ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ಅರಣ್ಯಕಾಂಡ 22-24 ರಲ್ಲಿ, ಬಿಳಾಮನ ಕಥೆಯನ್ನು ನಾವು ಓದುತ್ತೇವೆ. ಅನೇಕ ವಿಷಯಗಳ ಸಂಬಂಧ ಕಾಳಜಿವಹಿಸಿ ಈ ಅಧ್ಯಾಯಗಳಲ್ಲಿ ಬಹು ಮುಖ್ಯವಾದ ವಚನಗಳು ಉಲ್ಲೇಖಗೊಂಡಿವೆ. ಅರಸನಾದ ಬಾಲಾಕನು ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಪ್ರವಾದಿಯಾದ ಬಿಳಾಮನನ್ನು ಆಹ್ವಾನಿಸಿದಾಗ, ಬಿಳಾಮನು ದೇವರ ಚಿತ್ತವನ್ನು ಹುಡುಕಿದನು ಮತ್ತು ದೇವರು ಬಿಳಾಮನಿಗೆ ಹೋಗಬಾರದೆಂದು ಸ್ಪಷ್ಟವಾಗಿ ಹೇಳಿದರು. ಆದರೆ ನಂತರ ಅರಸನಾದ ಬಾಲಾಕನು, ಬಿಳಾಮನು ಬಂದರೆ, ಹೆಚ್ಚು ಸನ್ಮಾನ ಮತ್ತು ಹೆಚ್ಚು ಹಣ ಕೊಡುವುದಾಗಿ ತಿಳಿಸುತ್ತಾನೆ. ನಂತರ ಬಿಳಾಮನು, ಮತ್ತೊಮ್ಮೆ ದೇವರ ಚಿತ್ತವನ್ನು ಹುಡುಕಬೇಕು ಎಂಬುದಾಗಿ ಹೇಳುತ್ತಾನೆ. ಆರಂಭದಿಂದ ಅಂತ್ಯದವರೆಗೂ ಅರಿವಿರುವ ದೇವರು ಆಗಲೇ ಹೋಗಬಾರದೆಂದು ಬಿಳಾಮನಿಗೆ ಹೇಳಿದ್ದರು ಸಹ, ಬಿಳಾಮನು ಎರಡನೇ ಬಾರಿ ದೇವರ ಚಿತ್ತವನ್ನು ಹುಡುಕುವುದರ ಅಗತ್ಯತೆ ಏನಿತ್ತು. ಆದರೆ, ಬಿಳಾಮನು ಹಣ ಮತ್ತು ಸನ್ಮಾನವನ್ನು ಪಡೆಯಲು ಕಾತುರವುಳ್ಳವನಾಗಿದ್ದನು. ಸತ್ಯವೇದ ಹೇಳುವುದೇನೆಂದರೆ, ”ಈ ಬಿಳಾಮನು ಅಧರ್ಮದಿಂದ ದೊರಕುವ ದ್ರವ್ಯವನ್ನು ಪ್ರೀತಿಸಿದನು” ಎಂಬುದಾಗಿ (2 ಪೇತ್ರ 2:15).

