ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ಮತ್ತಾಯ 11:25 ರಲ್ಲಿ ಯೇಸು ಹೀಗೆ ಹೇಳಿದ್ದಾರೆ, ”ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ದಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ”. ಹೊಸ ಒಡಬಂಡಿಕೆಯಲ್ಲಿನ ದೊಡ್ಡ ದೊಡ್ಡ ಸತ್ಯಗಳು ದೇವರಿಂದ ಗುಪ್ತವಾಗಿಡಲ್ಪಟ್ಟಿವೆ. ನೀವು ಸತ್ಯವೇದ ಅಧ್ಯಯನ ಮಾಡುವುದರಿಂದ ಆ ಸತ್ಯಗಳು ಪ್ರಕಟವಾಗುವುದಿಲ್ಲ. ಲೋಕದಲ್ಲಿರುವಂತ ಹಲವು ಬಗೆಯ ವಿಮರ್ಶೆಗಳನ್ನು ನೀವು ಓದಬಹುದು. ಆದರೆ ಅವುಗಳು ನಿಮಗೆ ಪ್ರಕಟವಾಗುವುದಿಲ್ಲ. ಏಕೆಂದರೆ ಅವುಗಳು ಬುದ್ಧಿವಂತ ಮೇಧಾವಿಗಳಿಂದ ಗುಪ್ತವಾಗಿಡಲ್ಪಟ್ಟಿವೆ. ನಿಮಗೆ ಪ್ರಕಟಣೆಯ ಅಗತ್ಯತೆ ಇದೆ. ಯಾರು ಬಾಲಕರಂತೆ ಇರುತ್ತಾರೋ ಮತ್ತು ಹೃದಯದಲ್ಲಿ ಶುದ್ಧತೆಯನ್ನು ಇಟ್ಟುಕೊಂಡಿರುತ್ತಾರೋ, ಅಂಥವರಿಗೆ ಮಾತ್ರ ದೇವರು ಆ ಪ್ರಕಟಣೆಯನ್ನು ಕೊಡುತ್ತಾನೆ. ಜನರು ಬುದ್ಧಿವಂತಿಕೆಯ ತಲೆಯನ್ನು ಹೊಂದಿದ್ದಾರೋ ಅಥವಾ ಇಲ್ಲವೋ, ಅದು ಮುಖ್ಯವಲ್ಲ. ದೇವರ ರಾಜ್ಯದಲ್ಲಿ ಬುದ್ದಿವಂತಿಕೆಯು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ದೇವರ ಪ್ರಕಟಣೆಯನ್ನು ಪಡೆದುಕೊಳ್ಳಲು ಶುದ್ಧ ಹೃದಯದ ಅಗತ್ಯತೆ ಇದೆ. ಮಕ್ಕಳು ಕಲಿಯಬಲ್ಲರು. ಒಂದು ಸಣ್ಣ ಮಗು ಅರಿವಿಲ್ಲದ್ದಾಗಿರುತ್ತದೆ ಮತ್ತು ಆ ಅರಿವಿಲ್ಲದಿರುವಿಕೆಯನ್ನು ಮಗು ಸಂತೋಷವಾಗಿ ಒಪ್ಪಿಕೊಳ್ಳುತ್ತದೆ. ಉದಾಹರಣೆಗೆ, ಆ ಮಗು ತಂದೆಗೆ ಹೀಗೆ ಕೇಳುತ್ತದೆ, ”ಅಪ್ಪಾ, ರಸ್ತೆಯಲ್ಲಿ ಹಳದಿ ಪಟ್ಟಿಗಳನ್ನು ಯಾಕೆ ಎಳೆಯಲಾಗಿದೆ?''