WFTW Body: 

ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಮೋಶೆ ಮತ್ತು ಇನ್ನುಳಿದ ಪ್ರವಾದಿಗಳಿಂದ ದೇವರು ಕೊಟ್ಟ ವಾಕ್ಯಗಳನ್ನು ಅನುಸರಿಸುತ್ತಿದ್ದರು. ಈ ಪ್ರವಾದಿಗಳಲ್ಲಿ ಎಷ್ಟೇ ದೊಡ್ಡ ಪ್ರವಾದಿಗಳಾದ ಮೋಶೆ, ಎಲಿಯಾ ಅಥವಾ ಸ್ನಾನಿಕನಾದ ಯೋಹಾನ ಇವರಲ್ಲಿ ಯಾರೂ "ನನ್ನನ್ನು ಹಿಂಬಾಲಿಸಿ" ಎಂದು ಹೇಳಲಾಗಲಿಲ್ಲ. (ಕೀರ್ತನೆ 119:115) ರ ಪ್ರಕಾರ ಕೇವಲ ದೇವರ ವಾಕ್ಯವೇ ಅವರ ದಾರಿಗೆ ಬೆಳಕಾಗಿತ್ತು. ಆದರೆ ಯೇಸುಕ್ರಿಸ್ತನು ಬಂದು ಹೊಸದಾದ ಒಡಂಬಡಿಕೆಯನ್ನು ಸ್ತಾಪಿಸಿದನು. ಆತನು ಕೇವಲ ದೇವರ ವಾಕ್ಯವನ್ನು ಅಷ್ಟೆ ಅಲ್ಲ ತನ್ನ ಜೀವನವನ್ನು ಉದಾಹರಣೆಯಾಗಿ ಕೂಡ ಕೊಟ್ಟನು.

ಮತ್ತಾಯ 4:19; ಯೋಹಾನ 21:19; ಲೂಕ 9:23 ರಲ್ಲಿ ನಾವು ನೋಡುವ ಪ್ರಕಾರ "ನನ್ನನ್ನು ಹಿಂಬಾಲಿಸಿ", ಎಂದು ಮೊಟ್ಟಮೊದಲನೆಯದಾಗಿ ಹೇಳಿದವನು ಯೇಸುವಾಗಿದ್ದನು. ಹಾಗಿದ್ದಲ್ಲಿ ಹೊಸ ಒಡಂಬಡಿಕೆಯಲ್ಲಿ ನಮಗೆ ದೇವರ ವಾಕ್ಯ ಮತ್ತು ಆ ವಾಕ್ಯ ಮನುಷ್ಯನ ರೂಪದಲ್ಲಿ ಯೇಸುವಿನ ಮುಖಾಂತರ ನಮ್ಮ ಬಳಿಯಲ್ಲಿತ್ತು. ಅಥವಾ ಇನ್ನೊಂದೊ ರೀತಿಯಲ್ಲಿ ಹೇಳುವುದಾದರೆ ನಮಗೆ ದಾರಿ ತೋರಿಸುವದಕ್ಕೊಸ್ಕರ ಬರೆದಿರುವ ದೇವರ ವಾಕ್ಯವು ನಮ್ಮ ಕಣ್ಣಿಗೆ ಕಾಣುವಂತೆ ಮನುಷ್ಯನ ಜೀವಿತವಾಗಿ ರೂಪಾಂತರ(ಬದಲಾವಣೆ)ವಾಯಿತು.

ಪರಿಸಾಯರು ಕೇವಲ ದೇವರ ವಾಕ್ಯವನ್ನು ಅಭ್ಯಾಸ ಮಾಡುವದರಲ್ಲಿ ನಿರತರಾಗಿದ್ದು, ಯೇಸುವಿನ ಹತ್ತಿರ ಬರದ ಕಾರಣ; ಯೇಸುವು ಅವರನ್ನು ಗದರಿಸಿದನು. ಇದನ್ನು ನಾವು ಯೋಹಾನ 5:39,40 ರಲ್ಲಿ ಹೀಗೆ ಓದುತ್ತೇವೆ"ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಆದರೂ ಜೀವಹೊಂದುವದಕ್ಕಾಗಿ ನನ್ನ ಬಳಿಗೆ ಬರುವದಕ್ಕೆ ನಿಮಗೆ ಮನಸ್ಸಿಲ್ಲ."

