ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ಒಂದು ಒಳ್ಳೆಯ ಹೂದೋಟವನ್ನು ನೆಡಲು ನಾನು ಕಂಡುಕೊಂಡ ಐದು ನಿಯಮಗಳು ಇಲ್ಲಿವೆ; ನಾವು ಅವನ್ನು ಮದುವೆಯಲ್ಲಿ ಪತಿ-ಪತ್ನಿಯರ ನಡುವಿನ ಸಂಬಂಧಗಳಿಗೂ ಅನ್ವಯಿಸಬಹುದು.

1. ರೋಗನಿರೋಧಕ/ ರೋಗವನ್ನು ತಡೆಗಟ್ಟುವ ಬೀಜಗಳನ್ನು ಉಪಯೋಗಿಸಿ.

ಒಳ್ಳೆಯ ರೀತಿಯಲ್ಲಿ ರೋಗವನ್ನು ಹತೋಟಿಯಲ್ಲಿಡುವುದೆಂದರೆ ಅದನ್ನು ತಡೆಯುವುದು. ನಾವು ನಮ್ಮ ನಾಲಿಗೆಯ ಮೂಲಕ ಬೀಜಗಳನ್ನು ಬಿತ್ತುತ್ತೇವೆ. ಮಾತನಾಡುವಾಗ, ರೋಗವನ್ನು ತಡೆಗಟ್ಟುವ ಬೀಜಗಳನ್ನು ಉಪಯೋಗಿಸಿ. ಕೆಲವು ರೋಗಗಳನ್ನು ತಡೆಯಲು ಹಾಗೂ, ಗಿಡಗಳನ್ನು ರಕ್ಷಿಸಲು, ಅಗಾಗ್ಗೆ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ನಿನ್ನ ಹೋದೋಟದಲ್ಲಿ ಕಳೆ ಬೆಳೆಯುವುದನ್ನು ತಪ್ಪಿಸಬೇಕಾದರೆ, ನಿಮ್ಮ ನಾಲಿಗೆಯ ಬಗ್ಗೆ ನೀವು ನಿರ್ದಯಿಗಳಾಗಬೇಕು. ನೀವು ನಿಮ್ಮ ಮದುವೆಯಲ್ಲಿ ಎಂದಿಗೂ ಕಳೆ ಬೆಳೆಯದಂತೆ ನೋಡಿಕೊಳ್ಳುವಿರೆಂದು ನನ್ನ ಭರವಸೆ.

2.ರಸಗೊಬ್ಬರದಿಂದ ಮಣ್ಣನ್ನು ಸುಧಾರಿಸಿ.

ನಿಮಗೆ ಸಂತೋಷದಾಯಕ ಮದುವೆ ಬೇಕಾದ್ದಲ್ಲಿ, ಒಬ್ಬರನ್ನೊಬ್ಬರು ಪರಸ್ಪರ ಪ್ರೋತ್ಸಾಹಿಸಿರಿ ಹಾಗೂ ಹುರಿದುಂಬಿಸಿರಿ. ಇಂಥಹ ರಸಗೊಬ್ಬರಗಳನ್ನು ಮಣ್ಣಿಗೆ ಹಾಕಿರಿ. ಆಗ ನಿಜವಾಗಿಯೂ, ನೀವು ಒಳ್ಳೆಯ ಬೆಳೆಯನ್ನು ಪಡೆಯುವಿರಿ.

3. ರೋಗಪೀಡಿತ ಹಾಗೂ ರೋಗವನ್ನು ಹತೋಟಿಯಲ್ಲಿಡಲಾಗದ ಯಾವುದೇ ಗಿಡಗಳನ್ನು ನಾಶಗೊಳಿಸಿರಿ.

