WFTW Body: 

ಎಫೆಸದಲ್ಲಿನ ಸಭೆಯಲ್ಲಿ ತಿಮೊಥೆಯನು ಒಬ್ಬ ಯೌವನಸ್ಥನಾಗಿದ್ದನು ಮತ್ತು ಆ ಸಭೆಯಲ್ಲಿ ಅನೇಕ ಹಿರಿಯರು ಸಹ ಇದ್ದರು. ಹಾಗಾಗಿ, ಯೌವನಸ್ಥನೆಂದು ಆತನನ್ನು ಅಸಡ್ಡೆ ಮಾಡುವುದಕ್ಕೆ ಯಾರಿಗೂ ಅವಕಾಶಕೊಡಬಾರದೆಂದು ಪೌಲನು ತಿಮೊಥೆಯನಿಗೆ ಹೇಳಿದನು (1 ತಿಮೊಥೆ 4:12). ಒಬ್ಬ ಯೌವನಸ್ಥ ಬೋಧಕನು ತನ್ನ ಸಭೆಯಲ್ಲಿ ಹಿರಿಯರಿಂದ ಭಯದ ಭಾವನೆಯನ್ನು ಅನುಭವಿಸಬಹುದು, ವಿಶೇಷವಾಗಿ ಆ ಸಭೆಯಲ್ಲಿನ ಹಿರಿಯರು ಐಶ್ವರ್ಯವಂತರು ಮತ್ತು ಪ್ರಭಾವವುಳ್ಳಂತ ಜನರಾಗಿದ್ದರೆ, ಆ ಯೌವನಸ್ಥ ಬೋಧಕನು ಭಯದ ಭಾವನೆಯನ್ನು ಅನುಭವಿಸಲು ಸಾಧ್ಯವಿದೆ. ಪೌಲನು ತಿಮೊಥೆಯನಿಗೆ ಹುರಿದುಂಬಿಸುತ್ತಿದ್ದೇನೆಂದರೆ, ಆ ಹಿರಿಯರು ತಿಮೊಥೆಯನಿಗೆ ಭಯ ಹುಟ್ಟಿಸುವುದಕ್ಕೆ ಅನುಮತಿಸಬಾರದೆಂದು, ಆದರೆ ತಿಮೊಥೆಯನು ತನ್ನ ಜೀವಿತದಿಂದ ಆ ಹಿರಿಯರಿಗೆ ಮಾದರಿಯಾಗಿರುವಂತೆ ಪೌಲನು ಹುರಿದುಂಬಿಸಿದನು. ತಿಮೊಥೆಯನು ಮಾತಾನಾಡುವಂತದ್ದರಲ್ಲಿನ ದೈವಿಕತೆಯ ವಿಷಯವಾಗಿ, ನಡೆಯ ವಿಷಯವಾಗಿ, ಹಿರಿಯರ ವಿಷಯವಾಗಿ ಆತನಿಗಿರಬೇಕಾದ ಪ್ರೀತಿಯಲ್ಲಿ, ಎಲ್ಲಾ ಸಂಕಟಗಳ ಮಧ್ಯದಲ್ಲಿಯೂ ಸಹ ಆತನಿಗಿರಬೇಕಾದ ನಂಬಿಕೆಯಲ್ಲಿ, ಆತನ ಜೀವಿತದಲ್ಲಿರಬೇಕಾದ ಶುದ್ಧತ್ವದಲ್ಲಿ ಹಾಗೂ ಈ ರೀತಿಯ ಪ್ರತಿಯೊಂದು ಕ್ಷೇತ್ರದಲ್ಲಿ ತಿಮೊಥೆಯನು ಮಾದರಿಯಾಗಿರುವಂತೆ ಪೌಲನು ಹುರಿದುಂಬಿಸಿದನು. ಪೊಲನು 1 ತಿಮೊಥೆ 4:1-4 ರಲ್ಲಿ ಹೇಳಿರುವುಂತದ್ದಕ್ಕೆ ಇದು ನೇರ ವ್ಯತ್ಯಾಸವಿದೆ. ಸುಳ್ಳು ಬೋಧಕರು ಕೇವಲ ಬೋಧಿಸುತ್ತಾರೆ, ಅದರಂತೆ ನಿಜವಾದ ಬೋಧಕರು ಮಾದರಿಯಿಂದ ಬೋಧಿಸುತ್ತಾರೆ. ಸುಳ್ಳು ಬೋಧಕರು ಸಿದ್ಧಾಂತಗಳನ್ನು ಬೋಧಿಸುತ್ತಾರೆ. ನಿಜವಾದ ಬೋಧಕರು ತಮ್ಮ ಜೀವಿತದಿಂದ ಬೋಧಿಸುತ್ತಾರೆ. 