WFTW Body: 

ಆತ್ಮಿಕವಾಗಿರದೆ, ಧಾರ್ಮಿಕವಾಗಿದ್ದ ಮೂವರ ಬಗ್ಗೆ ಯೂದನು ತನ್ನ ಪತ್ರದಲ್ಲಿ ಮಾತಾಡುತ್ತಾನೆ. ಅವರೆಂದರೆ - ಕಾಯಿನ, ಬಿಳಾಮ ಮತ್ತು ಕೋರಹ (ಯೂದ 11). ಒಬ್ಬೊಬ್ಬರಾಗಿ ಅವರ ಬಗ್ಗೆ ತಿಳಿದುಕೊಳ್ಳೋಣ.

1. ಕಾಯಿನ

ಕಾಯಿನನು ನಾಸ್ತಿಕನಾಗಿರಲಿಲ್ಲ. ಅವನೊಬ್ಬ ಧಾರ್ಮಿಕ ಮನುಷ್ಯನಾಗಿದ್ದು ದೇವರಿಗೆ ಕಾಣಿಕೆಗಳನ್ನು ಅರ್ಪಿಸುವುದರಲ್ಲಿ ನಂಬಿಕೆ ಇಟ್ಟಿದ್ದನು (ಆದಿ. 4:3).  ಹೇಬೇಲನು ಕೂಡ ದೇವರಿಗೆ ಕಾಣಿಕೆಗಳನ್ನು ಅರ್ಪಿಸಿದನು. ಆದರೆ ಈ ಎರಡು ಕಾಣಿಕೆಗಳ ಹಾಗೂ ಕಾಯಿನ ಮತ್ತು ಹೇಬೇಲನ ನಡುವೆ, ಧಾರ್ಮಿಕತೆ ಮತ್ತು ಆತ್ಮಿಕತೆಯ ನಡುವೆ ಇರುವ ನರಕ ಮತ್ತು ಸ್ವರ್ಗದ ನಡುವಿನಷ್ಟು ವ್ಯತ್ಯಾಸವಿತ್ತು. ಕಾಯಿನ ಮತ್ತು ಹೇಬೇಲ ಜನರು ನಡೆದು ಬಂದಿರುವ ಧಾರ್ಮಿಕತೆಯ ಮತ್ತು ಆತ್ಮಿಕತೆಯ ಎರಡು ದಾರಿಗಳನ್ನು ಸಂಕೇತಿಸುತ್ತಾರೆ. ಕಾಯಿನನು ದೇವರಿಗೆ ಬಾಹ್ಯವಾಗಿ ಕಾಣಿಕೆಗಳನ್ನು (ಹಣ, ಸೇವೆ, ಸಮಯ ಇತ್ಯಾದಿಗಳನ್ನು) ಅರ್ಪಿಸುವವರ ಥರದವನಾಗಿದ್ದಾನೆ.  ಹೇಬೇಲನು, ಕುರಿಮರಿಯನ್ನು ಕೊಂದು ವೇದಿಕೆಯ ಮೇಲೆ ಇಟ್ಟಾಗ ಸಾಂಕೇತಿಕವಾಗಿ ತನ್ನನ್ನೇ ಬಲಿಯನ್ನಾಗಿ ಅರ್ಪಿಸಿದನು. 

ಧಾರ್ಮಿಕ ಜನರು ಕಾಣಿಕೆಗಳನ್ನು ಕೊಡಬಹುದು, ಪಾರ್ಥಿಸಬಹುದು ಮತ್ತು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಬಹುದು.  ಆದರೆ ತಮ್ಮನ್ನೇ ಅರ್ಪಿಸುವುದೇನೆಂದು ಅವರಿಗೆ ತಿಳಿದಿಲ್ಲ. ಅವರು ತಮ್ಮ ದಶಮಾಂಶವನ್ನು ಸರಿಯಾಗಿ ಕೊಡಬಹುದು. ಆದರೆ, ಶೋಧನೆಯ ಸಮಯದಲ್ಲಿ ತಮ್ಮ ಸ್ವಾರ್ಥವನ್ನು ಅವರು ಸಾಯಿಸುವುದಿಲ್ಲ.  ಅದೇ ಹೊಸ ಮತ್ತು ಹಳೆಯ ಒಡಂಡಿಕೆಗಳ ನಡುವಿನ ವ್ಯತ್ಯಾಸ. ನಿನ್ನ ಸ್ವಾರ್ಥಕ್ಕೆ ಸಾಯದೆ ನೀನು ಹಳೆಯ ಒಡಂಬಡಿಕೆಯನ್ನು ಪ್ರವೇಶಿಸಬಹುದು, ಆದರೆ ಸ್ವಾರ್ಥಕ್ಕೆ ಸಾಯದೆ ಹೊಸ ಒಡಂಬಡಿಕೆಯನ್ನು ಪ್ರವೇಶಿಸುವುದು ಅಸಾಧ್ಯ. ದಶಾಂಶವನ್ನು ಅರ್ಪಿಸಲು ಯೇಸು ಬಂದಿಲ್ಲ. ಆದರೆ ದೇವರು ಸ್ವೀಕರಿಸುವಂಥಹ ಮತ್ತು ದೇವರಿಗೆ ಮೆಚ್ಚುಗೆಯಾಗುವ ಸ್ವ-ಬಲಿದಾನವನ್ನು ಮಾಡಲು ಯೇಸು ಬಂದನು.

 

ಕಾಯಿನ ಮತ್ತು ಹೇಬೇಲರು ದೇವರನ್ನು ಸಂಧಿಸುವ ವಿಶಾಲ ಧಾರ್ಮಿಕ ದಾರಿ ಮತ್ತು ನಿಜವಾದ(ಕಿರಿದಾದ) ಆತ್ಮಿಕತೆಯ ದಾರಿಗಳನ್ನು ಸಂಕೇತಿಸುತ್ತಾರೆ. ಸ್ವಾರ್ಥದ ಸಾವಿಲ್ಲದೆ ನೀನೊಬ್ಬ ಸೇವಕನಾಗಿರಬಹುದು. ಆದರೆ ಅದಿಲ್ಲದೆ ನೀನೊಬ್ಬ ಮಗನಾಗಿರಲಾರೆ. ಸ್ವರ್ಗದ ಬೆಂಕಿಯ ಮೂಲಕ ದೇವರು ಹೇಬೇಲನ ಕಾಣಿಕೆಯನ್ನು ಸ್ವೀಕರಿಸಿದರು (ಬಲಿಗೆ ಉತ್ತರ ಕೊಟ್ಟರು). ಆದರೆ ಕಾಯಿನನ ಕಾಣಿಕೆಯ ಮೇಲೇ ಏನೂ ಬೀಳಲಿಲ್ಲ. ಮನುಷ್ಯನೊಬ್ಬನು ಪದೇ ಪದೆ ಸ್ವಾರ್ಥಕ್ಕೆ ಸಾಯುವಾಗ, ಆತನ ಜೀವನ ಮತ್ತು ಸೇವಾಕಾರ್ಯದಲ್ಲಿ ಸ್ವರ್ಗದ ಬೆಂಕಿಯಿರುವುದು. ಇದು ಅಪ್ಪಟವಾದ ಆತ್ಮದ ದೀಕ್ಷಾಸ್ನಾನ ಮತ್ತು ಯೇಸುವು ಮೊದಲು ಯಾರ ಬೇರುಗಳನ್ನು ತುಂಡರಿಸಿ ಅವರಿಗೆ ಕೊಡುವನೆಂದು ಸ್ನಾನಿಕ ಯೋಹಾನ ಹೇಳಿದ ಬೆಂಕಿ. ಅದೇ ರೀತಿ, ಕೇವಲ ಬಾಹ್ಯವಾಗಿ ಸರಿಯಾದವುಗಳನ್ನು ಮಾಡುವ ಸಹೋದರನು ಹೊರಗೆ ಒಳ್ಳೆಯ ಜೀವನವನ್ನು ಹೊಂದಿರಬಹುದು, ಆದರೆ ಬೆಂಕಿ ಮತ್ತು ಸ್ವರ್ಗದ ಅಭಿಷೇಕ ಅವನಲ್ಲಿರುವುದಿಲ್ಲ. ಭಾವನೆಗಳನ್ನು ಕೆದಕುವ ಸೈತಾನನ ನಕಲಿ ದೀಕ್ಷಾಸ್ನಾನವನ್ನು (ಬಹುತೇಕ ಜನರು ಇಂದು ಆನಂದಿಸುವಂಥದ್ದು) ಶಿಲುಬೆಯ ದಾರಿಯನ್ನು ಆರಿಸಿದ ತನ್ನ ಶಿಷ್ಯರ ಮೇಲೆ ಯೇಸು ಕಳುಹಿಸುವ ನಿಜವಾದ(ಶುದ್ದ) ಆತ್ಮ ಮತ್ತು ಬೆಂಕಿಯ ದೀಕ್ಷಾಸ್ನಾನಕ್ಕೆ ಹೋಲಿಸಿದರೆ,  ಅದು ನಿಷ್ಪಯೋಜಕ ತ್ಯಾಜ್ಯ.