ತುಂಬಾ ಹೊತ್ತು ಟಿ.ವಿ. ನೋಡುವ, ಇವೇ ಮುಂತಾದ ಹತೋಟಿಯಲ್ಲಿಡಲಾಗದ ಹಾಗೂ ಚಟವಾಗಿರುವ ಚಟುವಟಿಕೆಗಳಿಗೆ ಇದು ಸಂಬಂಧಿಸುತ್ತದೆ. ಅವನ್ನು ನಾಶಪಡಿಸಿರಿ. ನಾನು ಟಿ.ವಿ ಉಪಕರ‍್ರಣದ ಬಗ್ಗೆ ಹೇಳುತ್ತಿಲ್ಲ, ಅದರೆ, ಅದರ ಮುಂದೆ ಕಳೆಯುತ್ತಿರುವ ಸಮಯದ ಬಗ್ಗೆ ನಾನು ಹೇಳುತ್ತಿದ್ದೇನೆ. ಅಂಥಹ ಚಟುವಟಿಕೆಗಳನ್ನು ಹತೋಟಿಯಲ್ಲಿಡಿ. ಇದು ಹತೋಟಿಯಲ್ಲಿಡಲಾಗದ ರೋಗಗಳಿಗೆ ಅನ್ವಯಿಸುತ್ತದೆ. ನೀವು ಅವನ್ನು ಹತೋಟಿಯಲ್ಲಿಡುವುದಾದರೆ, ಅದು ಒಳ್ಳೆಯದು. ಆದರೆ, ಅಂಥಹ ಚಟುವಟಿಕೆಗಳನ್ನು ಹತೋಟಿಯಲ್ಲಿಡುವುದು ಬಹಳ ಪ್ರಮುಖ/ಅಗತ್ಯ.

4.ನೀವು ಗಮನಿಸಿದ ಕೂಡಲೇ, ರೋಗಪೀಡಿತ ಎಲೆಗಳನ್ನು ಕತ್ತರಿಸಿ ಹಾಕಿ.

ಅಂದರೆ, ನೀವು ಮತ್ತೊಬ್ಬರಿಗೆ, ನೋವುಂಟು ಮಾಡಿದ್ದನ್ನು ಅರಿವಾಗುವುದು ರೋಗಪೀಡಿತ ಎಲೆ. ಅದನ್ನು ಕೂಡಲೇ ಕತ್ತರಿಸಿ ಹಾಕಿ. ತಕ್ಷಣವೇ ಕ್ಷಮೆಯನ್ನು ಕೇಳಿ ಹಾಗು ಕ್ಷಮೆಯನ್ನು ನೀಡಿ. ಆಗ ಆ ಎಲೆಯು ಕತ್ತರಿಸಲ್ಪಡುವುದು. ಇಲ್ಲದಿದ್ದಲ್ಲಿ ಅಂಥಹ ಸಮಸ್ಯೆಗಳು ವಿಪರೀತವಾಗುವುವು: ಇನ್ನೂ ಒಂದು ವಿಷಯ. ಆ ರೋಗ ಪೀಡಿತ ಎಲೆಯನ್ನು ದೂರ ಎಸೆಯಿರಿ. ಹಿಂದಿನದನ್ನು ನೆನಪಿಸಬೇಡಿ.

5. ನೀವು ಚೆನ್ನಾಗಿ ಆರೈಕೆ ಮಾಡಿಕೊಳ್ಳಲಾಗದಷ್ಟನ್ನು ನೆಡಬೇಡಿರಿ.

ಗಿಡಗಳನ್ನು ಅತಿಯಾಗಿ ಗುಂಪುಗೊಳಿಸಬೇಡಿ. ಗುಂಪುಗೊಳಿಸುವುದು ಒಳ್ಳೆಯ ಗಾಳಿ ಚಲನೆ ಹಾಗೂ ಸಾಕಷ್ಟು ಬೆಳಕನ್ನು ತಡೆಯುತ್ತದೆ. ಹಾಗೆಂದರೆ, ನಿಮ್ಮ ಮದುವೆಯ ಹೂದೋಟವನ್ನು ನಿರ್ಲಕ್ಷಿಸುವಂತೆ ಹಾಗೂ ನಿಮ್ಮ ಕುಟುಂಬವು ನಿಮ್ಮ ಕಡೆಯ ಆದ್ಯತೆಯಾಗುವಂತೆ, ನೀವು 24 ಗಂಟೆಗಳಲ್ಲಿ ನಿಮ್ಮನ್ನೇ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಬೇಡಿ. ಗುಂಪಾಗಿರಿಸುವುದು, ಸಾಕಷ್ಟು ಬೆಳಕು (ದೇವರ ಬೆಳಕು) ಹಾಗೂ ಒಳ್ಳೆಯ ಗಾಳಿಯ ಚಲನೆಯನ್ನು (ಪತಿ-ಪತ್ನಿಯರ ನಡುವಿನ ಅನ್ಯೋನ್ಯತೆ) ತಡೆಯುತ್ತದೆ.

ಜಗತ್ತಿನೆಲ್ಲೆಡೆಯ ಹೂದೋಟಗಳಿಗೆ ದೇವರೇ ಈ ನಿಯಮಗಳನ್ನು ರೂಪಿಸಿದ್ದಾರೆ. ಆದ್ದರಿಂದ ನಿಮ್ಮ ಕುಟುಂಬವನ್ನು ನಿಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿ.