WFTW Body: 

ಹೋಶೇಯನು ಉತ್ತರದ ಇಸ್ರಾಯೇಲ್ ರಾಜ್ಯಕ್ಕೆ ಪ್ರವಾದಿಸಿದನು. ಆತನ ಪ್ರವಾದನೆಯ ವಿಷಯವೇನಾಗಿತ್ತೆಂದರೆ, ಆತ್ಮಿಕ ವ್ಯಭಿಚಾರತೆ ಮತ್ತು ಎಂದಿಗೂ ಬದಲಾಗದಂತ ದೇವರ ಪ್ರೀತಿ. ಗಂಡನೊಬ್ಬನು ಅಪನಂಬಿಗಸ್ತಳಾದ ಹೆಂಡತಿಯನ್ನು ಪ್ರೀತಿಸುತ್ತಾ ಇರುವಂತೆ, ದೇವರಿಗೆ ತನ್ನ ಜನರ ಕಡೆ ಇರುವ ಮನೋಭಾವವನ್ನು ಆತನ ಪ್ರವಾದನೆಯು ತೋರಿಸುತ್ತದೆ.

ಇಸ್ರಾಯೇಲ್ "ಯೆಹೋವನ ವಧು" ಎಂಬುದಾಗಿ ಹಳೆ ಒಡಂಬಡಿಕೆಯಲ್ಲಿ ಕರೆಯಲ್ಪಟ್ಟಿತ್ತು. ಇಂದು ಕ್ರಿಸ್ತನೊಂದಿಗೆ ನಮಗಿರುವ ಸಂಬಂಧದಂತೆ, ದೇವರ ಮತ್ತು ಇಸ್ರಾಯೇಲ್ ನ ನಡುವಿನ ಸಂಬಂಧ ಮದುವೆಯ ಸಂಬಂಧದಂತೆ ಇರಬೇಕಾಗಿತ್ತು. ಹೆಂಡತಿಯೊಬ್ಬಳು ತನ್ನ ಗಂಡನಿಗಿಂತ, ಮತ್ತೊಬ್ಬನನ್ನು ಹೆಚ್ಚಾಗಿ ಪ್ರೀತಿಸಿದರೆ ಅಥವಾ ಮತ್ತೊಬ್ಬ ಮನುಷ್ಯನನ್ನು ಮೆಚ್ಚಿಸಲು ಪ್ರಯತ್ನಿಸಿದರೆ, ಆಕೆಯು ಅಪನಂಬಿಗಸ್ತಳು ಮತ್ತು ಆಕೆಯನ್ನು ತಕ್ಕುದಾಗಿಯೇ "ವ್ಯಭಿಚಾರಿಣಿ" ಎಂದು ಕರೆಯಬಹುದು. ಕ್ರಿಸ್ತನೊಂದಿಗೆ ನಮಗಿರುವ ಸಂಬಂಧ ಇದೇ ರೀತಿಯದ್ದಾಗಿದೆ. ನಾವು ಕ್ರಿಸ್ತನನ್ನು ಮದುವೆಯಾಗಿ, ಹಣವನ್ನು ಪ್ರೀತಿಸಿದರೆ, ಅದು ಆತ್ಮಿಕ ವ್ಯಭಿಚಾರತೆಯಾಗಿದೆ. ಏಕೆಂದರೆ, ಹಣವು ಇನ್ನೊಬ್ಬ ಮನುಷ್ಯನಾಗಿದೆ. ನಾವು ಈ ಲೋಕದ ಸನ್ಮಾನಗಳನ್ನು ಪ್ರೀತಿಸಿದರೆ, ಇದೂ (ಈ ಲೋಕವು), ಸಹ ನಮ್ಮ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುವ "ಮತ್ತೊಬ್ಬ ಮನುಷ್ಯ"ನಿಗೆ (ಲೋಕವು) ಹೋಲುತ್ತದೆ. ನಾವು ಪಾಪದ ಆಶಾಪಾಶಗಳನ್ನು ಪ್ರೀತಿಸಿದರೆ, ಅದು ಕೂಡ ಲೋಕದ ಒಂದು ಭಾಗವಾಗಿದೆ. ಅದಕ್ಕಾಗಿಯೇ ಯಾಕೋಬನು, ವಿಶ್ವಾಸಿಗಳಿಗೆ ಹೀಗೆ ಹೇಳುತ್ತಾನೆ - "ವ್ಯಭಿಚಾರಿಗಳು ನೀವು, ಇಹಲೋಕ ಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ?" (ಯಾಕೋಬ 4:4).

