ಪರಿಸಾಯರ ಐವತ್ತು ಗುರುತುಗಳು

    Download Formats:

ಅಧ್ಯಾಯ 1
ಪರಿಸಾಯರ ಐವತ್ತು ಗುರುತುಗಳು

1) ಪರಿಸಾಯರು, ದೈವಿಕ ಜನರೊಟ್ಟಿಗೆ ಅವರಿಗಿರುವ ಸಂಬಂಧದಲ್ಲಿ ಹೆಮ್ಮೆಪಡುತ್ತಾರೆ.

‘’ಅಬ್ರಹಾಮನು ನಮಗೆ ಮೂಲಪುರಷನಲ್ಲವೆ”. (ಮತ್ತಾಯ 3:9)

2) ಪರಿಸಾಯರು ಹೊರಗಿನ ನೀತಿಯಲ್ಲಿ ಆನಂದಿಸುತ್ತಾರೆ.

‘’ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಪರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ ಎಂದು ಯೇಸು ಹೇಳಿದನು’’. (ಮತ್ತಾಯ5:20)

3) ಪರಿಸಾಯರು ಪಾಪಿಗಳ ಸಂಗಡ ಸೇರುವುದಿಲ್ಲ.

ಪರಿಸಾಯರು ಅದನ್ನು ನೋಡಿ ಆತನ ಶಿಷ್ಯರನ್ನು ‘’ನಿಮ್ಮ ಗುರುವು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ’’ ಎಂದು ಕೇಳಿದರು (ಮತ್ತಾಯ 9:11)

4) ಪರಿಸಾಯರು ವೈರಾಗ್ಯಯುಳ್ಳವರು/ಸನ್ಯಾಸಿಗಳಾಗಿರುವವರು

‘’ಪರಿಸಾಯರು, ನಾವು ಉಪವಾಸ ಮಾಡುತ್ತೇವಲ್ಲ, ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡುವುದಿಲ್ಲ’’. ಎಂದರು. . . (ಮತ್ತಾಯ9:14)

5) ಪರಿಸಾಯರು ಸಣ್ಣ ವಿಷಯಗಳಲ್ಲೂ ಇತರರಲ್ಲಿ ದೋಷಗಳನ್ನು ಎಣಿಸುತ್ತಾರೆ.

“ಪರಿಸಾಯರು ಅದನ್ನು ಕಂಡು - ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ’’ ಎಂದರು (ಮತ್ತಾಯ 12:2)

6) ಪರಿಸಾಯರು ನಿಯಮದ ಪ್ರಕಾರ ಜೀವಿಸುತ್ತಾರೆ.

“ಆಗ ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆತನನ್ನು - ಸಬ್ಬತ್ ದಿನದಲ್ಲಿ ಸ್ವಸ್ಥ ಮಾಡುವುದು ಸರಿಯೋ’’ ಎಂದು ಹೇಳಿದರು (ಮತ್ತಾಯ 12:10)

7) ಪರಿಸಾಯರು ಹೊಟ್ಟೆಕಿಚ್ಚು ಮತ್ತು ದ್ವೇಷದಿಂದ ಪ್ರೇರೆಸಿಲ್ಪಟ್ಟಿರುತ್ತಾರೆ.

‘’ಆದರೆ ಪರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ಉಪಾಯದಿಂದ ಕೊಲ್ಲೋಣ’’ ಎಂದು ಆತನ ವಿರೋಧವಾಗಿ ಆಲೋಚನೆ ಮಾಡಿಕೊಂಡರು’’. (ಮತ್ತಾಯ 12:14)

8) ಪರಿಸಾಯರು ಅನುಮಾನದವರು ಮತ್ತು ಇತರರ ಬಗ್ಗೆ ಹೆಚ್ಚು ಕೆಟ್ಟದಾದದನ್ನೇ ಊಹಿಸುತ್ತಾರೆ.

ಆದರೆ ಪರಿಸಾಯರು ಅದನ್ನು ಕೇಳಿ - ‘’ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವುದಿಲ್ಲ’’ ಎಂದು ಹೇಳಿದರು. (ಮತ್ತಾಯ 12:24)

9) ಪರಿಸಾಯರು ತಮ್ಮ ಮಾತುಗಳಲ್ಲಿ ಬಹಳ ಅಜಾಗರೂಕರಾಗಿರುತ್ತಾರೆ.

ಪರಿಸಾಯರು ‘’ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವುದಿಲ್ಲ’’ ಎಂದು. (ಮತ್ತಾಯ 12:24)

10) ಪರಿಸಾಯರು ಧರ್ಮದ ನೆಪದಲ್ಲಿ ತಮ್ಮ ಕುಟುಂಬದ ಜವಾಬ್ದಾರಿಯನ್ನು ಅಲಕ್ಷ್ಯ ಮಾಡುತ್ತಾರೆ.

“ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ಆಜ್ಞೆಯನ್ನು ಯಾಕೆ ಮೀರುತ್ತೀರಿ? ಹೇಗೆಂದರೆ ತಂದೆ-ತಾಯಿಗಳನ್ನು ಸನ್ಮಾನಿಸಬೇಕೆಂತಲೂ.., ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗಾಗಿ ಇಟ್ಟಿದ್ದೇನೆ ಎಂದು ಹೇಳುವುದಾದರೆ ಅವನಿಗೆ ತನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ.”(ಮತ್ತಾಯ 15:1-9)

11) ಪರಿಸಾಯರು ಬಹು ಬೇಗ ಬೇಸರಗೊಳ್ಳುತ್ತಾರೆ.

‘’ಆಗ ಶಿಷ್ಯರು ಬಂದು ಆತನನ್ನು - ಪರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ ಎಂದು ಕೇಳಿದರು. ಅದಕ್ಕೆ... ಆತನು.....ಅವರ ಮಾತನ್ನು ಬಿಡಿರಿ,... ಅಂದನು’’. (ಮತ್ತಾಯ 15:12-14)

12) ಪರಿಸಾಯರು ಆತ್ಮೀಕವಾಗಿ ಕುರುಡರು.

“ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವುದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣೆಯಲ್ಲಿ ಬೀಳುವರು ಅಂದನು''. (ಮತ್ತಾಯ:15:14)

13) ಪರಿಸಾಯರು ಕಪಟಿಗಳು

‘’ಪರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ’’. (ಲೂಕ 12:1)

14) ಪರಿಸಾಯರು ಇತರರನ್ನು ಅವರ ಮಾತಿನಲ್ಲೇ ಹಿಡಿಯಲು ಪ್ರಯತ್ನಿಸುತ್ತಾರೆ.

‘’ಆಗ ಪರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂದು ಯೋಚನೆಯಿಂದ – ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ’’ ಎಂದರು (ಮತ್ತಾಯ19:3)

15) ಪರಿಸಾಯರು ಕಠಿಣ ಹೃದಯರು.

‘’ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಮನಸ್ಸು ನನಗೆ ದೂರವಾಗಿದೆ’’. (ಮತ್ತಾಯ 15:8)

16) ಪರಿಸಾಯರು ಬಹಿರಂಗವಾಗಿ ದೊಡ್ಡ ಸ್ವರದಿಂದ ಸ್ತೋತ್ರ ಮಾಡುವುದನ್ನು ಸಹಿಸುವುದಿಲ್ಲ.

“ದಾವೀದನ ಕುಮಾರನಿಗೆ ಜಯಜಯವೆಂದು ಕೂಗುತ್ತಿರುವ ಹುಡುಗರನ್ನು ನೋಡಿ ಸಿಟ್ಟುಗೊಂಡರು’’. (ಮತ್ತಾಯ21:15)

17) ಪರಿಸಾಯರಿಗೆ ವಿಧೇಯತೆಯಿಲ್ಲದ ಜ್ಞಾನವಿದೆ.

