WFTW Body: 

ಎಲೀಯನ ಮೇಲಿದ್ದ ಅಭಿಷೇಕಕ್ಕಾಗಿ ಎಲೀಷನು ಬಾಯರಿಕೆಯುಳ್ಳವನಾಗಿದ್ದನು ಮತ್ತು ಈ ಲೋಕದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಅಭಿಷೇಕವನ್ನೇ ಬಯಸಿದನು. 2 ಅರಸುಗಳು 2:1-10 ರಲ್ಲಿ, ಈ ಒಂದು ವಿಷಯಕ್ಕೆ ಎಲೀಯನು ಎಲೀಷನನ್ನು ಹೇಗೆ ಪರೀಕ್ಷಿಸಿದನು ಎಂಬುದನ್ನು ನಾವು ಓದಬಹುದು. ಎಲೀಯನು ಎಲೀಷನಿಗೆ ಮೊದಲು ಹೇಳಿದ್ದೇನೆಂದರೆ, ಗಿಲ್ಗಾಲಿನಿಂದ ಹೋಗುತ್ತಿದ್ದಾಗ, ಗಿಲ್ಗಾಲಿನಲ್ಲಿಯೇ ಉಳಿದುಕೊಳ್ಳುವಂತೆ ಹೇಳಿದನು. ಆದರೆ ಎಲೀಷನು ಎಲೀಯನನ್ನು ಬಿಟ್ಟು ಹೋಗಲು ನಿರಾಕರಿಸಿದನು. ನಂತರ ಎಲೀಯನು ಆತನನ್ನು 15 ಕಿ.ಮೀ ಪಶ್ಚಿಮದ ಬೇತೇಲಿಗೆ ನಡೆಸಿದನು ಮತ್ತು 12 ಕಿ.ಮೀ ಹಿಂದಕ್ಕೆ ಯರಿಕೋವಿಗೆ ಮತ್ತು ಮುಂದೆ 5 ಕಿ.ಮೀ ಪೂರ್ವದ ಯೋರ್ದನಿಗೆ ನಡೆಸಿದನು, ಈ ಪ್ರತಿ ಹಂತದಲ್ಲೂ ಎಲೀಯನು ಎಲೀಷನ ಛಲವನ್ನು ಮತ್ತು ಶ್ರದ್ಧೆಯನ್ನು ಪರೀಕ್ಷಿಸಿದನು. ಕೊನೆಯದಾಗಿ, ಎಲೀಯನು ಆತನಿಗೆ, ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು ಎಂದು ಹೇಳಿದಾಗ, ಎಲೀಷನು ಹೇಳಿದ್ದೇನೆಂದರೆ, ”ನನಗೆ ಒಂದು ಸಂಗತಿ ಮಾತ್ರ ಬೇಕು. ಅದಕ್ಕಾಗಿಯೇ ನಾನು ನಿನ್ನನ್ನು ಎಲ್ಲಾ ಸಮಯದಲ್ಲಿಯೂ ಹಿಂಬಾಲಿಸುತ್ತಿದ್ದೇನೆ. ಅದಕ್ಕಾಗಿಯೇ ನೀನು ನನ್ನನ್ನು ಪರೀಕ್ಷಿಸಿ, ಅಲುಗಾಡಿಸಲು ಪ್ರಯತ್ನಿಸಿದರೂ, ನಾನು ನಿನ್ನನ್ನು ಬಿಟ್ಟು ಹೋಗುತ್ತಿಲ್ಲ. ನಿನ್ನ ಆತ್ಮವು ನನಗೆ ಎರಡರಷ್ಟಾಗಿ ಆಗಲಿ ಎಂದು ಹೇಳಿದನು”. ಎಲೀಷನು ಮನ:ಪೂರ್ವಕವಾಗಿ ಎಲೀಯನ ಅಭಿಷೇಕವನ್ನು ಬಯಸಿದನು. ಆತನು ಯಾವುದರಿಂದಲೂ ಸಹ ತೃಪ್ತಿ ಹೊಂದಲು ತಯಾರು ಇರಲಿಲ್ಲ ಮತ್ತು ಆತನು ಏನು ಕೇಳಿದನೋ, ಅದನ್ನು ಪಡೆದುಕೊಂಡನು.

