ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಶಿಷ್ಯಂದಿರಿಗೆ
WFTW Body: 

ಮಲಾಕಿ 2:15 ರಲ್ಲಿ ದೇವರು ಮನುಷ್ಯನನ್ನು ಮತ್ತು ಆತನ ಹೆಂಡತಿಯನ್ನು ಉಂಟು ಮಾಡಿದ್ದು ಏಕೆ ಎಂಬುದಾಗಿ ಓದುತ್ತೇವೆ, ಏಕೆಂದರೆ ಇವರುಗಳ ಮೂಲಕ ದೇವರು ದೈವಿಕ ಮಕ್ಕಳನ್ನು ಸ್ವೀಕರಿಸಿಕೊಳ್ಳುವ ಸಲುವಾಗಿ ಅವರನ್ನು ಉಂಟು ಮಾಡಿದನು. ಯಾರು ಬೇಕಾದರೂ ಮಕ್ಕಳನ್ನು ಬೆಳೆಸಬಹುದು. ಆದರೆ ಯೇಸುವಿನ ಶಿಷ್ಯನು ಮಾತ್ರ ದೈವಿಕ ಮಕ್ಕಳನ್ನು ಎಬ್ಬಿಸುತ್ತಾನೆ. ದೈವಿಕ ಮಕ್ಕಳನ್ನು ಎಬ್ಬಿಸುವುದಕ್ಕೆ ಬೇಕಾದ ಮೊದಲ ಅಗತ್ಯತೆ ಏನೆಂದರೆ, ಪೋಷಕರಾದ ಇಬ್ಬರಲ್ಲಿ ಒಬ್ಬರು ಯೇಸುವಿನ ಮನಪೂರ್ವಕವಾದಂತ ಶಿಷ್ಯರಾಗಿರಬೇಕು. ಅಂದರೆ ಅವನು/ಅವಳು ತನ್ನ ಹೃದಯದಿಂದ ಕರ್ತನನ್ನು ಪ್ರೀತಿಸುವವರಾಗಿರಬೇಕು. ಅರ್ಧ ಹೃದಯವುಳ್ಳಂತ ಕ್ರೈಸ್ತರು ದೈವಿಕ ಮಕ್ಕಳನ್ನು ಎಬ್ಬಿಸಲು ಆಗುವುದಿಲ್ಲ. ಎರಡನೇ ಮುಖ್ಯವಾದ ಅಗತ್ಯತೆ ಏನೆಂದರೆ ಗಂಡ ಮತ್ತು ಹೆಂಡತಿಯರ ನಡುವೆ ಐಕ್ಯತೆ ಇರಬೇಕು. ಗಂಡ ಹೆಂಡತಿಯರಲ್ಲಿ ಒಬ್ಬರು ಶಿಷ್ಯರಾಗಿಲ್ಲ ಅಂದರೂ ಸಹ ಐಕ್ಯತೆಯಿಂದ ಇರುವುದು ಸಾಧ್ಯವಾಗದೇ ಇರಬಹುದು. ನಂತರ ಆತನ / ಆಕೆಯ ಮಕ್ಕಳಿಗಾಗಿ ಮತ್ತೊಬ್ಬ ಸಂಗಾತಿಯು (ಶಿಷ್ಯರಾದಂತವರು) ಮಾತ್ರ ಸೈತಾನನ ವಿರುದ್ಧವಾಗಿ ಹೋರಾಟ ಮಾಡಬೇಕಾಗುತ್ತದೆ. ಆದರೆ ಇಬ್ಬರೂ ಮನ:ಪೂರ್ವಕವಾಗಿದ್ದರೆ, ಕೆಲಸವು ತುಂಬಾ ಸುಲಭವಾಗುತ್ತದೆ. ಇದಕ್ಕಾಗಿ ಮೊದಲು ಸಂಗಾತಿಯನ್ನು ನಿಮ್ಮ ಬಾಳಲ್ಲಿ ಸರಿಯಾಗಿ ಆರಿಸಿಕೊಳ್ಳುವುದು ತುಂಬಾ ಮಹತ್ವವಾಗಿದೆ. ಗಂಡ ಮತ್ತು ಹೆಂಡತಿ ಯಾವಾಗಲೂ ಜಗಳ ಆಡಿಕೊಂಡು, ಒಬ್ಬರಿಗೊಬ್ಬರು ದೂಷಿಸುತ್ತಿದ್ದರೆ, ಮಕ್ಕಳನ್ನು ದೈವಿಕ ಮಾರ್ಗದಲ್ಲಿ ಬೆಳೆಸುವುದು ತುಂಬಾ ಕಠಿಣವಾಗುತ್ತದೆ. ನೀವು ದೈವಿಕ ಮನೆಯನ್ನು ಕಟ್ಟಬೇಕೆಂದರೆ, ಏನೇ ಆಗಲಿ ನಿಮ್ಮ ಗಂಡ/ಹೆಂಡತಿಯೊಟ್ಟಿಗೆ ಐಕ್ಯತೆಯನ್ನು ಹುಡುಕಿ. ಇದರ ಫಲಿತಾಂಶ, ನಿಮ್ಮ ಹಕ್ಕುಗಳನ್ನು ಬಿಟ್ಟುಕೊಡುವ ಸಂದರ್ಭ ಬಂದರೂ ಸಹ ಐಕ್ಯತೆಯನ್ನು ಹುಡುಕಿ. ಮುಂದೆ ಒಂದು ದಿನ ನಿಮ್ಮ ಮಕ್ಕಳು ಕರ್ತನನ್ನು ಹಿಂಬಾಲಿಸುವುದನ್ನು ನೀವು ನೋಡುವಾಗ, ತುಂಬಾ ದೂರದ ಜೀವನವೆಂಬ ಓಟದಲ್ಲಿ ಐಕ್ಯತೆ ಎಂಬುದು ಬೆಲೆಯುಳ್ಳದ್ದಾಗಿದೆ ಎಂಬುದನ್ನು ಕಂಡುಕೊಳ್ಳುತ್ತೀರಿ. ಇಬ್ಬರು ಶಿಷ್ಯಂದಿರ ನಡುವಿನ ಐಕ್ಯತೆಯಲ್ಲಿ ಮಹತ್ತರವಾದ ಶಕ್ತಿಯುಂಟು. ಮತ್ತಾಯ 18:18-20 ರಲ್ಲಿ ಯೇಸು ಈ ರೀತಿ ಹೇಳಿದ್ದಾರೆ - ಇಬ್ಬರು ಶಿಷ್ಯಂದಿರು ಇಹಲೋಕದಲ್ಲಿ ಐಕ್ಯತೆಯಿಂದ ಇರುವಾಗ, ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಚಟುವಟಿಕೆಗಳನ್ನು ಬಂಧಿಸುವ ಅಧಿಕಾರವನ್ನು ಹೊಂದಿರುತ್ತಾರೆ (ಎಫೆಸ 6:12). ಈ ರೀತಿಯಾಗಿ ನಾವು ಕೆಟ್ಟ ಆತ್ಮಗಳನ್ನು ನಮ್ಮ ಕುಟುಂಬಗಳಿಂದ ಮತ್ತು ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ದೂರವಿಡಬಹುದು. ಎಫೆಸ 5:22 ರಿಂದ 6:9 ರಲ್ಲಿ, ಪವಿತ್ರಾತ್ಮನು ಕುಟುಂಬ ಸಂಬಂಧಗಳ ಬಗ್ಗೆ ಮಾತನಾಡುತ್ತಾನೆ - ಅಂದರೆ ಗಂಡ ಮತ್ತು ಹೆಂಡತಿಯರ ನಡುವಿನ ಸಂಬಂಧ, ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧ, ಸೇವಕರು ಮತ್ತು ಯಜಮಾನರ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾನೆ. ಇದಾದ ನಂತರ ತಕ್ಷಣದಲ್ಲಿ (10ನೇ ವಚನದಿಂದ) ಪವಿತ್ರಾತ್ಮನು ಅಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ವಿರುದ್ಧ ಹೋರಾಡುವುದರ ಬಗ್ಗೆ ಮಾತನಾಡುತ್ತಾನೆ. ಇದು ನಮಗೆ ತಿಳಿಸುವುದಾದರೂ ಏನು? ಅದು ಇದಾಗಿದೆ - ಸೈತಾನನ ಆಕ್ರಮಣವು ಪ್ರಾಥಮಿಕವಾಗಿ ಕುಟುಂಬ ಸಂಬಂಧಗಳಲ್ಲಿ ಇರುತ್ತದೆ. ಸೈತಾನನ್ನು ನಾವು ಮೊದಲು ಇಲ್ಲಿಯೇ ಜಯಿಸಬೇಕು.