‘’ಶಾಸ್ತ್ರಿಗಳೂ ಪರಿಸಾಯರೂ ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದಾರೆ. ಆದುದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ’’. (ಮತ್ತಾಯ 23:1-2)

18) ಪರಿಸಾಯರು ತಾವು ಏನನ್ನು ಬೋಧಿಸುತ್ತಾರೋ ಅದರಂತೆ ನಡೆಯುವುದಿಲ್ಲ.

‘’ಪರಿಸಾಯರು ಹೇಳುತ್ತಾರೆ ಹೊರತು ನಡೆಯುವುದಿಲ್ಲ’’.(ಮತ್ತಾಯ 23:3)

19) ಪರಿಸಾಯರು ಭಾರವಾದ ನೊಗಗಳನ್ನು ಇತರರ ಮೇಲೆ ಹೊರಿಸುತ್ತಾರೆ.

“ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲಾರರು’’. (ಮತ್ತಾಯ 23:4)

20) ಪರಿಸಾಯರು ಜನರಿಂದ ಗೌರವವನ್ನು ಅಪೇಕ್ಷಿಸುತ್ತಾರೆ.

‘’ ಅವರು ತಮ್ಮ ಕೆಲಸಗಳನ್ನೆಲ್ಲಾ ಜನರಿಗೆ ಕಾಣಬೇಕೆಂದು ಮಾಡುತ್ತಾರೆ’’. (ಮತ್ತಾಯ 23:5)

21) ಪರಿಸಾಯರು ಪರಿಶುದ್ಧತೆಯು ತಾವು ಹಾಕಿಕೊಳ್ಳುವ ಉಡುಪಿನ ಮೇಲೆ ಆಧಾರಗೊಂಡಿದೆ ಎಂದುಕೊಳ್ಳುತ್ತಾರೆ.

‘’ತಾವು ಕಟ್ಟಿಕೊಳ್ಳುವ ಜ್ಞಾಪಕ ಪಟ್ಟಿಗಳನ್ನು ಅಗಲ ಮಾಡುತ್ತಾರೆ, ಗೊಂಡೆಗಳನ್ನು ಉದ್ದ ಮಾಡುತ್ತಾರೆ’’. (ಮತ್ತಾಯ 23:5)

22) ಪರಿಸಾಯರು ಸ್ಥಾನಗಳನ್ನು ಮತ್ತು ಗೌರವ ಪದವಿಗಳನ್ನು ಪ್ರೀತಿಸುತ್ತಾರೆ.

“ಇದಲ್ಲದೆ ಔತಣಪ್ರಸ್ತಗಳಲ್ಲಿ ಪ್ರಥಮ ಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯಪೀಠಗಳು, ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ಬೋಧಕರೆನ್ನಿಸಿಕೊಳ್ಳುವುದು, ಡಾಕ್ಟರ್ ಮತ್ತು ರೆವರೆಂಡ್ ಎಂದು ಕರೆಸಿಕೊಳ್ಳುವುದು’’. (ಮತ್ತಾಯ 23:6-8)

23) ಪರಿಸಾಯರು ಬೇರೆಯವರನ್ನು ಅಶುದ್ಧಗೊಳಿಸುತ್ತಾರೆ.

‘’ಅಯ್ಯೋ, ಪರಿಸಾಯರೇ, ಪರಲೋಕ ರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ; ನೀವಂತೂ ಒಳಕ್ಕೆ ಹೋಗುವದಿಲ್ಲ, ಒಳಗೆ ಹೋಗಬೇಕೆಂದಿರುವವರನ್ನೂ ಹೋಗಗೂಡಿಸುವುದಿಲ್ಲ.” (ಮತ್ತಾಯ 23:13)

24) ಪರಿಸಾಯರು ಬಡ ಜನರ ಲಾಭವನ್ನು ಪಡೆಯುತ್ತಾರೆ.

‘’ಅಯ್ಯೋ ಪರಿಸಾಯರೇ, ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ (ಕಬಳಿಸುತ್ತೀರಿ)’’. (ಮತ್ತಾಯ 23:14)

25) ಪರಿಸಾಯರು ಬಹಿರಂಗವಾಗಿ ಉದ್ದವಾದ ಪ್ರಭಾವ ಬೀರುವಂತ ಪ್ರಾರ್ಥನೆಗಳನ್ನು ಮಾಡುತ್ತಾರೆ.