1 ತಿಮೊಥೆ 4:13 ಒತ್ತಿ ಹೇಳುವುದೇನೆಂದರೆ, ಸಾರ್ವಜನಿಕ ಪ್ರಸಂಗವನ್ನು, ಉಪದೇಶವನ್ನು ಮಾಡುವಂತೆ ಹೇಳುತ್ತದೆ, ಏಕೆಂದರೆ ಆ ದಿನಗಳಲ್ಲಿ, ವಿಶ್ವಾಸಿಗಳು ಸತ್ಯವೇದವನ್ನು ಹೊಂದಿರಲಿಲ್ಲ. ಹಾಗಾಗಿ ಯಾರು ಸತ್ಯವೇದವನ್ನು ಹೊಂದಿರುತ್ತಾರೋ, ಅವರು ಜನರು ಕೇಳುವಂತೆ ಅವರಿಗೆ ಸತ್ಯವೇದದಲ್ಲಿನ ದೊಡ್ಡ ದೊಡ್ಡ ಭಾಗಗಳನ್ನು ಓದಬೇಕಾಗಿತ್ತು. ಇಂದು, ವಿಶ್ವಾಸಿಗಳು ಸತ್ಯವೇದದಲ್ಲಿನ ದೊಡ್ಡದಾದ ಭಾಗಗಳನ್ನು ಮನೆಯಲ್ಲಿಯೇ ಓದಬಹುದು.

ನಂತರ ಪೌಲನು ತಿಮೊಥೆಯನಿಗೆ ನೆನಪಿಸುವುದೇನೆಂದರೆ, ಒಳ್ಳೇ ಜೀವಿತಕ್ಕಿಂತ ಮತ್ತು ವೇದಪಾರಾಯಣಕ್ಕಿಂತ ಹೆಚ್ಚಿನದಾಗಿ ಬೇರೆ ಏನೋ ಆತನಿಗೆ ಅಗತ್ಯತೆ ಇದೆ ಎಂಬುದಾಗಿ. ಅದು ಯಾವುದೆಂದರೆ, ”ಒಳ್ಳೇ ಮಾದರಿಯಾಗಿರುವುದು ಮತ್ತು ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವುದರಲ್ಲಿ ಆಸಕ್ತನಾಗಿರುವುದು” (1 ತಿಮೊಥೆ 4:12,13). ಅದು ತುಂಬಾ ಒಳ್ಳೇಯದು. ಆದರೆ ”ಪವಿತ್ರಾತ್ಮನ ವರವನ್ನು ಅಲಕ್ಷ್ಯಮಾಡಬೇಡ” (1 ತಿಮೊಥೆ 4:14). ಪೌಲನು ತಿಮೊಥೆಯನಿಗೆ ನೆನಪಿಸುವುದೇನೆಂದರೆ, ಪೌಲನು ತಿಮೊಥೆಯನ ಮೇಲೆ ಇತರೆ ಸಭಾ ಹಿರಿಯರ ಜೊತೆಗೂಡಿ ಪ್ರವಾದನೆಯ ಸಹಿತವಾಗಿ ವರವನ್ನು ಕೊಡಲ್ಪಟ್ಟಿತು ಎಂಬುದಾಗಿ. ನಾವು ಕರ್ತನಿಗೆ ಸೇವೆ ಮಾಡಲು ಅನುಕೂಲವಾಗುವಂತೆ ಆತ್ಮದ ವರದ ಅಗತ್ಯತೆ ಇದೆ. ನಾವು ”ಪ್ರವಾದನೆಯ ವರವನ್ನು ಆಸಕ್ತಿಯಿಂದ ಅಪೇಕ್ಷಿಸಬೇಕು” (1 ಕೊರಿಂಥ 