WFTW Body: 

ಪೌಲನು ಅಪೊಸ್ತಲರ ಕೃತ್ಯ 20:17-35 ರಲ್ಲಿ ಎಫೆಸ ಪಟ್ಟಣದ ಸಭೆಹಿರಿಯರಿಗೆ ವಿದಾಯ ಹೇಳಬೇಕೆಂದು ಕರೆದಾಗ, ಅವನು ಅವರಿಗೆ ಹೇಳಿದ ಮಾತಿನಲ್ಲಿ ಸ್ವಲ್ಪ ಗಮನ ಕೊಡಿ, ಅದೇನೆಂದರೆ ಆತನು ಅವರಿಗೆ (31ನೇಯ ವಚನದಲ್ಲಿ) 3 ವರುಷ ಹಗಲಿರುಳು ಕಣ್ಣಿರು ಸುರಿಸುತ್ತಾ ಎಡೆಬಿಡದೆ ಪ್ರತಿಯೊಬ್ಬರಿಗೆ ಬುದ್ದಿ ಹೇಳಿದೆನೆಂದು ಜ್ಞಾಪಕದಲ್ಲಿ ತರಲು ಎಚ್ಚರಿಸುತ್ತಾನೆ. 3 ವರುಷದಲ್ಲಿ 1000 ದಿನಗಳುಂಟು. ಪೌಲನು ಪ್ರತಿ ದಿನ 2 ಬಾರಿ (ಹಗಲು, ರಾತ್ರಿ) ಪ್ರಸಂಗ ಮಾಡಿರ ಬಹುದೆಂದು ವಾಕ್ಯದ ಪ್ರಕಾರ ನಾವು ಹೇಳುವದಾದರೆ ೩ ವರುಷದಲ್ಲಿ 2000 ಪ್ರಸಂಗಗಳನ್ನು ಮಾಡಿದ್ದಾನೆ.

ಅಪೊಸ್ತಲರ ಕೃತ್ಯಗಳು 19:11,12,19 ವಾಕ್ಯದಲ್ಲಿ ಓದುವಾಗ ಎಫೆಸ ಪಟ್ಟಣವು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡು, ಮಾಟಮಂತ್ರಗಳನ್ನು ನಡೆಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟು ಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕಮಾಡಿದರೆ ೫೦ ಸಾವಿರ ಬೆಳ್ಳಿನಾಣ್ಯ ಆಯಿತೆಂದು ತಿಳಿದುಕೊಂಡರು. ಮತ್ತು ಪೌಲನ ಮೈಮೇಲಿನಿಂದ ಕೈವಸ್ತ್ರಗಳನ್ನು ತಂದು ರೋಗಿಗಳ ಮೇಲೆ ಹಾಕಲು ಅವರ ರೋಗ ವಾಸಿಯಾದವು, ದೆವ್ವಗಳೂ ಬಿಟ್ಟು ಹೋದವು. ದೇವರು ಪೌಲನ ಮೂಲಕ ಅನೇಕ ಮಹತ್ಕಾರ್ಯಗಳನ್ನು ಎಲ್ಲಾಕಡೆಗಿಂತಲೂ ಹೆಚ್ಚಾದ ಪ್ರಮಾಣದಲ್ಲಿ ಅನುಗ್ರಹಿಸಿದನು. ಪೌಲನು ವಿದಾಯ ಹೇಳುವ ಸಮಯದಲ್ಲಿ, ಆತನು ಮಾಡಿದ ಪ್ರಸಂಗದ ಬಗ್ಗೆಯಾಗಲಿ, ಆತನ ಮೂಲಕ ಆದಂತಹ ಅದ್ಭುತಕಾರ್ಯಗಳಾಗಲಿ ಇವುಗಳನ್ನು ನೆನಪಿಗೆ ತರುತ್ತಾನಾ? ಇಲ್ಲ.

