ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ಮೊಶೆಯು ಆದಿಕಾಂಡ ಬರೆಯುವ ಮುಂಚಿನ 500 ವರ್ಷಗಳ ಹಿಂದೆಯೇ ಯೋಬನ ಪುಸ್ತಕವು ಬರೆಯಲ್ಪಟ್ಟಿದೆ ಮತ್ತು ಇದು ಸತ್ಯವೇದವನ್ನು ಪ್ರೇರೇಪಿಸಲ್ಪಟ್ಟ ಮೊದಲ ಪುಸ್ತಕವಾಗಿದೆ. ಇದರಲ್ಲಿ ”ಆರೋಗ್ಯ ಮತ್ತು ಐಶ್ವರ್ಯ”ವು ದೇವರ ಆಶಿರ್ವಾದದ ಗುರುತು ಎಂಬ ಸುಳ್ಳು ಬೋಧನೆಯ ಮೂಲವನ್ನು ನಾವು ನೋಡುತ್ತೇವೆ (ಇಂದು ಕ್ರೈಸ್ತತ್ವದಲ್ಲಿ ಬಹಳವಾಗಿ ಹರಡಿದೆ).

ಎಲಿಫಜನು, ಬಿಲ್ದದನು ಮತ್ತು ಚೋಫರನು, ಈ ಮೂವರು ಬೋಧಕರು ಯೋಬನ ಬಳಿ ಬಂದು, ಯೋಬನು ಆರೋಗ್ಯ ಮತ್ತು ಐಶ್ವರ್ಯ ಎರಡನ್ನು ಕಳೆದುಕೊಂಡಿರುವುದನ್ನು ನೋಡಿ, ನಿನ್ನ ಜೀವಿತದಲ್ಲಿ ದೇವರ ಆಶಿರ್ವಾದವನ್ನು ಕಳೆದುಕೊಂಡಿದ್ದೀ ಎಂದು ಯೋಬನಿಗೆ ಹೇಳುತ್ತಾರೆ. ದೇವರ ಆಶಿರ್ವಾದವು ಯಾವಾಗಲೂ ಅಭಿವೃದ್ದಿ ಮತ್ತು ಆರೋಗ್ಯವನ್ನು ತರುತ್ತದೆ ಎಂಬುದು ಅವರ ಮೂಲ ಸಂದೇಶವಾಗಿದೆ.

ಆದರೆ ಯೋಬನು ತನ್ನ ಎಲ್ಲಾ ”ಆರೋಗ್ಯ ಮತ್ತು ಐಶ್ವರ್ಯ” ಕಳೆದುಕೊಂಡಿದ್ದರೂ ಸಹ, ಆತನು ದೇವರ ಪರಿಪೂರ್ಣ ಚಿತ್ತದಲ್ಲಿ ನೆಲೆಸಿದ್ದನು (ಯಾಕೋಬ 5:11 ರಲ್ಲಿ ನಾವು ನೋಡುವ ಪ್ರಕಾರ). ಆದರೆ ”ಆರೋಗ್ಯ ಮತ್ತು ಐಶ್ವರ್ಯದ ಸುವಾರ್ತೆ” ಬೋಧಿಸಿದ ಈ ಮೂವರು ಬೋಧಕರು ದೇವರ ಪರಿಪೂರ್ಣ ಚಿತ್ತದ ಹೊರಗೆ ಇದ್ದರು. ಈ ಬೋಧಕರು ಯೋಬನನ್ನು ದೂರುವುದರ ಗುರುತು ಏನಾಗಿತ್ತೆಂದರೆ, ಅವರು ನಿಜವಾಗಿಯೂ ದೂರುಗಾರನಾದ ಸೈತಾನನೊಟ್ಟಿಗೆ ಅನ್ಯೋನ್ಯತೆಯಲ್ಲಿ ಇದ್ದರು (ಪ್ರಕಟನೆ 12:10).

