ದೈವೀಕ ಪುರುಷರ ಐವತ್ತು ಗುರುತುಗಳು

    Download Formats:

ಅಧ್ಯಾಯ 1
ದೈವೀಕ ಪುರುಷರ ಐವತ್ತು ಗುರುತುಗಳು

1. ದೈವೀಕ ಪುರುಷರು ದೇವರ ಸಮ್ಮುಖದಲ್ಲಿ ನಿಂತು ಆತನ ಸ್ವರವನ್ನು ಪ್ರತಿದಿನ ಆಲಿಸುವವರೂ;

2. ದೈವೀಕ ಪುರುಷರು ದೇವರ ಹೊರತು ತಮ್ಮ ಹೃದಯದಲ್ಲಿ ಬೇರೆ ಯಾವುದನ್ನೂ, ಯಾರನ್ನೂ ಆಶಿಸದೇ ಇರುವವರೂ;

3. ದೈವೀಕ ಪುರುಷರು ದೇವರಿಗೆ ಅತಿಶಯವಾಗಿ ಭಯಪಟ್ಟು ಎಲ್ಲಾ ವಿಧವಾದ ಪಾಪವನ್ನು ದ್ವೇಷಿಸಿ, ನೀತಿಯನ್ನೂ, ಸತ್ಯವನ್ನೂ ತಮ್ಮ ಜೀವಿತವೆಲ್ಲಾ ಪ್ರೀತಿಸುವವರೂ;

4. ದೈವೀಕ ಪುರುಷರು ಕೋಪವನ್ನೂ, ಪಾಪಮಯವಾದ ಲೈಂಗಿಕ ಯೋಚನೆಗಳನ್ನೂ ಜಯಿಸಿ, ಯೋಚನೆಯಲ್ಲಾಗಲೀ, ಮನೋಭಾವನೆಯಲ್ಲಾಗಲೀ ಪಾಪಮಾಡುವದಕ್ಕಿಂತ ಸಾವನ್ನು ಅಪೇಕ್ಷಿಸುವವರೂ;

. ದೈವೀಕ ಪುರುಷರು ಪ್ರತಿದಿನ ಭಯದಿಂದಲೂ, ಮನೋಭೀತಿಯಿಂದಲೂ ನಡುಗುವವರಾಗಿ ತಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳುವವರೂ, ತಮ್ಮ ಕ್ರೂಜೆಯನ್ನು ಹೊತ್ತುಕೊಂಡು ಪರಿಪೂರ್ಣತೆಗೆ ಮುನ್ನಡೆಯುವದನ್ನು ತಮ್ಮ ಜೀವನ ಶೈಲಿಯಾಗಿ ಮಾಡಿಕೊಂಡಿರುವವರೂ;

6. ದೈವೀಕ ಪುರುಷರು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟವರೂ, ಯಾವ ವಿಧವಾದ ರೇಗಿಸುವ (ಉದ್ರೇಕ) ಸನ್ನಿವೇಶದಲ್ಲೂ ಅವರು ಪ್ರೀತಿಯಲ್ಲಿ ಬೇರೂರಿ ಪ್ರೀತಿಯಿಂದಲೇ ವರ್ತಿಸುವವರೂ;

7. ದೈವೀಕ ಪುರುಷರು ದೀನತೆಯಲ್ಲಿ ಆಳವಾಗಿ ಬೇರೂರಿದವರೂ, ಜನರ ಹೊಗಳಿಕೆಯಾಗಲೀ, ಆತ್ಮಿಕ ಬೆಳವಣಿಗೆಯಾಗಲೀ, ದೈವೀಕವಾಗಿ ದೃಢಪಡಿಸಿರುವ ಸೇವೆಯಾಗಲೀ ಅಥವಾ ಇನ್ನಾವುದರಿಂದಾಗಲೀ ಬೇರೆಯವರಿಗಿಂತ ನಾವು ಹೆಚ್ಚಿನವರಲ್ಲ ಎಂಬ ಪ್ರಜ್ಞೆಯಿಂದಿರುವವರೂ;

