ದೇವರು ಮಾಡಿದ ತಾಯಂದಿರು

ಬರೆದಿರುವವರು :   ಡಾ!! ಅನ್ನಿ ಪೂನೆನ್ ಭಾಗಗಳು :   ಮನೆ
  Download Formats:

ಅಧ್ಯಾಯ
ಪುರವಣೆ ಎರಡು -ಹೊಸ ತಾಯಂದಿರಿಗೆ ಕೆಲವು ಸಲಹೆಗಳು

ಹುಟ್ಟಿದ ಮಗುವಿನ ಬಗ್ಗೆ ತೆಗೆದುಕೊಳ್ಳಬಹುದಾದಂತ ಎಚ್ಚರಿಕೆ. ಹೊಸದಾಗಿ ಮಗು ಹುಟ್ಟಿದ ತಕ್ಷಣ ಅದನ್ನು ವೈದ್ಯರು ಅಥವಾ ದಾದಿಯರು ನೋಡಿಕೊಳ್ಳತ್ತಾರೆ. ಆ ನಂತರ ನಿಮ್ಮ ಮಗುವನ್ನು ಪ್ರತಿ ತಿಂಗಳು ವೈದ್ಯಕೀಯ ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕು. ವೈದ್ಯರು ಕೊಡಿಸಬಹುದಾದಂತ ರೋಗ ನಿರೋಧಕ ಔಷಧಿಗಳ ಬಗ್ಗೆ ಸಲಹೆ ನೀಡುತ್ತಾರೆ.

ಮೊದಲ ತಿಂಗಳಲ್ಲಿ ನಿಮ್ಮ ಮಗು ಬಹಳಷ್ಟು ಸಮಯ ನಿದ್ದೆ ಮಾಡುತ್ತದೆ. ಮಗುವಿನ ಬೇಡಿಕೆಗಳಲ್ಲಿ ಕೆಲವು ನಿದ್ದೆ, ಬೆಚ್ಚಗಿರುವುದು, ಅನುಕೂಲ ಮತ್ತು ಆಹಾರ.ನಿದ್ದೆ

ಮೊದಲು ತಿಂಗಳಲ್ಲಿ ಮಗುವು ತನ್ನ ಆಹಾರಕ್ಕಾಗಿ ಮಾತ್ರ ಎದ್ದೇಳಬಹುದು. ಮಗು ಬೆಳೆಯುತ್ತಾ ಬರುವಾಗ ಬಹಳಷ್ಟು ಸಮಯ ಎಚ್ಚರವಾಗಿರುತ್ತದೆ.

ಮಗುವಿಗೆ ಸಾಕಷ್ಟು ಗಾಳಿ ಬೆಳಕಿರುವ ಕೋಣೆಯಲ್ಲಿ ನಿದ್ದೆ ಮಾಡಲು ಮಲಗಿಸಿ (ಯಾವ ಭಾರವಿಲ್ಲದ ) ಸೊಳ್ಳೆ ಮತ್ತು ನೊಣಗಳಿಂದ ರಕ್ಷಿಸಲು ಸೊಳ್ಳೆ ಪರದೆಯಲ್ಲಿ ಮಲಗಿಸಿ.ತೂಗಿ ಮಲಗಿಸುವಂತಹದು ಅವಶ್ಯವಿಲ್ಲ. ಯಾಕಂದರೆ ಮುಂದೆ ಅದು ಅಭ್ಯಾಸವಾಗಿ, ನಿಲ್ಲಿಸಲು ಕಷ್ಟವಾಗುತ್ತದೆ.

ನಿಮ್ಮ ಮಗುವನ್ನು ಬೊರಲು ಮಲಗಿಸಿದರೆ ಅದು ಆ ಮಗುವಿಗೆ ಸುಖಕರವಾಗಿರುತ್ತದೆ. ಈ ರೀತಿ ಮಲಗಿಸುವುದರಿಂದ ವಾಂತಿಯಾದಾಗ ಉಸಿರುಕಟ್ಟುವುದರಿಂದ ರಕ್ಷಿಸಬಹುದು. ಮತ್ತು ಮಗುವು ಹೊಟ್ಟೆಯ ನೋವಿನಿಂದ ಬಿಡುಗಡೆಯಾಗುತ್ತದೆ. ಅದರ ಮಗುವಿನ ತಲೆಯೂ ಸಹ ಚಪ್ಪಟೆಯಾಗದೆ ಆಕಾರದಲ್ಲಿ ಇರುತ್ತದೆ. ಆದರೆ ಮಗು ಬೊರಲು ಮಲಗುವಾಗ ನೀವು ಆಗಾಗ ಮಗುವನ್ನು ಗಮನಿಸಬೇಕು.

ಸುಖಕರವಾಗಿ ಮತ್ತು ಬೆಚ್ಚಗೆ ಇಡುವುದು

ದೊಡ್ಡವರಿಗೆ ಇರುವಂತೆ ಒಂದು ಸಣ್ಣ ಮಗುವಿಗೆ ಚಳಿಯನ್ನು ತಡೆಯುವಂತೆ ದೇಹದಲ್ಲಿ ಬೇಕಾದ ಸಮಥ೯ಕ ರಚನೆ ಇರುವುದಿಲ್ಲ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಗುವಿಗೆ

ಅತಿಯಾದ ಉಡುಪನ್ನು ತೊಡಿಸಬಾರದು. ತೆಳುವಾದ ಹತ್ತಿಯ ಚೌಕದ ಬಟ್ಚೆ ಸಾಕು.

ಉಣ್ಣೆಯ ಬಟ್ಟೆಗಳು ಸಹ ಮಗುವಿಗೆ ಚಮ೯ವನ್ನು ಕೆಣಕಿಸಬಹುದು.ಆದ್ದರಿಂದ ಉಣ್ಣೆಯ ಬಟ್ಟೆಯನ್ನು ಉಪಯೋಗಿಸುವಾಗ ಒಳಗೆ ಹತ್ತಿಯ ಬಟ್ಟೆಯನ್ನು ಸಹ ಹಾಕಲು ಖಚಿತಪಡಿಸಿಕೊಳ್ಳಬೇಕು. ಮಗುವು ಬೆಚ್ಚಗೆ ಅಥವಾ ತಣ್ಣಗೆ ಇದೆ ಎಂದು ತಿಳಿದುಕೊಳ್ಳಲು ಮಗುವಿನ ಕೈಗಳನ್ನು ಮತ್ತು ಕಾಲುಗಳನ್ನು ಮುಟ್ಟಿ ನೋಡಬೇಕು.

ತಲೆಗೆ ಟೋಪಿಯನ್ನು ಉಪಯೋಗಿಸುವಾಗ ಕೈಯಿಂದ ಹಾಕಿದ ಹೆಣೆಗೆಯ ಕೆಲಸದ್ದು ಆದರೆ ಒಳ್ಳೆಯದು. ಯಾಕಂದರೆ ಆಕಸ್ಮಿಕವಾಗಿ ಅದು ಮುಖದ ಮೇಲೆ ಬಿದ್ದರೂ ಮಗು ಉಸಿರಾಡಲು ಆಗಬೇಕು.

ನಿಮ್ಮ ಮಗು ಎಚ್ಚರವಾದಾಗ ಅದರ ಹಾಸಿಗೆಯನ್ನು ತೇವ ಮಾಡಿಕೊಂಡು ಅಹಿಯಕರವಾಗಿದೆಯೋ ಎಂದು ಗಮನಿಸಬೇಕು. ಮಗುವಿನ ಕಟ್ಟುವಂತ ಚೌಕಾಕಾರದ ಬಟ್ಟೆಗಳನ್ನು ಚೆನ್ನಾಗಿ ಒಗೆದು ಬಿಸಿಲಿನಲ್ಲಿ ಒಣಗಿಸಬೇಕು.ಸೋಪಿನ ಕಣಗಳು ಮಗುವಿನ ಚಮ೯ವನ್ನು ಕೆಣಕಿಸುತ್ತದೆ. ಸಾಧ್ಯವಾದರೆ ವಾರಕ್ಕೆ ಒಂದಾವತಿ೯ ಎಲ್ಲಾ ಚೌಕದ ಬಟ್ಟೆಗಳನ್ನು ನೀರಿನಲ್ಲಿ ಕುದಿಸಿ.

ಮಗುವಿಗೆ ಸ್ನಾನ ಮಾಡಿಸುವುದು

ಬಹಳ ಬಿಸಿಯ ಸ್ನಾನ ಮಗುವಿಗೆ ಹಾನಿಕರ. ನಿಮ್ಮ ಮಗುವಿಗೆ ಪ್ರತ್ಯೇಕವಾದ ಸಾಬೂನು ಮತ್ತು ಟವಲು ಇಡಿರಿ. ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಸಿ ಮತ್ತು ಸಾಧ್ಯವಾದರೆ ಪ್ರತಿ ಸಾರಿ ಸ್ನಾನ ಮಾಡಿಸುವಾಗ ಎಣ್ಣೆ ಹಚ್ಚಿ. ಸ್ನಾನದ ನಂತರ ತಕ್ಷಣ ಶರೀರವನ್ನು ತಣ್ಣಗೆ ಮಾಡುವಂತೆ ವಸ್ತುಗಳಿಗೆ ಪ್ರದಶಿ೯ಸಬೇಡಿ. ಮತ್ತು ಮಗುವಿನ ಮೂಗು, ಬಾಯಿ ಮತ್ತು ಕಿವಿಗಳಲ್ಲಿ ನೀರು ಹೋಗದಂತೆ ಎಚ್ಚರಿಕೆ ವಹಿಸಿರಿ.

ಮೂಗಿನಲ್ಲಿ ಮತ್ತು ಕಿವಿಗಳಲ್ಲಿ ಕಾಣುವಂತ ಕೂಳೆಗಳನ್ನು ಶುಚಿಮಾಡಿ. ಆದರೆ ಮಗುವಿಗೆ ಹಾನಿಮಾಡುವಂತ ರೀತಿಯಲ್ಲಿ ಮಾಡಬೇಡಿ. ಒಂದು ವೇಳೆ ಮೂಗು ಕಟ್ಟಿದರೆ ಅದನ್ನು ಮೃದುವಾಗಿ ಹತ್ತಿಯ ಬಟ್ಟೆಯಿಂದ ಅಥವಾ ಮೃದುವಾದ ಹೀರುವ ಬಟ್ಟೆಯಿಂದ ಶುಚಿಮಾಡಬಹುದು. ಕಿವಿಗಳನ್ನು ಸಹ ಇದೇ ರೀತಿಯಾಗಿ ಶುದ್ಧಮಾಡಬಹುದಪ..

ಮಕ್ಕಳು ಸಂಪೂಣ೯ವಾಗಿ ವಾಸಿಯಾಗುವ ತನಕ ಅದನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅದು ಆರುವ ತನಕ ಅದರ ಸುತ್ತ ಶುಚಿಯಾದ ಮತ್ತು ಮೃದುವಾದ ಪಟ್ಟಿಯನ್ನು ಮಗುವಿನ ಹೊಟ್ಟೆಯ ಸುತ್ತ ಒಣಗಿಸಬೇಕು.

ಮಗು ಸ್ವಲ್ಪ ಅಸ್ವಸ್ಥವಾಗಿದ್ದರೂ ಅದಕ್ಕೆ ಸ್ನಾನ ಮಾಡಿಸಿ ಶೀತಕ್ಕೆ ಆಸ್ಪದ ಕೊಡುವ ಬದಲು ಮೈ ಕೈಗಳನ್ನು ಒದ್ದೆ ಬಟ್ಟೆಯಿಂದ ಶುಚಿಮಾಡುವುದು ಉತ್ತಮ.

ಪೋಷಣೆ

ತಾಯಿಯ ಎದೆ ಹಾಲಿಗೆ ಪ್ರತಿಯಾದದ್ದು ಯಾವುದೂ ಇಲ್ಲ. ಇದು ನಿಮ್ಮ ಮಗು ಕುಡಿಯುವ ಎಲ್ಲಾದಕ್ಕಿಂತ ಉತ್ತಮವಾದ ಹಾಲು.ಎದೆ ಹಾಲಿನಲ್ಲಿ ರಕ್ಷಣಾ ವಸ್ತು ಇರುವುದರಿಂದ ಅನೇಕ ಅಂಟು ರೋಗದಿಂದ ನಿಮ್ಮ ಮಗುವನ್ನು ತಡೆಯುತ್ತದೆ. ಎದೆ ಹಾಲನ್ನು ಕುಡಿದ ಮಕ್ಕಳು ಚೆನ್ನಾಗಿ ಬೆಳೆಯುತ್ತವೆ. ತುಂಬಾ ಸಂತೃಪ್ತಿಯಾಗಿರುತ್ತವೆ. ನೆಮ್ಮದಿಯಾಗಿರುತ್ತವೆ. ಮತ್ತು ಸೀಸದ ಹಾಲನ್ನು ಕುಡಿಯುವ ಮಕ್ಕಳ ಹಾಗೆ ಬೇಗನೆ ಕರುಳಿನ ರೋಗಕ್ಕೆ ಒಳಪಡುವುದಿಲ್ಲ.

ಪ್ರಾರಂಭದಲ್ಲಿ ನಿಮ್ಮ ಮಗುವಿಗೆ ಪ್ರತಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಮುಂಜಾನೆ ಆರರಿಂದ ಮಧ್ಯರಾತ್ರಿಯವರೆಗೆ ಹಾಲುಣಿಸಿರಿ. ಮೊದಲ ತಿಂಗಳ ನಂತರ ನಿಮ್ಮ ಮಗುವು ರಾತ್ರಿ ನಿದ್ರಿಸಲು ಆಶಿಸುವುದನ್ನು ಕಾಣುವಿರಿ. ಆಗ ರಾತ್ರಿಯ ವೇಳೆ ಹಾಲು ಕುಡಿಸುವುದನ್ನು ನೀವು ನಿಲ್ಲಿಸಬಹುದು. ಆದರೆ ಮಗುವು ಹಸಿವೆಯಿಂದ ಒಂದು ವೇಳೆ ಅತ್ತರೆ ಉಪವಾಸವಿಡಬೇಡಿರಿ.

ಮೊಲೆಯುಣಿಸುವ ತಾಯಿಯು ಕಬ್ಬಿಣದ ದಾತುವಿನಿಂದ ತಯಾರಿಸಿದ ಮಾತ್ರೆಗಳು ಮತ್ತು ಜೀವಸತ್ವವನ್ನು ಒಳಗೊಂಡಿರುವ ಒಳ್ಳೆಯ ಊಟ ಮಾಡಬೇಕು. ಆಕೆಯು ಪ್ರತಿ ದಿನ ಒಳ್ಳೆಯ ವಿಶ್ರಾಂತಿ ತೆಗೆದುಕೊಳ್ಳಬೇಕು. ಆಕೆಯು ಬಿಸಿಯಾದ ಎಣ್ಣೆಯಿಂದ ಕೂಡಿದ ಆಹಾರ ಚಾಕಲೇಟ್ ಭೇದಿ ಔಷದಿ ಶಾಮಕ ಔಷದಿ ತಲೆನೋವಿನ ಮಾತ್ರೆ ಮತ್ತು ಬೇರೆ ಯಾವುದೆ ಔಷದಿಗಳನ್ನು ತೆಗೆದುಕೊಳ್ಳಬಾರದು. ಯಾಕಂದರೆ ಇವು ಹಾಲಿನ ಮೂಲಕ ಮಗುವಿಗೆ ಹೋಗಿ ಹಾನಿಯನ್ನು ಉಂಟುಮಾಡಬಹುದು. ಮಗುವಿಗೆ ಹಾಲು ಕುಡಿಸುವ ಮೊದಲು ಮತ್ತು ನಂತರ ಸ್ತನಗಳನ್ನು ತೊಳೆಯಬೇಕು. ನಿಮ್ಮ ಸ್ತನಗಳಲ್ಲಿ ಹಾಲು ಕಟ್ಟದಂತೆ ನೋಡಿಕೊಳ್ಳಬೇಕು. ಯಾಕಂದರೆ ಅದು ಕುರುವನ್ನು ಉಂಟುಮಾಡುತ್ತದೆ.

ಸೀಸೆಯ ಮೂಲಕ ಪೋಷಣೆ

ನಿಮ್ಮಲ್ಲಿ ಸಾಕಷ್ಟು ಎದೆ ಹಾಲು ಇದ್ದರೆ ನಿಮ್ಮ ಮಗುವಿಗೆ ಆರರಿಂದ ಒಂಬತ್ತು ತಿಂಗಳವರೆಗೆ ಸೀಸೆಯ ಹಾಲನ್ನು ಪ್ರಾರಂಭಿಸುವುದು ಅವಶ್ಯವಿಲ್ಲ.ಹಸುವಿನ ತಾಜಾ ಹಾಲನ್ನು ಉಪಯೋಗಿಸುವಿದಾದರೆ ಅದನ್ನು ಚೆನ್ನಾಗಿ ಕುದಿಸಬೇಕು. ಹಾಲಿನ ಪುಡಿ ಸಾಧಾರಣವಾಗಿ ತಾಜಾ ಮತ್ತು ಕ್ರಮಿಗಳಿಂದ ದೂರವಿರುತ್ತದೆ. ಆದರೆ ಹಾಲಿನ ಪುಡಿಯನ್ನು ಕೊಳ್ಳುವಾಗ ಮುಕ್ತಾಯದ ತಾರೀಖನ್ನು ಹಾಲಿನ ಡಬ್ಬದ ಮೇಲೆ ಗಮನಿಸಬೇಕು. ಕುಡಿಯುವ ನೀರು ಸಹ ಕುದಿಸಿರಬೇಕು.

ದೇಹದ ಪ್ರತಿ ಕಿಲೊ ಗ್ರಾಂ ತೂಕಕ್ಕೆ ಮಗುವಿಗೆ ಸಾಧಾರಣವಾಗಿ 125 ಮಿಲಿ ಲೀಟರ್ ನಷ್ಟು ತಾಜಾ ಹಾಲು 75 ಮಿಲಿ ಲೀಟರ್ ನಷ್ಟು ನೀರು ಬೇಕಾಗುತ್ತದೆ. ಆದ್ದರಿಂದ 3 ಕಿಲೊ ಗ್ರಾಂ ತೂಕವಿರುವ ಮಗುವಿಗೆ ದಿನಕ್ಕೆ ಸುಮಾರು 400 ಮಿಲಿ ಲೀಟರ್ ತಾಜಾ ಹಾಲು 200 ಮಿ.ಲೀಟರ್ ನಷ್ಟು ನೀರು ಜೊತೆಗೆ ಎರಡು ಚಮಚ ಸಕ್ಕರೆ. ಇದು ದಿನಕ್ಕೆ ಐದು ಭಾಗಗಳಾಗಿ ವಿಂಗಡವಾಗಬೇಕು. ( ಒಂದು ವೇಳೆ ನೀವು ಮಗುವಿಗೆ ಹಾಲಿನ ಪುಡಿಯನ್ನು ಉಪಯೋಗಿಸುವುದಾದರೆ ಆ ಡಬ್ಬದ ಮೇಲಿರುವ ಸೂಚನೆಯನ್ನು ಅನುಸರಿಸಿರಿ.

ಮಗುವು ಬೆಳೆಯುತ್ತಾ ಹೋಗುವಾಗ ಮಗುವಿಗೆ ಹೆಚ್ಚು ಹಾಲು ಮತ್ತು ಕಡಿಮೆ ನೀರು ಬೇಕಾಗುತ್ತದೆ. ಬೇಸಿಗೆಯ ಕಾಲದಲ್ಲಿ ಅಥವಾ ಮಗುವಿಗೆ ಭೇದಿ ಇರುವಾಗ ಅಥವಾ ಜ್ವರ ಇರುವಾಗ ನೀವು ಮಗುವಿನ ಪೋಷಣೆಯಲ್ಲಿ ನೀರಿನ ಅಂಶವನ್ನು ಹೆಚ್ಚಿಸಬೇಕು.

ಭಾರತದಂತಹ ಉಷ್ಣವಲಯಗಳಲ್ಲಿ ಕ್ರಿಮಿಗಳು ಬಹಳ ಬೇಗನೆ ಉತ್ಪತ್ತಿಯಾಗಿರುತ್ತವೆ. ಹಾಲು ಕುಡಿಸುವ ಸೀಸೆಗಳನ್ನು ಸುಮಾರು ಹತ್ತು ನಿಮಿಷಗಳವರೆಗೂ ಕುದಿಸಬೇಕು. ಮತ್ತು ಅದರ ಮೊಲೆ ತೊಟ್ಟನ್ನು ಬೇರೆ ಬೆಚ್ಚನೆಯ ಉಪ್ಪಿನ ನೀರಿನಲ್ಲಿ ಕುದಿಸಬೇಕು. ನೀವು ಕುದಿಸಿದ ಸೀಸೆಯ ಒಳಭಾಗವಾಗಲಿ ಅಥವಾ ಮೊಲೆ ತೊಟ್ಟನ್ನು ಆಗಲಿ ಮುಟ್ಟದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ಮಗುವಿಗೆ ಹಾಲು ಕೊಡುವ ಮುನ್ನ ಹಾಲು ತುಂಬಾ ಬಿಸಿಯಾಗಿರದಂತೆ ಅದನ್ನು ಪರೀಕ್ಷಿಸಿ ನೋಡಬೇಕು. ಇಲ್ಲವಾದರೆ ಮಗು ನಾಲಿಗೆಯನ್ನು ಸುಟ್ಟುಕೊಳ್ಳುತ್ತದೆ.

ಮೊದಲನೆಯ ತಿಂಗಳ ನಂತರ ಮಗುವಿಗೆ ಜೀವಸತ್ವದ ವಿಟಮಿನ್ ಡ್ರಾಪ್ಸ ಮತ್ತು ಹಣ್ಣಿನ ರಸವನ್ನು ಕೊಡಬಹುದು. ಹಣ್ಣಿನ ರಸವನ್ನು ಚೆನ್ನಾಗಿ ಸೋಸಬೇಕು.

ಸಾಧಾರಣವಾದ ಮುನ್ನೆಚ್ಚರಿಕೆಗಳು

ಶೀತ ಮತ್ತು ಸಾಂಕ್ರಾಮಿಕ ರೋಗವುಳ್ಳ ವ್ಯಕ್ತಿಗಳು ನಿಮ್ಮ ಮಗುವಿನ ಬಳಿಗೆ ಬರಲು ಅನುಮತಿಸಬೇಡಿ. ಒಂದು ವೇಳೆ ನಿಮಗೆ ಶೀತವಿದ್ದರೆ ಮಗುವಿಗೆ ಹಾಲು ಕುಡಿಸುವಾಗ ನಿಮ್ಮ ಬಾಯನ್ನು ಮತ್ತು ಮೂಗನ್ನು ಮುಚ್ಚಿಕೊಳ್ಳಿರಿ.

ನಿಮ್ಮ ವೈದ್ಯರಿಗೆ ತಿಳಿಸಬೇಕಾದ ಕೆಲವು ಸಂಗತಿಗಳು.
 • 1 ಮಗುವಿಗೆ ಕಣ್ಣಿನಿಂದ ನೀರು ಸುರಿದರೆ ಮೊದಲು ಮೂರು ತಿಂಗಳುಗಳವರೆಗೆ ಮಗುವಿಗೆ ಕಣ್ಣರು ಇರುವುದಿಲ್ಲವೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.ವೈದ್ಯರಿಗೆ ತಿಳಿಸಬೇಕು.
 • 2 ಅವನ ಚಮ೯ದ ಮೇಲೆ ಯಾವುದೆ ತರದ ಗುಳ್ಳೆಗಳಿದ್ದರೆ ವೈದ್ಯರಿಗೆ ತಿಳಿಸಬೇಕು.
 • 3 ಕಾಮಾಲೆ ಶರೀರದ ವಿಜ್ಞಾನದ ಪ್ರಕಾರ ಅನೇಕ ಕೂಸುಗಳಿಗೆ ಮೂರನೆಯ ದಿನದಲ್ಲಿ ಕಾಮಾಲೆ ಕಾಣಿಸಿಕೊಳ್ಳಬಹುದು. ಆದರೆ ಅದು ಸಾಧಾರಣವಾಗಿ ಒಂದು ವಾರದಲ್ಲಿ ವಾಸಿಯಾಗುತ್ತದೆ. ಒಂದು ವೇಳೆ ಅದು ಹೆಚ್ಚಾದರೆ ಅದನ್ನು ವೈದ್ಯರಿಗೆ ತಿಳಿಸಬೇಕು.
 • 4 ಕೆಲವು ವೇಳೆ ಮಗುವಿನ ಸ್ತನಗಳ ಸುತ್ತ ಊತವಿದ್ದು ಅದು ಒಂದು ತರದ ಹಳದಿಯ ರಸವನ್ನು ಸುರಿಸಬಹುದು. ಇದು ಅನೇಕ ಕೂಸುಗಳಿಗೆ ಸಾಧಾರಣ. ಆದರೆ ಅದು ಒಂದು ವೇಳೆ ಅಂಟಾಗಿ ಗಡ್ಡೆ ಕಟ್ಟಿದರೆ ವೈದ್ಯರಿಗೆ ತಿಳಿಸಬೇಕು.
 • 5 ಯಾವುದೇ ಕೀವು ವಾಸನೆ ಅಥವಾ ಗಬ್ಬು ವಾಸನೆ ಹೊಕ್ಕಳಿಂದ ಬರುವುದಾದರೆ ವೈದ್ಯರಿಗೆ ತಿಳಿಸಬೇಕು.
 • 6 ಬಾಯಿ,ಹೊಕ್ಕಳು,ಚಮ೯,ಗುದನಾಳ,ಯೋನಿ,ಯಾವುದೇ ಭಾಗದಿಂದ ರಕ್ತ ಸೋರಿದರೆ ವೈದ್ಯರಿಗೆ ತಿಳಿಸಬೇಕು.
 • 7 ಯಾವುದೇ ತರಹದ ಗಬ್ಬು ವಾಸನೆಯು ಮತ್ತು ನೀರಿನಂತಹ ಮಲ ವಿಸಜ೯ನೆಯಾದಾಗ ವೈದ್ಯರಿಗೆ ತಿಳಿಸಬೇಕು.(ಶಿಶುಗಳಿಗೆ ಸಾದಾರಣವಾಗಿ ಮೊದಲ ಮೂರು ತಿಂಗಳಲ್ಲಿ ಅಥವಾ ನಾಲ್ಕು ಸಾರಿ ಮಲ ವಿಸಜ೯ನೆಯಾಗುವುದುಂಟು.)
 • 8 ಮಗುವು ಒಂದು ವೇಳೆ ಸರಿಯಾಗಿ ಬೆಳೆಯದಿದ್ದರೆ ವೈದ್ಯರಿಗೆ ತಿಳಿಸಬೇಕು. (ಸಾಮಾನ್ಯವಾಗಿ ಒಂದು ಮಗುವು ಐದು ತಿಂಗಳಲ್ಲಿ ತನ್ನ ಹುಟ್ಟಿದ ತೂಕಕ್ಕಿಂತ ಎರಡರಷ್ಟಾಗಬಹುದು.ಮತ್ತು ಒಂದು ವಷ೯ದಲ್ಲಿ ಮೂರರಷ್ಟಾಗಬೇಕು.)
 • ಅಧ್ಯಾಯ
  ಪುರವಣೆ ಮೂರು-ಬೆಳೆಯುವ ಮಗು

  ದೇವರು ಒಂದು ಮಗುವನ್ನು ತಾಯಿಗೆ ಕೊಡುವಾಗ ಆ ಮಗುವನ್ನು ಬೆಳೆಸುವುದು ಗಂಭೀರವಾದ ಮತ್ತು ಪವಿತ್ರವಾದ ಜವಾಝಬ್ದಾರಿಕೆ ಆಕೆಯ ಮೇಲೆ ಬೀಳುತ್ತದೆ. ತಿರಸ್ಕರಿಸುವುದು ಅಥವಾ ತಾತ್ಸಾರ ಮಾಡಿದರೆ ತನ್ನ ಮಗುವಿನ ಜೀವನವೀಡಿ, (ಶಾರೀರಿಕವಾಗಿ ಮಾನಸೀಕವಾಗಿ ಅಥವಾ ಭಾವಾವೇಶದಲ್ಲಿ ) ತಡೆಯುತ್ತಾಳೆ. ಆದ್ದರಿಂದ ತಾಯಿಯಾದವಳು ತನ್ನ ಜವಾಬ್ದಾರಿಕೆಯನ್ನು ಎಷ್ಟು ಗಂಭೀರವಾಗಿ ಕಡೆಯ ತನಕ ನಿವ೯ಹಿಸುವದು ಅವಶ್ಯ.

  ಈಗಿರುವಂತ ದಿನಗಳಲ್ಲಿ ಅನೇಕ ತಾಯಂದಿರು ತಮ್ಮ ಮಕ್ಳಳನ್ನು ದಾದಿಯರ ವಶಕ್ಕೆ ಬಿಟ್ಟು ಕುಟುಂಬಕ್ಕೆ ಮತ್ತೊಂದು ವರಮಾನವನ್ನು ಸಂಪಾದಿಸಲು ಹೋಗಬೇಕಾಗಿರುವುದರಿಂದ ಈ ಎಚ್ಚಕೆಯ ಮಾತು ಅವಶ್ಯ. ಈ ತರದ ಮಕ್ಕಳ ಉದಾಸೀನತೆಯ ಫಲಿತಾಂಶ ಮುಂದೆ ಅವರನ್ನು ಸರಿಪಡಿಸಲು ಆಗದಂತಹ ಸಂಗತಿಗಳಲ್ಲಿ ಆಗಾಗ ಕಂಡುಬರುತ್ತದೆ.

  ನಮ್ಮ ಮಕ್ಕಳನ್ನು ಆತ್ಮೀಕ ಮಾನಸೀಕ ಮತ್ತು ದೈಹಿಕ ಆರೋಗ್ಯದಲ್ಲಿ ಬೆಳೆಸುವ ಪವಿತ್ರವಾದ ಕೆಲಸಕ್ಕಿಂತ ಬೇರೆ ಯಾವ ಕೆಲಸವು ನಾವು ನಿವ೯ಹಿಸಲು ಇಲ್ಲ.

  ಪೋಷಣೆ

  ಒಂದು ವೇಳೆ ನಿಮ್ಮ ಮಗುವು ಎದೆ ಹಾಲನ್ನು ಕುಡಿಯುತ್ತಿದ್ದರೆ ಮೊದಲ ಮೂರು ತಿಂಗಳುಗಳಲ್ಲಿ ಅದಕ್ಕೆ ಜೀವಸತ್ವ ಮತ್ತು ಐರನ್ ಡ್ರಾಪ್ಸ ಮತ್ತು ಜೊತೆಗೆ ಹಣ್ಣಿನ ರಸ ಮಾತ್ರಸಾಕು. ಅವನು ಮೂರು ತಿಂಗಳವನಾಗುವಾಗ ಅವನಿಗೆ ಗಟ್ಟಿಯಾದ ಆಹಾರವನ್ನು ಕೊಡಿರಿ. ಮೊದಲು ಗಟ್ಟಿಯಾದ ಆಹಾರವೆಂದರೆ ಧಾನ್ಯದ ಕಾಳುಗಳು ಬಜಾರಿನಲ್ಲಿ ಧಾನ್ಯದ ಕಾಳುಗಳ ಡಬ್ಬಗಳು ಸಿಕ್ಕುತ್ತವೆ. ಒಂದಾನೊಂದು ಕಡಿಮೆ ಬೆಲೆಯದೆಂದರೆ ರಾಗಿಯಿಂದ ಮಾಡಿದಂತಹದು. ೨ ಚಮಚ ರಾಗಿಯ ಹಿಟ್ಟನ್ನು ಒಂದು ತೆಳುವಾದ ಬಟ್ಟೆಯಲ್ಲಿ ಹಾಕಿ ಅದನ್ನು ಕಟ್ಟಿ ಒಂದು ಕಪ್ ನೀರಿನಲ್ಲಿ ಎಲ್ಲ ಹಿಟ್ಟನ್ನು ಚೆನ್ನಾಗಿ ಇಡಬೇಕು. ಬರಿ ರಾಗಿಯ ಹಿಪ್ಪೆ ಮಾತ್ರ ಆ ಬಟ್ಟೆಯಲ್ಲಿ ಉಳಿಯುವದು. ಇದಕ್ಕೆ ಒಂದು ಕಪ್ ಹಾಲನ್ನು ಬೆರಸಿ ಚೆನ್ನಾಗಿ ಕುದಿಸಿ ಕಂದು ಬಣ್ಣ ಬರುವವರೆಗೂ ಕಲಿಸುತ್ತಾ ಇರಬೇಕು. ಅನಂತರ ಸಕ್ಕರೆ ಬೆರೆಸಿ ಬೆಚ್ಚಗೆ ಮಾಡಿ ಮಗುವಿಗೆ ಕೊಡಬೇಕು. ಇದು ಬಹಳ ಪುಷ್ಠಿಕರವಾದದ್ದು.

  ಅವನು ನಾಲ್ಕು ತಿಂಗಳಿನವನಾಗುವಾಗ ತುಂಬಾ ಹಣ್ಣಾದ ಬಾಳೆಹಣ್ಣನ್ನು ಅದರ ಜೊತೆಗೆ ಸೇರಿಸಬಹುದು. ಪ್ರಾರಂಭದಲ್ಲಿ ಅಧ೯ದಿಂದ ಒಂದು ಚಮಚ. ಇನ್ನೂ ಬೇರೆ ಹಣ್ಣುಗಳೆಂದರೆ ಸೇಬನ್ನು ಬೇಯಿಸಿ ಮತ್ತು ಜಜ್ಜಬೇಕು. ಇದನ್ನು ಕೆಲವು ಕಾಳುಗಳು ರಾಗಿ,ಅಕ್ಕಿ,ಗೋದಿ,ಜೋಳ, ಬೇಳೆ,ಹೆಸರು ಕಾಳು ಇಂತವುಗಳನ್ನು ತೊಳೆದು ಒಣಗಿಸಿ, ಪುಡಿಮಾಡಿ ಇದರ ಜೊತೆ ಬೆರೆಸಬಹುದು. ಈ ಕಾಳುಗಳ ಪುಡಿಯನ್ನು ಅನಂತರ ಗಂಜಿಮಾಡಬಹುದು.

 • ಆರು ತಿಂಗಳ ಮಗುವಿಗೆ ಪ್ರತಿದಿನದ ಪೋಷಣೆಯ ಈ ತರಹ ಇರುತ್ತದೆ.
 • ಬೆಳಿಗ್ಗೆ 6-7 ಗಂಟೆಗೆ ಎದೆ ಹಾಲು ಅಥವಾ ಸೀಸೆಯ ಹಾಲು.
 • ಬೆಳಿಗ್ಗೆ 9 ಗಂಟೆಗೆ ಆರೆಂಜ್ ರಸ ( ಟೊಮೊಟೊ ಅಥವಾ ಬೇರೆ ಹಣ್ಣಿನ ರಸ ) ಜೀವಸತ್ವ ಮತ್ತು ಐರನ ಡ್ರಾಪ್ಸ. ಕಾಳುಗಳು ಅಥವಾ ಇಡ್ಲಿ, ಎದೆಯ ಹಾಲಿನ ನಂತರ ಬೇರೆ ಬೇರೆ ತರಕಾರಿಗಳನ್ನು ಮತ್ತು ಸೊಪ್ಪು ಕುಕ್ಕರಿನಲ್ಲಿ ಬೇಯಿಸಿ ತರಕಾರಿಯ ರಸವನ್ನು ಮಾಡಬಹುದು. ಈ ಸಾರನ್ನು ಗಟ್ಟಿಯಾದ ಆಹಾರದ ಜೊತೆಗೆ ಕೊಡಬಹುದು.
 • ಮಧ್ಯಾಹ್ನ 1 ಗಂಟೆಗೆ ಬೇಯಿಸಿದ ಮತ್ತು ಜಜ್ಜಿದ ತರಕಾರಿಗಳು ಕ್ಯಾರೆಟ್ ಸೀಸೆಯ ಹಾಲು.
 • 4 ಗಂಟೆಗೆ ಗಟ್ಟಿಯಾದ ಬಿಸ್ಕತ್.
 • ಸಂಜೆ 6 ಗಂಟೆಗೆ ಕಾಳುಗಳು, ಹಣ್ಣು ( ಬಾಳೆಹಣ್ಣು) ಎದೆ ಹಾಲು ಅಥವಾ ಸೀಸೆಯ ಹಾಲು.
 • ರಾತ್ರಿ 10 ಗಂಟೆಗೆ ಹಾಲು (ಮಗುವು ಹಸಿದಿದ್ದರೆ).
 • ಮಗುವು ಒಂದು ವಷ೯ದವನಾಗಿದ್ದರೆ ಮಾಂಸ ಮತ್ತು ಮೀನು ಕೊಡಬಹುದು.ಇದಕ್ಕಿಂತ ಮುಂಚೆ ಮಾಂಸ ಮತ್ತು ಮೀನಿನ ರಸದ ಜೊತೆ ಮೊಸರು ಬೇಯಿಸಿದ ತರಕಾರಿ ಮತ್ತು ಹಾಲಿನಿಂದ ತಯಾರಿಸಿದವುಗಳನ್ನು ಕೊಡಬಹುದು. ಯಾಕಂದರೆ ಸಣ್ಣ ವಯಸ್ಸಿನಲ್ಲಿ ಮಾಂಸ ಮತ್ತು ಮೀನಿನಿಂದ ಬಂದ ಪ್ರೊಟಿನ್ ಮೂತ್ರಪಿಂಡದ ಮೇಲೆ ಬಾರಿ ಒತ್ತಡವನ್ನು ಕೊಡುತ್ತದೆ. ಆದ್ದರಿಂದ ತರಕಾರಿ ಪ್ರೊಟಿನ -ಬೀಲ್ಸ ಮತ್ತು ದ್ವಿದಳ ಧಾನ್ಯದಿಂದ ಬಂದ ಪ್ರೊಟಿನ್ ಉತ್ತಮ.

  ನಿಮ್ಮ ಮಗುವು ಒಂದು ವಷ೯ವನಾಗುವಾಗ ಬೆಳಗಿನ ಉಪಹಾರಕ್ಕೆ ಎರಡು ಇಡ್ಲಿಗಳನ್ನು ತಿನ್ನುವಷ್ಟಾಗಿರಬೇಕು. ಮದ್ಯಾಹ್ನ ಊಟಕ್ಕೆ ಬೇಳೆ ಮತ್ತು ತರಕಾರಿ ಮತ್ತು ಹಾಲು ಒಳಗೊಂಡಿರಬೇಕು. ಒಂದು ವೇಳೆ ಹಸುವಿನ ಹಾಲು ಕೊಡುವುದಾದರೆ ೩೦೦ ಮಿಲಿ ಲೀಟರ್ ಒಂದು ದಿಲಕ್ಕೆ ಸಾಕು. ವೈದ್ಯರ ಸಲಹೆ ಇಲ್ಲದೆ ಯಾವ ಔಷದಿಗಳನ್ನು ಉಪಯೋಗಿಸಬೇಡಿ. ಮುಖ್ಯವಾಗಿ ಆಂಟಿಬಯೋಟಿಕ್.

  ಮಗುವನ್ನು ಪೋಷಿಸುವುದು

 • 1 ಮಗುವು ಮೂರು ತಿಂಗಳಿನದು ಆಗುವುದರ ಒಳಗೆ ಅದಕ್ಕೆ ಗಟ್ಟಿಯಾದ ಆಹಾರ ಕೊಡುವ ಅವಶ್ಯವಿಲ್ಲ.
 • 2 ಗಟ್ಟಿಯಾದ ಆಹಾರ ಒಂದೊಂದಾಗಿ, ಸ್ವಲ್ಪ ಸ್ವಲ್ಪ ಕೊಡುವುದು ಮತ್ತು ಕ್ರಮೇಣ ಹೆಚ್ಚಿಸಬಹುದು.
 • 3 ಒಂದು ವೇಳೆ ಮಗುವಿಗೆ ಇಷ್ಟವಾದರೆ ಆರು ತಿಂಗಳ ನಂತರ ತಂಪಾದ ಪಾನೀಯಗಳನ್ನು ಕೊಡಬಹುದು.( ಮಗುವು ಚೆಲ್ಲಿದರೆ ಬೇಸರಮಾಡಿಕೊಳ್ಳಬೇಡಿರಿ. ಅವನು ಕಲಿತುಕೊಳ್ಳುತ್ತಾನೆ.)
 • 4 ಯಾವುದೆ ಹೊಸ ಆಹಾರ ಅಜೀಣ೯ವನ್ನು ಉಂಟುಮಾಡಿದರೆ ( ವಾಂತಿ,ಭೇದಿ, ) ಅದನ್ನು ನಿಲ್ಲಿಸಿ ಜೊತೆಗೆ ಗಟ್ಟಿಯಾದ ಆಹಾರ ಸಹ ನಿಲ್ಲಿಸಿ. ಇನ್ನೂ ಬೇರೆ ಗಟ್ಟಿಯಾದ ಆಹಾರವನ್ನು ನೀವು ಪ್ರಾರಂಭಿಸುವ ಮುನ್ನ ಕಾಯಬೇಕು.
 • 5 ಒಂದು ವೇಳೆ ಅಜೀಣ೯ ಹೆಚ್ಚಾದರೆ ವೈದ್ಯರ ಸಲಹೆ ಪಡೆಯಿರಿ.
 • 6 ಅವನು ಗಟ್ಟಿಯಾದ ಆಹಾರ ತಿಂದ ನಂತರವೇ ಹಾಲನ್ನು ಕೊಡಬೇಕು. ಇಲ್ಲದಿದ್ದರೆ ಆಹಾರವನ್ನು ಬೇಡವೆನ್ನುತ್ತಾನೆ.
 • 7 ಮಗುವಿಗೆ ಹಿಡಿಸಲಿಲ್ಲವೆಂದರೆ ಅದಕ್ಕೆ ಬಲವಂತ ಮಾಡಬೇಡಿರಿ. ಅವನಿಗೆ ಬೇರೆ ತರಹದ ಆಹಾರ ಇಷ್ಟವಿರಬಹುದು. ಊಟದ ಸಮಯವನ್ನು ಅವನಿಗೆ ಇಷ್ಟವಾಗುವ ಹಾಗೆ ಮಾಡಿರಿ. ಹೆಚ್ಚು ಸಿಹಿಯನ್ನು ತಡೆಗಟ್ಟಿರಿ. ಯಾಕಂದರೆ ಅವು ಹಸಿವನ್ನು ಹಾಳುಮಾಡುತ್ತದೆ. ಮತ್ತು ಮಗುವಿನ ಹಲ್ಲಿಗೆ ಕೆಡುಕು ಮಾಡುತ್ತದೆ.
 • 8 ಎರಡನೆಯ ವಷ೯ದಲ್ಲಿ ಮಗುವು ಮೊದಲ ವಷ೯ದಲ್ಲಿ ಬೆಳೆದ ಹಾಗೆ ಬೆಳೆಯುವುದಿಲ್ಲ. ಅಥವಾ ದಪ್ಪವಾಗುವುದಿಲ್ಲವೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಆದ್ದರಿಂದ ಎರಡನೆಯ ವಷ೯ದಲ್ಲಿ ಬೆಳವಣಿಗೆ ಕಾಣದಿದ್ದರೆ ಚಿಂತಿಸಬೇಡಿರಿ.
 • ಮಲ ಮೂತ್ರ ವಿಸಜ೯ನೆಯ ಅಭ್ಯಾಸ

  ಎರಡನೆಯ ಅಥವಾ ಮೂರನೆಯ ವಷ೯ದಲ್ಲಿ ಮಾತ್ರ ಮಗುವಿಗೆ ಮಲ ಮೂತ್ರ ವಿಸಜ೯ನೆಯ ಬಗ್ಗೆ ಹತೋಟಿ ಬರುತ್ತದೆ. ಊಟ ಮಾಡಿದ ತಕ್ಷಣ ಅವನನ್ನು ಮೂತ್ರ ಪಾತ್ರೆಯ ಮೇಲೆ ಕುಳಿಸಿ. ಅವನ ಬಟ್ಟೆಯನ್ನು ಕೊಳಕು ಮಾಡುವುದನ್ನು ತಡೆಯಬಹುದು. ಅವನನ್ನು ನೀವು ಗಂಭೀರವಾಗಿ ಗಮನಿಸುವುದಾದರೆ ಮುಂಚಿತವಾಗಿಯೇ ಮಲ ಮೂತ್ರ ವಿಸಜ೯ನೆ ಮಾಡುವುದನ್ನು ನೀವು ತಿಳಿಯಬಹುದು. ಮೊದಲಿನಿಂದಲೇ ಮಲ ಮೂತ್ರ ವಿಸಜ೯ನೆ ಹೊರಗಡೆ ಮಾಡದೆ ಸಂಡಾಸನ್ನು ಉಪಯೋಗಿಸುವುದನ್ನು ಕಲಿಸಿಕೊಡಿರಿ.

  ಬೇಸಿಗೆಯ ಎಚ್ಚರಿಕೆ

  ಬೆಚ್ಚನೆಯ ಬೇಸಿಗೆಯ ತಿಂಗಳುಗಳಲ್ಲಿ ಮಗುವಿಗೆ ಒಂದು ತೆಳುವಾದ ಹತ್ತಿಯ ಬಟ್ಟೆ ಚೌಕಾಕಾರದ ಬಟ್ಟೆ ಸಾಕು. ಮತ್ತು ರಾತ್ರಿಯಲ್ಲಿ ಒಂದು ಹತ್ತಿಯ ಕಂಬಳಿ. ಬೇಸಿಗೆ ಕಾಲದಲ್ಲಿ ಅತೀಯಾಗಿ ಅಲಂಕರಸುವುದನ್ನು ತಡೆಯಿರಿ.ಹೊರಗಡೆ ಬಿಸಿಲಿಗೆ ಹೋಗುವಾಗ ಅವನ ಕಣ್ಣುಗಳನ್ನು ನೇರವಾದ ಸೂಯ೯ನ ಕಿರಣಗಳಿಂದ ತಡೆಯಿರಿ. ಒಂದು ವೇಳೆ ಅವನ ಶರೀರದ ಮೇಲೆ ಯಾವುದೇ ಬೇಸಿಕೆಯ ಗುಳ್ಳೇಗಳು ಕಂಡುಬಂದರೆ ಸೌಮ್ಯವಾದ ದ್ರವದಿಂದ ಇಲ್ಲವೇ ಜಿಂಕ್ ಆಕ್ಸೈಡ ಕ್ರೀಮ್ ಬಳಿಸಿ.

  ವಯಸ್ಕರಂತೆ ಶಿಶುಗಳಿಗೂ ಬೇಸಿಗೆಯಲ್ಲಿ ಹೆಚ್ಚಾದ ದ್ರವಗಳು ಬೇಕು. ಆದ್ದರಿಂದ ಅವನಿಗೆ ಹೆಚ್ಚಾಗಿ ಸಿಹಿಯಾದ ನೀರು ಅದರಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ. ಮಗುವಿಗೆ ಭೇದಿಯಾಗುವಾಗ ಅವನು ಸಾಕಷ್ಟು ಅಂಶವನ್ನು ಕಳೆದುಕೊಳ್ಳುತ್ತಾನೆ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿ. ನಿಮ್ಮ ಮಗುವಿಗೆ ಭೇದಿಯಾಗುವಾಗ ನಿಮ್ಮ ವೈದ್ಯರಿಗೆ ತಿಳಿಸಿ. ಇದು ಒಂದು ವೇಳೆ ಬೇಸಿಗೆಯ ತಿಂಗಳಲ್ಲಿ ಆದರೆ ತುಂಬಾ ಗಂಭಿರವಾಗಿದದ್ದು.

  ನಮ್ಮಂಥಹ ಉಷ್ಣವಲಯದ ದೇಶಗಳಲ್ಲಿ ಕ್ರಿಮಿಗಳು ಬಹಳ ಬೇಗ ಹರಡುವದರಿಂದ ಮಗುವಿಗೆ ಕುದಿಸಿದ ನೀರನ್ನು ಯಾವಾಗಲೂ ಕೊಡುವುದು ಉತ್ತಮ. ಆದ್ದರಿಂದ ಒಂದು ವೇಳೆ ಮಗುವಿನೊಂದಿಗೆ ಪ್ರಯಾಣ ಮಾಡುವಾಗ ನಿಮ್ಮಲ್ಲಿ ಸಾಕಷ್ಟು ಕುದಿಸಿದ ನೀರನ್ನು ತೆಗೆದುಕೊಳ್ಳಲು ಮರೆಯಬೇಡಿರಿ.

  ಚಳಿಗಾಲದ ಎಚ್ಚರಿಕ

  ನಿಮ್ಮ ಮಗುವನ್ನು ಚಳಿಗೆ ಮತ್ತು ಗಾಳಿಗೆ ತೆಗೆದುಕೊಂಡು ಹೋಗಬಾರದು. ಹತ್ತಿಯ ಒಳ ಬಟ್ಟೆಯ ಮೇಲೆ ಉಣ್ಣೆಯ ಬಟ್ಟೆಯನ್ನು ಉಪಯೋಗಿಸಬೇಕು. ಕಂಬಳಿಗಳು ಬೆಚ್ಚಗೆ ಮತ್ತು ಭಾರವಿಲ್ಲದೆ ಇರಬೇಕು. ಅವನ ಕೊರಳ ಸುತ್ತು ಬಗಿದ ಬಟ್ಟೆ ಇರದಂತೆ ಎಚ್ಚರಕೆ ವಹಿಸಬೇಕು. ಅವನ ಕಾಲುಗಳನ್ನು ಸಂರಕ್ಷಿಸಲು ಉದ್ದನೆಯ ಬಟ್ಟೆಗಳನ್ನು ಮತ್ತು ಪೈಜಾಮವನ್ನು ಉಪಯೋಗಿಸಬಹುದು. ಮಗುವು ತಲೆಗಿಂತ ಕಾಲಿನ ಮೂಲಕ ತನ್ನ ಶಾಖವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿರಿ. ಆದ್ದರಿಂದ ಚಳಿ ಇರುವಾಗ ಪೈಜಾಮ ಮತ್ತು ಕಾಲು ಚೀಲುಗಳನ್ನು ಉಪಯೋಗಿಸಿ ಮಗುವಿನ ಕೆಳಭಾಗವನ್ನು ಬರಿದಾಗಿ ಬಿಟಿಟು ತಲೆಗೆ ಟೊಪ್ಪಿಗೆಯನ್ನು ಹಾಕುವುದು ವ್ಯಥ೯.

  ಚಮ೯ದ ಮಡತೆಗಳಿರುವ ಸ್ಥಳಗಳ ಹತ್ತಿರ (ಕತ್ತು,ತೊಡೆ ಮತ್ತು ಕೈ ಮುಷ್ಠಿ ) ಏನಾದರೂ ಗುಳ್ಳೇಗಳು ಇದೆಯೂ ಎಂದು ಗಮನಿಸಬೇಕು. ( ಇದನ್ನು ಬೇಸಿಗೆಯ ತಿಂಗಳಲ್ಲಿ ಸಹ ಮಾಡಬೇಕು.) ಈ ಸ್ಥಳಗಳಲ್ಲಿ ಪೌಡರ ಹಾಕಿದರೆ ಶಿಶುಗಳಿಗೆ ಸುಖಕರವಾಗಿರುತ್ತದೆ. ಚೌಕಾಕಾರದ ಬಟ್ಟೆಗಳನ್ನು ಯಾವಾಗಲೂ ಒಗೆದು ಒಣಗಿಸಲು ಪ್ರತ್ಯೇಕ ಎಚ್ಚರಿಕೆ ವಹಿಸಬೇಕು. ಸರಿಯಾದ ಉಡುಪುಗಳನ್ನು ಉಪಯೋಗಿಸುವದರಿಂದ ನಿಮ್ಮ ಮಗುವನ್ನು ನಿಮೋನಿಯಾ ಮತ್ತು ಶ್ವಾಸಕೋಶಕ್ಕೆ ಅಂಟುರೋಗ ತಗಲುವುದರಿಂದ ರಕ್ಷಿಸಬಹುದು. ನಿಮ್ಮ ಮಗುವಿನ ಉಡುಪು ವಾಯುಗುಣಕ್ಕೆ ಅನುಗುಣವಾಗಿ ಮತ್ತು ಸುಖಕರವಾಗಿ,ಶುದ್ಧವಾಗಿ ಒಣಗಿದೆಂದು ಮತ್ತು ತನ್ನ ಕಾಲುಗಳನ್ನು ಯಾವ ತೊಂದರೆಯಿಲ್ಲದೆ ಚಲಿಸಬಲ್ಲನು ಎಂಬುದು ನಿಮಗೆ ಖಚಿತವಾಗಿರಬೇಕು. ಯಾವಾಗಲೂ ಒಳ್ಳೇಯ ವಿಶ್ರಾಂತಿ ಮಾಡುವ ಪರಿಸ್ಥಿತಿಯನ್ನು ಒದಗಿಸಿಕೊಡಿರಿ.

  ಹಲ್ಲು ಬೆಳೆಯುವಿಕೆ

  ಮೊದಲು ಹಲ್ಲು ಆರು ಅಥವಾ ಎಂಟು ತಿಂಗಳಲ್ಲಿ ಕಾಣಿಸಿಕೊಳ್ಳಬಹುದು. ಸಾಧಾರಣವಾಗಿ ಮುಂದಿನ ಎರಡು ಕೆಳ ಭಾಗದ ಹಲ್ಲುಗಳು ಕಾಣಿಸಿಕೊಳ್ಳತ್ತದೆ. ಸಹಜವಾಗಿ ಆ ದಿನಗಳಲ್ಲಿ ಮಗುವು ಸಿಡುಕಿದಾಗ ಮತ್ತು ವಸುಡುಗಳು ನೋವಿನಿಂದ ಕೂಡಿರುವುದರಿಂದ ಆಹಾರದಲ್ಲಿ ಅಷ್ಟು ಆಸಕ್ಕಿಯನ್ನು ತೋರಿಸುವುದಿಲ್ಲ. ಅಂತಹ ಸಮಯಗಳಲ್ಲಿ ಅನೇಕ ಮಕ್ಕಳಿಗೆ ಬಾಯಿಂದ ಕ್ರಮೇಣವಾಗಿ ನೀರು ಬರುತ್ತಿರುತ್ತದೆ. ಆಗ ಜೊಲ್ಲು ಪಟ್ಟಿಯನ್ನು ಉಪಯೋಗಿಸಬೇಕು. ಹಲ್ಲು ಬೆಳೆಯುವಾಗ ನೀವು ಮಗುವಿನ ಬಾಯಿ ಶುದ್ಧತೆಯನ್ನು ಗಮನಿಸಬೇಕು. ಅವನ ಬಾಯನ್ನು ಪ್ರತಿ ಊಟದ ನಂತರ ತೊಳೆಯಬೇಕು. ಅಥವಾ ಅವನಿಗೆ ಕುದಿಸಿದ ನೀರನ್ನು ಊಟದ ನಂತರ ಕೊಡಬೇಕು.

