ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ
WFTW Body: 

ಪೌಲನು ತನ್ನ ಜೀವಿತದ ಕೊನೆಯಲ್ಲಿ ಒಂದು ಬಹು ಮುಖ್ಯವಾದದ್ದನ್ನು ಒತ್ತಿ ಹೇಳಿದ್ದಾನೆ: "ನನ್ನ ಮಾದರಿಯನ್ನು ನೋಡಿರಿ". ಆತನು ಹೇಳುವುದೇನೆಂದರೆ, "ನಾನು ಹೇಗೆ ಜೀವಿಸಿದೆನೆಂಬುದನ್ನು ನೋಡಿ". ಇದನ್ನೇ ಆತನು ತಿಮೋಥೆಯನಿಗೆ ಪದೇ ಪದೇ ಹೇಳಿದನು. "ಈ ಸುಮಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು. ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಹಿಂಸಕನೂ ಬಲಾತ್ಕಾರಿಯೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ" (1ತಿಮೋಥೆ 1:12).

ದೇವರು ತನ್ನ ಸಾರ್ವಭೌಮತ್ವದಲ್ಲಿ ಜನರನ್ನು ತನ್ನ ಸೇವೆಗೆ ಕರೆದರೂ ಸಹ, ಅವರಿಗೆ ತನ್ನ ಸೇವೆಯನ್ನು ಕೊಡುವ ಮುಂಚೆ, ಆತನು ಒಬ್ಬ ಮನುಷ್ಯನನ್ನು ಪರೀಕ್ಷಿಸುತ್ತಾನೆ. ಪೌಲನು 10 ವರ್ಷಗಳ ಅವಧಿಯಲ್ಲಿ ಪರೀಕ್ಷಿಸಲ್ಪಟ್ಟನು (ಅ.ಕೃ. 9ನೇ ಅಧ್ಯಾಯದಲ್ಲಿ ಆತನು ಪರಿವರ್ತನೆಗೊಂಡು ಅ.ಕೃ.13 ರಲ್ಲಿ ಆತನು ಸೇವೆಗೆ ಕಳುಹಿಸಲ್ಪಡುವವರೆಗೆ). ಆ 10 ವರ್ಷಗಳ ಅವಧಿಯಲ್ಲಿ ಪೌಲನಿಗೆ ಏನಾಯಿತು? ಪೌಲನು ಕ್ರೈಸ್ತನಾಗಿ ತನ್ನ ಪ್ರತಿನಿತ್ಯ ಜೀವಿತದಲ್ಲಿ ನಂಬಿಗಸ್ಥನಾಗಿರುತ್ತಾನೋ ಇಲ್ಲವೋ ಎಂದು ದೇವರು ನೋಡುತ್ತಿದ್ದನು. ದೇವರು ಆತನನ್ನು 10 ವರ್ಷಗಳ ಕಾಲ ಪರೀಕ್ಷಿಸಿದ ನಂತರ, ಆತನ ನಂಬಿಗಸ್ಥಿಕೆಯನ್ನು ನೋಡಿ ಹೀಗೆ ಹೇಳಿದನು, "ಈಗ ನೀನು ನನ್ನ ಸೇವೆ ಮಾಡಲು ನಾನು ನಿನ್ನನ್ನು ಹೊರಗೆ ಕಳುಹಿಸುತ್ತೇನೆ".