8. ದೈವೀಕ ಪುರುಷರು ದೇವರ ವಾಕ್ಯದ ಮೂಲಕ ದೇವರ ಸಾರೂಪ್ಯ ಮತ್ತು ಉದ್ದೇಶಗಳ ತಿಳುವಳಿಕೆ ಹೊಂದಿದವರಾಗಿರುತ್ತಾರೆ, ಮತ್ತು ಯಾವುದೇ ಚಿಕ್ಕ ಆಜ್ಞೆಗೂ ಅವಿದೇಯರಾಗಲು ಅಥವಾ ಇತರರಿಗೆ ಅಲಕ್ಷ್ಯವಾಗಿ ಬೋಧಿಸುವದಕ್ಕೆ ನಡುಗುವವರೂ;

9. ದೈವೀಕ ಪುರುಷರು ದೇವರ ಪರಿಪೂರ್ಣ ಸಂಕಲ್ಪವನ್ನು ಬೋಧಿಸುವವರೂ, ಧಾರ್ಮಿಕ ವ್ಯಭಿಚಾರ ಮತ್ತು ವಾಕ್ಯದಲ್ಲಿಲ್ಲದ ಮನುಷ್ಯ ಸಂಪ್ರದಾಯಗಳನ್ನು ಬಯಲಿಗೆ ತರುವವರೂ

10. ದೈವೀಕ ಪುರುಷರು ದೈವಭಕ್ತಿಯ ವಿಷಯದಲ್ಲಿ ಕ್ರಿಸ್ತನು ಮಾಂಸಧಾರಿಯಾಗಿ ಬಂದನು ಮತ್ತು ಆ ಮೂಲಕವಾಗಿ ಜೀವವುಳ್ಳ ಹೊಸ ಮಾರ್ಗವನ್ನು ತೆರೆದನೆಂದು ಪವಿತ್ರಾತ್ಮನ ಪ್ರಕಟಣೆಯನ್ನು ಹೊಂದಿದವರೂ;

11. ದೈವೀಕ ಪುರುಷರು ಪರಿಶ್ರಮಶೀಲರಾಗಿದ್ದು, ಹಾಸ್ಯಪ್ರವೃತ್ತಿಯುಳ್ಳವರೂ, ಮಕ್ಕಳೊಂದಿಗೆ ಆಟವಾಡುವವರೂ, ವಿಶ್ರಾಂತಿ ತೆಗೆದುಕೊಂಡು ಪ್ರಕೃತಿಯಲ್ಲಿ ಕೊಟ್ಟಿರುವ ಒಳ್ಳೇ ವರಗಳಿಂದ ಸಂತೋಷಪಡುವವರಾಗಿರುವವರೂ;

12. ದೈವೀಕ ಪುರುಷರು ಸನ್ಯಾಸಿಗಳಲ್ಲದವರೂ, ಆದರೆ ಶಿಸ್ತಿನ ಜೀವಿತವನ್ನು ನಡೆಸುವವರು ಮತ್ತು ಕಠಿಣ ಶ್ರಮಕ್ಕೆ ಹೆದರದವರೂ;

13. ದೈವೀಕ ಪುರುಷರು ಬೆಲೆಬಾಳುವ ಉಡುಪುಗಳ ವ್ಯಾಮೋಹವಿಲ್ಲದವರೂ, ಪ್ರವಾಸದಲ್ಲಿ ಸುಮ್ಮನೆ ಆಯಾ ಸ್ಥಳಗಳನ್ನು ವೀಕ್ಷಿಸಲು ಮನಸ್ಸಿಲ್ಲದವರೂ, ತಮ್ಮ ಸಮಯವನ್ನು ಲಾಭದಾಯಕವಲ್ಲದ ಚಟುವಟಿಕೆಗಳಲ್ಲಿ ವ್ಯರ್ಥಮಾಡದೆ, ಹಣವನ್ನು ಅಗತ್ಯವಿಲ್ಲದ ವಸ್ತುಗಳನ್ನು ಕೊಳ್ಳುವುದಕ್ಕೆ ಉಪಯೋಗಿಸದೆ ಇರುವವರೂ;