  ಶುಚಿತ್ವ

  ನಿಮ್ಮ ಮಗುವಿಗೆ ಸಣ್ಣ ವಯಸ್ಸಿನಿಂದಲೇ ಶುಚಿತ್ವದ ಅಭ್ಯಾಸಗಳನ್ನು ಕಲಿಸಿಕೊಡಿರಿ. ಆಗ ಬೆಳೆಯುತ್ತಾ ಹೋಗುವಾಗ ನೀವೇ ಹೊಗಳುವ ಶುಚಿತ್ವದಲ್ಲಿ ಬೆಳೆಯುತ್ತಾನೆ.

  ನಿಮ್ಮ ಮಗುವು ನೀವು ಹೇಳುವ ಯಾವುದನ್ನು ಅಥ೯ಮಾಡುಕೊಳ್ಳಲು ಆಗದಿದ್ದರೂ ಅವನ ಜೊತೆ ಪ್ರಾಥಿ೯ಸಿ ಮತ್ತು ಹಾಡನ್ನು ಹಾಡಿ. ಇಂತಹ ಅಭ್ಯಾಸಗಳನ್ನು ಅವನ ಪ್ರಜ್ಞೆಯ ಮೇಲೆ ಬಹಳ ಆಳವಾಗಿ ಪ್ರಭಾವವನ್ನು ಬೀರುತ್ತದೆ. ಅವನು ಬೆಳೆಯುತ್ತಾ ಹೋಗುವಾಗ ಆತ್ಮೀಕ ಶುಚಿತ್ವದ ಬೆಲೆಯನ್ನು ಕಲಿತುಕೊಳ್ಳುತ್ತಾನೆ.

  ಅಧ್ಯಾಯ
  ಪುರವಣೆ ನಾಲ್ಕು-ಮೈಲುಗಲ್ಲು ಮತ್ತು ಸೋಂಕು ರಕ್ಷಾಶಾಸ್ತ್ರ

  ನಿಮ್ಮ ಮಗು ತನ್ನ ಪ್ರತ್ಯೇಕವಾದ ಸ್ವಭಾವದಲ್ಲಿ ಬೆಳೆಯುತ್ತಾ ಮತ್ತು ವೃದ್ದಿಯಾಗುತ್ತಾ ಇರುವುದನ್ನು ನೋಡುವಾಗ ಒಂದು ಪುಳಕಿತವಾದಂತ ಅನುಭವವಲ್ಲವೇ? ಅವನು ಬೆಳೆಯುತ್ತಾ ಹೋಗುವಾಗ ಸ್ವಾಭಾವಿಕವಾಗ ನೀವು ಅವನು ಶಾರೀರಿಕವಾಗಿ ಮತ್ತು ದೈಹೀಕವಾಗಿ ಅಭಿವೃದ್ದಿಹೊಂದುತ್ತಿರುವುನೋ ಎಂದು ತಿಳಿಯಲು ಕಾತುರರಾಗಿರುತ್ತೀರಿ. ಸಾಧಾರಣವಾಗಿ ಬೆಳೆವಣಿಗೆಯನ್ನು ತಿಳಿಯಲು ಪ್ರತ್ಯೇಕವಾದ ತತ್ವವಲ್ಲ. ಮಕ್ಕಳು ಒಬ್ಬರಿಗಿಂತ ಒಬ್ಬರು ವ್ಯತ್ಯಾಸವಾಗಿರುತ್ತಾರೆ. ಒಂದು ಮಗು ಮೂರು ತಿಂಗಳಲ್ಲಿ ನಡೆಯಲು ಪ್ರಾರಂಭಿಸಿದರೆ ಇನ್ನೊಂದು ಅನಂತರ. ಇದು ಆ ಮಗುವಿಗೆ ಯಾವುದೇ ರೀತಿಯಲ್ಲಿ ಸಾಧಾರಣವಾದ ಬೆಳೆವಣಿಗೆಯಲ್ಲಿ ಹಿಂದುಳಿದಿದೆ ಎಂಬುದರ ಗುರುತಲ್ಲ. ಬೇರೆ ಮಗುವಿನಂತೆ ಆರೋಗ್ಯವಾಗಿ ಮತ್ತು ಸಾಧಾರಣವಾಗಿ ಬೆಳೆಯಲು ಸಾಧ್ಯ. ಆದ್ದರಿಂದ ಅನಾವಶ್ಯಕವಾಗಿ ಚಿಂತೆ ಮಾಡಬೇಡಿರಿ.ಹೇಗೂ ಇಲ್ಲಿ ಮಕ್ಕಳು ಬೇರೆ ಬೇರೆ ಹಂತಗಳಲ್ಲಿ ಸಾಧಾರಣವಾಗಿ ಮಾಡುವಂತಹದು.

 • ಮೊದಲು ತಿಂಗಳು ಅವನು ತನ್ನ ಕಣ್ಣನ್ನು ವಸ್ತು ಕಡೆಗೆ ಕೇಂದ್ರಿಕರಿಸಲು ಸಾಧ್ಯ. ಮತ್ತು ಕಣ್ಣು ಮತ್ತು ತಲೆ ನಿಧಾನವಾಗಿ ಚಲಿಸುವ ವಸ್ತುವನ್ನು ಹಿಂಬಾಲಿಸುತ್ತದೆ. ಅವನು ಬೋರಲು ಮಲಗಿರುವಾಗ ತನ್ನ ತಲೆಯನ್ನು ಮೇಲಕ್ಕೆತ್ತಲು ಬಲ್ಲ.
 • ನಾಲ್ಕು ತಿಂಗಳು: ತನ್ನ ತಾಯಿಯನ್ನು ಗುರುತಿಸಲು ಸಾಧ್ಯ. ಜನರನ್ನು ಕಂಡು ನಗುತ್ತಾನೆ. ವಸ್ತುಗಳನ್ನು ಗ್ರಹಿಸುತ್ತಾನೆ. ಮತ್ತು ತನ್ನ ಸ್ವಂತ ಕೈಗಳನ್ನು ಗಮನಿಸಬಲ್ಲನು. ಅವನನ್ನು ಎತ್ತಿಕೊಂಡಾಗ ತನ್ನ ತಲೆಯನ್ನು ನೆಟ್ಟಗೆ ಇಡಲು ಮತ್ತು ನಗಲು ಬಲ್ಲ.
 • ಏಳು ಎಂಟು ತಿಂಗಳುಗಳು. ಆಧಾರದಿಂದ ನಿಲ್ಲಬಲ್ಲನು. ಕೈ ಆಡಿಸಿ ಬೈ ಬೈ ಹೇಳುವನು. ಮತ್ತು ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ಭಂಗಿಯನ್ನು ತನ್ನಷ್ಟಕ್ಕೆ ತಾನೇ ಮಾಡುವನು.
 • ಒಂಬತ್ತು ಹತ್ತು ತಿಂಗಳಲ್ಲಿ ಆದಾರದಿಂದ ಎದ್ದು ನಿಲ್ಲುವನು.ಟಾ,ಟಾ ಮಾಡಲು ಮತ್ತು ಕುಳಿತುಕೊಳ್ಳಲು ಹಾಗೂ ನಿಲ್ಲಲು ತಾನಾಗಿಯೇ ಎಳುವನು.
 • ಒಂದು ವಷ೯. ಆಧಾರವಿಲ್ಲದೆ ನಡೆಯಬಲ್ಲನು. ಮತ್ತು ಅಥ೯ಪೂವ೯ಕವಾಗಿ ಕೆಲವು ಮಾತುಗಳನ್ನು ಉಪಯೋಗಿಸಬಲ್ಲನು. ತಲೆಯ ಮೇಲಿನ ಮೃದುವಾದ ಭಾಗ ಮರೆಯುತ್ತಾ ಬರುತ್ತದೆ. ಇಷ್ಟರಲ್ಲಿ 6 ಹಲ್ಲುಗಳು ಬಂದಿರುತ್ತದೆ. ಮತ್ತು ಒಂದು ಕಪ್ಪನ್ನು ಕುಡಿಯತಲು ಹಿಡಿಯಲು ಬಲ್ಲ.
 • ಎರಡು ವಷ೯:. ಓಡಬಲ್ಲ ಕಟ್ಟಿನ ಆಟವಾಡಬಲ್ಲ, ಸರಳವಾಗಿ ಮಾತನಾಡಬಲ್ಲ. ಮತ್ತು ಸರಳವಾದ ಅಪ್ಪಣೆಗಳಿಗೆ ವಿಧೇಯನಾಗುತ್ತಾನೆ. (ಅವನಿಗೆ ವಿಧೇಯನಾಗಲು ಮನಸ್ಸಿದ್ದಾಗ) ನಿಜವಾಗಲೂ ವಿಧೇಯತೆಯನ್ನು ಕಲಿಸಲು ಇದು ಉತ್ತಮ ಸಮಯ. ಇಷ್ಟರಲ್ಲಿ ಹೆಣ್ಣು ಮಕ್ಕಳು ಬೆಳೆಗಿನ ಸಮಯದಲ್ಲಿ ಮಲ ವಿಸಜ೯ನೆ ಮಾಡುವುದರ ವಿಷಯಗಳ ಮೇಲೆ ಹತೋಟಿಯನ್ನು ಹೊಂದಿರುವರು. ಗಂಡು ಮಕ್ಕಳಿಗೆ ಕೆಲವು ತಿಂಗಳುಗಳು ನಿಧಾನವಾಗಬಹುದು.

  ಅತೀ ಪ್ರಾಮುಖ್ಯವಾದ ವಿಷಯವೆನಂದರೆ ನಿಮ್ಮ ಮಗು ಸಾಧಾರಣವಾಗಿ ಬೆಳೆದು ಅಭಿವೃದ್ದಿಹೊಂದುವುದು. ನಿಮ್ಮ ನೆರೆಹೊರೆಯವರೊಂದಿಗೆ ನಿಮ್ಮ ಮಗುವನ್ನು ಹೋಲಿಸಬೇಡಿ ನಿಮ್ಮ ಮಗು ಮಾಡಲಿಕ್ಕೆ ಇಷ್ಟವಿಲ್ಲದ್ದನ್ನು ಮಾಡಿಸಲು ಬಲವಂತ ಮಾಡಬೇಡಿ. ಅದು ಒಂದು ಕಡೆ ಕುಳಿತುಕೊಳ್ಳುವದಾಗಲಿ ಕಪ್ಪಿನಿಂದ ಕುಡಿಯುವುದಾಗಲಿ ಅಥವಾ ನಡೆಯುವುದಾಗಲಿ ಆಗಿರಬಹುದು. ಅವನ ಸ್ವಂತ ಇಷ್ಟದಂತೆ ಮಾಡಲು ಸ್ವಾತಂತ್ರವನ್ನು ಕೊಡಿರಿ. ಅವನು ಬೆಳೆಯುತ್ತಾ ಹೋಗುವಾಗ ತನ್ನಷ್ಟಕೇಕೆ ತಾನೇ ಕೆಲವು ಸಂಗತಿಗಳನ್ನು ಮಾಡಲು ಉತ್ತೇಜನಪಡಿಸಿರಿ. ಉದಾಹರಣೆಗೆ ಬಟ್ಟೆ ಹಾಕಿಕೊಳ್ಳುವುದನ್ನು ಬೇರೆ ಮಕ್ಕಳೊಟ್ಟಿಗೆ ಆಡುವುದನ್ನು ಉತ್ತೇಜನಪಡಿಸಬೇಕು. ಅವನನ್ನು ಅತೀಯಾಗಿ ರಕ್ಷಿಸಬೇಡಿ.

  ಸೋಂಕು ರಕ್ಷಾಶಾಸ್ತ್ರ. (ಸೋಂಕು ರಕ್ಷಣೆ)

  ಅನೇಕ ಆಸ್ಪತ್ರೆಗಳು ಈ ಕೆಳಕಂಡ ಕಾಯ೯ಗಳನ್ನು ನಿವ೯ಹಿಸುತ್ತದೆ.

 • ಮೂರು ತಿಂಗಳಗಳ ಒಳಗೆ - ಬಿ.ಸಿ.ಜಿ.
 • ಆರು ವಾರಗಳು- ಡಿಪಿಟಿ( ಟ್ರೀಪಲ್ ಆಂಟಿಜನ್ ) 1ನೇ ಡೋಸ್
 • ಒಪಿವಿ -(ಒರಲ್ ಪೋಲಿಯೋ ವ್ಯಾಕ್ಸನ್) 1 ನೇ ಡೋಸ್
 • 10 ವಾರಗಳು - ಡಿ.ಪಿ.ಟಿ. 2 ನೇ ಡೋಸ್ ಒಪಿವಿ.2ನೇ ಡೋಸ್
 • 14 ವಾರಗಳು - ಡಿ.ಪಿ.ಟಿ. 3ನೇ ಡೋಸ್.ಒಪಿವಿ ೩ನೇ ಡೋಸ್.
 • 18 ವಾರಗಳು - ಒಪಿವಿ 4ನೇ ಡೋಸ್.
 • 22 ವಾರಗಳು - ಒಪಿವಿ 5ನೇ ಡೋಸ್

 • 9 ತಿಂಗಳುಗಳು - ಆರೋಗ್ಯ ತಪಾಸಣೆ.
 • 9-12 ತಿಂಗಳುಗಳು - ಗೌತಲಮ್ಮ ವ್ಯಾಕ್ಸನ್.
 • 18 ತಿಂಗಳುಗಳು ಡಿ.ಪಿ.ಟಿ. 1 ನೇ ಬೂಸ್ಟರ್
 • 5ವಷ೯ಗಳು - ಡಿ.ಪಿ.ಟಿ.2ನೇ ಬೂಸ್ಟರ್ -ಒಪಿವಿ 2ನೇ ಬೂಸ್ಟರ್.
 • ಸಣ್ಣ ವಯಸ್ಸಿನಲ್ಲಿ - ಹೆಪಿಟೈಟ ಬಿ ಚುಚ್ಚುಮದ್ದು (0.5ಎಮ್ ಎಲ್)

  ಹಪಿಟೈಟ ಬಿ ಆಂಟಿಡನ್ ಚುಚ್ಚುಮದ್ದನ್ನು (0.5ಎಮ್ ಎಲ್) ತೊಡೆಯ ಮಾಂಸ ಖಂಡದೊಳಗೆ ಕೊಡಿಸಬೇಕು. ಎರಡನೆಯ ಡೊಸನ್ನು ಎರಡು ತಿಂಗಳ ನಂತರ ಕೊಡಬೇಕು.

  ಪೊಲಿಯೋ ಅಥವಾ ಗಂಟಲಿನ ಅಂಟು ರೋಗವು ಕಾಣಿಸಿಕೊಂಡರೆ ಉಚಿತವಾದ ಬೂಸ್ಟರ್ ಡೊಸನ್ನು ಪುನಾವತಿ೯ಸಬೇಕು. ಆಳವಾದ ಗಾಯವೇನಾದರು ಆದರೆ ಟೆಟ್ನಸ್ ಬೂಸ್ಟರನ್ನು ಪುನರಾವತಿ೯ಸಬೇಕು. ಪ್ರತಿ ವಷ೯ವು ಟಿಎಬಿ (ಆಂಟಿ ಟೈಪಾಯಿಡ್ ) ಬೂಸ್ಟರನ್ನು ಪುನರಾವತಿ೯ಸಬೇಕು.

  ಅವಳಿ ಜವಳಿ ಮತ್ತು ತಕ್ಕ ಕಾಲಕ್ಕೆ ಮೊದಲೇ ಹುಟ್ಟಿದ ಮಕ್ಕಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ.

  ತಕ್ಕ ಕಾಲಕ್ಕೆ ಹುಟ್ಟಿದ ಮೊದಲೇ ಮಗು ತೂಕದಲ್ಲಿ 2 ಕೆ.ಜಿ.ಗಿಂತ ಕಡಿಮೆ ಇರುತ್ತದೆ. ಅವಳಿ ಜವಳಿ ಅಥವಾ ತ್ರಿತೆಯ ಮಕ್ಕಳು ಪೂಣ೯ಕಾಲದ ನಂತರವು ಸಾಧಾರಣವಾಗಿ 2 ಕೆ.ಜಿ. ಗಿಂತ ಕಡಿಮೆ ತೂಕದಲ್ಲಿರುತ್ತವೆ. ಮತ್ತು ಅವುಗಳನ್ನು ತಕ್ಕ ಕಾಲಕ್ಕೆ ಮುಂಚೆ ಹುಟ್ಟಿದ ಮಕ್ಕಳೆಂದೇ ಪರಿಗಣಿಸಬೇಕು. ತಕ್ಕ ಕಾಲಕ್ಕೆ ಮುಂಚೆ ಜನಿಸಿದ ದೇಹದ ಸಾಧಾರಮವಾದ ಶಾಖವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತು ಕೆಲವು ಸಂದಭ೯ಗಳಲ್ಲಿ ಉಸಿರಾಡಲು, ನುಂಗಲು, ಆಹಾರವನ್ನು ಜೀಣ೯ಮಾಡಿಕೊಳ್ಳಲು ಮತ್ತು ಅಂಟು ಜಾಡ್ಯವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಅವು ಬಹಳ ಬೇಗ ಉತ್ಸಾಹವನ್ನು ಕಳೆದುಕೊಳ್ಳುತ್ತವೆ.

  ತಕ್ಕ ಕಾಲಕ್ಕೆ ಮುಂಚೆ ಜನಿಸಿದ ಮಗುವನ್ನು ಆಸ್ಪತ್ರೆಯಲ್ಲಿ ಇಡಬೇಕು. ಸಾಧ್ಯವಾದರೆ ಮಗುವು ಸುಮಾರು 2.5 ಕೆ ಜಿ. ಆಗುವಷ್ಟರವರೆಗೆ. ಒಂದು ವೇಳೆ ನೀವು ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಈ ಕೆಳಗಿನ ಮುನ್ನೆಚ್ಚರಿಕೆಯನ್ನು ಗಮನಿಸಿರಿ.

 • 1 ಸಾಧ್ಯವಾದಷ್ಟು ಮಟ್ಟಿಗೆ ಮಗುವನ್ನು ಸತತವಾಗಿ ಸುಮಾರು ೨೮ ಡಿಗ್ರೀ ಸೆಲ್ಸೀಯಸ್ ಉಷ್ಣದಲ್ಲಿ ಇಡಬೇಕು. ಮುಖ್ಯವಾಗಿ ಎಳೆತದಿಂದ ಅವನನ್ನು ರಕ್ಷಿಸಿ.ಚಳಿಗಾಲದಲ್ಲಿ ಹಾಸಿಗೆಯನ್ನು ಬಿಸಿನೀರಿನ ಸೀಸೆಗಳಿಂದ ಬಿಸಿಮಾಡಬೇಕು.
 • 2 ಅವನ ಉಸಿರಾಟ ಸರಾಗವಾಗಿ ಮತ್ತು ಸ್ಥಿರವಾಗಿ ಆಡುವವರೆಗೂ ಅವನನ್ನು ಸೂಕ್ಷ್ಮವಾಗಿ ಗಮನಿಸಿ. ತಲೆಯನ್ನು ಸ್ವಲ್ಪ ಕೆಳಗೆ ಮತ್ತು ಒಂದು ಕಡೆಗೆ ತಿರುಗಿಸಿ ಕಫವೇನಾದರೂ ಅವನ ಗಂಟಲಿನಿಂದ ಬಂದರೆ ಒಳಗೆ ಹೋಗಿ ಅವನಿಗೆ ತೊಂದರೆ ಆಗದೆ ಬಾಯಿಯ ಮೂಲಕ ಹೊರಗೆ ಬರಲು ಸಾಧ್ಯವಾಗುತ್ತದೆ.
 • 3 ಅವನನ್ನು ಕೈಯಲ್ಲಿ ಹಿಡಿಯುವುದನ್ನು ಸಾಧ್ಯವಾದಷ್ಟು ಕಡಿಮೆಮಾಡಿ. ಬಹಳಷ್ಟು ಅವನನ್ನು ಕೈಯಲ್ಲಿ ಹಿಡಿಯುವದು ಅವನಿಗೆ ಕಷ್ಟವೆನಿಸುತ್ತದೆ.
 • 4 ಉಣಿಸುವುದು ಚೀಪಲು ಸಾಧ್ಯವಾಗದ ಮಕ್ಕಳಿಗೆ ಔಷಧಿಯ ಡ್ರಾಪರ್ ಮೂಲಕ ಉಣಿಸಬಹುದು. ನುಂಗಲು ಸಾಧ್ಯವಾಗದವರಿಗೆ ನಾಳದ ಮೂಲಕ ಉಣಿಸಬಹುದು. ಪ್ರಾರಂಭದಲ್ಲಿ ಹಾಲನ್ನು ಅವರು ಸಹಿಸುವುದಿಲ್ಲ,. ಆದ್ದರಿಂದ ಸಕ್ಕರೆಯ ನೀರನ್ನು ಕುಡಿಸಬಹುದು. (ಒಂದು ಚಮಚ ಸಕ್ಕರೆಯನ್ನು 250 ರಿಂದ 300 ಮಿಲಿ ಲೀಟರ್ ನೀರಲ್ಲಿ ಕುದಿಸಿ) ಕ್ರಮೇಣ ನೀರು ಬೆರೆಸಿದ ಹಾಲನ್ನು ಕೊಡಬಹುದು. 5 ಅಥವಾ 6 ನೇಯ ದಿನದಲ್ಲಿ ಮಗುವಿಗೆ ವಿಟಾಮಿನ್ ಸೀ ಡ್ರಾಪ್ಸನ್ನು ಪ್ರಾರಂಬಿಸಿ ಒಂದು ವಾರದ ನಂತರ ವಿಟಾಮಿನ್ ಎ ಮತ್ತು ಡಿ ಪ್ರಾರಂಭಿಸಿ.
 • ೫ ಸಾಕ್ರಾಮಿಕ ರೋಗಗಳಿಂದ ಅವನನ್ನು ಸಂರಕ್ಷಿಸಿ. ನಿಮ್ಮನ್ನು ಶುಚಿಯಾಗಿ ಇಟ್ಟುಕೊಳ್ಳುವುದರಲ್ಲಿ ಮತ್ತು ನಿಮ್ಮ ಮಗುವಿನ ಉಣಿಸುವುದಲ್ಲಿ ಅತಿ ಸೂಕ್ಷ್ಮತೆಯನ್ನು ವಹಿಸಿ.

  ನಿಮ್ಮ ಮಗು 2.5 ಕೆ.ಜಿ. ತೂಕವನ್ನು ತಲುಪುವಾಗ ಬೇರೆ ಎಲ್ಲಾ ಸಾಧಾರಣ ಶಿಶುಗಳಂತೆ ಅವನನ್ನು ನೋಡಿಕೊಳ್ಳಬಹುದು. ಆದರೆ ಸಾದಾರಣವಾಗಿ ಬೇಗ ಬೆಳೆಯುತ್ತಾನೆ. ಬಹಳ ಬಲಹೀನವಾದ ಮತ್ತು ಪುಷ್ಠಿ ಇಲ್ಲದಂತ ಮಕ್ಕಳಿಗೆ ಪ್ರತ್ಯೇಕವಾದ ಆಹಾರ ಸಿಗುತ್ತದೆ.

  ಅವಶ್ಯವಾದದ್ದು

  ನಿಮ್ಮ ಮಗು ಬೆಳೆಯುವಂತೆ ಮಾಡಲು ನಿಮಗೆ ಆಗುವುದಿಲ್ಲ. ದೇವರು ಮಾತ್ರ ಅದನ್ನು ಮಾಡಲು ಸಾಧ್ಯ ಆದರೆ ಅವನ ಬೆಳವಣಿಗೆಗೆ ಬೇಕಾದ ಉತ್ತಮವಾದ ಆರೋಗ್ಯಕರ ವಾತಾವರಣವನ್ನು ಒದಗಿಸಿಕೊಡಬಹುದು.. ಈ ಜವಾಬ್ದಾರಿಕೆಯನ್ನು ನೇರವೇರಿಸಲು ಒಂದು ಖಡ್ಡಾಯವಾಗಿ ಮಗುವಿನೊಂದಿಗೆ ಸಮಯವನ್ನು ಕಳೆಯಬೇಕು. ಯಾವತ್ತಿಗೂ ನಿಮ್ಮ ದಿನದ ಕೆಲಸ ಕಾಯ೯ಗಳ ನಿಮಿತ್ತ ತುಂಬಾ ಚಟುವಟಿಕೆಯುಳ್ಳವರಾಗಿ ಈ ಕಾಯ೯ವು ನೆರವೇರದೆ ಹೋಗುವ ಹಾಗೆ ಆಗಬೇಡಿರಿ. ಇದು ನಿಮ್ಮ ಮೊದಲ ಸ್ಥಾನವಾಗಿರಬೇಕು. ಬಹುಶಃ ಇದಕ್ಕೆ ಸಮಯವನ್ನು ಹೊಂದಲು ನೀವು ದ್ವೀತಿಯ ಸಂಗತಿಗಳನ್ನು ಬಿಟ್ಟುಕೊಡಬೇಕಾಗುವುದು. ಮತ್ತು ಸಾಥ೯ಕವಾದದ್ದು.

  ಅಧ್ಯಾಯ
  ಪುರವಣೆ ಐದು - ದೈಹಿಕ ನ್ಯೂನತೆ ಮತ್ತು ಕೆಲವು ತೊಂದರೆಗಳು

  ಯಾಕೆ ದೇವರು ತನ್ನ ಮಕ್ಕಳ ಕುಟುಂಬದಲ್ಲಿ ಸಹ ಕಾಯಿಲೆ ಮತ್ತು ರೋಗಗಳನ್ನು ಅನುಮತಿಸುತ್ತಾನೆ? ಬಹುಶಃ ಆತನ ಕೃಪೆ ಮತ್ತು ಶಕ್ತಿಯ ಅನುಭವ ಪೂಣ೯ವಾಗಿ ನಾವು ಹೊಂದಬೇಕೆಂದು(2ಕೊರಿಂಥ12:7-10) ಮತ್ತು ಈ ರೀತಿ ಸಂಕಟವನ್ನು ಅನುಭವಿಸುತ್ತಿರುವುದರ ಜೊತೆ ಶೀಘ್ರವಾಗಿ ಅನುಕಂಪ ಉಳ್ಳವರಾಗಿರಬೇಕೆಂದು (2ಕೊರಿಂಥ 1:4-8)

  ನಮ್ಮ ಕಾಯಿಲೆಗಳನ್ನು ಮತ್ತು ನೋವುಗಳನ್ನು ಕಡಿಮೆ ಮಾಡಲು ದೇವರು ವ್ಯವಸ್ಥೆ ಮಾಡಿರುವ ಪ್ರತಿಯೊಂದು ವೈದ್ಯಕೀಯ ಚಿಕಿತ್ಸೆಗಾಗಿ ಆತನಿಗೆ ಉಪಕಾರ ಸಲ್ಲಿಸಬೇಕು. ಆತನು ಅದ್ಬುತವಾಗಿ ಸಹ ವಾಸಿಮಾಡಬಲ್ಲನು. ಇಲ್ಲಿ ಕೊಟ್ಟಿರುವ ಸಲಹೆಗಳು ಯಾವಾಗ ನಾವು ವೈದ್ಯರ ಬಳಿ ಹೋಗಬೇಕೆಂದು ತಿಳಿಯಲು ಸಹಾಯಿಸುತ್ತದೆ. ಇಂತಹ ಸಂದಶಿ೯ಸುವಿಕೆಗೆ ಇವು ಬದಲಿಯಾದವುಳಲ್ಲ.

  ವಷ೯ಗಳು ಕಳೆದಂತೆ ಕಾಯಿಲೆಯನ್ನು ತಡೆದುಕೊಳ್ಳುವಂತದ್ದು ಬೆಳೆಯುತ್ತಾ ಹೋಗುತ್ತದೆ. ನಿಸ್ಸಂಶಯವಾಗಿ ಮಕ್ಕಳಿಗೆ ರೋಗಗಳನ್ನು ತಡೆಯುವಂತ ಶಕ್ತಿಯಿಲ್ಲ. ವಯಸ್ಕರಿಗಿಂತ ಬಹಳ ಗಂಭೀರವಾಗಿ ಮತ್ತು ಬೇಗ ಅವರು ಕಾಯಿಲೆಗೆ ಒಳಗಾಗುತ್ತಾರೆ.

  ತಮಗೆನಾಗುತ್ತದೆ ಎಂದು ವಿವರವಾಗಿ ಹೇಳಲು ಸಾಧ್ಯವಾಗದಂತ ಮಿತಿ ಮಕ್ಕಳಿಗಿದೆ. ಅಳುವುದೊಂದೆ ಅವರಿಗೆ ಗೊತ್ತು. ತಮ್ಮ ಮಕ್ಕಳಿಗೆ ಸಾಧಾರಣವಾಗುವ ಬಾಧೆಗಳನ್ನು ತಾಯಂದಿರು ತಿಳಿಯಲು ಇದು ಸಾಧ್ಯವಾಗುತ್ತದೆ.

  ದೈಹಿಕ ನ್ಯೂನತೆಗಳು: ಮೆಳ್ಳ ಗಣ್ಣು ಅಥವಾ ಓರೆನೋಟದ ಕಣ್ಣು.: ಮೊದಲು ಎರಡು ಅಥವಾ ಮೂರು ತಿಂಗಳುಗಳವರೆಗೂ ಮಕ್ಕಳಿಗೆ ಓರೆ ನೋಟದ ಕಣ್ಣು ಕಂಡುಬರುತ್ತದೆ. ಯಾಕಂದರೆ ಅವರಿಗೆ ಪ್ರತಿ ಫಲಿಸಲು ಸಾಧ್ಯವಿಲ್ಲ. ಇದು ಒಂದು ವೇಳೆ ೧೮ ತಿಂಗಳು ಅಥವಾ ಎರಡು ವಷ೯ಗಳ ವರೆಗೆ ಮುಂದುವರೆದರೆ ವೈದ್ಯಕೀಯ ಸಹಾಯ ಪಡೆಯಬಹುದು. ಇಲ್ಲವಾದರೆ ಆ ಬಲಹೀನವಾದ ಕಣ್ಣು ತನ್ನ ದೃಷ್ಟಿಯನ್ನು ಕಳೆದುಕೊಳ್ಳುತ್ತದೆ.

  ತಡೆಯಲ್ಪಟ್ಟ ಕಣ್ಣಿನ ನಾಳ: ಕಣ್ಣುಗಳಿಂದ ಕೆಲವು ಸಾರಿ ನೀರು ಬರಬಹುದು ಅಥವಾ ಹಳದಿ ಬಣ್ಣದ ಅಂಟನ್ನು ಕಾರುತ್ತದೆ. ಈ ನಾಳವನ್ನು ಪರೀಕ್ಷಿಸಿ ಸರಿಪಡಿಸಲು ಇದನ್ನು ವೈದ್ಯರಿಗೆ ತಿಳಿಸ ಬೇಕು. ಮಗುವು ಒಂದು ವಷ೯ ತಲುಪುವದರ ಒಳಗೆ ಈ ಪರೀಕ್ಷೆ ಯನ್ನು ಮಾಡಿಸಬೇಕು.

  ಶಬ್ಧವುಳ್ಳ ಉಸಿರಾಟ: ಮಗುವು ನೆಟ್ಟಗೆ ಮಲಗಿರುವಾಗ ಇದು ಬಹಳವಾಗಿರುತ್ತದೆ. ಮತ್ತು ಪಕ್ಕಕ್ಕೆ ತಿರುಗಿ ಮಲಗಿದ್ದಾಗ ಸ್ವಲ್ಪ ಕಡಿಮೆ ಅನ್ನಿಸುತ್ತದೆ. ಸಾಧಾರಣವಾಗಿ ಆರನೇ ತಿಂಗಳಿನಲ್ಲಿ ಇದು ಮಾಯವಾಗುತ್ತದೆ. ಒಂದು ವೇಳೆ ಮಗು ಸಾಧಾರಣವಾಗಿ ನಿಶಬ್ಧವಾಗಿ ಉಸಿರಾಡುತ್ತಿದ್ದು ಇದ್ದಕ್ಕಿದ್ದ ಹಾಗೆ ಶಬ್ಧವುಳ್ಳದ್ದಾಗಿ ಉಸಿರಾಡಿದರೆ ವೈದ್ಯರಿಗೆ ಇದನ್ನು ತಿಳಿಸಬೇಕು.

  ಸೀಳು ತುಟಿ: ಸೀಳು ತುಟಿಗಳುಳ್ಳ ಮಕ್ಕಳು ಹಾಲನ್ನು ಸುಲಭವಾಗಿ ಶ್ವಾಸಕೊಶಗಳಲ್ಲಿ ಎಳೆಯುತ್ತವೆ. ಇದರಿಂದ ಸುಲಭವಾಗಿ ಶೀತವನ್ನು ಹೊಂದಿಕೊಳ್ಳುತ್ತಾರೆ. ಅವರಿಗೆ ಉಣ್ಣುವ ತೊಂದರೆ ಸಹ ಇರುತ್ತದೆ. ಹೇಗೂ ಅವರಿಗೆ ಶಸ್ತ್ರ ಚಿಕಿತ್ಸೆ ಅವಶ್ಯ ಮತ್ತು ವೈದ್ಯಕೀಯ ಸಲಹೆಗಳು ಆದಷ್ಟು ಬೇಗ ಅವಶ್ಯ.

  ಅಂಡವಾಯು: ಇದು ತೊಡೆಸಂದಿಯಲ್ಲಿ ಅಥವಾ ಕೆಳ ಹೊಟ್ಟೆಯ ಹೊಕ್ಕಳಿನ ಭಾಗದಲ್ಲಿ ಊದಿಕೊಂಡಿರುವುದು. ಮಗು ಅಳುವಾಗ, ಕೆಮ್ಮುವಾಗ ಅಥವಾ ಆಯಾಸವಾದಾಗ ಈ ಊತವು ಬಹಳವಾಗಿ ಎದ್ದು ಕಾಣುತ್ತದೆ. ಇದು ಸಾಧಾರಣವಾಗಿ ಮಗುವಿಗೆ ಶೀತ ಅಥವಾ ಕಾಯಿಲೆ ಇರುವಾಗ ಕಂಡುಬರುತ್ತದೆ. ಕೆಲವು ಸಂದಭ೯ಗಳಲ್ಲಿ ಅಂಡವಾಯುವಿಗೆ ಅಂಟಿನ ಪಟ್ಟಿಯನ್ನು ಕಟ್ಟುವುದರಿಂದ ಅದು ಮರೆಯಾಗುತ್ತದೆ. ಒಂದು ವೇಳೆ ಅದು ಹೆಟ್ಟಾದರೆ ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಬೇಕು. ಕೆಲವರಿಗೆ ಉಬ್ಬಿಕೊಂಡಿರುವುದರಲ್ಲಿ ಮಲ ವಿಸಜ೯ನೆಯು ಸಿಕ್ಕಿಕೊಳ್ಳುತ್ತದೆ. ಅಂತಹ ಸಂದಭ೯ಗಳಲ್ಲಿ ತಕ್ಷಣವೇ ವೈದ್ಯರನ್ನು ಕರೆಯಬೇಕು. ಯಾಕಂದರೆ ಅದು ಬಹಳ ಗಂಬೀರವಾದದ್ದು.

  ಹುಟ್ಟು ಮಚ್ಚೆಗಳು: ಅನೇಕ ಹೊಸದಾಗಿ ಹುಟ್ಟಿದ ಮಕ್ಕಳಿಗೆ ಚಮ೯ದ ಮೇಲೆ ಕಪ್ಪನೆಯ ಮಚ್ಚೆಗಳು ಇರುತ್ತವೆ. ಕ್ರಮೇಣ ಇದು ಮರೆಯಾಗುತ್ತದೆ. ಒಂದು ವೇಳೆ ಈ ಮಚ್ಚೆಗಳು ಗಾತ್ರದಲ್ಲಿ ದೊಡ್ಡದಾಗುತ್ತಾ ಹೋದರೆ ವೈದ್ಯರಿಗೆ ಅದನ್ನು ತೋರಿಸಬೇಕು.

  ಸಮಸ್ಯೆಗಳು ಮತ್ತು ಕಾಯಿಲೆಗಳು:

  ಮಕ್ಕಳು ಅಳುವುದರ ಮೂಲಕ ಹಸಿವನ್ನು ಅಹಿತವನ್ನು ವ್ಯಕ್ತಪಡಿಸುತ್ತವೆ. ಕೆಲವು ಸಾರಿ ಕಾರಣವಿಲ್ಲದೆಯೇ ಅಳುತ್ತವೆ. ಅಂತಹ ಸಂದಭ೯ಗಳಲ್ಲಿ ಆ ಅಳುವಿಕೆಗೆ ಕಾರಣವೇನೆಂಬುದನ್ನು ನೀವು ಕಂಡು ಹಿಡಿಯಬೇಕು. ಮಗುವಿಗೆ ಶರೀರ ಭಂಗಿಯನ್ನು ಬದಲಾಯಿಸಬೇಕಾಗಬಹುದು. ಅಥವಾ ಒದ್ದೆಯಾಗಿರಬಹುದು ಅಥವಾ ಗಲೀಜು ಆಗಿರಬಹುದು. ಅಥವಾ ತುಂಬಾ ಚಳಿಯಾಗಿರಬಹುದು. ಅಥವಾ ತುಂಬಾ ಬಿಸಿಯಾಗಿರಬಹುದು. ಅಥವಾ ನಿದ್ದೆ ಬಂದಿರಬಹುದು. ಅಥವಾ ಜೀಣ೯ದ ಸಮಸ್ಯೆಯಾಗಿರಬಹುದು. ಇಂಥಹ ಸಂದಭ೯ಗಳಲ್ಲಿ ಮಗುವು ಅಳುತ್ತದೆ. ಕೆಣಕಿಸುವಿಕೆ ಮತ್ತು ಬಹಳವಾಗಿ ನಿದ್ದೆ ತನ್ನ ಆಹಾರವನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೆ ಇರುವುದು,ಆಸಾಧಾರಣವಾದ ಗಟ್ಟಿಯಾದ ಅಳು ಅಥವಾ ಕುಂಯ್ ಗುಟ್ಟುವುದು, ಕೆಮ್ಮು, ಬೇದಿ,ಜ್ವರ ೩೮ ಡಿಗ್ರೀ ಸೆಲ್ಷಿಯಸ್ ಗಿಂತ ಹೆಚ್ಚಾದಾಗ ಕೆಂಪನೇಯ ಗುಳ್ಳೇಗಳು ಎಳೆತ ಅಥವಾ ನಡವಳಿಕೆಯಲ್ಲಿ ಬೇರೆಯಾವುದಾದರೂ ಗುರುತಿಸುವಂತ ಬದಲಾವಣೆಗಳು, ಈ ಯಾವುದೇ ಗುರುತುಗಳು ಒಂದು ವೇಳೆ ಮಗುವಿನಲ್ಲಿ ಕಂಡುಬಂದಲ್ಲಿ ವೈದ್ಯರನ್ನು ಕರೆಯಬೇಕು.

  ಜೀಣ೯ದ ತೊಂದರೆಗಳು:

  ಭೇದಿ: ಮಗುವಿನ ಮಲವು ಕೊಳೆತ ವಾಸನೆಯಾಗಿರುತ್ತದೆ. ನೀರು ನೀರಾಗಿರುತ್ತದೆ. ಜೀಣ೯ವಾಗದ ಹಾಲಿನ ಗುರುತನ್ನು ತೋರಿಸುತ್ತದೆ. ಅಥವಾ ರಕ್ತ ಹಾಗೂ ಅಂಟು ಪದಾಥ೯ದ ಹಾಗೆ ಹಸಿರು ಬಣ್ಣದಾಗಿರುತ್ತದೆ. ಮಗುವಿಗೆ ಜ್ವರವಿರುತ್ತದೆ. ಅಂಥ ಸಂದಭ೯ಗಳಲ್ಲಿ ಅವನ ಮಲ ವಿಸಜ೯ನೆಯ ಬಟ್ಟೆಗಳನ್ನು ಉಪಯೋಗಿಸುವಾಗ ನೀವು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಮತ್ತು ನಿಮ್ಮ ಕೈಗಳನ್ನು ಆಗಾಗ ಶುಚಿಮಾಡಿಕೊಳ್ಳಬೇಕು. ಅವನ ಮಲ ವಿಸಜ೯ನೆಯ ಬಟ್ಟೆಗಳನ್ನು ಕುದಿಸಿ ಅಥವಾ ಅಂಟಾಗುವುದನ್ನು ತಡೆಗಟ್ಟುವುದರಲ್ಲಿ ಹಾಕಿ ಮತ್ತು ಹೊರಗಡೆ ಬಿಸಿಲಿನಲ್ಲಿ ಒಣಗಲು ಹಾಕಬೇಕು. ಎಲ್ಲಾ ಆಹಾರಗಳು ಮುಚ್ಚಿರಬೇಕು. ಯಾಕಂದರೆ ನೊಣಗಳು ಅದರ ಮೇಲೆ ಕುಳಿತುಕೊಳ್ಳಬಾರದು. ಮಗುವಿಗೆ ಆಹಾರದೊಂದಿಗೆ ಹೆಚ್ಚು ನೀರನ್ನು ಕೊಡಬೇಕು. ಮತ್ತು ಎಲ್ಲಾ ಗಟ್ಟಿಯಾದ ಆಹಾರವನ್ನು ನಿಲ್ಲಿಸಬೇಕು. ಕೆಲವು ಸಾರಿ ಹಾಲನ್ನು ಸಹ ನಿಲ್ಲಿಸಬೇಕಾಗುವ ಸಂದಭ೯ ಸಹ ಬರಬಹುದು. ಮತ್ತು ಕುದಿಸಿದ ನೀರಿನೊಂದಿಗೆ ಸ್ವಲ್ಪ ಉಪ್ಪನ್ನು ಮತ್ತು ಗ್ಲೂಕೋಸ್ ಬೆರೆಸಿ ಕೊಡಬೇಕು. ವೈದ್ಯರಿಗೆ ತಿಳಿಸಬೇಕು. ಯಾಕಂದರೆ ಒಂದು ವೇಳೆ ಮಗುವಿಗೆ ಅಂಟುರೋಗವಾಗಿದ್ದರೆ ಅದಕ್ಕೆ ಆಂಟಿಬಯೋಟಿಕ್ ಕೊಡಬೇಕಾಗುವುದು. ವಾಂತಿ ಮತ್ತು ಭೇದಿಯಾದರೆ ನಿಧಾನಿಸಬೇಡಿರಿ. ಯಾಕಂದರೆ ನಿಮ್ಮ ಮಗು ಬಹಳ ಬೇಗ ತುಂಬಾ ಕಾಯಿಲೆಗೆ ಒಳಗಾಗಬಹುದು. ಭೇದಿನಿಂತ ನಂತರ ಆಹಾರವನ್ನು ಮತ್ತೆ ಪ್ರಾರಂಭಿಸಲು ಸ್ವಲ್ಪ ನಿಧಾನಿಸಬೇಕು. ಆಹಾರಗಳು ಮತ್ತೆ ಪ್ರಾರಂಬಿಸುವ ಮುನ್ನ ಅದನ್ನು ತೆಳ್ಳಗೆ ಮಾಡಿ (ನೀರು ಬೆರೆಸಿದ) ಕ್ರಮೇಣ ಅದರ ಬಲವನ್ನು ಹೆಚ್ಚಿಸಬೇಕು. ಒಂದು ವೇಳೆ ಭೇದಿಯು ಅಂಟುರೋಗವಲ್ಲದೆ ಆಹಾರ ಬದಲಾವಣೆಯಿಂದ ಅಥವಾ ಹೆಚ್ಚು ತಿನ್ನಿಸಿದ್ದರಿಂದ ಆಗಿದ್ದರೆ ಅವನಿಗೆ ಹೆಚ್ಚಾಗಿ ನೀರಿನ ಅಂಶದಿಂದ ಕೂಡಿದ ಆಹಾರವನ್ನು ದಿನವೆಲ್ಲಾ ಕೊಟ್ಟರೆ ಅವನು ತನ್ನ ಸಾಧಾರಣವಾದ ಆರೋಗ್ಯಕ್ಕೆ ಬೇಗ ಬರುವನು. ತಾಯಿಯ ಎದೆ ಹಾಲನ್ನು ಕುಡಿಯುವ ಮಕ್ಕಳಿಗೆ ಸಾಮಾನ್ಯವಾಗಿ ಈ ಸಮಸ್ಯೆಗಳು ಬರುವುದಿಲ್ಲ.

  ವಾಂತಿ: ನಿಮ್ಮ ಮಗುವನ್ನು ವಾಂತಿಯಿಂದ ದೂರವಿಡಬೇಕಾದರೆ ಊಟದ ನಂತರ ಅವನನ್ನು ಮೇಲಕ್ಕೆತ್ತಿ ಹಿಡಿಯಿರಿ. ಮತ್ತು ಅವನು ತೇಗಲಿ (ನುಂಗಿರುವ ಗಾಳಿ ಹೊರಗೆ ಬರಲಿ) ಒಂದು

  ವೇಳೆ ವಾಂತಿಯಲ್ಲಿ ಮೇಲೆ ಹೇಳಿರುವ ಯಾವುದಾದರೂ ಗುರುತುಗಳು ಕಂಡು ಬಂದರೆ ಆಗ ವೈದ್ಯರಿಗೆ ತಿಳಿಸಬೇಕು.

  ಮಲಬದ್ದತೆ: ಒಂದು ವೇಳೆ ಮಗುವಿನ ಮಲ ಗಟ್ಟಿಯಾಗಿ ಮತ್ತು ಅವನು ಮಲವಿಸಜಿ೯ಸುವಾಗ ಹಿತಕರವಿಲ್ಲದಿದ್ದರೆ ಅವನಿಗೆ ಹಣ್ಣಿನ ರಸವನ್ನು ಅಥವಾ ಒಣಗಿದ ದ್ರಾಕ್ಷಿಯ ಸೋದಿಸಿದ ರಸ (ಒಣ ದ್ರಾಕ್ಷಿ ಚೆನ್ನಾಗಿ ತೊಳೆದು ಚೆನ್ನಾಗಿ ನೀರಿನಲ್ಲಿ ಕುದಿಸಿ ಒಂದು ರಾತ್ರಿನೆನಸಿ ಅನಂತರ ರುಬ್ಬುವುದು. ) ಅವನ ಊಟದಲ್ಲಿ ಹೆಚ್ಚು ನೀರು ಮತ್ತು ಹೆಚ್ಚು ಸಕ್ಕರೆಯನ್ನು ಸೇರಿಸಬೇಕು. ಕೆಲವು ಸಾರಿ ಮಕ್ಕಳಿಗೆ ಮಲ ಬದ್ದತೆಯು ಆಗುವುದು. ಯಾಕಂದರೆ ಅವರಿಗೆ ಸರಿಯಾದ ಆಹಾರವಿರುವುದಿಲ್ಲ. ಅಂತಹ ಸಂದಭ೯ಗಳಲ್ಲಿ ಅವರು ಹಸುವಿನ ಸೂಚನೆಯನ್ನು ಸಹ ತೋರಿಸುವರು. ಒಂದು ವೇಳೆ ಮಲಬದ್ಧತೆಯು ಗಂಭಿರವಾದದ್ದು ಆಗಿದ್ದರೆ ಮಗುವಿಗೆ ಅತೀ ಕರಗಿಸುವಂತ ಔಷಧಿ ಅಥವಾ ಎನೀಮದ ಅವಶ್ಯಕತೆ ಇರುತ್ತದೆ.

  ಹೊಟ್ಟೆಶೂಲೆ: ಮೊದಲು ಮೂರು ತಿಂಗಳುಗಳಲ್ಲಿ ಇದು ಮಕ್ಕಳಲ್ಲಿ ಸಾಮಾನ್ಯ. ಮಗು ಉಂಡ ನಂತರ ಅರಚಿ ಗಾಳಿಯನ್ನು ಹೊರಗೆ ಹಾಕುತ್ತದೆ (ಗ್ಯಾಸ್). ಇದನ್ನು ತಡೆ ಗಟ್ಟಲು ಮಗುವು ಗಾಳಿಯನ್ನು ನುಂಗದಂತೆ ನೋಡಿಕೊಳ್ಳಬೇಕು. ಸೀಸೆಯನಿಪ್ಪಲಿನ ರಂದ್ರವು ಸಾಕಷ್ಟು ದೊಡ್ಡದಾಗಿ ಸುಮಾರು ೨ ಅಥವಾ ೩ ಹನಿಗಳ ಹಾಲು ಸೆಕೆಂಡಿಗೆ ಬೀಳುವ ಹಾಗೆ ಇರಬೇಕು. ಒಂದು ವೇಳೆ ಮಗುವನ್ನು ಬೊರಲು ಮಲಗಿಸುವುದಾದರೆ ಅದು ಸಹ ಸಹಾಯಕವಾಗುತ್ತದೆ. ಕೆಲವು ಸಾರಿ ಔಷಧಿಯು ಸಹಾಯವಾಗುತ್ತದೆ. ಒಂದು ವೇಳೆ ಹೊಟ್ಟೆ ಶೂಲೆ ಹೆಚ್ಚಾಗಿದ್ದರೆ ವೈದ್ಯರನ್ನು ಕರೆಯಬೇಕು. ಕೆಲವು ಮಕ್ಕಳಿಗೆ ಎಷ್ಟೆ ಎಚ್ಚರಿಕೆ ವಹಿಸಿದ್ದಾಗ್ಯೂ ಹೊಟ್ಟೆ ಶೂಲೆ ಇದ್ದೆ ಇರುತ್ತದೆ.

  ಬಿಕ್ಕಳಿಕೆ: ಇದು ಮಗುವಿನ ಭಂಗಿಯನ್ನು ಬದಲಾಯಿಸುವುದರಿಂದ ಅಥವಾ ಬೆಚ್ಚನೆಯ ನೀರನ್ನು ಕುಡಿಸುವುದರಿಂದ ನಿಲ್ಲಿಸಬಹುದು. ಹೇಗೂ ಬಿಕ್ಕಳಿಕೆಯು ತನ್ನಷ್ಟಕ್ಕೆ ತಾನೇ ಕೆಲವೇ ನಿಮಿಷಗಳಲ್ಲಿ ನಿಂತುಹೋಗುತ್ತದೆ.

  ಬಾಯುಣ್ಣು: (ನಾಲಿಗೆಯಲ್ಲಿ ಬಳಿಯ ಲೇಪನದಂತಹ ಚಮ೯) ಇದು ಸಾದಾರಣವಾಗಿ ಮಕ್ಕಳು ಕಾಯಿಲೆಯಿಂದಿರುವಾಗ ಕಂಡು ಬರುತ್ತದೆ. ಮಗುವಿಗೆ ಕುದಿಸಿದ ನೀರನ್ನು ಪ್ರತಿ ಆಹಾರದ ನಂತರ ಕೊಡುವುದರಿಂದ ಸೀಸೆಯನ್ನು ಮತ್ತು ನಿಪ್ಪಲನ್ನು ಚೆನ್ನಾಗಿ ಕುದಿಸಬೇಕು.

  ಶೀತ ಕಿವಿ ಮತ್ತು ಎದೆಯ ಸಮಸ್ಯೆಗಳು

  ಶೀತ: ಮಗುವಿಗೆ ಶೀತವಿರುವಾಗ ಅದು ಅವನ ಹಸಿವನ್ನು ತಡಯುತ್ತದೆ. ಮತ್ತು ಅವನು ತಿನ್ನದ ಹಾಗೆ ಮಾಡುತ್ತದೆ. ಶೀತ ಮಗುವಿನ ಎದೆಯ ತೊಂದರೆಗೆ ಮತ್ತು ಕಿವಿನೋವಿಗೆ ನಡೆಸುತ್ತದೆ. ಆದ್ದರಿಂದ ನಿಮ್ಮ ಮಗುವನ್ನು ಆದಷ್ಟು ಸಂರಕ್ಷಿಸಿ. ಯಾರಿಗಾದರೂ ಶೀತವಿದ್ದರೆ

  ಅವರಿಂದ ದೂರವಿಡಿ. ಒಂದು ವೇಳೆ ಮಗುವಿಗೆ ಶೀತ ತಗುಲಿದರೆ ಅವನಿಗೆ ವಿಟೆಮಿನ್ ಸಿ ಡ್ರಾಪ್ಸ ಮತ್ತು ದ್ರವಗಳನ್ನು ಕೊಡಿ. ಅವನ ಮೂಗಿನಲ್ಲಿ ಸಂಗ್ರಹಿಸಿರುವ ದ್ರವವನ್ನು ಹೊರ ತೆಗೆಯಲು ಅವನ ತಲೆಯನ್ನು ತಗ್ಗಿನಲ್ಲಿರಿಸಿ. ಒಂದು ವೇಳೆ ಶೀತವು ಅಂಟಿಕೊಂಡು ಅವನಿಗೆ ಕಿವಿ ಅಥವಾ ಶ್ವಾಸಕೊಶಕ್ಕೆ ಅಥವಾ ಅವನ ಗಂಟಲು ಕಟ್ಟಿದ್ದರೆ ವೈದ್ಯರಿಗೆ ತಿಳಿಸಬೇಕು. ವೈದ್ಯರ ಸಲಹೆ ಇಲ್ಲದೆ ಆಂಟಿಬಯೋಟಿಕ್ ಪ್ರಾರಂಭಿಸಬಾರದು.

