WFTW Body: 

ಮತ್ತೊಬ್ಬರನ್ನು ತೀರ್ಪು ಮಾಡುವುದಕ್ಕಿಂತ ಅವರನ್ನು ಹೆಚ್ಚು ಆಶೀರ್ವದಿಸಲು ಸಿದ್ದವಿರಿ : ಯೆಶಾಯ 61:1-2 ರಲ್ಲಿ ಉಲ್ಲೇಖವಾಗಿರುವ ವಚನವು ಪ್ರವಾದನೆಯ ವಚನವಾಗಿದ್ದು, ಜನರಿಗೆ ಬಿಡುಗಡೆಗೊಳಿಸುವಂತ ಸುವಾರ್ತೆಯನ್ನು ಸಾರಲು ಯೇಸು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟನು ಎಂಬುವುದರ ಬಗ್ಗೆ ಅಲ್ಲಿ ಹೇಳಲ್ಪಟ್ಟಿದೆ. ನಜರೇತಿನಲ್ಲಿನ ಸಭೆಯಲ್ಲಿ ಯೇಸು ತನ್ನ ಮೊದಲ ಪ್ರಸಂಗವನ್ನು ಸಾರಲು ಹೊರಟಂತಹ ವಿಷಯವನ್ನು ಈ ವಚನಗಳಲ್ಲಿ ಹೇಳಲ್ಪಟ್ಟಿದೆ. ಇದನ್ನು ಗುರುತಿಸಿ, ”ಕರ್ತನು ನೇಮಿಸಿರುವ ಶುಭವರ್ಷ” ಎಂಬ ಪ್ರಸಂಗವನ್ನು ಮಾತ್ರ ಯೇಸು ಸಾರಿದರು ಮತ್ತು ”ದೇವರು ಮುಯ್ಯಿ ತೀರಿಸುವ ದಿನ” ಎಂಬ ಪ್ರಸಂಗವನ್ನು ಸಾರಲಿಲ್ಲ, ಈ ದಿನ ಇನ್ನೂ ಬಂದಿಲ್ಲ (ವಚನ 2ನ್ನು ಲೂಕ 4:19 ರೊಟ್ಟಿಗೆ ಹೊಲಿಸಿ). ಇದನ್ನು ಸಹ ಗುರುತಿಸಿ, ಕರ್ತನ ಶುಭವು ಎಂಬ ವಾರ್ತೆಯು ಆತನ ನ್ಯಾಯತೀರ್ಪಿನ ಜೊತೆಯಲ್ಲಿಯೇ ಸೇರಿಕೊಂಡಿರುವುದಕ್ಕೆ ಹೊಂದಿಸಿ ನೋಡಿ. ಇದು ಹೇಗೆಂದರೆ, ಇಡೀ ವರುಷದ ಶುಭವು ಕೇವಲ ಒಂದು ದಿನದ ನ್ಯಾಯತೀರ್ಪಿಗೆ ತದ್ವಿರುದ್ದವಾಗಿರುವ ಹಾಗೆ. ಕೃಪೆಯೆಂಬ ಶುಭ ಸಮಾಚಾರವು 365 ದಿನವೂ ಇದ್ದು, ಕೇವಲ ಒಂದು ದಿನ ಮಾತ್ರ ನ್ಯಾಯತೀರ್ಪು ಬರುತ್ತದೆ. ಅದು ಕೃಪೆಯೆಂಬ ಶುಭ ಸಮಾಚಾರದಲ್ಲಿ 365:1 ರ ಅನುಪಾತವಾಗಿದೆ. ದೇವರು ನಮಗೆ ಇಲ್ಲಿ ತೋರಿಸಲು ಪ್ರಯತ್ನಿಸುತ್ತಿರುವುದೇನೆಂದರೆ, ಆತನು ನಮ್ಮನ್ನು ತೀರ್ಪು ಮಾಡುವುದಕ್ಕಿಂತ ಹೆಚ್ಚು ತನ್ನ ಶುಭ ಸಮಾಚಾರವನ್ನು ನಮಗೆ ತೋರಿಸುತ್ತಾನೆ. ಮತ್ತೊಬ್ಬರ ಬಳಿ ನಮ್ಮ ನಡವಳಿಕೆಯು ಸಹ ಹೀಗೆಯೇ ಇರಬೇಕು. ನಾವು 365 ದಿನವೂ ಇನ್ನೊಬ್ಬರನ್ನು ಆಶೀರ್ವದಿಸಲು ಸಿದ್ದವಿರಬೇಕು ಮತ್ತು ಅವರನ್ನು ತೀರ್ಪು