WFTW Body: 

ಯೋಹಾನ 8:44 ರಲ್ಲಿ ಯೇಸು ಹೀಗೆ ಹೇಳಿದ್ದಾರೆ - ”ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ”. ಈ ವಾಕ್ಯದಲ್ಲಿ ಸೈತಾನನ ಒಂದು ಗುಣಲಕ್ಷಣವನ್ನು ತೋರಿಸಲಾಗಿದೆ : ಆತನಲ್ಲಿ ಸತ್ಯವೇ ಇಲ್ಲ ಮತ್ತು ಸತ್ಯದಲ್ಲಿ ನಿಲ್ಲುವುದಿಲ್ಲ ಎಂಬುದಾಗಿ. ಮುಂದುವರೆದು , ”ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲ ಪುರುಷನು ಆಗಿದ್ದಾನೆ” ಎಂಬುದಾಗಿ ಯೇಸು ಹೇಳಿದ್ದಾರೆ. ನಾವು ಇಲ್ಲಿ ನೋಡುವುದೇನೆಂದರೆ, ದೇವರು ಪ್ರೀತಿಯುಳ್ಳವನಾಗಿದ್ದಾನೆ ಮತ್ತು ಸೈತಾನನು ದ್ವೇಷಿಯಾಗಿದ್ದಾನೆ; ಅದೇ ರೀತಿ ನಾವು ನೋಡುವುದೇನೆಂದರೆ, ”ನಾನೇ ಸತ್ಯವು’' ಮತ್ತು ದೆವ್ವವ್ವು ಸುಳ್ಳುಗಾರ ಎಂಬುದಾಗಿ ಯೇಸು ಹೇಳಿದ್ದಾರೆ. ದೆವ್ವವು ಸತ್ಯದಲ್ಲಿ ನಿಲ್ಲುವುದಿಲ್ಲ ಮತ್ತು ಆತನಲ್ಲಿ ಸತ್ಯವೇ ಇಲ್ಲ. ಯಾವಗಲಾದರೂ ಆತನು ಸುಳ್ಳಾಡುವಾಗ, ತನ್ನ ಸ್ವಭಾವಾನುಸಾರ ಆಡುತ್ತಾನೆ. ಸುಳ್ಳು ಹೇಳುವುದೇ ಆತನ ಸ್ವಭಾವವಾಗಿದೆ. ಆತನು ಸುಳ್ಳುಗಾರನು ಮತ್ತು ಸುಳ್ಳಿಗೆ ಮೂಲಪುರುಷನಾಗಿದ್ದಾನೆ. ಎಲ್ಲಾ ಸುಳ್ಳುಗಳು ಸೈತಾನನಿಂದಲೇ ಪ್ರಾರಂಭವಾಗಿದ್ದು, ಅದಕ್ಕೆ ಆತನೇ ಮೂಲ ಪುರುಷನಾಗಿದ್ದಾನೆ. ”ನೀವು ಸುಳ್ಳನ್ನು ಹೇಳಿದರೆ, ಆ ಸುಳ್ಳು ಮಗುವಾಗಿದ್ದು, ತಂದೆಯಾಗಿ ಸೈತಾನ ಮತ್ತು ನೀವು ತಾಯಿಯಾಗಿ, ನಿಮ್ಮ ಮುಖಾಂತರ ಅದು ಹುಟ್ಟಿದ್ದಾಗಿರುತ್ತದೆ”. ಸುಳ್ಳು ಎಂಬ ಮಗುವನ್ನು ಹುಟ್ಟಿಸಲು, ನೀವು ನಿಮ್ಮ ಹೃದಯವನ್ನು ಮತ್ತು ನಾಲಿಗೆಯನ್ನು ಎಲ್ಲಾ ಸಮಯದಲ್ಲಿ ಸೈತಾನನಿಗೆ ಕೊಟ್ಟಿರುತ್ತೀರಿ. ದೇವರು ಎಂದಿಗೂ ಸುಳ್ಳಿಗೆ ತಂದೆಯಾಗಿರುವುದಿಲ್ಲ. ಅದಕ್ಕಾಗಿಯೇ, ಒಂದು ಸಲ ನಾವು ಕ್ರೈಸ್ತರಾದಾಗ (ವಿಶ್ವಾಸಿಗಳು), ಯಾವಗಲೂ ಸತ್ಯವನ್ನೇ ಆಡುವುದನ್ನು ಕಲಿತುಕೊಳ್ಳುವುದು ತುಂಬಾ ಮುಖ್ಯ.