ದೇವರು ಈ ಎಲ್ಲಾ ಬೋಧಕರನ್ನು ಗದರಿಸಿ ಹೇಳಿದ್ದೇನೆಂದರೆ, ”ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ”ಕೋಪ”ಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ”ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ” (ಯೋಬ 42:7).

”ಆರೋಗ್ಯ ಮತ್ತು ಐಶ್ವರ್ಯ” ದೇವರ ಆಶಿರ್ವಾದದ ಗುರುತು ಎಂಬ ಬೋಧನೆಯು ಸಂಪೂರ್ಣ ತಪ್ಪು ಎಂದು ದೇವರು ಆ ಬೋಧಕರಿಗೆ ಹೇಳಿದರು ಮತ್ತು ''ದೇವರು ಸಹ ಇಂದಿನ ”ಆರೋಗ್ಯ ಮತ್ತು ಐಶ್ವರ್ಯದ ಸುವಾರ್ತೆ” ಯನ್ನು ಬೋಧಿಸುವಂತ ಬೋಧಕರುಗಳ ಮೇಲೆ ಇದೇ ಕಾರಣಕ್ಕಾಗಿ ಕೋಪಗೊಳ್ಳುತ್ತಾನೆ : ಅವರ ಬೋಧನೆಯು ತಪ್ಪಾಗಿದೆ”.

ಆ ಮೂವರು ಬೋಧಕರು ಯೋಬನಲ್ಲಿ ಆಡಿದ ಕೆಲವು ಸಂಗತಿಗಳು ನೋಡಲಿಕ್ಕೆ ಸರಿ ಎನ್ನಿಸುತ್ತವೆ. ಆದರೆ ಅವರು ಇನ್ನೂ ತಪ್ಪುಳ್ಳವರಾಗಿದ್ದಾರೆ - ”ಏಕೆಂದರೆ ಆರೋಗ್ಯ ಮತ್ತು ಐಶ್ವರ್ಯವು ದೇವರ ಆಶಿರ್ವಾದದ ಗುರುತು ಎಂದು ಬೋಧಿಸುತ್ತಾರೆ”.

ಮತ್ತೊಬ್ಬ ಬೋಧಕ ಎಲೀಹುನು ಈ ಮೂವರು ಬೋಧಕರುಗಳ ಜೊತೆ ನಂತರ ಸೇರುತ್ತಾನೆ.

ಈ ನಾಲ್ಕು ಬೋಧಕರುಗಳು ಇಂದಿನ ಕ್ರೈಸ್ತತ್ವದಲ್ಲಿನ ನಾಲ್ಕು ಬೋಧಕರುಗಳ ಚಿತ್ರಣವಾಗಿದೆ.

ಮೊದಲ ಬೋಧಕನಾದ ಎಲಿಫಜನು, ದರ್ಶನಗಳು ಮತ್ತು ದೂತರುಗಳ ಮೇಲೆ ಪ್ರಮುಖ ವಿಚಾರವನ್ನು ಹೇಳುತ್ತಿದ್ದನು. ಇಂದು ಸಹ ಈ ರೀತಿಯ ಬೋಧಕರು ಇರುತ್ತಾರೆ, ಅವರು ನೋಡಿದಂತ ದರ್ಶನಗಳು ಮತ್ತು ದೂತರ ಬಗ್ಗೆ ಯಾವಾಗಲೂ ಮಾತಾನಾಡುತ್ತಿರುತ್ತಾರೆ, ಅವರ ಮಾತಿನೊಳಗೆ ಕೆಲವು ”ಅಧಿಕಾರವನ್ನು” ಎತ್ತಿ ಹಿಡಿಯಲು ಪ್ರಯತ್ನಿಸುತ್ತಿರುತ್ತಾರೆ. ಎಲಿಫಜನು ಯೋಬನಿಗೆ ಹೀಗೆ ಹೇಳಿದನು, ”ಒಂದು ಸಂಗತಿಯು ನನಗೆ ರಹಸ್ಯವಾಗಿ ತಿಳಿಯಬಂತು. ಅದು ಗಸುಗಸಿನ ಸದ್ದಾಗಿ ನನ್ನ ಕಿವಿಗೆ ಬಿತ್ತು. ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ ರಾತ್ರಿಯ ಕನಸುಗಳಿಂದ ಯೋಚನೆಗಳಲ್ಲಿರುವಾಗ ನನಗೆ ಎಲುವುಗಳೆಲ್ಲಾ ನಡುಗುವಷ್ಟು ಭಯಂಕರವಾದ ದಿಗಿಲು ಉಂಟಾಯಿತು. ಯಾವದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು ಮೈಯೆಲ್ಲಾ ನಿಲುಗೂದಲಾಯಿತು. ನನ್ನ ಕಣ್ಣು ಮುಂದೆ ಒಂದು ರೂಪವು ಇತ್ತು. ನಿಂತಿದ್ದರೂ ಅದು ಏನೆಂಬದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಿಬಂತು. ಅದೇನೆಂದರೆ - ಮನುಷ್ಯನು ದೇವರ ದೃಷ್ಠಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿ ಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?” (ಯೋಬ 4:12-17).

