WFTW Body: 

ಲೂಕ 9:49, 50 ರಲ್ಲಿ ಹೀಗೆ ಹೇಳುತ್ತದೆ, ಯಾರಾದರೂ, ನಾವು ಹೊಂದಿರುವ ಸೇವೆಗಿಂತ ಸಂಪೂರ್ಣ ಭಿನ್ನವಾಗಿರುವ ಸೇವೆಯನ್ನು ಹೊಂದಿದ್ದರೆ, ಆಗ ನಾವು ಏನು ಮಾಡಬೇಕು ಎಂದು ಯೇಸು ನಮಗೆ ಕಲಿಸಿದ್ದಾರೆ.

ಯಾರೋ ಒಬ್ಬ ದೆವ್ವಗಳನ್ನು ಬಿಡುಸುತ್ತಿದ್ದನು, ಆದರೆ ಆತನು ಶಿಷ್ಯರ ಸಂಗಡ ಸೇರಿರಲಿಲ್ಲ. ಆತನು ಮಾಡುತ್ತಿರುವುದನ್ನು ನಿಲ್ಲಿಸುವಂತೆ ಯೋಹಾನನು ಯೇಸುವಿನಲ್ಲಿ ಕೇಳಿಕೊಂಡನು. ಆದರೆ ಯೇಸು ಯೋಹಾನನಿಗೆ, ಅವನನ್ನು ಏಕಾಂಗಿಯಾಗಿ ಬಿಡುವಂತೆ ಮತ್ತು ಆ ಸೇವೆಯನ್ನು ಮುಂದುವರೆಸಲು ಅನುವು ಮಾಡಿಕೊಡುವಂತೆ ಹೇಳಿದನು. ನೀನು ನಿನ್ನ ಕರೆಗೆ ಬದ್ದನಾಗಿರು ಮತ್ತು ಅವರ ಕರೆಗಳನ್ನು ಪೂರೈಸಿಕೊಳ್ಳಲು ಬಿಡು ಎಂದು ಯೇಸು ಹೇಳಿದರು.

ಅನೇಕ ಕ್ರೈಸ್ತರು ತಮ್ಮ ಸ್ವಂತ ಸೇವೆಯನ್ನು ಮುಖ್ಯವೆಂದು ಪರಿಗಣಿಸಿಕೊಂಡಿರುತ್ತಾರೆ, ಈ ಕಾರಣದಿಂದ ಅವರು ಭಾವಿಸುವುದೇನೆಂದರೆ, ಪ್ರತಿಯೊಬ್ಬರು ಇದೇ ರೀತಿ ಸೇವೆ ಮಾಡಬೇಕು ಎಂದು. ”ದೇಹವೆಲ್ಲಾ ಕಣ್ಣಾದರೆ ಕೇಳುವುದೆಲ್ಲಿ? ಅದೆಲ್ಲಾ ಕೇಳುವುದಾದರೆ ಮೂಸಿ ನೋಡುವುದೆಲ್ಲಿ '' (1 ಕೊರಿಂಥ 12:17). ಭಿನ್ನವುಳ್ಳ ಜನರಿಗೆ ಬಗೆ ಬಗೆಯ ಸೇವೆಗಳನ್ನು ದೇವರು ಕೊಟ್ಟಿರುತ್ತಾನೆ ಎಂದು ಒಬ್ಬ ಪ್ರೌಢ ಕ್ರೈಸ್ತನು ಗ್ರಹಿಸಿಕೊಂಡಿರುತ್ತಾನೆ.

ಅನೇಕ ಕ್ರೈಸ್ತ ಗುಂಪಿನಲ್ಲಿ, ನಾಯಕನು ಕೆಲವೊಮ್ಮೆ ವಿಶಾಲ ಹೃದಯವನ್ನು ಹೊಂದಿರುತ್ತಾನೆ, ಆದರೆ ಆತನ ಹಿಂಬಾಲಕರು ಕಿರಿದಾದ ಹೃದಯವನ್ನು ಹೊಂದಿರುತ್ತಾರೆ. ಇದನ್ನು ನಾನು ನೋಡಿದ್ದೀನಿ. ಏಕೆಂದರೆ ಇವರು ತಮ್ಮ ನಾಯಕನ ರೀತಿಯಲ್ಲಿ ದೇವರನ್ನು ಅರಿತಿರುವುದಿಲ್ಲ

