WFTW Body: 

ದೇವರು ನಮ್ಮ ಜೀವಿತದಲ್ಲಿ ಬರಮಾಡುವ ಪ್ರತಿಯೊಂದರಲ್ಲಿ ಆತನು ಒಂದು ಅತಿಶಯವಾದ ಯೋಜನೆಯನ್ನು ಇಟ್ಟಿದ್ದಾನೆಂದು ದೃಷ್ಟಿಸುವಾಗ ನಮ್ಮ ಜೀವಿತವು ಅತಿಶಯವಾಗಿ ಆನಂದದಿಂದ ತುಂಬಿರುತ್ತದೆ. ನಮ್ಮ ಪ್ರಾಥ೯ನೆಗೆ “ಇಲ್ಲ" ಎಂಬುದಾಗಿ ಉತ್ತರ ಬಂದರೂ ಸಹ, ಅದು ಪರಿಪೂಣ೯ ಪ್ರೀತಿಯುಳ್ಳ ಹೃದಯದಿಂದ ಬಂದ ಉತ್ತರವಾಗಿಯೇ ಇರುತ್ತದೆ.

“ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು. ಅವು ಅಹಿತದ ಆಲೋಚನೆಗಳಲ್ಲ. ಹಿತದ ಯೋಚನೆಗಳೇ" (ಯೆರೆ 29:11). ಈ ಒಂದು ಲೋಕದಲ್ಲಿ ರೋಗಗಳಿಂದಲೂ, ಕಾಯಿಲೆಗಳಿಂದಲೂ, ಒಂದು ರೀತಿಯ ಅನಾನುಕೂಲ ವಾತಾವರಣದಲ್ಲಿ ನಾವು ಜೀವಿಸುವಂತೆ ದೇವರು ಅನುಮತಿಸಿದ ಕಾರಣವೇನೆಂದರೆ - ಜನರು ತಮ್ಮ ಯಾತನೆ ನಿಮಿತ್ತ ಆತನ ಕಡೆಗೆ ತಿರುಗಿಕೊಂಡು ಆತನಿಂದ ಆಶೀವಾ೯ದವನ್ನು ಪಡೆಯಬೇಕು ಎಂಬುದಾಗಿ. ದೇವರು ತನ್ನ ಯೋಜನೆಯನ್ನು ಪರಿಪೂಣ೯ ಮಾಡಲು ಕೇಡನ್ನು ಮಾಡುವಂತ ಸೈತಾನನ್ನು ಸಹ ಉಪಯೋಗಿಸುವವನಾಗಿದ್ದಾನೆ. ನಿತ್ಯತ್ವದಲ್ಲಿ ನಾವು ದೇವಜನರನ್ನು ಸಂಧಿಸಿ ಅವರ ಅನುಭವವನ್ನು ಕೇಳುವಾಗ ಹಾವು ಕಚ್ಚುವಿಕೆ, ಹಣದ ಕೊರತೆ, ಕ್ಯಾನ್ಸರ್ ಇವುಗಳನ್ನು ದೇವರು ಅನುಮತಿಸುವುದರ ಮೂಲಕ ತನ್ನ ಮಕ್ಕಳನ್ನು ಪಾಪದಿಂದ ಬಿಡಿಸಿ, ಅವರನ್ನು ಪವಿತ್ರರನ್ನಾಗಿ ಮಾಡಿ ಪ್ರತಿಷ್ಠೆ ಪಡಿಸುವ ಮೂಲಕ ತನ್ನ ಸ್ವಭಾವದಲ್ಲಿ (ದೈವಸ್ವಭಾವ) ಪಾಲುಗಾರರನ್ನಾಗಿ ಮಾಡಿದ್ದನ್ನು ನಿತ್ಯತ್ವದಲ್ಲಿ ಕೇಳುವೆವು. ಈ ಭೂಲೋಕದಲ್ಲಿ ಅನೇಕ ವಿಷಯಗಳು ನಮಗೆ ಅಥ೯ವಾಗದಿದ್ದರೂ ಸಹ ಆ ದಿನದಲ್ಲಿ ದೇವರಿಗೆ ಆ ವಿಷಯಗಳಿಗಾಗಿ ಕೃತಜ್ಞತೆಯನ್ನು ಸಲ್ಲಿಸುವೆವು. ಆದರೆ ನಂಬಿಕೆಯಿಂದ ತುಂಬಿರುವ ವ್ಯಕ್ತಿ ಆ ದಿನಕ್ಕಾಗಿಯೇ ಕಾಯುವವನಾಗಿರುವುದಿಲ್ಲ. ಆತನು ಈಗಲೇ ದೇವರ ಜ್ಞಾನದಲ್ಲಿಯೂ ಪ್ರೀತಿಯಲ್ಲಿಯೂ ನಂಬಿಕೆಯುಳ್ಳವನಾಗಿರುವನು. ಆದುದರಿಂದ ಎಲ್ಲಾ ವಿಷಯಗಳಿಗಾಗಿ ಕೃತಜ್ಞತೆಯನ್ನು ಹೇಳಲು ಈಗಲೇ ಪ್ರಾರಂಭಿಸುವನು. ದೇವರ ಎಲ್ಲಾ ವ್ಯವಹರಿಸುವಿಕೆಯಲ್ಲಿ ಪ್ರಮುಖವಾಗಿ ಆತನ ಯೋಜನೆಯು, ನಾವು ಆತನ ಸ್ವಭಾವದಲ್ಲಿ ಪಾಲುಗಾರರಾಗಬೇಕೆಂಬುದೇ ಆಗಿರುತ್ತದೆ. ದೇವರು ಎಲ್ಲಾ ಕಾಯ೯ಗಳನ್ನು ನಮ್ಮ ಒಳ್ಳೇಯದಕ್ಕಾಗಿಯೇ ನಡೆಸುತ್ತಾನೆ. ಆ ಎಲ್ಲವುಗಳಲ್ಲಿ ನಾವು ಆತನ ಮಗನ ಸಾರೂಪ್ಯವುಳ್ಳವರಾಗಬೇಕೆಂಬ ಕಾರಣದಿಂದ ಎಲ್ಲಾ ಕಾಯ೯ಗಳನ್ನು ನಮ್ಮ ಒಳ್ಳೇಯದಕ್ಕಾಗಿಯೇ ನಡೆಸುತ್ತಾನೆ.

ಇದಲ್ಲದೇ “ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾಯ೯ಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ. ಯಾಕಂದರೆ ದೇವರು ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು, ಅವರಲ್ಲಿ ಆತನೇ ಹಿರಿಯವನಾಗಿರಬೇಕೆಂದು ಉದ್ದೇಶಿಸಿ ತಾನು ಯಾರನ್ನು ತನ್ನವರೆಂದು ಮೊದಲು ತಿಳಿದುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವದಕ್ಕೆ ಮೊದಲು ನೇಮಿಸಿದನು". (ರೋಮ 8:28,29).

ಯಾಕೆ ದೇವರು ಆಕಸ್ಮಿಕವಾಗಿ ಹಣ ಕಳೆದುಕೊಳ್ಳುವಂತೆ ಮತ್ತು ಜನರು ಹಣ ಮೋಸಮಾಡುವಂತೆ ಅನುಮತಿಸುತ್ತಾನೆ? ಬಸ್ಸುಗಳಲ್ಲಿ ಮತ್ತು ರೈಲುಗಳಲ್ಲಿ ಕಿಸೆಗಳ್ಳತನ ಆದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರಬಹುದು. ಅಂಥಹ ಸಂದಭ೯ಗಳಲ್ಲಿ ಯಾವಾಗಲೂ ಕಳ್ಳತನ ಮತ್ತು ಮೋಸಮಾಡಿದ ವ್ಯಕ್ತಿಗಾಗಿ ಪ್ರಾಥ೯ನೆ ಮಾಡುವುದಕ್ಕಾಗಿ ನನ್ನ ಸಮಯವನ್ನು ಉಪಯೋಗಿಸಿದ್ದೇನೆ. ಆದರೆ ಅದಕ್ಕಿಂತಲೂ ಹೊರತಾಗಿ ದೇವರು ಹಣದಿಂದ ಮತ್ತು ಇಹ ಲೋಕದ ವಸ್ತುಗಳಿಂದ ನಮ್ಮ ಅಂಟಿಕೊಳ್ಳುವಿಕೆಯನ್ನು ಮುರಿಯಲು ಅಥವಾ ಬಿಡಿಸಲು ಬಯಸುತ್ತಾನೆ. ನಾವು ಕಳೆದುಕೊಳ್ಳುವ ಪ್ರತಿಯೊಂದು ರೂಪಾಯಿಯ ಮೇಲೆ ಲೆಕ್ಕ ಮಾಡಿ ಎಣಿಸುತ್ತಾ ಅದರಲ್ಲಿ ದುಃಖಿಸದೇ ಮತ್ತು ನಾವು ಸಂಪಾದಿಸುವ ಪ್ರತಿಯೊಂದು ರೂಪಾಯಿ ಮೇಲೆ ಸಂತೋಷಪಡದೇ ಆತನಲ್ಲಿ ಸಂತೋಷವನ್ನು ಕಂಡುಹಿಡಿಯುವಂತೆ ದೇವರು ಬಯಸುತ್ತಾನೆ. ಆ ಸಂತೋಷ ಹೇಗಿರುತ್ತದೆ ಅಂದರೆ - ವಸ್ತುಗಳ ಲಾಭವಾದರೂ ಸಂತೋಷ ಹೆಚ್ಚಲಾರದು, ವಸ್ತುಗಳ ನಷ್ಟವಾದರೂ ಸಹ ಸಂತೋಷ ಕಡಿಮೆಯಾಗಲಾರದು.

ಯೇಸುವು ಇಹಲೋಕದಲ್ಲಿ ಇದೇ ರೀತಿಯಾಗಿ ನಡೆದರು ಮತ್ತು ನಾವು ಸಹ ಯೇಸು ನಡೆದಂತೆಯೇ ನಡೆಯಲು ಕರೆಯಲ್ಪಟ್ಟಿದ್ದೇವೆ. ಸತ್ಯವೇದ ಹೇಳುತ್ತದೆ “ಕ್ರಿಸ್ತಯೇಸುವಿನಲ್ಲಿರುವ ಮನಸ್ಸು ನಿಮ್ಮಲ್ಲಿಯೂ ಇರಲಿ" (ಫಿಲಿಪ್ಪಿ 2:5) . ಯಾರಾದರೂ ಯೇಸುವಿನ ಸೇವೆಯನ್ನು ಮೆಚ್ಚಿ 10,000 ಹಣವನ್ನು ಆತನ ಸೇವೆಗೆ ಕೊಟ್ಟರೂ ಸಹ, ಅದು ಯೇಸುವಿನ ಸಂತೋಷವನ್ನು ಸ್ವಲ್ಪವಾದರೂ ಹೆಚ್ಚಾಗಿ ಮಾಡುತ್ತಿರಲಿಲ್ಲ. ಈಗಾಗಲೇ ಯೇಸುವಿನ ಸಂತೋಷ ಹಾಗೂ ಆನಂದ ತಂದೆಯಲ್ಲಿ ತುಂಬಿ ಹೊರಸೂಸುತ್ತಿತ್ತು. ಅದೇ ಸಮಯದಲ್ಲಿ ಯಾವುದೇ ವಸ್ತುಗಳ ನಷ್ಟದಿಂದ ಆತನ ಆನಂದ ಕಡಿಮೆಯಾಗುತ್ತಾ ಇರಲಿಲ್ಲ. ಯೇಸುವಿಗೆ ಕಾಣಿಕೆಯೋಪಾದಿಯಲ್ಲಿ ಬರುತ್ತಿದ್ದ ಹಣವನ್ನು ಇಸ್ಕಾರಿಯೋತ ಯೂದನು ಆಗಾಗ ಕದಿಯುತ್ತಿದ್ದ. ಯೇಸುವು ಅದರ ಕುರಿತಾಗಿ ತಿಳಿದವರಾಗಿದ್ದರು ಮತ್ತು ಯೂದನ ಬಗ್ಗೆ ಯೇಸುವಿಗೆ ದುಃಖವಿತ್ತೇ ಹೊರತು, ಹಣದ ನಷ್ಟದ ಕುರಿತು ಯೇಸುವಿಗೆ ಗಲಿಬಿಲಿಯಾಗಲಿಲ್ಲ.