ಯೋಹಾನ 1:4 ರಲ್ಲಿ ಹೇಳುವ ಪ್ರಕಾರ, ನಮಗೆ ಕೇವಲ ದೇವರ ವಾಕ್ಯವು ದಾರಿತೋರಿಸುವದಷ್ಟೇ ಅಲ್ಲ ಯೇಸುವಿನ ಜೀವಿತವೂ ಕೂಡ ನಮ್ಮ ಮಾರ್ಗಕ್ಕೆ ಬೆಳಕಾಗಿದೆ. ದೇವರ ವಾಕ್ಯದಿಂದ ನಮಗೆ ಸ್ಪಷ್ಟವಾದ ಮಾರ್ಗ(ದಾರಿ) ಗೊತ್ತಾಗದೇಯಿದ್ದಾಗ ಯೇಸುವಿನ ಜೀವನದ ಮಾದರಿ(ಉದಾಹರಣೆ)ಯಿಂದ ನಮ್ಮ ಹೃದಯದಲ್ಲಿ ಪವಿತ್ರಾತ್ಮನು ಪ್ರಕಟಪಡಿಸುತ್ತಾನೆ.

ಇನ್ನೂ ಮುಂದುವರಿದು ನೋಡುವಾಗ ಹೊಸಒಡಂಬಡಿಕೆಯಲ್ಲಿ ಭಕ್ತನಾದ ಪೌಲನು ಪವಿತ್ರಾತ್ಮ ಭರಿತನಾಗಿ ಹೀಗೆ ಹೇಳುತ್ತಾನೆ - "ನಾನು ಕ್ರಿಸ್ತನನ್ನು ಹಿಂಬಾಲಿಸುವ ಪ್ರಕಾರ, ನನ್ನನ್ನು ಹಿಂಬಾಲಿಸಿ." ಮತ್ತು ಈ ರೀತಿಯಾಗಿ ಪವಿತ್ರಾತ್ಮನು ಪೌಲನಿಗೆ 3 ಸಾರಿ ತಿಳಿಸಲು ಪ್ರೇರೆಪಿಸುತ್ತಾನೆ. ಇದನ್ನು (1 ಕೊರಿಂಥ 4:16; ೧ ಕೊರಿಂಥ ೧೧:೧; ಇಲಿಪ್ಪಿ 3:17) ರಲ್ಲಿ ಓದಬಹುದು. ಪವಿತ್ರಾತ್ಮನು 3 ಸಾರಿ ಒತ್ತಿ ಹೇಳುವದರಿಂದ ನಾವು ಕ್ರಿಸ್ತನ ಮಾರ್ಗದಲ್ಲಿ ಹೋಗುವ ಭಕ್ತರನ್ನೂ ಕೂಡ ಹಿಂಬಾಲಿಸಬೇಕೆಂದು ತಿಳಿದುಕೊಳ್ಳುತ್ತೇವೆ.

ಒಬ್ಬ ನಿಜವಾದ ಹೊಸಒಡಂಬಡಿಕೆಯ ಸೇವಕನು ಕೇವಲ ದೇವರ ವಾಕ್ಯದ ಸತ್ಯವನ್ನು ಪ್ರಕಟಿಸುವದಲ್ಲದೇ ಪೌಲನು ಹೇಳಿದ ಹಾಗೆ "ಕ್ರಿಸ್ತನನ್ನು ಹಿಂಬಾಲಿಸುವ ಪ್ರಕಾರ, ನನ್ನನ್ನು ಹಿಂಬಾಲಿಸಿ" ಎಂದು ಹೇಳುತ್ತಾನೆ.

ಕೆಲವು ವಿಶ್ವಾಸಿಗಳು ನಾವು ಕೇವಲ ಯೇಸುವನ್ನು ಹಿಂಬಾಲಿಸಬೇಕು, ಮನುಷ್ಯರನ್ನಲ್ಲ(ಭಕ್ತರನ್ನಲ್ಲ) ಎಂದು ಹೇಳುತ್ತಾರೆ. ಇದು ಒಂದು ರೀತಿಯಾದ ತುಂಬಾ ಉನ್ನತ ಮಟ್ಟದ ಆತ್ಮಿಕ ಮಾತಾಗಿ ಕಾಣಿಸುತ್ತದೆ. ಆದರೆ ಈ ಮಾತು ದೇವರ ವಾಕ್ಯದ ವಿರುದ್ಧವಾಗಿರುವದನ್ನು ಕೂಡ ಕಾಣುತ್ತೇವೆ. ಅದು ಹೇಗೆಂದರೆ ಪೌಲನು ಪವಿತ್ರಾತ್ಮ ಭರಿತನಾಗಿ ಈಗ ತಾನೆ ಮೇಲೆ ಹೇಳಿದ ಮಾತುಗಳಲ್ಲಿ ನಾವು ತಿಳಿಯಬಹುದಾಗಿದೆ.