ಒಬ್ಬನು ಸುವಾರ್ತಿಕನಾಗ ಬಯಸಿದರೆ, ಮತ್ತೊಬ್ಬನು ಸಮಾಜ ಸೇವೆಯನ್ನು ಮಾಡ ಬಯಸುತ್ತಾನೆ, ಇಬ್ಬರು ತಮ್ಮ ಸ್ವಂತ ಸೇವೆಯನ್ನು ಪೂರೈಸಿಕೊಳ್ಳಲಿ. ಎರಡರ ಮೂಲಕವೂ ಕ್ರಿಸ್ತನ ಯಾವುದೋ ಒಂದು ರೀತಿಯನ್ನು ಸ್ಪಷ್ಟವಾಗಿ ತೋರಿಸಬೇಕು. ಆದರೆ ಒಬ್ಬರನ್ನೊಬ್ಬರು ತೆಗಳಬಾರದು. ಸೃಷ್ಟಿಯಲ್ಲಿ ಹಲವು ವಿಧಗಳಿವೆ. ದೇವರು ಎಲ್ಲಾ ಹೂವುಗಳನ್ನು ಒಂದೇ ಬಣ್ಣದಲ್ಲಿ ಸೃಷ್ಟಿಸಿರುವುದಿಲ್ಲ. ಒಂದೇ ಆಕಾರ ಮತ್ತು ಗಾತ್ರದಂತೆ ಮಾಡಿರುವುದಿಲ್ಲ. ಅದೇ ರೀತಿ ಕ್ರಿಸ್ತನ ದೇಹವು ಸಹ ಆಗಿದೆ. ಕೆಲವು ಮಂದಿ ಬೈಬಲ್ ಕಾಲೇಜಿಗೆ ಯಾರೂ ಹೋಗಬಾರದು ಎಂದು ಭಾವಿಸಿಕೊಂಡಿರುತ್ತಾರೆ. ಏಕೆಂದರೆ ಅವರು ಎಂದಿಗೂ ಅಲ್ಲಿಗೆ ಹೋಗಿರುವುದಿಲ್ಲ. ಇನ್ನೂ ಕೆಲವರು ಪ್ರತಿಯೊಬ್ಬರೂ ಬೈಬಲ್ ಕಾಲೇಜಿಗೆ ಹೋಗಬೇಕು ಎಂದು ಭಾವಿಸಿಕೊಂಡಿರುತ್ತಾರೆ. ಏಕೆಂದರೆ ಅವರು ಬೈಬಲ್ ಕಾಲೇಜಿಗೆ ಹೋಗಿರುತ್ತಾರೆ. ಆದರೆ ಇಬ್ಬರೂ ತಪ್ಪಾಗಿದ್ದಾರೆ. ದೇವರು ಎರಡು ವಿಧಾನಗಳನ್ನು ಅವರವರ ಕರೆಗೆ ಅನುಗುಣವಾಗಿ ಉಪಯೋಗಿಸುತ್ತಾನೆ. ಕಿರಿದಾದ ಬುದ್ದಿಯನ್ನು ಹೊಂದಿರುವಂತ ಜನರು, ತಮ್ಮ ಸ್ವಂತ ಸೇವೆಯನ್ನು ಹೊರತುಪಡಿಸಿ ಬೇರೆ ಯಾವುದನ್ನು ನೋಡುವುದಿಲ್ಲ. ಇಂತಹ ಜನರಿಗೆ ಇಲ್ಲಿ ಒಂದು ಮಾತಿದೆ : ಪ್ರತಿಯೊಂದು ಸೇವೆಗೂ ದೇವರಿಗೆ ಕೃತಜ್ನತೆಯನ್ನು ಸಲ್ಲಿಸಿ, ನಿಮ್ಮ ಸ್ವಂತ ಸೇವೆಗೆ ಬದ್ದನಾಗಿರು ಎಂದು.