ಇದು ಪವಿತ್ರಾತ್ಮನು ಎಲಿಫಜನಿಗೆ ಆಡಿದ ಮಾತಲ್ಲ. ಇದು ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನಂತೆ ಬಂದು ”ಆತ್ಮೀಕ ಭಾಷೆಯನ್ನು” ಮಾತಾನಾಡಿದನು (2 ಕೊರಿಂಥ 11:14). ಪವಿತ್ರಾತ್ಮನು ಎಂದಿಗೂ ಯಾರನ್ನೂ ದಿಗಿಲು ಪಡಿಸುವುದಿಲ್ಲ. ಹಾಗಾಗಿ ತಾವು ನೋಡಿದಂತ ದರ್ಶನಗಳು ಮತ್ತು ದೇವದೂತರ ಬಗ್ಗೆ ಮಾತಾನಾಡುವ ಬೋಧಕರುಗಳಿಂದ ಮೋಸ ಹೋಗಬೇಡಿ.

ದರ್ಶನಗಳು ಮತ್ತು ಕನಸ್ಸುಗಳು ”ಮೂರು ಮೂಲ”ಗಳಿಂದ ಬರುತ್ತದೆ.

ಪೌಲನ ಸೇವೆಯು ಕಷ್ಟಗಳ ಮೂಲಕ ಹೊರಹೊಮ್ಮಿತು. ಆತನು ಹೀಗೆ ಹೇಳುತ್ತಾನೆ

ಮೊದಲನೇಯದಾಗಿ : ಪವಿತ್ರಾತ್ಮನು ದಿವ್ಯ ದರ್ಶನಗಳನ್ನು ಮತ್ತು ಕನಸುಗಳನ್ನು ಕೊಡುತ್ತಾನೆ - ಆದರೆ ಅವುಗಳು ಯಾವಾಗಲೂ ದೇವರ ವಾಕ್ಯದೊಟ್ಟಿಗೆ ಸರಿದೂಗುತ್ತವೆ (ಅ.ಕೃತ್ಯಗಳು 2:17). ಯಾರು ನಿಜವಾದ ದಿವ್ಯ ದರ್ಶನವನ್ನು ಸ್ವೀಕರಿಸಿಕೊಂಡಿರುತ್ತಾರೋ, ಅವರು ಅದರ ಬಗ್ಗೆ ಮಾತಾನಾಡಲು ಹಿಂದೆ ಮುಂದೆ ಮಾಡುತ್ತಾರೆ. ಒಂದು ಸಲ ಪೌಲನು ಮೂರನೇ ಆಕಾಶಕ್ಕೆ ಒಯ್ಯಲ್ಪಟ್ಟನು, ಆದರೆ ಆತನು 14 ವರ್ಷಗಳ ಕಾಲ ಅದರ ಬಗ್ಗೆ ಮಾತನಾಡಲಿಲ್ಲ. - ಮತ್ತು ಆತನು ಒಂದು ಸಭೆಗೆ ಮಾತ್ರ ಹೇಳಿದನು ಮತ್ತು ಅದು ಕೂಡ ಏಕೆಂದರೆ, ಅಪೋಸ್ತೊಲನಾಗಿ ಉಪದೇಶಗಳನ್ನು ಬರೆಯಲು ತನ್ನ ಅಧಿಕಾರವನ್ನು ಸ್ಥಾಪಿಸುವ ಸಲುವಾಗಿ (2 ಕೊರಿಂಥ 12:1-4). ಆದರೆ ಪೌಲನು ಹೀಗೆ ಹೇಳುತ್ತಾನೆ, ”ತಾನು ಆ ಮೂರನೇ ಆಕಾಶದಲ್ಲಿ ಏನು ಕೇಳಿಸಿಕೊಂಡನೋ ಅದರ ಬಗ್ಗೆ ಯಾರಿಗೂ ಹೇಳಲು ಅನುಮತಿ ಇರಲಿಲ್ಲ. ನಿಜವಾದ ಆಕಾಶದ ದರ್ಶನವನ್ನು ಹೊಂದಿರುವ ವಿಶ್ವಾಸಿಯ ಗುರುತು ಇದಾಗಿದೆ.