ನೀವು ನಿಜವಾಗಿಯೂ ಯೇಸುವಿನ ಜೀವಿತದಲ್ಲಿ ಪಾಲುಗಾರರಾಗಬೇಕೆಂಬ ಆಸೆಯುಳ್ಳರಾಗಿರುವ ಪಕ್ಷದಲ್ಲಿ ದೇವರು ಇಹಲೋಕ ವಸ್ತುಗಳ ಮೇಲಿರುವ ಪ್ರೀತಿಯಿಂದ ಬಿಡಿಸುವದಕ್ಕಾಗಿ, ಮನುಷ್ಯರ ಮಾನ ಹುಡುಕುವಿಕೆಯಿಂದ, ಸ್ವಾರ್ಥ ಮನೋಭಾವದಿಂದ ಮತ್ತು ಕ್ರಿಸ್ತನ ರೀತಿ ಅಲ್ಲದ ಅನೇಕ ನಡವಳಿಕೆಗಳಿಂದ ನಮ್ಮನ್ನು ಬಿಡಿಸುವದಕ್ಕಾಗಿ ಸಾವಿರದ ಒಂದು ಸಂಗತಿಗಳನ್ನು ನಿಮ್ಮ ಜೀವಿತದಲ್ಲಿ ಅನುಮತಿಸುತ್ತಾನೆ. ಈ ಮಾಗ೯ದಲ್ಲಿ ಹೋಗುವದಕ್ಕೆ ನಿಮಗೆ ಮನಸ್ಸಿಲ್ಲದಿದ್ದರೆ ಆತನು ನಿಮ್ಮನ್ನು ಹೋಗಲು ಒತ್ತಾಯ ಮಾಡಲಾರನು. ಕೆಳಗಿನ ದಜೆ೯ಯ ಹಾಗೂ ಸೋತು ಹೋದ ಕ್ರಿಸ್ತೀಯ ಜೀವಿತವನ್ನು ಜೀವಿಸುತ್ತಾ ಇರುವ ಅನೇಕ ವಿಶ್ವಾಸಿಗಳ ಮಧ್ಯದಲ್ಲಿ ನೀವು ಸಹ ಹಾಗೇಯೆ ಜೀವಿಸುತ್ತಾ, ಈ ಜೀವಿತದಲ್ಲಿಯೇ ನೀವೂ ಸುಖವಾಗಿ ಸಂತುಷ್ಟರಾಗಿ ಜೀವಿಸಬೇಕಿಂದಿದ್ದರೆ, ದೇವರು ನಿಮ್ಮನ್ನು ಒಬ್ಬಂಟಿಗರನ್ನಾಗಿ ಬಿಟ್ಟುಬಿಡುತ್ತಾನೆ. ಆದರೆ ದೇವರ ಉತ್ತಮಕ್ಕಾಗಿ ನೀವು ಹಾರೈಸಿ ನೀರಡಿಕೆಯುಳ್ಳವರಾಗಿ ಬಾಯಾರಿದ್ದರೆ, ಆತನು ನಿಮ್ಮೊಂದಿಗೆ ವ್ಯವಹರಿಸಿ, ನಿಮ್ಮನ್ನು ಆಳುವಂತ ಕ್ಯಾನ್ಸರ್ ನ್ನು ಕಡಿದು ಹಾಕುತ್ತಾನೆ ಮತ್ತು ಕನಿಕರವಿಲ್ಲದೆ ನಿಮ್ಮ ಜೀವಿತದಲ್ಲಿ ನಿಮ್ಮನ್ನು ನಾಶಮಾಡುವ ವಿಗ್ರಹಗಳನ್ನು ನಾಶಪಡಿಸುತ್ತಾನೆ. ಆತನು ನಿಮ್ಮನ್ನು ಸಂಕಟಗಳನ್ನು ತಾಳಿಕೊಳ್ಳುವಂತೆ, ಆಶಾಭಂಗ, ನಿರಾಶೆ, ನಷ್ಟ, ಹೊಡೆತಗಳಲ್ಲಿ, ಏಟುಗಳು, ಪೆಟ್ಟುಗಳು, ತಗ್ಗಿಸಿಕೊಳ್ಳುವಿಕೆ, ಅನ್ಯಾಯವಾಗಿ ದೂರುಹೇಳುವಿಕೆ ನಿಂಧಿಸುವಿಕೆ ಈ ಮುಂತಾದವುಗಳನ್ನು ನಿಮ್ಮ ಜೀವಿತದಲ್ಲಿ ಅನುಮತಿಸುವದರ ಮೂಲಕ ನಿಮ್ಮನ್ನು ಉತ್ತಮ ನಡತೆಗೆ ತಂದು ಇನ್ನೆಂದೂ ನೀವು ಕದಲಲಾರದ ಸ್ಥಳಕ್ಕೆ ಬರಮಾಡುತ್ತಾನೆ.