  ಕಿವಿಯ ತೊಂದರೆ: ಮಗುವು ಅಳುತ್ತಾ ತನ್ನ ತಲೆಯನ್ನು ಅಕ್ಕ ಪಕ್ಕಕ್ಕೆ ತಿರುಗಿಸುವಾಗ ಸಾದಾರಣವಾಗಿ ಇದು ಕಂಡು ಬರುತ್ತದೆ. ಅವನ ಒಂದು ಅಥವಾ ಎರಡು ಕಿವಿಗಳಿಂದ ದ್ರವವು ಸುರಿಯಬಹುದು.

  ಎದೆಯ ತೊಂದರೆ: ಜ್ವರ ಕೆಮ್ಮಿನ ಜೊತೆ ಜೋರಾಗಿ ಉಸಿರಾಡುವುದು ಮತ್ತು ಉಸಿರಾಡಲು ಕಷ್ಟಪಡುವುದರಿಂದ ಇದನ್ನು ತಿಳಿಯಬಹುದು. ಆ ಮಗುವಿಗೆ ಆಂಟಿಬಯೋಟಿಕ್ ಬೇಕಾಗಿರುತ್ತದೆ. ವೈದ್ಯರ ಸಲಹೆಯನ್ನು ಪಡೆಯಬಹುದು.

  ಚಮ೯ದ ತೊಂದರೆಗಳು

  ಕೂಸಿಗೆ ಬಳಸುವ ವಜಾಕೃತಿಯ ಬಟ್ಟೆಯಿಂದ ಚಮ೯ದ ಮೇಲೆ ಗುಳ್ಳೆಗಳು: ಮಗುವಿನ ಚಮ೯ವು ಸೂಕ್ಮವಿರುವುದರಿಂದ ತೊಡೆಗಳ ಸಂದಿಯಲ್ಲಿ ಗುಳ್ಳೆಗಳೇಳಬಹುದು. ಆದರೆ ಪ್ರತಿ ಸಾರಿ ಮಗು ಒಂದಕ್ಕೆ ಮಾಡುವಾಗ ಆ ವಜ್ರಾಕೃತಿಯ ಬಟ್ಟೆಯನ್ನು ಬದಲಾಯಿಸಿ ಮತ್ತು ಆ ಸ್ಥಳವನ್ನು ಶುದ್ದವಾಗಿಯೂ ಮತ್ತು ತೇವವಿಲ್ಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಲ್ಲಿ ಗುಳ್ಳೆಗಳು ಇದ್ದರೆ ಜಿಂಕ್ ಆಕ್ಸೈಡ ಮುಲಾಮನ್ನು ಶುದ್ದಮಾಡಿದ ಸ್ಥಳದಲ್ಲಿ ಹಚ್ಚಬೇಕು. ಈ ವಜ್ರಾಕೃತಿಯ ಬಟ್ಟೆಗಳನ್ನು ಸ್ವಲ್ಪ ವಿನೆಗರ್ (ಹುಳಿನೀರು)ನಲ್ಲಿ ನೆನಸಿ ಇಡಬಹುದು. ಮಗುವಿನ ಬಟ್ಟೆಗಳ ಮೇಲೆ ಮಾಜಿ೯ಕ ವಸ್ತು ಒಗೆದ ನಂತರವು ಇದ್ದರೆ ಅದು ಮಗುವಿಗೆ ಗುಳ್ಳೆಗಳಾಗುತ್ತದೆ. ಆದ್ದರಿಂದ ಮಗುವಿನ ಎಲ್ಲಾ ಬಟ್ಟೆಗಳನ್ನು ಚೆನ್ನಾಗಿ ಜಾಲಿಸಬೇಕು.

  ಬೆವರು ಸಾಲೆ: ಇದು ಸಾಮನಾನ್ಯವಾಗಿ ಉಷ್ಣದ ಹವಾಮಾನದಲ್ಲಿ ಮತ್ತು ಕೆಲವು ಸಂದಭ೯ ಗಳಲ್ಲಿ ಮಗುವಿಗೆ ಅತೀಯಾಗಿ ಉಡುಪನ್ನು ಹಾಕಿದಾಗ ಬರುತ್ತವೆ. ಕೆಲವು ಉಪಶಾಮಕ ಮುಲಾಮನ್ನು, ಜಿಂಕ ಮುಲಾಮನ್ನು ಅಥವಾ ಪೌಡರನ್ನು ಮುಖ್ಯವಾಗಿ ಮಗುವಿನ ಚಮ೯ಗಳ ಮಡಿಕೆಗಳ ಭಾಗದಲ್ಲಿ ಹಚ್ಚಬೇಕು. ಅವನ ಉಡುಪನ್ನು ಆಗಾಗ ನೀರಿನಲ್ಲಿ ಜಾಲಿಸಬೇಕು.

  ತುರಿ: ಇದು ಕೆಂಪು ಗುಳ್ಳೆಗಳ ನಿಮಿತ್ತವಾಗಿ ಬರುತ್ತವೆ. ಆದ್ದರಿಂದ ಇದಕ್ಕೆ ಮೂಲಕಾರಣವನ್ನು ಕಂಡುಹಿಡಿಯಬೇಕು. ಮತ್ತು ತಡೆಗಟ್ಟಬೇಕು. ಸಾಮಾನ್ಯವಾಗಿ ಮಗುವು ಬೆಳೆಯುತ್ತಾ ಹೋಗುವಾಗ ಇದು ಮರೆಯಾಗುತ್ತದೆ.

  ಚಮ೯ರೋಗ ಅಥವಾ ಗುಳ್ಳೆಗಳೇಳುವ ಒಂದು ಚಮ೯ರೋಗ: ಇಂತಹ ಸ್ಥಿತಿಯಲ್ಲಿ ಕೀವಿನಿಂದ ಕೂಡಿದ ನೆವೆಯುಳ್ಳ ಬೊಬ್ಬೆಗಳು ಇರುತ್ತವೆ. ಮಗುವಿನ ಟವಲ್ ಬಟ್ಟೆಗಳು ಇತ್ಯಾದಿಗಳನ್ನು ಚೆನ್ನಾಗಿ ಕುದಿಸಬೇಕು.ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಮತ್ತು ಅದಕ್ಕೆ ಚಿಕಿತ್ಸೆಯನ್ನು ಆದಷ್ಟು ಬೇಗ ಕೊಡಿಸಬೇಕು. ಯಾಕಂದರೆ ಅದು ಬೇಗ ಹರಡುತ್ತದೆ.

  ಕಜ್ಜಿ: ಇದು ಸಾಧಾರಣವಾಗಿ ಬೆಳೆದ ಮಕ್ಕಳಲ್ಲಿ ಬೆರಳುಗಳ ಸಂದಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಕಂಡು ಬರುತ್ತದೆ. ಮತ್ತು ಬಹಳ ಬೇಗ ಹರಡುವ ಅಂಟುರೋಗ. ಮಗು ಒಂದು ವೇಳೆ ಕೆರೆದು ಕೊಂಡರೆ ಅದು ಇನ್ನೂ ಹೆಚ್ಚಾಗುತ್ತದೆ ಇದು ವೈದ್ಯರಿಗೆ ತೋರಿಸಬೇಕು. ಮತ್ತು ಚಿಕಿತ್ಸೆ ಕೊಡಿಸ ಬೇಕು. ಯಾವುದೇ ಉಪಯೋಗಿಸುವಂತ ಮುಲಾಮನ್ನು ೩ ಸಾರಿಗಿಂತ ಹೆಚ್ಚಾಗಿ ಹಚ್ಚಬಾರದು. ಮಗುವಿನ ಮೂಗು ಬಾಯಿ ಮತ್ತು ಕಣ್ಣಿನ ಹತ್ತಿರ ಹಚ್ಚದ ಹಾಗೆ ಎಚ್ಚರಿಕೆ ವಹಿಸಬೇಕು.

  ಜ್ವರ ಮತ್ತು ಎಳವು: ಮಕ್ಕಳಲ್ಲಿ ಹಚ್ಚಾದ ಜ್ವರ ಎಳವನ್ನುಂಟುಮಾಡುತ್ತದೆ. ಜ್ವರವು ಕಡಿಮೆಯಾದಾಗ ಇದು ನಿಂತುಹೋಗುತ್ತದೆ. ಜ್ವರವನ್ನು ಕಡಿಮೆಮಾಡಲು ತಲೆಯನ್ನು ಮತ್ತು ದೇಹವನ್ನು ಐಸ್ ಮೂಲಕ ತಣ್ಣಗೆ ಮಾಡಬೇಕು. ಪ್ಲಾಸ್ಟಿಕ್ ಕವರಿನಲ್ಲಿ ಐಸನ್ನು ಹಾಕಿ ಟವಲಿನಿಂದ ಸುತ್ತಿ ಮಗುವಿನ ತಲೆಯ ಮೇಲೆ ಇಡಬೇಕು. ಮತ್ತು ಕ್ರೊಸಿನ್ ಸೀರಪ್ ಜ್ವರವನ್ನು ಸಾಮಾನ್ಯ ವಾಗಿ ಬೇಗ ಕಡಿಮೆ ಮಾಡುತ್ತದೆ. ಮಗುವಿಗೆ ಎಳೆಯು ಇರುವಾಗ ಪ್ರಜ್ಞೆ ತಪ್ಪಬಹುದು. ಬಿಳಿಚಿಕೊಳ್ಳಬಹುದು. ಕಾಲುಗಳನ್ನು ಒದರಬಹುದು. ಮತ್ತು ಕಣ್ಣುಗಳನ್ನು ತಿರುಗಿಸಬಹುದು. ಅವನ ನಾಲಿಗೆ ಮತ್ತು ತುಟಿಗಳನ್ನು ಕಡಿದುಕೊಳ್ಳದಂತೆ ತಡೆಯಲು ಅಂತಹ ಸಂದಭ೯ಗಳಲ್ಲಿ ಅವನ ಬಾಯಲ್ಲಿ ಸುತ್ತಿರುವ ಬಟ್ಟೆಯನ್ನು ಇಡಬೇಕು. ಹೇಗೂ ಅವನು ಉಸಿರಾಡುವಂತೆ ನೋಡಿಕೊಳ್ಳಬೇಕು. ಯಾವುದೇ ಜೊಲ್ಲನ್ನು ಒರಸಿಬಿಡಬೇಕು. ಮತ್ತು ಸ್ರಾವವನ್ನು ಮತ್ತೆ ಉಸಿರಾಟದೊಂದಿಗೆ ಸೇವಿಸದಂತೆ ತಲೆಯನ್ನು ಸ್ವಲ್ಪ ತಗ್ಗಿಸಿಡಬೇಕು. ಎಳವಿಕೆಗೆ ಕಾರಣವನ್ನು ತಿಳಿದು ಚಿಕಿತ್ಸೆ ಕೊಡಲು ವೈದ್ಯರಿಗೆ ತಿಳಿಸಬೇಕು. ಹೆಚ್ಚಾದ ಜ್ವರದಿಂದ ಬರುವ ಎಳವು ಗಂಭೀರ ವಾದದ್ದಲ್ಲ. ನಾವು ಮಗುವಿನ ಜ್ವರ ಜಾಸ್ತಿಯಾಗಲು ಬಿಡಬಾರದು. ಐಸ್ ಪ್ಯಾಕ್ ಮತ್ತು ಕ್ರೋಸಿನ್ ಸಿರಪ್ ಜ್ವರವನ್ನು ಹತೋಟಿಗೆ ತರಲು ಸಹಾಯಕವಾಗುತ್ತದೆ. ಮಾನುಷಿಕವಾಗಿ ಯಾವುದೇ ತಾಯಿ ಎಷ್ಟೇ ಜಾಗರೂಕಳಾಗಿದ್ದರೂ ತನ್ನ ಮಗುವನ್ನು ಎಲ್ಲಾ ಕೇಡು ಗಂಡಾಂತರ ಮತ್ತು ಕಾಯಿಲೆಗಳಿಂದ ಸಂರಕ್ಷಿಸಲು ಅಸಾಧ್ಯ. ಆದರೆ ಸಣ್ಣ ಮಕ್ಕಳನ್ನು ಕಾಯಲು ಅವರಿಗೆ ದೇವದೂತರು ಯಾವಾಗಲೂ ಇರುತ್ತಾರೆ ಎಂದು ಯೇಸು (ಮತ್ತಾಯ೧೮:೧೦) ರಲ್ಲಿ ಹೇಳಿದ್ದಾನೆ. ಇದು ನಮ್ಮನ್ನು ಉತ್ತೇಜನಪಡಿಸುತ್ತದೆ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಉತ್ತಮವಾದದ್ದನ್ನೆ ಮಾಡಿದ ಮೇಲೆ ಉಳಿದಿದ್ದನ್ನು ಮಾಡಲು ನಿಸ್ಸಂದೇಹವಾಗಿ ದೇವರನ್ನು ಆತುಕೊಳ್ಳಬೇಕು.

  ಅಧ್ಯಾಯ
  ಪುರವಣೆ ಆರು - ಅಪಘಾತಗಳೂ ರೋಗಗಳೂ- ತಡೆಗಟ್ಟುವಿಕೆ ಹಾಗೂ ಗುಣಪಡಿಸುವಿಕೆಯೂ

  ಶಿಶುಗಳು ಪರಿಶೋಧಿಸುವುದಕ್ಕೂನೋಡುವುದನ್ನೆಲ್ಲಾ ಪರೀಕ್ಷಿಸುವುದಕ್ಕೂ ಇಷ್ಟಪಡುತ್ತಾರೆ. ಅವರು ಅಪಾಯದ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ಆದ್ದರಿಂದ ತಾಯಂದಿರಾದನಾವು ಅವರನ್ನು ಸಂರಕ್ಷಿಸಬೇಕು.

  ಅಪಘಾತಗಳೂ ಪ್ರಥಮ ಚಿಕಿತ್ಸೆಯೂ

  ಮೊದಲಿನ ಒಂದು ವಷ೯ಮಗುವನ್ನು ಹಾನಿಮಾಡುವ ಎಲ್ಲಾ ವಸ್ತುಗಳಿಂದ ಕತ್ತರಿ ಪೆನ್ಸಿಲ್ ಮುಂತಾದವುಗಳನ್ನು ಉಪಯೋಗಿಸುವುದು. ಹೇಗೆಂದು ಕ್ರಮೇಣ ಕಲಿಸಿಕೊಡಬೇಕು.

  ನಿಮ್ಮ ಮಗುವನ್ನು ನೆಲದ ಮೇಲಾಗಲಿ ಸ್ನಾನದ ಕೋಣೆಯಲ್ಲಾಗಲಿ ಇಲ್ಲವೆ ಅಡುಗೆಯ ಕೋಣೆಯಲ್ಲಾಗಲಿ ಒಬ್ಬಂಟಿಗನಾಗಿ ಬಿಡಬೇಡಿರಿ. ಮಗು ಒಂದು ವಷ೯ದವನಾಗಿವ ತನಕ ಅವನನ್ನು ಆಟಿಗೆ ಸಾಮಾನುಗಳೊಂದಿಗೆ ಹಾಗೂ ಆಟದ ಬರವಣಿಗೆಯೊಂದಿಗೆ ಇದ್ದು ಬಡುವುದೇ ಉತ್ತಮ ಸ್ಥಳ. ಮಗು ಒಂದೇ ಇರುವಾಗಲೂ ಮಲಗಿದ್ದರೂ ಸರಿ ಒಬ್ಬಂಟಿಗನಾಗಿ ಮನೆಯಲ್ಲಿ ಬಿಡಬೇಡಿರಿ ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಮೇಲು.

  ಆದ್ದರಿಂದ ಯಾವ ಔಷದಕ್ಕಾಗಿಲಿ ಇಲ್ಲವೆ ವಿಷಕರ ವಸ್ತುವನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳಿರಿ ಪಿನ್ನುಗಳನ್ನಾಗಲಿ ಗೊಂಡುಗಳನ್ನಾಗಲಿ ನೆಲದ ಮೇಲೆ ಬಿದ್ದಿದ್ದರೆ ಅವು ಮಗುವಿನ ಬಾಯೊಳಕ್ಕೆ ಹೋರಡುವುದು. ಆದ್ದರಿಂದ ಅವುಗಳನ್ನು ಮಗುವಿನಿಂದ ದೂರವಾಗಿ ಇಡಿರಿ. ಇದೇ ಕಾರಣಕ್ಕಾಗಿ ಮಗುವು ಚಿಕ್ಕ ಆಟಿಗೆ ಸಾಮಾನುಗಳಿಗಿಂತ ದೊಡ್ಡ ಗೊಂಬೆಗಳನ್ನು ಇಟ್ಟು ಆಡುವುದು. ಮಗುವಿಗೆ ಸುರಕ್ಷಿತ ಸಣ್ಣ ಅಪಘಾತಗಳಿಗೆ ಚಿಕಿತ್ಸೆಯನ್ನು ನಾವು ಮನೆಯಲ್ಲಿಯೇ ಮಾಡಬಹುದು. ಆದರೆ ಕೆಳಗಿನ ಕೆಲವು ಅಪಘಾತಗಳನ್ನು ವೈದ್ಯರಿಗೆ ತಿಳಿಸುವುದು ಅವಶ್ಯ .ಉದಾರಣೆಗೆ-

 • 1 ಮಗು ವಿಷ ಸೇವಿಸಿದ್ದರೆ ಇಲ್ಲವೆ ಚೂಪಾದ ವಸ್ತುವನ್ನು ನುಂಗಿದ್ದರೆ
 • 2 ಮಗು ಯಾವುದಾದರೂ ವಸ್ತುವನ್ನು ಕಿವಿಯಲ್ಲಿ ಇಲ್ಲವೆ ಮೂಗಿನಲ್ಲಿ ತಳ್ಳಿಕೊಂಡಿದ್ದರೆ
 • 3 ಮಗು ತನ್ನನ್ನು ಬೆಂಕಿಯಿಂದ ಸುಟ್ಟುಕೊಂಡು ಘಾಯಗೊಂಡಿದ್ದರೆ
 • 4 ಮಗು ಯಾವುದಾದರೂ ಪ್ರಾಣಿಯಿಂದ ಕಚ್ಚಲ್ಪಟ್ಟದ್ದರೆ.
 • 5 ಮಗುವಿಗೆ ಪ್ರಜ್ಞೆತಪ್ಪಿದ್ದರೆ ಇಲ್ಲವೆ ರಕ್ತಬೀನನಾಗಿ ಕಂಡರೆ.
 • 6 ಮಗು ಬಿದ್ದ ಮೇಲೆ ಇಲ್ಲವೆ ತಲೆ ಏಟಾಗಿ ಮೇಲೆ ವಾಂತಿಮಾಡಿದರೆ .
 • 7 ಘಾಯದಿಂದ ರಕ್ತ ಹರಿಯುವುದು ನಿಲ್ಲದಿದ್ದರೆ ಅಥವಾ ಕೀವುಗೊಂಡು ಮಗುವಿಗೆ ಜ್ವರವಿದ್ದರೆ
 • 8 ಮಗುವಿಗೆ ಮೂಳೆ ಮುರಿದಿದ್ದರೆ ಇಲ್ಲವೆ ಉಳುಕಿಬಿಟ್ಟಿದ್ದರೆ
 • ಮಗು ಯಾವುದೇ ಔಷದ ಇಲ್ಲವೆ ವಿಷವನ್ನು ನುಂಗಿದ್ದರೆ ಮೊಟ್ಟ ಮೊದಲನೆಯದಾಗಿ ಮಗು ವಾಂತಿ ಮಾಡಿಸಬೇಕು. ಬಳಿಕೆ ನಿಮ್ಮಬೆರಳಿನಿಂದ ಮಗುವಿಗೆ ಗಂಟಲನ್ನು ಕೆರಳಿಸಬೇಕು. ಮತ್ತು ಸಾಕಷ್ಟು ನೀರನ್ನು ಕುಡಿಸಬೇಕು. ಮಗು ವಾಂತಿ ಮಾಡಿದ ಮೇಲೆ ಕೆಲವು ದಿನಗಳ ವರೆಗೆ ಕೇವಲ ಹಾಲನ್ನು ಮಾತ್ರ ಆಹಾರವಾಗಿ ಕೊಡಿರಿ.

  ಬಿದ್ದ ಮೇಲೆ ಆಗುವ ಘಾಯಗಳಿಗೆ ತಣ್ಣಗಿರುವ ಬಟ್ಟೆ ಇಲ್ಲವೆ ಐಸ್ ಗಡ್ಡೆಯನ್ನು ಕಟ್ಟಬಹುದು. ಘಾಯ ಕಚ್ಚುವಿಕೆ ಏಟುಗಳನ್ನು ಸಾಬೂನು ಹಾಗು ನೀರಿನಿಂದ ತೊಳೆದು ಆಂಟಿಸೆಪ್ಟಿಕ್ ಔಷಧವನ್ನು ಹಚ್ಬಬೇಕು. ಘಾಯವನ್ನು ಮುಚ್ಚಡಬೇಕು. ರಕ್ತ ಸುರಿಯುವುದನ್ನು ಘಾಯದ ಮೇಲೆ ಒತ್ತಡ ಹಾಕುವುದರ ಮೂಲಕ ನಿಲ್ಲಿಸಬಹುದು.

  ಮಗುವಿಗೆ ಬಲವಾದ ಘಾಯತವಾಗಿದ್ದರೆ ಅದರಲ್ಲಿಯೂ ಬೀದಿಯ ಹೊಲಸು ಇಲ್ಲವೆ ಗೊಬ್ಬರ ಅದಕ್ಕೆ ಅಂಟಿದ್ದರೆ ಟೆಟ್ನಸ್ ವಿರುದ್ದ ಇಂಜೆಕ್ಷನ್ ಕೂಡಲೆ ತೆಗೆದುಕೊಳ್ಳಬೇಕು. ಕೆಲವು ಘಾಯಗಳಿಗೆ ಹೊಲಿಗೆ ಹಾಕಬೇಕಾಗಬಹುದು.

  ಮಗು ಯಾವುದಾದರೊಂದು ವಸ್ತುವನ್ನು ನುಂಗಿ ಗಂಟಲಿನಲ್ಲಿರುವುದರಿಂದ ಉಸಿರುಗಟ್ಟಿಕೊಂಡಿದ್ದರೆ, ಮಗುವನ್ನು ತಲೆಕೆಳಗೆ ಎತ್ತಿಕೊಂಡು ಬೆನ್ನಿನ ಮೇಲೆ ತಟ್ಟಿರಿ. ಅಂಥಾ ಸನ್ನಿವೇಶಗಳಲ್ಲಿ ಮಗುವಿನ ಗಂಟಲಿನ ವಸ್ತುವನ್ನು ತೆಗೆಯಲು ಬೆರಳು ಹಾಕಬೇಡಿರಿ. - ಇದು ಆ ವಸ್ತುವನ್ನು ಇನ್ನೂ ಒಳಕ್ಕೆ ತಳ್ಳುತ್ತದೆ.

  ಸಾಧಾರಣ ಕಾಯಿಲೆಗಳು

  ಹುಳುಗಳು: ಭಾರತದಲ್ಲಿ ಇದು ಬಹಳ ಸಾಧಾರಣ ಪಿನ್ ಹುಳುವಿದ್ದರೆ ಮಗುವಿನ ಮಲ ದ್ವಾರ ಇಲ್ಲವೆ ತೊಡೆಗಳಲ್ಲಿ ತುರಿಸುತ್ತಿರುವುದು ಮಗುವಿನ ನಿರಸವಾದ ಹೊಟ್ಟೆ ನೋವು ಹಸಿವೆಯಿಲ್ಲದಿರುವುದು ಹಾಗು ನೋಡಲು ರಕ್ತಹೀನವಾಗಿ ಕಂಡರೆ ಹುಳಕ್ಕಾಗಿ ಅದರ ಮಲವನ್ನು ಪರೀಕ್ಷಿಸಬೇಕು. ಮಲದಲ್ಲಿ ಹುಳಕಂಡರೆ ವೈದ್ಯರ ಬಳಿಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಬೇಕು. ಸಾಮಾನ್ಯಕವಾಗಿ ಶುಚಿತ್ವವನ್ನು ಪಾಲಿಸುವುದಾದರೆ ಹುಳಕ್ಕಾಗಿ ಔಷದಿ ಕೊಡಬೇಕಾದ ಅವಶ್ಯವಿಲ್ಲ.

  ಗಂಟಲು ನೋವು: ಮಗುವಿಗೆ ಗಂಚಲು ನೋವು ಇಲ್ಲವೆ ಬಾಯಿಂದ ಉಸಿರಾಡುತ್ತಿದ್ದರೆ ಇಲ್ಲವೆ ಕಿವಿ ಸೋರುತ್ತಿದ್ದರೆ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ತೋರಿಸಬೇಕು.ಕ್ರಮವಾಗಿ ವಿಟಾಮಿನ್ ಸಿ ಗುಳಿಗೆಗಳನ್ನು ಉಪಯೋಗಿಸುವವರಿಗೆ ಇಂಥಾ ಸಾಂಕ್ರಾಮಿಕ ರೋಗವು ತಗಲುವುದಿಲ್ಲ.

  ಅಲಜಿ೯ಗಳು: ಚಮ೯ ತುರಿಸುವುಕೆಯು ಗುಳ್ಳೆಗಳು ಇಲ್ಲವೇ ಉಸಿರಾಡುವುದಕ್ಕೆ ಕಷ್ಟ. ಅಥವಾ ಅಸ್ತಮಾ ಮುಂತಾದ ಅಲಜಿ೯ ಸೂಚನೆಗಳು ಮಗುವಿನಲ್ಲಿ ಕಂಡು ಬಂದರೆ ಡಾಕ್ಟರೊಂದಿಗೆ ಸಮಾಲೋಚನೆ ಮಾಡಿರಿ. ಮಗು ಯಾವುದಕ್ಕೆ ಅಲಜಿ೯ಯಾಗುತ್ತಿದೆ ಎಂಬ ಕಾರಣವನ್ನು ಕಂಡು ಹಿಡಿದರೆ, ನೀವು ಅದನ್ನು ತಡೆಗಟ್ಟಲು ಸಾಧ್ಯ.

  ಸಾಂಕ್ರಾಮಿಕ ರೋಗಗಳು

  ಗೌತಲಮ್ಮ: ಸಾಮಾನ್ಯವಾಗಿ ಮಗುವಿಗೆ 2 ಇಲ್ಲವೆ 3 ದಿನಗಳ ಕಾಲ ಹೆಚ್ಚು ಜ್ವರವಿರುವುದು. ಇದರೊಂದಿಗೆ ಮೂಗು ಸೋರುವುದು. ಹಾಗು ಕಣ್ಣು ಕೆಂಪಗಿರುವುದು. ಈ ಹಂತದಲ್ಲಿ ಮಗು ರೇಗುತ್ತಾ ಪ್ರಕಾಶ ಬೆಳಕ್ಕನ್ನು ಎದುರಿಸುತ್ತಿರುವುದು. ಬೆಳಕಿಲ್ಲದ ಕೋಣೆಯಲ್ಲಿ ಮಗು ಅನುಕೂಲವಾಗಿರುವುದು. ಗುಳ್ಳೆಗಳು ಮುಖದ ಹಾಗು ಕತ್ತು ಪ್ರಾರಂಭವಾಗಿ ಕ್ರಮೇಣ ಇಡೀ ದೇಹವೆಲ್ಲಾ ಹರಡುವುದು. ಇದು ಸಾಮಾನ್ಯವಾಗಿ ೩ಇಲ್ಲವೆ ೪ ದಿನಗಳಲ್ಲಿ ಮರೆಯಾಗಲಾರಂಬಿಸಿ ಸುಮಾರು ಒಂದು ವಾರದಲ್ಲಿ ಸಂಪೂಣ೯ವಾಗಿ ಅದೃಶ್ಯವಾಗುವುದು. ಗೌತಲಮ್ಮ ದ ಪರಿಣಾಮವಾಗಿ ಬರಬಹುದಾದ ಕಾಯಿಲೆಗಳು ನಿಮೋನಿಯಾ, ಬ್ರಾಂಕೈಟಿಸ್, ಕಿವಿನೋವು ಮತ್ತು ಅಪರೂಪವಾಗಿ ಮಿದಿಳು ಜ್ವರ. ಇವು ಯಾವುದಾ,ದರೂ ಒಂದು ಕಾಣಿಸಿಕೊಂಡರೆ ಕೂಡಲೇ ಡಾಕ್ಟರಿಗೆ ತಿಳಿಸಬೇಕು.

  ಜೆರಮನ್ ಗೌತಲಮ್ಮ: ಇದು ಇತರ ವಿಧವಾದ ಗೌತಲಮ್ಮಕ್ಕಿಂತಲೂ ಹಗುರವಾದದ್ದು ಮತ್ತು ಅಪರೂಪವಾಗಿ ತೊಡಕುಳ್ಳದ್ದಾಗಿದೆ.ಗಭಿ೯ಣತಾಯಿ ಮೊದಲಿನ ಮೂರು ತಿಂಗಳುಗಳ ತನಕ ಜೆರಮಿನ್ ಗೌತಲಮ್ಮದ ಅಸ್ವಸ್ಥಗೆ ಬಹಿರಂಗಪಡಿಸಬಾರದು. ಹಾಗೆ ಮಾಡಿದರೆ ಗಭ೯ದಲ್ಲಿರುವ ಶಿಶುವಿಗೆ ಗಂಭೀರವಾಗಿ ನ್ಯೂನತೆಯನ್ನು ಉಂಟುಮಾಡುವುದು.

  ಮಂಗಬಾವು: ಮಗುವಿಗೆ ಒಂದೆರಡು ದಿನಗಳ ವರೆಗೆ ಜ್ವರ, ತಲೆನೋವು, ಹಸಿವೆಯಿಲ್ಲದಿರುವುದು. ಹಾಗೂ ಹುದುವಾಗಿ ನೋವು ಬೇನೆಗಳಿರುವುವು. ಇದಾದ ಮೇಲೆ ಕಿವಿಗಲ ಕೆಳಗೆ ಒಂದು ಅಥವಾ ಎರಡೂ ದವಡೆಗಳ ಮೂಲೆಯಲ್ಲಿ ಬಾವು ಕಾಣಿಸಿಕೊಳ್ಳುವುದು. ಈ ಜಾವು ೨ ಇಲ್ಲವೆ ೩ ದಿನಗಳ ಕಾಲ ಹೆಚ್ಚುತ್ತಾ ಬಂದು, ಅನಂತರ ಕಡಿಮೆಯಾಗುವುದು. ಮಕ್ಕಳಲ್ಲಿ ತೊಡಕು ಅಪರೂಪವಾಗಿರುವುದು. ಆದರೆ ಇದು ವೈದ್ಯರಲ್ಲಿ ವೃದ್ಧರಲ್ಲಿ ವೃಷಣ ಹಾಗೂ ಅಂಡಕೋಶ ಶ್ವೇತ ರಸಾಶಯ ಮುಂತಾದವುಗಳ ಉರಿ ಇಲ್ಲವೆ ಮಿದುಳು ಜ್ವರವನ್ನು ಉಂಟುಮಾಡಲು ಸಾಧ್ಯ. ಇವೆಲ್ಲವನ್ನು ತಡೆಗಟ್ಟಲು ಮಗು ತಾಗಲಾರದೆ ಮದ್ದನ್ ಮಗುವಿಗೆ ಹಾಕಿಸಬೇಕು.

  ಕಂಠರೋಗ ಹಾಗೂ ನಾಯಿಗೆಮ್ಮ: ಕಂಠರೋಗದಲ್ಲಿ ಮಗುವಿಗೆ ಜ್ವರವಿದ್ದು ಕಂಠದ ಮೇಲೆ ತೇಪೆವಿರುವುದು. ಮತ್ತು ಕಂಠದ ನೋವಿರುವುದು. ನಾಯಿಗೆಮ್ಮಿನಲ್ಲಿ ಮಗುವಿಗೆ ಜ್ವರದೊಂದಿಗೆ ಸತತವಾಗಿ ಗಟ್ಟಿಕೆಮ್ಮ ಗುರ್ರ‍ನೇ ಇರುವುದು. ಮಗು ಉಸಿರೆಳುವಾಗ ಮಗು ನೀಲಿ ಬಣ್ಣವಾಗಲು ಸಾಧ್ಯ.

  ಪೋಲಿಯೋ ರೋಗ: ಹುದುವಾಗಿ ಮಗುವಿಗೆ ಜ್ವರವೂ ತಲೆನೋವು ಮಗುವಿನ ಕಾಲಿನಲ್ಲಿ ಬೇನೆ ಹಾಗು ಮಗು ಕತ್ತನ್ನು ಅಲ್ಲಾಡಿಸುವಾಗ ನೋವಿರುವುದು. ಇದರ ಬಗ್ಗೆ ಸಂಶಯವಿರುವಾಗ ಡಾಕ್ಟರಿಗೆ ತಿಳಿಸಬೇಕು. ಮಗುವಿಗೆ ಪೊಲಿಯೋ ವಿರುದ್ಧ ತಡೆಮದ್ದನ್ನು ಹಾಕಿಸಿದ್ದರೆ, ಪೋಲಿಯೊ ಬರುವ ಸಾದ್ಯತೆ ಕಡಿಮೆ ಒಂದು ವೇಳೆ ಈ ಪಿಡುಗು ಅಕ್ಕಪಕ್ಕದಲ್ಲಿರುವುದಾದರೆ ಕೆಲವು ವಾರಗಳಿಗಾಗಿ ಮಗುವಿನ ಬದ್ರತೆಯ ನಿಮಿತ್ತ ಗಾಮಾಗ್ಲೊಬುಲಿನ್ ಕೊಡಿರಿ.

  ತಡೆ ಮದ್ದುಗಳು ಈ ದಿವಸಗಳಲ್ಲಿ ವಿಶಾಲವಾಗಿರುವುದರಿಂದ ಈ ರೋಗವುಅಪರೂಪವಾಗಿದೆ.

  ಗಣಜಿಲೆ: ಮಗು ಹಸಿವೆಯನ್ನು ಕಳೆದುಕೊಳ್ಳುತ್ತದೆ. ಮತ್ತು ಸ್ವಲ್ಪ ಜ್ವರವೂ ಇರುವುದು. ಗುಳ್ಳೆಗಳು ತೋರಿಸುವುದು. ಮತ್ತು ಪೈರಿನಂತೆ ವಿಶೇಷವಾಗಿ ಮುಖದ ಮೇಲೆ ಸೊಂಟದ ಮೇಲೆ ತಲೆಯಲ್ಲಿ ಎಳುತ್ತದೆ. ಅವು ಪೂಣ೯ವಾಗಿ ಬೆಳೆಯಲು ೩ ದಿನಗಳಾಗುತ್ತದೆ ಕೇಲಮಿನ್ ಲೋಷನ್ ತುರುಸುವುದನ್ ತಡೆಗಟ್ಟಲು ಹೆಚ್ಚಿರಿ. ಹುಣ್ಣುಗಳನ್ನು ತುರುಸುವುದರಿಂದ ಕೀವು ಉಂಟಾಗುತ್ತದೆ. ಆದ್ದರಿಂದ ಮಗುವನ್ನು ತುರುಸುವುದಕ್ಕೆ ಅನುಮತಿಸಬೇಡಿರಿ. ಗುಳ್ಳೆಯಲ್ಲಿ ಕೀವಿದ್ದರೆ, ಡಾಕ್ಟರಿಗೆ ಆ ಸಂಶಯವನ್ನು ತಿಳಿಸಬೇಕು.

  ಆಹಾರ ಸಂಬಂಧವಾದ ರೋಗಗಳು: ಮಗುವಿಗೆ ಒಳ್ಳೆಯ ಆಹಾರ ಹಾಕಗೂ ಸಾಕಷ್ಟು ವಿಟಮಿನ್ಗಳನ್ನು ಕೊಡುವುದರ ಮುಖಾಂತರ ರಿಕೆಟ್ ಮುಂತಾದ ರೋಗಗಳನ್ನು ತಡೆಗಟ್ಟಬಹುದು. ಆಹಾರದ ಕೊರತೆಯು ಭಾರತೀಯ ಮಕ್ಕಳಲ್ಲಿ ಸಾಮಾನ್ಯವಾಗಿದೆ. ಮಕ್ಕಳು ಒಳ್ಳೆಯ ಆಹಾರದ ಮೂಲಕ ಇಂತವುಗಳನ್ನು ತಡೆಗಟ್ಟಬಹುದು. ಮಗುವಿಗೆ ಮಲ್ಟಿವಿಟಾಮಿನ್ ಸಿದ್ದತೆಗಳನ್ನು ಕ್ರಮೇಣವಾಗಿ ಕೊಡುವುದು ಒಳ್ಳೆಯದು.

  ವಾತರೋಗ ಜ್ವರ: ಇದು ಗಂಟಲಿನ ನೋವು ಇಲ್ಲವೆ ಶೀತದ ಬಳಿಕೆ ೨ ಇಲ್ಲವೆ ೩ತರುವಾಯ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ. ಮಗುವಿಗೆ ಕೀಳುಗಳಲ್ಲಿ ನೋವಿರುವುದು ಕೀಲು ಬೆಚ್ಚಗೆ ಬಾತುಕೊಂಡು ಕೆಂಪಾಗಿ ಬೇನೆಯಿರುವುದು. ೨ ಇಲ್ಲವೆ ೩.ದಿನಗಳ ನಂತರ ಒಂದು ಕೀಳು ಸಾಮಾನ್ಯವಾಗಿ ಇನ್ನೊಂದು ಕೀಲು ಬಾಧಿತವಾಗುವುದು. ಇದಲ್ಲದೆ ಮಗುಕವಿಗೆ ಜ್ವರ ಎದೆನೋವು ಉಸಿರಾಟದ ಸಮಸ್ಯೆಯಿರುವುದು. ಹೃದಯವು ತಿಳಿಸಬೇಕು. ಮಗುವಿಗೆ ವಾತರೋಗದ ಜ್ವರವು ಆಗಾಗ್ಗೆ ಕಾಣಿಸಿಕೊಂಡರೆ ಅವರ ಹೃದಯಕತವು ನಾಶವಾಗಲು ಸಾಧ್ಯ. ಅಂಥಾ ಸನ್ನಿವೇಶದಲ್ಲಿ,

  ಮಗುವು ವೈದ್ಯರಿಂದ ಕ್ರಮವಾಗಿ ಪರಿಶೋಧಿಸಲ್ಪಡಬೇಕು. ಮತ್ತು ಮಗು ವೃದ್ಧನಾಗುವತನಕ ಆಂಟಿಬಯೋಟಿಕ್ ಕೊಡಬೇಕು. ಹೀಗೆ ಹೇಳಲ್ಪಟ್ಟದ್ದು ನಮ್ಮನ್ನು ಅಜೀಣ೯ಮಾಡುವುದಕ್ಕಲ್ಲ ಮತ್ತು ನಮ್ಮ ಮಕ್ಕಳಿಗೆ ಸ್ವಲ್ಪ ಕಾಯಿಲೆಯಾದರೂ ನಾವು ಆಗಾಗ್ಗೆ ಚಿಂತೆಯಿಂದಿರುವುದಕ್ಕೆ ಅಲ್ಲ. ಮಕ್ಕಳು ಅತಿಶಯವಾದ ಸುಲಭದಿಂದ ಹಾಗೂ ಅನೇಕ ಶಾರೀರಿಕ ಅಡ್ಡಿಗಳಿಂದ ಜಯ ಹೊಂದಲು ಮಕ್ಕಳು ಕಲಿಯುತ್ತಾರೆ. ಮಕ್ಕಳಿಗಾಗಿ ದೇವರಿಗೆ ವಿಶೇಷವಾಗಿ ಶೃದ್ದೆಯಿಕದೆ. ಮತ್ತು ಅವರನ್ನು ಸುರಕ್ಷಿತವಾಗಿ ದೇವರ ಹಸ್ತಗಳಿಗೆ ಒಪ್ಪಿಸಬೇಕು.

  ತಾಯಿ ಸಂದಿಸಬಹುದಾದ ಉದ್ವೇಗ ಸಮಸ್ಯೆಗಳು

  ತಾಯಂದಿರು ಹೊಂದಬಹುದಾದ ಕೆಲವು ಉದ್ವೇಗ ಸಮಸ್ಯೆಗಳು ಹಾಗೂ ಭಾವ ಬದಲಾವಣೆಗಳ ಬಗ್ಗೆ ಕೆಲವು ಮಾತುಗಳೊಂದಿಗೆ ಮುಕ್ತಾಯಗೊಳಿಸಬಯಸುತ್ತೇನೆ. ಇದಕ್ಕೆ ಅನೇಕ ಕಾರಣಗಳಿವೆ. ನಡುವಯಸ್ಸಿನ ತಾಯಂದಿರಿಗೆ ಹಾರಮೋನಿನ ಕಾರಣವಿರಬಹುದು. ಕೆಲವೊಮ್ಮೆ ದಣಿವು ಇಲ್ಲವೆ ಮನೆಯಲ್ಲಿ ಮಕ್ಕಳೊಂದಿಗಿರುವ ಒತ್ತಡದ ಕಾರಣಗಳಿರಬಹುದು.ಯಾವ ಕಾರಣವಿದ್ದರೂ ಸಾಕಷ್ಟು ಊಟ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ನಿಮ್ಮ ಕೈಯಿಂದ ಆಗದ ಕೆಲಸಗಳನ್ನು ಮನೆಯ ಹೊರಗಿಂದ ತೆಗೆದುಕೊಳ್ಳಬೇಡಿರಿ. ಸ್ವಲ್ಪ ಕಬ್ಬಿಣದ, ಕಾಲ್ಸಿಯಂ ಹಾಗೂ ವಿಟಮಿನ್ ಗುಳಿಗೆಗಳನ್ನು ನಿಮ್ಮ ಆಹಾರವನ್ನು ಸೇರಿಸಿಕೊಳ್ಳಿರಿ.

  ಈ ಸಮಸ್ಯೆ ಮುಂದುರಿದರೆ ವೈದ್ಯರ ಸಹಾಯಪಡೆಯುವುದು ಅವಶ್ಯ. ನಮ್ಮ ಪರಲೋಕದ ತಂದೆ - ನಾವು ಧೂಳಿಯಾಗಿದ್ದೇವೆ ಎಂದು ತಿಳಿದಿರುತ್ತಾನೆ. ಪ್ರತಿಯೊಂದು ಸನ್ನಿವೆಶದಲ್ಲಿ-ಎಂಥಾ ಸಮಸ್ಯೆಯಿದ್ದರೂ ನಾವು ಜಯಕರವಾಗಿ ಹೊರ ಬರುವಂತೆ ಆತನ ಕೃಪೆಯು ಸಾಕಾಗಿರುತ್ತದೆ.

  ಶಾಪವು ರೋಗವು ಇರುವ ಈ ಲೋಕದಲ್ಲಿ ನಾವು ಜೀವಂತ ದೇವರೊಂದಿಗೆ ಸಂಪಕ೯ವಿಟ್ಟುಕೊಂಡಿರುವುದು ಎಷ್ಟು ಆಶ್ಚಯ೯ಕರವಾದದ್ದು ಇದು ನಿಜವಾಗಿಯೂ ಹೇಳಲಶಕ್ಯವಾದ ಭಾಗ್ಯ. ನಾವು ಎಲ್ಲಾ ಸನ್ನಿವೇಶಗಳಲ್ಲಿಯೂ ದೇವರಿಗೆ ಸ್ತೋತ್ರ ಮಮಾಡಲು ಕಲಿತುಕೊಂಡರೆ ಮತ್ತು ನಾವು ಎಲ್ಲಾ ಕಹಿಭಾವನೆಗಳಿಂದ ಬಡುಗಡೆಯಾಗಿ ನಮ್ಮ ಎಲ್ಲಾ ಚಿಂತೆಗಳನ್ನು ಆತನ ಮೇಲೆ ಹಾಕುವುದಾದರೆ, ನಾವು ಸಂಧಿಸುವ ಪ್ರತಿಯೊಂದು ಸಂದಿಗ್ದ ಪರಿಸ್ಥಿತಿಯಲ್ಲಿಯೂ ಜಯಹೊಂದುವೆವು.

  ಕೊನೆಯದಾಗಿ ಆತನು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಹಾಗೂ ತೊರೆಯುವುದಿಲ್ಲ ಎಂಬ ಬದಲಾಗದ ದೇವರ ವಾಗ್ದಾನವನ್ನು ಎಲ್ಲಾ ಸಮಯದಲ್ಲಿಯೂ ನೆನಪುಮಾಡಿಕೊಳ್ಳೋಣ. (ಇಬ್ರಿಯ 13:5,6).

  ಅಧ್ಯಾಯ
  ಈ ಪುಸ್ತಕವೂ ನೀವೂ

  ತಾಯಿಯಾಗಿ ಕರೆಯಲ್ಪಟಿರುವುದು ಈ ಪ್ರಪಂಚದಲ್ಲಿಯೇ ಒಂದಾನೊಂದು ಶ್ರೇಷ್ಠತೆ. ಆದರೆ ಅನೇಕ ತಾಯಂದಿರು ಇದನ್ನು ಗ್ರಹಿಸಲಿಲ್ಲ. ಆದ್ದರಿಂದ ಅವರು ನಿತ್ಯವು ಮನಗುಂದಿದವರಾಗಿ ನಿಂದನೆಯಲ್ಲಿದ್ದಾರೆ.

  ನಾವು ಜೀವಿಸುತ್ತಿರುವ ಈ ಪ್ರಪಂಚದಲ್ಲಿ ಮಕ್ಕಳನ್ನು ದೈವಜ್ಞಾನದಲ್ಲಿ ಬೆಳೆಸುವುದು ಅಷ್ಟೊಂದು ಸುಲಭಕರವಲ್ಲ. ಆದರೆ ದೇವರು ಸಹಾಹಿಸುವಾಗ ಯಾವುದೂ ಅಸಾಧ್ಯವಲ್ಲ.

  ಈ ಪುಸ್ತಕವು ಮನಗುಂದಿ ಭಾರವನ್ನು ಹೊತ್ತು ಮತ್ತು ಆತ್ಮಿಯ ಸಹಾಯದ ಅವಶ್ಯಕತೆಯನ್ನು ಗ್ರಹಿಸಿ ತಮ್ಮ ಜವಾಬ್ಧಾರಿಕೆಯನ್ನು ಪೂರೈಸಲು ಉತ್ತೇಜನವನ್ನು ಬಯಸುವ ಹೆಂಡತಿಯರಿಗೆ ಮತ್ತು ತಾಯಂದಿರಿಗಾಗಿ ಬರೆಯಲ್ಪಟ್ಟಿದೆ. ಈ ಪುಸ್ತಕದ ಗ್ರಂಥ ಕತ೯ರು ವೈದ್ಯರು ಮತ್ತು ಪುಸ್ತಕದ ಕೊನೆಯಲ್ಲಿ ಮಗುವನ್ನು ನಿರೀಕ್ಷಕ ತಾಯಂದಿರಿಗಾಗಿ ಮತ್ತು ಹೊಸ ತಾಯಂದಿರಿಗಾಗಿ ಕೆಲವು ಪ್ರಾಯೋಗಿಕ ಸಲಹೆಗಳನ್ನು ಕೂಡಿಸಿದ್ದಾರೆ.

  ಆನಿ ಝ್ಯಾಕ್ ಪೂನನ್, ಝ್ಯಾಕ್ ಪೂನನ್ ರವರ ಪತ್ನಿ ಮತ್ತು ನಾಲ್ಕು ಗಂಡು ಮಕ್ಕಳ ತಾಯಿ. .

  ಅಧ್ಯಾಯ
  ಪುರವಣೆ ಒಂದು -ನಿರೀಕ್ಷಕ ತಾಯಂದಿರಿಗೆ ಕೆಲವು ಸಲಹೆಗಳು

  ಮಗುವಿನ ಆಗಮನಕ್ಕಾಗಿ ಸಿದ್ಧತೆಯಲ್ಲಿರುವವರಿಗೆ ಹೊಸದಾಗಿ ಮದುವೆಯಾಗಿರುವ ಹೆಂಡತಿ ತಾನು ಒಂದು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಅನ್ನಿಸಿದರೆ ಆದಷ್ಟು ಬೇಗ ವೈದ್ಯರನ್ನು ಸಂದಶಿ೯ಸಬೇಕು. ಗಭ೯ಧರಿಸುವ ಮೊದಲ ಗುರುತುಗಳು ಮುಟ್ಟು ನಿಂತುಹೋಗುವುದು,. ವಾಕರಿಕೆ ಮತ್ತು ವಾಂತಿ ಮೂತ್ರ ವಿಸಿಜ೯ನೆ ಪದೇ ಪದೇ ಆಗುವುದು ಮತ್ತು ಎದೆಯ ಭಾಗದಲ್ಲಿ ಬದಲಾವಣೆಗಳು.

  ಋತು ಮಾಸದ ಕಡೆಯ ದಿನದಿಂದ ಪ್ರಾರಂಭಿಸಿ ೯ ತಿಂಗಳು ಮತ್ತು ೭ ದಿವಸಗಳು ಪ್ರಸವದ ನಿರೀಕ್ಷಣೆಯ ತಾರೀಖು. ತಂದೆ ಅಥವಾ ತಾಯಿಯ ದೇಹದಲ್ಲಿ ಪ್ರಕೃತಿಯಲ್ಲಿ ಕೆಲವು ಸಂಗತಿಗಳಿಗೆ ಚಿಕೆತ್ಸೆಯ ಅವಶ್ಯಕತೆ ಇರುತ್ತದೆ. ಕೆಲವು ಕಾಯಿಲೆಗಳು ತಂದೆತಾಯಿಗಳು ಕಂಡು ಬರದಿದ್ದರೂ ಮಗುವಿಗೆ ಬರಬಹುದು. ಕೆಲವು ಕಾಯಿಲೆಗಳು ಸರಿಪಡಿಸಬಹುದು. ಒಂದು ವೇಳೆ ನಿಮಗೆ ಅನುಮಾನವಿದ್ದರೆ ವೈದ್ಯಕಿಯ ತಪಾಸಣೆಗೆ ಹೋಗುವುದು ಒಳ್ಳೇದು.

  ನಿಸ್ಸಂಶಯವಾಗಿ ಗಭ೯ಧರಿಸುವುದು ಒಂದು ಕಾಯಿಲೆಯಲ್ಲ. ಒಂದು ವೇಳೆ ನೀವು ಆರೋಗ್ಯ ಮತ್ತು ಅನಾರೋಗ್ಯದ ಮಧ್ಯ ಇರುವುದಾದರೆ ಆಗ ಗಭ೯ಧರಿಸುವಂತದ್ದು ನಿಮ್ಮನ್ನು ಅಸ್ವಸ್ಥ ಮಾಡುತ್ತದೆ. ಒಳ್ಳೇಯ ಪುಷ್ಠಿಕರವಾದ ಆಹಾರ ಮತ್ತು ಆರೋಗ್ಯಕರ ಅಭ್ಯಾಸಗಳು ಪ್ರಾಮುಖ್ಯ. ಮತ್ತು ಅದೇ ಸಂದಭ೯ದಲ್ಲಿ ಮನಸ್ಸಿಗೂ ಸಹ ಪೋಷಣೆ ಅವಶ್ಯ. ದೇವರ ವಾಕ್ಯವನ್ನು ಧ್ಯಾನಿಸುವುದರಿಂದ ನಿಮ್ಮ ಮನಸ್ಸಿನ ಉದ್ವೇಗಕ್ಕೆ ಉಪಶಮನ ನೀಡುತ್ತದೆ. ಮತ್ತು ನಿಮ್ಮ ಆರೋಗ್ಯವನ್ನು ಮತ್ತು ನಿಮ್ಮ ಹುಟ್ಟದೆ ಇರುವ ಮಗುವಿಗೂ ಸಹ ಸುಧಾರಿಸುತ್ತದೆ. ಕೆಲವು ವೇಳೆ ಬೆಳಿಗ್ಗೆ ನಿಮಗೆ ಆಯಾಸವಾಗಿರುವ ಹಾಗಿರುತ್ತದೆ. ಅಥವಾ ಅನಾರೋಗ್ಯದಿಂದ ಸತ್ಯವೇದದ ಕಡೆಗೆ ಮನಸ್ಸನ್ನು ಕೇಂದ್ರಿಕರಿಸಲು ಆಗದೆ ಇರುತ್ತದೆ. ಆಗ ಒಂದೇ ಒಂದು ವಾಕ್ಯವನ್ನು ಧ್ಯಾನಮಾಡಿ ಅಥವಾ ಒಳ್ಳೇಯ ಅನುದಿನದ ಆಹಾರದ ಪುಸ್ತಕ ಅಥವಾ ಹಾಡಿನ ಪುಸ್ತಕವನ್ನು ಓದಿ. ನಿಮ್ಮ ಗಂಡನನ್ನು ಧ್ಯಾನದ ಸಮಯ ಮತ್ತು ಪ್ರಾಥ೯ನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕೇಳಬಹುದು.