 

2. ಬಿಳಾಮ

ಬಿಳಾಮ ಮತ್ತೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ದೇವರ ಸೇವೆ ಮಾಡುವ ಬೋಧಕನಾಗಿರುವುದರ ಜೊತೆಗೆ, ಹಣ ಮಾಡುವುದರಲ್ಲಿ ಮತ್ತು ಜಗತ್ತಿನ ಶೇಷ್ಟ ವ್ಯಕ್ತಿಗಳನ್ನು ಸಂಧಿಸುವುದರಲ್ಲಿ (ಭೇಟಿ ಮಾಡುವುದರಲ್ಲಿ) ಆಸಕ್ತನಾಗಿದ್ದನು (ಅರಣ್ಯ 22). ಅವನು ಕರ್ತನ ಹೆಸರಿನಲ್ಲಿ ತನಗೆ ಗೌರವ ಮತ್ತು ಆರ್ಥಿಕ ಲಾಭವನ್ನು ಪಡೆಯಲಿಚ್ಚಿಸಿದನು.  ಇಂದು ಬಿಳಾಮನಂಥಹ ಅನೇಕ ಸುಳ್ಳು ಪ್ರವಾದಿಗಳಿದ್ದಾರೆ. ಮಾತು, ರೀತಿ(ಪ್ರಕಾರ) ಮತ್ತು ಅವರ ಸಿದ್ಧಾಂತಗಳೆಲ್ಲ ಸರಿಯಾಗಿ ಇರುತ್ತವೆ, ಆದರೆ ಅವರೆಲ್ಲರು ಬಿಳಾಮನ ಆತ್ಮದಿಂದ (ಹಣ ಮತ್ತು ಗೌರವವನ್ನು ಪ್ರೀತಿಸುವುದು) ಪ್ರೇರೇಪಿಸಲ್ಪಟ್ಟವರೆಂದು, ವಿವೇಚನೆಯಿಲ್ಲದ ವಿಶ್ವಾಸಿಗಳು ಗುರುತಿಸಲಾರರು. ಇವರು ಯಾರೆಂದರೆ, ಪೌಲನು ಫಿಲಿಪ್ಪಿ 2:21 ರಲ್ಲಿ ಬರೆದ ಹಾಗೆ ಸ್ವಕಾರ್ಯಗಳಲ್ಲಿ ಮನಸ್ಸಿಡುವವರೆ.  ಈ ಸಿದ್ಧಾಂತದಿಂದ ಜೀವಿಸುವ ಜನರು ಪೆರ್ಗಾಮದ ಸಭೆಯಲ್ಲಿದ್ದರು (ಪ್ರಕ 2:14). ಸಭೆಯಲ್ಲಿ ಗೌರವ ಮತ್ತು ಹಣವನ್ನು ಕಂಡುಕೊಳ್ಳುವುದರ ನಡುವೆ ವ್ಯತ್ಯಾಸವಿಲ್ಲ. ಎರಡೂ ಬಿಳಾಮನ ಆತ್ಮದ ವಿಭಿನ್ನತೆಗಳು.

3. ಕೋರಹ

ಕೋರಹನು ಮತ್ತೊಬ್ಬ ಧಾರ್ಮಿಕ ಮನುಷ್ಯನಾಗಿದ್ದನು ಅವನು ಯಾಜಕ ಜನಾಂಗದ ಲೇವಿಯವನಾಗಿದ್ದನು (ಅರಣ್ಯ 16). ಆದರೆ ದೇವರು ಅವನಿಗಾಗಿ ನೇಮಿಸಿದ ಸೇವಾಕಾರ್ಯದಲ್ಲಿ ಅವನು  ಅತೃಪ್ತಿಯಾಗಿದ್ದನು. ಮೋಶೆಯಂತೆ ಅವನು ಆಧಿಕವಾಗಿ ಪ್ರಮುಖನಾಗಿರಲು ಆಶೆಪಟ್ಟನು. ಈ ದುರಾಶೆ (ಧಾರ್ಮಿಕತೆಯ ರೂಪದ ನಿಲುವಂಗಿಯ ಜೊತೆ) ಅಂತಿಮವಾಗಿ ಅವನ ಅವನತಿಗೆ ಕಾರಣವಾಯಿತು. ಅವನು ಮತ್ತು ಅವನ ಜೊತೆ-ದಂಗೆಕೋರರಾದ ದಾತಾನ್ ಮತ್ತು ಅಬಿರಾಮ್ ಮತ್ತು ಅವರ ಕುಟುಂಬದವರು ಜೀವಂತವಾಗಿ ನರಕಕ್ಕೆ ಹೋದವರೆಂದು ಬೈಬಲ್ ದಾಖಲಿಸುತ್ತದೆ. ತಾನಾಗಿಯೇ ತನ್ನ ಜನರ ಮೇಲೆ ನೇಮಿಸಿದ ಅಧಿಕಾರಿಯ ವಿರುದ್ಧದ ದಂಗೆಯ ಪಾಪವನ್ನು ಕರ್ತನು ಅಷ್ಟು ಗಂಭೀರವಾಗಿ ತೆಗೆದುಕೊಂಡನು.