ಈ ವಿಷಯದ ಬಗ್ಗೆ ಕಾಳಜಿ ವಹಿಸಿ, ಯೇಸು ಹೀಗೆ ಹೇಳಿದ್ದಾರೆ, ”ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು” (ಮತ್ತಾಯ 5:37). ಯೇಸು ಹೀಗೂ ಸಹ ಹೇಳಿದ್ದಾರೆ, ”ಅಣೆಯನ್ನೇ ಇಡಬೇಡ, ಎಷ್ಟು ಮಾತ್ರಕ್ಕೂ ಆಣೆಯನ್ನು ಇಡಬೇಡ” (ಮತ್ತಾಯ 5:34). ನೀವು ಆಣೆ ಇಡಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ಒಬ್ಬ ಮನುಷ್ಯ ಆಣೆಯನ್ನು ಇಡುವಾಗ, ತನ್ನ ಕೈಯನ್ನು ಸತ್ಯವೇದದ ಮೇಲೆ ಅಥವಾ ದೇವರ ಮೇಲೆ ಅಥವಾ ಪರಲೋಕದ ಮೇಲೆ ಇಡುವವನಾಗುತ್ತಾನೆ. ಆಗ ಆತನು ನಿಜವಾಗಿಯೂ ಏನೂ ಹೇಳುವವನಾಗುತ್ತಾನೆ? ”ಒಳ್ಳೆದು, ಅನೇಕ ಬಾರಿ ನಾನು ಸುಳ್ಳನು ಹೇಳುತ್ತೇನೆ, ಆದರೆ ಈಗ, ನಾನು ಸತ್ಯವನ್ನು ಮಾತನಾಡುತ್ತಿದ್ದೇನೆ, ಏಕೆಂದರೆ ನಾನು ಆಣೆ ಇಡುತ್ತಿದ್ದೇನೆ” ಎಂದು ಹೇಳುವವನಾಗಿರುತ್ತಾನೆ. ಆದರೆ ಯೇಸು ಹೇಳಿದ್ದಾರೆ, ನೀವು ಆ ರೀತಿಯಾಗಿ ಇರಬಾರದು ಎಂದು. ನೀವು ಎಲ್ಲಾ ಸಮಯದಲ್ಲಿಯೂ ಸತ್ಯವನ್ನೇ ಮಾತನಾಡಿ ಅಷ್ಟೇ. ಹಾಗಾಗಿ, ನೀವು ಎಷ್ಟು ಮಾತ್ರಕ್ಕೂ ಆಣೆ ಇಡುವ ಅವಶ್ಯಕತೆ ಇಲ್ಲ. ”ಆಣೆ ಇಡದೇ ಹೇಳಿದ ಮಾತಿಗಿಂತ ಆಣೆ ಇಟ್ಟು ಹೇಳಿದ ಮಾತಿನಲ್ಲಿ ಹೆಚ್ಚಿನ ಸತ್ಯಾಂಶ ಇರಬಾರದು”. ಇದು ಒಂದೇ ರೀತಿಯಾಗಿರಬೇಕು. ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದಾಗಿದೆ.

ನಾವು ದೇವರ ಬಳಿ ಬಂದಾಗ ಆತನು ನಮ್ಮಿಂದ ನಿರೀಕ್ಷೆ ಮಾಡುವುದಾದರೂ ಏನು? ಅದು ಪರಿಪೂರ್ಣತೆಯನ್ನಲ್ಲ, ಶುದ್ಧತ್ವವನ್ನಲ್ಲ, ಸದ್ಗುಣವನ್ನಲ್ಲ, ಪ್ರೀತಿಯನ್ನು ಅಲ್ಲ ಮತ್ತು ಇದ್ಯಾವುದು ಅಲ್ಲ. ”ನಾವು ಆತನ ಬಳಿಗೆ ಬಂದಾಗ, ಆತನು ನಮ್ಮಿಂದ ಒಂದೇ ಒಂದು ಸಂಗತಿ ನಿರೀಕ್ಷಿಸುತ್ತಾನೆ, ಅದು ಪ್ರಾಮಾಣಿಕತೆಯನ್ನು”.

”ಪರಲೋಕವು ಪರಿಪೂರ್ಣ ಜನರಿಗಾಗಿ ಉಂಟು ಮಾಡಿಲ್ಲ. ಅದು ಪ್ರಾಮಾಣಿಕ ಜನರಿಗಾಗಿ ಉಂಟು ಮಾಡಲ್ಪಟ್ಟಿದೆ”. ಯಾರು ಸತ್ಯವನ್ನು ಮಾತನಾಡಲು ಮನಸ್ಸುಳ್ಳವರಾಗಿರುತ್ತಾರೋ, ಅಂಥವರಿಗೆ ಪರಲೋಕವು ಉಂಟು ಮಾಡಲ್ಪಟ್ಟಿದೆ. ಸತ್ಯವೇದದಲ್ಲಿ ಉಲ್ಲೇಖಿಸಲ್ಪಟ್ಟ ಮೊದಲ ಪಾಪ ”ಸುಳ್ಳು”. ಆದಿಕಾಂಡ 3 ರಲ್ಲಿ ನಾವು ಓದುವಾಗ, ಅಲ್ಲಿ ಸತ್ಯವೇದದಲ್ಲಿಯೇ ಉಲ್ಲೇಖಿಸಲ್ಪಟ್ಟ ಮೊದಲ ಪಾಪದ ಬಗ್ಗೆ ಹೇಳಲ್ಪಟ್ಟಿದೆ. ಅದು, ದೇವರು ನಿಷೇಧಿಸಿದ್ದ ಮರದ ಹಣನ್ನು ಹವ್ವಳು ತಿಂದಾಗ, ಹೇಳಿದ ಸುಳ್ಳು ಮೊದಲ ಪಾಪವಲ್ಲ. ಇದಕ್ಕಿಂತಲೂ ಮುಂಚೆ ಆದಿಕಾಂಡ 3 ರಲ್ಲಿ ಆ ಮೊದಲ ಪಾಪವು ಉಲ್ಲೇಖಿಸಲ್ಪಟ್ಟಿದೆ. ಅದು ಮನುಷ್ಯನಿಂದ ಎಸಗಿದ ಪಾಪವಲ್ಲ, ಸ್ಯತಾನನಿಂದ ಎಸಗಿದ್ದು. ಸೈತಾನನು ಬಂದು ಹವ್ವಳಿಗೆ ಈ ರೀತಿ ಕೇಳುತ್ತಾನೆ, ”ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?'' ಎಂದು. ಆಗ ಆ ಸ್ತ್ರೀ, ”ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ - ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ” ಎಂಬುದಾಗಿ ಹೇಳುತ್ತಾಳೆ. ಆದಿಕಾಂಡ 3:4 ರಲ್ಲಿ ”ನೀವು ಹೇಗೂ ಸಾಯುವುದಿಲ್ಲ” ಎಂದು ಸರ್ಪವು ಆ ಸ್ತ್ರೀಗೆ ಹೇಳುತ್ತದೆ. ಅದು ಸುಳ್ಳಾಗಿದೆ. ಇದು ಸತ್ಯವೇದದಲ್ಲಿಯೇ ಉಲ್ಲೇಖಿಸಲ್ಪಟ್ಟ ಮೊದಲ ಸುಳ್ಳು ಮತ್ತು ಮೊದಲ ಪಾಪವಾಗಿದೆ; ನೀವು ಸಾಯುವುದಿಲ್ಲ, ನೀವು ದೇವರಿಗೆ ಅವಿಧಯರಾದರೂ, ಆತನು ನಿಮ್ಮನ್ನು ದಂಡಿಸುವುದಿಲ್ಲ, ನೀವು ನರಕಕ್ಕೆ ಹೋಗುವುದಿಲ್ಲ. ಪಾಪವು ದಂಡನೆಯನ್ನು ಹೊಂದಿರುವುದಿಲ್ಲ ಎಂಬ ಸುಳ್ಳಿನಿಂದ ಸೈತಾನನು ಹವ್ವಳನ್ನು ಮೋಸಗೊಳಿಸಿದನು ಮತ್ತು ಸಾವಿರಾರು ವರ್ಷಗಳಿಂದ ಇಲ್ಲಿಯವರೆಗೂ ಸೈತಾನನು ಇಡೀ ಮನುಕುಲವನ್ನೇ ಮೋಸಗೊಳಿಸಿದ್ದಾನೆ ಹಾಗೂ ಇಂದು ಸಹ ಮಾಡುತ್ತಿದ್ದಾನೆ. ಕೆಲವು ಬೋಧಕರು ಪಾಪಿಗಳನ್ನು, ಅವರ ಪಾಪಗಳಲ್ಲಿ ಸಂತೈಸುತ್ತಾರೆ. ಅದೇ ರೀತಿ ಕೆಲವು ಬೋಧಕರು ವಿಶ್ವಾಸಿಗಳನ್ನು, ಅವರ ಪಾಪದಲ್ಲಿಯೇ ಸಂತೈಸಿ, ”ನೀವು ಕರ್ತನನ್ನು ಸ್ವೀಕರಿಸಿಕೊಂಡಿದ್ದೀರಿ, ನೀವು ಎಷ್ಟೇ ಪಾಪ ಮಾಡಿದರೂ, ಪರಲೋಕಕ್ಕೆ ಹೋಗುತ್ತೀರಿ” ಎಂಬುದಾಗಿ ಹೇಳುತ್ತಾರೆ, .

