WFTW Body: 

1 ಥೆಸಲೋನಿಕ 4:13-18ರಲ್ಲಿ ಕ್ರಿಸ್ತನು ಹಿಂತಿರುಗಿ ಬರುವಾಗ ಹೇಗಿರುತ್ತದೆ ಎಂಬುದರ ಬಗ್ಗೆ ಪೌಲನು ಮಾತನಾಡುತ್ತಾನೆ. "ಸಹೋದರರೇ, ನಿದ್ರೆ ಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದು:ಖಿಸುವುದು ನಮ್ಮ ಮನಸ್ಸಿಗೆ ಒಪ್ಪುವುದಿಲ್ಲ." ಇದು, ಕ್ರಿಸ್ತನಲ್ಲಿ ಸತ್ತು ಹೋದವರ ಬಗ್ಗೆ ಹೇಳಲ್ಪಟ್ಟಿದೆ. ಯೇಸು ಸತ್ತು ಪುನರುತ್ಥಾನ ಹೊಂದಿದ್ದಾನೆ; ಮತ್ತು ಯಾರು ಕ್ರಿಸ್ತನಲ್ಲಿ ಸತ್ತಿದ್ದಾರೋ ಅವರೂ ಸಹ ಪುನರುತ್ಥಾನ ಹೊಂದುತ್ತಾರೆ. ಯೇಸು ಹಿಂದಿರುಗುವಾಗ, ಜೀವಿಸುತ್ತಿರುವವರಾದ ನಾವು ಕ್ರಿಸ್ತನಲ್ಲಿ ಸತ್ತವರ ಮುಂದಾಗಿ ಎತ್ತಲ್ಪಡುವುದಿಲ್ಲ. ಅವರು ಸಮಾಧಿಯೊಳಗಿಂದ ಎದ್ದೇಳುತ್ತಾರೆ. ಇದು ಮೊದಲ ಪುನರುತ್ಥಾನ ಮತ್ತು ಕರ್ತನನ್ನು ಭೇಟಿಯಾಗಲು ನಾವೆಲ್ಲರೂ ಒಟ್ಟಾಗಿ ಎತ್ತಲ್ಪಡುತ್ತೇವೆ. ಅವಿಶ್ವಾಸಿಗಳು ಮತ್ತೆ ಒಂದು ಸಾವಿರ ವರ್ಷಗಳ ಕಾಲ ಎದ್ದೇಳುವುದಿಲ್ಲ. ಅವರು ಎರಡನೇ ಪುನರುತ್ಥಾನದಲ್ಲಿ ಎದ್ದೇಳುತ್ತಾರೆ.

ಹಿಂದಿರುಗುವಾಗ, ನಮ್ಮ ಕರ್ತನು ಗಟ್ಟಿಯಾದ ಕೂಗಿನೊಂದಿಗೆ ಮತ್ತು ಪ್ರಧಾನ ದೇವದೂತರ ಧ್ವನಿಯೊಂದಿಗೆ ಮತ್ತು ದೇವರ ತುತ್ತೂರಿಯೊಂದಿಗೆ ಇಳಿದು ಬರುತ್ತಾನೆ. ನಂತರ ಎಲ್ಲಾ ಭಕ್ತರು ಮೇಘಗಳಲ್ಲಿ ಕರ್ತನನ್ನು ಭೇಟಿಯಾಗಲು ಸೇರುತ್ತಾರೆ. ಯೇಸು ತನ್ನ ಶಿಷ್ಯರೊಟ್ಟಿಗೆ ತನ್ನ ಬರೋಣದ ಬಗ್ಗೆ ಮಾತನಾಡುವಾಗ, ಇದೇ ವಿಷಯಗಳ ಬಗ್ಗೆ ಮಾತನಾಡಿದನು. ಆತನು ಹೇಳಿದ್ದೇನೆಂದರೆ, "ಆದಕಾರಣ ಯಾರಾದರೂ ನಿಮಗೆ - ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು ಹೇಳಿದರೆ ಹೊರಟುಹೋಗಬೇಡಿರಿ; ಇಗೋ ಕೋಣೆಗಳಲ್ಲಿದ್ದಾನೆಂದು ಹೇಳಿದರೆ ನಂಬಬೇಡಿರಿ" (ಮತ್ತಾಯ 24:26). ಇಂದು ಅನೇಕ ಜನರು ನಂಬುವ ಹಾಗೆ, ಆತನು ರಹಸ್ಯವಾಗಿ ಬರುವುದಿಲ್ಲವೆಂದು ಯೇಸು ಹೇಳಿದನು. ಆತನು ಬಂದಾಗ, ಮಿಂಚು ಮೂಢಣದಲ್ಲಿ ಹುಟ್ಟಿ ಪಡುವಣದಲ್ಲಿ ಕಾಣಿಸುವ ರೀತಿಯಲ್ಲಿರುತ್ತದೆ. ಪ್ರತಿಯೊಬ್ಬರ ಕಣ್ಣು ಆತನನ್ನು ನೋಡಬಹುದು.