ಗಂಡ ಹೆಂಡತಿಯರು ಒಬ್ಬರಿಗೊಬ್ಬರು ಜಗಳವಾಡುವಾಗ, ಸೈತಾನನಿಗೆ ತಾವು ಬಾಗಿಲನ್ನು ತೆರೆದು (ಅವರು ತಮ್ಮ ನಡುವೆ ಸೃಷ್ಠಿ ಮಾಡಿಕೊಂಡ ಅಂತರದ ಮೂಲಕ) ಅವರ ಕುಟುಂಬವನ್ನು ಪ್ರವೇಶಿಸುವಂತೆ ಮತ್ತು ಅವರ ಮಕ್ಕಳ ಮೇಲೆ ಆಕ್ರಮಣ ಮಾಡುವಂತೆ ಸೈತಾನನಿಗೆ ಆಹ್ವಾನಿಸುತ್ತಾರೆ ಎಂಬುದಾಗಿ ಗ್ರಹಿಸಿಕೊಳ್ಳುವುದಿಲ್ಲ. ತನ್ನ ಪೋಷಕರಿಗೆ ಒರಟಾಗಿ ಮಾತಾಡಿ ತಿರುಗಿ ಬೀಳುವಂತ ಮಗುವು, ಈ ಸೋಂಕನ್ನು ತನ್ನ ತಾಯಿಯು ತನ್ನ ಗಂಡನಿಗೆ ಅದೇ ರೀತಿ ಒರಟು ಮಾತಾಡಿರುವುದರಿಂದ ಅಥವಾ ತನ್ನ ತಂದೆಯು ಕೆಲವು ಕ್ಷೇತ್ರದಲ್ಲಿ ಕರ್ತನ ವಿರುದ್ಧ ತಿರುಗಿ ಬಿದ್ದಿರುವ ಮೂಲಕ ಪಡೆದುಕೊಂಡಿರಬಹುದು. ಮೊದಲನೆಯದಾಗಿ ತನ್ನ ಪೋಷಕರು ನಡೆದುಕೊಂಡ ರೀತಿಯನ್ನು ನೋಡಿ, ಅದನ್ನೇ ಕಲಿತುಕೊಂಡ ಬಡಪಾಯಿ ಮಕ್ಕಳನ್ನು ದೂಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ!! ಮೊದಲು ಪೋಷಕರು ಮಾನಾಸಾಂತರ ಪಡಬೇಕು. ನಿಮ್ಮ ಮನೆಯ ಗಾತ್ರ ಮತ್ತು ಸುಂದರತೆ ಅಥವಾ ಒಳಗಿರುವ ವಸ್ತುಗಳಿಗಿಂತ ಮನೆಯಲ್ಲಿನ ಐಕ್ಯತೆಯು ಬಹು ಮುಖ್ಯವಾದದ್ದು. ಮೊದಲನೆಯದಾಗಿ ಕರ್ತನ ಶಿಷ್ಯಂದಿರಾಗಿದ್ದುಕೊಂಡು, ಗುಡಿಸಲಿನಲ್ಲಿ ಜೀವಿಸಿದರೂ ಸಹ, ಅಂತಹ ಕುಟುಂಬದಲ್ಲಿ ದೇವರ ಪ್ರಭಾವವು ಪ್ರಕಟವಾಗುತ್ತದೆ. ಯೇಸುವಿನ ನಿಜವಾದ ಶಿಷ್ಯನು ಏದೇನ್ ತೋಟದಲ್ಲಿದ್ದಂತ ಆದಮ ಮತ್ತು ಹವ್ವಳಿಂದ ತಗಲಿದ ಸೋಂಕಿನಿಂದ ಪಡೆದ ”ಮತ್ತೊಬ್ಬರನ್ನು ದೂಷಿಸುವಂತದ್ದರ” ಭಯಾನಕ ಖಾಯಿಲೆಯಿಂದ ಬಿಡುಗಡೆ ಹೊಂದುತ್ತಾನೆ. ಆದಾಮನು ಹವ್ವಳ ಪಾಪಕ್ಕಾಗಿ ಆಕೆಯನ್ನು ದೂಷಿಸಿದನು ಮತ್ತು ಹವ್ವಳು ಸರ್ಪವನ್ನು ದೂಷಿಸಿದಳು. ”ಆತ್ಮದಲ್ಲಿ ಬಡವರಾಗಿರುವವನಿಗೆ” ದೇವರ ರಾಜ್ಯವು ಸೇರಿದ್ದಾಗಿದೆ (ಮತ್ತಾಯ 5:3) ಮತ್ತು ಆತ್ಮದಲ್ಲಿ ಬಡವರಾಗಿರುವವರ ಮೊದಲ ಗುಣಲಕ್ಷಣವೇನೆಂದರೆ, ಮೊದಲನೆಯದಾಗಿ ತನ್ನ ಸ್ವಂತ ಸೋಲಿನ ಮತ್ತು ಅಗತ್ಯತೆಯ ಅರಿವನ್ನು ಹೊಂದಿರುವುದಾಗಿದೆ. ಗಂಡ ಮತ್ತು ಹೆಂಡತಿ ಇಬ್ಬರು ಆತ್ಮದಲ್ಲಿ ಬಡವರಾಗಿದ್ದರೆ, ತಮ್ಮ ಮನೆಯನ್ನು ಈ ಭೂಲೋಕದಲ್ಲಿ ಪರಲೋಕದ ರುಚಿಯನ್ನಾಗಿ ಪರಿವರ್ತಿಸಬಹುದು. ಅಂತಹ ಮನೆಯಲ್ಲಿ ಇಬ್ಬರು ತಮ್ಮನ್ನು ತಾವು ತೀರ್ಪು ಮಾಡಿಕೊಳ್ಳುತ್ತಿರುತ್ತಾರೆ ಮತ್ತು ಒಬ್ಬರನ್ನೊಬ್ಬರು ದೂಷಿಸುತ್ತಿರುವುದಿಲ್ಲ. ಆಗ ಸೈತಾನನು ಅವರ ಮನೆಗೆ ಪ್ರವೇಶವನ್ನು ಹೊಂದಲು ಯಾವುದೇ ಮಾರ್ಗವಿಲ್ಲದಂತಾಗುತ್ತದೆ. ಅಂತಹ ಮನೆಯಲ್ಲಿ ಮಕ್ಕಳು ಎಂತಹ ಆಶಿರ್ವಾದವನ್ನು ಹೊಂದುತ್ತಾರೆ ಎಂಬುದನ್ನು ನೀವು ಕಲ್ಪಿಸಿಕೊಳ್ಳುವಿರಾ?