ಎಂಬುದಾಗಿ. ದೊಡ್ಡವರಾದ ನಮಗೆ ಗೊತ್ತು, ಆ ಹಳದಿ ಪಟ್ಟಿಗಳು ಸಂಚಾರ ದಟ್ಟಣೆ ಇರುವ ಸಲುವಾಗಿ ರಸ್ತೆಗಳನ್ನು ವಿಭಜಿಸುವ ಉದ್ದೇಶದಿಂದ ಎಳೆಯಲ್ಪಟ್ಟಿವೆ ಎಂದು. ಆದರೆ ಆ ಮಗುವಿಗೆ ಆ ಸಣ್ಣ ಸಂಗತಿಯ ಬಗ್ಗೆ ಅರಿವಿರುವುದಿಲ್ಲ. ಕೇವಲ ಕೆಲವೇ ವಿಶ್ವಾಸಿಗಳು ಈ ರೀತಿಯಾಗಿ ಪವಿತ್ರಾತ್ಮನ ಬಳಿಗೆ ಬಂದು ಹೀಗೆ ಹೇಳುವವರಾಗಿರುತ್ತಾರೆ, ”ಕರ್ತನೇ, ನೀನು ಈ ಪುಸ್ತಕವನ್ನು ಬರೆದಿದ್ದೀಯ. ಏನು ಇದರ ಅರ್ಥ? ಆತ್ಮೀಕ ವಿಷಯಗಳಲ್ಲಿ ನಾನು ಮುರ್ಖನಾಗಿದ್ದೇನೆ. ದಯವಿಟ್ಟು ಇದನ್ನು ನನಗೆ ವಿವರಿಸು” ಎಂಬುದಾಗಿ. ಹೊಸ ಒಡಂಬಡಿಕೆಯಲ್ಲಿ, ಪವಿತ್ರಾತ್ಮನಿಂದ ತುಂಬಿಸಲ್ಪಡುವ ಸೌಭಾಗ್ಯವನ್ನು ನಾವು ಹೊಂದಿದ್ದೇವೆ ಮತ್ತು ಆತನನ್ನು ಹೊಂದಿಕೊಂಡು, ಆತನೇ ಬರೆದಿರುವಂತ ಪುಸ್ತಕವನ್ನು ಆತನೇ ಬಂದು ನಮಗೆ ಬೊಧಿಸುವಂತ ಸೌಭಾಗ್ಯವನ್ನು ಹೊಂದಿದ್ದೇವೆ.

ಕ್ರಿಸ್ತನು ಸಭೆಯಲ್ಲಿ ಬೋಧಕರನ್ನು ನೇಮಿಸಿದ್ದಾನೆ. ಆದರೆ ಆ ಬೋಧಕರಿಂದ ಕೇಳಿಸಿಕೊಳ್ಳುವಾಗ, ಅವರಿಂದ ಸ್ವೀಕಾರ ಮಾಡಿಕೊಂಡಿದ್ದರಲ್ಲೇ ನೀವು ತೃಪ್ತರಾದರೆ, ನೀವು ದೇವರನ್ನು ಅರಿಯಲು ಸಾಧ್ಯವಿಲ್ಲ. ಅವರು ಏನು ಬೋಧಿಸುತ್ತಾರೋ ಅದು ಸತ್ಯವಿರಬಹುದು. ಆದರೆ ಆ ಸತ್ಯವನ್ನು ನೀವು ಎರಡನೇಯವರಿಂದ ಪಡೆದುಕೊಂಡವರಾಗಿರುತ್ತೀರಿ. ನೀವು ಆ ಎರಡನೇಯವರಿಂದ ಪಡೆದುಕೊಂಡದ್ದನ್ನು ಕರ್ತನ ಮುಂದೆ ತೆಗೆದುಕೊಂಡು ಹೋಗಿ, ಹೀಗೆ ಹೇಳಬೇಕು, ”ಕರ್ತನೆ, ಇದನ್ನು ಮೂಲದಿಂದ ಬಂದ ಜ್ಞಾನವನ್ನಾಗಿ ಮಾಡು. ಇದನ್ನು ನನ್ನ ಸ್ವಂತ ಅನುಭವದಂತೆ ಮಾಡು”.