ನಾನು ನಂಬುತ್ತೇನೆ, ದೇವರು ನಮ್ಮನ್ನು ಕೆಲವೊಮ್ಮೆ ಈ ರೀತಿಯಾಗಿ ನಡೆಸುತ್ತಾನೆ ಎಂಬುದಾಗಿ, ಎಲೀಯನು ಎಲೀಷನನ್ನು ನಡೆಸಿದ ರೀತಿಯಲ್ಲಿ, ನಾವು ಆತನ ಪವಿತ್ರಾತ್ಮನ ಪೂರ್ಣ ಅಭಿಷೇಕಕ್ಕಿಂತ ಕಡಿಮೆಯುಳ್ಳ ಯಾವುದರಲ್ಲಿಯಾದರೂ ತೃಪ್ತಿ ಹೊಂದುತ್ತೇವಾ ಎಂಬುದನ್ನು ನಮ್ಮನ್ನು ಪರೀಕ್ಷೆ ಮಾಡುತ್ತಾನೆ. ನಾವು ಪವಿತ್ರಾತ್ಮನ ಅಭಿಷೇಕಕ್ಕಿಂತ ಕಡಿಮೆ ಇರುವ ಯಾವುದಾದರಲ್ಲಿಯೂ ನಾವು ತೃಪ್ತಿ ಹೊಂದಿದರೆ, ನಾವು ಅಷ್ಟನ್ನೇ ಹೊಂದುತ್ತೇವೆ. ದೇವರು ತನ್ನ ಅಭಿಷೇಕವನ್ನು ಸ್ವಯಂ ಸಂತೃಪ್ತಿ ಮತ್ತು ನೆಮ್ಮದಿಯನ್ನು ಬಯಸಿ, ಅಭಿಷೇಕದ ಹೊರತಾಗಿಯೂ ನಾನು ಮುಂದೆ ಹೋಗುತ್ತೇನೆ ಎಂದು ಅಂದುಕೊಳ್ಳುವ ವಿಶ್ವಾಸಿಗೆ ಕೊಡುವುದಿಲ್ಲ.

ಆದರೆ ಎಲ್ಲದಕ್ಕಿಂತ ಮೇಲಾಗಿ ಈ ಒಂದು ಸಂಗತಿಯ ಅಗತ್ಯತೆ ನಮಗೆ ಇದೆ ಎಂಬುದನ್ನು ನಾವು ಗ್ರಹಿಸಿಕೊಳ್ಳುವುದಾದರೆ, ಎಲೀಷನು ಅದನ್ನು ಪಡೆದುಕೊಳ್ಳುವ ತನಕ ಹಿಂಬಾಲಿಸಿದ ರೀತಿಯಲ್ಲಿ, ನಾವು ಸಹ ಅದಕ್ಕಾಗಿ ಹಿಂಬಾಲಿಸಲು ಮನಸ್ಸು ಮಾಡುವುದಾದರೆ, ಯಾಕೋಬನು ಪೆನಿಯಾಲ್ ನಲ್ಲಿ ಹೇಳಿದ ಹಾಗೇ, ನಾವು ಸಹ ಪ್ರಾಮಾಣಿಕತೆಯಿಂದ, ”ಕರ್ತನೇ, ನೀನು ಇದರಿಂದ ನನ್ನನ್ನು ಆಶಿರ್ವದಿಸದೆ ಹೋದರೆ, ನಾನು ನಿನ್ನನ್ನು ಬಿಡುವುದಿಲ್ಲ ಎಂದು ಹೇಳುವುದಾದರೆ”,ಪವಿತ್ರಾತ್ಮನ ಬಲಕ್ಕಾಗಿ ಹಂಬಲಿಸಿ, ಬಯಸಿದರೆ, ಈ ಪುನರುತ್ಥಾನದ ಬಲವನ್ನು ನಾವು ಬಯಸುವುದಾದರೆ, ನಾವು ನಿಜವಾಗಿಯೂ ಪವಿತ್ರಾತ್ಮನ ಅಭಿಷೇಕವನ್ನು ಪಡೆದುಕೊಳ್ಳುತ್ತೇವೆ. ನಂತರ ನಾವು ನಿಜವಾಗಿಯೂ ದೇವರೊಟ್ಟಿಗೆ ಮತ್ತು ಮನುಷ್ಯರೊಟ್ಟಿಗಿನ ಬಲವನ್ನು ಹೊಂದಿದ ಇಸ್ರಾಯೇಲ್ಯರ ರೀತಿ ಆಗುತ್ತೇವೆ.