ಲೂಕ 9:52 ರಲ್ಲಿ, ಯೇಸು ಸಮಾರ್ಯದ ಕಡೆ ಬರುವುದನ್ನು ನಾವು ನೋಡುತ್ತೇವೆ. ಈ ಒಂದು ಪಟ್ಟಣವು ವರ್ಷಕ್ಕಿಂತ ಮುಂಚೆ ಒಂದು ದೊಡ್ಡ ಉಜ್ಜೀವನವನ್ನು ಕಂಡಿತ್ತು. ಪರಿವರ್ತನೆಗೊಂಡಂತ ಒಬ್ಬ ಪಾಪವುಳ್ಳ ಹೆಂಗಸಿನ ಮುಖಾಂತರ, ಆ ಇಡೀ ಪಟ್ಟಣವು ಯೇಸುವಿನ ಕಡೆ ಸೆಳೆಯಲ್ಪಟ್ಟಿತ್ತು (ಯೋಹಾನ 4). ಯೇಸು ಸಂದೇಶಕಾರರನ್ನು ಒಂದು ಸ್ಥಳದಲ್ಲಿ ಸಿದ್ದತೆ ಮಾಡುವಂತೆ ಆತನಿಗಿಂತ ಮುಂದಾಗಿ ಕಳುಹಿಸಿರುತ್ತಾನೆ. ಆದರೆ ಈ ಸಮಯದಲ್ಲಿ, ಆ ಸಮಾರ್ಯದ ಒಂದು ಹಳ್ಳಿಯವರು ಆತನನ್ನು ಅಂಗೀಕರಿಸಲಿಲ್ಲ (ವಚನ 53). ಹೀಗಿದ್ದರೂ, ಅನೇಕರು ಸಮಾರ್ಯದಲ್ಲಿ ಪರಿವರ್ತನೆ ಹೊಂದಿ, ಯೂದಾಯದವರ ವಿರುದ್ದವಾಗಿ ಪೂರ್ವ ಕಲ್ಪಿತ ಅಭಿಪ್ರಾಯಗಳಿಂದ ಹೊರಬರಲು ನಿರ್ಧರಿಸಿದ್ದರು ಮತ್ತು ತಮ್ಮ ಸತ್ತಂತ ಧಾರ್ಮಿಕ ಪದ್ದತಿಗಳನ್ನು ಬಿಟ್ಟು, ಕರ್ತನನ್ನು ಹಿಂಬಾಲಿಸಲು ನಿರ್ಧರಿಸಿದ್ದರು. ಇದು ಅವರ ಧಾರ್ಮಿಕ ನಾಯಕರುಗಳನ್ನು ಚಿಂತೆಗೀಡುಮಾಡುವಂತೆ ಮಾಡಿತು; ಹೀಗಾಗಿ ಇವರು ಯೇಸುವನ್ನು ಮತ್ತೊಮ್ಮೆ ಪಟ್ಟಣದೊಳಗೆ ಬಿಡದಿರಲು ನಿರ್ಧರಿಸಿದ್ದರು. ಹಾಗಾಗಿ ಯಾಕೋಬ ಮತ್ತು ಯೋಹಾನರು ಸಮಾರ್ಯದವರ ಮೇಲೆ ಆಕಾಶದಿಂದ ಬೆಂಕಿ ಬೀಳಿಸಬೇಕೆಂದು ಬಯಸಿದ್ದರು. ಯೇಸು ಅವರನ್ನು ಗದರಿಸಿ ಹೇಳಿದ್ದೇನೆಂದರೆ, ಮನುಷ್ಯಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ, ಅವರನ್ನು ರಕ್ಷಿಸುವುದಕ್ಕಾಗಿ ಬಂದನು ಎಂಬುದಾಗಿ (ವಚನ 55, 56). ಕೆಲವು ಸಭೆ ನಿಮ್ಮನ್ನು ಹೊರ ದೊಬ್ಬಿದರೆ, ನಿಮ್ಮನ್ನು ನೀವು ತಗ್ಗಿಸಿಕೊಳ್ಳಿರಿ ಮತ್ತು ಬೇರೆ ಕಡೆ ಹೋಗಿರಿ. ನಾನು ಇದನ್ನು ಒಂದು ಸಲಕ್ಕಿಂತ ಹೆಚ್ಚು ಬಾರಿ ಮಾಡಿದ್ದೇನೆ.

ಮೇಲ್ಕಂಡ ಎರಡೂ ಉದಾಹರಣೆಗಳಲ್ಲಿ, ಯೇಸು ತನ್ನ ಶಿಷ್ಯರ ಹೃದಯಗಳನ್ನು ವಿಶಾಲಗೊಳಿಸಲು ಪ್ರಯತ್ನಿಸುತ್ತಿದ್ದನು. ಅನೇಕ ಕ್ರೈಸ್ತ ಗುಂಪಿನಲ್ಲಿ, ನಾಯಕನು ಕೆಲವೊಮ್ಮೆ ವಿಶಾಲ ಹೃದಯವನ್ನು ಹೊಂದಿರುತ್ತಾನೆ, ಆದರೆ ಆತನ ಹಿಂಬಾಲಕರು ಕಿರಿದಾದ ಹೃದಯವನ್ನು ಹೊಂದಿರುತ್ತಾರೆ. ಇದನ್ನು ನಾನು ನೋಡಿದ್ದೀನಿ. ಏಕೆಂದರೆ ಇವರು ತಮ್ಮ ನಾಯಕನ ರೀತಿಯಲ್ಲಿ ದೇವರನ್ನು ಅರಿತಿರುವುದಿಲ್ಲ.