ಎರಡನೇಯದಾಗಿ : ಕೆಲವು ದರ್ಶನಗಳು ಸೈತಾನನ ಮೂಲಗಳಿಂದ ಬರುತ್ತವೆ. ಯಾರು ದರ್ಶನವನ್ನು ಪಡೆದು, ಅದರ ಬಗ್ಗೆ ಜನರ ಎದುರಿಗೆ ಮಾತಾನಾಡಿ, ಅವರಿಂದ ಕೆಲವು ಗೌರವ ಪಡೆದುಕೊಳ್ಳಲು ಆಸೆ ಪಡುವರೋ, ಅವರು ತಮ್ಮನ್ನೇ ತಾವು ಸೈತಾನನಿಗೆ ತೆರೆದುಕೊಳ್ಳುತ್ತಾರೆ, ಆಗ ಸೈತಾನನು ಪ್ರಕಾಶವುಳ್ಳ ದೂತನ ಹಾಗೇ ಬಂದು ಅವರನ್ನು ಮೋಸಗೊಳಿಸುವ ಸಂಬಂಧ ಅನೇಕ ದರ್ಶನಗಳನ್ನು ಕೊಡುತ್ತಾನೆ (ಮತ್ತು ಅವರ ಮೂಲಕ ಮತ್ತೊಬ್ಬರನ್ನು ಮೋಸಗೊಳಿಸುತ್ತಾನೆ)(2 ಕೊರಿಂಥ 11:13-15).