ಆದರೆ ಪೌಲನು ಅ.ಕೃ. 20:19 ರಲ್ಲಿ ಹೀಗೆ ಹೇಳುತ್ತಾನೆ "ನಾನು ಆಸ್ಯ ಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲದಲ್ಲಿಯೂ ಹೇಗೆ ನಡಕೊಂಡೆನೆಂಬದನ್ನು ನೀವೆ ಬಲ್ಲಿರಿ; ನಾನು ಬಹು ನಮ್ರತೆಯಿಂದಲೂ ಕಣ್ಣಿರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೆನು". ಆ ಜನರು ಪೌಲನ ಪ್ರಸಂಗಗಳನ್ನು ಮರೆತಿದ್ದರೂ ಅವನ ಜೀವನ ಶೈಲಿಯನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ಆತನ ಜೀವಿತ ಅವರ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರಿತ್ತು. ಅವರು ಪೌಲನ ಸಾಧಾರಣ ಜೀವಿತ ಮತ್ತು ಪ್ರೀತಿಯನ್ನು ಮರೆಯಲಿಕ್ಕೆ ಸಾಧ್ಯವೆಯಿಲ್ಲ. ಅ.ಕೃ. 19:34,35 ರಲ್ಲಿ ಪೌಲನು ತನ್ನ ಸ್ವಂತ ಕೈಗಳಿಂದ ಗುಡಾರ ಮಾಡುತ್ತ ತನ್ನ ಹಾಗು ತನ್ನ ಜೊತೆಗಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ಮತ್ತು ಎಲ್ಲಾ ವಿಷಯಗಳಲ್ಲಿ ಮಾದರಿ ತೋರಿಸಿದ್ದನ್ನು ನೆನಪಿಗೆ ತಂದುಕೊಳ್ಳುತ್ತಾರೆ. ಪೌಲನು 3 ವರ್ಷ ಅವರ ಜೊತೆ ಇರುವಾಗ ಅವರಿಂದ ಬೆಳ್ಳಿ, ಬಂಗಾರವನ್ನಾಗಲಿ ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ ಇದನ್ನು ಅವರು ಮರೆಯಲಿಕ್ಕೆ ಸಾಧ್ಯವೇ ಇಲ್ಲ.

ದೇವರ ಸಂಕಲ್ಪ ಒಂದನ್ನೂ ಮರೆಮಾಡದೆ ಪೌಲನು (ಅ. ಕೃ. 20:27) ಸಭಾಹಿರಿಯರಿಗೆ ತಿಳಿಸಿದನು. ಪೌಲನು ಮನುಷ್ಯರನ್ನು ಮೆಚ್ಚಿಸುವವನಾಗಿದ್ದಿರಲಿಲ್ಲ, ತನಗೆ ಗೌರವ ಹೊಂದುವದಕ್ಕೊಸ್ಕರ ತವಕ ಪಡುತ್ತಿರಲಿಲ್ಲ. ಅ.ಕೃ. 20:20,21 ರಲ್ಲಿ ಪೌಲನು ಪಶ್ಚಾತಾಪ ಮತ್ತು ಇನ್ನು ಹಲವು ಜನಪ್ರಿಯವಲ್ಲದ ವಿಷಯಗಳ ಮೇಲೆ ಪ್ರಸಂಗ ಮಾಡಿದ್ದನು ಮತ್ತು ಕೆಲವರು ಆತನ ಪ್ರಸಂಗದಿಂದ ಅಸಂತೋಷಗೊಂಡಿದ್ದೂ ಉಂಟು. ಇಂತಹ ಎಲ್ಲ ವಿಚಾರಗಳನ್ನು ಅವರ ಮುಂದೆ ನೆನಪು ಮಾಡಿ ಕೊಡುತ್ತಿದ್ದನು.