ಪೌಲನು ಕೊರಿಂಥದವರಿಗೆ ತನ್ನನ್ನು ಹಿಂಬಾಲಿಸುವಂತೆ ಮತ್ತು ಅನುಕರಣೆ ಮಾಡಲು ಹೇಳುತ್ತಾನೆ, ಏಕೆಂದರೆ ಆತನು ಕ್ರಿಸ್ತನಲ್ಲಿ ಆತ್ಮಿಕನಾದ ತಂದೆಯಾಗಿದ್ದನು. 1 ಕೊರಿಂಥ 4:15,16 ರಲ್ಲಿ ಪೌಲನು ಕೊರಿಂಥದವರಿಗೆ ಹೀಗೆ ಹೇಳುತ್ತಾನೆ "ನಿಮಗೆ ಕ್ರಿಸ್ತನಲ್ಲಿ ಭೊದಕರು ಸಾವಿರಾರು ಮಂದಿ ಇದ್ದರೂ; ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಪಡೆದೆನು. ಆದುದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ."

ಒಬ್ಬನು ಬೈಬಲ್(ಸತ್ಯವೇದ) ಬೋಧಕನಾದ ಮಾತ್ರಕ್ಕೆ ಅವನನ್ನು ಹಿಂಬಾಲಿಸುವುದು ಸಾಧ್ಯವಿಲ್ಲ. ಏಕೆಂದರೆ ಆತನ ಬೋಧನೆಯು ಒಳ್ಳೆಯ ಗುಣಮಟ್ಟ ಹೊಂದಿದ್ದರೂ ಅವನ ಜೀವನ ಒಳ್ಳೆಯ ಮಾದರಿಯ ಜೀವನ ಆಗಿರದೆ ಹೊದಲ್ಲಿ, ಅಂಥವನನ್ನು ಹಿಂಬಾಲಿಸಲಾಗುವದಿಲ್ಲ. ಈ ಮೇಲಿನ ದೇವರ ವಾಕ್ಯದಲ್ಲಿ ಹೇಳಿದ ಪ್ರಕಾರ ಒಬ್ಬ ಆತ್ಮಿಕ ತಂದೆಯು ಹತ್ತು ಸಾವಿರ ಬೈಬಲ್ ಬೋಧಕರಿಗಿಂತ ಮೇಲಾಗಿದ್ದಾನೆ. ಆದ್ದರಿಂದ ಎಲ್ಲಾ ಕ್ರೈಸ್ತರಿಗೆ ಒಬ್ಬ ಪೌಲನಂತೆ ಆತ್ಮಿಕ ತಂದೆ ಹೊಂದಿಕೊಂಡು ಹಿಂಬಾಲಿಸುವದು ಯುಕ್ತವಾಗಿದೆ(ಒಳ್ಳೆಯದಾಗಿದೆ). ಇಂಥ ಆತ್ಮಿಕ ತಂದೆಯನ್ನು ಹಿಂಬಾಲಿಸುವದರಿಂದ ಪಾಪ ಮತ್ತು ಸುಳ್ಳು ಬೋಧನೆಯಿಂದ ಕಾಪಾಡಲ್ಪಡುತ್ತೇವೆ.

ಪೌಲನು ಕ್ರಿಸ್ತ ವಿಶ್ವಾಸಿಗಳಿಗೆ ಭಕ್ತರನ್ನು ಹಿಂಬಾಲಿಸಲು ಪ್ರೇರೆಪಿಸಿದನು. ಈ ದೈವ ಜನರು ಮತ್ತು ಪೌಲನು ಕೂಡ ಯೇಸುವನ್ನು ಆತನ ಜೀವನದ ಮಾದರಿ ಅನುಸರಿಸಿ ನಡೆದರು. ಪೌಲನು ಪಿಲಿಪ್ಪಿ 3:17 ರಲ್ಲಿ ಹೀಗೆ ಹೇಳುತ್ತಾನೆ "ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದು ಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ."