ಮೂರನೇಯದಾಗಿ : ಹೆಚ್ಚಿನ ಸಂಖ್ಯೆಯ ದರ್ಶನಗಳು, ಕೆಲವು ಜನರು ತಾವೇ ಸೃಷ್ಟಿಸಿಕೊಂಡ ಕಲ್ಪನೆಯಿಂದ ಬರುತ್ತವೆ. ಮಾನವರಾಗಿ ನಾವು ಒಂದೊಂದು ರೀತಿಯಲ್ಲಿ ವ್ಯತ್ಯಾಸವುಳ್ಳವರಾಗಿದ್ದೇವೆ - ಮತ್ತು ಕೆಲವರು ಬೇರೆಯವರಿಗಿಂತ ತಾವೇ ಹೆಚ್ಚಾಗಿ ಸೃಷ್ಟಿಸಿಕೊಂಡ ಕಲ್ಪನೆಗಳನ್ನು ಹೊಂದಿರುತ್ತಾರೆ. ಈ ರೀತಿಯ ಜನರು ದರ್ಶನವನ್ನು ಪಡೆದುಕೊಳ್ಳಲು ಕೆಲವು ಕ್ಷಣಗಳು ತಮ್ಮ ಕಣ್ಣಗಳನ್ನು ಮುಚ್ಚಿಕೊಂಡು, ಕಲ್ಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ!! ತಕ್ಷಣವೇ ಅವರು ತಮ್ಮ ಮನಸ್ಸಿನಲ್ಲಿರುವ ಸಂಗತಿಗಳನ್ನು ”ನೋಡಲು” ಮತ್ತು ”ಕೇಳಲು” ಪ್ರಾರಂಭಿಸುತ್ತಾರೆ. ಅವರು ಪ್ರಾಮಾಣಿಕರಿರಬಹುದು, ಆದರೆ ಅವರು ತಮ್ಮ ದರ್ಶನಗಳ ಬಗ್ಗೆ ಮೋಸ ಹೋಗಿದ್ದಾರೆ. ರಾತ್ರಿಯಲ್ಲಿ, ಇಂತಹ ಜನರು ತಮ್ಮ ಸ್ವಂತ ಮನಸ್ಸಿನಿಂದ ಕನಸ್ಸುಗಳನ್ನು ಕಾಣುತ್ತಿರುತ್ತಾರೆ! ನಮ್ಮ ಮಾತಿನಲ್ಲಿನ ಅಧಿಕಾರವು ಬರೆಯಲ್ಪಟ್ಟ ದೇವರ ವಾಕ್ಯದಿಂದ ಬರಬೇಕೆ ಹೊರತು ಯಾವುದೇ ಖಾಸಗಿ ಪ್ರಕಟನೆ ಅಥವಾ ದರ್ಶನಗಳು ಅಥವಾ ಕನಸುಗಳಿಂದ ಬರಬಾರದು, ಹಾಗೂ ಇವುಗಳು ದೇವರಿಂದ ಬಂದವುಗಳು ಎಂದು ಕಲ್ಪಿಸಿಕೊಳ್ಳಬಾರದು.

ಎರಡನೇ ಬೋಧಕನಾದ ಬಿಲ್ದದನು ತಂದೆಗಳ ಸಂಪ್ರಾದಯವನ್ನು ಹಿಂಭಾಲಿಸುವುದರಲ್ಲಿ ನಂಬಿಕೆ ಇಟ್ಟವನಾಗಿದ್ದನು. ಆತನು ಹೀಗೆ ಹೇಳುತ್ತಾನೆ, ”ದಯಮಾಡಿ ಪೂರ್ವಿಕರನ್ನು ವಿಚಾರಿಸಿ ಅವರ ಪಿತೃಗಳು ಕಂಡುಕೊಂಡದ್ದಕ್ಕೂ ಮನಸ್ಸಿಡು. ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು; ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ. ಅವರು ನಿನಗೆ ಬೋಧಿಸಿ ಬುದ್ಧಿ ಹೇಳಿ ಮನ:ಪೂರ್ವಕವಾಗಿ ಮಾತಾಡುವದಿಲ್ಲವೋ?” (ಯೋಬನು 8:8-10). ಈತನು, ಇಂದಿನ ಕ್ರೈಸ್ತತ್ವದಲ್ಲಿ ಕಂಡು ಬರುವ ಮತ್ತೊಂದು ಪ್ರಸಂಗಿಗಳ ಗುಂಪಿನ ತರದವನಾಗಿದ್ದನು. ಈ ಜನರು ”ತಮ್ಮ ಸಭೆಯಲ್ಲಿ” ತಮ್ಮ ಪೂರ್ವಿಕರಿಂದ ನೂರಾರು ವರ್ಷಗಳ ಹಿಂದೆ ಪಡೆದುಕೊಂಡ ಯಾವುದೇ ಸಂಪ್ರಾದಯಗಳಿಗೆ ತೊಂದರೆ ಕೊಡಲು ಹೋಗುವುದಿಲ್ಲ. ಅದು ತಪ್ಪಾಗಿರಲಿ ಅಥವಾ ಸರಿಯಾಗಿರಲಿ. ಅವರಿಗೆ ದರ್ಶನಗಳು ಅಥವಾ ಕನಸ್ಸುಗಳು ಬೇಕಾಗಿಲ್ಲ ಮತ್ತು ಯಾವುದೇ ಬದಲಾವಣೆ ಸಹ ಬೇಕಾಗಿಲ್ಲ. ಅವರು ಹಡಗನ್ನು ಒಡೆಯಲು ಹೋಗುವುದಿಲ್ಲ ಮತ್ತು ಹಡಗು ತಪ್ಪಾದ ದಿಕ್ಕಿಗೆ ಹೋಗುತ್ತಿದ್ದರೂ, ಹಡಗಿನ ದಿಕ್ಕನ್ನೂ ಸಹ ಬದಲಿಸಲು ಹೋಗುವುದಿಲ್ಲ!! ಬಿಲ್ದದನು ಸಾತ್ವಿಕತ್ವ ಮನುಷ್ಯ. ಆದರೂ ಯೋಬನನ್ನು ದೂರಿದನು. ಇಲ್ಲಿ ಅನೇಕ ಜನರು ನಿಜವಾಗಿ ನೋವು ಮಾಡುವಂತ ಸಂಗತಿಗಳನ್ನು ಮೃದುವಾಗಿ ಹೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ! ಅವರ ಮಾತುಗಳು ನಯವಾಗಿ ಇರುತ್ತವೆ, ಆದರೆ ಅವರು ಹಾವಿನ ವಿಷದ ಹಲ್ಲನ್ನು ತಮ್ಮಲ್ಲಿ ಹೊಂದಿರುತ್ತಾರೆ. ಗಂಡ ಮತ್ತು ಹೆಂಡತಿಯರು ಕೆಲವೊಮ್ಮೆ ನಯವಾದ ಮಾತುಗಳನ್ನು ಒಬ್ಬರಿಗೊಬ್ಬರು ಆಡುತ್ತಾರೆ, ಆದರೆ ಅದು ಜೋರಾಗಿ ಹೇಳುವುದಕ್ಕಿಂತ ಹೆಚ್ಚು ನೋವು ಮಾಡುವುದಾಗಿರುತ್ತದೆ, ಅವು ಕೋಪದ ಮಾತುಗಳು.