”ಹೊರಗಡೆ ಕೆಲಸಕ್ಕೆ ಹೋಗುವಂತ ತಾಯಂದಿರ” ಬಗ್ಗೆ ನಾನು ಒಂದು ಮಾತನ್ನು ಹೇಳಬಯಸುತ್ತೇನೆ. ನಮ್ಮ ಈ ದಿನಮಾನ ಮತ್ತು ಕಾಲದಲ್ಲಿ, ದುರದೃಷ್ಟವಷತ್ ಕೆಲವು ಪಟ್ಟಣಗಳಲ್ಲಿ ಕೆಲಸಕ್ಕೆ ಹೋಗುವ ಅಗತ್ಯತೆ ಇರುತ್ತದೆ. ಏಕೆಂದರೆ ಜೀವನವು ದುಬಾರಿಯಾಗಿರುವುದರಿಂದ, ಕೆಲಸಕ್ಕೆ ಹೋಗುವ ತಾಯಂದಿರ ಮನಸ್ಸಿನಲ್ಲಿ ನಿರ್ಧಿಷ್ಟ ವಿಚಾರಗಳು ಹುಟ್ಟಿಕೊಂಡಿರುತ್ತವೆ. ತೀತ 2:5 ರಲ್ಲಿ ಸ್ತ್ರೀಯರಿಗೆ ದೇವರ ಚಿತ್ತವೇನೆಂದು ನಮಗೆ ತಿಳಿಸಲಾಗಿದೆ - ಅದೇನೆಂದರೆ ”ಅವರು ಮನೆಯಲ್ಲಿ ಕೆಲಸಗಾರರಾಗಿರಬೇಕು” ಎಂಬುದಾಗಿ, ಮೊದಲನೆಯದಾಗಿ, ಯಾವ ತಾಯಿಯು ಸಹ ಮನೆಯ ಜವಬ್ದಾರಿಗಳನ್ನು ನಿರ್ಲಕ್ಷ್ಯ ಮಾಡಿ, ಹೊರಗಡೆಯ ವೃತ್ತಿಯನ್ನು ಹುಡುಕುವವರಾಗಿರಬಾರದು. ಕ್ರಮವಾಗಿ, ದೇವರು, ಗಂಡ ಮತ್ತು ಆಕೆಯ ಮಕ್ಕಳು, ಆಕೆಯ ಭಕ್ತಿ ಹಾಗೂ ಪ್ರೀತಿಯಲ್ಲಿ ಪ್ರಥಮವಾಗಿರಬೇಕು. ಆಕೆಯ ಕೆಲಸವು (ಆಕೆ ಯಾವುದಾದರೂ ಒಂದನ್ನು ಇದರಲ್ಲಿ ಆರಿಸಿಕೊಳ್ಳಬೇಕು ಎಂದರೆ) ಮೇಲೆ ತಿಳಿಸಿರುವಂತೆ ಮೂರಕ್ಕಿಂತ ನಾಲ್ಕನೆ ಪ್ರಾಧ್ಯಾನ್ಯತೆಯನ್ನು ಪಡೆದುಕೊಂಡಿರಬೇಕು. ಮದುವೆಯಾದಂತಹ ಸ್ತ್ರೀಯು ಮನೆಯಲ್ಲಿ ಮಕ್ಕಳನ್ನು ಹೊಂದಿಲ್ಲವೆಂದರೆ, ಕೆಲಸಕ್ಕೆ ಹೋಗಬಹುದು, ಅಲ್ಲಿ ಹೆಚ್ಚು ಸಮಸ್ಯೆ ಇರುವುದಿಲ್ಲ. ಈ ದಿನಮಾನಗಳಲ್ಲಿ, ಸ್ತ್ರೀಯರು ಸಣ್ಣ ಮಕ್ಕಳೊಟ್ಟಿಗೆ ಹೊರಗಡೆ ಉದ್ಯೋಗಕ್ಕೆ ಯಾಕೆ ಹೋಗುತ್ತಾರೆ ಎಂಬುದಕ್ಕೆ ಸಾಮಾನ್ಯವಾಗಿ ಎರಡು ಕಾರಣಗಳಿವೆ - 1) ಬದುಕು ಕಟ್ಟಿಕೊಳ್ಳಲು - ಗಂಡನ ಆದಾಯವು ಕುಟುಂಬದ ಅಗತ್ಯತೆಯನ್ನು ಮುಟ್ಟುತ್ತಿಲ್ಲವೆಂದಾದಲ್ಲಿ. 