ದೇವರ ವಾಕ್ಯ ಕೂಡ ಹಿರಿಯರಿಗೆ ವಿಧೇಯರಾಗಲು ಮತ್ತು ಅವರನ್ನು ಅನುಸರಿಸುವ ಹಾಗೆ ಆಜ್ಞಾಪಿಸುತ್ತದೆ. ಇದನ್ನು ಇಬ್ರಿಯ 13:17 ರಲ್ಲಿ ಹೀಗೆ ಓದುತ್ತೇವೆ "ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ." ಮತ್ತು ಇಬ್ರಿಯ 13:7 ರಲ್ಲಿ ಹೀಗೆ ಓದುತ್ತೇವೆ :"ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕ ಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿ; ಅವರ ನಂಬಿಕೆಯನ್ನು ಅನುಸರಿಸಿರಿ."

ನಾವು ಒಬ್ಬ ಮನುಷ್ಯನ ಸೇವೆಯನ್ನು ಹಿಂಬಾಲಿಸಲಿಕ್ಕೆ ಕರೆದಿಲ್ಲ, ಬದಲಾಗಿ ನಮ್ಮೆಲ್ಲರಿಗೂ ಒಂದೊಂದು ರೀತಿಯಾದ ಪ್ರತ್ಯೇಕ(ಬೇರೆ,ಬೇರೆ) ಸೇವೆಯನ್ನು ದೇವರು ಅನುಗ್ರಹಿಸುತ್ತಾನೆ. ಕ್ರಿಸ್ತನ ದೇಹದಲ್ಲಿ ಅನೇಕ ಅಂಗಗಳಿವೆ, ಅದರಲ್ಲಿ ಪ್ರತಿಯೊಂದು ಅಂಗವು ತನ್ನದೇ ಆದ ಬೇರೆ ಬೇರೆ ಕೆಲಸ ವಹಿಸುತ್ತದೆ, ಯಾವ ರೀತಿಯಲ್ಲಿ ಮನುಷ್ಯನ ದೇಹದ ಅಂಗಗಳಿವೆಯೋ ಅದೇ ರೀತಿಯಲ್ಲಿ ಆಗಿರುತ್ತಿದೆ.

ಯೇಸು ತನ್ನನ್ನು ಹಿಂಬಾಲಿಸಿ ಎಂದು ಕರೆದಾಗ, ಜನರಿಗೆ ಬೋಧನೆ ಅಥವಾ ಅದ್ಭುತ ಕಾರ್ಯ ಮಾಡಲಿಕ್ಕಾಗಲಿ ಅಪೇಕ್ಷಿಸಲಿಲ್ಲ. ಇದು ಕ್ರಿಸ್ತನ ಸೇವೆಯಾಗಿತ್ತು. ಆತನು ಜನರನ್ನು ತನ್ನ ಜೀವಿತದ ಮಾದರಿ ನೋಡಿ ಹಿಂಬಾಲಿಸಲು ಕರೆದನು. ತನ್ನ ಜೀವಿತದ ಸಿದ್ಧಾಂತ(ಮೂಲತತ್ವ)ವನ್ನು ನೋಡಿ ಹಿಂಬಾಲಿಸಲು ಕರೆದನು. ಇದೇ ರೀತಿಯಲ್ಲಿ ಪೌಲನು ತಾನು ಕ್ರಿಸ್ತನನ್ನು ಹಿಂಬಾಲಿಸಿದ ಹಾಗೆ ತನ್ನನ್ನು ಹಿಂಬಾಲಿಸಿರಿ ಎಂದು ಕರೆದನು. ಪೌಲನು ಜನರಿಗೆ ಅಪೋಸ್ತಲನಾಗಲಿಕ್ಕಾಗಲಿ; ರೋಗಿಗಳಿಗೆ ವಾಸಿ ಮಾಡಲಿಕ್ಕಾಗಲಿ ಹೇಳಲಿಲ್ಲ ಅದರ ಬದಲಾಗಿ ಕ್ರಿಸ್ತನನ್ನು ತಾನು ಯಾವ ರೀತಿಯಲ್ಲಿ ಹಿಂಬಾಲಿಸಿದನೋ ಆ ರೀತಿಯಲ್ಲಿ ಹಿಂಬಾಲಿಸಲು ಕರೆಯುತ್ತಾನೆ.

