ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ಯೇಸು ಸ್ಪಷ್ಟವಾಗಿ ಉಲ್ಲೇಖಿಸಿರುವುದೇನೆಂದರೆ, ”ಹಣವನ್ನು ಉಪಯೋಗಿಸುವುದರಲ್ಲಿ ಯಾರು ನಂಬಿಗಸ್ಥರಾಗಿರುವರೋ, ಅವರು ಮಾತ್ರ ಆತ್ಮೀಕ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ” (ಲೂಕ 16:11) ಎಂಬುದಾಗಿ. ಹಲವು ಸಹೋದರ ಮತ್ತು ಸಹೋದರಿಯರು ಆತ್ಮೀಕ ಬಡವರಾಗಿದ್ದಾರೆ, ಅದಕ್ಕೆ ಕಾರಣ ಏನೆಂದರೆ, ಅವರು ಹಣವನ್ನು ಉಪಯೋಗಿಸುವುದರಲ್ಲಿ ಅಪನಂಬಿಗಸ್ಥರಾಗಿರುವುದರಿಂದ. ಇಂದಿನ ದಿನಮಾನಗಳಲ್ಲಿ ಅನೇಕರು ಕೊಡುವಂತ ಸಂದೇಶಗಳಲ್ಲಿ ಅಭಿಷೇಕದ ಕೊರತೆ ಇರುವುದಕ್ಕೆ ಇದೇ ಕಾರಣವಾಗಿದೆ.

ರೋಮ 13:8 ರಲ್ಲಿ ಹೇಳಿರುವ - ”ಬೇರೆ ಯಾವ ಸಾಲವೂ ನಿಮಗೆ ಇರಬಾರದು” ಎಂಬ ಆದೇಶಕ್ಕೆ ಎಲ್ಲಾ ವಿಶ್ವಾಸಿಗಳು ವಿಧೇಯರಾಗುವುದನ್ನು ಮೊದಲು ಕಲಿತುಕೊಳ್ಳಬೇಕು.

”ಸಾಲ ಮಾಡಬೇಡಿ” ಎಂದು ಸತ್ಯವೇದವು ಹೇಳಿಲ್ಲ. ನಿಮಗೆ ತುರ್ತು ಅವಶ್ಯವಿದ್ದಲ್ಲಿ, ಸಾಲ ಮಾಡಿದರೆ, ಅದು ಪಾಪವಲ್ಲ. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ನೀವು ಆ ಸಾಲವನ್ನು ಹಿಂತಿರುಗಿಸಬೇಕು - ಏಕೆಂದರೆ ’’ಸಾಲದಲ್ಲಿಯೇ ಉಳಿಯುವುದು ಪಾಪವಾಗಿದೆ”. ”ಸಾಲಗಾರನು ಸಾಲಕೊಟ್ಟವನಿಗೆ ಸೇವಕ” (ಜ್ಞಾನೋಕ್ತಿಗಳು 22:7). ತನ್ನ ಮಕ್ಕಳು ಮತ್ತೊಬ್ಬರಿಗೆ ಸೇವಕರಾಗುವುದನ್ನು ದೇವರು ಬಯಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಎಷ್ಟು ಸಾಧ್ಯವೋ ಅಷ್ಟು ಬೇಗ ನಿಮ್ಮ ಸಾಲವನ್ನು ತೀರಿಸಿರಿ, ಸ್ವಲ್ಪ ಸ್ವಲ್ಪವಾಗಿಯಾದರೂ ಪರವಾಗಿಲ್ಲ. ಆತನ ವಾಕ್ಯಕ್ಕೆ ನೀವು ವಿಧೇಯರಾಗುವಂತ ಹೃದಯವನ್ನು ಹೊಂದಿದ್ದೀರಾ ಎಂದು ದೇವರು ನೋಡುತ್ತಾರೆ, ಕಂತಿನ ರೂಪದಲ್ಲಿ ನೀವು ಕೊಡಲು ನಿಮ್ಮ ಬಳಿ ಸ್ವಲ್ಪ ಹಣವಿದ್ದರೂ ಪರವಾಗಿಲ್ಲ, ನಿಮ್ಮ ಸಾಲವನ್ನು ತೀರಿಸಿ (2 ಕೊರಿಂಥ 8:12).

