ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ಪುರುಷರಿಗೆ
WFTW Body: 

2ಕೊರಿಂಥ 5:20 ರಲ್ಲಿ ನೋಡುವ ಪ್ರಕಾರ ಪೌಲನು ಕ್ರಿಸ್ತೇಸುವಿನ ರಾಯ ಭಾರಿಯಾಗಿದ್ದನು. ಯೇಸುವಿನ ರಾಯಭಾರಿಯಾಗಿರಲು 12 ಗುರುತುಗಳನ್ನು ನಾವು ನೋಡಬಹುದು. ಈ ಗುರುತುಗಳನ್ನು ನಿಮ್ಮ ಜೀವನದಲ್ಲಿ ವಿಚಾರಿಸಿ ತಿಳಿದುಕೊಳ್ಳಿ.

  • 1. 2 ಕೊರಿಂಥ 1:1 ರಲ್ಲಿ, ಈತನು ದೇವರಿಂದ ಕರೆಯಲ್ಪಟ್ಟಿರುತ್ತಾನೆ. "ದೇವರ ಚಿತ್ತಾನುಸಾರ ಕರೆದಿರುವ ಕ್ರಿಸ್ತೇಸುವಿನ ಅಪೊಸ್ತಲನು." ಆತನು ತನ್ನನ್ನು ತಾನೇ ಕರೆಯಲಿಲ್ಲ, ಆದರೆ ದೇವರು ಕರೆದನು. ಇದು ಅತೀ ಮಹತ್ವವುಳ್ಳದ್ದು. ದೇವರು ಕರೆಯದಿದ್ದರೆ ಸೇವೆಗೆ ಹೋಗಬೇಡಿರಿ.
  • 2. ಆತನು ಬಹಳ ಯಥಾರ್ಥನಾಗಿದ್ದನು (12ನೇಯ ವಚನದಲ್ಲಿ). ಅತೀ ಮುಖ್ಯವಾದ ಒಂದು ಅಂಶ ದೇವರು ನಿಮ್ಮಿಂದ ಅಪೇಕ್ಷಿಸುವದೇನೆಂದರೆ ಯಥಾರ್ಥತೆ. ನಿಮ್ಮಲ್ಲಿ ಬಲಹೀನತೆಗಳು ಇರಬಹುದು ಆದರೆ ಪ್ರಾಮಾಣಿಕ ಮತ್ತು ಯಥಾರ್ಥನಾಗಿದ್ದರೆ ನೀವು ದೇವರ ನಿಜವಾದ ಸೇವಕನಾಗಬಲ್ಲಿರಿ.
  • 3. (22ನೇಯ ವಚನದಲ್ಲಿ) ಆತನು ಪವಿತ್ರಾತ್ಮನಿಂದ ಅಭಿಷೇಕಿಸಿದ್ದನು. ನಿಮಗೆ ಯಾವುದೇ ಅರ್ಹತೆ ಇದ್ದರೂ, ಪವಿತ್ರಾತ್ಮನಿಂದ ಅಭಿಷೇಕ ಹೊಂದದಿದ್ದರೆ ಸೇವೆಗೆ ಹೋಗ ಬೇಡಿರಿ. ಇದರ ಬದಲು ಬೇರೆ ಎನಾದರೂ ಮಾಡಿ.
  • 4. 2ಕೊರಿಂಥ 2:4 ರಲ್ಲಿ ಆತನು ಸೇವೆ ಮಾಡುವವರನ್ನು ಪ್ರೀತಿಸಿದನು. "ನಿಮ್ಮ ಮೇಲೆ ನನಗಿರುವ ಹೆಚ್ಚಾದ ಪ್ರೀತಿಯನ್ನು ನೀವು ತಿಳುಕೊಳ್ಳಬೇಕಂತಲೇ ನಾನು ಬಹಳ ಕಣ್ಣೀರು ಬಿಡುತ್ತಾ ಹೃದಯದ ಬಹುಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನು."
  • 5. 2ಕೊರಿಂಥ 3:5 ರಲ್ಲಿ ಆತನು ಸಂಪೂರ್ಣವಾಗಿ ದೇವರ ಮೇಲೆ ಭಾರಹಾಕಿದ್ದನು. "ನಿಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದಿರುವದು." ಆತನು ಯಾವುದೇ ಮನುಷ್ಯನ ಬಲದ ಮೇಲೆ ಆತುಕೊಳ್ಳಲಿಲ್ಲ. ಜನರು ಕೊಟ್ಟಿದ್ದನ್ನು ಉಪಯೋಗಿಸಿದನು, ಆದರೆ ಅದರ ಮೇಲೆ ಆತುಕೊಳ್ಳಲಿಲ್ಲ. ಆತನು ಪರಿಪೂರ್ಣವಾಗಿ ದೇವರ ಮೇಲೆ ಆತುಕೊಂಡಿದ್ದನು.
  • 6. 2ಕೊರಿಂಥ 4:1 ರಲ್ಲಿ ಆತನು ಎಂದಿಗೂ ಸೋತವನಾಗಿ ಬೇಸರಪಡಲಿಲ್ಲ. "ಆದದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ." ಸೇವೆಯ ಮಧ್ಯ ಅನೇಕಸಾರಿ ಬಿಟ್ಟುಬಿಡಲು ಶೋಧನೆಗೊಳಗಾಗ ಬಹುದು ಆದರೆ ಪೌಲನು ಸೋತು ಹೋಗಲಿಲ್ಲ.