14:1). - ಅದು, ಯಾವ ರೀತಿ ಮಾತನಾಡಬೇಕೆಂದರೆ, ನಾವು ಮಾತನಾಡುವಂತ ಮಾತು ಮನುಷ್ಯರ ಹೃದಯಕ್ಕೆ ಬಾಣದಂತೆ ನಾಟಬೇಕು, ಯಾವ ರೀತಿ ಎಂದರೆ, ಹಳೆ ಒಡಂಬಡಿಕೆಯಲ್ಲಿ ಪ್ರವಾದಿಗಳು ಮಾತನಾಡಿದಂತ ರೀತಿ ಹಾಗೂ ದೇವರ ಬಾಯಿಂದ ಹೊರಟಂತ ಮಾತು ಎಂದಿಗೂ ವ್ಯರ್ಥವಾಗಿ ಹಿಂದಿರುಗಿ ಬಾರದ ಹಾಗೇ (ಯೆಶಾಯ 55:11). ನಾವು ಈ ರೀತಿಯ ಸೇವೆಯನ್ನು ಹೊಂದಲು, ನಮಗೆ ಪವಿತ್ರಾತ್ಮನ ಅಭಿಷೇಕದ ಅಗತ್ಯತೆ ಇದೆ. ಯೇಸುವಿಗೆ ಇದು ಅಗತ್ಯವಿತ್ತು ಮತ್ತು ನಮಗೂ ಸಹ ಎಲ್ಲಾ ಸಮಯದಲ್ಲಿ ಇದರ ಅಗತ್ಯತೆ ಹೆಚ್ಚಿದೆ. ಇಂದು ಒಂದೇ ಸಲಕ್ಕೆ ಪಡೆದುಕೊಳ್ಳುವಂತದ್ದಲ್ಲ. ಇಲ್ಲ. ನಾವು ಪವಿತ್ರಾತ್ಮನ ಅಭಿಷೇಕಕ್ಕಾಗಿ ಎಲ್ಲಾ ಸಮಯದಲ್ಲಿ ಹುಡುಕಬೇಕು.

ಯೌವನಸ್ಥರೆ : ದೇವರ ಸೇವೆ ಮಾಡಲು 40 ವರುಷ ವಯಸ್ಸಿನ ತನಕ ಕಾಯಬೇಕು ಎಂದು ಭಾವಿಸಬೇಡಿ. ನಾನು 19 ವರುಷ ವಯಸ್ಸಿನವನಾದಗ ಹೊಸದಾಗಿ ಹುಟ್ಟಿದೆ ಮತ್ತು 21 ವರುಷದವನಾದಾಗ ದೀಕ್ಷಾಸ್ನಾನ ಪಡೆದುಕೊಂಡೆ. ನಂತರ ನಾನು ಬೋಧಿಸಲು ತಕ್ಷಣವೇ ಪ್ರಾರಂಭಿಸಿದೆ. ಆಗ ನನಗೆ ಹೆಚ್ಚು ಗೊತ್ತಿದ್ದಿಲ್ಲ, ಆದರೆ ನನಗೆ ಗೊತ್ತಿರುವಂತ ಕಡಿಮೆ ವಿಷಯದಲ್ಲಿಯೇ, ನನಗಿಂತ ಕಡಿಮೆ ಅರಿತಿರುವಂತವರಿಗೆ ಕ್ರೈಸ್ತ ಜೀವಿತದ ಅ.ಆ.ಇ.ಈ ಕಲಿಸಲು ಪ್ರಾರಂಭಿಸಿದೆ. ನಾನು ಬೆಳೆದ ಹಾಗೇ, ಜನರಿಗೆ ಹೆಚ್ಚು ಬೋಧಿಸುತ್ತಿದ್ದೆ. ಮೊದಲನೇ ತರಗತಿಯ ವಿದ್ಯಾರ್ಥಿಯು ಅಂಗನವಾಡಿಯ ವಿದ್ಯಾರ್ಥಿಗೆ ಬೋಧಿಸಬಹುದು. ನೀವು ದೇವರ ವಾಕ್ಯವನ್ನು ಬೋಧಿಸಲು ಪ್ರಾರಂಭಿಸುವುದಕ್ಕೆ ಮುಂಚೆ ನೀವು ಹಿರಿಯನಾಗಬೇಕು ಎಂದು ಕಾಯುವುದೇಕೆ? ನೀವು ಪರಿವರ್ತನೆ ಹೊಂದಿದ ಕ್ಷಣವೇ, ನಿಮಗಿಂತ ಕಡಿಮೆ ಅರಿತುಕೊಂಡವರಿಗೆ ಹಂಚಿಕೊಳ್ಳುವುದನ್ನು ಪ್ರಾರಂಭಿಸಿ - ವಿಶೇಷವಾಗಿ ಯಾರು ಪರಿವರ್ತನೆ ಹೊಂದಿಲ್ಲವೋ ಅವರಿಗೆ. ಯಾವಾಗಲೂ ದೇವರ ವಾಕ್ಯವನ್ನು ಹಂಚಿಕೊಳ್ಳಲು ಸಿದ್ಧವಾಗಿರಿ ಮತ್ತು ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಪವಿತ್ರಾತ್ಮನ ಬಲಕ್ಕಾಗಿ ಹುಡುಕಿರಿ.

ಪೌಲನು ತಿಮೊಥೆಯನಿಗೆ ಎರಡು ಕ್ಷೇತ್ರಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದು ಹುರಿದುಂಬಿಸುತ್ತಾನೆ : ಅವು ಯಾವುವೆಂದರೆ, ಆತನ ”ಜೀವಿತ” ಮತ್ತು ಆತನ ”ಬೋಧನೆ”

1 ತಿಮೊಥೆ 4:15 ರಲ್ಲಿ, ಪೌಲನು ತಿಮೊಥೆಯನಿಗೆ ಹುರಿದುಂಬಿಸುವುದೇನೆಂದರೆ, ”ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು” ಎಂಬುದಾಗಿ. ಒಬ್ಬ ವ್ಯವಹಾರಸ್ಥನು ಹಣವನ್ನು ಸಂಪಾದಿಸಲು ಮತ್ತು ತನ್ನ ವ್ಯವಹಾರವನ್ನು ಧೃಢವಾಗಿ ಬೆಳೆಸಲು ತುಂಬಾ ನೋವನ್ನು ತೆಗೆದುಕೊಳ್ಳುತ್ತಾನೆ. ನೀವು ಕ್ರೈಸ್ತ ಜೀವಿತದ ಬಗ್ಗೆ ಗಂಭೀರವುಳ್ಳವರಾಗಿದ್ದರೆ, ದೇವರ ವಾಕ್ಯವನ್ನು ಓದಲು ಹೆಚ್ಚು ನೋವನ್ನು ತೆಗೆದುಕೊಳ್ಳುತ್ತೀರಿ, ಆತ್ಮನ ವರಕ್ಕಾಗಿ ಹುಡುಕುತ್ತೀರಿ ಮತ್ತು ಅಶುದ್ಧವಾಗಿರುವ ಎಲ್ಲಾತರಿಂದ ನಿಮ್ಮ ಜೀವಿತವನ್ನು ತೊಳೆದುಕೊಳ್ಳುತ್ತೀರಿ. ಈ ವಚನದ ಒಂದು ಅನುವಾದವನ್ನು ಈ ರೀತಿಯಾಗಿ ಓದುತ್ತೇವೆ, ”ಅವುಗಳಲ್ಲಿ ಮಗ್ನನಾಗಿರು” ಎಂಬುದಾಗಿ. ಈ ಎಲ್ಲಾ ಸಂಗತಿಗಳಲ್ಲಿ ನೀವು ಮಗ್ನರಾಗಿದ್ದರೆ, ನಿಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.