6 ತಿಂಗಳಿಗಿಂತ ಹೆಚ್ಚು ಕಾಲ ನಿಮ್ಮ ಸಾಲ ಹಾಗೇ ಉಳಿದಿದ್ದರೆ, ಆಗ ನೀವು ಆ ಹಣಕ್ಕೆ ವಾರ್ಷಿಕ ಬ್ಯಾಂಕ್ ಬಡ್ಡಿಯನ್ನು ಸೇರಿಸಿ ಕೊಡಬೇಕು, ಸಾಲವನ್ನು ಹಿಂತಿರಿಗಿಸುವಾಗ (ಜಕ್ಕಾಯನು ಮಾಡಿದ ಹಾಗೇ ಲೂಕ 19:8). ಈ ರೀತಿ ಮಾಡುವಂತದ್ದು ನೀತಿಯುಳ್ಳದ್ದಾಗಿದೆ.

ಎಲ್ಲಾ ಸಭಾ ಹಿರಿಯರ ಜವಾಬ್ದಾರಿ ಏನಾಗಿರಬೇಕೆಂದರೆ, ತಮ್ಮ ಸಭೆಯ ಸದಸ್ಯರಿಗೆ, ಸಾಲ ದಿಂದ ಮುಕ್ತರಿರುವಂತೆ ದೇವರ ಎದುರಿಗೆ ಬೋಧಿಸಬೇಕು. ವ್ಯಭಿಚಾರವೆಂಬ ಪಾಪದಲ್ಲಿ ವಿಶ್ವಾಸಿಗಳು ಇರುವುದನ್ನು ದೇವರು ಎಷ್ಟು ನಿಷೇಧಿಸುತ್ತಾರೋ, ಅಷ್ಟೇ ಹೆಚ್ಚಿನ ಶಿಸ್ತಿನಿಂದ ಸಾಲವೆಂಬ ಪಾಪದಿಂದಲೂ ಸಹ ವಿಶ್ವಾಸಿಗಳನ್ನು ದೂರವಿರಿಸುವುದು ಅವಶ್ಯಕವಾಗಿದೆ !

(ಸೂಚನೆ : ಮನೆ ಮೇಲಿನ ಸಾಲ ಅಥವಾ ಕಾರ್ ಅಥವಾ ಸ್ಕೂಟರ್ ಮೇಲಿನ ಸಾಲವನ್ನು ದೇವರು ಸಾಲವೆಂದು ಪರಿಗಣಿಸುವುದಿಲ್ಲ, ಏಕೆಂದರೆ ಇಲ್ಲಿ ಮನೆ (ಅಥವಾ ವಾಹನ) ಸಾಲಕ್ಕೆ ಗುರುತಾಗಿದೆ - ಅದು ಸಾಲದ ಕ್ರಯವನ್ನು ತೀರಿಸುತ್ತದೆ. ವ್ಯಾಪಾರಕ್ಕೆ ಸಂಬಂಧಪಟ್ಟ ಸಾಲವೂ ಸಹ ಕೆಲವೊಂದು ಪ್ರಕರಣದಲ್ಲಿ ಅನುಮತಿಸಲ್ಪಟ್ಟಿದೆ - ಅದು ”ವ್ಯಾಪಾರವು ಲಾಭದಲ್ಲಿದ್ದರೆ ಮಾತ್ರ”. ಆದರೆ ವ್ಯವಹಾರದ ಸಾಮಾರ್ಥ್ಯವಿಲ್ಲದಂತ ಅನೇಕ ವಿಶ್ವಾಸಿಗಳು, ಹಲವು ವರುಷಗಳ ಕಾಲ ಸಾಲವೆಂಬ ಕೂಪದೊಳಕ್ಕೆ ಹೋಗುತ್ತಾರೆ, ಏಕೆಂದರೆ ಅವರ ಸ್ವಂತ ವ್ಯವಹಾರದಲ್ಲಿನ ಸಾಮರ್ಥ್ಯದ ಕೊರತೆಯನ್ನು ಮತ್ತು ಮಾರುಕಟ್ಟೆಯ ಸ್ಥಿತಿಗತಿಗಳನ್ನು ಪರಿಗಣಿಸದೇ ಅನಾನುಭವಿಗಳಾಗಿ ವ್ಯವಹಾರವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಪ್ರತಿಯೊಬ್ಬ ವಿಶ್ವಾಸಿಗಳು, ದೊಡ್ಡ ಮಟ್ಟದ ವ್ಯವಹಾರಕ್ಕೆ ಸಂಬಂಧಪಟ್ಟ ಸಾಲವನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲು, ಕೆಲವು ಹಿರಿಯರಾದ ದೈವಿಕ ಸಹೋದರರುಗಳನ್ನು ಸಂಧಿಸಬೇಕು)