ದೇವರು ನಿನ್ನನ್ನು ಕರೆದರೆ, ಮೊದಲು ಆತನು ನಿನ್ನನ್ನು ಪರೀಕ್ಷಿಸುತ್ತಾನೆ. ಆತನು ನನಗಾಗಿ ಇಟ್ಟಿದ್ದ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುವ ಆತನ ಸೇವೆಯನ್ನು ನನಗೆ ತೆರೆಯುವ ಮುಂಚೆ - ದೇವರು ನನ್ನನ್ನು 16 ವರ್ಷಗಳ ಕಾಲ (ಅವುಗಳಲ್ಲಿ 9 ವರ್ಷ ಪೂರ್ಣಕಾಲಿಕ ಕ್ರೈಸ್ತ ಸೇವೆಯಲ್ಲಿ) ಪರೀಕ್ಷಿಸದನೆಂದು ನನಗೆ ಗೊತ್ತಿದೆ. ನೀವು ಕ್ರೈಸ್ತ ಸೇವೆಗೆ ಹೋದ ಕೂಡಲೇ, ನಿಮಗೆ ಅಭಿಷೇಕಿಸಲ್ಪಟ್ಟ ಸೇವೆ ಇರುತ್ತದೆ ಎಂದು ಕಲ್ಪಿಸಿಕೊಳ್ಳಬೇಡಿರಿ. ನೀವು ಸಣ್ಣ ಸಂಗತಿಗಳಲ್ಲಿ ನಂಬಿಗಸ್ತರಾಗಿರುತ್ತೀರಾ ಎಂದು ದೇವರು ನಿಮ್ಮನ್ನು ಪರೀಕ್ಷಿಸಿ ನೋಡುತ್ತಾರೆ. ನೀವು ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾಗಿದ್ದರೆ, ಅಂದರೆ, ಆತನ ವಾಕ್ಯವನ್ನು ಅಭ್ಯಸಿಸುವುದರಲ್ಲಿ, ಹಣದ ವಿಷಯದಲ್ಲಿ, ಸಮಯ ಕಳೆಯುವುದರಲ್ಲಿ, ಶುದ್ಧತ್ವದಲ್ಲಿ, ನಡತೆಯಲ್ಲಿ, ಪ್ರಾಮಾಣಿಕತೆಯಲ್ಲಿ ಇವೇ ಮುಂತಾದವುಗಳಲ್ಲಿ ನಿಮ್ಮ ನಂಬಿಗಸ್ತಿಕೆಯನ್ನು ದೇವರು ಪರೀಕ್ಷಿಸುತ್ತಾನೆ ಮತ್ತು ದೇವರು ನಿಮ್ಮ ಮೇಲೆ ಇಟ್ಟಿರುವ ಅಧಿಕಾರಿಳ ಕೆಳಗೆ ನಿಮ್ಮನ್ನು ತಗ್ಗಿಸುತ್ತಾನೆ. ಹೀಗೆ ಎಲ್ಲದರಲ್ಲಿ ಪರೀಕ್ಷಿಸಿದ ನಂತರ, 10 ವರ್ಷಗಳದರೂ ಸರಿಯೇ, ಆತನು ನಿಮ್ಮನ್ನು ಪರಿಣಾಮಕಾರಿಯಾದಂತಹ ಸೇವೆಯೊಳಗೆ ಇಡುತ್ತಾನೆ. ದೇವರೇ ನಿಮ್ಮನ್ನು ಸೇವೆಯೊಳಗೆ ಇರಿಸಿದಾಗ, ಒಂದೇ ವರ್ಷದಲ್ಲಿ ನೀನು ಮಾಡುವ ಸೇವೆಯು ನಿನ್ನ ಸ್ವಂತ ಯೋಜನೆಯ ಪ್ರಕಾರ ನೀನು 30 ವರ್ಷಗಳಲ್ಲಿ ಮಾಡುವ ಸೇವೆಗಿಂತ ಹೆಚ್ಚಾದದ್ದನ್ನು ಮಾಡುತ್ತೀರಾ. ಪೌಲನು ಹೇಳುತ್ತಾನೆ, "ಆತನೇ (ಕ್ರಿಸ್ತನೇ) ನನ್ನನ್ನು ತನ್ನ ಸೇವೆಯೊಳಗೆ ನೇಮಿಸಿದನು" (1ತಿಮೋಥೆ 1:12). ಇದನ್ನು ಯಾವುದೇ ಮನುಷ್ಯನು ಪೌಲನಿಗೆ ನಿರ್ಣಯಿಸಿದ್ದಲ್ಲ. ಪೌಲನು "ದೂಷಕನು, ಹಿಂಸಕನು, ಆಗಿದ್ದರೂ ಸಹ" ಆತನನ್ನು ತನ್ನ ಸೇವೆಗೆ ನೇಮಿಸಿದನು. (1ತಿಮೋಥೆ 1:13).

