ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಜನರು ಹೇಗೆ ಯಾವಾಗಲೂ ಕಾರ್ಯನಿರತರಾಗಿರಬಹುದು ಎಂಬುದರ ಬಗ್ಗೆ ನಾನು ಇತ್ತೀಚೆಗೆ ಓದಿದ್ದು ಇಲ್ಲಿದೆ.

"ಸೈತಾನನು ಜಾಗತಿಕ ಸಮ್ಮೇಳನವೊಂದನ್ನು ಏರ್ಪಡಿಸಿದನು. ತನ್ನ ಪ್ರಸ್ತಾವನಾ ಭಾಷಣದಲ್ಲಿ ತನ್ನ ದೆವ್ವಗಳಿಗೆ ಅವನು ಹೇಳಿದ್ದೇನೆಂದರೆ, "ಕ್ರೈಸ್ತರು ಸಭೆಗೆ ಹೋಗುವುದನ್ನು ನಾವು ತಡೆಯಲಾಗುವುದಿಲ್ಲ. ಅವರು ಸತ್ಯವೇದ ಓದುವುದನ್ನು ಸಹ ನಾವು ತಡೆಯಲಾಗುವುದಿಲ್ಲ. ಆದರೆ ನಾವು ಇನ್ನೊಂದನ್ನು ಮಾಡಬಹುದು. ಅದೇನೆಂದರೆ, ಅವರು ಕ್ರಿಸ್ತನೊಟ್ಟಿಗೆ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಳ್ಳುವುದನ್ನು ನಾವು ತಡೆಯಬಹುದು. ಒಂದು ವೇಳೆ ಕ್ರೈಸ್ತರು ಯೇಸುವಿನೊಡನೆ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡರೆ. ಅವರ ಮೇಲಿನ ನಮ್ಮ ಶಕ್ತಿಯು ಮುರಿಯಲ್ಪಡುತ್ತದೆ. ಹಾಗಾಗಿ ಅವರು ಬೇಕಾದರೆ ಸಭೆಗೆ ಹೋಗಲಿ. ಅವರು ತಮ್ಮ ಮೂಲಭೂತ ಸಿದ್ಧಾಂತಗಳನ್ನು ಇಟ್ಟುಕೊಳ್ಳಲಿ. ಅವರು ತಮ್ಮ ಸಂಪ್ರದಾಯಿಕ ಜೀವನ ಶೈಲಿಯನ್ನು ಇಟ್ಟುಕೊಳ್ಳಲಿ. ಆದರೆ ಅವರ ಸಮಯವನ್ನು ಕಸಿದುಕೊಳ್ಳಿರಿ. ಇದರಿಂದ ಅವರು ಯೇಸುಕ್ರಿಸ್ತನಲ್ಲಿ ವೈಯುಕ್ತಿಕ ಅನುಭವವನ್ನು ಬೆಳೆಸಿಕೊಳ್ಳಲಾಗುವುದಿಲ್ಲ. ದೆವ್ವಗಳೇ ಇದನ್ನೇ ನೀವು ಮಾಡಬೇಕೆಂದು ನಾನು ಬಯಸುತ್ತೇನೆ. ಅವರು ತಮ್ಮ ರಕ್ಷಕನೊಡನೆ ಒಂದಾಗಿದೆ ಬೇರೆಕಡೆ ತಮ್ಮ ಗಮನವನ್ನು ಹರಿಸುವಂತೆ ಮಾಡಿ" .

ಆಗ ದೆವ್ವಗಳು ಕೇಳಿದ್ದೇನೆಂದರೆ, ’ಇದನ್ನು ನಾವು ಮಾಡುವುದು ಹೇಗೆ?’".

ಆಗ ಸೈತಾನನು ಹೀಗೆ ಹೇಳಿದನು. "ಅವರನ್ನು ಜೀವನದಲ್ಲಿನ ಅನಗತ್ಯವಾದವುಗಳಲ್ಲಿ ಮಗ್ನವಾಗಿರಿಸಿ. ಅವರ ಮನಸ್ಸನ್ನು ಆಕ್ರಮಿಸಲು ಅನೇಕ ಕುತಂತ್ರಗಳನ್ನು ಸಂಶೋಧಿಸಿ. ಅವರು ಹೆಚ್ಚಾಗಿ ಹಣವನ್ನು ಖರ್ಚುಮಾಡುವಂತೆ ಮತ್ತು ಮತ್ತು ಹೆಚ್ಚಾಗಿ ಸಾಲ ಮಾಡುವಂತೆ ಅವರನ್ನು ಶೋಧಿಸಿ. ಹೆಂಡತಿಯರು ಕೆಲಸಕ್ಕೆ ಹೋಗುವಂತೆ ಮತ್ತು ಗಂಡಂದಿರು ವಾರದ ಆರು ಅಥವಾ ಏಳು ದಿನ, (ದಿನಕ್ಕೆ) ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಅವರಿಗೆ ಮನದಟ್ಟು ಮಾಡಿ. ಇದರಿಂದಾಗಿ ಅವರು ಉನ್ನತ ಮಟ್ಟದ ಜೀವನ ಶೈಲಿಯನ್ನು (ಶ್ರೀಮಂತಿಕೆಯ ಜೀವನ) ಅನುಸರಿಸಲಿ. ಅವರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ತಪ್ಪಿಸಿ. ಹೀಗೆ ಅವರ ಕುಟುಂಬಗಳು ನುಚ್ಚುನೂರಾಗುವಾಗ, ಅವರಿಗೆ ಮನೆಗಳು ಕೆಲಸದ ಒತ್ತಡದಿಂದ ಪಾರಾಗುವ ಸಾಧನಗಳಾಗಲಾರವು.

ಯೇಸುವು ಅವರೊಂದಿಗೆ ಮಾತನಾಡುವುದನ್ನು ಅವರು ಕೇಳಿಸಿಕೊಳ್ಳದಂತೆ ಅವರ ಮನಸ್ಸನ್ನು ಹುರಿದುಂಬಿಸಿರಿ. ಅವರು ವಾಹನ ಚಲಾಯಿಸುವಾಗ ರೇಡಿಯೋ ಅಥವಾ ಸಂಗೀತವನ್ನು ಕೇಳುವಂತೆ ಅವರನ್ನು ಶೋಧಿಸಿರಿ ಮತ್ತು ಅವರ ಮನೆಗಳಲ್ಲಿ ಅವರು ಸತತವಾಗಿ ವಿಡಿಯೋ ಟೇಪ್‌ಗಳನ್ನು ಅಥವ ಸಿ.ಡಿಗಳನ್ನು ನೋಡುವಂತೆ ಅವರನ್ನು ಪುಸಲಾಯಿಸಿ ಮತ್ತು ಜಗತ್ತಿನಲ್ಲಿನ ಪ್ರತಿಯೊಂದು ಅಂಗಡಿಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯಾವಾಗಲೂ ಸಂಗೀತ ಆಡುತ್ತಿರುವಂತೆ ನೋಡಿಕೊಳ್ಳಿ.

ಅವರು ಕಾಫಿ ಕುಡಿಯುವ ಮೇಜುಗಳನ್ನು ಲೌಕಿಕ ಪುಸ್ತಕಗಳಿಂದ ಮತ್ತು ವಾರ್ತಾಪತ್ರಿಕೆಗಳಿಂದ ತುಂಬಿರಿ. ದಿನದ 24 ಗಂಟೆಗಲೂ ಅವರು ಮನಸ್ಸುಗಳನ್ನು ವಾರ್ತೆಗಳಿಂದ ತುಂಬಿರಿ. ವಾಹನ ಚಾಲನೆ ಮಾಡುವಾಗ ಅವರು ಜಾಹೀರಾತಿನ ಫಲಕಗಳನ್ನು ನೋಡುವುದಕ್ಕಾಗಿ ಅವುಗಳ ಕಡೆ ತಮ್ಮ ಗಮನ ಹರಿಸುವಂತೆ ಮಾಡಿ. ಅವರ ಇ-ಮೇಲ್ ಗಳಲ್ಲಿ ಉಪಯೋಗಕ್ಕೆ ಬಾರದಂತವುಗಳನ್ನು ತುಂಬಿಸಿ ಅವರಿಗೆ ಪ್ರಯೋಜನಕ್ಕೆಬಾರದ ಸಂದೇಶಗಳು ಅವರ ಮೊಬೈಲ್‌ಗೆ ಹಾಗೂ ಇ-ಮೇಲ್ ಗೆ ಬರುವಂತೆ ನೋಡಿಕೊಳ್ಳಿರಿ. ಅವರಿಗೆ ಬರುವ ಸಂದೇಶಗಳು ಹಾಗೂ ಇ-ಮೇಲ್‌ಗಳು - ಉಚಿತವಾಗಿ ಯಾವುದಾದರೂ ವಸ್ತು ಕೊಡುತ್ತೇವೆಂಬ ಸಂದೇಶಗಳಿಂದ ಮತ್ತು ಸುಳ್ಳು ನಿರೀಕ್ಷೆಗಳಿಂದ ತುಂಬಲಿ.

