ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ನಾಯಕರಿಗೆ
WFTW Body: 

ಯೆರೆಮೀಯ 3:14 ರಲ್ಲಿ ದೇವರು ಹೀಗೆ ಹೇಳಿದ್ದಾರೆ : ”ಒಂದು ಪಟ್ಟಣಕ್ಕೆ ಒಬ್ಬನಂತೆಯೂ ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರತರುವೆನು”. ಚಿಯೋನ್ ಇಲ್ಲಿ ದೇವರ ಸತ್ಯವುಳ್ಳ ಸಭೆಯ ರೀತಿಯಲ್ಲಿ ಇದೆ. ಒಂದು ಸಭೆಯ ಗುರುತೇನೆಂದರೆ, ಅಲ್ಲಿ ನಾಯಕರುಗಳನ್ನು ಹೊಂದಿರುವುದು, ಈ ನಾಯಕರುಗಳು ”ದೇವರ ಮನಸ್ಸು ಒಪ್ಪುವ ಪಾಲಕರಾಗಿದ್ದುಕೊಂಡು” ದೇವರ ಮಕ್ಕಳನ್ನು ದೇವರ ಜ್ಞಾನ ವಿವೇಕಗಳಿಂದ ಪಾಲಿಸುವುದಾಗಿದೆ (ಯೆರೆಮೀಯ 3:15). ನೀವು ಈ ರೀತಿಯ ನಾಯಕರನ್ನು ಕಂಡುಕೊಂಡಾಗ, ನೀವು ಚಿಯೋನಿಗೆ ಬಂದಿರುವುದಾಗಿ ಗೊತ್ತು ಮಾಡಿಕೊಳ್ಳಬೇಕು. ನಿಮ್ಮ ಸಭೆಯ ನಾಯಕರುಗಳು ಆ ರೀತಿಯಾಗಿಲ್ಲವೆಂದರೆ, ನೀವು ಚಿಯೋನ್ ನ್ನು ಇನ್ನು ಕಂಡುಹಿಡಿದಿಲ್ಲ ಎಂದು ನಿಶ್ಚಯಿಸಿಕೊಳ್ಳಬೇಕು. ದೈವಿಕ ನಾಯಕರುಗಳು ಬುದ್ಧಿವಂತಿಕೆಯಿಂದ ಅಳೆಯಲ್ಪಡುವುದಿಲ್ಲ. ಆದರೆ ದೇವರ ಮಕ್ಕಳಿಗಾಗಿ ಅವರು ಹೊಂದಿರುವ ಕರುಣೆ ಮತ್ತು ಪ್ರೀತಿಯಿಂದ ಅಳೆಯಲ್ಪಡುತ್ತಾರೆ. ಅವರು ದೇವರ ಮಕ್ಕಳನ್ನು ಉಪಯೋಗಿಸಿಕೊಳ್ಳುವುದಿಲ್ಲ. ಅವರಿಗೆ ಜನರ ಕಾಣಿಕೆಗಳಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ಕರ್ತನೊಟ್ಟಿಗಿನ ಅವರ ನಡಿಗೆಯಲ್ಲಿ ಆಸಕ್ತಿ ಇರುತ್ತದೆ.