  ಆಹಾರ ಕ್ರಮ

  ನಿಮ್ಮ ಹೊಟ್ಟೆಯಲ್ಲಿರುವ ಮಗು ನೀವು ಏನನ್ನು ತಿನ್ನುತ್ತಿರೋ ಅದರ ಮೂಲಕ ಆಹಾರವನ್ನು ಪಡೆಯುತ್ತದೆ. ಆದ್ದರಿಂದ ನಿಮ್ಮ ಅನುದಿನದ ಆಹಾರ ಈ ಕೆಳಕಂಡಂತೆ ಸಾಧಾರಣವಾದದ್ದಾಗಿರಬಹುದು.:

 • ಅಕ್ಕಿ ಗೋದಿ ಅಥವಾ ಬೇರೆ ಆಹಾರ ಕಾಳುಗಳು.
 • 2 ರಿಂದ 4 ಲೋಟ ಹಾಲು.
 • ಮೊಟ್ಟೆ ಮಾಂಸ ಅಥವಾ ಮೀನು.
 • ಕಡಲೆ ಮತ್ತು ಬೇಳೆ (ದ್ವಿದಳ ಧಾನ್ಯ ) ಮೊಳಕೆ ಕಟ್ಟಿದ ದ್ವಿದಳ ಧಾನ್ಯ ಬಹಳ ಒಳ್ಳೇದು.ಮೊಸರು
 • ತರಕಾರಿಗಳು - ಎಲೆಗಳುಳ್ಳ ಮತ್ತು ಎಲೆಗಳಿಲ್ಲದ ಕೊಬ್ಬು ಮತ್ತು ಎಣ್ಣೆಗಳು
 • ಹಸಿಯಾದ ಅಥವಾ ಒಣಗಿದ ಹಣ್ಣುಗಳು.
 • ಮಾಂಸ ಮತ್ತು ಮೀನಿಗೆ ಬದಲಾಗಿ ಸಸ್ಯಹಾರಿಗಳು ತಮ್ಮ ಆಹಾರದಲ್ಲಿ ಮೊಸರು ಮತ್ತು ಬೇಳೆ (ದ್ವಿದಳ ) ಕಾಳುಗಳನ್ನು ಬಹಳಷ್ಠು ಸೇವಿಸಬೇಕು. ಅಕ್ಕಿ ಗೋದಿ ಮತ್ತು ಕೊಬ್ಬು ಇವು ಬಹಳವಾಗಿ ಶರೀರವನ್ನು ದಪ್ಪಗೆ ಮಾಡುವುದರಿಂದ ಹೆಚ್ಚಾಗಿ ಸೇವಿಸಬಾರದು. ಮಗುವಿಗೆ ಮೂಳೆ ಮತ್ತು ಹಲ್ಲು ಬೆಳೆಯಲು ನಿಮ್ಮ ಆಹಾರ ಕ್ರಮದಲ್ಲಿ ವಿವಿಧ ಜೀವಸತ್ವಗಳು ಕಬ್ಬಿಣದಿಂದ ಕೂಡಿದ ಮಾತ್ರೆಗಳು ಮತ್ತು ಕ್ಯಾಲ್ಸಿಯಂನಿಂದ ಒಳಗೊಂಡ ಆಹಾರ ಪದಾಥ೯ಗಳನ್ನು ಕೂಡಿಸಿಕೊಳ್ಳಬೇಕು. ಅಧಿಕವಾಗಿ ಉಪ್ಪನ್ನು ಮತ್ತು ಎಣ್ಣೆಯಿಂದ ಕರೆದ ರಸ್ತೆಯ ಬದಿಯ ಪದಾಥ೯ಗಳನ್ನು ತಿನ್ನುವುದನ್ನು ತಡೆಗಟ್ಟಬೇಕು.

  ನಿಮ್ಮ ವೈದ್ಯರ ಹೇಳಿಕೆಯ ಪ್ರಕಾರ ಕಬ್ಬಿಣ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಸಿಯಂ ಮಾತ್ರೆಗಳನ್ನು ಕ್ರಮವಾಗಿ ಗಭ೯ಧರಿಸಿದ ಪ್ರಥಮ ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕು. ಮತ್ತು ಆರು ತಿಂಗಳ ನಂತರ ಟೆಟನಸ್ ವಿರುದ್ದ ರಕ್ಷಣೆ ಪಡೆಯಬೇಕು.

  ಶುದ್ಧಗಾಳಿ

  ಆಗಾಗ ನಿಮ್ಮ ಗಾಳಿಯಾಡದ ಅಡಿಗೆ ಮನೆಯಿಂದ (ಇಲ್ಲವೆ ಆಫೀಸ ) ಹೊರ ಬಂದು ದೇವರ ಶುದ್ಧಗಾಳಿಯನ್ನು ಉಸಿರಾಡಲು ಸಮಯ ತೆಗೆದುಕೊಳ್ಳಿ. ಇದು ತುಂಬಾ ಚೈತನ್ಯಗೊಳಿಸುತ್ತದೆ.ನಿಮ್ಮ ಗಂಡನೊಂದಿಗೆ ಸಂಜೆ ತಿರುಗಾಡಿರಿ. ಇದು ನಿಮ್ಮನ್ನು ನಿಮ್ಮ ಗಂಡನನ್ನು ಚೈತನ್ಯಗೊಳುಸುತ್ತದೆ. ಮತ್ತು ವಿನೊದಗೊಳಿಸುತ್ತದೆ. ನಡೆಯುವಾಗ ಒಳ್ಳೆಯ ಭಂಗಿಯನ್ನು ಉಪಯೋಗಿಸಿರಿ.

  ವ್ಯಾಯಾಮ

  ದೈಹಿಕ ವ್ಯಾಯಾಮ ಆಹಾರ ಜೀಣ೯ವಾಗಲು ಸರಿಯಾಗಿ ನಿದ್ರಿಸಲು ಮಲಭದ್ದತೆಯನ್ನು ತಡೆಗಟ್ಟಲು ಮತ್ತು ನಿಮ್ಮ ಮಾಂಸಖಂಡಗಳು ಸರಿಯಾಗಿ ಕೆಲಸಮಾಡಲು ಸಹಾಯಿಸುತ್ತದೆ. ಸಮಯ ಬಂದಾಗ ನಿಮ್ಮ ಮಗುವನ್ನು ಸುಲಭವಾಗಿ ಪ್ರಸವಿಸಲು ಸಹಾಯವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಕೆಲಸಗಳನ್ನು ನಿಲ್ಲಿಸಬೇಡಿ. ಆದರೆ ಹೆಚ್ಚಾಗಿ ಶ್ರಮಪಡಿಸುವುದರ ಬಗ್ಗೆ ಎಚ್ಚರಿಕೆ ವಹಿಸಿ.

  ಆಳವಾಗಿ ಉಸಿರಾಡುವ ವ್ಯಾಯಾಮಗಳು ಮತ್ತು ಎದೆಯನ್ನು ಕೆಳಹೊಟ್ಟೆಯನ್ನು ಹಿಗ್ಗಿಸುವುದು ಸಹಾಯಕಾರಿ. ಕಾಲನ್ನು ಮಡಚಿಕೊಂಡು ನೆಲದ ಮೇಲೆ ಕೆಲವೊಂದು ಸಾರಿ ಕುಳಿತುಕೊಳ್ಳುವುದು ನಿಮ್ಮ ಮೂತ್ರ ಪಿಂಡದ ಮಾಂಸ ಖಂಡಿತಗಳಿಗೆ ಒಳ್ಳೆಯದು.

  ನಿಮ್ಮ ಬೆನ್ನಿಗೆ ಆಯಾಸವಾಗುವುದನ್ನು ತಡೆಯಿರಿ. ಭಾರವಾದ ವಸ್ತುಗಳನ್ನು ಎತ್ತುವುದು ತಡೆಯಿರಿ. ನೀವು ಬೊಗ್ಗಬೇಕಾದ ಸಂದಭ೯ ಬಂದರೆ ನಿಮ್ಮ ಮೊಣಕಾಲುಗಳನ್ನು ಮಡಚಿ ಮತ್ತು ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿರಿ

  ಶುಧ್ಧತೆ ಮತ್ತು ವಿಶ್ರಾಂತಿ

  ಪ್ರತಿ ದಿನ ನೀವು ಸ್ನಾನಮಾಡಬೇಕು. ಮತ್ತು ನಿಮ್ಮನ್ನು ನೀವು ಚೆನ್ನಾಗಿ ತೊಳೆದುಕೊಳ್ಳಲು ಗಮನ ತೆಗೆದುಕೊಳ್ಳಿರಿ. ರಾತ್ರಿಯಲ್ಲಿ ನೀವು ಚೆನ್ನಾಗಿ ವಿಶ್ರಮಿಸಬೇಕು. ಮತ್ತು ಸಾಧ್ಯವಾದರೆ ಮದ್ಯಾಹ್ನದ ಊಟದ ನಂತರ ಒಂದು ಗಂಟೆಯ ಕಾಲ ನಿದ್ರಿಸಿ. ನಿಮ್ಮ ಅನುದಿನದ ಕೆಲಸದ ಮಧ್ಯ ಆಗಾಗ ಕೆಲವು ನಿಮಿಷ ವಿಶ್ರಮಿಸಿ ಮತ್ತು ಸ್ವಲ್ಪ ಹಣ್ಣು ಹಾಗೂ ಒಂದು ಕಪ್ ಮೊಸರನ್ನು ಸೇವಿಸಿ.

  ನಿಮ್ಮ ಗಂಡನ ಪಾತ್ರ

  ಗಭ೯ಧರಿಸುವಂತಹದು ಸ್ತ್ರೀಯರಿಗೆ ಉದ್ವೇಗ ಒತ್ತಡದ ಸಂದಭ೯ ಅಥ೯ ಮಾಡಿಕೊಳ್ಳುವ ಹಾಗು ಕರುಣೆ ತೋರಿಸುವ ಗಂಡನು ತನ್ನ ಹೆಂಡತಿಗೆ ಜೀವನ ಸುಲಭಗೊಳಿಸುತ್ತಾನೆ. ಆದ್ದರಿಂದ ನಿಮ್ಮ ಸಮಸ್ಯೆಗಳನ್ನು ನಿಮ್ಮ ಗಂಡನ ಬಳಿ ಹಂಚಿಕೊಳ್ಳಿರಿ "ನೀವಿಬ್ಬರು ಜೀವವಕ್ಕೆ ಬಾಧ್ಯರಾಗಿದ್ದಿರಿ."(1 ಪೇತ್ರ 3: 7)

  ಅನೇಕ ಪುರುಷರು ಗಭ೯ದಾರಣೆಯ ವೈದ್ಯಕೀಯ ಹಾಗೂ ಶರೀರ ವಿಜ್ಞಾನದ ಸಂಬಂಧದ ಬಗ್ಗೆ ತಿಳಿದಿಲ್ಲ. ನೀವು ವೈದ್ಯರ ಬಳಿ ಹೋಗುವಾಗ ನಿಮ್ಮ ಗಂಡನನ್ನು ಜೊತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿ. ಆಗ ಅವರಿಗೂ ಈ ಸಂದಭ೯ಗಳಲ್ಲಿ ತಮ್ಮ ಪಾತ್ರ ಏನೆಂಬುದು ತಿಳಿಯುತ್ತದೆ.

  ಕೆಲವು ನಿಷೆಧಗಳು (ಮಾಡಬಾರದವುಗಳು)

 • 1 ಮಾನಸಿಕ ಒತ್ತಡ ಹಾಗೂ ಆಯಾಸಗೊಳಿಸುವುದನ್ನು ಮಾಡಬೇಡಿರಿ.
 • 2 ಆಕಸ್ಮಿಕವಾಗಿ ಬೀಳುವ ಅಥವಾ ನೋವುಂಟಾಗುವ ಅಥವಾ ಭಾರವಾದ ವಸ್ತುಗಳನ್ನು ಎತ್ತುವ ಸಂದಭ೯ಗಳನ್ನು ಅನುಮತಿಸಬೇಡಿರಿ.
 • 3 ಮುಖ್ಯವಾಗಿ ಮೊದಲು ಮೂರು ತಿಂಗಳುಗಳವರೆಗೆ ಬಹುದೂರದ ಕುಲುಕಿಸುವಂತಹ ಪ್ರಯಾಣವನ್ನು ಮಾಡಬೇಡಿರಿ. ಬಹಳಷ್ಟು ಪ್ರಯಾಣ ಮಾಡುವುದು ಉತ್ತಮ. ನಿಮ್ಮ ಕಾಲುಗಳನ್ನು ಎತ್ತರಿಸಿ ಇಡಿರಿ.
 • 4 ಮಲಭದ್ದತೆಯಾಗಲು ಬಿಡಬೇಡಿರಿ. ಸಾಕಷ್ಟು ಹಣ್ಣು, ನೀರು ಸೇವಿಸಿ.
 • 5 ವೈದ್ಯರ ಸಲಹೆ ಇಲ್ಲದೆ ಭೇದಿ ಔಷದಿ,ಶಾಮಕ ಔಷದಿ ಅಥವಾ ಬೇರೆ ಯಾವುದೆ ತರಹದ ಔಷದಿಗಳನ್ನು ತೆಗೆದುಕೊಳ್ಳಬೇಡಿರಿ.
 • 6 ಬಿಗಿಯಾದ ಬಟ್ಟೆ ಹಾಗೂ ಹಿತಕರವಲ್ಲದ ಪಾದರಕ್ಷೆಗಳನ್ನು ಧರಿಸಿಕೊಳ್ಳಬೇಡಿರಿ.
 • 7 ಗಭ೯ಧಾರಣೆಯ ಸಮಯದಲ್ಲಿ ಸಣ್ಣಗಾಗಲು ಪ್ರಯತ್ನಿಸಬೇಡಿರಿ.
 • 8 ಯಾರಿಗಾದರೂ ಕೆಂಪುಗುಳ್ಳೆಗಳೇಳುವ ಅಂಟುರೋಗ ಇರುವುದಾದರೆ ಮತ್ತು ಸೊಂಕು ರೋಗವಿರುವಂತವರ ಬಳಿಗೆ ಹೋಗಬೇಡಿ. ಯಾವುದೇ ವಿಧವಾದ ಎಕ್ಸ-ರೇ ತೆಗೆಯುವುದನ್ನು ತಡೆಗಟ್ಟಿರಿ. ಒಂದು ವೇಳೆ ಯಾವುದೇ ಎಕ್ಸ-ರೇ ತೆಗೆಯುವ ಅವಶ್ಯಕತೆ ಇರುವುದಾದರೆ ನಿಮ್ಮ ಕೆಳ ಹೊಟ್ಟೆ ಸೀಸದ ತೆರೆಯಿಂದ ಸಂರಕ್ಷಿಸಲ್ಪಡಬೇಕು.
 • ಜನನ ಪೂವ೯ದ ಪರೀಕ್ಷೆಗಳು.

  ನಿಮ್ಮ ವೈದ್ಯರನ್ನು ತಪ್ಪದೆ ಬೇಟಿಮಾಡಬೇಕು.

  ನಿಮ್ಮ ವೈದ್ಯರಿಗೆ ತಕ್ಷಣ ತಿಳಿಸಬೇಕಾದ ಕೆಲವು ಸಂಗತಿಗಳು.

 • ಯಾವುದೇ ಸಂಧಭ೯ದಲ್ಲಿ ಕಂದು ಬಣ್ಣ ಅಥವಾ ರಕ್ತ ವಿಸಜಿ೯ಸಲ್ಪಟ್ಟರೆ ವೈದ್ಯರಿಗೆ ತಿಳಿಸಬೇಕು.
 • ಆರು ತಿಂಗಳ ನಂತರ -- ಅತೀಯಾದ ತಲೆನೋವು ದೃಷ್ಟಿಯಲ್ಲಿ ಅಡ್ಡಿ ಕಾಲಿನ ಊತ, ಮೂತ್ರ ವಿಸಜ೯ನೆಯಲ್ಲಿ ಕಡಿಮೆ ದೇಹದ ತೂಕದಲ್ಲಿ ಹೆಚ್ಚುವಾಗ (ಗಭ೯ಧರಿಸಿ ಮೂರುತಿಂಗಳ ನಂತರ ತಿಂಗಳಿಗೆ ಸುಮಾರು ೧.೫ ಅಥವಾ ೨ ಕಿಲೋ ತೂಕವನ್ನು ಹೊಂದಿಕೊಳ್ಳಬಹುದು. ಮಗುವು ಚಲಿಸದೆ ಇರುವಾಗ ಕೆಳ ಹೊಟ್ಟೆಯ ನೋವು ಮತ್ತು ವಾಂತಿ ಮುಖ ಊದುವುದು, ಮತ್ತು ಪಾದಗಳು ಊದಿಕೊಂಡಾಗ ವೈದ್ಯರಿಗೆ ತಿಳಿಸಬೇಕು.
 • ಕೆಲವು ಸಾಧಾರಣ ಪರಿಹಾರಗಳು

  ಬೆಳಿಗ್ಗೆಯ ಕಾಯಿಲೆಗೆ-- ಯಾವಾಗಲೂ ವಾಡಿಕೆಯಾಗಿ ಏಳುವುದಕ್ಕಿಂತ ಅಧ೯ಗಂಟೆ ತಡವಾಗಿ ಏಳಿ. ಕಾಲು ಚಮಚ ದೋಸೆ ಸೋಡವನ್ನು ಒಂದು ಕಪ್ ನೀರಿನೊಂದಿಗೆ ಬೆರೆಸಿ ನಿಮ್ಮ ಬಾಯನ್ನು ಕಪ್ಪಳಿಸಿ ತೊಳೆಯಿರಿ. ಮತ್ತು ಒಂದು ಲೋಟ ನಿಂಬೆ ಹಣ್ಣಿನ ರಸವನ್ನು ಕುಡಿಯಿರಿ. ಕೊಬ್ಬಿದ ಆಹಾರವನ್ನು ಬಿಟ್ಟು ಬಿಡಿರಿ.

  ಕಾಲುಗಳ ನೋವಿಗಾಗಿ -- ಕಾಲುಗಳನ್ನು ಮಡಿಚುವುದನ್ನು ಮತ್ತು ಬಗ್ಗುವುದನ್ನು ಆದಷ್ಟು ಮಟ್ಟಿಗೆ ತಡೆಯಿರಿ. ಮತ್ತು ನೀವು ಕುಳಿತುಕೊಳ್ಳಲು ಸಾಧ್ಯವಿರುವಾಗ ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಮ್ಮ ಕಾಲುಗಳನ್ನು ಸುಮಾರು ಅದ೯ಗಂಟೆಗಳ ಕಾಲ ಬೆಚ್ಚನೆಯ ನೀರಲ್ಲಿ ನೆನೆಸುವುದು ನಿಮಗೆ ಸಹಾಯವಾಗುತ್ತದೆ.

  ರಕ್ತನಾಳಗಳ ಊತಕ್ಕೆ-- ಇವು ಪ್ರಸವದ ನಂತರ ಮಾಯವಾಗುತ್ತದೆ. ಕೆಲ ನಿಮಿಷಗಳು ನಿಮ್ಮ ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿ ಗೋಡೆಗೆ ಒರಗಿಸಿ ನೆಟ್ಟಗೆ ಮಲಗಿರಿ. ಇದು ದಿನಕ್ಕೆ ಹಲವು ಬಾರಿ ಮಾಡಿ.ಬಹಳ ಹೊತ್ತು ನಿಲ್ಲುವುದನ್ನು ತಡೆಯಿರಿ. ಈ ಸಂದಭ೯ದಲ್ಲಿ ಎಲಾಸ್ಟೋಕ್ರೇಪ್ ಬ್ಯಾಂಡೇಜಸ್ ಉಪಯುಕ್ತವಾಗಿರುತ್ತದೆ.

  ಬಿರುಸಾದ ಪ್ರಸವ

  ಈ ಪ್ರಸವದ ಸಾಧಾರಣ ಚಿನ್ಪೆಗಳು ಕೆಲಕಂಡಂತಿವೆ. ಕ್ರಯವಾಗಿ ಸಂಕೋಚವಾಗುವ ಗಭ೯ಕೋಶದಿಂದ ಮೊದಲು ಸೊಂಟದ ನೋವು ಪ್ರಾರಂಭವಾಗಿ ಕೆಳ ಹೊಟ್ಟೆಯ ಕಡೆಗೆ ಚಲಿಸುತ್ತದೆ.

  -- ಯೋನಿಯೊದಿಂದ ನಸುಗೆಂಪಿನ ದ್ರವ ಹೊರ ಕಾಣಿಸಿಕೊಳ್ಳುವುದು.

  --ಕೆಲವು ಸಾರಿ ನೀರು ರಭಸವಾಗಿ ಹೊರಬರುತ್ತದೆ.

  --ಒಂದು ವೇಳೆ ರಕ್ತ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

  ಕಡೆಯದಾಗಿ

  ಆರೋಗ್ಯಕರ ಮಗುವಿಗೆ ಜನನಕ್ಕಾಗಿ ಭರವಸದಿಂದ ಎದುರುನೋಡಿರಿ. ಮತ್ತು ದೇವರಲ್ಲಿ ನಂಬಿಕೆ ಇಡಿ.ಯಾಕೆಂದರೆ ಸತ್ಯವೇದ ಹೀಗೆ ಹೇಳುತ್ತದೆ. ಆದರೂ "ಸ್ತ್ರೀಯರು ಮಾನಸ್ಥೆಯರಾಗಿ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆ ಹೊಂದುವರು." ( 1ತಿಮೊಥೆ 2:15)

  ಅಧ್ಯಾಯ 0
  A Personal Letter

  ನೀವು ಓದಬೇಕಾದ ವೈಯಕ್ತಿಕ ಪತ್ರ

  ಪ್ರಿಯ ತಾಯಂದಿರೇ,

  ಅನೇಕ ವಷ೯ಗಳಿಂದ ತಾಯಂದಿರು ನನ್ನನ್ನು ಕೇಳಿರುವ ಪ್ರಶ್ನೆಗಳನ್ನು ಉತ್ತರಿಸಲು ಮುಖ್ಯವಾಗಿ ಈ ಪುಸ್ತಕವು ಬರೆದಿದ್ದೇನೆ. ಈ ಪುಸ್ತಕವು ಆತ್ಮಿಕ ಸಹಾಯವನ್ನು ಮತ್ತು ಉತ್ತೇಜನವನ್ನು ಅಪೇಕ್ಷಿಸುವ ತಾಯಂದಿರಿಗಾಗಿ ಬರೆಯಲ್ಪಟ್ಟಿದೆ.

  ಸುಮಾರು 30 ವಷ೯ಗಳ ಕಾಲ ನಾನು ದೇವರ ಸೇವಕರ ಹೆಂಡತಿಯಾಗಿರಲು ದೇವರು ಕೃಪೆಯನ್ನು ಕೊಟ್ಟರು. ನನ್ನ ಯಜಮಾನರು ಆಗಾಗ ಸುವಾತೆ೯ಯನ್ನು ಸಾರಲು ದೂರವಿರುತಿದ್ದರು. ಕತ೯ನಿಗಾಗಿ ಬಹು ಖಂಡಿತದ ನಿಲ್ಲುವಿಗಾಗಿ ನಮ್ಮ ಕುಟುಂಬವು ಸೈತಾನನ ಕುತಂತ್ರಕ್ಕೆ ಸತತವಾಗಿ ಗುರಿಯಾಗಿತ್ತು. ದೇವರ ಕೃಪೆಯಿಂದ ಮಾತ್ರ ಜಯಗಳಿಸಿದೆವು ಎಂದು ಈ ದಿನ ನಾವು ಸಾಕ್ಷಿ ನುಡಿಯಬಹುದು. ನಿಮಗೂ ಸಹ ದೇವರು ಇದನ್ನು ಮಾಡುತ್ತಾನೆಂದು ನೀವು ನಂಬಬೇಕೆಂದು ನಿಮ್ಮನ್ನು ಉತ್ತೇಜನಪಡಿಸಲು ಇದನ್ನು ಹೇಳುತ್ತೇನೆ.

  ನಾನು ನಾಲ್ಕು ಗಂಡು ಮಕ್ಕಳ ತಾಯಿಯಾಗಿರಲು ದೇವರು ಕೃಪೆಯನ್ನು ಕೊಟ್ಟರು; ಎಲ್ಲರೂ ಈಗ ಬೆಳೆದಿದ್ದಾರೆ. ದೇವರ ಕರುಣೆಯಿಂದ ಮಾತ್ರ ಅವರು ಯೇಸುವನ್ನು ತಮ್ಮ ರಕ್ಷಕನನ್ನಾಗಿಯೂ ಮತ್ತು ಒಡೆಯನನ್ನಾಗಿಯೂ ಸ್ವೀಕರಿಸಿದರು ಮತ್ತು ಈಗ ಕತ೯ನನ್ನು ಹಿಂಬಾಲಿಸುತ್ತಿದ್ದಾರೆ.

  ನಾನು ಒಬ್ಬ ನಿಪುಣಳ ಹಾಗೆ ಬರೆಯುತ್ತಿಲ್ಲ ಆದರೆ ಹೋರಾಡಿ ತಪ್ಪಿದವಳಾಗಿ, ಬಿದ್ದು ಏಳಲ್ಪಟ್ಟು, ಓಟದಲ್ಲಿ ಮುಂದುವರೆದು, ಜೀವಿತದ ಕಷ್ಟಕರ ಸಂದಭ೯ಗಳಲ್ಲಿ "ದೇವರು ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕನಾಗಿದ್ದಾನೆಂದು ತಿಳಿದವಳಾಗಿ" (ಕೀತ೯ನೇ 46 ;1) ಬರೆಯುತ್ತಿದ್ದೇನೆ. ವೈದ್ಯಕೀಯ ತಜ್ಞಳಾಗಿ ಪುಸ್ತಕದ ಕಡೆಯಲ್ಲಿ ಕೆಲವು ಪ್ರಾಯೋಗಿಕ ಸಲಹೆಗಳನ್ನು ಕೂಡಿಸಿದ್ದೇನೆ. ನಿಮ್ಮ ಮಕ್ಕಳು ವೈಯಕ್ತಿಕವಾಗಿ ಕ್ರಿಸ್ತನನ್ನು ರಕ್ಷಕನನ್ನಾಗಿ ಸ್ವೀಕಾರ ಮಾಡಲು ನಡೆಸುವುದೇ ಮಹತ್ತರವಾದ ಸಂಗತಿ. ಇದು ನೀವು ಮತ್ತು ನಿಮ್ಮ ಮಕ್ಕಳು ಒಟ್ಟಿಗೆ ಕಳೆಯುವುದನ್ನು ನಿಶ್ಚಿತಪಡಿಸುತ್ತದೆ...

  ನಿಮ್ಮ ಮಕ್ಕಳು ಇನ್ನೂ ಸಣ್ಣವರಾಗಿರುವಾಗ ಅವರನ್ನು ರಕ್ಷಣೆಗೆ ನಡೆಸಬೇಕು. ಸಣ್ಣವರಾಗಿರುವಾಗ ನಿಮ್ಮ ಮಾತಿಗೆ ಪ್ರತಿಕ್ರಿಯೆ ತೋರಿಸುವ ಹಾಗೆ ಅವರು ಬೆಳೆದಾಗ ತೋರಿಸುವುದಿಲ್ಲ. ಸಣ್ಣ ಮಗುವಿಗೆ ತನ್ನ ತಾಯಿ ರಾತ್ರಿಯ ಸಮಯದಲ್ಲಿ ಹತ್ತಿರವಿರಬೇಕೆಂಬ ಆಶೆ. ಆದ್ದರಿಂದ ನಿಮ್ಮ ಮಕ್ಕಳನ್ನು ಹಾಸಿಗೆಯಲ್ಲಿ ಮಲಗಿಸುವಾಗ ಬೇಗನೇ ಅವರನ್ನು ಬಿಟ್ಟು ಹೋಗಲು ಪ್ರಯತ್ನಿಸಬೇಡಿ. ಪ್ರತಿಯೊಂದು ಮಗುವಿನೊಂದಿಗೆ ಕೆಲವು ಸಮಯ ವೈಯಕ್ತಿಕವಾಗಿ ಕಳೆಯಿರಿ. ಅಥವಾ ಎಲ್ಲರೊಟ್ಟಿಗೆ ಒಂದಾಗಿ ಕಳೆಯಿರಿ. ಕತ೯ನ ಕುರಿತಾಗಿ ಅವರೊಟ್ಟಿಗೆ ಮಾತನಾಡಿರಿ.

  ಮಕ್ಕಳು ಹಾಸಿಗೆಗೆ ಹೋಗುವಾಗ ಆತ್ಮಿಕ ವಿಷಯಗಳಿಗೆ ಬಹಳಷ್ಟು ಪ್ರತಿಕ್ರಿಯೆ ತೋರಿಸುತ್ತಾರೆ. ಒಂದು ಸಂಗೀತವನ್ನು ಹಾಡಿ" ಇದ್ದಂತೆ ಬಂದೇ ಯೇಸುವೇ",....ಉದಾಹರಣೆಗಾಗಿ ಈ ರೀತಿ ಒಂದು ಸಂಗೀತವನ್ನು ಹಾಡಿ ಅನಂತರ ಯೇಸು ಸ್ವಾಮಿ ಹೇಳಿದ ಸಾಮ್ಯಗಳಲ್ಲಿ ಒಂದು ಸಣ್ಣ ಕಥೆಯನ್ನು ಹೇಳಿ, ಅಥವಾ ಹಾಸಿಗೆಗೆ ಹೋಗುವಾಗ ಯಾವುದಾದರೂ ಸಣ್ಣ ಕಥೆಗಳಲ್ಲಿ ಒಂದನ್ನು ಹೇಳಿರಿ.

  ಅನಂತರ ಅವರೊಂದಿಗೆ ಹೀಗೆ ಪ್ರಾಥಿ೯ಸಿ -

  ‘ ಪ್ರೀತಿಯ ಒಡೆಯನಾದ ಯೇಸುವೇ, ಈ ದಿನದಲ್ಲಿ ನೀನು ನಡೆಸಿದ ಹಾಗು ಕೊಟ್ಟಂಥ ಆಹಾರಕ್ಕಾಗಿ, ಆರೋಗ್ಯಕ್ಕಾಗಿ ಮತ್ತು ಪ್ರೀತಿಯ ತಂದೆತಾಯಿಗಾಗಿ, ಸಹೋದರ ಸಹೋದರಿಯರಿಗಾಗಿ ಮತ್ತು ಅನೇಕ ಉತ್ತಮವಾದ ವರಗಳಿಗಾಗಿ ನಿನಗೆ ಸ್ತೋತ್ರ. ದಯಮಾಡಿ ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು ಮತ್ತು ನನಗಾಗಿ ಕಲ್ವಾರಿಯ ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ನನ್ನ ಹೃದಯವನ್ನು ಶುದ್ದಮಾಡು. ನನ್ನ ಹೃದಯದಲ್ಲಿ ಬಾ ಯೇಸು ಕತ೯ನೇ ಮತ್ತು ನನ್ನನ್ನುಈ ದಿನದಿಂದ ನಿನ್ನ ಮಗುವಾಗಿ ಮಾಡು. ನನ್ನ ಪ್ರಾಥ೯ನೆಯನ್ನು ಕೇಳಿದ್ದಕ್ಕಾಗಿ ಉಪಕಾರ. ಆಮೇನ್".

  ದೇವ ಭಯ ಭಕ್ತಿಯಲ್ಲಿ ಬೆಳೆದಿರುವ ಮಕ್ಕಳು ಈ ರೀತಿಯ ಪ್ರಾಥ೯ನೆಯನ್ನು ಅನೇಕ ಸಾರಿ ಪ್ರಾಥಿ೯ಸಬಹುದು. ಆದರೆ ಒಂದಾನೊಂದು ಈ ಸಮಯಗಳಲ್ಲಿ ಅವರ ಹೃದಯದಿಂದ, ಅವಶ್ಯಕತೆಯಿಂದ ಕೂಡಿದ್ದಾಗಿ ಮತ್ತು ದೇವರೊಂದಿಗೆ ಸಂಪಕ೯ವನ್ನು ಹೊಂದುತ್ತಾರೆ. ಅಂದಿನಿಂದ ನಿಮ್ಮ ಮಕ್ಕಳು ಮಾತ್ರವಲ್ಲ ದೇವರ ಮಕ್ಕಳು ಸಹ ಆಗುತ್ತಾರೆ. ಅದೇ ನಿಮ್ಮ ಅತ್ಯಧಿಕ ಸಂತೋಷವಾಗುತ್ತದೆ.

  ಆನಿ ಝ್ಯಾಕ್ ಪೂನನ್

  ಬೆಂಗಳೂರು, ಭಾರತ

  ಅಕ್ಟೋಬರ್ 1998

  ಅಧ್ಯಾಯ 1
  ಉತ್ತಮಳಾದ ತಾಯಿ

  "ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ. ನಾನು ನಿನ್ನ ಅದ್ಭುತ ಕೃತ್ಯಗಳನ್ನು ಇಂದಿನವರೆಗೂ ಪ್ರಚುರಪಡಿಸುತ್ತಿದ್ದೇನೆ. ದೇವರೇ, ನಾನು ನರೆಯ ಮುದುಕನಾದಾಗಲೂ ಕೈ ಬಿಡಬೇಡ, ಆಗ ಮುಂದಿನ ತಲೇಯವರೆಗೆ ನಿನ್ನ ಭುಜಬಲವನ್ನು ಸಾರುವೆನು. ತಲತಲಾಂತರದವರೆಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು". (ಕೀತ೯ನೆ71: 17,18)

  ದೇವರು ನಮಗೆ ಕಲಿಸಿರುವಂಥದನ್ನು ನಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಎಲ್ಲಾ ತಾಯಂದಿರಿಗೂ ದೇವರ ಮುಂದೆ ಇರುವಂಥ ದೊಡ್ಡ ಜವಾಬ್ದಾರಿಕೆಯಾಗಿದೆ. ಅದನ್ನು ತೀರಿಸದೆ ಹೊರತು ನಾವು ಈ ಲೋಕವನ್ನು ಬಿಡಬಾರದು. ಈ ಜವಾಬ್ದಾರಿಕೆಯನ್ನು ನಡೆಸಲು ನಮ್ಮ ಮಕ್ಕಳು ಬೆಳೆದು ಬರುವವರೆಗೂ ನಾವು ಮುಂದೂಡಿಸುವಂಥದಲ್ಲ ನಮ್ಮ ಮಕ್ಕಳು ಇನ್ನೂ ಸಣ್ಣವರಾಗಿರುವಾಗಲೇ ದೇವರು ನಮಗೆ ಮಾಡಿರುವಂತ ಮಹತ್ತಾದ ಕಾಯ೯ಗಳನ್ನು ಅವರೊಂದಿಗೆ ಹಂಚಿಕೊಳ್ಳಬೇಕು.

  ತಿಮೊಥೆಯನ ಅಜ್ಜಿಯಾದ ಲೋವಿಯು ದೇವರಲ್ಲಿದ್ದ ನಿಷ್ಕಪಟವಾದ ನಂಬಿಕೆಯನ್ನು ತನ್ನ ಮಗಳಾದ ಯೂನಿಕೆಯನ್ನು ಇನ್ನೂ ಸಣ್ಣವಳಾಗಿರುವಾಗಲೇ ಅದನ್ನು ವಗಾ೯ಯಿಸಿದಳು. ಮತ್ತು ಯೂನಿಕೆಯ ಪ್ರತಿಯಾಗಿ ತನ್ನ ಮಗನಾದ ತಿಮೊಥಿಯನು ಇನ್ನೂ ಸಣ್ಣವನಾಗಿರುವಾಗಲೆ ತನ್ನ ನಂಬಿಕೆಯನ್ನು ವಗಾ೯ಯಿಸಿದಳು. (2ತಿಮೊಥೆ 1:5) ಇದರ ಫಲವಾಗಿ ತಿಮೊಥೇಯನು ದೇವರ ಬಹು ಬಲವುಳ್ಳ ಸೇವಕನಾದನು. ಇಂಥಹ ನಂಬಿಗಸ್ತ ತಾಯಂದಿರು ಸಭೆಗೆ ಎಂತಹ ದೊಡ್ಡ ಸೇವೆಯನ್ನು ಮಾಡುತ್ತಾರೆ. ಪ್ರತಿ ಮಕ್ಕಳು ಬೇರೆ ಬೇರೆ ರೀತಿ ಇರುವುದರಿಂದ ಆ ಮಕ್ಕಳನ್ನು ಬೆಳೆಸುವ ಯಾವುದೇ ತಂತ್ರದ ಸೂತ್ರವಿಲ್ಲ. ಆದರೆ ನಿಮ್ಮ ಮಕ್ಕಳಿಗೆ ತಾಯಿಯಾಗಿರಲು ದೇವರೇ ನಿಮ್ಮನ್ನು ಆರಿಸಿಕೊಂಡಿದ್ದಾನೆ. ಈ ಪ್ರತಿ ಮಕ್ಕಳನ್ನು ನಿಮ್ಮ ಗಭ೯ದಲ್ಲಿ ಸೃಷ್ಟಿಸಿದವನು ದೇವರೇ ಮತ್ತು ಅವರನ್ನು ಒಂದು ಉದ್ದೇಶದಿಂದಲೇ ಸೃಷ್ಟಿಸಿದನು. ನೀವು ಅವರ ತಾಯಿಯಾಗಲು ಆತನು ನೇಮಿಸಿದನು. ಆದರಿಂದ ದೇವರು ನಿಮಗೆ ಕೊಟ್ಟಿರುವ ಜವಾಬ್ದಾರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ನಿಮ್ಮ ಪ್ರತಿಯೊಂದನ್ನು ದೇವರಿಗಾಗಿ ಮತ್ತು ಮಕ್ಕಳಿಗಾಗಿಯೂ ತ್ಯಜಿಸಲು ಮತ್ತು ಸಮಪಿ೯ಸಲು ಸಿದ್ದವಾಗಿರಿ. ಮಕ್ಕಳು ಯುದ್ಧವೀರನ ಕೈಗಳಲ್ಲಿರುವ ಬಾಣಗಳಂತೆ ಎಂದು ಕೀತ೯ನೆ 127:4 ರಲ್ಲಿ ಹೇಳುತ್ತದೆ. ಬಾಣಗಳು ವೈರಿಯನ್ನು ಎದುರಿಸಲು ಉಪಯೋಗಿಸುತ್ತಾರೆ. ನಮ್ಮ ಮಕ್ಕಳನ್ನು ನಾವು ಸರಿಯಾದ

  ದಾರಿಯಲ್ಲಿ ದೇವರಿಗಾಗಿ ನಡೆಸುವುದರ ಮೂಲಕ ಸೈತಾನನನ್ನು ನಾಚಿಕೆಪಡಿಸುತ್ತೇವೆ.ಮತ್ತೊಂದು ಕಡೆ ನಾವು ನಂಬಿಗಸ್ಥರಾಗಿರದಿದ್ದರೆ ನಮ್ಮ ಮಕ್ಕಳು ಸೈತಾನನ ಸೇವೆಮಾಡಲು ಬೆಳೆಯುತ್ತಾರೆ. ಇದೇ ಸ್ವಾಭಾವಿಕವಾಗಿ ಅವರ ಮೋಸಕರ ಶರೀರದ ಸ್ವಭಾವಗಳು ಎಳೆಯುವ ಮಾಗ೯ವಾಗಿದೆ. ಆದರೆ ನಾವು ಅವರಿಗೆ ದೇವರನ್ನು ಗೌರವಿಸುವುದು ಮತ್ತು ದೇವರ ವಾಕ್ಯದ ಆಧಾರದ ಮೇಲೆ ಬೆಳೆಯಲು ಕಲಿಸುವಾಗ ಅವರು ದೇವರ ಸೈನ್ಯದಲ್ಲಿ ಜೊತೆ ಸೈನಿಕರಾಗಿ ಬೆಳೆಯುತ್ತಾರೆ. ಇದು ದೊಡ್ಡ ಜವಾಬ್ದರಿಕೆ. ನಾವು ಇದನ್ನು ಸಾಧಾರಣವಾಗಿ ತೆಗೆದುಕೊಳ್ಳಬಾರದು . ಕೀತ೯ನೆ 127:5 ರಲ್ಲಿ ಇಂತಹ ಮಕ್ಕಳ ತಂದೆ ತಾಯಿಗಳು ವಿರೋಧಿಗಳೊಂದಿಗೆ ಪಟ್ಟಣದ ಬಾಗಿಲಿನ ಬಳಿ ಮಾತನಾಡುವಾಗ ನಾಚಿಕೆಪಡುವುದಿಲ್ಲ ಎಂದು ಹೇಳಿದೆ. ಸತ್ಯವೇದವು ಹೇಳುತ್ತದೆ. "ಶಿಶುಗಳ ಬಾಯಿಂದ ಸ್ತೋತ್ರ ಬರುವಂತೆ ಮಾಡಿದ್ದಾನೆ." (ಕೀತ೯ನೆ. 8:2)

  ನಮ್ಮ ಮಕ್ಕಳ ಮೂಲಕ ಸೈತಾನನು ನಾಚಿಕೆಗೆ ಒಳಪಡುವುದರಿಂದ ದೇವರಿಗೆ ಮಹಿಮೆಯಾಗಲಿ. ನಮ್ಮ ಮಕ್ಕಳೊಂದಿಗೆ ಎಲ್ಲವೂ ಸರಾಗವಾಗಿ ಹೋಗುವಾಗ ದೇವರಿಗೇ ಎಲ್ಲಾ ಮಹಿಮೆಯನ್ನು ಕೊಡುವುದರಲ್ಲಿ ನಾವು ಎಚ್ಚರಿಕೆಯುಳ್ಳವರಾಗಿರಬೇಕು. ನಾವು ಎಂತಹ ನಂಬಿಗಸ್ಥ ತಾಯಂದಿರು ಆದ್ದರಿಂದಲೇ ನಮ್ಮ ಮಕ್ಕಳು ದೇವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಊಹಿಸುವುದರ ಮೂಲಕ ದೇವರಿಗೆ ಸಲ್ಲುವ ಮಹಿಮೆಯನ್ನು ನಮಗಾಗಿ ತೆಗೆದುಕೊಳ್ಳಬಾರದು.

  ತಾಯಿಯು ತನ್ನ ಮಗುವನ್ನು ಪ್ರೀತಿಸುವ ಪ್ರೀತಿಗೆ ದೇವರು ತನ್ನ ಪ್ರೀತಿಯನ್ನು ಹೋಲಿಸಿದ್ದಾನೆ. (ಯೆಶಾಯ 49 :15) ಯಾಕೆಂದರೆ ಎಲ್ಲಾ ಪುರುಷರನ್ನು ಮತ್ತು ಸ್ತ್ರೀಯರನ್ನು ಸೃಷ್ಟಿಸಿದಾತನು ತನ್ನ ದೈವಿಕ ತ್ಯಾಗಮಯ ಮತ್ತು ಸ್ವಾಥ೯ರಹಿತ ಪ್ರೀತಿಯು ಭೂಲೋಕದಲ್ಲಿ ತಾಯಿ ಪ್ರೀತಿಗೆ ಸಮೀಪವಾಗಿದೆಂದು ಆತನಿಗೆ ಗೊತ್ತು. ಹಿಂದೆ ಈ ರೀತಿಯ ಒಂದು ಹೇಳಿಕೆ ಇತ್ತು. ಅದು ದೇವರು ತಾಯಂದಿರನ್ನು ಸೃಷ್ಟಿಸಿದನು. ಯಾಕೆಂದರೆ ಈ ಮೂಲಕ ತನ್ನನ್ನೇ ಚಿಕ್ಕ ಮಕ್ಕಳಿಗೆ ಪ್ರಕಟಿಪಡಿಸಬೇಕೆಂದು. ತಾಯಂದಿರಾದ ನಾವು ಇದನ್ನು ಒಂದು ಕರೆಯಾಗಿ ತೆಗೆದುಕೊಂಡು ನಮ್ಮ ಮಕ್ಕಳಿಗೆ ಮನೆ ಎಂದರೆ ಒಂದು ಹಷ೯ದ ಸ್ಥಳವನ್ನಾಗಿ ಮಾಡಿಕೊಟ್ಟರೆ ಅವರು ಬೇರೆ ಯಾವುದೇ ಸ್ಥಳವನ್ನು ಮನೆಗೆ ಬದಲು ಇಷ್ಟಪಡುವುದಿಲ್ಲ. ಎಲ್ಲೇ ಇದ್ದರೂ ಯಾವಾಗಲೂ ಮನೆಗೆ ಬರಲು ಬಯಸಬೇಕು.

  ನಾವು ಉತ್ತಮ ತಾಯಂದಿರಾಗಲು ಕತ೯ನು ನಮಗೆ ಸಹಾಯಿಸಲಿ. ಹೀಗೆ ನಮ್ಮ ಮಕ್ಕಳು ನಮ್ಮನ್ನು ನೋಡುವಾಗ ದೇವರು ಹೇಗಿದ್ದಾನೆಂದು ಮತ್ತು ನಮ್ಮ ಮನೆಗಳನ್ನು ಗಮನಿಸುವಾಗ ಪರಲೋಕ ಹೇಗಿರುತ್ತದೆಂದು ಗ್ರಹಿಸಬಹುದು.

  ಪ್ರಥಮ ದಜೆ೯ಯ ತಾಯಿಯಾಗಿರಲು ಬಯಸುವಂಥದು ಎಂತಹ ಆಹ್ವಾನ.

  "ಪ್ರಿಯ ಒಡೆಯನೇ, ನೀನು ಉತ್ತಮವಾದ ಕೆಲಸ, ಕೆಲವು ಶ್ರೇಷ್ಠ ಕರೇ, ಅಥವಾ ಕೆಲವು ಅದ್ಭುತವಾದ ಕೆಲಸವನ್ನೇ ನನಗೆ ಕೊಡಬೇಕೆಂದು ನಾನು ಕೇಳಲಿಲ್ಲ. ನನ್ನ ಕೈಗಳಲ್ಲಿ ಹಿಡಿಯಲು ಒಂದು ಪುಟ್ಟ ಕೈ ಕೊಡು. ನಿನ್ನ ಕಡೆಗೆ ನಡೆಸುವಂತ ಅದ್ಭುತವಾದ ಮತ್ತು ಸಿಹಿಯಾದ ಮಾಗ೯ದ ಕಡೆಗೆ ದಾರಿಯ ತೋರಿಸಲು ಒಂದು ಮಗುವನ್ನು ನನಗೆ ಕೊಡು. ಪ್ರಾಥಿ೯ಸುವುದನ್ನು ಕಲಿಸಿಕೊಡಲು ನನಗೆ ಸಣ್ಣ ಸ್ವರವನ್ನು ಕೊಡು. ನಿನ್ನ ಮುಖವನ್ನು ನೋಡಲು ಎರಡು ಮಿನುಗುವ ಕಣ್ಣುಗಳನ್ನು ಕೊಡು. ಪುಟ್ಟ ಮಗುವಿಗೆ ನಾನು ಕಲಿಸಬೇಕೆಂಬುದೇ ಪ್ರಿಯ ಕತ೯ನೇ ನಾನು ಧರಿಸಲು ಕೇಳುವಂತಹ ಒಂದೆ ಕಿರೀಟ.ನಾನು ಗಣ್ಯರ, ಬುದ್ಧಿವಂತರ ಅಥವಾ ಯೋಗ್ಯತೆಯುಳ್ಳ ವ್ಯಕ್ತಿಗಳ ಮಧ್ಯೆ ನಿಲ್ಲುವಂತಹದನ್ನು ನಾನು ಕೇಳಲಿಲ್ಲ. ನಾನು ಕೇಳುವಂತಹದು ಒಂದೇ, ಮೃದುವಾದ ಕೈಯಲ್ಲಿ ಕೈಹಿಡಿದು ಮಗು ಮತ್ತು ನಾನು ಆ ಬಾಗಿಲಲ್ಲಿ ಪ್ರವೇಶಿಸುವುದೇ ಆಗಿದೇ‘.

  (ಗ್ರಂಥಕತ೯ ತಿಳಿಯದು)

  ಅಧ್ಯಾಯ 2
  ನಮ್ಮ ಮನಸಾಕ್ಷಿಯನ್ನು ಸೂಕ್ಷ್ಮವಾಗಿ ಇಟ್ಟುಕೊಳ್ಳುವುದು

  ನಮ್ಮ ಮಕ್ಕಳು ದೇವರ ಭಯಭಕ್ತಿಯಲ್ಲಿ ಬೆಳೆಯ ಬೇಕಾದರೆ ತಾಯಂದಿರಾದ ನಾವು ಒಂದು ಮುಖ್ಯವಾದ ಸಂಗತಿಯನ್ನು ಹೊಂದಿರಬೇಕು ಅದು ಸೂಕ್ಷ್ಮವಾದ ಮನಸಾಕ್ಷಿ.

  ನಾವು ನಮ್ಮ ಆತ್ಮಿಕ ಸ್ಥಿತಿಯ ಬಗ್ಗೆ ಯಾವುದೇ ಸಮಯದಲ್ಲಿ ತೃಪ್ತರಾಗಿದ್ದರೇ ನಮ್ಮ ಮನಸಾಕ್ಷಿಯು ಸೂಕ್ಷ್ಮವಿಲ್ಲದ್ದಾಗುತ್ತದೆ. ಬಹುಶ ನಾವು ದೇವರ ವಾಕ್ಯವನ್ನು ಅನೇಕ ಸಾರಿ ಕೇಳಿದ್ದೇವೆ ಮತ್ತು ನಮಗೆ ಆ ವಾಕ್ಯವು ಸಾಧಾರಣವಾಗಿದೆ. ಆಗ ದೇವರ ಆತ್ಮನು ನಮ್ಮೊಂದಿಗೆ ಆ ವಾಕ್ಯದ ಮೂಲಕ ಮಾತನಾಡುವುದಿಲ್ಲ ಮತ್ತು ನಮ್ಮ ಮನಸಾಕ್ಷಿಯು ಮಂಕಾಗುತ್ತದೆ. ಹೇಗೆ ಒಂದು ಚಾಕುವು ತನ್ನ ಹರಿತವಾದ ಕೊನೆಯನ್ನು ಕಳೆದುಕೊಂಡಂತೆ ಒಂದು ಸಾರಿ ಉತ್ತೇಜಿಸುತಿದ್ದ ವಾಕ್ಯ ಆ ಉತ್ತೇಜನವನ್ನು ಕಳೆದುಕೊಳ್ಳುತ್ತದೆ.

  ನಾವು ಪ್ರಾಪಂಚಿಕವಾದ ಸಂಗತಿಗಳಿಗೆ ಅಂಟಿಕೊಂಡರೆ ದೇವರಿಗಾಗಿ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತೇವೆ. ನಾವು ಪ್ರಪಂಚಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಭಿವೃದ್ಧಿಯಾಗುವಾಗ ನಮ್ಮ ಮನಸಾಕ್ಷಿಯು ಮಂಕಾಗುವುದು ಸುಲಭ ನಾವು ಐಶ್ವಯ೯ವಂತರಾಗಿ ದೇವರ ಅವಶ್ಯಕತೆಯನ್ನು ತಿಳಿಯುವುದಕ್ಕಿಂತ, ನಾವು ಬಡವರಾಗಿರುವಾಗ ತಿಳಿಯುವುದು ಸುಲಭ. ನಮ್ಮ ಗಂಡಂದಿರ ಸಂಬಳದಲ್ಲಿ ಸ್ವಲ್ಪ ಬಡತಿಯು ನಮ್ಮನ್ನು ಗವ೯ಪಡಿಸುವಂತೆ ಮಾಡುತ್ತದೆ. ಐಶ್ವಯ೯ವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ಪ್ರವೇಶಿಸುವುದು ಸುಲಭವೆಂದು ಯೇಸು ಹೇಳಿದನು. (ಪ್ರಕಟನೆ 3:17ರಲ್ಲಿ) ಒಬ್ಬ ಸಭಾ ಹಿರಿಯಯನು ತಾನು ಐಶ್ವಯ೯ವಂತನು ತನಗೆ ಯಾವ ಅವಶ್ಯಕತೆಯು ಇಲ್ಲ ಎಂದು ಊಹಿಸಿದರಿಂದ ಕತ೯ನು ಅವನನ್ನು ಗದರಿಸಿದನು. ಐಶ್ವಯ೯ವು ಒಂದು ದೊಡ್ಡ ಉರುಲು. ನಾವು ಆಥಿ೯ಕವಾಗಿ ಅಭಿವೃದ್ಧಿಯಾಗುತ್ತಿರುವಾಗ ಬಹಳ ಎಚ್ಚರಿಕೆಯಾಗಿರಬೇಕು. ದೇವರು ನಮ್ಮನ್ನು ಐಶ್ವಯ೯ವಂತರನ್ನಾಗಿ ಮಾಡಿದ್ದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಐಶ್ವಯ೯ವು ನಮ್ಮ ತಲೆಯೊಳಗೆ ಹೋಗಿ ನಮ್ಮ ಮನಸಾಕ್ಷಿಯನ್ನು ಮಂಕುಮಾಡದಂತೆ ಖಚಿತಪಡಿಸಿಕೊಳ್ಳಬೇಕು. ಆತ್ಮದಲ್ಲಿ ಬಡತನವೆ ಯಾವಾಗಲೂ ನಮ್ಮಲ್ಲಿ ಇರಬೇಕಾದ ಮನಸ್ಸು. ತಾಯಂದಿರಾದ ನಮ್ಮಲ್ಲಿ ಇರಬೇಕಾದ ಬಹು ಪ್ರಾಮುಖ್ಯವಾದ ಗುಣ ಮತ್ತು ಮಕ್ಕಳು ನಮ್ಮಲ್ಲಿ ಯಾವಾಗಲೂ ಕಾಣಬೇಕಾದದ್ದು ಯಥಾಥಾ೯ತೆ. ನಾವು ಸತ್ಯವಂತರಾಗಿರುವುದರ ಮೂಲಕ ನಮ್ಮ ಮಕ್ಕಳಿಗೆ ನಾವು ಸತ್ಯತೆಯನ್ನು ಕಲಿಸಿಕೊಡಬೇಕು. ಎಲ್ಲಾ ಸುಳ್ಳು ಮತ್ತು ಹುರುಳುಳ್ಳ ಮಾತುಗಳಿಂದ ನಾವು ದೂರವಿರಬೇಕು. ಒಂದು ವೇಳೆ ನಮ್ಮ ಮಕ್ಕಳು ಸುಳ್ಳು ಹೇಳುವುದನ್ನು ಮತ್ತು ಅತಿಶಯವಾಗಿ ಕೂಡಿಸಿ ಮಾತನಾಡುವುದನ್ನು ಕಾಣುವಾಗ ಬಹುಶ ಅವರು ನಮ್ಮಿಂದಲೇ ಆ ಗುಣವನ್ನು ಹೊಂದಿರಬಹುದು. ನಾವು ಮಾಡಲಿಕ್ಕಾಗದ ಸಂಗತಿಯನ್ನು ಎಂದಿಗೂ ನಮ್ಮ ಮಕ್ಕಳಿಗೆ ನಾವು ಆಣೆ ಇಡಬಾರದು. ಒಂದು ವೇಳೆ ನಮಗೆ ತಡೆಯಲು ಆಗದಂತಹ ಸಂದಭ೯ ಬಂದರೆ, ಮಕ್ಕಳು ಅಂಥ ಸಂದಭ೯ದಲ್ಲಿ ನಮ್ಮನ್ನು ಅಥ೯ಮಾಡಿಕೊಳ್ಳುತ್ತಾರೆ. ಯಾಕೆಂದರೆ ಯಾವಾಗಲೂ ನಾವು ಇತರರಿಗಾಗಿ ನಮ್ಮನ್ನೇ ನಾವು ನಿರಾಕರಿಸಬೇಕಾಗುತ್ತದೆ. ಇಲ್ಲವಾದರೆ ನಾವು ನಮ್ಮ ಮಕ್ಕಳಿಗೆ ನೀಡುವ ಎಲ್ಲಾ ಆಣೆಯನ್ನು ನೆರವೇರಿಸಬೇಕು.

  ನಮ್ಮ ನಾಟಕಗಳಿಂದ ಹಾಗೂ ಕಪಟತನದಿಂದ ನಾವು ಶುದ್ಧರಾಗಬೇಕು. ನಾವು ಮಾಡದಂತದನ್ನು ನಮ್ಮ ಮಕ್ಕಳಿಗೆ ನಾವು ಮಾಡಲು ಹೇಳುವುದಿಲ್ಲವೆಂದು ಅವರು ಕಾಣಬೇಕು. ಎಲ್ಲಿ ಇಂತಹ ಕ್ಷೇತ್ರಗಳಲ್ಲಿ ನಾವು ತಪ್ಪಿಹೋಗುತ್ತಿದ್ದೇವೋ ಎಂದು ಪಶ್ಚಾತ್ತಾಪಪಡುವ ಹಾಗೆ ದೇವರು ನಮಗೆ ತೋರಿಸಿಕೊಡುವಂತೆ ಆತನನ್ನು ಕೇಳಿಕೊಳ್ಳಬೇಕು. ನಾವು ಕಪಟಿಗಳಾಗಿದ್ದರೆ ನಮ್ಮ ಮಕ್ಕಳು ಸಹ ಕಪಟಿಗಳಾಗುತ್ತಾರೆ. ನಮ್ಮನ್ನು ನಾವು ಶುದ್ಧಿಮಾಡಿಕೊಳ್ಳಬೇಕಾದ ಮತ್ತೊಂದು ಮರಣಕರ ಪಾಪ ದುರಾಶೆಯಾಗಿದೆ. ದೇವರು ನಮಗೆ ಆರಿಸಿ ಕೊಟ್ಟಿರುವ ಲೌಕಿಕ ವಸ್ತುಗಳಲ್ಲಿ ನಾವು ಸಂತೃಪ್ತರಾಗಿಲ್ಲದಿರುವುದನ್ನು ಒಂದು ವೇಳೆ ನಮ್ಮ ಮಕ್ಕಳು ನೋಡಿದರೆ, ಅವರೂ ಸಹ ದುರಾಶೆಯುಳ್ಳವರಾಗುತ್ತಾರೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ತಾಯಂದಿರು ಕೊಳ್ಳುವುದನ್ನು ಮತ್ತು ಕೊಳ್ಳಲು ಬಯಸುವುದನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ.

  ಒಂದು ವೇಳೆ ನಾವು ಯಾವುದೋ ವಸ್ತುವನ್ನು ಕೊಳ್ಳಬೇಕೆಂದಿದ್ದರೆ ಅದನ್ನು ಕೊಳ್ಳಲು ಬೇಕಾದ ಹಣವನ್ನು ದೇವರು ನಮಗೆ ಕೊಡುತ್ತಾನೆ. ಒಂದು ವೇಳೆ ಹಾಗೆ ಆತನು ಮಾಡಲಿಲ್ಲವೆಂದರೆ, ಅದು ನಿಜವಾಗಲೂ ನಮಗೆ ಅವಶ್ಯವಿಲ್ಲವೆಂದು ಆತನು ಹೇಳುವ ರೀತಿಯಾಗಿರುತ್ತದೆ. ನಾವು ಅದನ್ನು ಹೊಂದಿಕೊಳ್ಳದೆ ಇರುವುದೇ ಉತ್ತಮ. ಎಲ್ಲಾ ಲೌಕೀಕ ವಸ್ತುಗಳನ್ನು ಒಟ್ಟಿಗೆ ಕೂಡಿಸುವುದಕ್ಕಿಂತ ಅಮೂಲ್ಯವಾದದ್ದು ಒಳ್ಳೆ ಮನಸಾಕ್ಷಿ. ನಮ್ಮ ಮಕ್ಕಳು ಸರಳವಾದ ಸಂತೃಪ್ತಿಯನ್ನು ನಾವು ಕೊಳ್ಳುವಂತೆ ಕಡಿಮೆ ಬೆಲೆಯ ಆಟಿಕೆ ಮತ್ತು ಗೊಂಬೆಗಳ ಮೂಲಕ ಕಲಿತುಕೊಳ್ಳುತ್ತಾರೆ. ಅವರು ತಮ್ಮ ಸ್ವಂತ ಆಟಗಳನ್ನು ಆಡುವುದರಲ್ಲಿಯೂ ಮುಂದೆ ಬರುತ್ತಾರೆ. ಐಶ್ವಯ೯ವಂತ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೆಚ್ಚು ಬೆಲೆ ಬಾಳುವ ಮನ ಮೆಚ್ಚುವ ಗೊಂಬೆಗಳನ್ನು ಮತ್ತು ಆಟಿಕೆಗಳನ್ನು ಒದಗಿಸಿಕೊಟ್ಟಿದ್ದರೂ ಅವರಿಗಿಂತ ಮುಂದೆ ನಿಮ್ಮ ಮಕ್ಕಳ ಬಹಳ ರಚನಾತ್ಮಕರಾಗುತ್ತಾರೆ.

  ನಾವು ನಮ್ಮ ಮನೆಗಳಲ್ಲಿ ಯಾರ ಬಗ್ಗೆಯೂ ಹಿಂದೆ ಮಾತನಾಡಬಾರದು ಮತ್ತು ಕೆಟ್ಟದ್ದಾಗಿ ಮಾತನಾಡದಂತೆ ಎಚ್ಚರಿಕೆ ವಹಿಸಬೇಕು. ತಮ್ಮ ಸ್ವಂತ ಸಭೆಯ ವಿಶ್ವಾಸಿಗಳ ಬಗ್ಗೆ ತಮ್ಮ ಮನೆಗಳಲ್ಲಿ ಚಾಡಿ ಮತ್ತು ಹಿಂದೆ ಮಾತನಾಡಿರುವುದನ್ನು ಮಕ್ಕಳು ಕೇಳಿಸಿಕೊಂಡದರ ಪರಿಣಾಮ ಅವರ ಬಗ್ಗೆ ದ್ವೇಷ ಮತ್ತು ಹೀನೈಸುವಿಕೆಯನ್ನು ಅವರಲ್ಲಿ ಕಂಡು ಬಂದಿರುವ ದುಃಖಕರ ಸಂಗತಿಯನ್ನು ನಾನು ಕಂಡಿದ್ದೇನೆ. ತಂದೆ ತಾಯಿಗಳು ತಮ್ಮ ಸ್ವಂತ ಮಕ್ಕಳಿಗೆ ವಿಷ ಕೊಡುವುದು ಮತ್ತು ನಾಶ ಮಾಡುವುದು ಎಂತಹ ದುಃಖಕರ ಸಂಗತಿ. ಖಂಡಿತವಾಗಿ ಯೇಸುವು ಈ ರೀತಿಯ ತಂದೆ ತಾಯಿಗಳಿಗೆ, "ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವುದು ಅವನಿಗೆ ಹಿತವಾಗುವುದು." (ಮತ್ತಾಯ 18:6) ಎಂದು ಹೇಳಿರಬೇಕು. ತಾಯಿಯು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಆಕೆಯೇ ಸಾಕಷ್ಟು ಸಮಯವನ್ನು ತನ್ನ ಮಕ್ಕಳೊಂದಿಗೆ ಕಳೆಯುವುದು.

  ಯಾರ ಬಗ್ಗೆಯಾದರೂ ತನ್ನ ತಾಯಿಗೆ ಕಹಿಭಾವನೆ ಇದ್ದರೆ ಮಕ್ಕಳು ಅದನ್ನು ಬಹು ಬೇಗ ಗ್ರಹಿಸುತ್ತಾರೆ. ಸ್ವಲ್ಪ ಹುಳಿ ಹಾಲು ಅಥವಾ ಮೊಸರು ಇಡೀ ಪಾತ್ರೆಯಲ್ಲಿರುವ ಹಾಲನ್ನು ಹುಳಿಯನ್ನಾಗಿ ಮಾಡಲು ಸಾಧ್ಯ ಮತ್ತು ಹುಳಿಯು ಸ್ವಲ್ಪ ಸಮಯದ ನಂತರ ಕಹಿಯಾಗಲು ಸಾಧ್ಯ. ಅನೇಕರು ಹೃದಯದಲ್ಲಿ ಕಹಿಭಾವನೆಯ ಬೇರಿನಿಂದ ಮಲೀನರಾಗುತ್ತಾರೆ ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸಿದೆ. ಆದ್ದರಿಂದ ನಾವು ಎಲ್ಲಾ ವಿಧವಾದ ಕೆಟ್ಟ ಮನೋಭಾವನೆಯಿಂದ ಆದಷ್ಟು ಬೇಗ ತಪ್ಪಿಸಿಕೊಳ್ಳಬೇಕು.

  ಸಮೀಪಸ್ಥರಾದ ಭೂಸಂಬಂಧಿಕರಲ್ಲಿ ಅಪಾಥ೯ತೆ ಬರಲು ಸಾಧ್ಯ. ಆದರೆ ದೇವರ ಸಹಾಯದಿಂದ ಅಂಥವುಗಳನ್ನು ಸಾಧ್ಯವಾದಷ್ಟು ಬೇಗ ದೂರಮಾಡಿಕೊಳ್ಳಬೇಕು. ಸಣ್ಣ ಮಕ್ಕಳು ಸಹ ಒಳ್ಳೇದು ಮತ್ತು ಕೆಟ್ಟದ್ದು, ಗದ್ದಲ ಮತ್ತು ಸಂಗೀತ, ಸಮಧಾನ ಮತ್ತು ಜಗಳಗಳ ವ್ಯತ್ಯಾಸವನ್ನು ಗ್ರಹಿಸಲು ಸಾಧ್ಯ. ಅವರು ಮಾತನಾಡಲು ಪ್ರಾರಂಭಿಸುವ ಮುನ್ನ ಅಥ೯ಮಾಡಿಕೊಳ್ಳುತ್ತಾರೆ. ಆದ್ದರಿಂದ ನಾವು ಅವರನ್ನು ಅಶುದ್ಧಪಡಿಸದಂತೆ ಎಚ್ಚರಿಕೆ ವಹಿಸಬೇಕು.

  ನಾವು ಎಲ್ಲಾ ವಿಧವಾದ ಪಕ್ಷಪಾತದಿಂದ ನಮ್ಮನ್ನು ಶುದ್ದಪಡಿಸಿಕೊಳ್ಳಬೇಕು. ನಮ್ಮ ಮಕ್ಕಳ ಮಧ್ಯದಲ್ಲಿ ಯಾವುದೆ ಮಗುವು ಅಚ್ಚು ಮೆಚ್ಚಿನದಾಗಿರಬಾರದು. ಎಲ್ಲರೂ ನಮಗೆ ಸರಿಸಮಾನ ಹಾಗೂ ಸಮಾನವಾದ ಮುಖ್ಯತ್ವ ವಹಿಸಬೇಕು. ಯಾವುದೆ ಮಗುವನ್ನು ನಾವು ಒಂದು ಪ್ರತ್ಯೇಕ ರೀತಿಯಲ್ಲಿ ನೋಡಬಾರದು. ಮತ್ತೊಂದು ಪಾಪದ ಬಗ್ಗೆ ನಾವು ಬಹಳ ಜಾಗರೂಕರಾಗಿರಬೇಕಾದನಂದರೆ ನಮ್ಮ ಮಕ್ಕಳ ಸೌಂದಯ೯ ಅಥವಾ ಅವರ ವತ೯ನೆ ಅಥವಾ ಜ್ಞಾನ ಅಥವಾ ಯಾವುದೇ ವಿಷಯದ ಬಗ್ಗೆ ಗವ೯ ಪಡುವಂತದು. ಅವರ ಜೀವಿತದಲ್ಲಿ ಯಾವುದೇ ವಿಷಯಗಳ ಬಗ್ಗೆ ನಾವು ಗವ೯ಪಡುವುದಾದರೆ ಅವರನ್ನು ನಾವು ನಾಶಮಾಡುತ್ತೇವೆ. ಲೂಸಿಫರನು ಸಹ ಸುಂದರ ದೇವದೂತನಾಗಿದ್ದ, ಆದರೆ ಅವನು ಗವ೯ಪಟ್ಟ ಗಳಿಗೆಯಲ್ಲೇ ಸೈತಾನನಾದ.

  ನಮ್ಮ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವುದರ ಉದ್ದೇಶವನ್ನು ನಮ್ಮ ಸ್ವಂತ ಮಹಿಮೆಗಲ್ಲ ಎನ್ನುವುದರ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಹಾಗಿಲ್ಲದಿದ್ದರೆ ನಮ್ಮ ಮಕ್ಕಳು ಸಹ ಬಹು ಬೇಗ ಅದನ್ನು ಗ್ರಹಿಸುತ್ತಾರೆ ಮತ್ತು ಅವರು ಸಹ ಇತರರನ್ನು ಪ್ರಭಾವಿಸಿ ಜೀವಿಸಲು ಪ್ರಾರಂಭಿಸುತ್ತಾರೆ. ದೇವರ ಮಹಿಮೆಗಾಗಿ ಮಾತ್ರ ಜೀವಿಸಬೇಕೆಂಬುದನ್ನು ನಮ್ಮ ಮಕ್ಕಳಿಗೆ ನಾವು ಕಲಿಸಬೇಕು.

  ನಾವು ಶರೀರಾತ್ಮಗಳ ಕಲ್ಮಶಗಳಿಂದ ಸತತವಾಗಿ ನಮ್ಮನ್ನು ಶುಚಿಮಾಡಿಕೊಂಡು ಮತ್ತು ಸತತವಾದ ಪಶ್ಚಾತ್ತಾಪದಿಂದ ಜೀವಿಸಲು ದೇವರ ಕೃಪೆಯನ್ನು ಬಯಸುವಾ (2ಕೊರಿ 7:1) . ಹೀಗೆ ನಮ್ಮ ಜೀವಿತದ ಅಂತ್ಯದವರೆಗೆ ಸೂಕ್ಷ್ಮಮನಸಾಕ್ಷಿಯನ್ನು ಇಟ್ಟುಕೊಳ್ಳಬಹುದು.

  ಅಧ್ಯಾಯ 3
  ಮಕ್ಕಳಿಗೆ ದೇವರ ವಾಕ್ಯ ಮತ್ತು ಪ್ರಾಥ೯ನೆ ಅವಶ್ಯ

  ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಅವರು ಕುಳಿತುಕೊಳ್ಳುವಾಗ, ದಾರಿಯಲ್ಲಿ ನಡೆಯುವಾಗ, ಅವರು ಹಾಸಿಗೆಗೆ ಹೋಗುವಾಗ, ಮತ್ತು ಅವರು ಬೆಳಿಗ್ಗೆ ಎದ್ದೇಳುವಾಗ ಆತನ ಕುರಿತಾಗಿ ತಿಳಿಸಬೇಕೆಂದು ದೇವರು ಅವರಿಗೆ ಹೇಳಿದ್ದನು. (ಧಮೋ೯ 6:7) ನಾವು ನಮ್ಮ ಮಕ್ಕಳಿಗೆ ಎಲ್ಲಾ ಕಾಲಗಳಲ್ಲಿಯೂ ಮತ್ತು ಎಲ್ಲಾ ಸಂದಭ೯ಗಳಲ್ಲಿಯೂ ಆತ್ಮೀಕ ವಿಷಯಗಳ ಕುರಿತಾಗಿ ತಿಳಿಸುವುದು ಮುಖ್ಯವೆಂಬುದನ್ನು ಇದು ಕಲಿಸುತ್ತದೆ.

  ಕ್ರೈಸ್ತ ಕುಟುಂಬಗಳಲ್ಲಿ ಅನೇಕ ಮಕ್ಕಳು ಅವಿಶ್ವಾಸಿಗಳು ಸಹ ಮಾಡದಂತ ಸಂಗತಿಗಳನ್ನು ಮಾಡುವುದನ್ನು ನೋಡುವುದು ಬಹಳ ದುಃಖಕರ ಸಂಗತಿಯಾಗಿದೆ. ಇದಕ್ಕೆ ಕಾರಣವೇನು. ಅದು ಅವರ ತಂದೆ ತಾಯಂದಿರು ತಪ್ಪಿದ್ದರಿಂದಲೋ ನನಗೆ ಗೊತ್ತಿಲ್ಲ ಮತ್ತು ನಾನು ತೀಪ೯ನ್ನು ಮಾಡುವುದಿಲ್ಲ. ಅಂತಹ ತಂದೆತಾಯಿಗಳ ಕಡೆಗೆ ನಾನು ಅನುಕಂಪ ತೋರಿಸುತ್ತೇನೆ ಮತ್ತು ಅವರ ಮಕ್ಕಳನ್ನು ದೇವರು ಬದಲಾಯಿಸಬಲ್ಲನು ಮತ್ತು ಅದ್ಭುತವನ್ನು ಮಾಡಬಲ್ಲನೆಂದು ನಂಬಲು ಪ್ರೋತ್ಸಾಹಿಸುತ್ತೇನೆ. ಆದರೆ ನಮ್ಮ ಸುತ್ತಲೂ ನಡೆಯುವ ತಪ್ಪುಗಳ ಮೂಲಕ ನಾವೆಲ್ಲರೂ ಪಾಠಗಳನ್ನು ಕಲಿಯಬೇಕು. ಇಲ್ಲವಾದರೆ ನಾವು ಸಹ ಅದೇ ತಪ್ಪನ್ನು ಮಾಡುತ್ತೇವೆ ಮತ್ತು ನಮ್ಮ ಮಕ್ಕಳು ಕಷ್ಟಪಡುತ್ತಾರೆ. ದೇವರ ವಾಕ್ಯ ಮತ್ತು ಪ್ರಾಥ೯ನೆಯ ಮೂಲಕ ಮಾತ್ರ ನಾವು ನಮ್ಮ ಮಕ್ಕಳನ್ನು ವಿಪತ್ತಿನಿಂದ ತಪ್ಪಿಸಲು ಸಾಧ್ಯ ಬೇರೆ ಮಾಗ೯ವೇ ಇಲ್ಲ.ನಮ್ಮ ಮಕ್ಕಳಿಗೆ ಇನ್ನೂ ಅವರಾಗಿಯೇ ಓದಲು ಬರದಿದ್ದಾಗ "ಮಕ್ಕಳ ಚಿತ್ರಗಳ ಬೈಬಲ್" ಅವರಿಗಾಗಿ ನಾವು ಓದುವುದು ಒಳ್ಳೆಯ ಅಭ್ಯಾಸ. ಯಾಕಂದರೆ ಅನಂತರ ಅವರು ತಾವಾಗಿಯೇ ಅದನ್ನು ಓದಲು ಇಷ್ಟಪಡುತ್ತಾರೆ. ಇನ್ನೋಂದು ಒಳ್ಳೆಯ ಅಭ್ಯಾಸವೆಂದರೆ ನಮ್ಮ ಮಕ್ಕಳು ದೇವರ ವಾಕ್ಯವನ್ನು ಬಾಯಿ ಪಾಠ ಮಾಡುವುದಕ್ಕೆ ಉತ್ತೇಜನ ಪಡಿಸುವುದು. ಹೀಗೆ ನಾವು ಸಹ ದೇವರ ವಾಕ್ಯವನ್ನು ಬಾಯಿಪಾಠಮಾಡಲು ಒಂದು ಮಾಗ೯.

  ಒಂದು ವೇಳೆ ನಾವು ನಮ್ಮ ಮಕ್ಕಳ ಹತ್ತಿರ ಕತ೯ನ ಮತ್ತು ಆತನ ವಾಕ್ಯದ ಬಗ್ಗೆ ಸತತವಾಗಿ ಮಾತನಾಡುವಾಗ ಅವರಲ್ಲಿ ಸಂಪಕ೯ವನ್ನು ತೆರೆದಿಡಲು ಸಾಧ್ಯ. ಆಗ ನಾವು ಬಹು ಬೇಗನೆ ಅವರು ಶಾಲೆಯಲ್ಲಾಗಲಿ ಅಥವಾ ಅವರ ಸ್ನೇಹಿತರಿಂದಾಗಲಿ ಯಾವುದೇ ಕೆಟ್ಟ ಅಭ್ಯಾಸಗಳನ್ನು ಅಥವಾ ಮಾತುಗಳನ್ನು ಕಲಿತಿದ್ದರೆ, ಅದನ್ನು ಗ್ರಹಿಸಲು ಸಾಧ್ಯ ಮತ್ತು ಅವುಗಳಿಂದ ದೂರವಿರುವಂತೆ ಸಹಾಯಿಸಲು ಸಾಧ್ಯ.

  ದೇವರ ವಾಕ್ಯದಲ್ಲಿ ವಿರೋಧಿಸುವ ಸಂಗತಿಗಳಿಂದ ನಮ್ಮ ಮಕ್ಕಳನ್ನು ನಾವು

  ದೂರವಿಡಬೇಕು. ಉದಾಹರಣೆಗೆ, ನಾವು ನಮ್ಮ ಮಕ್ಕಳನ್ನು ಅನ್ಯರ ಹಬ್ಬಗಳಿಗೆ ತೆಗೆದುಕೊಂಡು ಹೋಗಬಾರದು. ಮತ್ತು ನಾವು ಸಹ ಅಂಥವುಗಳಲ್ಲಿ ಭಾಗವಹಿಸಬಾರದು. ನಮ್ಮ ಮಕ್ಕಳು ಅನ್ಯರ ಹಬ್ಬಗಳನ್ನು ಅವರ ಸ್ನೇಹಿತರೊಟ್ಟಿಗೆ ಆಚರಿಸಲು ಬಿಡಬಾರದು ಉದಾಹರಣೆಗೆ. ಪಟಾಕಿಗಳನ್ನು ಮತ್ತು ರಾಕೆಟುಗಳನ್ನು ದೀಪಾವಳಿಯ ಸಮಯದಲ್ಲಿ ಹಾರಿಸುವುದು. ಅದೇ ರೀತಿ ಶಿಶು ದೀಕ್ಷಾಸ್ನಾನ ದೇವರ ದೃಷ್ಟಿಯಲ್ಲಿ ತಪ್ಪೆಂದು ತಿಳಿದಿರುವಾಗ ಅಂತಹ ಶಿಶು ದೀಕ್ಷಾಸ್ನಾನಕ್ಕೆ ನಮ್ಮಮಕ್ಕಳನ್ನು ಭಾಗವಹಿಸಲು ಬಿಡಬಾರದು. ನಮ್ಮ ಸ್ವಂತ ಸಂಬಂಧಿಕರ ಶಿಶು ದೀಕ್ಷಾಸ್ನಾನವೆ ಆದರೂ ಸಹ ಭಾಗವಹಿಸಲು ಬಿಡಬಾರದು. ನಮ್ಮ ಮಕ್ಕಳಿಗೆ ನಾವು ಕತ್ತಲೆಗೆ ಸಂಬಂಧ ಪಟ್ಟವುಗಳಿಂದ ದೂರವಿರುವುದನ್ನೂ ಕಲಿಸದಿದ್ದರೆ ಅವರು ದೇವರ ಮತ್ತು ಆತನ ವಾಕ್ಯವನ್ನು ಗೌರವಿಸುವವರಾಗಿ ಬೆಳೆಯುವದಿಲ್ಲ. ದೇವರಿಗಾಗಿ ತಮ್ಮ ಆತ್ಮಿಯ ಸ್ನೇಹಿತ ಅಥವಾ ಸಂಬಂಧಿಕರನ್ನು ಸಹ ಬೇಸರಗೋಳಿಸಲು ಸಿದ್ದರಿರಬೇಕು. ಆ ರೀತಿ ನಮ್ಮ ಮಕ್ಕಳನ್ನು ನಾವು ಬೆಳೆಸಬೇಕು. ನಮ್ಮ ಸಂಬಂಧಿಕರ ಜೊತೆ ನಾವು ವಿಶ್ವಾಸವುಳ್ಳವರಾಗಿರಬೇಕು ಹೀಗೆ ನಾವು ಬೇರೆ ಸಂದಭ೯ಗಳಲ್ಲಿ ಅವರನ್ನು ಸಂಧಶಿ೯ಸಬಹುದು ದೇವರ ಆಜ್ಞೆಗಳು ನಮ್ಮ ಹಿತಕ್ಕಾಗಿ ಮತ್ತು ನಾವು ಅವುಗಳನ್ನು ಸಂತೋಷದಿಂದ ಕೈಗೊಳ್ಳಬೇಕು ಎಂದು ನಮ್ಮ ಮಕ್ಕಳಿಗೆ ಕಲಿಸಬೇಕು. ದೇವರ ವಾಕ್ಯವನ್ನು ಮಕ್ಕಳು ಪ್ರೀತಿಸಲು ಕಲಿಸಬೇಕು ಮತ್ತು ದೇವರಿಗೆ ಪ್ರೀತಿಯಿಂದಲೂ ಮತ್ತು ಗೌರವದಿಂದಲೂ ವಿಧೇಯರಾಗಲೂ ಕಲಿಸಬೇಕು. ಆದರೆ ಸಿಕ್ಕಿಬಿಳುತ್ತೇವೆ ಅಥವಾ ಶಿಕ್ಷೆಯಾಗುತ್ತದೆ ಎಂಬ ಭಯದಿಂದಾಗಲಿ ವಿಧೆಯರಾಗಬಾರದು.

  ಪ್ರಾಥ೯ನೆ ನಮ್ಮ ಮಕ್ಕಳನ್ನು ಸುತ್ತುವ ಒಂದು ಕಂಬಳಿಯಂತಿರುತ್ತದೆ ಚಳಿಯುಳ್ಳ ರಾತ್ರಿಯಲ್ಲಿ ನಮ್ಮ ಮಕ್ಕಳು ಸರಿಯಾಗಿ ಬೆಚ್ಚಗೆ ಕಂಬಳಿಯಿಂದ ಸುತ್ತಲ್ಪಟ್ಟಿದ್ದಾರಾ ಎಂಬುದಾಗಿ ಖಚಿತಪಡಿಸಿಕೊಳ್ಳುವಂತೆ ಈ ತಣ್ಣನೆಯ ಲೋಕದಲ್ಲಿ ನಮ್ಮ ಮಕ್ಕಳು ಪ್ರಾಥ೯ನೆ ಎಂಬ ಕಂಬಳಿಯಿಂದ ಸುತ್ತಲ್ಪಟ್ಟಿದ್ದಾರಾ ಎಂದು ಖಚಿತಪಡಿಸಿಕೊಳ್ಳಬೇಕು. ಅವರು ಶಾಲೆಯಲ್ಲಾಗಲಿ ಅಥವಾ ದೂರದಲ್ಲಿ ಎಲ್ಲೇ ಇರಲಿ ಅವರನ್ನು ವೈರಿಯು ಸಿದ್ದಮಾಡಿರುವ ಬಲೆಗಳಿಗೆ ಸಿಗದೆ ಕಾಪಾಡಲ್ಪಡುವಂತೆ ದೇವರನ್ನು ಪ್ರಾಥಿ೯ಸಬೇಕು.

  ನಾವು ನಮ್ಮ ಗಂಡಂದಿರ ಜೊತೆ ಒಂದಾಗಿ ನಮ್ಮ ಕತ೯ನ ವಾಗ್ದಾನಗಳನ್ನು ಹಕ್ಕಾಗಿ ಸ್ವೀಕರಿಸಬೇಕು. (ಮತ್ತಾಯ 18:19) "ಇಬ್ಬರೂ ತಾವು ಬೇಡಿಕೊಳ್ಳತಕ್ಕ ಯಾವುದಾದರೂ ಒಂದು ಕಾಯ೯ದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದೆಂದು ನಿಮಗೆ ಹೇಳುತ್ತೇನೆ‘’ ನಾವು ನಮ್ಮ ಗಂಡಂದಿರ ಜೊತೆ ಸೇರಿ ಒಂದೇ ಮನಸ್ಸಿನಿಂದ ನಮ್ಮ ಮಕ್ಕಳು ರಕ್ಷಿಸಲ್ಪಡಬೇಕು ಮತ್ತು ನಿಜವಾದ ಪೂಣ೯ ಮನಸ್ಸಿನ ಶಿಷ್ಯರಾಗಬೇಕೆಂದು ದೇವರಲ್ಲಿ ಪ್ರಾಥಿ೯ಸಬೇಕು. ನಮ್ಮ ಮಕ್ಕಳನ್ನು ಸೈತಾನನು ಆಕ್ರಮಣ ಮಾಡದಂತೆ ನಮ್ಮ ಮತ್ತು ನಮ್ಮ ಗಂಡಂದಿರ ನಡುವೆ ಸೈತಾನನು ಪ್ರವೇಶಿಸಲು ಅನುಮತಿಸಬಾರದು. ನಾವು ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ದೇವರ ಯಜ್ಞವೇದಿಯ ಮೇಲೆ ಅನುದಿನವೂ ಅಪಿ೯ಸಬೇಕು.

  ಕುಟುಂಬವಾಗಿ ಪ್ರಾಥಿ೯ಸುವದು ಸಹ ಬಹಳ ಪ್ರಾಮುಖ್ಯ ಇದು ಯಾವಾಗಲೂ ಬೆಳಿಗ್ಗೆ ಸಾಧ್ಯವಾಗದಿರಬಹುದು ಯಾಕಂದರೆ ಮಕ್ಕಳನ್ನು ಶಾಲೆಗೆ ಸಿದ್ದಪಡಿಸಿ ಕಳುಹಿಸುವುದು ಇತ್ಯಾದಿ ಕೆಲಸಗಳು ಬೆಳಿಗ್ಗೆ ಅವಸರವಾಗಿರುತ್ತದೆ. ಆದ್ದರಿಂದ ಅವರನ್ನು ಕಾಪಾಡಲು ಮತ್ತು ಮಾಗ೯ದಶ೯ನ ನಿಡಲು ದೇವರನ್ನು ಸಂಕ್ಷೆಪವಾಗಿ ಪ್ರಾಥಿ೯ಸುವುದು ಸಾಕು. ಒಂದು ವೇಳೆ ಆಸಮಯದಲ್ಲಿ ಬಹು ಪ್ರಾಮುಖ್ಯವಾದ ವಿಷಯಗಳಿದ್ದರೆ ಪ್ರಾಥಿ೯ಸಬೇಕು. ಆದರೆ ಸಂಜೆಯ ಸಮಯದಲ್ಲಿ ರಾತ್ರಿ ಊಟದ ನಂತರ ದೇವರ ವಾಕ್ಯವನ್ನು ಓದುವುದರಲ್ಲಿ ಮತ್ತು ಪ್ರಾಥಿ೯ಸುವುದರಲ್ಲಿ ಒಟ್ಟಿಗೆ ಸಮಯವನ್ನು ಕಳೆಯುವುದು ಒಳ್ಳೆಯದು. ಪ್ರತಿಯೊಂದು ಮಗುವು ಪ್ರಾಥಿ೯ಸಲು ಉತ್ತೇಜನ ಪಡಿಸಬೇಕು ರಜಾ ದಿನಗಳಲ್ಲಿ ನಾವು ಒಟ್ಟಾಗಿ ದೇವರ ವಾಕ್ಯದೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಈ ಕೆಟ್ಟ ಲೋಕದಲ್ಲಿ ದೇವರು ಮಾತ್ರ ನಮ್ಮ ಮಕ್ಕಳನ್ನು ಸಂರಕ್ಷಿಸಲು ಸಾಧ್ಯ ಈ ಕಾರಣದಿಂದಲೇ ನಾವು ಯಾವುದರ ಮೇಲೆಯೂ ಅಲ್ಲ ದೇವರು ಮತ್ತು ಆತನ ವಾಕ್ಯದ ಮೇಲೆ ಸಂಪೂಣ೯ವಾಗಿ ಆತುಕೊಳ್ಳಬೇಕು.ನಮ್ಮ ಮಕ್ಕಳ ಕುರಿತಾಗಿ ಸಮಸ್ಯೆಗಳನ್ನು ನಾವು ಎದುರಿಸುವಾಗ ಒಂದು ವೇಳೆ ನಾವು ದೇವರ ಸ್ವರವನ್ನು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿದ್ದರೆ ಆತನು ಆ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಕೊಡುವ ವಾಗ್ದಾನವನ್ನು ನೀಡುತ್ತಾನೆ. ಆಗ ನಾವು ಆ ವಾಗ್ದಾನಕ್ಕೆ ಅಂಟಿಕೊಂಡು ಆ ಸಮಸ್ಯೆ ಪರಿಹಾರವಾಗುವವರೆಗೂ ಪ್ರಾಥಿ೯ಸಬೇಕು ತಾಯಂದಿರಾದ ನಾವು ನಮ್ಮ ಮಕ್ಕಳಿಗೆ ಭದ್ರತೆಯ ಮತ್ತು ಪ್ರೀತಿಯ ತಿಳುವಳಿಕೆಯನ್ನು ಕೊಡಬೇಕು. ನಮ್ಮ ಮಕ್ಕಳು ಯಾವಾಗಲೂ ಬರಲು ಬಯಸುವಂತೆ ಪರಲೋಕವನ್ನು ಮತ್ತು ಆಶ್ರಯವನ್ನು ನಮ್ಮಲ್ಲಿ ಕಾಣಬೇಕು. ಆದ್ದರಿಂದ ನಮ್ಮ ಸ್ವಂತ ಅನುಕೂಲಕ್ಕಾಗಿ ನಮ್ಮ ಮಕ್ಕಳನ್ನು ನೆರೆಯವರ ಮನೆಗಳಿಗೆ ನಾವು ಕಳುಹಿಸಹಬಾರದು. ನಮ್ಮ ಮಕ್ಕಳಿಗಾಗಿ ಪ್ರೀತಿ ಮತ್ತು ಅವರಿಗಾಗಿರುವ ಚಿಂತೆ ಮುಂದಿನ ವಷ೯ಗಳಲ್ಲಿ ದೇವರ ಪ್ರೀತಿ ಮತ್ತು ಆತನ ಗಮನಿಸುವಿಕೆಯನ್ನು ಸೂಕ್ಷ್ಮವಾಗಿ ಅರಿತುಕೊಳ್ಳಲು ಸಹಾಯವಾಗುತ್ತದೆ. ನೋಡದಂತವುಗಳನ್ನು ಈ ಎಳೆಯ ಮನಸ್ಸಿನಲ್ಲಿ ಆಳವಾಗಿ ಗ್ರಹಿಸುವ ಹಾಗೆ ದೇವರ ಸ್ವಭಾವವನ್ನು ನಾವು ಪ್ರತಿಬಿಂಬಿಸುವುದು ಒಂದು ದೊಡ್ಡ ಭಾಗ್ಯ. ಜ್ಞಾನೋ14:1. ರಲ್ಲಿ "ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದು ಬಿಡುವಳು" ಎಂದಿದೆ.

  ಅಧ್ಯಾಯ 4
  ನಮ್ಮ ಮಕ್ಕಳೊಂದಿಗೆ ಸಮಯ ಕಳೆಯುವದು

  ನಮ್ಮ ಮಕ್ಕಳು ಮನೆಯಲ್ಲಿರುವವರೆಗೂ ನಮ್ಮ ಜೀವಿತಗಳಲ್ಲಿ ಅವರೆ ಪ್ರಥಮ ಸ್ಥಾನವಾಗಿರಬೇಕು ನಮ್ಮ ಮಕ್ಕಳನ್ನು ಬೆಳೆಸುವುದನ್ನು ಅವರ ತಾತ ಅಜ್ಜೀಯರಾಗಲಿ ಅಥವಾ ಭಾನುವಾರ ಶಾಲೆಯ ಶಿಕ್ಷಕರಿಗಾಗಲಿ ಎಂದಿಗೂ ಬಿಡಬಾರದು. ಮೊಟ್ಟ ಮೊದಲನೆಯದಾಗಿ ತಾಯಂದಿರಾದ ನಮಗೇ ದೇವರ ಕೊಟ್ಟಿರುವ ಜವಾಬ್ದಾರಿಕೆಯಾಗಿದೆ ಯಾಕೆಂದರೆ ನಾವು ಅವರನ್ನು ಹುಟ್ಟಿಸಿದೆವು ಮತ್ತು ನಾವು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ದರಿಂದ ನಮ್ಮ ಕೆಲಸವನ್ನೇ ಗುರಿಯಿಟ್ಟುಕೊಳ್ಳುವುದರಿಂದಾಗಲಿ ಅಥವಾ ಜೀವನೊಪಾಯಗಳಿಂದಾಗಲಿ ಅಥವಾ ಹೆಚ್ಚಾಗಿ ನಮ್ಮ ನೆಂಟರಿಸ್ಥರನ್ನು ಮತ್ತು ಸ್ನೇಹಿತರನ್ನು ಭೇಟಿ ಮಾಡುವುದರಿಂದಾಗಲಿ ಅಥವಾ ಬೇರೆ ಬೇರೆ ಯಾವುದೇ ವಿಧವಾದ ಸಾಮಾಜಿಕ ಚಟುವಟಿಕೆಗಳಿಂದಾಗಲಿ ನಮ್ಮ ಮಕ್ಕಳನ್ನು ಉದಾಸೀನ ಮಾಡಬಾರದು .

  ನಮ್ಮ ಮಕ್ಕಳು ಮನೆಯಲ್ಲಿರುವಾಗ ಅವರಿಗಾಗಿ ಹೆಚ್ಚಿನ ಸಾಮಾಜಿಕ ಸಮಾರಂಭಗಳನ್ನು ತಡೆಯುವುದು ಉತ್ತಮವೆಂದು ನಾನು ಕಂಡುಕೊಂಡೆ. ಈ ರೀತಿಯ ನಿಸ್ವಾಥ೯ಕ್ಕಾಗಿ ನಾನು ಎಂದಿಗೂ ಪಶ್ಚಾತ್ತಾಪ ಪಡುವುದಿಲ್ಲ. ಯಾಕೆಂದರೆ ಹಾಗೆ ಉಳಿಸಿದ ಸಮಯಗಳನ್ನು ನನ್ನ ಮಕ್ಕಳೊಂದಿಗೆ ಉಪಯೋಗಿಸಲು ಸಾಧ್ಯವಾಯಿತು.

  ಆದರೆ ಅವಶ್ಯಕತೆಯುಳ್ಳವರನ್ನು ದೇವರು ನಮ್ಮ ಮನೆಗೆ ತರುವಾಗ ನಾನು ಎಲ್ಲವನ್ನು ಬದಿಗೆ ಒತ್ತಿ ಅವರಿಗೆ ಸಹಾಹಿಸಲು ಬಯಸುತ್ತೇನೆ. ಮತ್ತು ಅಂತಹ ಸಮಯಗಳಲ್ಲಿ ದೇವರು ನನ್ನ ಮಕ್ಕಳನ್ನು ಸಂರಕ್ಷಿಸಿದನು.

  ಈಗ ನನ್ನ ನಾಲ್ಕು ಜನ ಮಕ್ಕಳು ಬೆಳೆದು ದೊಡ್ಡವರಾಗಿ ಮನೆಯಿಂದ ದೂರದಲ್ಲಿದ್ದಾರೆ ಈಗ ನನ್ನ ಹೆಚ್ಚಾದ ಸಮಯ ಜನರನ್ನು ಸಂದಶಿ೯ಸಲು ಮತ್ತೆ ಬೇರೆ ಸಮಾಜಿಕ ಚಟುವಟಿಕೆಗಳಿಗಿದೆ. ಆದ್ದರಿಂದ ಎಲ್ಲಾದರಲ್ಲಿಯೂ ದೇವರ ಸಮಯಕ್ಕಾಗಿ ಕಾಯಲು ನಿಮ್ಮನ್ನು ಉತ್ತೇಜನಪಡಿಸುತ್ತೇನೆ.

  ಒಂದು ಸಾರೆ ನಾವು ಮದುವೆಯಾದ ಮೇಲೆ ನಮ್ಮ ಗಂಡ ನಮ್ಮ ಮಕ್ಕಳು ನಮ್ಮ ಮನೆ ಎಂಬ ಕ್ರಮದಲ್ಲಿ ನಮ್ಮ ಜೀವಿತದ ಪ್ರಥಮ ಸ್ಥಾನವಾಗಿರಬೇಕು. ನಮ್ಮ ಮಕ್ಕಳು ಉತ್ತಮರಾಗಿ ಬೇಳೆಯಬೇಕಾದರೆ ನಮ್ಮ ಮದುವೆಯ ಜೀವಿತ ಮತ್ತೆ ನಮ್ಮ ಮನೆ ಸಂತೋಷವಾಗಿರಬೇಕಾದರೆ ನಾವು ಅನೇಕ ಸಂಗತಿಗಳನ್ನು ತ್ಯಾಗಮಾಡಬೇಕಾಗಿದೆ. ಮುಂದೆ ಇದು ಸಾಥ೯ಕವಾಗುತ್ತದೆ.

  ನಾವು ಕೆಲಸಕ್ಕೆ ಹೋಗುವವರಾಗಿದ್ದರೆ ನಮ್ಮ ಮಕ್ಕಳ ಕಡೆಗೆ ನಾವು ಗಮನ ಹರಿಸಲು ಕಷ್ಟವಾಗುತ್ತದೆ. ಕೇವಲ ಸ್ವಲ್ಪ ಸಮಯದ ಕೆಲಸವಾದರೂ ಸಹ ಕೆಲಸದ ನಂತರ ಸಂಜೆ ಮನೆಗೆ ಹಿಂದಿರುವಾಗ ಬಳಲಿ, ನಿರಾಸಕ್ತಿ ಉಳ್ಳವರಾಗಿ ಬರುವಾಗ ಸಣ್ಣ ವಿಷಯಗಳಿಗಾಗಿ ನಮ್ಮ ಮಕ್ಕಳ ಜೊತೆ ತಾಳ್ಮೆ ತಪ್ಪುವವರಾಗುತ್ತೇವೆ. ಮನೆಯಲ್ಲಿ ಅನೇಕ ಸಂಗತಿಗಳು ಅಂಕೆ ತಪ್ಪುತ್ತದೆ. ತಾಯಿಯು ಆಗಾಗ ಸಿಡುಕುವುದನ್ನು ಕಂಡು ಮಕ್ಕಳು ಸಹ ಬಹಳ ತುಂಟರು ಮತ್ತು ಹಟಮಾರಿಗಳಾಗುವುದನ್ನು ನಾವು ಕಾಣುತ್ತೇವೆ. ತಾಯಿಯಾಗಿರಬೇಕೆಂದರೆ ಅದು ದಿನವಿಡಿ ಕೆಲಸವಾಗಿರುತ್ತದೆ ಮುಖ್ಯವಾಗಿ ನಮ್ಮ ಮಕ್ಕಳು ಸಣ್ಣವರಿರುವಾಗ ಮತ್ತು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಿರುವಾಗ. ಆದ್ದರಿಂದ ಇಂತಹ ಸಂದಭ೯ಗಳಲ್ಲಿ ಎಷ್ಟಾಗುತ್ತದೋ ಅಷ್ಟೆ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು.

  ನಮ್ಮ ಮಕ್ಕಳ ಜೊತೆಗೆ ನಾವು ಸಭೆಯ ಕೂಟಗಳಲ್ಲಿ ಭಾಗವಹಿಸಲು ಪ್ರಯತ್ನಿಸಬೇಕು. ಹೀಗೆ ನಾವು ಅವರಿಗೆ ಒಂದು ಒಳ್ಳೆಯ ಉದಾಹರಣೆಯನ್ನು ತೋರಿಸುತ್ತೇವೆ. ಒಂದು ವೇಳೆ ನಮ್ಮ ಮಕ್ಕಳು ಅಸ್ವಸ್ಥತೆಯಲ್ಲಿರುವಾಗ ಸಭೆಗೆ ಹೋಗಲು ಆಗದಿದ್ದರೆ ನಮ್ಮನ್ನೇ ನಾವು ನಿಂದಿಸಿಕೊಳ್ಳಬಾರದು. ಮಕ್ಕಳು ಕಾಯಿಲೆಯಿಂದಿರುವಾಗ ತಮ್ಮ ಅಂತರಾಳದಲ್ಲಿ ಗುಪ್ತವಾಗಿ ಮತ್ತು ತಮ್ಮ ಮಾತಿಲ್ಲದ ಅಳುವು ’ಅಮ್ಮಾ ನನ್ನ ಬಿಟ್ಟು ಎಲ್ಲಿಗೂ ಹೋಗಬೇಡ ’ ಎಂದು ಇರುತ್ತದೆ. ಮಕ್ಕಳು ಕಾಯಿಲೆಯಿಂದಿರುವಾಗ ತಾಯಿಯ ಉತ್ತೇಜನ ಮತ್ತು ಭರವಸೆ ಎಲ್ಲದಕಿಂತಲೂ ಹೆಚ್ಚಾಗಿ ಅವಶ್ಯ. ಆದ್ದರಿಂದ ನಾವು ಅವರನ್ನು ಅಂತಹ ಸಮಯಗಳಲ್ಲಿ ಬೆರೆಯವರ ಆರೈಕೆಗೆ ಬಿಡಬಾರದು. ಒಂದು ವೇಳೆ ನಾವು ಅವರಿಗಾಗಿ ಮಾಡಿದ ತ್ಯಾಗಗಳನ್ನು ಅವರು ತಿಳಿಯದಿದ್ದರೂ ನಾವು ಅವರಿಗಾಗಿ ಒದಗಿಸಿದ ಸಂತೋಷಕರ ಮನೆಗಾಗಿ ಒಂದು ದಿನ ಅವರು ನಮ್ಮನ್ನು ವಂದಿಸುತ್ತಾರೆ.

  ನಾವು ಒಂದು ವೇಳೆ ಹಾಸಿಗೆ ಹಿಡಿದವರಾಗಿದ್ದರೂ ಒಳ್ಳೆಯ ತಾಯಿ ಯಾಗಿರಲು ಸಾಧ್ಯ. ನಾವು ಅನೇಕ ಕೂಟಗಳಿಗೆ ಹೋಗದಿರಬಹುದು. ಆದರೆ ನಮ್ಮ ಅನ್ಯೋನ್ಯತೆಯು ದೇವರೊಂದಿಗೆ ಮುರಿದು ಹೋಗದಿರಲು ಸಾಧ್ಯ. ಕಮುನಿಸ್ಟ ಕಾರಾಗೃಹಗಳಲ್ಲಿ ಅನೇಕ ಕ್ರೈಸ್ತರು ಯಾವುದೇ ಕೂಟಗಳಿಗೆ ಹೋಗಲು ಆಗದೆ ಇರುವವರಿದ್ದಾರೆ. ಆದರೆ ವಜ್ರಗಳಂತೆ ಅವರಿಗೆ ಮೆರುಗುಕೊಡುತ್ತಾ ಬಂದು ದಿನ ಇದೇ ಪ್ರಪಂಚಕ್ಕೆ ಅವರನ್ನು ತೋರಿಸುತ್ತಾನೆ. ತಾಯಂದಿರಾದ ನಾವು ಸಹ ದೇವರಿಗಾಗಿ ಆ ರೀತಿಯಲ್ಲಿ ವಜ್ರದಂತೆ ರಲು ಸಾಧ್ಯ.

  ನಮ್ಮ ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಾವು ಆಸಕ್ತಿವಹಿಸಬೇಕು. ಒಂದು ವೇಳೆ ಅವರು ಶಾಲೆಯಲ್ಲಿ ಯಾವುದೇ ಸಮಾರಂಭದಲ್ಲಿ ಭಾಗವಹಿಸಬೇಕು. ಅಥವಾ ಶಾಲೆಯ ಆಟಪಾಠಗಳಲ್ಲಿ ಭಾಗವಹಿಸುವುದನ್ನು ನಾವು ಹೋಗಿ ನೋಡಿ ಅದರಲ್ಲಿ ಬಾಗವಹಿಸಬೇಕು. ಈ ರೀತಿಯ ಕ್ರಿಯೆಗಳಿಂದ ನಮ್ಮ ಮಕ್ಕಳ ಹೃದಯಗಳನ್ನು ನಾವು ಗೆಲ್ಲಬಹುದು. ಮತ್ತು ಅವರು ಮಾಡುವ ಕ್ರಿಯೆಗಳನ್ನು ನೋಡುವುದರಲ್ಲಿ ನಮಗೆ ಆಸಕ್ತಿ ಇದೆ ಎಂಬುದನ್ನು ಅವರು ತಿಳಿಯುತ್ತಾರೆ.

  ರಜಾ ದಿನಗಳಲ್ಲಿ ಅವನರೊಟ್ಟಿಗೆ ನಾವು ಮನೆಯೊಳಗಿನ ಆಟಗಳನ್ನು ಆಡಬಹುದು. ಮತ್ತು ಕೇವಲ ನಮಗೆ ಆಸಕ್ಕಿ ವಿಷಯಗಳನ್ನು ಮಾತ್ರವಲ್ಲ ಅವರಿಗೆ ಆಸಕ್ಕಿ ಇರುವ ವಿಷಯಗಳ ಕುರಿತಾಗಿ ಮಾತನಾಡಬಹುದು. ನಾವು ವೈಯಕ್ತಿಕವಾಗಿ ಅವರೊಟ್ಟಿಕತಗೆ ಮಾತನಾಡಬೇಕು. ಮತ್ತು ಅವರು ಮಾತನಾಡುವಾಗ ಅವರ ಕಡೆಗೆ ಗಮನ ಹರಿಸಬೇಕು. ಆಗ ಅವರು ಸಹ ನಾವು ಮಾತನಾಡುವಾಗ ನಮ್ಮ ಕಡೆಗೆ ಗಮನ ಹರಿಸುತ್ತಾರೆ.

  ಅವರ ವಷ೯ದ ವಿಧ್ಯಾಭ್ಯಾಸದ ಬಗ್ಗೆ ಸಹ ನಾವು ಗಮನ ಹರಿಸಬೇಕು ಅವರಿಗೆ ಅಥ೯ವಾಗದ ವಿಷಯಗಲ ಕುರಿತಾಗಿ ಅವರನ್ನು ಬೈಯುವುದರಲ್ಲಿ ಲಾಭವಿಲ್ಲ. ನಾವು ಓದಿ ಅಥ೯ಮಾಡಿಕೊಂಡು ಅವರಿಗೆ ವಿವರಿಸಲು ಪ್ರಯತ್ನಿಸಬೇಕು. ಒಂದು ವೇಳೆ ಅದು ನಮಗೆ ಅತಿ ಅನ್ನಿಸುವಾಗಬೇರೆಯವರನ್ನು ಸಹಾಯಕ್ಕಾಗಿ ತರಬೇಕು. ನಮ್ಮ ಮಕ್ಕಲು ಓದುವಾಗ ಸಾಮಾಜಿಕ ವಿಷಯಗಳ ಕುರಿತಾಗಿ ಸಂಧಶ೯ನವನ್ನು ಯೋಚಿಸಬಾರದು. ನಮ್ಮ ಮಕ್ಕಳು ಓದುವುದರಲ್ಲಿ ಇರುವಾಗ ಮತ್ತು ನಮ್ಮ ಗಮನ ಅವರ ಕಡೆಗೆ ಹರಿಸಬೇಕಾಗಿರುವಾಗ ಸಂದಶ೯ಕರನ್ನು ಆಹ್ವಾನಿಸಬೇಡಿರಿ. ನಮ್ಮ ಮಕ್ಕಳಿಗೆ ಕಲಿಸಿಕೊಡುವಂಥದು ಬಹಳ ತ್ಯಾಗವನ್ನು ಒಳಗೊಂಡಿದೆ ಮತ್ತು ಅದನ್ನು ಸರಿಯಾಗಿ ಮಾಡಿಬೇಕಾದರೆ ನಿಜವಾಗಲೂ ನಮ್ಮನ್ನೆ ನಾವು ನಿರಾಕರಿಸಿ ಹೆಚ್ಚಾದ ಸಾಮಾಜಿಕರಣವನ್ನು ತಡೆಯಬೇಕಾಗುತ್ತದೆ. ಆದರೆ ನಮ್ಮ ಮಕ್ಕಳು ಜೀವಿತದಲ್ಲಿ ಚೆನ್ನಾಗಿ ಓದಿ ಮುಂದೆ ಬರುವುದನ್ನು ನೋಡುವಾಗ ನಾವು ವಿಷಾದಿಸುವುದಿಲ್ಲ.

  ಅನೇಕ ತಾಯಂದಿರಿಗೆ ತಮ್ಮ ಯೌವನಸ್ಥ ಮಕ್ಕಳೊಂದಿಗೆ ಒಂದಾಗರುವುದು ಮತ್ತು ಅವರ ಸಮಸ್ಯೆಗಳನ್ನು ಇವರಿಂದ ಹಂಚಿಕೊಳ್ಳುವುದು ಇದು ಒಂದು ನಿಜವಾದ ಸಮಸ್ಯೆಯೇ ಆಗಿದೆ .ಇದಕ್ಕೆ ಒಂದಾನೊಂದು ಕಾರಣ ಈ ಕಾಯೋ೯ದ್ಯುಕ್ತ ತಾಯಂದಿರು ತಮ್ಮ ಮಕ್ಕಳು ಸಣ್ಣವರಾಗಿರುವಾಗ ಅವರೊಂದಿಗೆ ಸಮಯ ಕಳೆಯದೇ ತನ್ನ ಸ್ನೇಹಿತರನ್ನು ಮನರಂಜನೆಗೊಳಿಸುತ್ತಾ ಸಮಯ ಕಳೆದಿರಬಹುದು. ಈಗ ಅದೇ ಅವರ ಜೀವಿತದಲ್ಲಿ ಬದಲಿಯಾಗಿ ಬರುತ್ತಿದೆ. ಮತ್ತು ಅವರ ಯೌವನಸ್ಥ ಮಕ್ಕಳಿಗೆ ತಮ್ಮ ತಾಯಂದಿರೊಟ್ಟಿಗೆ ತಳೆಯಲು ಸಮಯವಿಲ್ಲ.

