ್ಲ.

”ನೀನು ಯಾರನ್ನು ಹುಡುಕುತ್ತಿರುವೆ?” ಎಂಬುದಾಗಿ ಆತನು ನಿಮ್ಮನ್ನು ಕೇಳುತ್ತಾನೆ.

ನಮ್ಮ ಉತ್ತರವೇನಾಗಿರಬಹುದು. ನಾವು ಯಥಾರ್ಥವಾಗಿ ”ಕರ್ತನೇ ನಿನ್ನನ್ನೇ ನನ್ನ ಕಷ್ಟಗಳ ಮಧ್ಯೆ ಹುಡುಕುತ್ತಿದ್ದೇನೆ. ನಿನ್ನ ಮುಖವನ್ನು ಮಾತ್ರ ನಾನು ನನ್ನ ಕಣ್ಣೀರಿನ ಮೂಲಕ ನೋಡಲು ಇಚ್ಛಿಸುತ್ತೇನೆ”. ಎಂಬುದಾಗಿ ಹೇಳಲು ಸಾಧ್ಯವೇ?

ಜನರಿಂದ ನಮಗೆ ಸಿಗುವ ಆದರಣೆ ಸಾಲದಾಗಿದೆ. ಅದರ ಬದಲಾಗಿ ನಾವು ಯೇಸುವನ್ನು ನೋಡೋಣ. ಆತನು ಶಿಲುಬೆಯ ಮೇಲೆ ತೂಗುತ್ತಿರುವಾಗ, ಅಳುತ್ತಿದ್ದ ಆತನ ತಾಯಿ ಸಹ ಆತನಿಂದ ಆದರಣೆ ಪಡೆದಳು. ಆಕೆಗೆ ಒಂದು ಮನೆಯನ್ನು (ಆಶ್ರಯ) ಸಿದ್ಧ ಮಾಡಿ ಆಕೆಯನ್ನು ನೋಡಿಕೊಳ್ಳಲು ಯೋಹಾನನಿಗೆ ಹೇಳಿದನು.

ಆನಿ ಝ್ಯಾಕ್ ಪೂನನ್

ಅಧ್ಯಾಯ 1
ದೇವರು ನಿನ್ನ ತಂದೆ

ಅಧ್ಯಾಯ ಒಂದು

ದೇವರು ನಿನ್ನ ತಂದೆ

ನಾನು, ನನ್ನ ತಂದೆಯೂ ನಿಮ್ಮ ತಂದೆಯೂ ...ಆಗಿರುವಾತನ ಬಳಿಗೆ ಏರಿಹೋಗುತ್ತೇನೆ (ಯೋಹಾನ 20:17).

ನಾನು ಡಾಕ್ಟರಾಗಿ ಕೆಲಸ ಮಾಡುತ್ತಿದ್ದಾಗ ಮಗುವು ಹೆಣ್ಣಾಗಿದ್ದಲ್ಲಿ ಆ ಮಗುವನ್ನು ಆಸ್ಪತ್ರೆಯಲ್ಲೇ ತೊರೆದುಬಿಟ್ಟು ಹೋಗುತ್ತಿದ್ದ ಅನೇಕ ಸ್ತ್ರೀಯರನ್ನು ನಾನು ಕಂಡಿದ್ದೇ. ಆ ತಾಯಂದಿರು ಆಸ್ಪತ್ರೆಯ ಹಣವನ್ನು ಕಟ್ಟದೆ ಮರೆಯಾಗಿ ಹೊರಟು ಹೋಗುತ್ತಿದ್ದರು. ಅವರು ಬಡವರು; ಮತ್ತು ಹೆಣ್ಣು ಮಕ್ಕಳನ್ನು ಹಡೆದು, ಆ ಮಗುವು ತಮ್ಮ ಜೀವನವಿಡೀ ಹೊರೆಯಾಗಿರುತ್ತದೆಂದು ತಿಳಿದು ಮನಗುಂದಿದವರಾಗಿರುತ್ತಿದ್ದರು. ಭಾರತದಲ್ಲಿ ದುಷ್ಟ ವರದಕ್ಷಿಣೆಯ ಪದ್ಧತಿ ಅನೇಕ ಸಮಸ್ಯೆಗಳನ್ನುಂಟು ಮಾಡುತ್ತದೆ; ಮುಖ್ಯವಾಗಿ ನಮ್ಮ ದೇಶದ ಎಲ್ಲಾ ಭಾಗಗಳಲ್ಲಿರುವ ಬಡ ಹುಡುಗಿಯರಿಗೆ. ಆ ತಾಯಂದಿರು, ಅವರ ಹೆಣ್ಣು ಮಕ್ಕಳನ್ನು ತಮ್ಮ ಹಳ್ಳಿಗೆ ಮತ್ತೆ ತೆಗೆದುಕೊಂಡು ಹೋಗುವ ಬದಲು, ಒಂದು ಕ್ರಿಸ್ತೀಯ ಆಸ್ಪತ್ರೆಯಲ್ಲಾಗಲಿ ಅಥವಾ ಅನಾಥ ಆಶ್ರಮಗಳಲ್ಲಾಗಲಿ ಬಿಟ್ಟು ಹೋದರೆ, ಮುಂದೆ ಉತ್ತಮ ಜೀವಿತಕ್ಕೆ ಮಾರ್ಗವಾಗುತ್ತೆ ಎಂಬದಾಗಿ ತಿಳಿದಿದ್ದರು. ಅನಾಥಾಶ್ರಮದಲ್ಲಿ ಒಂದು ವೇಳೆ ಒಬ್ಬ ಶ್ರೀಮಂತ ವ್ಯಕ್ತಿ ನಮ್ಮ ಮಗುವನ್ನು ದತ್ತು ತೆಗೆದುಕೊಳ್ಳಬಹುದು ಮತ್ತು ಕ್ರಿಸ್ತೀಯ ಅನಾಥಾಶ್ರಮಗಳಲ್ಲಿ ತಮ್ಮ ಮಕ್ಕಳು ಪುರುಷರಿಂದ ದುರಾಚಾರಕ್ಕೆ ಒಳಪಡುವದು ಬಹಳ ಕಡಿಮೆ ಎಂದು ತಿಳಿದಿದ್ದರು.

ನನ್ನ ಶಸ್ತ್ರ ಚಿಕಿತ್ಸೆಯ ವಾರ್ಡ್‌ನಲ್ಲಿ ಒಬ್ಬ ಸುಂದರವಾದ, ಹೆಸರಿಲ್ಲದ, ಎಂದೂ ನಗದ, ಎಂದೂ ಮಾತಾಡದ, ಎಂದೂ ಅಳದ, ತಿನ್ನಲು ಬೇಡವೆನ್ನುವ ಎರಡು ವರ್ಷದ ಹುಡುಗಿ ಇದ್ದಳು. ಆಕೆ ಸಮಾಜ ಸೇವೆ ಮಾಡುವವರಿಗೆ ಆಸ್ಪತ್ರೆಯ ಬಾಗಿಲಿನಲ್ಲಿ ಸಿಕ್ಕಿದ್ದಳು. ಆ ಹುಡುಗಿ ನೋಡಲು ಬುದ್ದಿವಂತೆಯಾಗಿದ್ದಳು. ಅವಳ ಕಣ್ಣುಗಳಲ್ಲಿ ನೋಡುವಾಗ ವ್ಯಥೆ ತುಂಬಿತ್ತು. ಆಕೆಯು ಈ ಭೂಲೋಕದ ತನ್ನ ಸಂಕ್ಷಿಪ್ತ ಜೀವಿತದಲ್ಲಿ ಎಂಥಾ ಜಿಗುಪ್ಸೆಯನ್ನು ಅನುಭವಿಸಿರಬಹುದು ಎಂಬುದಾಗಿ ತಿಳಿಯಬಹುದು. ಆ ವಾರ್ಡಿನಲ್ಲಿ ಕೆಲಸಮಾಡುವ ನಾವೆಲ್ಲರೂ ಆಕೆಯನ್ನು ಪ್ರೀತಿಸಿದೆವು. ಸಾಧಾರಣವಾಗಿ ಇಂಥ ಸಣ್ಣ ಹುಡುಗಿಯನ್ನು ಕ್ರಿಸ್ತೀಯ ಅನಾಥಾಶ್ರಮಕ್ಕೆ ಕಳುಹಿಸಲಾಗುತ್ತಿತ್ತು. ಇದು ನನ್ನ ರೋಗಿಯಾಗಿದ್ದದರಿಂದ ಆಕೆಯು ಗುಣವಾದಾಗ ನಾನು ಮತ್ತು ಕೆಲವು ಕ್ರೈಸ್ತ ಸ್ನೇಹಿತರು ಚೆನ್ನಾಗಿ ತಿಳಿದಿರುವ ಒಂದು ಕ್ರಿಸ್ತೀಯ ಅನಾಥಾಶ್ರಮಕ್ಕೆ ಆಕೆಯನ್ನು ಕಳುಹಿಸಲು ವ್ಯವಸ್ಥೆ ಮಾಡಿದೆವು.

ಆ ವರ್ಷಗಳಲ್ಲಿ ಕೆಲವೊಂದು ಸಾರಿ ನಾನು ಆಕೆಯ ಬಗ್ಗೆ ವಿಚಾರಿಸುತ್ತಿದ್ದೆ, ಮತ್ತು ಆಕೆಗಾಗಿ ಆಗಾಗ ಪ್ರಾರ್ಥಿಸಿದೆ. ಮೂವತ್ತು ವರ್ಷಗಳು ಕಳೆದ ನಂತರ ಒಂದು ದಿನ ಆಕೆಯನ್ನು ನಾನು ಸಂಧಿಸಿದೆ. ಈಗ ಆಕೆಗೆ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ. ಆದರೆ ಮೊಟ್ಟ ಮೊದಲು ಆಕೆ ನನ್ನು ಕೇಳಿದ ಪ್ರಶ್ನೆ: ನನ್ನ ತಂದೆ ತಾಯಿ ಯಾರು? ಎಂಬುದಾಗಿ..

ಆ ಮೂವತ್ತು ವರ್ಷಗಳಲ್ಲಿ ಈ ಪ್ರಶ್ನೆಯು ಆಕೆಯಲ್ಲಿ ಪದೇ ಪದೇ ಸುಳಿದಾಡುತಿತ್ತು. ಆಕೆಯ ಹೃದಯದಲ್ಲಿ ಶೂನ್ಯತೆ ಇತ್ತು. ಅದು ತಂದೆ ಮತ್ತು ತಾಯಿಯ ಪ್ರೀತಿಗಾಗಿ ಹಾತೊರೆಯುತ್ತಿತ್ತು. ಆದರೆ ಅನಾಥಾಶ್ರಮದಲ್ಲಿ ಅದು ಆಕೆಗೆ ಎಂದಿಗೂ ಸಿಗದ ಸಂಗತಿಯಾಗಿತ್ತು.

ಒಬ್ಬ ಸ್ತ್ರೀಗೆ ಬೇಕಾದ ಎಲ್ಲವೂ ಅಂದರೆ, ಒಳ್ಳೆಯ ಗಂಡ, ಮಕ್ಕಳು, ವಿದ್ಯಾಬ್ಯಾಸ ಮತ್ತು ಕೆಲಸವೂ ಸಹ ಇತ್ತು. ಆದರೆ ಆಕೆಯ ಹೃದಯದಲ್ಲಿ ಈ ನೋವು ಇನ್ನೂ ಇದ್ದ ಕಾರಣ ನನ್ನನ್ನು ನೋಡಿದ ತಕ್ಷಣ ಆಕೆ ಅಳುವಂತೆ ಮಾಡಿತು.

ನನಗೆ ತಿಳಿಯದ ಕಾರಣ ದುರಾದೃಷ್ಟದಿಂದ ಆಕೆಯ ತಂದೆ ತಾಯಿ ಯಾರೆಂಬುದನ್ನು ನಾನು ಆಕೆಗೆ ಹೇಳಲು ಆಗಲಿಲ್ಲ. ಪರಲೋಕದ ಪ್ರೀತಿಯ ತಂದೆ, ಯಾವುದೇ ಲೌಕೀಕ ತಂದೆ- ತಾಯಿಗಿಂತ ಹೆಚ್ಚು ಎಂಬುದಾಗಿ ಆಕೆಗೆ ನಾನು ಹೇಳಿದೆ. ಆಕೆ ಮಗುವಾಗಿದ್ದಾಗ ಆಕೆಯನ್ನು ಬಿಟ್ಟುಹೋದ ತಂದೆ ತಾಯಿಯನ್ನು ಆಕೆ ಕ್ಷಮಿಸುವಷ್ಟರ ಮಟ್ಟಿಗೆ ಆಕೆ ಬರಲು ಸಾಧ್ಯವಾಗಲಿಲ್ಲ. ತಿರಸ್ಕಾರ ಮನೋಭಾವನೆಯು ಆಕೆಯ ಮನಸ್ಸನ್ನು ಹಾಳುಮಾಡುತ್ತಿರುವದನ್ನು ನಾನು ಕಂಡೆ.

ಇನ್ನೂ ಕೆಲವು ಹುಡುಗಿಯರಿಗೆ ತಂದೆತಾಯಿಗಳು ಇದ್ದರೂ ಸಹ ಅವರು ಬಯಸುವಂತಹ ಪ್ರೀತಿ ಮತ್ತು ಪೋಷಣೆಯನ್ನು ಹೊಂದದೆ ಹೋಗಿದ್ದಾರೆ. ಈ ಹುಡುಗಿಯರು ಈ ದುಷ್ಟ ಮತ್ತು ಕಠಿಣ ಪ್ರಪಂಚದಲ್ಲಿ ಅಸಂತೋಷ, ಒಂಟಿತನ ಮತ್ತು ಅಭದ್ರತೆಯಿಂದ ಬೆಳೆದರು.

ಆನಂತರ ಇನ್ನೂ ಕೆಲ ಹುಡುಗಿಯರು ಒಡೆದ ಕುಟುಂಬಗಳಿಂದ ಮತ್ತು ಮದುವೆಯಾಗದ ತಾಯಿಗೆ ಹುಟ್ಟಿರುವ ಹೆಣ್ಣು ಮಕ್ಕಳು ಸಹ ಇಲ್ಲಿದ್ದರು. ಅನೇಕನೇಕ ಹೆಣ್ಣು ಮಕ್ಕಳು ಇಂತಹ ಅನಾಹುತಗಳನ್ನು ಎದುರಿಸಿ ತಮ್ಮ ತಂದೆ ತಾಯಿಗಳು ತಮ್ಮನ್ನು ಅರ್ಥಮಾಡಿಕೊಳ್ಳಲಾರರು ಎಂಬುದಾಗಿ ನೆನೆಸುತ್ತಾರೆ.

ಅನೇಕ ಹೆಣ್ಣು ಮಕ್ಕಳು ಇಂತಹ ದುಃಖಕರವಾದ ಹಿನ್ನೆಲೆಗಳಿಂದ ಬಂದಿದ್ದಾರೆ. ಆದರೆ ಇವರೆಲ್ಲರೂ ಸಹ ನಮ್ಮ ಪರಲೋಕದ ತಂದೆಯ ಎದೆಗೆ ಬರುವಾಗ ತಾವು ಬಯಸುವಂತ ಪ್ರೀತಿ, ಭದ್ರತೆ ಮತ್ತು ತಮ್ಮ ಬಗ್ಗೆ ತಾವು ಹಾರೈಸುತ್ತಿದ್ದ ಆಸಕ್ತಿಯನ್ನು ಹೊಂದಬಹುದು.

ನೀವು ಒಂದು ವೇಳೆ ಆಳವಾದ, ಗುಪ್ತವಾದ ಮತ್ತು ಯಾರಿಗೂ ಹೇಳಲು ಆಗದ ನಿಂದೆಯನ್ನು ಈ ಹಿಂದೆ ನೀವು ಅನುಭವಿಸಿದರ ಕುರಿತಾಗಿ ಯೋಚನೆಗಳಿಂದ ನೊಂದಿದ್ದೀರೋ? ಲೈಂಗಿಕ ಅತ್ಯಾಚಾರಕ್ಕೆ ಒಳಪಟ್ಟ ಹುಡುಗಿಯನ್ನು ನಾನು ಸಂಧಿಸಿದೆ. ತನ್ನ ಕನ್ಯಾವಸ್ಥೆಯನ್ನು ಕಳೆದುಕೊಂಡಿದ್ದರ ನಿಮಿತ್ತವಾಗಿ ಆಕೆ ಬಹಳ ಅಸಹ್ಯ ಹಾಗೂ ಕೋಪಗೊಂಡು ಎಂದಿಗೂ ಯಾವ ಪುರುಷನನ್ನೂ ನಂಬದವಳಾಗಿದ್ದಳು. ತನಗೆ ಆದ ಈ ಸಂಗತಿಯು ಒಂದು ಆಕಸ್ಮಿಕ ಘಟನೆ ಎಂದೂ ಮತ್ತು ಇದಕ್ಕೆ ಆಕೆ ಯಾವ ರೀತಿಯಲ್ಲೂ ಕಾರಣಳಲ್ಲ ಎಂಬುದನ್ನೂ ತಿಳಿಸುವಾಗ ಆಕೆಗೆ ಎಂತಹ ನೆಮ್ಮದಿ.

ಪ್ರತಿಯೊಂದು ನಿಂದೆಯನ್ನು ಮತ್ತು ಅಪರಾಧವನ್ನು ತೊಳೆಯಲು ಹಾಗೂ ಗುಣಪಡಿಸಲು ಯೇಸುವಿಗೆ ಮಾತ್ರ ಸಾಧ್ಯ. ನಿಮಗೆ ಅಪಮಾನ ಪಡಿಸಿದವರನ್ನು ಕ್ಷಮಿಸಲು ಆತನು ಸಹಾಯಿಸುತ್ತಾ. ನಿಮ್ಮ ಈ ಅನುಭವವು ಇದೇ ರೀತಿ ಕಷ್ಟಗಳನ್ನು ಅನುಭವಿಸಿದವರಿಗೆ ಸಹಾಯಿಸಲು ಕರುಣೆಯನ್ನುಂಟು ಮಾಡುತ್ತಾನೆ.

ನಿಮ್ಮ ಉಡುಪಿನ ಬಗ್ಗೆ ಮತ್ತು ನಡವಳಿಕೆ ಇತ್ಯಾದಿಗಳ ಬಗ್ಗೆ ಒಂದು ನಿರ್ಭಂಧವನ್ನು ನಿಮ್ಮ ತಂದೆ-ತಾಯಿ ಹಾಕಿರುವಾಗ ಒಂದು ವೇಳೆ ನೀವು ಕೋಪಿಸಿಕೊಂಡಿರಬಹುದು. ಕೆಲವು ಹುಡುಗಿಯರಿಗೆ ಇಂತಹ ಸಂದರ್ಭಗಳಲ್ಲಿ ಮನೆಯಿಂದ ಓಡಿಹೋಗಿ ತಮ್ಮ ಜೀವವನ್ನೇ ಕೊನೆಗೊಳಿಸಬೇಕೆಂಬುದಾಗಿ ಅನ್ನಿಸುತ್ತದೆ. ಆದರೆ ಯಾವ ಹುಡುಗಿಗೂ ಆಕೆಯ ಭವಿಷ್ಯದಲ್ಲಿ ಇಡೀ ಜೀವನವೇ ನಕಾರಾತ್ಮಕವಾಗಿರುವುದಿಲ್ಲ. ಪ್ರತಿಯೊಂದು ಕಪ್ಪು ಮೋಡಕ್ಕೂ ಬೆಳ್ಳಿಯ ಅಂಚು ಇರುತ್ತದೆ. ಆದ್ದರಿಂದ ನಿಮಗೆ ಸಂಭವಿಸಿದ ಒಳ್ಳೆಯ ಸಂಗತಿಗಳ ಬಗ್ಗೆ ತಿಳಿಯಲು ಯೋಚಿಸಿ. ಈ ದಿನ ನೀವು ಬದುಕುವಂತೆ ನಿಮ್ಮ ತಂದೆ ತಾಯಿಗಳು ಮಾಡಿರುವ ಒಳ್ಳೆಯ ಸಂಗತಿಗಳಿಗಾಗಿ ಕೃತಜ್ಞರಾಗಿರ್ರಿ. ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಮತ್ತು ಕಷ್ಟಗಳಿಗೆ ಹೊಂದಿಕೊಳ್ಳುವಂತೆ ದೇವರು ಸಹಾಯಿಸಬಲ್ಲನು. ಆದ್ದರಿಂದ ಎಂದಿಗೂ ನಿರೀಕ್ಷೆಯನ್ನು ಬಿಟ್ಟುಕೊಡಬೇಡ.

ಜೀವಿತದಲ್ಲಿ ಉತ್ತಮ ಪಾಲನ್ನು ಹೊಂದಿರುವವರನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ; ದೇವರು ನಿನ್ನನ್ನು ಉಂಟುಮಾಡಿರುವ ರೀತಿಯಲ್ಲಿ ಅಥವಾ ನಿನಗಾಗಿ ಯೋಜಿಸಿರುವ ಪರಿಸರದಲ್ಲಿ ತಪ್ಪು ಮಾಡಿಲ್ಲ. ಲೋಕದಲ್ಲಿರುವ ಮಿಲಿಯಾಂತರ ಜನರು ಪಡೆದಿರುವುದು ನಿನಗಿಂತ ಹೆಚ್ಚಾಗಿ ದುಃಖವೇ ಆಗಿದೆ.

ನಿನಗಿರುವಂತವುಗಳಿಗಾಗಿ ನೀನು ಎಷ್ಟೋ ಕೃತಜ್ಞಳಾಗಿರಬೇಕು.

ಒಂದು ವೇಳೆ ಮದುವೆಯಾಗುವ ಮುನ್ನ ನೀನು ಪಾಪ ಮಾಡಿ ಗರ್ಭ ತಾಳಿರಬಹುದು. ಇಂತಹ ಸಂಧರ್ಭದಲ್ಲಿ ತಮ್ಮ ಮಕ್ಕಳನ್ನು ಪಡೆಯಲು ಸರಿಯಾದ ತಿರ್ಮಾನವನ್ನು ಮಾಡಿದ ಅನೇಕ ಹುಡುಗಿಯರನ್ನು ನಾನು ತಿಳಿದಿದ್ದೇ. ಕೆಲವರು ತಮ್ಮ ಮಕ್ಕಳನ್ನು ತಮ್ಮಲ್ಲಿಯೇ ಇಟ್ಟು ಕೊಂಡರು. ಇನ್ನೂ ಕೆಲವರು ದತ್ತಾಗಿ ಸಾಕಲು ಬೇರೆಯವರಿಗೆ ಕೊಟ್ಟರು. ಆದರೆ ಅವರ ಮಕ್ಕಳನ್ನು ಅವರು ಕೊಲ್ಲಲಿಲ್ಲ. ಅವರು ತಮ್ಮನ್ನು ತಗ್ಗಿಸಿಕೊಂಡು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡಾಗ ಆತನು ಅರ್ಥಮಾಡಿಕೊಳ್ಳುವ ಗಂಡಂದಿರನ್ನು ಅವರಿಗೆ ಕೊಟ್ಟನು. ಕರ್ತನು ಅವರ ಅವಮಾನವನ್ನು ಮತ್ತು ಅಪರಾಧವನ್ನು ತೆಗೆದು ಹಾಕಿದನು. ಇಂತಹ ಕತ್ತಲೆ ಕವಿದ ಸಮಯದಲ್ಲಿ ಇತರರು ನಿಮ್ಮನ್ನು ದೂಷಿಸುವಾಗಲೂ ಸಹ ದೇವರನ್ನು ನೀವು ಆಶ್ರಯಿಸಬಹುದು. ಕರ್ತನು ನಿಮ್ಮನ್ನು ಸ್ವೀಕರಿಸಿ ನಿಮಗೆ ಹೊಸ ಜೀವಿತವನ್ನು ಕೊಡಲು ಕಾದಿದ್ದಾನೆ.

ಭಾರತದಲ್ಲಿ ಕೆಲವು ದಿನಗಳ ಹಿಂದೆ ಮೂವರು (ಮದುವೆಯಾಗದ ವಯಸ್ಸಿನ) ಒಂದೇ ಕುಟುಂಬದ ಸಹೋದರಿಯರು ತಮ್ಮ ಮಲಗುವ ಕೋಣೆಯಲ್ಲಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಾರ್ತಾ ಪತ್ರಿಕೆಯಲ್ಲಿ ಓದಿದೆವು. ಈ ಹುಡುಗಿಯರನ್ನು ಮದುವೆಯಾಗಲು ಬರುತ್ತಿದ್ದ ಹುಡುಗನ ತಂದೆ-ತಾಯಿ ಕೇಳುತ್ತಿದ್ದ ವರದಕ್ಷಣೆಯನ್ನು ಇವರ ತಂದೆ ಕೊಡಲು ಸಾಧ್ಯವಾಗದೆ ನಿರಾಶೆಯಿಂದ ಆಶಾಭಂಗ ಹೊಂದಿದ್ದರು. ತಮ್ಮ ಜೀವಿತವನ್ನೇ ಕೊನೆಗಾಣಿಸುವದರ ಮೂಲಕ ತಮ್ಮ ತಂದೆಯ ದುಃಖಕ್ಕೆ ಅಂತ್ಯವನ್ನು ತರಲು ಅವರು ತೀರ್ಮಾನಿಸಿದರು!! ಎಂಥಹ ದುರಂತ!

ಒಂದು ವೇಳೆ ನೀವು ಇದೇ ರೀತಿಯ ಸಂಧರ್ಭಗಳನ್ನು ಎದುರಿಸುತ್ತಿರಬಹುದು. ನಿಮಗೆ ಬರುವ ಮದುವೆಯ ಸಂಬಂಧಗಳೆಲ್ಲಾ ಹೆಚ್ಚಾಗಿ ಕೊಡಬೇಕಾದ ವರದಕ್ಷಣೆಯ ಕಾರಣದಿಂದ ಮುರಿದು ಹೋಗುತ್ತಿರಬಹುದು. ನೀವು ಮನಗುಂದಿದವರಾಗಬೇಡಿ. ದೇವರು ನಿಮ್ಮ ತಂದೆ; ಮತ್ತು ನಿಮ್ಮ ಅವಶ್ಯಕತೆಗಳೆಲ್ಲಾ ಆತನಿಗೆ ಗೊತ್ತು ಮತ್ತು ಆತನು ನಿಮಗಾಗಿ ಚಿಂತಿಸುತ್ತಾ. ಈ ಪ್ರಪಂಚದಲ್ಲಿ ಮದುವೆ ಎಂಬುವುದು ದೊಡ್ಡ ಸಂಗತಿಯಲ್ಲ. ದೇವರ ಚಿತ್ತವನ್ನು ನೇರವೇರಿಸುವದೇ ದೊಡ್ಡದು. ಆದ್ದರಿಂದ ನಿಮ್ಮ ಜೀವಿತವನ್ನು ಸಂಪೂರ್ಣವಾಗಿ ದೇವರಿಗೆ ಒಪ್ಪಿಸಿ ಆತನ ಚಿತ್ತವನ್ನು ಮಾತ್ರ ನಿಮ್ಮ ಜೀವಿತದಲ್ಲಿ ಮಾಡಲು ಹುಡುಕಿರಿ. ನೀವು ಮದುವೆ ಆಗಿರುವಿರೋ ಇಲ್ಲವೋ, ಅಂತ್ಯಕ್ಕೆ ಬರುವಾಗ ದೇವರ ಚಿತ್ತವನ್ನು ಸಂಪೂರ್ಣಗೊಳಿಸುವ ಜೀವಿತ ನಿಮ್ಮದಾಗಿರುತ್ತದೆ. ಪ್ರಪಂಚದ ಕೆಲವು ದೊಡ್ಡ ಮಿಷನರಿಗಳು ಸಹ ಮದುವೆಯಾಗದ ಸ್ತ್ರೀಯರಾಗಿದ್ದಾರೆ. ಎಷ್ಟು ಪ್ರಯತ್ನಿಸಿದಾಗ್ಯೂ ನೀನು ಕೆಲವು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದೀಯೋ? ಇತರರು ನಿನ್ನೊಂದಿಗೆ ಅನುಕಂಪ ತೋರಿಸುವುದಿಲ್ಲವೆಂಬುದಾಗಿ ನಿನಗೆ ಅನ್ನಿಸುತ್ತದೊ? ನಿನ್ನ ಇಡೀ ಜೀವನವೇ ವಿಫಲ ಎಂಬುದಾಗಿ ಅನ್ನಿಸುವಂತೆ ಸೈತಾನ ಮಾಡುತ್ತಿದ್ದಾನೋ? ಇಂತಹ ಪೈಶಾಚಿಕ ಯೋಚನೆಗಳಿಗೆ ಎಡೆಕೊಡಬೇಡ. ಯಾಕೆಂದರೆ ಕಡೆಗೆ ಅದು ನಿನ್ನ ಜೀವಿತವನ್ನು ಅಂತ್ಯಗೊಳಿಸಲು ಪ್ರಯತ್ನಿಸುವಂತೆ ಮಾಡುತ್ತದೆ.

ನನ್ನ ಸಹೋದರಿ ಅಳುವುದನ್ನು ನಿಲ್ಲಿಸು. ಕೇವಲ ಒಂದು ಪರೀಕ್ಷೆಯಲ್ಲಿ ಅಥವಾ ಅನೇಕ ಪರೀಕ್ಷೆಯಲ್ಲಿ ವಿಫಲವಾದ ಕಾರಣ ನಿನ್ನ ಜೀವಿತ ಸ್ಥಗಿತಗೊಳ್ಳುವ ಅವಶ್ಯವಿಲ್ಲ. ಆ ಪರೀಕ್ಷೆಗಳನ್ನು ಮತ್ತೆ ಮಾಡು. ಒಂದು ದಿನ ನೀನು ಜಯಗಳಿಸುವೆ. ಎಂದಿಗೂ ಬಿಟ್ಟುಕೊಡಬೇಡ ಮತ್ತು ನೀನು ವಿಫಲವಾದರೆ ಅಥವಾ ಅಷ್ಟು ಜ್ಞಾನವಿಲ್ಲದಿದ್ದರೆ ಅಥವಾ ಮುಂದೆ ಓದಲು ಹಣದ ಕೊರತೆಯಿದ್ದರೆ, ಆಗ ದೇವರು ಜ್ಞಾನಿಗಳನ್ನು ಮತ್ತು ಐಶ್ವರ್ಯವಂತರನ್ನು ನಾಚಿಕೆಪಡಿಸಲು ಈ ಲೋಕದ ಬಡವರನ್ನು ಮತ್ತು ಬಲಹೀನರನ್ನು ಆರಿಸಿಕೊಂಡಿದ್ದಾನೆಂದು ಜ್ಞಾಪಿಸಿಕೋ.

ನೀನು ಪರೀಕ್ಷೆಯಲ್ಲಿ ಜಯಗಳಿಸಿದರೂ ಅಥವಾ ಜಯಗಳಿಸದಿದ್ದರೂ ದೇವರು ನೀನು ಇರುವ ಹಾಗೆಯೇ ನಿನ್ನನ್ನು ಪ್ರೀತಿಸುತ್ತಾ. ನಿನ್ನನ್ನು ಸ್ವೀಕರಿಸುವ ಮುನ್ನ ಆತನು ನಿನ್ನ ಅಂಕ ಪಟ್ಟಿಯನ್ನು ನೋಡುವುದಿಲ್ಲ.

ಒಂದು ವೇಳೆ ನೀನು ಪ್ರೇಮದಲ್ಲಿ ಆಶಾಭಂಗಪಟ್ಟಿರಬಹುದು. ನೀನು ಮದುವೆಯಾಗಲು ನಿರೀಕ್ಷಿಸುತ್ತಿದ್ದ ವ್ಯಕ್ತಿ ಈಗ ಯಾರನ್ನೋ ಮದುವೆಯಾಗಿರಬಹುದು. ಮತ್ತು ಅಂತಹ ಸಂದರ್ಭಗಳಲ್ಲಿ ಎಲ್ಲಾ ಯೌವನಸ್ಥರು ಮಾಡುವ ಹಾಗೆ ನೀನು ಸಹ ಅಳುತ್ತಿರಬಹುದು..

ಆದರೆ ಆ ಯೌವನಸ್ಥನು ಬೇರೆ ಯಾರನ್ನೋ ಮದುವೆಯಾಗಿದ್ದರೆ ಆ ವ್ಯಕ್ತಿಯು ನಿನಗಾಗಿರುವುದರಲ್ಲಿ ದೇವರ ಚಿತ್ತವಿಲ್ಲವೆಂಬುದನ್ನು ನಿರೂಪಿಸುತ್ತದೆ. ಬೇರೆಯೊಬ್ಬ ಉತ್ತಮ ವ್ಯಕ್ತಿಯನ್ನು ಅಥವಾ ಬೇರೆ ಉತ್ತಮವಾದದ್ದನ್ನು ದೇವರು ನಿನಗಾಗಿ ಇಟ್ಟಿರಬಹುದು. ಒಂದು ವೇಳೆ ಆತನ ಸೇವಿಸುವ ಒಂಟಿ ಜೀವಿತ ಸಹ ಆಗಿರಬಹುದು.

ದೇವರು ಅನೇಕ ಸಂಗತಿಗಳನ್ನು ನಮ್ಮ ಜೀವಿತದಲ್ಲಿ ಅನುಮತಿಸುವುದು ಆತನ ಎಲ್ಲಾದಕ್ಕಿಂತಲೂ ಮತ್ತು ಎಲ್ಲಾರಿಗಿಂತಲೂ ಈ ಪ್ರಪಂಚದಲ್ಲಿ ಅಮೂಲ್ಯವನ್ನಾಗಿ ಮಾಡಬೇಕೆಂಬುದೇ ಆಗಿರುತ್ತದೆ. ಆನಂತರ ಮಾತ್ರ ಆತನು ಈ ಭೂಮಿಯ ಮೇಲೆ ಎಲ್ಲಾರಿಗಿಂತಲೂ ನಿನಗೆ ಸುಂದರನಾಗಿರುತ್ತಾನೆ.

ತಮ್ಮ ತಂದೆ ತಾಯಿಗಳಿಂದ ತಿರಸ್ಕರಿಸಲ್ಪಟ್ಟವರಿಗೆ ನಾನು ಹೇಳುವದು - ನಿಮ್ಮ ತಂದೆ-ತಾಯಿ ಯಾಕೆ ನಿಮ್ಮನ್ನು ತೊರೆದುಬಿಟ್ಟರೆಂಬುದಾಗಿ ಕಂಡುಕೊಳ್ಳುವ ಅವಶ್ಯಕತೆ ಇಲ್ಲ. ನೀನು ಆಕಸ್ಮಿಕವಲ್ಲನಿನ್ನ. ಎಲ್ಲಾ ದಿನಗಳನ್ನು ದೇವರು ಅನಾದಿ ಕಾಲದಲ್ಲೇ ತನ್ನ ಪುಸ್ತಕದಲ್ಲಿ ಬರೆಸಿ ಇಟ್ಟಿದ್ದಾನೆ

(ಕೀರ್ತ 139:15,16).

ಈ ಲೋಕವನ್ನು ಸೃಷ್ಟಿಮಾಡುವ ಮೊದಲೇ ಆತನು ನಿನ್ನನ್ನು ಆರಿಸಿಕೊಂಡಿದ್ದಾ. (ಎಫೆಸ 1:4,11). ನಿಮ್ಮ ತಂದೆ-ತಾಯಿಯ ತಪ್ಪಿಗೆ ನೀನು ಕಾರಣಳಲ್ಲ.

ದೇವರ ಕುಟುಂಬಕ್ಕೆ ಮೊದಲೇ ಜೋಡಿಸಲ್ಪಟ್ಟಿರುವೆ. ಈಗ ತನ್ನ ಕುಟುಂಬದ ಭಾಗವನ್ನಾಗಿ ನಿನ್ನನ್ನು ಮಾಡಲು ಒಬ್ಬ ಪರಲೋಕದ ತಂದೆ ನಿನಗೆ ಇದ್ದಾನೆ ಎಂಬುದಕ್ಕಾಗಿ ಸಂತೋಷಿಸು. ಆತನು ಎಂದಿಗೂ ತನ್ನ ಮಕ್ಕಳನ್ನು ತೊರೆಯುವದಿಲ್ಲವೆಂಬುದನ್ನು ಜ್ಞಾಪಕದಲ್ಲಿಟ್ಟುಕೋ.

ಆತನು ನಿನ್ನನ್ನು ತನ್ನ ಶಾಶ್ವತ ಪ್ರೀತಿಯಿಂದ ಪ್ರೀತಿಸುತ್ತಾ. ಮತ್ತು ಆ ಪ್ರೀತಿಯನ್ನು ಆತನು ನಿನ್ನ ಮೇಲೆ ಧಾರಾಳವಾಗಿ ಸುರಿಸಿದ್ದಾನೆ. ಪ್ರೀತಿಯುಳ್ಳ ತಂದೆಯಾದ ದೇವರ ಕರಗಳಲ್ಲಿ ಸುರಕ್ಷಿತವಾಗಿರುವ ಮಗುವಿನ ಹಾಗೆ ಯಾವಾಗಲೂ ನಿನ್ನನ್ನು ಚಿತ್ರೀಕರಿಸಿಕೊಂಡು, ಆತನ ಸಾರೂಪ್ಯದಲ್ಲಿ ನಿನ್ನನ್ನು ಸೃಷ್ಟಿಸಿದ್ದಾನೆ. ಮತ್ತು ನಿನ್ನನ್ನು ಆಶೀರ್ವದಿಸಲು ಮತ್ತು ನಿನಗೆ ಯಾವಾಗಲೂ ಒದಗುವವನಾಗಿರಲು ಬಯಸುತ್ತಾನೆ.

ನಿನಗಾಗಿ ಆತನು ಸಂಗ್ರಹಿಸಿ ಇಟ್ಟಿರುವ ಎಲ್ಲವನ್ನು ನಿನಗೆ ಪ್ರಕಟಿಸಲು ಆತನು ಕಾಯುತ್ತಿದ್ದಾನೆ. ಒಂದು ದಿನ ಆತನು ನಿನಗಾಗಿ ಸಿದ್ಧಮಾಡಿರುವ ಬಿಡಾರಕ್ಕೆ ಕರೆದುಕೊಂಡು ಹೋಗುತ್ತಾ. ಅದು ಯಾವುದೇ ಈ ಲೋಕದ ಉತ್ತಮ ಮನೆ ಅಥವಾ ನಿವಾಸಕ್ಕಿಂತ ಶ್ರೇಷ್ಠವಾದದ್ದು. ಆದರೆ ನೀನು ಆತನ ಮಗುವಾಗುವ ಮತ್ತು ಆತನ ಕುಟುಂಬದ ಭಾಗವಾಗುವ ಕರೆಯನ್ನು ಸ್ವೀಕರಿಸಬೇಕು. ಆಗ ಆತನ ಹಸ್ತದಿಂದ ನಿನ್ನನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಿನ್ನ ಇಡೀ ಜೀವಿತವನ್ನು ಆತನಿಗೆ ಕೊಡು.

ಯಾರಾರು ಆತನ (ಯೇಸು) ಅಂಗೀಕರಿಸಿದರೋ ಅಂದರೆ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು (ಯೋಹಾನ 1:12).

ನೀನು ಪಾಪಿ ಮತ್ತು ಯೇಸುವಿನ ಮರಣ ನಿನ್ನ ಪಾಪಕ್ಕಾಗಿ ಎಂಬುದನ್ನು ಒಪ್ಪಿಕೊಂಡರೆ ನೀನು ಪರಲೋಕದ ತಂದೆಯ ಮಗುವಾಗಲು ಸಾಧ್ಯ.

ನಿನ್ನ ಎಲ್ಲಾ ಪಾಪಗಳಿಗಾಗಿ ಪಶ್ಚಾತ್ತಾಪಟ್ಟು, ಅವುಗಳನ್ನು ತ್ಯಜಿಸು ಮತ್ತು ಆತನು ನಿನಗಾಗಿ ಸುರಿಸುವ ಆ ರಕ್ತದಿಂದ ಸಂಪೂರ್ಣವಾಗಿ ನಿನ್ನನ್ನು ಶುದ್ಧಮಾಡುತ್ತಾನೆ.

ನಿನ್ನ ತಂದೆ ತಾಯಿಯನ್ನೊಳಗೊಂಡು ನಿನಗೆ ತಪ್ಪು ಮಾಡಿರುವ ಎಲ್ಲರನ್ನು ಕ್ಷಮಿಸು. ಹಿಂದಿನ ನೆಪಗಳು ನಿನ್ನಲ್ಲಿ ಆಗಾಗ ಸುಳಿದಾಡಲು ಅಥವಾ ನಿನ್ನನ್ನು ಹೀನೈಸಲು ಬಿಡಬೇಡ. ನಿನ್ನ ಹಿಂದಿನ ಸಂಗತಿಗಳನ್ನು ನೆಸುತ್ತಾ ನಿನ್ನನ್ನು ನೀನೇ ಹೀನೈಸಿಕೊಳ್ಳುತ್ತಿದ್ದರೆ ನಿನ್ನ ಜೀವಿತಕ್ಕೆ ದೇವರ ಚಿತ್ತವನ್ನು ನೆರವೇರಿಸಲು ಸಾಧ್ಯವಿಲ್ಲ.

ನಿನ್ನ ಹಿಂದಿನ ಸಂಗತಿಗಳನ್ನು ನಿಶ್ಚಯ ಪೂರ್ವಕವಾಗಿ ಹಿಂದಕ್ಕೆ ಹಾಕಿಬಿಡು. ನಿನ್ನ ಹಿಂದಿನ ಸಂಗತಿಗಳನ್ನು ಯೇಸುವಿನ ರಕ್ತದ ಅಡಿಯಲ್ಲಿ ಹಾಕಿ ಮುಂದಕ್ಕೆ ಸಾಗು.

ಯೇಸು ಭಾದೆ ಪಟ್ಟು ಸತ್ತದ್ದು ನಿನ್ನನ್ನು ಶುದ್ಧಮಾಡಲು ಮಾತ್ರವಲ್ಲ, ನಿನಗೆ ಶುದ್ಧತೆಯ ಅರಿವುಂಟಾಗಬೇಕೆಂಬುದಾಗಿ ಸಹ ಸತ್ತನು. ಕ್ರಿಸ್ತನು ನಿನ್ನ ಜೀವಿತದಲ್ಲಿ ಬರುವಾಗ ದೇವರ ಮುಂದೆ ನೀನು ನೀತಿಕರಿಸಲ್ಪಟ್ಟಿರುವಿ. ದೇವರು ಈಗ, ನೀನೆಂದಿಗೂ ನಿನ್ನ ಇಡೀ ಜೀವಿತದಲ್ಲಿ ಪಾಪ ಮಾಡಿಲ್ಲವೆನ್ನುವಂತೆ ನೋಡುತ್ತಾ. ಈ ಗ್ರಹಿಕೆಯು ನಿನ್ನ ಹೃದಯದಲ್ಲಿ ಆನಂದವನ್ನು ಯಾವಾಗಲೂ ತರಲಿ.

ಹಾಗೆಯೇ ನೀನು ಸಹ ನಮ್ಮಲ್ಲಿ ಅನೇಕರು ಮಾಡಿರುವಂತೆ ನಾನು ಮೇಲೆ ಹೇಳಿದ ಹಾಗೆ ಮಾಡಿದರೆ ದೇವರ ಅಧ್ಬುತವಾದ ಕುಟುಂಬಕ್ಕೆ ಸೇರುತ್ತಿ.

ನೀನು ಸತ್ಯವೇದವನ್ನು ಓದುವಾಗ ದೇವರು ನಿನ್ನ ಹೃದಯಕ್ಕೆ ಮಾತನಾಡುವದು ನಿನಗೆ ಕೇಳಿಸುತ್ತದೆ ಮತ್ತು ನೀನು ಪ್ರಾರ್ಥನೆಯಲ್ಲಿ ಆತನೊಟ್ಟಿಗೆ ಮಾತನಾಡುವಾಗ ಆತನು ನಿನ್ನ ಪ್ರಾರ್ಥನೆಯನ್ನು ಕೇಳುತ್ತಾ. ಮತ್ತು ನಿನ್ನ ಪ್ರಾರ್ಥನೆಗೆ ಉತ್ತರ ಕೊಡುತ್ತಾನೆ ಎಂಬ ಭರವಸೆ ನಿನಗೆ ಸಿಗುತ್ತದೆ.

ಒಂದು ಸಾರಿ ನೀನು ನನ್ನ ಪ್ರಿಯನಾದ ಮಗ, ನಾನು ನಿನ್ನನ್ನು ಮೆಚ್ಚಿದ್ದೇನೆ ಎಂಬುದಾಗಿ ಯೇಸುವನ್ನು ಕುರಿತು ತಂದೆಯಾದ ದೇವರು ಹೇಳಿದನು. ಅದೇ ರೀತಿ ನಿನ್ನನ್ನು ಸಹ ಒಂದು ದಿನ ಆತ ಮೆಚ್ಚಿರುವ ಆತನ ಪ್ರೀತಿಯ ಮಗು ಎಂದು ಕರೆಯುವನು. ಆದ್ದರಿಂದ ಇನ್ನು ಮುಂದೆ ಅಳಬೇಡ. ನೀನು ಅನಾಥಳಲ್ಲ. ನೀನು ಒಬ್ಬ ರಾಜನ ಮಗು.

ನಾನು ಹೇಳ ಬಯಸುವುದನ್ನು ಕೆಲವು ಸಮಯದ ಹಿಂದೆ ನಾನು ಓದಿದ ಪತ್ರವು ಬಹಳ ಸುಂದರವಾಗಿ ವ್ಯಕ್ತಪಡಿಸುತ್ತದೆ. ಅದನ್ನು ಬ್ಯಾರಿ ಆಡಮ್ಸ ಎಂಬವರು ಬರೆದದ್ದು. ದಯಾಳುತ್ವದಿಂದ ಅವರ ದೈವ ಪ್ರೇರಿತವಾದ ಸಂಕಲನವನ್ನು ಪೂರ್ಣವಾಗಿ ಇಲ್ಲಿ ಉಲ್ಲೇಖಿಸಲು ಅಪ್ಪಣೆ ಕೊಟ್ಟರು;

ತಂದೆಯ ಪ್ರೀತಿಯ ಪತ್ರ

ನೀವು ಓದಲಿರುವ ಪದಗಳು ಸತ್ಯವಾದದ್ದು. ಅವು ದೇವರ ಹೃದಯದಿಂದ ಬರುತ್ತಿರುವುದರಿಂದ - ನೀವು ಅವುಗಳನ್ನು ಅನುಮತಿಸುವುದಾದರೆ, ಅವು ನಿಮ್ಮ ಜೀವಿತವನ್ನೇ ಬದಲಾಯಿಸುವವು. ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನೀವು ನಿಮ್ಮ ಜೀವಮಾನವಿಡೀ ಎದುರುನೋಡುತ್ತಿರುವ ತಂದೆಯಾಗಿದ್ದಾನೆ ಇದು ಆತನು ನಿಮಗೆಂದು ಬರೆದಿರುವ ಪ್ರೀತಿಯ ಪತ್ರವಾಗಿದೆ.