14. ದೈವೀಕ ಪುರುಷರು ಭೋಜನಪ್ರಿಯರಲ್ಲದವರೂ, ನ್ಯಾಯಬದ್ಧವಾದ ಸಂಗೀತ, ಅಟ(ಕ್ರೀಡೆ) ಮುಂತಾದವುಗಳಿಗೆ ಗುಲಾಮರಾಗದೆ ಇರುವವರೂ;

15. ದೈವೀಕ ಪುರುಷರು ಬಾಧೆ, ದೂಷಣೆ, ಸಂಕಟ, ತಪ್ಪುಹೊರಿಸುವಿಕೆ, ದೈಹಿಕ ರೋಗಗಳು, ಆರ್ಥಿಕ ಕಷ್ಟಗಳು ಎಂಬ ಬೆಂಕಿಯಲ್ಲಿಯೂ, ಸಂಬಂಧಿಕರಿಂದ ಮತ್ತು ಧಾರ್ಮಿಕ ನಾಯಕರಿಂದ ಬರುವ ವಿರೋಧ ಮುಂತಾದ ಸನ್ನಿವೇಶಗಳಲ್ಲಿ ದೇವರಿಂದ ಶಿಕ್ಷಿತರಾದವರೂ;

16. ದೈವೀಕ ಪುರುಷರು ತಾನೇ ಮಹಾದೊಡ್ಡ ಪಾಪಿ ಎಂದರಿತು ಅತೀ ಕೆಟ್ಟದಾದ ಪಾಪಿಗಳ ಮೇಲೆ, ಕೆಟ್ಟ ವಿಶ್ವಾಸಿಗಳ ಮೇಲೆ ಕರುಣೆಯುಳ್ಳವರೂ, ಅವರಿಗಾಗಿ ನಿರೀಕ್ಷೆಯುಳ್ಳವರಾಗಿ ಇರುವವರೂ;

17. ದೈವೀಕ ಪುರುಷರು ಪರಲೋಕದ ತಂದೆಯ ಪ್ರೀತಿಯಲ್ಲಿ ಆಳವಾಗಿ ಬೇರೂರಿ, ಯಾವ ವಿಷಯವಾಗಿಯೂ ಚಿಂತೆಮಾಡದೆ, ಸೈತಾನನಿಗಾಗಲೀ, ದುಷ್ಟ ಜನರಿಗಾಗಲೀ, ಯಾವ ಕಷ್ಟದ ಪರಿಸ್ಥಿತಿಗೂ ಭಯಪಡದವರೂ;

18. ದೈವೀಕ ಪುರುಷರು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಿದವರೂ, ದೇವರ ಪರಮಾಧಿಕಾರದಲ್ಲಿ ನಂಬಿಕೆಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ದೇವರು ತಮಗೆ ಒಳ್ಳೆಯದನ್ನೇ ಮಾಡುತ್ತಾನೆಂದು ನಂಬಿ, ಎಲ್ಲಾ ಸಂದರ್ಭಗಳಲ್ಲಿ, ಎಲ್ಲಾ ಜನರಿಗಾಗಿ, ಎಲ್ಲಾ ವಿಷಯಗಳಿಗಾಗಿ ಯಾವಾಗಲೂ ದೇವರಿಗೆ ಕೃತಜ್ಞತೆ ಸಲ್ಲಿಸುವವರೂ;

19. ದೈವೀಕ ಪುರುಷರು ದೇವರಲ್ಲಿ ಮಾತ್ರವೇ ಸಂತೋಷಪಡುವವರಾಗಿದ್ದು, ಕೋಪದ ಮನೋಭಾವನೆಗಳನ್ನು ಜಯಿಸಿ, ದೇವರಲ್ಲಿ ಹರ್ಷಭರಿತರಾಗಿರುವವರೂ;