  ನಮ್ಮ ಮಕ್ಕಳು ಸಣ್ಣವರಾಗಿರುವಾಗಲೇ ಅವರ ಭರವಸೆಯನ್ನು ನಾವು ಗೆದ್ದುಕೊಳ್ಳಬೇಕು. ಒಂದು ವೇಳೆ ಹಾಗೆ ಮಾಡಲು ನಾವು ತಪ್ಪಿದ್ದರೆ ಈಗ ಕತ೯ನನ್ನು ಕೇಳಿ ಈಗಲಾದರೂ ನಾವು ಮಾಡುವ,. ಈಗ ಪ್ರಯತ್ನಿಸುವುದು ಎಂದಿಗೂ ತಡವಲ್ಲ. ನಾವು ಎಂದಿಗೂ ನಮ್ಮ ನಿರೀಕ್ಷೆಯನ್ನು ಬಿಡಬಾರದು.

  ನಮ್ಮ ಮಕ್ಕಳು ನಮಗೆ ದೇವರ ಅತೀ ಪ್ರಾಮುಖ್ಯವಾದ ಬಹುಮಾನವೆಂಬುದನ್ನು ಮಾತ್ರ ಮರೆಯಬಾರದು. ಮತ್ತು ಆತನು ನಮ್ಮ ಪ್ರತಿ ಮಕ್ಕಳ ವಿಷಯದಲ್ಲಿ "ಈಮಗುವನ್ನು ತೆಗೆದುಕೊಂಡು ನನಗಾಗಿ ಪೋಷಸು. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ." (ವಿಮೋ 2:9) ನಮ್ಮ ಮಕ್ಕಳು ನಮಗೆ ಅತೀ ಬೆಲೆಯುಳ್ಳ ಮತ್ತು ಅಮೂಲ್ಯವುಳ್ಳವರೆಂದು ತಿಳಿದವರಾಗಿ ಬೆಳೆಸಬೇಕು. ಅವರು ಮುಖ್ಯವಾಗಿ ತಾಯಂದಿರಾದ ನಮ್ಮ ಮೂಲಕ ದೇವರ ಒಳ್ಳೆಯತನನ್ನು ರುಚಿಸಬೇಕು. ಆಗ ನಮ್ಮ ಮನೆಗಳು ದೇವರು ಬಯಸುವ ಮನೆಗಳಾಗುತ್ತವೆ. ಮತ್ತು ದೇವರು ಮಹಿಮೆ ಹೊಂದುವನು.

  ಅಧ್ಯಾಯ 5
  ನಮ್ಮ ಮಕ್ಕಳಿಗೆ ಕಟ್ಟಳೆಗಳನ್ನಲ್ಲ, ಮೂಲ ತತ್ವಗಳನ್ನು ಕಲಿಸುವುದು

  ತಾಯಂದಿರಾದ ನಾವು ನಮ್ಮ ಮಕ್ಕಳಿಗೆ ಹೇಗೆ ಸರಿಯಾದ ರೀತಿಯಲ್ಲಿ ತಿದ್ದುವುದೆಂದು ಯೋಚಿಸುತ್ತೇವೆ. ನಮ್ಮ ಮಕ್ಕಳನ್ನು ನಾವು ತಿದ್ದುವುದರಲ್ಲಿ ಸ್ವಲ್ಪ ಕಷ್ಚವನ್ನು ತೆಗೆದುಕೊಂಡು ಎಲ್ಲಾ ನಿಯಮಗಳಿಗೆ ಅವಿಧೇಯರಾಗುತ್ತಾರೆ. ನಾವು ನಿಯಮಗಳನ್ನು ಹಾಕುವುದಕ್ಕಿಂತ ಅವರಿಗೆ ಮೂಲ ತತ್ವಗಳನ್ನು ಕಲಿಸಬೇಕು. ಕಷ್ಟಕರ ನಿಯಮಕ್ಕಿಂತ ಸರಳವಾದ ಶಿಕ್ಷಣ ಮೇಲು.

  ನಮ್ಮ ಮಕ್ಕಳಿಗೆ ಕಲಿಸಬೇಕಾದ ಮುಖ್ಯ ತತ್ವಗಳು ತಂದೆ ತಾಯಂದಿಯರಿಗೆ ವಿದೇಯರಾಗಿರುವುದು. ಸತ್ಯಪರರಾಗಿರುವುದು ನಿಸ್ವಾಥಿ೯ಗಳಾಗಿರುವುದು ಹಿರಿಯರನ್ನು ಗೌರವಿಸುವುದು ಮತ್ತು ಬೇರೆಯವರ ನ್ಯಾಯಕ್ಕಾಗಿ ಆಸಕ್ತಿವಹಿಸುವುದು. ಈ ತತ್ವಗಳನ್ನು ಅವರು ಹಿಂಬಾಲಿಸಿದರೆ ಅವರಿಗೆ ಅನೇಕ ನಿಯಮಗಳು ಬೇಕಾಗಿಲ್ಲ. ಅನಂತರ ಮುಂದೆ ಅವರು ಮನೆಯನ್ನು ಬಿಟ್ಟು ದೂರವಿರುವಾಗ ಈ ತತ್ವಗಳು ಅವರಲ್ಲಿ ಇರುತ್ತವೆ. ಮತ್ತು ಅವರ ಜೀವನವಿಡೀ ಅದು ನಡೆಸುತ್ತದೆ.

  ತಮ್ಮ ತಂದೆ ತಾಯಿಗಳನ್ನು ಗೌರವಿಸುವ ಮಕ್ಕಳಿಗೆ ಮೇಲು ಆಗುತ್ತದೆ. ಎಂದು ಸತ್ಯವೇದವು ವಾಗ್ದಾನ ಮಾಡುತ್ತದೆ. ನಮ್ಮ ಮಕ್ಕಳಿಗೆ ಎಲ್ಲವೂ ಮೇಲಿಗಾಗಿ ಆಗಬೇಕಾದರೆ ನಮ್ಮನ್ನು ಗೌರವಿಸುವುದನ್ನು ಕಲಿಸಿಕೊಡಬೇಕು. ಎಲ್ಲಾ ಹಿರಿಯರನ್ನು ಗೌರವದಿಂದ ಮಾತನಾಡಿಸುವುದನ್ನು ಕಲಿಸಬೇಕು.

  ನಮ್ಮ ಮಕ್ಕಳು ನಿಸ್ವಾಥಿ೯ಗಳಾಗಿರಲು ಮನೆಯಲ್ಲಿ ಪ್ರಾಯೋಗಿಕವಾಗಿ ಕಲಿಸಬೇಕು. ಅವರು ಇಷ್ಟಪಡುವ ಆಟಿಕೆ ಅಥವಾ ವಸ್ತುಗಳನ್ನು ಇತರರೊಂದಿಗೆ ಮತ್ತು ಮನೆಗೆ ಬರುವವರೊಂದಿಗೂ ಸಹ ಹಂಚಿಕೊಳ್ಳುವುದನ್ನು ಕಲಿಸಬೇಕು. ನಮ್ಮ ಮಕ್ಕಳು ಬೇರೆಯವರ ವಸ್ತುಗಳನ್ನು ಗೌರವಿಸುವುದನ್ನು ಕಲಿಸಬೇಕು. ಮತ್ತು ಅದನ್ನು ಎಂದಿಗೂ ಕದಿಯಬಾರದು. ಅವರಿಗೆ ಸೇರದ ವಸ್ತುಗಳನ್ನು ಶಾಲೆಯಿಂದ ಮನೆಗೆ ತರುವುದನ್ನು ಅನುಮತಿಸಬಾರದು. ಒಂದು ವೇಳೆ ನಾವು ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಂಡು ಮತ್ತು ಅದನ್ನು ಹಿಂತಿರುಗಿಸಲು ಜಾಗರೂಕರಾಗಿಲ್ಲದೇ ಇರುವುದನ್ನು ಮಕ್ಕಳು ಗಮನಿಸುವಾಗ ಅವರು ಸಹ ಹಾಗೇಯೇ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳು ಸಾಧಾರಣವಾಗಿ ಗುಣವಂತರಲ್ಲ ಅವರಿಗೆ ಒಳ್ಳೇಯ ಗುಣಗಳನ್ನು ಕಲಿಸಿಕೊಡಬೇಕು. ಮಕ್ಕಳು ಮನೆಯಲ್ಲಿ ಕೈಕೆಲಸ ಮಾಡುವುದನ್ನು ಕಲಿಸಬೇಕು. ಆದರೆ ಒಂದು ಮಗುವಿಗೆ ಒಂದು ಕೆಲಸವನ್ನು ಮತ್ತೆ ಮತ್ತೆ ಮಾಡಲು ಕೊಡಬಾರದು ಕೆಲಸಗಳನ್ನು ನಾವು ಬದಲಾಯಿಸಿ ಎಲ್ಲರಿಗೂ ಆ ಕೆಲಸದ ಸರದಿ ಬರುವ ಹಾಗೆ ಮತ್ತು ಅವರ ಯೋಗ್ಯತೆಗೆ ತಕ್ಕಂತೆ ಕೊಡಬೇಕು. ಆಗ ನಾವು ಎಲ್ಲರಿಗೂ ಸೊಗಸಾಗಿರುತ್ತೇವೆ. ನಮ್ಮ ಮಕ್ಕಳು ಮನೆಯಲ್ಲಿ ಮಾಡುವ ಕೆಲಸಗಳಿಗೆ ಸಂಬಳ ಅಥವಾ ಬಹುಮಾನಗಳನ್ನು ಗಳಿಸುವ ಅಭ್ಯಾಸವನ್ನು ಮಾಡಿಸಬಾರದು. ಇವುಗಳಲ್ಲಿ ಬೇರೆ ಬೇರೆ ದೃಷ್ಟಿಗಳಿರುವುದು ನನಗೆ ಗೊತ್ತಿದೆ. ಆದರೆ ಈ ರೀತಿಯ ವಿಧಾನವು ಅಪಾಯಕಾರಿ. ಕೆಲವು ಸಂದಭ೯ಗಳಲ್ಲಿ ಮಾತ್ರವೆಂದರೆ ಪರವಾಗಿಲ್ಲ ಇಲ್ಲವಾದರೆ ಮನೆಯಲ್ಲಿ ಪ್ರತಿಯೊಬ್ಬರು ತಂದೆ ತಾಯಿ ಮತ್ತು ಮಕ್ಕಳು ಸಹಾಯಿಸುವುದು ಸಾದಾರಣವೆಂಬುದನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡಬೇಕು. ನಮಗೆ ಮನೆಯಲ್ಲಿ ಸಹಾಯಿಸುವುದರ ಮೂಲಕ ಅವರು ನಮ್ಮನ್ನು ಮೆಚ್ಚಿಸುತ್ತಾರೆಂದು ಅವರು ತಿಳಿಯಬಾರದು.

  ಮಕ್ಕಳು ನಮ್ಮ ಬಳಿ ಯಾವುದೇ ವಿಷಯವನ್ನು ಮಾತನಾಡುವುದಕ್ಕಾಗಲಿ ಅಥವಾ ಸಂಭಾಷಿಸುವುಗದಕ್ಕಾಗಲಿ ಅವರಿಗೆ ಸ್ವಾತಂತ್ರವನ್ನು ನಾವು ಕೊಡಬೇಕು. ಹಾಗೆಂದು ಅವರು ವರಟಾಗಿ ಮತ್ತು ಅಲಕ್ಷಭಾವದಿಂದ ವತಿ೯ಸಲು ಅನುಮತಿಸಬಾರದು. ಆದರೆ ನಾವು ನಮ್ಮ ಜೊತೆ ಸ್ವತಂತ್ರವಾಗಿರಲು ಅನುಮತಿಸುವಾಗ ಅವರನ್ನು ಬಾಧಿಸುವ ಕಾಯ೯ಗಳನ್ನು ಬಹು ಬೇಗ ಕಂಡುಕೊಳ್ಳುತ್ತೇವೆ. ಅವರು ನಿಶಬ್ದವಾಗಿರುವಾಗ ಮತ್ತು ಪ್ರತ್ಯೇಕವಾಗಿರುವಾಗ ಏನೋ ತಪ್ಪಿದೆ ಎಂದು ನಾವು ಕಂಡುಕೊಳ್ಳುತ್ತೇವೆ. ನಮ್ಮ ಮಕ್ಕಳ ಆತ್ಮ ವಿಶ್ವಾಸವನ್ನು ನಾವು ಗೆದ್ದುಕೊಳ್ಳಬೇಕು. ಮತ್ತು ನಮ್ಮನ್ನು ಅವರು ತಮ್ಮ ಆತ್ಮೀಯ ಸ್ನೇಹಿತರೆಂಬುದಾಗಿ ಭಾವಿಸಬೇಕು.

  ತಾಯಂದಿರಾದ ನಾವು ನಮ್ಮ ಮಕ್ಕಳನ್ನು ಪಾಲನೆ ಮಾಡಿದ್ದು ಅವರ ಮೇಲೆ ಯಾವಾಗಲೂ ದೂರು ಹೇಳದೇ ಅವರಿಗೆ ಸಹಾಯಿಸಿದರ ವಿಷಯವಾಗಿ ಹೆಮ್ಮೆಪಡುತ್ತಾರೆ. ಅವರ ಜೊತೆ ಅನ್ಯೋನ್ಯತೆಯನ್ನು ಬೆಳೆಸಲು ಕಳೆಯುವ ಸಮಯದಿಂದ ಮುಂದೆ ಅವರನ್ನು ತಿದ್ದಲು ಹೆಚ್ಚು ಸಮಯಬೇಕಾಗಿಲ್ಲ. ಅವರಿಗಾಗಿ ನಾವು ಮಾಡುವಂತ ತ್ಯಾಗಗಳನ್ನು ಮತ್ತು ಅವರನ್ನು ಬಹು ಪೂಣ೯ ಮನಸ್ಸಿನಿಂದ ಸಂರಕ್ಷಿಸಿದ್ದನ್ನು ನೋಡಿ ನಮಗೆ ಹೃತ್ಪೂವ೯ಕ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ. ವಷ೯ಗಳು ಕಳೆದ ನಂತರ ಅವರು ಅಂತಹ ಅನೇಕ ಕ್ಷೇತ್ರಗಳಲ್ಲಿ ಒತ್ತಡಗಳನ್ನು ಎದುರಿಸಬೇಕಾದಾಗ ಹಿಂದಿನವುಗಳನ್ನು ನೆನಸಿಕೊಳ್ಳುತ್ತಾರೆ. ತಾಯಂದಿರಾದ ನಮಗಿದ್ದ ನಂಬಿಕೆಯನ್ನು ಬಿಟ್ಟು ಕೊಡದ ಸಂದಭ೯ಗಳು, ದೇವರು ಕಷ್ಟಗಳಿಂದ ಜಯವೀರರನ್ನಾಗಿ ಹೊರಗೆ ತಂದ ಸಂದಭ೯ಗಳು ಇವೆಲ್ಲವನ್ನು ನೆನೆಸುವಾಗ ಅವರ ನಂಬಿಕೆ ಬೆಳೆಯುತ್ತದೆ.

  ನಮ್ಮ ಮನೆಯಲ್ಲಿರುವ ಯಾವುದೇ ಕೆಲಸದವರ ಜೊತೆ ನಮ್ಮ ಮಕ್ಕಳು ವರಟಾಗಿ ವತಿ೯ಸುವುದನ್ನು ನಾವು ಯಾವತ್ತಿಗೂ ಅನುಮತಿಸಬಾರದು. ನಮ್ಮ ಕೆಲಸದವರನ್ನು ಒಂದು ಸಾರಿಯಾದರೂ ಕ್ಷಮಾಪಣೆ ಕೇಳುವುದನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ವರಟಾಗಿ ವತಿ೯ಸುವ ಸ್ವಭಾವದಿಂದ ಅವರನ್ನು ಗುಣಪಡಿಸಬಹುದು. ನಮಗೆ ಸಹಾಯ ಮಡುವ ಕೆಲಸದವರಿಗೆ ಕೃತಜ್ಞತೆಯುಳ್ಳವರಾಗಿರುವುದನ್ನು ಕಲಿಸಬೇಕು. ನಮ್ಮ ಮಕ್ಕಳು ಹಣವನ್ನು ಸಂಪಾದಿಸುವಾಗ ಅಥವಾ ಹಣದ ಬಹುಮಾನವನ್ನು ಶಾಲೆಯಲ್ಲಿ ಪಡೆಯುವಾಗ ಮನೆಯಲ್ಲಿ ಕೆಲಸ ಮಾಡುವ ಸಹಾಯಕರಿಗೆ ಮೆಚ್ಚಿಕೆಯನ್ನು ತೋರಿಸುವ ಹಾಗೆ ಯಾವುದಾದರೂ ಬಹುಮಾನವನ್ನು ತರಲು ಉತ್ತೇಜನಪಡಿಸಬೇಕು. ನಮಗೆ ಸಹಾಯ ಮಾಡುವ ಅಥವಾ ಕೆಲಸಮಾಡುವವರನ್ನು ನಮ್ಮ ಮಕ್ಕಳು ಹೀನೈಸಿದರೆ ನಾವು ಅಂಥ ವಿಷಯವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕು. ಆಕಸ್ಮಿಕವಾದ ಸಂದಭ೯ಗಳು ಕೆಲಸದವರನ್ನು ಸಾಮಾಜಿಕವಾಗಿ ಕೆಳ ದಜೆ೯ಯಲ್ಲಿ ಇರಿಸಬಹುದು. ಆದರೆ ಅವರನ್ನು ಸೃಷ್ಟಿಸಿದವನು ಅವರನ್ನು ಗಮನಿಸುತ್ತಿರುತ್ತಾನೆ. ಮತ್ತು ನಮ್ಮ ಮಕ್ಕಳು ಅವರನ್ನು ಹೀನೈಸಿದರೆ ತಂದೆ ತಾಯಿಗಳಾದ ನಾವು ಅದಕ್ಕೆ ಹೊಣೆಗಾರರಾಗಿರುತ್ತೇವೆ. ಒಂದು ವೇಳೆ ನಮ್ಮ ಮಕ್ಕಳು ಸಾಮಾಜಿಕವಾಗಿ ಕೆಳ ದಜೆ೯ಯಲ್ಲಿರುವವರಿಗಿಂತ ತಾವು ಉನ್ನತರು ಎಂಬ ಮನೋಭಾವನೆಯಿಂದ ಬೆಳೆದರೆ ಮುಂದೆ ಅದು ಅವರನ್ನು ನಾಶಮಾಡುತ್ತದೆ. ಕ್ಷಮಾಪಣೆ ಕೇಳುವುದು ಎಲ್ಲರಿಗೂ ಕಷ್ಟಕರ. ಆದರೆ ತಾಯಂದಿರಾದ ನಾವು ಉದಾರಣೆಯಾಗಿರುವುದು ಪ್ರಯೋಜನಕರ.

  ನಮ್ಮ ಗಂಡಂದಿರೊಂದಿಗೆ ಒಂದಾಗಿರುವುದು ಸಹ ಬಹಳ ಪ್ರಾಮುಖ್ಯ ಅದು ನಾವು ನಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ ಆತ್ಮೀಕ ಅಧಿಕಾರ ಕೊಡುತ್ತದೆ. ನಮ್ಮ ಗಂಡಂದಿರೊಂದಿಗೆ ಬರುವ ಯಾವುದೇ ವ್ಯತ್ಯಾಸಕರವಾದ ಅಭಿಪ್ರಾಯವನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು. ಇದನ್ನು ದೇವರ ಮಹಿಮೆಗಾಗಿ ಮಾಡಬೇಕು. ಆದರೆ ನಮ್ಮ ಮಕ್ಕಳಿಗೂ ಸಹ ಇದು ಒಳ್ಳೇಯದು. ನಾವು ನಮ್ಮ ಗಂಡಂದಿಯರಿಗೆ ಒಳಪಡದಿದ್ದರೆ ನಮ್ಮ ಮಕ್ಕಳಲ್ಲಿ ಅಧೀನತೆಯನ್ನು ಬಯಸುವುದಕ್ಕಾಗುವುದಿಲ್ಲ. ಅಧೀನವಾಗದ ಹೆಂಡತಿಯು ತಿರುಗಿ ಬಿಳುವ ಆತ್ಮವನ್ನು ಸುಲಭವಾಗಿ ಮನೆಗೆ ತರಬಹುದು. ಮತ್ತು ಈ ಮೂಲಕ ಎಲ್ಲಾ ಮಕ್ಕಳು ಈ ಅಂಟು ಜಾಡ್ಯವನ್ನು ಆಕೆಯ ಮೂಲಕ ಹೊಂದುವರು.ನಮ್ಮ ಮಕ್ಕಳು ಒಳಿತು ನಮಗೂ ಮತ್ತು ನಮ್ಮ ಗಂಡಂದಿರಿಗೂ ಇರುವ ಒಂದೇ ಸಾಧಾರಣವಾದ ಗುರಿ ಎಂಬುದನ್ನು ನಾವು ಎಂದಿಗೂ ಮರೆಯಬಾರದು.

  ನಮ್ಮ ಮಕ್ಕಳನ್ನು ಬಹಿರಂಗವಾಗಿ ಹೊಗಳುವುದನ್ನು ನಾವು ತಡೆಯಬೇಕು ಯಾಕಂದರೆ ಅದು ಅವರನ್ನು ಉಬ್ಬಿಸುತ್ತದೆ. ನಾವು ಅವರನ್ನು ಹೆಚ್ಚಿಸಿ ಮಾತಲಾಡುತ್ತಿದ್ದೇವೋ ಅಥವಾ ಹುರುಳ್ಳಿಲ್ಲದ ಮಾತುಗಳನ್ನು ಆಡುತ್ತಿದ್ದೇವೋ ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ಮಕ್ಕಳನ್ನು ಬಹಿರಂಗವಾಗಿಯೂ ಮತ್ತು ಏಕಾಂತವಾಗಿ ಉತ್ತೇಜನಪಡಿಸುವುದು ಒಳ್ಳೇಯದು. ಆದರೆ ಈ ರೀತಿ ಹೊಗಳುವಾಗ ನಾವು ಎಚ್ಚರಿಕೆ ವಹಿಸಬೇಕು. ಯಾಕಂದರೆ ಒಂದು ಮಗುವನ್ನು ಬಹಿರಂಗವಾಗಿ ಹೊಗಳುವಾಗ ಬೇರೆಮಕ್ಕಳಲ್ಲಿ ಹೊಟ್ಟೆಕಿಚ್ಚನ್ನು ಎಬ್ಬಿಸಬಾರದು. ಮತ್ತು ಅದು ರಹಸ್ಯ ಸೇಡಿಗೆ ನಡೆಸಬಹುದು. ಆ ನಂತರ ಆ ಮಗುವು ಸ್ವನೀತಿಯಿಂದ ವತಿ೯ಸುವಂತೆ ಮಾಡಬಹುದು.

  ನಮ್ಮ ಮನೆಯು ಪರಲೋಕದ ಪೂವಾ೯ನುಭವವಾಗರಬೇಕು. ನಮ್ಮ ಮಕ್ಕಳು ಪ್ರಪಂಚದಲ್ಲಿ ಎದುರಿಸುತ್ತಿರುವ ಸಮಸ್ಯೆ, ಶೋಧನೆಗಳು ಮತ್ತು ಹೋರಾಟಗಳ ನಡುವೆ ಪುನಃ ಹಿಂತಿರುಗಲು ಆಶ್ರಯಸ್ಥಾನವಾಗಿರುವ ಭೂಮಿಯ ಮೇಲೆ ಪರಲೋಕ ಎಂಬಂತ ಮನೆ ನಾವು ಒದಗಿಸಬೇಕು.

  ಅಧ್ಯಾಯ 6
  ನಮ್ಮ ಮಕ್ಕಳಿಗೆ ಶಿಸ್ತಿನ ಸ್ವಭಾವಗಳನ್ನು ಕಲಿಸಬೇಕು.

  ಊಟದಲ್ಲಿ ಶಿಸ್ತು, ಓದುವುದರಲ್ಲಿ ಶಿಸ್ತು ಮತ್ತು ಆಟಪಾಟಗಳಲ್ಲಿ ಶಿಸ್ತು ಹೀಗೆ ಶಿಸ್ತು ನಮ್ಮ ಮಕ್ಕಳಿಗೆ ಕಲಿಸುವುದು ಒಳ್ಳೇಯದು. ರಜಾ ದಿನಗಳಲ್ಲಿ ಸಹ ಕೆಲ ಸಮಯ ಓದುವುದು ಮತ್ತು ದೇವರ ವಾಕ್ಯವನ್ನು ಬಾಯಿಪಾಠಮಾಡುವುದು ಒಳ್ಳೇಯದು ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ತಮ್ಮ ವಸ್ತುಗಳ ಕಡೆಗೆ ಗಮನ ಹರಿಸುವಂತೆ ಅವರ ವಸ್ತುಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ, ಸರಿಯಾದ ಸಮಯಕ್ಕೆ ಊಟಮಾಡುವಂತೆ ಕಲಿಸಿದರೆ ನಮಗೆ ಜೀವನ ಸುಲಭವಾಗುತ್ತದೆ. ಬೆಳೆದ ಮಕ್ಕಳು ತಮ್ಮ ಒಳಅಂಗಿಗಳನ್ನು ಒಗೆಯುವದು ಭಾರವಾದ ಕೆಲಸಗಲನ್ನು ಮಾಡುವುದರಲ್ಲಿ ಸಹಾಯಿಸುವುದನ್ನು ಕಲಿಸುವಾಗ ಅವರು ತಮ್ಮ ತಾಯಿಯನ್ನು ಮತ್ತು ಅವರು ಮಾಡುವ ಕೆಲಸಗಳನ್ನು ಹಕ್ಕಾಗಿ ನೆನೆಸುವುದಿಲ್ಲ. ಇದನ್ನು ಕಲಿಯಲಿಕ್ಕೆ ಅವರಿಗೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಒಂದು ಸಾರಿ ಕಲಿತ ನಂತರ ಅದು ಅವರ ಜೀವನವೀಡಿ ಸಹಾಯವಾಗುತ್ತದೆ.

  ನಮ್ಮ ಮಕ್ಕಳಿಗೆ ನಾವು ದೇವರನ್ನು ಗೌರವಿಸಲು ಮತ್ತು ಆತನನ್ನು ತಮ್ಮ ಜೀವಿತದಲ್ಲಿ ಪ್ರಥಮವಾಗಿ ಇಡಲು ಕಲಿಸಿಕೊಡಬೇಕು. ನಮ್ಮ ಮಕ್ಕಳು ಸಣ್ಣವರಾಗಿರುವಾಗ ಸಭೆಗೆ ಸರಿಯಾದ ಸಮಯಕ್ಕೆ ಮತ್ತು ಕ್ರಮವಾಗಿ ಬರುವುದನ್ನು ಕಲಿಸುವುದರ ಮೂಲಕ ದೇವರನ್ನು ಗೌರವಿಸುವುದು ಮತ್ತು ಆತನನ್ನು ಪ್ರಥಮವಾಗಿ ಇಡಲು ಕಲಿಸಿಕೊಡಲು ಸಹಾಯವಾಗುತ್ತದೆ. ನನ್ನ ಮಕ್ಕಳಿಗೆ ಭಾನುವಾರ ಕೂಟದ ಮರು ದಿನವೇ ಪರೀಕ್ಷೆ ಇದ್ದರೂ ಕೂಟದಲ್ಲಿ ಭಾಗವಹಿಸುವುದರ ಮೂಲಕ ದೇವರನ್ನು ಗೌರವಿಸಿದ್ದರಿಂದ ದೇವರು ಅವರನ್ನು ಗೌರವಿಸಿರುವುದನ್ನು ನಾನು ಕಂಡಿದ್ದೇನೆ. ದೇವರನ್ನು ಗೌರವಿಸುವವರನ್ನು ಆತನು ಗೌರವಿಸುತ್ತಾನೆ.

  ಸಭೆಯ ಕೂಟಗಳಲ್ಲಿ ನಿಶಬ್ದವಾಗಿ ಕುಳಿತುಕೊಳ್ಳುವುದನ್ನು ಮಕ್ಕಳಿಗೆ ನಾವು ಕಲಿಸಬೇಕು. ಇದನ್ನು ಕಲಿಸುವುದರಿಂದ ನಾವು ದೇವರನ್ನು ಗೌರವಿಸುವುದನ್ನು ಕಲಿಸಿಕೊಡುತ್ತೇವೆ. ಮತ್ತು ದೇವರ ವಾಕ್ಯವನ್ನು ಕೇಳಿಸಿಕೊಳ್ಳುವವರ ಗಮನವನ್ನು ಬೇರೆ ಕಡೆಗೆ ಹರಿಸದಂತೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ನೋಡಲು ಕಥೆಯ ಪುಸ್ತಕ ಅಥವಾ ಬಣ್ಣ ಹಚ್ಚುವ ಪುಸ್ತಕ ಕೊಡಬಹುದು. ಬೆಳೆದವರಾದ ಮಕ್ಕಳು ಸರಿಯಾದ ರೀತಿಯಲ್ಲಿ ವತಿ೯ಸುತ್ತಾ ಇದ್ದಾರಾ ಎಂಬದಾಗಿ ಅವರ ಕಡೆಗೆ ಗಮನ ಹರಿಸಬೇಕು. ಒಂದು ವೇಳೆ ಅವರು ಸರಿಯಾದ ರೀತಿಯಲ್ಲಿ ವತಿ೯ಸದೇ ಹೋದದ್ದು ನಮಗೆ ಕಂಡು ಬಂದರೆ ಕೂಟದಿಂದ ಮನೆಗೆ ಬಂದಾಗ ಅವರನ್ನು ನಾವು ಎಚ್ಚರಿಸಬೇಕು. ಮತ್ತು ದೇವರನ್ನು ಗೌರವಿಸುವುದರ ಬಗ್ಗೆ ಅವರಿಗೆ ನೆನಪಿಸಬೇಕು.

  ದೇವರ ವಾಕ್ಯವು ಸಾರಲ್ಪಡುವಾಗ ಅದನ್ನು ಗ್ರಹಿಸುವಷ್ಟು ಬೆಳೆದಿರುವ ಮಕ್ಕಳಿಗೆ ನಾವು ಕಥೆಯ ಪುಸ್ತಕವನ್ನು ಕೊಡುವುದು ಸರಿಯಲ್ಲ. ಪ್ರತಿ ದಿನ ಶಾಲೆಯಲ್ಲಿ ಅವರ ಉಪಾಧ್ಯಾಯರಿಂದ ೩ರಿಂದ ೪ ಗಂಟೆಗಳ ಕಾಲ ಶ್ರದ್ದೆಯಿಂದ ಪಾಠಗಳನ್ನು ಕೇಳಲು ಸಾಧ್ಯವಾಗುವಂತವರಿಗೆ ಖಂಡಿತವಾಗಿ ಸಭೆಯ ಕೂಟಗಳಲ್ಲಿ ೨ ಗಂಟೆಗಳ ಕಾಲ ಶ್ರದ್ದೆ ವಹಿಸುವುದು ಸಾಧ್ಯ ಶಾಲೆಯಲ್ಲಿ ಪಾಠಗಳನ್ನು ಮಾಡುವಾಗ ಹೇಗೆ ಕಥೆ ಪುಸ್ತಕಗಳನ್ನು ಓದಲು ಅವರನ್ನು ಅನುಮತಿಸುವುದಿಲ್ಲವೋ ಅದೇ ರೀತಿ ಸಭೆಯ ಕೂಟಗಳಲ್ಲಿ ಕೂಡ ಅನುಮತಿಸಬಾರದು.

  ಮಕ್ಕಳಿಗೆ ತಮಗಿರುವ ಊಟ ಮತ್ತು ಬಟ್ಟೆಗಳಲ್ಲಿ ಸಂತೃಪ್ತಿಯಿಂದಿರುವುದನ್ನು ನಾವು ಕಲಿಸಿಕೊಡಬೇಕು ಮತ್ತು ತಮ್ಮ ಲೌಕಿಕ ವಸ್ತುಗಳನ್ನು ವ್ಯಥ೯ವಾಗಿ ವ್ಯಯ ಮಾಡದಂತೆ ಕಲಿಸಬೇಕು.

  ಶಿಸ್ತಿನಿಂದ ಓದುವ ಅಭ್ಯಾಸ ಸಹ ಬಹಳ ಪ್ರಾಮುಖ್ಯ ಮಕ್ಕಳು ಸಣ್ಣವರಾಗಿರುವಾಗ ಅವರು ಶಾಲಾ ಕೊಠಡಿಯಲ್ಲಿ ಧೈಯ೯ದಿಂದಿರುವಂತೆ ಅವರ ಪಾಠಗಳೊಂದಿಗೆ ನಾವು ಸಹ ಕುಳಿತು ಕಲಿಸಬೇಕು. ಅವರ ವಿಧ್ಯೆಯನ್ನೇ ಅವರ ದೇವರಾಗಿಸಿಕೊಳ್ಳುವುದು ನಮಗೆ ಬೇಡ. ಅವರ ಸೋಮಾರಿತನದಿಂದ ಶಾಲೆಯಲ್ಲಿ ಸರಿಯಾಗಿ ಓದದಿದ್ದರೆ ಇದರಿಂದ ದೇವರಿಗೆ ನಿಜವಾಗಲೂ ಮಹಿಮೆಯಾಗುವುದಿಲ್ಲ. ನಮ್ಮ ಮಕ್ಕಳು ತುಂಬಾ ಜ್ಞಾನವಂತರಾಗಿಲ್ಲದಿದ್ದರೂ ಅವರು ಕಷ್ಟಪಟ್ಟು ಓದುವುದನ್ನು ನಾವು ಕಲಿಸಿಕೊಡಬೇಕು.

  ಅಧ್ಯಾಯ 7
  ನಮ್ಮ ಮಕ್ಕಳನ್ನು ಶಿಸ್ತಿಗೆ ಒಳಪಡಿಸುವುದು

  "ನಡೆಯಬೇಕಾದ ಮಾಗ೯ಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು. ಮುಪ್ಪಿನಲ್ಲಿಯೂ ಓರೆಯಾಗನು" ಜ್ಞಾನೋ22:6 "ಬುದ್ದಿ ಬರುವುದೇಂದು ಮಗನನ್ನು ಶಿಕ್ಷಿಸು ಹಾಳುಮಾಡಲು ಮನಸ್ಸು ಮಾಡಬೇಡ" ಜ್ಞಾನೋ 19:18 "ಮೂಖ೯ತನವು ಹುಡುಗನ ಮನಸ್ಸಿಗೆ ಸಹಜ ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು". ಜ್ಞಾನೋ 22:15. "ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ ಬೆತ್ತದ ಏಟಿಗೆ ಸಾಯನು. ಬೆತ್ತದಿಂದ ಹೊಡೆ ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು". ಜ್ಞಾನೋ 23:13.14 "ಮಗನನ್ನು ಶಿಕ್ಷಿಸು ನಿನ್ನನ್ನು ಸುಧಾರಿಸುವನು. ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು." ಜ್ಞಾನೋ 29: 17.

  ನಮ್ಮ ಮಕ್ಕಳನ್ನು ಶಿಕ್ಷಿಸುವಾಗ ಮತ್ತು ಸರಿಪಡಿಸುವಾಗ ದೇವರಿಂದ ನಮಗೆ ಬಹಳ ಜ್ಞಾನ ಮತ್ತು ಕೃಪೆ ಬೇಕು. ನಮ್ಮನ್ನು ಪ್ರೀತಿಯಿಂದ ಮತ್ತು ಕರುಣೆಯಿಂದ, ನಮ್ಮ ನಿತ್ಯತ್ವದ ಒಳ್ಳೇದಕ್ಕಾಗಿ ದೇವರು ಯಾವ ರೀತಿ ಗದರಿಸುತ್ತಾರೋ ಅದೇ ರೀತಿ ನಾವು ನಮ್ಮ ಮಕ್ಕಳನ್ನು ಗದರಿಸಬೇಕು. ನಮ್ಮ ಮಕ್ಕಳನ್ನು ಶಿಸ್ತಿಕರಿಸುವುದನ್ನೆಲ್ಲಾ ನಮ್ಮ ಗಂಡಂದಿರಿಗೆ ಬಿಡಬಾರದು. ಒಬ್ಬ ಬಲಹೀನ ಉಪಾಧ್ಯಾಯರು ಯಾವಾಗಲೂ ಅವಿಧೇಯತೆಯ ಮಗುವನ್ನು ಶಿಕ್ಷಿಸಲು ಪ್ರುನ್ಸಿಪಾಲರ ಕಡೆಗೆ ಕಳುಹಿಸುತ್ತಾ ಇದ್ದರೆ ಅಂಥಹ ಉಪಾಧ್ಯಾಯರನ್ನು ಅಥವಾ ತಾಯನ್ನು ಮಕ್ಕಳು ಗೌರವಿಸುವುದಿಲ್ಲ. ಅವರನ್ನು ನಾವೇ ಶಿಕ್ಷಿಸಲಿಲ್ಲವೆಂದರೆ ನಾವು ಬಲಹೀನರೆಂದು ಅವರು ನೋಡುತ್ತಾರೆ. ಮತ್ತು ಅವರು ಮೇಲಿನ ಅಧಿಕಾರವನ್ನು ನಾವು ಬಹು ಬೇಗ ಕಳೆದುಕೊಳ್ಳುತ್ತೇವೆ.

  ನಾವು ಯಾವ ವಿಷಯದಲ್ಲಿ ಅವರನ್ನು ಸರಿಪಡಿಸಬೇಕು ಮತ್ತು ಯಾವುದನ್ನು ಅಲಕ್ಷ ಮಾಡಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಯಾವುದೇ ವಸ್ತುವಿನ ನಷ್ಟಕ್ಕಿಂತ ಮಕ್ಕಳ ಸ್ವಭಾವ ಅತೀ ಪ್ರಾಮುಖ್ಯ ಎಂಬ ಪ್ರಧಾನ ತತ್ವವನ್ನು ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ನಮಗೆ ನಿತ್ಯತ್ವದ ಬೆಲೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಒಂದು ವೇಳೆ ನಮ್ಮ ಮಕ್ಕಳು ನಮ್ಮ ಕಡೆಗೆ ಒರಟಾಗಿರುವುದು (ಈ ವಿಷಯಕ್ಕಾಗಲಿ ಅಥವಾ ಬೇರೆ ಯಾರಿಗೆ ಆಗಲಿ) ಅಥವಾ ಬೇಕೆಂದು ಸುಳ್ಳು ಹೇಳುವಾಗ ಈ ವಿಷಯಗಳಲ್ಲಿ ಯಾವುದಾದರೂ ಬೆಲೆ ಬಾಳುವಂತ ವಸ್ತುವನ್ನು ಅಕಸ್ಮಿಕವಾಗಿ ಮುರಿದುಹಾಕುವಾಗ ತೆಗೆದುಕೊಳ್ಳುವ ಗಂಭಿರತೆಗಿಂತ ಹೆಚ್ಚಾದ ಗಂಭೀರತೆಯನ್ನು ನಾವು ತೆಗೆದುಕೊಳ್ಳಬೇಕು.

  ನಮ್ಮ ಮಕ್ಕಳನ್ನು ನಾವು ಶಿಕ್ಷಣಕ್ಕೆ ಒಳಪಡಿಸುವಾಗ ನಮ್ಮಲ್ಲಿರುವಂತ ಕೋಪ, ತಾಳ್ಮೆತಪ್ಪುವಿಕೆ ಮತ್ತು ಎಲ್ಲಾ ಸಿಡುಕಿನ ಸ್ವಭಾವದಿಂದ ಶುದ್ದೀಕರಿಸಿಕೊಳ್ಳಬೇಕು.. ಯಾವುದೇ ಸಂದಭ೯ದಲ್ಲಿಯಾಗಲಿ ನಾವು ಅವರನ್ನು ಕೋಪದಿಂದ ಶಿಕ್ಷಿಸಬಾರದು. ನಾವೆಲ್ಲರೂ ಈ ಕ್ಷೇತ್ರದಲ್ಲಿ ಹಿಂದೆ ತಪ್ಪಿಹೋಗಿದ್ದೇವೆಂದು ನನಗೆ ಗೊತ್ತಿದೆ. ಆದರೆ ನಾವು ಪಶ್ಚಾತ್ತಾಪ ಪಟ್ಟು ಮುಂದೆ ಮಕ್ಕಳನ್ನು ಪ್ರೀತಿಯಿಂದ ತಿದ್ದುವಂತೆ ಕತ೯ನ ಕೃಪೆಯನ್ನು ಕೇಳೋಣ.

  ನಮ್ಮ ಮಕ್ಕಳ ಕೈಯಲ್ಲಿ ಆಗದಂತ ಕೆಲಸವನ್ನು ಶಿಕ್ಷೆಗಾಗಿ ಕೊಡಬಾರದು ತಮ್ಮ ಕತ೯ವ್ಯಕ್ಕಾಗಿ ದುಡಿಯಬೇಕು. ಶಿಕ್ಷೆಗಾಗಿ ಅಲ್ಲ ಎಂಬುದನ್ನು ಅವರು ಕಲಿಯಬೇಕು. ಅದೇ ರೀತಿ ಶಿಕ್ಷೇಗಾಗಿ ಅವರಿಗೆ ಊಟ ಕೊಡದೆ ಇರಬಾರದು ಒಂದು ವೇಳೆ ಅವಶ್ಯಕವಲ್ಲದ ಚಾಕಲೇಟ್ ಅಥವಾ ಐಸಕ್ರೀಮ್ ಕೊಡದೆ ಇದ್ದರೆ ಪರವಾಗಿಲ್ಲ. ಮಕ್ಕಳ ಸರಿಯಾದ ಬೆಳವಣಿಗೆಗೆ ಒಳ್ಳೆಯ ಆಹಾರ ಅವಶ್ಯ.

  ಒಂದು ವೇಳೆ ನಾವು ನಮ್ಮ ಮಕ್ಕಳನ್ನು ಕೆಲವು ಅವಿಧೇಯತೆಗಾಗಿ ಶಿಕ್ಷಿಸುತ್ತೇವೆಂದು ಹೇಳಿದರೆ ಆ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ನಾವು ಹೇಳುವ ಮಾತು ಅಥವಾ ಹೆದರಿಸುವುದು ಸುಮ್ಮನೆಂದು ತಿಳಿದು ನಮ್ಮ ಮಾತನ್ನು ಅವರು ಗೌರವಿಸುವುದಿಲ್ಲ. ಆದರೆ ಅವರು ಕಷ್ಟಕರವಾದದನ್ನು ಸಹಿಸಲು ಆಗುವುದಿಲ್ಲವೆಂದು ತಿಳಿದಿದ್ದರೆ ಶಿಕ್ಷೆಯ ಕಠಿಣತೆಯನ್ನು ಕಡಿಮೆಮಾಡಬಹುದು. ಒಂದು ವೇಳೆ ನಮ್ಮ ಮಕ್ಕಳು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟರೆ ಆ ಶಿಕ್ಷೆಯ ಬೆದರಿಕೆಯನ್ನು ಸಹ ನಿಲ್ಲಿಸಬಹುದು. ದೇವರು ಸಹ ನಿನಿವೆಯ ಜನರು ಪಶ್ಚಾತ್ತಾಪಪಟ್ಟಾಗ ಬೆದರಿಕೆಯ ಶಿಕ್ಷೆಯನ್ನು ತಡೆದುಬಿಟ್ಟನು (ಯೋನ 3). ದೇವರು ನಮ್ಮ ಜೊತೆ ಕಠಿಣವಾಗಿಯೂ ಮತ್ತು ಕರುಣೆಯಿಂದಲೂ ವ್ಯವಹರಿಸುತ್ತಾನೆ. ಮತ್ತು ಹಾಗೆಯೇ ನಾವು ಸಹ ನಮ್ಮ ಮಕ್ಕಳೊಂದಗೆ ವ್ಯವಹರಿಸಬೇಕು.

  ಬೆಲ್ಟನ್ನು ಅಥವಾ ಬೆತ್ತವನ್ನು ಉಪಯೋಗಿಸಿ ಮಕ್ಕಳನ್ನು ಶಿಕ್ಷಿಸುವದೊಂದೇ ರೀತಿಯಲ್ಲ. ಅವರನ್ನು ಆಟಕ್ಕೆ ಕಳುಹಿಸದೇ ಅಥವಾ ಹಾಸಿಗೆಯಲ್ಲಿ ನಿಶಬ್ಧವಾಗಿಏ ಇರಿಸುವುದು ಸಹ ಅವರನ್ನು ಮಿತಿಗೊಳಿಸುವುದು. ಈ ಕೆಲವು ಕೃತ್ಯಗಳು ಸಹ ಅವರು ತಪ್ಪು ಮಾಡಿರುವಾಗ ಅವರ ಜೊತೆ ವ್ಯವಹರಿಸುತ್ತವೆ.

  ನಮ್ಮ ಮಕ್ಕಳನ್ನು ನಾವು ಎಂದಿಗೂ ಕರುಣೆಯಿಲ್ಲದೆ ಶಿಕ್ಷಿಸಬಾರದು. ಅವರನ್ನು ಶಿಕ್ಷಿಸುವಾಗ ಅವರ ಕೆನ್ನೆಗೆ ಹೊಡೆಯುವದಾಗಲಿ ಅಥವಾ ಅವರನ್ನು ಗಾಯಗೊಳಿಸುವುದಾಗಲಿ ಮಾಡಬಾರದು. ಮಕ್ಕಳ ಮುಖಗಳು ಪ್ರೀತಿಯಿಂದ ಮುದ್ದಿಸಲಿಕ್ಕೆ ಹೊರತು ಹೊಡೆಯಲು ಅಲ್ಲ

  ನಮ್ಮ ಮಕ್ಕಳನ್ನು ಹೊಡೆಯಲು ನಮ್ಮ ಕೈಗಳನ್ನು ನಾವು ಉಪಯೋಗಿಸಬಾರದು.ದೇವರ ವಾಕ್ಯದಲ್ಲಿ ಹೇಳಿದ ಹಾಗೆ ನಮ್ಮ ಕೈಗಳಿಗಿಂತ ಬೆತ್ತವನ್ನು ಉಪಯೋಗಿಸುವುದು ಉತ್ತಮ (ಜ್ಞಾನೋ 23: 13 14) ಕೈಗಳು ನಮ್ಮ ಮಕ್ಕಳನ್ನು ಅಪ್ಪಿಕೊಳ್ಳಲು ಇರುತ್ತವೆ . ಆದ್ದರಿಂದ ನಮ್ಮ ಪ್ರೀತಿಯನ್ನು ಅವರಿಗೆ ತೋಪ೯ಡಿಸುವ.

  ನಮ್ಮ ಮಕ್ಕಳು ಯೌವನಸ್ತರಾದ ಕೂಡಲೇ ನಾವು ಅವರನ್ನು ದೈಹಿಕವಾಗಿ ಶಿಕ್ಷಿಸುವುದನ್ನು ತಡೆಯಬೇಕು. ಒಂದು ವೇಳೆ ನಾವು ಅವರನ್ನು 1 ರಿಂದ 13 ವಯಸ್ಸಿನವರೆಗೂ ಶಿಕ್ಷಿಸಿದ್ದರೆ ಮುಂದೆ ಅವರನ್ನು ಶಿಕ್ಷಿಸಿ ಬೆಳೆಸುವ ಅವಶ್ಯಕತೆ ಇರುವುದಿಲ್ಲ.ಆದ್ದರಿಂದ ಮಕ್ಕಳು ಸಣ್ಣವರಿರುವಾಗಲೇ ಅವರನ್ನು ಒಳ್ಳೇಯ ರೀತಿಯಲ್ಲಿ ಶಿಕ್ಷಿಸಿ ದೈವಭಕ್ತಿಯಲ್ಲಿ ಬೆಳೆಸಲು ಉಪಯೋಗಿಸಿಕೊಳ್ಳಬೇಕು.

  ಬೇರೆಯವರ ಮುಂದೆ ಮಕ್ಕಳನ್ನು ನಾವು ಶಿಕ್ಷಿಸಬಾರದು. ಅದು ಅವರನ್ನು ಎಲ್ಲರ ಮುಂದೆ ಅವಮನಪಡಿಸುತ್ತದೆ. ಮತ್ತು ಅದು ಅವರ ಶಿಕ್ಷೆಯನ್ನು ಎರಡರಷ್ಟು ಮಾಡುತ್ತದೆ. ಅವರ ಘನತೆಯನ್ನು ಸಹ ನಾವು ಎಲ್ಲಾ ಸಮಯಗಳಲ್ಲಿ ಗೌರವಿಸಬೇಕು. ಅವರ ತಪ್ಪುಗಳಿಗಾಗಿ ನಾವು ವೈಯಕ್ತಿಕವಾಗಿ ಶಿಕ್ಷಿಸಬಹುದು. ಅವಿಧೇಯತೆಯ ಮತ್ತು ಒರಟುತನವನ್ನು ತಕ್ಷಣ ತಿದ್ದಬೇಕು. ಇಂತ ವಿಷಯಗಳಲ್ಲಿ ನಾವು ಅವರನ್ನು ತಿದ್ದಲು ತಪ್ಪಿದಲ್ಲಿ, ಮುಂದೆ ಅವರು ಬೆಳೆಯುವಾಗ ಅಪಾಯಕ್ಕೊಳಪಡುತ್ತಾರೆ. ಆಗ ಅವರನ್ನು ತಿದ್ದಲು ಬಹಳ ತಡವಾಗುತ್ತದೆ. ಕೆಲವು ತಂದೆ ತಾಯಿಗಳು ಅವರ ಮಕ್ಕಳನ್ನು ಬಹಿರಂಗವಾಗಿ ಶಿಕ್ಷಿಸುತ್ತಾರೆ. ಯಾಕಂದರೆ ಅವರು ತುಂಬಾ ಶಿಸ್ತನವರು ಅವರ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸುವವರು ಎಂದು ತೋರಿಸಿಕೊಳ್ಳಲು. ಇದು ಮನುಷ್ಯರ ಗೌರವವನ್ನು ಅಪೇಕ್ಷಿಸುವುದು ಮತ್ತು ದೇವರ ದೃಷ್ಟಿಯಲ್ಲಿ ಕೆಟ್ಟದ್ದು ಆಗಿದೆ.

  ಮಕ್ಕಳನ್ನು ಶಿಕ್ಷಿಸಿ ಶಿಸ್ತಿನಲ್ಲಿ ಬೆಳೆಸಲು ತಂದೆ ಮತ್ತು ತಾಯಿ ಇಬ್ಬರೂ ಒಂದಾಗಬೇಕು. ಒಂದು ವೇಳೆ ತಂದೆ ಶಿಕ್ಷಿಸುವಾಗ ತಾಯಂದಿರಾದ ನಾವು ನಮ್ಮ ಮಕ್ಕಳನ್ನು ಗೆದ್ದುಕೊಳ್ಳಲು ನೊಡುವುದಾದರೆ ಮುಂದೆ ನಮ್ಮ ಮಕ್ಕಳನ್ನು ನಾವು ಹಾಳು ಮಾಡುವ ಮಾಗ೯ದಲ್ಲಿರುತ್ತೇವೆ.

  ಶಿಕ್ಷಿಸಿದ ನಂತರ ನಮ್ಮ ಮಕ್ಕಳನ್ನು ನಾವು ಕ್ಷಮಿಸಿದ್ದೇವೆಂಬ ಭರವಸೆಯನ್ನು ಕೊಡಬೇಕು. ತಮ್ಮ ತಪ್ಪುಗಳನ್ನು ಯಾವ ರೀತಿ ಸರಿಪಡಿಸಿಕೊಳ್ಳಬಹುದೆಂದು ನಮ್ಮ ಮಕ್ಕಳಿಗೆ ಯಾವಾಗಲೂ ಕಲಿಸಿಕೊಡಬೇಕು. ಮತ್ತು ಅವರ ತಪ್ಪುಗಳನ್ನು ಆಗಾಗ ನಾವು ನೆನಪಿಸದಂತೆ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಕೆಲವು ತಾಯಂದಿರು ಇದನ್ನು ಮಾಡಿ ತಮ್ಮ ಮಕ್ಕಳು ಮತ್ತಷ್ಟು ಹಾದಿ ತಪ್ಪಲು ಮಾಗ೯ ಮಾಡುತ್ತಾರೆ.

  ನಮ್ಮ ಮಕ್ಕಳನ್ನು ಬಹುಮಾನಿಸುವ ಸಂದಭ೯ಗಳೂ ಸಹ ಇವೆ. ನಮ್ಮನ್ನೇ ನಾವು ಕೆಲವು ಕ್ಷೇತ್ರಗಳಲ್ಲಿ ತ್ಯಜಿಸುವಾಗ ದೇವರು ನಮಗೆ ಪ್ರತಿಫಲ ಕೊಡುತ್ತಾನೆ.ಅಬ್ರಹಾಮನು ತನ್ನನ್ನೇ ನಿರಾಕರಿಸಿ ಲೋಟನಿಗೆ ಯಾವ ಭೂಮಿಬೇಕಾದರೂ ಮೊದಲು ಆರಿಸಿಕೊಳ್ಳುವ ಸಂದಭ೯ ಒದಗಿಸಿಕೊಟ್ಟಾಗ (ಆದಿ 13) ದೇವರು ಅವನಿಗೆ ತಕ್ಷಣ ಪ್ರತಿಫಲ ಕೊಟ್ಟನು. ಹಾಗೆಯೇ ನಮ್ಮ ಮಕ್ಕಳು ಒಳ್ಳೇಯವರಾಗಿದ್ದು ತಮ್ಮನ್ನೇ ತಾವು ಕೆಲವು ಸಂದಭ೯ಗಳಲ್ಲಿ ನಿರಾಕರಿಸುವಾಗ ಅವರಿಗೆ ಪ್ರತಿಫಲ ಕೊಡುವುದು ಒಳ್ಳೇಯದು. ಅವರಿಗೆ ಹುಟ್ಟು ಹಬ್ಬವಾಗುವಾಗ ಅಥವಾ ಅವರು ಕಾಯಿಲೆಯಿಂದಿರುವಾಗ ಅಥವಾ ಅವರು ಆಸ್ಪತ್ರೆಯಲ್ಲಿರುವಾಗ ಬಹುಮಾನವನ್ನು ಕೊಡಬಹುದು.

