WFTW Body: 

ಕಾನಾ ಊರಿನ ಮದುವೆಯ ಸಮಯದಲ್ಲಿ, ಯೇಸು, ಯಾರ ಸಹಾಯವು ಇಲ್ಲದೇ, ನೀರಿನ ಬಾನೆಗಳನ್ನು ದ್ರಾಕ್ಷರಸದಿಂದ ತುಂಬ ಬಹುದಿತ್ತು. ಆದರೆ ಪಾಲುದಾರಿಕೆ ಎಂಬುವುದು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆಗ ಅಲ್ಲಿ ಕೇವಲ ಒಬ್ಬ ಮನುಷ್ಯನ ತೋರ್ಪಡಿಸುವಿಕೆ ಮಾತ್ರ ಇರುತ್ತಿತ್ತು. ಸೇವಕರು ಅವರ ಪಾಲನ್ನು ಪೂರೈಸಲು, ಅಂದರೆ ಯೇಸು ಮಾಡುವ ಅದ್ಭುತ ಕಾರ್ಯದಲ್ಲಿ ತಮ್ಮ ಕೈಲಾದ ಪಾಲನ್ನು ಹಂಚಲು ಆಹ್ವಾನಿಸಲ್ಪಟ್ಟಿದ್ದರು, ಅದು ಸುಲಭವಾದ ಪಾಲಾಗಿತ್ತು. ಅಂದರೆ ಬಾನೆಗಳನ್ನು ನೀರಿನಿಂದ ತುಂಬಿಸುವುದಾಗಿತ್ತು. ನಂತರ, ಯೇಸು ಕಠಿಣ ಭಾಗವನ್ನು ಮಾಡಿದರು, ಅಂದರೆ ಆ ನೀರನ್ನು ದ್ರಾಕ್ಷರಸಕ್ಕೆ ತಿರುಗಿಸಿ, ಬಾನೆಗಳನ್ನು ತುಂಬಿಸಿದರು (ಯೋಹಾನ 2:1-11).

ಅದೇರೀತಿ, ಐದು ಸಾವಿರ ಜನರಿಗೆ ಆಹಾರ ಒದಗಿಸುವ ಸಮಯದಲ್ಲಿಯೂ, ಯೇಸು ಯಾರ ಸಹಾಯವೂ ಇಲ್ಲದೇ, ಆಹಾರವನ್ನು ಉತ್ಪತ್ತಿ ಮಾಡಬಹುದಿತ್ತು. ಆದರೆ ಯೇಸು ಹಾಗೆ ಮಾಡಲಿಲ್ಲ. ಊಟದ ಡಬ್ಬಿ ಕೊಡುವಂತೆ, ಯೇಸು ಒಬ್ಬ ಹುಡುಗನನ್ನು ಆಹ್ವಾನಿಸಿದ್ದರು; ಮತ್ತು ಆ ಸಣ್ಣ ಹುಡುಗನ ಪಾಲುದಾರಿಕೆಯಿಂದ ಯೇಸು ಐದು ಸಾವಿರ ಜನರಿಗೆ ಆಹಾರ ಒದಗಿಸಿದರು (ಯೋಹಾನ 6:1-13). ಆ ಸಣ್ಣ ಹುಡುಗನು ತನ್ನ ಕೈನಲ್ಲಿ ಸಾಧ್ಯವಾಗಿದ್ದನ್ನು ಮಾತ್ರ ಮಾಡಿದನು; ಮತ್ತು ಯೇಸು, ಏನು ಮಾಡಲು ಸಾಧ್ಯವಿತ್ತೋ, ಅದನ್ನು ಮಾಡಿದರು!

