ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

ಪೌಲನು ಭೂಲೋಕವನ್ನು ಬಿಡುವ ಮುಂಚೆ ಆತನಿಗಿದ್ದ ಭಾರವೇನೆಂದರೆ, ದೇವರ ಪ್ರಜೆಗಳಿಗೆ ಒಳ್ಳೆಯ ಕುರುಬರಗಲಿಕ್ಕಾಗಿ ಮತ್ತೊಂದು ತಲೆಮಾರಿನ ನಾಯಕರುಗಳನ್ನು ಸಿದ್ಧ ಮಾಡುವುದಾಗಿತ್ತು. ಆತನು ತನ್ನ ಸ್ವಂತ ಜೀವಿತವನ್ನೇ ಅವರಿಗೆ ಒತ್ತಿ ಹೇಳಿದನು. ಪೌಲನು ಯಾವಾಗಲು ತನ್ನ ಸ್ವಂತ ಜೀವಿತವನ್ನೇ ಉದಾಹರಣೆಯಾಗಿ ಒತ್ತಿ ಹೇಳುತ್ತಿದ್ದನು. ಎಫೆಸದಲ್ಲಿರುವ ಸಭಾ ಹಿರಿಯರೊಟ್ಟಿಗೆ ಮಾತನಾಡುವಾಗ, ಆತನು ಹೀಗೆ ಹೇಳಲಿಲ್ಲ, ”ನಾನು ನಿಮಗೆ ಬೊಧಿಸಿದ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳಿ” ಎಂಬುದಾಗಿ. ಆದರೆ ಇದರ ಹೊರತಾಗಿ, ”ನಿಮ್ಮೊಟ್ಟಿಗೆ ನಾನು ಜೀವಿಸಿದ ರೀತಿಯನ್ನು ನೆನೆಪಿಡಿ” ಎಂಬುದಾಗಿ ಹೇಳಿದನು (ಅ.ಕೃತ್ಯಗಳು 20:19, 33-35) ಮತ್ತು ಪೌಲನು ತಿಮೊಥೆಯನಿಗೆ ಇದೇ ಸಂಗತಿಯನ್ನು ಇಲ್ಲಿ ಹೇಳಿದ್ದಾನೆ, ”ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕರನ್ನು ಅನುಸರಿಸಿ, ದೇವರನ್ನು ಸೇವಿಸಿ, ಸ್ತೋತ್ರ ಸಲ್ಲಿಸುತ್ತೇನೆ” (2 ತಿಮೊಥೆ 1:3). ಪೌಲನು ಪರಿಪೂರ್ಣನಲ್ಲ. ಆದರೆ ತನ್ನ ತಿಳುವಳಿಕೆಗೆ ಅನುಸಾರವಾಗಿ, ಆತನಿಗೆ ತನ್ನ ಮನಸ್ಸಾಕ್ಷಿ ತಿಳಿಸಿಕೊಟ್ಟ ಮೇರೆಗೆ, ದೇವರ ಎದುರಿಗೆ ಸತ್ಯವಂತನಾಗಿ, ಪ್ರಮಾಣಿಕವಾದ ಜೀವಿತವನ್ನು ಆತನು ಜೀವಿಸಿದನು.

ಪೌಲನು ತಿಮೊಥೆಯನಿಗೆ ಅಕ್ಕರೆಯ ಮಾತುಗಳನ್ನು ಆಡುತ್ತಾನೆ, ಏಕೆಂದರೆ ತಿಮೊಥೆಯನು ಪೌಲನ ಹೃದಯಕ್ಕೆ ದೊಡ್ಡದಾದ ಸಂತೋಷವನ್ನು ತಂದಂತಹ ಒಬ್ಬ ಜೊತೆ ಕೆಲಸಗಾರನಾಗಿದ್ದನು. ಪೌಲನು ಅನೇಕ ಸಭೆಗಳಲ್ಲಿ ಹಲವು ವಿಶ್ವಾಸಿಗಳ ಬಗ್ಗೆ ನಿರಾಶೆ ಹೊಂದಿದ್ದನು, ಏಕೆಂದರೆ ಅವರು ಪರಿಣಾಮಕಾರಿಯಾದಂತಹ ಶಿಷ್ಯರಾಗಿರಲಿಲ್ಲ. ಅದೇ ರೀತಿ ಪೌಲನು ತನ್ನ ಅನೇಕ ಜೊತೆ ಕೆಲಸಗಾರರ ಬಗ್ಗೆಯೂ ಸಹ ನಿರಾಶೆ ಹೊಂದಿದ್ದನು, ಏಕೆಂದರೆ, ಅವರು ಸಹ ದೇವರಿಗಾಗಿ ಸಂಪೂರ್ಣ ಮತ್ತು ಒಟ್ಟಾರೆ ಜೀವಿತವನ್ನು ಜೀವಿಸುತ್ತಿರಲಿಲ್ಲ. ಒಬ್ಬ ನಿಜವಾದ ದೇವರ ಸೇವಕನು ಸಹ ಇಂದು ಅದೇ ನಿರಾಶೆಯನ್ನು ಎದುರಿಸುತ್ತಾನೆ. ಪೌಲನೇ ತಾನು ನೆಟ್ಟ ಸಭೆಗಳ ಬಗ್ಗೆ ನಿರಾಶೆಯನ್ನು ಎದುರಿಸಿದ್ದರೆ, ನಾವು ಏನನ್ನಾದರೂ ಉತ್ತಮವಾದದ್ದನ್ನು ಮಾಡಲು ಹೊರಟಿದ್ದೀವಿ ಎಂದು ನೀವು ನೆನಸುತ್ತೀರಾ? ನಾನು ಸಹ ಸಭೆಗಳನ್ನು ನೆಟ್ಟಿದ್ದೀನಿ ಮತ್ತು ನಾನು ಸಹ ಕೆಲವು ಸಭೆಗಳಲ್ಲಿ ಅನೇಕ ಸಂಗತಿಗಳ ಬಗ್ಗೆ ನಿರಾಶೆ ಹೊಂದಿದ್ದೀನಿ. ನಾನೂ ಜೊತೆ ಕೆಲಸಗಾರರನ್ನು ಹೊಂದಿದ್ದೀನಿ ಮತ್ತು ಕೆಲವು ಜೊತೆ ಕೆಲಸಗಾರರಲ್ಲಿ ಅನೇಕ ಸಂಗತಿಗಳನ್ನು ನೋಡಿದಾಗ ನಾನು ಕೂಡ ನಿರಾಶೆ ಹೊಂದಿದ್ದೀನಿ. ಇಲ್ಲಿ ಮತ್ತು ಅಲ್ಲಿ ತಿಮೊಥೆ ತರಹ ಯಾವುದರಲ್ಲಿಯೂ ತನ್ನ ಸ್ವಂತದ್ದನ್ನು ಹುಡುಕದ ಒಬ್ಬ ವ್ಯಕ್ತಿಯನ್ನು ಮಾತ್ರ ನಾವು ಕಂಡುಕೊಳ್ಳುತ್ತೇವೆ. ಇಂತಹ ಜನರು ದೇವರ ಸೇವಕನ ಹೃದಯಕ್ಕೆ ದೊಡ್ಡ ಸಂತೋಷವನ್ನು ತರುತ್ತಾರೆ.

ಪೌಲನು ಉತ್ಸಾಹಗೊಂಡನು, ಏಕೆಂದರೆ ಆತನು ತನ್ನ ಹಾಗೇ ನಂತರದ ತಲೆಮಾರಿಗೆ ಸೇವೆಯನ್ನು ಹೊತ್ತುಸಾಗುವಂತ ಕೆಲವರನ್ನು ಕಂಡುಕೊಂಡನು. ದೇವರ ಯಾವುದೇ ಸೇವಕರ ಹೃದಯಕ್ಕೆ ದೊಡ್ಡದಾದ ಸಂತೋಷ ತರುವುದಾದರೂ ಏನು ಮತ್ತು ತನ್ನ ಜೀವಿತದ ಕೊನೆಯಲ್ಲಿ ನೋಡ ಬಯಸುವುದಾದರೂ ಏನು, ಏನೆಂದರೆ, ಯಾರು ಆತನ ಸೇವೆಯನ್ನು ಅದೇ ಉತ್ಸಾಹದಿಂದ ಮತ್ತು ಕರ್ತನಿಗೆ ಅದೇ ಭಕ್ತಿಯಿಂದ ಹೊತ್ತು ಸಾಗುವಂತದ್ದನ್ನು ನೋಡುವುದಾಗಿದೆ. ತಿಮೊಥೆಯು ಆ ರೀತಿಯಾಗಿದ್ದನು. ಅದಕ್ಕಾಗಿ ಪೌಲನು ಹೀಗೆ ಬರೆದನು, ”ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ನಾನು ನಿನ್ನ ಕಣ್ಣೀರುಗಳನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಅಪೇಕ್ಷಿಸುತ್ತೇನೆ” (2 ತಿಮೊಥೆ 1:3-4) ಎಂಬುದಾಗಿ. ಪೌಲನು ತಿಮೊಥೆಯನನ್ನು ನೋಡಿದ್ದು, ಬಹುಶ: ಕಡೆ ಸಮಯವಾಗಿದ್ದಿರಬಹುದು. ಈಗ ಪೌಲನು ಯೋಚಿಸಿದ್ದೇನೆಂದರೆ, ತಾನು ಮತ್ತೊಮ್ಮೆ ತಿಮೊಥೆಯನನ್ನು ನೋಡಲು ಸಾಧ್ಯವಾಗುವುದಿಲ್ಲವೇನೋ ಎಂಬುದಾಗಿ.