ಕ್ರೆಡಿಟ್ ಕಾರ್ಡ್ ಸಾಲವು ತುಂಬಾ ಗಂಭೀರವಾದಂತಹ ಸಾಲವಾಗಿದೆ, ಏಕೆಂದರೆ ಅದು ಅತಿ ಬೇಗ ಹೆಚ್ಚಳವಾಗುತ್ತದೆ. ವಿಶ್ವಾಸಿಗಳು ಡೆಬಿಟ್ ಕಾರ್ಡ್ ನ್ನು ಕ್ರೆಡಿಟ್ ಕಾರ್ಡ್ ನ ಆಧ್ಯತೆಯಲ್ಲಿ ಉಪಯೋಗಿಸುತ್ತಾರೆ. ಅವರು ಕ್ರೆಡಿಟ್ ಕಾರ್ಡ್ ನ್ನು ಉಪಯೋಗ ಮಾಡಿದರೆ, ನಂತರ ಅವರು ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಸಾಲವನ್ನು ಪಾವತಿಸಬೇಕಾಗುತ್ತದೆ. ಅವರು ಒಂದು ತಿಂಗಳು ಸಹ ತಪ್ಪಿಸಿಕೊಂಡರೂ, ನಂತರ ಅವರು ಮೊದಲು ಪೂರ್ತಿಯಾಗಿ ಸಾಲವನ್ನು ತೀರಿಸುವವರೆಗೆ ಕ್ರೆಡಿಟ್ ಕಾರ್ಡ್ ನ್ನು ಉಪಯೋಗಿಸದ ಹಾಗೇ ತಮ್ಮನ್ನು ತಾವು ಶಿಸ್ತುಪಡಿಸಿಕೊಳ್ಳಬೇಕು. ಯಾರು ಸಾಲದ ವಿಷಯದಲ್ಲಿ ಈ ರೀತಿ ತೀವ್ರವಾಗಿ ವ್ಯವಹರಿಸುತ್ತಾರೋ, ಅಂತವರನ್ನು ದೇವರು ಸನ್ಮಾನಿಸುತ್ತಾರೆ. ನಾವು ಕ್ರೆಡಿಟ್ ಕಾರ್ಡ್ ಮೇಲೆ ಬೆಲೆ ಬಾಳುವಂತ ವಸ್ತುವನ್ನು ಕೊಂಡುಕೊಳ್ಳಬಾರದು. ಅಗತ್ಯವಿರುವಂತ ಹಣವನ್ನು ನಾವು ಮೊದಲು ಉಳಿತಾಯ ಮಾಡಬೇಕು ಮತ್ತು ನಂತರ ಮಾತ್ರವೇ ವಸ್ತುವನ್ನು ಕೊಂಡುಕೊಳ್ಳಬೇಕು. ಅದೇ ಮಾರ್ಗದಲ್ಲಿ ಯೇಸು ಸಹ ನಡೆದದ್ದು.

ದುರಾಶೆ ಮತ್ತು ಜೀವಿಸುವುದರಲ್ಲಿ ಅಶಿಸ್ತಿನಿಂದ ಇರುವುದು ಮತ್ತು ಹೆಚ್ಚು ವ್ಯಯಿಸುವುದರ ಫಲಿತಾಂಶ ಹೆಚ್ಚಿನ ಸಾಲದಲ್ಲಿರುವುದಾಗಿದೆ.

ಎಲ್ಲಾ ವಿಶ್ವಾಸಿಗಳು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಕೂಡಿಡಬೇಕು. ಇದನ್ನು ಮಾಡಲೇಬೇಕು, ಅವರ ತಿಂಗಳ ವೆಚ್ಚವನ್ನು ಕಡಿತ ಮಾಡಬೇಕು ಮತ್ತು ಅವರಿಗೆ ಬೇಕಾದ ರೀತಿಯಲ್ಲಿ ಉನ್ನತ ಮಟ್ಟದ ಜೀವಿತವನ್ನು ಜೀವಿಸುವುದನ್ನು ಬಿಡಬೇಕು - ನಮ್ಮ ಸುತ್ತಮುತ್ತ ಯಾರು ಉನ್ನತ ಮಟ್ಟದಲ್ಲಿ ಜೀವಿಸುತ್ತಿದ್ದಾರೋ ಅವರನ್ನು ಅನುಸರಿಸುವುದು ಸರಿಯಲ್ಲ. ವಿಶ್ವಾಸಿಗಳು ಅನವಶ್ಯಕವಾದ ಕೊಂಡುಕೊಳ್ಳುವಿಕೆಯಲ್ಲಿ ಹಣವನ್ನು ವ್ಯರ್ಥ ಮಾಡಬಾರದು ಅಥವಾ ಅವರ ಸ್ನೇಹಿತರಿಗಾಗಿ ದುಂದು ಔತಣ ಮಾಡಿಸಬಾರರು (ಮತ್ತು ಇದು ಜಾರತ್ವದ ರೂಪವಾಗಿದೆ). ನಿಮ್ಮ ಕುಟುಂಬದ ಹಣಕಾಸಿನ ಸಾಮಾರ್ಥ್ಯದ ಇತಿಮಿತಿಯಲ್ಲಿ ಅತಿಥಿ ಸತ್ಕಾರವನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಅತಿಥಿ ಸತ್ಕಾರಕ್ಕಾಗಿ ನೀವು ಸಭೆಯಲ್ಲಿ ಒಳ್ಳೆ ಗೌರವವನ್ನು ಸಂಪಾದಿಸುವುದಕ್ಕಿಂತ, ಭವಿಷ್ಯದ ನಿಮ್ಮ ಕುಟುಂಬದ ಅಗತ್ಯತೆಗಾಗಿ ಹಣವನ್ನು ಉಳಿತಾಯ ಮಾಡುವುದು ತುಂಬಾ ಮುಖ್ಯವಾಗಿದೆ. ಸತ್ಯವೇದ ಹೇಳುವುದೇನೆಂದರೆ, ತಂದೆಯೆಂದಿರು ತಮ್ಮ ಮಕ್ಕಳಿಗಾಗಿ ಹಣವನ್ನು ಉಳಿತಾಯ ಮಾಡಬೇಕು (2 ಕೊರಿಂಥ 12:14). ನಿಮ್ಮ ಅಗತ್ಯತೆಗಳಿಗಾಗಿ ದೇವರಲ್ಲಿ ಭರವಸೆ ಇಡುವಂತದ್ದರ ಅರ್ಥ - ನಿಮ್ಮ ಕುಟುಂಬಕ್ಕಾಗಿ ಹಣವನ್ನು ಉಳಿತಾಯ ಮಾಡುವುದನ್ನು ಅಲಕ್ಷ್ಯ ಮಾಡುವುದಲ್ಲ. ಸತ್ಯವೇದ ನಮಗೆ ಆದೇಶಿಸುವುದೇನೆಂದರೆ, ನೀವು ಸೃಷ್ಠಿಸಲ್ಪಟ್ಟ ಅತಿ ಚಿಕ್ಕದಾದ ಇರುವೆ ಬಳಿ ಹೋಗಿ ಜ್ಞಾನವನ್ನು ಕಲಿತುಕೊಳ್ಳಿರಿ ಎಂಬುದಾಗಿ. ಚಳಿಗಾಲದಲ್ಲಿ ಕಠಿಣ ಸಮಯಗಳು ಬರುತ್ತವೆ ಎಂದು ಇರುವೆಗೆ ಅರಿವಿದೆ, ಅದಕ್ಕಾಗಿ ಬೇಸಿಗೆ ಕಾಲದಲ್ಲಿ ಅದು ಸಂಗ್ರಹಿಸಿಟ್ಟುಕೊಳ್ಳುತ್ತದೆ (ಜ್ಞಾನೋಕ್ತಿಗಳು 6:6-11). ಭವಿಷ್ಯದಲ್ಲಿ ಆಕಸ್ಮಿಕ ಖರ್ಚುಗಳು ಬರಬಹುದು ಎಂದು ಉಳಿತಾಯ ಮಾಡಿಟ್ಟುಕೊಳ್ಳುವ ಇರುವೆಯಿಂದ ನಾವು ಕಲಿತುಕೊಳ್ಳಬೇಕು. ಅನೇಕ ಮಾನವರ ಮೆದುಳಿನ ದೊಡ್ಡ ಜ್ಞಾನಕ್ಕಿಂತ ಇರುವೆಯಲ್ಲಿನ ಸಣ್ಣ ಗಾತ್ರದ ಮೆದುಳು ಹೆಚ್ಚು ಜ್ಞಾನವುಳ್ಳದ್ದಾಗಿರುವುದು ವಿಸ್ಮಯಕಾರಿಯಾಗಿದೆ.