ನನ್ನ ಮಗುವೇ...
  • ನಿನಗೆ ನನ್ನ ಬಗ್ಗೆ ತಿಳಿಯದಿದ್ದರೂ, ನಿನ್ನ ಬಗ್ಗೆ ನನಗೆ ಎಲ್ಲವೂ ತಿಳಿದಿದೆ.. (ಕೀರ್ತನೆ 139:1)
  • ನೀನು ಕುಳಿತಿರುವುದನ್ನೂ ಏಳುವುದನ್ನೂ ನಾನು ತಿಳಿದಿರುವೆನು... (ಕೀರ್ತನೆ 139:2)
  • ನಿನ್ನ ಮಾರ್ಗಗಳೆಲ್ಲಾ ನನಗೆ ಗೊತ್ತಾಗಿವೆ... (ಕೀರ್ತನೆ 139:3)
  • ನಿನ್ನ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ...(ಮತ್ತಾಯ 10:29-31)
  • ನೀನು ನನ್ನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವಿ... (ಆದಿಕಾಂಡ 1:27)
  • ನೀನು ಜೀವಿಸುವುದೂ, ಚಲಿಸುವುದೂ, ಇರುವುದೂ ನನ್ನಲ್ಲಿಯೇ... (ಅಪೊಸ್ತಲರ ಕೃತ್ಯ 17:28)
  • ನೀನು ನಿಜಕ್ಕೂ ನನ್ನ ಮಗುವೇ ಆಗಿದ್ದೀ... (ಅಪೊಸ್ತಲರ ಕೃತ್ಯ 17:28)
  • ನೀನು ತಾಯಿಯ ಗರ್ಭದಲ್ಲಿ ನಿರ್ಮಿಸಲ್ಪಡುವುದಕ್ಕಿಂತ ಮುಂಚೆಯೇ ನಾನು ನಿನ್ನನ್ನು ತಿಳಿದಿದ್ದೇ... (ಯೆರೆಮೀಯ 1:4-5)
  • ನೀನು ನನ್ನ ಉದ್ದೇಶದ ಪ್ರಕಾರ ಮೊದಲೇ ನೇಮಿಸಲ್ಪಟ್ಟಿರುವಿ... (ಎಫೆಸ. 1:11-12)
  • ನೀನು ತಪ್ಪಾಗಿರುವುದಿಲ್ಲ, ನಿನ್ನ ಎಲ್ಲಾ ದಿನಗಳೂ ನನ್ನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ... (ಕೀರ್ತನೆ 139:15-16)
  • ನಿನ್ನ ಜನ್ಮದ ಕಾಲಾವಧಿಯನ್ನೂ ವಾಸಿಸತಕ್ಕ ಸ್ಥಳವನ್ನೂ ನಾನು ನೇಮಿಸಿದ್ದೇ...(ಅಪೊಸ್ತಲರ ಕೃತ್ಯ 17:26)
  • ನೀನು ವಿಚಿತ್ರವಾಗಿಯೂ ಅದ್ಭುತವಾಗಿಯೂ ಮಾಡಲ್ಪಟ್ಟಿರುವಿ.... (ಕೀರ್ತನೆ139:14)
  • ನಿನ್ನ ತಾಯಿಯ ಗರ್ಭದಲ್ಲಿ ನಾನು ನಿನ್ನನ್ನು ರೂಪಿಸಿದೆನು... (ಕೀರ್ತನೆ 139:13)
  • ನೀನು ಹುಟ್ಟಿದಂದಿನಿಂದಲೇ ನಾನು ನಿನ್ನನ್ನು ಉದ್ಧಾರಮಾಡಿದ್ದೇ... (ಕೀರ್ತನೆ71:6)
  • ನನ್ನನ್ನು ತಿಳಿಯದವರಿಂದ ನಾನು ಸರಿಯಾಗಿ ಪ್ರತಿನಿಧಿಸಲ್ಪಡದವನಾಗಿದ್ದೇ...(ಯೋಹಾನ 8:41-44)
  • ನಾನು ದೂರದವನೂ ಕೋಪಿಷ್ಠನೂ ಆಗಿರದೆ ಪೂರ್ಣ ಪ್ರೀತಿಸ್ವರೂನಗಿದ್ದೇ... (1 ಯೋಹಾನ 4:16)
  • ನಾನು ನನ್ನ ಪ್ರೀತಿಯನ್ನು ನಿನ್ನ ಮೇಲೆ ಧಾರಾಳವಾಗಿ ಸುರಿಸುವುದು ನನ್ನ ಬಯಕೆ... (1ಯೋಹಾನ 3:1)
  • ಏಕೆಂದರೆ, ನೀನು ನನ್ನ ಮಗುವೂ ನಾನು ನಿನ್ನ ತಂದೆಯೂ ಆಗಿರುವುದರಿಂದಲೇ... (1 ಯೋಹಾನ 3:1)
  • ನಿನ್ನ ಭೂಲೋಕದ ತಂದೆ ನಿನಗೆ ದಯಪಾಲಿಸುವುದಕ್ಕಿಂತಲೂ ಹೆಚ್ಚಾಗಿಯೇ ನಾನು ದಯಪಾಲಿಸುವವನಾಗಿದ್ದೇ... (ಮತ್ತಾಯ 7:11)
  • ಏಕೆಂದರೆ, ನಾನೇ ಪರಿಪೂರ್ಣನಾದ ತಂದೆಯಾಗಿದ್ದೇ... (ಮತ್ತಾಯ 5:48)
  • ನೀನು ಸ್ವೀಕರಿಸುವ ಎಲ್ಲಾ ಒಳ್ಳೆಯ ದಾನವೂ ಸಂಪೂರ್ಣವಾದ ವರವೂ ನನ್ನ ಕೈಯಿಂದಲೇ ನಿನಗೆ ಬರುತ್ತವೆ... (ಯಾಕೋಬ 1:17))
  • ಏಕೆಂದರೆ, ನಾನೇ ನಿನ್ನ ಒದಗಿಸುವವನಾಗಿದ್ದು ನಿನ್ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವವನಾಗಿದ್ದೇ... (ಮತ್ತಾಯ 6:31-33)
  • ನಾನು ನಿನ್ನನ್ನು ಕುರಿತು ಮಾಡುವ ಯೋಜನೆಗಳು ಯಾವಾಗಲೂ ಹಿತಕರವಾದದ್ದೇ... (ಯೆರೆಮೀಯ 29:11)
  • ಏಕೆಂದರೆ, ನಾನು ನಿನ್ನನ್ನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸಿದ್ದೇ... (ಯೆರೆಮೀಯ 31:3)
  • ನಿನ್ನ ವಿಷಯವಾಗಿ ನಾನು ಮಾಡುತ್ತಿರುವ ಯೋಚನೆಗಳು ಸಂಖ್ಯೆಯಲ್ಲಿ ಮರಳಿಗಿಂತಲೂ ಹೆಚ್ಚಾಗಿವೆ... (ಕೀರ್ತನೆ 139:17-18)
  • ನಾನು ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವವನಾಗಿದ್ದೇ... (ಚೆಫನ್ಯ3:17))
  • ನಾನು ನಿನಗೆ ಹಿತಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ... (ಯೆರೆಮೀಯ 32:40))
  • ಏಕೆಂದರೆ ಸಮಸ್ತ ಜನರಲ್ಲಿಯೂ ನೀನು ನನ್ನ ನಿಧಿಯ ಸಂಪತ್ತಾಗಿರುವಿ...(ವಿಮೋಚನ ಕಾಂಡ 19:5))
  • ನಾನು ನಿನ್ನನ್ನು ಸ್ಥಾಪಿಸುವುದಕ್ಕೆ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಬಯಸುತ್ತೇ... (ಯೆರೆಮೀಯ 32:41))
  • ನಾನು ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು... (ಯೆರೆಮೀಯ 33:3))
  • ನೀನು ನಿನ್ನ ಪೂರ್ಣ ಹೃದಯದಿಂದ ನನ್ನನ್ನು ಹುಡುಕಿದರೆ, ನನ್ನನ್ನು ಕಂಡುಕೊಳ್ಳುವಿ... (ಧರ್ಮೋಪದೇಶಕಾಂಡ 4:29)
  • ನೀನು ನಲ್ಲಿ ಆನಂದವಾಗಿರು, ಆಗ ನಾನು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವೆನು... (ಕೀರ್ತನೆ 37:4))
  • ಏಕೆಂದರೆ, ಆ ಅಪೇಕ್ಷೆಗಳನ್ನು ನಿನಗೆ ಕೊಟ್ಟಾತನು ನಾನೇ ಆಗಿದ್ದೇ... (ಫಿಲಿಪ್ಪಿ 2:13))
  • ನೀನು ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ನಾನು ನಿನಗೋಸ್ಕರ ಮಾಡಲು ಶಕ್ತನಾಗಿದ್ದೇ...(ಎಫೆಸ 3:20)
  • ಏಕೆಂದರೆ, ನಿನಗೆ ನಿತ್ಯವಾದ ಆದರಣೆಯನ್ನು ಕೊಡುವವನು ನಾನೇ. (2 ಥೆಸಲೋನಿಕ 2:16-17))
  • ನಾನು ನಿನಗಾಗುವ ಎಲ್ಲಾ ಬಾಧೆಗಳಲ್ಲಿಯೂ ನಿನ್ನನ್ನು ಸಂತೈಸುವನಾಗಿದ್ದೇ... (2 ಕೊರಿಂಥ 1:3-4))
  • ನೀನು ಮುರಿಯಲ್ಪಟ್ಟ ಹೃದಯದ ಅನುಭವದಲ್ಲಿರುವಾಗ ನಾನು ನಿನಗೆ ಸಮೀಪವಾಗಿದ್ದೇ... (ಕೀರ್ತನೆ 34:18)
  • ನಾನು ನಿನ್ನನ್ನು ನನ್ನ ಎದೆಗಪ್ಪಿಕೊಂಡು, ಕುರುಬನು ಕುರಿಮರಿಯನ್ನು ಮೇಯಿಸುವಂತೆ ನಿನ್ನನ್ನು ನಡಿಸುವೆನು... (ಯೆಶಾಯ 40:11))
  • ಒಂದು ದಿನ, ನಾನು ನಿನ್ನ ಕಣ್ಣೀರಿನ ಪ್ರತಿಯೊಂದು ಹನಿಯನ್ನೂ ಒರಸಿಬಿಡುವೆನು...(ಪ್ರಕಟನೆ 21:3-4)
  • ನೀನು ಭೂಲೋಕದಲ್ಲಿ ಅನುಭವಿಸಿದ ನೋವನ್ನೆಲ್ಲಾ ನಾನು ತೆಗೆದು ಹಾಕಿಬಿಡುವೆನು...(ಪ್ರಕಟನೆ 21:3-4)
  • ನಾನು ನಿನ್ನ ತಂದೆ, ನಾನು ನನ್ನ ಮಗನಾದ ಯೇಸುವನ್ನು ಪ್ರೀತಿಸಿದ ಹಾಗೆಯೇ ನಿನ್ನನ್ನೂ ಪ್ರೀತಿಸುತ್ತೇ... (ಯೋಹಾನ 17: 23)
  • ನಿನಗೋಸ್ಕರವಾಗಿರುವ ನನ್ನ ಪ್ರೀತಿಯನ್ನು ನಾನು ಯೇಸುವಿನ ಮೂಲಕ ಪ್ರಕಟಿಸಿದ್ದೇ... (ಯೋಹಾನ 17:26)
  • ಯೇಸು ನನ್ನ ವ್ಯಕ್ತಿತ್ವದ ಪ್ರತಿರೂಪವಾಗಿದ್ದಾ...

    (ಹಿಬ್ರಿಯ 1:3))

  • ನಾನು ನಿನ್ನನ್ನು ವಿರೋಧಿಸದೆ, ನಿನ್ನ ಪರವಾಗಿಯೇ ಇದ್ದೇನೆಂದು ಪ್ರಕಟಿಸಲು ಯೇಸು ಬಂದನು... (ರೋಮಾ 8:31))
  • ನಾನು ನಿನ್ನ ಅಪರಾಧಗಳನ್ನು ಲೆಕ್ಕ ಮಾಡುತ್ತಾಯಿಲ್ಲ ಎಂದು ನಿನಗೆ ಹೇಳಲು ಯೇಸು ಬಂದನು... (2 ಕೊರಿಂಥ 5: 18-19)
  • ನೀನೂ ನಾನೂ ಸಂಧಾನಮಾಡಿಕೊಳ್ಳುವುದಕ್ಕಾಗಿಯೇ ಯೇಸು ಸತ್ತನು... (2 ಕೊರಿಂಥ 5:18-19)
  • ಆತನ ಮರಣವು ನಾನು ನಿನಗಾಗಿ ಇಟ್ಟಿರುವ ನನ್ನ ಪ್ರೀತಿಯ ನಿಜಗುಣವನ್ನು ತೋರಿಸುವಂಥದ್ದಾಗಿದೆ... (1 ಯೋಹಾನ 4: 10)
  • ನಾನು ನಿನ್ನ ಪ್ರೀತಿಯನ್ನು ಪಡೆದುಕೊಳ್ಳಬೇಕೆಂದು ನಾನು ಪ್ರೀತಿಸಿದ್ದೆಲ್ಲವನ್ನೂ ಬಿಟ್ಟು ಬಿಟ್ಟೆನು... (ರೋಮಾ. 8: 31-32)
  • ನೀನು ಕೊಡುಗೆಯಾಗಿರುವ ನ ಪುತ್ರನಾದ ಯೇಸುವನ್ನು ಸ್ವೀಕರಿಸುವುದಾದರೆ, ನನ್ನೇ ಸ್ವೀಕರಿಸುತ್ತೀ... (1 ಯೋಹಾನ 2:23)
  • ಯಾವುದೂ ನಿನ್ನನ್ನು ನನ್ನ ಪ್ರೀತಿಯಿಂದ ಪುನಃ ಅಗಲಿಸಲಾರದು... (ರೋಮಾ 8:38-39)
  • ಮನೆಗೆ ಬಾ, ಪರಲೋಕವೇ ಕಾಣದಂಥ ಮಹಾ ಔತಣವನ್ನು ನಾನು ನಿನಗೆ ಮಾಡಿಸುವೆನು... (ಲೂಕ 15:7)
  • ನಾನು ಯಾವಾಗಲೂ ತಂದೆಯಾಗಿದ್ದೇನೆ ಮುಂದೆಯೂ ಸದಾ ನಿನ್ನ ತಂದೆಯಾಗಿರುವೆನು... (ಎಫೆಸ 3:14-15))
  • ನನ್ನ ಪ್ರಶ್ನೆ ಏನೆಂದರೆ... ನೀನು ನನ್ನ ಮಗುವಾಗಿರುವಿಯಾ?... (ಯೋಹಾನ 1:12-13)
  • ನಾನು ನಿನಗೋಸ್ಕರವಾಗಿ ಕಾಯುತ್ತಿದ್ದೇ... (ಲೂಕ 15:11-32)
  • ಪ್ರೀತಿಯ,

    ನಿನ್ನ ಅಪ್ಪಾ,

    ಸರ್ವಶಕ್ತನಾದ ದೇವರು

    ಅಧ್ಯಾಯ 2
    ದೇವರು ನಿನ್ನ ಪತಿ

    ಅಧ್ಯಾಯ ಎರಡು

    ದೇವರು ನಿನ್ನ ಪತಿ

    ನಿನ್ನ ಸೃಷ್ಟಿ ಕರ್ತನೇ ನಿನ್ನ ಪತಿ, ಆತನ ಹೆಸರು-ಸೇನಾಧೀಶ್ವರನಾದ ಕರ್ತನು, ಇಸ್ರಾಯೇಲಿನ ಸದಮಲಸ್ವಾಮಿಯು, ನಿನ್ನ ನ್ಯಾಯಸ್ಥಾಪಕನಾದ ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು (ಯೆಶಾಯ ೫೪:೫).

    ನನ್ನ ಒಬ್ಬ ಒಳ್ಳೆಯ ಸ್ನೇಹಿತೆ ತನ್ನ ಗಂಡನ ಭಯಂಕರ ಅಪಘಾತದಲ್ಲಿ ಕಳೆದುಕೊಂಡಳು. ಆತನು ತನ್ನ ಯೌವನ ಪತ್ನಿಗೆ ಶುಭವಾಗಲಿ (good bye)ಎಂದು ಸಹ ಹೇಳಲಿಲ್ಲ. ರಸ್ತೆಯಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಚಾಲಕನು, ತನ್ನ ನಿರ್ದಯವಾದ ತಪ್ಪಿನಿಂದ ಆತನ ಮೇಲೆ ವಾಹನವನ್ನು ಓಡಿಸಿದನು. ಆತನ ಜೀವ ಹೊರಟು ಹೋಯಿತು. ಆತನು ಪ್ರಾರ್ಥನಾ ಕೂಟಕ್ಕೆ ಹೋಗುತ್ತಿರುವಾಗ ಈ ಸಂಗತಿ ಸಂಭವಿಸಿತು.

    ಇನ್ನೊಬ್ಬ ನನ್ನ ಸ್ನೇಹಿತೆ ತನ್ನ ಗಂಡನ ಒಂದು ಸಣ್ಣ ಅನಾರೋಗ್ಯದಲ್ಲಿ ಕಳೆದುಕೊಂಡಳು. ಯಾರೂ ಕರೆಯದ ಸಂದರ್ಶಕ ಸಾವು ಎಂಬುದು ಯಾರೂ ಆಹ್ವಾನಿಸದೆಯೇ ಎಲ್ಲಾ ಮನೆಗಳಲ್ಲಿ ಬರುತ್ತದೆ. ಕೇವಲ ಆ ಅಗಲಿಕೆಯ ನಷ್ಟಹೊಂದಿದವರು ಮಾತ್ರ ಆ ಯಾತನೆಯ ನೋವನ್ನು ಮತ್ತು ಆ ಒಂಟಿತನವನ್ನು ತಿಳಿಯಲು ಸಾಧ್ಯ. ನಿಮ್ಮ ಆಲೋಚನೆಗಳು ನಿಮ್ಮ ಪ್ರಿಯರ ನೆಪಿನಿಂದ ತುಂಬಿರುತ್ತದೆ. ಮತ್ತು ಆ ಸಂತೋಷದ ದಿನಗಳಂತೆ ಮತ್ತೇ ಒಟ್ಟಾಗಿ ಕೂಡಿ ಜೀವಿಸಲು ಆಶಿಸುತ್ತೀರಿ. ಆದರೆ ಅದು ಹಾಗಾಗದು. ದಿನದಿಂದ ದಿನಕ್ಕೆ ಕಣ್ಣೀರು ಹರಿದು ಹೋಗುತ್ತದೆ. ಮತ್ತು ರಾತ್ರಿಯ ವೇಳೆಯಲ್ಲಿ ಹರಿದು ಹೋಗುವ ಕಣ್ಣೀರಿನ ಪ್ರವಾಹದಿಂದ ಮಾತ್ರ ನಿಮ್ಮ ಅಧಿಕವಾದ ದುಃಖದಿಂದ ಬಿಡುಗಡೆ ಹೊಂದುತ್ತೀರಿ. ನಮ್ಮ ಕರ್ತನು ನಮ್ಮೆಲ್ಲಾ ಕಣ್ಣೀರನ್ನು ಬರೆದಿಡುತ್ತಾನೆ ಎಂದು ಸತ್ಯವೇದವು ಹೇಳುತ್ತದೆ. ನಾನು ದೇಶ ಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ. ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ; ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರೆದಿದೆಯಲ್ಲಾ. (ಕೀರ್ತನೆ 56:8)ಒಂದು ದೇವರ ಅಮೂಲ್ಯ ಮಗುವು ಈ ಮುಂದಿನ ಲೇಖನವನ್ನು ಓದಿದರು. ಅದೇ ತಿಂಗಳಲ್ಲಿ ಆಕೆಯ ಯೌವನ ಗಂಡನು ಕರ್ತನೊಂದಿಗೆ ಇರಲು ಹೊರಟು ಹೋದನು. ನಾನು ಆಕೆಯನ್ನು ಕಾಣಲು ಹೋದಾಗ ಈ ಲೇಖನದಿಂದ ಆಕೆಗೆ ದೇವರಲ್ಲಿ ಸಿಕ್ಕಿದ ಆದರಣೆಯನ್ನು ನಾನು ಕಂಡೆ:

    ಒಂದು ವೇಳೆ ಈ ದಿನದಲ್ಲಿ ಒಬ್ಬ ಸ್ತ್ರೀ ಒಂದು ವರ್ಷದ ಹಿಂದೆಯೇ ಅಥವಾ ಕೆಲವು ತಿಂಗಳುಗಳ ಹಿಂದೆಯೋ ಬಹು ಬಲವಾದ ಮತ್ತು ಬುದ್ದಿವಂತ ವ್ಯಕ್ತಿ ತನ್ನ ಪಕ್ಕದಲ್ಲಿರಲು, ಆಕೆ ತನ್ನ ಎಲ್ಲಾ ಭಾರವನ್ನು ಆತನ ಮೇಲೆ ಹಾಕಿ ಜವಾಬ್ದಾರಿಕೆಯಿಂದ ಮತ್ತು ಚಿಂತೆಗಳಿಂದ ವಿಶ್ರಮಿಸಿಕೊಂಡಿದ್ದಾಳೆ. ಆತನ ಜೊತೆಯ ಸಂಭಂಧ ಎಂತಹ ತೇಜಸ್ಸುಮತ್ತು ಉಲ್ಲಾಸಕರವಾಗಿರುತ್ತದೆ. ಆದರೆ ಆ ಪ್ರೀತಿಯ ವ್ಯಕ್ತಿ ತೆಗೆದುಕೊಳ್ಳಲ್ಪಟ್ಟ ಅಂಧಕಾರದ ದಿನ ಬಂದಿತು. ಎಂತಹ ಒಂಟಿತನ, ಶೂನ್ಯತನ, ಬರಡುತನ! ಮತ್ತು ಈ ದಿನದ ಪೂರ್ತಿಜೀವಿತ ಚಿಂತೆ ಮತ್ತು ಪ್ರಯಾಸದಿಂದ ತುಂಬಿದೆ. ಕೇಳು ಸ್ತ್ರೀಯೇ, ಈ ದಿನ ಎಂದೆಂದೂ ಜೀವಿಸದಂತ ಬಹು ಬುದ್ದಿವಂತ, ಬಹು ಬಲವುಳ್ಳ, ಮತ್ತು ಹೆಚ್ಚು ಪ್ರೀತಿಸುವ, ಗಂಡನಿಗಿಂತ ಹೆಚ್ಚಾಗಿ ಬುದ್ದಿ ಶಾಲಿ ಮತ್ತು ಬಲಶಾಲಿ ಮತ್ತು ಹೆಚ್ಚು ಪ್ರೀತಿಸುವಂತ ಮತ್ತು ನಡೆಸುವಂತ ಮತ್ತು ನಡೆಸಲು ಶಕ್ತನಾದ ಒಬ್ಬಾತನು ನಿನ್ನ ಪಕ್ಕದಲ್ಲೆ ನಡೆಯುತ್ತಿದ್ದಾ. ಆತನು ನಿನ್ನ ಜೀವಿತದ ಎಲ್ಲಾ ಜವಾಬ್ದಾರಿಗಳನ್ನು ಮತ್ತು ಭಾರಗಳನ್ನು ಹೊರಲು ಸಿದ್ಧನಿದ್ದಾ. ಹೌದು ಅದಕ್ಕಿಂತ ಹೆಚ್ಚಾದದ್ದನ್ನು ಮಾಡಲು ಸಿದ್ಧನಿದ್ದಾ. ನಿನ್ನ ಹೃದಯದಲ್ಲಿ ಬಂದು ನೆಲಸಿ ಪ್ರತಿ ಕೋಣೆ ಕೋಣೆಗಳಲ್ಲಿ ಇರುವ ನೋವನ್ನು ಮತ್ತು ಶೂನ್ಯತೆಯನ್ನು ತೊಲಗಿಸಿ, ಈ ಮೂಲಕ ನಿನ್ನ ಒಂಟಿತನವನ್ನು ಮತ್ತು ಹೃದಯದ ವ್ಯಾಕುಲವನ್ನು ಎಂದೆಂದಿಗೂ ಅಳಿಸಲು ಕಾದಿದ್ದಾ. (ಎ.ಡಬ್ಲ್ಯೂ. ಟೋಜರ್)

    ಇನ್ನೊಬ್ಬ ಸ್ತ್ರೀ ತನ್ನ ಕುಡಿಕತನದ ಗಂಡನ ಜೊತೆ ಜೀವಿಸಲು ಸಾಧ್ಯವಿಲ್ಲ ಮತ್ತು ತನ್ನ ತಾಳ್ಮೆಯ ಕೊನೆಯ ಹಂತಕ್ಕೆ ಬಂದಿರುವುದಾಗಿ ಆಕೆಗೆ ಅನ್ನಿಸಿತು. ತನ್ನ ಎಲ್ಲಾ ಸ್ನೇಹಿತರು ಆತನಿಂದ ದೂರವಾಗುವಂತೆ ಸಲಹೆ ಕೊಟ್ಟರು. ಆಕೆ ತನ್ನ ತೀರ್ಪಿನ ಕೊನೆಯಲ್ಲಿದ್ದಳು. ಆಕೆ ಯಾವ ಕಡೆ ಹೋಗಬೇಕು. ಮತ್ತು ತನ್ನ ಪಾಡಿಗೆ ತಾನು ಹೇಗೆ ಜೀವಿಸಬೇಕೆಂದು ಸಹ ಆಕೆಗೆ ತಿಳಿಯದಾಗಿತ್ತು.

    ಈ ರೀತಿಯಾಗಿ ನೀನು ವೇದನೆ ಪಡುತ್ತಿದ್ದೀಯೋ? ನಿನ್ನ ಗಂಡನಿಂದ ಬೇರ್ಪಟ್ಟಿರುವುದರಿಂದ ನಿನಗೆ ದುಃಖ ಹಾಗೂ ಮನೋವ್ಯಥೆ ತರುವ ಯೋಚನೆಗಳಿಂದ ನಿನ್ನ ಮನಸ್ಸು ಕಳವಳಗೊಂಡಿದೆಯೋ? ಆ ಸಿಟ್ಟುಗೊಳ್ಳುವಿಕೆ ಮತ್ತೆಂದೂ ಆಗಬಾರದೆಂದು ನೀನು ಆಶಿಸುತ್ತೀಯೋ?

    ನಿನ್ನ ಮಕ್ಕಳ ಸಲುವಾಗಿ ಒಂದು ವೇಳೆ ನೀನು ಒಂಟಿ ಪೋಷಕಳಾಗಿ ಸಿಲುಕಿದ ತೊಡಕಾದ ಸಂದರ್ಭಗಳನ್ನು ಎದುರುಸುತ್ತಿದ್ದೀಯೋ? ಮತ್ತು ಸಹಾಯಿಸದ ನೆಂಟರಿಂದ ಸುತ್ತುವರಿಯಲ್ಪಟ್ಟಿರುವಿಯೋ? ಕರ್ತನಿಂದ ಬಹಳ ಕಷ್ಟಕರವಾದದ್ದು ಯಾವುದೂ ಇಲ್ಲ.ನಿನ್ನ ಜೀವಿತದಲ್ಲಿ ಯಾವುದನ್ನೂ ಹಿಡಿದಿಟ್ಟುಕೊಳ್ಳದೆ ಆತನಿಗೆ ಒಪ್ಪಿಸಿದರೆ ಮಾತ್ರ ಆತನು ನಿನ್ನ ಜೀವಿತದಲ್ಲಿ ಪ್ರವೇಶಿಸಿ ಹಾಕಿರುವ ಪ್ರತಿ ಗಂಟನ್ನು ಬಿಚ್ಚಿ ನಿನ್ನ ಸಮಸ್ಯೆಗಳನ್ನು ಪರಿಹರಿಸುವನು.

    ಆದ್ದರಿಂದ ಅಳುವುದನ್ನು ನಿಲ್ಲಿಸು. ಮುರಿಯಲ್ಪಟ್ಟ ನಿನ್ನ ಜೀವಿತದ ತುಂಡುಗಳನ್ನು ಆತನಿಗೆ ಒಪ್ಪಿಸು. ಪ್ರತಿ ಮುರಿಯಲ್ಪಟ್ಟ ಪಾತ್ರೆಯನ್ನು ಪುನಃ ರೂಪಿಸುವ ಕುಂಬಾರ ಒಡೆಯನು ಆತನೇ. ನಾವು ಕೇವಲ ಕುಂಬಾರನ ಕೈಯಲ್ಲಿರುವ ಜೇಡಿ ಮಣ್ಣು!

    (ಯೆರೆ 18:6)

    ನಿನ್ನ ಗಂಡನ ಜೀವಿತದಲ್ಲಿ ಪ್ರವೇಶಿಸಿರುವ ಬೇರೆ ಸ್ತ್ರೀಯ ಒರಟಾದ ಸ್ಫೋಟನೆಯ ಮಾತುಗಳನ್ನು ಎದುರಿಸುತ್ತಿರುವಿಯೋ? ಅವರಿಬ್ಬರನ್ನೂ ಕ್ಷಮಿಸಲು ದೇವರು ನಿನಗೆ ಸಹಾಯಿಸುತ್ತಾ. ಅದರಿಂದ ಸಹ ನಿನ್ನ ಜೀವಿತ ಮೊಬ್ಬಾಗುವ ಅವಶ್ಯವಿಲ್ಲ.

    ಕೋಪದ ಕಣ್ಣೀರನ್ನು ಸುರಿಸಬೇಡ. ನಿಮ್ಮ ಈ ಭೂಲೋಕದ ಸಂಗಾತಿಯ ನಷ್ಟವನ್ನು ಕರ್ತನು ತುಂಬಿಸಿಕೊಡುವನು. ನಿಮ್ಮ ಸಂಗಾತಿಯ ಹೃದಯವನ್ನು ತಿರುಗಿಸಿ ಮತ್ತೊಮ್ಮೆ

    ನಿಮ್ಮ ಕಡೆಗೆ ತರುವನು. ಆತನು ಅದ್ಭುತಗಳನ್ನು ಮಾಡುವ ದೇವರು.

    ದ್ವೇಷಿಸುವ ಯಾವ ಉಪಾಯವನ್ನೂ ಮಾಡಬೇಡ; ಅದರ ಬದಲಾಗಿ, ದೇವರು ಪ್ರೀತಿಯಿಂದ ನಿಮ್ಮ ಹೃದಯವನ್ನು ತುಂಬಿಸಿ ನಿಮ್ಮ ಗಂಡನಿಗೆ ಕಹಿಯಾದ ಮಾತುಗಳಿಗಿಂತ ಪ್ರೀತಿಯ ಮಾತುಗಳನ್ನು ನೀವು ಆಡಲು ತನ್ನ ಕೃಪೆಯಿಂದ ಸಹಾಯಿಸುವಂತೆ ಕೇಳಿಕೋ. ತಮ್ಮ ಆತ್ಮದಲ್ಲಿ ಜಜ್ಜಲ್ಪಟ್ಟವರ ಸಮೀಪದಲ್ಲೇ ದೇವರು ಇದ್ದಾನೆ.

    ಒಂದು ವೇಳೆ ಮದುವೆಯಾಗಲು ನೀನು ಹಾತೊರೆಯುತ್ತಿರಬಹುದು. ಆದರೆ ಇಲ್ಲಿವರೆಗೆ ಯಾವುದೂ ನೇರವೇರುತ್ತಿಲ್ಲ. ಯೇಸುವಿನಲ್ಲಿ ಮಾತ್ರ ನೀವು ಸಂತೈಸುವಿಕೆಯನ್ನು ಪಡೆಯಿರಿ. ಪವಿತ್ರಾತ್ಮನೆಂಬ ಸಹಾಯಕನ ತಂದೆ ನಮಗೆ ಈಗಾಗಲೇ ಕೊಟ್ಟಿದ್ದಾ ನೆ. (ಯೋಹಾನ 14:16) ನಮ್ಮನ್ನು ಆದರಣೆಯಿಲ್ಲದವರನ್ನಾಗಿ ಆತನು ಬಿಡುವುದಿಲ್ಲ.

    ಒಂದು ವೇಳೆ ಯಾರೋ ಒಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ಪ್ರತಿ ಸಾರಿ ನೀನು ಕೇಳುವಾಗ ಗಲಿಬಿಲಿಯಾಗುತ್ತಿ. ಆಕೆಯನ್ನು ಅಭಿನಂದಿಸಬೇಕೆನ್ನಿಸುವುದಿಲ್ಲ; ಬದಲಾಗಿ ನಿನ್ನ ಕೋಣೆಯಲ್ಲಿ ಅಳಬೇಕೆನ್ನಿಸುತ್ತದೆ. ಯೇಸು ನಿನ್ನ ಸನಿಹವಿದ್ದು ನಿನ್ನ ನೋವನ್ನು ಆತನು ಸ್ಪರ್ಶಿಸುತ್ತಾನೆ.

    ಅಂಧಕಾರದ ರಾತ್ರಿಯಲ್ಲಿ ಕಣ್ಣೀರು ಸುರಿಸುವದು ದಿನದ ಪ್ರಶಾಂತತೆಯಲ್ಲಿ ಮೇಲ್ತೋರಿಕೆಗಾಗಿ ಮುಚ್ಚಲ್ಪಟ್ಟಿರುವದು ಸಹ ಆತನಿಗೆ ಗೊತ್ತಿದೆ. ತನ್ನ ಪ್ರೀತಿಯ ಮಗುವು ದುಃಖದಲ್ಲಿ ಹಾದುಹೋಗುವಾಗ ಆತನು ಸುಮ್ಮನೆ ನಿಲ್ಲುವುದಿಲ್ಲ. ನಮಗಾಗಿ ಆತನ ಹೃದಯ ರಕ್ತ ಸುರಿಸಿತು. ಆತನು ನಿನ್ನ ಬಳಿಗೆ ಬಂದು ನಿನ್ನನ್ನು ಮುಟ್ಟಿ ತನ್ನ ಸ್ವಸ್ಥಮಾಡುವ ತೈಲವನ್ನು ನಿನ್ನ ಹೃದಯದ ಮೇಲೆ ಸುರಿಸಿ ಆ ದುಃಖವನ್ನು ತಾಳಿಕೊಳ್ಳುವಂತೆ ಮಾಡುತ್ತಾನೆ.

    ಆತನ ನೋಗವು ಹಗುರವಾದದ್ದು. ಆತನ ಹೊರೆಯು ಹೌರವಾದದ್ದು. ಈ ಶೋಧನೆಯಲ್ಲಿ ನಿಮ್ಮ ನಂಬಿಗಸ್ತಿಕೆಯು ಅಂತ್ಯದಲ್ಲಿ ನಿತ್ಯತ್ವದ ಮಹಿಮೆಯನ್ನು ತರುತ್ತದೆ.ತಮ್ಮ ಗಂಡಂದಿರು ಕರ್ತನಿಗಾಗಿ ರಕ್ತ ಸಾಕ್ಷಿಯಾಗಿ ಸತ್ತದ್ದನ್ನು ಸಾಕ್ಷಿಯಾಗಿ ಕೆಲವು ವಿಧವೆಯರು ಹೇಳಿದ್ದನ್ನು ನಾನು ಕೇಳಿದ್ದೇನೆ. ಅವರ ಮಾತುಗಳಲ್ಲಿ ಎಂತಹ ಜಯದ ಚಿಹ್ನೆ!

    ಇದು ನನ್ನನ್ನು ಆಶ್ಚರ್ಯಪಡಿಸಿತು!

    ತಮ್ಮ ಗಂಡಂದಿರನ್ನು ಕೊಂದವರನ್ನು ಅವರು ಹೇಗೆ ಕ್ಷಮಿಸಲು ಸಾಧ್ಯ?

    ತಂದೆಯೇ ಅವರನ್ನು ಕ್ಷಮಿಸು ತಾವು ಏನು ಮಾಡುತ್ತಾರೆಂಬುದು ಅವರಿಗೆ ತಿಳಿಯದು ಎಂಬುದಾಗಿ ತನ್ನನ್ನು ಶಿಲುಬೆಗೆ ಹಾಕಿದವರಿಗಾಗಿ ಪ್ರಾರ್ಥಿಸಿದ ಒಡೆಯನು ತಾನೇ ನಮಗೆ ಸಹಾಯಿಸಲು ಸಾಧ್ಯ.

    ಒಂದು ಸಾರಿ ನಾನು ಒಬ್ಬ ಬಡ ಯೌವನ ವಿಧವೆಯನ್ನು ಸಂಧಿಸಿದೆ. ಸುವಾರ್ತೆಯನ್ನು ಸಾರಿದ್ದಕ್ಕಾಗಿ ಉತ್ತರ ಭಾರತದಲ್ಲಿ ತನ್ನ ಗಂಡನನ್ನು ಗರಗಸದಿಂದ ಕೊಯಿದು ಸಾಯಿಸಿದ್ದರು. ಆಕೆಯ ಸಾಕ್ಷಿಯನ್ನು ಕೇಳುವಾಗ ನನಗೆ ಅಪಾರವಾದ ದುಃಖವಾಯಿತು. ತನ್ನ ಗಂಡನು ಸತ್ತ ಸ್ಥಳದಲ್ಲಿ ತನ್ನ ಚಿಕ್ಕ ಮಕ್ಕಳೊಂದಿಗೆ ಆಕೆಯು ನಿಂತುಕೊಂಡು ನನ್ನ ಗಂಡನ ರಕ್ತ ಸುರಿಸಲ್ಪಟ್ಚ ಈ ಸ್ಥಳದಲ್ಲಿ ಒಂದು ಸಭೆ ಕಟ್ಟಲ್ಪಡಬೇಕೆಂಬುದೇ ನನ್ನ ಪ್ರಾರ್ಥನೆ ಎಂಬುದಾಗಿ ಆಕೆ ಹೇಳಿದಳು. ನಿಶ್ಚಯವಾಗಿ ಈಕೆಯು ಜಯಹೊಂದಿದ ಅಳುವ ಸಹೋದರಿ.

    ಹೇಬೇಲನ ರಕ್ತವು ಪ್ರತಿಕಾರಕ್ಕಾಗಿ ಕೂಗುವಾಗ, ಯೇಸುವಿನ ರಕ್ತವು ಕರುಣೆಗಾಗಿ ಕೂಗುತ್ತದೆ.

    ಒಬ್ಬ ನಿಜವಾದ ದೇವರ ಮಗುವು ಕರ್ತನು ನಮಗೆ ಪರ್ವತ ಪ್ರಸಂಗದಲ್ಲಿ ಕಲಿಸಿಕೊಟ್ಟ ಹಾಗೆ ಜೀವಿಸಬಹುದು. (ಮತ್ತಾಯ 5, 6, 7 ಅಧ್ಯಾಯಗಳು).ದೇವರು ವಿಧವೆಯರ ಮತ್ತು ತಂದೆಯಿಲ್ಲದವರ ದೇವರು.

    ಯೇಸುವು ಪ್ರಾರ್ಥನೆಯ ಬಗ್ಗೆ ಒಂದು ಸಾಮ್ಯವನ್ನು ಕಲಿಸಿಕೊಟ್ಟನು. ಅದರಲ್ಲಿ ಒಬ್ಬ ವಿಧವೆಯು ಒಬ್ಬ ಅನ್ಯಾಯಗಾರನಾದ ನ್ಯಾಯಾಧಿಪತಿಯ ಬಳಿ ತನ್ನ ವಿರೋಧಿಗಳ ವಿರುದ್ಧ ರಕ್ಷಣೆಗಾಗಿ ಹೋದದ್ದಕ್ಕೆ ನಮ್ಮನ್ನು ಹೋಲಿಸಿದ್ದಾ. ಆಕೆ ಎಡಬಿಡದೆ ಪ್ರಾರ್ಥಿಸಿದಳು ಮತ್ತು ಆಕೆಗೆ ಬೇಕಾದದ್ದನ್ನು ಹೊಂದಿಕೊಂಡಳು.

    ಒಂದು ಸಾರಿ ಯೇಸುವು ಒಬ್ಬ ವಿಧವೆ ಕೊಟ್ಟ ಎರಡು ಕಾಸುಗಳನ್ನು ಬಹಿರಂಗವಾಗಿ ಗೌರವಿಸಿದನು. ಇತರರು ಅದು ದೇವರಿಗೆ ಬಹಳ ಸಣ್ಣದೆಂಬದಾಗಿ ಭಾವಿಸಿದ್ದರು. ಆದರೆ ಆಕೆ ತನ್ನ ಬಡತನದಿಂದ ಕೊಟ್ಟಿದ್ದಳು. ಅದು ಆಕೆಗೆ ಬೆಲೆಯುಳ್ಳದ್ದಾಗಿತ್ತು. ಆ ಕಾಣಿಕೆಯು ಆಕೆಯ ಜೀವಿತವೇ ಆಗಿತ್ತು.

    ನಾವು ಯೇಸುವಿಗಾಗಿ ಮಾಡುವ ಪ್ರತಿಯೊಂದು ತ್ಯಾಗವನ್ನು ಆತನು ಗಮನಿಸುತ್ತಾ. ಮುಖ್ಯವಾಗಿ ದುಃಖದಿಂದ ಮತ್ತು ಕಣ್ಣೀರಿನಿಂದ ಮಾಡುವ ತ್ಯಾಗವನ್ನು ಆತನು ಗಮನಿಸುತ್ತಾನೆಂಬದನ್ನು ನಾವು ಇಲ್ಲಿ ಕಲಿಯುತ್ತೇವೆ.

    ದೇವ ಭಕ್ತಳಾದ ವಿಧವೆಯು ಭಕ್ತರ ಕಾಲುಗಳನ್ನು ತೊಳೆಯುತ್ತಾಳೆ (1 ತಿಮೊಥಿ 5:10) ಎಂಬುದಾಗಿ ಸತ್ಯವೇದವು ಹೇಳುತ್ತದೆ - ಅಥವಾ ಇನ್ನೂ ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಆಕೆಯು ತನ್ನ ಸೇವೆಯ ಮೂಲಕ ಇತರ ದೇವ ಜನರನ್ನು ಚೈತನ್ಯಗೊಳಿಸುವಳು ಎಂಬದಾಗಿ ಇದೆ.

    ಒಬ್ಬ ವಿಧವೆಯು ಮೊದಲು ತನ್ನ ಸ್ವಂತ ಭಾರಗಳನ್ನು, ದುಃಖಗಳನ್ನು ಮತ್ತು ಕಣ್ಣೀರನ್ನು ಕರ್ತನ ಪಾದಗಳ ಬಳಿ ಹಾಕಿದ್ದರೆ ಮಾತ್ರ ಆಕೆ ಈ ಸೇವೆಯನ್ನು ಮಾಡಲು ಸಾಧ್ಯ.

    ಅಧ್ಯಾಯ 3
    ದೇವರು ನಿನ್ನ ಮಕ್ಕಳನ್ನು ರಕ್ಷಿಸುವನು

    ಅಧ್ಯಾಯ ಮೂರು

    ದೇವರು ನಿನ್ನ ಮಕ್ಕಳನ್ನು ರಕ್ಷಿಸುವ

    ನಾನು ನಿಮ್ಮ ಪುತ್ರರನ್ನು (ಮಕ್ಕಳನ್ನು) ರಕ್ಷಿಸುವೆನು (ಯೆಶಾಯ 49:25).

    ಒಂದು ದಿನ ಬಹುದೂರದಿಂದ ಒಬ್ಬ ನಿರಾಶೆಯ ತಾಯಿಂದ ದೂರವಾಣಿಯ ಕರೆಯು ನನಗೆ ಬಂತು. ನೂರಾರು ಮೈಲು ದೂರದಲ್ಲಿರುವ ಒಂದು ಕಾಲೇಜಿಗೆ ತನ್ನ ಮಗನ ಓದುವುದಕ್ಕಾಗಿ ಆಕೆ ಕಳುಹಿಸಿದ್ದಳು. ಅಲ್ಲಿ ಆತನ ಸ್ನೇಹಿತರು ಅವನ ಒಂದು ಕ್ರೈಸ್ತೀಯ (ಸುಳ್ಳು ಸಭೆ) ಮತ ಶ್ರಧ್ದೆ ಗುಂಪಿಗೆ ನಡೆಸಿದರು. ಅವನ ವಿಧ್ಯಾಭ್ಯಾಸವನ್ನು ಮುಗಿಸುವ ಬದಲು ಆ ಹುಡುಗನು ಆ ಗುಂಪಿನ ಧರ್ಮಾಂಧ ಸದಸ್ಯನಾಗಿ, ಈಗ ತನ್ನ ಹಣವನ್ನೆಲ್ಲಾ ಅವರಿಗೆ ಕೊಡುತ್ತಿದ್ದಾ. ಈಗ ಅವನು ಅವರ ಮಾರ್ಗ, ಅವರ ಭಾಷೆಯನ್ನು ಅವಲಂಬಿಸಿ ತನ್ನ ಕುಟುಂಬದೊಂದಿಗೆ ಯಾವ ಸಂಭಂಧ ಬೇಡದವನಾಗಿದ್ದಾ. ಆ ಗುಂಪು ತಮ್ಮನ್ನು ನೀತಿಕರಿಸಿಕೊಳ್ಳಲು ಕೆಲವು ವಾಕ್ಯದ ಆಧಾರಗಳನ್ನು ಎತ್ತಿ ಹೇಳಿದರೂ, ಬೇರೆ ತಿಳುವಳಿಕೆಯುಳ್ಳ ಕ್ರೈಸ್ತರು ಅವರು ತಪ್ಪು ಎಂಬುದನ್ನು ಚೆನ್ನಾಗಿ ಕಾಣಬಹುದು. ಆ ಗುಂಪಿನ ನಾಯಕ ಪ್ರತಿ ಸಣ್ಣ ವಿಷಯಗಳಿಗಾಗಿಯೂ ಆ ಗುಂಪಿನ ಸದಸ್ಯರಿಗೆ ಮಾರ್ಗದರ್ಶನ ನೀಡುವನು ಮತ್ತು ಅವರು ಹತ್ತಿರ ಸಂಬಂಧದ ಒಂದೇ ಕುಟುಂಬದವರಂತೆ ಜೀವಿಸುತ್ತಾರೆ. ಅವರು ಸಂತೋಷವುಳ್ಳವರಾಗಿ ಕಂಡುಬಂದರೂ ಅವರು ಶೂನ್ಯ ಹಾಗೂ ದಾಸತ್ವದಲ್ಲಿದ್ದಾರೆ. ಕೆಲವರು ಮಾತ್ರ ಆ ಗುಂಪನ್ನು ಸದಾ ಕಾಲಕ್ಕೂ ಬಿಡಲು ಸಾಧ್ಯ.

    ಮಕ್ಕಳು ಬೆಳೆಯುವಾಗ ಆ ತಂದೆ-ತಾಯಿ ಅವರ ಕುಟುಂಬದಲ್ಲಿ ದೇವರಿಗೆ ಸಮಯ ಕೊಡಲಿಲ್ಲ. ಕೇಡು ಸಂಭವಿಸುವಾಗ ಮಾತ್ರ ಅವರು ದೇವರನ್ನು ಹುಡುಕುತ್ತಾರೆ. ದೇವರು ಮಾತ್ರ ಅವರ ಮಗನೊಂದಿಗೆ ಮಾತನಾಡಲು ಸಾಧ್ಯವೆಂಬದನ್ನು ಅವರು ಈಗ ಗ್ರಹಿಸಿಕೊಂಡಿದ್ದಾರೆ. ಅವನ ಕಟ್ಟಿರುವ ಬಲವಾದ ಸರಪಣಿ ಪ್ರಾರ್ಥನೆಯಿಂದ ಮಾತ್ರ ಮುರಿಯಲು ಸಾಧ್ಯ.

    ಒಂದು ಒಳ್ಳೇಯ ಕ್ರೈಸ್ತ ಕುಟುಂಬದಲ್ಲಿ ಬೆಳೆದು ತನ್ನ ಸಣ್ಣ ವಯಸ್ಸಿನಿಂದಲೇ ಲೋಕದಿಂದ ಪ್ರತ್ಯೇಕಿಸಿಕೊಂಡು ಜೀವಿಸಬೇಕೆಂದು ತಂದೆ ತಾಯಿಂದ ಕಲಿತಿದ್ದ ಒಬ್ಬ ಯೌವನಸ್ಥನ ಬಗ್ಗೆ ನಾನು ಯೋಚಿಸಿದೆ. ಅವನು ಕಾಲೇಜಿಗೆ ಹೋದಾಗ ಶ್ರೀಮಂತ ವರ್ಗದ ಒತ್ತಡದಿಂದಾಗಿ ಕುಡಿಕತನಕ್ಕೆ ಬಲಿಯಾದ. ಆದರೆ ಗಲಿಬಿಲಿಯಾದ ತಂದೆ-ತಾಯಿಯ ಎಡೆಬಿಡದ ಪ್ರಾರ್ಥನೆಯನ್ನು ದೇವರು ಉತ್ತರಿಸಿದನು ಮತ್ತು ಈ ದಿನ ಆತನು ಒಬ್ಬ ಉತ್ತಮ ಕ್ರೈಸ್ತನು.

    ದೈವೀಕ ಕುಟುಂಬಗಳಲ್ಲಿ ಬೆಳೆದ ಕೆಲವು ಮಕ್ಕಳಿಗೆ ಕೆಲ ಸಂದರ್ಭಗಳಲ್ಲಿ ಅವರು ಈ ಲೋಕದ ಸುಖ ಭೋಗಗಳನ್ನು ಹುಡುಕಲು ಪ್ರಾರಂಭಿಸುವಾಗ ತಾತ್ಕಾಲಿಕವಾಗಿ ನಕಾರಾತ್ಮಕ ಸ್ವಭಾವಗಳು ಬರುತ್ತವೆ. ಆಗ ತಾಯಂದಿರಾದ ನಾವು ಅವರನ್ನು ಆ ಅಂಧಕಾರದ ದಿನಗಳಿಂದ ಹೊರಗೆ ತರಲು ಪ್ರಾರ್ಥಿಸಬೇಕು.

    ತಮ್ಮ ಮಕ್ಕಳಿಗಾಗಿ ಕಣ್ಣೀರನ್ನು ಸುರಿಸುವ ಸಂದರ್ಭಗಳು ಎಲ್ಲಾ ತಾಯಂದಿರಿಗೂ ಬಂದಿರುತ್ತದೆ.

    ಕೆಲವು ತಾಯಂದಿರು ತಮ್ಮ ಮಕ್ಕಳು ದೈಹಿಕ ನ್ಯೂನ್ಯತೆಯಿಂದ ಹುಟ್ಟಿರುವುದಕ್ಕಾಗಿ ಅಥವಾ ಆರೋಗ್ಯದ ಸಮಸ್ಯೆಗಳಿಗಾಗಿ ಅಥವಾ ವಾಸಿಯಾಗದಂತ ರೋಗಗಳಿಂದ ಇರುವಾಗ ಅಳುತ್ತಾರೆ.

    ಇನ್ನೂ ಕೆಲವರು ತಮ್ಮ ಮಕ್ಕಳು ಒಳ್ಳೇ ಕುರುಬನ ಹಾದಿಯನ್ನು ಬಿಟ್ಟು ತಪ್ಪಿಹೋದ ಮಗನು ದೂರ ದೇಶದಲ್ಲಿ ಇದ್ದ ಹಾಗೆ ಒಂದೇ ಕಡೆಯಲ್ಲಿ ಜೀವಿಸುತ್ತಿದ್ದರೂ ತಂದೆ ತಾಯಿಯೊಂದಿಗೆ ಯಾವ ಸಂಪರ್ಕವಿಲ್ಲದೆ ಇರುವುದರಿಂದ ಅಳುತ್ತಾರೆ.

    ಕೆಲವರು ತಮ್ಮ ಮಗ ಅಥವಾ ಮಗಳು ಒಂದು ಸುಳ್ಳು ಸಭೆಯ ಗುಂಪಿಗೆ ಸೇರಿಕೊಂಡು ತಮ್ಮ ತಂದೆ-ತಾಯಿಯೊಟ್ಟಿಗೆ ಯಾವ ವಿಷಯಕ್ಕೂ ಸಂಭಂದವಿಲ್ಲದ ಹಾಗೆ ನಾಶವಾಗಿರುವುದಕ್ಕಾಗಿ ಅಳುತ್ತಾರೆ. ಕೆಲವು ಮಕ್ಕಳು ಮಧ್ಯಪಾನಕ್ಕೆ ಮತ್ತು ಮಾದಕ ವಸ್ತುಗಳಿಗೆ ಸೆರೆಯಾಗಿರುತ್ತಾರೆ. ಇನ್ನೂ ಕೆಲವರು ತಪ್ಪಾದ ಸ್ನೇಹತ್ವದಲ್ಲಿ ಸಿಕ್ಕಿಕೊಂಡಿರುತ್ತಾರೆ. ಕೆಲವರು ದುಷ್ಟಕಾರ್ಯದ ಮಾರ್ಗವಾಗಿ ಹೋಗಿದ್ದರಿಂದ ಹಿಡಿಯಲ್ಪಟ್ಟು ಸೆರೆಯಲ್ಲಿದ್ದಾರೆ.

    ಇಂತಹ ಎಲ್ಲಾ ಸಂದರ್ಭಗಳಲ್ಲಿ, ಮಗು ಅನೇಕ ಒತ್ತಡಗಳನ್ನು ಎದುರಿಸುತ್ತಿರುವಾಗ ಅದು ತಂದೆ ತಾಯಿಗೆ ಅರ್ಥವಾಗದೇ ಇರಬಹುದು ಅಥವಾ ಅಳೆಯಲಾಗದೇ ಇರಬಹುದು. ಒಂದು ವೇಳೆ ಆ ಮಗುವಿಗೆ ತಾನು ತಂದೆ-ತಾಯಿಗೆ ಸ್ವಂತ ಎಂಬದಾಗಿ ಅನ್ನಿಸದೇ ಇರಬಹುದು. ಮನೆಯಲ್ಲಿ ಸಂತತಿಯ ಅಂತರದಿಂದಾಗಿ ತಾನು ಬೇರ್ಪಟ್ಟಂತೆ ಅವನಿಗೆ ಅನ್ನಿಸಿರಬಹುದು ಅವನ ಮತ್ತು ಅವನ ತಂದೆತಾಯಿಯ ನಡುವೆ ಸಂಪರ್ಕವಿಲ್ಲದೇ ಸಹ ಇರಬಹುದು.ಆದರೆ ಇವರಲ್ಲಿ ಪ್ರತಿಯೊಬ್ಬರಿಗೂ ನಿರೀಕ್ಷೆ ಇದೆ.

    ಕೆಲವು ಯೌವನಸ್ಥರು ಅಂತ್ಯದಲ್ಲಿ ತಮ್ಮ ಜೀವಿತವನ್ನು ಕರ್ತನಿಗೆ ಅರ್ಪಿಸಿರುವುದನ್ನು ಸಹ ನಾನು ಕೇಳಿಸಿಕೊಂಡಿದ್ದೇ.

    ನಮ್ಮ ಮಕ್ಕಳು ನಿತ್ಯತ್ವಕ್ಕೂ ಕರ್ತನಿಂದ ಓಡಿಹೋಗಲು ಸಾಧ್ಯವಿಲ್ಲ. ಆತನ ಪ್ರೀತಿ ಮತ್ತು ಕೃಪೆ ಅವರನ್ನು ಹಿಂಬಾಲಿಸಿ ಕಡೆಗೆ ಅವರನ್ನು ಹಿಡಿಯುತ್ತದೆ. ಆತನ ಶಕ್ತಿಗೆ ಯಾವುದೂ ತುಂಬಾ ದೊಡ್ಡದಲ್ಲ. ಮತ್ತು ಪ್ರೀತಿಗೆ ಯಾವುದೂ ತುಂಬಾ ಚಿಕ್ಕದಲ್ಲ ಎಂಬದಾಗಿ ಒಬ್ಬ ದೈವೀಕ ಸ್ತ್ರೀ ಹೇಳಿದಳು.

