WFTW Body: 

2 ಕೊರಿಂಥದವರಿಗೆ 4:6 ರಲ್ಲಿ ಪೌಲನು ಸುವಾರ್ತೆ ಎಂದರೆ ಏನು ಎಂದು ವಿವರಿಸಲು ಪ್ರಾರಂಭಿಸುತ್ತಾನೆ. ಅನೇಕ ಜನರು ಸುವಾರ್ತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಸೈತಾನನು (ಈ ಲೋಕದ ದೇವರು) ಅವರು ಇದನ್ನು ನೋಡದಂತೆ, ಅವರ ಕಣ್ಣುಗಳನ್ನು ಕುರುಡಾಗಿಸಿದ್ದಾನೆ. ದೇವರ ಪ್ರಭಾವವು ನಿಜವಾದ ನಿಕ್ಷೇಪವಾಗಿದ್ದು, ಅದನ್ನು ಭೂಲೋಕದಲ್ಲಿ ನಾವು ಹೊಂದಿರತಕ್ಕದ್ದು ಎಂಬುದರ ಬಗ್ಗೆ ಪೌಲನು ಇಲ್ಲಿ ಮಾತನಾಡುತ್ತಾನೆ (ವಚನ 6). ಆದಿಕಾಂಡ ಅಧ್ಯಾಯ ೧ ರಲ್ಲಿ ದೇವರು ಹಿಂದೆಯೇ ಬೆಳಕಾಗಲಿ ಎಂದು ಆಜ್ಞಾಪಿಸಿದ ರೀತಿಯಲ್ಲಿಯೇ, ಆತನು ನಮ್ಮ ಹೃದಯದೊಳಗೂ ಸಹ ತೋರಿಸಿದನು ಮತ್ತು ಬೆಳಕು ಮಣ್ಣಿನ ಘಟದಲ್ಲಿದೆ (ಪಾತ್ರೆಯಲ್ಲಿದೆ) (2 ಕೊರಿಂಥದವರಿಗೆ 4:7). ನಮ್ಮ ಜೀವಿತದ ಕೊನೆಯವರೆಗೂ, ನಾವೆಲ್ಲರೂ ಮಣ್ಣಿನ ಘಟಗಳು ಮಾತ್ರ ಆಗಿದ್ದೇವೆ. ಈ ಘಟದ ಅತ್ಯಾಕರ್ಷಕ ಸಂಗತಿಯೇನೆಂದರೆ, ಇದು ದೇವರ ಪ್ರಭಾವನ್ನು ಒಳಗೊಂಡಿರುತ್ತದೆ.

ಒಳಭಾಗದಲ್ಲಿ ದೊಡ್ಡದಾದ ಪ್ರಭಾವವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ - ಅದು, ''ನೀವು ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯೊಂದಿಗೆ ನಡೆದು ಮತ್ತು ಎಲ್ಲಾ ಸಮಯದಲ್ಲಿ ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡುವುದರ ಕೆಳಗೆ ಜೀವಿಸುವುದಾಗಿದೆ”.

ಹಳೆ ಒಡಂಬಡಿಕೆಯಲ್ಲಿ, ಅಬ್ರಹಾಮ ಮತ್ತು ದಾವೀದನು ಭೌತಿಕವಾಗಿ ಐಶ್ವರ್ಯವಂತರಾಗಿದ್ದರು. ಅದು ಭೂಲೋಕದ ಪ್ರಭಾವ - ಏಕೆಂದರೆ ಎಲ್ಲಾ ಮನುಷ್ಯರ ಪ್ರಭಾವವು ಐಶ್ವರ್ಯದಲ್ಲಿದೆ. ಆದರೆ ಹೊಸ ಒಡಂಬಡಿಕೆಯಲ್ಲಿ, ದೇವರು ಪೌಲನ ರೀತಿ ಒಬ್ಬ ಮನುಷ್ಯನನ್ನು ಉಪಯೋಗಿಸಿದನು, ಆತನು ಬಡವನಾಗಿದ್ದನು ಮತ್ತು ಪ್ರಭಾವ ಬೀರದವನಾಗಿದ್ದನು. ಅಪೊಸ್ತಲನಾದ ಪೌಲನು