ದೇವರು ನಿಮ್ಮ ಮೇಲೆ ಪ್ರಭಾವ ಬೀರಲಿ, ಆಗ ನೀವು ಮತ್ತೊಬ್ಬರನ್ನು ದೈವಿಕತೆಯ ಕಡೆಗೆ ಪ್ರಭಾವ ಬೀರಿಸಿ

ಸೊದೋಮ್ ಪಟ್ಟಣವು ನಾಶವಾಗಬೇಕಾದಾಗ, ದೇವರು ಅಬ್ರಹಾಮನಿಗೆ ಏನು ಹೇಳಿದರೋ, ಅದೇ ರೀತಿ ಯೆರೆಮೀಯನಿಗೂ ಸಹ ದೇವರು ಹೇಳುತ್ತಾರೆ. ಅಬ್ರಹಾಮನು ಕೋರಿಕೊಂಡು ದೇವರನ್ನು ಹೀಗೆ ಕೇಳುತ್ತಾನೆ, ”ಒಂದು ವೇಳೆ ಈ ಊರೊಳಗೆ ಹತ್ತು ಮಂದಿ ಸಿಕ್ಕರೂ, ಆ ಊರನ್ನು ನಾಶ ಮಾಡುತ್ತೀಯಾ”? ಎಂದು. ದೇವರು ಹೀಗೆ ಹೇಳುತ್ತಾರೆ, ''ಹೌದು, ಸೊದೋಮಿನಲ್ಲಿ ಹತ್ತು ಮಂದಿ ನೀತಿವಂತರು ಇದ್ದರೂ ಸಾಕು, ಉಳಿಸುವೆನು, ನಾಶ ಮಾಡುವುದಿಲ್ಲ”
(ಆದಿಕಾಂಡ 18:32) ಮತ್ತು ಇಲ್ಲಿ ದೇವರು ಯೆರೆಮೀಯನಿಗೆ ಹೀಗೆ ಹೇಳುತ್ತಾರೆ, ”ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡುತ್ತಾ ಅಲ್ಲಿನ ಚೌಕಗಳಲ್ಲಿ ಹುಡುಕಿರಿ; ನ್ಯಾಯವನ್ನು ಕೈಕೊಂಡು ಸತ್ಯವನ್ನನುಸರಿಸುವ ಒಬ್ಬನಾದರೂ ಇದ್ದಾನೋ(ಹತ್ತು ಜನ ಅಲ್ಲ ಒಬ್ಬನು), ಇಂಥ ಸತ್ಪುರುಷನನ್ನು ಕಂಡುಕೊಳ್ಳಬಹುದೇ ಎಂಬುದನ್ನು ನೋಡಿ ನಿಶ್ಚಯಿಸಿರಿ; ಸಿಕ್ಕಿದರೆ ನಾನು ಪಟ್ಟಣವನ್ನು ಕ್ಷಮಿಸುವೆನು” (ಯೆರೆಮೀಯ 5:1). ಆದರೆ ಯೆರೆಮೀಯನು ಒಬ್ಬನೇ ಒಬ್ಬನನ್ನು ಕಂಡು ಹಿಡಿಯಲಾಗಲಿಲ್ಲ. ಒಬ್ಬನೇ ಒಬ್ಬ ನೀತಿವಂತ ವ್ಯಕ್ತಿಯು ಇಲ್ಲದೇ ಇರುವಂತ ಒಂದು ಊರಿನ ಸ್ಥಿತಿಯನ್ನು ಕಲ್ಪಿಸಿಕೊಳ್ಳಿರಿ! ನಿಮಗೆ ಗೊತ್ತಾ, ಸಭೆಯಲ್ಲಿರುವ ಒಬ್ಬ ನೀತಿವಂತ ಮನುಷ್ಯನು ಸಭೆಯ ಮೇಲೆ ದೇವರ ಆಶಿರ್ವಾದವನ್ನು ತರುತ್ತಾನೆಂದು? ಒಬ್ಬ ನೀತಿವಂತ ಮನುಷ್ಯನು ಮನೆಯೊಳಗೆ ಮತ್ತು ಅನ್ಯೂನ್ಯತೆಯ ಮೇಲೆ ದೇವರ ಆಶಿರ್ವಾದವನ್ನು ತರುತ್ತಾನೆ. ಒಬ್ಬ ನೀತಿವಂತ ಮನುಷ್ಯ ಮತ್ತು ದೇವರು ಇಬ್ಬರು ಎಲ್ಲಿಯಾದರೂ ಸೇರಿದರೆ ಅದು ಬಹುಮತವಾಗಿರುತ್ತದೆ. ನೀತಿವಂತ ಗಂಡಸು ಮತ್ತು ಹೆಂಗಸ್ಸು ಆಗಿರಿ ಮತ್ತು ಆಗ ನೀವು ಎಲ್ಲೇ ಹೋದರೂ ಸೈತಾನನ ವಿರುದ್ಧವಾಗಿ ಬಿಲ್ಲೆಯನ್ನು ತಿರುಗಿಸುತ್ತೀರಿ. ಇದಕ್ಕೇ ದೇವರು ನಿಮ್ಮನ್ನು ಅದ್ಬುತವಾಗಿ ಬೆಂಬಲಿಸುತ್ತಾರೆ.