ಹೋಶೇಯನು ಈ ಬಹು ಮುಖ್ಯವಾದ ವಿಷಯವದ ಬಗ್ಗೆ ಹೇಳುತ್ತಾನೆ ಮತ್ತು ದೇವರು ಆತನಿಗೆ ಈ ಪಾಠವನ್ನು ಬಹಳ ನೋವಿನ ಮಾರ್ಗದ ಮೂಲಕ ತಿಳಿಸಿಕೊಟ್ಟರು. ಹಳೆ ಒಡಂಬಡಿಕೆಯ ಬೇರೆಲ್ಲ ಪ್ರವಾದಿಗಳಿಗಿಂತ ಹೆಚ್ಚಾಗಿ ಹೋಶೇಯನಲ್ಲಿ ನಾವು ನೋಡುವುದೇನೆಂದರೆ, ತನ್ನ ಸೇವಕನು, ತನ್ನ ಹೃದಯದ ಭಾವವನ್ನು ಅನುಭವಿಸುವಂತೆ ದೇವರು ಮಾಡುವುದು. ಹೊಸ ಒಡಂಬಡಿಕೆಯಲ್ಲಿಯೂ ಸಹ ಒಬ್ಬ ನಿಜವಾದ ಪ್ರವಾದಿಯ ಸೇವೆಯ ತತ್ವ ಇದಾಗಿದೆ. ದೇವರು ತನ್ನ ಜನರಿಗೆ ಕರುಣೆಯನ್ನು ತೋರುವ ಪ್ರಕಾರ, ನಾವು ಸಹ ಜನರಿಗೆ ಕರುಣೆಯನ್ನು ತೋರಬೇಕು. ದೇವರು ತನ್ನ ಜನರನ್ನು ನೋಡುವ ರೀತಿಯಲ್ಲಿ, ನಾವು ಕೂಡ ಅವರನ್ನು ನೋಡಬೇಕು. ಇಲ್ಲವಾದಲ್ಲಿ, ದೇವರಿಗೆ ಜನರ ಬಗ್ಗೆ ಇರುವ ಭಾವನೆ ನಮಗಿರದೆ, ನಾವು ಕೇವಲ ಏನೋ ಒಂದು ಸತ್ಯವನ್ನು ಬೋಧಿಸುವ ಬೋಧಕರಾಗುತ್ತೇವೆ. ಹಾಗಾಗಿ ನಾವು ದೇವ ಜನರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಮೊದಲು ದೇವರು ನಮಗೆ ಅನೇಕ ನೋವು, ಸಂಕಟಗಳ ಅನುಭವಗಳನ್ನು ಕೊಟ್ಟು, ಅವನು ಜನರ ಬಗ್ಗೆ ಅನುಭವಿಸುವುದನ್ನು (ಭಾವಿಸುವುದನ್ನು) ನಾವೂ ಅನುಭವಿಸಬೇಕೆಂದು ಬಯಸುತ್ತಾನೆ.

ಉದಾಹರಣೆಗೆ, ಹೋಶೇಯನ ಸಮಯದಲ್ಲಿ, ಇಸ್ರಾಯೇಲ್ ಅಪನಂಬಿಗಸ್ತಳಾದ ಹೆಂಡತಿಯಂತಿತ್ತು. ಆಕೆಯು ವಿಗ್ರಹಗಳನ್ನು ಆರಾಧಿಸಿದಾಗ, ಆಕೆಯು ಕರ್ತನಿಗೆ ಅಪನಂಬಿಗಸ್ತಳಾದಳು. ಅದನ್ನು ವ್ಯಭಿಚಾರವೆಂದು ಚಿತ್ರಿಸಲಾಗಿತ್ತು. ಹಳೆ ಒಡಂಬಡಿಕೆಯಲ್ಲಿ ವ್ಯಭಿಚಾರ ಮತ್ತು ವಿಗ್ರಹಾರಾಧನೆಗೆ ನಿಕಟವಾದ ಸಂಬಂಧವನ್ನು ಕಲ್ಪಿಸಲಾಗಿತ್ತು. ಹೊಸ ಒಡಂಬಡಿಕೆಯಲ್ಲೂ, ಆತ್ಮಿಕ ವ್ಯಭಿಚಾರವು ವಿಗ್ರಹಾರಾಧನೆಯ ಪ್ರತಿರೂಪವಾಗಿದೆ. ವಿಗ್ರಹಾರಾಧನೆಯೆಂದರೆ, ನಿಜ ದೇವರಿಗಿಂತ ಬೇರೆ ಇನ್ನೇನನ್ನೋ ಆರಾಧಿಸುವುದಾಗಿದೆ. ಅದು ನಿಮ್ಮ ವ್ಯಾಪಾರವಾಗಿರಬಹುದು, ನಿಮ್ಮ ಆಸ್ತಿಯಾಗಿರಬಹುದು, ನಿಮ್ಮ ಹಣವಾಗಿರಬಹುದು, ನಿಮ್ಮ ಸುಂದರತೆಯಾಗಿರಬಹುದು ಹಾಗೂ ನಿಮ್ಮ ಸೇವೆಯೂ ಸಹ ಆಗಿರಬಹುದು. ನಿಮ್ಮ ಜೀವಿತದಲ್ಲಿ ಯಾವುದೇ ಸಂಗತಿಯು ಕ್ರಿಸ್ತನಿಗಿಂತ ಮೊದಲಿನ ಸ್ಥಾನವನ್ನು ತೆಗೆದುಕೊಂಡರೆ, ಅದು ವಿಗ್ರಹವಾಗಿದೆ. ನಿಮ್ಮ ಜೀವಿತದಲ್ಲಿ, ದೇವರ ಸ್ಥಾನವನ್ನು ಇನ್ಯಾವುದೋ ವಸ್ತು ತೆಗೆದುಕೊಂಡ ಕ್ಷಣ, ನೀವು ವಿಗ್ರಹಾರಾಧಕರಾಗುತ್ತೀರಿ ಮತ್ತು ಆತ್ಮಿಕ ವ್ಯಭಿಚಾರಿಗಳಾಗುತ್ತೀರಿ. ಆ ಕ್ಷಣ, ವ್ಯಭಿಚಾರಿಗಳಿಗೆ ಮತ್ತು ವಿಗ್ರಾಹರಾಧಕರಿಗೆ ಮಾತನಾಡುವಂತಹ ಪದಗಳು, ನಿಮಗೂ ಅನ್ವಯಿಸುತ್ತವೆ.

ಹೋಶೇಯನು ತನ್ನ ಹೃದಯದಂತೆ ಭಾವಿಸುವ ಹಾಗೆ ದೇವರು ಮಾಡಿದ್ದು ಹೇಗೆಂದರೆ, ಆತನು, ಅಪನಂಬಿಗಸ್ತಳಾದ ಹೆಂಡತಿಯನ್ನು ಮದುವೆಯಾಗುವುದರ ಮೂಲಕ. ಹೋಶೇಯನು ಸತ್ಯವನ್ನು ಕಲಿತುಕೊಳ್ಳುವ ಈ ರೀತಿ ಬಹಳ ನೋವಿನದಾಗಿತ್ತು. ಪ್ರಾರಂಭದಿಂದಲೂ ತನಗೆ ಅಪನಂಬಿಗಸ್ತಳಾಗಿ ಮತ್ತು ಮತ್ತೊಬ್ಬ ಮನುಷ್ಯನೊಂದಿಗೆ ವ್ಯಭಿಚಾರ ಮಾಡುವುದನ್ನು ತಿಳಿದಿದ್ದೂ, ಒಬ್ಬ ಹುಡುಗಿಯನ್ನು ಮಾದುವೆಯಾಗಲು ಯಾರು ಇಚ್ಚಿಸುತ್ತಾರೆ? ಪ್ರವಾದಿಗಳಾಗಲು, ಪ್ರವಾದಿಗಳು ಬಹಳವಾದ ಬೆಲೆಯನ್ನು ತೆರಬೇಕಾಗಿತ್ತು. ಹೋಶೇಯನ ಹೆಂಡತಿಯು ಆತನಿಗೆ ಅಪನಂಬಿಗಸ್ತಳಾದಾಗ, ದೇವರು ಆತನಿಗೆ ಹೇಳಿದ್ದೇನೆಂದರೆ, ನೀನು ಆಕೆಯನ್ನು ಪ್ರೀತಿಸುವುದನ್ನು ಮುಂದುವರಿಸು. ಒಂದು ಕ್ಷಣದಲ್ಲಿ ಆಕೆ ಹೋಗಿ, ತನ್ನನ್ನೇ ಮತ್ತೊಬ್ಬನಿಗೆ ಗುಲಾಮಳನ್ನಾಗಿ ಮಾರಿಕೊಂಡಳು. ಆಗ ಹೋಶೇಯನು ಹಣವನ್ನು ಪಾವತಿಸಿ, ಆಕೆಯನ್ನು ಮತ್ತೆ ಪಡೆದುಕೊಂಡನು. ಆದರೂ ಸಹ ಆತನು ಆಕೆಯನ್ನು ಪ್ರೀತಿಸುತ್ತಿದ್ದನು. ಅವನು ಆಕೆಯನ್ನು ಹಿಂದಿರುಗಿ ಕರೆದುಕೊಂಡ ಮೇಲೂ, ಆಕೆಯು ಮತ್ತೆ ತನ್ನನ್ನೇ ವ್ಯಭಿಚಾರದಲ್ಲಿ ತೊಡಗಿಸಿಕೊಂಡಳು. ಆಕೆಯೊಡನೆ ಸಹನೆಯಿಂದಿರಲು ಹೊಶೇಯನಿಗೆ ತುಂಬಾ ಕಠಿಣವಾಗಿರಬೇಕು. ಆತನು ಈ ಸಂಕಟಗಳನ್ನು ಅನುಭವಿಸುವಾಗ, ದೇವರು ಆತನಿಗೆ ಹೇಳಿದ್ದೇನೆಂದರೆ,- ನಾನು ನನ್ನ ಜನರನ್ನು ಹೇಗೆ ಪ್ರೀತಿಸುತ್ತೇನೆಂದು ಈಗ ನೀನು ಅರ್ಥ ಮಾಡಿಕೊಂಡೆ. ಈಗ ನೀನು ಹೋಗಿ ಅವರಿಗೆ ಬೋಧಿಸು. ಇದರ ಫಲಿತಾಂಶವಾಗಿ, ಹೋಶೇಯನು ದೇವ ಜನರಿಗೆ ಕಠಿಣವಾಗಿ ಮಾತನಾಡಿದನು, ಆತನ ಪವಿತ್ರತೆಯ ಸಂದೇಶದಲ್ಲಿ ಕರುಣೆ/ದಯೆಯ ಅಂಶವಿತ್ತು. ಹಾಗಾದರೆ ಆತನು ಒತ್ತಿ ಹೇಳಿದ್ದೇನು?

ಪವಿತ್ರತೆ ಮತ್ತು ದೇವರ ಬದಲಾಗದಂತ ಪ್ರೀತಿ. ಈ ಎರಡು ವಿಷಯಗಳು ಎಲ್ಲಾ ಪ್ರವಾದಿಗಳ ಭಾರಗಳಾಗಿದ್ದವು: ದೇವ ಜನರಲ್ಲಿ ಪವಿತ್ರತೆ ಮತ್ತು ತನ್ನ ಜನರು ಆತ್ಮಿಕವಾಗಿ ವ್ಯಭಿಚಾರ ಮಾಡಿದರೂ ಮತ್ತು ಹಾಳಾಗಿ ಹೋದರೂ, ದೇವರು ತನ್ನ ಜನರ ಮೇಲೆ ಬದಲಾಗದಂತ ಪ್ರೀತಿಯನ್ನು ಇಟ್ಟನು. ಸದಾ ದೇವರ ಬಯಕೆ ಏನಾಗಿತ್ತೆಂದರೆ, ತನ್ನ ಜನರನ್ನು ಮತ್ತೆ ಹಿಂದಿರುಗಿ ಕರೆದುಕೊಂಡು ಬರಬೇಕು ಎಂಬುದಾಗಿತ್ತು. ಆತನು ಅವರನ್ನು ಶಿಸ್ತಿಗೊಳಪಡಿಸುತ್ತಾನೆ. ಆದರೆ ಅವರನ್ನು ಶಿಸ್ತಿಗೊಳಪಡಿಸಿದ ನಂತರ, ಅವರು ತನ್ನೆಡೆಗೆ ತಿರುಗಿ ಬರುವುದನ್ನು ಬಯಸುತ್ತಾನೆ. ಯೆರೆಮಿಯಾನು ಹೇಳಿದ್ದೇನೆಂದರೆ, "ಶಿಸ್ತು ಪಡಿಸಿದ ನಂತರ, ದೇವರು ನಿಮ್ಮನ್ನು ಹಿಂದಿರುಗಿ ಕರೆತರುತ್ತಾನೆ" ಹೋಶೇಯನು ಸಹ ಅದನ್ನೇ ಹೇಳಿದನು. ದೇವರು ಬಯಸುವುದು