‘’ಪರಿಸಾಯರೇ, ನಿಮಗೆ ಅಯ್ಯೋ ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ; ಆದದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ’’. (ಮತ್ತಾಯ 23:14)

26) ಪರಿಸಾಯರು ಧರ್ಮಬೋಧನ ಕೆಲಸವನ್ನು ಮಾಡುತ್ತಾರೆ ಮತ್ತು ಜನರನ್ನು ಎರಡರಷ್ಟಾಗಿ ನರಕ ಪಾತ್ರರನ್ನಾಗಿ ಮಾಡುತ್ತಾರೆ.

‘’ಅಯ್ಯೋ ಪರಿಸಾಯರೇ, ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟಾಗಿ ನರಕ ಪಾತ್ರನಾಗ ಮಾಡುತ್ತೀರಿ’’. (ಮತ್ತಾಯ 23:15)

27) ಪರಿಸಾಯರು ವೇದವಾಕ್ಯವನ್ನು ದೇವರ ಪ್ರಕಟಣೆ ಇಲ್ಲದೆ ವಿವರಿಸುತ್ತಾರೆ.

‘’ಅಯ್ಯೋ, ಕುರುಡ ಮಾರ್ಗದರ್ಶಿಗಳೇ, ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ನೀವು ಹೇಳುತ್ತೀರಿ. ಹುಚ್ಚರೇ, ಕುರುಡರೇ, ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿ ವಾಸಮಾಡುವ ದೇವರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು’’. (ಮತ್ತಾಯ 23:16-22)

28) ಪರಿಸಾಯರು ಧರ್ಮಶಾಸ್ತ್ರದ ನಿಯಮಕ್ಕೆ ಅಂಟಿಕೊಂಡವರು.

“ಪರಿಸಾಯರೇ ನೀವು ಮರುಗ, ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲುಕೊಡುತ್ತೀರಿ ಸರಿ. ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು’’. (ಮತ್ತಾಯ 23:23)

29) ಪರಿಸಾಯರಿಗೆ ನ್ಯಾಯವಿಲ್ಲ, ಕರುಣೆಯಿಲ್ಲ ಮತ್ತು ನಂಬಿಗಸ್ಥಿಕೆ ಇಲ್ಲ.

‘’ಪರಿಸಾಯರೇ ನೀವು ಧರ್ಮಶಾಸ್ತ್ರದ ನಿಯಮಾನುಸಾರವಾಗಿ ನ್ಯಾಯ, ಕರುಣೆ ಮತ್ತು ನಂಬಿಗಸ್ಥಿಕೆ ಪ್ರಾಮುಖ್ಯವಾದ ಒದಗಿಸುವಿಕೆಗಳನ್ನು ಅಲಕ್ಷ್ಯಮಾಡಿದ್ದೀರಿ. ಇವುಗಳನ್ನು ಮಾಡಬೇಕಾಗಿತ್ತು. ಅವುಗಳನ್ನೂ ಬಿಡಬಾರದು (ಮತ್ತಾಯ 23:23)

30) ಪರಿಸಾಯರು ಸೊಳ್ಳೇ ಸೋಸುವವರು, ಒಂಟೇ ನುಂಗುವವರು.

”ಪರಿಸಾಯರೇ, ನೀವು ದಾರಿ ತೋರಿಸುವ ಕುರುಡರು ಮತ್ತು ಕಪಟಿಗಳು ಸೊಳ್ಳೇ ಸೋಸುವವರು, ಒಂಟೇ ನುಂಗುವವರು’’. (ಮತ್ತಾಯ 23:24)

31) ಪರಿಸಾಯರು ಹೊರಗೆ ಮಾತ್ರ ಒಳ್ಳೇ ಸಾಕ್ಷಿ ಇರುವುದರ ಬಗ್ಗೆ ಕಾಳಜಿ ವಹಿಸುತ್ತಾರೆ.

“ಪರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಗೊಳಿಸುತ್ತೀರಿ; ಆದರೆ ಅವು ಒಳಗೆ ಸುಲುಕೊಂಡುವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತದೆ.” (ಮತ್ತಾಯ23:25,26)

32) ಪರಿಸಾಯರು ಇತರರು ಮಾಡುವಂಥಹ ದುಷ್ಟಸಂಗತಿಗಳನ್ನು ತಾವು ಎಂದಿಗೂ ಮಾಡಿಲ್ಲ ಎಂದು ಹೇಳುತ್ತಾರೆ.

“ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ, ನೀತಿವಂತರ ಗೋರಿಗಳನ್ನು ಅಲಂಕರಿಸಿ - ನಾವು ನಮ್ಮ ಹಿರಿಯರ ಕಾಲದಲ್ಲಿ ಇರುತ್ತಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ ಅನ್ನುತ್ತೀರಿ’’. (ಮತ್ತಾಯ 23:29,30)

33) ಪರಿಸಾಯರು ದೇವರ ಪ್ರವಾದಿಗಳನ್ನು ಹಿಂಸಿಸುತ್ತಾರೆ.

“ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನು....ಕಳುಹಿಸುತ್ತೇನೆ: ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಶಿಲುಬೆಗೆ ಹಾಕುವಿರಿ;.....ಕೆಲವರನ್ನು ಹಿಂಸಿಸಿ ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ . (ಮತ್ತಾಯ 23:34:35)

34) ಪರಿಸಾಯರು ಜನರ ಅಭಿಪ್ರಾಯಕ್ಕೆ ಬಹಳಷ್ಟು ಗಮನ ಕೊಡುತ್ತಾರೆ.

‘’ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ? ಮನುಷ್ಯರಿಂದಲೋ? ಆಗ ಪರಿಸಾಯರು - ಪರಲೋಕದಿಂದ ಬಂತೆಂದು ನಾವು ಹೇಳಿದರೆ - ಹಾಗಾದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ನಮಗೆ ಹೇಳಾನು; ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಕಡೆಗೆ ಅವರು - ನಾವರಿಯೆವು ಎಂದು ಯೇಸುವಿಗೆ ಉತ್ತರ ಕೊಟ್ಟರು’’. (ಮತ್ತಾಯ21:25-27)

35) ಪರಿಸಾಯರು ಹಣವನ್ನು ಪ್ರೀತಿಸುತ್ತಾರೆ.

“ಪರಿಸಾಯರು ಹಣದಾಶೆಯುಳ್ಳವರು’’ (ಲೂಕ 16:14)

36) ಪರಿಸಾಯರು ತಾವು ಇತರರಗಿಂತ ಉತ್ತಮರು ಎಂಬುದಾಗಿ ಭಾವಿಸುತ್ತಾರೆ.

“ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನ ಮಾಡುವಂಥ ಕೆಲವರಿಗೆ ಯೇಸುವು ಈ ಸಾಮ್ಯವನ್ನು ಹೇಳಿದನು. “ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು: ಒಬ್ಬನು ಪರಿಸಾಯನು.....ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ ದೇವರೇ.....ಉಳಿದ ಜನರಂತೆ ನಾನಲ್ಲ....ಆದದರಿಂದ ನಿನಗೆ ಸ್ತೋತ್ರ ಮಾಡುತ್ತೇನೆ.... ಅಂದುಕೊಂಡನು.(ಲೂಕ 18:9-11)

37) ಪರಿಸಾಯರು ತಮ್ಮ ಸ್ವಂತ ನೀತಿಯಲ್ಲಿ ಭರವಸವಿಡುತ್ತಾರೆ.

“ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನ ಮಾಡುವಂಥ ಕೆಲವರಿಗೆ ಯೇಸುವು ಈ ಸಾಮ್ಯವನ್ನು ಹೇಳಿದನು’’ (ಲೂಕ 18:9)

38) ಪರಿಸಾಯರು ಇತರರನ್ನು ಕೀಳಾಗಿ ನೋಡುತ್ತಾರೆ.

