ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಇತ್ತೀಚಿನ ದಿನಗಳಲ್ಲಿ ಅನೇಕ ವಿಶ್ವಾಸಿಗಳು ತಮ್ಮ ಸ್ವಂತ ಗುಂಪಿನೊಟ್ಟಿಗೆ ಬೇಸತ್ತಿ ಹೋಗಿದ್ದಾರೆ ಮತ್ತು ಹೊಸ ಒಡಂಬಡಿಕೆ ಸಭೆಯನ್ನು ಹುಡುಕುವುದರಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಅನೇಕ ಸಭೆಗಳು ಸಹ ತಾವು ”ಹೊಸ ಒಡಂಬಡಿಕೆಯ ಸಭೆಗಳು” ಎಂಬ ಹಕ್ಕನ್ನು ಸಾಧಿಸಿಕೊಳ್ಳುತ್ತಿವೆ.

ಆದರೆ, ಹೊಸ ಒಡಂಬಡಿಕೆ ಸಭೆ ಎಂದು ನಾವು ಗುರುತಿಸುವುದಾದರೂ ಹೇಗೆ? ನಿಶ್ಚಯವಾಗಿ ಕೂಟಗಳ ಮಾದರಿಯಿಂದ ಗುರುತಿಸುವುದಲ್ಲ. ಬಲಶಾಲಿಯಾದಂತ ಸಭೆಗಳಲ್ಲಿ ನೋಡುವಂತ ಮಾದರಿಯಲ್ಲಿ ಅನೇಕ ಸಂಗತಿಗಳನ್ನು ನಾವು ಅನುಕರಿಸುವಂತ ಸಾಧ್ಯತೆ ಇದೆ, ಹಾಗಿದ್ದರೂ ಸಹ ನಮಗೆ ನಾವು ಬಲಶಾಲಿ ಸಭೆಯಾಗಲು ಆಗುವುದಿಲ್ಲ.

ಮೋಶೆಯು ಕಟ್ಟಿದಂತ ಗುಡಾರದಂತೆಯೇ ಪಿಲಿಷ್ಟಿಯರು ಕಟ್ಟುವುದು ಸಾಧ್ಯವಾಗಬಹುದು, ಏಕೆಂದರೆ ಯಾಜಕಕಾಂಡ ಪುಸ್ತಕದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲ್ಪಟ್ಟಿದೆ. ಆದರೆ ಅಲ್ಲಿನ ಗುಡಾರದ ಬಗ್ಗೆ ಒಂದು ಸಂಗತಿಯನ್ನು ಅನುಕರಿಸುವುದು ಸಾಧ್ಯವಿಲ್ಲ - ಅದು ಏನೆಂದರೆ, ಗುಡಾರದ ಮೇಲೆ ನೆಲೆಸಿರುವಂತ ದೇವರ ಮಹಿಮೆಯ ಅಗ್ನಿಯಾಗಿದೆ. ಅರಣ್ಯದಲ್ಲಿ ನಿಜವಾಗಿಯೂ ದೇವರು ವಾಸಿಸುವಂತ ಸ್ಥಳದ ಒಂದು ವಿಶಿಷ್ಟ ಗುರುತು ಇದಾಗಿದೆ. ಅದನ್ನು ಹೊರತು ಪಡಿಸಿದರೆ, ಗುಡಾರವು ಖಾಲಿ ಸ್ಥಳವಾಗಿರುತ್ತದೆ. ಸೊಲೋಮೊನನ ಸಮಯದಲ್ಲಿ ಗುಡಾರವು ದೇವಾಲಯವಾಗಿ ಬದಲಾದ ನಂತರ, ಅಲ್ಲಿ ದೇವರ ಮಹಿಮೆಯು ತುಂಬಲ್ಪಟ್ಟಿತು. ಆದರೆ ನಂತರ, ಇಸ್ರಾಯೇಲ್ ಹಿಂಜಾರಿ ಬಿದ್ದಾಗ, ಆ ಮಹಿಮೆಯು ನಿಧಾನವಾಗಿ ಅಲ್ಲಿಂದ ಚಲಿಸಿತು (ಯೆಹೆಜ್ಕೇಲ 10:4, 18, 19). ನಂತರ ದೇವಾಲಯವು ಖಾಲಿ ಸ್ಥಳವಾಗಿ ಉಳಿದುಕೊಂಡಿತು. ಅದೇ ರೀತಿಯಾಗಿ ಇಂದು ಅನೇಕ ಸಭೆಗಳು ಆಗಿವೆ.