ದೇವರು ನಮಗೆ ಸ್ವತಂತ್ರ ಆಯ್ಕೆಯನ್ನು ಕೊಟ್ಟಿದ್ದಾರೆ ಮತ್ತು ದೇವರು ಎಂದಿಗೂ ನಮ್ಮ ಸ್ವಂತ ಚಿತ್ತವನ್ನು ತಳ್ಳಿ ಹಾಕುವುದಿಲ್ಲ

ಈ ರೀತಿಯ ಸನ್ನಿವೇಶಗಳಲ್ಲಿ ನೀವೇ ಸ್ವತ: ಕಂಡುಕೊಳ್ಳಬಹುದಾದ್ದೇನೆಂದರೆ, ನೀವು ಎಲ್ಲಿಗೋ ಹೋಗುವ ಸಂಬಂಧ ದೇವರನ್ನು ಹುಡುಕುತ್ತೀರಿ ಮತ್ತು ನೀವು ಅಲ್ಲಿಗೆ ಹೋಗಬಾರದು ಎಂದು ದೇವರು ನಿಮ್ಮ ಆತ್ಮದಲ್ಲಿ ತುಂಬಾ ಸ್ಪಷ್ಟವಾದ ಗ್ರಹಿಕೆಯನ್ನು ಕೊಡುತ್ತಾರೆ. ನಂತರ ತುಂಬಾ ಆಕರ್ಷಿತವಾಗಿ ಕಾಣುವಂತ ವೇತನವನ್ನು ನೀವು ಕಂಡುಕೊಳ್ಳುತ್ತೀರಿ ಮತ್ತು ”ದೇವರ ಚಿತ್ತವನ್ನು ಮತ್ತೊಮ್ಮೆ ಹುಡುಕುವಂತೆ” ಶೋಧಿಸಲ್ಪಡುತ್ತೀರಿ!! ಭವಿಷ್ಯದಲ್ಲಿ ಇಂತಹ ಶೋಧನೆಗಳನ್ನು ನೀವು ಯಾವಾಗಲಾದರೂ ಎದುರಿಸುವಾಗ, ಬಿಳಾಮನನ್ನು ನೆನಪಿಟ್ಟುಕೊಳ್ಳಿ. ದೇವರು ಬಿಳಾಮನ ಮನಸ್ಸನ್ನು ಬದಲಿಸಲಿಲ್ಲ, ಏಕೆಂದರೆ, ಆತನಿಗೆ ವೇತನವು ತುಂಬಾ ಆಕರ್ಷಿತವಾಗಿತ್ತು ಅಥವಾ ಸನ್ಮಾನ ದೊಡ್ಡದಾಗಿ ಕಂಡಿತು. ಆದರೆ ದೇವರು, ಈ ರೀತಿಯ ಮನುಷ್ಯನು ಇಂತಹ ಹಾದಿಯಲ್ಲಿ ಹೋಗುವುದನ್ನು ನೋಡುವಾಗ, ಆತನನ್ನು ನಿಲ್ಲಿಸುವುದಿಲ್ಲ. ದೇವರು ಆತನನ್ನು ಹೋಗಲು ಬಿಡುತ್ತಾರೆ. ಅದಕ್ಕಾಗಿಯೇ ಬಿಳಾಮನು ಎರಡನೇ ಬಾರಿ ದೇವರಿಗೆ ಕೇಳಿದಾಗ, ದೇವರು ಹೋಗುವಂತೆ ಹೇಳಿದರು. ಅದು ದೇವರ ಪರಿಪೂರ್ಣ ಚಿತ್ತವಾಗಿರಲಿಲ್ಲ. ದೇವರು ಬಿಳಾಮನ ಸ್ವತಂತ್ರ ಚಿತ್ತವನ್ನು ತಳ್ಳಿ ಹಾಕಲಿಲ್ಲ ಮತ್ತು ಆತನನ್ನು ರೋಬೋಟ್ ನಂತೆ ಮಾಡಲಿಲ್ಲ. ಬಿಳಾಮನು ನಿಜವಾಗಿಯೂ ಹೋಗಬೇಕೆಂದು ಬಯಸಿದನಾ ಎಂಬುದಾಗಿ ದೇವರು ನೋಡಿದರು. ಹಾಗಾಗಿ ದೇವರು ”ಹೋಗು” ಎಂದು ಹೇಳಿದರು . ಇದು ಯಾವ ರೀತಿ ಎಂದರೆ, ದುಂದುಗಾರ ಮಗನನ್ನು ಆತನ ತಂದೆಯು ದೂರದ ದೇಶಕ್ಕೆ ಹೋಗಲು ಅನುಮತಿಸಿದ ಹಾಗೇ. ದೇವರು ನಮಗೆ ಸ್ವತಂತ್ರ ಆಯ್ಕೆಯನ್ನು ಕೊಟ್ಟಿದ್ದಾರೆ ಮತ್ತು ದೇವರು ಎಂದಿಗೂ ನಮ್ಮ ಸ್ವಂತ ಚಿತ್ತವನ್ನು ತಳ್ಳಿ ಹಾಕುವುದಿಲ್ಲ. ಆದರೆ ದೇವರು ಬಿಳಾಮನನ್ನು ತಡೆಯಲು ತನ್ನ ದೂತನನ್ನು ಕಳುಹಿಸಿದರು . ಬಿಳಾಮನು ತಾನಾಗಿಯೇ ದೂತನನ್ನು ನೋಡಲಿಲ್ಲ, ಆದರೆ ಆತನ ಕತ್ತೆ ನೋಡಿತು. ಇದರಿಂದ ನಾವು ಏನು ಪಾಠವನ್ನು ಕಲಿಯಬಹುದು? ಇದು ಮಾತ್ರ : ''ಒಬ್ಬ ಮನುಷ್ಯನು ಹಣದ ಮೇಲಿನ ಪ್ರೀತಿಯಿಂದ ಕುರುಡಾದಾಗ, ಕತ್ತೆ ಸಹ ಆತ್ಮೀಕ ನಿಜಸ್ಥಿತಿಗಳನ್ನು ಹೆಚ್ಚು ಸ್ಪಷ್ಟವಾಗಿ ಆತನಿಗಿಂತ ಮುಂದಾಗಿ ನೋಡಲು ಸಾಮಾರ್ಥ್ಯವುಳ್ಳದ್ದಾಗಿರುತ್ತದೆ! ಏಕೆಂದರೆ, ಈ ಕತ್ತೆಯು ಹಣವನ್ನು ಪ್ರೀತಿ ಮಾಡಲಿಲ್ಲ, ಹಾಗಾಗಿ ದೂತನನ್ನು ಸ್ಪಷ್ಟವಾಗಿ ನೋಡಿತು! ಬಿಳಾಮನು ನೋಡಲಾಗಲಿಲ್ಲ, ಏಕೆಂದರೆ ಆತನು ಹಣವನ್ನು ಪ್ರೀತಿಸಿದನು. ಬಿಳಾಮನು, ದೇವರ ಆತ್ಮವು ತನ್ನ ಮೇಲೆ ಬರುವುದರ ಅನುಭವ ಪಡೆದುಕೊಂಡನು; ಮತ್ತು ಕ್ರಿಸ್ತನ ಬರೋಣದ ಬಗ್ಗೆ ಪ್ರವಾದಿಸಿದನು (ಅರಣ್ಯಕಾಂಡ 24:2, 17). ಆದರೆ, ಆತನು ಹಣದ ಮೇಲೆ ಇಟ್ಟಿದ್ದ ಪ್ರೀತಿಯಿಂದ ಎಲ್ಲವನ್ನು ಕಳೆದುಕೊಂಡನು.

ಆ ಕತ್ತೆಯು ತನ್ನ ಯಜಮಾನನಿಗೆ ಮಾತನಾಡಲು ಪ್ರಾರಂಭಿಸಿತು. ಇದು, ಸತ್ಯವೇದದಲ್ಲಿ ”ವಾಣಿಗಳನ್ನು ಆಡುವುದರ” ಮೊದಲ ಸಂದರ್ಭವಾಗಿತ್ತು - ಕತ್ತೆಯು ಹೊರದೇಶದ ಅನ್ಯ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಿತ್ತು - ಈ ಭಾಷೆಯನ್ನು ಹಿಂದೆ ಎಂದಿಗೂ ಅದು ಕಲಿತಿರಲಿಲ್ಲ! ಇದು ಪ್ರಕೃತ್ಯತೀತವಾಗಿ ಬಂದಿದ್ದಂತದ್ದಾಗಿತ್ತು. ಇದು ದೇವರಿಂದ ಬಂದಿದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಸತ್ಯವೇದದಲ್ಲಿ ತಿಳಿಸಿದ ಈ ಮೊದಲ ಸಂದರ್ಭವಾದ ವಾಣಿಯನ್ನಾಡುವುದರಿಂದ ಕಲಿಯೋಣ, ಅದೇನೆಂದರೆ, ವಾಣಿಯನ್ನು ಆಡುವುದು ಯಾರನ್ನು ಆತ್ಮೀಕರನ್ನಾಗಿ ಮಾಡುವುದಿಲ್ಲ - ಆ ಕತ್ತೆಯು ಎಷ್ಟೇ ವಾಣಿಯನ್ನಾಡಿದರೂ, ಅದು ದಡ್ಡ ಕತ್ತೆಯಾಗಿಯೇ ಉಳಿಯುತ್ತದೆ ಮತ್ತು ಕತ್ತೆಯು ವಾಣಿಯನ್ನು ಆಡುವ ಮೂಲಕ ಪ್ರಕೃತ್ಯತೀತ ದೇವರ ಬಲವನ್ನು ಅನುಭವಿಸಿದರೂ ಸಹ, ಅದು ದಡ್ಡ ಕತ್ತೆಯಾಗಿಯೇ ಇರುತ್ತದೆ. ಯಾವಗಲೂ ಇದನ್ನು ನೆನಪಿಡಿ.