20. ದೈವೀಕ ಪುರುಷರು ಜೀವಕರವಾದ ನಂಬಿಕೆಯುಳ್ಳವರೂ, ತಮ್ಮ ಸ್ವಾಭಾವಿಕ ಸಾಮಥ್ರ್ಯದಲ್ಲಿ ಭರವಸೆಯಿಲ್ಲದವರೂ, ಆದರೆ ದೇವರಲ್ಲಿ ಸಂಪೂರ್ಣ ಭರವಸೆಯಿಟ್ಟು, ಆತನೇ ಎಲ್ಲಾ ಪರಿಸ್ಥಿತಿಗಳಲ್ಲಿ ಸರ್ವಸಹಾಯವನ್ನು ಕೊಡುವನೆಂದು ನಂಬಿರುವವರಾಗಿರುವವರೂ;

21. ದೈವೀಕ ಪುರುಷರು ತಮ್ಮ ಸ್ವಬುದ್ಧಿಯ ಪ್ರೇರಣೆಯಿಂದ ನಡಿಸಲ್ಪಡದೇ, ಪವಿತ್ರಾತ್ಮನ ನಡೆಸುವಿಕೆಯಿಂದ ಜೀವಿಸುವವರೂ;

22. ದೈವೀಕ ಪುರುಷರು ಕ್ರಿಸ್ತನಿಂದ ಮಾತ್ರವೇ ಪವಿತ್ರಾತ್ಮನ ಬೆಂಕಿಯಿಂದ ನಿಜವಾದ ದೀಕ್ಷಾಸ್ನಾನ ಪಡೆದುಕೊಂಡವರೂ (ಹುರುಳಿಲ್ಲದ ಬೋಧನೆಗಳಿಗೆ ಮೆರಗಾಗಿ ಅಸತ್ಯವಾದ ಉದ್ವೇಗಗಳಿಗೆ ಒಳಗಾದವರಲ್ಲ);

23. ದೈವೀಕ ಪುರುಷರು ಪವಿತ್ರಾತ್ಮನ ಅಭಿಷೇಕದಿಂದ ಯಾವಾಗಲೂ ದೃಢವಾಗಿ ಜೀವಿಸುವವರೂ ಮತ್ತು ಆತ್ಮೀಕ ವರಗಳನ್ನು ಪಡೆದುಕೊಂಡವರೂ;

24. ದೈವೀಕ ಪುರುಷರು ಸಭೆಯು ಕ್ರಿಸ್ತನ ದೇಹವೆಂಬ ಪ್ರಕಟಣೆಯನ್ನು ಹೊಂದಿದವರೂ (ಅದು ಕೇವಲ ಗುಂಪು ಅಥವಾ ಪಂಗಡವಾಗಿರದೇ) ಮತ್ತು ತಮ್ಮ ಎಲ್ಲಾ ಶಕ್ತಿ, ಸಂಪತ್ತು, ಆತ್ಮೀಕ ವರಗಳು ಎಲ್ಲವನ್ನೂ ಆತನ ಸಭೆಯನ್ನು ಕಟ್ಟಲು ಕೊಡುವವರೂ;

25. ದೈವೀಕ ಪುರುಷರು ತಮ್ಮ ನಾಲಿಗೆಯನ್ನು ಪವಿತ್ರಾತ್ಮನ ಸಹಾಯದಿಂದ ಹತೋಟಿಯಲ್ಲಿ ಇಟ್ಟುಕೊಂಡವರೂ ಮತ್ತು ತಮ್ಮ ನಾಲಿಗೆಗಳಲ್ಲಿ ಈಗ ದೇವರ ವಾಕ್ಯದಿಂದ ಪ್ರಜ್ವಲಿಸುತ್ತಿರುವವರೂ;