ಮೂರನೇ ಬೋಧಕನಾದ ಚೋಫರನು ಎಲ್ಲದರ ಬಗ್ಗೆ ಕೋಪಗೊಳ್ಳುವ ಮತ್ತು ಕಠಿಣವಾಗಿರುವುದರೊಂದಿಗೆ ಹುಳುಕು ಹಿಡಿಯುವುದರಲ್ಲಿ ನಂಬಿಕೆ ಇಟ್ಟಿರುತ್ತಾನೆ. ಈತನೊಬ್ಬನೇ ಯೋಬನನ್ನು ಬಹಳ ಕಠಿಣ ಮಾತುಗಳಿಂದ ನೋಯಿಸಿದವನು. ಈತನು ಯೋಬನನ್ನು ”ಹರಟೇಮಲ್ಲ” ಎಂದು ಕರೆಯುತ್ತಾನೆ (ಯೋಬನು 11:2,12). ಈತನು, ”ಪ್ರವಾದಿಗಳೆಂದು ತಮಗೆ ತಾವೇ ನಿರ್ಧರಿಸಿದಂತಹ” ಕೆಲವರ ಪ್ರತಿನಿಧಿಯಾಗಿದ್ದು, ಅವರು ಇಂದಿನ ಆಧುನಿಕ ಎಲೀಯ ಮತ್ತು ಸ್ನಾನಿಕನಾದ ಯೋಹಾನ ಎಂದು ಕಲ್ಪಿಸಿಕೊಂಡವರಾಗಿರುತ್ತಾರೆ. ಅವರು ನೋಡುವಂತಹ ಪ್ರತಿಯೊಂದರಲ್ಲಿ ಹುಳುಕು ಹುಡುಕುತ್ತಾರೆ ಮತ್ತು ಎಲ್ಲರನ್ನು ನಿರಂತರವಾಗಿ ನೋಯಿಸುತ್ತಿರುತ್ತಾರೆ. ಯೇಸು ಸಹ ಫರಿಸಾಯರನ್ನು ಟೀಕೆ ಮಾಡಿದರು. ಆದರೆ ಯೇಸುವಿನದು ಅಭಿಷೇಕಿಸಲ್ಪಟ್ಟ ಟೀಕೆಯಾಗಿದೆ ಮತ್ತು ಪ್ರಾಪಂಚಿಕ ಟೀಕೆಯಾಗಿರಲಿಲ್ಲ. ಯೇಸು ಫರಿಸಾಯರನ್ನು ”ಸರ್ಪ ಜಾತಿಯವರೇ” ಎಂದು ಕರೆದರು ಮತ್ತು ಪೌಲನು ಒಬ್ಬ ಮನುಷ್ಯನನ್ನು ”ನೀತಿಗೆ ಶತ್ರುವಾಗಿರುವಾತನೇ” ಎಂದು ಕರೆದನು. ಆದರೆ ದೇವರು ಅವರ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತಿದ್ದರು. ಹೇಗಾದರಾಗಲಿ, ದೇವರಿಂದ ಅಭಿಷೇಕಿಸಲ್ಪಡದಂತ ಕೆಲವರು ತಪ್ಪಾಗಿ ಮಾತನಾಡುತ್ತಾರೆ. ದೇವರು ಅವರಿಗೆ ಬೆಂಬಲ ಕೊಡುವುದಿಲ್ಲ. ಚೋಫರನು ”ತಾನಾಗೇ ನೇಮಕವಾದಂತಹ ಬೋಧಕನಾಗಿದ್ದನು'' (ಯಾಕೋಬ 3:1), ಇವನು ಗಡುಸಾದ, ಕಠಿಣವಾದ ಪದಗಳನ್ನು ಉಪಯೋಗಿಸಿ ಯೋಬನನ್ನು ಟೀಕಿಸಿದನು. ಆತನು, ತಾನು ನೀತಿಗೆ ಪರಿಣಾಮಕಾರಿಯಾಗಿ ಭಕ್ತಿಹೊಂದಿದ್ದ ಮನುಷ್ಯನು ಎಂದು ತನ್ನನ್ನ ತಾನೇ ತೋರ್ಪಡಿಸಿಕೊಳ್ಳುತ್ತಿದ್ದನು. ಆದರೆ ಆತನು ಹೇಳುವುದರಲ್ಲಿ ಅಭಿಷೇಕ ಇರುತ್ತಿರಲಿಲ್ಲ.