ಸತ್ಯವನ್ನು ಹೇಳುವಂತದ್ದು ಗುಣಮಟ್ಟವಾಗಿದ್ದು, ಸದ್ಗುಣವಾಗಿದೆ. ನಾವು ಸತ್ಯವನ್ನು ಪಡೆದುಕೊಳ್ಳಬೇಕಾದರೆ, ಮನ:ಪೂರ್ವಕವಾಗಿ ಹೋರಾಡಬೇಕು

”ಇದೂ ವ್ಯರ್ಥ, ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೇ ನಡೆಯದಿರುವ ಕಾರಣ ಅಪರಾಧ ಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವುದು” ಎಂಬುದಾಗಿ ಪ್ರಸಂಗಿ 8:11 ರಲ್ಲಿ ಸತ್ಯವೇದ ಹೇಳುತ್ತದೆ. ದೇವರು ತಕ್ಷಣ ದಂಡಿಸದೇ ಇರುವುದರಿಂದ, ಜನರು ಪಾಪದಲ್ಲಿಯೇ ಜೀವಿಸುತ್ತಾರೆ. ಅದಕ್ಕಾಗಿ, ನೀವು ದಂಡನೆಗೆ ಹೋಗುವುದಿಲ್ಲ. ನಿಮ್ಮ ಸುತ್ತಮುತ್ತಲಿರುವ ಬೇರೆ ಜನಗಳನ್ನು ನೋಡಿರಿ. ಅವರು ಎಸಗಿರುವಂತ ಪಾಪಗಳನ್ನು ನೋಡಿರಿ. ಅನೇಕ ತಪ್ಪುಗಳನ್ನು ಮಾಡುವಂತ ವಿಶ್ವಾಸಿಗಳನ್ನು ನೋಡಿರಿ ಮತ್ತು ಅವರು ಅಪರಾಧವನ್ನು ಮಾಡಿದ ನಂತರ, ಅದರಿಂದ ತಪ್ಪಿಸಿಕೊಳ್ಳುತ್ತಾರೆ ಹಾಗೂ ಅವರು ಅಪರಾಧಗಳಿಂದ, ತಪ್ಪುಗಳಿಂದ ದೂರ ಸರಿಯುವುದಿಲ್ಲ ಎಂದು ದೆವ್ವವು ಹೇಳುತ್ತದೆ. ದೇವರ ದಂಡನೆ, ಆತನ ತೀರ್ಪು ಇನ್ನೂ ಬಂದಿಲ್ಲ. ಅಷ್ಟೇ. ನೀವು ಪಾಪ ಮಾಡಿದರೂ ಬಾಧೆ ಪಡುವುದಿಲ್ಲ ಎಂಬ ಸುಳ್ಳಿನಿಂದ ಸೈತಾನನು ಎಲ್ಲಾ ಜನರನ್ನು ಪದೇ ಪದೇ ಮೂರ್ಖನಾಗಿಸುತ್ತಿದ್ದಾನೆ. ಸತ್ಯವೇದ ಹೀಗೆ ಹೇಳುತ್ತದೆ, ”ನೀವು ಶರೀರಭಾವವನ್ನು ಅನುಸರಿಸಿದರೆ ಸಾಯುವಿರಿ” ಎಂಬುದಾಗಿ (ರೋಮ 8:13). ಆದರೆ ಸೈತಾನನು ಹೇಳುತ್ತಾನೆ, ”ಇಲ್ಲ, ನೀವು ಸಾಯುವುದಿಲ್ಲ. ದೇವರು ಕರುಣಾಶಾಲಿಯು, ದೇವರು ದಯೆಯುಳ್ಳವನು, ಯೇಸುವನ್ನು ನಿಮ್ಮ ಜೀವಿತದೊಳಗೆ ಬರುವಂತೆ ನೀವು ಕರೆದಿದ್ದೀರಿ. ಹಾಗಾಗಿ, ನೀವು ಶರೀರಭಾವದನುಸಾರ ಜೀವಿಸಿದರೂ, ನೀವು