26. ದೈವೀಕ ಪುರುಷರು ಎಲ್ಲವನ್ನು ತ್ಯಜಿಸಿದವರೂ, ಹಣದಿಂದಾಗಲೀ, ಭೌತಿಕ ವಸ್ತುಗಳಿಂದಾಗಲೀ ಆಕರ್ಷಿಸಲ್ಪಡದೇ, ಇತರರಿಂದ ಉಡುಗೊರೆ ಅಥವಾ ಕೊಡುಗೆಗಳನ್ನು ಅಪೇಕ್ಷಿಸದವರೂ;

27. ದೈವೀಕ ಪುರುಷರು ತಮ್ಮೆಲ್ಲಾ ಲೌಕಿಕ ಅಗತ್ಯತೆಗಳಿಗಾಗಿ ದೇವರನ್ನು ನಂಬುವವರೂ, ಅವರ ಕೊರತೆಗಳ ಬಗ್ಗೆ ಯಾರಿಗೂ ಯಾವ ಸೂಚನೆಯನ್ನು ಕೊಡದವರೂ, ತಮ್ಮ ಸೇವೆಯ ಬಗ್ಗೆ ಕೊಚ್ಚಿಕೊಳ್ಳದವರೂ, ಮಾತಿನ ಮೂಲಕವಾಗಲೀ, ವರದಿಗಳ ಮೂಲಕವಾಗಲೀ, ಅವುಗಳನ್ನು ತಿಳಿಯಪಡಿಸದವರೂ;

28. ದೈವೀಕ ಪುರುಷರು ಹಠಮಾರಿಗಳಲ್ಲದವರೂ, ಹಿರಿಯರು ಮತ್ತು ಜ್ಞಾನವುಳ್ಳ ಸಹೋದರರಿಂದ ತಿದ್ದಿಕೊಳ್ಳಲು ದೀನತೆಯಿಂದ ಹಾತೊರೆಯುವವರೂ, ಟೀಕೆಗಳನ್ನು ತಿರಸ್ಕರಿಸದವರೂ;

29. ದೈವೀಕ ಪುರುಷರು ಇತರರ ಮೇಲೆ ದಬ್ಬಾಳಿಕೆ ನಡೆಸದೆ, ಕೇಳಿದಾಗ ಮಾತ್ರ ಸಲಹೆ/ಉಪದೇಶವನ್ನು ಕೊಡುವವರೂ, "ಹಿರಿಯರು" ಎಂದು ಕರೆಸಿಕೊಳ್ಳುವ ಆಶೆಯಿಲ್ಲದವರೂ, ಸಾಮಾನ್ಯರಂತೆ ಇದ್ದು ಇತರರ ಸೇವೆ ಮಾಡುವವರೂ;

30. ದೈವೀಕ ಪುರುಷರು ಎಲ್ಲರೊಂದಿಗೆ ಸರಾಗವಾಗಿ ಹೋಗುವವರೂ, ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವವರೂ;

31. ದೈವೀಕ ಪುರುಷರು ಶ್ರೀಮಂತನನ್ನೂ ಭಿಕ್ಷುಕನನ್ನೂ, ಬಿಳಿ ಚರ್ಮದವನನ್ನೂ, ಕಪ್ಪು ಚರ್ಮವಿರುವವನನ್ನೂ, ವಿದ್ಯಾವಂತ, ಅವಿದ್ಯಾವಂತ, ಸಾಂಸ್ಕೃತಿಕ ಮತ್ತು ಅಸಾಂಸ್ಕೃತಿಕರನ್ನೂ ಭೇದಭಾವವಿಲ್ಲದೇ ಸರಿಸಮಾನವಾಗಿ ಕಾಣುವವರೂ;

32. ದೈವೀಕ ಪುರುಷರು ಹೆಂಡತಿ, ಮಕ್ಕಳು, ಬಂಧುಗಳು, ಸ್ನೇಹಿತರು ಅಥವಾ ಇನ್ನಿತರ ವಿಶ್ವಾಸಿಗಳ ಪ್ರಭಾವಕ್ಕೆ ಒಳಗಾಗದೇ, ಕ್ರಿಸ್ತನ ಆಜ್ಞೆಗಳಿಗೆ ವಿಧೇಯರಾಗಿ, ದೇವರ ಪ್ರಸನ್ನತೆಯಲ್ಲಿ ಭಯಭಕ್ತಿಯಿಂದ ಇರುವವರೂ;

33. ದೈವೀಕ ಪುರುಷರು ಸೈತಾನನು ಕೊಡುವ ಗೌರವ, ಹಣ ಅಥವಾ ಯಾವುದೇ ಬಹುಮಾನದಿಂದ ಭ್ರಷ್ಟರಾಗದೇ ಇರುವವರೂ;

34. ದೈವೀಕ ಪುರುಷರು ಯಾವುದೇ ಧರ್ಮನಾಯಕರಿಗಾಗಲೀ, ಲೌಕಿಕ ನಾಯಕರಿಗಾಗಲೀ ಭಯಪಡದೇ, ಕ್ರಿಸ್ತನ ಸಾಕ್ಷಿಗಳಾಗಿರುವವರೂ;

35. ದೈವೀಕ ಪುರುಷರು ಭೂಮಿಯ ಮೇಲೆ ಯಾವ ಮನುಷ್ಯನನ್ನೂ ಮೆಚ್ಚಿಸಲು ಇಷ್ಟಪಡದವರೂ, ದೇವರನ್ನು ಮೆಚ್ಚಿಸಲು ಅಗತ್ಯವಾದರೆ ಎಲ್ಲಾ ಮನುಷ್ಯರನ್ನು ಎದುರು ಹಾಕಿಕೊಳ್ಳಲು ಹಿಂಜರಿಯದವರೂ;

36. ದೈವೀಕ ಪುರುಷರು ತಮ್ಮ ಅಗತ್ಯತೆ, ಸ್ವಂತ ಸೌಕರ್ಯಗಳಿಗಾಗಿ ಮೊದಲ ಪ್ರಾಶಸ್ತ್ಯವನ್ನು ಕೊಡದೇ, ದೇವರ ಮಹಿಮೆಗಾಗಿ, ಆತನ ಚಿತ್ತಕ್ಕಾಗಿ, ದೇವರ ಸಾಮ್ರಾಜ್ಯಕ್ಕಾಗಿ ಮೊದಲು ಆದ್ಯತೆಯನ್ನು ಕೊಡುವವರೂ;

37. ದೈವೀಕ ಪುರುಷರು ಇತರರಿಂದಾಗಲೀ ಅಥವಾ ಸ್ವಬುದ್ಧಿಯಿಂದಾಗಲೀ ಒತ್ತಡಕ್ಕೆ ಒಳಗಾಗಿ ಸತ್ತ(ನಿರ್ಜೀವ?)ಕಾರ್ಯಗಳನ್ನು ಮಾಡದೆ, ಪ್ರಕಟವಾಗಿರುವ ದೇವರ ಚಿತ್ತವನ್ನು ಮಾತ್ರ ಮಾಡುವದಕ್ಕೆ ಹಂಬಲಿಸಿ ತೃಪ್ತರಾಗಿರುವವರೂ;

38. ದೈವೀಕ ಪುರುಷರು ಕ್ರಿಸ್ತೀಯ ಸೇವೆಯಲ್ಲಿ, ಮನುಷ್ಯ ಶಕ್ತಿಯಿಂದ ಮಾಡುವ ಮತ್ತು ಆತ್ಮನ ಬಲದಿಂದ ಮಾಡುವ ಸೇವೆಗಳಲ್ಲಿರುವ ವ್ಯತ್ಯಾಸವನ್ನು ಅರಿಯುವ ಆತ್ಮ ಇರುವವರೂ;

39. ದೈವೀಕ ಪುರುಷರು ವಿಷಯಗಳನ್ನು ಪರಲೋಕದ ದೃಷ್ಟಿಯಿಂದ ನೋಡುವವರೂ, ಪ್ರಾಪಂಚಿಕ ದೃಷ್ಟಿಯಿಂದ ನೋಡದೇ ಇರುವವರೂ;

40. ದೈವೀಕ ಪುರುಷರು ತಮ್ಮ ಸೇವೆಯ ಫಲವಾಗಿ ಬರುವ ಯಾವುದೇ ಲೌಕಿಕ ಗೌರವವನ್ನೂ, ಬಿರುದುಗಳನ್ನೂ ಅಸಡ್ಡೆ ಮಾಡುವವರೂ;

41. ದೈವೀಕ ಪುರುಷರು ಎಡೆಬಿಡದೆ ಪ್ರಾರ್ಥಿಸುವವರೂ, ಅವಶ್ಯವಿರುವಾಗ ಉಪವಾಸ ಮಾಡಿ ಪ್ರಾರ್ಥಿಸುವವರೂ

42. ದೈವೀಕ ಪುರುಷರು ಜ್ಞಾನದಿಂದ, ಉದಾರವಾಗಿ, ಸಂತೋಷವಾಗಿ, ಗುಪ್ತವಾಗಿ ಕೊಡುವುದನ್ನು ಕಲಿತಿರುವವರೂ;

43. ದೈವೀಕ ಪುರುಷರು ಇತರರನ್ನು ರಕ್ಷಿಸುವುದಕ್ಕೋಸ್ಕರ ಅನೇಕ ತ್ಯಾಗಗಳನ್ನು ಮಾಡಲು ಸಿದ್ಧರಾದವರೂ;

44. ದೈವೀಕ ಪುರುಷರು ಜನರನ್ನು ಕೇವಲ ರಕ್ಷಣೆಗೆ ನಡೆಸುವುದು ಮಾತ್ರವಲ್ಲ, ಅವರನ್ನು ಕ್ರಿಸ್ತನ ಶಿಷ್ಯರನ್ನಾಗಿ ಮಾಡಿ, ಸತ್ಯದ ತಿಳುವಳಿಕೆಯನ್ನು ಅವರಲ್ಲಿ ತರುವವರೂ, ದೇವರ ಎಲ್ಲಾ ಆಜ್ಞೆಗಳಿಗೆ ಅವರು ವಿಧೇಯರಾಗುವಂತೆ ಮಾಡುವವರೂ;

45. ದೈವೀಕ ಪುರುಷರು ಎಲ್ಲಾ ಸ್ಥಳಗಳಲ್ಲಿ ದೇವರಿಗೋಸ್ಕರ ಶುದ್ಧಸಾಕ್ಷಿ ಸ್ಥಾಪಿಸುವದನ್ನು ನೋಡಲು ಹಂಬಲಿಸುವವರೂ;

46. ದೈವೀಕ ಪುರುಷರು ಸಭೆಯಲ್ಲಿ ಕ್ರಿಸ್ತನು ಮಹಿಮೆ ಹೊಂದುವುದನ್ನು ನೋಡಲು ಪರಿತಪಿಸುವವರೂ;

47. ದೈವೀಕ ಪುರುಷರು ಯಾವುದೇ ವಿಷಯದಲ್ಲಿ ತಮ್ಮ ಸ್ವಾರ್ಥವನ್ನು ಹುಡುಕದಿರುವವರೂ;

48. ದೈವೀಕ ಪುರುಷರು ಆತ್ಮೀಕ ಅಧಿಕಾರ ಮತ್ತು ಆತ್ಮೀಕ ಘನತೆ ಇರುವವರೂ;

49. ದೈವೀಕ ಪುರುಷರು ಅಗತ್ಯವಿದ್ದರೆ, ದೇವರಿಗಾಗಿ ಪ್ರಪಂಚದಲ್ಲಿ ಒಂಟಿಯಾಗಿ ನಿಲ್ಲುವವರೂ;

50. ದೈವೀಕ ಪುರುಷರು ಹಳೇ ಅಪೋಸ್ತಲರು ಮತ್ತು ಪ್ರವಾದಿಗಳ ಹಾಗೆ ಸಂಧಾನ ಮಾಡಿಕೊಳ್ಳದಿರುವವರು.