  • 7. 2 ಕೊರಿಂಥ 6:3,4 ರಲ್ಲಿ ಆತನು ಇನ್ನೊಬ್ಬರಿಗೆ ಮಾದರಿಯಾಗಿದ್ದನು. "ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿ ಕೊಳ್ಳುತ್ತೇವೆ." ಪೌಲನು ತನ್ನ ಜೀವನ ಮತ್ತು ಇನ್ನೊಬ್ಬರ ಜೊತೆಯಲ್ಲಿಯ ನಡುವಳಿಕೆಯಿಂದ ಎಲ್ಲರಿಗೂ ಮಾದರಿಯಾಗಿದ್ದನು.
  • 8. 2 ಕೊರಿಂಥ 7:2 ರಲ್ಲಿ ಆತನು ಇನ್ನೊಬ್ಬರಿಂದ ಯಾವತ್ತೂ ಲಾಭ ಪಡೆಯಲಿಲ್ಲ. ಆತನು ಇನ್ನೊಬ್ಬರನ್ನು ತನ್ನ ಕೆಲಸಕ್ಕಾಗಿ ಕಳುಹಿಸುವುದಾಗಲಿ ಅಥವಾ ಸೇವೆ ಮಾಡಲಿಕ್ಕೆ ಹೇಳುತ್ತಾಯಿರಲಿಲ್ಲ. ಆತನು ಇನ್ನೊಬ್ಬರು ತೋರಿಸುವ ಅತಿಥಿ ಉಪಾಚಾರವನ್ನು ತನ್ನ ಸ್ವಂತ ಲಾಭಕ್ಕೆ ಉಪಯೋಗಿಸಲಿಲ್ಲ.
  • 9. 2 ಕೊರಿಂಥ(8:20,21; 11:19) ದಲ್ಲಿ ಆತನು ಹಣವನ್ನು ತುಂಬಾ ಚಾಗರೂಕತೆಯಿಂದ ಉಪಯೋಗಿಸಿದನು. ಇನ್ನೊಬ್ಬರ ಮೇಲೆ ಹಣಕ್ಕೊಸ್ಕರ ಭಾರವಾಗಿರಲಿಲ್ಲ. ಹಣದ ಬಗ್ಗೆ ಬಹಳ ಕಾಳಜಿವಹಿಸಿದ್ದನು. ಜನರು ಆತನ ಸೇವೆಯನ್ನು ಸ್ವೀಕರಿಸದಿದ್ದಾಗ ಅಂಥವರಿಂದ ಹಣವನ್ನು ಪಡೆಯುತ್ತಿರಲಿಲ್ಲ.
  • 10. 2 ಕೊರಿಂಥ 10:13 ರಲ್ಲಿ ಹೇಳುವ ಪ್ರಕಾರ ಅವನು ದೇವರು ನೇಮಿಸಿದ್ದ ಮಿತಿಯಲ್ಲಿ(ಗಡಿ) ಇದ್ದ.
  • 11. 2 ಕೊರಿಂಥ 11:23-33 ರಲ್ಲಿ ಹೇಳುವ ಪ್ರಕಾರ ಆತನು ದೈಹಿಕವಾದ ತೊಂದರೆ(ನೋವು)ಗಳನ್ನು ಅನುಭವಿಸಲು ಸಿದ್ಧವಾಗಿದ್ದ. 2ಕೊರಿಂಥ 12:9,10 ರಲ್ಲಿ ಪೌಲನಿಗೆ ಒಂದು ತೊಂದರೆ(ಪೀಡೆ) ಕಾಡುತ್ತಿರುವಾಗ ದೇವರು ಅದನ್ನು ಆತನಿಗೆ ಬರಲು ಒಪ್ಪಿದ್ದರಿಂದ ಪೌಲನು ಅದನ್ನು ಸ್ವೀಕರಿಸಿದನು.
  • 12. 2 ಕೊರಿಂಥ 13:9 ರಲ್ಲಿ ಆತನು ಕ್ರಿಸ್ತ ವಿಶ್ವಾಸಿಗಳನ್ನು ಪರಿಪೂರ್ಣತೆಗೆ ನಡಿಸಲು ತವಕ ಪಡುತ್ತಿದ್ದನು. "ನಾವು ಬಲಹೀನರಾಗಿದ್ದರೂ ನೀವು ಬಲಿಷ್ಟರಾಗಿದ್ದ ಪಕ್ಷಕ್ಕೆ ಸಂತೋಷವಾಗಿದ್ದೆವೆ. ಇದಲ್ಲದೆ ನೀವು ಪೂರ್ಣಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ."
  • ಇವನು ಅಪೂಸ್ತಲನಾದ ಪೌಲನಾಗಿದ್ದನು. ನಾವೂ ಕೂಡ ಆತನ ಹೆಜ್ಜೆ ಗುರುತಿನಲ್ಲಿ ಸಾಗೋಣ ಮತ್ತು ದೇವರಿಗೆ ಅದೇ ರೀತಿಯಲ್ಲಿ ಸೇವೆ ಸಲ್ಲಿಸೋಣ.