ಕೇವಲ 4 ಅಡಿ 11 ಇಂಚು ಉದ್ದ ಮಾತ್ರ ಇದ್ದನು. ಬೋಳುತಲೆಯವನು, ಕೊಕ್ಕೆಯಾಕಾರದ ಮೂಗನ್ನು ಹೊಂದಿದ್ದನು ಮತ್ತು ತನ್ನ ಜೀವಿತದ ಎಷ್ಟೋ ಸಮಯ ಖಾಯಿಲೆ ಬಿದ್ದವನಾಗಿದ್ದನು. ಆತನು ಮಾತನಾಡಲು ನಿಂತಾಗ, ಆತನು ಪ್ರಭಾವ ಬೀರುವಂತಹ ವ್ಯಕ್ತತ್ವವನ್ನು ಹೊಂದಿರಲಿಲ್ಲ. ಆದರೆ ದೇವರು “ಲೋಕವನ್ನು ಅಲ್ಲಕಲ್ಲೋಲ ಮಾಡುವಂತೆ” ಈ ಮನುಷ್ಯನನ್ನು ಉಪಯೋಗಿಸಿದನು. ಏಕೆಂದರೆ ಆತನು ಅಭಿಷೇಕಿಸಲ್ಪಟ್ಟಿದ್ದನು (ಅ.ಕೃ 17:6). ಪೌಲನು ನಿಜವಾಗಿಯೂ ಲೋಕವನ್ನು “ಸರಿಯಾದ ದಾರಿಗೆ” ತಿರುಗಿಸಿದ್ದನು. ಏಕೆಂದರೆ ಇಡೀ ಲೋಕವು ತಲೆಕೆಳಗಾಗಿತ್ತು, ಆದಾಮನು ಪಾಪ ಮಾಡಿದಾಗಿನಿಂದ ಆತನು ಬಲಹೀನ ಮಣ್ಣಿನ ಘಟವಾಗಿದ್ದನು, ಆದರೆ ಒಳಭಾಗದಲ್ಲಿ ಕ್ರಿಸ್ತನ ಪ್ರಭಾವವು ಒಳಗೊಂಡಿತ್ತು. ನೀವು ಒಳಭಾಗದಲ್ಲಿ ನಿಜವಾಗಿಯೂ ಲೆಕ್ಕ ಹಾಕುವಂತದ್ದೇನು. ಇಂದು ಅನೇಕ ಜನರು ದೊಡ್ಡ ದೊಡ್ಡ ದೇವರ ಸೇವಕರೆಂದು ಕರೆಯಲ್ಪಡುವವರು ಸಿನಿಮಾ ತಾರೆಗಳ ರೀತಿಯಲ್ಲಿ ಎತ್ತರದ ವೇದಿಕೆಯಲ್ಲಿ ನಿಂತಿರುವವರಿಂದ ಪ್ರಭಾವಕ್ಕೊಳಗಾಗುತ್ತಾರೆ. ಆದರೆ ನಿಜವಾದ ದೇವರ ಸೇವಕನ ಈ ರೀತಿಯ ಚಿತ್ರವನ್ನು ಅಪೋಸ್ತಲನಾದ ಪೌಲನಿಂದ ನಾವು ಪಡೆದುಕೊಳ್ಳುವುದಿಲ್ಲ. ಆತನು ಬಂಗಾರದ ಪಾತ್ರೆಯಾಗಿರಲಿಲ್ಲ. ಆತನು ಮಣ್ಣಿನ ಪಾತ್ರೆಯಾಗಿದ್ದನು. ಒಂದು ವೇಳೆ ನಿಮ್ಮಲ್ಲಿ ಅನೇಕ ಮನುಷ್ಯನ ಮಿತಿಗಳು ಮತ್ತು ಬಲಹೀನತೆಗಳು ಕಂಡುಂಬಂದರೆ ನಿರುತ್ಸಾಹಗೊಳ್ಳಬೇಡಿರಿ. ಒಳಭಾಗದಲ್ಲಿ ದೊಡ್ಡದಾದ ಪ್ರಭಾವವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು, ನೀವು ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯೊಂದಿಗೆ ನಡೆದು ಮತ್ತು ಎಲ್ಲಾ ಸಮಯಗಳಲ್ಲಿ ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡುವುದಾಗಿದೆ. ಇದುವೇ ನಿಜವಾದ ಪ್ರಾಧಾನ್ಯವಿರುವ ಸಂಗತಿ.