”ಮಗ್ನರಾಗಿರಿ” ಎಂಬುವುದರ ಕೆಲ ಅರ್ಥದಲ್ಲಿನ ನಕರಾತ್ಮಕ ಉದಾಹರಣೆಯನ್ನು ಕೊಡಲು ಇಚ್ಛಿಸುತ್ತೇನೆ, ಒಂದು ಕುಟುಂಬ ತಮ್ಮ ಮನೆಯಲ್ಲಿ ಜನಪ್ರಿಯ ಕಾರ್ಯಕ್ರಮವೊಂದನ್ನು ದೂರದರ್ಶನದಲ್ಲಿ ನೋಡುತ್ತಿರುತ್ತದೆ ಮತ್ತು ಸಂಪೂರ್ಣವಾಗಿ ಅದರಲ್ಲೇ ಮಗ್ನವಾಗಿರುತ್ತದೆ. ಆ ಮನೆಯವರು ದೂರದರ್ಶನದ ಕಾರ್ಯಕ್ರಮದಲ್ಲಿ ಆವರಿಸಿಕೊಂಡಿದ್ದಾರೆ ಎಂಬುದನ್ನು ಅರಿತ ಕೆಲವು ಕಳ್ಳರು, ನಿಶ್ಯಬ್ದವಾಗಿ ಆ ಮನೆಯೊಳಗೆ ಪ್ರವೇಶಿಸಿ, ಅವರಿಗೆ ಎಷ್ಟು ಸಾಧ್ಯವೋ, ಅಷ್ಟನ್ನು ಕದ್ದುಕ್ಕೊಂಡು ಹೋಗುತ್ತಾರೆ! ಮತ್ತು ದೂರದರ್ಶನದ ಕಾರ್ಯಕ್ರಮವು ಮುಗಿಯುವ ತನಕ ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಆ ಕುಟುಂಬಕ್ಕೆ ಅರಿವೇ ಇರುವುದಿಲ್ಲ.

ಅದೇ ರೀತಿಯಲ್ಲಿ, ಆದರೆ ಒಂದು ಋಣಾತ್ಮಕ ಪರಿಜ್ಞಾನದಲ್ಲಿ ನಾವು ಯೇಸು ಕ್ರಿಸ್ತನೊಟ್ಟಿಗೆ ಮತ್ತು ಆತನ ವಾಕ್ಯದೊಟ್ಟಿಗೆ ಹೆಚ್ಚು ಮಗ್ನರಾಗಿರಬೇಕು ಮತ್ತು ಈ ಲೋಕದ ಶೋಧನೆಗಳು ನಮ್ಮನ್ನು ಹೆಚ್ಚು ಆಕರ್ಷಿಸಬಾರದು ಹಾಗೂ ಈ ಲೋಕದ ಜನರು ಕೆಲವು ಸಂಗತಿಗಳಿಗೆ ಹುಡುಕಿಕೊಂಡು ಹೋಗುವ ಹಾಗೇ ನಾವು ಹುಡುಕಿಕೊಂಡು ಹೋಗಬಾರದು. ನಾವು ಈ ರೀತಿಯ ”ಮಗ್ನ”ವುಳ್ಳಂತ ಜೀವಿತವನ್ನು ಜೀವಿಸುವಾಗ, ನೀವು ಸತತವಾಗಿ ಬೆಳವಣಿಗೆಯನ್ನು, ಅಭಿವೃದ್ದಿಯನ್ನು ಹೊಂದುತ್ತೀರಿ. ಪ್ರತಿ ವರುಷವು ನೀವು ಉತ್ತಮ ಕ್ರೈಸ್ತನಾಗುತ್ತೀರಿ ಮತ್ತು ಕರ್ತನ ಪರಿಣಾಮಕಾರಿಯಾದಂತಹ ಸೇವಕರಾಗುತ್ತೀರಿ.