ಅವರು ಮನರಂಜನೆಯನ್ನು ವಿಪರೀತವಾಗಿ ಹಚ್ಚಿಕೊಳ್ಳುವಂತೆ ಮಾಡಿರಿ. ಅವರು ತಮ್ಮ ಕುಟುಂಬದೊಂದಿಗೆ ರಜೆಯನ್ನು ಕಳೆದು ಬಂದ ನಂತರ, ಅವರು ಬಳಲಿ ಮುಂದಿನ ವಾರಕ್ಕೆ (ವಾರದ ಕೆಲಸಕ್ಕೆ...) ಸಿದ್ಧರಾಗಿರದಂತೆ ಮಾಡಿ. ಅವರು ಪ್ರಕೃತಿಯಲ್ಲಿ ನಡೆಯದಂತೆ (ವಾಕ್ ಮಾಡದಂತೆ) ಅವರನ್ನು ತಡೆಯಿರಿ. ಇದರ ಬದಲಾಗಿ, ಅವರು ಮನೋರಂಜನ ಪಾರ್ಕ್‌ಗಳಿಗೆ, ಸಂಗೀತ ಕಚೇರಿಗಳಿಗೆ ಮತ್ತು ಚಲನಚಿತ್ರಗಳಿಗೆ ಹೋಗುವಂತೆ ಮಾಡಿ. ಮತ್ತು ಅವರು ಆತ್ಮಿಕ ಅನ್ಯೋನ್ಯತೆಗಾಗಿ ಭೇಟಿಯಾದಾಗ ಅವರು ಇನ್ನೊಬ್ಬರ ಬಗ್ಗೆ ಮಾತನಾಡುವಂತೆ ಮತ್ತು ಉಪಯೋಗಕ್ಕೆ ಬಾರದ ಮಾತುಗಳನ್ನು ಆಡುವುದರ ಮುಖಾಂತರ ಅವರ ಮನಸ್ಸಾಕ್ಷಿಯು ಕಳವಳಗೊಳ್ಳುವಂತೆ ಮತ್ತು ಅವರು ಅಸ್ಥಿರವಾದ ಭಾವನೆಗಳಿರುವಂತೆ ಮಾಡಿರಿ.

ಅವರನ್ನು ಕ್ರಿಸ್ತನಿಗೆ ಸಾಕ್ಷಿಗಾಳಗಿರುವುದಕ್ಕೆ ಅನುಮತಿಸಿ. ಆದರೆ ಕ್ರಿಸ್ತನಿಂದ ಬಲವನ್ನು ಬೇಡಿಕೊಳ್ಳಲು ಅವರಿಗೆ ಸಮಯವಿಲ್ಲದಂತೆ ಅವರು ಅನೇಕ ರೀತಿಯ ಒಳ್ಳೆಯ (ಕಾರಣಗಳಲ್ಲಿ)ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸುವಂತೆ ಮಾಡಿ. ಆಗ ಆದಷ್ಟು ಬೇಗ ಅವರು ತಮ್ಮ ಸ್ವಂತ ಬಲದಿಂದ ಕಾರ್ಯನಿರ್ವಹಿಸುತ್ತಾರೆ, ತಮ್ಮ ಆರೋಗ್ಯವನ್ನು ತ್ಯಾಗ ಮಾಡುತ್ತಾರೆ ಮತ್ತು ಕುಟುಂಬದ ಒಗ್ಗಟ್ಟನ್ನು ತ್ಯಾಗ ಮಾಡುತ್ತಾರೆ - ಈ ಎಲ್ಲವೂ ಒಳ್ಳೆಯ ಕಾರಣಕ್ಕಾಗಿ.

ಆಗ ಎಲ್ಲಾ ಕಡೆಯಲ್ಲಿಯೂ ಕ್ರೈಸ್ತರು ಕಾರ್ಯನಿರತರಗಿರುವಂತೆ ಮಾಡಲು ತಮಗೆ ಒಪ್ಪಿಸಿದ ಕೆಲಸಗಳನ್ನು ಬಹುಬೇಗನೆ ಮುಗಿಸಲು ದೆವ್ವಗಳು ಅಲ್ಲಿ ಇಲ್ಲಿ ನುಗ್ಗಿದವು.

ದೆವ್ವವು ತನ್ನ ಕುತಂತ್ರದಲ್ಲಿ ಜಯಶಾಲಿಯಾಗಿದ್ದಾನೆಯೇ? ನೀವೇ ನಿಮ್ಮ ಬಗ್ಗೆ ತೀರ್ಪು ಮಾಡಿಕೊಳ್ಳಿ."