ಯೆರೆಮೀಯ 15:19 ರಲ್ಲಿ ದೇವರು ಯೆರೆಮೀಯನಿಗೆ ಹೀಗೆ ಹೇಳಿದರು : ”ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ”. ಲೋಕ ನಿಮ್ಮ ಮೇಲೆ ಪ್ರಭಾವ ಬೀರದಿರಲಿ; ಮತ್ತು ಭ್ರಷ್ಠ ಕ್ರೈಸ್ತತ್ವ ನಿಮ್ಮ ಮೇಲೆ ಪ್ರಭಾವ ಬೀರದಿರಲಿ. ಹಿಂಜಾರಿ ಬಿದ್ದಂತ ಪಾಸ್ಟರ್ ಗಳು ಮತ್ತು ಹಣವನ್ನು ಪ್ರೀತಿಸುವಂತ ಬೋಧಕರು ನಿಮ್ಮ ಮೇಲೆ ಪ್ರಭಾವ ಬೀರುವಂತೆ ಬಿಡಬೇಡಿ, ದೇವರು ನಿಮ್ಮ ಮೇಲೆ ಪ್ರಭಾವ ಬೀರಲಿ, ಆಗ ನೀವು ಮತ್ತೊಬ್ಬರನ್ನು ದೈವಿಕತೆಯ ಕಡೆಗೆ ಪ್ರಭಾವ ಬೀರಿಸಿ. ದೇವರ ವಾಗ್ದಾನ ಈ ರೀತಿ ಇದೆ: ”ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿ ಗೋಡೆಯನ್ನಾಗಿ ಮಾಡುವೆನು; ಅವರು ನಿನಗೆ ವಿರುದ್ಧವಾಗಿ ಯುದ್ದ ಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಉದ್ದರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು” (ಯೆರೆಮೀಯ 15:19). ಹಲ್ಲೆಲೂಯ!.

ಯೆರೆಮೀಯ 20:7-11 ರಲ್ಲಿ (ಲೀವಿಂಗ್ ಬೈಬಲ್ ಭಾಷಾಂತರ) ಯೆರೆಮೀಯ ಹೀಗೆ ಹೇಳುತ್ತಾನೆ, ”ದೇವರೆ, ಈ ಜನರಿಗೆ ಕರುಣೆಯ ಮಾತುಗಳನ್ನು ಆಡುವುದಕ್ಕೆ ನೀನು ನನಗೆ ಅನುಮತಿಸಲಿಲ್ಲ. ನನ್ನ ಮಾತು ಯಾವಾಗಲೂ ನ್ಯಾಯತೀರ್ಪಿನಿಂದ ಕೂಡಿತ್ತು”. ಅನೇಕರು ತಮ್ಮ ಬೋಧನೆಯಲ್ಲಿ ಸಮತೋಲನ ಕಾಯ್ದುಕೊಂಡಾಗ ಪ್ರಖ್ಯಾತಿಯನ್ನು ಪಡೆದುಕೊಳ್ಳಬೇಕೆಂದು ಬಯಸುತ್ತಾರೆ. ಇದು ಶಿಕ್ಷಕರಿಗೆ ಪರವಾಗಿಲ್ಲ. ಆದರೆ ಯಾವ ಪ್ರವಾದಿಯು