ನಮಗೆ ಅಭಿಷೇಕದ ಅವಶ್ಯಕೆತೆ ಎಷ್ಟಿದೆ ಎಂಬುದನ್ನು ತೋರಿಸುವ ಸಲುವಾಗಿ, ದೇವರು ನಮ್ಮ ಜೀವಿತದೊಳಗೆ ಸೋಲು, ಹತಾಶೆಗಳನ್ನು ಅನುಮತಿಸುತ್ತಾನೆ. ಮನಸ್ಸಿಲ್ಲದಿದ್ದರೂ ಸಿದ್ದಾಂತವನ್ನು ಸಾರುವುದರಲ್ಲಿ ನಾವು ಸುವಾರ್ತಿಕರಾಗಿದ್ದೀವಿ ಮತ್ತು ಇಷ್ಟವಿಲ್ಲದಿದ್ದರೂ ಪವಿತ್ರಾತ್ಮನಿಂದ ನಾವು ಜೀವಿಸುತ್ತಿದ್ದೀವಿ ಹಾಗೂ ದೇವರ ಆತ್ಮವು, ಬಲದಲ್ಲಿ ನಮ್ಮ ಮೇಲೆ ವಿಶ್ರಮಿಸಿಕೊಳ್ಳುತ್ತದೆ ಎಂಬುದನ್ನು ನಾವು ಅರಿತುಕೊಂಡು ಅದನ್ನು ನಾವು ಗ್ರಹಿಸಿಕೊಳ್ಳುವಂತೆ, ದೇವರು ಏನಾದರೂ ಒಂದು ಸಂದರ್ಭವನ್ನು ನಮ್ಮ ಜೀವಿತದಲ್ಲಿ ಬರಮಾಡುತ್ತಾನೆ.

”ಕರ್ತನೇ, ನಾನು ನನ್ನ ಜೀವಿತದಲ್ಲಿ ಏನನ್ನೇ ಕಳೆದುಕೊಂಡರೂ, ಅಭಿಷೇಕವನ್ನು ಕಳೆದುಕೊಳ್ಳದ ಹಾಗೇ ಸಹಾಯಿಸು”

ಅಭಿಷೇಕವನ್ನು ಹೊಂದಿಕೊಳ್ಳುವುದು ಸುಲಭದ ವಿಷಯವಲ್ಲ. ಎಲೀಯನು ಎಲೀಷನ ಕೋರಿಕೆಯನ್ನು ಕೇಳಿದಾಗ, ಆತನು ಈ ರೀತಿಯಾಗಿ ಹೇಳಲಿಲ್ಲ, ”ಹೋ, ಎಂತಹ ಸುಲಭದ ಸಂಗತಿಯನ್ನು ನೀನು ಕೇಳಿದೆಯಲ್ಲ. ನೀನು ಕೇವಲ ಮೊಣಕಾಲೂರು, ನಾನು ನನ್ನ ಕೈಯನ್ನು ನಿನ್ನ ತಲೆಯ ಮೇಲೆ ಇಡುತ್ತೇನೆ, ಆಗ ನೀನು ಅದನ್ನು ಪಡೆದುಕೊಳ್ಳುತ್ತೀ” ಎಂದು ಹೇಳಲಿಲ್ಲ. ಇಲ್ಲ. ಎಲೀಯನು ಎಲೀಷನಿಗೆ, ''ನೀನು ಕಠಿಣವಾದದ್ದನ್ನು ಕೇಳಿದಿ” ಎಂಬುದಾಗಿ ಹೇಳಿದನು. ಹೌದು, ಇದು ಕಠಿಣವಾದದ್ದು. ಇದಕ್ಕಾಗಿ ನಾವು ಬೆಲೆಯನ್ನು ತೆತ್ತಬೇಕು. ಇದಕ್ಕಾಗಿ ನಾವು ಲೋಕದಲ್ಲಿನ ಎಲ್ಲವನ್ನೂ ಮರೆಯಲು ಮನಸ್ಸುಳ್ಳವರಾಗಿರಬೇಕು.

ನಾವು ಅಭಿಷೇಕವನ್ನು ಲೋಕದಲ್ಲಿನ ಎಲ್ಲಾ ಸಂಗತಿಗಳಿಗಿಂತ ಹೆಚ್ಚಾಗಿ, ಅಂದರೆ, ಹಣಕ್ಕಿಂತ, ನೆಮ್ಮದಿಗಿಂತ, ಆಶಾಪಾಶಗಳಿಗಿಂತ, ಖ್ಯಾತಿಗಿಂತ, ಜನಪ್ರಿಯತೆಗಿಂತ ಮತ್ತು ಕ್ರೈಸ್ತ ಕೆಲಸದಲ್ಲಿನ ಯಶಸ್ಸಿಗಿಂತ, ಅಭಿಷೇಕವನ್ನು ಬಯಸಬೇಕು. ಹೌದು, ಇದನ್ನು ನಿಜವಾಗಿ ಹೊಂದುವುದು ಕಠಿಣ ಸಂಗತಿಯಾಗಿದೆ. ಆದರೆ ಬಾಯರಿಕೆಯ ಅರ್ಥ ಇದುವೇ ಆಗಿದೆ. ನಾವು ಈ ಹಂತವನ್ನು ತಲುಪಿದಾಗ, ನಾವು ಯೇಸುವಿನ ಬಳಿ ಹೋಗಿ, ಕುಡಿಯಬೇಕು, ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ನಮ್ಮ ಮೂಲಕ ಜೀವಕರವಾದ ನೀರಿನ ಹೊಳೆಗಳು ಅನೇಕ ದಿಕ್ಕುಗಳಿಂದ ಹರಿಯುವವು, ಅವು ಹರಿಯುವ ಸ್ಥಳಗಳಲ್ಲಿ ಸತ್ತಂತ ಪ್ರತಿಯೊಂದು ಬದುಕುವವು (ಯೋಹಾನ 7:37-39; ಯೆಹೆಜ್ಕೇಲ 47: 8,9)