ಮಾಡುವುದಕ್ಕಿಂತ ಅವರಿಗೆ ಕೃಪೆ ತೋರಿಸುವವರಾಗಿರಬೇಕು. ನಮ್ಮ ಜೀವಿತದಿಂದ ಎಲ್ಲಾ ಭಾರವನ್ನು ತೆಗೆದು ಹಾಕುವ ಸಲುವಾಗಿ ಮತ್ತು ಆ ಭಾರವನ್ನು ತೆಗೆದು ಹಾಕಿ, ಅದರ ಜಾಗಕ್ಕೆ ಸ್ತೋತ್ರದ ಆತ್ಮವನ್ನು ಹಾಕಲು ದೇವರು ಬಂದರು (ವಚನ 3). ವಚನ 10 ಈ ರೀತಿಯಾಗಿ ಮಾತಾನಾಡುತ್ತದೆ, ದೇವರು ನಮ್ಮನ್ನು ಕ್ರಿಸ್ತನ ನೀತಿಯೆಂಬ ವಸ್ತ್ರದಿಂದ ಹೊದಿಸುತ್ತಾನೆ ಮತ್ತು ಕ್ರಿಸ್ತನ ಮದಲಗಿತ್ತಿಯನ್ನಾಗಿ ಮಾಡುತ್ತಾನೆ. ಜೀವಿಸಲು ಇದು ಎಂತಹ ಆಶೀರ್ವದಿಸಲ್ಪಟ್ಟ ಮಾರ್ಗವಾಗಿದೆ ಅಲ್ಲವೇ.

ಆತನು ನಮ್ಮನ್ನು ಕ್ರಿಸ್ತನಲ್ಲಿ ಮೇಲಕ್ಕೆ ಎತ್ತಿದ್ದಾನೆ ಮತ್ತು ಘನತೆಯನ್ನು ಕೊಟ್ಟಿದ್ದಾನೆ. ನಾವು ಇನ್ನುಮುಂದೆ ಹಳ್ಳಕ್ಕೊಳ್ಳಗಳಲ್ಲಿ ಜೀವಿಸಬಾರದು

ನಿಮ್ಮ ಬಲವನ್ನು ದೈವಿಕ ಬಲದೊಟ್ಟಿಗೆ ಬದಲಾಯಿಸಿಕೊಳ್ಳಿ : ಯೆಶಾಯ 40:29-31 ರಲ್ಲಿನ ವಚನವು ಕಲಿಸುವುದೇನೆಂದರೆ, ನಾವು ಆರಾಧಿಸುವಂತ ಮತ್ತು ಸೇವೆ ಮಾಡುವಂತ ಸರ್ವಶಕ್ತನಾದ ದೇವರು ನಾವು ಬಲಹೀನರಾದಾಗ ನಮಗೆ ಬಲವನ್ನು ಕೊಡುತ್ತಾನೆ ಎಂಬುದಾಗಿ. ನಾವು ಅಧಿಕ ಬಲದ ಕೊರತೆಯನ್ನು ಎದುರಿಸುವಾಗ, ದೇವರು ನಮಗೆ ಬಲವನ್ನು ಕೊಡುತ್ತಾರೆ. ನಾವು ದೇವರಿಗೆ ಸೇವೆ ಮಾಡಲು ಸಹಾಯವಾಗುವಂತೆ ಆರೋಗ್ಯ ಮತ್ತು ಬಲವನ್ನು ಆತನೇ ನಮಗೆ ಕೊಡುತ್ತಾನೆ. ಯೌವನಸ್ಥರು ಚಿಂತಾಕ್ರಂತರಾಗಿ, ದಣಿದು ಬಳಲಿದವರಾಗಿರುತ್ತಾರೆ ಮತ್ತು ಗಟ್ಟಿಮುಟ್ಟಾದ ಯೌವನಸ್ಥ ಹುಡುಗನು ಸಹ ಕರ್ತನಿಗೆ ಸೇವೆ ಮಾಡುವುದಕ್ಕೆ ಪ್ರಯತ್ನಿಸುವುದರಲ್ಲಿ ಆಯಾಸ ಪಡುತ್ತಾನೆ. ಆದರೆ ಯಾರು ಕರ್ತನಲ್ಲಿ ಕಾದುಕುಳಿತಿರುತ್ತಾರೋ, ಅವರ ವಯಸ್ಸು ಏನೇ ಆಗಿದ್ದರೂ ಪರವಾಗಿಲ್ಲ, ಅವರು ಹೊಸ ಬಲವನ್ನು ಸಂಪಾದಿಸಿಕೊಳ್ಳುತ್ತಾರೆ. ಎಂಥಹ ಅದ್ಬುತ ವಾಗ್ದಾನವಿದು! ಮತ್ತು ಯೌವನಸ್ಥನು ಕುಸಿಯುವಂತ ಸಂದರ್ಭದಲ್ಲಿ, ಮುಪ್ಪಿನವರು ”ಯೆಹೋವನನ್ನು ನಿರೀಕ್ಷಿಸಿಕೊಳ್ಳುವಾಗ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು (ಏರುವರು); ಓಡಿ ದಣಿಯರು, ನಡೆದು ಬಳಲರು”. ನಾನು ಪ್ರತಿಯೊಬ್ಬರಿಗೂ ಪ್ರೋತ್ಸಾಹಿಸುವುದೇನೆಂದರೆ, ನಿಮ್ಮ ಎಲ್ಲಾ ಅಗತ್ಯತೆಗಾಗಿ ಸರಳ ಭರವಸೆಯಲ್ಲಿ ಕರ್ತನನ್ನು ನಿರೀಕ್ಷಿಸಿಕೊಂಡು, ಕಾದುಕೊಂಡಿರುವುದನ್ನು ಕಲಿತುಕೊಳ್ಳಿ. ಈ ವಾಕ್ಯ ಹೇಳುವ ಪ್ರಕಾರ, ಆಗ ನೀವು ಹೊಸ ಬಲವನ್ನು ಪಡೆದುಕೊಳ್ಳುತ್ತೀರಿ. ಅಥವಾ ಮತ್ತೊಂದು ಅನುವಾದ ಈ ರೀತಿಯಾಗಿ ಹೇಳುತ್ತದೆ : ”ಕರ್ತನಲ್ಲಿ ಯಾರು ನಿರೀಕ್ಷಿಸಿಕೊಂಡಿರುತ್ತಾರೋ, ಕಾದುಕೊಂಡಿರುತ್ತಾರೋ, ಅವರು ತಮ್ಮ ಬಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ”. ಇದರ ಅರ್ಥ ಏನೆಂದರೆ, ನಾವು ನಮ್ಮ ಮನುಷ್ಯ ಬಲವನ್ನು ಕರ್ತನಿಗೆ ಕೊಡುತ್ತೀವಿ ಮತ್ತು ಆತನು ವಿನಿಮಯದ ಮೂಲಕ ತನ್ನ ದೈವಿಕ ಬಲವನ್ನು ನಮಗೆ ಕೊಡುತ್ತಾನೆ. ಹಲ್ಲೆಲೂಯ!! ನಾವು ಹೊಂದಿರುವಂತದ್ದೆಲ್ಲವನ್ನು ಕರ್ತನೊಟ್ಟಿಗೆ ವಿನಿಮಯ ಮಾಡಿಕೊಳ್ಳುವುದು ಅದ್ಬುತವಾಗಿದೆ. ಯೇಸು ತನ್ನ ತಂದೆಗೆ ಹೀಗೆ ಹೇಳಿದರು, ”ತಂದೆಯೇ, ನನ್ನದೆಲ್ಲಾ ನಿನ್ನದೇ, ನಿನ್ನದೆಲ್ಲಾ ನನ್ನದೇ” (ಯೋಹಾನ 17:10, 11). ಕರ್ತನ ಸೇವೆಯಲ್ಲಿ ಕರ್ತನ ಬಲದ ಅಗತ್ಯತೆ ನಿಮಗಿದೆ. ಕೊನೆಯವರೆಗೂ ಆ ಬಲವನ್ನು ನೀವು ನೋಡಬೇಕು. ಯಾರೆಲ್ಲಾ ಕರ್ತನಿಗೆ ಸೇವೆ ಮಾಡುತ್ತೀರೋ, ಅವರು ಪರಲೋಕದಿಂದ ಅತಿಮಾನುಷ ಬಲವನ್ನು ಹೊಂದುವಂತೆ ಕರ್ತನಲ್ಲಿ ಭರವಸೆ ಇಡಬೇಕು. ಆತನ ಪುನರುತ್ಥಾನದ ಬಲ - ನಮ್ಮ ಆತ್ಮದಲ್ಲಿ ಮಾತ್ರವಲ್ಲ, ನಮ್ಮ ದೇಹಕ್ಕೂ ಅಗತ್ಯತೆ ಇದೆ. ಆಗ ನಮ್ಮ ಮುಪ್ಪಿನಲ್ಲಿಯೂ ಸಹ ಆತನಿಗಾಗಿ ನಾವು ಫಲವನ್ನು ಬಿಡುವವರಾಗಿರುತ್ತೀವಿ (ಕೀರ್ತನೆಗಳು 92:14).