  ಕೆಲವು ಸಾರಿ ನಮ್ಮ ಮಕ್ಕಳನ್ನು ಬಹಳ ಕಠಿಣವಾಗಿ ಶಿಕ್ಷಿಸಿದ ನಂತರ ಅದಕ್ಕೆ ಪರಿಹಾರವಾಗಿ ಅವರಿಗೆ ಯಾವುದಾದರೂ ಬಹುಮಾನವನ್ನು ಕೊಟ್ಟು ಅದನ್ನು ಸರಿಪಡಿಸುವ ಸಂದಭ೯ಗಳು ಬರುತ್ತವೆ.ಕೆಲವು ಸಂದಭ೯ಗಳಲ್ಲಿ ಹೀಗೆ ಮಾಡುವುದು ಸರಿ. ಆದರೆ ಅದು ರೂಡಿಯಾಗಬಾರದು. ಯಾಕಂದರೆ ನಮ್ಮ ಮಕ್ಕಳಿಗೆ ನಾವು ಕೊಡುವ ಶಿಕ್ಷೆಯ ಗೌರವವನ್ನು ಅವರು ಕಳೆದುಕೊಳ್ಳುತ್ತಾರೆ.ಅವರು ಒಳ್ಳೇಯವರಾಗಿರಲು ಪ್ರಯಾಸಪಡುವಾಗ ಅವರನ್ನು ಗೌರವಿಸಲು ಬಹುಮಾನ ಕೊಡುವುದು ಉತ್ತಮ.

  ನಮ್ಮ ಮಗು ಮೊದಲು ಜನಿಸಿದಾಗ ದೇವರ ಕುರಿತಾಗಿ ನಮಗಿರುವ ಕೃತಜ್ಞತೆ,ಸಂತೋಷ,ಆಶ್ಚಯ೯ ಎಲ್ಲವನ್ನು ನಮ್ಮ ಮಕ್ಕಳ ಕುರಿತಾಗಿ ಯಾವುದೇ ಸಮಸ್ಯೆ ಆರಂಭವಾಗುವಾಗ ಬಹಳ ಸುಲಬವಾಗಿ ಕಳೆದುಕೊಳ್ಳಲು ಸಾಧ್ಯ. ಆದರೆ ಮಗುವನ್ನು ಹೆರುವುದು ಬೆಲೆ ಕಟ್ಟಲಾಗದ ಭಾಗ್ಯವೆಂಬುದನ್ನು ನಾವು ಎಂದಿಗೂ ಮರೆಯಬಾರದು. ಅನೇಕ ಹೆಂಡತಿಯರಿಗೆ ಈ ರೀತಿಯ ಭಾಗ್ಯವಿಲ್ಲ ಮತ್ತು ಒಂದು ಮಗುವನ್ನು ಹೊಂದಲು ಏನೂ ಬೇಕಾದರೂ ಕೊಡಲು ಸಿದ್ಧರಿದ್ದಾರೆ.

  ಆದ್ದರಿಂದ ನಾವು ಏನೇ ಬಂದರೂ ನಮ್ಮ ಕೈಗಳನ್ನು ನೇಗಿಲಿನ ಮೇಲೆ ಹಾಕುತ್ತೇವೆಂದು ನಿಧ೯ರಿಸಿಕೊಳ್ಳಬೇಕು. ಮತ್ತು ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಉತ್ತಮವಾದದ್ದನ್ನೇ ಮಾಡಿ ನಮ್ಮ ಮನೆಗಳಲ್ಲಿ ಎಲ್ಲವೂ ಸರಾಗವಾಗಿ ಸಾಗುವಂತೆ ಮಾಡಬೇಕು. ನಾವು ದೇವರೊಟ್ಟಿಗೆ ಸಮಯ ಕಳೆಯುವಾಗ ಮತ್ತು ಆತನೊಂದಿಗೆ ಅಂಟಿಕೊಂಡು ನಡೆಯುವದನ್ನು ಕಾಪಾಡಿಕೊಳ್ಳುವಾಗ ದೇವರು ನಮ್ಮ ಆತ್ಮಗಳನ್ನು ಚೈತನ್ಯಗೊಳಿಸುವನು ಮತ್ತು ನಮಗೆ ಹೊಸ ಬಲವನ್ನು ಕೊಡುವನು.

  ಅಧ್ಯಾಯ 8
  ನಮ್ಮ ಮಕ್ಕಳನ್ನು ಉತ್ತೇಜನ ಪಡಿಸುವುದು

  ತಾಯಂದಿರಾದ ನಾವು ನಮ್ಮ ಮಕ್ಕಳನ್ನು ಉತ್ತೇಜನಪಡಿಸುವುದರಿಂದ ಅವರ ಜೀವಿತದಲ್ಲಿ ಎಂದಗೂ ಮಾಡದ ಬಹು ಪ್ರಾಮುಖ್ಯವಾದ ಕಾಯ೯ವನ್ನು ಮಾಡುತ್ತೇವೆ. ಆದರೆ ಅನೇಕ ಮನೆಗಳಲ್ಲಿ ಇದನ್ನೇ ಕಳೆದುಕೊಂಡಿರುವುದು ವ್ಯಸನಕರ ಸಂಗತಿ.

  ಅನೇಕ ಮಕ್ಕಳು ತಮ್ಮ ವ್ಯಕ್ತತ್ವದಲ್ಲಿ ಮುದುಡಿ ಮುಚ್ಚಲ್ಪಟ್ಟವರಾಗಿದ್ದಾರೆ. ಯಾಕಂದರೆ ಪೋಷಕರ ನಿಂದಿಸುವಿಕೆಯಿಂದ, ಪ್ರೀತಿಯಿಲ್ಲದಿರುವುದರಿಂದ, ಅನ್ಯೋನ್ಯತೆ ಇಲ್ಲದಿರುವುದರಿಂದ ಪ್ರೋತ್ಸಾಹ ಸಿಗದೆ ಇರುವ ಮನೆಯಲ್ಲಿ ಬೆಳೆಯುವ ದೌಭಾ೯ಗ್ಯ ಮಗುವು ಬಂಡೆಯ ನೆರಳಿನಲ್ಲಿ ಬೆಳೆಯುತ್ತಿರುವ ಗಿಡವು ಎಂದಿಗೂ ಬಿಸಿಲನ್ನೆ ಕಾಣದ ಹಾಗೆ ಇರುತ್ತದೆ.

  ಸಾಮಥ್ಯ೯ವುಳ್ಳ ಮಗುವನ್ನಾಗಲಿ ಅಥವಾ ಚೆನ್ನಾಗಿ ಓದುವ ಮಗುವನ್ನಾಗಲಿ ಅಥವಾ ಅಂಗಸಾಧನೆ ಮಾಡುವ ಮಗುವನ್ನಾಗಲಿ ಹೊಗಳುವುದು ಬಹಳ ಸುಲಭ. ಆದರೆ ಬಲಹೀನ ಮಗುವಿಗೆ ನಿಜವಾದ ಉತ್ತೇಜನ ಬೇಕಾಗಿರುವುದು. ಹೃದಯದಲ್ಲೇ ನೋವನ್ನು ಅನುಭವಿಸುತ್ತಾ ಯಾರಿಗೂ ವ್ಯಕ್ತಪಡಿಸದೆ ಇರುವಂತ ಮಗುವಿನ ಅವಶ್ಯಕತೆಯನ್ನು ನಾವು ಗುರುತಿಸಬೇಕು. ಒಬ್ಬ ಸೂಕ್ಷ್ಮ ತಾಯಿಯು ಆ ಮಗುವಿನ ಚಿಂತೆಯನ್ನು ಥರಮಾಮೀಟರನಿಂದ ಮೈ ಶಾಖವನು ಕಂಡು ಹಿಡಿಯುವಂತೆ ಸುಲಭವಾಗಿ ಗುರುತಿಸುತ್ತಾಳೆ.

  ಮಗುವು ಕೆಳ ದಜೆ೯ಯವನಂತೆ ಚಿಂತಿಸುವಾಗ ಅಥವಾ ತನ್ನ ಅಣ್ಣಂದಿರ ಮಟ್ಟಕ್ಕೆ ತಾನು ತಲುಪದಿದ್ದಾಗ ಅಥವಾ ತನ್ನ ಸ್ನೇಹಿತರಿಂದ ತಿರಸ್ಕರಿಸಲ್ಪಟ್ಟೆನೆಂದು ನೆನೆಸುವಾಗ ಮತ್ತು ತಾನು ಯಾರಿಗೂ ಬೇಡವಾದವನು ಎಂದು ನೆನೆಸುವಾಗ ಅವನನ್ನು ಉತ್ತೇಜನಪಡಿಸುವ ಬದಲು ಮತ್ತಷ್ಟು ಬೈಯುವುದರ ಮೂಲಕ ಅವನ ದುಃಖಕ್ಕೆ ಇನ್ನೂ ಕೂಡಿಸುತ್ತೇವೆ.

  ನಮ್ಮ ಮಕ್ಕಳಿಗೆ ಎಷ್ಟು ಸಾರೆ ’ಮಾಡಬೇಡ’ ಎಂಬ ಪದವನ್ನು ಉಪಯೋಗಿಸುತ್ತೇವೆಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಯಾವಾಗಲೂ ಮಾಡಬಾರದನ್ನೇ ಹೇಳುವುದಕ್ಕಿಂತ ಮಾಡಬೇಕಾದದ್ದನ್ನು ನಮ್ಮ ಮಕ್ಕಳಿಗೆ ಹೇಳುವಾ. ಒಂದು ವೇಳೆ ನೀವು ಯೋಚಿಸದೇ ಇರುವಾಗ ನಿಮ್ಮ ಮಗನ ಅಥವಾ ಮಗಳೋ ಜನಿಸಿದರೆಂದು ತಿಳಿಯಿರಿ ನಿಮಗೆ ನೀವೇ ಆಗಲಿ ಅಥವಾ ಯಾರಿಗೆ ಆಗಲಿ ಈ ಮಗುವು ಆಕಸ್ಮಿಕವಾಗಿ ಜನಿಸಿತು ಎಂದಾದರೂ ಹೇಳಿರುವುದಾದರೆ ಕೀತ೯ 127:3 ರಲ್ಲಿ "ಮಕ್ಕಳು ಕತ೯ನ ಬಹುಮಾನ" ಎಂಬುದಾಗಿ ಹೇಳುವ ದೇವರ ವಾಕ್ಯಕ್ಕೆ ಇದು ಎಷ್ಟು ವಿರುದ್ಧವಾಗಿದೆ. ಪ್ರತಿ ಮಗುವನ್ನು ನಾವು ದೇವರ ವರವನ್ನಾಗಿ ಬೆಲೆ ಕೊಡಬೇಕು.ನಾವು ಮಕ್ಕಳ ಬಗ್ಗೆ ಯೋಚಿಸದಿದ್ದಾಗಲೂ ಸಹ ದೇವರು ತಪ್ಪು ಮಾಡಲಿಲ್ಲ. ನಮ್ಮ ಮಕ್ಕಳ ತಪ್ಪನ್ನು ನಾವು ಬಹಿರಂಗವಾಗಿ ಎತ್ತಿ ತೋರಿಸಬಾರದು. ನಮ್ಮ ಮಕ್ಕಳ ಹಿಂದುಗಡೆಯು ಸಹ ನಾವು ನಂಬಿಗಸ್ತರಾಗಿರುತ್ತೇವೆಂಬುದು ತಿಳಿದು ಬರಬೇಕು.

  ಬೆಳೆದ ಮಕ್ಕಳು ತಮ್ಮ ಕಿರಿಯ ಸಹೋದರ ಅಥವಾ ಸಹೋದರಿಯನ್ನು ಅಂಗೀಕರಿಸುವುದನ್ನು ನಾವು ಕಲಿಸಿಕೊಡಬೇಕು. ನಾವು ಎಷ್ಟು ಸಮಯ ಕಿರಿಯ ಮಕ್ಕಳೊಂದಿಗೆ ಕಳೆಯುವದರಿಂದ ಅವರ ಬಗ್ಗೆ ಹೊಟ್ಟೆಕಿಟ್ಟು ಪಡದಂತೆ ಅವರಿಗೆ ಕಲಿಸಿಕೊಡಬೇಕು. ಒಂದು ಮಗುವು ಹೊಸದಾಗಿ ಜನಿಸುವಾಗ ಎಲ್ಲರ ಗಮನ ಆ ಮಗುವಿನ ಕಡೆಗೆ ಹೆಚ್ಚಾಗಿ ಇರುವಾಗ ಇದು ಕೆಲವು ಸಂದಬ೯ಗಳಲ್ಲಿ ಒಂದು ಸಮಸ್ಯೆಯೇ ಆಗಿರುತ್ತದೆ. ಆದರೆ ದೇವರ ಸಹಾಯದಿಂದ ಎಲ್ಲಾ ಮಕ್ಕಳು ನಮಗೆ ಸರಿಸಮಾನವಾಗಿ ಅಮುಲ್ಯರೆಂಬುದಾಗಿ ನಮ್ಮ ಮಕ್ಕಳಿಗೆ ತೋರಿಸಿಕೊಡಬೇಕು.

  ತಪ್ಪಿಹೋಗುವಂತ ಮಗುವಿಗೆ ನಾವು ಕರುಣಾಶಾಲಿಯಾಗಿರಲು ಎಷ್ಟು ಸಾರಿ ತಪ್ಪಿದ್ದೇವೆ. ಒಂದು ಮಗು ಹಿಂಜಾರಿ ಅಥವಾ ಪಾಪದಲ್ಲಿ ಬಿದ್ದರೆ ಒಬ್ಬ ತಾಯಿಯು ತನ್ನ ಪ್ರೀತಿಯಿಂದ ಮತ್ತು ಪ್ರಾಥ೯ನೆಯಿಂದ ರಕ್ಷಕನ ರೆಕ್ಕೆಯ ಅಡಿಯಲ್ಲಿ ಈ ತಪ್ಪಿದ ಕುರಿಯನ್ನು ಮತ್ತೆ ಸೇರಿಸಲು ಸಾಧ್ಯ.

  ಮಗುವು ತಪ್ಪಿ ಹೋದ ಸಂದಭ೯ದಲ್ಲಿ ಆ ಮಗುವನ್ನು ನಾವು ಬೈಯುವ ಸಂದಭ೯ ಅದಲ್ಲ. ಜ್ಞಾನದಲ್ಲಿ ಕಡಿಮೆಯಾದವರನ್ನು ದೇವರು ಬೈಯುವುದಿಲ್ಲ (ಯಾಕೋಬ 1:5) ಹಾಗೆಯೇ ನಾವು ಕೂಡ ಇರಬೇಕು. ಉತ್ತಮ ತಾಯಂದಿರಾಗಿರಲು ಎಷ್ಟು ಜ್ಞಾನ ನಮಗೆ ಅವಶ್ಯವಾಗಿದ್ದರೂ ಮತ್ತು ದೇವರು ನಮ್ಮನ್ನು ಬೈಯಲಿಲ್ಲ.

  ತಮ್ಮ ತಾಯಿಯ ನಿಷ್ಠೆಯುಳ್ಳ ಪ್ರಾಥ೯ನೆಯಿಂದ ಅನೇಕ ಹಿಂಜರಿದ ಮಕ್ಕಳು ಪುನಃ ಕತ೯ನ ಕಡೆಗೆ ಸ್ಥಾಪಿಸಲ್ಪಟ್ಟಿದ್ದಾರೆ ಆದ್ದರಿಂದ ನಾವು ಚಂಚಲ ಚಿತ್ತರಾಗದೆ ದೇವರ ವಾಗ್ದಾನಗಳನ್ನು ಬಲವಾಗಿ ಹಿಡಿದುಕೊಳ್ಳೋಣ.

  ನಾವು ನಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯುವಾಗ ಸಾಧಾರಣ ಕೆಲಸವನ್ನು ಮಾಡುವಾಗ ಸಹ ಅವರು ತಮ್ಮ ಮನಸ್ಸನ್ನು ಬಿಚ್ಚಿ ಅವರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಮತ್ತು ಆಸಮಸ್ಯೆಗೆ ಒಳಪಡದೆ ಜಯಗಳಿಸುವಂತೆ ಅವರನ್ನು ನಾವು ಉತ್ತೇಜನಗೊಳಿಸಬೇಕು.

  ನಮ್ಮ ಮಕ್ಕಳು ದೊಡ್ಡವರಾಗಿ ಬೆಳೆದಂತೆಲ್ಲಾ ಅವರನ್ನು ನಾವು ಬೆಳೆದ ಪ್ರಾಯಸ್ಥರೆಂದು ಭಾವಿಸಿ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಬೇಕು. ಚಿಕ್ಕ ಮಕ್ಕಳಾಗಿರುವಾಗ ನಾವು ಹೇಗೆ ಅವರೊಂದಿಗೆ ವತಿ೯ಸುತ್ತಿದ್ದೇವೋ ಆ ರೀತಿ ವತಿ೯ಸದೇ ಇರುವಾಗ ಅವರು ನಮಗೆ ಸ್ನೇಹಿತರು ಮತ್ತು ನಮಗೆ ಹತ್ತಿರವಾದವರು ಆಗುವುದನ್ನು ನಾವು ಕಂಡುಕೊಳ್ಳುತ್ತೇವೆ.

  ದೇವರ ವಾಕ್ಯದಲ್ಲಿರುವ ಅನೇಕ ವಾಗ್ದಾನಗಳನ್ನು ಮತ್ತು ಸತ್ಯಗಳನ್ನು ನಮ್ಮ ಮಕ್ಕಳಿಗೆ ರುಜುವಾತಪಡಿಸಲು ನಮಗೆ ಅನೇಕ ಸಂದಭ೯ಗಳು ಸಿಗುತ್ತವೆ. ದೇವರಿಗೆ ನಮ್ಮ ಮಕ್ಕಳನ್ನು ದಿನೇ ದಿನೇ ಒಪ್ಪಿಸಿ ಆತನ ಮೇಲೆ ಆತುಕೊಂಡು ಜೀವಿಸುವಾಗ ದೇವರ ದೈವಿಕತೆ ಮತ್ತು ನಮ್ಮ ಕುರಿತಾದ ಆಸಕ್ತಿ ಅನುದಿನದ ಜೀವವುಳ್ಳ ಸತ್ಯವಾಗಿರುತ್ತದೆ. ಮಕ್ಕಳನ್ನು ಬೆಳೆಸುವುದು ನಮ್ಮ ಆತ್ಮೀಕ ಜೀವಿತದ ಪಕ್ವಕ್ಕೆ ಸಾಧನವು ಸಹ. ಇದು ಕಡೆಗೆ ನಮ್ಮ ಮಕ್ಕಳ ಆತ್ತೀಕ ಜೀವಿತವನ್ನು ಸಹ ಪ್ರಭಾವಿಸುತ್ತದೆ. ನಾವು ಪ್ರತಿಯೊಬ್ಬರು ನಂಬಿಗಸ್ತರಾಗಿರಲು ದೇವರು ನಮಗೆ ಸಹಾಯಿಸಲಿ.

  ಮಕ್ಕಳು ತಿರಸ್ಕರಿಸಲ್ಪಟ್ಟು ಜೀವಿಸುವಾಗ ಅವರು ಇತರರನ್ನು ಹೀನೈಸುವುದನ್ನು ಕಲಿಯುತ್ತಾರೆ. ಮಕ್ಕಳು ಹಗೆತನದಲ್ಲಿ ಜೀವಿಸಿದರೆ ಅವರು ಜಗಳವಾಡುವುದನ್ನು ಕಲಿಯುತ್ತಾರೆ."ಮಕ್ಕಳು ಹೀನೈಸಲ್ಪಟ್ಟು ಜೀವಿಸಿದರೆ ಅವರು ನಾಚಿಕೊಳ್ಳುವುದನ್ನು ಕಲಿಯುತ್ತಾರೆ. ಮಕ್ಕಳು ನಾಚಿಕೆಗೆಡಿತನದಲ್ಲಿ ಜೀವಿಸಿದರೆ ಅವರು ಅಪರಾಧ ಮನಸಾಕ್ಷಿಯುಳ್ಳವರಾಗಿರುವುದನ್ನು ಕಲಿಯುತ್ತಾರೆ. ಮಕ್ಕಳು ಸಹಿಸಿಕೊಳ್ಳುವ ಜೀವಿತ ಜೀವಿಸಿದರೆ ಅವರು ತಾಳ್ಮೆಯನ್ನು ಕಲಿಯುತ್ತಾರೆ. ಮಕ್ಕಳು ಉತ್ತೇಜನದಲ್ಲಿ ಜೀವಿಸಿದರೆ ಅವರು ದೃಢತೆಯನ್ನು ಕಲಿಯುತ್ತಾರೆ. ಮಕ್ಕಳು ಸುರಕ್ಷತೆಯಲ್ಲಿ ಜೀವಿಸಿದರೆ ಅವರು ನಂಬಿಕೆಯನ್ನು ಕಲಿಯುತ್ತಾರೆ. ಮಕ್ಕಳು ಸೊಗಸಾಗಿ ಜೀವಿಸಿದರೆ ಅವರು ನ್ಯಾಯವನ್ನು ಕಲಿಯುತ್ತಾರೆ. ಮಕ್ಕಳು ಹೊಗಳಿಕೆಯಲ್ಲಿ ಜೀವಿಸಿದರೆ ಅವರು ಮೆಚ್ಚುಗೆಯನ್ನು ಕಲಿಯುತ್ತಾರೆ. ಮಕ್ಕಳು ಮೆಚ್ಚಿಗೆಯಲ್ಲಿ ಜೀವಿಸಿದರೆ ತಮ್ಮನ್ನು ತಾವೇ ಅಂಗೀಕರಿಸಿಕೊಳ್ಳುತ್ತಾರೆ.ಮಕ್ಕಳು ಸ್ನೇಹತ್ವದಲ್ಲಿ ಬೆಳೆದರೆ ಅವರು ಪ್ರೀತಿಸುವುದನ್ನು ಕಲಿಯುತ್ತಾರೆ."

  (ಬರಹಗಾರರು ತಿಳಿಯದು.)

  ಅಧ್ಯಾಯ 9
  ನನ್ನೊಂದಿಗೆ ತಾಳ್ಮೆಯಿಂದಿರಿ

  "ನನ್ನೊಂದಿಗೆ ತಾಳ್ಮೆಯಿಂದಿರಿ" ಎಂದು ಸಹ ಸೇವಕನು ತನ್ನ ಸಹ ಸೇವಕನೊಂದಿಗೆ ಕರುಣೆಗಾಗಿ ಬೇಡಿಕೊಂಡನು (ಮತ್ತಾ. 18:29).

  ಮಾತಿಲ್ಲದ ಕೂಗು ಗೃಹಣಿಯರು ಮತ್ತು ತಾಯಂದಿರು ಆದ ನಮಗೆ ಅನುದಿನವು ಅನೇಕರಿಂದ ಬರುವಂತ ಕೂಗು. ಆದರೆ ಈ ಕೂಗನ್ನು ನಾವು ಕೇಳಿಸಿಕೊಳ್ಳಬೇಕಾದರೆ ನಮ್ಮ ಆತ್ಮಗಳಲ್ಲಿ ನಾವು ಸೂಕ್ಷ್ಮವಾಗಿರಬೇಕು. ಯಾಕಂದರೆ ಅದು ಮಾತಿಲ್ಲದ ಕೂಗು.

  ಈ ಮಾತಿಲ್ಲದ ಕೂಗು ಒಂದು ವೇಳೆ ನಾವು ಮಕ್ಕಳಿಗೆ ಕೆಲವು ವಿಷಯಗಳನ್ನು ಮೇಲಿಂದ ಮೇಲೆ ನಾವು ಕಲಿಸಿಕೊಡಲು ಪ್ರಯತ್ನಿಸುವಾಗ ಅವರು ಕಲಿಯುವದರಲ್ಲಿ ನಿಧಾನವಾಗಿರುವಾಗ ಮತ್ತು ನಾವು ತೀವ್ರವಾಗಿ ತಾಳ್ಮೆ ತಪ್ಪಲು ಶೋಧಿಸಲ್ಪಡುವಾಗ ಕೇಳಬಹುದು. ಒಂದು ವೇಳೆ ನಾನು ನನಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇನೆ, "ನನ್ನೋಂದಿಗೆ ತಾಳ್ಮೆಯಿಂದರಿ" ಎಂಬ ಮಾತಿಲ್ಲದ ಕರೆಯನ್ನು ಕೇಳಿಸಿಕೊಳ್ಳುವುದಾದರೆ ಅವರೊಂದಗೆ ನಾವು ರೇಗಿಸಲ್ಪಡುವ ಶೋಧನೆಯ ಮೇಲೆ ಜಯಗಳಿಸಲು ನಮಗೆ ಸುಲಭವಾಗುತ್ತದೆ.

  ನಮ್ಮ ಮನೆಯ ಕೆಲಸದಲ್ಲಿ ಕೆಲಸ ಮಾಡುವ ಕೆಲಸದವರು ನಾಜೂಕಿಲ್ಲದ ಮತ್ತು ನಾವು ನೆನಸದಂತೆ ಶುಚಿ ಇಲ್ಲದವಳಾಗಿರುವಾಗ ಅವಳ ಜೊತೆ ಕಠಿಣವಾಗಿರಲು ಶೋಧನೆಯಾಗುತ್ತದೆ.ಆದರೆ ಅವಳ ಮಾತಿಲ್ಲದ ಕೂಗು "ನನ್ನೋಂದಿಗೆ ತಾಳ್ಮೆಯಿಂದಿರಿ. ನನಗೆ ಮತ್ತೊಂದು ಅವಕಾಶ ಕೊಡಿ. ನಾನು ಸುಧಾರಿಸಲ್ಪಡುತ್ತೇನೆ". ಮತ್ತು ನಾವು ಸಾತ್ವಿಕರಾಗಿರಲು ನಮಗೊಂದು ಸಂದಭ೯ ಒದಗಿಸಲ್ಪಡುತ್ತದೆ.

  ಅಥವಾ ನಮ್ಮ ವಯಸ್ಸಾದ ತಂದೆ ತಾಯಂದಿರಬಹುದು. ಈಗ ವಯಸ್ಸಾಗಿ ದೃಢರಿಲ್ಲದೆ ನಮ್ಮ ಮೇಲೆ ಆತುಕೊಂಡಿದ್ದಾರೆ. ಅವರ ಕುಗ್ಗಿದ ಮಾತಿಲ್ಲದ ಕೂಗು "ನನ್ನೊಂದಿಗೆ ತಾಳ್ಮೆಯಿಂದಿರಿ ನಿಮಗೆ ತೊಂದರೆ ಕೊಡಲು ಇಷ್ಟವಿಲ್ಲ ಆದರೆ ಈಗ ನನಗೆ ನಿಮ್ಮ ಸಹಾಯ ಬೇಕು". ಒಂದು ವೇಳೆ ಅವರ ಅನ್ನಿಸಿಕೆಗಳಿಗೆ ನಾವು ಸೂಕ್ಷ್ಮವಾಗಿದ್ದರೆ ಅವರ ಕೂಗನ್ನು ಕೇಳಿಸಿಕೊಂಡು ಅವರ ಗೌರವವನ್ನು ಅಪಹರಿಸದೆ ಮತ್ತು ಅವರು ನಮ್ಮ ಮೇಲೆ ಆತುಕೊಂಡಿರುವುದರ ಬಗ್ಗೆ ಬೇಸರಮಾಡಿಕೊಳ್ಳದೆ ಅವರಿಗೆ ಸಹಾಯಿಸುತ್ತೇವೆ.

  ನಮ್ಮ ಅನ್ಯೋನ್ಯತೆಯಲ್ಲಿರುವ ಸಹ-ಸಹೋದರಿಯ ನಡುವಳಿಕೆಯು ಸಹ ನಮಗೆ ಒಂದು ಪರೀಕ್ಷೆ. ಅವರ ಮಾತಿಲ್ಲದ ಕರೆಯು ಸಹ "ನನ್ನೊಂದಿಗೆ ತಾಳ್ಮೆಯಿಂದಿರಿ ನನಗೆ ಇನ್ನೂ ಹೆಚ್ಚಾದ ಜ್ಞಾನದ ಕೊರತೆ ಇದೆ". ಆಗ ನಮ್ಮ ಹಾಗೆ ಅವರು ಪರಿಪೂಣ೯ತೆಯ ಕಡೆಗೆ ಸಾಗಲು ಹೋರಾಡುತ್ತಿದ್ದಾರೆಂಬುದನ್ನು ನಾವು ಗ್ರಹಿಸುತ್ತೇವೆ.

  ಇಂತಹ ಸಂದಭ೯ಗಳಲ್ಲಿ ನಾವೆಲ್ಲರೂ ನಮ್ಮ ಮಾನವ ಸ್ವಭಾವಗಳಲ್ಲಿ ಆ ಕರುಣೆಯಿಲ್ಲದ ಆಳಿನಂತೆ ಪ್ರವತಿ೯ಸುತ್ತೇವೆ. ಈ ಸಂದಭ೯ಗಳಲ್ಲಿ ನಾವು ದೇವರಿಂದ ಎಷ್ಟು ಕ್ಷಮಿಸಲ್ಪಟ್ಟಿದ್ದೇವೆ ಮತ್ತು ನಮ್ಮ ತಪ್ಪುಗಳಲ್ಲಿ ಇತರರು ಎಷ್ಟು ಸಹಿಸಿಕೊಂಡಿದ್ದಾರೆಂದು ಜ್ಞಾಪಿಸಿಕೊಳ್ಳುವುದು ಅವಶ್ಯ.

  ಆದ್ದರಿಂದ ತಾಳ್ಮೆಯಿಂದಿರಲು ಕರೆಯುವ ಯೌವನದ ಮತ್ತು ವಯಸ್ಸಾದ ನಮ್ಮ ಸಹ ಆಳುಗಳ ಕರೆಯನ್ನು ಕೇಳಿಸಿಕೊಳ್ಳಲು ನಮ್ಮ ಆತ್ಮಿಕ ಕಿವಿಗಳು ಎಲ್ಲಾ ಸಂದಭ೯ಗಳಲ್ಲಿ ಚುರುಕಾಗಿರಬೇಕು. ಯಾಕೋಬ 1:4- "ಆ ತಾಳ್ಮೆಯು ಸಿದ್ಧಿಗೆ ಬರಲಿ. ಆಗ ನೀವು ಶಿಕ್ಷಿತರೂ ಸವ೯ಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ".

  ಅಧ್ಯಾಯ 10
  ಆತ್ಮನಿಂದ ತುಂಬಿಸಲ್ಪಟ್ಟ ಸಹಾಯಕಳು

  ಪವಿತ್ರಾತ್ಮನು ಅವಶ್ಯವಾದ ಎಲ್ಲಾ ಸಮಯಗಳಲ್ಲಿ ನಮ್ಮ "ಸಹಾಯಕನು". (ಯೋಹಾನ 14:16) ಆತ್ಮನಿಂದ ತುಂಬಿಸಲ್ಪಟ್ಟ ಹೆಂಡತಿಯೂ ಸ್ವಾಭಾವಿಕವಾಗಿ ಈ ಗುಣಗಳಿಂದ ತುಂಬಿದ್ದು ತನ್ನ ಗಂಡನಿಗೆ ಅವಶ್ಯಕತೆಯಲ್ಲಿ ಸಹಾಯಕಳಾಗಿರುತ್ತಾಳೆ. ದೇವರು ಹವ್ವಳನ್ನು ಆದಾಮನಿಗೆ ಆ ಸಹಾಯಕನಂತೆ ಇರಲು ಸೃಷ್ಟಿಸಿದನು.

  ಒಬ್ಬ ಒಳ್ಳೆ ಸಹಾಯಕಳು ತನ್ನ ಗಂಡನ ಅಸಹಾಯಕತೆಯನ್ನು ಕೂಡಲೇ ತಿಳಿದು ಅಷ್ಟೇ ವೇಗದಲ್ಲಿ ಓಡಿ ಆತನ ಅವಶ್ಯಕತೆಯನ್ನು ಸಂಧಿಸುತ್ತಾಳೆ. ನಿಮ್ಮ ಗಂಡನು ಬಲಶಾಲಿಯಾಗಿದ್ದರೂ ಅನೇಕ ಜೀವನದ ಹೋರಾಟದ ಸಂದಭ೯ಗಳಲ್ಲಿ ಪಕ್ಕದಲ್ಲಿದ್ದು ಉತ್ತೇಜನಪಡಿಸುವ ಅವಶ್ಯಕತೆ ಇರುತ್ತದೆ.

  ತಮ್ಮ ಗಂಡಂದಿಯರಿಗೆ ಅಂಥಹ ಹೆಂಡತಿಯಾಗಿರುವುದು ಆಶೀವಾ೯ದಕರ. ದುರದೃಷ್ಟದಿಂದ ಅನೇಕ ಹೆಂಡತಿಯರು ತಮ್ಮ ಸ್ವಂತ ದುಃಖ ಮತ್ತು ತೊಂದರೆಗಳ ಬಗ್ಗೆಯೇ ಚಿಂತಿಸಿ ಯಾವಾಗಲೂ ತಮ್ಮ ಗಂಡಂದಿರಿಂದ ಉತ್ತೇಜಿಸಲ್ಪಟ್ಟು ಬಲಹೊಂದುವದು ಮತ್ತು ಅತೀ ಪ್ರೀತಿಸಲ್ಪಡುವದನ್ನೇ ಎದುರು ನೋಡುತ್ತಿರುತ್ತಾರೆ. ಹೀಗೆ ಅವರು ತಮ್ಮಿಂದ ಬಿಡುಗಡೆ ಹೊಂದದೆ ತಮ್ಮ ಗಂಡಂದಿರಿಗೆ ಯಾವ ಸಾಹಾಯವು ಇಲ್ಲದವರಾಗಿರುತ್ತಾರೆ.

  ಇನ್ನೂ ಕೆಲವು ಸಂಗತಿಗಳಲ್ಲಿ ಹೆಂಡತಿಯರು ಅವಶ್ಯವಿಲ್ಲದ ಹಾಗು ತಡೆಯಬಹುದಾದ ಅನೇಕ ಜವಾಬ್ದಾರಿಯನ್ನು ಹೊತ್ತುಕೊಂಡು, ಕಡೆಗೆ ಅದು ಭಾರವಾಗಿ ಹೊತ್ತುಕೊಳ್ಳದ ಹೊರೆಯಾಗಿರುತ್ತದೆ.

  ನಾವು ನಮ್ಮ ಅವಶ್ಯಕತೆಯನ್ನು ಮತ್ತು ಮಿತಿಯನ್ನು ಗ್ರಹಿಸಿದವರಾಗಿ ನಮ್ಮ ಕೈಯಲ್ಲಿ ಆಗುವಂತದನ್ನು ಮಾತ್ರ ತೆಗೆದುಕೊಳ್ಳಬೇಕು.

  ನಮ್ಮ ಗಂಡಂದಿರಿಗೆ ಸಹಾಯ ಮಾಡುವುದು ಮಾತ್ರ ಸಾಲದು ತಾಯಂದಿರಾಗಿ ದೇವರು ನಮ್ಮನ್ನು ಮಕ್ಕಳಿಗೆ ಸಹ ಸಹಾಯಿಕರಾಗಿರಬೇಕೆಂದು ಕರೆದನು.

  ನಮ್ಮ ಮಕ್ಕಳು ಕೆಲವು ಕ್ಷೇತ್ರಗಳಲ್ಲಿ ತಪ್ಪಿದಾಗ ಮತ್ತು ಧೈಯ೯ಗೆಟ್ಟಾಗ ಅಥವಾ ಅವರು ಪಾಪಮಾಡಿ ತಮ್ಮ ಗುಣಗಳಿಂದ ನಮ್ಮನ್ನು ಆಶಾಭಂಗಪಡಿಸುವಾಗ ಅಥವಾ ನಾವು ನೆನಸಿದ ಮಟ್ಟಕ್ಕೆ ಬಾರದಿರುವಾಗ ನಮ್ಮ ಮನೊಭಾವನೆ ಏನು?

  ಹೆಣ್ಣು ಮಕ್ಕಳನ್ನು ಚೀನಾದಲ್ಲಿ ನದಿಗಳಲ್ಲೂ ಭಾರತದಲ್ಲಿ ಕಸದ ತೊಟ್ಟಿಗಳಲ್ಲೂ ಮತ್ತು ಗುಡಿಗಳಲ್ಲೂ ಬಿಸಾಡುತ್ತಾರೆ. ಯಾಕಂದರೆ ಗಂಡು ಮಕ್ಕಳು ಬೇಕಾಗಿರುವಲ್ಲಿ ಅವರ ತಾಯಂದಿರಿಗೆ ಈ ಹೆಣ್ಣು ಮಕ್ಕಳು ಆಶಾಭಂಗವಾಗಿರುತ್ತಾರೆ. ನಮ್ಮ ಮಕ್ಕಳು ಯಾವುದೇ ರೀತಿಯಲ್ಲಿ ತಪ್ಪಿಹೋಗುವಾಗ ಆ ತಾಯಂದಿರಂತೆ ನಾವು ಇದ್ದೇವೋ?.

  ಒಂದು ಮಗುವು ತಪ್ಪಿಹೋದಾಗ ಅಥವಾ ಹೀನೈಸಲ್ಪಟ್ಟಾಗ ಹೆಚ್ಟು ಪ್ರೀತಿಯ ಅವಶ್ಯಕತೆಯಿರುವಾಗ ಕರುಣೆ ಅಥ೯ಮಾಡಿಕೊಳ್ಳುವಿಕೆ ಮತ್ತು ಪೋಷಣೆ ಹೆಚ್ಚು ಸಮಯ ಅವರೊಂದಿಗೆ ಕಳೆಯಬೇಕಾದಾಗ ಮತ್ತು ಹೆಚ್ಚು ಪ್ರಾಥ೯ನೆ ಬೇಕಾದಾಗ ನದಿಯಲ್ಲಿ ಬಿಸಾಡಬಾರದು.

  ದೇವರು ನಿಪುಣನಾದ ಕುಂಬಾರನು ಪ್ರಪಂಚದಲ್ಲಿ ಬಹಳವಾಗಿ ಮುರಿಯಲ್ಪಟ್ಟ ಪಾತ್ರೆಯನ್ನು ಆತನು ಉದ್ದೇಶಕನುಗುಣವಾಗಿ ಪುನಃ ಉಪಯುಕ್ತ ಪಾತ್ರೆಯನ್ನಾಗಿ ಮಾಡಲು ಸಾಧ್ಯವೆಂದು ನಂಬಬೇಕು.

  ನಮ್ಮಲ್ಲಿ ಬಹಳ ಹಟಮಾರಿಯಾದ ಮಗುವನ್ನು ಬದಲಾಯಿಸಿ ಅವನಲ್ಲಿರುವ ಕಠಿಣತೆಯನ್ನು ತೆಗೆದು ತನ್ನನ್ನು ಮಹಿಮೇಪಡಿಸುವ ಪಾತ್ರೆಯನ್ನಾಗಿ ಮಾಡಲು ಆತನು ಶಕ್ತನು.

  ಪವಿತ್ರಾತ್ಮನು, ಸಹಾಯಕನು ಈ ಪ್ರಪಂಚದಲ್ಲಿ ತಪ್ಪಿದ ನಮ್ಮ ಮಕ್ಕಳ ಮೂಲಕ ದೈವಿಕ ವಿಜಯವನ್ನು ತರಲು ಬಂದನು. ಮತ್ತು ತಾಯಂದಿರಾದ ನಾವು ನಮ್ಮ ಮಕ್ಕಳು ಇದನ್ನು ನಂಬುವಂತೆ ಉತ್ತೇಜನ ಪಡಿಸಲು ಕರೆಯಲ್ಪಟ್ಟಿದ್ದೇವೆ.

  ಅಥವಾ ಇನ್ನೋಂದು ಉದಾಹರಣೆ ತೆಗೆದುಕೊಳ್ಳೋಣ. ತಂದೆಯು ಒಂದು ಮಗುವವನ್ನು ನಿಷ್ಠೆಯಿಂದ ಶಿಕ್ಷಣಕ್ಕೊಳಪಡಿಸುವಾಗ ಅಂತಹ ಸಂದಭ೯ಗಳಲ್ಲಿ ಸಮಾಧಾನ ಪಡಿಸುವುದರ ಮೂಲಕ ಆ ಮಗುವನ್ನು ನಾವು ನಾಶಮಾಡುತ್ತೇವೆ. ಮತ್ತು ತಂದೆಯು ಅವನ ಕಡೆ ವಿನಾಕಾರಣ ಕಠಿಣವಾಗಿದ್ದಾರೆಂಬ ಭಾವನೆಯನ್ನು ಕೊಡುತ್ತೇವೆ.

  ಕೆಲವು ತಾಯಂದಿರು, ರೆಬೇಕಳು ಇಸಾಕನನ್ನು ವಂಚಿಸಲು ಯಾಕೋಬನನ್ನು ಉತ್ತೇಜನ ಪಡಿಸಿದಂತೆ ತಮ್ಮ ತಂದೆಯರನ್ನು ವಂಚಿಸಲು ಮಕ್ಕಳನ್ನು ಉತ್ತೇಜನ ಪಡಿಸುವ ಮಟ್ಟಿಗೆ ಮುಂದುವರೆದಿದ್ದಾರೆ. ಯಾಕೋಬನು ಸಾಧಾರಣವಾಗಿ ವಂಚಿಸುವ ಹಾಗೆ ಮಾಡಿದವರು ಯಾರು? ತನ್ನ ಗಂಡನೊಂದಿಗೆ ಒಂದಾಗಿಲ್ಲದ ಅಜ್ಞಾನದ ತಾಯಿ. ಈ ಸಂಗತಿಗಳು ನಮ್ಮ ಶಿಕ್ಷಣಕ್ಕಾಗಿ ಬರೆಯಲ್ಪಟ್ಟಿದೆ.

  ಸ್ತ್ರೀಯರಾದ ನಮ್ಮಲ್ಲಿ ಉದ್ರೇಕತೆಯ ದೊಡ್ಡ ಉಗ್ರಾಣವು ಇದೆ. ಅದನ್ನು ನಮ್ಮ ಗಂಡಂದಿರು ನಮಗೆ ಅದು ಮಾಡಲಿಲ್ಲ ಇದು ಮಾಡಲಿಲ್ಲ ಎಂಬುದಾಗಿ ಅವರನ್ನು ಕಾಡುವುದಕ್ಕಿಂತಲೂ ನಮ್ಮ ಮಕ್ಕಳ ಭಾರವನ್ನು ಮತ್ತು ಕಷ್ಟಗಳನ್ನು ಹೊತ್ತುಕೊಳ್ಳಲು ಪ್ರಯೋಜನಕರವಾಗಿ ಯಾಕೆ ಉಪಯೋಗಿಸಬಾರದು. ಮಕ್ಕಳಿಗೂ ಸಹ ಕಷ್ಟಗಳಿರುತ್ತವೆ. ಮತ್ತು

  ಅವರು ಸಹ ಅವುಗಳನ್ನು ಹೊರಲು ಇನ್ನು ಚಿಕ್ಕವರು ಅವರಿಗೆ ಸಹಾಯಿಸುವಂತವರು ಅವಶ್ಯ.

  ನಮ್ಮ ಮಕ್ಕಳನ್ನು ನಮ್ಮ ಮನೆಯನ್ನು ಮತ್ತು ನಮ್ಮ ಕುಟುಂಬಗಳನ್ನು ನಾಶಮಾಡಲು ಮನಸ್ಸು ಮಾಡಿರುವ ವೈರಿಯ ಮೇಲೆ ನಾವು ಯುದ್ಧದಲ್ಲಿದ್ದೇವೆ. ನಮ್ಮ ನಿಜವಾದ ವೈರಿಯ ಬಗ್ಗೆ ದೃಷ್ಟಿಯನ್ನು ಕಳೆದುಕೊಳ್ಳದೆ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೇವರ ರಾಜ್ಯದಲ್ಲಿ ಭದ್ರಪಡುವವರೆಗೂ ಈ ಯುದ್ಧವನ್ನು ನಾವು ಬಿಟ್ಟುಕೊಡಬಾರದು. ಪವಿತ್ರಾತ್ಮನು ನಮಗಾಗಿ ವಿಜ್ಞಾಪಿಸಿಕೊಳ್ಳುವ ಸಹಾಯಕನ ಹಾಗೆ ನಾವು ನಮ್ಮ ಗಂಡಂದಿರಿಗೆ ಮತ್ತು ನಮ್ಮ ಮಕ್ಕಳಿಗೋಸ್ಕರ ಪ್ರಾಥಿ೯ಸಬೇಕು.

  ಈ ಹೋರಾಟವನ್ನು ಹಗ್ಗ ಎಳೆಯುವ ಸ್ಪಧೆ೯ಗೆ ಹೋಲಿಸಿಕೊಳ್ಳಬಹುದು. ಇದರಲ್ಲಿ ಕತ್ತಲೆಯ ಶಕ್ತಿಗಳು ನಮ್ಮ ಗಂಡಂದಿರ ಮತ್ತು ಮಕ್ಕಳ ವಿರುದ್ಧ ಎಳೆಯುತ್ತಿರುತ್ತವೆ. ಯಾವ ಕಡೆಯ ಹಗ್ಗವನ್ನು ನಾವು ಎಳೆಯಲು ಹೋಗುತ್ತೇವೆ? ನಮ್ಮ ಗಂಡಂದಿರ ಹಾಗೂ ಮಕ್ಕಳ ಕಡೆಗೋ ಅವರಿಗಾಗಿ ಪ್ರಾಥಿ೯ಸುವುದು ಮತ್ತು ಅವರನ್ನು ಉತ್ತೇಜನಪಡಿಸುವುದು ಅಥವಾ ಅವರ ವಿರುದ್ದವೋ (ಅವರನ್ನು ಬೈಯುವುದು ತೊಂದರೆ ಕೊಡುವುದು.)

  ಈ ಯುದ್ಧದಲ್ಲಿ ನಾವು ಎಂದಿಗೂ ನಿರಾಶರಾಗಬಾರದು. ಯಾಕಂದರೆ ತಮ್ಮನ್ನು ಬಲಪಡಿಸುವ ದೇವರು ಎಲ್ಲಾ ವಾಗ್ದಾನಗಳನ್ನು ಕೈಕೊಳ್ಳಲು ಮತ್ತು ಸಾಕ್ಷಿಯ ಮೋಡಗಳು ನಮ್ಮನ್ನು ಸಂತೋಷಪಡಿಸಲು ಪವಿತ್ರಾತ್ಮನು ಎಲ್ಲಾ ಸಮಯದಲ್ಲಿ ನಮ್ಮಲ್ಲಿದ್ದಾನೆ. ನಾವು ಪ್ರತಿಯೋಬ್ಬರು ದೇವರು ಬಯಸುವಂತಹ ಸಹಾಯಕರಾಗಲು ಸಾಧ್ಯ.

  ಈಗಿನ ನಮ್ಮ ಸ್ವಾಥ೯- ತ್ಯಾಗ ಮತ್ತು ಸಂಕಟಗಳು ಆ ಕಡೆಯ ದಿನಗಳಲ್ಲಿ ಏನೂ ಇಲ್ಲದಂತಾಗುತ್ತದೆ. ನಮ್ಮ ಗಂಡಂದಿರು ಹಾಗೂ ನಮ್ಮ ಮಕ್ಕಳು ಎದ್ದು ನಿಂತು ನಮ್ಮನ್ನು ಆಶೀವ೯ದಿಸಲ್ಪಟ್ಟವರು ಎಂದು ಕರೆಯುವರು. ಯಾಕಂದರೆ ನಾವು ನಂಬಿಗಸ್ತ ಸಹಾಯಕರಾಗಿ ನಮ್ಮ ಕೆಲಸವನ್ನು ಪೂರೈಸಿದ್ದೇವೆ.

  ಅಧ್ಯಾಯ 11
  ಯೇಸುವಿನ ಪಾದದ ಬಳಿ ಕುಳಿತುಕೊಳ್ಳುವುದು.

  "ಅವರು ಸಂಚಾರ ಮಾಡುತ್ತಿರುವಾಗ ಆತನು ಒಂದಾನೊಂದು ಹಳ್ಳಿಗೆ ಬಂದನು. ಅಲ್ಲಿ ಮಾಥ೯ಳೆಂಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು. ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಸ್ವಾಮಿಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. ಆದರೆ ಮಾಥ೯ಳು ಬಹಳ ಸೇವೆಯ ವಿಷಯವಾಗಿ ಬೇಸತ್ತು ಆತನ ಬಳಿಗೆ ಬಂದು - ಸ್ವಾಮಿ ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ.ಇದಕ್ಕೆ ನಿನಗೆ ಚಿಂತೆಯಿಲ್ಲವೋ ನನಗೆ ನೆರವಾಗಬೇಕೆಂದು ಆಕೆಗೆ ಹೇಳು ಎಂದಳು. ಸ್ವಾಮಿಯು ಆಕೆಗೆ - ಮಾಥ೯ಳೇ ಮಾಥ೯ಳೇ ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು ಅಥವಾ ಒಂದೇ,ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ. ಎಂದು ಉತ್ತರಕೊಟ್ಟನು".ಲೂಕ 10 : 38-42.

  ಮಾಥ೯ಳು ಮನೆಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು. ತಾನು ಪ್ರೀತಿಸಿದ ಕತ೯ನಿಗೆ ಹಾಗು ಆತನ ಶಿಷ್ಯರಿಗೆ ಒಳ್ಳೆಯ ಆಹಾರ ಮಾಡುವುದಕ್ಕಿಂತ ಸಂತೋಷಕರವಾದದ್ದು ಕತ೯ನನ್ನು ಪ್ರೀತಿಸುವ ಒಬ್ಬ ಸಹೋದರಿ ಮರಿಯಳು ಮಾಡುವುದನ್ನು ನೋಡುವಾಗಿ ತಾನು ಆರಿಸಿಕೊಂಡಿದ್ದ ಸಿಹಿಕರ ಕಾಯ೯ವು ಸಹ ಭಾರವಾಗಿಯೂ ಹಾಗೂ ಸಹಿಸಲಾಗದ ದೊಡ್ಡ ಸಂಗತಿಯೂ ಆಯಿತು. ಮರಿಯಳು ಆಕೆಗೆ ಸಹಾಯ ಮಾಡದಿದ್ದುದ್ದು ಸ್ವಾಥ೯ವಾಗಿ ಕಂಡು ಬಂದದ್ದು ಮಾತ್ರವಲ್ಲ ಅವಳು ಕತ೯ನ ಸಾನಿಧ್ಯದಲ್ಲಿ ಬಹಳ ಆನಂದಿಂದಿರುವುದು ಕಂಡು ಬಂದಿತು. ಮತ್ತು ಕತ೯ನು ಸಹ ಆಕೆಯಲ್ಲಿ ಆನಂದಿಸಿದನು. ಮಾಥ೯ಳ ಮನೋಭಾವನೆಯಲ್ಲಿ ಕಾಯಿನನಿಗೆ ಹೇಬೇಲನ ಬಗ್ಗೆ ಇದ್ದ ಛಾಯೆಯೇ ಇತ್ತು. ಒಬ್ಬ ಸಹೋದರಿಯು ತನ್ನಲ್ಲಿ ತಾನೇ ಮನೆಯ ಭಾರಗಳಿಂದ ತುಂಬಿಹೋಗಿರುವಾಗ ಕತ೯ನಲ್ಲಿ ಆನಂದಿಸುವುದು ಹಾಗೂ ಇವುಗಳಿಂದ ಬಿಡುಗಡೆ ಹೊಂದಿರುವ ಇತರರನ್ನು ಕಾಣುವುದು ಅವಳಿಗೆ ಅಷ್ಟೇನು ಸುಲಭವಲ್ಲ.

  ನಾವು ಮಾಥ೯ಳ ಹಾಗೆ ಎದೆಗುಂದುವವರಾಗಿದ್ದೇವೋ? ಸಹೋದರಿಯರಾದ ನಾವು ಇರುವ ಹಾಗೆ ಮಾಥ೯ಳ ಸಹ ಬಲಹೀನ ಪಾತ್ರೆಯಾಗಿದ್ದಳು ಆಕೆಯು ದಣಿದಿದ್ದಳು ಸಹ ಇವು ಯಾವುದೂ ಸಹ ಆಕೆಯಲ್ಲಿದ್ದ ಗುಣುಗುಟ್ಟುವ ಆತ್ಮದಿಂದ ಇತರರನ್ನು ತೀಪು೯ ಮಾಡುವುದರಿಂದ, ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಹೊಟ್ಟೆಕಿಚ್ಚು ಮತ್ತು

  ಸ್ವಾನುಕಂಪದಿಂದ ನೀತಿಕರಿಸಲು ಸಾಧ್ಯವಿಲ್ಲ.

  ನಾವು ದಣಿದಿರುವಾಗ - "ಎಲೈ ಕಷ್ಟಪಡುವವರೇ ಹೊರೆ ಹೊತ್ತುವವರೇ ನೀವೆಲ್ಲರು ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. ನನ್ನ ನೊಗವು ಮೃದುವಾದದ್ದು ನನ್ನ ಹೊರೆಯು ಹೌರವಾದದ್ದು. ನಾನು ಸಾತ್ವಿಕನು ಮತ್ತು ದೀನಮನಸುಳ್ಳವನಾಗಿರುವುದರಿಂದ ನನ್ನಿಂದ ಕಲಿತುಕೊಳ್ಳಿರಿ.ನಾನು ನಿಮಗೆ ಹೌರವಾದ ಹೊರೆಯನ್ನು ಮಾತ್ರ ಕೊಡುತ್ತೇನೆ" (ಮತ್ತಾಯ 11:28-30) ಎಂದು ಕರೆಕೊಡುವಾತನ ಬಳಿಗೆ ಹೋಗಬಹುದು.

  ನಮ್ಮ ಎಲ್ಲಾ ಕೆಲಸಗಳ ಮಧ್ಯ ಆತನು ನಮ್ಮ ಸಮಸ್ಯೆಗಳನ್ನು ಮತ್ತು ಭಾರವನ್ನು ಬಲ್ಲನೆಂದು ಪೂರಾ ಭರವಸೆ ಇಟ್ಟು ದೇವರು ಸಿಂಹಾಸಿನನಾಗಿದ್ದಾನೆ ಎಂದು ಅರಿಕೆ ಮಾಡಿ ನಾವು ಆತನ ಮುಖದ ಮುಂದೆ ಜೀವಿಸಲು ಸಾಧ್ಯ. ಇದು ನಾವು ಹಗುರ ಹೃದಯದಿಂದ ಕೆಲಸ ಮಾಡಲು ಮತ್ತು ಆತ್ಮದಲ್ಲಿ ವಿಶ್ರಾಂತಿಯುಳ್ಳವರಾಗಿರಲು, ಸ್ವತಂತ್ರರು ಬಹು ಸುಲಭವಾಗಿ ಜೀವನ ನಡೆಸುವವರನ್ನು ಮತ್ತು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಲು ಸಾಧ್ಯವುಳ್ಳವರನ್ನು ಧಾರಾಳವಾಗಿ ಪ್ರೀತಿಸಲು ಮತ್ತು ಆಶೀವ೯ದಿಸಲು ಸಾಧ್ಯವಾಗುತ್ತದೆ.