ಬೆಳಕು ಮಣ್ಣಿನ ಘಟದಲ್ಲಿದೆ (2 ಕೊರಿಂಥದವರಿಗೆ 4:6,7) ಇದು, ಗಿದ್ಯೋನನ ಸೈನ್ಯದ 300 ಸೈನಿಕರೂ ಒಳಭಾಗದಲ್ಲಿ ಬೆಳಕಿನೊಂದಿಗೆ ಮಣ್ಣಿನ ಘಟವನ್ನು ಹೊಂದಿದ್ದರು ಎಂಬುದನ್ನು ನೆನಪಿಸುತ್ತದೆ. ಈ ಮುನ್ನೂರು ಜನರು 32,000 ಜನರನ್ನೊಳಗೊಂಡ ಗುಂಪಿನಿಂದ ದೇವರಿಂದ ಆರಿಸಲ್ಪಟ್ಟಿದ್ದರು ಮತ್ತು ಕೊನೆ ದಿನಗಳಲ್ಲಿ ಜಯ ಹೊಂದಿದವರ ರೀತಿಯಲ್ಲಿದ್ದರು. ಅವರು ಸೈತಾನನ ವಿರುದ್ಧ ಯುದ್ಧಕ್ಕೆ ಹೋದಾಗ, ಆ ಸೈನಿಕರ ರೀತಿಯಲ್ಲಿ, ಅವರು ಖಡ್ಗವನ್ನು (ಅದು ದೇವರ ವಾಕ್ಯ) ಹೊಂದಿರುತ್ತಾರೆ. ಆದರೆ ಅವರು ಒಳಭಾಗದಲ್ಲಿ ಬೆಳಕಿನೊಟ್ಟಿಗೆ ಮಣ್ಣಿನ ಘಟವನ್ನು ಸಹ ಹೊಂದಿರುತ್ತಾರೆ. ಗಿದ್ಯೋನನ ಸೈನಿಕರು ಮಣ್ಣಿನ ಘಟದಿಂದ ಬೆಳಕು ಹೊರಗೆ ಪ್ರಜ್ವಲಿಸಲು, ಅವರ ಮಣ್ಣಿನ ಘಟವನ್ನು ಮುರಿಯಲು ಹೇಳಿದರು. ನೀವು ಮಡಕೆಯ ಒಳಭಾಗದಲ್ಲಿ ಮೊಂಬತ್ತಿಯನ್ನು ಇಟ್ಟರೆ, ಇದರ ಬೆಳಕನ್ನು ನೀವು ನೋಡಲು ಕಷ್ಟಸಾಧ್ಯ. ಆದರೆ ಆ ಮಡಕೆಯು ಒಡೆದರೆ, ಬೆಳಕು ಎಲ್ಲರೂ ಕಾಣುವಂತೆ ಹೊರಗೆ ಪ್ರಜ್ವಲಿಸಲ್ಪಡುತ್ತದೆ. ಯೇಸುವಿನ ಜೀವಿತವು ಹೊರಗೆ ಪ್ರಜ್ವಲಿಸಲು ಆತನ ಮಣ್ಣಿನ ಘಟವು ಹೇಗೆ ಮುರಿಯಲ್ಪಡಬೇಕು (ಒಡೆಯಬೇಕು) ಎಂಬುದನ್ನು ಪೌಲನು ನಮಗೆ ಹೇಳುತ್ತಾನೆ. ಆತನು ಇಕ್ಕಟ್ಟಿನ ಮೂಲಕ, ದಿಕ್ಕು ಕಾಣದಿರುವ ಮೂಲಕ, ಹಿಂಸೆಗೊಳಪಡುವುದರ ಮೂಲಕ ಹಾದು ಹೋಗಬೇಕಾಗಿತ್ತು ಮತ್ತು ಕೆಡವಲ್ಪಟ್ಟವರಾಗಿದ್ದರೂ, ಕೈಬಿಡಲ್ಪಟ್ಟವರಾಗಿರಲಿಲ್ಲ (ವ 8-12). ಆಗ ಆತನ ಮಣ್ಣಿನ ಘಟಕವು ಮುರಿಯಲ್ಪಡುತ್ತಿತ್ತು ಮತ್ತು ಜನರು ಬೆಳಕನ್ನು (ಯೇಸುವಿನ ಜೀವಿತ) ಆತನಲ್ಲಿ ಸಂಪೂರ್ಣವಾಗಿ ಕಾಣಬಹುದಿತ್ತು. ಅನೇಕ ವಿಶ್ವಾಸಿಗಳು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಮತ್ತು ಅವರಿಗೆ ಆಸಕ್ತಿಯು ಸಹ ಇರುವುದಿಲ್ಲ. ಆದರೆ ಶಿಲುಬೆಯ ಹಾದಿ ಒಂದೇ, ಅದು ಜೀವಿತದ ಹಾದಿ.