ಆಗ ನಿಮ್ಮ ಜೀವಿತದಲ್ಲಿ ನಾವೇನಾಗಿದ್ದರೂ, ಬಡವರಾದರೂ, ಐಶ್ವಯ೯ವಂತವರಾದರೂ, ನಿಮ್ಮನ್ನು ಜನ ನಿಂದಿಸಿದರೂ, ಹೊಗಳಿದರೂ, ಮಾನಕೊಟ್ಟರೂ, ಕೊಡದೆಯಿದ್ದರೂ ಇವು ಯಾವುದೂ ನಿಮಗೆ ವ್ಯತ್ಯಾಸ ಮಾಡಲಾರವು. ಲೋಕದ ಎಲ್ಲವುಗಳಿಗಾಗಿ ಕ್ರಿಸ್ತನ ಮರಣದಲ್ಲಿ ಪಾಲುಗಾರರಾಗಿ ಹಾದುಹೋಗುವಾಗ ಯೇಸುವಿನ ಜೀವವು ನಿಮ್ಮ ದೇಹದಲ್ಲಿ ಹೊರ ಬಂದು ಅದರಲ್ಲಿ ಪಾಲುಗಾರರಾಗಿ ಇಹಲೋಕದಲ್ಲಿ ಅರಸರಂತೆ ನಡೆಯುತ್ತೀರಿ. ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ. ( 2ಕೊರಿಂಥ 4:10) “ಸ್ವಾಥ೯ಕ್ಕೆ ಸಂಪೂಣ೯ವಾಗಿ ಸಾಯಬೇಕು" ಎಂಬ ಕ್ರಯವನ್ನು ಕೆಲವೇ ಜನರು ಕಟ್ಟುವದರಿಂದ ಕೆಲವರು ಮಾತ್ರವೇ, ಕ್ರಿಸ್ತನಲ್ಲಿರುವ ಸಮೃದ್ದಿಕರವಾದ ಜೀವಿತವನ್ನು ಕಂಡುಕೊಳ್ಳುವರು. ಸ್ವಾಥ೯ಕ್ಕೆ ನಾವು ಸಾಯದಿದ್ದರೆ ನಂಬಿಕೆಯಿಂದ ಜೀವಿಸಲು ಅಸಾಧ್ಯ. ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಳ್ಳುವದಕ್ಕೆ ನಮಗೆ ಮನಸ್ಸಿಲ್ಲದಿದ್ದರೆ, ದೇವರ ಪ್ರೀತಿಯ ಮೇಲಿರುವ ನಮ್ಮ ತಿಳುವಳಿಕೆಯು ಕೇವಲ ಕಾಲ್ಪನಿಕವಾದದ್ದು ಅಥವಾ ಊಹಿಸಿಕೊಳ್ಳುವಂತದ್ದು ಆಗಿದೆ. ಈ ಲೋಕದಲ್ಲಿ ಎಲ್ಲವನ್ನು ಬಿಟ್ಟುಬಿಡದೆ ಹೋದರೆ ನಾವು ಯೇಸುವಿನ ಶಿಷ್ಯರಾಗಲಾರೆವು. ಯೇಸು ಹೇಳಿದ್ದು - “ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೇ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು" (ಲೂಕ 14:33)