ಇಂದಿನ ಬಹುತೇಕ ಹಿರಿಯರು, ಬೋಧಕರು ಮತ್ತು ಪಾಲಕರು ಸ್ವತಹ ನೇಮಿಸಲ್ಪಟ್ಟವರು. ಅವರ ವಿರುದ್ಧ ದಂಗೆಯೇಳುವುದು ಗಂಭೀರವಾಗಿರದಿರಬಹುದು. ಅದು ಕೆಲವು ಸಲ ಬೇಕಾಗಿರಬಹುದು ಕೂಡ. ಆದರೆ ದೇವರಿಂದ ನೇಮಿಸಲ್ಪಟ್ಟವರ ವಿರುದ್ಧ ದಂಗೆಯೇಳುವುದು ದೇವರಿಂದ ಕಠಿಣವಾದ ನ್ಯಾಯತೀರ್ಪನ್ನು ತರುವುದು.  ಆತ್ಮಿಕ ಮನುಷ್ಯನು ಹಾಗೆ ಮಾಡುವುದನ್ನು ಕನಸಲ್ಲೂ ನೆನೆಸಲಿಕ್ಕಿಲ್ಲ. ಆದರೆ ಧಾರ್ಮಿಕ ಮನುಷ್ಯರು ಹಾಗೆ ನೆನೆಸುತ್ತಾರೆ.  ಧಾರ್ಮಿಕತೆಗೆ ಜೊತೆ ನೀಡುವ ಅತ್ಮಿಕ ಮೂರ್ಖತನ ಅಂಥಹದ್ದಾಗಿದೆ.

ಸಭೆಯಲ್ಲಿನ ಇತರರೊಡನೆ ಅನಾರೋಗ್ಯಕರವಾದ ಸ್ಪರ್ಧೆಯಲ್ಲಿರುವವರನ್ನು ಕೋರಹನು ಸಂಕೇತಿಸುತ್ತಾನೆ. ಸಭೆಯಲ್ಲಿ ದೇವ-ಭಯದ ಸಹೋದರನೊಬ್ಬನನ್ನು ಹೊಗಳಲು ಮತ್ತು ಮೆಚ್ಚಲು ನಿನಗೆ ಕಷ್ಟವಾಗುವುದಾದರೆ, ನಿನ್ನಲ್ಲಿ ಸ್ವಲ್ಪವಾದರೂ ಕೋರಹನ ಸ್ವಭಾವವಿದೆ. ನೀನು ಅವನನ್ನು ಟೀಕಿಸುವಾಗ ನಿನ್ನಲ್ಲಿ ಕೋರಹನ ಸ್ವಭಾವ ತುಂಬಾ ಇದೆ. ಅವನನ್ನು ಟೀಕಿಸುವುದನ್ನು ನೀನು ಕೇಳುವುದಾದರೆ, ನೀನು ದೇವರು ನ್ಯಾಯತೀರ್ಪಿಗೆ ಒಳಪಡಿಸಿದ, ಕೋರಹನನ್ನು ಸೇರಿದ 250 ದಂಗೆಕೋರರಲ್ಲಿ ಒಬ್ಬನು. 

ಧಾರ್ಮಿಕತೆ ಮತ್ತು ಆತ್ಮಿಕತೆಯ ನಡುವಿನ ವ್ಯತ್ಯಾಸವನ್ನು ನಾವು ವಿವೇಚಿಸದಿದ್ದರೆ ನಾವೆಂದಿಗೂ ಆತ್ಮಿಕರಾಗಲಾರೆವು. ಇದು ಈ ಹೊತ್ತಿನ ಅಗತ್ಯತೆ.