    ಆದ್ದರಿಂದ ಪ್ರಿಯ ತಾಯಿಯೇ ನಿನ್ನ ಕಣ್ಣೀರಿನ ಪ್ರಾರ್ಥನೆ ಯಾವತ್ತೂ ವ್ಯರ್ಥವಲ್ಲ. ಪ್ರಾರ್ಥಿಸುತ್ತಲೇ ಇರು.ನಾನು ಒಂದು ಕ್ರೈಸ್ತ ಕುಟುಂಬವನ್ನು ಸಂಧಿಸಿದೆ. ಅಲ್ಲಿ ನಾಲ್ಕು ಮಕ್ಕಳು ಸಹ ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿದ್ದರು. ಮತ್ತು ಅವರು ತಮ್ಮ ಯೌವನಾವಸ್ಥೆಯನ್ನು ತಲುಪುವಾಗ ಕ್ಷೀಣವಾಗುತ್ತಿದ್ದರು. ಮೂರು ಮಕ್ಕಳು ಹಾಸಿಗೆ ಹಿಡಿದಿದ್ದರು. ಮತ್ತು ದೊಡ್ಡ ಮಗನು ಸತ್ತುಹೋಗಿದ್ದನು. ಆದರೆ ಅವರು ಕುಟುಂಬ ಸಹಿತವಾಗಿ ದೇವರ ಪ್ರೀತಿಯಿಂದ ಪ್ರಜ್ವಲಿಸುತ್ತಿದ್ದರು. ಒಂದಾದ ನಂತರ ಮತ್ತೊಂದು ಮಗುವನ್ನು ಮರಣದ ಪೆಟ್ಟಿಗೆಯಲ್ಲಿ ಇಡಬೇಕೆಂಬುದಾಗಿ ಆಕೆಗೆ ಗೊತ್ತಿದ್ದರೂ ತನ್ನ ಮಕ್ಕಳ ಜೀವನ ಸುಗಮವಾಗಿರಲಿ ಎಂದು ತಾಯಿಯು ಕಷ್ಟಪಟ್ಟು ದುಡಿಯುತ್ತಿದ್ದಳು. ಆಕೆ ಅತ್ತಳು; ಆದರೆ ಒಂದು ದಿನ ಅವರನ್ನು ಆರೋಗ್ಯ ದೇಹದಲ್ಲಿ ಪುನರುತ್ಥಾನವಾಗುವುದನ್ನು ಕಾಣುವೆನೆಂಬುದಾಗಿ ಆಕೆಗೆ ಗೊತ್ತಿತ್ತು. ಕೆಲವು ತಿಂಗಳುಗಳ ಹಿಂದೆ ಈಗ ಎಲ್ಲಾ ಮಕ್ಕಳು ಸಹ ಪರಲೋಕದಲ್ಲಿ ಇದ್ದಾರೆ ಎಂಬುದನ್ನು ಕೇಳಿಸಿಕೊಂಡೆ. ಈ ಲೋಕದಲ್ಲಿ ಅವರ ಸಂಕಟದ ಜೀವಿತ ತೀರಿತು.

    ಆತನ ರಾಜ್ಯಕ್ಕಾಗಿ ನಾವು ತರಬೇತಿ ಪಡಿಸುವುದಕ್ಕಾಗಿ ದೇವರು ಸ್ವಲ್ಪ ಸಮಯದವರೆಗೂ ಸಾಲವಾಗಿ ನಮಗೆ ಮಕ್ಕಳನ್ನು ಕೊಡುತ್ತಾ. ದೇವರು ನಮಗೆ ಕೊಡುವ ಮಕ್ಕಳ ಬಗ್ಗೆ ನಮಗಿರುವ ಜವಾಬ್ದಾರಿಕೆಯ ಕುರಿತಾಗಿ ಹೇಳುವ ಒಂದು ಪದ್ಯವನ್ನು ಓದಿದೆ.

    ದೇವರು ನಮಗೆ ಸಾಲವಾಗಿ ಕೊಟ್ಟ ಮಗು

    ದೇವರು ಹೇಳಿದನು, ನಾನು ನನ್ನ ಒಂದು ಮಗುವನ್ನು ಸ್ವಲ್ಪ ಸಮಯಕ್ಕಾಗಿ ನಿಮಗೆ ಸಾಲವಾಗಿ ಕೊಡುತ್ತೇನೆಅವನು ಜೀವದಿಂದಿರುವಾಗ ಅವನ ನೀವು ಪ್ರೀತಿಸಿ; ಮತ್ತು ಅವನು ಸತ್ತ ನಂತರ ಅವನ ನನಗೆ ಹಿಂದಿರುಗಿಸಬೇಕು.ಅದು ಒಂದು ವೇಳೆ ಒಂದು ವರ್ಷಕ್ಕೆ ಅಥವಾ ಎರಡು ಅಥವಾ ಐದು ಅಥವಾ ನಾಲ್ಕು ಅಥವಾ ಮೂರು ವರ್ಷಕ್ಕೆ ಇರಬಹುದು.ನಾನು ಕರೆಯುವ ತನಕ ಅವನ ನನಗಾಗಿ ನೀನು ನೋಡಿಕೊಳ್ಳುವಿಯೋ? ತನ್ನ ಆಕರ್ಷಣೆಯಿಂದ ನಿನ್ನನ್ನು ಸಂತೋಷಪಡಿಸುತ್ತಾನೆ ಮತ್ತು ಅವನ ಇರುವಿಕೆಯು ಸಂಕ್ಷೇಪವಾಗಿರುತ್ತದೆ. ನಿನ್ನ ದುಃಖಗಳ ನಡುವೆ ಅವನ ನೆಪಗಳು ಸಂತೈಸುತ್ತವೆ.ಭೂಮಿಯಿಂದ ಸಕಲವು ಹಿಂದಿರುಗುವುದರಿಂದ ಅವನು ಇಲ್ಲೇ ಇರುವನೆಂಬುದಾಗಿ ನಾನು ಭಾಷೆ ಕೊಡಲಾರೆ.ಆದರೆ ಈ ಭೂಮಿಯ ಮೇಲೆ ಕಲಿಸಬೇಕಾದ ಪಾಠಗಳನ್ನು ಈ ಮಗುವು ಕಲಿಯಬೇಕೆಂದು ನನಗೆ ಇಷ್ಟ.ಈ ವಿಸ್ತಾರವಾದ ಭೂಮಿಯಲ್ಲಿ ನಿಜವಾದ ಉಪಾಧ್ಯಾಯರನ್ನು ನಾನು ಹುಡುಕಿದೆ. ಈ ಭೂಮಿಯ ಮೇಲೆ ಜೀವಿಸುತ್ತಿರುವ ಜನರಲ್ಲಿ ನಾನು ನಿನ್ನನ್ನು ಆರಿಸಿಕೊಂಡಿದ್ದೇ.ನೀನು ಕಷ್ಟಪಟ್ಟದ್ದು ವ್ಯರ್ಥ ಎಂಬುದಾಗಿ ಯೋಚಿಸಿದೆ. ಈಗ ನೀನು ನಿನ್ನ ಪ್ರೀತಿಯನ್ನೆಲ್ಲಾ ಅವನಿಗೆ ಕೊಡುವಿಯಾ?ಈ ಕಳೆದುಕೊಂಡ ಮಗುವನ್ನು ನಾನು ಕರೆದುಕೊಂಡು ಹೋಗಲು ಬರುವಾಗ ನನ್ನು ದ್ವೇಷಿಸುವಿಯಾತಂದೆ ತಾಯಿಗಳು ಹೇಳಿದರು, ದುಃಖದ ನೋವನ್ನು, ಈ ಮಗುವು ತರುವ ಸಂತೋಷದಲ್ಲಿ ಮರೆಯುತ್ತೇವೆ. ನಮ್ಮ ಬಳಿ ಇರುವವರೆಗೂ ಅವನಿಗೆ ಹೃದಯ ಕೋಮಲತೆಯಿಂದ ಆಶ್ರಯ ನೀಡುತ್ತೇವೆ.ಅವನು ತರುವಂತ ಸಂತೋಷಕ್ಕಾಗಿ ನಾವು ಯಾವಾಗಲೂ ಕೃತಜ್ಞತೆಯುಳ್ಳವರಾಗಿರುತ್ತೇವೆ. ಒಂದು ವೇಳೆ ನಾವು ಯೋಚಿಸುವದಕ್ಕಿಂತ ಇನ್ನೂ ಮುಂಚೆಯೇ ನೀನು ಬಂದು ಅವನ ಮನೆಗೆ ಕರೆದರೆ,ಆ ಕಹಿಯಾದ ದುಃಖವನ್ನು ಸಹಿಸಿಕೊಂಡು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ದೇವರೇ ನಿನ್ನ ಚಿತ್ತವೇ ಆಗಲಿ.(ಲೇಖಕರು ತಿಳಿಯರು)

    ಮಕ್ಕಳು ಅನೇಕ ಸಂಗತಿಗಳನ್ನು ತಮ್ಮೊಳಗೆ ಯೋಚಿಸುತ್ತಾರೆಂಬುದನ್ನು ಪ್ರೀತಿಯ ತಾಯಿಯೇ ಜ್ಞಾಪಕದಲ್ಲಿಟ್ಟುಕೊ. ಆದರೆ ಅವರ ಅನ್ನಿಸಿಕೆಗಳನ್ನು ಮಾತಿನಲ್ಲಿ ಹೇಳಲು ಬರುವದಿಲ್ಲ. ಆದ್ದರಿಂದ ಅವರು ನಿಶ್ಯಬ್ದವಾಗಿರುವಾಗ ಅಥವಾ ನಿಮ್ಮಿಂದ ದೂರ ಸರಿಯುವಾಗ ಅಥವಾ ಅವರು ಮೂಖರಾಗಿರುವಾಗ ನೀವೇ ಅವರನ್ನು ಅರ್ಥಮಾಡಿಕೊಳ್ಳುವುದು ಅವಶ್ಯ. ಅವರು ಕೆಟ್ಟವರಾಗಿರುವುದಿಲ್ಲ. ಆದರೆ ಕೆಲವು ಸಂಗತಿಗಳಿಂದ ಒದ್ದಾಡುತ್ತಿರುತ್ತಾರೆ.

    ನಿಮ್ಮ ಮಗು ಯಾವುದೇ ವಿಷಯದಲ್ಲಿ ಹೋರಾಡುತ್ತಿರಲಿ, ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪರಲೋಕದಲ್ಲಿ ಒಬ್ಬಾತನು ಇದ್ದಾನೆ ಎಂಬದನ್ನು ಜ್ಞಾಪಿಸಿಕೊಳ್ಳಿರಿ. ಆತನು ಯಾಯಿರನ ಸತ್ತ ಮಗಳ ಪಕ್ಕದಲ್ಲಿ ನಿಂತು ಆಕೆಯನ್ನು ಎಬ್ಬಿಸಿದನು. ದುಃಖದಲ್ಲಿ ಮುಳುಗಿದ್ದ ತಂದೆ-ತಾಯಿಗಳ ಜೊತೆಯಲ್ಲಿ ತನ್ನ ಕೆಲವು ಶಿಷ್ಯರನ್ನು ಯೇಸುವು ಕೋಣೆಯೊಳಕ್ಕೆ ಕರೆದುಕೊಂಡು ಹೋಗಿ ಕೋಣೆಯ ಬಾಗಿಲನ್ನು ಮುಚ್ಚಿದ ಚಿತ್ರವನ್ನು ನಿಮ್ಮ ಮುಂದೆ ಚಿತ್ರಿಸಿಕೊಳ್ಳಿ. ಅನಂತರ ಸತ್ತ ಆ ಹುಡುಗಿಯನ್ನು ಎಬ್ಬಿಸಿ ತನ್ನ ತಂದೆ-ತಾಯಿಗೆ ಹಿಂದಿರುಗಿಸಿ ಕೊಟ್ಟು ಅವಳಿಗೆ ತಿನ್ನಲು ಏನಾದರೂ ಕೊಡಿ ಎಂದು ಹೇಳಿದನು.

    ಈ ದಿನ ಯೇಸು ಅದನ್ನೇ ನಿಮಗೆ ಮಾಡಲಿ. ನೀವು ಅಳುವಾಗ ಆತನು ನಿಮ್ಮನ್ನು ಪ್ರತ್ಯೇಕವಾಗಿ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಲು ಬಿಡಿ. ಆತನು ನಿಮ್ಮ ಮಗುವಿಗೆ ಸಹ ಅದ್ಬುತವನ್ನು ಮಾಡುವನು. ಮನಗುಂದಿದವರಾಗಬೇಡಿರಿ.

    ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗಾಗಿ ತಪ್ಪದೆ ಪ್ರಾರ್ಥಿಸುತ್ತಾರೆ; ಮತ್ತು ಹೀಗೆ ಪ್ರಾರ್ಥಿಸುತ್ತಿರುವಾಗ ಕೆಲವು ಸಾರಿ ಇದ್ದಕ್ಕಿದ್ದ ಹಾಗೆ ಪ್ರತ್ಯೇಕವಾಗಿ ಒಂದು ಮಗುವಿಗೆ ಪ್ರಾರ್ಥಿಸಲು ಭಾರ ಬಂದಿರುವದನ್ನು ಜ್ಞಾಪಿಸಿಕೊಳ್ಳಬಹುದು. ಪ್ರಾರ್ಥನೆಯ ಸಮಯದ ನಂತರ ಆ ಭಾರವು ಕಳೆದು ಹೋಗಿರುವುದು ಅವರಿಗೆ ಕಂಡು ಬರುತ್ತದೆ. ಆ ನಂತರ ಅವರ ಮಗು ಅದೇ ಸಂಧರ್ಭದಲ್ಲಿ ಯಾವುದೋ ಅಪಾಯವನ್ನು ಎದುರಿಸುತ್ತಿರುವುದು ಕಂಡು ಬರುತ್ತದೆ. ಹೀಗೆಯೇ ನಮ್ಮ ಮಕ್ಕಳ ಸಲುವಾಗಿ ಪ್ರಾರ್ಥನಾ ವೀರರನ್ನಾಗಿ ದೇವರು ನಿಮ್ಮನ್ನು ಮಾಡುತ್ತಾನೆ. ಪ್ರಾರ್ಥನೆಯು ಕೊನೆಯ ಸಹಾಯವಲ್ಲ. ಆದರೆ ಅದು ನಮ್ಮ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರ ಮಾತ್ರ ಆಗಿದೆ.

    ನಾಯಿನ ಎಂಬ ಹಳ್ಳಿಯಲ್ಲಿ ಒಬ್ಬ ವಿಧವೆ ತನ್ನ ಸತ್ತ ಮಗುವನ್ನು ಹಿಂದಕ್ಕೆ ಪಡೆದಳು. ನಿಮ್ಮ ಮಗು ಸಹ ಆತ್ಮೀಕವಾಗಿ ಸತ್ತಿರಬಹುದು. ಒಂದು ವೇಳೆ ಲಾಜರನಂತೆ ನಾತವಿಡಿದಿರಬಹುದು. ಆದರೆ ಅವಳು ಅಥವಾ ಅವನು ಯೇಸುವಿನ ಸ್ವರವನ್ನು ಕೇಳಿ ಜೀವಿತರಾಗಿ ಹೊರ ಬರುವರು. ಆದ್ದರಿಂದ ನಿಮ್ಮ ಮಗುವಿಗಾಗಿ ಹಗಲು ಇರುಳು ಮೊರೆಯಿಡಿರಿ. ದೇವರು ನಮಗೆ ಅನೇಕ ವಾಗ್ದಾನಗಳನ್ನು ಕೊಟ್ಟಿದ್ದಾನೆ. ಮತ್ತು ಆತನು ಅದನ್ನೆಲ್ಲಾ ಪೂರೈಸುವನು ಮತ್ತು ಶೀಘ್ರವಾಗಿ ಉತ್ತರಿಸುವನು. ನೀವು ಆತನಿಗಾಗಿ ಕಾದಿರುವಾಗ ಕರ್ತನು ನಿಮಗಾಗಿ ಶೇಖರಿಸಿ ಇಟ್ಟಿರುವುದನ್ನು ಕಣ್ಣು ಕಾಣಲಿಲ್ಲ ಮತ್ತು ಕಿವಿ ಕೇಳಲಿಲ್ಲ. ಮನುಷ್ಯರಿಗೆ ಅಸಾದ್ಯವಾದದ್ದು ದೇವರಿಗೆ ಸಾಧ್ಯ.

    ನನ್ನ ಅನೇಕ ಸಂಕಷ್ಟಗಳಲ್ಲಿ ಈ ವಾಕ್ಯವು ಹುದುಗಿದ ಬುಗ್ಗೆಯಂತೆ ನನ್ನನ್ನು ಬಲಪಡಿಸಿದೆ. ಅನೇಕ ರೀತಿಯ ಸಂದರ್ಭಗಳಲ್ಲಿ ನನ್ನ ಸ್ವಂತ ಮಕ್ಕಳ ವಿಷಯದಲ್ಲಿ ದೇವರು ನೀಡಿದ ಅಸಂಖ್ಯಾ ಪ್ರಾರ್ಥನಾ ಉತ್ತರಗಳನ್ನು ನಾನು ಸಾಕ್ಷಿಯಾಗಿ ನುಡಿಯಬಲ್ಲೆ. ಪ್ರಾರ್ಥನಾ ಉತ್ತರವಾಗಿ ನನ್ನ ನಾಲ್ಕು ಜನ ಪುತ್ರರಲ್ಲಿ ದೇವರು ಮಾಡಿರುವಂತ ಎಲ್ಲವುಗಳಿಗಾಗಿ ಆತನಿಗೆ ನಾನು ಎಲ್ಲಾ ಮಹಿಮೆಯನ್ನು ಸಲ್ಲಿಸುತ್ತೇನೆ. ಪ್ರಾರ್ಥನೆಯು ಸಂಗತಿಗಳನ್ನು ಬದಲಾಯಿಸಬಲ್ಲದು ಎಂಬುದು ನನಗೆ ಗೊತ್ತಿದೆ. ನಿಮಗೂ ಸಹ ಅದು ಸಂಗತಿಗಳನ್ನು ಬದಲಾಯಿಸಲು ಸಾಧ್ಯ. ಮತ್ತು ನಿಮ್ಮ ಮಕ್ಕಳಿಗೂ ಸಹ. ನಾವು ಯೋಚಿಸುವುದಕ್ಕಿಂತ ಮತ್ತು ಬೇಡುವುದಕ್ಕಿಂತ ಹೆಚ್ಚಾದದನ್ನು ದೇವರು ನಮಗೂ ಹಾಗೂ ನಮ್ಮ ಮಕ್ಕಳಿಗೆ ಮಾಡಲು ಸಾಧ್ಯ.

    (ಎಫೆಸ 3:20)).

    ಒಂದು ವೇಳೆ ನಿಮ್ಮ ಮಗುವು ಕೆಟ್ಟ ಅಭ್ಯಾಸಕ್ಕೆ ಒಳಪಟ್ಟಿದ್ದರೆ, ಅವನ ದೂಷಿಸಬೇಡಿರಿ. ಈಗಾಗಲೇ ಅವನು ಸಾಕಷ್ಟು ನೊಂದಿದ್ದಾನೆ; ಅದರಿಂದ ಅವನಿಗೆ ಬಿಡುಗಡೆ ಹೊಂದಬೇಕೆಂಬುದಾಗಿ ಆಶೆಯುಂಟು. ಆದರೆ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಾಯಿಲ್ಲ. ನಿಮ್ಮನ್ನು ಸಹ ಎಂದಿಗೂ ನಿಂದಿಸಿಕೊಳ್ಳಬೇಡಿರಿ. ಒಂದು ವೇಳೆ ನಾನು ಉತ್ತಮ ತಾಯಿಯಾಗಿದ್ದರೆ, ಎಂಬದಾಗಿ ಹೇಳಿಕೊಳ್ಳಲು ಇದು ಸಮಯವಲ್ಲ. ಯಾವ ತಾಯಿಯೂ ಸಂಪೂರ್ಣಳಲ್ಲ. ನಾವೆಲ್ಲರೂ ಉತ್ತಮವಾದದ್ದನ್ನೆ ಮಾಡುತ್ತೇವೆ. ಆದರೆ ಅದೇ ಸಂದರ್ಭದಲ್ಲಿ ತನ್ಪ ಸಹ ಮಾಡುತ್ತೇವೆ.

    ನಿಮ್ಮನ್ನು ಯಾವುದಾದರೂ ವಿಷಯ ಕಾಡುತ್ತಿದ್ದರೆ ಅದನ್ನು ಕರ್ತನಿಗೆ ಒಪ್ಪಿಸಿ ಅದರಿಂದ ವಿಮುಖರಾಗಿ, ಎಲ್ಲಾ ರೀತಿಯ ತಪ್ಪು ಮನೋಭಾವನೆ ಮತ್ತು ಅಪರಾಧ ಮನೋಭಾವನೆಯನ್ನು ತೊರೆಯಿರಿ. ಅಪರಾದ ಮನೋಭಾವನೆಯು ಸೈತಾನ ಒಂದಾನೊಂದು ಚೂಪಾದ ಬಾಣವಾಗಿದೆ; ಮತ್ತು ಅದರಿಂದ ಅವನು ಗಾಯಗೊಳಿಸಿ ಅನೇಕ ದೇವರ ಮಕ್ಕಳನ್ನು ಸ್ವಾಧೀನವಿಲ್ಲದವರ ಹಾಗೆ ಮಾಡಿ, ಪ್ರಾರ್ಥನೆಯಿಲ್ಲದವರಂತೆಯೂ ಮಾಡುತ್ತಾ.. ನಾವು ನಮ್ಮ ಮಕ್ಕಳಿಗಾಗಿ ಯುದ್ದಭೂಮಿಯಲ್ಲಿ ಹೋರಾಡುತ್ತಿದ್ದೇವೆ. ಆದ್ದರಿಂದ ನಮ್ಮ ಬಲವನ್ನು ಅಳುವುದರಲ್ಲಿ ಕಳೆಯಬಾರದು. ನಾವು ಮಾಡಬೇಕಾದ ಕೆಲಸವಿದೆ. ಮತ್ತು ಅದನ್ನು ಈಗಲೇ ಮಾಡಬೇಕು. ನಿಮ್ಮ ಮಗುವಿನ ಜೊತೆ ಮಾತನಾಡುವಾಗ ದೇವರು ನಿಮಗೆ ಸಹಾಯ ಮಾಡಲು ಬೇಡಿಕೊಳ್ಳಿರಿ. ಅನೇಕ ವರ್ಷಗಳಿಂದ ಕಟ್ಟಲ್ಪಟ್ಟ ಗೋಡೆಗಳು ಮುರಿದು ಬೀಳುವಂತೆ ದೇವರು ಮಾಡಲಿ. ನಿಮ್ಮ ಕಣ್ಣೀರಿನ ವಿಜ್ಞಾನಗಳು ದೇವರೊಂದಿಗೆ, ನಿಮ್ಮ ಮಗನೊಂದಿಗೆ ಮತ್ತು ಮಗಳೊಂದಿಗೂ ಅಧ್ಬುತಗಳನ್ನು ಮಾಡಬಲ್ಲದು.

    ನಿಮ್ಮ ಮಗುವು ಅಸಹಾಯಕವಾಗಿರುವದರಿಂದ ಅವನ ಪರವಾಗಿ ನೀವು ಹೋರಾಡುವುದು ಅವಶ್ಯ. ಆದ್ದರಿಂದ ನಾವು ಬಲಗೊಳ್ಳುವುದು ಅವಶ್ಯ. ಒಂದು ಸಾರಿ ದಾವೀದನು ಸಿಂಹದ ಬಾಯಿಂದ ಕುರಿಮರಿಯನ್ನು ಕಿತ್ತುಕೊಂಡ ಹಾಗೆ ನಾವು ಸಹ ನಮ್ಮ ಮಕ್ಕಳನ್ನು ಸೈತಾನ ಬಾಯಿಂದ ಕಿತ್ತುಕೊಳ್ಳಬೇಕು.

    ಈವರೆಗೂ ನೀನು ಬಲಹೀನ ಮತ್ತು ಹೇಡಿತನದ ಸ್ತ್ರೀಯಾಗಿದ್ದೆ. ಆದರೆ ಈಗ ನೀನು ಎದ್ದು ನಿನ್ನ ಕಣ್ಣೀರನ್ನು ಒರೆಸಿ, ಪರಲೋಕದವರೊಂದಿಗೆ ಯುಧ್ದದಲ್ಲಿ ಸೇರು. ಜೀವವುಳ್ಳ ರೊಟ್ಟಿಯನ್ನು ತಿಂದು ಸೈತಾನ ವಿರುಧ್ದ ಹೋರಾಡಲು ದೇವರ ವಾಕ್ಯವೆಂಬ ಆತ್ಮನ ಖಡ್ಗವನ್ನು ಉಪಯೋಗಿಸಿ ಅವನ ನಿನ್ನ ಕುಟುಂಬದಿಂದ ಓಡಿಸು. ಕರ್ತನು ವಾಗ್ದಾನ ಕೊಟ್ಟ ಹಾಗೆ ಯೇಸುವಿನ ಹೆಸರಿನಲ್ಲಿ ಸೈತಾನನ ಎದುರಿಸು. ಅವನು ಮಿಂಚಿನ ವೇಗದಲ್ಲಿ ನಿಮ್ಮನ್ನು ಬಿಟ್ಟು ಓಡಿ ಹೋಗುವನು.

    (ಯಾಕೋ 4:7 ಮತ್ತು ಲೂಕ 10:18).

    ಅಂತಹ ಸಮಯಗಳಲ್ಲಿ ದೇವರ ವಾಕ್ಯ ಅಮೂಲ್ಯವಾಗಿರಬೇಕು. ಇಂತಹ ಶೋಧನೆಯಲ್ಲಿ ನಿಮ್ಮ ಮಗುವಿನೊಂದಿಗೆ ನಿಮ್ಮ ಆತ್ಮೀಕ ಶಕ್ತಿಯ ಸತ್ವ ಹೊರಟು ಹೋಗಲು ಬಿಡಬೇಡಿ. ನಿಮ್ಮ ಆಳವಾದ ದುಃಖದಲ್ಲಿ ದೇವರ ಅಧ್ಬುತವಾದ ವಾಗ್ದಾನಗಳು ನಿಮ್ಮನ್ನು ಸಂರಕ್ಷಿಸುತ್ತದೆ. ದಾವೀದನ ಕೀರ್ತನೆಗಳನ್ನು ಓದಿರಿ. ಇವು ನಮ್ಮ ದುಃಖದಲ್ಲಿ ಮತ್ತು ಶೋಧನೆಗಳ ಸಮಯದಲ್ಲಿ ನಮ್ಮನ್ನು ಮೇಲಕ್ಕೆ ಎತ್ತುವ ವಿಶೇಷ ಶಕ್ತಿಯನ್ನು ಹೊಂದಿವೆ.

    ದೇವರ ಸಮೀಪ ಹೋಗಿ ಆತನ ಕೃಪೆಯ ಒಂದು ಗುರುತನ್ನು ನಿನ್ನ ಕಡೆಗೆ ತೋರಿಸಲು ಕೇಳಿಕೋ .(ಕೀರ್ತ 86:16) ಈ ರೀತಿಯ ವಾಗ್ದಾನಗಳನ್ನು ಹಕ್ಕಾಗಿ ಸ್ವೀಕರಿಸು:

    ಮಿಡತೆಗಳು ತಿಂದು ಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು. (ಯೋವೆಲ 2:25).

    ವಾಗ್ದಾನ ಮಾಡಿದಾತನು ನಂಬಿಗಸ್ತನು.........ಮಾತುಕೊಟ್ಟ ನಂತರ ನೇರವೇರಿಸುವುದಿಲ್ಲವೋ? (ಇಬ್ರಿಯ 10:23 ಅರಣ್ಯಕಾಂಡ 23:19 ).

    ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು. (ಹಗ್ಗಾಯ 2:9)).

    ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡಿಸಿದ್ದೀ..(ಯೆಶಾಯ 64:3).

    ದೇವರು ಸಕಲ ವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು. (2 ಕೊರಿ 9:8)

    ಇಂತವುಗಳು ಪ್ರವಾದನ ವಾಕ್ಯಗಳು ಮತ್ತು ಬಲವುಳ್ಳದ್ದು ಮತ್ತು ನಮಗಾಗಿ ಅದ್ಭುತಗಳನ್ನು ಮಾಡಬಲ್ಲದು.

    ಓ ದೇವರ ವಾಕ್ಯ ಅದ್ಭುತ ಅದ್ಭುತ ನಿಜವಾದ ಜ್ಞಾನವನ್ನು ಅದು ಹೊರಪಡಿಸುತ್ತದೆ. ಸಾವಿರಕ್ಕಿಂತ ಹೆಚ್ಚು ಸಾರಿ ನಾವು ಅದನ್ನು ಓದಿದರೂ, ಇಲ್ಲ ಅವು ಎಂದಿಗೂ ಹಳೆಯದಾಗುವುದಿಲ್ಲ. ಪ್ರತಿಯೊಂದು ವಾಕ್ಯದಲ್ಲೂ ನಿಕ್ಷೇಪವಿದೆ.ಎಲ್ಲವನ್ನು ನಾವು ಜೋಪಾನ ಮಾಡಿದಾಗ ಪ್ರತಿಯೊಂದು ವಾಗ್ದಾನವೂ ಮುತ್ತು; ಮತ್ತು ನಮಗೆ ಗೊತ್ತಿರುವ ಹಾಗೆ ಸಮಯ ಮತ್ತು ಪ್ರಂಚವು ಕಳೆದು ಹೋಗುವದು. ಆದರೆ ದೇವರ ವಾಕ್ಯವು ಎಂದೆಂದಿಗೂ ನಿಲ್ಲುತ್ತದೆ. (ಜೂಲಿಯ ಸ್ಟರ್ಲಿಂಗ್)

    ದಾವೀದನ ಅವನ ವೈರಿಗಳು ಹಾಕಿದ ಬಲೆಯಿಂದ ಬಿಡಿಸಿದ ಕರ್ತನು ನಿಮ್ಮ ಮಗುವನ್ನು ಸಹ ಬಿಡಿಸುವನು. (ಕೀರ್ತ 124:6-8 ಓದಿ ವಾಗ್ದಾನವನ್ನು ಹೊಂದಿಕೊಳ್ಳಿ)ನಿಮ್ಮ ಮಗುವನ್ನು ಅಪರಾದಿಯ ಹಾಗೆ ಅಲ್ಲ ಅಸ್ವಸ್ಥತೆಯುಳ್ಳ ಮಗುವಿನಂತೆ ಕಾಣಿರಿ. ಹೇಗೆ ತಾನೆ ಇಂತಹ ಸಂಗತಿಯನ್ನು ನಮಗೆ ಮಾಡಿದೆ? ಎಂಬದಾಗಿ ನಿಮ್ಮ ಮಗುವಿಗೆ ಎಂದಿಗೂ ಕೇಳಬೇಡಿರಿ.

    ನಿಮ್ಮ ಮಗುವಿನ ಬಗ್ಗೆ ಇತರರು ಹೇಳುವುದನ್ನು ಕೇಳಿಸಿಕೊಂಡು ನಿಮಗೆ ನಾಚಿಕೆಯಾಗಿರಬಹುದು. ಆದರೆ ಜನರ ಅಭಿಪ್ರಾಯಗಳಿಗಾಗಿ ಚಿಂತಿಸಬೇಡಿರಿ. ಜನರ ಅಭಿಪ್ರಾಯಗಳನ್ನು ನೀವು ಕಸದ ತೊಟ್ಟಿಗೆ ಎಸೆಯಬೇಕು ಎಂಬದಾಗಿ ನನ್ನ ಯಜಮಾನರು ಯಾವಾಗಲೂ ಹೇಳುತ್ತಿರುತ್ತಾರೆ. ಭೂಲೋಕದ ಯಾವುದೇ ಮನುಷ್ಯನಿಗಿಂತ ನಿಮ್ಮ ಮಗು ಶ್ರೇಷ್ಠ. ಆದ್ದರಿಂದ ನಿಮ್ಮ ಕಳೆಗುಂದಿದ ಕುಟುಂಬದ ಗೌರವಕ್ಕೋಸ್ಕರ ಅಳುವುದರಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಬೇಡಿರಿ. ನಿಮ್ಮ ಮಗು ದೇವರ ಕಡೆಗೆ ಪುನಃ ತಿರುಗುವಂತೆ ಅದಕ್ಕಾಗಿ ಅಳಿರಿ. ಅದೇ ಮುಖ್ಯವಾದದ್ದು.

    ನಿಮ್ಮ ಮಗುವಿನೊಂದಿಗೆ ಸ್ವಸ್ಥತೆಯ ಮಾತುಗಳನ್ನು, ಕ್ಷಮಿಸುವಿಕೆ, ನಂಬಿಕೆ ಮತ್ತು ಸಮಾಧಾನದ ಮಾತುಗಳನ್ನು ಮಾತನಾಡಿ. ಅವನ ಅಥವಾ ಅವಳನ್ನು ಒಬ್ಬ ಬೆಳೆದ ವ್ಯಕ್ತಿಯಂತೆ ನೋಡಿಕೊಳ್ಳಿ . ಯಾಕಂದರೆ ಮುಂದಕ್ಕೆ ಅವರು ಹಾಗೆ ಬೆಳೆಯುವವರಾಗಿದ್ದಾರೆ.

    ಅವನಿಗಾಗಿ ಪ್ರಾರ್ಥಿಸಿ. ಅವನ ಸೈತಾನ ಬಲೆಯಿಂದ ಕಾಪಾಡಿ. ಕ್ರೈಸ್ತ ಸ್ನೇಹಿತರ ಪ್ರಾರ್ಥನೆಯ ಸಹಾಯವನ್ನು ಉಪಯೋಗಿಸಿಕೊಳ್ಳಿರಿ. ಯಾವುದೇ ಷರತ್ತಿಲ್ಲದೆ ತಪ್ಪಿಹೋದ ಮಗನ ತಂದೆ ಸೇರಿಸಿಕೊಂಡಂತೆ ನಿಮ್ಮ ಮಗನ ಅಂಗೀಕರಿಸಿಕೊಳ್ಳಲು ಸಿದ್ಧರಿರಿ. ಸಾಧ್ಯವಾದರೆ ಅವನಿಗೆ ವೈದ್ಯಕೀಯ ಅಥವಾ ಉದ್ಯೋಗದ ಸಹಾಯವನ್ನು ಮಾಡಿರಿ. ಈ ರೀತಿಯ ಯೌವನಸ್ಥರನ್ನು ನಿರ್ವಹಿಸಲು ಕೆಲವು ತರಬೇತಿ ಹೊಂದಿದವರಿದ್ದಾರೆ. ಅಂಥವರ ಸಹಾಯ ಪಡೆಯಿರಿ, ಅಥವಾ ನಿಮ್ಮ ಮಗುವಿನ ಸಮಸ್ಯೆಯನ್ನು ಕಂಡುಕೊಂಡು ಅವನಿಗೆ ನೀವಾಗಿಯೇ ಸಹಾಯಿಸಿರಿ. ಇದೆಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಗಂಡನೊಂದಿಗೆ ಒಂದಾಗಿದ್ದು ನಿಮ್ಮ ಮಗುವಿಗಾಗಿ ಪ್ರಾರ್ಥಿಸಿ. ಒಂದು ವೇಳೆ ಮನೆಯಲ್ಲಿ ಒಡಕು (ವಿಭಜನೆ) ಇದ್ದರೆ ಸೈತಾನನು ಸುಭದ್ರವಾದ ಸ್ಥಾನವನ್ನು ನಿಮ್ಮ ಕುಟುಂಬದಲ್ಲಿ ತೆಗೆದುಕೊಳ್ಳುತ್ತಾ. ಇಬ್ಬರೂ ಒಂದೇ ಮನಸ್ಸಿನಿಂದ ಯಾವುದೇ ವಿಷಯಕ್ಕಾಗಿ ಆತನ ಹೆಸರಿನಲ್ಲಿ ತಂದೆಯಾದ ದೇವರನ್ನು ಕೇಳಿಕೊಂಡರೆ ಅದು ಅವರಿಗೆ ದೊರಕುವದು ಎಂದು ಯೇಸುವು ಹೇಳಿದ್ದಾನೆ .

    ಆದ್ದರಿಂದ ಯಾರನ್ನೂ ದೂಷಿಸಬೇಡಿ. ಒಂದು ವೇಳೆ ನಿಮ್ಮ ಮಗುವು ತನ್ನ ಮೊಂಡತನದ ಫಲವನ್ನು ಕೊಯ್ಯುತ್ತಿರಬಹುದು; ಆದರೆ ಪ್ರತಿಯೊಬ್ಬರಿಗೂ ಒಂದು ನಿರೀಕ್ಷೆ ಇದೆ ಎಂಬುದಾಗಿ ಜ್ಞಾಪಕವಿರಲಿ. ಕೀರ್ತನೆ 119:15 ರಲ್ಲಿ ನಿನ್ನ ನೇಮಗಳನ್ನು ಧ್ಯಾನಿಸುತ್ತಾ ನಿನ್ನ ದಾರಿಯನ್ನು ಲಕ್ಷ್ಯೀಕರಿಸಿಕೊಳ್ಳುವೆನು ಎಂಬುದಾಗಿ ಇದೆ. ಕೊನೆಗೆ ಆ ತಪ್ಪಿಹೋದ ಮಗನು ತಂದೆಯ ಮನೆಗೆ ಹಿಂದಿರುಗಿದನು. ಅವನ ತಂದೆತಾಯಿಗಳು ಅವನಿಗಾಗಿ ಬಹಳ ಅತ್ತಿರಬೇಕೆಂಬುದು ನಗೆ ಖಚಿತ. ಆದರೆ ಅವರ ದುಃಖದ ಕಣ್ಣೀರು ಒಂದು ದಿನ ಸಂತೋಷದ ಕಣ್ಣೀರಾಗಿ ಪರಿವರ್ತಿಸಲ್ಪಟ್ಟಿತು.

    ಈಗ ನಿಮ್ಮ ಮಗುವಿಗೆ ಸಂಭವಿಸುತ್ತಿರುವ ಸಂಗತಿಗಳು ನಿಮಗೆ ಆಶ್ಚರ್ಯವಾಗಿ ತೋರುತ್ತಿರಬಹುದು. ಆದರೆ ಅದು ದೇವರಿಗೆ ಆಶ್ಚರ್ಯವಲ್ಲ. ಏನು ಸಂಭವಿಸುತ್ತದೆ ಎಂಬುದಾಗಿ ಆತನಿಗೆ ಮೊದಲೇ ಗೊತ್ತಿತ್ತು ಮತ್ತು ಅದಕ್ಕೆ ಪರಿಹಾರವು ಸಹ ಆತನಲ್ಲಿದೆ. ಪ್ರತಿಯೊಂದು ಸಮಸ್ಯೆಗೂ ಮತ್ತು ನಾವು ಮಾಡುವ ತಪ್ಪಿಗೂ ಸಹ ಆತನಲ್ಲಿ ಪರಿಹಾರವಿದೆ. ಆದ್ದರಿಂದ ನಮ್ಮ ಮಕ್ಕಳನ್ನು ಪ್ರತಿಯೊಂದು ಬಿಕ್ಕಟ್ಟಿನಿಂದ ಆತನು ಹೊರತರುವನೆಂಬ ಭರವಸೆಯಿಂದ ಆತನ ಕಡೆಗೆ ತಿರುಗೋಣ.

    ನನ್ನಮನಸ್ಸು ನೊಂದು ಹೋಗಿತ್ತು. ಅಂತರ್ಯದಲ್ಲಿ ಅಲಗು ನೆಟ್ಟಂತಿತ್ತು. ನಾನು ವಿವೇಕಹೀಪಮರನಾಗಿ ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು. ಆದರೂ ಸದಾ ನಿನ್ನ ಸನ್ನಿದಿಯಲ್ಲಿಯೇ ಇದ್ದೇ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.(ಕೀರ್ತನೆ 73:21-24).

    ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವುದೂ ನಿನಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೇ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿಧ್ದಮಾಡುವನು.

    (1 ಕೊರಿ 10:13 ).

    ನೀವು ಸಹಿಸುವದಕ್ಕಿಂತ ಹೆಚ್ಚಾಗಿ ದೇವರು ನಿಮ್ಮನ್ನು ಶೋಧಿಸುವುದಿಲ್ಲ. ಕಣ್ಣೀರು ಒಂದು ರಾತ್ರಿಯಲ್ಲಿ ಕಳೆದುಹೋಗಬಹುದು. ಆದರೆ ಮುಂಜಾನೆಗೆ ಆನಂದವು ಬರುವದು.ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿ ಹೋದವರನ್ನು ಉದ್ದಾರ ಮಾಡುತ್ತಾನೆ (ಕೀರ್ತನೆ 34:18)).

    ಈ ಎಲ್ಲಾ ಜಜ್ಜುವಿಕೆಯ ಅನುಭವಗಳು ನಾವು ಕರ್ತನಿಗೆ ಇನ್ನೂ ಸಂಪೂರ್ಣವಾಗಿ ಒಳಗಾಗುವಂತೆ ಮತ್ತು ಆತನು ನಮಗಾಗಿ ಮತ್ತು ನಮ್ಮೊಳಗೆ ಕಾರ್ಯಮಾಡುವದಕ್ಕಾಗಿ ಕಾಯುವಂತೆ ಮಾಡುತ್ತದೆ. ಈ ಶೋಧನೆಯು ಒಂದು ದಿನ ಅಂತ್ಯಕ್ಕೆ ಬರುತ್ತದೆ. ಆದರೆ ಸುಮ್ಮನೆ ಕುಳಿತು ಕಾಯಬೇಡಿರಿ. ಅವಶ್ಯವಿರುವಾಗ ಕಾರ್ಯ ಮಾಡಲು ಸಿದ್ಧರಿರಬೇಕು. ಏನು ಮಾಡಬೇಕೆಂಬುದಾಗಿ ದೇವರು ನಿಮಗೆ ಜ್ಞಾನವನ್ನು ಕೊಡುವನು. ಜಜ್ಜುವಿಕೆಯನ್ನು ಸಹಿಸಿಕೊಳ್ಳಿರಿ ಆದರೆ ಅಳುವಾಗಲೇ ಕೆಲಸಮಾಡಿರಿ.

    ನಾವೆಲ್ಲರೂ ಸ್ವಾವಲಂಬಿಗಳು ಮತ್ತು ಆತ್ಮ ವಿಶ್ವಾಸವುಳ್ಳವರು. ಶೋದನೆಗಳು ಮಾತ್ರ ಕರ್ತನ ಆಶ್ರಯಿಸಿ ಪ್ರಾರ್ಥಿಸುವಂತೆ ಕಲಿಸಲು ಸಾಧ್ಯ. ಸಂಕಟವು ತಾಳ್ಮೆಯನ್ನು ತರುತ್ತದೆ....ಉಪವಾಸವಿದ್ದು ಪ್ರಾರ್ಥಿಸುವಂತೆ ಕರ್ತನು ನಮಗೆ ಕಲಿಸಿಕೊಟ್ಟನು. ನಾವು ಎಂಥಾ ನಾಚಿಕೆ ಸ್ವಭಾವದವರು ಮತ್ತು ಬಲಹೀನರೇ ಆಗಿದ್ದರೂ ಸಹ ಪರಲೋಕದ ದ್ವಾರವನ್ನು ತಟ್ಟಿದರೆ ಅದು ನಮಗೆ ತೆರೆಯಲ್ಪಡುವದು. ರಾತ್ರಿಯ ಏಕಾಂತದ ಕಾಲದಲ್ಲಿ ನಿಮ್ಮ ಹೃದಯದಿಂದ ದೇವರಿಗೆ ಪ್ರಾರ್ಥಿಸಿರಿ. ಪರಲೋಕವು ಬಹು ಬೇಗನೆ ತೆರೆಯಲ್ಪಟ್ಟು ನಿಮ್ಮ ವಿಜ್ಞಾನಗೆ ಉತ್ತರವನ್ನು ಕಾಣುವಿರಿ. ಆ ಕಾರ್ಗತ್ತಲೆಯ ದಿನದಲ್ಲಿ ನಿನಗೆ ಸಿಕ್ಕ ವಾಗ್ದಾನಗಳನ್ನು ಬರೆದು ಇಟ್ಟುಕೋ. ಪ್ರತಿಯೊಂದು ಸಹ ಕಾಮನ ಬಿಲ್ಲಿನಂತೆ ಅಥವಾ ಅಮುಲ್ಯವಾದ ವಜ್ರದಂತೆ ಒಂದು ದಿನ ಇತರರ ಸಹಾಯಕ್ಕಾಗಿ ಕೊಡಲು ಸಾಧ್ಯವಾಗುತ್ತದೆ. ಗುಪ್ತವಾಗಿ ನಿಮ್ಮ ಪ್ರಾರ್ಥನೆಯನ್ನು ಕೇಳುವ ತಂದೆಯು ಬಹಿರಂಗವಾಗಿ ಪ್ರತಿಫಲವನ್ನು ಕೊಡುವನು. ಆತನು ನಿಮಗೆ ಬೇಗನೆ ಉತ್ತರಿಸುವನೆಂಬದಾಗಿ ಸಹ ಹೇಳಿದ್ದಾ. ಆದ್ದರಿಂದ ಉತ್ತರವನ್ನು ಪಡೆಯುವವರೆಗೂ ಎಡೆಬಿಡದೆ ಪ್ರಾರ್ಥಿಸಿರಿ. ನಿಮ್ಮ ಮಗು ನಿತ್ಯತ್ವಕ್ಕೆ ನಾಶವಾಗುವದು ದೇವರ ಚಿತ್ತವಲ್ಲ. ದೇವರ ರಾಜ್ಯವನ್ನು ಬಲಾತ್ಕಾರದಿಂದ ತೆಗೆದುಕೊಳ್ಳುವವರಿಗೆ ಸೇರಿದೆ. ದೇವರ ರಾಜ್ಯವನ್ನು ತೆಗೆದುಕೊಳ್ಳುವಂತೆ ಯೇಸುವು ಉತ್ತೇಜಿಸಿದ್ದಾ.

    ಕರ್ತನ ಭಯಭಕ್ತಿಯುಳ್ಳವರ ಸುತ್ತಲೂ ಆತನು ತನ್ನ ದೂತರ ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.

    (ಕೀರ್ತ 34:7)..

    ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರು..... (ಎಫಸ 3:20,21).

    ಆದ್ದರಿಂದ ನಂಬಿಕೆಯಿಂದ ಆತನ ಕೇಳು. ಕೃಪಾಸನದ ಬಳಿಗೆ ಧೈರ್ಯದಿಂದ ಬಂದು ಪ್ರಾರ್ಥನೆಯಲ್ಲಿ ದೃಢವಾಗಿ ನಿಲ್ಲು.

    ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ. ನಿಮ್ಮ ಹೃದಯ ಸಾರವನ್ನು ನೀರನ್ನೊ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ..... ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ (ಪ್ರಲಾಪ 2:19).

    ಉಪವಾಸವು ಕೇವಲ ಆಹಾರಕ್ಕಾಗಿ ಮಾತ್ರ ಅನ್ವಯಿಸುವದಿಲ್ಲ. ಜೀವಿತದ ಆಡಂಬರಗಳಿಂದ ಮತ್ತು ಸುಖಾನುಭವ ಜೀವಿತದಿಂದ ಮತ್ತು ನಮ್ಮ ಸ್ವಾರ್ಥಮಯವಾದ ಮೋಹ ಹೇಳುವಂತೆ ಜೀವಿಸುವದರಿಂದ ಸಹ ಉಪವಾಸವಿರಬಹುದು. ನಮಗೆ ಇಕ್ಕಟ್ಟು ಬರುವಾಗ ಉಪವಾಸವಿರುವದು ಕಷ್ಟವಲ್ಲ. ಅಂತಹ ಸಂಧರ್ಬಗಳಲ್ಲಿ ನಮ್ಮ ಹಸಿವು ಹೇಗಿದ್ದರೂ ಇಲ್ಲವಾಗುತ್ತದೆ. ಆದರೆ ಉಪವಾಸವು ನಾವು ಮಾಡುವ ಆಯ್ಕೆಯಾಗಿದೆ. ಕೆಲವು ದೆವ್ವಗಳು ಪ್ರಾರ್ಥನೆ ಮತ್ತು ಉಪವಾಸವಿಲ್ಲದೆ ಹೋಗುವುದಿಲ್ಲವೆಂದು ಯೇಸುವು ಹೇಳಿದನು.

    ನಾವು ಮನುಷ್ಯ ಮಾತ್ರದವರೊಂದಿಗೆ ಹೋರಾಡುವುದಿಲ್ಲ. ಆದರೆ ದುರಾತ್ಮ ಶಕ್ತಿಗಳ ಮೇಲೆ ಹೋರಾಡುತ್ತೇವೆ. ಸೈತಾನ ಅಂತ್ಯವು ಸಮೀಪಿಸಿದೆ ಎಂಬದಾಗಿ ಅವನು ರೌದ್ರವುಳ್ಳವನಾಗಿದ್ದಾನೆ. ಮತ್ತು ಅವನು ದೇವ ಜನರ ಮೇಲೆ ಹೊಸದಾದ ಮತ್ತು ಹೆಚ್ಚು ಕುಯುಕ್ತಿಯುಳ್ಳ ಅಸ್ತ್ರಗಳನ್ನು ಎಸೆಯುತ್ತಾನೆ. ಆದರೆ ಸೈತಾನ ಮತ್ತು ಅವನ ದುರಾತ್ಮಗಳೆಲ್ಲವೂ ಕಲ್ವಾರಿಯಲ್ಲಿ ಯೇಸುವಿನಿಂದ ಸೋಲಿಸಲ್ಪಟ್ಟಿವೆ. ಪ್ರಕಟನೆಯ ಗ್ರಂಥದಲ್ಲಿ ಅವರ ಅಂತಿಮ ಮುಕ್ತಾಯದ ವಿವರಣೆಯನ್ನು ನೋಡುತ್ತೇವೆ. ನಂಬಿಕೆಯಿಂದ ಸೈತಾನನ್ನನ್ನು ನಾವು ಈಗಾಗಲೇ ಬೆಂಕಿಯ ಕೆರೆಯಲ್ಲಿ ಕಾಣುತ್ತೇವೆ. ದೇವರಿಗೆ ಸ್ತೋತ್ರ!

    ಪ್ರಾರ್ಥನೆಯು ನಾವು ನಮ್ಮ ಮಕ್ಕಳನ್ನು ದೇವರ ಕಡೆ ಪುನಃ ಎಳಕೊಳ್ಳಲು ಉಪಯೋಗಿಸುವ ಹಗ್ಗದಂತೆ ಎಂಬದಾಗಿ ಒಬ್ಬ ದೇವರ ಸೇವಕರು ಹೇಳುವದನ್ನು ನಾನು ಕೇಳಿಸಿಕೊಂಡಿದ್ದೇನೆ.