ನಂತರ ಬಿಳಾಮನು ಮೋವಾಬ್ ನಗರದ ಜನರಿಗೆ ಬುದ್ಧಿವಂತಿಕೆಯ ತಂತ್ರವನ್ನು ಸಲಹೆಯಾಗಿ ಕೊಟ್ಟನು. ಆತನು ಅವರಿಗೆ ಹೇಳಿದ್ದೇನೆಂದರೆ, ಇಸ್ರಾಯೇಲ್ಯರನ್ನು ನಾಶಗೊಳಿಸಲು ಉತ್ತಮ ಮಾರ್ಗವಿದೆ, ಅದು ಯಾವುದೆಂದರೆ, ಇಸ್ರಾಯೇಲ್ಯರ ದೇವರೇ ಇಸ್ರಾಯೇಲ್ಯರ ವಿರುದ್ಧ ತಿರುಗಿ ಬಿಳುವಂತೆ ಮಾಡುವುದು ಮತ್ತು ದೇವರು ತನ್ನ ಜನಗಳ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಇರುವ ಒಂದು ಮಾರ್ಗವೆಂದರೆ, ಇಸ್ರಾಯೇಲ್ಯರನ್ನು ಜಾರತ್ವಕ್ಕೆ ನಡೆಸುವುದು. ಹಾಗಾಗಿ ಆತನು ಅವರ ಸುಂದರ ಸ್ತ್ರೀಯರನ್ನು ಇಸ್ರಾಯೆಲ್ಯರ ಗುಡಾರಕ್ಕೆ ಕಳುಹಿಸಿ , ಇಸ್ರಾಯೇಲ್ ನ ಗಂಡಸರನ್ನು ತಪ್ಪಾದ ಮಾರ್ಗಕ್ಕೆ ಪ್ರೇರೇಪಿಸುವಂತೆ ಹೇಳಿದನು. ಆಗ ಇಸ್ರಾಯೇಲ್ಯರು ಕೇವಲ ಜಾರತ್ವದೊಳಗೆ ಮಾತ್ರ ಬೀಳಲಿಲ್ಲ, ಆದರೆ ಮೋವಾಬ್ ಸ್ತ್ರೀಯರು ಇಸ್ರಾಯೇಲ್ಯರ ಗುಡಾರದೊಳಗೆ ತಂದಿದ್ದ ದೇವತೆಗಳಿಗೆ ಇಸ್ರಾಯೇಲ್ಯರು ಅಡ್ಡಬೀಳುವವರಾದರು (ಅರಣ್ಯಕಾಂಡ 25:1 ರ ಜೊತೆಗೆ ಪ್ರಕಟನೆ 2:14 ನ್ನು ನೋಡಿ). ಮತ್ತು ನಿಶ್ಚಯವಾಗಿ ದೇವರು ಇಸ್ರಾಯೇಲ್ಯರನ್ನು ಸಾಕಾಗುವಷ್ಟು ಕಠೋರವಾಗಿ ಶಿಕ್ಷಿಸಿದರು. 24,000 ಜನರು ವ್ಯಾಧಿಯಿಂದ ಸತ್ತರು (ಅರಣ್ಯಕಾಂಡ 25:9). ಇದೇ ಮಾರ್ಗವಾಗಿ ಇಂದು ಸಹ ಸೈತಾನನು ವಿಶ್ವಾಸಿಗಳನ್ನು ಮಲಿನ ಮಾಡಿದ್ದಾನೆ. ನಾವೆಲ್ಲರೂ ಬಿಳಾಮನಿಂದ ಸೈತಾನನ ಪಿತೂರಿಗಳನ್ನು ಕಲಿತುಕೊಳ್ಳೋಣ ಮತ್ತು ಜಾಗರೂಕರಾಗಿರೋಣ.