ಮೇಲಿನ ವಾಕ್ಯಗಳಲ್ಲಿ ನಾವು ನೋಡುವಾಗ ಭಕ್ತರನ್ನು ಹಿಂಬಾಲಿಸಲು ಪವಿತ್ರಾತ್ಮನ ಆಜ್ಞೆಯಿದೆ. ಆದರೆ ತಮ್ಮನ್ನು ತಾವು ಹೆಮ್ಮೆಯಿಂದ ಭಕ್ತರನ್ನು ಹಿಂಬಾಲಿಸುತ್ತಾಯಿದ್ದೇವೆ ಎನ್ನುವವರು ಕೊನೆಗೆ ಒಂದು ದಿನ ವಂಚಕ(ಮೋಸ) ಮಾಡುವವರ ಹಿಂದೆ ಹೋಗುತ್ತಾರೆ. ಮತ್ತು ತಮ್ಮಷ್ಟಕ್ಕೆ ತಾವೇ ತಮ್ಮ ಸ್ವಂತ ಜೀವಿತದಿಂದ ಪ್ರೋತ್ಸಾಹ ಹೊಂದುವವರು ಕೂಡ ಕೊನೆಗೆ ಇಂಥ ವಂಚಕರಿಂದ ಮೋಸ ಹೊಗುತ್ತಾರೆ. ಈ ರೀತಿ ಆದರೆ ಇದರ ಪರಿಣಾಮಗಳು ಬಹಳ ಭಯಂಕರವಾಗಿರುತ್ತದೆ.

ಪಿಲಿಪ್ಪಿ 3:17 ರಲ್ಲಿ ಪೌಲನು ಇಲಿಪ್ಪಿನಲ್ಲಿರುವ ವಿಶ್ವಾಸಿಗಳಿಗೆ ತನ್ನನ್ನು ಮತ್ತು ತಾನು ತೋರಿಸಿದ ಮಾದರಿಯ ಪ್ರಕಾರ ನಡೆದು ಕೊಳ್ಳುವವರನ್ನು ಹಿಂಬಾಲಿಸಲಿಕ್ಕೆ ಹೇಳಿದ ಕೂಡಲೆ ಒಂದು ಎಚ಼್ಚರಿಕೆ ಮಾತನ್ನು ಹೇಳುತ್ತಾನೆ, ಅದೇನೆಂದರೆ - ನೀವು ಅನ್ಯ(ಬೇರೆ) ಜನರನ್ನು ಹಿಂಬಾಲಿಸಬೇಡಿರಿ ಎಂದು ಎಚ್ಚರಿಸಿದನು. ಪಿಲಿಪ್ಪಿ 3:18,19 ರಲ್ಲಿ ಹೀಗೆ ಹೇಳುತ್ತಾನೆ "ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ."

ಪೌಲನನ್ನು ಹಿಂಬಾಲಿಸಿದ್ದರೆ ಇನ್ನುಳಿದ ಭಕ್ತಿ ಇಲ್ಲದೆಯಿರುವವರಿಂದ ಮೋಸ ಹೋಗಲಿಕ್ಕೆ ಸಾಧ್ಯವಾಗುತ್ತಿದ್ದಿಲ್ಲ. ಒಬ್ಬನು ಭಕ್ತನಾಗಿದ್ದು ಹಿಂಬಾಲಿಸಲು ಯೋಗ್ಯನಿದ್ದಾನೋ ಇಲ್ಲವೊ ಎಂಬುದನ್ನು ಗುರುತಿಸಲು ಈ ಕೆಳಕಂಡ 7 ಪರೀಕ್ಷೆಯನ್ನು ಮಾಡಬಹುದು.