ಆಗ ಆ ಸತ್ಯಗಳು ಯಾವಾಗಲೂ ನಿಮ್ಮವುಗಳಾಗಿರುತ್ತವೆ. ನೀವು ಈ ರೀತಿ ಮಾಡದಿದ್ದರೆ, ನೀವು ಪರಲೋಕದಿಂದ ಆ ಸತ್ಯಗಳನ್ನು ಸ್ವೀಕರಿಸಿಕೊಂಡರು, ಅವು ಹಳತಾಗಿರುತ್ತದೆ. ಇದು ಯಾವ ರೀತಿ ಎಂದರೆ, ಪರಲೋಕದಿಂದ ಕಳುಹಿಸಲ್ಪಟ್ಟ ಮನ್ನವು 24 ತಾಸಿನಲ್ಲೇ, ಹುಳಗಳು ಹತ್ತಿಕೊಂಡು, ಹಳಸಿಹೋದಂತೆ. ಆದರೆ ಮನ್ನವು ಅತೀ ಪವಿತ್ರ ಸ್ಥಳದಲ್ಲಿ ಮತ್ತು ದೇವರ ಸಮ್ಮುಖದಲ್ಲಿ ಇಟ್ಟ ಎಲ್ಲಾ ಸಮಯದಲ್ಲೂ ತಾಜಾತನದಲ್ಲಿಯೇ ಉಳಿದುಕೊಂಡಿತ್ತು,

ಆದರೆ ಯೇಸು, ಯಾರು ತಮ್ಮ ಸೋಲಲ್ಪಟ್ಟ ಜೀವಿತದಿಂದ ಆತ್ಮೀಕವಾಗಿ ಅಸ್ವಸ್ಥಗೊಂಡು ಸುಸ್ತಾಗಿರುತ್ತಾರೋ, ಅಂಥವರಿಗೆ ಮಾತ್ರ ತನ್ನ ಬಳಿ ಬರಲು ಆಹ್ವಾನಿಸುತ್ತಾನೆ

ಮತ್ತಾಯ 11:28 ರಲ್ಲಿ ಯೇಸು ಹೀಗೆ ಹೇಳಿದ್ದಾರೆ, ”ಏಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು”. ಇದು ಹಳೆ ಒಡಂಬಡಿಕೆಯ ಸಬ್ಬತ್ ದಿನವನ್ನು ಪೂರೈಸಿದ್ದಾಗಿದೆ. ಹೊಸ ಒಡಂಬಡಿಕೆಯ ಸಬ್ಬತ್ ದಿನವು ದೈಹಿಕ ವಿಶ್ರಾಂತಿಯ ದಿನವಲ್ಲ. ಆದರೆ ಯೇಸು ನಮಗೆ ಕೊಟ್ಟಿರುವಂತದ್ದು, ಒಳಗಿನ ವಿಶ್ರಾಂತಿ. ಯಾರು ಆತನ ಬಳಿ ಬಂದು, ತಾವು ಚಿಂತೆಯುಳ್ಳವರು ಮತ್ತು ಭಾರವುಳ್ಳವರು ಎಂದು ಅರಿಕೆ ಮಾಡುತ್ತಾರೋ, ಅಂಥವರಿಗೆ ಮೊದಲು ಯೇಸು ವಿಶ್ರಾಂತಿಯನ್ನು ಕೊಡುತ್ತಾನೆ. ಜನರು ನನ್ನ ಬಳಿ ಬಂದು ಹೀಗೆ ಹೇಳುತ್ತಿರುತ್ತಾರೆ, ''ಸಹೋದರ ಝ್ಯಾಕ್ ರವರೇ, ನಾನು ನಿಮ್ಮ ಸಭೆಗೆ ಸೇರಬೇಕು'' ಎಂದು ಹೇಳುತ್ತಾರೆ''. ”ನಾನು ಅವರಿಗೆ ಯಾಕೆ ನೀವು ನನ್ನ ಸಭೆಗೆ ಸೇರ ಬಯಸುತ್ತೀರಿ ಎಂದು ಕೇಳಿದಾಗ, ಅವರು