WFTW Body: 

ಹಳೆ ಒಡಂಬಡಿಕೆ ಪ್ರವಾದನೆ ಮತ್ತು ಹೊಸ ಒಡಂಬಡಿಕೆ ಪ್ರವಾದನೆಯ ನಡುವೆ ವ್ಯತ್ಯಾಸವಿದೆ. ಹಳೆ ಒಡಂಬಡಿಕೆಯ ಕೆಳಗೆ, ಜನರು ಏನು ಮಾಡಬೇಕೆಂದು ತಿಳಿದುಕೊಳ್ಳಲು ಮಾರ್ಗದರ್ಶನಕ್ಕಾಗಿ ಪ್ರವಾದಿಗಳನ್ನು ಕೇಳುತ್ತಿದ್ದರು ಮತ್ತು ದೇವರು ಪ್ರವಾದಿಗೆ ಏನು ಹೇಳುತ್ತಿದ್ದರೋ, ಅದನ್ನೇ ಜನರಿಗೆ ಆ ಪ್ರವಾದಿಗಳು ಹೇಳಿ, ದೇವರು ಹೇಳಿದ ಮೇರೆಗೆ ನಿರ್ದೇಶಿಸುತ್ತಿದ್ದರು. ಇದು ಏಕೆಂದರೆ, ಜನರು ಮಾರ್ಗದರ್ಶನವನ್ನು ಪಡೆದುಕೊಳ್ಳಲು, ಪವಿತ್ರಾತ್ಮನನ್ನು ಹೊಂದಿರಲಿಲ್ಲ. ಪ್ರವಾದಿಗಳು ಮಾತ್ರ ಪವಿತ್ರಾತ್ಮನನ್ನು ಹೊಂದಿದ್ದರು. ಆದರೆ ಹೊಸ ಒಡಂಬಡಿಕೆಯ ಕೆಳಗೆ ಕರ್ತನು ಹೀಗೆ ಹೇಳಿದ್ದಾನೆ, ”ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ ಕರ್ತನನ್ನು ತಿಳಿದುಕೊಳ್ಳಿರಿ ಎಂದು ಉಪದೇಶಿಸುವುದಿಲ್ಲ; ಯಾಕೆಂದರೆ ಚಿಕ್ಕವರಿಂದ ದೊಡ್ಡವರ ವರೆಗೂ ನನ್ನನ್ನು ಅರಿತುಕೊಳ್ಳುವರು” (ಇಬ್ರಿಯ 8:11). ಈಗ ಪ್ರತಿಯೊಬ್ಬರಲ್ಲಿ ಪವಿತ್ರಾತ್ಮನು ವಾಸಿಸುತ್ತಾನೆ, ಹೀಗಾಗಿ ಯಾವುದೇ ಪ್ರವಾದಿಯು ದೇವರ ಮಗುವಿಗೆ ಏನು ಮಾಡಬೇಕೆಂಬ ಪ್ರವಾದನಾ ನಿರ್ದೇಶನ ಕೊಡಬೇಕಾದ ಅಗತ್ಯತೆ ಇಲ್ಲ. ಪ್ರವಾದಿಯೇ ಎಲ್ಲವನ್ನೂ ಜನರಿಗೆ ನಿರ್ದೇಶನ ಕೊಡುವುದಾದರೆ, ಪ್ರವಾದಿಯು ಪವಿತ್ರಾತ್ಮನ ಸ್ಥಾನವನ್ನು ತೆಗೆದುಕೊಂಡ ಹಾಗಾಗುತ್ತದೆ ಮತ್ತು ಜನರನ್ನು ಕ್ರಿಸ್ತನೊಟ್ಟಿಗೆ ಸಂಪರ್ಕ ಕೊಡಿಸದೇ, ತನ್ನೊಟ್ಟಿಗೆ ಮಾತ್ರ ಸಂಪರ್ಕವನ್ನಿಟ್ಟುಕೊಳ್ಳುವಂತೆ ಮಾಡುವಂತಾಗುತ್ತದೆ. ಸತ್ಯವೇದ ಹೇಳುತ್ತದೆ, ನಮ್ಮಲ್ಲಿ ವಾಸವಾಗಿರುವ ಆತ್ಮನು ಅಭಿಮಾನತಾಪದಿಂದ ಹಂಬಲಿಸುತ್ತಾನೆಂದು (ಯಾಕೋಬ 4;5). ಯಾವುದಕ್ಕಾಗಿ? ಆತನು ಅಭಿಮಾನತಾಪದಿಂದ ಹಂಬಲಿಸುವುದೇನೆಂದರೆ, ನಮ್ಮ ಮದಲಿಂಗನಾದ ಕ್ರಿಸ್ತನೊಟ್ಟಿಗೆ ನೇರ ಸಂಪರ್ಕವನ್ನು ಹೊಂದಿರಬೇಕೆಂಬುದು ಮತ್ತು ನಮ್ಮ ಹಾಗೂ ಕ್ರಿಸ್ತನ ಮಧ್ಯ ಯಾವ ಮನುಷ್ಯನು ಬರಬಾರದು ಎಂಬುದಾಗಿದೆ. ಇಂದು ಅನೇಕ ಪಾಸ್ಟರ್ ಗಳು ಮತ್ತು ಸ್ವಯಂ ನೇಮಕಗೊಂಡ ”ಪ್ರವಾದಿಗಳು” ಇದ್ದಾರೆ, ಅವರು ಜನರಿಗೆ ಹೇಳುವುದೇನೆಂದರೆ, ಏನು ಮಾಡಬೇಕು, ಎಲ್ಲಿ ಹೋಗಬೇಕು, ಯಾರನ್ನು ಮದುವೆಯಾಗಬೇಕು, ಇನ್ನು ಅನೇಕ ಸಂಗತಿಗಳನ್ನು ಹೇಳುತ್ತಾರೆ. ಇಂತಹ ಎಲ್ಲಾ ಜನರು ನಿಜವಾಗಿಯೂ ಪವಿತ್ರಾತ್ಮನ ಕಾರ್ಯಕ್ಕೆ ಆಡಚಣೆ ಉಂಟು ಮಾಡುವವರಾಗಿದ್ದಾರೆ. ಅವರು ಜನರಿಗೆ ಯಾವ ರೀತಿ ಅನಿಸಿಕೆಗಳನ್ನು ಕೊಡುತ್ತಾರೆಂದರೆ, ದೇವರು ನಿಮ್ಮೊಟ್ಟಿಗೆ ನೇರವಾಗಿ ಮಾತನಾಡುವುದಿಲ್ಲ ಎಂಬುದಾಗಿ. ಇಂತಹ ಪ್ರವಾದಿಗಳು (ಅರಿತರು ಅಥವಾ ಅರಿಲಿಲ್ಲದಿದ್ದರೂ) ಸೈತಾನನಿಂದ ಪ್ರೇರೆಪಿಸಲ್ಪಿಟ್ಟಿರುತ್ತಾರೆ ಮತ್ತು ಅವರು ಜನರ ಮತ್ತು ಕರ್ತನ ಮಧ್ಯ ಬರುತ್ತಾರೆ. ಯಾವಾಗಲೂ ನೆನಪಿಡಬೇಕಾದ ಸಂಗತಿ ಏನೆಂದರೆ, ನೀವು ಕ್ರಿಸ್ತನೊಟ್ಟಿಗೆ ನಿಕಟ ಸಂಪರ್ಕವನ್ನು ಹೊಂದಿರಬೇಕು ಎಂದು ಪವಿತ್ರಾತ್ಮನು ಅಭಿಮಾನತಾಪದಿಂದ ಹಂಬಲಿಸುತ್ತಾನೆ ಎಂಬುದಾಗಿ. ಇದರ ಅರ್ಥ, ನಿಮ್ಮ ಮತ್ತು ಕ್ರಿಸ್ತನ ಮಧ್ಯ ಯಾರು ಸಹ ಬರಬಾರದು.

ಒಬ್ಬರಿಗೆ ನಿರ್ದೇಶನ ನೀಡುವಂತ ಪ್ರವಾದನೆಯು ಹಳೆ ಒಡಂಬಡಿಕೆಯ ಲಕ್ಷಣವಾಗಿದೆ. ಏಕೆಂದರೆ, ಆ ದಿನಗಳಲ್ಲಿ ಜನರು ಪವಿತ್ರಾತ್ಮನನ್ನು ಹೊಂದಿರಲಿಲ್ಲ. ಇದು ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ

ಅನೇಕ ಜನರು ತಮ್ಮ ಜೀವಿತದ ಕೆಲವು ಕ್ಷೇತ್ರಗಳಲ್ಲಿ ದೇವರ ಚಿತ್ತವನ್ನು ಕಂಡುಹಿಡಿದು ಹೇಳುವಂತೆ ನನಗೆ ಕೇಳುತ್ತಾರೆ. ಅದನ್ನು ಮಾಡಲು ನನಗೆ ಧ್ಯರ್ಯವಿಲ್ಲ, ಏಕೆಂದರೆ ದೇವರನ್ನು ನಾನು ಗೌರವಿಸುತ್ತೇನೆ. ಯಾರು ದೇವರನ್ನು ಗೌರವಿಸುವುದಿಲ್ಲವೋ, ಅಂಥವರು ಮಾತ್ರ ಮತ್ತೊಬ್ಬರ ಜೀವಿತದಲ್ಲಿ ಪವಿತ್ರಾತ್ಮನ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಜನರು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸಲಹೆ ಕೊಡಲು ನಾನು ಯಾವಾಗಲೂ ಸಿದ್ದ. ಅವರು ಪರಿಗಣಿಸಿರುವ ಕಾರ್ಯದ ವಿಷಯಕ್ಕೆ ಸಂಬಂಧಿಸಿದಂತೆ, ಆಗುವ ಲಾಭ ಮತ್ತು ಅಪಾಯಗಳನ್ನು ನಾನು ಅವರಿಗೆ ತಿಳಿಸುತ್ತೇನೆ. ಆದರೆ ನಂತರ, ಅವರಿಗೆ ನಾನು ಪ್ರಾರ್ಥನೆ ಮಾಡುವಂತೆ ಹಾಗೂ ಅವರು ಏನು ಮಾಡಬೇಕೆಂದು ದೇವರೇ ನಿಮಗೆ ಪವಿತ್ರಾತ್ಮನ ಮೂಲಕ ತಿಳಿಸುತ್ತಾರೆ ಎಂದು ನಾನು ಅವರಿಗೆ ಭರವಸೆ ಕೊಡುತ್ತೇನೆ.

ಹಾಗಾಗಿ, ಮತ್ತೊಬ್ಬರಿಗೋಸ್ಕರ ದೇವರ ಚಿತ್ತವನ್ನು ಕಂಡುಹಿಡಿಯುವುದಕ್ಕಾಗಿ ಎಂದಿಗೂ ಪ್ರಯತ್ನಿಸಬೇಡಿ ಮತ್ತು ಅವರ ಜೀವಿತದಲ್ಲಿ ದೇವರ ಸ್ಥಾನವನ್ನು ತೆಗೆದುಕೊಳ್ಳಬೇಡಿ. ಇದು ಕ್ರಿಸ್ತ ವಿರೋಧಿಯ ಬಗ್ಗೆ ಹೇಳುತ್ತದೆ, ಅದೇನೆಂದರೆ, ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದೇನೆಂದು ತೋರಿಸಿಕೊಳ್ಳುತ್ತಾನೆ” (2 ಥೆಸಲೋನಿಕ 2:4). ಇಂದು ಈ ರೀತಿಯ ಸುಳ್ಳು ಪ್ರವಾದಿಗಳು ಇದ್ದಾರೆ, ಅವರು ಕ್ರಿಸ್ತ ವಿರೋಧಿಯ ಆತ್ಮವನ್ನು ಹೊಂದಿದವರಾಗಿದ್ದು, ಸಭೆಯಲ್ಲಿ (ದೇವರ ಆಲಯದಲ್ಲಿ) ಕುಳಿತುಕೊಂಡು, ದೇವರ ಸ್ಥಾನವನ್ನು ತೆಗೆದುಕೊಳ್ಳುವ ಮೂಲಕ, ಜನರಿಗೆ ಅವರ ಜೀವಿತದಲ್ಲಿ ಏನು ಇದೆ ಎಂಬುದನ್ನು ಹೇಳುತ್ತಿದ್ದಾರೆ. ಹೀಗಿದ್ದರೂ ಈ ಸ್ವಯಂ ನೇಮಕಗೊಂಡ ”ಪ್ರವಾದಿಗಳು” ಸುಳ್ಳು ಪ್ರವಾದಿಗಳಾಗಿದ್ದಾರೆ, ಇವರುಗಳ ಗುರುತೇನೆಂದರೆ, ಇವರೆಲ್ಲರೂ ಜನರಿಗೆ ಪ್ರವಾದನೆ ಹೇಳಿದ ನಂತರ ಅವರಿಂದ ಹಣವನ್ನು ನಿರೀಕ್ಷೆ ಮಾಡುತ್ತಾರೆ - ಯಾವ ರೀತಿ ಎಂದರೆ ವೈದ್ಯರು ಚಿಕಿತ್ಸಾ ಶುಲ್ಕವನ್ನು ಪಡೆದುಕೊಳ್ಳುವ ಹಾಗೇ! ಯಾರು ಇಂತಹ ಪ್ರವಾದಿಗಳ ಹತ್ತಿರ ಹೋಗುತ್ತಾರೋ, ಅವರು ಕರ್ತನಲ್ಲಿ ಬೆಳೆಯುವುದಿಲ್ಲ. ಯಾಕೆಂದರೆ ಅವರು ಪವಿತ್ರಾತ್ಮನ ಜೊತೆಗಿನ ನೇರ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ. ನಂತರದ ಸಮಯದಲ್ಲಿ ಜನರು ದೇವರ ಚಿತ್ತವನ್ನು ಅರಿತುಕೊಳ್ಳಲು ಬಯಸುವಾಗ, ಮತ್ತೇ ಪ್ರವಾದಿಗಳ ಬಳಿ ತೆರಳುತ್ತಾರೆ.

ಒಬ್ಬ ನಿಜ ಪ್ರವಾದಿಯಾದ ಆಗಬಸ್ಸನು ಇಲ್ಲಿ ಮಾಡಿದ್ದು ಏನು? ಒಂದು ಸ್ಥಳದಲ್ಲಿ ಬರಗಾಲ ಇದೇ ಎಂಬುದಾಗಿ ಹೇಳಿದನು. ಬರಗಾಲ ಇರುವುದರಿಂದ, ಕಾಣಿಕೆಗಳನ್ನು ತೆಗೆದುಕೊಂಡು, ಆ ಸ್ಥಳದಲ್ಲಿನ ಬಡ ಭಕ್ತರಿಗಾಗಿ ಆ ಕಾಣಿಕೆಗಳನ್ನು ಕಳುಹಿಸಬೇಕೆಂದು ಜನರಿಗೆ ಬೋಧಿಸಲಿಲ್ಲ. ಇಲ್ಲ. ಏಕೆಂದರೆ, ಹೊಸ ಒಡಂಬಡಿಕೆಯಲ್ಲಿ, ಯಾರು ಕೂಡ ಮತ್ತೊಬ್ಬ ದೇವರ ಮಗುವಿಗೆ ಏನು ಮಾಡಬೇಕೆಂದು ಹೇಳುವ ಹಾಗಿಲ್ಲ ಎಂದು ಆತನಿಗೆ ಅರಿವಿತ್ತು. ಎಲ್ಲಿ, ಯಾವುದನ್ನು ನಿಲ್ಲಿಸಬಹುದು ಎಂದು ಸಹ ಆತನಿಗೆ ಗೊತ್ತಿತ್ತು. ಸುಳ್ಳು ಪ್ರವಾದಿಗಳ ರೀತಿ ಆಗಬಸ್ಸನು ಇರಲಿಲ್ಲ. ಒಬ್ಬ ನಿಜ ಪ್ರವಾದಿಯು, ದೇವರು ಭವಿಷ್ಯದ ಬಗ್ಗೆ ಕೊಟ್ಟ ಪ್ರಕಟಣೆಯ ನಂತರ ಮುಂದೇನೂ ಅಧಿಕವಾಗಿ ಮಾತನಾಡದೇ ಅಲ್ಲಿಗೆ ನಿಲ್ಲಿಸುತ್ತಾನೆ. ಅಂತಿಯೋಕ್ಯದಲ್ಲಿರುವ ವಿಶ್ವಾಸಿಗಳು ನಂತರ ದೇವರನ್ನು ಹುಡುಕಿದರು, ಸ್ವತ: ಪವಿತ್ರಾತ್ಮನೇ ಅವರಿಗೆ ಏನು ಮಾಡಬೇಕೆಂದು ತೋರಿಸಿದರು. ಅವರು ಸ್ವಲ್ಪ ಹಣವನ್ನು ಪಡೆದುಕೊಂಡು, ಬಡ ಭಕ್ತರಿಗೆ ಕಳುಹಿಸಿದರು. ಒಬ್ಬರಿಗೆ ನಿರ್ದೇಶನ ನೀಡುವಂತ ಪ್ರವಾದನೆಯು ಹಳೆ ಒಡಂಬಡಿಕೆಯ ಲಕ್ಷಣವಾಗಿದೆ. ಏಕೆಂದರೆ, ಆ ದಿನಗಳಲ್ಲಿ ಜನರು ಪವಿತ್ರಾತ್ಮನನ್ನು ಹೊಂದಿರಲಿಲ್ಲ. ಇದು ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.