    2 ಅರಸು 4:7 ರಲ್ಲಿ ಒಬ್ಬ ಸಾಲಗಾರನು (ಸೈತಾನ ಚಿತ್ರ) ಒಬ್ಬ ಬಡ ವಿಧವೆಯ ಮಕ್ಕಳನ್ನು ಗುಲಾಮರನ್ನಾಗಿ ತೆಗೆದುಕೊಂಡು ಹೋಗುವುದನ್ನು ನಾವು ಓದುತ್ತೇವೆ. ಪ್ರವಾದಿಯಾದ ಎಲೀಷನು ಆ ಬಡ ವಿಧವೆಗೆ, ಅಕ್ಕ ಪಕ್ಕದವರ ಮನೆಗಳಿಂದ ಖಾಲಿಯಾದ ಪಾತ್ರೆಗಳನ್ನು ಸಂಗ್ರಹಿಸಿ, ಆಕೆ ಮತ್ತು ಆಕೆಯ ಮಕ್ಕಳು ಬಾಗಿಲನ್ನು ಮುಚ್ಚಿ (ಪ್ರಾರ್ಥನೆಯ ಚಿತ್ರ) ಎಣ್ಣೆಯನ್ನು ಹೊಯ್ಯಬೇಕು (ಪವಿತ್ರಾತ್ಮನ ಸಾಮರ್ಥ್ಯದ ಚಿತ್ರ) ಎಂಬದಾಗಿ ಹೇಳಿದನು. ಹೀಗೆ ಆಕೆಯ ಸಾಲವೆಲ್ಲಾ ತೀರಿತು. ಮತ್ತು ಆಕೆಯ ಮಕ್ಕಳು ಅದ್ಭುತ ರೀತಿಯಲ್ಲಿ ಸಾಲಗಾರನಿಂದ ಬಿಡುಗಡೆ ಮಾಡಲ್ಪಟ್ಟರು. ಆ ವಿಧವೆಯು ಕಣ್ಣೀರು ಸುರಿಸಿ ದೇವರ ಬಳಿ ಕೇಳಿಕೊಂಡಿರಬಹುದು. ಯಾಕಂದರೆ ಆಕೆಯ ಮಕ್ಕಳನ್ನು ಕಳೆದುಕೊಳ್ಳುವುದು ಆಕೆಗೆ ಇಷ್ಟವಿರಲಿಲ್ಲ. ಆಕೆಯ ಪ್ರಾರ್ಥನೆ ಮತ್ತು ಕಣ್ಣೀರು ನಿರಾಶೆಯಿಂದ ಕೂಡಿದ್ದಿರಬಹುದು ಮತ್ತು ದೇವರು ಆಕೆಯ ಪ್ರಾರ್ಥನೆಗೆ ಉತ್ತರಿಸಿದನು.

    ನನ್ನ ಪ್ರಿಯ ಸಹೋದರಿ ದೇವರು ನಿನಗೂ ಸಹ ಅದನ್ನೇ ಮಾಡುವನು. ನೀನು ನಿನ್ನ ಮಕ್ಕಳಿಗಾಗಿ ಈ ದಿನ ಅಳುತ್ತಿದ್ದೀಯೋ? ಇಬ್ರಿಯ 10:35 ರಿಂದ ನಾನು ನಿನಗೆ ಒಂದು ವಾಗ್ದಾನವನ್ನು ಕೊಡುತ್ತೇನೆ. ಸ್ತ್ರೀಯರು ತಮ್ಮ ಸತ್ತವರನ್ನು ಪುನರುತ್ಥಾನದಲ್ಲಿ ಹಿಂದಕ್ಕೆ ಪಡೆದುಕೊಂಡರು.

    ಈ ಸಂದರ್ಭದಲ್ಲಿ ಆತ್ಮೀಕವಾಗಿ ಸತ್ತವನಾಗಿರುವ ನಿಮ್ಮ ಪ್ರಿಯರಿಗಾಗಿ ಈ ವಾಗ್ದಾನವನ್ನು ಹಕ್ಕಾಗಿ ಸ್ವೀಕರಿಸಿರಿ. ದೇವರು ಅವನ ಮತ್ತೆ ಜೀವಕ್ಕೆ ತರುವನು. (ಯೆರೆ-33:3) ರಲ್ಲಿ ಪ್ರಾರ್ಥನೆಯ ಉತ್ತರವಾಗಿ ದೇವರು ಮಹತ್ವದ ಮತ್ತು ಅದ್ಭುತವಾದ ಕಾರ್ಯಗಳನ್ನು ತೋರಿಸಬೇಕೆಂದಿದ್ದಾನೆ. ಮತ್ತು ಆತನು ಯಾವಾಗಲೂ ನಿಮಗೆ ಒಳ್ಳೇದನ್ನೆ ಮಾಡಲು ಯೋಚಿಸುತ್ತಾನೆ

    (ಯೆರ 29:11,32,40).

    ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನೆಸಿ ಉಲ್ಲಾಸವಾಗಿರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೇ ಪ್ರಾರ್ಥನೆ ಮಾಡಿರಿ. (ರೋಮ 12:12).

    ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ ಲೋಕವನ್ನು ಜಯಿಸಿದಂಥದ್ದು ನಮ್ಮ ನಂಬಿಕೆಯೇ. (1ಯೋಹಾನ 5:4 ).

    ಅಧ್ಯಾಯ 4
    ಮರಣಕರವಾದ ಕಣಿವೆಯ ಮಧ್ಯೆ ದೇವರು ನಿನ್ನ ಸಂಗಡವಿರುವನು

    ಅಧ್ಯಾಯ ನಾಲ್ಕು

    ಮರಣಕರವಾದ ಕಣಿವೆಯ ಮಧ್ಯೆ ದೇ ಸಂಗಡವಿರುವನು

    ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು .....ಯೇಸು ಆಕೆಯನ್ನು ಅಮ್ಮಾ ಯಾಕೆ ಅಳುತ್ತೀ?. ಎಂದು ಕೇಳಿದನು.(ಯೋಹಾನ 20:11)..

    ಮರಿಯಳು ಯಾಕೆ ಅಳುತ್ತಿದ್ದಾಳೆಂದು ಯೇಸುವಿಗೆ ಗೊತ್ತಿತ್ತು. ಆದರೆ ನಾವು ನಮ್ಮ ಮಕ್ಕಳನ್ನು ಕೇಳುವಂತೆ ಆತನು ನೀನು ಅಳುವ ಅವಶ್ಯಕತೆ ಏನು? ಎಂಬುದಾಗಿ ಆಕೆಯನ್ನು ಕೇಳುತ್ತಿದ್ದನು ಎಂದು ಅನ್ನಿಸುತ್ತದೆ. ಯೇಸುವು ನಮ್ಮ ಬಳಿಯಲ್ಲಿ ಇರುವಾಗ ನಾವು ಅಳುವ ಅವಶ್ಯಕತೆ ಇಲ್ಲ.

    ಯೇಸುವು ತಾನೇ ಲಾಜರನ ಸಮಾಧಿಯ ಬಳಿ ಅತ್ತನು. ಲಾಜರನು ಸತ್ತವರೊಳಗಿಂದ ಎದ್ದು ಬರುವನೆಂದು ಆತನಿಗೆ ಗೊತ್ತಿತ್ತು. ಪಾಪದ ನಿಮಿತ್ತವಾಗಿ ಮನುಷ್ಯನಿಗೆ ಸಂಭವಿಸಿರುವ ಭಯಂಕರವಾದ ಸ್ಥಿತಿಯನ್ನು ಕಂಡು ಆತನು ಅತ್ತನು. ಯೇಸುವು ಸಮಾಧಿಯಿಂದ ಎದ್ದಂದಿನಿಂದ ಮರಣವು ತನ್ನ ಕೊಂಡಿಯನ್ನು ಕಳೆದುಕೊಂಡಿತು.

    ಒಂದು ಸಣ್ಣ ವಯಸ್ಸಿನ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಸಜೀವವಾಗಿ ನಿಂತಿದೆ; ಒಬ್ಬ ತಾಯಿಯು ತನ್ನ ಸತ್ತ ಮಕ್ಕಳಿಗಾಗಿ ಗೋಳಾಡುತ್ತಿರುವುದು. ನಾನು ಬೆಳೆದು ಬಂದ ಪಟ್ಟಣದಲ್ಲಿ ಒಬ್ಬ ಬಡ ಸ್ತ್ರೀಯ ಮನೆ ಭಾರಿ ಮಳೆಯಿಂದಾಗಿ ಬಿದ್ದು ಹೋಯಿತು. ಆ ದುರಂತದಲ್ಲಿ ಆಕೆಯ ಯೌವನ ಪ್ರಾಯದ ಇಬ್ಬರು ಗಂಡು ಮಕ್ಕಳು ತೀರಿಹೋದರು. ನಾವು ಶಾಲೆಗೆ ಹೋಗುವಾಗ ಆ ಮುರಿದ ಮನೆಯ ಮುಂದೆ ಹಾದು ಹೋಗುತ್ತಿದ್ದೆವು. ರಾತ್ರಿ ಮಲಗಿ ಮತ್ತೆ ಮುಂಜಾನೆ ಏಳದ ಆ ಸತ್ತ ಹುಡುಗರ ಶವಗಳನ್ನು ನಾವು ನೋಡಿದೆವು. ಆ ವಿನಾಶವಾದ ತಾಯಿ ಬಹು ಉದ್ರೇಕವುಳ್ಳವಳಾಗಿ ದುಃಖದಿಂದಲೂ ಮತ್ತು ವೇದನೆಯಿಂದಲೂ ತನ್ನ ಮಕ್ಕಳನ್ನು ಎಬ್ಬಿಸುವವಳ ಹಾಗೆ ಅವರನ್ನು ಕರೆಯುತ್ತಿದ್ದಳು. ಆದರೆ ಅದು ವ್ಯರ್ಥವಾಗಿತ್ತು. ಅವರು ಸತ್ತಿದ್ದಾರೆಂದು ಆಕೆಗೆ ಗೊತ್ತು. ಇದನ್ನು ನೋಡುವ ಪ್ರತಿಯೊಬ್ಬರಿಗೂ ಕಣ್ಣೀರು ಹರಿಯುತ್ತಿತ್ತು. ಎಲ್ಲಾ ನಿರೀಕ್ಷೆಯನ್ನು ಕಳೆದುಕೊಂಡಿರುವ ಇಂತಹ ತಾಯಂದಿರಿಗಾಗಿ ಸಹ ದೇವರು ಚಿಂತಿಸುತ್ತಾನೆ.

    ಇತ್ತೀಚೆಗೆ ನಮ್ಮ ರಾಷ್ಟ್ರೀಯ ರಜೆ ದಿನದಂದು ಭಯಂಕರ ಭೂಕಂಪವಾಗಿ ಅದು ಗುಜರಾತಿನ ಇಡೀ ಪಟ್ಟಣವನ್ನು ನಾಶಮಾಡಿತು. ಅಂತಹ ಪ್ರಾಂತಗಳಲ್ಲಿ ಎಷ್ಟು ಹೆಚ್ಚಾದ ಗೋಳಾಟವಿದ್ದಿರಬಹುದು. ಕೆಲವೇ ಸೆಕೆಂಡುಗಳಲ್ಲಿ ಅನೇಕರು ಅನಾಥರಾದರು ಮತ್ತು ಅನೇಕರು ಮನೆಗಳಿಲ್ಲದೆ ಹೋದರು. ಭೂಕಂಪವು ಅವಶ್ಯಕವಾಗಿ ದೇವರ ಶಿಕ್ಷೆಯಲ್ಲ. ಯೇಸುವಿನ ಸಮಯದಲ್ಲಿ ಶಿಲೋಮಿನಲ್ಲಿ ಗೋಪುರವು ಬಿದ್ದಾಗ, ಇಲ್ಲಿ ಸತ್ತವರು ಬೇರೆಯವರಿಗಿಂತ ಪಾಪಿಷ್ಟರಲ್ಲ ಎಂಬುದಾಗಿ ಆತನು ಹೇಳಿದನು. ಕಡೇ ದಿನಗಳಲ್ಲಿ ಯುದ್ದಗಳು, ಭೂಕಂಪಗಳು ಮತ್ತು ಕ್ಷಾಮಗಳು ಬರುತ್ತವೆ ಎಂಬುದಾಗಿ ಆತನು ಮೊದಲೇ ಎಚ್ಚರಿಕೆ ಕೊಟ್ಟಿದ್ದಾ. ಆದ್ದರಿಂದ ಭೂಕಂಪಗಳು, ನಮ್ಮ ಕರ್ತನ ಬರುವಿಕೆಯು ಹತ್ತಿರವಾಗಿದೆ ಎಂಬುದನ್ನು ನೆಪಿಸುತ್ತವೆ. ನಾವು ಮಾನಸಾಂತರ ಹೊಂದಿ ಎಚ್ಚರಿಕೆಯಾಗಿದ್ದು ಪ್ರಾರ್ಥಿಸಬೇಕು. ವಿಗ್ರಹಾರಾಧನೆಯು ಬಹಳ ಹೆಚ್ಚಾಗಿರುವ ಈ ಭೂಮಿಗೆ ಕರ್ತನೇ ಕರುಣೆ ತೋರಿಸಲೆಂದು ಪ್ರಾರ್ಥಿಸಬೇಕು.

    ಯೇಸುವು ಕ್ರೂರವಾಗಿ ಶಿಲುಬೆಗೆ ಹಾಕಲ್ಪಟ್ಟಾಗ ಆತನ ಪ್ರೀತಿಸಿ ಇತರರಂತೆ ಮಗ್ದಲದ ಮರಿಯಳು ಸಹ ದುಃಖದಿಂದ ಅಳುತ್ತಿದ್ದಳು. ಆ ಭಾನುವಾರದ ಮುಂಜಾನೆ ಸಬ್ಬತ್ತು ದಿನದ ನಂತರ ಯೇಸುವಿನ ದೇಹದ ದರ್ಶನವನ್ನು ಪಡೆದು ಸುಗಂಧ ದ್ರವ್ಯವನ್ನು ಹಾಕಲು ಮತ್ತು ಆ ಸಮಾಧಿಯ ಬಳಿ ಅಳಲು ಹೋದಳು.

    ಅಳುವುದು ನಮ್ಮ ದುಃಖವನ್ನು ಕಳೆಯುವ ಒಂದು ರೀತಿ. ನಮ್ಮ ಕಣ್ಣೀರನ್ನು ನಾವು ನಂದಿಸಬಾರದು.ಕರ್ತನ ಪುನರುತ್ಥಾನದ ನಂತರ ಆತನ ಮೊದಲು ನೋಡಿದವಳು ಮಗ್ದಲದ ಮರಿಯಳು. ಆಕೆಯು ಯೇಸುವನ್ನು ಕಂಡು ಹಿಡಿದಾಗ ಮತ್ತು ಆತನು ಆಕೆಯ ಬಳಿ ಮಾತನಾಡಿದಾಗ, ಆಕೆಯು ಎಷ್ಟು ರೋಮಾಂಚನಗೊಂಡಿರಬೇಕು. ಆಮೇಲೆ ಆಕೆಗೆ ದುಃಖದ ಕಣ್ಣೀರು ಇನ್ನೂ ಇರಲಿಲ್ಲ. ಅನಂತರ ಯೇಸುವು ಆತನು ಬದುಕಿರುವುದಾಗಿ ಮತ್ತು ತನ್ನ ಶಿಷ್ಯರನ್ನು ಸಂಧಿಸುವುದಾಗಿ ಹೋಗಿ ಹೇಳಲು ಆಕೆಗೆ ಅಪ್ಪಣೆ ಕೊಟ್ಟನು. ಇದೆಲ್ಲಾ ಆದ ನಂತರವು ಸಹ ಮರಿಯಳು ಆದಿ ಸಭೆಯಲ್ಲಿ ತಗ್ಗಿದ ಸಾಧಾರಣ ಸಹೋದರಿಯಾಗಿಯೇ ಮುಂದುವರಿದಳು. ಆಕೆಯು, ಪುನರುತ್ಥಾನವಾಗಿ ಎದ್ದ ಕರ್ತನ ನೋಡಿದ್ದು ತಾನೇ ಮೊದಲು ಎಂಬದಾಗಿ ತನ್ನನ್ನು ತಾನು ಮೇಲೇರಿಸಿಕೊಳ್ಳಲಿಲ್ಲ. ಆಕೆಯು ಅಪ್ರಸಿದ್ಧಳಾಗಿಯೇ ಉಳಿದಳು. ಒಂದು ಕಾಲದಲ್ಲಿ ಭಯಗ್ರಸ್ಥರಾಗಿದ್ದ ಅಪೊಸ್ತಲರನ್ನು ಕರ್ತನು ಸಭೆಯ ಬಹಿರಂಗ ಸೇವೆಗೆ ಉಪಯೋಗಿಸಿದನು. ಸಹೋದರಿಯರಾದ ನಮಗೆ ಮಗ್ದಲದ ಮರಿಯಳು ಎಂಥಾ ಉಧಾಹರಣೆಯಾಗಿದ್ದಾಳೆ. ಕರ್ತನು ನಮಗೆ ಅದ್ಭುತವಾಗಿ ಪ್ರಕಟಣೆಯನ್ನು ಕೊಡುವಾಗಲೂ ಸಹ ಆತನು ಮತ್ತು ಸಭೆಯು ಎಲ್ಲಾ ಮಹಿಮೆಯನ್ನು ಹೊಂದಲಿ.

    ಪ್ರಿಯ ಸಹೋದರಿ ನೀನು ದುಃಖದಲ್ಲಿರುವಾಗ, ಲಾಜರನ ಸಮಾಧಿಯ ಬಳಿ ಅತ್ತ ಯೇಸುವನ್ನು ಯೋಚಿಸು. ಅತ್ತ ಮರಿಯಳನ್ನು ಯೋಚಿಸು. ನಮಗೆ ಪ್ರಿಯರಾದವರು ಈ ಲೋಕವನ್ನು ಬಿಟ್ಟು ಹೋಗುವಾಗ ನಾವು ಅಳುವದು ತಪ್ಪೇನಲ್ಲ.

    ಅಂತಹ ಆಳವಾದ ದುಃಖದಿಂದ ಮೇಲಕ್ಕೆ ಬರಲು ಸಮಯ ಬೇಕಾಗುತ್ತದೆ. ಆದರೆ ಲೋಕದಲ್ಲಿ ಲೌಕೀಕರ ಹಾಗೆ ನಾವು ಶೋಕಿಸುತ್ತಾ ಇರಬಾರದು. ಕೂಗಾಡುವುದು ಮತ್ತು ಹೊರಳಾಡುವುದು, ನಮ್ಮ ದೇವರಿಗೆ ಅವಮಾನವನ್ನು ಉಂಟುಮಾಡುವ ಮಾತುಗಳನ್ನಾಡುವದು ಮತ್ತು ದೇವರನ್ನು ಪ್ರಶ್ನಿಸುವದು ನಮ್ಮಲ್ಲಿ ಯಾವುದೇ ಸಂಧರ್ಭದಲ್ಲಿ ಮತ್ತು ಎಂದಿಗೂ ಕಂಡು ಬರಬಾರದು.

    ದೇವರನ್ನು ಜನರು ಸಮಾಧಿಯ ಬಳಿಯಲ್ಲಿ ಶಪಿಸುವದನ್ನು ನಾನು ಕೇಳಿದ್ದೇ. ಮತ್ತು ಆ ಸಂಧರ್ಭದಲ್ಲಿ ಆ ಸ್ಥಳವನ್ನು ಬಿಟ್ಟು ಹೋಗಬೇಕೆಂಬುದಾಗಿ ನನಗೆ ಅನಿಸುತ್ತಿತ್ತು. ನಮಗೆ ಒಂದು ಜೀವವುಳ್ಳ ನಿರೀಕ್ಷೆ ಇದೆ ಎಂಬುದಾಗಿ ಅನ್ಯರು ತಿಳಿಯಬೇಕು.

    ಕರ್ತನಲ್ಲಿದ್ದು ಸತ್ತವರು ತಕ್ಷಣವೇ ಕರ್ತನ ಸನ್ನಿದಿಗೆ ಹೋಗುತ್ತಾರೆ; ಯಾಕಂದರೆ ಯೇಸುವು ಮರಣದಿಂದ ಎದ್ದನು; ಮತ್ತು ಮುಂದೆ ನಮಗೆ ಮಹಿಮೆಯುಳ್ಳ ನಿರೀಕ್ಷೆ ಇದೆ.

    ಕೆಲವು ವೇಳೆ ಸತ್ತಂತ ನಮ್ಮ ಪ್ರೀಯರು ನಿತ್ಯತ್ವಕ್ಕೆ ಕಳೆದು ಹೋದರೊ ಅಥವಾ ಇಲ್ಲವೊ? ಎಂಬದಾಗಿ ಇರುವ ಪ್ರಶ್ನೆಯ ಬಗ್ಗೆ ವ್ಯವಹರಿಸಲು ಕಷ್ಟವಾಗುತ್ತದೆ. ಈ ಪ್ರಶ್ನೆಯನ್ನು ನಾವು ಕೊನೆಯಲ್ಲಿ ಕರ್ತನ ಬಳಿ ಬಿಟ್ಟುಬಿಡಬೇಕು. ಗುಪ್ತ ಸಂಗತಿಗಳು ಕರ್ತನಿಗೆ ಸಂಭಂಧಪಟ್ಟದ್ದು.

    ಯಾವ ನರ ಮನುಷ್ಯನು ಸಹ ನಮಗೆ ಈ ಪ್ರಶ್ನೆಯನ್ನು ಉತ್ತರಿಸಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಉತ್ತರ ಪಡೆಯಲು ಭವಿಷ್ಯದ ಕುರಿತು ಹೇಳುವವರ ಬಳಿಗೆ ಎಂದಿಗೂ ಹೋಗಬೇಡಿರಿ. ಅಥವಾ ಪ್ರವಾದಿಗಳೆಂಬುದಾಗಿ ಕರೆಯಲ್ಪಟ್ಟವರ ಬಳಿಗೆ ಸಹ ಹೋಗಬೇಡಿರಿ. ಇಂತಹ ಸಂಗತಿಗಳನ್ನು ಎಂದಿಗೂ ಮಾಡಬಾರದೆಂಬುದಾಗಿ ಕರ್ತನು ಎಚ್ಚರಿಕೆ ಕೊಟ್ಟಿದ್ದಾನೆ (ಧರ್ಮೋ18:10-12). ನಮ್ಮ ದುಃಖದಿಂದ ಹೊರಬರಲು ಕರ್ತನು ಮಾತ್ರ ಸಹಾಯಿಸಲು ಸಾಧ್ಯ.

    ಮನಗುಂದುವಿಕೆ ಎಂಬ ಕೆಸರಲ್ಲಿ ಬೀಳದೇ ಇರಲು ಎಚ್ಚರಿಕೆಯಾಗಿರು. ಅದು ನಿಮ್ಮನ್ನು ಆತ್ಮೀಕವಾಗಿ, ಮಾನಸೀಕವಾಗಿ ಮತ್ತು ಭಾವನಾತ್ಮಕವಾಗಿ ಹಾನಿ ಮಾಡುತ್ತದೆ. ನಿಮ್ಮ ಆಲೋಚನೆಗಳಿಂದಾಗಿ ಇತರರನ್ನು ಸಹ ಮುಗ್ಗರಿಸುವಂತೆ ಮಾಡಬಹುದು. ನೀವು ನಿಮ್ಮ ಪ್ರೀಯರನ್ನು ಪರಲೋಕದಲ್ಲಿ ಸಂದಿಸಬಹುದು. ಮತ್ತು ನೀವು ಕರ್ತನೊಡನೆ ಕಳೆಯಬೇಕಾದ ಸಮಯವನ್ನು ವ್ಯರ್ಥವಾಗಿ ಕಳೆದರೆ ಪಶ್ಚಾತ್ತಾಪ ಪಡುತ್ತೀರಿ.

    ನಮ್ಮ ಪ್ರೀಯರನ್ನು ಕಳೆದುಕೊಂಡು ಅಳುವಾಗಿ ನಮಗೆ ಆಧರಣೆ ಸಿಗುವ ಒಳ್ಳೇಯ ಅಧ್ಯಾಯ 1 ಕೊರಿಂಥ 15..

    ನಾವು ಇತರರನ್ನು ಏಕೆ ಅಳಬಾರದೆಂಬುದಾಗಿ ಹೇಳುವಂತ ಇನ್ನೊಂದು ಭಾಗ 1 ಥೆಸಲೋನಿಕ 4:13-17 ಸಹೋದರರೇ, ನಿದ್ರೆ ಹೋಗುವವರ ಗತಿ ನೀವು ಏನೆಂದು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ. ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ ಕರ್ತನು ಪ್ರತ್ಯಕ್ಷನಾಗುವವರೆಗೂ ಜೀವದಿಂದುಳಿದಿರುವ ನಾವು ನಿದ್ರೆ ಹೋದವರಿಗಿಂತ ಮುಂದಾಗುವದೇ ಇಲ್ಲ. ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರದಾನ ದೂತನ ಶಬ್ದದೊಡನೆಯೂ ದೇವರ ತೂತುರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದು ಬರುವನು. ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು. ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನ ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೇ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲಕ್ಕೂ ಕರ್ತನ ಜೊತೆಯಲ್ಲಿರುವೆವು.

    ಯೇಸುವು ಹೇಳಿದನು ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನನ್ನು ನಂಬುವವನು ಸತ್ತರೂ ಬದುಕುವನು ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನೂ ಎಂದಿಗೂ ಸಾಯುವದಿಲ್ಲ ಎಂದನು. (ಯೋಹಾನ 11:25,26)

    ಪುನರುತ್ಥಾನವಾಗಿ ಎದ್ದ ಯೇಸುವು ಯೋಹಾನನ ಕಂಡು..... ಹೆದರಬೇಡಿರಿ ನಾನು ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇ. ಸತ್ತವನಾದೆನು ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇ. ಮರಣದ ಹಾಗೂ ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ ಎಂದು ಹೇಳಿದನು. (ಪ್ರಕಟಣೆ 1:17,18)

    ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೇನು. ನಿನ್ನ ದೊಣ್ಣೆಯು, ನಿನ್ನ ಕೋಲು ನನಗೆ ಧೈರ್ಯಕೊಡುತ್ತದೆ. (ಕೀರ್ತ23:4)).

    ಮರಣವು ಸಹ ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಲಾರದು ಎಂಬುದಾಗಿ ರೋಮ 8:38 ಹೇಳುತ್ತದೆ.ಪ್ರಿಯ ತಾಯೇ, ನಿನಗಿಂತ ಮುಂದಾಗಿ ಪರಲೋಕಕ್ಕೆ ಹೋಗಿರುವ ನಿನ್ನ ಒಂದಾನೊಂದು ಮಗುವಿನ ಕುರಿತಾಗಿ ಅಳುತ್ತಿರಬಹುದು. ಆದರೆ ಈ ದಿನ ಅವಳು ಅಥವಾ ಅವನು ಎಲ್ಲಾ ವಿಧವಾದ ಕುಂದುಗಳಿಂದ ತಪ್ಪಿಸಿಕೊಂಡು ಯೇಸುವಿನ ಸಂಗದಲ್ಲಿ ಮತ್ತು ದೇವದೂತರೊಡನೆ ಆನಂದಿಸುತ್ತಿರುವದನ್ನು ಯೋಚಿಸು. ನಿನ್ನನ್ನು ಸಹ ಒಂದು ದಿನ ಸ್ವಾಗತಿಸಲು ನಿನ್ನ ಮಗು ಕಾಯುತ್ತಿದೆ. ಆದ್ದರಿಂದ ಇನ್ನು ಅಳಬೇಡ. ಇಲ್ಲಿ ಕರ್ತನೊಟ್ಟಿಗೆ ಇರಲು ಹೋದ ಒಂದು ದೇವರ ಮಗುವು, ಭೂಲೋಕದಲ್ಲಿರುವ ತನ್ನ ಪ್ರಿಯರೊಂದಿಗೆ ಮಾತನಾಡುತ್ತಿರುವ ಬಗ್ಗೆ ಪದ್ಯವಿದೆ:ನಾನು ಎಲ್ಲಿಗೆ ಹೋಗಿದ್ದೇನೆಂಬದಾಗಿ ಒಂದು ವೇಳೆ ನೀವು ನೋಡುವುದಾದರೆ

    ನಾನು ಈಗ ಎಲ್ಲಿದ್ದೇನೆಂಬುದಾಗಿ ಒಂದು ವೇಳೆ ನೀವು ನೋಡುವದಾದರೆ, ಆ ಸ್ಥಳದ ಸೌಂದರ್ಯ, ರಕ್ಷಕನ ಮುಖವನ್ನು ನೋಡಲು ಮತ್ತು ನಿಮ್ಮ ಮನೆಯನ್ನು ನೋಡಬೇಕೆಂದು ನಿಮಗೆ ಅನ್ನಿಸುತ್ತದೆ. ಸಮಾಧಾನದಿಂದ ಜೀವಿಸಿ, ಭಯದ ಅರಿವೆ ಇಲ್ಲದೆ ಇರುವಾಗ ಹೋಲಿಸಲಾರದಂತ ಸಂತೋಷ. ಭೂಲೋಕದಲ್ಲಿರುವಾಗ ನೀವು ನನ್ನು ಕಳಕೊಂಡಿರಿ. ಇದನ್ನು ಕಂಡ ನಂತರ ನಿಮಗೆ ನಾನು ಅಲ್ಲಿ ಬೇಡವೆನ್ನಿಸುತ್ತದೆ. ಒಂದು ವೇಳೆ ನೀವು ಸಹ ನಂದಿಗೆ ಪ್ರಯಾಣ ಬೆಳೆಸಿ ನಾನು ಎಲ್ಲಿಗೆ ಬಂದಿದ್ದೇನೆಂದು ನೋಡುವದಾದರೆ- ನಾನು ಒಬ್ಬನೇ ಬರಲಿಲ್ಲ; ರಕ್ಷಕನೂ ನನ್ನ ಜೊತೆ ಬಂದನೆಂದು ನಿಮಗೆ ತಿಳಿಯುತ್ತದೆ. ಆತನು ನನ್ನಕೈ ಹಿಡಿದು ನನ್ನ ಪಕ್ಕದಲ್ಲೇ ಪ್ರಯಾಣಿಸಿದ. ಮತ್ತು ನೇರವಾಗಿ ತನ್ನ ಮನೆಗೆ ಆ ಸುಂದರ ಮಹಿಮೆಯುಳ್ಳ ಪಟ್ಟಣಕ್ಕೆ ಕರೆದೊಯ್ದನು.

    ಒಂದು ವೇಳೆ ನೀವು ನನಗೆ ತೋರಿಸಿದಂತವುಗಳನ್ನು ನೋಡಿ ಈಗ ನಾನು ಎಲ್ಲಿರುವೆನೆಂಬದಾಗಿ ನೋಡುವಾಗ ನಿಮಗೆ ಎಂದಿಗೂ ಯಾವ ಭಯವೂ ಇರುವುದಿಲ್ಲ ಅಥವಾ ಎಂದಿಗೂ ಒಬ್ಬಂಟಿಗರೆನ್ನಿಸುವುದಿಲ್ಲ. ದೇವರ ಹಸ್ತ ಪ್ರತಿಯೊಂದು ಜೀವಿಯ ಮೇಲೆ ಇರುವುದನ್ನು ಮತ್ತು ಆತನ ಆಸಕ್ತಿಯನ್ನು ನೋಡಿ ಆಶ್ಚರ್ಯಪಡುವಿರಿ. ಮತ್ತು ಆತನು ನಿಜವಾಗಲೂ ನಮಗಾಗಿ ಚಿಂತಿಸುತ್ತಾ. ಮತ್ತು ನಮ್ಮ ಪ್ರತಿಯೊಂದು ಕಲಹಗಳನ್ನು ಆತನು ಸಹಿಸಿಕೊಳ್ಳುತ್ತಾನೆ.

    ದೇವರು ಯಾವಾಗಲೂ ಹತ್ತಿರವಿರುವಂತ ಸ್ಥಳದಲ್ಲಿ ನಾನು ಈಗ ಇರುವದನ್ನು ನೀವು ಒಂದು ವೇಳೆ ನೋಡುವುದಾದರೆ ಎಲ್ಲರೂ ಈ ಮಾರ್ಗವನ್ನು ಕಂಡುಕೊಳ್ಳಬೇಕೆಂಬುದಾಗಿ ಆತನು ಆಶಿಸುವದನ್ನು ನೀವು ಕಂಡುಕೊಳ್ಳುತ್ತೀರಿ. ಒಬ್ಬರು ತಪ್ಪಿಹೋದರೂ ಸಹ ಆತನು ದುಃಖಿಸುತ್ತಾನೆ ಮತ್ತು ಆತನ ಹೃದಯ ನೋವಿನಿಂದ ತುಂಬುವದನ್ನು ನೀವು ಕಾಣಬಹುದು ಮತ್ತು ಆ ಒಬ್ಬ ವ್ಯಕ್ತಿಯು ಆತನ ಕಡೆಗೆ ಹಿಂದಿರುಗಿ ಬರುವಾಗ ಆತನು ಆನಂದಿಸುತ್ತಾನೆ.

    ಒಂದು ವೇಳೆ ಈಗ ನಾನು ಎಲ್ಲಿದ್ದೇನೆಂಬುದಾಗಿ ನೀವು ನೋಡಿ, ನನ್ನ ಜೊತೆಗೆ ಸ್ವಲ್ಪ ಹೊತ್ತು ಇದ್ದು, ದೇವರು ನಿತ್ಯತ್ವಕ್ಕಾಗಿ ಇಟ್ಟಿರುವ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವದಾದರೆ ಒಂದು ಸಾರಿ ತಿಳಿದ ಈ ಪರಲೋಕದ ಸಂತೋಷವನ್ನು ಎಂದಿಗೂ ಮತ್ತು ಯಾವತ್ತಿಗೂ ನೀವು ಬಿಡಲು ಇಷ್ಟಪಡುವುದಿಲ್ಲ. ಮತ್ತು ಒಂದು ಸಾರಿ ಪರಲೋಕವು ನಿಮ್ಮ ಮನೆಯಾದ ನಂತರ ಭೂಲೋಕದ ಮಾರ್ಗದಲ್ಲಿ ನಡೆಯಲು ಎಂದಿಗೂ ಇಷ್ಟಪಡುವುದಿಲ್ಲ.

    ಒಂದು ವೇಳೆ ಈಗ ನಾನು ಎಲ್ಲಿರುವೆನೆಂಬುದಾಗಿ ನೀವು ನೋಡುವಾಗ, ಒಂದು ದಿನ ನಾವು ಸಂಧಿಸುತ್ತೇವೆಂಬುದಾಗಿ ನಿಮಗೆ ತಿಳಿಯುತ್ತದೆ. ಮತ್ತು ಈಗ ನಾನು ನಿಮ್ಮಿಂದ ಬೇರ್ಪಟ್ಟಿದ್ದರೂ ಕೇವಲ ಸ್ವಲ್ಪ ದೂರದಲ್ಲಿದ್ದೇ ಮತ್ತು ಈಗ ನಾನು ಆತನೊಂದಿಗೆ ಮನೆಯಲ್ಲಿ ಎಲ್ಲಾ ರೀತಿಯಿಂದಲೂ ಸುರಕ್ಷಿತವಾಗಿದ್ದೇನೆ. ಒಂದು ಸುಂದರ ದಿನದಲ್ಲಿ ನಿಮ್ಮನ್ನು ಸ್ವಾಗತಿಸಲು ನಾನು ಪರಲೋಕದ ಬಾಗಿಲ ಬಳಿ ಕಾದಿದ್ದೇನೆ.

    (ಲೇಖಕರು ತಿಳಿದಿಲ್ಲ)

    ಕ್ರೈಸ್ತರಾದ ನಮಗೆ ಎಂತಹ ಮಹಿಮೆಯುಳ್ಳ ನಿರೀಕ್ಷೆ ಇದೆ!

    ಅಧ್ಯಾಯ 5
    ನೀನು ಹಿಂಸೆಗೊಳಗಾಗುವಾಗ ದೇವರ ಹೆಸರು ಮಹಿಮೆ ಹೊಂದುತ್ತದೆ

    ಅಧ್ಯಾಯ ಐದು

    ನೀನು ಹಿಂಸೆಗೊಳಗಾಗುವಾಗ ದೇವರ ಹೆಸರು ಮಹಿಮೆ ಹೊಂದುತ್ತದೆ

    ಯೇಸು ಕ್ರಿಸ್ತನ ತಮ್ಮ ಸ್ವಂತ ರಕ್ಷಕನಗಿ ಸ್ವೀಕರಿಸಿರುವ ಆದರೆ ತಮ್ಮ ಗಂಡಂದಿರು ಪರಿವರ್ತನೆ ಹೊಂದದೆ ಇರುವ ಅನೇಕ ಸ್ನೇಹಿತರು ನನಗಿದ್ದಾರೆ. ಅವರ ಗಂಡಂದಿರು ಅವರನ್ನು ಹಿಂಸಿಸಿ ತೊಂದರೆ ಪಡಿಸುತ್ತಾರೆ. ಕೆಲವು ಸಾರಿ ಅವರನ್ನು ದೈಹಿಕವಾಗಿ ದುರುಪಯೋಗ ಪಡಿಸುತ್ತಾರೆ. ಬಹಿರಂಗವಾಗಿ ಅಪಮಾನ ಮಾಡಿ ಇನ್ನೂ ಬೇರೆ ವಿಧದಲ್ಲಿ ಅವರನ್ನು ಹಿಂಸಿಸುತ್ತಾರೆ. ಇವರಲ್ಲಿ ಕೆಲವು ಹೆಂಡತಿಯರು ತಮ್ಮ ಇಷ್ಟಕ್ಕೆ ವಿರುಧ್ದವಾಗಿ ವಿವಾಹ ವಿಚ್ಛೆದನ ಕೊಟ್ಟಿದ್ದಾರೆ. ಕೆಲವರು ತಮ್ಮ ಕುಟುಂಬದೊಂದಿಗೆ ಮತ್ತು ತಮ್ಮ ಮಕ್ಕಳೊಂದಿಗೆ ಇರಲು, ಪ್ರತಿಯೊದು ತಿರಸ್ಕಾರವನ್ನೂ ಮೌನವಾಗಿ ತಾಳಿಕೊಂಡಿದ್ದಾರೆ.

    ಇಂತಹ ಕುಟುಂಬದಲ್ಲಿ ಹೃದಯ ಮಿಡಿಯುವಂತ ಕಣ್ಣೀರು ಬಹಳವಾಗಿದೆ; ಮತ್ತು ಕ್ರಿಸ್ತನಲ್ಲಿದ್ದ ಕ್ಷಮಿಸುವ ಸಾತ್ವಿಕತ್ವ ಮತ್ತು ಅಧೀನವಾಗುವ ಗುಣಗಳಿಂದ ಸಾಕ್ಷಿಯಾಗಿರುವಂತೆ ಕರ್ತನಿಗಾಗಿ ಯಥಾರ್ಥವಾಗಿ ನಿಲ್ಲಲು ಇಂತಹ ಹೆಂಡತಿಯರಿಗೆ ಆತನು ಕೃಪೆಯನ್ನು ಕೊಟ್ಟಿದ್ದಾನೆ. ಕರ್ತನಿಗಾಗಿ ಇವರು ಕಷ್ಟಪಡುವದನ್ನು ಅವರ ಮಕ್ಕಳು ನೋಡಿದ್ದಾರೆ. ಮತ್ತು ಅವರಲ್ಲಿ ಕೆಲವರು ಕ್ರಿಸ್ತನ ಅಂಗೀಕರಿಸಿದರು. ನೋಡಿ! ಕೆಟ್ಟದ್ದನ್ನು ಹೇಗೆ ದೇವರು ಒಳ್ಳೆಯದಾಗಿ ತಿರಿಗಿಸುತ್ತಾನೆ. ಕೊನೆಗೆ ಕೆಲವು ಗಂಡಂದಿರು ಸಹ ಕರ್ತನಿಗಾಗಿ ಗೆಲ್ಲಲ್ಪಟ್ಟರು.

    ನನ್ನ ಒಂದಾನೊಂದು ಸ್ನೇಹಿತೆಯ ಗಂಡ ಒಂದು ಗುಪ್ತ ಸಂಸ್ಥೆಯ ಸದಸ್ಯನಾಗಿರುವದರಿಂದ ಆಕೆ ಅನುಭವಿಸಿದ ಅಪಾರವಾದ ಕಷ್ಟಗಳನ್ನು ಹೇಳಿದಳು. ಅವರ ಕುಟುಂಬದಲ್ಲಿ ಅನೇಕ ವರ್ಷಗಳವರೆಗೂ ಗೊಂದಲವಿತ್ತು. ಆ ಸಂಸ್ಥೆಯ ಸಂಭಂದವಾಗಿ ಒದಗುವ ಕಷ್ಟಗಳಿಗೆ ತಮ್ಮ ಕುಟುಂಬವನ್ನು ಬಿಡಬಾರದೆಂಬುದಾಗಿ ಆಕೆ ಅತ್ತು ತನ್ನ ಗಂಡನ ಎಷ್ಟೋ ಸಾರಿ ಕೇಳಿಕೊಂಡಳು. ಆದರೆ ಆತನು ಅದರಿಂದ ಬಿಡಿಸಿಕೊಳ್ಳಲಿಲ್ಲ. ಆ ಸಂಸ್ಥೆಯ ವ್ಯಾಪಾರಸ್ಥನ ಸಂಭಂಧದಿಂದ ಈತನು ಐಶ್ವರ್ಯವಂತನಾಗಿದ್ದನು.

    ಈ ತರಹದ ಕುತಂತ್ರದಿಂದ ಸೈತಾನನು ಯೇಸುವನ್ನು ಶೋಧಿಸಿದನು. ನೀನು ಒಂದು ವೇಳೆ ನನಗೆ ಅಡ್ಡ ಬಿದ್ದರೆ ಭೂಲೋಕದ ನನ್ನ ರಾಜ್ಯವನ್ನು ಮತ್ತು ಅದರ ವೈಭವವನ್ನು (ಅದರ ಐಶ್ವರ್ಯ ಒಳಗೊಂಡು) ನಿನಗೆ ಕೊಡುವೆನು ಎಂದು ಹೇಳಿದನು. ಆದರೆ ಯೇಸುವು ಸೈತಾನನ್ನು ಗದರಿಸಿ ತನ್ನನ್ನು ಬಿಟ್ಟು ಹೋಗುವಂತೆ ಹೇಳಿದನು.

    ಈ ಗುಪ್ತ ಸಂಸ್ಥೆಯನ್ನು ಬಿಟ್ಟು ಕೆಲವರು ಕ್ರೈಸ್ತರಾದವರು, ಆ ಗುಂಪಿನ ನಿಯಮಗಳನ್ನು ಹೊಸ ಸದಸ್ಯರು ಮುರಿದರೆ ತಮ್ಮ ಮತ್ತು ತಮ್ಮ ಕುಟುಂಬಗಳ ಮೇಲೆ ಶಾಪವನ್ನು ಹೊಂದಿಕೊಳ್ಳಬೇಕೆಂಬುದನ್ನು ಹೊರಪಡಿಸಿದರು. ಇನ್ನೂ ಕೆಲವು ಗುಂಪುಗಳಲ್ಲಿ ಸದಸ್ಯರುಗಳು ಪ್ರಮಾಣವನ್ನು ತಮ್ಮ ರಕ್ತದಿಂದ ಬರೆಯಬೇಕು. ಅನೇಕರು ತಾವು ಏನು ಹೇಳುತ್ತಿದ್ದೇವೆಂಬ ಗಂಭೀರತೆ ಇಲ್ಲದೆಯೇ ಈ ಪ್ರಮಾಣವನ್ನು ಮಾಡುತ್ತಾರೆ. ಇವುಗಳಲ್ಲಿ ಕೆಲವು ಗುಂಪುಗಳು ಗುಪ್ತವಾಗಿ ಸೈತಾನನ ಆರಾಧಿಸುತ್ತಾರೆ. ಉದ್ದೇಶಪೂರ್ವಕವಾಗಿ ಆರಿಸಿಕೊಂಡ ಅಂತಹ ಸರಪಣಿಗಳು ಸುಲಭವಾಗಿ ಮುರಿಯಲು ಸಾಧ್ಯವಿಲ್ಲ. ಆದರೆ ಹಿಂದೆ ಮಾಡಿದಂತ ದುಷ್ಟ ಪ್ರಮಾಣವನ್ನು ಒಂದು ವೇಳೆ ಹಿಂದೆಗೆದುಕೊಂಡರೆ, ಆ ವ್ಯಕ್ತಿಗೆ ದೇವರು ಸಹಾಯಿಸಬಲ್ಲನು. ಇಂತಹ ಗುಂಪುಗಳಿಂದ ಅನೇಕರನ್ನು ಕರ್ತನು ಬಿಡುಗಡೆ ಮಾಡಿದ್ದಾ. ಹಿಂದೆ ಒಂದು ಸಮಯದಲ್ಲಿ ಈ ಸಂಸ್ಥೆಗಳಿಗೆ ನಾಯಕರಾಗಿದ್ದವರನ್ನು ಸಹ ಕರ್ತನು ಬಿಡುಗಡೆ ಮಾಡಿದ್ದಾನೆ.

    ಆದ್ದರಿಂದ ನಿನ್ನ ಗಂಡನು ಎಂತಹ ವಿಷಯದಲ್ಲಿ ಸಿಕ್ಕಿಕೊಂಡಿದ್ದರೂ ಪ್ರಾರ್ಥಿಸುವದನ್ನು ಎಂದಿಗೂ ಬಿಡಬೇಡ. ಅತ್ತು ನಂಬಿಕೆಯಿಂದ ಪ್ರಾರ್ಥಿಸು. ಕರ್ತನ ಸಂರಕ್ಷಣೆಯನ್ನು ಬಯಸಿ, ಒಬ್ಬನೇ ಮಗನಿಗಾಗಿ ಪ್ರಾರ್ಥಿಸುವಂತೆ ನಿನ್ನ ಗಂಡನಿಗಾಗಿ ಪ್ರಾರ್ಥಿಸು. ಕ್ರಿಸ್ತನು ಶಿಲುಬೆ ಮೇಲೆ ಪ್ರಾಣ ಕೊಟ್ಟಾಗ ಎಲ್ಲಾ ಬಂಧನಗಳನ್ನು ಮುರಿದನು. ಪ್ರತಿಯೊಂದು ಬಂಧಿತರನ್ನು ಬಿಡಿಸಲು ಆತನು ಬಂದನು.

    ಕೆಲವು ಅವಿವಾಹಿತ ಹುಡುಗಿಯರು ಕ್ರಿಸ್ತನ ಅಂಗೀಕರಿಸಿದ್ದರಿಂದ ಅವರ ಬಂಧುಗಳು ತೀಕ್ಷ್ಣವಾದ ಹಿಂಸೆಯನ್ನು ಅನುಭವಿಸಿದ್ದಾರೆ. ಒಬ್ಬ ತಾಯಿಯು ತನ್ನ ಮಗಳು ಯೇಸುವನ್ನು ಅಂಗೀಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದಳು. ನಿಮ್ಮನ್ನು ಬೆಳೆಸಲು ಬಹಳ ಕಷ್ಟಪಟ್ಟಿರುವ ತಾಯಿಯನ್ನು ನೋಯಿಸಲು ನಿಮ್ಮ ಹೃದಯದಲ್ಲಿ ಆಗುವ ನೋವು ಸಹ ಯೇಸುವಿಗೆ ಗೊತ್ತು. ಆದರೆ ನಿಮ್ಮ ತಂದೆ-ತಾಯಿಗಿಂತ ಹೆಚ್ಚಾಗಿ ಕರ್ತನ ಪ್ರೀತಿಸಲು ಮತ್ತು ಮರಣದವರೆಗೂ ನಂಬಿಗಸ್ಥರಾಗಿರಲು ಆತನು ಕರೆಕೊಡುತ್ತಾ. ನಿಮ್ಮ ತಂದೆತಾಯಿಗಳ ಪರಿವರ್ತನೆಗಾಗಿ ಕರ್ತನ ಬಳಿ ನೀವು ಪ್ರಾರ್ಥಿಸಿದ ಕಣ್ಣೀರಿನ ಪ್ರಾರ್ಥನೆ ವ್ಯರ್ಥವಾಗುವುದಿಲ್ಲ. ವರ್ಷಗಳ ತರುವಾಯ (ಮೇಲೆ ಹೇಳಿದ) ತಾಯಿಯು ತನ್ನ ಮಗಳು ಒಬ್ಬ ಒಳ್ಳೇಯ ಕ್ರೈಸ್ತ ವ್ಯಕ್ತಿಯೊಂದಿಗೆ ಆದ ಮದುವೆಯಲ್ಲಿ ಭಾಗವಹಿಸಿದಳು.

    ಈ ಕಾಲದಲ್ಲಿಯೂ ಸಹ ಕ್ರಿಸ್ತನ ಅಂಗೀಕರಿಸಿರುವುದಕ್ಕಾಗಿ ಅಥವಾ ನೀರಿನ ದೀಕ್ಷಾಸ್ನಾನದಲ್ಲಿ ಆತನಿಗೆ ವಿಧೇಯರಾದದ್ದಕ್ಕಾಗಿ ತಮ್ಮ ಮನೆಗಳಿಂದ ಹೊರಗೆ ಹಾಕಲ್ಪಟ್ಟ ಕೆಲವು ಯೌವನಸ್ಥ ಹುಡುಗಿಯರು ನನಗೆ ಗೊತ್ತು. ಅಂತವರನ್ನು ಕರ್ತನು ಗೌರವಿಸಿ ಅವರಿಗಾಗಿ ಅದ್ಭುತವಾದ ಭವಿಷ್ಯವನ್ನು ಆತನು ಇಟ್ಟಿರುವನೆಂಬದು ನನಗೆ ಖಚಿತವಾಗಿದೆ. ಅಂತ್ಯದ ದಿನದಲ್ಲಿ ತಂದೆಯು ಅವರನ್ನು ಕುರಿತು ಈಕೆಯು ನನ್ನ ಅತಿ ಪ್ರಿಯ ಮಗಳು, ಈಕೆಯನ್ನು ನಾನು ಮೆಚ್ಚಿದ್ದೇನೆ. ಎಂದು ಹೇಳುವನು.