2) ಐಷರಾಮಿ ಜೀವನ ಸಾಗಿಸಲು, ಏಕೆಂದರೆ ಗಂಡ ಹೆಂಡತಿಯು ಉನ್ನತ ಮಟ್ಟದ ಜೀವನ ನಡೆಸಲು ಅನುಕೂಲವಾಗುವಂತೆ. ನೀವು ದೇವರ ಎದುರಿಗೆ ಯಥಾರ್ಥವಾಗಿ ಈ ರೀತಿ ಹೇಳುತ್ತೀರಾ, ನಿಮ್ಮ ಪ್ರಕರಣದಲ್ಲಿ ಬದುಕು ಕಟ್ಟಿಕೊಳ್ಳುವುದಾಗಿದ್ದರೆ, ನೀವು ನಿಶ್ಚಯ ಪಡಿಸಿಕೊಳ್ಳಬೇಕು - ದೇವರು ನಿಮ್ಮ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಕೃಪೆಯನ್ನು ಕೊಡುತ್ತಾನೆ ಎಂಬುದಾಗಿ. ಇದು ಬಿಟ್ಟು ನಿಜವಾದ ಕಾರಣ ಐಷರಾಮಿ ಜೀವನ ಸಾಗಿಸುವುದಾಗಿದ್ದರೆ, ನಾನು ನಿಮಗೆ ಎಚ್ಚರ ಕೊಡುತ್ತೇನೆ - ನೀವು ನಿಜವಾದ ಅಪಾಯದಲ್ಲಿದ್ದೀರಿ. ಅನೇಕ ವರುಷಗಳ ನಂತರ ಮಾತ್ರವೇ ನೀವು ಬಿತ್ತಿದ್ದನ್ನು ಕೊಯ್ಯುತ್ತೀರಿ, ಅಂದರೆ ಪರಿಣಾಮಗಳನ್ನು ಎದುರಿಸುತ್ತೀರಿ. ನಿಮ್ಮ ಮಕ್ಕಳು ಮನೆಯನ್ನು ಬಿಟ್ಟಾಗ ಮತ್ತು ಅವರು ಹಟಮಾರಿಯಾದಾಗ ಮತ್ತು ದೇವರಿಗೆ ಪ್ರಯೋಜನಕ್ಕೆ ಬಾರದೇ ಇರುವಾಗ ನೀವು ಸಾಗಿಸಿದ ಜೀವನದ ಪರಿಣಾಮ ನಿಮಗೆ ಅರ್ಥವಾಗುತ್ತದೆ. ಆದರೆ ಆಗ ಇದನ್ನು ಸರಿಪಡಿಸಲು ತುಂಬಾ ತಡವಾಗುತ್ತದೆ. ನಾನು ಏನನ್ನು ಅಭ್ಯಾಸ ಮಾಡಿದ್ದೇನೋ ಅದನ್ನೇ ಬೋಧನೆ ಮಾಡುತ್ತಿದ್ದೇನೆ. ದೇವರು ಇದಕ್ಕೆ ಸಾಕ್ಷಿಯಾಗಿದ್ದಾನೆ. ನನ್ನ ಹೆಂಡತಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು, 1969 ರಲ್ಲಿ ನಮ್ಮ ಮೊದಲ ಮಗು ಹುಟ್ಟಿದ ಸಮಯದಲ್ಲಿ, ನಮ್ಮ ಆದಾಯವು ತೀರಾ ಕಡಿಮೆ ಇತ್ತು, ಒಂದು ತಿಂಗಳು ಬಿಟ್ಟು ಮತ್ತೊಂದು ತಿಂಗಳು ಒಂದು ಆದಾಯವನ್ನು ಸ್ವೀಕರಿಸಿಕೊಳ್ಳುತ್ತಿದ್ದೆವು ಮತ್ತು ನಾವು ಯಾವುದೇ ಉಳಿತಾಯವನ್ನು ಹೊಂದಿರಲಿಲ್ಲ. ಆದರೆ ನಾವು ನಿರ್ಧರಿಸಿದ್ದೇನೆಂದರೆ - ನನ್ನ ಹೆಂಡತಿಯು ಉದ್ಯೋಗವನ್ನು ಬಿಟ್ಟು ಮನೆಯಲ್ಲಿದ್ದುಕೊಂಡು ಕುಟುಂಬವನ್ನು ನೋಡಿಕೊಳ್ಳಬೇಕು ಎಂಬುದಾಗಿ. ನಂತರದ 28 ವರ್ಷಗಳು ಆಕೆ ಉದ್ಯೋಗಕ್ಕೆ ಹೋಗಲಿಲ್ಲ. ಆಕೆಯು ಮನೆಯಲ್ಲಿದ್ದುಕೊಂಡು, ನಮ್ಮ ಮಕ್ಕಳು ಕರ್ತನನ್ನು ಹಿಂಭಾಲಿಸುವಂತೆ ಮತ್ತು ಪ್ರೀತಿಸುವಂತೆ ನೋಡಿಕೊಂಡಳು. ಇದರ ಫಲಿತಾಂಶವೇನು? ಇಂದು, ನಾವು ಸಂತೋಷ ಪಡ್ತಿವಿ, ನಮ್ಮ ಎಲ್ಲಾ ನಾಲ್ಕು ಮಕ್ಕಳು ಹೊಸದಾಗಿ ಹುಟ್ಟಿದ್ದಾರೆ, ದೀಕ್ಷಾಸ್ನಾನ ಹೊಂದಿದ್ದಾರೆ, ಕರ್ತನನ್ನು ಹಿಂಭಾಲಿಸುತ್ತಿದ್ದಾರೆ ಮತ್ತು ಆತನಿಗೆ ಸಾಕ್ಷಿಗಳಾಗಿದ್ದಾರೆ. ಆ ಒಂದು 28 ವರ್ಷದಲ್ಲಿ ನನ್ನ ಹೆಂಡತಿಯು ಲಕ್ಷ ಲಕ್ಷ ಸಂಪಾದನೆ ಮಾಡುವುದಕ್ಕಿಂತ ಈ ಆಶೀರ್ವಾದವು ತುಂಬಾ ದೊಡ್ಡದು. ಇವತ್ತು ಈ ವಿಷಯವಾಗಿ ನಾವು ಯಾವುದೇ ವಿಷಾದವನ್ನು ಹೊಂದಿಲ್ಲ. ಈ ಕ್ಷೇತ್ರದಲ್ಲಿ ದೇವರ ಚಿತ್ತವನ್ನು ಹುಡುಕುತ್ತಿರುವಂತ ತಾಯಂದಿರಿಗೆ ನಾವು ನಮ್ಮ ಸಾಕ್ಷಿಯನ್ನು ಕೊಡುತ್ತಿದ್ದೀವಿ.