ಸಾಯುವುದಿಲ್ಲ” ಎಂಬುದಾಗಿ ಸೈತಾನನು ಹೇಳುತ್ತಾನೆ. ಇದು ಸೈತಾನನು ಮಾಡುವಂತ ಮೋಸವಾಗಿದೆ. ನೀವು ಶರೀರಭಾವವನ್ನು ಅನುಸರಿಸಿದರೆ ಸಾಯುವಿರಿ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಸೈತಾನನು ಸುಳ್ಳುಗಾರನಾಗಿರುವಾಗ, ತನ್ನ ಸ್ವಭಾವವನ್ನು ತನ್ನ ಮಕ್ಕಳಿಗೆ ಕೊಡಬಯಸುತ್ತಾನೆ ಮತ್ತು ಇದರಿಂದ ವಿಶ್ವಾಸಿಗಳು ಮಲಿನರಾಗುವುದು ಬಹಳ ಸುಲಭ. ನೀವು ಯಾವಾಗಲಾದರೂ ಸುಳ್ಳು ಹೇಳುವಾಗ, ನಿಮ್ಮನ್ನು ನೀವು ಸೈತಾನನಿಗೆ ಅರ್ಪಿಸಿಕೊಟ್ಟು, ತಂದೆ ಮತ್ತೊಂದು ಮಗು(ಸುಳ್ಳು) ಕೊಡು ಎಂದು ಹೇಳುವವರಾಗಿರುತ್ತೀರಿ.

ಸತ್ಯವೇದದಲ್ಲಿ ಕೊನೆ ಪಾಪವು ಪ್ರಕಟಣೆ 22:15 ರಲ್ಲಿ ನಮೂದಿಸಲ್ಪಟ್ಟಿದೆ. ಕೊನೆ ದಿನದಲ್ಲಿ ದೇವರ ರಾಜ್ಯದಿಂದ ಹೊರಗೆ ಉಳಿಯುವಂತವರುಗಳು ಯಾರು ಎಂಬುದರ ಬಗ್ಗೆ ಅಲ್ಲಿ ಹೇಳಲ್ಪಟ್ಟಿದೆ: ”ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು” ಎಂಬುದಾಗಿ ಬರೆಯಲ್ಪಟ್ಟಿದೆ. ಸತ್ಯವೇದದಲ್ಲಿ ಮೊದಲ ಪಾಪ ಮತ್ತು ಕೊನೆ ಪಾಪ ”ಸುಳ್ಳು” ಎಂದು ನಮೂದಿಸಲ್ಪಟ್ಟಿರುವ ಬಗ್ಗೆ ಈ ಮೊದಲು ಎಂದಾದರೂ ಗುರುತಿಸಿದ್ದೀರಾ? ಸುಳ್ಳು ಹೇಳುವಂತದ್ದು ತುಂಬಾ ಗಂಭೀರವಾದ ವಿಷಯ. ದೇವರಿಗೆ ಸುಳ್ಳು ಹೇಳುವುದು, ಜನರಿಗೆ ಸುಳ್ಳು ಹೇಳುವುದು ಮತ್ತು ಪ್ರತಿಯೊಂದು ಸುಳ್ಳಿಗೂ ಸೈತಾನನೇ ಮೂಲ ಪುರುಷನಾಗಿದ್ದಾನೆ. ಪೇತ್ರನು ಅನನೀಯಾನಿಗೆ ಹೀಗೆ ಹೇಳುತ್ತಾನೆ, ”ಪವಿತ್ರಾತ್ಮನಿಗೆ ಯಾಕೆ ಸುಳ್ಳು ಹೇಳಿದಿ?” ಎಂಬುದಾಗಿ. ಸುಳ್ಳು ಹೇಳಿದ್ದಕ್ಕಾಗಿ ಅನನೀಯಾನು ಪ್ರಾಣ ಬಿಡಬೇಕಾಯಿತು. ಪ್ರಾರಂಭದ ಸಭೆಯಲ್ಲಿ ಮೊದಲು ತೀರ್ಪುಗೊಂಡಂತಹ ಪಾಪ ’ಸುಳ್ಳು’. ಇದು