ಈ ರೀತಿ ಉತ್ತರಿಸುತ್ತಾರೆ, ”ಏಕೆಂದರೆ, ನಾನು ಈಗಿರುವಂತ ಸಭೆಯಿಂದ ಆತ್ಮೀಕವಾಗಿ ಅಸ್ವಸ್ಥಗೊಂಡಿದ್ದೇನೆ ಮತ್ತು ಸುಸ್ತಾಗಿದ್ದೇನೆ ”ಎಂದು. ಆಗ ನಾನು ಅವರಿಗೆ ಹೀಗೆ ಹೇಳುತ್ತೇನೆ. ”ನೀವು ನಿಮ್ಮ ಸಭೆಯಿಂದ ಆತ್ಮೀಕವಾಗಿ ಅಸ್ವಸ್ಥಗೊಂಡು ಮತ್ತು ಆತ್ಮೀಕವಾಗಿ ಸುಸ್ತಾಗಿದ್ದರೆ, ಸ್ವಲ್ಪ ಸಮಯದ ನಂತರ, ನೀವು ನಮ್ಮಿಂದಲೂ ಆತ್ಮೀಕವಾಗಿ ಅಸ್ವಸ್ಥ ಮತ್ತು ಸುಸ್ತಾಗುತ್ತೀರಿ. ಹಾಗಾಗಿ ನಮ್ಮೊಟ್ಟಿಗೆ ಸೇರಬೇಡಿ. ಈಗಾಗಲೇ ನಮ್ಮಿಂದಲೇ ಆತ್ಮೀಕವಾಗಿ ಅಸ್ವಸ್ಥಗೊಂಡ ಮತ್ತು ಸುಸ್ತಾದಂತ ದೊಡ್ಡ ಗುಂಪನ್ನೇ ನಾವು ಹೊಂದಿದ್ದೇವೆ. ಬೇರೆಯವರಿಂದ ಆತ್ಮೀಕವಾಗಿ ಅಸ್ವಸ್ಥ ಮತ್ತು ಸುಸ್ತಾಗಬಾರದು. ನಿಮಗೆ ನೀವು ಅಸ್ವಸ್ಥಗೊಂಡು ಸುಸ್ತಾಗಿದ್ದರೆ ಮಾತ್ರ ನಮ್ಮೊಟ್ಟಿಗೆ ಸೇರಿಕೊಳ್ಳಲು ನಿಮಗೆ ಸ್ವಾಗತವಿದೆ ಮತ್ತು ನಾವೆಲ್ಲಾ ಒಟ್ಟಾಗಿ ಅದ್ಬುತವಾದ ಅನ್ಯೂನ್ಯತೆಯನ್ನು ಹೊಂದಿಕೊಳ್ಳೋಣ''.

ಅನೇಕ ಪಾಸ್ಟರ್ ಗಳು ತಮ್ಮ ಸಭೆಯ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿರುತ್ತಾರೆ. ಆದರೆ ಯೇಸು, ಯಾರು ತಮ್ಮ ಸೋಲಲ್ಪಟ್ಟ ಜೀವಿತದಿಂದ ಆತ್ಮೀಕವಾಗಿ ಅಸ್ವಸ್ಥಗೊಂಡು ಸುಸ್ತಾಗಿರುತ್ತಾರೋ, ಅಂಥವರಿಗೆ ಮಾತ್ರ ತನ್ನ ಬಳಿ ಬರಲು ಆಹ್ವಾನಿಸುತ್ತಾನೆ. ನೀವು ನಿಮ್ಮ ನಿರುತ್ಸಾಹ, ಖಿನ್ನತೆಯುಳ್ಳ ಜೀವಿತದಿಂದ ಮತ್ತು ನಿಮ್ಮ ಕುಟುಂಬ ಜೀವಿತದಲ್ಲಿನ ಸೋಲುಗಳಿಂದ ನೀವು ಅಸ್ವಸ್ಥ ಮತ್ತು ಸುಸ್ತಾಗಿದ್ದೀರಾ? ನೀವು ತಾಜಾತನದ ಕೊರತೆಯಿಂದ ಮತ್ತು ನಿಮ್ಮ ಸೇವೆಯಲ್ಲಿ ಅಭಿಷೇಕದ ಕೊರತೆಯಿಂದ ಸೋತು ಹೋಗಿದ್ದೀರಾ? ಆಗ ಕರ್ತನು ನಿಮ್ಮನ್ನು ಆಹ್ವಾನಿಸಿ ಹೀಗೆ ಹೇಳುತ್ತಾರೆ, ”ನನ್ನ ಬಳಿ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು” ಎಂಬುದಾಗಿ. ನಾವು ಯಾವಾಗಲೂ ವ್ಯಾಕುಲ ಮತ್ತು ನಿರಾಶೆಯಿಂದ ಇರುವುದು ದೇವರ ಚಿತ್ತವಲ್ಲ. ನಾವು ದಿನದ 24 ಗಂಟೆಯು, ವಾರದ 7 ದಿನವೂ, ವರ್ಷದ 52 ವಾರಗಳು, ನಮ್ಮ ಸುತ್ತಮುತ್ತ ಏನೇ ಆದರೂ ನಾವು ವಿಶ್ರಾಂತಿಯಲ್ಲಿ ಇರಬೇಕು ಎಂದು ದೇವರು ಬಯಸುತ್ತಾನೆ. ಆದರೆ ನಾವು ನಮ್ಮ ಸೋಲಲ್ಪಟ್ಟ ಸ್ಥಿತಿಯನ್ನು ಮೊದಲು ಅರಿಕೆ ಮಾಡಿದಾಗ ಮಾತ್ರ ಇಂಥಹ ಜೀವಿತವನ್ನು ಜೀವಿಸಲು ಸಾಧ್ಯವಾಗುತ್ತದೆ ಮತ್ತು ಕರ್ತನ ಬಳಿ ಬಂದು ಹೀಗೆ ಹೇಳಬೇಕು, ”ಕರ್ತನೇ, ಏನಾದರೂ ಆಗಲಿ ಈ ಸಬ್ಬತ್ ವಿಶ್ರಾಂತಿಯನ್ನು ನನಗೆ ಕೊಡು”ಎಂಬುದಾಗಿ.

ಮತ್ತಾಯ 11:29 ರಲ್ಲಿ, ಯೇಸು ಹೀಗೆ ಹೇಳಿದ್ದಾರೆ, ”ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ; ಯಾಕೆಂದರೆ ನಾನು ಸಾತ್ವಿಕನೂ ದೀನಮನಸ್ಸುಳ್ಳವನು ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳಿರಿ” (ಕೆ.ಜೆ.ವಿ.ಭಾಷಾಂತರ). ಒಬ್ಬ ಶಿಷ್ಯನು ಕಲಿಯುವಾತನಾಗಿದ್ದು, ಯೇಸುವಿನ ಬಳಿ ಬಂದು ಆತನಿಂದ ಕಲಿತುಕೊಳ್ಳುತ್ತಾನೆ, ಕಲಿಯಬಲ್ಲ ಮಗುವಿನ ರೀತಿ. ನಾವು ಕರ್ತನಿಂದ ಮೊದಲು ಏನನ್ನು ಕಲಿಯಬೇಕು ಎಂದು ದೇವರು ಬಯಸುತ್ತಾನೆ? ಅನೇಕರು ಹೇಗೆ ಬೋಧಿಸಬೇಕು ಎಂಬುದನ್ನು ಕಲಿಯುತ್ತಾರೆ, ಅಸ್ವಸ್ಥಗೊಂಡಿರುವವರನ್ನು ಹೇಗೆ ಸ್ವಸ್ಥಪಡಿಸಬೇಕು ಮತ್ತು ಹೇಗೆ ಪ್ರವಾದಿಸಬೇಕು