ಸಹ ಸಮತೋಲನ ಕಾಯ್ದುಕೊಂಡಿಲ್ಲ. ಪ್ರವಾದಿಗಳು ತಮ್ಮ ಸೇವೆಯಲ್ಲೆಲ್ಲಾ ಅಸಮತೋಲನ ಕಾಯ್ದುಕೊಂಡಿದ್ದರು. ಅವರು ದೇವರಿಂದ ಬಂದ ಸಂದೇಶವನ್ನು ಹೊಂದಿದ್ದರು ಮತ್ತು ಅದೇ ಸಂದೇಶವನ್ನು ಯಾವಾಗಲೂ ಬೋಧಿಸುತ್ತಲೇ ಇದ್ದರು. ಯೆರೆಮೀಯನು 40 ವರ್ಷಗಳ ಕಾಲ ಅದೇ ನ್ಯಾಯ ತೀರ್ಪಿನ ಸಂದೇಶವನ್ನು ಬೋಧಿಸುತ್ತಿದ್ದನು. ಕ್ರಿಸ್ತನ ದೇಹದಲ್ಲಿಯೂ ಸಹ, ಯಾರಿಗೆ ವಿಶೇಷವಾದ ಭಾರವಿತ್ತೊ ಅಂಥ ಪ್ರವಾದಿಗಳನ್ನು ದೇವರು ಎಬ್ಬಿಸಿದರು. ಬೇರೆ ಕ್ರೈಸ್ತರು ಆ ಭಾರವನ್ನು ಹೊಂದಿರುವುದಿಲ್ಲ. ಆದರೆ ಒಂದೇ ಒಂದು ಭಾರವನ್ನು ಹೊಂದಿರುವಂತ ಪ್ರವಾದಿಯನ್ನು ದೇವರು ಕೆಲವೊಮ್ಮೆ ಕೊಡುತ್ತಿದ್ದರು. ಆತನು ದೇವರ ಪ್ರವಾದಿಯಾಗಿ ಉಳಿಯಬೇಕೆಂದರೆ ಆ ಭಾರಕ್ಕೆ ಸತ್ಯವಂತನಾಗಿರಬೇಕಿತ್ತು ಮತ್ತು ಆತನನ್ನು ಹೆಚ್ಚು ”ಸಮತೋಲನ” ಸೇವೆಯ ಮೂಲಕ ಬೇರೆ ಕಡೆ ತಿರುಗಿಸಲು ಚೆನ್ನಾಗಿ ಅರ್ಥೈಸಿಕೊಂಡಿರುವ ಬೇರೆ ಕ್ರೈಸ್ತರನ್ನು ಆತನು ಅನುಮತಿಸಬಾರದಿತ್ತು. ಆತನು ಒತ್ತಡಕ್ಕೆ ದುರ್ಬಲನಾದಗ ”ಸಮತೋಲನ” ವಾಗುತ್ತಾನೆ. ಯೆರೆಮೀಯನು ತನ್ನ ತಲೆಮಾರಿಗಾಗಿ ದೇವರ ಪ್ರವಾದಿಗಳನ್ನು ಸತತವಾಗಿ ಹುಡುಕುತ್ತಿದ್ದನು. ದೇವರು ಯೆರೆಮೀಯನಿಗೆ ಒಂದೇ ಒಂದು ಕರುಣೆಯುಳ್ಳ ಸಂದೇಶವನ್ನು ಕೊಡದೇ, ಯೆಹೂದಿಯ ಜನರಿಗೆ ನ್ಯಾಯ ತೀರ್ಪಿನ ಸಂದೇಶವನ್ನು ಕೊಡುತ್ತಾನೆ ಮತ್ತು 40 ವರ್ಷಗಳ ಕಾಲ ಆ ಒಂದು ಕೆಲಸಕ್ಕೆ ನಂಬಿಗಸ್ಥನಾಗಿ ನಿಲ್ಲುತ್ತಾನೆ. ಇದಕ್ಕಾಗಿ ಕೊನೆಯವರೆಗೂ ದೇವರ ವಕ್ತಾರನಾಗುತ್ತಾನೆ.