    ಹಣದ ಕೊರತೆಯಿಂದಾಗಿ ನೀನು ನಿನ್ನ ಗಂಡನ ತಂದೆ-ತಾಯಿಯೊಂದಿಗೆ ಎಂದೆಂದಿಗೂ ಇರಬೇಕೆಂಬುದನ್ನು ನೀನು ಕಂಡುಕೊಂಡಿದ್ದೀಯೋ? ಅವರು ಒಳ್ಳೇಯವರಾಗಿದ್ದರೂ ಸಹ ನೀನು ಅವರೊಂದಿಗೆ ಜಂಟಿ ಕುಟುಂಬದಲ್ಲಿ ಇರಬೇಕಾಗುತ್ತದೆ. ನಿನ್ನ ಗಂಡನ ಸಂಭಂದಿಕರೊಂದಿಗೆ ನಿನ್ನ ಮನೆಯನ್ನು ಹಂಚಿಕೊಳ್ಳಬೇಕು ಮತ್ತು ನಿನ್ನ ಗಂಡನ ತಾಯಿ ಸಂಸಾರವನ್ನು ನಡೆಸಿಕೊಂಡು ಹೋಗುವರು. ಮನೆಯ ಪ್ರತಿಯೊಂದು ವಸ್ತುವು ಸಹ ಸಾಮಾನ್ಯ ಆಸ್ತಿಯಂತಿರುತ್ತದೆ. ಅದರಲ್ಲಿ ನೀನು ಅಸಮಾಧಾನಗೊಂಡು ಅನೇಕ ಸಾರಿ ಒಳಗಡೆ ಅಳುತ್ತಿ. ನಿನ್ನ ಮನೆಯಲ್ಲೇ ನಿನ್ನನ್ನು ಮೋಸಗೊಳಿಸಿದ ಹಾಗೆ ಅನ್ನಿಸುತ್ತದೆ. ನಿನ್ನ ಗಂಡನೊಂದಿಗೆ ನಿನ್ನ ಮನೋಭಾವನೆಯನ್ನು ಹಂಚಿಕೊಳ್ಳಲು ಇಷ್ಟಪಡುತ್ತಿ ; ಆದರೆ ಅವರ ಸಂಭಂಧಿಕರ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಯಾಕಂದರೆ ಅದು ಅವರನ್ನು ಬೇಸರಗೊಳಿಸುತ್ತದೆ. ಭಾರತದಲ್ಲಿ ಮದುವೆಯಾದ ಅನೇಕ ಸ್ತ್ರೀಯರಂತೆ ಈ ಕಷ್ಟಕರವಾದ ಸಂಧರ್ಭವನ್ನು ಅಂಗೀಕರಿಸಿ ಹೇಗೋ ದಿನಗಳನ್ನು ಕಳೆಯುತ್ತಾ ಇರುವಿ. ಕೆಲವು ಸಾರಿ ಕೋಪ ಹಾಗೂ ಕಣ್ಣೀರಿನಿಂದ ನೀನು ಸೀಡಿದೇಳುತ್ತಿ. ಯಾಕಂದರೆ ನೀನು ನೆಸಿದ ಹಾಗೆ ಸಂಗತಿಗಳು ಇರುವುದಿಲ್ಲ. ನಿನ್ನ ಜೀವಿತದಲ್ಲಿ ಹಾಗೂ ನಿನ್ನ ಆಲೋಚನೆಗಳಲ್ಲಿ ಗಲಿಬಿಲಿಗಳಿರುತ್ತದೆ.

    ಭಾರತದ ಸಂಸ್ಕೃತಿಯನ್ನು ನೀನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ದೇವರು ನಿನ್ನನ್ನು ಬದಲಾಯಿಸಲು ಸಾಧ್ಯ! ನಿನಗೆ ಅವರು ಮಾತನಾಡಿದ ಮಾತುಗಳನ್ನು ತಪ್ಪಾಗಿಎಣಿಸದೇ ಅವರನ್ನು ಕ್ಷಮಿಸಲು ಕಲಿತುಕೋ. ಆ ಮಾತುಗಳು ಈಗಿನಿಂದ ನೂರು ವರುಷಗಳು ಕಳೆದ ನಂತರ ಪ್ರಾಮುಖ್ಯವಾಗಿರುವುದಿಲ್ಲ. ನಿನ್ನ ಸನ್ನಿವೇಶಕ್ಕಾಗಿ ಸಕಾರವಾಗಿ ಆಲೋಚಿಸು. ಮನೆಯಲ್ಲಿ ವ್ಯವಹಾರಿಕವಾಗಿ ನಿನಗಿರುವ ಸಹಾಯ ಮತ್ತು ನಿನ್ನ ಮಕ್ಕಳು ಅವರ ತಾತ-ಅಜ್ಜಿ ಜೊತೆಯಲ್ಲಿರುವುದನ್ನು ಆಲೋಚಿಸು. ಅನೇಕ ಕುಟುಂಬಗಳು ತಮ್ಮ ಸಂಭಂದಿಕರಿಂದ ದೂರವಿರುತ್ತಾರೆ. ಈ ಹೊರಗಿನ ಗಲಿಬಿಲಿಯ ನಡುವೆ ನಿನ್ನ ಹೃದಯದಲ್ಲಿ ಕರ್ತನೊಂದಿಗೆ ಗುಪ್ತವಾಗಿ ನಡೆಯಬಹುದು.

    ಭಾರತದಲ್ಲಿ ಇದೇ ರೀತಿಯ ಸನ್ನಿವೇಶಗಳನ್ನು ಎದುರಿಸುತ್ತಿರುವ ಅನೇಕ ಸ್ತ್ರೀಯರಿಗೆ ಆಧರಣೆಯಾಗಿಯೂ ಮತ್ತು ಬಲವಾಗಿಯೂ ಇರಬಹುದು. ಪ್ರತಿಯೊಂದು ಜಜ್ಜಲ್ಪಡುವ ಅನುಭವಗಳಲ್ಲಿ ನಾವು ಕ್ರಿಸ್ತನ ಬಾಧೆಗಳಲ್ಲಿ ಭಾಗಿಯಾಗಲು ಸಹಾಯವಾಗುತ್ತದೆ. ಹೀಗೆ ನಾವು ಕ್ರಿಸ್ತನ ಸ್ವಭಾವವನ್ನು ಹೊಂದಿಕೊಳ್ಳಲು ಸಾಧ್ಯ. ಮತ್ತು ನಮ್ಮ ಸುತ್ತಲೂ ಇದೇ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಆಶೀರ್ವಾದವಾಗಿರುತ್ತೇವೆ.

    ವರದಕ್ಷಿಣೆಯು ಕಡಿಮೆಯಾಗಿರುವುದರಿಂದ ನಿನ್ನ ಗಂಡನ ಸಂಭಂದಿಕರಿಂದ (ಮಾತಿನಿಂದ ಮತ್ತು ಕೃತ್ಯದಿಂದ) ತೊಂದರೆಗೆ ಒಳಗಾಗಿದ್ದೀಯೋ? ಒಂದು ವೇಳೆ ನಿನ್ನ ಸುತ್ತಲಿರುವವರ ಕುರಿತಾಗಿ ಬೇಸರಗೊಂಡಿದ್ದೀಯೋ ಮತ್ತು ಮನಗುಂದಿದ್ದೀಯೋ? ಮದುವೆಯಾಗದಿದ್ದರೆ ಎಷ್ಟೋ ಚೆನ್ನಾಗಿತ್ತು ಎಂಬುದಾಗಿ ಅನಿಸುತ್ತಿದೆಯೋ? ವಾರ್ತಾ ಪತ್ರಿಕೆಗಳಲ್ಲಿ ಪ್ರತಿದಿನ ನಾವು ವರದಕ್ಷಿಣೆಯಿಂದ ಆದ ಸಾವುಗಳನ್ನು ಓದುತ್ತೇವೆ. ನಿಮ್ಮ ಜೀವ ನಿಮ್ಮದಲ್ಲ. ಅದು ದೇವರಿಗೆ ಸೇರಿದ್ದು. ಆದ್ದರಿಂದ ಅದನ್ನು ಕೊನೆಗೊಳಿಸಲು ಎಂದಿಗೂ ಯೋಚಿಸಬೇಡ. ಅದರ ಬದಲಾಗಿ ಈ ಶೋಧನೆಯನ್ನು ಸಹಿಸಿಕೊಳ್ಳಲು ದೇವರ ಸಹಾಯವನ್ನು ಕೇಳಿಕೋ. ನಿನ್ನ ಕುಟುಂಬಕ್ಕೆ ದುಃಖ ತರುವಂತ ಕಾರ್ಯವನ್ನು ಎಂದಿಗೂ ಮಾಡಬೇಡ. ನಿನ್ನ ಭದ್ರತೆಯನ್ನು ಕರ್ತನಲ್ಲಿ ಕಂಡುಕೋ. ನೀನು ಸಹಿಸಲಾರದ ಶೋಧನೆಯನ್ನು ಅನುಮತಿಸುವುದಿಲ್ಲ ಎಂಬುದಾಗಿ ಆತನು ವಾಗ್ದಾನ ಮಾಡಿದ್ದಾನೆ. ಇತರರನ್ನು ನಿಂದಿಸುವುದರಲ್ಲಿ ಮತ್ತು ದೂರು ಹೇಳುವುದರಲ್ಲಿ ಸಮಯವನ್ನು ಕಳೆಯುವುದು ವ್ಯರ್ಥ. ನಿಮ್ಮ ಪರವಾಗಿ ಕಾರ್ಯ ನಡೆಸಲು ಕರ್ತನಿಗಾಗಿ ನಂಬಿಕೆಯಿಂದ ಕಾಯಿರಿ. ಆತನಲ್ಲಿ ಭರವಸೆಯಿಟ್ಟವರು ಎಂದಿಗೂ ಮನಗುಂದುವುದಿಲ್ಲ. (ಯೆಶಾಯ 49:23). ಮತ್ತು ಆತನಿಗಾಗಿ ಕಾದಿರುವವರು ಎದ್ದು ಒಂದು ದಿನ ಹದ್ದಿನಂತೆ ರೆಕ್ಕೆಗಳನ್ನು ಚಾಚಿ ಏರುವರು (ಯೆಶಾಯ 40:31)).

    ನಿಮ್ಮ ಸನ್ನಿವೇಶಗಳಲ್ಲಿ ಜ್ಞಾನವನ್ನು ಕೊಡುವಂತೆ ಕರ್ತನನ್ನು ಕೇಳಿಕೊಳ್ಳಿರಿ.

    ಕೆಲವು ವಿಶ್ವಾಸಿಗಳು ಕರ್ತನಿಗಾಗಿ ನ್ಯಾಯಸ್ಥಾನಕ್ಕೆ ಎಳೆಯಲ್ಪಡುವ ಅದ್ವೀತಿಯವಾದ ಭಾಗ್ಯಕ್ಕೆ ನಡೆಸಲ್ಪಟ್ಟರು. ಅದು ಒಂದು ಭಾಗ್ಯ ಮತ್ತು ಗೌರವ. ಯಾಕಂದರೆ ನಮ್ಮ ಕರ್ತನ ವೈರಿಗಳು ನ್ಯಾಯಸ್ಥಾನಕ್ಕೆ ಕರೆದೊಯ್ದರು. ನಿಮ್ಮ ಕುರಿತಾಗಿ ಹೇಳಲ್ಪಟ್ಟದ್ದೆಲ್ಲವೂ ಸುಳ್ಳಾಗಿರಬಹುದು.. ಅದನ್ನು ಸಹ ಕರ್ತನು ಒಂದು ಉದ್ದೇಶದಿಂದಲೇ ಅನುಮತಿಸಿರುತ್ತಾ. ನಾವು ನ್ಯಾಯಾಧಿಪತಿಗಳ ಎದುರಿಗೆ ನಿಲ್ಲುವಾಗ ಏನು ಮಾತಾಡಬೇಕು ಎಂಬುದಾಗಿ ಚಿಂತಿಸಬಾರದು ಮತ್ತು ಏನು ಹೇಳಬೇಕೆಂಬುದನ್ನು ಆತನೇ ನಮಗೆ ಹೇಳುವನು ಎಂಬುದಾಗಿ ಭರವಸೆಕೊಟ್ಟಿದ್ದಾನೆ. ಆದ್ದರಿಂದ ನಾವು ಆತನಲ್ಲಿ ಮಗುವಿನಂತೆ ಭರವಸೆ ಇಟ್ಟುಕೊಂಡು ವಿಶ್ರಮಿಸೋಣ.

    ನ್ಯಾಯಸಭೆಗೆ ಅನ್ಯಾಯವಾಗಿ ತೆಗೆದುಕೊಂಡು ಹೋದವರಿಗಾಗಿ ಇಲ್ಲಿ ಅದ್ಭುತವಾದ ವಾಗ್ದಾನಗಳನ್ನು ದೇವರು ತನ್ನ ವಾಕ್ಯದಲ್ಲಿ ಕೊಟ್ಟಿದ್ದಾನೆ. ಯೇಸುವಿನ ಹೆಸರಿನಲ್ಲಿ ನೀವೆಲ್ಲರೂ ಅದನ್ನು ಹಕ್ಕಾಗಿ ಸ್ವೀಕರಿಸಬಹುದು.

    ಯೇಹೋವನು ನ್ಯಾಯಾಧಿಪತಿಯಾಗಿ.......ನನಗೋಸ್ಕರ ವಾದಿಸಿ ನನನ್ನು ನಿನ್ನ ಕೈಗಳಿಂದ ತಪ್ಪಿಸಲಿ (1 ಸಮು 24:15).

    ಯೇಹೋವನು ಹೇಳುವುದನ್ನು ಕೇಳಿರಿ.........ಕಳವಳಗೊಳ್ಳಬೇಡಿರಿ. ಹೆದರಬೇಡಿರಿ. ಯುದ್ಧವು ನಿಮ್ಮದಲ್ಲ, ದೇವರದೇ;......ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ..... ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡೆಸುವ ರಕ್ಷಣಾ ಕಾರ್ಯವನ್ನು ನೋಡಿರಿ. ಹೆದರಬೇಡಿರಿ. ಕಳವಳಗೊಳ್ಳಬೇಡಿರಿ. ......ಯೇಹೋವನು ನಿಮ್ಮ ಸಂಗಡ ಇರುವನು. (2 ಪೂರ್ವ 20:15-17).

    ಆದರೆ ಯೆಹೋವನು ಅವನ ಸಿಕ್ಕಗೊಡಿಸುವದಿಲ್ಲ. ಅವನ ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವದಿಲ್ಲ (ಕೀರ್ತನೆ 37:33).

    ಯಾಕಂದರೆ ಉದ್ದಾರವು ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ........ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವನು. ಆದರೆ ಭಕ್ತರ ಕೊಂಬುಗಳು ಎತ್ತಲ್ಪಡುವವು. (ಕೀರ್ತನೆ 75:6,10).

    ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ. ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ. ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು. ಲೋಕದ ದೀನರಿಗೋಸ್ಕರ ಧರ್ಮವನ್ನು ನಿರ್ಣಯಿಸುವನು.... (ಯೆಶಾಯ 11:3-5).

    ಕರ್ತನಾದ ಯೆಹೋವನು ನನಗೆ ಸಹಾಯ ಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ. ನನ್ನ ಮುಖವನ್ನು ನಾಚಿಕೆಯಿಂದ ಕೊರಗಲಿಲ್ಲ. ನನ್ನ ಮುಖವನ್ನು ಕಗ್ಗಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರೆನೆಂದು ನನಗೆ ಗೊತ್ತು. ನನ್ನ ನ್ಯಾಯಾಸ್ಥಾಪಕನು ಸಮೀಪದಲ್ಲಿದ್ದಾ. ನನ್ನೊಡನೆ ಯಾರು ವ್ಯಾಜ್ಯವಾಡುವರು. ನಾವಿಬ್ಬರೂ (ನ್ಯಾಯಾಸನದ ಮುಂದೆ) ನಿಂತುಕೊಳ್ಳುವ. ನನಗೆ ಪ್ರತಿಕಕ್ಷಿಯು. ಯಾರು? ನನ್ನ ಬಳಿಗೆ ಬರಲಿ; ಆಹಾ ಕರ್ತನಾದ ಯೆಹೋವನು ನನಗೆ ಸಹಾಯ ಮಾಡುವನು. ನನ್ನನ್ನು ಅಪರಾಧಿಯೆಂದು ನಿರ್ಣಯಿಸುವವರು ಯಾರು? ಇಗೋ ಅವರೆಲ್ಲರೂ ವಸ್ತ್ರದಂತೆ ಜೀರ್ಣವಾಗುವರು. ಅವರನ್ನು ನುಸಿಯು ತಿಂದುಬಿಡುವದು. ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು? ಕತ್ತಲಿನಲ್ಲಿ ನಡೆಯುತ್ತಾ ಬೆಳಕಿಲ್ಲದವನು ಕರ್ತನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ. ........ಇಗೋ ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ-ದುಃಖಕ್ಕೆ ಒಳಗಾಗಿ ಸಾಯುವಿರಿ. (ಯೇಶಾಯ 50:7-11)).

    ಕರ್ತನು ಇಂತೆನ್ನುತ್ತಾನೆ, ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ; ನಿನಗೆ ಹೆದರಿಕೆ ಇರುವುದಿಲ್ಲ; ನಾಶನವು ದೂರವಾಗಿರುವದು; ನಿನ್ನ ಹತ್ತಿರಕ್ಕೆ ಬಾರದು; ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ (ಯೆಶಾಯ 54:14-17).

    ಆದ್ದರಿಂದ ಕರ್ತನು ಇಂತೆನ್ನುತ್ತಾನೆ - ಆಹಾ! ನಾನು ನಿನ್ನ ಪಕ್ಷವಾಗಿ ವ್ಯಾಜ್ಯವಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆ (ಯೆರೆಮೀಯನು. 51:36).

    ಕರ್ತನೇ, ನೀನು ನನ್ನ ವ್ಯಾಜ್ಯಗಳನ್ನು ನಡಿಸಿ ನನ್ನ ಪ್ರಾಣವನ್ನು ಉಳಿಸಿದ್ದಿ. ಕರ್ತನೇ ನನಗಾದ ಅನ್ಯಾಯವನ್ನು ನೋಡಿದ್ದಿ. ನನಗೆ ವೈರಿಗಳು ನನ್ನ ಮೇಲೆ ತೀರಿಸಿದ ಹಗೆಯನ್ನು ಕಲ್ಪಿಸಿಕೊಂಡ ಯುಕ್ತಿಗಳನ್ನು ನೋಡಿದ್ದೀಯಲ್ಲಾ. ಕರ್ತನೇ ಅವರ ದೂಷಣೆಯೂ, ನನಗೆ ವಿರುಧ್ದವಾಗಿ ಅವರು ಕಲ್ಪಿಸಿದ ಕುಯುಕ್ತಿಗಳೂ, ನನ್ನ ಹಾನಿಗಾಗಿ ನಿತ್ಯ ನಡೆಸುತ್ತಿರುವ ತಂತ್ರೋಪಾಯವು, ನನ್ನ ಎದುರಾಳಿಗಳ ನಿಂದೆಯು ನಿನ್ನ ಕಿವಿಗೆ ಬಿದ್ದಿವೆಯಷ್ಟೆ. ಅವರು ಕೂತುಕೊಳ್ಳಲಿ, ಏಳಲಿ, ನೋಡುತ್ತಲೇ ಇರು. ಅವರ ಗೇಲಿಯ ಹಾಡಿಗೆ ಗುರಿಯಾಗಿದ್ದೇನೆ.(ಪ್ರಲಾಪ3:58-63)).

    ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರು ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. (ಲೂಕ 18:7).

    ಆದರೆ ಆತನ ಕಾಲ ಇನ್ನೂ ಬಾರದ ಕಾರಣ ಯಾರೂ ಆತನ ಮೇಲೆ ಕೈ ಹಾಕಲಿಲ್ಲ. (ಯೋಹಾನ 7:30; 8:20).

    ಒಂದು ವೇಳೆ ನೀನು ಅಥವಾ ನಿನ್ನ ಗಂಡನು ಕರ್ತನಿಗಾಗಿ ನಿಮ್ಮ ದೂರುಗಾರರ ಎದುರಿಗೆ ನ್ಯಾಯಸಭೆಯಲ್ಲಿ ನಿಲ್ಲಬೇಕಾದರೆ ಅಳಬೇಡಿರಿ. ಕಣ್ಣೀರನ್ನು ತಡೆದಿಟ್ಟುಕೊಳ್ಳಿರಿ. ಅಳುವುದರ ಬದಲಾಗಿ ನಿಮ್ಮ ದೂರುಗಾರರ ಕುರಿತಾಗಿ ದುಃಖಿಸಿ; ಇಡೀ ಪ್ರಪಂಚದ ನ್ಯಾಯಾಧಿಪತಿ ಅವರೊಟ್ಟಿಗೆ ವ್ಯವಹರಿಸುವಾಗ ಅವರ ನ್ಯಾಯವಿಚಾರಣೆ ಎಷ್ಟು ಭಯಂಕರ!

    ಯೇಸುವು ತಾನೇ ಅಲ್ಲಗಳೆಯಲ್ಪಟ್ಟು ನ್ಯಾಯಸಭೆಗೆ ಕರೆದೊಯ್ಯಲ್ಪಟ್ಟನು; ಮತ್ತು ಗೇಲಿ ಮಾಡುವ ಗುಂಪಿನ ಮುಂದೆ ನಿಲ್ಲಬೇಕಾಯಿತು. ಆದ್ದರಿಂದ ನಿನಗೆ ಸಂಭವಿಸುತ್ತಿರುವುದರ ಕುರಿತಾಗಿ ಆಶ್ಚರ್ಯಪಡಬೇಡ. ನೀನು ಆತನ ಶಿಷ್ಯಳಲ್ಲವೇ. ಆದ್ದರಿಂದ ಧೈರ್ಯದಿಂದಿರು.ಇದು ಅಳುವುದಕ್ಕೆ ಸಮಯವಲ್ಲ. ಇದಕ್ಕೆ ಬದಲಾಗಿ ಸಂತೋಷದಿಂದ ಕುಣಿದಾಡಿರಿ. ಪರಲೋಕದಲ್ಲಿ ನಿಮ್ಮ ಪ್ರತಿಫಲವು ಶ್ರೇಷ್ಠವಾಗಿರುವುದು. ಯೇಸುವು ನಿನಗಾಗಿ ಪ್ರಾರ್ಥಿಸುತ್ತಿರುವನು ಮತ್ತು ಒಂದು ದಿನ ಆತನು ನಿನ್ನನ್ನು ಎತ್ತಿ ಹಿಡಿದು ಗೌರವಿಸುವನು.

    ಈ ಭೂಲೋಕದಲ್ಲಿ ನಮ್ಮ ಜೀವಿತವು ಒಂದು ಸಂಕಟವೇ. ನಾವು ಆತನ ಸಂಕಟಗಳಲ್ಲಿ ಭಾಗಿಗಳು. ಆದರೆ ಪ್ರತಿಯೊಂದು ಸಂಕಟದಲ್ಲೂ ಉಕ್ಕಿ ಹರಿಯುವಂತೆ ಸಂತೋಷವನ್ನು ಆತನು ಕೊಡುತ್ತಾ. ಆತನು ಅತೀ ಸಮೀಪದ ಸ್ನೇಹಿತನಿಂದ ಅಲ್ಲಗಳೆಯಲ್ಪಟ್ಟು ಮತ್ತು ಹಾಸ್ಯ ಮಾಡುವ ಶೋದನೆಯ ಹಾದಿಯಲ್ಲಿ ಒಯ್ಯಲ್ಪಟ್ಟನು. ಆತನ ಕೆನ್ನೆಗೆ ಹೊಡೆದರು ಮತ್ತು ಆತನ ಬೆನ್ನಿಗೆ ಬಿದ್ದ ಪೆಟ್ಟುಗಳಿಂದ ಆಳವಾದ ಬರೆಗಳು ಬಂದಿದ್ದವು. ಈ ದಿನ ನಾವು ಒಬ್ಬ ವಕೀಲನ ಹಿಡಿದು ನ್ಯಾಯ ದೊರಕಿಸಿಕೊಳ್ಳಬಹುದು. ಯೇಸುವಿಗೆ ಸರಿಯಾದ ನ್ಯಾಯವಿಚಾರಣೆ ನಡೆಯಲಿಲ್ಲ. ಮತ್ತು ಅನ್ಯಾಯವಾಗಿ ಮರಣಕ್ಕೆ ಒಪ್ಪಿಸಿದರು.ಆತನ ಮರಣವು ಯಾರೂ ಎಂದೂ ಅನುಭವಿಸಲಾರದಂತ ಅತೀ ಕ್ರೂರವಾದ ಮರಣ. ಆದರೆ ಮುಂದೆ ಆ ಸಂಕಟದ ಫಲವಾಗಿ ನನ್ನು ಮತ್ತು ನಿನ್ನನ್ನು ಪಾಪದ ಬಂಧನದಿಂದ ಬಿಡಿಸಿ, ತನ್ನ ಮದಲಗಿತ್ತಿಯನ್ನಾಗಿ ಮಾಡುವ ಆ ಫಲವನ್ನು ನೆಸಿ ತನ್ನೊಳಗೆ ಆನಂದವಿತ್ತು. ಆತನು ನಮಗೂ ಸಹ ಆ ಆನಂದವನ್ನು ಕೊಡಬಲ್ಲನು.

    ಯೆಶಾಯ 53:7-9 ಸತ್ಯವೇದದ ಭಾಗ ಯಾವಾಗಲೂ ನನ್ನು ಕರಗಿಸುತ್ತದೆ.

    ಅವನು ಭಾದೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡು, ಬಾಯಿ ತೆರೆಯಲಿಲ್ಲ. ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು. ಬಾಯಿ ತೆರೆಯಲೇ ಇಲ್ಲ. ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು ಆಹಾ ಇವನು ಜೀವಲೋಕದಿಂದ ಕೀಳಲ್ಪಟ್ಟಿದ್ದಾ. ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು? ಅವನು ಅನ್ಯಾಯವನ್ನು ಮಾಡದಿದ್ದರೂ ಅವನ ಬಾಯಲ್ಲಿ ಯಾವ ವಂಚನೆ ಇಲ್ಲದಿದ್ದರೂ ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನ ಹೂಣಿಟ್ಟರು.

    ಅಪೊಸ್ತಲನಾದ ಪೌಲನು ಸುವಾರ್ತೆಯ ನಿಮಿತ್ತ ಬಹಳವಾಗಿ ಕಷ್ಟಪಟ್ಟನು. ಆದರೆ ತನ್ನ ಸೆರೆಮನೆಯಿಂದ ಆತನು ಅದ್ಭುತವಾದ ಪತ್ರಿಕೆಗಳನ್ನು , ಉದಾಹರಣೆಗಾಗಿ ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯಲ್ಲಿ ಆತನು, ‘ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ’ ಎಂಬುದಾಗಿ ಹೇಳುತ್ತಾನೆ.

    ಕ್ರಿಸ್ತನಿಗಾಗಿ ಭಕ್ತಿಯ ಜೀವಿತ ಜೀವಿಸಲು ಮನಸ್ಸು ಮಾಡುವವರೆಲ್ಲರೂ ಯಾವುದಾದರೊಂದು ರೀತಿಯಲ್ಲಿ ಹಿಂಸೆಯನ್ನು ಅನುಭವಿಸಬೇಕು. ಆದ್ದರಿಂದ 1 ಪೇತ್ರ 4:12 ಹೇಳುವ ಹಾಗೆ, ಅದು ನಮಗೆ ಸಂಭವಿಸಿದರೆ ವಿಚಿತ್ರವಾದದ್ದು ಸಂಭವಿಸಿದೆ ಎಂಬುದಾಗಿ ನಾವು ಆಶ್ಚರ್ಯಪಡಬಾರದು ಎಂಬುದಾಗಿ ಕರ್ತನು ತನ್ನ ವಾಕ್ಯದ ಮೂಲಕ ಪ್ರತಿಸಾರಿ ಉತ್ತೇಜನ ಪಡಿಸುತ್ತಾನೆ.

    ನೀತಿಯ ನಿಮಿತ್ತ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕ ರಾಜ್ಯವು ಅವರದು. (ಮತ್ತಾಯ 5:10)

    ನಮ್ಮನ್ನು ಹಿಂಸೆಪಡಿಸುವವರನ್ನು ಕ್ಷಮಿಸಿ, ಅವರನ್ನು ಪ್ರೀತಿಸಿ, ಅವರಿಗಾಗಿ ಪ್ರಾರ್ಥಿಸ ಬೇಕೆಂಬುದಾಗಿ ನಮ್ಮ ಕರ್ತನು ಕಲಿಸಿಕೊಟ್ಟಿದ್ದಾನೆ. ನಮಗೆ ತೊಂದರೆ ಪಡಿಸುವವರಿಗೆ ನಾವು ಒಳ್ಳೆದನ್ನು ಮಾಡುವಾಗ ನಾವು ನಮ್ಮ ಪ್ರೀತಿಯ ಪರಲೋಕದ ತಂದೆಯ ಮಕ್ಕಳೆಂಬುದಾಗಿ ನಿರೂಪಿಸುತ್ತೇವೆ. ದೇವರು ಎಲ್ಲರಿಗೂ ಒಳ್ಳೆಯವನು. ಒಂದು ವೇಳೆ ನಿಮ್ಮ ಹತ್ತಿರದ ಸ್ನೇಹಿತನು ಅಥವಾ ಸಂಭಂದಿಕನು ನಿಮ್ಮನ್ನು ಹಿಂದಿನಿಂದ ತಿವಿದಿದ್ದರೆ (ಮೋಸ ಮಾಡಿದ್ದರೆ) ಅಳಬೇಡಿ. ಯೇಸುವಿನ ಹೆಜ್ಜೆಯ ಜಾಡಿನಲ್ಲಿ ನಡೆಯಲು ನಿಮಗೆ ಸಿಕ್ಕಿರುವ ಅವಕಾಶಕ್ಕಾಗಿ ಸಂತೋಷಪಡಿರಿ. ಅಂತಹ ಸಂಧರ್ಭಗಳಲ್ಲಿ ಕ್ರಿಸ್ತನು ನಿಮ್ಮ ಮನಸ್ಸನ್ನು ಆಳಲಿ.

    ಕರ್ತನ ನಿಮಿತ್ತವಾಗಿ ಅನೇಕ ವರ್ಷಗಳು ಸೆರೆಮನೆಯಲ್ಲಿ ಹಾಕಲ್ಪಟ್ಟ ಪಾಸ್ಟರಗಳ ಕುರಿತಾಗಿ ನಾನು ಓದಿದ್ದೇ. ಅವರ ಹೆಂಡತಿಯರಿಗೆ ಇದು ತುಂಬಾ ಕಷ್ಟವೆನ್ನಿಸಿರಬಹುದು. ಅನೇಕ ದೇಶಗಳಲ್ಲಿ ಈಗಲೂ ಸಹ ಹಿಂಸೆಯನ್ನು ಅನುಭವಿಸುತ್ತಿರುವ ಕ್ರೈಸ್ತ ಕುಟುಂಬಗಳಿಗಾಗಿ ನಾವು ಪ್ರಾರ್ಥಿಸಬೇಕು. ನಮಗೆ ಹಿಂಸೆಯು ಭಾರತದಲ್ಲಿಯೂ ಸಹ ಬರುತ್ತದೆ. ನಮ್ಮನ್ನು ನಂಬಿಕೆಯಲ್ಲಿ ಬಲವಾಗಿಡುವಂತೆ ನಾವು ದೇವರಲ್ಲಿ ಪ್ರಾರ್ಥಿಸುವ. ಕರ್ತನ ನಿಮಿತ್ತವಾಗಿ ಹಿಂಸೆಗೆ ಒಳಗಾದವರು ಮತ್ತು ಕರ್ತನಿಗಾಗಿ ರಕ್ತ ಸಾಕ್ಷಿಯಾಗಿ ಸತ್ತಂತವರ ಕುರಿತಾಗಿ ಕಥೆಗಳನ್ನು ಓದಲು ನಾವು ಸಮಯವನ್ನು ಕೊಡುವುದು ಒಳ್ಳೆಯದು. ನಮ್ಮ ಸಮಯ ಬರುವಾಗ ಅದು ನಮ್ಮನ್ನು ಬಲಪಡಿಸುತ್ತದೆ.

    ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ. (ರೋಮ 8:18)

    ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅಂತ್ಯಂತಾಧಿಕವಾದ ಪ್ರತಿಫಲವನ್ನು ಉಂಟು ಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ (2 ಕೊರಿಂಥ 1:4).

    (ಯೇಸು)....ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ. (ಇಬ್ರಿಯ 7:25).

    ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾ. (1 ಯೋಹಾನ 2:1).

    ನೀತಿವಂತನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ (ಕೀರ್ತನೆ 112:7).

    ನೀವು ಇರುವವರೆಗೂ ನಿಮಗೆ ಒಲವು ಇರುವದು. ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೆ ಆಧಾರ (ಧರ್ಮೋ 33:25,27).

    ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವೆನು (ಜೆಫನ್ಯ3:17).

    ಇದಲ್ಲದೇ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನ ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತದೆ ಎಂದು ನಮಗೆ ಗೊತ್ತದೆ.(ರೋಮ 8:28).

    ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. (ಕೀರ್ತನೆ 46:1)

    ಪೇತ್ರನು ನಾವು ಎದುರಿಸಬೇಕಾದ ಅಗ್ನಿಯ ಶೋಧನೆಗಳನ್ನು ಕುರಿತು ಮಾತಾನಾಡುತ್ತಾನೆ ಮತ್ತು ಯೇಶಾಯ 43:3 ರಲ್ಲಿ, ಜ್ವಾಲೆಯನ್ನು ದಾಟಬೇಕಾದರೂ ಸಹ ನಾವು ಸುಟ್ಟು ಹೋಗುವುದಿಲ್ಲ ಎಂಬುದಾಗಿ ಕರ್ತನು ಭರವಸೆ ಕೊಟ್ಟಿದ್ದಾನೆ. ಅದರ ಅರ್ಥ ನಮ್ಮ ಆತ್ಮವು ಹಿಂಸೆಯಲ್ಲಿ ನಾಶವಾಗುವುದಿಲ್ಲ ಎಂಬುದಾಗಿ.

    ನಾವು ಪ್ರಾರ್ಥಿಸುವಂತೆ ಯೇಸುವು ಕಲಿಸಿಕೊಡುತ್ತಾನೆ. ಪವಿತ್ರಾತ್ಮನು ಸಹ ಮಾತಿಲ್ಲದ ನರಳಾಟದಿಂದ ನಮಗಾಗಿ ವಿಜ್ಞಾಪಿಸುತ್ತಾ. ನಮ್ಮ ವೇದನೆಯನ್ನು ನಾವು ನಮ್ಮ ಮಾತಿನಲ್ಲಿ ಹೇಳಲು ಅಸಾಧ್ಯವಾಗುವಾಗ ಪವಿತ್ರಾತ್ಮನು ನಮ್ಮ ಸಹಾಯಕ್ಕೆ ಬರುವನು. ಆದ್ದರಿಂದ ನಾವು ಪವಿತ್ರಾತ್ಮನಿಗೆ ಒಳಗಾಗುವಾಗ ಆತನು ನಮಗಾಗಿ ಮತ್ತು ನಮ್ಮೊಳಗಿನಿಂದ ಕೂಗುವನು.

    ಅಧ್ಯಾಯ 6
    ದೇವರು ನಿನ್ನನ್ನು ಲೌಕೀಕ ದುಃಖದಿಂದ ಬಿಡಿಸುವನು

    ಅಧ್ಯಾಯ ಆರು

    ದೇವರು ನಿನ್ನನ್ನು ಲೌಕೀಕ ದುಃಖದಿಂದ ಬಿಡಿಸುವನು

    ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ. (2ಕೊರಿಂಥ 7:10)

    ಸ್ತ್ರೀಯರಲ್ಲಿ ಬಹಳವಾಗಿ ಅಳುವಂತದ್ದು ಸ್ವಾನುಕಂಪದಿಂದ, ಕೋಪಗೊಂಡದ್ದರಿಂದ, ತಾತ್ಸಾರದ ಮಾತಿನಿಂದ ಅಥವಾ ಅವರಿಗೆ ಬೇಕಾದ ಯಾವುದೋ ಪ್ರಾಪಂಚಿಕವಾದ ಸಂಗತಿಯು ಸಿಗದೇ ಹೋದದ್ದರಿಂದ ಬರುತ್ತದೆ.

    ಕೆಲವು ಸ್ತ್ರೀಯರು ಅತೀ ಸೂಕ್ಮರು ಮತ್ತು ಅವರು ಸಂಗತಿಗಳನ್ನು ಮನಸ್ಸಿಗೆ ಬೇಗ ಹಚ್ಚಿಕೊಳ್ಳುವ ಸ್ವಭಾವದವರು. ಅವರ ಉಗ್ರವಾದ ಸ್ವಭಾವ ಅವರನ್ನು ಸುಲಭವಾಗಿ ಕೆಣಕಿಸುತ್ತದೆ. ಯಾಕೋಬ 1:19 ರಲ್ಲಿ ನಾವು ಕೋಪಗೊಳ್ಳುವುದರಲ್ಲಿ ನಿಧಾನವಾಗಿರಬೇಕು. ಯಾಕಂದರೆ ಕೋಪವು ಮೂರ್ಖನ ಮಡಿಲಲ್ಲಿ ನೆಲಸಿದೆ ಎಂಬದಾಗಿ ಪ್ರಸಂಗಿ 7: 9ರಲ್ಲಿ ಹೇಳುತ್ತದೆ. ಆಗಾಗ ಜನರು ತಮ್ಮ ಶಾಂತತೆಯನ್ನು ಕಳೆದುಕೊಳ್ಳುವಂತೆ ಸೈತಾನನು ಮಾಡುತ್ತಾನೆ ಮತ್ತು ಅಪರಾಧ ಮನಸಾಕ್ಷಿಯಲ್ಲಿ ಹೊರಳಾಡುವಂತೆ ಸೈತಾನನು ಮಾಡುತ್ತಾನೆ. ಸೈತಾನನ ಕುತಂತ್ರಕ್ಕೆ ಎಚ್ಚರಿಕೆಯಾಗಿರ್ರಿ. ಕಸದಿಂದ ತಕ್ಷಣವೇ ಎದ್ದು ನಿಮ್ಮ ಪಾಪಕ್ಕಾಗಿ ಪಶ್ಚಾತ್ತಾಪಟ್ಟು ಕರ್ತನ ಕಡೆಗೆ ತಿರುಗಿಕೊಳ್ಳಿರಿ.

    ಕೆಲವು ಸ್ತ್ರೀಯರು ತಮ್ಮನ್ನು ಯಾವಾಗಲೂ ತಮಗಿಂತ ಉತ್ತಮ ಸ್ಥಿತಿಯಲ್ಲಿರುವವರ ಜೊತೆಗೆ ಹೋಲಿಸಿಕೊಳ್ಳುತ್ತಾರೆ. ಇದು ಯಾವಾಗಲೂ ಬೇಸರಿಕೆಗೆ ಮತ್ತು ನಿರಾಶೆಗೆ ನಡೆಸುತ್ತದೆ. ಅದು ಅವರನ್ನು ದುಃಖಪಡಿಸುತ್ತದೆ. ಒಂದು ವೇಳೆ ನಿಮ್ಮನ್ನು ಇತರರೊಟ್ಟಿಗೆ ಹೋಲಿಸಿಕೊಳ್ಳಬೇಕೆನಿಸಿದಾಗ, ನಿಮಗಿಂತ ಕೀಳಾಗಿರುವವರು, ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಜೊತೆಗೆ ಹೋಲಿಸಿಕೊಳ್ಳಿರಿ.

    ಕೆಲವು ಸ್ತ್ರೀಯರು ರೂಢಿಯ ಪ್ರಕಾರ ಒಬ್ಬಂಟಿಗರು; ಅವರಿಗೆ ಬೇಕಾದ ಆದರಣೆಯನ್ನು ಎಲ್ಲೂ ಹೊಂದುವುದಿಲ್ಲ. ಮತ್ತು ತಮ್ಮನ್ನು(ತನ್ಪ) ಇತರರ ಮೇಲೆ ಹೊರಸುತ್ತಾರೆ. ಹೀಗೆ ಮಾಡುವುದರ ಬದಲಾಗಿ ನಮ್ಮ ಆಳವಾದ ಸಂಭಂದವನ್ನು ಕರ್ತನ ಜೊತೆಗೆ ಬೆಳೆಸಿಕೊಳ್ಳಬಹುದು.

    ಕೆಲವು ಮಧ್ಯ ವಯಸ್ಸಿನ ಸ್ತ್ರೀಯರು ಶಾರೀರಿಕವಾಗಿ ಬಲಹೀನರು ಮತ್ತು ಹಾರ್ಮೊನಗಳ ಬದಲಾವಣೆಯಿಂದಾಗಿ ಸುಲಭವಾಗಿ ಅಳುತ್ತಾರೆ. ಇಂತಹ ಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆ ಮಾಡಬಹುದು ಮತ್ತು ಅವರು ವೈದ್ಯರನ್ನು ನೋಡಬಹುದು. ದೇವರು ನಮ್ಮನ್ನು ಸೃಷ್ಟಿಸಿದಾತನು ಮತ್ತು ಆತನು ನಮ್ಮ ಚೌಕಟ್ಟನ್ನು ಬಲ್ಲನು. ಮತ್ತು ಒಂದು ವೇಳೆ ನಾವು ಕೇಳುವುದಾದರೆ ಇಂತಹ ಸಮಯಗಳಲ್ಲಿ ಆತನು ನಮಗೆ ಸಹಾಯಿಸಲು ಇಷ್ಟವುಳ್ಳವನಾಗಿದ್ದಾನೆ.

    ನಿಮ್ಮ ಅಳುವಿಕೆಯು ಪ್ರಾಪಂಚಿಕವಾದ ದುಃಖವಾಗಿದೆಯೋ? ಈ ಪರೀಕ್ಷಾ ಪಟ್ಟಿಯ ಮುಖಾಂತರ ತಿಳಿಯಿರಿ.

  • ನೀವು ಕರುಣಾಮಯಿ ತಂದೆ-ತಾಯಿಂದ ಕೆಟ್ಟುಹೋದ ಮಗುವಾಗಿ ಬೆಳೆದು ಬಂದಿರುವುದರಿಂದ ಈಗ ಬೇಗ ಕೆಣಕಿಸಲ್ಪಟ್ಟು ಸಣ್ಣ ಅನಾನುಕೂಲತೆಯನ್ನು ಮತ್ತು ತಡವಾಗುವಿಕೆಯನ್ನು ಎದುರಿಸಲು ಸಾಧ್ಯವಾಗುತ್ತಾಯಿಲ್ಲವೇ? ಅದಕ್ಕಾಗಿ ನೀನು ಅಳುತ್ತಿರುವಿಯೋ? ನಿನ್ನ ತಂದೆ-ತಾಯಿಯನ್ನು ದೂರಬೇಡ. ಮುಂಗೋಪವನ್ನು ಮೊಟ್ಟೆಯ (ಪ್ರಾರಂಭದ) ಹಂತದಲ್ಲಿರುವಾಗಲೇ ಅದರ ಜೊತೆ ವ್ಯವಹರಿಸು; ಅದು ಒಡೆದು, ದೊಡ್ಡ ಮರಣಕರ ಸರ್ಪವಾಗಿ, ನಿನ್ನನ್ನು ಮತ್ತು ಇತರರನ್ನು ಗಾಯಗೊಳಿಸುವುದಕ್ಕೆ ಮುಂಚೆ ಅದರ ಜೊತೆ ವ್ಯವಹರಿಸು. ನಿನಗೆ ಹತ್ತಿಕೊಂಡಿರುವ ಸ್ವಭಾವಗಳನ್ನು ಎದುರಿಸಲು ಸಹಾಯಿಸುವಂತೆ ದೇವರನ್ನು ಕೇಳಿಕೋ.
  • ನೀನು ಪ್ರಾಪಂಚಿಕ ವಸ್ತುಗಳನ್ನು, ಬಟ್ಟೆಗಳನ್ನು, ಸಂಗೀತಗಳನ್ನು, ಒಡವೆ ಇತ್ಯಾದಿಯನ್ನು ಪ್ರೀತಿಸುತ್ತೀಯೋ? ಎಷ್ಟಾಗಿ ಎಂದರೆ ಅವು ಸಿಗದಿದ್ದರೆ ನೀನು ಅಸಂತೋಷಗೊಳ್ಳುವೆ ಮತ್ತು ಅಳಲು ಪ್ರಾರಂಭಿಸುವೆಯಾ? ಇಂತಹ ಸಂಗತಿಗಳನ್ನು ಹೊಂದದೇ ಹೋದರೆ ನೀನು ನಿನ್ನ ತಂದೆ-ತಾಯಿಯನ್ನು ಅಥವಾ ನಿನ್ನ ಗಂಡನ ದೂಷಿಸುತ್ತೀಯೋ? ನಿನ್ನ ಲೌಕೀಕ ಮನೋಭಾವನೆಯನ್ನು ಕರ್ತನಿಗೆ ಒಪ್ಪಿಸಿ ಅದರಿಂದ ನಿನ್ನನ್ನು ಬಿಡಿಸುವಂತೆ ಆತನ ಕೇಳಿಕೋ?
  • ನಿನಗೆ ಅಥವಾ ನಿನ್ನ ಗಂಡನಿಗೆ ಕೆಲಸ ಸಿಗದಿದ್ದರೆ ಅಥವಾ ಕೆಲಸದಲ್ಲಿ ಬಡ್ತಿ ಸಿಗದಿದ್ದರೆ, ನಿನ್ನ ಮಗುವಿಗೆ ಕಾಲೇಜಿನಲ್ಲಿ ಪ್ರವೇಶ ಸಿಗದಿದ್ದರಿಂದ ಅಳುವಿಯೋ? ದೇವರಿಗೆ ಗೊತ್ತು ಯಾವುದು ನಮ್ಮ ಕುಟುಂಬಕ್ಕೆ ಉತ್ತಮವಾದದ್ದು ಎಂಬದಾಗಿ; ಮತ್ತು ನಿನ್ನ ಎಲ್ಲಾ ಸನ್ನಿವೇಶಗಳು ಆತನ ಹತೋಟಿಯಲ್ಲಿದೆ. ಆದ್ದರಿಂದ ಎಲ್ಲಾ ಸಂದರ್ಭಗಳಲ್ಲಿ ಆತನಿಗೆ ಕೃತಜ್ಞತೆಯನ್ನು ಸಲ್ಲಿಸು.
  • ಜನರು ನಿನ್ನನ್ನು ಉದ್ದೇಶಪೂರ್ವಕವಾಗಿ ಯಾವುದೋ ವಿಧದಲ್ಲಿ ನೋಯಿಸಿದ್ದಾರೋ? ಈಗ ಅವರನ್ನು ಕ್ಷಮಿಸಲು ನಿನಗೆ ಕಷ್ಟವಾಗಿದೆಯೋ? ನೀನು ಕೋಪದಿಂದ ಮತ್ತು ದ್ವೇಷದಿಂದ ಅಳುತ್ತಿದ್ದಿಯೋ? ಅಂತವರ ವಿಷಯವಾಗಿ ಇತರರೊಂದಿಗೆ ಕೆಟ್ಟದಾಗಿ ಮಾತನಾಡಬೇಕೆಂಬುದಾಗಿ ಅನ್ನಿಸುತ್ತಿದೆಯೋ? ಹಾಗಿದ್ದಲ್ಲಿ ನೀನು ಪ್ರತಿಕಾರವುಳ್ಳವಳಾಗಿದ್ದಿ. ಇಂತಹ ವಿಷಯಗಳನ್ನು ಕರ್ತನ ಬಳಿಗೆ ತೆಗೆದುಕೊಂಡು ಹೋಗಿ ಇದಕ್ಕೆ ಸಂಬಂಧ ಪಟ್ಟವರನ್ನೆಲ್ಲಾ ಕ್ಷಮಿಸಲು ಸಹಾಯಿಸುವಂತೆ ಕೇಳಿಕೋ. ಅಂಥವರನ್ನೆಲ್ಲಾ ನಿನ್ನ ಮನಸ್ಸಿನಿಂದ ಬಿಡುಗಡೆ ಮಾಡಿ ಕ್ಷಮಿಸು. ಆಗ ನೀನು ಅವರನ್ನು ಸಂಧಿಸುವಾಗ ಯಥಾರ್ಥವಾದ ನಗುವಿನಿಂದ ವಂದಿಸಲು ಸಾಧ್ಯವಾಗುತ್ತದೆ.
  • ಹಣದ ನಷ್ಟದಿಂದಾಗಿ ಅಥವಾ ಮೋಸಗೊಳಿಸಲ್ಪಟ್ಟದರಿಂದಾಗಿ ಮತ್ತು ಅನ್ಯಾಯವಾಗಿ ನಿನ್ನನ್ನು ಪ್ರತಿಪಾದಿಸಿದ ಕಾರಣ ನೀನು ಅಳುತ್ತಿರುವಿಯೋ? ನಿನ್ನ ಹಣದ ನಷ್ಟವನ್ನು ದೇವರು ನಿನ್ನನ್ನು ಹಣದಾಶೆಯಿಂದ ಬಿಡಿಸಲು ಉಪಯೋಗಿಸುತ್ತಾನೆ ಮತ್ತು ಹೆಚ್ಚಾಗಿ ಯೇಸುವಿನಂತೆ ನಿನ್ನನ್ನು ಮಾಡುತ್ತಾನೆ. ಆದ್ದರಿಂದ ಹಣದ ನಷ್ಟಕ್ಕಾಗಿ ಸಹ ದೇವರನ್ನು ಕೊಂಡಾಡು. ಎಲ್ಲಾ ಅಂಥಹ ನಷ್ಟಗಳನ್ನು ತುಂಬಿಸಲು ಸಕಲ ಒಳ್ಳೇ ವರಗಳನ್ನು ಕೊಡುವ ನಮ್ಮ ಕರ್ತನಿಗೆ ಸಾಧ್ಯ. ಇಡೀ ಪಂಚದ ತಪ್ಪಿಗಸ್ತರೊಂದಿಗೆ ಒಂದು ದಿನ ವ್ಯವಹರಿಸುವ ನ್ಯಾಯಾಧಿಪತಿ ಆತನು. ಆದ್ದರಿಂದ ಅಂಥಹ ಸಂಗತಿಗಳನ್ನು ಆತನ ಕೈಯಲ್ಲಿ ಬಿಡುವದು ಒಳ್ಳೆಯದು. ಒಂದು ವೇಳೆ ನಿಮ್ಮನ್ನು ಮೋಸಗೊಳಿಸಿದವರ ಕುರಿತಾಗಿಯೇ ಯೋಚಿಸುತ್ತಾ ಇರುವುದಾದರೆ ನಿನ್ನನ್ನು ನೀನೇ ಸಂಕಟಕ್ಕೆ ಒಳಪಡಿಸಿಕೊಳ್ಳುತ್ತಿ ಅಷ್ಟೆ. ಇಂತಹ ಸಂದರ್ಭಗಳಲ್ಲಿ ಐವತ್ತು ವರುಷಗಳ ನಂತರ ಈ ವಿಷಯ ಪ್ರಮುಖವಾದದ್ದೋ? ಎಂಬುದಾಗಿ ನಿನಗೆ ನೀನೇ ಒಂದು ಒಳ್ಳೆಯ ಪ್ರಶ್ನೆಯನ್ನು ಹಾಕಿಕೊಳ್ಳಬೇಕು.
  • ನಿನ್ನ ಗಂಡನೊಂದಿಗೆ ನಿನಗೆ ಇರುವ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳದೆ ಇರುವುದರಿಂದ ನೀನು ಅಳುತ್ತಿರುವಿಯೋ? ಸೈತಾನನು ದಾಂಪತ್ಯ ಸಂಬಂಧಗಳನ್ನು ನಾಶಪಡಿಸಲು ಇದ್ದಾನೆ. ಎಲ್ಲಾ ವಿಧವಾದ ಹೊಟ್ಟೆಕಿಚ್ಚನ್ನು ತೊರೆಯಿರಿ. ದೇವರು ಮದುವೆಯ ಅನ್ಯೋನ್ಯತೆಯನ್ನು ಸುಂದರವಾಗಿರುವಂತೆ ಯೋಚಿಸಿದನು. ಆದ್ದರಿಂದ ಒಂದು ತೋಟವನ್ನು ಬೆಳೆಸುವಂತೆ ನಿಮ್ಮ ದಾಂಪತ್ಯ ಸಂಬಂಧವನ್ನು ಬೆಳೆಸಿ, ಯಾವಾಗಲೂ ತೋಟಕ್ಕೆ ನೀರನ್ನು ಹಾಕು. ಸೈತಾನ ಬಿತ್ತಿರುವ ಅನುಮಾನ ಮತ್ತು ವೈಮನಸ್ಸೆಂಬ ಬೀಜವನ್ನು ಕಿತ್ತು ಹಾಕಿ, ಅದರ ಬದಲಾಗಿ ದೈವೀಕ ಬೀಜವೆಂಬ ಪ್ರೀತಿ ಮತ್ತು ಕ್ಷಮಿಸುವಿಕೆಯನ್ನು ಬಿತ್ತು.
  • ನೀನು ಮತ್ತೆ ಗರ್ಭಧರಿಸಿರುವದರಿಂದ ಅಳುತ್ತಿರುವೆಯೋ? ಬಹುಶಃ ನಿನಗೆ ಮತ್ತೆ ಮಕ್ಕಳು ಬೇಡದಿರಬಹುದು. ಮತ್ತು ನೀನು ಮತ್ತೆ ಗರ್ಭಧರಿಸಿರುವುದನ್ನು ತಿಳಿದು ಮನಗುಂದಿರುವಿಯೋ? ಪ್ರತಿಯೊಂದು ಮಗುವು ದೇವರ ವರವೆಂಬುದನ್ನು ಜ್ಞಾಪಿಸಿಕೋ. ಒಂದು ಮಗುವನ್ನು ತಿರಸ್ಕರಿಸುವುದು ಅದನ್ನು ಕೊಲ್ಲುವಂತೆ. ಯೇಸುವಿನ ಹೆಸರಿನಲ್ಲಿ ದೇವರು ಕೊಡುವ ಪ್ರತಿಯೊಂದು ಮಗುವನ್ನು ಸ್ವೀಕರಿಸು. ನಿನಗೆ ಬೇಡವಾದ ಮಗು ಎಲ್ಲಾ ಮಗುವಿಗಿಂತ ನಿನಗೆ ಹೆಚ್ಚಾದ ಆನಂದವನ್ನು ತರುವುದನ್ನು ನೀನು ಕಂಡುಕೊಳ್ಳುವಿ. ಅನಂತರ ಮುಂದೆ ನಿಮ್ಮ ಕುಟುಂಬವನ್ನು ನೀವು ಯೋಜಿಸಬಹುದು.
  • ಅಳುವುದರಿಂದ ಇತರರ ಗಮನವನ್ನು ನಿನ್ನ ಕಡೆಗೆ ಸೆಳೆಯಬಹುದೆಂದೂ ಮತ್ತು ಸಾಕಷ್ಟು ಅಳುವುದರಿಂದ ನಿನಗೆ ಬೇಕಾದದ್ದನ್ನು ನಿನ್ನ ಗಂಡನಿಂದ ಅಥವಾ ನಿನ್ನ ತಂದೆ ತಾಯಿಯಿಂದ ಹೊಂದಿಕೊಳ್ಳಬಹುದು ಎಂಬುದಾಗಿ ತಿಳಿದು ಅಳುತ್ತೀಯೋ? ಇಂತಹ ಸ್ವಾರ್ಥದಿಂದ ನಿನ್ನನ್ನು ಬಿಡಿಸಲು ಕರ್ತನ ಕೇಳಿಕೋ.
  • ನಿನಗೆ ಬೇಕಾದ ರೀತಿಯಲ್ಲಿ ಸಂಗತಿಗಳು ನಡೆಯದೇ ಇರುವದರಿಂದ ನೀನು ಅಳುತ್ತೀಯೋ? ನಿನ್ನ ಪ್ರಾರ್ಥನೆಯನ್ನು ದೇವರು ಉತ್ತರಿಸದೆ ಇರುವುದರಿಂದ ನೀನು ಕೋಪಗೊಂಡಿದ್ದೀಯೋ? ಇಂತಹ ಮನೋಭಾವನೆಯು ಸ್ವಗೌರವ ಜ್ಞಾನದಿಂದ ಬರುತ್ತದೆ. ನಿನಗೆ ತಾಳ್ಮೆಯನ್ನು ಕೊಡುವಂತೆ ದೇವರನ್ನು ಕೇಳಿಕೋ.
  • ಇತರರು ತಮ್ಮ ಕನಿಕರವನ್ನು ನಿನಗೆ ತೋರುವಂತೆ ನಿನ್ನ ಲೌಕೀಕ ದುಃಖದ ನೆನಪನ್ನು(ಈಜಿಪ್ಟಿನಲ್ಲಿ ಸತ್ತ ಹೆಣಗಳನ್ನು ರಕ್ಷಿಸುವಂತೆ) ಸಂರಕ್ಷಿಸುತ್ತಿರುವೆಯೋ? ಯಾವಾಗಲಾದರೂ ನಿನ್ನ ಹಿಂದಿನ ಅಸಂತೋಷದ ಸಂಗತಿಗಳನ್ನು ನೆಪಿಸಿಕೊಳ್ಳಲು ಶೋಧಿಸಲ್ಪಟ್ಟಿದ್ದರೆ ತಕ್ಷಣವೇ ಅಂತಹ ಆಲೋಚನೆಗಳನ್ನು ತ್ಯಜಿಸಲು ಕರ್ತನ ಸಹಾಯವನ್ನು ಕೇಳಿಕೋ. ಒಂದು ವೇಳೆ ಈ ರೀತಿ ಕ್ರಮವಾಗಿ ನೀನು ಮಾಡುವದಾದರೆ ಕೆಲವು ಕಾಲದ ನಂತರ ಆ ಪ್ರಸಂಗಿಕ ಕಥೆಯನ್ನೆ ನೀನು ಸಂಪೂರ್ಣವಾಗಿ ಮರೆತುಹೋಗುವುದನ್ನು ಕಂಡುಕೊಳ್ಳುತ್ತಿ. ಮತ್ತು ನಿನ್ನ ಆತ್ಮವು ಸ್ವಸ್ಥವಾಗುತ್ತದೆ. ನಿನ್ನ ಹಿಂದಿನ ಸಂಗತಿಗಳು ಶಾಶ್ವತವಾಗಿ ಹೂಣಿಡಬೇಕಾದ ಕೊಳೆತ ದೇಹದಂತೆ ಇದೆ. ನೀನು ಹಾಗೆ ಮಾಡುವಾಗ ನೀನಾಗಿ ಬಿಡುಗಡೆ ಹೊಂದಿರುವುದನ್ನು ಕಂಡುಕೊಳ್ಳುವಿ ಮತ್ತು ಪರಲೋಕವನ್ನು ಸ್ವಲ್ಪ ಮಟ್ಟಿಗೆ ಭೂಮಿಯ ಮೇಲೆ ಅನುಭವಿಸುವಿ. ಹೀಗೆ ನಿನಗೆ ಮತ್ತು ನಿನ್ನ ಸುತ್ತಲಿರುವವರಿಗೆ ಈ ಪ್ರಪಂಚವನ್ನು ಒಂದು ಉತ್ತಮ ಸ್ಥಳವಾಗಿ ಮಾಡುವಿ.