  • 1. ಆತನು ದೀನನಾಗಿದ್ದಾನೋ - ಆತನ ಬಳಿಗೆ(ಸಮೀಪಕ್ಕೆ) ಬರಲು ಅಥವಾ ಮಾತನಾಡಲು ಕಠಿಣವಾಗಿದೆಯಾ? ಯೇಸು ಮತ್ತಾಯ 11:29 ರಲ್ಲಿ ತನ್ನಿಂದ ದೀನ ಮನಸ್ಸನ್ನು ಕಲಿತುಕೊಳ್ಳುವದಕ್ಕೆ ಹೇಳುತ್ತಾನೆ. ನಿಜವಾದ ಭಕ್ತನು ಯೇಸುವಿನಿಂದ ದೀನತೆಯನ್ನು ಕಲಿತಿರುತ್ತಾನೆ.
  • 2. ಆತನು ಹಣದ ಆಶೆಯಿಂದ(ವ್ಯಾಮೋಹ) ದೂರವಾಗಿದ್ದಾನಾ? ಮತ್ತು ನಿಮಗೆ ತಿಳಿದಿರುವ ಪ್ರಕಾರ ಯಾರ ಹತ್ತಿರವಾದರೂ ಹಣವನ್ನು ಕೇಳುತ್ತಾನೋ? ಭಕ್ತನು ಯೇಸುವಿನ ಮಾದರಿಯನ್ನು ಹಿಂಬಾಲಿಸುತ್ತಾನೆ, ಯಾವ ರೀತಿಯಾಗಿ ಯೇಸುವು ತನ್ನ ಸೇವೆಯಲ್ಲಿಯೂ ಕೂಡ ಯಾರಿಂದಲೂ ಹಣ ಕೇಳಿ ಪಡೆಯಲಿಲ್ಲ. ಲೂಕ 16:13 ರಲ್ಲಿ ಯೇಸು ಹೇಳುತ್ತಾನೆ - ಯಾರು ದೇವರನ್ನು ಪ್ರೀತಿಸುತ್ತಾರೆ ಅಂಥವರು ಹಣವನ್ನು ಪ್ರೀತಿಸುವುದಿಲ್ಲ ಮತ್ತು ಯಾರು ದೇವರಲ್ಲಿ ಆತುಕೊಳ್ಳುತ್ತಾರೋ ಅವರು ಹಣವನ್ನು ತ್ಯಜಿಸುತ್ತಾರೆ.
  • 3. ಆತನು ಪವಿತ್ರನಾಗಿರುವನೇ - ವಿಶೇಷವಾಗಿ ಹೆಂಗಸರ ಜೊತೆ ಅವನ ಯಾವ ರೀತಿಯಾದ ವ್ಯವಹರಿಸುತ್ತಾನೆ? 2 ತಿಮೊಥೆ 2:20-22 ರಲ್ಲಿ ಹೇಳುವ ಪ್ರಕಾರ ಭಕ್ತನು ಕೇವಲ ಶೋಧನೆಯಿಂದ ತಪ್ಪಿಸಿಕೊಳ್ಳುವವನಲ್ಲ ಆದರೆ ಅದರಿಂದ ಓಡಿ ಹೋಗುತ್ತಾನೆ.
  • 4. ಮದುವೆ ಆಗಿದ್ದರೆ ತನ್ನ ಮಕ್ಕಳನ್ನು ದೇವರ ಭಯ ಭಕ್ತಿಯಲ್ಲಿ ಬೆಳೆಸಿದ್ದಾನಾ? 1 ತಿಮೊಥೆ 3:4,5; ತೀತನು 1:6 ರಲ್ಲಿ ಹೇಳುವ ಪ್ರಕಾರ- ಭಕ್ತನ ಮಕ್ಕಳು ಕ್ರಿಸ್ತ ವಿಶ್ವಾಸಿಗಳು ಮತ್ತು ಅವರನ್ನು ಶಿಸ್ತು ಬದ್ಧ ರೀತಿಯಲ್ಲಿ ಬೆಳೆಸಿರುತ್ತಾನೆ.
  • 5. ಈತನ ಸಹವಾಸದಿಂದ ಅವನ ಜೊತೆ ಸೇವಕರು ದೈವಿಕರಾಗಿದ್ದಾರಾ? ದೈವಿಕರಾದವರು(ಭಕ್ತರು) ಮತ್ತೊಬ್ಬ ದೈವಿಕ ಜನರನ್ನು ಹುಟ್ಟಿಸುತ್ತಾರೆ. ಪಿಲಿಪ್ಪಿ 2:19-22 ರಲ್ಲಿ ಹೇಳುವ ಪ್ರಕಾರ ತಿಮೊಥೆಯನು ದೈವಿಕನಾದ ಮನುಷ್ಯನಾಗಲು ಆತ್ಮಿಕ ತಂದೆಯಾದ ಪೌಲನೇ ಕಾರಣನಾಗಿದ್ದಾನೆ.