“ಇತರರನ್ನು ಉದಾಸೀನ ಮಾಡುವಂಥ ಕೆಲವರಿಗೆ ಯೇಸುವು ಈ ಸಾಮ್ಯವನ್ನು ಹೇಳಿದನು’’. (ಲೂಕ 18:9)

39) ಪರಿಸಾಯರು ಇತರರಿಗಿಂತ ತಮ್ಮನ್ನು ಹೆಚ್ಚಿಸಿಕೊಳ್ಳುತ್ತಾರೆ.

‘’ಸುಂಕದವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಪರಿಸಾಯನು ಅಂಥವನಾಗಿ ಹೋಗಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು’’. (ಲೂಕ 18:14)

40) ಪರಿಸಾಯರು ತಮ್ಮ ಪಾಂಡಿತ್ಯ(ಸಾಧನೆ)ದ ಬಗ್ಗೆ ಹೊಗಳಿಕೊಳ್ಳುತ್ತಾರೆ.

“ದೇವರೇ, ಸುಲುಕೊಳ್ಳುವವರೂ, ಅನ್ಯಾಯಗಾರರೂ, ಹಾದರ ಮಾಡುವವರೂ, ಆಗಿರುವ ಉಳಿದ ಜನರಂತೆ ನಾನಲ್ಲ. ಆದದರಿಂದ ನಿನಗೆ ಸ್ತೋತ್ರ ಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ. ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು’’. (ಲೂಕ 18:11,12)

41) ಪರಿಸಾಯರು ಇತರರ ಮೇಲೆ ತಪ್ಪು ಹೊರಿಸುತ್ತಾರೆ.

‘’ಪರಿಸಾಯರು ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಆತನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿ - ಬೋಧಕನೇ ಈ ಹೆಂಗಸು ವ್ಯಭಿಚಾರ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದಳು ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ. ಆಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ ಎಂದು ಆತನನ್ನು ಕೇಳಿದರು”. (ಯೋಹಾನ 8:3-6)

42) ಪರಿಸಾಯರಿಗೆ ನಿಜವಾಗಲೂ ಸೈತಾನನು ಅವರ ತಂದೆಯಾಗಿರುವಾಗ ದೇವರು ತಮ್ಮ ತಂದೆ ಎಂಬುದಾಗಿ ಊಹಿಸುತ್ತಾರೆ.

“ಯೇಸು ಅವರಿಗೆ – ದೇವರು ನಿಮ್ಮ ತಂದೆಯಾಗಿದ್ದರೆ, ನನ್ನನ್ನು ಪ್ರೀತಿಸುತ್ತಿದ್ದಿರಿ. . . . ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು, ನಿಮ್ಮ ತಂದೆಯ ದುರಿಚ್ಚೆಗಳನ್ನೇ ನಡೆಸಬೇಕೆಂದಿದ್ದೀರಿ”. (ಯೋಹಾನ 8:42,44)

43) ಪರಿಸಾಯರು ಸುಳ್ಳುಗಾರರು ಮತ್ತು ಕೊಲೆಗಾರರು.

“ಯೇಸು ಹೇಳಿದನು - ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಚೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು, ಸತ್ಯದಲ್ಲಿ ನಿಲ್ಲಲಿಲ್ಲ: ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲ ಪುರಷನೂ ಆಗಿದ್ದಾನೆ’’. (ಯೋಹಾನ 8:44)

44) ಪರಿಸಾಯರು ತಮ್ಮ ಮಾತನ್ನು ಕೇಳದವರನ್ನು ಹಿಂಸಿಸುತ್ತಾರೆ.