ಮಾನಸಾಂತರ ಹೊಂದಿದ ಅತೀ ಕೆಟ್ಟ ಪಾಪಿಗಳಿಗೆ ದೇವರು ತನ್ನ ಸೇವೆಯನ್ನು ಕೊಡುತ್ತಾನೆ. ಹಿಂದಿನ ಜೀವಿತದಲ್ಲಿ ಅತಿ ಕೆಟ್ಟ ಜೀವಿತವನ್ನು ಜೀವಿಸಿದವರಿಗೆ ಇದು ಉತ್ತೇಜನಕಾರಿಯಾಗಿದೆ. 2ನೇ ಶತಮಾನದಲ್ಲಿನ ಒಂದು ಬರವಣಿಗೆಯಲ್ಲಿ ಅದರ ಲೇಖಕನು ಹೇಳುವುದೇನೆಂದರೆ ಯೇಸುಕ್ರಿಸ್ತನು ತಾನು ನೀತಿವಂತರನ್ನಲ್ಲ ಬದಲಾಗಿ ತನ್ನ ಕಾಲದ ಕೆಲವು ಅತೀ ಕೆಟ್ಟ ಪಾಪಿಗಳು ಮಾನಸಾಂತರ ಹೊಂದಿ ಅವರು ಅಪೊಸ್ತಲರನ್ನಾಗುವಂತೆ ಕರೆದನು. ಪೌಲನು ಅವರಲ್ಲೊಬ್ಬನಾಗಿದ್ದನು. "ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು, ಆ ಪಾಪಿಗಳಲ್ಲಿ ನಾನೇ ಮುಖ್ಯನು”(1ತಿಮೋಥೆ 1:15).

ಹಾಗಾಗಿ ದೇವರು ಅವಶ್ಯಕವಾಗಿ, ದೇವರಿಗೆ ಭಯಪಡುವ ಮನೆಗಳಲ್ಲಿ ಬೆಳೆದವರನ್ನು ಮತ್ತು ಯಾವಾಗಲೂ ಶುದ್ಧ ಜೀವಿತವನ್ನು ಜೀವಿಸುವವರನ್ನು ಆರಿಸಿಕೊಳ್ಳುವುದಿಲ್ಲ. ಅನೇಕರನ್ನು ಆತನು ಆ ರೀತಿಯಾಗಿ ಉಪಯೋಗಿಸುತ್ತಾನೆ. ಆದರೆ, ಪಾಪದಾಳದಲ್ಲಿ ಜೀವಿಸಿದಂತವರನ್ನೂ ಆತನು ಆರಿಸುತ್ತಾನೆ. ವ್ಯಭಿಚಾರಿಗಳನ್ನು, ಕಳ್ಳರನ್ನು, ಕುಡುಕರನ್ನು ಮತ್ತು ಮಾದಕ ಚಟಗಳಿಗೆ ಬಿದ್ದಂತವರನ್ನು ಆತನು ಆರಿಸುತ್ತಾನೆ ಮತ್ತು ಅವರನ್ನು ಅಪೊಸ್ತಲರನ್ನಾಗಿ ಮಾಡುತ್ತಾನೆ. ಈ ರೀತಿಯಾಗಿ ಆತನು ಪ್ರತಿಪಾದಿಸುವುದೇನೆಂದರೆ, ಮಾನಸಾಂತರ ಹೊಂದದಿರುವ ಕಾಲದ ಪಾಪವು ಒಬ್ಬನು ಅಪೊಸ್ತಲನಾಗಲು ಅನರ್ಹಗೊಳಿಸುವುದಿಲ್ಲ. ಅತೀ ದೊಡ್ಡ ಪಾಪಿಯಾಗಿದ್ದ ಪೌಲನು ಶ್ರೇಷ್ಟನಾದ ಅಪೊಸ್ತಲನಾದನು. ನಿಮ್ಮಲ್ಲಿ ಯಾರಾದರೊಬ್ಬರು ನಿಮ್ಮ ಪಾಪಗಳಿಗೆ ಮಾನಸಾಂತರ ಪಟ್ಟರೆ ಮತ್ತು ಆತನ್ಸ್ನ್ನು ನಂಬಿದರೆ, ದೇವರು ನಿಮ್ಮ ಮುಖಾಂತರ ಅನೇಕ ಸಂಗತಿಗಳನ್ನು ಮಾಡಬಹುದು.