ನೀವು ಭೂಮಿಯೊಳಗೆ ಗೋಧಿ ಕಾಳನ್ನು ನೋಡುವಾಗ, ಇದು ಬಿರುಕು ಬಿಡುವಾಗ, ಹೊರಗೆ ತುಂಬಾ ಗಟ್ಟಿಯಾದ ಹೊರ ಹೊದಿಕೆಯಿರುತ್ತದೆ. ನಂತರ ಮಾತ್ರವೇ ಒಳಗಿರುವ ಜೀವ ಹೊರಗೆ ಬರುವುದು. ನಮ್ಮಲ್ಲಿನ ಹೊಸದಾಗಿ ಹುಟ್ಟಿದ ಕ್ರೈಸ್ತರುಗಳು ಸಹ, ಅಲ್ಲಿ ಗಟ್ಟಿಯಾದ ಹೊರಗಿನ ಹೊದಿಕೆಯಾಗಿರುತ್ತದೆ. ಅದು ಪ್ರಾಕೃತಿಕ ವ್ಯಕ್ತಿತ್ವ ಮತ್ತು ನಮ್ಮ ದೈಹಿಕ ಬಯಕೆಗಳಾಗಿದ್ದು, ಅವು ಮುರಿಯಲ್ಪಡಬೇಕಾಗಿರುತ್ತದೆ. ನಂತರವೇ ಮಾತ್ರ ದೈವ ಪ್ರಭಾವವುಳ್ಳ ಬೆಳಕು ನಮ್ಮ ಮೂಲಕ ಪ್ರಜ್ವಲಿಸುತ್ತದೆ.

ಈ ತತ್ವವನ್ನು ನಾವು ಧರ್ಮಶಾಸ್ತ್ರಗಳ ಮುಖಾಂತರ ನೋಡಬಹುದಾಗಿದೆ. ಒಬ್ಬ ಹೆಂಗಸು ಯೇಸುವಿಗೆ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಬಂದಾಗ, ಅದರೊಳಗೆ ಅದ್ಭುತವಾದ ಸುವಾಸನೆಯಿತ್ತು. ಆದರೆ ಮನೆಯಲ್ಲಿದ್ದ ಯಾರು ಸಹ ಆ ಭರಣಿಯು ಮುರಿಯಲ್ಪಡುವ ತನಕ ಸುವಾಸನೆಯ ವಾಸನೆಯನ್ನು ತೆಗೆದುಕೊಂಡಿರಲಿಲ್ಲ. ಅದೇ ರೀತಿಯಲ್ಲಿಯೇ, ನಮ್ಮ ಹೊರಗಿನ ಜೀವಿತ ಮುರಿಯಲ್ಪಡುವುದಕ್ಕೆ ದೇವರು ನಮ್ಮನ್ನು ಹಲವು ಪರಿಸ್ಥಿತಿಗಳ ಮುಖಾಂತರ ತೆಗೆದುಕೊಂಡು ಹೋಗುತ್ತಾನೆ. ನಂತರವೇ ನಾವು ಜನರಿಗೆ ಇನ್ನೆಂದಿಗೂ ಆಕರ್ಷಿತರಾಗಿರಲು ಬಯಸುವುದಿಲ್ಲ. ನೀವು ಜನರ ಪಕ್ಕಕ್ಕೆ ತುಂಬಾ ಲಕ್ಷಣವುಳ್ಳ ವ್ಯಕ್ತಿಯಾಗಿ ಬರಲು ಬಯಸಬಹುದು. ಆದರೆ ದೇವರು “ನಿಮ್ಮ ಈ ಬಯಕೆಯನ್ನು ಮುರಿಯಲು ನನಗೆ ಬಿಡುವಿರಾ” ಎಂದು ಹೇಳುತ್ತಾರೆ. ಮನುಷ್ಯನು ಆತ್ಮ, ಪ್ರಾಣ ಮತ್ತು ದೇಹಗಳ ಭಾಗವನ್ನು ಹೊಂದಿರುತ್ತಾನೆ. ಕ್ರಿಸ್ತನು ಒಳಗೆ ಬಂದಾಗ, ಅಲ್ಲಿ ಬಹು ಸೊಗಸಾದ ಪ್ರಭಾವವು ನಮ್ಮ ಆತ್ಮದಲ್ಲಿ ನೆಲೆಸಿರುತ್ತದೆ. ಆದರೆ ಪ್ರಭಾವವು ಮುಂದಕ್ಕೆ ಪ್ರಜ್ವಲಿಸಲು, ನಮ್ಮ ಪ್ರಾಕೃತಿಕ ಸ್ವಭಾವದ ಜೀವಿತ ಅಡ್ಡಿ ಮಾಡುತ್ತದೆ. ಅದಕ್ಕಾಗಿಯೇ ದೇವರು ನಮ್ಮ ಜೀವಿತದಲ್ಲಿ ಹಲವು ಮುರಿಯಲ್ಪಡುವಿಕೆಯನ್ನು ಅನುಮತಿಸುತ್ತಾನೆ. ಇದರಿಂದ ಆತನ ಉದ್ದೇಶಗಳನ್ನು ನಾವು ಪೂರ್ಣ ಮಾಡಬಹುದಾಗಿದೆ.