ನಾವು ಅಭಿಷೇಕವನ್ನು ಹೊಂದಿದ್ದರೆ, ಎಂತಹ ಸಂದರ್ಭ ಬಂದರೂ ಅದನ್ನು ಕಳೆದುಕೊಳ್ಳದ ಹಾಗೇ ಎಚ್ಚರಿಕೆಯುಳ್ಳವರಾಗಿರಬೇಕು. ನಾವು ಅದನ್ನು ಪಡೆದುಕೊಳ್ಳಲುಬಹುದು ಮತ್ತು ನಾವು ಎಚ್ಚರಿಕೆಯುಳ್ಳವರಾಗಿಲ್ಲವಾದರೆ, ಅದನ್ನು ಕಳೆದುಕೊಳ್ಳಲು ಬಹುದು. ಕರುಣೆ ಇಲ್ಲದಂತೆ ಮತ್ತೊಬ್ಬರನ್ನು ಟೀಕೆ ಮಾಡುವುದರಲ್ಲಿ ಆಸೆ ಪಟ್ಟರೆ ಅಥವಾ ನಮ್ಮ ಸಂಭಾಷಣೆಯಲ್ಲಿ ಹತೋಟಿ ಇಲ್ಲದೇ ಇದ್ದರೆ ಅಥವಾ ಅಶುದ್ಧವಾದ ಕಲ್ಪನೆಗಳಲ್ಲಿ ನಾವು ತೊಡಗಿದ್ದರೆ ಅಥವಾ ಗರ್ವಕ್ಕೆ ನಮ್ಮಲ್ಲಿ ಆಶ್ರಯ ಕೊಟ್ಟರೆ ಅಥವಾ ನಮ್ಮ ಹೃದಯದಲ್ಲಿ ಹಗೆತನವಿದ್ದರೆ, ಆಗ ಅಭಿಷೇಕವು ನಮ್ಮಿಂದ ಹೊರಟು ಹೋಗುತ್ತದೆ.

1 ಕೊರಿಂಥ 9:27 ರಲ್ಲಿ ಅಪೋಸ್ತಲನಾದ ಪೌಲನು ಈ ರೀತಿಯಾಗಿ ಹೇಳಿದ್ದಾನೆ, ”ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ”. ನಾನು ನಂಬುತ್ತೇನೆ, ಪೌಲನು ಇಲ್ಲಿ ತಾನು ಅಭಿಷೇಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಉಲ್ಲೇಖಿಸಿದ್ದಾನೆ ಎಂಬುದಾಗಿ. ತನ್ನ ರಕ್ಷಣೆಯನ್ನು ಕಳೆದುಕೊಳ್ಳುವುದಲ್ಲ, ಆದರೆ ತನ್ನ ಅಭಿಷೇಕವನ್ನು ಕಳೆದುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದಾನೆ. ಅಪೊಸ್ತಲನಾದ ಪೌಲನು, ಅನೇಕ ಸಭೆಗಳನ್ನು ಸ್ಥಾಪಿಸಿದ ನಂತರ, ಅನೇಕ ಅದ್ಬುತ ಕಾರ್ಯಗಳನ್ನು ಮಾಡಿದ ನಂತರ ಮತ್ತು ದೇವರಿಗಾಗಿ ಅದ್ಬುತವಾಗಿ ಉಪಯೋಗಿಸಲ್ಪಟ್ಟ ನಂತರ, ತನ್ನ ಅಜಾಗರುಕತೆಯಿಂದ ಅಭಿಷೇಕವನ್ನು ಕಳೆದುಕೊಳ್ಳುವ ಅಪಾಯದಲ್ಲಿ ನಿಂತಿದ್ದಾನೆ ಎಂಬ ಅಚ್ಚರಿಯು ನನಗೆ ಆಗದೇ ಇರದು. ಹಾಗಿದ್ದಲ್ಲಿ ನಾವು ಎಲ್ಲಿ ನಿಲ್ಲುತ್ತೇವೆ? ನಾವು ಸತತವಾಗಿ ಈ ರೀತಿ ಪ್ರಾರ್ಥಿಸಬೇಕು, ”ಕರ್ತನೇ, ನಾನು ನನ್ನ ಜೀವಿತದಲ್ಲಿ ಏನನ್ನೇ ಕಳೆದುಕೊಂಡರೂ, ಅಭಿಷೇಕವನ್ನು ಕಳೆದುಕೊಳ್ಳದ ಹಾಗೇ ಸಹಾಯಿಸು”.