1 ತಿಮೊಥೆ 4 : 16 ರಲ್ಲಿ, ಪೌಲನು ತಿಮೊಥೆಯನಿಗೆ ಎರಡು ಕ್ಷೇತ್ರಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದು ಹುರಿದುಂಬಿಸುತ್ತಾನೆ : ಅವು ಯಾವುವೆಂದರೆ, ಆತನ ”ಜೀವಿತ” ಮತ್ತು ಆತನ ”ಬೋಧನೆ”. ಈ ಎರಡೂ ಕ್ಷೇತ್ರಗಳನ್ನು ನಾವು ಸತತವಾಗಿ ನೋಡುತ್ತಿರಬೇಕು. ನಮ್ಮ ಜೀವಿತ ಮತ್ತು ನಮ್ಮ ಬೋಧನೆ, ಇವೆರೆಡೂ ಶುದ್ಧವಾಗಿರಬೇಕು. ಪೌಲನು ಹೇಳುವುದೇನೆಂದರೆ, ಈ ಎರಡು ಕ್ಷೇತ್ರಗಳಲ್ಲಿ ನಾವು ಜಯ ಸಾಧಿಸುತ್ತಿದ್ದರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಮತ್ತು ಮತ್ತೊಬ್ಬರನ್ನೂ ಸಹ ರಕ್ಷಿಸುತ್ತೇವೆ. ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಆನಂತರವೇ ನಾವು ಮತ್ತೊಬ್ಬರನ್ನು ರಕ್ಷಿಸಲು ಸಾಧ್ಯ. ಇದರ ಅರ್ಥವೇನೆಂದರೆ : ನಿಮ್ಮನ್ನು ನೀವು ಕೆಲವು ಪಾಪವುಳ್ಳಂತ ಹವ್ಯಾಸಗಳಿಂದ ರಕ್ಷಿಸಿಕೊಳ್ಳುತ್ತಿಲ್ಲ ಎಂದಾದರೆ, ಹೇಗೆ ನೀವು ಮತ್ತೊಬ್ಬರನ್ನು ಅವರ ಪಾಪವುಳ್ಳಂತ ಹವ್ಯಾಸಗಳಿಂದ ರಕ್ಷಿಸುತ್ತೀರಿ? ಹೀಗಿದ್ದಾಗ, ನೀವು ಪರಲೋಕದ ಮತ್ತು ನಿಮ್ಮ ಜೀವಿತದ ಮಟ್ಟವನ್ನು ಬೋಧಿಸಿದರೆ, ನೀವು ಕಪಟಿಗಳಾಗುತ್ತೀರಿ ಮತ್ತು ದೇವರು ನಿಮ್ಮ ಮಾತಿಗೆ ಸಾಕ್ಷಿಯಾಗಿರಲು ಒಪ್ಪುವುದಿಲ್ಲ. ಒಬ್ಬ ವ್ಯವಹಾರಸ್ಥನು ತನ್ನ ವ್ಯವಹಾರವನ್ನು ಮುನ್ನೆಡೆಸಲು ಗಂಭೀರವುಳ್ಳವನಾಗಿರುವಂತೆ, ನಾವು ನಮ್ಮ ಕ್ರೈಸ್ತ ಜೀವಿತದ ಬಗ್ಗೆ ಗಂಭೀರವುಳ್ಳವರಾಗಿರಬೇಕು. ವ್ಯವಹಾರಸ್ಥರು ಲಾಭವನ್ನು ಗಳಿಸುವುದರಲ್ಲಿ ಪೂರ್ಣ ಹೃದಯವುಳ್ಳವರಾಗಿರುತ್ತಾರೆ. ಅದೇ ರೀತಿಯಾಗಿ, ನಾವು ಸಹ, ನಮ್ಮನ್ನ ನಾವು ಪೂರ್ತಿಯಾಗಿ ದೇವರಿಗಾಗಿ ಜೀವಿಸಲು ಮತ್ತು ಆತನಿಗೆ ಸೇವೆ ಮಾಡುವುದಕ್ಕೆ ಒಪ್ಪಿಸಿಕೊಡಬೇಕು.