    ದೇವರು ಇಷ್ಟಪಡುವಂತ ರೀತಿಯಲ್ಲಿ ನೀನು ಜೀವಿಸು. ನಿನ್ನ ಸ್ವಾರ್ಥಕ್ಕಾಗಿ ಪಶ್ಚಾತ್ತಾಪಡು ಮತ್ತು ನಿನ್ನ ಎಲ್ಲವನ್ನು ಕರ್ತನಾದ ಯೇಸುವಿಗೆ ಸಮರ್ಪಿಸು. ಕೆಲವು ಸಂಧರ್ಬಗಳಲ್ಲಿ ನಿನ್ನ ಸಹಿಸುವಿಕೆಯ ಅಂತ್ಯಕ್ಕೆ ಬಂದಿರುವ ಹಾಗೆ ಅನ್ನಿಸುತ್ತದೆ. ಆ ನಂತರ ನೀನು ಕೇವಲ ಅತಿಯಾಗಿ ವರ್ತಿಸಿದ್ದು, ದೇವರ ಕೃಪೆಯು ಇಂತಹ ಸಂಧರ್ಬಗಳಲ್ಲಿ ನಿನ್ನನ್ನು ತಾಳಿಕೊಳ್ಳಲು ಸಾಕಾಗಿರುವುದನ್ನು ನೀನು ಕಂಡುಕೊಳ್ಳುವಿ. ನಿನ್ನ ಶಕ್ತಿ ಮೀರುವಂತೆ ಶೋಧನೆಯನ್ನು ದೇವರು ಅನುಮತಿಸುವುದಿಲ್ಲ.

    ಅನೇಕ ದೇವ ಭಕ್ತೆಯರಾದ ಸ್ತ್ರೀಯರು ಕರ್ತನಿಗಾಗಿ ಬಹಳ ಸಂಕಟಗಳನ್ನು ಅನುಭವಿಸಿದ್ದಾರೆ. 16ನೇಯ ಶತಮಾನದಲ್ಲಿ ಫ್ರಾನ್ಸ್‌ನ ಮೇಡಂ ಗಯೋನ್ ಎಂಬುವರು ಕರ್ತನ ಮೇಲಿನ ತಮ್ಮ ನಂಬಿಕೆಗಾಗಿ, ಚಳಿಯುಳ್ಳ ಸೆರೆಮನೆಯ ಕೋಣೆಯಲ್ಲಿ ಬಹಳ ದಿನಗಳನ್ನು ಕಳೆಯಬೇಕಾಗಿತ್ತು. ಆದರೆ ಆ ಸೆರೆಮನೆಯ ಕೋಣೆಯಿಂದ ಆಕೆ ಜಯದ ಆತ್ಮದಿಂದ ಪ್ರತಿಧ್ವನಿಸುತ್ತಿದ್ದ ಪುಸ್ತಕಗಳನ್ನು ಬರೆದಳು. ಮತ್ತು ಆಕೆ ಕರ್ತನಿಗಾಗಿ ದೃಢ ನಿಷ್ಠೆಯುಳ್ಳವಳಾಗಿದ್ದದರಿಂದ ಈ ದಿನ ಸಹ ಅನೇಕ ಜನರನ್ನು ಅದು ಆಶೀರ್ವದಿಸಿದೆ.

    ಸ್ತ್ರೀಯರಾದ ನಾವು ದೃಢವುಳ್ಳವರಾಗಬೇಕೆಂಬುದು ದೇವರ ಇಷ್ಟ. ನಾವು ಧೈರ್ಯಹೀನರಾಗಿ ಕುಂದಿಹೋಗದೇ ಕಷ್ಟಪಡುತ್ತಿರುವವರಿಗೆ ಸಹಾಯವಾಗಿರಬೇಕು. ಆತನ ಶಕ್ತಿಯು ಯಾವಾಗಲೂ ನಮಗೆ ಒದಗುತ್ತದೆ. ಮತ್ತು ಆತನು ನಮ್ಮನ್ನು ಬಲಗೊಳಿಸುತ್ತಾ. ಆದ್ದರಿಂದ ನಾವು ಆತನಲ್ಲಿ ಭರವಸವಿಡೋಣ; ಮತ್ತು ಕರ್ತನ ಸಹಾಯದಿಂದ ನಮ್ಮ ಕೆಟ್ಟ ಗಳಿಗೆಗಳು ಸಹ ಉತ್ತಮವಾದದ್ದಾಗಿರಲು ಸಾಧ್ಯವಾಗುವುದನ್ನು ನಾವು ಕಾಣುತ್ತೇವೆ.

    ನಿಮ್ಮ ಜೀವಿತವನ್ನು ಮತ್ತು ನಿಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಕರ್ತನ ಹಸ್ತಗಳಲ್ಲಿ ಕೊಡಿರಿ; ಮತ್ತು ಆತನು ನಿಮ್ಮ ಕಷ್ಟಕರವಾದ ಸಮಯಗಳಲ್ಲೂ ಸಹ ಸಹಾಯ ಮಾಡುವನು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಶೋಧನೆಗಳು ಬರಬಹುದು. ಅದನ್ನೆಲ್ಲಾ ನೀವು ಜಯಿಸುವಿರಿ. ನಿಮ್ಮ ಸ್ವಭಾವಗಳಲ್ಲಿ ದೈತ್ಯವಾದವುಗಳನ್ನು ಸಹ ಜಯಿಸಲು ಆತನು ಸಾಧ್ಯವಾಗ ಮಾಡುತ್ತಾನೆ. ಮತ್ತು ಆತನಿಗೆ ಮೆಚ್ಚಿಕೆಯಾದ ಜೀವಿತವನ್ನು ಜೀವಿಸಲು ಬಲವನ್ನು ಕೊಡುತ್ತಾನೆ.

    ಹೀಗೆ ನೀವು ಅನೇಕರಿಗೆ ಆಶೀರ್ವಾದವಾಗುವಿರಿ.

    ಅಧ್ಯಾಯ 7
    ದೇವರು ನಿನ್ನನ್ನು ದೈವೀಕವಾದ ದುಃಖದಿಂದ ತನ್ನ ಕಡೆಗೆ ಸೆಳೆಯುವನು

    ಅಧ್ಯಾಯ ಏಳು

    ದೇವರು ನಿನ್ನನ್ನು ದೈವೀಕವಾದ ದುಃಖದಿಂದ ತನ್ನ ಕಡೆಗೆ ಸೆಳೆಯುವನು

    2 ಕೊರಿಂಥ 7:10 ದೇವರ ಚಿತ್ತಾನುಸಾರವಾಗಿರುವ ದುಃಖವು ಮಾನಸಾಂತರವನ್ನು ಉಂಟು ಮಾಡಿ ರಕ್ಷಣೆಗೆ ನಡೆಸುತ್ತದೆ.

    ಮತ್ತಾಯ 5:4 ದುಃಖಪಡುವವರು ಧನ್ಯರು; ಅವರು ಸಮಾಧಾನ ಹೊಂದುವರು.

    ದೈವಿಕ ದುಃಖವು ನಮ್ಮೊಳಗೆ ಪವಿತ್ರಾತ್ಮನಿಂದ ಉಂಟಾದ ದುಃಖವಾಗಿದೆ. ಪವಿತ್ರಾತ್ಮನು ನಮಗೋಸ್ಕರ ಮಾತಿಲ್ಲದ ನರಳಾಟದಿಂದ ವಿಜ್ಞಾಪಿಸುತ್ತಾನೆ. ಅದನ್ನು ಮನುಷ್ಯರ ಪದದಲ್ಲಿ ಹೇಳಲು ಆಗುವುದಿಲ್ಲ. (ರೋಮಾ 8:26)).

    ನಾವು ಪಶ್ಚಾತ್ತಾಪ ಪಟ್ಟು ಮೊದಲು ದೇವರ ಕಡೆಗೆ ಬರುವಂತೆ ಮಾಡಿದ್ದು ಈ ದುಃಖವೇ. ಮತ್ತು ನಮ್ಮ ಜೀವನವಿಡೀ ನಮ್ಮ ಹೃದಯಗಳಲ್ಲಿ ಈ ಕಾರ್ಯವನ್ನು ಮಾಡಿದ ಪವಿತ್ರಾತ್ಮನಿಗೆ ನಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದು ತುಂಬಾ ಒಳ್ಳೆಯದು. ಮದಲಗಿತ್ತಿಯು ತನ್ನ ಪ್ರಿಯನೊಂದಿಗೆ ಅನ್ಯೋನ್ಯತೆಯನ್ನು ಕಳೆದುಕೊಂಡಾಗ ಮಾಡುವಂತೆ, ಎಂದಾದರೂ ನಾವು ಆತ್ಮೀಕವಾಗಿ ಬಿದ್ದರೆ, ಕರ್ತನೊಂದಿಗೆ ನಮ್ಮ ಸಂಭಂದ ಕಳೆದುಕೊಂಡರೆ ಅಳಬೇಕು. (ಪರಮಗೀತೆ 3:1-4) ಅಂಥಹ ಅಳುವು ನಮ್ಮ ಆತ್ಮಕ್ಕೆ ಒಳ್ಳೆಯದು. ಪಶ್ಚಾತ್ತಾಪದ ಕಣ್ಣೀರು ಎಂದಿಗೂ ವ್ಯರ್ಥವಾಗುವುದಿಲ್ಲ. ಆತನ ಬೆಳಕಿನಲ್ಲಿ ನಮ್ಮ ಜೀವಿತವನ್ನು ನೋಡುವಾಗ ಜೇಡರ ಬಲೆಯಂತೆ ನಮ್ಮ ಮುಂಗೋಪತನ, ದುರಾಶೆ, ಗರ್ವ, ಸ್ವಾರ್ಥ, ಮತ್ತು ಸ್ವಅನುಕಂಪ -ನಮ್ಮ ಹೃದಯವನ್ನು ಮಲೀನಮಾಡಿದೆ; ನಮ್ಮ ಜೀವಿತವನ್ನೂ ಮತ್ತು ನಮ್ಮ ಸುತ್ತಲಿರುವವರ ಜೀವಿತವನ್ನೂ ಕಷ್ಟಕ್ಕೊಳಪಡಿಸಿದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ನಮ್ಮ ಅಳುವು ನಮ್ಮನ್ನು ಮುರಿಯಲ್ಪಡುವಿಕೆಗೂ ಮತ್ತು ದೀನತೆಗೂ ನಡೆಸಿ ದೇವರ ಕೃಪೆಯನ್ನು ಯಾವಾಗಲೂ ಹೊಂದಿಕೊಳ್ಳುವಂತೆ ಮಾಡುತ್ತದೆ.

    ಕರ್ತನ ಎಂದಿಗೂ ತಾನು ಅಲ್ಲಗಳೆಯುವುದಿಲ್ಲ, ಬಂಡೆಯಂತೆ ಬಲವಾಗಿ ನಿಲ್ಲಬಲ್ಲೆನೆಂಬುದಾಗಿ ಪೇತ್ರನಿಗೆ ಬಹಳವಾಗಿ ಭರವಸೆ ಇತ್ತು. ತನ್ನ ಗುರುತನ್ನು ರಕ್ಷಿಸಲು ಗೆತ್ಸೇಮನೆಯ ತೋಟದಲ್ಲಿ ಕತ್ತಿಯನ್ನು ಸಹ ಆತನು ತೆಗೆದುಕೊಂಡನು. ಆದರೆ ಕರ್ತನು ಎಚ್ಚರಿಸಿದ ಹಾಗೆಯೇ ತಾನು ಶೋಧನೆಯ ಸಮಯದಲ್ಲಿ ಬಿದ್ದುಹೋದನು. ಆದರೆ ಕ್ಷಮಿಸುವಂತಹ ಕನಿಕರದ ತನ್ನ ಗುರುವಿನ ನೋಟವು ತಾನು ಬಹಳವಾಗಿ ಅಳುವಷ್ಟರ ಮಟ್ಟಿಗೆ ಅವನ ಮುರಿಯಿತು. ತನ್ನ ಅಪಜಯಕ್ಕೆ ತಾನು ಎಷ್ಟು ದುಃಖಿಸುತ್ತಿದ್ದೇನೆ ಮತ್ತು ಆತನ ತಾನು ಎಷ್ಟಾಗಿ ಪ್ರೀತಿಸುತ್ತೇನೆ ಎಂಬುದಾಗಿ ಆತನಿಗೆ ಹೇಳಲು ಎಂದಾದರೂ ಸಂದರ್ಭ ಸಿಗುತ್ತೋ ಎಂಬುದಾಗಿ ವಿಸ್ಮಯಗೊಂಡನು.

    ಕೆಲವು ಸಂದರ್ಭಗಳಲ್ಲಿ ಕರ್ತನಿಗೆ ತಪ್ಪು ಮಾಡಿದ ಅನೇಕ ದೇವರ ಮಕ್ಕಳ ಅನುಭವವು ಸಹ ಇದಾಗಿದೆ. ಒಂದು ವೇಳೆ ನಿನ್ನ ಅನುಭವವು ಸಹ ಇದಾಗಿದ್ದರೆ, ಪ್ರಿಯ ಸಹೋದರಿ ನಿನಗೆ ನಿರೀಕ್ಷೆ ಇದೆ ಎಂಬುದಾಗಿ ನಾನು ಭರವಸೆ ಕೊಡುತ್ತೇನೆ.

    ನೆನಪಿಡಿ, ಪೇತ್ರನ ಪರಿಶೋಧಿಸುವ ಮೊದಲು ಸೈತಾನನು ದೇವರ ಅಪ್ಪಣೆಯನ್ನು ಪಡೆಯಬೇಕಾಗಿತ್ತು. ನಿಮ್ಮನ್ನು ಪರಿಶೋಧಿಸಲು ಸಹ ಅವನು ಅಪ್ಪಣೆಯನ್ನು ಪಡೆಯಬೇಕು.

    ಪೇತ್ರನ ನಂಬಿಕೆಯು ಕುಂದದಂತೆ ಯೇಸುವು ಅವನಿಗಾಗಿ ಪ್ರಾರ್ಥಿಸಿದನು. ಈ ದಿನ ನಿನಗೂ ಸಹ ಯೇಸುವು ಪ್ರಾರ್ಥಿಸುತ್ತಾನೆ. ಪೇತ್ರನು ಶೋಧನೆಯ ಸಮಯದಲ್ಲಿ ಹಾದು ಬಂದು ಪುನಃ ಸ್ಥಾಪಿಸಲ್ಪಡುತ್ತಾನೆಂಬುದಾಗಿ ಕರ್ತನಿಗೆ ನಂಬಿಕೆ ಇತ್ತು. ನಿನ್ನ ಬಗ್ಗೆಯು ಸಹ ಆತನಿಗೆ ನಂಬಿಕೆ ಇದೆ. ಪೇತ್ರನು ಪುನಃ ಸ್ಥಾಪಿಸಲ್ಪಟ್ಟ ನಂತರ ತನ್ನ ಸಹ ವಿಶ್ವಾಸಿಗಳನ್ನೆಲ್ಲಾ ಬಲಪಡಿಸಲು ಹೊರಟನು. ಮತ್ತು ಕರ್ತನಿಗಾಗಿ ದೊಡ್ಡ ಕಾರ್ಯಗಳನ್ನು ಮಾಡಿದನು. ನಿನ್ನ ಬಗ್ಗೆಯೂ ಸಹ ಹಾಗೆಯೇ ಇರುವನು.

    ಒಂದು ವೇಳೆ ಪೇತ್ರನಿಗೆ ಕರ್ತನು ಗೆತ್ಸೇಮನೆಯಲ್ಲಿ ಕೊಟ್ಟ ಎಚ್ಚರಿಕೆಯ ಮಾತಿಗೆ ಅವನು ಲಕ್ಷ ಕೊಟ್ಟು ಪ್ರಾರ್ಥಿಸಿದ್ದರೆ ಅವನು ಎಂದೂ ಬೀಳುತ್ತಿರಲಿಲ್ಲ. ಆದರೆ ಪೇತ್ರನಿಗೆ ತನ್ನ ಬಗ್ಗೆ ಹೆಮ್ಮೆಯಿತ್ತು. ಆದ್ದರಿಂದ ಅವನು ತಪ್ಪಿದನು. ಆದರೆ ಕರ್ತನು ತನ್ನ ಪುನರುತ್ಥಾನದ ನಂತರ ಅವನಿಗೆ ಕಾಣಿಸಿಕೊಂಡು ಉತ್ತೇಜನ ಪಡಿಸಿದನು. ಆಗ ಕರ್ತನೇ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲು ಅವಕಾಶ ಸಿಕ್ಕಿತು ಮತ್ತು ಕರ್ತನು ಆತನ ಪುನಃ ಅಪೊಸ್ತಲನಾಗಿ ನೇಮಿಸಿದನು.

    ದೇವರು ಒಳ್ಳೆ ದೇವರು ಮತ್ತು ನಮ್ಮ ಜೀವಿತದಲ್ಲಿ ಶೋಧನೆಗಳನ್ನು ಮತ್ತು ವಿಪತ್ತನ್ನು ಅನುಮತಿಸಿ, ನಮ್ಮ ನಿಜವಾದ ಸ್ವಭಾವವನ್ನು ಎತ್ತಿ ತೋರಿಸುತ್ತಾ. ಹೀಗೆ ಆತನು ನಮ್ಮನ್ನು ತಗ್ಗಿಸುವನು ಮತ್ತು ಮುರಿಯುವನು. ಕಾರಣ ನಾವು ಆತನ ಸಾರೂಪ್ಯಕ್ಕೆ ಮಾರ್ಪಾಟು ಹೊಂದಬೇಕೆಂಬುದೇ ಆಗಿದೆ.

    ನಮ್ಮ ವೈಯಕ್ತಿಕ ದುಃಖದ ಸಂದರ್ಭಗಳಲ್ಲಿ ನಮ್ಮ ಸ್ವಂತ ಸಮಸ್ಯೆಗಳಲ್ಲೇ ಸುತ್ತಿಕೊಂಡವರಾಗಿ ಬೇರೆಯವರ ಬಗ್ಗೆ ಚಿಂತಿಸಲು ಸಹ ಆಗದವರಾಗಿರಬಾರದು. ನಮ್ಮ ಕರ್ತನು ದುಃಖದ ಮನುಷ್ಯನಾಗಿದ್ದರೂ ಸಹ ನಮ್ಮ ದುಃಖಗಳನ್ನು ತಿಳಿದವನಾಗಿದ್ದನು. ಆತನ ತಿರಸ್ಕರಿಸಿದ ಯೆರುಸಲೇಮ್ ಪಟ್ಟಣದ ಜನರನ್ನು ನೋಡಿ ಅತ್ತನು.

    ತನ್ನ ಸ್ವಂತ ದುಃಖಗಳಿಗಾಗಿ ಆತನು ಕಣ್ಣೀರಿಡಲಿಲ್ಲ, ಆದರೆ ಬೆವರಿನ ರಕ್ತದ ಹನಿಗಳನ್ನು ನಗಾಗಿ ಸುರಿಸಿದನು.

    ನಮ್ಮ ಕರ್ತನು ಇತರಿಗಾಗಿ ಅತ್ತನು. ಈಗ ಯೇಸುವಿನ ಪ್ರತಿನಿಧಿಗಳಾಗಿ ಇತರರಿಗಾಗಿ ಅಳುವುದು ನಮ್ಮ ಸರದಿ.ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಟ್ಟ ಯೋಸೇನ ಕಥೆಯ ಕುರಿತಾಗಿ ಯೋಚಿಸಿ. ಆದರೆ ಆ ಸೆರೆಮನೆಯಲ್ಲಿ ತನ್ನ ಸ್ವಂತ ದುಃಖದ ಬಗ್ಗೆ ಮರೆತು ಸೆರೆಮನೆಯಲ್ಲಿರುವ ಇತರರ ಸಮಸ್ಯೆಯ ಕುರಿತಾಗಿ ಯೋಚಿಸತೊಡಗಿದನು. ಫರೋಹನ ಪಾನ ಪಾತ್ರೆಯವರ ಕುರಿತಾಗಿ ಯೋಸೆಫನಿಗಿದ್ದ ಚಿಂತೆಯಿಂದಾಗಿ ಅವನು ಸೆರೆಮನೆಯಿಂದ ಬಿಡುಗಡೆ ಹೊಂದಿದನು. ಇತರರಿಗಾಗಿರುವ ನಿಜವಾದ ಚಿಂತೆಯೇ ನಮ್ಮ ಬಿಡುಗಡೆಗೆ ಮೊದಲ ಹಂತವಾಗಿದೆ (ಆದಿ 40:7).

    ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು (ಕೀರ್ತನೆ 126:6)).

    ದೈವಿಕವಾದ ದುಃಖದಿಂದ ಅತ್ತ ಕೆಲವು ಪುರುಷರ ಉದಾಹರಣೆಗಳು ಇಲ್ಲಿವೆ :

  • ಯೆಶಾಯನು ದೇವರ ಪ್ರಭಾವವನ್ನು ಮತ್ತು ತನ್ನ ಸ್ವಭಾವದಲ್ಲಿರುವ ಅಶುದ್ಧತೆಯನ್ನು ಕಂಡಾಗ ಅತ್ತನು; ಮತ್ತು ಅಯ್ಯೋ ನನ್ನ ಗತಿಯನ್ನು ಏನು ಹೇಳಲಿ, ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು ..... ಎಂಬದಾಗಿ ಹೇಳಿದನು. (ಯೆಶಾಯ 6:5)).
  • ಹಿಂಜಾರಲ್ಪಟ್ಟ ದೇವ ಜನರನ್ನು ಕಂಡು ಯೆರೆಮಿಯನು ಅತ್ತನು ಮತ್ತು ಅವರಿಗೋಸ್ಕರ ಬಿಡದೆ ಅಳಲು ಅವನ ಕಣ್ಣುಗಳು ನೀರಿನ ಬುಗ್ಗೆಯಾಗಿದ್ದರೆ ಚೆನ್ನಾಗಿತ್ತು ಎಂಬದಾಗಿ ಆಶಿಸುತ್ತಾನೆ(ಯೆರೆ. 9:1,13:17).
  • ದಾನಿಯೇಲನು ದೇವ ಜನರ ಪಾಪಕ್ಕಾಗಿ ಅತ್ತನು (ದಾನಿ. 9:20,21))
  • ಎಜ್ರನು ಮತ್ತು ನೆಹೆಮೀಯನು ದೇವ ಜನರು ಬಿದ್ದಿರುವ ಸನ್ನಿವೇಶವನ್ನು ಕಂಡು ಅತ್ತರು (ಎಜ್ರ 10:1 -ನೆಹೆ 1:4)).
  • *ತನ್ನ ಜನರು (ಯೆಹೂದ್ಯರು) ಪರಿವರ್ತನೆ ಹೊಂದದಿದ್ದರಿಂದ (ರೋಮ 9:1-3) ಪೌಲನಿಗೆ ತನ್ನ ಹೃದಯದಲ್ಲಿ ಹೆಚ್ಚು ವೇದನೆಯಿತ್ತು.

    ದೈವಿಕ ದುಃಖವು ದೇವರನ್ನು ದುಃಖಪಡಿಸುವ ಸಂಗತಿಗಳ ಕುರಿತಾಗಿ ನಾವು ದುಃಖಪಡುವಂತೆ ಮಾಡುತ್ತದೆ.

    ನಮ್ಮ ದೇಶದಲ್ಲಿರುವ ವಿಗ್ರಹಾರಾಧನೆಯು ನಮ್ಮ ಕರ್ತನ ಎಷ್ಟಾಗಿ ದುಃಖಪಡಿಸುತ್ತಿದೆ ಎಂಬದಾಗಿ ಸ್ವಲ್ಪ ಹೊತ್ತು ಯೋಚಿಸಿ. ನಾವು ಗುಡಿಗಳನ್ನು ಮತ್ತು ವಿಗ್ರಹಗಳನ್ನು ನಮ್ಮ ದೇಶದಲ್ಲಿ ಸಾಧಾರಣವಾಗಿ ನೋಡುತ್ತಾ ಇರುವುದರಿಂದ ಅವುಗಳ ಕುರಿತಾಗಿ ನಾವು ಅಷ್ಟಾಗಿ ಚಿಂತಿಸುವುದಿಲ್ಲ (ಅಪೊ 17:16). ಆದರೆ ನಾವು ಜೀವಿಸುತ್ತಿರುವ ಭೂಮಿಯ ಕುರಿತಾಗಿ ಕರ್ತನ ಮುಂದೆ ನಮಗೆ ಜವಾಬ್ದಾರಿಕೆ ಇದೆ.

    ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಆಲಿಸಿ ಅವರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು (2 ಪೂರ್ವ 7:14).

    ಇತರರಿಗಾಗಿ ಪ್ರಾರ್ಥಿಸುವಂತೆ ಕರ್ತನು ನನ್ನ ಹೃದಯದಲ್ಲಿ ಭಾರವನ್ನು ಹಾಕಿದ ಸಂದರ್ಭಗಳನ್ನು ನಾನು ನೆಪಿಸಿಕೊಳ್ಳುತ್ತೇ.

    ಒಮ್ಮೆ ಒಬ್ಬ ತಾಯಿ ನಿದ್ದೆ ಇಲ್ಲದೆ ಕಷ್ಟಪಡುವ ತನ್ನ ಮಗನಿಗಾಗಿ ಪ್ರಾರ್ಥಿಸುವಂತೆ ಕೇಳಿಕೊಂಡಳು. ಅವನು ರಾಕ್ ಸಂಗೀತದ ಚಟಕ್ಕೆ ಒಳಗಾಗಿದ್ದನು; ಮತ್ತು ದೇವರಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ. ಮನೋರೋಗದ ಚಿಕಿತ್ಸೆಯ ಸಹಾಯವು ಸಹ ಆತನಿಗೆ ಪ್ರಯೋಜನವಿಲ್ಲದ್ದಾಯಿತು. ಅವನು ಕೇಳಿದಂತ ಸಂಗೀತ, ತಬಲದ ಶಬ್ದದಂತೆ ಅವನ ತಲೆ ತೂಗುತ್ತಿತ್ತು. ದೇವರು ತನ್ನ ಕೃಪೆಯಿಂದ ನಮ್ಮ ಪ್ರಾರ್ಥನೆಯನ್ನು ಕೇಳಿ ಉತ್ತರಿಸಿದನು. ಮತ್ತು ಈಗ ಅವನು ಚೆನ್ನಾಗಿದ್ದಾ. ಈ ರಾಕ್ ಸಂಗೀತದಿಂದ ತಮ್ಮ ಮಕ್ಕಳು ಎದುರಿಸುವ ಅಪಾಯವನ್ನು ಅನೇಕ ತಾಯಂದಿರು ತಿಳಿಯದೇ ಇದ್ದಾರೆ.

    ನನ್ನ ಒಂದು ಬಾರಿ ಪ್ರಯಾಣದಲ್ಲಿ ಒಂದು ಗುಂಪು ಗಂಡಸರು ಮತ್ತು ಹೆಂಗಸರ ಜೊತೆಯಲ್ಲಿ ಎರಡು ಮತ್ತು ಮೂರು ವರ್ಷದ ವಯಸ್ಸಿನ ಹೆಣ್ಣು ಮಕ್ಕಳು ಇರುವುದನ್ನು ಕಂಡೆನು. ಆ ಮಕ್ಕಳ ಜೊತೆಯಲ್ಲಿ ಇವರ ವರ್ತನೆಯು ವಿಚಿತ್ರವಾಗಿರುವುದನ್ನು ನಾನು ಗಮನಿಸಿದೆನು. ಈ ಸಣ್ಣ ಹುಡುಗಿಯರು ಚಲನ ಶಕ್ತಿಯನ್ನು ಕಳೆದುಕೊಂಡವರು ಮತ್ತು ಭಯಪಟ್ಟವರ ಹಾಗೆ ಕಾಣಿಸುತ್ತಿತ್ತು. ಬಹುಮಟ್ಟಿಗೆ ಅವರು ಕದಿಯಲ್ಪಟ್ಟವರ ಹಾಗಿದ್ದರು. ಅದನ್ನು ನಾನು ಹೇಗೆ ನಿರೂಪಿಸುವದು ಎಂಬ ಮಾರ್ಗ ಕಾಣದೇ ಅದರ ಬಗ್ಗೆ ಏನೂ ಮಾಡಲು ಆಗಲಿಲ್ಲ. ಆ ಬಡಮಕ್ಕಳನ್ನು ನೋಡುವಾಗ ನಲ್ಲಿ ಆಳವಾದ ಪ್ರಭಾವವನ್ನುಂಟು ಮಾಡಿತು ಮತ್ತು ನಮ್ಮ ದೇಶದಲ್ಲಿ ಮಕ್ಕಳ ದುರುಪಯೋಗದ ಕುರಿತಾಗಿ ಪ್ರಾರ್ಥಿಸುವಂತೆ ನನ್ನು ಸೆಳೆಯಿತು.

    ಇನ್ನೊಂದು ಸಂದರ್ಭದಲ್ಲಿ ನಾನು ಒಬ್ಬ ಪಾಶ್ಚಾತ್ಯ ದೇಶದ ಹುಡುಗಿಯನ್ನು ಸಂಧಿಸಿದೆ. ಆಕೆ ಭಾರತಕ್ಕೆ ಪೂರ್ವ ಧರ್ಮ ಗುರುಗಳಿಂದ ಮತ್ತು ಧ್ಯಾನದಿಂದ ಶಾಂತಿಯನ್ನು ಪಡೆಯಲು ಬಂದಿದ್ದಳು. ನಿಜವಾದ ಗುರುವಾದ ಕರ್ತನಾದ ಯೇಸುವಿನ ಕುರಿತಾಗಿ ಆಕೆಗೆ ತಿಳಿಸುವ ಸದವಕಾಶ ನಗೆ ಸಿಕ್ಕಿತು. ಮತ್ತು ಆಕೆಗಾಗಿ ಪ್ರಾರ್ಥಿಸಲು ನಗೆ ಭಾರ ಬಂದಿತು. ಕೆಲವು ಪಾಶ್ಚಾತ್ಯರು ಕರ್ತನ ಭಾರತದಲ್ಲಿ ಕಂಡು ಕೊಂಡರು. ಇಂತಹ ಅವಶ್ಯಕತೆಯಲ್ಲಿರುವ ಹುಡುಕುತ್ತಿರುವ ಜನರಿಗಾಗಿ ಸಾಕ್ಷಿ ನುಡಿಯಲು ನಿನ್ನನ್ನು ಉಪಯೋಗಿಸುವಂತೆ ಅಥವಾ ಅವರಿಗಾಗಿ ಪ್ರಾರ್ಥಿಸುವಂತೆ ಕರ್ತನಲ್ಲಿ ಕೇಳಿಕೋ.

    ಯೇಸುವು ಶಿಲುಬೆಯನ್ನು ಹೊತ್ತುಕೊಂಡು ಯೆರುಸಲೇಮನ್ನು ಹಾದು ಹೋಗುತ್ತಿರುವಾಗ ಕೆಲವು ಸ್ತ್ರೀಯರು ಆತನಿಗಾಗಿ ಅಳುವುದನ್ನು ಕಂಡು, ಆತನಿಗಾಗಿ ಅಳದೆ, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ಅಳುವಂತೆ ಹೇಳಿದನು. ಯೆರುಸಲೇಮಿನ ಕುಮಾರಿಯರೇ, ನಗಾಗಿ ಅಳಬೇಡಿರಿ ಆದರೆ ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ಅಳಿರಿ ಎಂದು ಹೇಳಿದನು.

    ಭಾರತದ ಕುಮಾರಿಯರೇ, ಆತನು ಈ ದಿನ ನಮಗೆ ಏನು ಹೇಳುತ್ತಾನೆಂಬುದಾಗಿ ಕೇಳಿಸಿಕೊಳ್ಳೋಣವೇ?

    ಅಧ್ಯಾಯ 8
    ದೇವರಿಗೆ ನಿನ್ನ ದೈಹಿಕ ನೋವಿನಲ್ಲೂ ಯೋಜನೆಯಿದೆ

    ಅಧ್ಯಾಯ ಎಂಟು

    ದೇವರಿಗೆ ನಿನ್ನ ದೈಹಿಕ ನೋವಿನಲ್ಲೂ ಯೋಜನೆಯಿದೆ

    ಅನೇಕ ಸ್ತ್ರೀಯರು ದೀರ್ಘಕಾಲದ ರೋಗದಿಂದ ಬಾಧಿಸಲ್ಪಟ್ಟು ನಿರಂತರವಾದ ನೋವಿನಿಂದ, ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯಬೇಕಾಗಿದೆ. ಅವರ ಮನಸ್ಸು, ಭವಿಷ್ಯದ ಬಗ್ಗೆ ಅಶುಭದ ಆಲೋಚನೆಗಳಿಂದ ತುಂಬಿದ್ದು, ಮುಖ್ಯವಾಗಿ ತಮ್ಮ ಮಕ್ಕಳು ತಾಯಿಲ್ಲದ ಮಕ್ಕಳಾಗಿರುತ್ತಾರೆಂಬ ಭಯ. ಇಂತಹ ಆಲೋಚನೆಗಳು ಭಯಾನಕವಾಗಿರುತ್ತವೆ.

    ಅನೇಕರು ತಮ್ಮ ನೋವುಗಳಿಂದ ಬಿಡುಗಡೆ ಹೊಂದಲು ಆಶಿಸುತ್ತಾರೆ. ಬಲವಾದ ಔಷದಿಗಳು ಸಹ ಸ್ವಲ್ಪ ಸಮಯದ ನಂತರ ತಮ್ಮ ಪ್ರಭಾವವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ.

    ಯಾರಿಗೋ ಕ್ಯಾನ್ಸರ್ ಇದೆ ಎಂಬುದಾಗಿ ಕಂಡು ಹಿಡಿಯಲ್ಪಟ್ಟರೆ, ಅವರ ನಂತರ ತಮ್ಮ ಸರದಿ ಎಂಬುದಾಗಿ ಯೋಚಿಸುತ್ತಾರೆ.

    ಯೇಸುವು ಸಹ ಆ ನೋವನ್ನು ಅನುಭವಿಸಿದ್ದಾ ನೆ . ಆತನು ನಮ್ಮೊಂದಿಗೆ ಕನಿಕರ ಪಡುವನು ಮತ್ತು ನಮ್ಮನ್ನು ಸಂತೈಸುವನು. ಆತನು ಶಿಲುಬೆಯನ್ನು ಸಹಿಸಿದನು. ಮತ್ತು ನಾವು ನೋವಿನಲ್ಲಿರುವಾಗ ಕಡೆವರೆಗೂ ತಾಳಿಕೊಳ್ಳಲು ಆತನೊಬ್ಬನೇ ಸಹಾಯಿಸಲು ಸಾಧ್ಯ. ನಿಮ್ಮ ಪ್ರಾಣಗಳನ್ನು ಕಳೆದುಕೊಳ್ಳಬೇಕೆಂಬ ಶೋಧನೆಗೆ ಎಂದಿಗೂ ಒಳಗಾಗಬೇಡಿರಿ. ಮರಣದ ಬೀಗದ ಕೈ ಯೇಸುವಿನ ಕೈಯಲ್ಲಿದೆ (ಪ್ರಕಟನೆ 1:18)). ಆತನ ಕೈಗಳಿಂದ ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸಬೇಡ. ನೀನು ಎಷ್ಟು ಕಷ್ಟಗಳನ್ನು ಅನುಭವಿಸಬೇಕಾದರೂ ಪರವಾಗಿಲ್ಲ, ಆತನ ಸಮಯಕ್ಕಾಗಿ ಕಾಯು. ಕಾಲಾಂತರದಲ್ಲಿ ದೇವರು ನಿನ್ನ ಕಷ್ಟದ ಸಮಯವನ್ನು ಶುದ್ಧೀಕರಿಸುವನು (ಪ್ರಸಂಗಿ 3:2). ಹುಟ್ಟುವ ಸಮಯ, ಸಾಯುವ ಸಮಯ, ಎಂದು ಬರೆದಿದೆ.

    ಆಮೋಸ 4:12 ರಲ್ಲಿ ನಿನ್ನ ದೇವರನ್ನು ಸಂಧಿಸಲು ಸಿದ್ಧವಾಗು ಎಂದು ಹೇಳುತ್ತದೆ.

    ಈ ವಾಕ್ಯಗಳನ್ನು ನಾವು, ಸಾಯುವುದಕ್ಕೆ ಸಿದ್ಧವಾಗಬೇಕಾಗಿರುವ ಭೀಕರವಾದ ಭಯದ ಪದಗಳಾಗಿ ಕಾಣಬಹುದು. ಅದಕ್ಕೆ ಬದಲಾಗಿ ನಮ್ಮ ಸೃಷ್ಟಿಕರ್ತನ ಸಂಧಿಸಲು ಆತನ ಪ್ರೀತಿಯ ಆಹ್ವಾನ ಎಂಬದಾಗಿ ನಾವು ಆ ವಾಕ್ಯಗಳನ್ನು ನೋಡಬಹುದು. ನಿಜವಾಗಿ ಕ್ರೈಸ್ತನಿಗೆ ಮರಣವು ಕೇವಲ ನಿವಾಸದ ಬದಲಾವಣೆಯೇ ಆಗಿರುತ್ತದೆ. ಅದು ಉತ್ತಮವಾದ ದೂರ ನಿವಾಸಕ್ಕೆ ಬದಲಾಯಿಸುವದೇ ಆಗಿದೆ. ಪರಲೋಕವು ನಮ್ಮ ಅಂತ್ಯ ನಿವಾಸವಾಗಿದೆ.

    ಕ್ಯಾನ್ಸರಿನಿಂದ ಸಾಯುತ್ತಿದ್ದ ತಾಯಿಯು ತನ್ನ ನೋವುಗಳ ಮಧ್ಯದಲ್ಲಿ ತನ್ನ ಮಕ್ಕಳಿಗಾಗಿ ಧ್ವನಿ ಮುದ್ರಿಕೆಯ ಮೂಲಕ ಸಂದೇಶಗಳನ್ನು ರಿಕಾರ್ಡ್ ಮಾಡಿ, ತಮ್ಮ ಬೆಳೆಯುವ ವಯಸ್ಸಿಗೆ ಬೇಕಾದ ಬುದ್ಧಿವಾದ, ಮದುವೆಯ ಸಂಗಾತಿಯನ್ನು ಆರಿಸಿಕೊಳ್ಳುವುದನ್ನು ಸಹ ಅದರಲ್ಲಿ ಸೇರಿಸಿದ್ದಳು. ಒಂದು ವೇಳೆ ತಮ್ಮ ತಂದೆಯು ಒಬ್ಬ ಹೊಸ ತಾಯಿಯನ್ನು ಒಂದು ದಿನ ಮನೆಗೆ ತರುವುದಕ್ಕೆ ತೀರ್ಮಾನಿಸಿದರೆ ಅವರು ಆಕೆಯನ್ನು ಸಂತೋಷವಾಗಿ ಸ್ವೀಕರಿಸಬೇಕು ಮತ್ತು ಆಕೆಯನ್ನು ಸ್ವಾಗತಿಸಬೇಕು ಎಂಬದಾಗಿ ಸಹ ಹೇಳಿದ್ದಳು. ಆಕೆಯು ತನ್ನ ನೋವನ್ನು ಕರ್ತನ ಕಡೆಗೆ ತಿರುಗಿಸಿ ತನ್ನ ಕುಟುಂಬಕ್ಕೆ ಏನೆಲ್ಲಾ ಮಾಡಬೇಕಾಗಿತ್ತೋ ಅದನ್ನೆಲ್ಲಾ ತನ್ನ ಕುಟುಂಬಕ್ಕೆ ಆಕೆ ಮಾಡಿದ್ದಳು. ತನ್ನ ಸಮಯ ಈ ಭೂಲೋಕದಲ್ಲಿ ಕೊಂಚವೇ ಎಂಬುದು ಆಕೆಗೆ ತಿಳಿದಿತ್ತು. ವೈದ್ಯರು ನಿನ್ನ ಆರೋಗ್ಯದ ಕುರಿತಾಗಿ ಕೆಟ್ಟ ಸುದ್ದಿಯನ್ನು ಕೊಡುವಾಗ ನೀನು ಅಳುತ್ತಿಯೋ?!

    ನಿನ್ನ ನೋವಿನಿಂದ ಬಿಡುಗಡೆ ಹೊಂದಲು ಮುಂದಿನ ಔಷದಿಗಾಗಿ ಕಾಯುತ್ತೀಯೋ? ಯೇಸುವಿಗಾಗಿ ಕೂಗಿಕೋ. ಆತನು ಸಹ ಬಹಳವಾದ ನೋವನ್ನು ಅನುಭವಿಸಿದ್ದರಿಂದ, ಸಂಗತಿಗಳನ್ನು ನೀನು ಸಹ ಸಹಿಸಿಕೊಳ್ಳುವಂತೆ ಮಾಡಲು ಆತನಿಗೆ ಸಾಧ್ಯ. ನಿನ್ನ ಶಕ್ತಿ ಮೀರಿ ಶೋಧನೆಯನ್ನು ಆತನು ನಿನಗೆ ಬರಗೊಡಿಸುವುದಿಲ್ಲ. ಆದರೆ ಪ್ರತಿಯೊಂದು ಶೋಧನೆಯನ್ನು ಜಯಿಸಲು ಕೃಪೆಯನ್ನು ಮತ್ತು ಬಲವನ್ನು ಆತನು ಕೊಡುವನು. ನಮ್ಮ ಈ ಲೋಕದ ನೋವು ಅಥವಾ ದುಃಖ ಇನ್ನು ಮುಂದೆ ಇರದ ಉತ್ತಮ ಸ್ಥಳವನ್ನು ಎದುರು ನೋಡುವಂತೆ ಮಾಡುತ್ತಾ.

    ಆಗಾಗ ನಾವು ನಮ್ಮ ಸಭೆಯ ಕೂಟಗಳಲ್ಲಿ ಹಾಡುವ ಪಲ್ಲವಿಯನ್ನು ನಾನು ಯೋಚಿಸುತ್ತೇನೆ.

    ಕರ್ತನ ಸಮ್ಮುಖದಲ್ಲಿ ಆನಂದವಿದೆ.ಕರ್ತನ ಸಮ್ಮುಖದಲ್ಲಿ ಆನಂದವಿದೆ.ನಮ್ಮ ಎಲ್ಲಾ ದುಃಖ ಕಣ್ಣೀರು ಹೊರಟು ಹೋಗಬೇಕು.ಕರ್ತನ ಸಮ್ಮುಖದಲ್ಲಿ ಆನಂದವಿದೆ.

    ಇನ್ನೂ ಉಳಿದ ವಾಕ್ಯಗಳು ಸಮಾಧಾನ, ಶಕ್ತಿ ಮತ್ತು ಕರ್ತನ ಸಮ್ಮುಖದಲ್ಲಿರುವ ಜಯದ ಕುರಿತಾಗಿ ಮಾತನಾಡುತ್ತದೆ. ನಾವು ದುಃಖ ಅಥವಾ ನೋವನ್ನು ಅನುಭವಿಸುವಾಗ ಸಂಗೀತಕ್ಕೆ ನಮ್ಮನ್ನು ಸಂತೈಸುವ ಪ್ರಚಂಡ ಶಕ್ತಿ ಇದೆ.

    ನೀನು ಕರ್ತನಿಗೆ ನಿನ್ನ ಜೀವಿತದ ಎಲ್ಲಾ ಕ್ಷೇತ್ರಗಳನ್ನೂ ಸಂಪೂರ್ಣವಾಗಿ ಒಪ್ಪಿಸಿಕೊಟ್ಟಿದ್ದರೆ ದೈಹೀಕ ನೋವುಗಳು ಬರುವಾಗ ಸಂಗತಿಗಳು ನಿನಗೆ ಸುಲಭವಾಗಿ ಹೋಗುವವು. ಹಿಂದೆ ತಲೆನೋವು ಸಹ ಸಹಿಸಿಕೊಳ್ಳಲಾರದಾಗಿತ್ತು. ಆದರೆ ಈಗ ನಿನ್ನ ಪ್ರಾಣವನ್ನು ಭಯಪಡಿಸುವ ರೋಗ ಬಂದರೂ ಸಹಾ ಕರ್ತನಿಗೆ ಪ್ರಾರ್ಥಿಸಿ ಸಂತೋಷಿಸಬಹುದು. ನಾವು ಜಲರಾಶಿಗಳನ್ನು ಹಾದು ಹೋಗುವಾಗ ಕರ್ತನು ನಮ್ಮ ಸಂಗಡ ಇರುವುದಾಗಿ ವಾಗ್ದಾನ ಕೊಟ್ಟಿದ್ದಾ. ಮತ್ತು ನೀರಿನ ಪ್ರವಾಹವು ಸಹ ನಮ್ಮನ್ನು ಮುಳುಗಿಸಲಾರವು ಎಂಬದಾಗಿ ಆತನು ಭರವಸೆ ಕೊಟ್ಟಿದ್ದಾನೆ .

    ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು. ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಳುಗಿಸವು, ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ. ಜ್ವಾಲೆಯು ನಿನ್ನನ್ನು ದಹಿಸದು. ಭಯ ಪಡಬೇಡ ನಾನು ನಿನ್ನ ಸಂಗಡ ಇದ್ದೇನೆ . (ಯೆಶಾಯ 43:2,5)

    ಎಲ್ಲಾ ಸನ್ನಿವೇಶಗಳಲ್ಲಿ ಆತನ ಕೃಪೆಯು ನಮಗೆ ಸಾಕು. ಒಂದು ವೇಳೆ ನಮ್ಮ ಶೋಧನೆಯು ಹೆಚ್ಚಾಗಿ ಬೆಳೆಯುತ್ತದೋ, ಆತನ ಕೃಪೆಯ ಒದಗಿಸುವಿಕೆಯು ಸಹ ಅಷ್ಟೆ ಹೆಚ್ಚಾಗುತ್ತದೆ. ದೇವರಿಗೆ ಸ್ತೋತ್ರವಾಗಲಿ!

    ಊಹಿಸಲು ಸಾಧ್ಯವಿಲ್ಲದ ಸಂಕಟಗಳನ್ನು ಹಾದು ಬಂದಿರುವವರೇ ದೇವರ ಅತಿ ಅಮೂಲ್ಯವಾದ ಆಭರಣಗಳು. ಹೇಗೆ ಭೂಮುಯ ಆಳದಲ್ಲಿ ವಜ್ರಗಳು ರೂಪಿಸಲ್ಪಡುವಾಗ ಜನರು ತಮ್ಮ ಕಣ್ಣುಗಳಿಂದ ಕಾಣಲಾರದಷ್ಟು ಪಂಡ ಉಷ್ಣವನ್ನು ಮತ್ತು ಒತ್ತಡವನ್ನು ಅನುಭವಿಸುವತ್ತದೋ ಹಾಗೆಯೇ ಇವರು ಸಹ. ನೀನು ಸಹ ಆತನ ಅಮೂಲ್ಯ ಆಭರಣವಾಗಬಹುದು.

    ದೇವರ ವ್ಯವಹಾರಕ್ಕೆ ಸಂತೋಷದಿಂದ ನಮ್ಮನ್ನು ಒಪ್ಪಿಸಿಕೊಡುವಾಗ, ನಮ್ಮನ್ನು ಕ್ರಿಸ್ತನ ಸಾರೂಪ್ಯಕ್ಕೆ ಮಾರ್ಪಡಿಸಲು ಉಪಯೋಗಿಸುವ ಕಾರ್ಯದಲ್ಲಿ ಕಣ್ಣೀರು ಸಹ ಒಂದು ಭಾಗವಾಗಿದೆ. ಮತ್ತು ನಮ್ಮ ಕಣ್ಣೀರನ್ನು ಸ್ವ-ಅನುಕಂಪಕ್ಕಾಗಿ ಸುರಿಸಬಾರದು. ದೇವರು ನಿನ್ನ ನೋವನ್ನು ಲಾಭವಾಗಿ ಮಾರ್ಪಡಿಸಬಲ್ಲನು.

    ನನ್ನ ಹತ್ತಿರದ ಸ್ನೇಹಿತೆಗೆ ವೈದ್ಯರು ತಪ್ಪಾಗಿ ಚಿಕಿತ್ಸೆಯನ್ನು ನೀಡಿದ್ದರಿಂದ ಅದರ ಪರಿಣಾಮವಾಗಿ ಆಕೆ ಈಗ ಸತತವಾಗಿ ಸಂಕಟಪಡುತ್ತಿದ್ದಾಳೆ. ಆ ವೈದ್ಯರನ್ನು ಆಕೆ ಕ್ಷಮಿಸಲು ಸಾಧ್ಯವಾಗದ ಕಾರಣ ಆಕೆ ಮತ್ತಷ್ಟು ಸಂಕಟವನ್ನು ಅನುಭವಿಸಿದಳು. (ವೈದ್ಯರು ಸಹ ಮನುಷ್ಯರೇ ಮತ್ತು ಅವರು ಸಹ ತಪ್ಪು ಮಾಡಲು ಸಾಧ್ಯ ಎಂಬುದನ್ನು ನಾವು ಮರೆಯಬಾರದು) ತನಗೆ ಆದದ್ದನ್ನು ಸ್ವೀಕರಿಸಲು ಮತ್ತು ಆ ವೈದ್ಯರನ್ನು ಕ್ಷಮಿಸಲು ಆಕೆಗೆ ಬಹಳ ಕಾಲವಿಡಿಸಿತು. ಯೇಸುವು ದೊಡ್ಡ ವೈದ್ಯನು ನಮ್ಮ ಒಳಗಿನ ಗಾಯಗಳನ್ನು ಸಹ ಆತನು ಗುಣಪಡಿಸಬಲ್ಲನು.

    ನನಗೆ ತಿಳಿದಿರುವ ಕ್ರೈಸ್ತಳಲ್ಲದ ಒಬ್ಬ ಯೌವನಸ್ಥೆಯು ತಾನು ಬಸ್ಸಿಗಾಗಿ ಕಾಯುತ್ತಿರುವಾಗ ತನ್ನ ಮೇಲಾಧಿಕಾರಿಯು ಒಬ್ಬ ಹೆಂಗಸಿನ ವೇಷದಲ್ಲಿ ಪರದೆ ಹಾಕಿಕೊಂಡು ಬಂದನು. ಅವನಿಗೆ ಕೆಲ ಕಾಲದಿಂದಲೂ ಆಕೆಯ ಮೇಲೆ ದ್ವೇಷವಿದ್ದು ಈಗ ಆಕೆಯ ಬಳಿ ತನ್ನ ಪ್ರತಿಕಾರವನ್ನು ತೀರಿಸಿಕೊಳ್ಳಲು ಬಂದಿದ್ದನು. ಆಕೆಯ ಮುಖದ ಮೇಲೆ ಆಮ್ಲವನ್ನು (ಆಸಿಡ್) ಚೆಲ್ಲಿ ಓಡಿ ಹೋದ. ಆಕೆಯು ನಿರಂತರಕ್ಕೂ ಕಲೆಗಳಿಂದ ಕುರುಡಾದಳು. ಆಕೆಯು ಸುಂದರವಾದ ಹುಡುಗಿಯಾಗಿದ್ದಳು.ಆದರೆ ಈಗ ಆಕೆಯ ಸೌಂದರ್ಯವು ನಿರಂತರಕ್ಕೂ ಕಳೆದುಹೋಯಿತು. ಆಕೆಯ ಯಾತನೆಯು ಹಾಗೂ ಸುಟ್ಟ ಗಾಯಗಳ ನೋವನ್ನು ಸಹಿಸಲಾರದೆ, ಆಕೆ ಮಲಗಿದ್ದ ಆಸ್ಪತ್ರೆಯ ಕೋಣೆಗಳಲ್ಲಿ ಆಕೆಯ ಅಳುವು ಪ್ರತಿದ್ವನಿಸುತ್ತಿತ್ತು. ಆದರೆ ಆ ಆಸ್ಪತ್ರೆಯಲ್ಲಿ ಯಾರೋ ಒಬ್ಬರು ಆಕೆಗೆ ಯೇಸುವಿನ ಪ್ರೀತಿಯ ಕುರಿತಾಗಿ ಮಾತನಾಡಿದರು. ಮತ್ತು ರಕ್ಷಕನಾದ ಯೇಸುವನ್ನು ಕಾಣಲು ಆಕೆಯ ಕಣ್ಣುಗಳು ತೆರೆಯಲ್ಪಟ್ಟವು. ಆಕೆಯ ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆಯ ಪರಿಣಾಮದಿಂದಾಗಿ ಆಕೆಯ ಕುಟುಂಬವು ಬಡತನಕ್ಕೆ ಒಳಗಾಯಿತು. ಆದರೆ ಅವರು ಸಹ ಯೇಸುವಿನ ಪ್ರೀತಿಯ ಕುರಿತಾಗಿ ಕಂಡುಕೊಂಡಾಗ ರಕ್ಷಿಸಲ್ಪಟ್ಟರು. ಆಕೆಯ ಹಿಂದಿನ (ಸುಟ್ಟ ಗಾಯಗಳ ಮುಂಚೆ) ಸುಂದರವಾದ ಭಾವ ಚಿತ್ರವನ್ನು ನಾನಾಗಿಯೇ ನೋಡಿದೆ. ಮತ್ತು ಆಕೆಯನ್ನು ಅದಕ್ಕಿಂತ ಇನ್ನೂ ಸುಂದರವಾಗಿ ಪರಲೋಕದಲ್ಲಿ ನಾನು ಕಾಣುವೆನೆಂಬುದಾಗಿ ನನಗೆ ಗೊತ್ತಿದೆ.

    ಅನೇಕ ವರ್ಷಗಳವರೆಗೂ ಪಾರ್ಶ್ವವಾಯುವಿನ ತನ್ನ ಗಂಡನ ನೋಡಿಕೊಳ್ಳಬೇಕಾದ ಒಬ್ಬ ಸ್ತ್ರೀಯನ್ನು ನಾನು ಸಂಧಿಸಿದೆ. ಬಿದ್ದ ಕಾರಣ ಆತನು ಕುಂಟನಾಗಿದ್ದ. ಅವರು ಯೇಸುವಿನ ಕುರಿತಾಗಿ ಹಿಂದೆಂದೂ ಕೇಳಿರಲಿಲ್ಲ. ಆದರೆ ಅವರ ಎಲ್ಲಾ ಸಂಭಂಧಿಕರು ಈ ದುರಂತದ ನಂತರ ಅವರನ್ನು ತ್ಯಜಿಸಿದ್ದರು. ಮತ್ತು ಅವರು ಅಸಹಾಯಕರಾಗಿದ್ದು ಹಾಳಾಗಿದ್ದರು. ಕರ್ತನು ಅವರನ್ನು ಸಂಧಿಸಿದನು. ಮತ್ತು ಅವರು ಯೇಸುವನ್ನು ರಕ್ಷಕನಗಿ ಕಂಡುಕೊಂಡರು. ಈಗ ಕರ್ತನು ಅವರನ್ನು ಬೇರೆ ಕುಂಟರಿಗೆ ವಾಕ್ಯ ಹೇಳಲು ಉಪಯೋಗಿಸುತ್ತಿದ್ದಾನೆ. ಮತ್ತು ಅನೇಕರು ಅವರ ಮೂಲಕ ಕರ್ತನಾದ ಯೇಸುವನ್ನು ಕಂಡುಕೊಳ್ಳುತ್ತಿದ್ದಾರೆ. ಈ ಕಡು ಬಡತನ ಹಾಗು ಸಂಕಟಗಳ ಮಧ್ಯೆ ಅವರ ಮುಖವು ಹೊಳೆಯುತ್ತಿದೆ. ಅವರನ್ನು ಸಂದರ್ಶಿಸುವವರೆಲ್ಲರೂ ಆಶೀರ್ವದಿಸ್ಪಟ್ಟು ಅವರ ಜಯಕರ ನೋಟವನ್ನು ಮತ್ತು ಹೊಳೆಯುವ ಮುಖಗಳನ್ನು ಎಂದಿಗೂ ಮರೆಯುವದಿಲ್ಲ. ಅಪಘಾತದ ಸಂದರ್ಭದಲ್ಲಿ ಈ ಹೆಂಡತಿಯು ಹೊಸದಾಗಿ ಮದುವೆಯಾಗಿ ಗರ್ಭಿಣಿಯಾಗಿದ್ದಳು. ಆಕೆ ಒಂದು ಬುದ್ದಿಮಾಂದತೆಯ ವ್ಯಕ್ತಿಯಾಗಿ ಅನೇಕ ತಿಂಗಳುಗಳ ವರೆಗೂ ಹಗಲು ರಾತ್ರಿ ಅಳುತ್ತಾ ಇಂತಹ ದುಃಸ್ಥಿತಿಯನ್ನು ದೇವರು ಯಾಕೆ ಅವರಿಗೆ ಅನುಮತಿಸಿದನು ಎಂಬದಾಗಿ ಕೇಳುತ್ತಿದ್ದಳು. ಅನಂತರ ಯೇಸುವು ಬಂದು ತನ್ನ ಸಮಾಧಾನದಿಂದ ಮತ್ತು ಶಕ್ತಿಯಿಂದ ಅವರನ್ನು ತುಂಬಿಸಿದನು. ಈಗ ದೇವರು ಅವರನ್ನು ನಮ್ಮ ದೇಶದ ದೂರದ ಸ್ಥಳಗಳಲ್ಲಿ ಬಲವಾಗಿ ಉಪಯೋಗಿಸುತ್ತಿದ್ದಾನೆ. ನಾನು ಅವರ ಕುರಿತಾಗಿ ಯೋಚಿಸುವಾಗೆಲ್ಲಾ ಕೀರ್ತನೆ 34:5 ರಲ್ಲಿ ಹೇಳುವಂತೆ ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು ಎಂಬುದು ನೆಪಗುತ್ತದೆ. ಅವರ ಬಲವಾದ ಸಾಕ್ಷಿ ನನ್ನು ಅಪಾರವಾಗಿ ಸೆಳೆಯಿತು.

    ಮತ್ತೊಬ್ಬ ಯೌವನದ ಪತ್ನಿಯನ್ನು ನಾನು ಬಲ್ಲೆನು. ಆಕೆ ತನ್ನ ಗಂಡನಿಂದ ಮತ್ತು ಗಂಡನ ತಂದೆ-ತಾಯಿಗಳಿಂದ ಹಿಂಸೆಯನ್ನು ತಾಳಲಾರದೆ ಸೀಮೆಎಣ್ಣೆಯನ್ನು ಹಾಕಿಕೊಂಡು ಬೆಂಕಿಯಲ್ಲಿ ಬೆಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ತಮ್ಮ ಗಂಡಂದಿರಿಂದ ಮತ್ತು ಅತ್ತೆಮಾವರಿಂದ ವರದಕ್ಷಿಣೆಗಾಗಿ ಕಿರುಕುಳಕ್ಕೆ ಒಳಗಾದಾಗ ಭಾರತದಲ್ಲಿ ಸ್ತ್ರೀಯರು ಈ ರೀತಿ ತಮ್ಮನ್ನು ಕೊನೆಗೊಳಿಸಿಕೊಳ್ಳಲು ಉಪಯೋಗಿಸುವ ಒಂದು ಸಾಧಾರಣ ವಿಧಾನ- ಆತ್ಮಹತ್ಯೆ ಎಂಬುದು ನಿಮಗೆ ತಿಳಿದಿದೆ. ಆದರೆ ಈ ಯೌವನ ಸ್ತ್ರೀಯು ಸಾಯಲಿಲ್ಲ. ದೇವರು ಆಕೆಯನ್ನು ಆ ಬೆಂಕಿಯ ಜ್ವಾಲೆಗಳಿಂದ ಮಾತ್ರವಲ್ಲದೆ ನರಕದ ಜ್ವಾಲೆಗಳಿಂದ ಸಹ ತಪ್ಪಿಸಿದನು. ನಮ್ಮ ಒಂದಾನೊಂದು ಹಳ್ಳಿಯ ಸಭೆಯಲ್ಲಿ ಆಕೆ ಒಬ್ಬ ಅದ್ಭುತ ಸಹೋದರಿ ಮತ್ತು ದೇವರ ಕೃಪೆಗೆ ಮತ್ತು ಪ್ರೀತಿಗೆ ಆಕೆ ಒಂದು ಸಾಕ್ಷಿಯಾಗಿದ್ದಾಳೆ.

    ಇವು ಗಂಭೀರ ಆಘಾತಗಳ ನಿಮಿತ್ತ ಯೇಸು ಕರ್ತನ ಕಂಡುಕೊಂಡ ಸ್ತ್ರೀಯರ ಉದಾಹರಣೆಗಳು. ನನಗೆ ನೆಪದಾಗೆಲ್ಲಾ ನಿರಂತರವಾಗಿ ಸಂಕಟಪಟ್ಟು ಜೀವಿಸುತ್ತಿರುವ ಈ ಸ್ತ್ರೀಯರಿಗಾಗಿ ಪ್ರಾರ್ಥಿಸುತ್ತೇನೆ. ಮತ್ತು ಕೆಲವು ಸಮಯದಲ್ಲಿ ದೇವರ ಮುಂದೆ ಇವರಿಗಾಗಿ ಕಣ್ಣೀರು ಸುರಿಸುತ್ತೇನೆ.

    ಅದ್ಭುತವಾಗಿ ಗುಣಮಾಡಲ್ಪಟ್ಟ ಸ್ತ್ರೀಯರು ಸಹ ನನಗೆ ಗೊತ್ತು. ಗುಣವಾದ ನಂತರ ಕೆಲವರು ಯೇಸುವಿನ ಶಿಷ್ಯರಾದರು. ಕೆಲವರು ಸೈತಾನನಿಂದ ಬಿಡುಗಡೆ ಹೊಂದಿ ಈಗ ದೇವರ ಮಹಿಮೆಗಾಗಿ ಜೀವಿಸುತ್ತಿದ್ದಾರೆ.

    ಯೇಸುವು ತಾನು ಭೂಲೋಕದಲ್ಲಿದ್ದಾಗ ಆತನ ಬಳಿಗೆ ಬಂದವರೆಲ್ಲರನ್ನು ಗುಣಪಡಿಸಿದನು. ನಿನ್ನನ್ನು ಸಹ ಗುಣಪಡಿಸಲು ಆತನ ಕೇಳಿಕೋ. ನಾವು ಕಾಯಿಲೆಯಲ್ಲಿರುವಾಗ ಸಭಾಹಿರಿಯರನ್ನು ಕರೆಕಳುಹಿಸಿ ಎಣ್ಣೆ ಹಚ್ಚಿ ನಮಗೋಸ್ಕರ ಕರ್ತನ ಹೆಸರಿನಲ್ಲಿ ಪ್ರಾರ್ಥಿಸಲು ಕೇಳಬೇಕು. ನಂಬಿಕೆಯ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ.(ಯಾಕೋಬ 5:14).

    ರೋಗವು ಪಾಪದ ಸಂಭಂದವಾಗಿ ಸಹ ಬರುತ್ತದೆ. ಕರ್ತನು ಭೂಲೋಕದಲ್ಲಿ ಇದ್ದಾಗ, ತಾನು ಗುಣಪಡಿಸಿದ ಕೆಲವರಿಗೆ ಆತನು ನಿಮ್ಮ ನಂಬಿಕೆಯೇ ನಿಮ್ಮನ್ನು ಗುಣಪಡಿಸಿತು. ಇನ್ನೂ ಮುಂದೆ ಪಾಪ ಮಾಡಬೇಡಿರಿ ಎಂದು ಹೇಳಿದನು. ಅಲರ್ಜಿಗಳು, ಅಧಿಕವಾಗಿ ರಕ್ತದ ಒತ್ತಡ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆ- ಕೆಲವು ಸಾರಿ ಒಳಗಿನ ಒತ್ತಡದ ಸಂಬಂಧ, ಕಹಿಭಾವನೆಯಿಂದಾಗಿ ಮತ್ತು ನೋವಿನ ಯೋಚನೆಗಳಿಂದಾಗಿರುತ್ತದೆ. ಆದ್ದರಿಂದ ನಾವು ಮೊದಲು ನಮ್ಮ ಪಾಪಗಳನ್ನು ಅರಿಕೆಮಾಡಿ ಕರ್ತನು ನಮ್ಮನ್ನು ಕ್ಷಮಿಸುವಂತೆ ಆತನ ಕೇಳಿಕೊಳ್ಳಬೇಕು. ಯಾರನ್ನು ನಾವು ಮನ ನೋಯಿಸಿದ್ದೇವೋ ಅವರ ಬಳಿ ಸಹ ಸಂಗತಿಗಳನ್ನು ಸರಿಪಡಿಸಿಕೊಳ್ಳಬೇಕು. ನೀವು ಎಂತಹ ದುಷ್ಕಾರ್ಯಗಳನ್ನು ಮಾಡಿದ್ದರೂ ಸಹ ಪರವಾಗಿಲ್ಲ, ಕ್ಷಮಿಸದ ಆತ್ಮ ನಿಮ್ಮನ್ನು ಹಿಡಿಯದಂತೆ ಖಚಿತಪಡಿಸಿಕೊಳ್ಳಿರಿ. ದೇವರು ಶಸ್ತ್ರಚಿಕಿತ್ಸೆಯಿಂದಾಗಲಿ ಅಥವಾ ಬೇರೆ ರೀತಿಯಿಂದಾಗಲಿ ವಾಸಿಮಾಡುವಾತನಾಗಿದ್ದಾನೆ. ನೀನು ಗುಣಹೊಂದಿದಾಗ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಮರೆಯಬೇಡ ಮತ್ತು ಎಲ್ಲಾ ಮಹಿಮೆಯನ್ನು ದೇವರಿಗೆ ಕೊಡು.

    ಸಂಪೂರ್ಣವಾಗಿ ನಿನ್ನನ್ನು ದೇವರ ಚಿತ್ತಕ್ಕೆ ಒಪ್ಪಿಸು ಮತ್ತು ಕರ್ತನು ನಿನ್ನನ್ನು ಗುಣಪಡಿಸುವಂತೆ ನಂಬಿಕೆಯಿಂದ ಕೇಳಿಕೋ, ಕರ್ತನು ಗುಣಪಡಿಸುವಾತನು. ನೀನು ಗುಣಹೊಂದಿದ ನಂತರ ನಿನ್ನ ಆರೋಗ್ಯಕರ ಜೀವಿತವನ್ನು ದೇವರಿಗೆ ಹಿಂದಕ್ಕೆ ಕೊಡು; ಆತನ ಸೇವೆ ಮಾಡಲು, ಇತರರನ್ನು ಆಶೀರ್ವದಿಸಲು ಮತ್ತು ಇತರರಿಗೆ ಸಹಾಯ ಮಾಡಲು ಆ ಜೀವಿತವನ್ನು ಪ್ರತಿಷ್ಠಿಸು.

    ಇತರರನ್ನು ಆತನು ಗುಣಪಡಿಸುವಾಗ ಬಹಳ ನಂಬಿಗಸ್ಥರಾದ ಆತನ ಮಕ್ಕಳನ್ನು ಯಾಕೆ ಕಾಯಿಲೆಯಲ್ಲಿ ಇರಲು ಅನುಮತಿಸುತ್ತಾನೋ ನನಗೆ ಅರ್ಥವಾಗುತ್ತಿಲ್ಲ. ದೇವರು ಸಾರ್ವಬೌಮನು! ಯಾಕೋಬನು ಕೊಲ್ಲಲ್ಪಡುವಂತೆ ಅನುಮತಿಸಿದನು; ಮತ್ತು ಪೇತ್ರನ ಅದ್ಭುತವಾಗಿ ಸೆರೆಮನೆಯಿಂದ ಬಿಡಿಸಿದನು. (ಅಪೊ. 12) ಆದರೆ ನಾವು ಮೊದಲೇ ನೋಡಿಕೊಂಡ ಹಾಗೆ ಮರಣದ ಬೀಗದ ಕೈ ನಮ್ಮ ಕರ್ತನ ಬಳಿ ಇದೆ. ಮತ್ತು ಆತನೇ ಅದನ್ನು ನಿನಗೆ ತೆರೆಯಲು ಸಾಧ್ಯ. ಆದ್ದರಿಂದ ನಾವು ಆತನ ಚಿತ್ತದಂತೆ ಜೀವಿಸುವಾಗ ನಮ್ಮ ಸಮಯಕ್ಕೆ ಮುಂಚೆ ನಾವು ಸಾಯಲು ಸಾಧ್ಯವಿಲ್ಲ. ನಾವು ಸಾವಿಗಾಗಿ ಹೇದರಬೇಕಾಗಿಲ್ಲ. ಮೊದಲಿದ್ದ ಕ್ರೈಸ್ತ ರಕ್ತ ಸಾಕ್ಷಿಗಳು ತಮ್ಮ ಮರಣದ ಕಡೆಗೆ ಹಾಡುತ್ತಾ ನಡೆದರು.

    ಆಮಿ ಕಾರ್ಮೈಕಲ್ (ದಕ್ಷಿಣ ಭಾರತದ ಡೊನಾವರ್‌ನವರು) ತಾವು ಹಾಸಿಗೆಯಲ್ಲಿದ್ದಾಗ ಅದ್ಭುತವಾದ ಪುಸ್ತಕಗಳನ್ನು ಬರೆದರು. ಆಕೆಯು ಒಂದು ವೇಳೆ ಆರೋಗ್ಯವಾಗಿ ಮತ್ತು ಸಮರ್ಥರಾಗಿದ್ದರೆ ಇವುಗಳನ್ನು ಬರೆಯುತ್ತಿದ್ದಿಲ್ಲವೇನೋ?.

    ಕ್ರಿಸ್ತನು ನಮ್ಮ ದೇಹಗಳಲ್ಲಿ, ಆರೋಗ್ಯದಲ್ಲೂ ಮತ್ತು ಸತತವಾಗಿ ದೇಹದಲ್ಲಿ ಶೂಲವಿರುವಾಗಲೂ ಸಹ ಪ್ರಕಟವಾಗಲು ಸಾಧ್ಯ. (ಪಿಲಿಪ್ಪಿ. 1:20) ಆದ್ದರಿಂದ ನಮ್ಮ ದುಃಖಗಳು ಮತ್ತು ಶೋಧನೆಗಳು ನಮ್ಮನ್ನು ದೇವರ ಮತ್ತು ಮನುಷ್ಯರ ಮುಂದೆ ತಗ್ಗಿಸಿಕೊಳ್ಳಲು ಒಂದು ಸಂದರ್ಭವೆಂಬುದಾಗಿ ತೆಗೆದುಕೊಳ್ಳೋಣ. ನಮಗಾಗಿ ನಾವು ಎಂದಿಗೂ ಅಳುವುದು ಬೇಡ.

    ಜನರೇ ಯಾವಾಗಲೂ ಆತನ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ. ದೇವರು ನಮ್ಮ ಆಶ್ರಯವು (ಕೀರ್ತನೆ 62:8).

    ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ (ಕೀರ್ತನೆ 34:18).

    ನಾವು ಕಣ್ಣೀರಿನ ತಗ್ಗನ್ನು (ಬಾಕ) ಹಾದು ಹೋಗುವಾಗ ದೇವರು ಅದನ್ನು ಅನೇಕರಿಗೆ ಆಶೀರ್ವಾದವಾಗಿ ಹರಿದು ಬರುವ ನೀರಿನ ಬುಗ್ಗೆಯನ್ನಾಗಿ ಮಾರ್ಪಡಿಸಲು ಸಾಧ್ಯ (ಕೀರ್ತನೆ 84:6). ನಮ್ಮ ದುಃಖಗಳ ಮಧ್ಯದಲ್ಲಿ ದೇವರು ನಮ್ಮನ್ನು ಆದರಿಸಿ, ಪರಲೋಕದಿಂದ ಬರುವ ಜೀವವುಳ್ಳ ನೀರಿನಿಂದ ಚೈತನ್ಯಗೊಳಿಸುವಂತೆ ನಾವು ನಮ್ಮ ಸುತ್ತಲಿರುವ ಅನೇಕರಿಗೆ ಈ ಜೀವವುಳ್ಳ ನೀರನ್ನು ಹಂಚಿಕೊಳ್ಳಬಹುದು.

    ಒಂದು ದಿನ ದೇವರು ನಮ್ಮ ಪ್ರತಿಯೊಂದು ಕಣ್ಣೀರನ್ನು ನಮ್ಮ ಕಣ್ಣುಗಳಿಂದ ಒರಸಿ ಬಿಡುವುದಾಗಿ ವಾಗ್ದಾನ ನೀಡಿದ್ದಾನೆ (ಪ್ರಕಟನೆ 21:1-4). ಇನ್ನೂ ದುಃಖವಾಗಲಿ ಶೋಧನೆಯಾಗಲಿ, ಮರಣವಾಗಲಿ, ಗೋಳಾಟವಾಗಲಿ ಇರುವುದಿಲ್ಲ. ಯಾಕಂದರೆ ಈ ಎಲ್ಲಾ ಸಂಗತಿಗಳು ಕಳೆದುಹೋಗುತ್ತದೆ. ನಮ್ಮ ತಂದೆಯು ನಮ್ಮೊಂದಿಗೆ ನಿತ್ಯಕ್ಕೂ ಇರುವ, ಆ ಹೊಸ ಭೂಮಿಗಾಗಿ ಮತ್ತು ಹೊಸ ಪರಲೋಕಕ್ಕಾಗಿ ನಾವು ಕಾತುರದಿಂದ ಎದುರು ನೋಡುತ್ತಿದ್ದೇವೆ.

    ಆದ್ದರಿಂದ ನಮ್ಮ ಹೃದಯಗಳು ಕಾತುರದಿಂದ ಬೇಗ ಬಾ ಕರ್ತನಾದ ಯೇಸುವೇ ಎಂಬುದಾಗಿ ಕೂಗುತ್ತವೆ.

    ಅಧ್ಯಾಯ 9
    ಕಣ್ಣೀರು ಸುರಿಸುವ ಸ್ತ್ರೀಯರಿಗಾಗಿ ದೇವರು ಚಿಂತಿಸುತ್ತಾನೆ

    ಅಧ್ಯಾಯ ಒಂಬತ್ತು

    ಕಣ್ಣೀರು ಸುರಿಸುವ ಸ್ತ್ರೀಯರಿಗಾಗಿ ದೇವರು

    ದೇವರು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ಆತನು ನಮ್ಮ ಮೇಲೆ ಕೋಪಿಸಿಕೊಂಡಿಲ್ಲ ಎಂಬುದನ್ನು ತೋರಿಸಲು ದೇವಕುಮಾರನು ಈ ಭೂಲೋಕಕ್ಕೆ ಬಂದನು. ಸಮಾಜವು ಹೀನವಾದ ಸ್ಥಿತಿಗೆ ಮತ್ತು ಕೆಳಕ್ಕೆ ತಳ್ಳಿದ ‘ಸ್ತ್ರೀಯರನ್ನು’ ಆತನು ಮೇಲಕ್ಕೆ ಎತ್ತಿದನು. ಸುವಾರ್ತೆಗಳಲ್ಲಿ ನಾವು ಓದುವ ಹಾಗೆ ಅನೇಕ ಸ್ತ್ರೀಯರು ಆತನ ಬಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅವಶ್ಯಕತೆಗಳಿಂದ ಬಂದರು. ಆತನು ಅವರ ಕಣ್ಣೀರನ್ನು ಒಂದು ಸಾರಿಯೂ ತಿರಸ್ಕರಿಸಲಿಲ್ಲ. ಅಳುವ ಸ್ತ್ರೀಯರಿಗೆ ಯಾವಾಗಲೂ ಆತನಲ್ಲಿ ಕರುಣೆಯ ಮಾತುಗಳು ಇತ್ತು.

    ಆತನು ಯಾವಾಗಲೂ ಮೌನವಾಗಿ ಅವರನ್ನು ಸ್ತ್ರೀಯೇ ಯಾಕೆ ಅಳುತ್ತಿದ್ದಿ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದನೆಂಬುದಾಗಿ ನಾವು ಹೇಳಬಹುದು.

    ಮಗ್ದಲದ ಮರಿಯಳು ತನ್ನ ಜೀವಿತಲ್ಲೆ ಬಹಳವಾಗಿ ಕಣ್ಣೀರು ಸುರಿಸಿರುವುದರಲ್ಲಿ

    ಸಂದೇಹವೇ ಇಲ್ಲ. ಒಂದು ಸಾರಿ ಆಕೆ ಏಳು ದುರಾತ್ಮಗಳಿಂದ ಹಿಡಿಯಲ್ಪಟ್ಟವಳಾಗಿದ್ದಳು. ಆದರೆ ಯೇಸುವು ಆಕೆಯನ್ನು ಬಿಡುಗಡೆ ಮಾಡಿದನು. ಮತ್ತು ಆ ಸಾಲವನ್ನು ಆಕೆ ಎಂದಿಗೂ ಮರೆತು ಹೋಗಲಿಲ್ಲ. ತನ್ನ ಕೃತಜ್ಞತೆಯು ಯೇಸುವಿಗಾಗಿ ಇರುವ ಅನುರಾಗದ ಭಕ್ತಿಯಾಗಿ ಪರಿಣಮಿಸಿತು. ಸೈತಾನನು ಆಕೆಯ ಜೀವಿತವನ್ನು ನಾಶಮಾಡಿದ್ದನು. ದೆವ್ವ ಹಿಡಿಯಲ್ಪಟ್ಟ ನಂತರ ಆಕೆಯು ಪಟ್ಟಣದಲ್ಲೆ ಉಗ್ರಳಾದ ಸ್ತ್ರೀಯಾಗಿ ಮತ್ತು ದೂರವಿಡಬೇಕಾದ ಸ್ತ್ರೀಯಾಗಿ ಹೆಸರುಗೊಂಡಿದ್ದಳು. ಆಳವಾದ ಪಾಪದ ಕಂದಕದಲ್ಲಿದ್ದವರನ್ನು ಮತ್ತು ಆಳವಾಗಿ ಎದೆಗುಂದಿದವರನ್ನು ಹೇಗೆ ಯೇಸುವು ಮೇಲಕ್ಕೆ ಎತ್ತಿ ಆತ್ಮಿಕ ಸಿಂಹಾಸನದಲ್ಲಿ ಇರಿಸಬಲ್ಲನು ಎಂಬುದನ್ನು ಆತನು ಆಕೆಯಲ್ಲಿ ನಿರೂಪಿಸಿ ತೋರಿಸಿದನು. ಹಲ್ಲೆಲೂಯಾ.

    ಮರಿಯಳು ಮತ್ತು ಮಾರ್ಥಳು-ಕಣ್ಣೀರು ಸುರಿಸಿದ ಇನ್ನೂ ಇಬ್ಬರು. ಇವರು ಯೇಸುವಿಗಾಗಿ ತಮ್ಮ ಮನೆಯನ್ನು ತೆರೆದ ಇಬ್ಬರು ಸಹೋದರಿಯರು. ಕರ್ತನು ಆಗಾಗ ಇವರ ಮನೆಯಲ್ಲಿ ಊಟ ಮತ್ತು ಉಪಹಾರವನ್ನು ಪಡೆಯುತ್ತಿದ್ದನು. ಮತ್ತು ಅವರು ಯಾವಾಗಲೂ ಕರ್ತನಿಗಾಗಿ ಆಯಾಸವಿಲ್ಲದೆ ದುಡಿಯಲು ಸಂತೋಷಿಸುತ್ತಿದ್ದರು. ಒಂದು ದಿನ ಅವರ ಸಹೋದರನಾದ ಲಾಜರನು ಬಹಳವಾಗಿ ಕಾಯಿಲೆಯಲ್ಲಿ ಬಿದ್ದನು. ಮತ್ತು ಅವರು ತಕ್ಷಣ ಯೇಸುವಿಗೆ ತುರ್ತು ಕರೆಯನ್ನು ಕಳುಹಿಸಿದರು. ಆದರೆ ಯೋಹಾನ 11 ನೇ ಅಧ್ಯಾಯದಲ್ಲಿ ಯೇಸುವು ಅವರ ಮನೆಗೆ ಬರಲು ಉದ್ದೇಶಪೂರ್ವಕವಾಗಿ ತಡಮಾಡಿದನು. ಅವರಿಗೆ ಅದು ಅರ್ಥವಾಗಲಿಲ್ಲ. ಯಾಕೆ ಆತನು ಬರುತ್ತಿಲ್ಲ? ನಮ್ಮ ಪ್ರಾರ್ಥನೆಗೆ ತಡವಾದ ಪ್ರತ್ಯುತ್ತರಗಳು ಸಹ ನಾವು ಬೇಡಿದಕ್ಕಿಂತ ಉತ್ತಮವಾದದ್ದನ್ನು ನಮಗೆ ಕೊಡಲು ದೇವರು ಮಾಡಿಕೊಂಡ ಯೋಜನೆಯೇ ಆಗಿರುತ್ತದೆ. ಅಂತ್ಯದಲ್ಲಿ ಲಾಜರನು ಸತ್ತನು. ಆಗ ಯೇಸುವು ಬಂದನು. ಮರಿಯಳು ಮತ್ತು ಮಾರ್ಥಳು ಆತನೊಟ್ಟಿಗೆ ವ್ಯತ್ಯಾಸವಾಗಿ ವರ್ತಿಸಿದರು. ಒಬ್ಬಳು ಕಹಿಯಾಗಿ ಗುಣಗುಟ್ಟಿದಳು. ಇನ್ನೊಬ್ಬಳು ಕಹಿಭಾವನೆಯನ್ನು ಮನಸ್ಸಿನಲ್ಲೆ ಇಟ್ಟುಕೊಂಡು ಮೌನವಾಗಿದ್ದಳು. ಆದರೆ ಯೇಸುವು ಅವರ ದುಃಖವನ್ನು ಅರ್ಥಮಾಡಿಕೊಂಡನು. ಆತನು ಕನಿಕರಪಟ್ಟು ಅವರೊಂದಿಗೆ ಆತನು ಸಹ ಅತ್ತನು. ಆತನು ಅವರ ಗುಣಗುಟ್ಟುವಿಕೆಯನ್ನು ಮತ್ತು ಕಹಿಭಾವನೆಯನ್ನು ಕ್ಷಮಿಸಿ ಅವರ ಸಹೋದರನ ಮರಣದಿಂದ ಎಬ್ಬಿಸಿದನು. ಅವರು ಯೇಸುವಿನಿಂದ ಗುಣವಾಗುವುದನ್ನು ಮಾತ್ರ ಎದುರುನೋಡಿದರು. ಆದರೆ ಆತನು ಅವರಿಗೆ ಪುನರುತ್ಥಾನ ಕೊಟ್ಟನು ಮತ್ತು ಅವರ ಕಣ್ಣೀರನ್ನು ಸಂತೋಷವನ್ನಾಗಿ ಮಾರ್ಪಡಿಸಿದನು. ಯೇಸುವು ನಿನ್ನೆ, ಈ ಹೊತ್ತು, ನಿರಂತರವು ಒಂದೇ ರೀತಿಯಾಗಿ ಇರುವನು. ನಾವು ಯೋಚಿಸುವುದಕ್ಕಿಂತ ಮತ್ತು ಕೇಳುವುದಕ್ಕಿಂತ ಹೆಚ್ಚಾದದ್ದನ್ನೆ ಆತನು ಮಾಡಲು ಸಾಧ್ಯ. ಈ ದಿನವು ಸಹ ಆತನು ಕಣ್ಣೀರು ಸುರಿಸುವ ಸ್ತ್ರೀಯರೊಂದಿಗೆ ಕಣ್ಣೀರು ಸುರಿಸುತ್ತಾನೆ ಮತ್ತು ಅವರ ಕಣ್ಣೀರನ್ನು ಒರೆಸುತ್ತಾನೆ.

    12 ವರ್ಷಗಳಿಂದಲೂ ಸತತವಾಗಿ ರಕ್ತಸ್ರಾವದಿಂದ ಜೀವಿಸುತ್ತಿದ್ದ ಒಬ್ಬ ಅರಿಯದ ಸ್ತ್ರೀಯ ಬಗ್ಗೆ ನಾವು ಸುವಾರ್ತೆಗಳಲ್ಲಿ ಓದುತ್ತೇವೆ. ಆಕೆಯು ಒಬ್ಬ ವೈದ್ಯನಿಂದ ಮತ್ತೊಬ್ಬವೈದ್ಯನ ಬಳಿಗೆ ಹೋದಳು. ಆದರೆ ಅವರು ಅವಳು ಕೂಡಿಟ್ಟ ಹಣವನ್ನೆಲ್ಲಾ ಅಪಹರಿಸಿದರು. ಆಕೆಯ ಕಾಯಿಲೆಯು ತೊಂದರೆಗೀಡುಮಾಡುವಂತದ್ದು. ರಕ್ತಸ್ರಾವದ ಗುಂಪಿಗೆ ಸೇರಿದ್ದು. ಆಕೆಯು ರಕ್ತವನ್ನು ಕಳೆದುಕೊಂಡು ಬಹಳ ನಿಶಕ್ತ ಮತ್ತು ರಕ್ತಹೀನಳಾಗಿರಬೇಕು. ಅನೇಕ ರಾತ್ರಿಗಳು ತನ್ನನ್ನು ಗುಣಪಡಿಸುವಂತೆ ದೇವರ ಮುಂದೆ ಅತ್ತು ಹೋರಾಡಿ ತನ್ನ ದಿಂಬನ್ನು ಕಣ್ಣೀರಿನಿಂದ ತೇವಗೊಳಿಸಿರಬಹುದು. ಆದರೆ ಹನ್ನೆರಡು ವರುಷಗಳ ಕಾಲದವರೆಗೂ ಆಕೆಗೆ ಉತ್ತರ ಸಿಗಲಿಲ್ಲ. ಆನಂತರ ಒಂದು ದಿನ ಮೆಸ್ಸಿಯನು ಬಂದನು. ಮತ್ತು ಅವಳ ಪಟ್ಟಣವನ್ನು ಸಂದರ್ಶಿಸುತ್ತಾನೆಂಬದಾಗಿ ಆಕೆ ಕೇಳಿಸಿಕೊಂಡಳು. ಆ ದಿನ ಜನರ ಗುಂಪು ಬಹಳವಾಗಿದ್ದು ಯೇಸುವನ್ನು ಸುತ್ತುವರಿದಿತ್ತು. ಆದರೆ ಆಕೆಯು ಆ ಗುಂಪಿನಲ್ಲಿ ಹೇಗಾದರೂ ಹೋಗಿ ಯೇಸುವಿನ ಬಟ್ಟೆಯನ್ನಾದರೂ ಮುಟ್ಟಬೇಕೆಂಬುದಾಗಿ ತೀರ್ಮಾನಿಸಿದಳು. ಈ ಬಲಹೀನ ಸ್ತ್ರೀಯು ಗಂಡಸರನ್ನು, ಹೆಂಗಸರನ್ನು ಮತ್ತು ಮಕ್ಕಳನ್ನು ನುಗ್ಗಿಕೊಂಡು ಹೇಗೋ ಆ ಗುಂಪಿನಲ್ಲಿ ತನ್ನ ಕೈಗಳಿಂದ ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿದಳು. ಮತ್ತು ಆಕೆ ತಕ್ಷಣವೇ ಗುಣಹೊಂದಿದಳು! ಯೇಸುವು ನಿಂತು ಆಕೆಯನ್ನು ಕರೆದನು ಮತ್ತು ಆಕೆ ಭಯದಿಂದ ಗುಂಪಿನ ಮುಂದೆ ನಿಂತು ಸಾಕ್ಷಿ ನುಡಿದಳು. ಈಗ ಆಕೆಯ ಸಾಕ್ಷಿಯು 2000 ವರ್ಷಗಳಿಂದ ಎಲ್ಲಾ ದೇಶದ ಜನರನ್ನು ಆಶೀರ್ವದಿಸಿದೆ.

    ನೀನು ಸಹ ಎಷ್ಟೋ ಕಣ್ಣೀರನ್ನು ಸುರಿಸಿರುವ ಒಬ್ಬ ಪರಿಚಯವಿಲ್ಲದ ಸ್ತ್ರೀಯಾಗಿರಬಹುದು. ನೀನು ತೊಂದರೆಗೆ ಒಳಪಟ್ಟಿರುವ ಕಾಯಿಲೆಯಿಂದ ಸಂಕಟಪಡುತ್ತಿರಬಹುದು. ಕರ್ತನು ನಿನ್ನನ್ನು ಆಶಾಭಂಗಪಡಿಸುವುದಿಲ್ಲ. ಆತನ ಬಳಿಗೆ ಬಾ. ಈ ದಿನವು ಸಹ ನಾವು ಆತನ ನಂಬಿಕೆಯಿಂದ ಮುಟ್ಟಬಹುದು. ಯೇಸುವು ನಮ್ಮ ರೋಗಗಳನ್ನು ಮತ್ತು ನಮ್ಮ ಕಾಯಿಲೆಗಳನ್ನು ಹೊತ್ತುಕೊಂಡನು. ಮತ್ತು ಆತನ ಬಾಸುಂಡೆಗಳಿಂದ ನಾವು ಗುಣಹೊಂದಿದೆವು.

    ಯೋಹಾನ 4 ರಲ್ಲಿ ನಾವು ಇನ್ನೊಬ್ಬ ಅವಶ್ಯಕತೆಯಲ್ಲಿರುವ ಸ್ತ್ರೀಯನ್ನು ನೋಡುತ್ತೇವೆ. ಈ ಸಾರಿ ಒಬ್ಬ ಸಮಾರ್ಯದವಳು. ಈಕೆಯ ಜೀವಿತ ತಿರಸ್ಕರಿಸಲ್ಪಟ್ಟ ಜೀವಿತ ಮತ್ತುಆಕೆಯು ಮದುವೆಯಾಗಿ ಪುನಃ ಐದು ಸಾರಿ ಮದುವೆಯಾಗಿದ್ದಳು ಮತ್ತು ಕೊನೆಯದಾಗ ಈಗ ಆಕೆಯೊಂದಿಗೆ ವಾಸಿಸುತ್ತಿರುವವನು ಸಹ ಆಕೆಯ ಗಂಡನಲ್ಲ. ಆಕೆ ತನ್ನ ಜೀವಿತದ ಕುರಿತಾಗಿ ಬೇಸತ್ತಿರಬಹುದು. ಯೆಹೂದ್ಯರು ಸಮಾರ್ಯದವರನ್ನು ಒಂದು ಕೀಳಾದ ಪಂಗಡದವರನ್ನಾಗಿ ಕಾಣುತ್ತಿದ್ದರು. ಸಮಾರ್ಯದ ಸ್ತ್ರೀಯರು ಸಾಧಾರಣವಾಗಿ ಹಳ್ಳಿಯ ಬಾವಿಯ ಬಳಿ ಬೆಳಿಗ್ಗೆ ನೀರಿಗೆ ಹೋಗುತ್ತಿದ್ದರು. ಆದರೆ ಈಕೆಗೆ ಈ ಹಳ್ಳಿಯ ಬೇರೆ ಸ್ತ್ರೀಯರಿಂದ ಹಿಂದೆ ಅನೇಕ ಕೆಟ್ಟ ಅನುಭವವಾಗಿರಬೇಕು; ಅವರು ಆಕೆಯನ್ನು ಹೀನೈಸಿರಬೇಕು; ಚುಚ್ಚುಮಾತುಗಳನ್ನು ಆಡಿರಬೇಕು; ಮತ್ತು ಆಕೆಯನ್ನು ಸೇರದೇ ದೂರವಿದ್ದಿರಬಹುದು. ತಿರಸ್ಕಾರ, ನಾಚಿಕೆ ಮತ್ತು ದುಃಖ ಇವುಗಳೇ ಸಮಾರ್ಯದಲ್ಲಿ ಆಕೆಯ ನಿತ್ಯದ ಸಹವಾಸಿಗಳಾಗಿದ್ದವು. ಆದ್ದರಿಂದ ಈಕೆಯು ಕೊಳದ ಸುತ್ತಮುತ್ತ ಯಾರೂ ಇಲ್ಲದ ಸಮಯ ನೋಡಿ ಮಧ್ಯಾಹ್ನ ಬಾವಿಯ ಬಳಿ ಬರಲು ತೀರ್ಮಾನಿಸಿದಳು. ಅಲ್ಲಿ ಒಬ್ಬ ಪುರುಷನ ಕಾಣಲು ಆಕೆಯಲ್ಲಿ ಆಗುವ ಆಶ್ಚರ್ಯವನ್ನು ಊಹೆ ಮಾಡಿ ನೋಡಿ. ಕರ್ತನು ಸಮಾರ್ಯವನ್ನು ಉದ್ದೇಶಪೂರ್ವಕವಾಗಿ ಪ್ರಯಾಣಿಸಿ, ಆಕೆಯನ್ನು ಸಂದರ್ಶಿಸಿ, ಆಕೆಯೊಟ್ಟಿಗೆ ಮಾತನಾಡಬೇಕೆಂಬುದಾಗಿ ಆ ಬಾವಿಯ ಬಳಿ ಆ ಮದ್ಯಾಹ್ನ ಆತನು ನಿಂತನು. ಆತನು ತನ್ನ ನೀರಡಿಕೆಯನ್ನು ಪ್ರಾರಂಭದ ಒಂದು ಅಂಶವಾಗಿ ಇಟ್ಟುಕೊಂಡು, ಕ್ರಮೇಣ ಆಕೆಗೆ ಜೀವವುಳ್ಳ ನೀರಿನ ಅವಶ್ಯಕತೆಯ ಕುರಿತಾಗಿ ತೋರಿಸಿಕೊಡುತ್ತಾನೆ. ಕರ್ತನು ಕೊನೆಗೆ ಇಡೀ ಹಳ್ಳಿಯೇ ಪಶ್ಚಾತ್ತಾಪಕ್ಕೆ ಬರುವಂತೆ ಆಕೆಯನ್ನು ಉಪಯೋಗಿಸುತ್ತಾನೆ.

    ಸಮಾಜದಲ್ಲಿ ತಿರಸ್ಕರಿಸಲ್ಪಟ್ಟು ಹೀನೈಸಲ್ಪಟ್ಟ ಸ್ತ್ರೀಯರಿಗೆ ಯೇಸುವು ಎಂತಹ ನಿರೀಕ್ಷೆಯನ್ನು ಕೊಡುತ್ತಾನೆ. ನೀನು ತುಳಿಯಲ್ಪಡುವಿಕೆಗೆ ಒಳಗಾಗಿರಬಹುದು, ತಿರಸ್ಕರಿಸಲ್ಪಟ್ಟಿರಬಹುದು. ಮತ್ತು ಒಂದು ಹೀನೈಸಲ್ಪಟ್ಟ ಜನಾಂಗಕ್ಕೆ ಸೇರಿರಬಹುದು. ನಿನ್ನ ಹಕ್ಕುಗಳಿಗಾಗಿ ಹೋರಾಡಲು ಯಾರೂ ಇಲ್ಲದಿರಬಹುದು. ಸ್ತ್ರೀಯೇ ಇನ್ನು ನೀನು ಅಳಬೇಕಾಗಿಲ್ಲ. ನಿನ್ನ ವಿಮೋಚಕನು ನಿನಗಾಗಿ ಬಂದಿದ್ದಾನೆ.

