ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಅಸ್ಥಿವಾರದ ಸತ್ಯಗಳು
WFTW Body: 

ಪೌಲನು ಗಲಾತ್ಯ 3:2 ರಲ್ಲಿ, ಪವಿತ್ರಾತ್ಮನನ್ನು ನಂಬಿಕೆಯಿಂದ ಹೊಂದುತ್ತೇವೆಯೇ ಹೊರತಾಗಿ ನೇಮನಿಷ್ಠೆಗಳಿಂದಲ್ಲವೆಂದು ಹೇಳುತ್ತಿದ್ದಾನೆ. ಪೌಲನು ಅವರಿಗೆ - "ನೀವು ದೇವರಾತ್ಮನನ್ನು ಹೊಂದಿದ್ದು ನೇಮನಿಷ್ಠಗಳನ್ನು ಅನುಸರಿಸಿದ್ದಲಿಂದಲೋ?" ಎಂದು ಕೇಳುತ್ತಿದ್ದಾನೆ. ತಾವು ಸಾಕಷ್ಟು ಉಪವಾಸ ಮತ್ತು ಪ್ರಾರ್ಥನೆಯನ್ನು ಮಾಡಿದರೆ ದೇವರು ತಮಗೆ ಪವಿತ್ರಾತ್ಮನನ್ನು ಅನುಗ್ರಹಿಸುತ್ತಾನೆಂದು ಕೆಲವರು ಅಲೋಚಿಸುತ್ತಾರೆ. ಆದರೆ ನಿಮಗೆ ಪಾಪಕ್ಷಮಾಪಣೆ ಹೇಗೆ ದೊರಕಿತು? ಪ್ರಾರ್ಥನೆ, ಉಪವಾಸದಿಂದಲೇ? ಅಲ್ಲ. ಅದು ದೇವರ ಉಡುಗೊರೆಯಾಗಿ(ದಾನವಾಗಿ) ದೊರಕಿತು. ಪಾಪಕ್ಷಮಾಪಣೆ ಮತ್ತು ಪವಿತ್ರಾತ್ಮಾಭಿಷೇಕ ಎರಡೂ ಒಂದೇ ಅಧಾರದ ಮೇಲೆ ನೀಡಲಾಗುತ್ತವೆ: ಅದು ಕೃಪೆಯಿಂದ, ನೇಮನಿಷ್ಠೆಗಳಿಂದಲ್ಲ. ಪೌಲನು ಗಲಾತ್ಯದವರಿಗೆ ಹೇಳಿದ್ದೇನೆಂದರೆ, "ನೀವು ನಿಮ್ಮ ಕ್ರೀಸ್ತಿಯ ಬದುಕನ್ನು ನಂಬಿಕೆಯಿಂದ ಪ್ರಾರಂಭಿಸಿದ್ದರೆ, ಅದನ್ನು ನಿಮ್ಮ ದೈಹಿಕ ಪ್ರಯತ್ನದಿಂದ ಹೇಗೆ ಪರಿಪೂರ್ಣ ಮಾಡಲಿಕ್ಕೆ ಸಾಧ್ಯ?" ಪವಿತ್ರಾತ್ಮನು ನಿಮ್ಮ ಜೀವನದಲ್ಲಿ ರಕ್ಷಣೆ ತಂದಿರುವಾತನು ಮತ್ತು ಆತನೇ ನಿಮ್ಮನ್ನು ಪವಿತ್ರರನ್ನಾಗಿ ಮಾಡಬಲ್ಲನು. ನೇಮನಿಷ್ಠೆಗಳು ನಿಮ್ಮನ್ನು ಪವಿತ್ರರನ್ನಾಗಿಸುವದಿಲ್ಲ. ಈ ಸತ್ಯವನ್ನು ನೀವು ಅರಿತರೆ, ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿನ ಮೂಲ ವಿಷಯವನ್ನು ನೀನು ತಿಳಿದ ಹಾಗಿದೆ.