ಹೊಸ ಒಡಂಬಡಿಕೆ ಸಭೆಯ ಒಂದು ಗುರುತು ಏನೆಂದರೆ, ಆ ಸಭೆಯ ಮಧ್ಯದಲ್ಲಿ ದೇವರ ಸಮ್ಮುಖವಿರುತ್ತದೆ. ಸಭೆಯ ಕೂಟಗಳಲ್ಲಿ ಪ್ರವಾದನಾ ಆತ್ಮ ಬಲಶಾಲಿಯಾಗಿದ್ದಾಗ, ಕೂಟಕ್ಕೆ ಬರುವಂತ ಜನರು ತಮ್ಮ ಮುಖವನ್ನು ಬಗ್ಗಿಸಿಕೊಂಡು, ”ದೇವರು ಇದ್ದಾನೆಂದು ಅರಿಕೆ ಮಾಡುತ್ತಾರೆ” (1 ಕೊರಿಂಥ 14:24, 25). ಯೇಸು ಸಭೆಯಲ್ಲಿ ಪ್ರವಾದನೆಯ ಮುಖೇನ ಮಾತನಾಡಿದಾಗ, ನಮ್ಮ ಹೃದಯ ಕುದಿಯುತ್ತದೆ, ಯೇಸು ಎಮ್ಮಾಹುಗೆ ಇಬ್ಬರು ಶಿಷ್ಯಂದಿರೊಟ್ಟಿಗೆ ಪ್ರಯಾಣ ಬೆಳೆಸುತ್ತಿದ್ದ ಸಮಯದಲ್ಲಿ ಅವರೊಟ್ಟಿಗೆ ಮಾತನಾಡಿದಾಗ, ಅವರ ಹೃದಯವು ಕುಂದಿದ ಹಾಗೇ (ಲೂಕ 24:32).

ದೇವರು ದಹಿಸುವ ಅಗ್ನಿಯಾಗಿದ್ದಾನೆ. ದೇವರು ಕೆಳೆಗಿಳಿದು ಪೊದೆಯ ಮುಖಾಂತರ ಮೋಶೆಗೆ ಮಾತನಾಡಿದಾಗ, ಪೊದೆಯು ಹೊತ್ತಿ ಉರಿಯಿತು, ಆಗ ಯಾವುದೇ ಕೀಟ, ಹುಳುಗಳು ಸಹ ಆ ಪೊದೆಯಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅದೇ ರೀತಿಯಾಗಿ, ಬಲಶಾಲಿಯಾದಂತಹ, ದೇವರ ಸಮ್ಮುಖದ ದಹಿಸುವಿಕೆಯು ಇಂದು ಎಲ್ಲಿ ಕಂಡು ಬರುತ್ತದೋ, ಅಲ್ಲಿ ಯಾವುದೇ ಪಾಪವು ರಹಸ್ಯವಾಗಿ ಅಥವಾ ಗೊತ್ತಾಗದ ಹಾಗೇ ಇರುವುದಿಲ್ಲ. ಅಂತಹ ಸಭೆ ಮಾತ್ರ ಹೊಸ ಒಡಂಬಡಿಕೆಯ ಸಭೆಯಾಗಿರುತ್ತದೆ. ಯೇಸುವಿನ ಕಣ್ಣುಗಳು ಬೆಂಕಿಯ ಉರಿಯಂತೆ ಇರುತ್ತವೆ (ಪ್ರಕಟಣೆ 1:14) ಮತ್ತು ಆ ಕಣ್ಣಿನ ಮುಖೇನ ಆತನು ಸತತವಾಗಿ ಹುಡುಕಿ, ಪಾಪವನ್ನು ತೋರಿಸುತ್ತಿರುತ್ತಾನೆ, ಮಾನವನ ಸಂಪ್ರದಾಯಗಳನ್ನು ತೋರಿಸುತ್ತಿರುತ್ತಾನೆ ಹಾಗೂ ಆತನು ಕಟ್ಟುತ್ತಿರುವಂತ ಸಭೆಗಳಲ್ಲಿ ಫರಿಸಾಯತೆಯನ್ನು ತೋರಿಸುತ್ತಿರುತ್ತಾನೆ.

ಪರಲೋಕ ರಾಜ್ಯಕ್ಕೆ ಕೀಲಿ ಕೈ ಯಾವುದೆಂದರೆ, ಆತ್ಮದಲ್ಲಿ ಬಡವರಾಗಿರುವುದಾಗಿದೆ (ಮತ್ತಾಯ 5:3). ಇದು ಇಲ್ಲದೇ, ನಾವು ಹೊಸ ಒಡಂಬಡಿಕೆ ಸಭೆಯನ್ನು ಕಟ್ಟಲು ಸಾಧ್ಯವಿಲ್ಲ. ಆತ್ಮದಲ್ಲಿ ಬಡವರಾಗಿರುವುದು ಎಂದರೆ, ದೇವರ ಎದುರಿಗೆ ಸತತವಾಗಿ ನಮ್ಮ ಸ್ವಂತ ಅಗತ್ಯತೆಯ ಪರಿಜ್ಞಾನವನ್ನು ಹೊಂದಿ ಮುರಿಯಲ್ಪಟ್ಟವರಾಗಿರುವುದಾಗಿದೆ, ಏಕೆಂದರೆ ನಮ್ಮ ಪರಲೋಕದ ತಂದೆಯು ಪರಿಪೂರ್ಣನಾಗಿರುವ ಮೇರೆಗೆ, ನಾವು ಸಹ ದೊಡ್ಡದಾದ ಮತ್ತು ತೀವ್ರವಾದ ಬಯಕೆಯನ್ನು ಹೊಂದಿರಬೇಕು. ”ಮುರಿದ ಹೃದಯದವರಿಗೆ ಕರ್ತನು ಸಮೀಪವಾಗಿದ್ದಾನೆ” (ಕೀರ್ತನೆಗಳು 14:18) ಮತ್ತು ಆತನು ಸಮೀಪವಿದ್ದಾಗ, ಆತನ ಸಮ್ಮುಖತೆಯು ನಮ್ಮ ಹೃದಯದೊಳಗೆ ಪರಲೋಕದ ಬೆಂಕಿಯನ್ನು ತರುತ್ತದೆ ಹಾಗೂ ನಾವು ಎಲ್ಲಿಯೇ ಹೋದರೂ, ನಮ್ಮ ಮುಖಾಂತರ ಬೇರೆಯವರಿಗೆ ಆ ಬೆಂಕಿಯನ್ನು ಕೊಡುತ್ತೇವೆ.

ಹೊಸ ಒಡಂಬಡಿಕೆ ಸಭೆಯಲ್ಲಿ, ಕೇವಲ ಬಲಶಾಲಿಯಾದಂತಹ ವಾಕ್ಯದ ಬೋಧನೆ ಮಾತ್ರ ಇರುವುದಿಲ್ಲ, ಆದರೆ ಬಲಶಾಲಿಯಾದಂತ ವಾಕ್ಯದ ಮಾದರಿ ಜೀವಿತವೂ ಸಹ ಇರುತ್ತದೆ

ಅನನೀಯನು ಮತ್ತು ಸಪ್ಫ್ಯೆರಳು (ಅ.ಕೃತ್ಯಗಳು 5ನೇ ಅಧ್ಯಾಯ) ಗಂಭೀರವಾದ ತಪ್ಪನ್ನು ಮಾಡಿದರು, ಯೆರುಸಲೇಮಿನಲ್ಲಿನ ಹೊಸ ಒಡಂಬಡಿಕೆಯ ಸಭೆಗೆ ಅವರು ಸೇರಿಕೊಂಡಾಗ, ಅಲ್ಲಿ ದೇವರ ಸಮ್ಮುಖವು ಬೆಂಕಿಯ ರೀತಿಯಲ್ಲಿ ಉರಿಯುತ್ತಿತ್ತು. ಅವರು ಕೊರಿಂಥದಲ್ಲಿನ ಸಭೆಯಲ್ಲಿ ಇದ್ದಿದ್ದರೆ (ನಂತರದ ವರ್ಷಗಳಲ್ಲಿ), ಅವರು ದೀರ್ಘ ಜೀವಿತವನ್ನು ಜೀವಿಸ ಬಹುದಾಗಿತ್ತು. ಅನನೀಯನು ಅಲ್ಲಿ ಸಭಾ ಹಿರಿಯನು ಸಹ ಆಗ ಬಹುದಿತ್ತು - ಏಕೆಂದರೆ ಕೊರಿಂಥದಲ್ಲಿನ ಸಭೆಯು ಪ್ರಾಪಂಚಿಕತೆಯಿಂದ ಕೂಡಿತ್ತು ಮತ್ತು ಸತ್ತ ಸಭೆಯಾಗಿತ್ತು. ಆದರೆ ಯೆರುಸಲೇಮಿನಲ್ಲಿನ ಹೊಸ ಒಡಂಬಡಿಕೆ ಸಭೆಯ ಬೆಂಕಿಯು ಈ ಜೋಡಿಯನ್ನು ಅಲ್ಲಿ ಉಳಿಯುವಂತೆ ಅವಕಾಶ ಕೊಡಲಿಲ್ಲ. ಯಾವುದೇ ಹೊಸ ಒಡಂಬಡಿಕೆ ಸಭೆಯಲ್ಲಿ ಯಾರಾದರೂ ಕಪಟಿತನದಿಂದ ಜೀವಿಸುತ್ತಿದ್ದರೆ, ದೇವರು ಆ ಕಪಟಿತನವನ್ನು ತೋರಿಸುವ ಮೂಲಕ ಅವರನ್ನು ಸಭೆಯಿಂದ ತೆಗೆದು ಹಾಕುತ್ತಾನೆ.

ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿನ ನಮ್ಮ ಜೀವಿತದಲ್ಲಿ ಯಾವುದಾದರೂ ಸಂಗತಿಯು ದೇವರಿಗೆ ಅಗೌರವ ತೋರಿಸುತ್ತಿತ್ತು ಎಂದರೆ, ಆದಗ್ಯೂ, ನಾವು ನಿಜವಾದ ಹೊಸ ಒಡಂಬಡಿಕೆ ಸಭೆಯ ಸದಸ್ಯರಾಗಿ ಉಳಿದುಕೊಂಡರೆ ನಾವು ದೊಡ್ಡ ಅಪಾಯದಲ್ಲಿ ಇದ್ದೀವಿ. ನಿಮ್ಮ ಜೀವಿತದಲ್ಲಿನ ಪ್ರಾಥಮಿಕ ಮಹತ್ವಕಾಂಕ್ಷೆಯು ದೇವರ ಮಹಿಮೆಯನ್ನು ಹುಡುಕುವುದಾಗಿರದೇ, ಅದರ ಬದಲಾಗಿ, ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ನೀವು ಏನಾದರೂ ಮಹತ್ವಕಾಂಕ್ಷೆಯನ್ನು ಪ್ರಾಥಮಿಕವಾಗಿ ಹೊಂದಿದ್ದರೆ, ದೇವರು ಬಲಶಾಲಿಯಾಗಿ ಇರುವಂತ ಮತ್ತು ಆತನ ವಾಕ್ಯವು ಬಲಶಾಲಿಯಾಗಿ ಸಾರಲ್ಪಡುವಂತ ಹೊಸ ಒಡಂಬಡಿಕೆ ಸಭೆಯನ್ನು ನೀವು ಬಿಡುವುದು ಒಳ್ಳೆಯದು. ಸತ್ತಂತ ಸಭೆಯನ್ನು ಸೇರುವುದು ನಿಮಗೆ ಉತ್ತಮವಾಗಿರುತ್ತದೆ. ಆಗ ಅನನೀಯ ಮತ್ತು ಸಪ್ಫ್ಯೆರಳು ಸತ್ತ ಹಾಗೇ, ನೀವು ಸಾಯದೇ ಹೆಚ್ಚು ದಿನ ಬದುಕಲು ಸಾಧ್ಯವಿದೆ.