ಈ ದಿನಗಳಲ್ಲಿ ಇಂಥಹ ಜನರು ವಿರಳವಾಗಿರುವದರಿಂದ ದೇವರಕಾರ್ಯ ಕುಂಠಿತಗೊಂಡಿದೆ. ಪಾಪದಿಂದ ತುಂಬಿದ ಮತ್ತು ಕಲಬೆರಕೆಯ ಸಂತತಿಯೂ, ಸಂಧಾನ ಮಾಡಿಕೊಳ್ಳುವ ಕ್ರೈಸ್ತ ಜಗತ್ತಿನಲ್ಲಿ, ನೀವು ದೇವರಿಗಾಗಿ ಇಲ್ಲಿ ತಿಳಿಸಿರುವಂತಹ ರೀತಿಯಲ್ಲಿ ಜೀವಿಸಲು ನಿಶ್ಚಿಯಿಸಿರಿ.

ದೇವರಲ್ಲಿ ಪಕ್ಷಪಾತವು ಇಲ್ಲದಿರುವುದರಿಂದ, ಇಂತಹವರಾಗಿ ಇರಬೇಕೆಂಬ ಇಚ್ಛೆ ನಿಮಗಿದ್ದರೆ, ನಿಮಗೂ ಸಹ ಇದು ಸಾಧ್ಯವಾಗುವದು. ಜೀವಿತದ ಪ್ರಜ್ಞಾವಂತ ಕ್ಷೇತ್ರದಲ್ಲಿ ಸಮರ್ಪಣೆ ಮತ್ತು ವಿಧೇಯತೆಯನ್ನು ಮಾತ್ರ ದೇವರು ಬಯಸುವುದರಿಂದ, ನಿಮ್ಮ ಜೀವಿತದ ಪ್ರಜ್ಞಾವಂತ ಕ್ಷೇತ್ರವು ಮಿತಿಯಾಗಿದ್ದರೂ, ನೀವು ಅಂತಹ ಮನುಷ್ಯರಾಗಲು ಸಾಧ್ಯವಿದೆ. ನೀವು ಬೆಳಕಿನಲ್ಲಿ ನಡೆಯುತ್ತಾ ಮುಂದೆ ಸಾಗುತ್ತಿದ್ದರೆ, ಆ ಕ್ಷೇತ್ರವು ದೊಡ್ಡದಾಗುತ್ತಾ ಹೋಗುತ್ತದೆ. ಆಗ ಅಂತಹ ಮನುಷ್ಯ ನೀನೇಕೆ ಆಗಲಿಲ್ಲ ಎಂಬುದಕ್ಕೆ ಯಾವ ನೆಪವಿರುವುದಿಲ್ಲ.

ನಮ್ಮ ಮಾಂಸದಲ್ಲಿ ಒಳ್ಳೆಯದೇನೂ ವಾಸಿಸದೇ ಇರುವದರಿಂದ, ಮೇಲೆ ತಿಳಿಸಿದಂತಹ ಸದ್ಗುಣಗಳನ್ನು ಪಡೆಯಲು ದೇವರ ಕೃಪೆಯನ್ನು ಹುಡುಕುವವರಾಗಿರೋಣ. ಈ ಯುಗದ ಅಂತ್ಯ ದಿನಗಳಲ್ಲಿ ದಿನಾಲೂ ದೇವರಲ್ಲಿ ಗೋಳಾಡಿ ಮೊರೆಯಿಟ್ಟು, ಅಂತಹ ಮನುಷ್ಯರಾಗಲು ಕೃಪೆಗಾಗಿ ದೇವರಲ್ಲಿ ಪ್ರಲಾಪಿಸಿ ಕೇಳಿಕೊಳ್ಳಿರಿ.