ಪವಿತ್ರತೆಯನ್ನೇ. ದೇವರು ಈ ಪವಿತ್ರತೆಯನ್ನು ನಿಮ್ಮಲ್ಲಿ ಕಾಣದೆ ಇರುವಾಗ, ಆತನು ನಿಮ್ಮನ್ನು ಶಿಸ್ತಿಗೊಳಪಡಿಸುತ್ತಾನೆ. ಆದರೆ ದೇವರು ನಿಮ್ಮ ಮೇಲಿಟ್ಟಿರುವ ಪ್ರೀತಿಯು ಬಹಳವಾಗಿರುವುದರಿಂದ, ಆತನು ನಿಮ್ಮೊಂದಿಗೆ ಕರುಣೆಯುಳ್ಳವನಾಗಿ ಮಾತನಾಡುತ್ತಾನೆ ಮತ್ತು ಆತನೊಡನೆ ಅನ್ಯೋನ್ಯತೆಯಲ್ಲಿರುವಂತೆ ನಿಮ್ಮನ್ನು ಆತನೆಡೆಗೆ ಕರೆತರುತ್ತಾನೆ. "ಎಫ್ರಾಯಿಮೇ, ನಾನು ನಿನ್ನನ್ನು ಹೇಗೆ ತೈಜಿಸಲಿ! ಇಸ್ರಾಯೇಲೇ, ಹೇಗೆ ನಿನ್ನನ್ನು ಬಿಡಲಿ! ಅಯ್ಯೋ, ನಿನ್ನನ್ನು ಅದ್ಮದ ಗತಿಗೆ ಹೇಗೆ ತರಲಿ! ಚೆಬೋಯಿಮಿನಂತೆ ಹೇಗೆ ನಾಶಮಾಡಲಿ! ನನ್ನೊಳಗೆ ಮನಸ್ಸು ತಿರುಗಿತು, ಕರುಳು ತೀರಾ ಮರುಗಿತು''! (ಹೊಶೆಯ 11:8) (Living Bible).

ಸಭೆಯಲ್ಲಿ ಕೂಡ ಈ ರೀತಿಯಾಗಿಯೇ ನಿಜವಾದ ಪ್ರವಾದನಾ ಸೇವೆ ಕಾರ್ಯಮಾಡಬೇಕು. ಜನರಲ್ಲಿನ ಪವಿತ್ರತೆಯ ಬಗ್ಗೆ ಹಳೆ ಒಡಂಬಡಿಕೆಯಲ್ಲಿನ ಪ್ರವಾದಿಗಳಿಗಿದ್ದ ಭಾರವೇ, ಇಂದೂ ಕೂಡ ಒಬ್ಬ ಪ್ರವಾದಿಗೆ ಇರಬೇಕು. ಹಳೆ ಒಡಂಬಡಿಕೆಯಲ್ಲಿನ ಪ್ರವಾದಿಗಳು ಎಂದಿಗೂ ಬದಲಾಗದ, ಧೀರ್ಘವಾಗಿ ಸಂಕಟಪಡುವ ಮತ್ತು ಕರುಣಾಭರಿತ ಪ್ರೀತಿಯ ದೇವರು ಹಿಂಜಾರಿದ ತನ್ನ ಮಕ್ಕಳನ್ನು ತನ್ನೆಡೆಗೆ ಮತ್ತು ನಿಜವಾದ ಪವಿತ್ರತೆಗೆ ಕರೆತರುವ ರೀತಿಯಲ್ಲಿಯೇ ಇಂದಿನ ಪ್ರವಾದಿಯೂ ನಡೆಯಬೇಕು. ಪ್ರತಿಯೊಂದು ಸಭೆಯಲ್ಲಿಯೂ ಇಂಥಹ ಪ್ರವಾದನಾ ಸೇವೆಯಿರಬೇಕು. ಒಂದು ಸಭೆಯು ಜೀವಂತವಾಗಿರಬೇಕಾದರೆ ಮತ್ತು ದೇವರು ಬಯಸುವ ರೀತಿಯಲ್ಲಿ ಅದು ಇರಬೇಕಾದರೆ, ಆ ಸಭೆಯಲ್ಲಿ ಇಂಥಹ ಪ್ರವಾದನಾ ಸೇವೆಯಿರಬೇಕು. ಇದೇ ಹೋಶೇಯನ ಪ್ರಾಥಮಿಕ ವಿಷಯವಾಗಿತ್ತು. ಹಾಗಾಗಿ ಹೋಶೇಯನು ಬಾಧೆಗೊಳಗಾಗುವಂತೆ ದೇವರು ಅನುಗ್ರಹಿಸಿದನು. ದೇವರು ಹೋಶೇಯನಿಗೆ ಹೀಗೆ ಹೇಳಿದನು, ಹೋಗಿ ವ್ಯಭಿಚಾರಿಣಿಯನ್ನು ಮದುವೆ ಮಾಡಿಕೋ ಹಾಗೂ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ ಎಂಬುದಾಗಿ (ಹೊಶೆಯ 1:2). ಪ್ರವಾದಿಯಾಗಲು ಅವನು ಎಂಥ ಬೆಲೆಯನ್ನು ತೆರಬೇಕಾಯಿತು! ನೀವೆಷ್ಟು ಜನ ಪ್ರವಾದಿಗಳಾಗ ಬಯಸುತ್ತೀರಿ? ಹೋಶೇಯನು ಮಾಡಿದನ್ನು ಮಾಡುವಂತೆ ದೇವರು ನಿಮ್ಮನ್ನು ಕೇಳುವುದಿಲ್ಲ. ಆದರೆ ಪ್ರವಾದಿಯಾಗಲು ಇರುವ ತತ್ವ ಅದೇ ರೀತಿಯದ್ದಾಗಿದೆ. ನಾವು ಆತನ ಹೃದಯವನ್ನು ಅರ್ಥ ಮಾಡಿಕೊಳ್ಳುವಂತೆ , ಆತನು ನಮ್ಮನ್ನು ಆಳವಾದ ಸಂಕಟಗಳ ಮುಖಾಂತರ ತೆಗೆದುಕೊಂಡು ಹೋಗುತ್ತಾನೆ. ಅಪೊಸ್ತಲನಾದ ಪೌಲನು ಅನುಭವಿಸಿದ ಸಂಕಟಗಳನ್ನು ಓದಿ - ಅನೇಕ ಅಪಾಯಗಳು, ಅನೇಕ ಹೊಡೆತಗಳು, ಸೆರೆವಾಸಗಳು, ಚಡಿಯೇಟುಗಳು, ಕಳ್ಳರಿಂದ ಅಪಾಯಗಳು, ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಸರಿಯಾದ ಬಟ್ಟೆ ಇಲ್ಲದಿರುವಿಕೆ, ತಿನ್ನಲ್ಲಿಕ್ಕೆ ಏನು ಇಲ್ಲದೆ ಹಸಿವೆಯುಳ್ಳವರಾಗಿರುವುದು , ಇನ್ನೂ ಹಲವು (2 ಕೊರಿಂಥ 11:23-28) ಇದರ ಉದ್ದೇಶವೇನಾಗಿತ್ತೆಂದರೆ, ಪೌಲನು ದೇವರ ಹೃದಯಕ್ಕೆ ಹತ್ತಿರವಾಗಿದ್ದುಕೊಂಡು, ದೇವರ ಹೃದಯದ ಬಡಿತವನ್ನು ಕೇಳಿಸಿಕೊಂಡು, ದೇವರು ಭಾವಿಸಿದ ರೀತಿಯಲ್ಲಿ ಪೌಲನು ಭಾವಿಸಬೇಕೆಂದಾಗಿತ್ತು. ನಾವು ಸಂಕಟಗಳನ್ನು ಅನುಭವಿಸುವಾಗ, ನಾವು ದೇವರ ಹೃದಯಕ್ಕೆ ಹತ್ತಿರವಾಗುತ್ತೇವೆ. ಆಗ ನಾವು ಆತನ ಹೃದಯದ ಬಡಿತವನ್ನು ಕೇಳಿಸಿಕೊಳ್ಳುತ್ತೇವೆ ಮತ್ತು ನಾವು ದೇವಜನರೊಂದಿಗ ಮಾತನಾಡುವಾಗ, ದೇವರು ತನ್ನ ಜನರೊಂದಿಗೆ ಮಾತನಾಡುವ ರೀತಿಯಲ್ಲಿ ಮಾತನಾಡುತ್ತೇವೆ.