ಕರ್ತನ ಪ್ರಭಾವವು ನಿಮ್ಮಲ್ಲಿ ಪ್ರಕಟವಾಗಲಿ : ಯೆಶಾಯ 40:3 ರಲ್ಲಿನ ವಚನವು ನಮಗೆ ೪ ಬೇಡಿಕೆಗಳನ್ನು ಇಡಲು ಇಚ್ಚಿಸುತ್ತದೆ . ಮೊದಲನೆಯದಾಗಿ, ”ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡಬೇಕು” (ವಚನ 4). ಹೊಸ ಒಡಂಬಡಿಕೆಯ ಕೆಳಗೆ ನಿರುತ್ಸಾಹ ಮತ್ತು ಖಿನ್ನತೆಗೆ ಸ್ಥಳವಿಲ್ಲ. ನಾವು ಯಾವತ್ತೂ, ”ನಾನು ಕೆಲಸಕ್ಕೆ ಬಾರದವನು, ಉಪಯೋಗಕ್ಕೆ ಬಾರದವನು” ಎಂದು ಹೇಳಬಾರದು. ದೇವರು ಪ್ರೋತ್ಸಾಹಪಡಿಸುವಂತ ದೇವರಾಗಿದ್ದಾನೆ. ಆತನು ನಮ್ಮನ್ನು ಕ್ರಿಸ್ತನಲ್ಲಿ ಮೇಲಕ್ಕೆ ಎತ್ತಿದ್ದಾನೆ ಮತ್ತು ಘನತೆಯನ್ನು ಕೊಟ್ಟಿದ್ದಾನೆ. ನಾವು ಇನ್ನುಮುಂದೆ ಹಳ್ಳಕ್ಕೊಳ್ಳಗಳಲ್ಲಿ ಜೀವಿಸಬಾರದು. ನಾವು ರಾಜನ ಮಕ್ಕಳು ಮತ್ತು ಆತನು ನಮ್ಮ ತಲೆಯನ್ನು ಎತ್ತಿದ್ದಾನೆ. ಎರಡನೆಯದಾಗಿ, ”ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡಬೇಕು” (ವಚನ 4). ಅಂದರೆ ನಮ್ಮಲ್ಲಿರುವ ಎಲ್ಲಾ ರೀತಿಯ ಗರ್ವವು ತಗ್ಗಿಸಲ್ಪಡಬೇಕು. ಮೂರನೇಯದಾಗಿ, ”ಕೊರಕಲ ನೆಲವು ಸಮವಾಗಬೇಕು” (ವಚನ 4). ನಮ್ಮ ಜೀವಿತದಲ್ಲಿ ಅನೇಕ ಒರಟುತನ, ಅಸಭ್ಯತೆ, ಕೊರಕಲುಗಳಿರುತ್ತವೆ. ಇವೆಲ್ಲಾ ಮೃದುವಾಗಬೇಕು ಮತ್ತು ಸಮವಾಗಬೇಕು ಹಾಗೂ ನಾವು ಕೃಪೆಯುಳ್ಳವರು, ಸಾತ್ವಿಕರು ಆಗಬೇಕು. ನಾಲ್ಕನೆಯದಾಗಿ, ”ಡೊಂಕಾಗಿರುವಂತದ್ದು ನೇರವಾಗಬೇಕು” (ಈ ವಚನವು ಲೂಕ 3:5 ರಲ್ಲಿ ಉಲ್ಲೇಖಿಸಲ್ಪಟ್ಟಿದೆ). ನಮ್ಮ ಜೀವಿತದಲ್ಲಿ ಡೊಂಕಾದ ಕ್ಷೇತ್ರಗಳಿರುತ್ತವೆ, ಅದು ಯಾವ ರೀತಿ ಎಂದರೆ, ಹಣದ ವಿಷಯಗಳಲ್ಲಿ ಅನೀತಿಯುಳ್ಳವರಾಗಿರುವುದಾಗಿದೆ. ಅವೆಲ್ಲವೂ ನೀಟಾಗಬೇಕು. ನಿಜವಾದ ಮಾನಸಾಂತರವು ಇದರಲ್ಲಿ ಒಳಗೊಂಡಿರುತ್ತದೆ - ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡಬೇಕು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡಬೇಕು, ಕೊರಕಲ ನೆಲವು ಸಮವಾಗಬೇಕು ಮತ್ತು ಡೊಂಕಾದ ಮಾರ್ಗವು ನೀಟಾಗಬೇಕು. ನಂತರ ಕರ್ತನ ಪ್ರಭಾವವು ನಮ್ಮ ಶರೀರದಲ್ಲಿ (ಮಾಂಸ) ಪ್ರಕಟವಾಗುತ್ತದೆ. ಆಗ ನಮ್ಮ ಶರೀರದಲ್ಲಿ (ಮಾಂಸ), ಬೇರೆಯವರು ಯೇಸು ಕ್ರಿಸ್ತನ ಪ್ರಭಾವವನ್ನು ನೋಡುತ್ತಾರೆ.