  • 6. ಆತನು ಹೊಸ ಒಡಂಬಡಿಕೆಯ ಸಭೆಯನ್ನು (ಇನ್ನೊಬ್ಬರ ಜೊತೆಯಲ್ಲಿ ಸಕ್ರಿಯವಾಗಿ ಕಟ್ಟುತ್ತಿರುವನೇ?) ಅಥವಾ ಕಟ್ಟಿರುವನೇ? ಮತ್ತಾಯ 16:18 ರಲ್ಲಿ ಯೇಸು ಭೂಮಿಗೆ ಬಂದಿರುವದು ತನ್ನ ಸಭೆಯನ್ನು ಕಟ್ಟಲಿಕ್ಕೆ. ಹಾಗೂ ಎಫೆಸ 5:25 ರಲ್ಲಿ ಹೇಳುವ ಪ್ರಕಾರ ಯೇಸುವು ತನ್ನನ್ನು ಸಾವಿನ ತನಕ ಒಪ್ಪಿಸಿದನು ಸಭೆಯನ್ನು ಕಟ್ಟಲಿಕ್ಕೆ, ಎಂದು. ದೈವಿಕ ಜನರು ಇನ್ನೊಬ್ಬರನ್ನು ಕೇವಲ ಕ್ರಿಸ್ತನ ಬಳಿಗೆ ತರುವದಲ್ಲದೇ, ಅವರನ್ನು ಒಂದು ಸಭೆಯನ್ನಾಗಿ ಬೆಳೆಸುತ್ತಾರೆ.
  • 7. ಆತನು ನಿಮ್ಮನ್ನು ಕ್ರಿಸ್ತನ ಕಡೆಗೆ ಜೋಡಿಸುತ್ತಾ ಇದ್ದಾನಾ ಅಥವಾ ತನ್ನ ಕಡೆಗೆ ಆಕರ್ಷಿಸುತ್ತಾ ಇದ್ದಾನಾ? - ಒಬ್ಬ ಭಕ್ತನು ಯಾವಾಗಲೂ ಕ್ರಿಸ್ತನ ಕಡೆಗೆ ನಡೆಸುತ್ತಾನೆ. ಇದರಿಂದ ನೀವು ಮತ್ತೊಬ್ಬರಿಗೆ ಕ್ರಿಸ್ತ ಮಾದರಿಯಾಗಿ ಬಾಳಲಿಕ್ಕೆ ಮಾರ್ಗವಾಗುವದು. ಇದನ್ನು ಎಫೆಸ 4:15; 2 ಕೊರಿಂಥ 4:5 ರಲ್ಲಿ ಓದಬಹುದು.
  • ನಾವು ಇಂದು ಹೆಚ್ಚಿನಂಶ ಕ್ರಿಸ್ತನಾಯಕರನ್ನು ಹಿಂಬಾಲಿಸಲು ಸಾಧ್ಯವಿಲ್ಲ, ಏಕೆಂದರೆ ಹೆಚ್ಚಿನ ಪಕ್ಷಕ್ಕೆ ಈ ಮೇಲಿನ ಅಂಶಗಳಲ್ಲಿ ಒಂದು ಇಲ್ಲವೇ ಹೆಚ್ಚಿನ ವಿಷಯದಲ್ಲಿ ಬಿದ್ದುಹೋಗುವದರಿಂದ ಅವರನ್ನು ಹಿಂಬಾಲಿಸಲಾಗುವದಿಲ್ಲ.

    ಆದರೂ ಈ ಮೇಲಿನ ಅಂಶಗಳನ್ನು ಹೊಂದಿದ್ದ ಒಬ್ಬ ದೈವಿಕ ನಾಯಕ ನಿಮಗೆ ದೊರೆತರೆ, ಅಂಥವನನ್ನು ಆತ್ಮಿಕ ತಂದೆಯಾಗಿ ಹಿಂಬಾಲಿಸುವುದು ನಿಮಗೆ ಬಹಳ ಲಾಭದಾಯಕವಾಗುತ್ತದೆ. ಏಕೆಂದರೆ ಅವನು ನಿಮ್ಮನ್ನು ಯೇಸುವಿನ ಬಳಿ ಕರದೊಯ್ಯುತ್ತಾನೆ ಮತ್ತು ನೀವು ಅನೇಕ ಪಾಪಗಳಿಂದ ಹಾಗು ಸುಳ್ಳು ಬೋಧನೆಯಿಂದ ರಕ್ಷಿಸಲ್ಪಡುತ್ತೀರಿ.

    ಕಿವಿಯುಳ್ಳವನು ಕೇಳಲಿ.