ಕ್ರಿಸ್ತನು ಯಾವಾಗ ಬರುತ್ತಾನೆ? ಇದಕ್ಕೂ ಸಹ ಯೇಸು ಉತ್ತರ ಕೊಟ್ಟಿದ್ದಾನೆ : "ಸಂಕಟವು ತೀರಿದ ಕೂಡಲೇ" (ಮತ್ತಾಯ 24:29). ಅನೇಕರು ಹೀಗೆ ನಂಬುತ್ತಾರೆ - ಕ್ರಿಸ್ತನು ಸಂಕಟಗಳ ಮುಂಚೆ ತನ್ನ ಭಕ್ತರನ್ನು ಎತ್ತುತ್ತಾನೆ ಎಂಬುದಾಗಿ. ಆದರೆ ಈ ರೀತಿಯಾಗಿ ಬೋಧಿಸಿರುವ ಒಂದೇ ಒಂದು ವಚನವೂ ಸತ್ಯವೇದದಲ್ಲಿಲ್ಲ. ಇದು ಮನುಷ್ಯರ ಸಿದ್ದಾಂತವಾಗಿದೆ. ಯೇಸು ತಾನಾಗಿಯೇ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಆತನ ಬರೋಣವು ಸಂಕಟಗಳ ನಂತರವೇ ಎಂಬುದಾಗಿ. 1 ಥೆಸಲೋನಿಕ 4:16,17 ರಲ್ಲಿ ಹೇಳಿರುವಂತವ ಘಟನೆಗಳೇ, ಮತ್ತಾಯ 24:30ರಲ್ಲಿ ಯೇಸು ಮೇಘದೋಪಾದಿಯಲ್ಲಿ ದೂತರೊಟ್ಟಿಗೆ ಮತ್ತು ತುತ್ತೂರಿಯ ಶಬ್ದದೊಟ್ಟಿಗೆ ಕಾಣಿಸಿಕೊಳ್ಳುವುದಾಗಿ ಮತ್ತು ಆತನನ್ನು ಭೇಟಿಯಾಗಲು ಭಕ್ತರು ಎತ್ತಲ್ಪಡುವುದಾಗಿ ಯೇಸುವಿನಿಂದ ಹೇಳಲ್ಪಟ್ಟಿವೆ.

1 ಥೆಸಲೋನಿಕ 5:2ರಲ್ಲಿ ನಾವು ಹೀಗೆ ಓದುತ್ತೇವೆ. "ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದು". ಕಳ್ಳನು ತನ್ನ ಬರುವಿಕೆಯನ್ನು ಪ್ರಕಟಿಸುವುದಿಲ್ಲ. ಆದರೆ ಅನಿರೀಕ್ಷಿತವಾಗಿ ಬರುತ್ತಾನೆ. ಹಾಗಾಗಿ, ಪ್ರತಿಯೊಬ್ಬ ಅವಿಶ್ವಾಸಿಯು ಕರ್ತನು ಬಂದಾಗ ಆಶ್ಚರ್ಯಗೊಳ್ಳುತ್ತಾನೆ. ನಾವು ಬೆಳಕಿನಲ್ಲಿರುವ ಮಕ್ಕಳು, ಹೇಗಿದ್ದರೂ, ಕರ್ತನ ಬರುವಿಕೆಗಾಗಿ ನಿರೀಕ್ಷೆಯುಳ್ಳವರಾಗಿರುತ್ತೇವೆ (1 ಥೆಸಲೋನಿಕ 5:4). ನಾವು ಕತ್ತಲೆಯಲ್ಲಿ ಬದುಕಬಾರದು. ಹಾಗಾಗಿ ನಾವು ಆತ್ಮಿಕವಾಗಿ ನಿದ್ರೆ ಹೋಗಿರದೇ, ಎಚ್ಚರವಾಗಿರಬೇಕು (1ಥೆಸಲೋನಿಕ 5:6).