“ಪರಿಸಾಯರು ಸ್ವಸ್ಥತೆ ಹೊಂದಿದ ಹುಟ್ಟು ಕುರುಡನಿಗೆ - ನೀನು ಕೇವಲ ಪಾಪದಲ್ಲಿ ಹುಟ್ಟಿದವನು ನಮಗೆ ಉಪದೇಶ ಮಾಡುತ್ತೀಯೋ”? ಎಂದು ಹೇಳಿ ಆರಾಧನ ಸ್ಥಳದಿಂದ ಅವನನ್ನು ಹೊರಗೆ ಹಾಕಿದರು. (ಯೋಹಾನ 9:34)

45) ಪರಿಸಾಯರು ತಾವು ಮಾಡಲಾಗದ ಅದ್ಭುತವನ್ನು ಇತರರು ಮಾಡುವಾಗ ಅವರ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಾರೆ.

‘’ಪರಿಸಾಯರೂ - ನಾವು ಮಾಡುವುದು ಇದೇನು? ಈ ಮನುಷ್ಯನು ಬಹು ಸೂಚಕ ಕಾರ್ಯಗಳನ್ನು ಮಾಡುತ್ತಾನಲ್ಲಾ-ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು’’. (ಯೋಹಾನ 11:47,53)

46) ಪರಿಸಾಯರು ತಾವು ಮಾಡುವಂತ ಕೆಲವು ಸಂಗತಿಗಳನ್ನು ದೈವಿಕ ಜನರು ಮಾಡದಿರುವುದರಿಂದ ಅವರನ್ನು ತೀರ್ಪು ಮಾಡುತ್ತಾರೆ.

“ಪರಿಸಾಯರಲ್ಲಿ ಕೆಲವರು - ಈ ಮನುಷ್ಯನು ದೇವರಿಂದ ಬಂದವನಲ್ಲ; ಅವನು ಸಬ್ಬತ್ ದಿವಸವನ್ನು ಲಕ್ಷ್ಯ ಮಾಡುವುದಿಲ್ಲವಲ್ಲಾ ಅಂದರು”. (ಯೋಹಾನ 9:16)

47) ಪರಿಸಾಯರು ದೇವರನ್ನು ಸೂಚಕ ಕಾರ್ಯಗಳಿಗಾಗಿ ಕೇಳುವುದರ ಮೂಲಕ ಆತನನ್ನು ಪರೀಕ್ಷಿಸುತ್ತಾರೆ.

“ಪರಿಸಾಯರು ಯೇಸುವಿಗೆ - ‘’ಬೋಧಕನೆ, ನಿನ್ನಿಂದಾಗುವ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು ನಮಗೆ ಅಪೇಕ್ಷೆಯಿದೆ’’ ಎಂದರು (ಮತ್ತಾಯ 12:38)

48) ಪರಿಸಾಯರಿಗೆ ತಪ್ಪಿಹೋದ ಪಾಪಿಗಳಿಗಾಗಿ ಚಿಂತೆಯಿಲ್ಲ.

“ಪರಿಸಾಯರು.......ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ ಅಂದರು’’. (ಯೋಹಾನ 7:49)

49) ಪರಿಸಾಯರು ದೇವರ ವಾಕ್ಯಕ್ಕಿಂತ ತಮ್ಮ ಸಂಪ್ರದಾಯಗಳಿಗೆ ತುಂಬಾ ಬೆಲೆ ಕೊಡುತ್ತಾರೆ.

“ಯೇಸುವು ಪರಿಸಾಯರಿಗೆ - ನೀವು ನಿಮ್ಮ ಸಂಪ್ರದಾಯವನ್ನು ಹಿಡಿದು ನಡಿಸುವುದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥ ಮಾಡುತ್ತೀರಿ: (ಮಾರ್ಕ 7:9)

50) ಪರಿಸಾಯರು ತಮ್ಮನ್ನು ನೀತಿಕರಿಸಿಕೊಳ್ಳುತ್ತಾರೆ.

“ಆಗ ಯೇಸು ಪರಿಸಾಯರಿಗೆ ಹೇಳಿದ್ದೇನೆಂದರೆ - ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳುಕೊಂಡಿದ್ದಾನೆ’’. (ಲೂಕ 16:15)