ನಾಲ್ಕನೇ ಬೋಧಕನಾದ ಎಲೀಹು ಒಬ್ಬ ಯೌವನಸ್ಥ ಛಲವಾದಿಯಾಗಿದ್ದನು ಮತ್ತು ಬಾಧೆ ಪಡುವುದರಲ್ಲಿ ಹಾಗೂ ಸಂಕಟಗಳಲ್ಲಿ ಯಾವ ವೈಯುಕ್ತಿಕ ಅನುಭವವನ್ನು ಹೊಂದಿರಲಿಲ್ಲ. ಆತನು ಯೌವನಸ್ಥ ಮತ್ತು ಮಾತುಗಾರನಾಗಿದ್ದನು. ಆದರೆ ಅನುಭವ ವಿರಲಿಲ್ಲ (ಯೋಬನು 32:6, 18). ಈತನು ಮಿಕ್ಕ ಮೂವರು ಬೋಧಕರುಗಳಿಗಿಂತ ಉತ್ತಮನಾಗಿದ್ದನು. ದೇವರು ಮಿಕ್ಕ ಬೋಧಕರುಗಳ ವಿಷಯವಾಗಿ ಕೋಪವಿದ್ದಂತೆ, ಇವನ ಬಗ್ಗೆ ಕೋಪಗೊಂಡಿರಲಿಲ್ಲ, ಏಕೆಂದರೆ ಎಲೀಹುವಿನ ಆತ್ಮವು ಕೆಟ್ಟದ್ದಾಗಿರಲಿಲ್ಲ. ಎಲೀಹು ಅದ್ಬುತ ಸತ್ಯಗಳನ್ನು ಬೋಧಿಸುವಂತ ಬೋಧಕರುಗಳ ಪ್ರತಿನಿಧಿಯಾಗಿದ್ದನು. ಆದರೆ ಆಳವಾದ ನೀರಿನಂತ ಬಾಧೆಗಳ ಮತ್ತು ಕಷ್ಟಗಳ ಮೂಲಕ ಹಾದು ಹೋಗಿರಲಿಲ್ಲ. ಇವರು ಧರ್ಮಶ್ರದ್ದೆಯುಳ್ಳ ಜನರಾಗಿದ್ದರು ಮತ್ತು ತಮಗೆ ಅನುಭವ ವಿಲ್ಲದ ಬಗ್ಗೆ ಇರುವ ವಿಷಯಗಳ ಮೇಲೆ ಮತ್ತೊಬ್ಬರಿಗೆ ಸಲಹೆ ಕೊಡಲು ಸಿದ್ದರಿರುತ್ತಿದ್ದರು.