ಹುಟ್ಟು ಕುರುಡನೂ ಸಹ, ತನ್ನ ಕೈನಲ್ಲಿ ಎಷ್ಟು ಸಾಧ್ಯವೋ, ಅಷ್ಟನ್ನು ಮಾತ್ರ ಮಾಡುವಂತೆ ಯೇಸುವಿನಿಂದ ಹೇಳಿಸಲ್ಪಟ್ಟನು (ಯೋಹಾನ 9:1-7). ಆ ಹುಟ್ಟು ಕುರುಡನು ಸಿಲೋವ ಎಂಬ ಕೊಳದಲ್ಲಿ ತನ್ನ ಕಣ್ಣುಗಳನ್ನು ತೊಳಕೋ ಬೇಕಿತ್ತು ಅಷ್ಟೆ. ನಂತರ ಯೇಸು ಆತನ ಕಣ್ಣು ತೆರೆಯುವಂತಹ ಕಠಿಣ ಕಾರ್ಯವನ್ನು ಮಾಡಿದರು.

ಇದೇ ತತ್ವವನ್ನು ಲಾಜರನನ್ನು ಎಬ್ಬಿಸುವುದರಲ್ಲಿ ನಾವು ನೋಡುತ್ತೇವೆ. ಆತನ ಸ್ನೇಹಿತರು ಸುಲಭ ಭಾಗವನ್ನು ಮಾತ್ರ ಮಾಡಿದರು - ಅಂದರೆ, ಅವರು ಲಾಜರನನ್ನು ಮಲಗಿಸಿದ್ದ ಗವಿಯ ಮೇಲೆ ಆನಿಸಿದ್ದ ಕಲ್ಲನ್ನು ತೆಗೆದು ಹಾಕಿದರು ಅಷ್ಟೇ. ನಂತರ ಯೇಸು ಕಠಿಣ ಭಾಗವನ್ನು ಮಾಡಿದರು - ಅಂದರೆ, ಯೇಸು ಲಾಜರನನ್ನು ಸತ್ತದ್ದರಿಂದ ಎಬ್ಬಿಸಿದರು. ಆತನ ಸ್ನೇಹಿತರು, ಮತ್ತೊಮ್ಮೆ ತಮ್ಮ ಕೈನಲ್ಲಿ ಸಾಧ್ಯವಾಗುವಂತಹ ಕೆಲಸವನ್ನು ಮಾಡಲು ಅವಕಾಶವನ್ನು ಪಡೆದುಕೊಂಡರು - ಅಂದರೆ, ಲಾಜರನ ಮುಖವು ಕೈಪಾವುಡದಿಂದ ಸುತ್ತಿದ್ದರಿಂದ ಅವನನ್ನು ಬಿಚ್ಚಿಸಿ, ಕಳುಹಿಸಿದರು. (ಯೋಹಾನ 11:38-44).

ಯೇಸುವಿನ ಪುನರುತ್ಥಾನದ ನಂತರ, ಒಂದು ರಾತ್ರಿ, ಶಿಷ್ಯರು ಮೀನು ಹಿಡಿಯಲು ಹೋಗಿದ್ದನ್ನು ನಾವು ನೋಡುತ್ತೇವೆ. ”ಆದರೆ, ಅವರಿಗೆ ಆ ರಾತ್ರಿಯಲ್ಲಿ ಒಂದು ಮೀನೂ ಸಹ ಸಿಕ್ಕಲಿಲ್ಲ” (ಯೋಹಾನ 21:3). ಇದು, ಒಬ್ಬ ಮನುಷ್ಯ ಧರ್ಮಶಾಸ್ತ್ರ (ನಿಯಮ)ದ ಕೆಳಗಡೆ ಪ್ರಯಾಸ ಪಡುತ್ತಿರುವುದರ ಚಿತ್ರಣವಾಗಿದೆ! ನಂತರ ಯೇಸು, ಶಿಷ್ಯರು ಮೀನು ಹಿಡಿಯುತ್ತಿದ್ದ ಸ್ಥಳಕ್ಕೆ ಬಂದರು. ಯೇಸು ಮನಸ್ಸು ಮಾಡಿದ್ದರೆ, ಸಮುದ್ರದೊಳಗೆ ಬಲೆಯನ್ನು ಹಾಕದೇ, ಅವರ ದೋಣಿಗಳನ್ನು ಮೀನುಗಳಿಂದ ತುಂಬಿಸಬಹುದಿತ್ತು. ಹಿಂದೆ, ಒಂದು ಕೆರೆಯಲ್ಲಿ ಪೇತ್ರನ ಬಳಿಗೆ ಬರುವಂತೆ ಮೀನಿಗೆ ಆದೇಶಿಸಿದಂತ ದೇವರು, ಈಗ ಶಿಷ್ಯರು ಇದ್ದಂತಹ ದೋಣಿಯಲ್ಲಿಯೇ ಹಾರಿ ಬಂದು ಬೀಳುವಂತೆ, ಆ ಮೀನುಗಳಿಗೆ ಆದೇಶಿಸಬಹುದಿತ್ತು. ಆದರೆ ನಂತರ ಅಲ್ಲಿ ಯಾವುದೇ ಪಾಲುದಾರಿಕೆ ಇರುತ್ತಿರಲಿಲ್ಲ. ಹಾಗಾಗಿ ಮನುಷ್ಯನು ತನ್ನ ಭಾಗವನ್ನು ಮಾಡಬೇಕಿತ್ತು. ಅಂದರೆ, ಶಿಷ್ಯರು ಸಮುದ್ರದೊಳಗೆ ಬಲೆಯನ್ನು ಹಾಕಬೇಕಿತ್ತು. ಯೇಸುವಿನ ಜೊತೆ ಪಾಲುದಾರಿಕೆಯಲ್ಲಿ ಅದ್ಭುತವು ಆಯಿತು. ಮನುಷ್ಯನು ಸುಲಭವಾದ ಭಾಗವನ್ನು ಮಾತ್ರ ಮಾಡಿದನು ಮತ್ತು ಯೇಸು ಕಠಿಣವಾದ ಭಾಗವನ್ನು ಮಾಡಿದರು. ಆದರೆ ಶಿಷ್ಯರು ಬಲೆಯನ್ನು ಹಾಕಲೇಬೇಕಿತ್ತು. ಅದು ನಂಬಿಕೆಯ ವಿಧೇಯತೆಯಾಗಿದೆ. ಪೌಲನು ಇದರ ಬಗ್ಗೆ ರೋಮ 1:5 ರಲ್ಲಿ ಮಾತನಾಡುತ್ತಾನೆ.

ನಮ್ಮೆಲ್ಲರ ಜೀವಿತದಲ್ಲಿ, ಯೇಸು ನಮ್ಮೊಟ್ಟಿಗೆ ಪಾಲುದಾರಿಕೆಯನ್ನು ಹೊಂದಲು ಬಯಸುತ್ತಾರೆ. ಪೇತ್ರನು ದೇವಾಲಯದ ತೆರಿಗೆಯನ್ನು ಎತ್ತಲು ಯೇಸುವಿನ ಬಳಿಗೆ ಬಂದಾಗ, ಸಮುದ್ರದೊಳಗೆ ಗಾಳಾ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು, ಅದರ ಬಾಯಿ ತೆರೆದು ನೋಡಿದರೆ ಅದರಲ್ಲಿ ಒಂದು ರೂಪಾಯಿ ಸಿಕ್ಕುವದು; ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು ಎಂದು ಯೇಸು ಪೇತ್ರನಿಗೆ ಹೇಳಿದರು. ಯೇಸು ಪೇತ್ರನಿಗೆ ಹೇಳಿದ ಮಾತು ಯಾವುದೆಂದರೆ, ”ನನ್ನದೂ ಮತ್ತು ನಿನ್ನದೂ” ಎಂಬುದಾಗಿ (ಮತ್ತಾಯ 17:27). ಯೇಸು ವ್ಯಕ್ತಪಡಿಸಿದಂತ ಮಾತಾದ, ”ನನ್ನದೂ ಮತ್ತು ನಿನ್ನದೂ” ಎಂಬುವುದರ ಬಗ್ಗೆ ಯೋಚಿಸಿ. ಇದು ಪಾಲುದಾರಿಕೆಯಾಗಿದೆ. ನಾವು ತೆರಿಗೆಯನ್ನು ಕಟ್ಟಲು ಅನುಕೂಲವಾಗುವಂತೆ ನಮಗೆ ಸಹಾಯಿಸುವುದರಲ್ಲಿ ಯೇಸುವಿಗೆ ಆಸಕ್ತಿ ಇದೆ. ಇಹಲೋಕದಲ್ಲಿನ ಪ್ರಾಪಂಚಿಕ ಸಂಗತಿಗಳಿಂದ ನಮ್ಮ ಪ್ರತಿದಿನದ ಜೀವಿತಕ್ಕೆ ಸೋಂಕು ತಗಲುತ್ತದೆ, ಪ್ರಾಪಂಚಿಕ ಸಂಗತಿಗಳ ಮೇಲೆ ನಮ್ಮ ಜೀವಿತ ಯಾವಾಗಲೂ ನೆಲೆಸಿರುತ್ತದೆ. ”ನೀವು ಮತ್ತು ನಾನು” ಎಂಬ ತತ್ವದಿಂದ ಜೀವಿಸುವಂತೆ ಯೇಸು ನಮ್ಮನ್ನು ಕರೆದಿದ್ದಾರೆ.

ನಾವು ಯೇಸುವಿನೊಟ್ಟಿಗೆ ಪಾಲುದಾರಿಕೆಯೆಂಬ ನೊಗವನ್ನು ತೆಗೆದುಕೊಂಡಾಗ, ನಮ್ಮ ಆತ್ಮದಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳಬಹುದೆಂದು ಯೇಸು ಹೇಳಿದ್ದಾರೆ, (ಮತ್ತಾಯ 11:28-30). ನಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಮುಗಿಸುವುದರಿಂದ ಈ ವಿಶ್ರಾಂತಿಯೊಳಗೆ ನಾವು ಪ್ರವೇಶಿಸಲು ಪ್ರೇರೇಪಿಸಲ್ಪಟ್ಟಿದ್ದೇವೆ, (ಇಬ್ರಿಯ 4:10, 11).

ಆದಾಮನು ದೇವರ ಸ್ವಭಾವದಲ್ಲಿ ದೇವರಿಂದ ಉಂಟಾದನು. ಏದೆನ್ ತೋಟಕ್ಕೆ ಒಬ್ಬ ತೋಟಗಾರನ ಅವಶ್ಯಕತೆ ಇದ್ದದ್ದಕ್ಕಾಗಿ ಆದಮನು ಉಂಟು ಮಾಡಲ್ಪಡಲಿಲ್ಲ. ಆದರೆ ಆದಾಮನು ದೇವರಿಂದ ಏಕೆ ಉಂಟು ಮಾಡಲ್ಪಟ್ಟನು ಎಂದರೆ, ದೇವರೊಟ್ಟಿಗೆ ಅನ್ಯೋನ್ಯತೆ ಮಾಡಲು ಯಾರಾದರೂ ಬೇಕಾಗಿತ್ತು, ಆ ಕಾರಣದಿಂದಾಗಿ, ಆದಾಮನು ಉಂಟು ಮಾಡಲ್ಪಟ್ಟನು. ನಾವು ದೇವರಿಗೆ ಸೇವೆ ಮಾಡಬೇಕು ಎಂಬ ಉದ್ದೇಶದಿಂದ, ಆತನು ನಮ್ಮನ್ನು ಪಾಪದ ಗುಂಡಿಯಿಂದ ರಕ್ಷಿಸಿಲ್ಲ. ನಾವು ಆತನೊಟ್ಟಿಗೆ ಅನ್ಯೋನ್ಯತೆ ಮಾಡಬೇಕೆಂಬ ಒಂದೇ ಉದ್ದೇಶದಿಂದ ನಾವು ಪಾಪದಿಂದ ರಕ್ಷಿಸಲ್ಪಟ್ಟಿದ್ದೇವೆ. ಇದನ್ನು ಅರ್ಥಮಾಡಿಕೊಳ್ಳುವ ಕೊರತೆ ಇರುವುದರಿಂದ, ಅನೇಕನೇಕ ವಿಶ್ವಾಸಿಗಳು ಚಿಂತಗ್ರತರಾಗಿದ್ದಾರೆ ಮತ್ತು ಬಹಳ ಹೊರೆಯನ್ನು ಇಂದು ಹೊಂದಿದವರಾಗಿದ್ದಾರೆ, ಮಾರ್ಥಳ ರೀತಿಯಲ್ಲಿ.

ಯೇಸು, ತಂದೆಯೊಟ್ಟಿಗಿನ ಅನ್ಯೋನ್ಯತೆಯನ್ನು ಪಡೆಯುವುದು ಅಮೂಲ್ಯವೆಂದು ಭಾವಿಸಿದನು

65 ವರ್ಷಕ್ಕಿಂತ ಹೆಚ್ಚಿನ ವರ್ಷ ದೇವರೊಟ್ಟಿಗೆ ನಡಿಗೆಯನ್ನು ಹೊಂದಿದ್ದ ಅಪೊಸ್ತಲನಾದ ಯೋಹಾನನು 95ನೇ ವಯಸ್ಸಿನಲ್ಲಿ ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟವನಾಗಿ ಪತ್ರವನ್ನು ಬರೆಯುತ್ತಾನೆ. ಆತನು ಬರೆದ ಪತ್ರದ ವಿಷಯ ”ಅನ್ಯೋನ್ಯತೆ” (1 ಯೋಹಾನ 1:3). ಸಭೆಗಳನ್ನು ನೋಡುತ್ತಾ ಹಾಗೂ ನಾಯಕರು ತಮ್ಮ ಮೊದಲ ಪ್ರೀತಿಯನ್ನು ಕಳೆದುಕೊಂಡಿದ್ದನ್ನು ನೋಡುವಾಗ (ಪ್ರಕಟನೆ 2:4) ಮತ್ತು ತಮ್ಮ ಎಲ್ಲಾ ವೈವಿದ್ಯಮಯ ಕ್ರೈಸ್ತ ಚಟುವಟಿಕೆಗಳೊಂದಿಗೆ ತೋರಿಕೆ ಮಾಡಿ ಜೀವಂತವುಳ್ಳವರಾಗಿದ್ದೇವೆ ಎಂಬ ಹೆಸರನ್ನು ಹೊಂದಲು ಅನೇಕರು ಬಯಸುತ್ತಾರೆ, ಆದರೆ ವಾಸ್ತವವಾಗಿ ದೇವರ ದೃಷ್ಠಿಯಲ್ಲಿ ಸತ್ತವರಾಗಿದ್ದಾರೆ (ಪ್ರಕಟನೆ 3:1) ಇಂತವರನ್ನು ನೋಡಿ ಯೋಹಾನನು ಪತ್ರವನ್ನು ಬರೆದನು. ಯೋಹಾನನು ನಿಶ್ಚಯವಾಗಿ ನೋಡಿದ್ದೇನೆಂದರೆ, ಕ್ರೈಸ್ತರನ್ನು ತೆರೆಯೊಳಗಣ ದೇವಸಾನ್ನಿಧ್ಯದಲ್ಲಿ ತಂದೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಜೊತೆಗೆ ಸಂತೋಷವುಳ್ಳ ಅನ್ಯೋನ್ಯತೆಯೊಳಗೆ ನಡೆಸಬೇಕಾದ ದೊಡ್ಡದಾದ ಅಗತ್ಯತೆ ಇದೆ ಎಂಬುದಾಗಿ ನೋಡಿದನು,

ವಿಧವಿಧವಾದ ಚಟುವಟಿಕೆಯುಳ್ಳ ಕ್ಷೇತ್ರಗಳಲ್ಲಿ ಸಂತೋಷವು ಕಾಣಸಿಗುತ್ತದೆ. ಕೆಲವು ಮನರಂಜನೆಯಲ್ಲಿ, ಕೆಲವು ಸಂಗೀತದಲ್ಲಿ, ಕೆಲವು ವೃತ್ತಿಗಳಲ್ಲಿ, ಮತ್ತು ಕೆಲವು ಕ್ರೈಸ್ತ ಕೆಲಸಗಳಲ್ಲಿ. ಆದರೆ ಇಡೀ ಸೃಷ್ಠಿಯಲ್ಲಿ ಪರಿಶುದ್ಧವಾದ ಸಂತೋಷ ಕಾಣಸಿಗುವುದು ಕೇವಲ ತಂದೆಯೊಟ್ಟಿಗಿನ ಅನ್ಯೋನ್ಯತೆಯಲ್ಲಿ (1 ಯೋಹಾನ 1:4), ಕೀರ್ತನೆಗಾರನು ಈ ರೀತಿಯಾಗಿ ಹೇಳುತ್ತಾನೆ, ”ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ” (ಕೀರ್ತನೆಗಳು 16:11). ಯೇಸು ”ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯ ಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು” (ಇಬ್ರಿಯ 12:2). ಯೇಸು, ತಂದೆಯೊಟ್ಟಿಗಿನ ಅನ್ಯೋನ್ಯತೆಯನ್ನು ಪಡೆಯುವುದು ಅಮೂಲ್ಯವೆಂದು ಭಾವಿಸಿದನು. . ಇದಕ್ಕೆ ಹೋಲಿಸಲಾಗಿ, ಯೇಸು, ಇಡೀ ಸೃಷ್ಟಿಯಲ್ಲಿ ಯಾವುದನ್ನೂ ಸಹ ಮೌಲ್ಯವೆಂದು ಎಣಿಸಲ್ಪಟ್ಟಿಲ್ಲ. ಯೇಸುವಿಗೆ ಗೊತ್ತಿತ್ತು ಈ ಅನ್ಯೋನ್ಯತೆ ಶಿಲುಬೆಯಲ್ಲಿ ಮುರಿಯಲ್ಪಡುತ್ತದೆ ಎಂಬುದಾಗಿ, ಮೂರು ತಾಸುಗಳ ಕಾಲ ಯೇಸು ಮಾನವೀಯತೆ ದೊರಕದ ನಿತ್ಯತ್ವದ ನರಕದ ತೀವ್ರ ಯಾತನೆಯನ್ನು ಸಹಿಸಿಕೊಳಬೇಕಾಗಿತ್ತು (ಮತ್ತಾಯ 27:45). ನಂತರ ತಂದೆಯು ಯೇಸುವನ್ನು ಕೈಬಿಡಬೇಕಾಗಿ ಬಂತು ಮತ್ತು ನಿತ್ಯಜೀವದ ಎಲ್ಲಾ ಸಮಯದಲ್ಲಿ ತಂದೆಯೊಟ್ಟಿಗೆ ಅನುಭವಿಸಿದ ಅನ್ಯೋನ್ಯತೆಯು ಮೂರು ತಾಸುಗಳಿಗಾಗಿ ಮುರಿಯಲ್ಪಡಬೇಕಿತ್ತು. ಯೇಸು ಅನ್ಯೋನ್ಯತೆ ಮುರಿಯಲ್ಪಟ್ಟಿದ್ದಕ್ಕಾಗಿ ಬಹಳವಾಗಿ ದಿಗಿಲು ಪಟ್ಟನು, ಗೆತ್ಸೆಮನೆಯಲ್ಲಿ ಯೇಸುವಿನ ಬೇವರು ರಕ್ತದ ಹನಿಗಳ ರೀತಿಯಲ್ಲಿ ಸುರಿಯಲ್ಲಟ್ಟಿತ್ತು. ನಿನ್ನ ಚಿತ್ತವಿದ್ದರೆ ಈ ಪಾತ್ರೆಯನ್ನು ತೊಲಗಿಸು ಎಂದು ಪ್ರಾರ್ಥಿಸಿದ್ದು ಯಾವುದಕ್ಕೆ ಎಂದರೆ : ತನ್ನ ತಂದೆಯೊಟ್ಟಿಗಿನ ಅನ್ಯೋನ್ಯತೆ ಮುರಿಯಲ್ಪಡಬೇಕಿದ್ದಕ್ಕೆ.

ನಾವು ಈ ಸತ್ಯಗಳನ್ನು ನೋಡಿ, ಇದನ್ನು ಬಲವಾಗಿ ಹಿಡಿದುಕೊಂಡಿರುವುದಾದರೆ! ಹೇಗೆ ನಾವು ಯೇಸುವನ್ನು ಹಿಂಬಾಲಿಸುವುದರ ಬಗ್ಗೆ ಸುಲಭವಾಗಿ ಮಾತನಾಡುತ್ತೇವೆ ಮತ್ತು ಹಾಡುತ್ತೇವೆ! ಯೇಸುವನ್ನು ಹಿಂಬಾಲಿಸುವುದೆಂದರೆ, ಯೇಸು ತನ್ನ ತಂದೆಯೊಟ್ಟಿಗಿನ ಅನ್ಯೋನ್ಯತೆಯನ್ನು ಮೌಲ್ಯವೆಂದು ಎಣಿಸಿದ ರೀತಿಯಲ್ಲಿಯೇ ನಾವು ಸಹ ಎಣಿಸಬೇಕು. ಆಗ ಪಾಪವು ದೊಡ್ಡ ದುಷ್ಕೃತ್ಯವಾಗಿ ಕಾಣುತ್ತದೆ. ಇದು ತಂದೆಯೊಟ್ಟಿಗಿನ ಅನ್ಯೋನ್ಯತೆಯನ್ನು ಮುರಿಯುತ್ತದೆ. ಮತ್ತೊಬ್ಬ ಮನುಷ್ಯನೊಟ್ಟಿಗೆ ಪ್ರೀತಿ ತೋರದೆ ಇರುವಂತ ನಡುವಳಿಕೆಯನ್ನು ಹಾಗೂ ಇನ್ನಿತರೆ ತಪ್ಪಾದ ನಡುವಳಿಕೆಯನ್ನು ನಾವು ಸಹಿಸಿಕೊಳ್ಳಲು ಸಹ ಆಗುವುದಿಲ್ಲ, ಏಕೆಂದರೆ ಇದು ನಮ್ಮ ತಂದೆಯೊಟ್ಟಿಗಿನ ಅನ್ಯೋನ್ಯತೆಯನ್ನು ಮುರಿಯುತ್ತದೆ ಎಂಬುದಾಗಿ ಅರಿತುಕೊಂಡಿರುತ್ತೇವೆ.

ನಿಜವಾದ ಕ್ರೈಸ್ತತ್ವವೆಂದರೆ, ಪರಲೋಕದಲ್ಲಿನ ಪ್ರೀತಿಯ ತಂದೆಯೊಟ್ಟಿಗಿನ ಮುರಿಯಲ್ಪಡದೇ ಇರುವ ಅನ್ಯೋನ್ಯತೆಯ ಜೀವಿತವನ್ನು ಹೊಂದಿರುವುದಲ್ಲದೆ, ಮತ್ತೆನೂ ಅಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ನೋಡುವ ಹಾಗೇ ದೇವರು ನಮಗೆ ಪ್ರಕಟಣೆಯನ್ನು ಕೊಡಲಿ.