ತಿಮೊಥೆಯನ ಅಜ್ಜಿಯಾದ ಲೋವಿಯಳು ಈ ಕುಟುಂಬದಲ್ಲಿ ನಂಬಿಕೆಗೆ ಬಂದ ಮೊದಲ ವ್ಯಕ್ತಿಯಾಗಿದ್ದಳು (2 ತಿಮೊಥೆ 1:5). ಈತನ ಅಜ್ಜಿಯು ತನ್ನ ನಂಬಿಕೆಯನ್ನು ತಿಮೊಥೆಯ ತಾಯಿಯಾದ ಯೂನೀಕೆಗೆ ವರ್ಗಾಯಿಸಿದಳು ಮತ್ತು ತಾಯಿಯು ಅದೇ ನಂಬಿಕೆಯನ್ನು ತಿಮೊಥೆಯನಿಗೆ ವರ್ಗಾಯಿಸಿದಳು. ಆ ಒಂದು ಅಜ್ಜಿಯು ನಂಬಿಕೆಯನ್ನು ತನ್ನ ಮಗಳಿಗೆ ಕೊಟ್ಟಳೆ ಹೊರತು, ಸತ್ಯವೇದದ ತಿಳುವಳಿಕೆಯನ್ನಲ್ಲ ಮತ್ತು ಆ ತಾಯಿಯು ಆ ನಂಬಿಕೆಯನ್ನು ತಿಮೊಥೆಯನಿಗೆ ಸಾಗಿಸಿದಳು. ಇದರ ಅರ್ಥ, ತಿಮೊಥೆಯನು ಹೇಗೆ ಬೆಳೆದನೆಂದರೆ, ತನ್ನ ತಾಯಿಯು ಹಾದು ಹೋದ ಹಲವು ವಿಭಿನ್ನ ಸಂಕಟಗಳಲ್ಲಿ ದೇವರಲ್ಲಿ ಭರವಸವಿಟ್ಟದ್ದನ್ನು ನೋಡಿದ ಮೇರೆಗೆ. ನಿಮ್ಮ ಸಂಕಟಗಳಲ್ಲಿ ನೀವು ದೇವರಲ್ಲಿ ಭರವಸವಿಟ್ಟಿದ್ದನ್ನು ನಿಮ್ಮ ಮಕ್ಕಳು ನೋಡಿದ್ದಾರಾ? ಹೀಗೆಯೇ ನಿಮ್ಮ ನಂಬಿಕೆಯನ್ನು ಅವರಿಗೆ ಸಾಗಿಸಬೇಕು. ಅದಕ್ಕಾಗಿಯೇ ದೇವರು ನಿಮ್ಮ ಮಾರ್ಗಗಳಲ್ಲಿ ಕಠಿಣವಾದ ಸಂಕಟಗಳನ್ನು ಅನುಮತಿಸುತ್ತಾನೆ. ಸಣ್ಣ ವಯಸ್ಸಿನಿಂದಲೇ ನಿಮ್ಮ ಮಗು ಒಂದು ಸಂಗತಿಯನ್ನು ಕಲಿತುಕೊಳ್ಳಬೇಕು, ಅದೇನೆಂದರೆ: ”ನನ್ನ ತಾಯಿಯು ಕಠಿಣ ಸನ್ನಿವೇಶಗಳಲ್ಲಿ ಪ್ರಾರ್ಥಿಸಿದಳು ಮತ್ತು ದೇವರಲ್ಲಿ ಭರವಸೆ ಇಟ್ಟಳು. ನಾನು ಹುಷಾರಿಲ್ಲದಿರುವಾಗ ನನ್ನ ತಂದೆ ನನ್ನ ತಲೆಯ ಮೇಲೆ ಕೈ ಇಟ್ಟು ಯೇಸುವಿನ ಹೆಸರಲ್ಲಿ ಪ್ರಾರ್ಥಿಸಿದರು” ಎಂಬುದಾಗಿ. ಆ ಸಣ್ಣ ಮಗು ಮುಂದೆ ಬೆಳೆದಾಗ, ಮುಂದೆ ಒಂದು ದಿನ ಮನೆ ಬಿಟ್ಟು ಹೋದಂತ ಸಂದರ್ಭದಲ್ಲಿ, ಮಗ ಅಥವಾ ಮಗಳು ಕಠಿಣ ಪರಿಸ್ಥಿತಿಗಳನ್ನು ಎದುರಿಸುವಾಗ, ತಮ್ಮ ತಂದೆ ಮತ್ತು ತಾಯಿ ಮಾಡಿದ್ದನ್ನೇ ಮಾಡುತ್ತಾರೆ. ಅವರು ಯೇಸುವಿನ ಹೆಸರಲ್ಲಿ ದೇವರಿಗೆ ಪ್ರಾರ್ಥಿಸುತ್ತಾರೆ. ಹೀಗೆಯೇ ನಾವು ನಂಬಿಕೆಯನ್ನು ಅವರಿಗೆ ಸಾಗಿಸಬೇಕು. ನಾವು ಅವರಿಗೆ ಸತ್ಯವೇದದಲ್ಲಿರುವ ಕಥೆಗಳನ್ನು ಓದಿ ತಿಳಿಸಬೇಕು. ಇದು ಅಗತ್ಯವಾದದ್ದು. ಈ ರೀತಿಯಾಗಿ ಮಕ್ಕಳು ದೇವರ ವಾಕ್ಯದ ತಿಳುವಳಿಕೆಯನ್ನು ಹೊಂದುತ್ತಾರೆ. ಆದರೆ ನಾವು ಅವರಿಗೆ ನಂಬಿಕೆಯನ್ನು ಸಾಗಿಸಲೇಬೇಕು. ಯೂನೀಕೆಗೆ ಗೊತ್ತಿತ್ತು, ನನ್ನ ಮಗನಾದ ಈ ಸಣ್ಣ ಹುಡುಗ ಯೇಸು ಕ್ರಿಸ್ತನ ಅದ್ಬುತವಾದ ಅಪೊಸ್ತಲನಾಗಿ ಬೆಳೆಯುತ್ತಾನೆ ಎಂಬುದಾಗಿ. ತಿಮೊಥೆಯನು 20 ವರ್ಷದವನಾದಾಗ, ಈತನನ್ನು ಪೌಲನು ತನ್ನ ಜೊತೆ ಕೆಲಸಾಗರನನ್ನಾಗಿ ನೇಮಿಸಿಕೊಂಡನು. ಆ ತಾಯಿಯು ಮನೆಯಲ್ಲಿದ್ದುಕೊಂಡೆ ಸಭೆಗೆ ಎಂಥಹ ಕಾರ್ಯವನ್ನು ಮಾಡಿದಳು. ನಿಮ್ಮ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ದೇವರಲ್ಲಿ ಭರವಸೆ ಇರಿಸುವ ರೀತಿ ಬೆಳೆಸುವುದರಿಂದ, ಆ ತಾಯಿ ಮಾಡಿದಂತೆ ನೀವೂ ಮಾಡಬಹುದು.

ತಿಮೊಥೆಯ ತಂದೆಯು ಗ್ರೀಕನಾಗಿದ್ದನು (ಅ.ಕೃತ್ಯಗಳು 16:3). ಯೂನೀಕೆಯು ದೇವರಿಗೆ ಭಯ ಪಡುವಂತ ಯೆಹೂದ್ಯ ತಾಯಿಯ ಮಗಳಾಗಿದ್ದಳು. ಆದರೆ ಯೂನೀಕೆಯು ಧರ್ಮಶಾಸ್ತ್ರಕ್ಕೆ ಅವಿಧಯಳಾಗಿ, ಅನ್ಯನನ್ನು ಮದುವೆಯಾಗಿ, ದೇವರಿಂದ ತಪ್ಪಿಹೋಗಿದ್ದಳು. ನಂತರ ಆಕೆಯು ಮಾನಾಸಾಂತರ ಹೊಂದಿರಬಹುದು. ಆಕೆಯ ಪತಿಯು ಒಬ್ಬ ಶ್ರೀಮಂತ ವ್ಯವಹಾರಸ್ಥನಾಗಿರಬಹುದು, ಆತನು ದೇವರಿಗೆ ಯಾವುದೇ ಸಮಯವನ್ನು ಕೊಡುತ್ತಿರಲಿಲ್ಲ ಮತ್ತು ದೈವಿಕ ಮಾರ್ಗದಲ್ಲಿ ಆತನ ಮಗನನ್ನು ಬೆಳೆಸುವ ಆಸಕ್ತಿಯನ್ನು ಹೊಂದಿರಲಿಲ್ಲ. ಹಾಗಾಗಿ ಯೂನೀಕೆಯು ತಿಮೊಥೆಯನನ್ನು ತಾನೊಬ್ಬಳೇ ಬೆಳೆಸಿದಳು. ಆಕೆ ಆತನನ್ನು ಯಾವ ರೀತಿ ದೈವಿಕ ಮಾರ್ಗದಲ್ಲಿ ಬೆಳೆಸಿದಳು ಎಂದರೆ, ತಿಮೊಥೆಯನು ಮೊದಲ ಶತಮಾನದ ಶ್ರೇಷ್ಟ ಅಪೊಸ್ತಲನಾದನು. ಇನ್ನೂ ಪರಿವರ್ತನೆ ಹೊಂದಿರದ ಗಂಡಂದಿರನ್ನು ಹೊಂದಿರುವ ತಾಯಿಯರಿಗೆ ಯೂನೀಕೆಯಳು ಎಂಥಹ ಮಾದರಿ. ಯಾರಿಗೆ ಗೊತ್ತು, ನಿಮ್ಮ 4 ವರ್ಷದ ಮಗುವಿಗಾಗಿ ದೇವರ ಯೋಜನೆ ಏನಿದೆ ಎಂದು, ಆತನು ಮುಂದೆ ಒಂದು ದಿನ ಯೇಸು ಕ್ರಿಸ್ತನ ಅಪೊಸ್ತಲನಾಗಬಹುದು! ಹಾಗಾದಲ್ಲಿ, ಒಂದು ದೊಡ್ಡ ಜವಬ್ದಾರಿ ಮತ್ತು ಒಪ್ಪಂದ ನಿಮ್ಮ ಮೇಲೆ ಅವಲಂಬಿತವಾಗಿದೆ, ಅದೇನೆಂದರೆ, ಪ್ರಿಯ ತಾಯಿಯೇ, ಹೇಗೆ ನೀವು ಆತನನ್ನು ಬೆಳೆಸುತ್ತೀರಿ ಮತ್ತು ನೀವು ಆ ಮಗುವಿನ ಸಣ್ಣ ಹೃದಯಕ್ಕೆ ದೇವರಲ್ಲಿನ ನಂಬಿಕೆಯನ್ನು ಸಾಗಿಸುತ್ತೀರಾ. ಸಭೆಯಲ್ಲಿ ನೀವು ಮತ್ತೊಬ್ಬರ ಬಗ್ಗೆ ಹಿಂದೆ ಮಾತನಾಡುವಂತದ್ದನ್ನು ಮಗು ಕೆಳಿಸಿಕೊಳ್ಳುವಂತ ಸ್ಥಿತಿಯನ್ನು ಬರಮಾಡಿಕೊಳ್ಳಬೇಡಿ ಮತ್ತು ಮನೆಯಲ್ಲಿನ ಸಂಗತಿಗಳಿಗಾಗಿ ನೀವು ಗೊಣಗುಟ್ಟುವುದನ್ನು ಮತ್ತು ದೂರುವುದನ್ನು ಅಭ್ಯಾಸ ಮಾಡಿಕೊಂಡು, ಆ ಮಗು ಅದನ್ನು ಕೇಳಿಸಿಕೊಳ್ಳುವಂತ ಸ್ಥಿತಿಯನ್ನು ತಂದೊಡ್ಡುಕೊಳ್ಳಬೇಡಿ. ಅದು ಆತನನ್ನು ನಾಶ ಮಾಡುತ್ತದೆ.

ದೇವರ ಯಾವುದೇ ಸೇವಕರ ಹೃದಯಕ್ಕೆ ದೊಡ್ಡದಾದ ಸಂತೋಷ ತರುವುದಾದರೂ ಏನು ಮತ್ತು ತನ್ನ ಜೀವಿತದ ಕೊನೆಯಲ್ಲಿ ನೋಡ ಬಯಸುವುದಾದರೂ ಏನು, ಏನೆಂದರೆ, ಯಾರು ಆತನ ಸೇವೆಯನ್ನು ಅದೇ ಉತ್ಸಾಹದಿಂದ ಮತ್ತು ಕರ್ತನಿಗೆ ಅದೇ ಭಕ್ತಿಯಿಂದ ಹೊತ್ತು ಸಾಗುವಂತದ್ದನ್ನು ನೋಡುವುದಾಗಿದೆ

ನಾನು ನನ್ನ ಮನೆಯಲ್ಲಿ ತುಂಬಾ ಎಚ್ಚರಿಕೆಯುಳ್ಳವನಾಗಿದ್ದೆ. ನಾನು ಮತ್ತೊಬ್ಬ ವಿಶ್ವಾಸಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ನನ್ನ ಮಕ್ಕಳು ಎಂದಿಗೂ ಕೇಳಿಲ್ಲ, ಇಲ್ಲವಾದಲ್ಲಿ ಅವರು ಆ ಕಾಯಿಲೆಯಿಂದ ರೋಗ ಹತ್ತಿಸಿಕೊಳ್ಳುತ್ತಿದ್ದರು. ಹೇಗೆ ನನ್ನ ಮಗು ಕ್ಷಯ ರೋಗ ಮತ್ತು ಕುಷ್ಠ ರೋಗ ಹತ್ತಿಸಿಕೊಳ್ಳುವುದು ನನಗೆ ಇಷ್ಟವಿಲ್ಲವೋ, ಅದೇ ರೀತಿ ಮತ್ತೊಬ್ಬ ವಿಶ್ವಾಸಿಗಳ ಕಡೆಗೆ ನಕರಾತ್ಮಕ ಮನೋಭಾವದಿಂದ ಅವರು ಆತ್ಮಿಕ ರೋಗ ಹತ್ತಿಸಿಕೊಳ್ಳಬಾರದೆಂದು ಬಯಸುತ್ತೇನೆ. ನಾವು ನಮ್ಮ ಮಕ್ಕಳಿಗೆ ನಂಬಿಕೆಯನ್ನು ಸಾಗಿಸುವುದಾದರೆ, ನಾವು ಮನೆಯಲ್ಲಿ ಕಷ್ಟಗಳನ್ನು ಎದುರಿಸುವುದನ್ನು ಆ ಮಕ್ಕಳು ನೋಡುವಾಗ, ನಾವು ಅವರಿಗೆ ಎಲ್ಲಕ್ಕಿಂತ ಹೆಚ್ಚಿನದಾದ ಉಡುಗೊರೆಯನ್ನು ಕೊಟ್ಟಂತಾಗುತ್ತದೆ.

ಹಲವು ಪ್ರಕರಣಗಳಲ್ಲಿ, ನಾವು ಗಮನಿಸಿರುವುದೇನೆಂದರೆ, ವಿಶ್ವಾಸಿಗಳ ಮನೆಯಲ್ಲಿ ಬೆಳೆದ ಎರಡನೇ ತಲೆಮಾರಿನ ಕ್ರೈಸ್ತರಿಗಿಂತ, ಮೊದಲ ತಲೆಮಾರಿನ ಕ್ರೈಸ್ತರಲ್ಲಿ ಬಲವಾದ ನಂಬಿಕೆ ಮತ್ತು ಕರ್ತನಲ್ಲಿ ಭಕ್ತಿ ಇತ್ತು ಎಂಬುದಾಗಿ. ಆದರೆ ತಿಮೊಥೆ ಇದಕ್ಕೆ ಹೊರತಾಗಿದ್ದನು. ಈತನು ಕರ್ತನಿಗೆ ಭಯ-ಭಕ್ತಿ ತೋರಿಸುತ್ತಿದ್ದ ಮೂರನೇ ತಲೆಮಾರಿನ ವಿಶ್ವಾಸಿಯಾಗಿದ್ದನು. ಹಾಗಾಗಿ ಎರಡನೇ ಮತ್ತು ಮೂರನೇ ತಲೆಮಾರಿನ ವಿಶ್ವಾಸಿಗಳು ತಮ್ಮ ಪೋಷಕರಿಗಿಂತ ಕರ್ತನಿಗೆ ಹೆಚ್ಚು ಭಯ ಭಕ್ತಿಯುಳ್ಳವರಾಗಿದ್ದರು.