ನೀವು ದೇವರಾತ್ಮನನ್ನು ಹೊಂದಿದ್ದು ನೇಮನಿಷ್ಠಗಳಿಂದಲ್ಲ. ಪರಿಪೂರ್ಣತೆಯು ಶರೀರ ಪ್ರಯತ್ನದಿಂದ ಬರುವದಿಲ್ಲ, ಪವಿತ್ರಾತ್ಮನು ಕಾರ್ಯಮಾಡುವದರಿಂದ ಬರುತ್ತದೆ. ಪವಿತ್ರಾತ್ಮಮನಿಗೆ ಅಧೀನರಾಗಿ, ಆತನ ಸ್ವರವಾಲಿಸಿ, ಆತನು ನಿಮಗೆ ತಿದ್ದುವಿಕೆ ಕೊಡುವಾಗ ಅದನ್ನು ವಿಧೇಯತೆಯಿಂದ ಸ್ವೀಕರಿಸಬೇಕು. ಇದರಿಂದ ಪವಿತ್ರಾತ್ಮನು ನಿಮ್ಮನ್ನು ಪವಿತ್ರರನ್ನಾಗಿರಿಸುವನು. ಪ್ರಾರ್ಥನೆ ಮತ್ತು ಉಪವಾಸಗಳು ಒಬ್ಬರನ್ನು ಪವಿತ್ರಮಾಡಲಿಕ್ಕಾಗದು. ಅನೇಕರು ಸತತವಾಗಿ ಉಪವಾಸ ಮತ್ತು ಪ್ರಾರ್ಥನೆ ಮಾಡಿದರೂ ಪಾಪ ಅವರ ಮೇಲೆ ಆಡಳಿತ ನಡಿಸುತ್ತಿರುತ್ತದೆ. ಅವರು ಹೃದಯದಲ್ಲಿ ಕಾಮಿಸುತ್ತಾರೆ ಮತ್ತು ಇನ್ನೊಬ್ಬರೊಂದಿಗೆ ಜಗಳವಾಡುತ್ತಿರುತ್ತಾರೆ. ಆದ್ದರಿಂದ ಪವಿತ್ರತೆಯು ಈ ರೀತಿಯಿಂದ ಲಭಿಸುವದಿಲ್ಲವೆಂದು ಸಾಬೀತಾಗುತ್ತದೆ. ಅದು ಕೇವಲ ಪವಿತ್ರಾತ್ಮನ ಬಲದಿಂದ ಸಾಧ್ಯ.

ಪೌಲನು ಗಲಾತ್ಯ 3:5 ರಲ್ಲಿ ಗಲಾತ್ಯದವರಿಗೆ ಹೀಗೆ ನೆನಪಿಸುತ್ತಾನೆ- ದೇವರು ನಿಮ್ಮಲ್ಲಿ ನಡೆಸಿದ ಅದ್ಭುತ ಕಾರ್ಯಗಳು ನಿಮ್ಮ ನೇಮನಿಷ್ಠೆಗಳಿಂದಲ್ಲ ಆದರೆ ನಿಮ್ಮ ನಂಬಿಕೆಯಿಂದ. ದೇವರು ತನ್ನ ಮಕ್ಕಳ ಜೀವನದಲ್ಲಿ ವಿಶೇಷವಾದ ಅದ್ಭುತ ಕಾರ್ಯಗಳನ್ನು ನಡೆಸುತ್ತಾನೆ. ಯಾಕೆಂದರೆ - ಅದಕ್ಕೆ ಅವರು ಭಾದ್ಯಸ್ತರು ಅಥವಾ ಅವರು ಒಳ್ಳೆಯ ನಡತೆಹೊಂದಿದ್ದರಿಂದಲ್ಲ ಆದರೆ ಆತನಲ್ಲಿ ನಂಬಿಕೆಯಿಟ್ಟಿಂದರಿಂದಲೇ ಆಗಿದೆ.

ಅಬ್ರಹಾಮನು ನಂಬಿಕೆಯಿಂದ ನೀತಿವಂತನೆಂದೆಣಿಸಿದನು (ಗಲಾತ್ಯ 3:6); ಆತನ ಮೂಲಕ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವಂತೆ ಮಾಡಿದನು (ಗಲಾತ್ಯ 3:8). ಆದ್ದರಿಂದ ಅನ್ಯಜನರಾಗಿದ್ದ ನಾವೂ ಕೂಡ (ಗಲಾತ್ಯ 3:14) ಆಶೀರ್ವಾದ ಹೊಂದಲಿಕ್ಕೆ ಆಸ್ಪದವಾಯಿತು. ಕ್ರಿಸ್ತನು ಕ್ರೂಜೆ ಮೇಲೆ ತೂಗು ಹಾಕಲ್ಪಟ್ಟಾಗ, ನಮ್ಮ ನಿಮಿತ್ತವಾಗಿ ಶಾಪವಾದನು (ಗಲಾತ್ಯ 3:13). ಇದರಿಂದ ಧರ್ಮಶಾಸ್ತ್ರದಲ್ಲಿ ಬರೆದಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು.
ಧರ್ಮಶಾಸ್ತ್ರದಲ್ಲಿ ಶಾಪವಿದೆ: ನೀವು ಅದರ ಅನುಸಾರವಾಗಿ ನಡಿಯದಿದ್ದರೆ, ನೀವು ಶಾಪಗ್ರಸ್ತರಾಗುತ್ತೀರಿ. ಧರ್ಮೋಪದೇಶಕಾಂಡ 28, ಈ ಶಾಪಗಳನ್ನು ಪಟ್ಟಿ ಮಾಡುತ್ತದೆ- ಹುಚ್ಚುತನ, ಕುರುಡುತನ ಮತ್ತು ಇನ್ನೂ ಅನೇಕ ರೋಗಗಳಿವೆ. ಕ್ರಿಸ್ತನು ಶಿಲುಬೆ ಮರಣ ಹೊಂದಿದಾಗ ನಮ್ಮನ್ನು ಎಲ್ಲಾ ಶಾಪಗಳಿಂದ ಮುಕ್ತರನ್ನಾಗಿ ಮಾಡಿದನು. ಇದರಿಂದ ನಾವು ತಿಳಿಯಬಹುದೇನೆಂದರೆ, ನಮ್ಮ ಪೂರ್ವಜರ ಪಾಪಗಳಿಂದ ನಾವು ಅನುಭವಿಸಬೇಕಾದದ್ದೇನೂ ಇಲ್ಲ, ಅದರಲ್ಲಿರುವ ಶಾಪವೆಲ್ಲವೂ ಕ್ರೂಜೆ ಮೇಲೆ ಜಡಿಯಲ್ಪಟ್ಟಿತು. ನಾವು ಕ್ರಿಸ್ತನನ್ನು ನಮ್ಮ ಜೀವನದ ಕರ್ತನಾಗಿ ಸ್ವೀಕರಿಸುವಾಗ, ಎಲ್ಲಾ ಶಾಪಗಳು ನಿವಾರಣೆಗೊಂಡವು(ನಾಶವಾದವು). ಹಾಗಿದ್ದಲ್ಲಿ ವಂಶಾವಳಿಯಿಂದಾಗುವ ಯಾವುದೇ ಶಾಪದ ಬಗ್ಗೆ ನಾವು ಹೇದರಬೇಕಿಲ್ಲ. ಮತ್ತು ನಮಗೆ ಅಬ್ರಹಾಮನಿಂದುಂಟಾದ ಆಶೀರ್ವಾದವಿದೆ (ಗಲಾತ್ಯ 3:14). ಆದ್ದರಿಂದ ನಾವು ಪವಿತ್ರಾತ್ಮನನ್ನು ನಂಬಿಕೆಯಿಂದ ಸ್ವೀಕರಿಸಬಹುದು.

ದೇವರಿಂದ ಅಬ್ರಹಾಮನಿಗೆ ಉಂಟಾದ ಆಶೀರ್ವಾದವು -"ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವದೆಂಬ ಶುಭವರ್ತಮಾನವನ್ನು ಮುಂಚಿತವಾಗಿಯೇ ತಿಳಿಸಿತು" (ಗಲಾತ್ಯ 3:8). ಆದ್ದರಿಂದ ಪವಿತ್ರಾತ್ಮನು ನಮ್ಮಲ್ಲಿ ಪ್ರವೇಶಿಸುವ ಉದ್ದೇಶವೇನೆಂದರೆ, ನಾವು ಭೇಟಿಯಾಗುವ ಪ್ರತಿಯೊಬ್ಬರಿಗೆ ನಾವು ಆಶೀರ್ವಾದದ ನೆಲೆಯಾಗಿರಬೇಕು. ಪವಿತ್ರಾತ್ಮಭರಿತನಾಗಿರುವ ಮನುಷ್ಯನ ಒಂದು ಗುರುತೇನೆಂದರೆ, ಆತನು ಭೇಟಿಯಾಗುವ (ಸಂಧಿಸುವ) ಪ್ರತಿಯೊಬ್ಬನಿಗೂ ಆತನು ಆಶೀರ್ವಾದವಾಗಿರುತ್ತಾನೆ. ಆತನು ಒಂದು ಮನೆಗೆ ಭೇಟಿಕೊಡುವಾಗ ಆ ಮನೆಗೆ ಆಶೀರ್ವಾದವಾಗುತ್ತಾನೆ. ಅನೇಕ ಕ್ರಿಸ್ತೀಯರು ಮನೆಗೆ ಭೇಟಿಕೊಡುವಾಗ, ಅಲ್ಲಿ ಗೊಂದಲ(ಗಲಿಬಿಲಿ) ತರುತ್ತಾರೆ. ಆದರೆ ದೈವಿಕ ಮನುಷ್ಯ ಆಶೀರ್ವಾದವನ್ನು ತರುತ್ತಾನೆ. ಒಂದು ಮನೆಯಲ್ಲಿ ಒಬ್ಬನು ಮಾನಸಾಂತರಪಟ್ಟು ಬದಲಾವಣೆ ಹೊಂದಿದರೆ ಆ ಮನೆಯಲ್ಲಿ ಮೊದಲು ಸ್ವಲ್ಪ ಮಟ್ಟಿಗೆ ಗಲಿಬಿಲಿ ಉಂಟಾಗುತ್ತದೆ. ಆದರೆ ಕಾಲಕ್ರಮೇಣವಾಗಿ ಆ ಮನೆಯಲ್ಲಿ ದೇವರ ಆಶೀರ್ವಾದ ಬರುತ್ತದೆ; ಮತ್ತು ಆ ಮನೆಯ ಅನೇಕ ಸದಸ್ಯರು ಬದಲಾವಣೆ ಹೊಂದುತ್ತಾರೆ. ಹೀಗೆ ಅಬ್ರಹಾಮನಿಂದುಟಾದ ಆಶೀರ್ವಾದದಲ್ಲಿ ನಾವು ಪಾಲು ಹೊಂದಲು ಕರೆಯಲ್ಪಟ್ಟಿದ್ದೇವೆ.