ಇಂದು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದು ತುಂಬಾ ದುಬಾರಿಯಾಗಿದೆ ಮತ್ತು ನಮ್ಮ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡುವುದು ಸಹ ತುಂಬಾ ದುಬಾರಿಯಾಗಿದೆ. ನಾವು ಅದಕ್ಕಾಗಿ ಹಣವನ್ನು ಉಳಿತಾಯ ಮಾಡಿಡಬೇಕು. ಅದನ್ನು ನೀವು ಈಗ ಮಾಡದಿದ್ದರೆ, ಮತ್ತೊಬ್ಬ ವಿಶ್ವಾಸಿಗಳ ಬಳಿ ಹೋಗಿ ಭಿಕ್ಷೇ ಬೀಳುವ ಸ್ಥಿತಿಗೆ ಬರುತ್ತೀರಾ, ಅವರಿಂದ ಸಹಾಯ ತೆಗೆದುಕೊಳ್ಳಲು ಅಪೇಕ್ಷಿಸುತ್ತೀರ. ಪವಿತ್ರಾತ್ಮನು ಹೇಳುವುದೇನೆಂದರೆ, ಯಾವುದೇ ವಿಶ್ವಾಸಿಯು ತನ್ನ ಕುಟುಂಬದ ಅಗತ್ಯತೆಗಳನ್ನು ನೆರವೇರಿಸದಿದ್ದರೆ, ಅವರು ಅವಿಶ್ವಾಸಿಗಳಿಗಿಂತ ಕೆಟ್ಟವರಾಗಿದ್ದಾರೆ (1 ತಿಮೊಥಿ 5:8). ಅನೇಕ ಪ್ರಕರಣಗಳಲ್ಲಿ, ಹೆಂಡತಿಯು ಹಣವನ್ನು ಬೇಕಾಬಿಟ್ಟಿಯಾಗಿ ಖಾರ್ಚು ಮಾಡುತ್ತಿರುತ್ತಾಳೆ (ಏಕೆಂದರೆ ಆಕೆಯು ಕೆಲಸಕ್ಕೆ ಹೋಗುತ್ತಿರುವುದಿಲ್ಲ), ಏಕೆಂದರೆ ಆಕೆಗೆ ಕುಟುಂಬದ ಹಣಕಾಸಿನ ಸ್ಥಿತಿಯ ಬಗ್ಗೆ ಯೋಚನೆ ಇರುವುದಿಲ್ಲ. ಗಂಡಂದಿರು ಹೆಂಡತಿಯರಿಗೆ ಕುಟುಂಬದ ಹಣಕಾಸಿನ ಸ್ಥಿತಿಯನ್ನು ವಿವರಿಸಿ ಹೇಳಬೇಕು ಮತ್ತು ಕುಟುಂಬವು ಭರಿಸಲು ಸಾಧ್ಯವಾಗದೇ ಇರುವಂತ ಖರ್ಚಿಗೆ ”ಇಲ್ಲ” ಎಂದು ಹೇಳಬೇಕು, ಅದರಿಂದ ಅವರ ಕುಟುಂಬಗಳು ಭವಿಷ್ಯದ ಖರ್ಚು ವೆಚ್ಚಕ್ಕಾಗಿ ಉಳಿತಾಯ ಮಾಡಬಹುದು. ಇಂತಹ ಉಳಿತಾಯಗಳು ಪ್ರತಿಯೊಂದು ಮನೆಯಲ್ಲೂ ಮಾಡಬೇಕು - ಇದರಿಂದ ಮಾತ್ರವೇ ಕುಟುಂಬವು ಹಣಕಾಸಿನ ಶಿಸ್ತನ್ನು ಬೆಳೆಸಿಕೊಳ್ಳಬಹುದು ಮತ್ತು ಪ್ರತಿ ತಿಂಗಳ ಖರ್ಚು ವೆಚ್ಚವನ್ನು ಕಡಿಮೆ ಮಾಡಬಹುದು.

ನಾವು ಕೊನೆ ದಿನಗಳನ್ನು ಪ್ರವೇಶಿಸುತ್ತಿರುವಾಗ, ಹಣವನ್ನು ವ್ಯಯಿಸುವ ವಿಷಯದಲ್ಲಿ ಹೆಚ್ಚು ಹೆಚ್ಚು ಎಚ್ಚರಿಕೆಯುಳ್ಳವರಾಗಿರಬೇಕು. ”ಅನಿಶ್ಚಿತತೆಯ ಐಶ್ವರ್ಯಗಳಲ್ಲಿ” ನಾವು ಭರವಸೆ ಇಡಬಾರದು. ನಮ್ಮ ಭರವಸೆಯು ನಮ್ಮ ಪರಲೋಕದ ತಂದೆಯಲ್ಲಿ ಮಾತ್ರವೇ ಇರಬೇಕು (1 ತಿಮೊಥಿ 6:17). ಆದರೆ ”ದೇವರು ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು” ಎಂಬ ವಾಗ್ದಾನವನ್ನು ನೆನಪಿಟ್ಟುಕೊಂಡಿರಬೇಕು (ಪಿಲಿಪ್ಪಿ 4:19), ಇದು ಯಾವಾಗ ಪೂರೈಸಲ್ಪಡುವುದೆಂದರೆ, ನಾವು ದೇವರ ವಾಕ್ಯಕ್ಕೆ ವಿಧೇಯರಾದಾಗ ಮಾತ್ರ ಮತ್ತು ಇರುವೆಯಿಂದ ಕಲಿತುಕೊಂಡಾಗ ಮಾತ್ರ (ಮೇಲೆ ತಿಳಿಸಿದ ಹಾಗೇ) ಹಾಗೂ ಮನ:ಪೂರ್ವಕವಾಗಿ ದೇವರ ರಾಜ್ಯವನ್ನು ಮೊದಲು ಹುಡುಕಿದಾಗ ಮಾತ್ರ - ಇಲ್ಲವಾದಲ್ಲಿ ಈ ವಾಗ್ದಾನವು ನಮ್ಮ ಜೀವಿತದಲ್ಲಿ ನೆರವೇರುವುದಿಲ್ಲ (ಮತ್ತಾಯ 6:33).

ನಾನು ವಿಶ್ವಾಸಿಯಾಗಿದ್ದುಕ್ಕೊಂಡು ನನ್ನ 59 ವರುಷಗಳಲ್ಲಿ ಮತ್ತು 50 ವರುಷದ ಮದುವೆಯ ಜೀವಿತದಲ್ಲಿ ಏನನ್ನು ರೂಢಿಸಿಕೊಂಡಿದ್ದೇನೋ ಅದನ್ನೇ ಬೋಧಿಸುತ್ತೇನೆ. ನಾವು ಯಾವುದೇ ಸಾಲವನ್ನು ಮಾಡಿಲ್ಲ ಅಥವಾ ಯಾರಿಗೂ ಸಹ ಸಾಲ ತೀರಿಸುವಂತ ಸ್ಥಿತಿಯಲ್ಲಿ ಒಂದು ದಿನವು ಇಲ್ಲ. ನಮ್ಮ ಮದುವೆಯ ಪ್ರಾರಂಭದ ದಿನಗಳಲ್ಲಿಯೂ ಸಹ, ನಾವು ತುಂಬಾ ಬಡವರಾಗಿದ್ದಾಗ, ನಾವು ರೋಮ 13:8 ರಲ್ಲಿನ ವಾಕ್ಯವನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸಿದೆವು. ಹಾಗಾಗಿ ನಾವು ಸಾಲದ ಕೂಪಕ್ಕೆ ಬೀಳಲಿಲ್ಲ. ನಾವು ಮತ್ತಾಯ 6:33 ರ ಪ್ರಕಾರ ಜೀವಿಸುವುದನ್ನು ಯಾವಾಗಲೂ ಬಯಸಿ ಅದರಂತೆ ಜೀವಿಸಿದೆವು, ಅಂದರೆ ಮೊದಲು ದೇವರ ರಾಜ್ಯವನ್ನು ಹುಡುಕಿದೆವು, ಅದರಿಂದಾಗಿ ನಮ್ಮ ಪರಲೋಕದ ತಂದೆಯು ನಮ್ಮ ಇಹಲೋಕದ ಎಲ್ಲಾ ಅಗತ್ಯತೆಗಳನ್ನು ಯಾವಾಗಲೂ ಪೂರೈಸಿದನು. ಇದರ ಜೊತೆಗೆ ಆತನು ನನಗೆ ವಿಸ್ಮಯಕಾರಿ ಆತ್ಮೀಕ ಐಶ್ವರ್ಯಗಳನ್ನು ಸಹ ಕೊಟ್ಟಿದ್ದಾನೆ. ಹಾಗಾಗಿ ಇಂದು, ನಾನು ಎಲ್ಲಾ ವಿಶ್ವಾಸಿಗಳಿಗೂ ಧೃಢವಾಗಿ ಹೇಳುವುದೇನೆಂದರೆ, ”ನಮಗಿರುವಂತ ಆದಾಯದ ಮಿತಿಯಲ್ಲಿ ಜೀವಿಸುವ ಕ್ಷೇತ್ರದಲ್ಲಿ ಮತ್ತು ದೇವರ ವಾಕ್ಯದಲ್ಲಿ ಆದೇಶಿಸಿದ ಹಾಗೇ, ಸಾಲದಿಂದ ವಿಮುಕ್ತನಾಗಿರುವ ವಿಷಯದಲ್ಲಿ ನನ್ನನ್ನು ಹಿಂಬಾಲಿಸಿ”.