ಪೌಲನ ಸೇವೆಯು ಕಷ್ಟಗಳ ಮೂಲಕ ಹೊರಹೊಮ್ಮಿತು. ಆತನು ಹೀಗೆ ಹೇಳುತ್ತಾನೆ, ”ನಾನು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದೆನು, ಬಾಧೆಗಳನ್ನು ಅನುಭವಿಸಿದೆನು, ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿದ್ದೆನು, ಇಂತಹ ಸಮಯಗಳಲ್ಲಿ ದೇವರು ನನಗೆ ಬಲವನ್ನು ಕೊಟ್ಟನು, ಇದನ್ನೇ ನಾನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ” (2 ಕೊರಿಂಥ 1:4-8), ಎಲ್ಲಾ ಒಟ್ಟಾಗಿ ಇದೊಂದು ಭಿನ್ನವುಳ್ಳ ಸೇವೆಯಾಗಿತ್ತು. ಇದು ಅನುಭವದಿಂದ ಬಂದಿತು ಮತ್ತು ಅದೇ ರೀತಿಯಾಗಿ ನಮ್ಮ ಸೇವೆಯು ಇರಬೇಕು.

ಈ ನಾಲ್ಕು ಬೋಧಕರುಗಳು ”ಆರೋಗ್ಯ ಮತ್ತು ಐಶ್ವರ್ಯ” ವನ್ನು ಬೋಧಿಸುವ ಬೋಧಕರುಗಳಾಗಿದ್ದರು. ಎಲೀಹು ಮಿಕ್ಕ ಬೋಧಕರುಗಳಿಗಿಂತ ಸ್ವಲ್ಪ ಕಡಿಮೆಯುಳ್ಳವನಾಗಿದ್ದನು. ಆದರೆ ಯೊಬನ ಬಳಿ ಆ ಸಮಯದಲ್ಲಿ ಸತ್ಯವೇದ ಇಲ್ಲದಿದ್ದರೂ ಸಹ, ಇವರೆಲ್ಲರುಗಳಿಂದ ಮೋಸ ಹೋಗಲಿಲ್ಲ. ಹೇಗಿದ್ದರೂ ಇಂದು, ಹೆಚ್ಚಿನ ವಿಶ್ವಾಸಿಗಳು ತಮ್ಮೊಟ್ಟಿಗೆ ಸತ್ಯವೇದವನ್ನು ಹೊಂದಿದ್ದರೂ ಸಹ ಆಧುನಿಕ ”ಆರೋಗ್ಯ ಮತ್ತು ಐಶ್ವರ್ಯವನ್ನು ಬೋಧಿಸುವಂತ ಬೋಧಕರುಗಳಿಂದ” ಮೋಸ ಹೋಗಿದ್ದಾರೆ.

ಯಾರಿಗೆ ಕಿವಿ ಇದೆಯೋ, ಅವರು ಕೇಳಿಸಿಕೊಳ್ಳಲಿ.