ನಾವು ಕಳೆದ ಅಧ್ಯಾಯದಲ್ಲಿ ನೋಡಿಕೊಂಡಂತೆ, ಯೋಹಾನ 17:23 ರಲ್ಲಿ “ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ ಅವರ ಐಕ್ಯವು ಪೂಣ೯ಸಿಧ್ದಿಗೆ ಬರುವದರಿಂದ ನೀನು ನನ್ನನ್ನು ಕಳುಹಿಸಿಕೊಟ್ಟಿದ್ದಿ ಎಂದೂ, ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನು ಪ್ರೀತಿಸಿದ್ದಿ ಎಂದೂ ಲೋಕಕ್ಕೆ ತಿಳಿದು ಬರುವದು". ಯೇಸು ಲೋಕದವರಿಗಾಗಲಿ, ಶರೀರಾದೀನ ಸ್ವಭಾವದ ಕ್ರೈಸ್ತರಿಗಾಗಲಿ ಪ್ರಾಥಿ೯ಸಲಿಲ್ಲ. ಎಲ್ಲವನ್ನು ಬಿಟ್ಟು ಆತನನ್ನು ಹಿಂಬಾಲಿಸಿದ ತನ್ನ ಹನ್ನೊಂದು ಮಂದಿ ಶಿಷ್ಯರಿಗಾಗಿ ಯೇಸು ಪ್ರಾಥಿ೯ಸಿದರು. ಈ ಶಿಷ್ಯರು ತಂದೆಯ ಪ್ರೀತಿಯಲ್ಲಿ ಭದ್ರತೆಯನ್ನು ಕಂಡುಕೊಂಡರು. ಆದರೆ ಶರೀರಾದೀನಸ್ವಭಾವವುಳ್ಳ ಹಾಗೂ ಲೋಕದ ಜನರು ಅದನ್ನು ಅರಿಯದವರಾಗಿದ್ದರು. ಅನೇಕ ಕ್ರೈಸ್ತರು ಶರೀರಾಧೀನಸ್ವಭಾವವುಳ್ಳ ಪ್ರಾಪಂಚಿಕ ಕ್ರೈಸ್ತರಾಗಿದ್ದಾರೆ, ಇದು ಯಾಕೆ? ಸಂಪೂಣ೯ವಾಗಿ ತನ್ನನ್ನು ದೇವರಿಗೆ ಅಧೀನ ಮಾಡದೇ ಇರುವಾಗ, ತಾನು ಸಂತೋಷವುಳ್ಳವನಾಗಿರುತ್ತೇನೆಂದು ಯೋಚಿಸುವಂತೆ ಸೈತಾನನು ಅವರನ್ನು ವಂಚಿಸಿದ್ದಾನೆ. ”ಪರಲೋಕ ಮತ್ತು ಭೂ ಲೋಕದ ಉತ್ತಮವಾದವುಗಳನ್ನು” ಪಡೆದುಕೊಳ್ಳಲು ಮನುಷ್ಯನು ಪ್ರಯತ್ನಿಸುತ್ತಾನೆ (ಅವರೇ ಹೇಳುವಂತೆ). ಆದರೆ ಇದು ವಂಚನೆಯಾಗಿದೆ. ದೇವರ ಸಂಪೂಣ೯ ಪ್ರೀತಿಯಲ್ಲಿ ನಾವು ನಂಬಿಕೆಯಿಟ್ಟರೆ ನಾವು ಒಂದನ್ನೂ ಇಟ್ಟುಕೊಳ್ಳದೆ ಎಲ್ಲವನ್ನು ಆತನಿಗಾಗಿ ಸಂತೋಷದಿಂದ ಬಿಟ್ಟುಕೊಡುವೆವು. ಆಗ ನಾವು ಚಿಂತೆಯಿಂದ ಸಂಪೂಣ೯ವಾಗಿ ಬಿಡುಗಡೆ ಹೊಂದುವೆವು. ಪಿಲಿಪ್ಪಿ ೪:೬,೭ ರಲ್ಲಿನ ವಾಕ್ಯವು ನಮಗೆ ಹೀಗೆ ಆಜ್ಞಾಪಿಸುತ್ತದೆ. ”ಯಾವ ಸಂಭಂಧವಾಗಿಯೂ ಚಿಂತೆಮಾಡದೇ ಸವ೯ ವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನು ಪ್ರಾಥ೯ನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನು ಯೋಚನೆಗಳನ್ನು ಕ್ರಿಸ್ತಯೇಸುವಿನಲ್ಲಿ ಕಾಯುವದು”.