ಕೆಲವು ವಿಶ್ವಾಸಿಗಳು ತಮ್ಮ ಬಳಿ ತೀರಿಸಲು ಹಣವಿದ್ದರೂ ಸಹ, ಸಾಲವನ್ನು ಇನ್ನೂ ತೀರಿಸಿರುವುದಿಲ್ಲ. ಅಂತಹ ವಿಶ್ವಾಸಿಗಳು ಸಂಪೂರ್ಣವಾಗಿ ಬೇಜವಬ್ದಾರಿಗಳು ಮತ್ತು ಅವಿಶ್ವಾಸಿಗಳ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವರು ನೀರಿಕ್ಷೆಯನ್ನು ಹೊಂದಿರುವುದೇನೆಂದರೆ, ಸಾಲಕೊಟ್ಟವನು ತಾನು ಕೊಟ್ಟ ಸಾಲವನ್ನು ಮರೆಯಬಹುದೆಂದು!ಅಂತಹ ವಿಶ್ವಾಸಿಗಳು ಸಂಪೂರ್ಣವಾಗಿ ದೈವಿಕತೆ ಇಲ್ಲದವರು ಮತ್ತು ಕೆಟ್ಟವರು ಆಗಿದ್ದಾರೆ.

”ನಿನ್ನನ್ನು ಬೇಡುವವರೆಲ್ಲರಿಗೆ ಕೊಡು; ನಿನ್ನ ಸೊತ್ತು ಕಸುಕೊಳ್ಳವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ” ಎಂಬ ಯೇಸುವಿನ ಆದೇಶದ ಬಗ್ಗೆ ನಾವು ಏನು ಮಾಡಬೇಕು (ಲೂಕ 6:30)?

ನಾವು ಸತ್ಯವೇದದಲ್ಲಿನ ಕೇವಲ ಒಂದು ವಾಕ್ಯವನ್ನು ಮಾತ್ರ ತೆಗೆಕೊಳ್ಳಬಾರದು. ಸೈತಾನನು ಯೇಸುವಿಗೆ ”ಇದು ಬರೆದಿದೆ” ಎಂದು ಹೇಳುವಾಗ, ಯೇಸು ಪ್ರತಿಕ್ರಯಿಸಿ ಹೇಳಿದ್ದೇನೆಂದರೆ, ”ಇದು ಸಹ ಬರೆದಿದೆ” ಎಂಬುದಾಗಿ (ಮತ್ತಾಯ 4:6,7 ನೋಡಿ). ಹಾಗಾಗಿ ದೇವರ ವಾಕ್ಯದ ಇಡೀ ಸತ್ಯವು ”ಇದು ಬರೆದಿದೆ” ಎಂಬುವುದರಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ, ಆದರೆ ”ಇದು ಬರೆದಿದೆ” ಮತ್ತು ”ಇದು ಸಹ ಬರೆದಿದೆ” ಎಂಬುವುದರಲ್ಲಿ ಕಾಣಿಸಿಕೊಂಡಿದೆ.