ನೀವು ಒಬ್ಬ ಸಭಾಹಿರಿಯ(ಪಾಸ್ಟರ್) ಆಗಿದ್ದು, ಪೌಲನ ಹಾಗೆ ೩ ವರ್ಷ ಕಾಲಾವಧಿಯಷ್ಟು ಸೇವೆ ಸಲ್ಲಿಸಿದ್ದರೆ, ನಿಮ್ಮ ವಿದಾಯದ ಸಮಯದಲ್ಲಿ ನಿಮ್ಮ ಸಭೆಯ ಜನರು ನಿಮ್ಮ ಬಗ್ಗೆ ಯಾವ ವಿಷಯದಲ್ಲಿ ನೆನಪು ಮಾಡುತ್ತಾರೆ? ಒಬ್ಬ ಪ್ರಭಾವಶಾಲಿಯಾದ ಪ್ರಸಂಗಿ ಎಂಬುದಾಗಿ ನೆನಸುತ್ತಾರಾ? ಅಥವಾ ತಮ್ಮ ಜೀವಿತದಿಂದ ಯೇಸುವನ್ನು ಪ್ರಕಟ ಮಾಡಿದ ನಮ್ರ, ದೀನನಾದ ದೇವರ ಸೇವಕ ಎಂಬುದಾಗಿಯೋ? ನಿಮ್ಮ ಬಗ್ಗೆ - ಈತನು ನಮ್ಮನ್ನು ದೇವರ ಹತ್ತಿರ ಸೆಳೆದನು ಮತ್ತು ನಮಗೆ ಕ್ರಿಸ್ತನ ರೀತಿಯಲ್ಲಿ ಆಗಲಿಕ್ಕೆ ಮಾದರಿಯಾದನು ಎಂಬುದಾಗಿ ಯೋಚಿಸುತ್ತಾರಾ? ಇಲ್ಲವೆ ಸಭೆಯ ಕರಪತ್ರಗಳನ್ನು ಹೇಗೆ ಹಂಚಬೇಕೆಂದು ಕಲಿಸಿದರು ಎಂಬುದಾಗಿ ನೆನಸುತ್ತಾರಾ? ನಮಗಿರುವ ದೇವರ ಕರೆ ಅಥವಾ ವರಗಳಾಗಲಿ ಎಲ್ಲವೂ ಕೂಡ ಕ್ರಿಸ್ತೇಸುವಿನ ಮಾದರಿಯಂತೆ ನಮ್ಮ ಅಂತರಾಳ ಜೀವಿತದಿಂದ ಜೀವವುಳ್ಳ ಬುಗ್ಗೆ ಹರಿಯುವ ಪ್ರಕಾರ ಉಂಟಾಗ ಬೇಕು.

ಒಬ್ಬನಿಗೆ ರೋಗ ವಾಸಿ ಮಾಡುವ ವರವಿದ್ದರೆ, ಆತನು ಯೇಸು ಯಾವ ರೀತಿಯಲ್ಲಿ ಅಭ್ಯಾಸಿಸದನೋ ಅದೇ ತರಹ ಮಾಡಲಿ. ಯೇಸುವು ಸಾಧಾರಣವಾದ ಜೀವಿತದಿಂದ ಎಲ್ಲರ ಜೊತೆ ಬೆರೆಯುತ್ತ, ಮಮತೆಯಿಂದ ರೋಗಿಗಳಿಗೆ ರೋಗ ವಾಸಿ ಮಾಡಿದನು, ಮತ್ತು ಇದರ ನಂತರವಾಗಲಿ ಇಲ್ಲವೆ ಮೊದಲೇ ಆಗಲಿ ಹಣ ಪಡೆಯಲಿಲ್ಲ. ಆತನು ರೋಗಿಗಳನ್ನು ಪುಕ್ಕಟೆಯಾಗಿ ವಾಸಿಮಾಡಿದನು. ಆದರೆ ನನ್ನ ಜೀವನದಲ್ಲಿ ಹೀಗೆ ರೋಗ ವಾಸಿಮಾಡುವ ಯಾವ ಮನುಷ್ಯನನ್ನು ಭೇಟಿಯಾಗಿಲ್ಲ. ನಿಮಗೆ ಈ ರೀತಿಯಾದ ಯಾರದೇ ಪರಿಚಯವಿದ್ದರೆ ನನಗೆ ದಯವಿಟ್ಟು ಅವರನ್ನು ಭೇಟಿಮಾಡಿಸಿರಿ. ಏಕೆಂದರೆ ಅಂಥಹವರನ್ನು ನಾನು ತುಂಬಾ ಆನಂದದಿಂದ ಭೇಟಿಯಾಗಲು ಇಚ್ಚಿಸುತ್ತೇನೆ. ಆದರೆ ಅಂತಹ ಮನುಷ್ಯನನ್ನು ನಾನು ಇನ್ನೂ ಭೇಟಿಯಾಗಿಲ್ಲ. ಇದರ ಬದಲು ಅನೇಕ ಹಣ ಪ್ರೀತಿ ಮಾಡುವ ಭೋಧಕರನ್ನು ನೋಡಿದ್ದೆನೆ. ಅವರು ತಮಗೆ ವಾಸಿಮಾಡುವ ವರವಿದೆ ಎಂಬುದಾಗಿ ತೋರ್ಪಡಿಸುತ್ತಾರೆ ಮತ್ತು ಜನರನ್ನು ಮಾನಸಿಕವಾಗಿ ಮೋಸ ಪಡೆಸುತ್ತಾರೆ. ಬೇಸರವಾದ ವಿಷಯವೆಂದರೆ ಅನೇಕ ಯೌವನಸ್ಥರು ಸೂಕ್ಷ್ಮವಾಗಿ ವಿವೇಚಿಸದೆ ಇಂತಹ ಮೋಸಕ್ಕೆ ಬಲಿಯಾಗಿ ತಮಗೊಸ್ಕರ ಇಂತಹದಾದ ಒಂದು ಸೇವೆ ಪಡೆಯಲು ಹಂಬಲಿಸುತ್ತಾರೆ. ಹಾಗಿದ್ದಾಗ ಮುಂದೆ ಬರುವ ತಲೆಮಾರೂ ದಾರಿತಪ್ಪಿ ಹೋಗುತ್ತದೆ. ಈ ವಿಷಯವು ನನ್ನ ಮನಸ್ಸಿಗೆ ತುಂಬಾ ನೋವು ಮಾಡುತ್ತದೆ.