ನಿಜವಾದ ಶಿಷ್ಯನು - ತನ್ನ ಮನೆಯೊಳಗೆ ತರುವಂತ ಪುಸ್ತಕ ಮತ್ತು ಮಾಸಿಕ ಪತ್ರಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಾನೆ ಮತ್ತು ದೂರದರ್ಶನದಲ್ಲಿ ನೋಡುವಂತ ವಿವಿಧ ಕಾರ್ಯಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಾನೆ, ತನ್ನ ಕುಟುಂಬದ ಸದಸ್ಯರು ಇವುಗಳನ್ನು ನೋಡುವ ವಿಷಯದಲ್ಲಿ ಗಂಡನು ಮನೆಯ ಮುಖ್ಯಸ್ಥನಾಗಿದ್ದುಕೊಂಡು ತನ್ನ ಕುಟುಂಬವನ್ನು ಲೋಕಕ್ಕೆ ಸಂಬಂಧಪಟ್ಟ ಯಾವುದು ಸಹ ಪ್ರವೇಶ ಹೊಂದದಂತೆ ಕುಟ್ಟುನಿಟ್ಟಾದ ಬಾಗಿಲು ಕಾಯುವವನಾಗಿರುತ್ತಾನೆ. ಅದು ಯಾವ ರೀತಿ ಎಂದರೆ - ಒಂದು ಫ್ಯಾಕ್ಟರಿಯಲ್ಲಿ ಉತ್ಪಾದಿಸುವಂತ ಮತ್ತು ಪರೀಶಿಲಿಸುವಂತ ವಿಭಾಗದಲ್ಲಿ ಮುಖ್ಯಸ್ಥನಾಗಿರುವಂತೆ ಇರುತ್ತಾನೆ. ತಮ್ಮ ಮಕ್ಕಳು ಕರ್ತನ ಶಿಷ್ಯಂದಿರಾಗಬೇಕು ಎಂದು ಬಯಸುವ ಪೋಷಕರು - ತಮ್ಮ ಮಕ್ಕಳಿಗೆ ಹುಚ್ಚಾಟಿಕೆ ಮತ್ತು ಅಲಾಂಕರಿಕವಾದಂತವುಗಳನ್ನು ಕೊಡುವವರಾಗಿರಬಾರದು, ಇಂತಹ ವಿಷಯಗಳು ಪ್ರೀತಿಗಾಗಿ ಮಾಡುವಂತದ್ದಲ್ಲ. ಆದರೆ ಮೂರ್ಖತನದಿಂದ ಮತ್ತು ಕರ್ತನಿಗೆ ಅಪನಂಬಿಗಸ್ಥಿಕೆಯಿಂದ ಮಾಡುವಂತದ್ದಾಗಿದೆ. ಯಾವುದೇ ಸಭೆಯ ಶಕ್ತಿಯು ಸಭೆಯ ಸದಸ್ಯರ ಮನೆಯ ಬಲಗಳಲ್ಲಿ ಕಂಡುಕೊಳ್ಳುವಂತದ್ದಾಗಿದೆ. ಕುಟುಂಬಗಳು ಬಲಹೀನವಾಗಿದ್ದರೆ, ಸಭೆಯು ಸಹ ಬಲಹೀನವಾಗಿರುತ್ತದೆ. ಇದು ಸಭೆಯಲ್ಲಿ ಕೂಗಿ ಶಬ್ದ ಮಾಡುವಂತದ್ದಲ್ಲ ಅಥವಾ ಇಂಪಾದ ಹಾಡುಗಳನ್ನು ಹಾಡುವಂತದ್ದಲ್ಲ ಅಥವಾ ಒಳ್ಳೇಯ ಬೋಧನೆಯು ಸಹ ಸಭೆಯ ಶಕ್ತಿಯನ್ನು ಬಿಂಬಿಸುವುದಿಲ್ಲ. ಆದರೆ ಮನೆಯ ದೈವಿಕತೆಯು ಸಭೆಯನ್ನು ರಚಿಸುತ್ತದೆ. ನಮ್ಮ ಭಾಗದಲ್ಲಿ ನಾವು ಮೊದಲು ಕುಟುಂಬಗಳನ್ನು ಕಟ್ಟೋಣ, ನಂತರ ನಮ್ಮ ಕರ್ತನನ್ನು ಮಹಿಮೆ ಪಡಿಸೋಣ.