ನಾವು ಎಚ್ಚರವಾಗಿದ್ದೇವೆಯೇ ಅಥವಾ ನಿದ್ರೆಹೋಗಿದ್ದೇವೆಯೇ ಎಂಬುದಾಗಿ ನಮಗೆ ಹೇಗೆ ಗೊತ್ತಾಗುತ್ತದೆ? ಒಬ್ಬ ಮನುಷ್ಯನು ನಿದ್ರಿಸಿರುವಾಗ, ಕೋಣೆಯಲ್ಲಿ ನಿಜವಾಗಿಯೂ ಇರುವ ವಸ್ತುಗಳು, ಅದೃಶ್ಯವಾಗಿರುತ್ತವೆ. ಆದರೆ ನಿಜವಲ್ಲದ ವಸ್ತುಗಳು (ತನ್ನ ಕನಸಿನಲ್ಲಿ) ಕಾಣಸಿಗುವಂಥವು, ನಿಜವಾಗಿರುವ ಹಾಗೆ ಕಾಣುತ್ತವೆ. ಅದೇ ರೀತಿಯಲ್ಲಿ, ಒಬ್ಬ ಮನುಷ್ಯನು ಆತ್ಮಿಕವಾಗಿ ನಿದ್ರೆ ಮಾಡುತ್ತಿರುವಾಗ, ನಿತ್ಯಜೀವದ ನಿಜವಾದ ಸಂಗತಿಗಳು ಆತನಿಗೆ ನಿಜವಲ್ಲವೆಂದೂ ಮತ್ತು ಈ ಲೋಕದಲ್ಲಿರುವ ಸಂಗತಿಗಳು ನಿಜವಾದವೆಂದೂ ಕಾಣುತ್ತವೆ. ಪರಲೋಕ ಮತ್ತು ನಿತ್ಯಜೀವಕ್ಕೆ ಹೋಲಿಸಿದಾಗ, ಈ ಜಗತ್ತು, ನಿಜವಲ್ಲದ ಕನಸಾಗಿ ಕಾಣುತ್ತದೆ. ನಿಜವಾಗಿಯೂ ನಿತ್ಯವಾದ ಸಂಗತಿಗಳು ಪರಲೋಕದ ಸಂಗತಿಗಳಾಗಿವೆ. ನಿದ್ರೆ ಮಾಡುತ್ತಿರುವ ವಿಶ್ವಾಸಿಗಳಿಗೆ, ಕರ್ತನು ಖಂಡಿತವಾಗಿ ರಾತ್ರಿಯಲ್ಲಿ ಕಳ್ಳನು ಬರುವ ರೀತಿಯಲ್ಲಿ ಬರುತ್ತಾನೆ. ಪೌಲನು ಹೀಗೆಂದು ಹೇಳುತ್ತಾನೆ - ಆ ದಿನಕ್ಕಾಗಿ ಮತ್ತು ಆತನ ಬರೋಣಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ.

ನಮ್ಮ ಸುತ್ತಲಿರುವ ಜನರು ಎಲ್ಲವು ಸಮಾಧಾನಕರವಾಗಿಯೂ ಮತ್ತು ಸುರಕ್ಷಿತವಾಗಿಯೂ ಇವೆಯೆಂದು ಕಲ್ಪಿಸಿಕೊಳ್ಳುತ್ತಾರೆ (1 ಥೆಸಲೋನಿಕ 5:3). ಆದರೆ ವಿನಾಶವು ಅವರ ಮೇಲೆ ಕ್ಷಣಮಾತ್ರದಲ್ಲಿ ಬರುತ್ತದೆ. ಇಲ್ಲಿ ಹೇಳುವುದೇನೆಂದರೆ - ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ವಿನಾಶವು ಬರುತ್ತದೆ (1 ಥೆಸಲೋನಿಕ 5:3). ಯೇಸು ಸಹ ಕೊನೆ ದಿನಗಳ ಬಗ್ಗೆ ಹೀಗೆಯೇ ಮಾತನಾಡಿದ್ದಾನೆ (ಮತ್ತಾಯ 24:8). ಮಗುವಿಗೆ ಜನ್ಮ ಕೊಡುವ ಮುಂಚೆ ಎಷ್ಟು ತಾಸುಗಳು ನೋವು ಅನುಭವಿಸಬೇಕೆಂದು ಪ್ರತಿಯೊಬ್ಬ ಹೆಂಗಸಿಗೆ ಗೊತ್ತು. (ಕೆಲವು ತಾಯಂದಿರು ಹೇಳುವುದುಂಟು - ಈ ನೋವು ಎಷ್ಟು ವಿಪರೀತವಾಗಿತ್ತೆಂದರೆ, ಸಾಯೋಣ ಎಂದೆನಿಸಿತ್ತು). ಇದು ಕೇವಲ ಮಗು ಹುಟ್ಟಿದ ನಂತರ ಹೇಳುವ ಮಾತು. ಕ್ರಿಸ್ತನ ಬರೋಣದ ಮೊದಲು ಸಂಕಟಗಳ ಸಮಯ ನೋವುಳ್ಳದ್ದಾಗಿರುತ್ತದೆ ಎಂಬುದರ ಚಿತ್ರಣ ಇದಾಗಿದೆ. ಯಾವುದೇ ಮಗುವು ಪ್ರಸವ ವೇದನೆಯಿಲ್ಲದೆ ಜನಿಸಿಲ್ಲ. ಅದೇ ರೀತಿ ಕರ್ತನ ಬರೋಣವು ನೋವುಳ್ಳ ಸಂಕಟಗಳ ಮುಂಚೆ ಆಗುವುದಿಲ್ಲ. ನಾವು ಆ ಕಾಲದ ಬಗ್ಗೆ ಭಯಪಡುವುದಿಲ್ಲ. ನಾವು ಕರ್ತನಿಗಾಗಿ ಇಲ್ಲಿ ಸಾಕ್ಷಿಗಳಾಗಲು ಮತ್ತು ಸುವಾರ್ತೆಗೋಸ್ಕರ ನಮ್ಮ ಜೀವಿತವನ್ನು ಮುಡಿಪಾಗಿಡಲು ಆತನು ಅನುಮತಿಸುವುದಾದರೆ, ಅದು ನಮಗೊಂದು ದೊಡ್ಡ ಸನ್ಮಾನವಾಗಿದೆ.