ನಾವು ಅಪೊಸ್ತಲ ಸೇವೆ, ಪ್ರವಾದಿಸುವ ಸೇವೆ, ಸುವಾರ್ತಾ ಪ್ರಚಾರದ(ಇವ್ಯಾಂಜಲಿಕಲ್) ಸೇವೆ, ಕುರುಬನ ಹಾಗೆ ಮಂದೆಯನ್ನು (ಸಭೆಯ ಜನರನ್ನು) ಕಾಯುವದಾಗಲಿ ಅಥವಾ ಉಪದೇಶಕರ ಸೇವೆಯಾಗಲಿ ಅಥವಾ ಇನ್ನುಳಿದ ಯಾವುದೇ ಸೇವೆಗೆ ಕರೆಯಲ್ಪಟ್ಟಿದ್ದರೂ, ನಾವು ಕ್ರಿಸ್ತನು ಕಲಿಸಿದ ಪ್ರಕಾರವೇ ಮಾಡಬೇಕು. ಯೇಸುವಿನ ಆತ್ಮ ನಮ್ಮನ್ನು ನಮ್ಮ ಪ್ರತಿಯೊಂದು ಕರೆಯಲ್ಲಿ (ಸೇವೆಯಲ್ಲಿ) ಪ್ರೋತ್ಸಾಹಿಸ ಬೇಕು.

ನೀವು ಒಂದು ಸಭೆಯ ಭೋದಕರಾಗಿದ್ದರೆ, ಯೇಸುವಿನ ಪ್ರಕಾರ ಅದನ್ನು ನಡೆಸಿಕೊಂಡು ಹೋಗಿ. ನಿಮ್ಮ ಮಂದೆಯ (ಜನರ) ಮೇಲೆ ನೀವು ನಿರಂತರವಾಗಿ ಕೊಡುವ ಪ್ರಭಾವ ಎಂಥದ್ದಾಗಿರಬೇಕೆಂದರೆ ಕರ್ತನಾದ ಯೇಸು ಕ್ರಿಸ್ತನ ಮಹಿಮಾ ಪ್ರಕಾಶ ನಿಮ್ಮಿಂದ ಪ್ರಕಟವಾಗುವಂಥದ್ದಾಗಿರಬೇಕು.