ಅತ್ಯಂತ ಗಂಭೀರವಾದ ವಿಷಯ ಮತ್ತು ಅದಕ್ಕಾಗಿಯೇ, ಪೋಷಕರಾಗಿ, ನಾವು ನಮ್ಮ ಮಕ್ಕಳಿಗೆ ಬೋಧಿಸಬೇಕಿರುವ ಪ್ರಮುಖ ಸಂಗತಿಯೆಂದರೆ, ಸುಳ್ಳು ಹೇಳುವುದನ್ನು ನಿಲ್ಲಿಸು ಎಂಬುದಾಗಿ. ನಮ್ಮ ಮಕ್ಕಳು ನಮ್ಮ ಸ್ವಭಾವದಿಂದ ಹುಟ್ಟಿದವರಾಗಿರುತ್ತಾರೆ. ಅವರು ಹುಟ್ಟಿನಿಂದಲೂ ಸುಳ್ಳನ್ನು ಹೇಳುವವರಾಗಿರುತ್ತಾರೆ. ಇದು ಎಷ್ಟು ಗಂಭೀರ ಎಂದು ಅವರಿಗೆ ತೋರಿಸುವ ವರೆಗೆ, ನಮ್ಮ ಜೀವಿತದಲ್ಲಿ ಅವರು ಇದನ್ನು ನೋಡುವವರೆಗೆ, ಅವರು ಕಲಿಯುವುದಿಲ್ಲ. ಅವರು ನೋಡಬೇಕಾದ ಅಗತ್ಯವಿದೆ, ಪೋಷಕರಾಗಿ, ಸತ್ಯವನ್ನು ಮಾತನಾಡುವಂತದ್ದನ್ನು ನಾವು ಗಂಭೀರವಾಗಿ ತೆಗೆದುಕೊಂಡು, ನಾವು ಏನೋ ಒಂದನ್ನು ಹೇಳಿರುತ್ತೀವಿ, ಅದನ್ನು ಮಾಡಬೇಕು. ನಾವು ನಮ್ಮ ಮಕ್ಕಳಿಗೆ ಏನಾದರೂ ವಾಗ್ದಾನ ಮಾಡಿದ್ದರೆ, ನಾವು ನಮ್ಮ ಮಾತನ್ನು ಉಳಿಸಿಕೊಳ್ಳಬೇಕು ಅಥವಾ ಯಾವುದೋ ಒಂದು ಸನ್ನಿವೇಶ ಎದುರಾದ ನಿಮ್ಮಿತ್ತ ನಿಮಗೆ ಹೇಳಿದ್ದನ್ನು ಮಾಡಲಾಗಲು ಸಾಧ್ಯವಾಗಲಿಲ್ಲ ಎಂಬುದನ್ನು ಅವರಿಗೆ ವಿವರಿಸಬೇಕು.

ಸತ್ಯವನ್ನು ಹೇಳುವಂತದ್ದು ಗುಣಮಟ್ಟವಾಗಿದ್ದು, ಸದ್ಗುಣವಾಗಿದೆ. ನಾವು ಸತ್ಯವನ್ನು ಪಡೆದುಕೊಳ್ಳಬೇಕಾದರೆ, ಮನ:ಪೂರ್ವಕವಾಗಿ ಹೋರಾಡಬೇಕು. ಪವಿತ್ರಾತ್ಮನು ಸತ್ಯದ ಆತ್ಮನಾಗಿದ್ದಾನೆ. ನೀವು ಸತ್ಯವಂತರಾಗಬೇಕಾದರೆ, ನಿಮ್ಮನ್ನು ತುಂಬುವಂತೆ ಮತ್ತು ನಿಮ್ಮ ಎಲ್ಲಾ ಮಾತಿನಲ್ಲಿ ಸುಳ್ಳು ಹೇಳುವಂತ ಹವ್ಯಾಸವನ್ನು ದಮನ ಮಾಡುವಂತೆ ಪವಿತ್ರಾತ್ಮನಲ್ಲಿ ಕೇಳಬೇಕು. ನಾವು ಇದನ್ನು ಮಾಡಿದರೆ, ಸೈತಾನನು ನಮಗೆ ಮೋಸ ಮಾಡಲು ಹುಡುಕುವಂತ ಸುಳ್ಳುಗಳ ಮೇಲೆ ದೇವರು ನಮಗೆ ಸೂಕ್ಷ್ಮಗ್ರಹಿಕೆಯನ್ನು ಕೊಡುವುದನ್ನು ನಾವು ಕಂಡುಕೊಳ್ಳುತ್ತೇವೆ.