ಎಂಬುದನ್ನು ಕಲಿಯುತ್ತಾರೆ. ಇತರೆ,. ಆದರೆ ಕರ್ತನು ಬಯಸುವುದೇನೆಂದರೆ, ಆತನಿಂದ ಮೊದಲು ನಾವು ಸಾತ್ವಿಕತ್ವ ಮತ್ತು ದೀನತೆಯನ್ನು ಕಲಿತುಕೊಳ್ಳಬೇಕೆಂದು. ಇನ್ನೂ ಹೇಳಬೇಕೆಂದರೆ, ಈ ಎರಡು ಸಂಗತಿಗಳನ್ನೇ ನಾವು ಆತನಿಂದ ಕಲಿತುಕೊಳ್ಳಬೇಕು ಎಂದು ಕರ್ತನು ಬಯಸುತ್ತಾನೆ. ಆದರೆ ಈ ಲೋಕದಲ್ಲಿರುವ ಅನೇಕ ಕ್ರೈಸ್ತರು ಈ ಎರಡು ಸದ್ಗುಣಗಳನ್ನು ಕಲಿತುಕೊಳ್ಳಲು ಕಾತುರವುಳ್ಳವರಾಗಿರುವುದಿಲ್ಲ ಮತ್ತು ಅದಕ್ಕಾಗಿಯೇ ಅನೇಕರು ಸಬ್ಬತ್ ವಿಶ್ರಾಂತಿಯ ಅನುಭವ ಪಡೆದುಕೊಳ್ಳುವುದಿಲ್ಲ

ಅಭಿಷೇಕಿಸಲ್ಪಟ್ಟ ಮತ್ತು ಪರಿಣಾಮಕಾರಿಯಾದಂತಹ ಸೇವೆಯನ್ನು ಹೊಂದಿರುವಂತ ಒಬ್ಬ ದೈವಿಕ ಮನುಷ್ಯನನ್ನು ನೀವು ನೋಡುವಾಗ, ನೀವು ಸಹ ಆತನ ಪರಿಣಾಮಕಾರಿಯಾದಂತಹ ಮತ್ತು ಅಭಿಷೇಕಿಸಲ್ಪಟ್ಟ ಸೇವೆಯನ್ನು ಹೊಂದಲು ನೀವು ಬಯಸಬಹುದು. ಆದರೆ ಇದನ್ನು ಬೆನ್ನಟ್ಟಿ ಹೋಗುವುದು ತಪ್ಪಾದ ಸಂಗತಿಯಾಗಿದೆ. ಮೊದಲು, ನೀವು ಆತನಲ್ಲಿ ಏನನ್ನು ಉತ್ಸಾಹದಿಂದ ಅನುಕರಿಸಬೇಕೆಂದರೆ ಆತನ ದೈವಿಕ ಜೀವಿತವನ್ನು. ಕರ್ತನು ನಮ್ಮನ್ನು ಮನುಷ್ಯರನ್ನು ಹಿಡಿಯುವ ಮೀನುಗಾರರನ್ನಾಗಿ ಅಥವಾ ಆತನ ಸಭೆಯಲ್ಲಿ ಬೋಧಕರಾಗಿರಲು ಕರೆದಿರಬಹುದು. ಆದರೆ ಮೊದಲು ನಾವು ”ವಿಶ್ರಾಂತಿ”ಯಲ್ಲಿ ಜೀವಿಸಬೇಕೆಂದು ಕರ್ತನು ಬಯಸುತ್ತಾನೆ. ನಾವು ನಮ್ಮ ಸ್ವಂತ ಹೃದಯದಲ್ಲಿ ವಿಶ್ರಾಂತಿಯಲ್ಲಿ ಇಲ್ಲವಾದರೆ, ನಮಗೆ ನಾವು ಅನೇಕ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತೇವೆ ಮತ್ತು ಮತ್ತೊಬ್ಬರಿಗೂ ಸಹ ಸಮಸ್ಯೆಗಳನ್ನು ಉಂಟುಮಾಡುವವರಾಗುತ್ತೇವೆ.