ಜಾನ್ ವೆಸ್ಲಿ ಮತ್ತು ಜಾರ್ಜ್ ವೈಟ್ ಫೀಲ್ಡ್, ಎಂಬುವವರುಗಳು 18ನೇ ಶತಮಾನದಲ್ಲಿ ಇಂಗ್ಲೆಂಡ್ ನಲ್ಲಿ ದೊಡ್ಡ ಬೋಧಕರುಗಳಾಗಿದ್ದರು. ಜಾನ್ ವೆಸ್ಲಿ ಮತ್ತು ಆತನ ಹಿಂಬಾಲಕರು ನಂಬಿ ಬೋಧಿಸಿದ್ದೇನೆಂದರೆ, ಒಬ್ಬ ರಕ್ಷಣೆಯನ್ನು ಹೊಂದಿದರೂ ಸಹ ಕೈ ತಪ್ಪಿ ಹೋಗಬಹುದು ಎಂದು. ಜಾರ್ಜ್ ವೈಟ್ ಫೀಲ್ಡ್ ಮತ್ತು ಆತನ ಹಿಂಬಾಲಕರುಗಳು ಬೋಧಿಸಿದ್ದೇನೆಂದರೆ, ಒಬ್ಬ ಮನುಷ್ಯ ಒಂದು ಬಾರಿ ರಕ್ಷಣೆ ಹೊಂದಿದರೆ, ಯಾವಾಗಲೂ ರಕ್ಷಣೆ ಹೊಂದಿದ ಹಾಗೇ ಎಂದು. ಆದರೆ ವೆಸ್ಲಿ ಮತ್ತು ವೈಟ್ ಫೀಲ್ಡ್ ಇಬ್ಬರು ಒಳ್ಳೆ ಸ್ನೇಹಿತರಾಗಿದ್ದರು ಮತ್ತು ವೈಟ್ ಫೀಲ್ಡ್ ರವರು ಸತ್ತಾಗ, ಇವರ ಅಂತ್ಯಕ್ರಿಯೆಯನ್ನು ವೆಸ್ಲಿರವರೇ ನಡೆಸಿ ಕೊಟ್ಟಿದ್ದರು. ವೆಸ್ಲಿರವರ ಹಿಂಬಾಲಕರುಗಳಲ್ಲಿ ಒಬ್ಬರು ನಂತರ ವೆಸ್ಲಿರವರಿಗೆ ಕೇಳಿದ್ದೇನೆಂದರೆ, ”ಜಾರ್ಜ್ ಫೀಲ್ಡ್ ರವರನ್ನು ನೀವು ಪರಲೋಕದಲ್ಲಿ ನೋಡುವಿರಾ?'' ಎಂಬುದಾಗಿ. ಇದಕ್ಕೆ ಜಾನ್ ವೆಸ್ಲಿ ರವರು ಹೀಗೆ ಪ್ರತಿಕ್ರಿಯಿಸಿದ್ದರು, ''ಜಾರ್ಜ್ ವೈಟ್ ಫೀಲ್ಡ್ ರವರು ದೇವರ ಮಹಿಮೆಯ ಗಗನ ಮಂಡಲದಲ್ಲಿ ಪ್ರಜ್ವಲಿಸುವಂತ ನಕ್ಷತ್ರ ಮತ್ತು ಸಿಂಹಾಸನದ ಹತ್ತಿರ ನಿಲ್ಲುತ್ತಾರೆ, ನನ್ನಂಥವರು, ಅತ್ಯಲ್ಪಕ್ಕಿಂತ ಕಡಿಮೆ, ಅವರ ಮಿನುಗುನೋಟವನ್ನು ಸಹ ನಾನು ಹಿಡಿಯಲು ಆಗುವುದಿಲ್ಲ” ಎಂಬುದಾಗಿ. ವೆಸ್ಲಿ ಹಿಂಬಾಲಕರುಗಳು ಕಿರಿದಾದ ಹೃದಯವನ್ನು ಹೊಂದಿದ್ದರು. ಆದರೆ ವೆಸ್ಲಿರವರು ದೀನರಾಗಿದ್ದರು. ವಿಶಾಲ ಹೃದಯವನ್ನು ಹೊಂದಿದ್ದ ಮನುಷ್ಯನಾದ ವೆಸ್ಲಿರವರು ವೈಟ್ ಫೀಲ್ಡ್ ರವರನ್ನು ತಮಗಿಂತ ಮೇಲೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟಿದ್ದರು.