ಹಾಗಾಗಿ ”ನಿನ್ನನ್ನು ಬೇಡುವವರೆಲ್ಲರಿಗೆ ಕೊಡು; ನಿನ್ನ ಸೊತ್ತು ಕಸುಕೊಳ್ಳವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ” ಎಂಬ ವಾಕ್ಯವನ್ನು ನಾವು ಓದುವಾಗ, ನಾವು ನೆನಪಿಡಬೇಕಾದದ್ದೇನೆಂದರೆ, ”ಇದು ಸಹ ಬರೆದಿದೆ” ಎಂಬುದಾಗಿ, ಅದೇನೆಂದರೆ, ”ಇಹಲೋಕದಲ್ಲಿರುವಂತ ಪ್ರತಿಯೊಂದು ಕರ್ತನಿಗೆ ಸೇರಿದ್ದಾಗಿದೆ” (1 ಕೊರಿಂಥ 10:26). ಅದರ ಅರ್ಥ ನೀವು ಗಳಿಸುವಂತ ಹಣವು ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವಂತದ್ದು ಮತ್ತು ನಿಮ್ಮ ಎಲ್ಲಾ ಆಸ್ತಿಯು - ಎಲ್ಲವೂ ಸಹ - ದೇವರಿಗೆ ಸೇರಿದ್ದಾಗಿದೆ ಹೊರತು ನಿಮಗೆ ಸೇರಿಲ್ಲ. ನೀವು ಯಾರಿಗಾದರೂ ಕೊಡಬೇಕು ಎಂದು ಯೋಚಿಸುವಾಗ ಅಥವಾ ಮತ್ತೊಬ್ಬರಿಗೆ ಸ್ವಲ್ಪ ಹಣವನ್ನು ಸಾಲವಾಗಿ ಕೊಡುವಾಗ, ನೀವು ಆ ಹಣದ ನಿಜವಾದ ಯಜಮಾನನ ಬಳಿ ಹೋಗಬೇಕು (ಕರ್ತನಾದ ಯೇಸುವಿನ ಬಳಿ) ಮತ್ತು ಕೇಳಿದಂತ ವ್ಯಕ್ತಿಗೆ ನೀವು ಹಣವನ್ನು ಕೊಡಲು ಸ್ಪಷ್ಟವಾದ ಆದೇಶವನ್ನು ಯೇಸುವಿನಿಂದ ಹೊಂದಬೇಕು. ನಂತರ ಮಾತ್ರವೇ ಆ ಹಣವನ್ನು ಮತ್ತೊಬ್ಬರಿಗೆ ಕೊಡಬೇಕು. ಆದರೆ ನಿಮ್ಮ ಬಳಿ ಇರುವ ಹಣವು ನಿಮ್ಮದೆಂದು ನೀವು ನಟಿಸಿ, ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಖರ್ಚು ಮಾಡಲು ನಿರ್ಧರಿಸಿದರೆ, ಆಗ ನೀವು ಅನೇಕ ಹಣಕಾಸಿನ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುತ್ತೀರ. ಲೋಕದಲ್ಲಿರುವಂತ ಎಲ್ಲಾ ಹಣವು ದೇವರ ಹಣವಾಗಿದೆ. ನಮ್ಮದು ಅಂತ ಯಾವುದು ಇಲ್ಲ. ಹಾಗಾಗಿ, ಯಾರಿಗಾದರೂ ಹಣವನ್ನು ಸಾಲಕೊಡುವ ಮುಂಚೆ, ಯೇಸುವಿಗೆ ಯಾವಾಗಲೂ ಕೇಳಬೇಕು ಮತ್ತು ಆತನಿಂದ ಸ್ಪಷ್ಟವಾದ ಆದೇಶವನ್ನು ಪಡೆದುಕೊಳ್ಳಬೇಕು.

ನೀವು ಈ ರೀತಿಯಾಗಿ ಕರ್ತನನ್ನು ಗಂಭೀರವಾಗಿ ಹುಡುಕುವಾಗ, ಆತನು ಆ ಸಮಯದಲ್ಲಿ ಯಾರಿಗಾದರೂ ಹಣವನ್ನು ಕೊಡುವಂತೆ ಹೇಳಬಹುದು ಮತ್ತು ಹಣವನ್ನು ಕೊಡದೇ ಇರುವಂತೆ ಸಹ ಹೇಳಬಹುದು - ಹಣವನ್ನು ಕೇಳುತ್ತಿರುವಂತ ವ್ಯಕ್ತಿಯ ಹೃದಯದಲ್ಲಿ ಏನಿದೆ ಎಂಬುವುದನ್ನು ದೇವರು ನೋಡುವುದರ ಮೇಲೆ ಇದು ಅವಲಂಬಿತವಾಗಿದೆ. ಈ ರೀತಿಯಾಗಿ, ನೀವು ಮೋಸಗಾರರಿಂದ ಸಂರಕ್ಷಿಸಿಕೊಳ್ಳಬಹುದು.

”ಹಣದ ವಿಷಯದಲ್ಲಿ ನೀತಿಯುಳ್ಳವರಾಗಿರುವುದು” ಎಂಬ ನನ್ನ ಸಂದೇಶ ಆಂಗ್ಲ ಭಾಷೆಯಲ್ಲಿ ಸಿಗುತ್ತದೆ.

ಈ ಹಣಕಾಸಿನ ವಿಷಯದಲ್ಲಿ ಶಿಸ್ತಿನಿಂದ ಇರುವಂತ ಬಹು ಮುಖ್ಯವಾದ ಕ್ಷೇತ್ರದಲ್ಲಿ ಯೇಸುವಿನ ಹೆಜ್ಜೆ ಜಾಡಿನಲ್ಲಿ ನಾವೆಲ್ಲರೂ ನಡೆಯುವಂತೆ ದೇವರು ನಮಗೆ ಸಹಾಯ ಮಾಡಲಿ.