    ಮತ್ತಾಯ 15:22 ರಲ್ಲಿ ಅಳುವ, ಆದರೆ ಹಾತೊರೆಯುವ ಕಾಬಗ್ಗೆನ್ಯದ ಸ್ತ್ರೀ ಬಗ್ಗೆ ಓದುತ್ತೇವೆ. ಆಕೆಯು ಆರಿಸಲ್ಪಟ್ಟ ಜನಾಂಗದವಳಲ್ಲ. ಆದರೆ ದೇವರು ಆಕೆಗಾಗಿ ಚಿಂತಿಸಿದ. ಆಕೆಯ ಮಗಳು ಅನೇಕ ವರ್ಷಗಳು ದುರಾತ್ಮನಿಂದ ಹಿಡಿಯಲ್ಪಟ್ಟವಳಾಗಿದ್ದಳು. ಆಕೆ ಎಲ್ಲಿಗೆ ಸಹಾಯಕ್ಕಾಗಿ ಹೋಗಬೇಕೆಂಬುದಾಗಿ ತಿಳಿಯದವಳಾಗಿದ್ದಳು. ದೆವ್ವಗಳನ್ನು ಓಡಿಸುವ ಒಬ್ಬ ಪ್ರವಾದಿಯು ಇಸ್ರೇಲಿಗೆ ಬಂದಿರುವುದಾಗಿ ಆಕೆ ಕೇಳಿಸಿಕೊಂಡಿದ್ದಳು. ಆದರೆ ಇಸ್ರೇಲಿಗೆ ಹೋಗುವುದು ಬಹಳ ಕಷ್ಟ ಮತ್ತು ಆಕೆ ಪ್ರಯಾಣಮಾಡಲು ಬಹಳ ವೆಚ್ಚವುಳ್ಳದ್ದಾಗಿತ್ತು. ಇದರ ಜೊತೆಗೆ ಆಕೆ ಇಸ್ರಾಯೇಲ್ಯಳಲ್ಲ ಮತ್ತು ಆಕೆಯ ಮಾತುಗಳನ್ನು ಕೇಳಿಸಿಕೊಳ್ಳಲು ಯೇಸುವಿಗೆ ಸಮಯವಿದೆಯೋ ಅಥವಾ ಸಹಾಯ ಮಾಡಲು ಸಾಧ್ಯವೋ ಎಂಬುದಾಗಿ ಆಕೆಗೆ ಗೊತ್ತಿರಲಿಲ್ಲ. ಆದ್ದರಿಂದ ತನ್ನ ಮಗಳು ಗುಣಹೊಂದುವುದರ ಬಗ್ಗೆ ನಿರೀಕ್ಷೆಯನ್ನು ಆಕೆ ಬಿಟ್ಟು ಬಿಟ್ಟಳು. ದೇವರು ಆಕೆಯನ್ನು ಎಷ್ಟು ಪ್ರೀತಿಸಿದ ಮತ್ತು ಹೇಗೆ ಆಕೆಯ ಕಣ್ಣೀರನ್ನು ನೋಡಿದ ಎಂಬದಾಗಿ ಆಕೆಗೆ ಸ್ವಲ್ಪ ಮಟ್ಟಿಗೆ ಮಾತ್ರ ಗೊತ್ತಿತ್ತು. ದೇವರು ಯೇಸುವನ್ನು ಆಕೆಗಾಗಿ ಕಳುಹಿಸಿದನು. ಯೇಸುವು ಗಲಿಲಾಯದಿಂದ ಆಕೆಯ ಸ್ವಂತ ಪಟ್ಟಣಕ್ಕೆ ನಡೆದನು. ಆಕೆಗೆ ಮಾತ್ರ ಸಹಾಯಿಸಲು 50 ಮೈಲು ಹಿಂದಕ್ಕೆ ನಡೆದನು. ಯೇಸುವನ್ನು ಆಕೆ ಸಂಧಿಸಿದಾಗ, ತಾನು ಅನ್ಯಳು ಮತ್ತು ದೇವರಿಂದ ಯಾವುದನ್ನೂ ಹೊಂದಲು ಆಕೆ ಯೋಗ್ಯಳಲ್ಲ ಎಂಬುದಾಗಿ ತಿಳಿದಿದ್ದಳು; ಕರ್ತನ ಮುಂದೆ ಆಕೆ ನಾಯಿಯ ಸ್ಥಾನವನ್ನು ಸಂತೋಷವಾಗಿ ಸ್ವೀಕರಿಸಿದಳು. ಮತ್ತು ಮಕ್ಕಳ ಮೇಜಿನಿಂದ ಆಕೆಗೆ ಏನಾದರೂ ಉಳಿದಿದ್ದು ಸಿಕ್ಕಬಹುದು ಎಂಬುದಾಗಿ ಕೇಳಿಕೊಂಡಳು. ಯೇಸುವಿನ ಹಸ್ತದಿಂದ ಒಂದು ಉಳಿದ ರೊಟ್ಟಿಯ ತುಂಡು ಸಿಕ್ಕರೂ ಸಾಕು, ತನ್ನ ಮಗಳಲ್ಲಿರುವ ದೆವ್ವವನ್ನು ಓಡಿಸಬಹುದು ಎಂಬುದಾಗಿ ನಂಬಿದ್ದಳು. ಎಂತಹ ನಂಬಿಕೆ! ಯೇಸುವು ಅವಳ ಬೇಡಿಕೆಯನ್ನು ನೇರವೇರಿಸಿದನು. ಆಕೆಯ ಮಗಳು ಎಷ್ಟೋ ಮೈಲುಗಳ ದೂರದಲ್ಲಿದ್ದಳು; ಆದರೆ ಆಕೆಯು ತಕ್ಷಣವೇ ಬಿಡುಗಡೆ ಹೊಂದಿದಳು. ಕಣ್ಣೀರಿನ ವರ್ಷಗಳ ಪ್ರತಿಯಾಗಿ ಸಂತೋಷದ ಮತ್ತು ನಗುವಿನಿಂದ ಕೂಡಿದ ದಿನವಾಯಿತು.

    ನಮ್ಮ ಕರ್ತನ ಹುಡುಕಲು ಎಂತಹ ಉಧಾಹರಣೆ ಪ್ರಿಯ ತಾಯೇ! ಆತನು ನಿನ್ನ ಕಣ್ಣೀರನ್ನು ಸಹ ನೋಡಿದ್ದಾನೆ. ಮತ್ತು ನಿನ್ನ ಅವಶ್ಯಕತೆಯನ್ನು ಬಲ್ಲನು. ನಿನ್ನ ಮಗುವು ನಿನ್ನಿಂದ ದೂರ ಜೀವಿಸುತ್ತಿರಬಹುದು. ಆದರೆ ನೀನು ಆಕೆಯನ್ನು ನಮ್ಮ ಕರ್ತನ ಪಾದದ ಬಳಿಗೆ ತರಬಹುದು ಮತ್ತು ಆಕೆಯು ಬಿಡುಗಡೆ ಹೊಂದುವಳು. ನಿನ್ನ ಕಣ್ಣೀರನ್ನು ಒರಸಲು ಕರ್ತನು ಎಷ್ಟೆ ದೂರವಿದ್ದರೂ ಪ್ರಯಾಣಿಸಬಲ್ಲನು. ಮತ್ತು ನಿನ್ನ ಕಣ್ಣೀರನ್ನು ನಗುವಾಗಿ ಮಾರ್ಪಡಿಸಬಲ್ಲ. ನೀನು ಒಂದು ನಾಯಿಯಲ್ಲ, ದೇವರ ಮಗಳೆಂಬುದನ್ನು ಜ್ಞಾಪಿಸಿಕೋ. ನೀನು ಮಕ್ಕಳ ರೊಟ್ಟಿಯನ್ನು ತಿನ್ನಬಹುದು. ಅದರಿಂದ ಬೀಳುವ ಚೂರುಗಳಲ್ಲ. ಆದ್ದರಿಂದ ಕರ್ತನ ಬಳಿ ನಂಬಿಕೆಯಿಂದ ಹೋಗು. ಸೈತಾನನಿಂದ ವಂಚಿಸಲ್ಪಟ್ಟ ಹಾಗೂ ಹಿಡಿಯಲ್ಪಟ್ಟ ನಿನ್ನ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳಿಗಾಗಿ ನೀನು ಬಯಸಿದ್ದನ್ನು ಕೇಳು. ಕರ್ತನು ಅವರೊಬ್ಬೊಬ್ಬರನ್ನು ಬಿಡಿಸುವನು.

    ವ್ಯಭಿಚಾರದಲ್ಲಿ ಸಿಕ್ಕಿ ಬಿದ್ದ ಅಳುವ ಒಂದು ಸ್ತ್ರೀಯಸಾರಿಪ್ನುsರಿಸಾಯರು ಯೇಸುವಿನ ಬಳಿ ಕರೆತಂದರು. (ಯೋಹಾನ 8) ಯೆಹೂದ್ಯರ ನೇಮದ ಪ್ರಕಾರ ಆಕೆ ಕಲ್ಲೆಸೆದು ಕೊಲ್ಲಲ್ಪಡಬೇಕಾಗಿತ್ತು. ಆದ್ದರಿಂದ ಅವರು ಆಕೆಯನ್ನು ಗುರುಗಳ ಗುರುವಿನ ಬಳಿಗೆ ಆಕೆಯನ್ನು ತಂದು ಆತನ ಹಿಡಿಯಲು ನೋಡಿದರು. ಒಂದು ವೇಳೆ ಆತನು ಆಕೆಯನ್ನು ಬಿಡುಗಡೆ ಮಾಡಿದರೆ ಧರ್ಮಶಾಸ್ತ್ರವನ್ನು ರದ್ದು ಮಾಡಿದನೆಂದು ಆತನ ಮೇಲೆ ಆಪಾದನೆ ಹೊರೆಸುತ್ತಾರೆ. ಒಂದು ವೇಳೆ ಆಕೆಯನ್ನು ಕಲ್ಲೆಸೆದು ಕೊಲ್ಲಲು ಅಪ್ಪಣೆ ಕೊಟ್ಟರೆ ಆತನು ತನ್ನ ಕರುಣೆಯ ಬಗ್ಗೆ ಇರುವಂತ ಗೌರವವನ್ನು ಕಳೆದುಕೊಳ್ಳುತ್ತಾ. ಅದು ಗೆಲ್ಲಲಾಗದ ಒಂದು ಸಂಧರ್ಭವಾಗಿತ್ತು. ಅವರು ಶಿರಸ್ಸನ್ನು ಗೆಲ್ಲುವರು, ನೀನು ಬಾಲವನ್ನು ಕಳೆದುಕೊಳ್ಳುವೆ. ಯೇಸುವು ಈ ಪ್ರತಿಯೊಂದು ಸನ್ನಿವೇಶದಲ್ಲಿಯೂ ಜ್ಞಾನದಿಂದ ನಡೆದುಕೊಂಡನು. ದೇವರ ಮುರ್ಖತನವು ಮನುಷ್ಯರ ಜ್ಞಾನಕ್ಕಿಂತ ಜ್ಞಾನವುಳ್ಳದ್ದು. (1 ಕೊರಿಂಥ 1:25). ಯೇಸುವಿಗೆ ಆಕೆಯ ಮೇಲೆ ಕನಿಕರ ಹುಟ್ಟಿತು. ಆಕೆ ಜೀವಿಸುತ್ತಿರುವ ಜೀವಿತವನ್ನು ಆ ರೀತಿ ಜೀವಿಸುವಂತೆ ಮಾಡಿರುವದು ಯಾವುದೆಂಬುದು ಯೇಸುವಿಗೆ ಗೊತ್ತಿತ್ತು. ಅದು ಆಕೆಯ ಸ್ವತಂತ್ರದ ಆಯ್ಕೆಯಾಗಿರಲಿಲ್ಲ. ಯಾರೊ ಒಬ್ಬ ಗಂಡಸು ಆಕೆಗೆ ತಪ್ಪಾದ ಆಸೆ ತೋರಿಸಿ ಆಕರ್ಷಿಸಿರಬೇಕು. ಆನಂತರ ಆಕೆಯನ್ನು ತಳ್ಳಿಬಿಟ್ಟಿರಬಹುದು. ಅದಾದನಂತರ ಗಂಡಸರು ಆಕೆಯನ್ನು ಸತತವಾಗಿ ಉಪಯೋಗಿಸಿಕೊಂಡು ತಿರಸ್ಕರಿಸಿದ್ದಿರಬಹುದು. ಆಕೆ ಈ ಜೀವಿತವನ್ನು ಹಗೆ ಮಾಡುತ್ತಾಳೆ. ಆದರೆ ಈಗ ಹೇಗೆ ಆಕೆಯು ತನ್ನ ಜೀವನೋಪಾಯವನ್ನು ಸಂಪಾದಿಸಿಕೊಳ್ಳುವುದು? ಕಣ್ಣೀರನ್ನು ಸುರಿಸದೆ ಒಂದು ದಿನವು ಸಹ ಕಳೆಯಲಿಲ್ಲ. ಆದರೆ ಆಕೆಯನ್ನು ಯಾರು ಅರ್ಥಮಾಡಿಕೊಳ್ಳುವರು? ಯಾರು ಆಕೆಗೆ ಸಹಾಯ ಮಾಡುವರು? ಹೌದು ಯೇಸು ಎರಡನ್ನು ಸಹ ಮಾಡಬಲ್ಲನು. ಆಕೆಯನ್ನು ಅರ್ಥಮಾಡಿಕೊಂಡು ಆಕೆಗೆ ಸಹಾಯ ಮಾಡುವನು.

    ಇಂತಹ ಜೀವಿತದಿಂದ ಅನೇಕ ಸ್ತ್ರೀಯರು ಯೇಸುವಿನ ಶೂರ ಶಿಷ್ಯರಿಂದ ಕಾಪಾಡಲ್ಪಟ್ಟಿರುವದು ನನಗೆ ಗೊತ್ತು. ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ದವಾಗಿ ನಿಲ್ಲುವ ಅಪಾಯಕ್ಕೆ ತಮ್ಮನ್ನು ಗುರಿಮಾಡಿಕೊಂಡಿರುವರು. ಇಂತಹ ವೇಶ್ಯಾಗೃಹಗಳಲ್ಲಿ ಜೀವಿಸುತ್ತಿರುವ ಅನೇಕ ಸ್ತ್ರೀಯರು, ಸಾಧಾರಣವಾಗಿ ಜೀವಿಸುವ ಜೀವಿತದ ನಿರೀಕ್ಷೆಯನ್ನೇ ಕಳೆದುಕೊಂಡಿದ್ದಾರೆ. ಭೋಗ ನಡೆಸುವ ವ್ಯಾಪಾರಸ್ಥರು ಅವರಲ್ಲಿ ಕೆಲವರನ್ನು ಮಕ್ಕಳೆಂಬುದಾಗಿ ಅಪಹರಿಸುತ್ತಾರೆ. ಅವರ ತಂದೆ-ತಾಯಿ ಯಾರೆಂಬುದು ಮತ್ತು ಅವರು ಎಲ್ಲಿಂದ ಬಂದವರು ಎಂದು ಸಹ ಅವರಿಗೆ ಗೊತ್ತಿಲ್ಲ. ಇಂತಹ ಸ್ತ್ರೀಯರು ಮಾದಕ ಔಷದಗಳಿಗೆ ವಶವಾಗಿದ್ದಾರೆ. ಮತ್ತು ಅವರಿಗಿರುವ ಮಾದಕ ವಸ್ತುಗಳ ಇಚ್ಛೆಯನ್ನು ತೃಪ್ತಿಗೊಳಿಸಲು ಅವರಿಗೆ ಹಣ ಬೇಕು; ಅದನ್ನು ಈ ವೇಶ್ಯಾವಾಟಿಕೆಯಿಂದ ಪಡೆದುಕೊಳ್ಳುತ್ತಾರೆ. ಅನೇಕ ಸ್ತ್ರೀಯರಿಗೆ ಏಡ್ಸ್ ರೋಗದ ಸೋಂಕು ತಗಲಿದೆ. ಮತ್ತು ಅವರು ನಿಧಾನವಾಗಿ ಸಾಯುತ್ತಿದ್ದಾರೆ. ಇಂತಹ ಅಳುವ ಸ್ತ್ರೀಯರಿಗಾಗಿ ಯೇಸುವು ಚಿಂತಿಸುತ್ತಾ. ಮತ್ತು ಅವರನ್ನು ಬಿಡುಗಡೆ ಮಾಡಬೇಕೆಂದು ಆತನಿಗೆ ಆಶೆ. ಈ ದಿನವು ಸಹ ಇಂತಹ ಸೇವೆಗೆ ನಿನ್ನನ್ನು ಮತ್ತು ನನ್ನು ಉಪಯೋಗಿಸಲು ಆತನು ಇಷ್ಟಪಡುತ್ತಾನೆ.

    ಯೋಹಾನ 8 ರಲ್ಲಿ ಹೇಳಿರುವ ಸ್ತ್ರೀಯು ತಾನು ಮತ್ತೊಂದು ದಿನದ ವರೆಗೂ ಜೀವಿಸುವೆನೆಂಬುದಾಗಿ ಎಂದಿಗೂ ಯೋಚಿಸಿರಲಿಲ್ಲ. ಆಕೆ ಅಲ್ಲಿ ದೂಷಿಸುವವರ ಮುಂದೆ ನಿಂತಿರುವಾಗಲೂ ಸಹ ಅಳುತ್ತಾ ಯಾವ ಗಳಿಗೆಯಲ್ಲಿಯಾದರೂ ತನ್ನ ಮೇಲೆ ಮೊದಲನೇಯ ಕಲ್ಲು ಬೀಳಬಹುದು ಎಂಬುದಾಗಿ ಎದುರು ನೋಡುತ್ತಿರಬೇಕು. ಯೇಸುವಿನ ಮುಖದಲ್ಲಿ ಕರುಣೆಯನ್ನು ಕಂಡಳು. ಮತ್ತು ಆಕೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬುದಾಗಿ ಆಕೆಗೆ ಬೇಡುವ ಕಣ್ಣುಗಳು ನಿರೀಕ್ಷಿಸಿದವು. ಹಾಗೆಯೇ ಆತನು ಅರ್ಥಮಾಡಿಕೊಂಡನು. ಆಕೆಯನ್ನು ಕ್ಷಮಿಸಿದನು ಮತ್ತು ಆಕೆಯ ಜೀವಿತವನ್ನು ಶಿಷ್ಯತ್ವದ ಹೊಸ ಜೀವಿತವನ್ನಾಗಿ ಮಾರ್ಪಡಿಸಿದನು. ಮತ್ತು ಸಮಾಜದಲ್ಲಿ ಉಪಯುಕ್ತವಾಗ ಮಾಡಿದನು. ನೀನು ಎಷ್ಟು ಆಳವಾಗಿ ಬಿದ್ದಿದ್ದರೂ ಸಹ ಪರವಾಗಿಲ್ಲ. ಆತನು ಅದನ್ನೆ ನಿನಗೂ ಸಹ ಮಾಡಲು ಸಾಧ್ಯ. ಈ ದಿನ ನಿನಗಾಗಿ ಆತನ ಮಾತುಗಳು ನಾನು ನಿನ್ನನ್ನು ಖಂಡಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪ ಮಾಡಬೇಡ ಎಂಬುದೆ.

    ಹಳೆಯ ಒಡಂಬಡಿಕೆಯಲ್ಲಿ ಸಹ ಮತ್ತೊಬ್ಬ ವ್ಯಬಿಚಾರಿಣಿಯು ದೇವರಿಂದ ಕರುಣೆಯನ್ನು ಹೊಂದಿದ್ದನ್ನು ನಾವು ಓದುತ್ತೇವೆ. ಆಕೆಯ ಹೆಸರು ರಾಹಾಬಳು. ಆಕೆಯು ತನ್ನ ಮಕ್ಕಳೊಂದಿಗೆ ಯೆರಿಕೋ ಪಟ್ಟಣದಲ್ಲಿ ವಾಸವಾಗಿದ್ದಳು. ಆಕೆಯ ನೈತಿಕ ನಡತೆಯು ತಪ್ಪಿಹೋಗಿದ್ದರೂ ಸಹ ಆಕೆಗೆ ದೇವರಲ್ಲಿ ನಂಬಿಕೆ ಇತ್ತು. ತನ್ನ ಹಳೆಯ ಜೀವಿತದ ಕುರಿತಾಗಿ ಆಕೆ ಬಹಳವಾಗಿ ಅತ್ತಿರಬಹುದು. ಮತ್ತು ಆಕೆಯ ಮಕ್ಕಳ ಸಲುವಾಗಿ ಈಗ ಉತ್ತಮ ಸ್ತ್ರೀಯಾಗಿ ಜೀವಿಸಬೇಕೆಂಬ ಆಶೆ. ದೇವರು ಆಕೆಯ ಆಶೆಯನ್ನು ಕಂಡನು. ಆದ್ದರಿಂದ ಇಸ್ರಾಯೇಲ್ಯ ಗೂಡಾಚಾರರ ಹಾದಿಯನ್ನು ಆಕೆಯ ಮನೆಯ ಕಡೆಗೆ ನಡೆಸಿದನು. ಆಕೆ ಅವರಿಗೆ ಸಹಾಯ ಮಾಡಿದಳು. ಹೀಗೆ ಯೆರಿಕೋವಿಗೆ ಎಲ್ಲರೂ ನಾಶವಾದರೂ ಸಹ ಅವಳ ಜೀವಿತ ರಕ್ಷಿಸಲ್ಪಟ್ಟಿತು. ಆಕೆ ಸಲಮೋನಂಬ ಇಸ್ರಾಯೇಲ್ಯನನ್ನು ಸಹ ಮದುವೆಯಾದಳು. ಯೇಸುವಿನ ಕುಟುಂಬ ವೃಕ್ಷದ ಒಂದು ಭಾಗವಾದಳು. ಆಕೆಯ ಹೆಸರು ಈಗ ಇಬ್ರಿಯ 11ರಲ್ಲಿ ಇರುವ ಅಬ್ರಹಾಮ ಮೋಶೆ ಮತ್ತು ಯೆಹೋಶುವನ ಜೊತೆಯಲ್ಲಿದೆ!! ಇದು ಆಶ್ಚರ್ಯಕರವಲ್ಲವೇ? ಆ ಸಂತತಿಯವರಲ್ಲಿ ಯೆಹೋಶುವ ಮತ್ತು ರಾಹಾಬಳು ಇವರಿಬ್ಬರ ಹೆಸರು ಮಾತ್ರ ಇಬ್ರಿಯ 11 ರಲ್ಲಿ ಕಾಣುತ್ತೇವೆ. ದೇವರ ಕಾರ್ಯಗಳು ನಿಜವಾಗಲೂ ಅದ್ಭುತ. ಪ್ರೀಯ ಚಂಚಲ ಸಹೋದರಿಯೇ, ದೇವರು ನಿನಗೂ ಸಹ ಇದನ್ನೇ ಮಾಡಲು ಸಾಧ್ಯ.

    ನಾಯಿನ ಎಂಬ ಪಟ್ಟಣದಲ್ಲಿ ಅಳುತ್ತಿದ್ದ ಒಬ್ಬ ವಿದವೆಯನ್ನುಕಾಣುತ್ತೇವೆ. ಆಕೆಯ ಮುದಿ ಪ್ರಾಯದಲ್ಲಿ ಆಕೆಯನ್ನು ನೋಡಿಕೊಳ್ಳುತ್ತಿದ್ದ ಯೌವನಸ್ಥನಾದ ಒಬ್ಬನೇ ಮಗನು ಇದ್ದಕ್ಕಿದ್ದ ಹಾಗೆ ಸತ್ತನು. ಆಕೆ ತಡೆಯಲಾರದಷ್ಟು ಅತ್ತಳು. ಆ ಶವಪೆಟ್ಟಿಗೆಯಲ್ಲಿರುವ ತನ್ನ ಪ್ರಿಯ ಮಗನ ಮುಖವನ್ನು ನೋಡಿಕೊಂಡು ಇರಲಿಕ್ಕಾಗಿ ಅವನ ಅಂತ್ಯ ಸಂಸ್ಕಾರವನ್ನು ಆದಷ್ಟು ತಡಮಾಡಲು ಪ್ರಯತ್ನಿಸುತ್ತಿದ್ದಳು. ಶೋಕಿಸುವವರು ಶವಪೆಟ್ಟಿಗೆಯನ್ನು ತನ್ನ ಮನೆಯಿಂದ ತೆಗೆದುಕೊಂಡುಹೋಗಲು, ಇಷ್ಟವಿಲ್ಲದೆಯೇ ಬಿಟ್ಟುಕೊಟ್ಟಳು. ಮತ್ತು ಕಣ್ಣೀರು ಸುರಿಸುತ್ತಾ ಅವರನ್ನು ಹಿಂಬಾಲಿಸಿದಳು. ಅಂತ್ಯ ಸಂಸ್ಕಾರದ ನಂತರ ಆಕೆ ಒಬ್ಬಂಟಿಗಳಾಗಿ ಬೀಕರ ರಾತ್ರಿಯನ್ನು ತನ್ನ ಮನೆಯಲ್ಲಿ ಕಳೆಯುವದನ್ನು ಯೋಚಿಸುತ್ತಿದ್ದಳು. ತನ್ನ ಪರಲೋಕದ ತಂದೆ ಆಕೆಗಾಗಿ ಇಟ್ಟಿರುವ ಸಂತೋಷದ ಬಗ್ಗೆ ಆಕೆಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಅಂತಹ ಸಂದರ್ಭದಲ್ಲಿ ಯೇಸುವು ನಾಯಿನ ಪಟ್ಟಣವನ್ನು ಹಾದು, ಪ್ರಯಾಣಿಸಲು ಯೋಚಿಸಿದ. ಆತನು ಎಂದಿಗೂ ತಡಮಾಡಲಿಲ್ಲ. ಆತನು ಆ ಶವ ಮೆರವಣಿಗೆಯನ್ನು ನಿಲ್ಲಿಸಿ ಆ ಶವ ಪೆಟ್ಟಿಗೆಯ ಮುಚ್ಚಳವನ್ನು ತೆರೆದು ಆ ಯೌವನಸ್ಥ ಮನುಷ್ಯನ ಮರಣದಿಂದ ಎಬ್ಬಿಸಿ ತನ್ನ ತಾಯಿಗೆ ಅವನ ಪುನಃ ಹಿಂದಕ್ಕೆ ಕೊಟ್ಟನು. ಪ್ರಿಯ ಅಸಹಾಯಕ ವಿಧವೆಯಾದ ಸಹೋದರಿಯೇ ದೇವರು ನಿನಗಾಗಿ ಚಿಂತಿಸುತ್ತಾನೆ. ಮತ್ತು ನಿನ್ನ ದುಃಖದ ಸಮಯಗಳಲ್ಲಿ ನಿನ್ನ ಬಳಿಗೆ ಬರುತ್ತಾನೆ.

    ಎಲ್ಲಾ ವಿಧವೆಯರಿಗೆ ದೇವರ ಹೃದಯದಲ್ಲಿ ಒಂದು ಪ್ರಾಮುಖ್ಯ ಸ್ಥಾನವಿದೆ. ಈ ಭೂಲೋಕದಲ್ಲಿ ಸಾಮಾನ್ಯವಾಗಿ ಅವರಿಗಾಗಿ ಚಿಂತಿಸುವವರು ಯಾರೂ ಇರುವುದಿಲ್ಲ. ಅವರು ಅಸಹಾಯಕರು ಮತ್ತು ಅನೇಕರು ಅವರಿಂದ ದುಡಿಸಿಕೊಳ್ಳುತ್ತಾರೆ. ಆದರೆ ದೇವರು ವಿಧವೆಯರಿಗೂ ಮತ್ತು ತಂದೆ ಇಲ್ಲದವರಿಗೂ ದೇವರಾಗಿದ್ದಾ. ಮತ್ತು ಆತನು ನಿಮ್ಮ ವಿಧವೆಯರು ನಲ್ಲಿ ಭರವಸವಿಡಲಿ. ಎಂಬದಾಗಿ (ಯೆರೆ 49:11) ರಲ್ಲಿ ಹೇಳುತ್ತಾ. ಆದ್ದರಿಂದ ಪ್ರಿಯ ವಿಧವೆಯಾದ ಸಹೋದರಿಯೇ, ನಿನ್ನ ಪರಲೋಕದ ತಂದೆಯು ಮತ್ತು ನಿನ್ನ ಆತ್ಮಿಕ ಗಂಡನಾದಾತನ ಬಳಿಗೆ ಧಾರಾಳವಾಗಿ ಹೋಗು.

    ಹಳೆ ಒಡಂಬಡಿಕೆಯ (2ಅರಸು 4) ರಲ್ಲಿ ಸಹ ನಾವು ಒಬ್ಬ ಸ್ತ್ರೀಯ ಮಗನು ಸತ್ತದ್ದನ್ನು ಓದುತ್ತೇವೆ. ಆಕೆಯು ದೇವರ ಪ್ರವಾದಿಯಾದ ಎಲೀಷನ ಹುಡುಕಿಕೊಂಡು ಹೋಗುತ್ತಾಳೆ. ಯಾಕಂದರೆ ಆತನೊಬ್ಬನೇ ತನಗೆ ಸಹಾಯಿಸಲು ಸಾಧ್ಯ ಎಂದು ಆಕೆ ತಿಳಿದಿದ್ದಳು. ಆ ದಿನ ಆಕೆಯನ್ನು ಕಂಡ ಯಾರೂ ಸಹ ಆಕೆ ಪ್ರಯಾಣಮಾಡುತ್ತಿರುವಾಗ ತನ್ನ ಹೃದಯದಲ್ಲಿ ಅಳುತ್ತಿದ್ದಾಳೆಂಬದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಮತ್ತು ಆಕೆ ಎಲೀಷನ ಕಂಡಾಗ ನಂಬಿಕೆಯ ಬಾಷೆಯಲ್ಲಿ ಮಾತನಾಡಿ (2 ಅರಸು 4:26) ನನ್ನ ಮಗು ಚೆನ್ನಾಗಿದೆ ಎಂಬದಾಗಿ ತನ್ನ ಸತ್ತ ಮಗುವಿನ ಬಗ್ಗೆ ಹೇಳುತ್ತಾಳೆ. ತನ್ನ ಸತ್ತ ಮಗನ ಹಿಂದಕ್ಕೆ ಆಕೆ ಹೊಂದಿದಳು. ಅದು ಆಶ್ಚರ್ಯವೇನೂ ಅಲ್ಲ. ಅಂಥಹ ನಂಬಿಕೆಯನ್ನು ದೇವರು ಗೌರವಿಸುತ್ತಾನೆ.

    ಲೂಕ 13 ರಲ್ಲಿ ಬಲಹೀನಳಾದ ಸ್ತ್ರೀಯ ಬಗ್ಗೆ ಓದುತ್ತೇವೆ. ಈಕೆಯು ಸುಮಾರು ಹದಿನೆಂಟು ವರ್ಷಗಳಿಂದ ಒಂದು ವಿಚಿತ್ರವಾದ ಕಾಯಿಲೆಯಿಂದ ನರಳುತ್ತಿದ್ದಳು. ಅದು ಆಕೆಯ ದೇಹವನ್ನು ಕೆಳಕ್ಕೆ ಬಗ್ಗಿಸಿತ್ತು. ಆದ್ದರಿಂದ ಆಕೆ ನೆಟ್ಟಗೆ ನಡೆಯಲು ಸಾಧ್ಯವಿರಲಿಲ್ಲ. ಆದರೆ ಆಕೆ ತನ್ನ ನೋವನ್ನು ಮತ್ತು ಅಶಕ್ತತೆಯನ್ನು ಮರೆತು ಪ್ರತಿ ವಾರ ಕೂಟಗಳಿಗೆ ಹೋಗುತ್ತಿದ್ದಳು. ಆ ಸಬ್ಬತ್ತು ದಿನದಲ್ಲಿ ಕೂಟಕ್ಕೆ ಹೋಗಲು ಆಕೆ ತಪ್ಪದೇ ಇದ್ದದ್ದು ಒಳ್ಳೇಯದಾಗಿತ್ತು. ಯಾಕಂದರೆ ದೇವರು ಆಕೆಯ ಸ್ವಸ್ಥತೆಯ ಯೋಜನೆ ಮಾಡಿದ್ದನು. ಆಕೆಯು ಅನೇಕ ವರ್ಷಗಳಿಂದ ಸೈತಾನನಿಂದ ಬಂಧಿತಳಾಗಿದ್ದಳು. ಆಕೆಯು ಹೇಳಲಾರದ ಅನಿರೀಕ್ಷೆಯ ಸ್ಥಿತಿಯು ತಾನು ಪ್ರಾಣಿಯ ಹಾಗೆ ನಡೆಯುವಂತೆ ಮಾಡಿತ್ತು. ತನಗೆ ಬಲಿಯಾದವರನ್ನು ಹೀಗೆಯೇ ಸೈತಾನನು ಮಾಡುವನು (ಲೂಕ 13 :11- 13 ). ಆ ಎಲ್ಲಾ ಹದಿನೆಂಟು ವರ್ಷಗಳು ಆಕೆ ರಸ್ತೆಯಲ್ಲಿ ನಡೆಯುವಾಗ ಮಕ್ಕಳು ತಮಾಷೆ ಮಾಡುತ್ತಾ ಆಡುತ್ತಿದ್ದ ಚುಚ್ಚು ಮಾತುಗಳಿಂದ ಆಕೆ ಅತ್ತಿರಬಹುದು. ಆಕೆಗೆ ಮೇಲೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಕೆಯ ಹೃದಯ, ತನ್ನ ದೇವರು ಬಿಡುಗಡೆ ಮಾಡಲೆಂದು ಕಾಯುತ್ತಿತ್ತು. ಆಕೆ ಇತರರು ಕರುಣೆ ತೋರಿಸುವ ಒಂದು ಸಾಧನವಾಗಿದ್ದಳು. ಆದರೆ ಇದು ಸಹ ಅಳುವ ಹಾಗೆ ಮಾಡುತ್ತಿತ್ತು. ಆಕೆಯ ಮಡಿಚಲ್ಪಟ್ಟ ಮತ್ತು ಸುಕ್ಕು ಗಟ್ಟಿದ ಬಾಹ್ಯ ಚಹರೆಯನ್ನು ನೋಡುವಾಗ ಕೆಲವು ಮಕ್ಕಳು ಹೆದರಿರಬೇಕು. ಸೈತಾನನು ಆಕೆಯ ಮೇಲೆ ಹಾಕಿರುವ ಕೆಟ್ಟ ಶಾಪದಿಂದ ಬಿಡುಗಡೆಗೊಳಿಸುವಂತೆ ಅನೇಕ ರಾತ್ರಿ ಆಕೆ ದೇವರ ಬಳಿ ಗೋಳಾಡಿರಬಹುದು. ಆಗ ಯೇಸುವು ಬಂದು ಆಕೆಯನ್ನು ಬಿಡುಗಡೆ ಮಾಡಿದನು. ಯೇಸುವು ಆಕೆಯನ್ನು ದೇವಾಲಯದಲ್ಲಿ ಕಂಡು ಆಕೆಯನ್ನು ಮುಂದೆ ಕರೆದು ಸ್ತ್ರೀಯೇ ನೀನು ಬಿಡುಗಡೆ ಹೊಂದಿರುವೆ ಎಂಬ ಅದ್ಭುತವಾದ ಬಿಡುಗಡೆಯ ಮಾತುಗಳನ್ನು ಆಡಿದನು. ಈಗ ನೇರವಾಗಿ ಪರಲೋಕವನ್ನು ನೋಡಿ ತನ್ನನ್ನು ಬಿಡುಗಡೆ ಮಾಡಿದ ತನ್ನ ತಂದೆಯನ್ನು ಕೊಂಡಾಡಲು ಸಾಧ್ಯವಾಯಿತು.

    ಈ ಇಪ್ಪತ್ತನೆಯ ಶತಮಾನದಲ್ಲಿ ಅದೇ ಪದಗಳು ನಿನಗಾಗಿ ಕೆಳಗಿಳಿದು ಬಂದಿದೆ. ಸ್ತ್ರೀಯೇ ನೀನು ಬಿಡುಗಡೆ ಹೊಂದಿರುವೆ(ಲೂಕ13:12))./em>

    ಪ್ರಿಯ ಸಹೋದರಿಯೇ, ಇದನ್ನು ನಿನಗೋಸ್ಕರ ಈ ದಿನ ಕರ್ತನಿಂದ ಬಂದ ವೈಯಕ್ತಿಕ ಪದವನ್ನಾಗಿ ತೆಗೆದು ಕೊಳ್ಳಲಾರೆಯಾ? ಈಗ ನೀನು ಪ್ರತಿ ಬಂಧನದಿಂದ, ಪ್ರತಿ ಪಾಪದಿಂದ, ಮನಗುಂದುವಿಕೆಯಿಂದ, ಕೆಟ್ಟಮನೋಭಾವನೆಯಿಂದ ಮತ್ತು ಸ್ತ್ರೀಯರನ್ನು ತೊಂದರೆ ಪಡಿಸಲು ಸೈತಾನನು ಅನೇಕ ಯುಗಗಳಿಂದ ಕಂಡು ಹಿಡಿದಿರುವ ಎಲ್ಲಾ ಕೆಟ್ಟ ಸಂಗತಿಗಳಿಂದ ದೇವರನ್ನು ಮಹಿಮೆ ಪಡಿಸಲು ಈಗ ಬಿಡುಗಡೆ ಹೊಂದಿರುವೆ. ನೀನು ಎಲ್ಲಾ ಸಂಪ್ರದಾಯದ ಕಟ್ಟಿನಿಂದ ಬಿಡುಗಡೆ ಹೊಂದಿರುವೆ. ನಿನ್ನ ಕೆಟ್ಟ ಸ್ವಭಾವದಿಂದ ಬಿಡುಗಡೆ ಹೊಂದಿರುವೆ. ನಿನ್ನ ಹತೋಟಿಯಲ್ಲಿರದ ನಾಲಿಗೆಯಿಂದ, ನಿನ್ನ ಕಹಿಭಾವನೆಯಿಂದ, ನಿನ್ನ ಕ್ಷಮಿಸಲಾರದ ಮನೋಭಾವನೆಯಿಂದ, ನಿನ್ನ ಸಿಟ್ಟಿನ ಸ್ವಭಾವದಿಂದ ನಿನ್ನನ್ನು ಅನೇಕ ಕಾಲದಿಂದ ಬಂಧಿಸಿದ್ದ ಮತ್ತು ಪೀಡಿಸುತ್ತಿದ್ದ ಸೈತಾನ ಬಲದಿಂದಲೂ ಬಿಡುಗಡೆ ಹೊಂದಿರುವೆ. ಈಗ ನೀನು ನೇರವಾಗಿ ದೇವರನ್ನು ಮಹಿಮೆಪಡಿಸು.

    ಆತನ ಸೇವಿಸು. ಇನ್ನು ನೀನು ಕೀಳಾಗಿ ಸ್ವಪ್ರತಿಷ್ಠೆಯಿಂದ ನಡೆಯುವ ಅವಶ್ಯಕತೆ ಇರುವುದಿಲ್ಲ. ಇತರರು ನಿನ್ನನ್ನು ಹೀನೈಸಿ ನಿನ್ನ ಶ್ರೇಷ್ಠತೆಯನ್ನು ನೋಡದಿದ್ದರೂ ಸಹ ನೀನು ದೇವರಿಗೆ ಶ್ರೇಷ್ಠಳು. ಇಂದಿನಿಂದ ದೇವರ ಹಸ್ತವು ನಿನ್ನ ಜೀವಿತದ ಮೇಲೆ ಇದೆ.

    ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೊಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು (1 ಯೋಹಾನ 3:8)).

    ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವುದು. (ಯೋಹಾನ 8:36)) ಯೇಸುವು ಆ ಸ್ತ್ರೀಯನ್ನು ಅಬ್ರಾಹಾಮನ ಪುತ್ರಿ ಎಂಬದಾಗಿ ಕರೆದನು. 1 ಪೇತ್ರ 3:6ರ ಪ್ರಕಾರ ನಾವು ಸಹ ಅಬ್ರಹಾಮನು ಪುತ್ರಿಯರು, ಸಾರಳ ಪುತ್ರಿಯರು ಮತ್ತು ಈಕೆ ನಂಬಿಕೆಯ ಸ್ತ್ರೀ, ನಮಗೆ ಮಾದರಿಯಾಗಿ ಕೊಡಲ್ಪಟ್ಟವಳು. ಆಕೆಗೆ ಅದ್ಭುತವಾಗಿ ವಾಗ್ದಾನ ಮಾಡಲ್ಪಟ್ಟ ಮಗುವನ್ನು ಆಕೆ ಪಡೆದುಕೊಂಡಳು. ಮದುವೆಯಾಗಿ ಅನೇಕ ವರ್ಷಗಳು ಬಂಜೆಯಾಗಿರುವಾಗ ಆಕೆ ಸಹ ಬಹಳವಾಗಿ ಅತ್ತಿರಬೇಕು. ಆಕೆಗೆ ವಾಗ್ದಾನ ಮಾಡಲ್ಪಟ್ಟ ಮಗುವಿಗಾಗಿ ಆಕೆ ಕಾದು ಕಾದು ಮತ್ತು ಆ ನಿರೀಕ್ಷೆಯನ್ನು ಕಳೆದುಕೊಳ್ಳಲು ಅನೇಕ ಸಾರಿ ಶೋಧಿಸಲ್ಪಟ್ಟಿರಬೇಕು. ಆ ಕಾಲದಲ್ಲಿ ಬಂಜೆಯಾಗಿರುವುದು ನಾಚಿಕೆಗೇಡು. (ಈಗ ಭಾರತದ ಅನೇಕ ಭಾಗಗಳಲ್ಲಿರುವಂತೆ) ಅನೇಕ ಗರ್ವಿಷ್ಠ ತಾಯಂದಿರು ಸಾರಳನ್ನು ಹಾಸ್ಯಮಾಡಿರಬೇಕು. ಆಕೆಯು ಅವರ ಸೂಕ್ಮ ಸಂಭಾಷಣೆಯನ್ನು ಮತ್ತು ಟೀಕೆಗಳನ್ನು ಎದುರಿಸಬೇಕಾಗಿತ್ತು. ಆಕೆಯು ತನ್ನ ಗುಡಾರದ ಒಳಗೆ ಹೋಗಿ ತನ್ನ ದೇವರ ಮುಂದೆ ಅಳುತ್ತಿದ್ದಳು. ಮತ್ತು ದೇವರು ಅವಳ ಕಣ್ಣೀರನ್ನು ನೋಡಿ ಅವಳಿಗೆ ಉತ್ತರಿಸಿದನು. ಆದ್ದರಿಂದ ಕಣ್ಣೀರಿನಿಂದ ಪ್ರಾರ್ಥಿಸುವದನ್ನು ಬಿಟ್ಟುಕೊಡಬೇಡಿರಿ. ಎಂದಿಗೂ ನಂಬಿಕೆಯನ್ನು ಬಿಡಬೇಡಿರಿ. ಓ ನಂಬಿಕೆಯ ಸ್ತ್ರೀಯೇ, ದೇವರು ಬೇಗನೆ ನಿನಗೆ ಉತ್ತರಿಸುವನು.

    ಮುಕ್ತಾಯದಲ್ಲಿ, ಅಳುತ್ತಿದ್ದ ಆ ಪಾಪಿಯಾದ ಹೆಂಗಸಿಸುಂದರವಾದ ಕಥೆಯಿಂದ ಮುಗಿಸುವುದು ಉತ್ತಮ. ಆಕೆ ಬೆಲೆ ಬಾಳುವ ಅಚ್ಚ ಜಟ ಮಾಂಸಿ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ ಮತ್ತು ಧೂಳಿನಿಂದ ಕೂಡಿದ್ದ ಆತನ ಪಾದಗಳನ್ನು ತನ್ನ ಕಣ್ಣೀರಿನಿಂದ ಒರಸಿದಳು. (ಆ ದಣಿದ ಪಾದಗಳು ಪಾಲಸ್ತಿನಿನ ಬೀದಿಗಳಲ್ಲಿ ನಿನಗಾಗಿ ಮತ್ತು ನಗಾಗಿ ಸಹ ನಡೆಯಿತು) ಯೇಸುವು ಆಕೆಯ ಕಣ್ಣೀರನ್ನು, ಆಕೆಯ ಪಶ್ಚಾತ್ತಾಪವನ್ನು, ಪಾಪದ ಜೀವಿತವನ್ನು ತ್ಯಜಿಸಿ ದೇವರಿಂದ ಅಂಗೀಕರಿಸಲ್ಪಡಬೇಕೆಂಬ ಆಕೆಯ ಬಯಕೆಯನ್ನು ಆತನು ಕಂಡನು. ಆಕೆಯ ಕಣ್ಣೀರಿನ ಹಿಂದಿರುವ ಕಾರಣಗಳನ್ನು ಸಹ ಆತನು ಕಂಡನು. ಊಟದ ಪಂಕ್ತಿಯಲ್ಲಿದ್ದ ಆ ಧಾರ್ಮಿಕ ನಾಯಕರು ಆಕೆಯನ್ನು ಪಾಪಿಯನ್ನಾಗಿ ಮಾತ್ರ ಕಂಡರು. ಅವರು ಆಕೆಯ ಹೊರಗಡೆಯನ್ನು ಮಾತ್ರ ನೋಡಿದ್ದರು. ಯೇಸುವು ಆಕೆಯ ಹೃದಯದಲ್ಲಿರುವುದನ್ನು ಕಂಡನು. ಆಕೆಗೆ ಬಹಳವಾಗಿ ಕ್ಷಮಿಸಲ್ಪಟ್ಟಿತ್ತು. ಆದ್ದರಿಂದ ಆಕೆ ಬಹಳವಾಗಿ ಪ್ರೀತಿಸಿದಳು. ಆ ಸುಗಂಧ ತೈಲವು (ಆಕೆಯ ಜೀವಿತಕ್ಕಾಗಿ ಕೊಟ್ಟಿದ್ದ ಹಣದಿಂದ ಕೊಂಡಿರಬಹುದು) ಆಕೆಯ ಪ್ರೀತಿಯ ಕೊಡುಗೆಯಾಗಿತ್ತು. ಆ ಸುಗಂಧ ತೈಲವನ್ನು ಆ ದಿನ ಆಕೆ ಆ ಮನೆಯಲ್ಲಿ ಮಾತ್ರವಲ್ಲ, ಆದರೆ ಆಕೆಯ ಕಥೆಯಿಂದ ಈ ಇಪ್ಪತ್ತನೆಯ ಶತಮಾನದಲ್ಲಿರುವ ಅನೇಕ ನಮ್ಮಂತ ಸ್ತ್ರೀಯರ ಹೃದಯಗಳಲ್ಲಿ ಸಹ ಹರಡಿದ್ದಾಳೆ.

    ಯೇಸುವು ಆಕೆಗೆ ಕ್ಷಮಾಪಣೆ, ರಕ್ಷಣೆ ಮತ್ತು ಶಾಂತಿಯನ್ನು ಕೊಟ್ಟನು. ಆನಂತರ ಆತನು ಅಲ್ಲಿ ಊಟಕ್ಕೆ ಬಂದಿದ್ದ ಅತಿಥಿಗಳಿಗೆ, ಸಾಲಕೊಡುವವನು ಇಬ್ಬರು ಸಾಲಗಾರರನ್ನು ಕ್ಷಮಿಸಿದ್ದು , ಅಂದರೆ ಒಬ್ಬನು ಸ್ವಲ್ಪ ಸಾಲ ಕೊಡಬೇಕಾದವನು ಮತ್ತು ಇನ್ನೊಬ್ಬನು ಬಹಳ ಸಾಲವನ್ನು ಕೊಡಬೇಕಾದವನ ಕುರಿತಾಗಿ ಕಥೆಯನ್ನು ಹೇಳಿದನು. ಈ ಇಬ್ಬರಲ್ಲಿ ಯಾರು ಆ ಸಾಹುಕಾರನ ಬಹಳವಾಗಿ ಪ್ರೀತಿಸುತ್ತಾನೆ? ಎಂಬುದಾಗಿ ಯೇಸುವು ಕೇಳಿದನು. ಆನಂತರ ಆ ಪಾಪಿಯಾದ ಸ್ತ್ರೀಯ ಬಳಿಗೆ ಬೆರಳನ್ನು ತೋರಿಸುತ್ತಾ ಈಕೆಯು ಇಲ್ಲಿರುವವರಿಗಿಂತ ಹೆಚ್ಚಾಗಿ ನನ್ನು ಪ್ರೀತಿಸಿದ್ದಾಳೆ. ಯಾಕಂದರೆ "ಆಕೆಗೆ ಬಹಳವಾಗಿ ಕ್ಷಮಿಸಲ್ಪಟ್ಟಿದೆ" ಎಂದು ಹೇಳಿದನು.

    ದೇವರ ರಾಜ್ಯದ ಬಗ್ಗೆ ಅನೇಕ ಅದ್ಬುತವಾದ ಸತ್ಯಗಳನ್ನು ಇತರರಿಗೆ ತಿಳಿಸಲು, ಬಾಧೆಪಡುತ್ತಿದ್ದ ಪಾಪಿಯಾದ ಸ್ತ್ರೀಯನ್ನು ಯೇಸು ಉಪಯೋಗಿಸಿಕೊಂಡನು. ಈಗ ನಮ್ಮ ಭಾರತೀಯ ಸಂಸೃತಿಯಲ್ಲಿರುವ ಸ್ತ್ರೀಯರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು,, ನಮ್ಮನ್ನು ಮೇಲಕ್ಕೆ ಎತ್ತಿ ನಿರೀಕ್ಷೆಯನ್ನು ಕೊಟ್ಟು , ದೇವರ ದೃಷ್ಟಿಯಲ್ಲಿ ನಮಗಿರುವ ಪ್ರಚಂಡ ಬೆಲೆಯ ತಿಳುವಳಿಕೆಯನ್ನು ಕೊಡಲು ಆತನು ಬಂದನು. ಆತನು ಭೂಮಿಯ ಮೇಲೆ ಇರುವಾಗ ಆತನ ಬಳಿಗೆ ಅವಶ್ಯಕತೆಯಿಂದ ಬಂದ ಎಲ್ಲಾ ಸ್ತ್ರೀಯರನ್ನು ಆಶೀರ್ವದಿಸಿದನು. ಮತ್ತು ಈ ದಿನವು ಸಹ ಆತನು ಏಕರೀತಿಯಾಗಿದ್ದಾನೆ.

    ಪ್ರೀಯ ಸಹ ಸ್ತ್ರೀಯೇ ನಮ್ಮೆಲ್ಲರಿಗೂ ಸಾಕಷ್ಟು ಕ್ಷಮಿಸಲ್ಪಟ್ಟಿದೆ. ಈ ಕಾರಣದಿಂದಲೇ ನಾವು ಕರ್ತನ ಅಧಿಕವಾಗಿ ಪ್ರೀತಿಸಬೇಕು. ನಮ್ಮ ಸುತ್ತಲೂ ಇರುವ ಅನೇಕರಿಗೆ ಆತನ ಅದ್ಭುತವಾದ ಸತ್ಯವನ್ನು ತಿಳಿಸಲು ನಮ್ಮನ್ನು ಉಪಯೋಗಿಸಿಕೊಳ್ಳಲು ಆತನಿಗೆ ಇಷ್ಠವಿದೆ.

    ಆದ್ದರಿಂದ, ಚೀಯೋನೇ, ಎಚ್ಚರಗೊಳ್ಳು , ನಿನ್ನ ಪ್ರತಾಪವನ್ನು ಧರಿಸಿಕೋ; ಯೆರೂಸಲೇಮೇ, ಪರಿಶುದ್ದ ಪಟ್ಟಣವೇ, ನಿನ್ನ ಚಂದದ ಉಡುನ ಹಾಕಿಕೋ...; ಯೆರೂಸಲೇಮೇ ದೂಳನ್ನು ಝಾಡಿಸಿಕೋ; ಎದ್ದು ಆಸನದ ಮೇಲೆ ಕೂಡು. ಸೆರೆಬಿದ್ದ ಚೀಯೋನ್ ಕನ್ಯೆಯೇ (ಭಾರತೀಯ) ನಿನ್ನ ಕತ್ತಿನ ಪಾಶವನ್ನು ಬಿಚ್ಚಿಬಿಡು. ಏಳು ಪ್ರಕಾಶಿಸು; ನಿನಗೆ ಬೆಳಕು ಬಂತು. ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ (ಯೆಶಾಯ 52:1, 2; 60:1)).