  ಯೇಸು ಮಾಥ೯ಳಿಗೆ ನಿಜವಾಗಲೂ ಒಂದೇ ಒಂದು ಮಾತ್ರ ಬೇಕಾದದ್ದು ಅದನ್ನು ಮರಿಯಳು ಆರಿಸಿಕೊಂಡಿದ್ದಾಳೆ ಎಂದು ಹೇಳಿದನು. ನಾವು ಮಾಥ೯ಳ ಹಾಗೆ ಅಥವಾ ಮರಿಯಳ ಹಾಗೆ ಇರಬೇಕೋ ಎಂಬುದಾಗಿ ಈ ಎರಡರ ಮಧ್ಯ ಆರಿಸಿಕೊಳ್ಳಬೇಕಾಗಿಲ್ಲ ಎಂಬುದು ಸಂತೈಸುವಂತ ಆಲೋಚನೆ. ನಾವು ಇಬ್ಬರ ಹಾಗೂ ಇರಬಹುದು. ಲಾಜರನು ಮರಣದಿಂದ ಎದ್ದ ನಂತರ ಮತ್ತೆ ಅವರ ಮನೆಯಲ್ಲಿ ಕತ೯ನಿಗೆ ಊಟಕ್ಕೆ ಸಿದ್ಧ ಪಡಿಸಿದ್ದರು. ಮತ್ತು "ಮಾಥ೯ಳು ಸೇವೆಮಾಡುತ್ತಿದ್ದಳು". (ಯೋಹಾನ 12:2). ಮರಿಯಳು ಮತ್ತೇ ಕತ೯ನ ಪಾದದ ಬಳಿ ಕುಳಿತಿದ್ದಳು.ಆದರೆ ಈ ಸಾರಿ ಮಾಥ೯ಳು ಗುಣಗುಟ್ಟಲಿಲ್ಲ. ಆಕೆಯು ಸಂತೋಷವಾಗಿದ್ದಳು. ಯಾಕೆಂದರೆ ತನ್ನ ಸೇವೆಯ ಮಧ್ಯದಲ್ಲಿ ಹೇಗೆ ವಿಶ್ರಾಂತಿಯಿಂದಿರಬೇಕೆಂಬುದನ್ನು ಕಲಿತಿದ್ದಳು.

  ಬಹುಶಃ ಆಕೆ ಅಡಿಗೆ ಮನೆಯಲ್ಲಿ ಕೆಲಸಮಾಡುವಾಗ ಕತ೯ನ ಪಾದದ ಬಳಿ ಕುಳಿತುಕೊಳ್ಳಲು ಕಲಿತಿರಬಹುದು. ನಮ್ಮ ಮನೆಗೆ ಕಟ್ಟಲ್ಪಟ್ಟಂತ ನಾವು ಸಹ ಈ ರೀತಿಯ ಅನುಭವಗಳನ್ನು ಹೊಂದಿ ಸಂತೋಷದಿಂದ ಈ ಭೂಸಂಬಂಧವಾದ ಕೆಲಸಗಳನ್ನು ಪೂರೈಸಬಹುದು ನಮ್ಮ ಕುಟುಂಬದವರಿಗೆ ಅವಶ್ಯವಾದ ಕೆಲಸಗಳನ್ನು ಮಾಡುವಾಗಲೂ ಸಹ ನಾವು ಕತ೯ನ ಪಾದದ ಬಳಿ ಕುಳಿತಿರಬಹುದು. ನಮ್ಮ ದಿನದ ಕೆಲಸವಲ್ಲ ನಮ್ಮ ಗುಣುಗುಟ್ಟುವ ಆತ್ಮದಿಂದ ಬರುವ ಅವಿಶ್ರಾಂತಿ ಹಾಗೂ ಹೊಟ್ಟೆಕಿಚ್ಚು ನಮ್ಮನ್ನು ಕತ೯ನ ಪಾದದ ಬಳಿಯಿಂದ ದೂರ ತೆಗೆದುಕೊಂಡು ಹೋಗುತ್ತದೆ. ಇಡೀ ಪ್ರಪಂಚವೇ ಕತ೯ನ ಪಾದ ಪೀಠ ಆದ್ದರಿಂದ ನಾವು ಆತನ ಪಾದದ ಬಳಿಯಲ್ಲಿಯಾದರೂ ಕುಳಿತುಕೊಳ್ಳಬಹುದು.

  "ತಾಯಿಯ ಬಳಿಯಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದಿದ್ದೆ". ಕೀತ೯ 131:2 ಎಂಬುದಾಗಿ ದಾವೀದನ ಸಾಕ್ಷಿ ನುಡಿಯಲು ಸಾಧ್ಯವಾಯಿತು. ಅವಿಶ್ರಾಂತಿ ಇಲ್ಲದೆ ಅಥವಾ ತನ್ನ ತಾಯಿಯ ಗಮನವನ್ನು ಗಳಿಸುವ ಆಶೆಯಾಗಲಿ ಇಲ್ಲದೆ ಪ್ರಪಂಚದ ಯಾವ ಚಿಂತೆಯೂ ಇಲ್ಲದೆ ಈ ಮೊಲೆ ಬಿಡಿಸಿದ ಕೂಸು ಓಡಾಡುತ್ತದೆ. ಕತ೯ನಲ್ಲಿ ನೆಲೆಗೊಂಡಿದ್ದರೆ ನಾವು ಸಹ ಈ ಮಗುವಿನಂತೆ ಇರಲು ಸಾಧ್ಯ ಮತ್ತು ನಮ್ಮ ಮನೆಯ ಕೆಲಸಗಳ ಮಧ್ಯ ಆತನು ನಮ್ಮೊಟ್ಟಿಗೆ ಇರುವುದನ್ನು ಕಂಡುಕೊಳ್ಳುತ್ತೇವೆ.

  ಸಾವಿರ ದಿನಗಳನ್ನು ಬೇರೆ ಕಡೆಗೆ ಕಳೆಯುವುದಕ್ಕಿಂತ ಒಂದು ದಿನವನ್ನು ಆತನ ಮಂದಿರದಲ್ಲಿ ಕಳೆಯುವುದು ಉತ್ತಮ. ನನ್ನ ಮನೆಯು ಆತನ ಪರಿಶುದ್ಧ ಮಂದಿರ. ಒಂದು ವೇಳೆ ಆ ಸ್ಥಳವನ್ನು ಆತನು ನನಗಾಗಿ ಆರಿಸಿದ್ದರೆ ನಾನು ಅರಮನೆಯಲ್ಲಿ ದೇವರ ಚಿತ್ತದ ಹೊರಗಡೆ ಅನುಕೂಲ ಮತ್ತು ಸಂತೋಷವಾಗಿ ವಾಸಿಸುವುದಕ್ಕಿಂತ ದೇವರ ಮಂದಿರದಲ್ಲಿ ಬಾಗಿಲುಕಾಯುವವನಾಗಿರುತ್ತೇನೆ. ಚಟುವಟಿಕೆಯ ತಾಯಿ ಅಥವಾ ಹೆಂಡತಿ ಕತ೯ನು ಕಾಯಿಲೆಯಿಂದಿರುವ ಮಕ್ಕಳೊಂದಿಗೂ ಮತ್ತು ಮನೆಯಲ್ಲಿ ಬಹಳ ಕೆಲಸದ ನಿಮಿತ್ತ ಬಂಧಿಸಲ್ಪಟ್ಟಿದ್ದರೂ ಸಹ "ಕತ೯ನ ಮಹಿಮೆಯನ್ನು ಮತ್ತು ಕೃಪೆಯನ್ನು ಕೊಡುತ್ತಾನೆ. ಆತನ ಮಾಗ೯ಗಳಲ್ಲಿ ನಡೆಯುವ ಸದ್ಬಕ್ತರಿಗೆ ಯಾವ ಶುಭವನ್ನು ದಯಪಾಲಿಸದೇ ಇರುವನೇ?" (ಕೀತ೯ನೆ 84:10,11)

  "ನಾನು ನಿನ್ನೊಂದಿಗೆ ಯಾವಾಗಲೂ ಇರುತ್ತೇನೆ ನಾನು ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದಿಗೂ ತೊರೆಯುವುದಿಲ್ಲ" ಎಂಬುದೇ ನಮಗೆ ಕತ೯ನ ಮಾತುಗಳು. ಈ ಹೊಸ ಒಡಂಬಡಿಕೆಯಲ್ಲಿ ಇರುವ ಸಹೋದರಿಯರಿಗೆ ಕತ೯ನು ತಂದಂಥ ಶುಭ ಸಮಾಚಾರ. ನಾವು ಏನೇ ಮಾಡುತ್ತಿದ್ದರೂ ಆತನು ಯಾವಾಗಲೂ ನಮ್ಮೊಂದಿಗೆ ಇರುತ್ತಾನೆ. ಮತ್ತು ನಮ್ಮ ಮನೆಗಳಲ್ಲೇ ನಾವು ಆತನನ್ನು ಸಂದಧಿಸಬಹುದು. (ಕೀತ೯ 73:25) ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ. ಮೇಡಂ ಗಯಾನ್ ಸಮಥ೯ ರೀತಿಯಲ್ಲಿ ಹೇಳಿದಂತೆ -

  "ಯಾವುದೇ ಸ್ಥಳ ನಾವು ಬಯಸಿದರು ಅಥವಾ ಸ್ಥಳದಿಂದ ದೂರ ಸರಿದರೂ ನಮ್ಮ ಪ್ರಾಣ ಯಾವುದರಲ್ಲಿ ಸಂತೋಷಿಸುವುದಿಲ್ಲ. ಆದರೆ ನನ್ನ ದೇವರು ನನ್ನ ಮಾಗ೯ದಶ೯ಕನಾಗುವಾಗ ಇರುವುದಾದರೂ ಅಥವಾ ಹೋಗುವುದಾದರೂ ನನಗೆ ಸಮನಾದ ಸಂತೋಷವಿರುತ್ತದೆ.

  ನೀನಿಲ್ಲದ ಸ್ಥಳಕ್ಕೆ ನಾನು ಒಯ್ಯಲ್ಪಟ್ಟರೆ ಅದು ಅತೀ ಭಯಂಕರ ಸ್ಥಳ ಆದರೆ ದೇವರು ಎಲ್ಲಾದರಲ್ಲೂ ಕಾಣುವ ಯಾರಿಲ್ಲದ ಪ್ರಾಂತಕ್ಕೆ ಕರೆಯಲ್ಪಟ್ಟರೆ ಅದೇ ನನಗೆ ರಕ್ಷೆ ಸುರಕ್ಷತೆ."

  ಕೀತ೯ನೆ 42:1,2 ರಲ್ಲಿ "ದೇವರೇ ಬಾಯಾರಿದ ಜಿಂಕೆ ನೀರಿನ ತೊರೆಗಳನ್ನು ಹೇಗೊ ಹಾಗೆಯೇ ನನ್ನ ಮನವು ನಿನ್ನನ್ನು ಬಯಸುತ್ತದೆ ನನ್ನ ಮನಸ್ಸು ದೇವರಿಗಾಗಿ ಚೈತನ್ಯ ಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ. ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೊ?" , ಎಂದು ಹಳೆ ಒಡಂಬಡಿಕೆಯ ಭಕ್ತರು ಕೂಗುತ್ತಾ ಹೇಳಿದರು. ಆದರೆ ಈ ದಿನ ಆತನನ್ನು ನಮ್ಮ ಸ್ವಂತ ಮನೆಗಳಲ್ಲಿ ಯಾವಾಗಲೂ ನಮ್ಮ ಪಕ್ಕದಲ್ಲೇ ಕಾಣಬಹುದು. ಎಂಥಹ ಆಶೀವಾ೯ದ!

  ಅಧ್ಯಾಯ 12
  ದೇವರ ಮೃದುವಾದ ಪಿಸು ಮಾತು.

  ಕೀತ೯ನೆ 62:1,2 "ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು ನಾನು ಕದಲಿದರೂ ಬೀಳೆನು."

  ನಾವೆಲ್ಲರೂ ಕೆಲವು ಸಮಯಗಳಲ್ಲಿ ಮನಗುಂದುವಿಕೆಯನ್ನು ಅನುಭವಿಸಲಿಲ್ಲವೇ? ನಾವೆಲ್ಲರೂ ಕೆಲವು ಕಠಿಣ ಸಂದಭ೯ಗಳಲ್ಲಿ ಓಡಿಹೋಗಬೇಕೆಂದು ಅಂದುಕೊಳ್ಳಲಿಲ್ಲವೇ?

  ದೊಡ್ಡ ಪ್ರವಾದಿಯಾದ ಎಲೀಷನಿಗೂ ಸಹ ಒಂದು ಸಾರಿ ಅನ್ನಿಸಿತ್ತು. ಇಸ್ರಾಯೇಲ್ಯರಲ್ಲಿ ಬೇರೆಯವರೆಲ್ಲಾ ಹಿಂಜಾರಿದಾಗ ಈತನು ಮಾತ್ರ ಒಬ್ಬಂಟಿಗನಾಗಿ ದೇವರಿಗಾಗಿ ನಿಂತನು (1ಅರಸು 18). ಆದರೆ ಆ ದೊಡ್ಡ ಜಯದ ನಂತರ ತಾನು ಇರಬೇಕಾದ ಸ್ಥಳದಿಂದ ಓಡಿಹೋದ. ಆತನು 500 ಕಿಲೋಮಿಟರ್ ಗಳವರೆಗೆ ಓಡಿ ಕಡೆಗೆ ಹೋರೆಬ ಬೆಟ್ಟದ ಬಳಿ ಬಂದನು. ಆತನ ಸುತ್ತಲೂ ಭೂಕಂಪ ಬಿರುಗಾಳಿ ಮತ್ತು ಸುತ್ತಲೂ ಬೆಂಕಿಯಿಂದ ಕೂಡಿತ್ತು. (1ಅರಸು 19).

  ಆದರೆ ಈ ಎಲ್ಲಾ ಬಿರುಗಾಳಿಗಿಂತ ಆತನ ಸ್ವಂತ ಹೃದಯದಲ್ಲಿ ಬಹು ದೊಡ್ಡ ಬಿರುಗಾಳಿ ಇತ್ತು.

  ಆದರೆ ಆ ಬೆಟ್ಟದ ಮೇಲೆ ಎಲೀಷನು ಒಬ್ಬಂಟಿಗನಾಗಿರಲಿಲ್ಲ.ಭಯದಿಂದರೂ ದುಃಖದಿಂದರೂ ಓಡಿ ಹೋಗಬೇಕೆಂದಿದ್ದಾಗಲೂ ಕರ್ಮೇಲ ಬೆಟ್ಟದ ಮೇಲೆ ದೇವರಿಗೋಸ್ಕರ ಈತನು ನಿಂತ ಹಾಗೆ ದೇವರು ಕೂಡ ಇದ್ದನು.

  ತಾಯಂದಿರಾದ ನಮಗೂ ಸಹ ಕೆಲವು ಸಂದಭ೯ಗಳಲ್ಲಿ ಹೃದಯದಲ್ಲಿ ಬಿರುಗಾಳಿ ಎದ್ದು ನಾವು ಎಲ್ಲಿಯಾದರೂ ಓಡಿಹೋಗಬೇಕು ಎಂಬುದಾಗಿ ಅನ್ನಿಸುತ್ತದೆ. ಎಲೀಷನು ಮನಗುಂದಿದವನಾಗಿ ಇದ್ದಂತೆ ನಾವು ಸಹ ಮನಗುಂದಿದವರಾಗಿದ್ದರೆ ನಮ್ಮ ಪರಲೋಕದ ತಂದೆ ನಮ್ಮ ಮೇಲೆ ಕನಿಕರ ತೋರಿಸಿ ನಮ್ಮ ಪಕ್ಕದಲ್ಲೇ ನಿಂತು ನಮ್ಮನ್ನು ಉತ್ತೇಜನ ಪಡಿಸಿ, ನಮ್ಮ ಜೊತೆ ಮೃದುವಾಗಿ ಮಾತನಾಡುತ್ತಾನೆ. ಅಂತಹ ಸಂದಬ೯ಗಳಲ್ಲಿ ನಾವು ಬಿರುಗಾಳಿಯಂತ ಸ್ವಾನುಕಂಪಕ್ಕೆ ಮನಸ್ಸು ಕೊಡುವುದಕ್ಕೆ ನಾವು ಹಿಂದೆಗೆಯಬೇಕು. ಯಾಕೆಂದರೆ ನಾವು ಮಾಡಬಾರದಂತಹ ಸಂಗತಿಗಳನ್ನು ಮಾಡಲು ಪ್ರೇರೆಪಿಸುತ್ತೇವೆ. ಮತ್ತು ಅದನ್ನು ಮಾಡುವುದರ ಮೂಲಕ ಮುಂದೆ ನಾವು ಪಶ್ಚಾತ್ತಾಪಪಡುತ್ತೇವೆ. ಇದಕ್ಕೆ ಬದಲಾಗಿ ನಾವು ಎಲೀಷನು

  ಮನಗುಂದಿದವನಾಗಿರುವಾಗ ಮಾಡಿದಂತ "ಮಂದ ಮಾರುತದ ಶಬ್ದವನ್ನು ಕೇಳಿಸಿಕೊಳ್ಳೋಣ". (1ಅರಸು19-12) ಸಿಡಿಲು ಭೂಕಂಪಗಳಿಗಿಂತ ಮೇಲಾಗಿ ಪಾಪಿಗಳ ಸ್ನೇಹಿತ ನಮ್ಮ ಪ್ರತಿಯೊಂದು ಬಲಹೀನತೆಯನ್ನು ಅಥ೯ಮಾಡಿಕೊಳ್ಳುವಾತನು ನಮ್ಮ ಜೊತೆ ಮಾತನಾಡಲು ಬಯಸುತ್ತಾನೆ. ಆ ಮಂದ ಮಾರುತ ಶಬ್ದವು ನಮ್ಮ ಮನಸ್ಸಿಗೆ ಉತ್ತೇಜನವನ್ನು ತರುತ್ತದೆ. ಬಿರುಗಾಳಿಯು ಶಾಂತವಾಗುತ್ತದೆ. ಮತ್ತು ಶಾಂತಿಯು ನಮ್ಮ ಹೃದಯಗಳನ್ನು ಆಳುತ್ತದೆ. ದಾವಿದನು ಹೀಗೆ ಹೇಳಿದ್ದಾನೆ. "ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ ?ಮೆಲಣ ಲೋಕಕ್ಕೆ ಏರಿದೋದರೆ ಅಲ್ಲಿ ನೀನಿರುತ್ತಿ ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡೆನಂದರೆ ಅಲ್ಲಿಯೂ ನಿನ್ನ ಕೈನನ್ನನ್ನು ನಡಿಸುವುದು. ದೇವರೇ ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ. ಅವುಗಳ ಒಟ್ಟು ಅಸಂಖ್ಯವಾಗಿವೆ. ಅವಿಗಳನ್ನು ಲೆಕ್ಕಿಸುವುದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ. ನಾನು ಎಚ್ಚರವಾಗಲು ಮುಂಚಿನಂತೆಯೇ ನಿನ್ನ ಬಳಿಯಲ್ಲಿದ್ದೇನೆ."(ಕೀತ೯139 : 7,9,10,17,18,)

  ನೀರಿನ ತೆರೆಗಳು ಅವರನ್ನು ಮುಳುಗಿಸುತ್ತೇವೆಂದು ಶಿಷ್ಯರು ಭಯಪಟ್ಟರು. ಅದೇ ತೆರೆಗಳ ಮೇಲೆ ಯೇಸು ನಡೆಯುತ್ತಾ ಅವರ ಕಡೆಗೆ ಬರುತ್ತಾ, ಭಯಪಡಬೇಡಿರಿ ಸಮಾಧಾನದಿಂದಿರಿ ಇದು ನಾನೇ ಎಂದು ವಿನಯದಿಂದ ಹೇಳಿದನು ತಕ್ಷಣವೇ ಆ ಬಿರುಗಾಳಿ ಶಾಂತವಾಯಿತು. ಅದೇ ರೀತಿ ನಮ್ಮ ಜೀವಿತದಲ್ಲಿ ನಮ್ಮನ್ನು ಹೆದರಿಸುವ ಮತ್ತು ನಿರಾಶೆಗೆ ಒಳಪಡಿಸುವ ಬಿರುಗಾಳಿಗಳನ್ನು ಶಾಂತಗೊಳಿಸಲು ಆತನು ಈ ದಿನವು ಸಹ ಏಕರೀತಿಯಾಗಿದ್ದಾನೆ. (ಕೀತ೯ 18:35) "ನಿನ್ನ ಕೃಪಾ ಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ" ಎಂದು ಬರೆದಿದೆ.

  "ನಾವು ಬೆರೆಯವರಿಂದ ಹಗೆತನವನ್ನು ಎದುರಿಸುತ್ತಿದ್ದೇವೋ ಹಾಗಾದರೆ ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡಾತನನ್ನು ಆಲೋಚಿಸಿರಿ." (ಇಬ್ರಿ 12:3)

  ನಮ್ಮ ಸ್ನೇಹಿತರಿಂದ ಮತ್ತು ನೆಂಟಸ್ಥರಿಂದ ವಿರೋಧತ್ವವನ್ನು ಎದುರಿಸುತ್ತಿದ್ದರೆ ಅದು ನಾವು ಸರಿಯಾದ ಹಾದಿಯಲ್ಲಿ ಇದ್ದೇವೆಂಬುದಕ್ಕೆ ಗುರುತು. ಅದೇ ಹಾದಿಯಲ್ಲಿ ನಮಗಿಂತ ಮುಂದಾಗಿ ಹೋದ ಯೇಸುವನ್ನು ಕಾಣುತ್ತೇವೆ. ಆತನು ಸಹ ಈ ಹಗೆತನವನ್ನು ಅನುಭವಿಸಿದನು. ಆದರೆ ಹೀನೈಸುವಿಕೆಯಾಗಲಿ ದೂರು ಹೇಳುವುದಕ್ಕಾಗಲಿ ಅಥವಾ ಸ್ವಾನುಕಂಪಕ್ಕಾಗಲಿ ತನ್ನನ್ನು ಒಪ್ಪಿಸಲಿಲ್ಲ. ಪ್ರತಿಯಾಗಿ ಒಳ್ಳೇತನದಿಂದ ಜಯಿಸಿದನು. ಆತನು ಹಿಂಸೆಯನ್ನು ಅನುಭವಿಸುವಾಗ ಯಾರನ್ನು ಬೆದರಿಸಲಿಲ್ಲ.ಆದರೆ ಕ್ಷಮಿಸಿದನು. ಮತ್ತು ತನ್ನನ್ನು ದೂಷಿಸುವವರನ್ನು ಆಶೀವ೯ದಿಸಿದನು. ಆತನು ತನ್ನ ತಂದೆಯ ಮೃದುವಾದ ಸ್ವರಕ್ಕೆ ಕಿವಿಗೊಟ್ಟು

  ತನ್ನ ಕಾಯ೯ವನ್ನು ಆತನಿಗೆ ಒಪ್ಪಿಸಿದನು.

  ನಮ್ಮ ತಂದೆ ಪ್ರತಿಯೊಬ್ಬರು ಹೇಳುವ ಹಾಗೂ ಮಾಡುವ ಪ್ರತಿಯೊಂದನ್ನು ಗಮನಿಸುವಾತನು. ಒಂದು ದಿನ ಪ್ರತಿಯೊಂದನ್ನು ನ್ಯಾಯವಾಗಿ ತೀಪು೯ಮಾಡುವಾತನು. ಮತ್ತು ಆತನಲ್ಲಿ ಪಕ್ಷಪಾತವಿಲ್ಲ ಯಾಕಂದರೆ ಆತನಿಗೆ ಪ್ರತಿ ಸಂದಭ೯ದ ನಿಜ ಸ್ಥಿತಿ ಗೊತ್ತಿದೆ.

  ಒಂದು ವೇಳೆ ನಾವು ಯೇಸು ಮಾಡಿದ ಹಾಗೆಯೇ ಮಾಡಿದರೆ ನಾವು ಎಲ್ಲಾ ವೇದನೆಯನ್ನು ಸ್ವಾನುಕಂಪವನ್ನು ಜಯಿಸಲು ಸಾಧ್ಯ ಮತ್ತು ಆತನ ಬಾಧೆಗಳಲ್ಲಿ ನಮಗೂ ಸಹ ಪಾಲಿದೆಯೆಂದು ಸಂತೋಷದಿಂದ ಹಿಗ್ಗುತ್ತೇವೆ. ಆಗ ನಾವು ಎಲ್ಲಾ ವಿಧವಾದ ದೂಷಣೆಯಿಂದ, ಚಾಡಿಯಿಂದ, ಅಪಾಧನೆಗಳಿಂದ, ಬೇಡಿಕೆಗಳಿಂದ, ಆತ್ಮರಕ್ಷಣೆಯಿಂದ ತನ್ನ ವಿಷಯದಲ್ಲೇ ಮರಕಗೊಳ್ಳುವುದರಿಂದ ಬಿಡುಗಡೆ ಹೊಂದಲು ಸಾಧ್ಯ.

  ಇಂತಹ ಕಠಿಣವಾದ ಪರೀಕ್ಷೆಗಳನ್ನು ಕಳುಹಿಸಿ ನಮ್ಮ ಸ್ವಾಥ೯ ಜೀವಿತವನ್ನು ಜಜ್ಜಲು ನಾವು ಕತ೯ನನ್ನು ಅನುಮತಿಸೋಣ. ಈ ಸ್ವಾಥ೯ಕ್ಕೆ ಮರಣ ಉಂಟಾಗುವಾಗ ದೇವರ ಮಹಿಮೆಗಾಗಿ ಪುನರುತ್ಥಾನದ ಶಕ್ತಿಯು ಸಾಧನೆಯಾಗಿ ಏರಿ ಬರುತ್ತದೆ. ಮತ್ತು ನಾವು, ನೀನು ನನ್ನ ಪ್ರೀಯ ಮಗನು ನಿನ್ನನ್ನು ನಾನು ಮೆಚ್ಚಿದ್ದೇನೆ. ಎಂದು ಆತನು ಹೇಳುವ ಸ್ವರವನ್ನು ಕೇಳಿಸಿಕೊಳ್ಳುತ್ತೇವೆ. ದೇವರಿಂದ ಹೊಂದುವ ಈ ಸಾಕ್ಷಿಯೇ ನಮ್ಮ ದೊಡ್ಡ ಬಹುಮಾನ.

  ನಮ್ಮ ಹೃದಯದಲ್ಲಿ ಯಾವಾಗಲೂ ನಿಶಬ್ಧತೆಯ ರಾಜ್ಯವಾಳಲಿ ಯಾಕಂದರೆ ಈಗ ಇದು ದೇವರ ಪವಿತ್ರಾಲಯ "ಕತ೯ನು ತನ್ನ ಮಂದಿರದಲ್ಲಿದ್ದಾನೆ. ಆದ್ದರಿಂದ ಎಲ್ಲಾ ಮನುಷ್ಯರು ಆತನ ಮುಂದೆ ಮೌನದಿಂದಿರಲಿ." (ಹಬಕೂಕ 2 : 20, ಜೆಕಯ೯ 2 : 13).

  ಕೆರಳಿಸುವ ಸಂದಭ೯ದಲ್ಲಿ ಮತ್ತು ಮೌನತೆಯಿಂದ ನಾವು ಇರುವುದಾದರೆ ನನ್ನ ರಾಜ್ಯವು ಈ ಲೋಕದಲ್ಲ "ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನ ಪರಿವಾರದವರು ಕಾದಾಡುತ್ತಿದ್ದರು" ( ಯೋಹಾನ 18: 36) ಎಂದು ಹೇಳುವ ಕತ೯ನ ನಿಜ ಶಿಷ್ಯರೆಂಬುದನ್ನು ನಾವು ನಿರೂಪಿಸುತ್ತೇವೆ.

  ಯೇಸು ರಾಜನು ಲೋಕದ ಪಿಲಾತನು ಮತ್ತು ಅವನ ಸೈನಿಕರೆಲ್ಲರೂ ನಮ್ಮ ದೇವರ ಸೇವಕರು ಮತ್ತು ಅನೇಕ ಶತಮಾನಗಳ ಹಿಂದೆ ತನ್ನ ಜನರಿಗೆ "ಶಾಪವನ್ನು ಆಶೀವಾ೯ದವನ್ನಾಗಿ ಮಾಪ೯ಡಿಸಿದನು." ಈ ದಿನ ನಮಗೂ ಸಹ ಅದನ್ನೇ ಮಾಡುವಾತನಾಗಿದ್ದಾನೆ. (ಧಮೋ೯ 23: 5) ದೇವರು ನಮ್ಮನ್ನು ಶಾಂತವಾಗಿರುವುದಕ್ಕಾಗಿ ಕರೆ ಕೊಡುತ್ತಿದ್ದಾನೆ. ವಿಶ್ರಮಿಸಿ ಹೊರಾಡುವುದನ್ನು "ತಡೆಯಿರಿ" ಅದು ಹೋಗಲಿ ಮತ್ತು ಆತನೇ ದೇವರೆಂಬುದನ್ನು ಗ್ರಹಿಸಿರಿ ( ಕೀತ೯ 46: 10)

  ಹೌದು ದೇವರು ಪರಮಾಧಿಕಾರವುಳ್ಳಾತನು. ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಎಲ್ಲಾ ಅಧಿಕಾರವು ನಮ್ಮ ಕತ೯ನ ಕೈಯಲ್ಲಿದೆ. ಆತನು ನಮ್ಮ ಸೃಷ್ಟಿಕತ೯ನು, ವಿಮೋಚಕನು, ಒಡೆಯನು ಮತ್ತು ಕತ೯ನು. ನಮ್ಮ ಹಾದಿಯಲ್ಲಿ ಆತನು ಕಳುಹಿಸುವ ಪ್ರತಿಯೋಂದು ಎರಡಾವತಿ೯ ಸೂಕ್ಷ್ಮವಾಗಿ ಶೋಧಿಸಲ್ಪಡುತ್ತದೆ. (1 ಕೊರಿಂಥ 10: 13 ಮತ್ತು ರೋಮಾ :8 28) ಆದ್ದರಿಂದ ನಾವು ಎಲ್ಲಾ ಸಮಯಗಳಲ್ಲಿ ವಿಶ್ರಾಂತಿಯಿಂದಿರಬೇಕು.

  ಕಷ್ಟಕರವಾದ ಹೋರಾಟದಲ್ಲಿ ಮತ್ತು ಜ್ವಾಲೆಯು ಬಹಳ ಬಿಸಿಯಾಗಿರುವ ಸಂದಭ೯ದಲ್ಲೂ "ನನ್ನ ಕೃಪೆಯೇ ನಿನಗೆ ಸಾಕು". ನೀನು ಸಹಿಸಬಹುದಾದ ಶೋಧನೆಯೇ ಹೊರತು ಹೆಚ್ಚಿನದನ್ನು ನಾನು ಅನುಮತಿಸುವುದಿಲ್ಲ ನೀವು ಎದುರಿಸುತ್ತಿರುವ ಪ್ರತಿಯೊಂದನ್ನು ನಮ್ಮ ಅನುಕೂಲಕ್ಕಾಗಿ ಮಾಡಿ ಹೆಚ್ಚಾಗಿ ನನ್ನ ಸಾರೂಪ್ಯಕ್ಕೆ ನಿಮ್ಮನ್ನು ಮಾಪ೯ಡಿಸುತ್ತಾನೆ ಎಂಬುದು ಆತನ ಮೃದುವಾದ ಸ್ವರ ನಮಗೆ ಹೇಳುತ್ತದೆ. ಹೌದು ನಮ್ಮಲ್ಲಿ ಅತೀ ಬಲಹೀನರಾಗಿರುವ ಸಹೋದರಿಯರು ಸಹ ಜಯಶಾಲಿಗಳಾಗಿ ಹೊರ ಬರಲು ಸಾಧ್ಯ.

  “ನಮ್ಮ ಹೋರಾಟಗಳು ಸಂಪೂತಿ೯ಯಾಗಿ ನಿಂತುಹೋಗುವ ತನಕ ನಿನ್ನ ಪ್ರಶಾಂತವಾದ ಮಂಜಿನ ಹನಿಗಳನ್ನು ಸುರಿಸು. ನಮ್ಮ ಆತ್ಮದಲ್ಲಿ ದಣಿವನ್ನು ಮತ್ತು ಒತ್ತಡವನ್ನು ತೆಗೆದುಬಿಡು. ನಮ್ಮ ನಿಯಮಿಸಲ್ಪಟ್ಟ ಜೀವಿತ ನಿನ್ನ ಶಾಂತಿಯ ಸೌಂದಯ೯ವನ್ನು ಅರಿಕೆಮಾಡಲಿ“!

  ಅಧ್ಯಾಯ 13
  ಲೋಟನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಿ

  ಆಗಿನ ಕಾಲದಲ್ಲಿ ನಾಶಮಾಡಲ್ಪಟ್ಟ ಅತೀ ಐಶ್ವಯ೯ವಂತ ಪಟ್ಟಣಗಳೊಂದರಲ್ಲಿ ಉಪ್ಪಿನ ಸ್ತ್ರೀಯ ಸ್ತಂಭವನ್ನು ಕಾಣುತ್ತೇವೆ. ಅದು ಎಲ್ಲಾ ಕಾಲದ ಸ್ತ್ರೀಯರಿಗೆ ಒಂದು ಸಂದೇಶವನ್ನು ತರುತ್ತದೆ.

  ಲೂಕ 17:32 ರಲ್ಲಿ "ಲೋಟನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಿ" ಎಂಬ ಕತ೯ನ ಮಾತು ಎಲ್ಲರಿಗೂ ಒಂದು ಎಚ್ಚರಿಕೆಯಾಗಿದೆ. ಲೋಚನ ಹೆಂಡತಿಯು ಹಿಂದೆ ತಿರುಗಿ ನೋಡಿದ್ದೇ ಆಕೆಯ ಜೀವಿತದ ಅಂತೀಮ ಕಾಯ೯ವಾದದ್ದು ಅದರಿಂದಾಗಿ ತನ್ನ ಕುಟುಂಬವನ್ನು ಆಕ್ಷಣವೇ ನಾಶಮಾಡಿಕೊಂಡಳು. ಆಕೆಯ ಗಂಡ ಒಳ್ಳೇವನಾಗಿದ್ದು ( 2ಪೇತ್ರ 2:7,8) ರಲ್ಲಿ ಆನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು ಎಂದಿದೆ.

  ಆದರೆ ಆಕೆಗೆ ತನ್ನ ಗಂಡನಿಗೆ ಸೋದೋಮಿನ ಬಗ್ಗೆ ಅನ್ನಿಸಿದ ಹಾಗೆ ಅನ್ನಿಸಿರಲಿಲ್ಲ. ಮತ್ತು ಅದು ದುಃಖಕರ ಸಂಗತಿ. ಆಕೆಗೆ ದೇವರ ಭಯವಿಲ್ಲದ ಕಾರಣ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ದೇವರ ಭಯವನ್ನು ಕಲಿಸಲು ಆಗಲಿಲ್ಲ. ಆಕೆ ಬಹಳ ಸಾಮಾಜಿಕ ಕಾಯ೯ಗಳಲ್ಲಿ ಆಸಕ್ತಿಯುಳ್ಳವಳಾಗಿದ್ದದರಿಂದ ತನ್ನ ಎರಡು ಹೆಣ್ಣು ಮಕ್ಕಳು ಬೆಳೆಯುವ ಸಂದಭ೯ದಲ್ಲಿ ಅವರೊಂದಿಗೆ ಕಳೆಯಲು ಸಮಯವಿರಲಿಲ್ಲ.ಈಕೆಯು ಒಬ್ಬ ಮುಖ್ಯ ವ್ಯಾಪಾರಿಯ ಹೆಂಡತಿ ಮತ್ತು ಆಕೆಯ ಎರಡು ಹೆಣ್ಣು ಮಕ್ಕಳು ಸಹ ಸಮಾಜದಲ್ಲಿ ಅಂಗೀಕರಿಸಲ್ಪಟ್ಟವರೆಂಬ ಗವ೯ವಿತ್ತು. ಈಕೆಯು ತನ್ನ ಗಂಡನ ಮಾತಿಗೆ ಮಯಾ೯ದೆ ಕೊಡದೆ ಸೋದೋಮಿನ ನೀತಿಗಳನುಸಾರ ಬೆಳೆಯಲು ತನ್ನ ಹೆಣ್ಣು ಮಕ್ಕಳನ್ನು ಅನುಮತಿಸಿದ್ದಳು. ಮತ್ತು ಕಡೆಯದಾಗಿ ಸೋದೋಮಿನ ಚಂದವುಳ್ಳ ಇಬ್ಬರು ಯೌವನಸ್ಥರನ್ನು ಮದುವೆ ಮಾಡಿಸಿ ಕೊಡುವುದರ ಮೂಲಕ ಅವರ ಹೆಣ್ಣು ಮಕ್ಕಳನ್ನು ಹಾಳು ಮಾಡಿದಳು. ಆ(4000) ನಾಲ್ಕು ಸಾವಿರ ವಷ೯ಗಳ ಹಿಂದಿನ ಉಪ್ಪಿನ ಸ್ತಂಭ ತಾಯಂದಿರಾದ ನಮಗೆ ಒಂದು ಎಚ್ಚರಿಕೆಯ ಮಾತನ್ನು ಕೊಡುತ್ತದೆ. ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ. ಲೋಟನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಿರಿ.

  ಲೋಟನ ಹೆಂಡತಿಗೆ ಲೌಕೀಕ ವಸ್ತುಗಳು, ಆಕೆಯ ಐಶ್ವಯ೯ವಾಗಿದದ್ದರಿಂದ ಆಕೆಯ ಹೃದಯ ಸಹ ಅದರಲ್ಲೇ ಇತ್ತು. ತಾಯಂದಿರಾದ ನಾವು ಮನೆಯಲ್ಲಿ ಬಹಳವಾಗಿ ಲೌಕೀಕ ವಸ್ತುಗಳಿಗೆ ಅಂದರೆ ಆಹಾರ, ಬಟ್ಟೆ, ಮನೆಯಲ್ಲಿ ಉಪಯೋಗಿಸುವ ವಸ್ತುಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುವುದು ಸುಲಭ. ಮತ್ತು ಆ ಉಪ್ಪಿನ ಸ್ತಂಭದಿಂದ ನಮಗೆ ಬರುವ ಮತ್ತೊಂದು ಎಚ್ಚರಿಕೆ. ನಾವು ಕಾಣುವಂತ ವಸ್ತುಗಳು ಪ್ರಾಪಂಚಿಕವಾದದು. ಲೋಟನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಿರಿ. ಸೋದೋಮಿನ ಲೌಕೀಕ ಸ್ನೇಹಿತರಿಂದ ಬೇಪ೯ಡುವುದು ಲೋಟನ ಹೆಂಡತಿಗೆ ಕಷ್ಟಕರವಾಗಿತ್ತು.

  ಅನೇಕ ಸಹೋದರಿಯರು ಕತ೯ನಿಗೆ ಪರಿಣಾಮಕಾರಿಯಲ್ಲದವರಾಗಿದ್ದಾರೆ. ಯಾಕಂದರೆ ತಮ್ಮ ಉತ್ತಮ ಸ್ನೇಹಿತರು ಲೌಕೀಕ ಸಂಬಂಧಿಕರು ಮತ್ತು ಅಕ್ಕಪಕ್ಕದವರು ಮತ್ತು ಬಹಳಷ್ಟು ಸಮಯವನ್ನು ಅವರು ಪ್ರಯೋಜನವಿಲ್ಲದ ಸಂಭಾಷಣೆಯಲ್ಲಿ ಕಳೆಯುತ್ತಾರೆ.ಕೆಟ್ಟ ಸಹವಾಸವು ನಿಮ್ಮ ಕತ೯ನಿಗಾಗಿರುವ ಸಾಕ್ಷಿಯನ್ನು ಹಾಳುಮಾಡುತ್ತದೆ. ಅಂತಹ ಸಹೋದರಿಯರಿಗೂ ಎಚ್ಚರಿಕೆಯ ಮಾತು -ಲೋಟನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಿರಿ.

  ಹಿಂದೆ ನಾವು ಅನುಭವಿಸಿದ ಸೋಲು ನಮ್ಮನ್ನು ಹಿಂದಕ್ಕೆ ಎಳೆಯುತ್ತಿರಬಹುದು ಅಥವಾ ಯಾರಿಂದಾದರೂ ನೋವುಂಟಾಗಿರುವುದು ಅಥವಾ ನಾವು ಬಹಳವಾಗಿ ಪ್ರೀತಿಸಿದವರಿಂದ ತಿರಸ್ಕರಿಸಲ್ಪಟ್ಟದ್ದು ಅದನ್ನು ಮರೆಯಲಾಗದೆ ಇರುವಾಗ ಅದು ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ.

  ಅಥವಾ ಇತರರ ದಾಕ್ಷಿಣ್ಯವನ್ನು ಬಯಸುವುದರಲ್ಲಿ ಸಂತೋಷಿಸುವ ಅಥವಾ ಅದು ದುಃಖಕರ ಸಂಗತಿಗಳೇ ಆಗಿರಬಹುದು. ಏನೇ ಆಗಿದ್ದರೂ ಹಿಂದಕ್ಕೆ ತಿರುಗಿ ನೋಡುವುದು ಭಯಂಕರ ಸಂಗತಿ. ಅದು ನಮ್ಮ ಆತ್ಮೀಕ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಮತ್ತು ಸಭೆಯಲ್ಲಿ ಸ್ತಂಭಗಳಾಗುವ ಬದಲು ಉಪ್ಪಿನ ಸ್ತಂಭಗಳನ್ನಾಗಿ ಮಾಡುತ್ತದೆ. "ಹೌದು ಸಹೋದರಿಯರು ಪಾಪದ ಮೇಲೆ ಜಯಗಳಿಸುವಾಗ ಅವರು ಸಹ ಸಭೆಯ ಸ್ತಂಭಗಳಾಗಿರಲು ಸಾಧ್ಯವೆಂದು ದೇವರ ವಾಕ್ಯ ಹೇಳುತ್ತದೆ".(ಪ್ರಕಟನೆ 3:12)

  ಆದ್ದರಿಂದ ನಾವು ಎಚ್ಚರಿಕೆಯನ್ನು ಗಮನಿಸೋಣ. ಕಳೆದದ್ದನ್ನು ಮರೆತುಬಿಟ್ಟು ಅದರ ಬಗ್ಗೆ ಚಿಂತಿಸದೆ ಲೋಟನ ಹೆಂಡತಿಯ ಬಗ್ಗೆ ಜ್ಞಾಪಿಸಿಕೊಳ್ಳೋಣ. (ಆದಿ 19:17)ರಲ್ಲಿ "ಹಿಂದಕ್ಕೆ ನೋಡಬೇಡ ಸುತ್ತಲಿರುವ ಯಾವ ಮೈದಾನದಲ್ಲಿಯಾದರೂ ನಿಂತುಕೊಳ್ಳಬೇಡ ನೀನು ನಾಶವಾಗದೇ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು" ಎಂಬುದು ಲೋಟನ ಕುಟುಂಬಕ್ಕೆ ದೇವ ದೂತನು ಕೊಟ್ಟ ಕರೆ. ಇದೇ ಕರೆಯು ನಮಗೂ ಸಹ ಪರಲೋಕದಿಂದ ಬರುವಂತಾಗಿದೆ. ನಾವು ಬೆಟ್ಟಗಳ ಮೇಲೆಯೇ ಕತ೯ನೊಟ್ಟಿಗೆ ಜೀವಿಸೋಣ. ನಮ್ಮ ಹಿಂದಿನ ಜೀವಿತದಂತಲ್ಲ .ನಾವು ಬಿಗಿಯಾಗಿ ಅಂಟಿಕೊಂಡಿರುವ ಲೌಕೀಕ ವಸ್ತುಗಳನ್ನು ಬಿಟ್ಟು ಬಿಡುವಾ ಹೇಗಾದರೂ ಒಂದು ದಿನ

  ನಾವು ಈ ವಸ್ತುಗಳನ್ನು ಬಿಟ್ಟುಹೋಗಬೇಕಾಗಿದೆ. ಲೋಟನ ಹೆಂಡತಿಯನ್ನು ಜ್ಞಾಪಿಸಿಕೋ.

  ಅಧ್ಯಾಯ 14
  ನಿರೀಕ್ಷೆಯ ಬಾಗಿಲು

  "ನಾನು ಆಕೆಗೆ ಪಶ್ಚಾತ್ತಾಪ ಪಡಲು ಸಮಯ ಕೊಟ್ಟೆ..".(ಪ್ರಕ 2:21)

  ಈ ವಾಕ್ಯಗಳನ್ನು ನಾವು ಓದುವಾಗ ಲೌಕೀಕ ತಂದೆ ತನ್ನ ಮಗಳು ಪಶ್ಚಾತ್ತಾಪ ಪಡದಿದ್ದರೆ ಎದುರಿಸಬೇಕಾದಂತ ಭಯಂಕರ ಪರಿಣಾಮವನ್ನು ಕುರಿತು ಹೆದರಿಸುವ ಹಾಗೆ ನಾವು ಯೋಚಿಸುತ್ತೇವೋ?

  ಇಲ್ಲ ಇದು ಹಾಗಲ್ಲ ಇದು ಪರಲೋಕ ತಂದೆಯ ಸ್ವರ. ತನ್ನ ಮಗಳನ್ನು ಪ್ರೀತಿಸಿ "ನಿರೀಕ್ಷೆಯ ಬಾಗಿಲನ್ನು" ತೆರೆದು ಆಕೆಯ ತಪ್ಪುಗಳಿಗೆ ಒಂದು ಪರಿಹಾರವನ್ನು ತೋರಿಸುತ್ತಿರುವನು. ಹೋಶೆಯ 2: 14, 15 ರಲ್ಲಿ ನಾನು ಆಕೆಯೊಂದಿಗೆ ಹೃದಯಂಗಮನಾಗಿ ಮಾತನಾಡುವೆನು. ಮತ್ತು ಆಕೋರಿನ ತಗ್ಗನ್ನೆ ಅವಳ ಸುಖ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು.

  ಇನ್ನೊಬ್ಬ ಆಕೆ ಸ್ತ್ರೀಯ ಬಗ್ಗೆ ಹಿಂದಕ್ಕೆ ಯೋಚಿಸಿ ನೋಡಿ ಹವ್ವಳ ಅವಿಧೆಯತೆಗಾಗಿ ದೇವರು ಖಂಡಿತವಾಗಿ ಆಕೆಯನ್ನು ಶಿಕ್ಷಿಸಿದನು ಶಿಕ್ಷೆಯ ಮಾತಿನ ಜೊತೆಗೆ ನಿರೀಕ್ಷೆಯ ಬಾಗಿಲು ಸಹ ತೆರೆಯಿತು. ಆಕೆಯ ಪಾಪಕ್ಕೆ ಒಂದು ಪರಿಹಾರ ಆಕೆಯ ಸಂತಾನವು ವೈರಿಯ ತಲೆಯನ್ನು ಜಜ್ಜುವ ಮಹಿಮಾ ದಿನದ ಒಂದು ನಿರೀಕ್ಷೆ . ಮಕ್ಕಳು ದೇವರ ರಾಜ್ಯವನ್ನು ಸ್ವಾಧೀನ ಪಡಿಸಿಕೊಳ್ಳುವರು ಮತ್ತು ವಂಚಕನು ವಿಚಾರಿಸಲ್ಪಡುತ್ತಾನೆ.

  ಎರಡನೆಯ ಸ್ತ್ರೀಯನ್ನು ಯೋಚಿಸುವಾಗ ವಿಗ್ರಹಗಳ ಹಿಂದೆ ಹೋದ ಇಸ್ರೇಲ ಮತ್ತು ಯೂದಾಯದ ಸೊಕ್ಕಿನ ಹೆಣ್ಣು ಮಕ್ಕಳು. ದೇವರು ಪ್ರೀತಿ ಮತ್ತು ಕರುಣೆಯಿಂದ ತನ್ನ ಪ್ರವಾದಿಗಳನ್ನು ಕಳುಹಿಸಿ ಮತ್ತೆ ಮತ್ತೆ ಎಚ್ಚರಿಕೆ ಕೊಟ್ಟರೂ ಅವರು ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡರು ಮತ್ತು ದೇವರ ಮೊರೆಯನ್ನು ತಿರಸ್ಕರಿಸಿದರು. ಆದ್ದರಿಂದ ಅವರು ಸೆರೆಯಾಗಿ ಒಯ್ಯಲ್ಪಟ್ಟರು. ಮತ್ತು ಚದುರಿಸಲ್ಪಟ್ಟರು. ಆದರೂ ಸಹ ದೇವರು ನ್ಯಾಯ ತೀಪಿ೯ನ ಸಂದೇಶದಲ್ಲಿ ನಿರೀಕ್ಷೆಯ ಬಾಗಿಲನ್ನು ಅವರಿಗೂ ಸಹ ತೆರೆದು ಮುಂದೆ ಪುನಃ ಸ್ಥಾಪಿಸಿವ ವಾಗ್ದಾನವನ್ನು ಮಾಡಿದನು. (ಯೆರೆ 29: 11).

  ದೇವರ ಪ್ರೀತಿ ಎಣಿಸಲು ಅಸಾಧ್ಯ. ಆತನು ತನ್ನ ಕಠಣವಾದ ನ್ಯಾಯತೀಪಿ೯ನಲ್ಲೂ ನಿರೀಕ್ಷೆಯ ಬಾಗಿಲನ್ನೂ ತೆರೆಯುತ್ತಾನೆ. ಪ್ರೇಡರಿಕ ಪೊಬರರವರು -- "ನಮ್ಮ ಎಲ್ಲಾ ದುಃಖಗಳಿಗೆ ಸತಹಾನುಭೂತಿಯನ್ನು ತೋರಿಸುವ ಪರಲೋಕದಂತ ಸ್ಥಳ ಬೇರೆಲ್ಲೂ ಇಲ್ಲ ನಮ್ಮ ಎಲ್ಲಾ ತಪ್ಪಿಗೆ ಕರುಣೆಯಿಂದ ತೀಪು೯ಕೊಡುವ ಸ್ಥಳ ಬೇರೆಲ್ಲೂ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ "ಪ್ರವಾದಿಗಳನ್ನು ಹೀನೈಸಿ ದೇವರ ಎಚ್ಚರಿಕೆಯ ಮಾತನ್ನು ತಿರಸ್ಕರಿಸಿ ಮತ್ತು ಕತ೯ನು ಆಕೆ ಪಶ್ಚಾತ್ತಾಪ ಪಡುವುದಿಲ್ಲ ಎಂದು ಹೇಳಿದ ಆ ಕೆಟ್ಟ ಸುಳ್ಳು ಪ್ರವಾದಿನಿಯಾದ ಈಜಬೇಲಳ ಹಾಗೆ ನಾವು ಇರದೆ ಪಶ್ಚಾತ್ತಾಪುಪಡಲು ನಮಗೆ ಕೊಟ್ಟಿರುವ ಸಮಯವನ್ನು ಉಪಯೋಗಿಸೋಣ." ಪ್ರಕ 2:21

  ಆ ಕೆಟ್ಟ ಸುಳ್ಳು ಪ್ರವಾದಿನಿಯ ಹಾಗೆ ಇರುವುದಕ್ಕಿಂತ "ಈಕೆಯ ಪಾಪಗಳು ಬಹಳವಾಗಿದ್ದರೂ ಅವು ಕ್ಷಮಿಸಲ್ಪಟ್ಟಿದೆ. .....?....ಇವಳು ತೋರಿಸಿದ ಪ್ರೀತಿ ಬಹಳ" ಲೂಕ 7:47 ಎಂದು ಕತ೯ನು ಹೇಳಿದ ಆ ಪಶ್ಟಾತ್ತಾಪದ ಸ್ರ್ತೀಯ ಹಾಗೆ ನಾವು ಇರೋಣ.

  ತಮ್ಮ ಜೀವಿತಗಳನ್ನು ಅವ್ಯವಸ್ಥೆ ಪಡಿಸಿಕೊಂಡು ಬಹಳಷ್ಟು ಸೋತು ಹೋಗಿರುವ ಹೆಂಡತಿಯರು ಹಾಗು ತಾಯಂದಿರಿಗೂ ಸಹ ದೇವರು ಒಂದು "ನಿರೀಕ್ಷೆಯ ಬಾಗಿಲನ್ನು" ತೆರೆದಿದ್ದಾನೆ. ಆತನಲ್ಲಿ ನೀವು ಭರವಸವಿಡುವುದಾದರೆ ಆತನು ಈಗಲೂ ಸಹ ನಿಮ್ಮ ಜೀವಿತದಲ್ಲಿ ತನ್ನ ಯೋಜನೆಯನ್ನು ಪೂತಿ೯ಗೊಳಿಸುತ್ತಾನೆ. ಯಾವುದೂ ನಮ್ಮ ದೇವರಿಗೆ ಅಸಾಧ್ಯವಲ್ಲ.

  ಆತನಲ್ಲಿ ಭರವಸಡುವವರು ಎಂದಿಗೂ ಆಶಾಭಂಗಪಡುವುದಿಲ್ಲ. ಸೈತಾನನ ವಿರುದ್ಧ ದೇವರು ಯಾವಾಗಲೂ ನಮ್ಮ ಕಡೆ ಇದ್ದಾನೆ ಎಂದು ಆಗಾಗ ನಮ್ಮ ಯಜಮಾನರು ಹೇಳುತ್ತಿರುತ್ತಾರೆ.

  ಹಲ್ಲೆಲೂಯ !! ಆಮೆನ್ !!