ಇಂದು ಅನೇಕ ಸಭೆಗಳು ತಮ್ಮನ್ನ ತಾವು ”ಹೊಸ ಒಡಂಬಡಿಕೆ ಸಭೆ” ಎಂದು ಕರೆದುಕೊಳ್ಳುತ್ತಿವೆ. ಆದರೆ ಡೋಡೋ ಹಕ್ಕಿಗಳ ಹಾಗೇ ಅವರು ಸತ್ತಂತಾಗಿದ್ದಾರೆ!! ಆ ಹೆಸರಿನ ಅರ್ಥ ಏನು ಅಲ್ಲದಿರುವುದು. ಪ್ರಶ್ನೆ ಏನೆಂದರೆ ಫರಿಸಾಯರಿರಬಹುದು ಅಥವಾ ಕಪಟಿಗಳಿರಬಹುದು ಅಲ್ಲಿ ನೆಮ್ಮದಿಯಾಗಿ ಜೀವಿಸಬಹುದು, ಇಲ್ಲವಾದಲ್ಲಿ, ದೇವರು ಅವರ ಒಳ ಸ್ವಭಾವವನ್ನು ತೋರಿಸಲ್ಪಡುವ ಮುಖೇನ, ಅವರು ಮುಜುಗರಕ್ಕೆ ಒಳಗಾಗಿ ಸಭೆಯನ್ನೂ ಬೀಡಬಹುದು. ಹೊಸ ಒಡಂಬಡಿಕೆಯ ಸಭೆಯಲ್ಲಿ ವಾಕ್ಯದ ಬೋಧನೆಗೆ ಅನೇಕರು ಮುಜುಗರಗೊಳ್ಳುತ್ತಾರೆ ಮತ್ತು ಸಭೆಯನ್ನು ಬಿಡುತ್ತಾರೆ. ಯೆರುಸಲೇಮಿನಲ್ಲಿನ ಸಭೆಗೆ ಬರೆದಿರುವುದೇನೆಂದರೆ, ”ಅವರ ಜೊತೆಯಲ್ಲಿರುವುದಕ್ಕೆ ಮಿಕ್ಕಾದವರೊಳಗೆ ಒಬ್ಬರಿಗೂ ಧೈರ್ಯವಿರಲಿಲ್ಲ” (ಅ.ಕೃತ್ಯಗಳು 5:13).

ಸಭಾ ಹಿರಿಯರಾಗಿ ನಮ್ಮ ಬಯಕೆಯು ಸದಸ್ಯರನ್ನು ಹೆಚ್ಚಿಸುವುದಕ್ಕಿಂತ, ಯೇಸುವಿಗಾಗಿ ಶಿಷ್ಯಂದಿರನ್ನು ಮಾಡುವುದಾಗಿರಬೇಕು, ನಮ್ಮ ಸಭೆಗಳಲ್ಲಿ ಫರಿಸಾಯರು ಮತ್ತು ಕಪಟಿಗಳು ಒಟ್ಟಾಗಿ ಸೇರಿದಾಗ, ನಾವು ಹೊಸ ಒಡಂಬಡಿಕೆ ಸಭೆಯನ್ನು ಕಟಲು ಸಾಧ್ಯವಿಲ್ಲ. ಸಭೆಯಲ್ಲಿ ಯೇಸುವಿನ ಸಮ್ಮುಖವು ಬಲಶಾಲಿಯಾಗಿ ಇರುವಾಗ, ಅಲ್ಲಿರುವಂತ ಶಿಷ್ಯಂದಿರು ಆತನು ಮಹಿಮೆಯನ್ನು ನೋಡುವುದರೊಟ್ಟಿಗೆ ಎತ್ತಲ್ಪಡುತ್ತಾರೆ. ನಾವು ನಿಜವಾಗಿಯೂ ಎದ್ದು ಬರುವಂತ ಕರ್ತನ ಮಹಿಮೆಯನ್ನು ನೋಡಿದ್ದರ ಗುರುತೇನೆಂದರೆ, ಲೋಕದಲ್ಲಿನ ಸಂಗತಿಗಳು (ನೆಮ್ಮದಿ ಮತ್ತು ಗೌರವ ಮತ್ತು ಆಸ್ತಿ) ನಮ್ಮ ಕಣ್ಣುಗಳಿಗೆ ಮಂದವಾಗಿರುತ್ತವೆ ಮತ್ತು ನಮಗೆ ಒಂದು ಬಾರಿ ಅವು ಆಕರ್ಷಿತವಾಗಿದ್ದಂತೆ, ಪ್ರಸ್ತುತ ಆಕರ್ಷಿತವಾಗಿರುವುದಿಲ್ಲ.

ಹೊಸ ಒಡಂಬಡಿಕೆ ಸಭೆಯಲ್ಲಿ, ಕೇವಲ ಬಲಶಾಲಿಯಾದಂತಹ ವಾಕ್ಯದ ಬೋಧನೆ ಮಾತ್ರ ಇರುವುದಿಲ್ಲ, ಆದರೆ ಬಲಶಾಲಿಯಾದಂತ ವಾಕ್ಯದ ಮಾದರಿ ಜೀವಿತವೂ ಸಹ ಇರುತ್ತದೆ. ದೇವರಿಗಾಗಿ ಮತ್ತೊಬ್ಬರ ಮೇಲೆ ಪರಿಣಾಮ ಬೀರುವುದು ಹೊಸ ಸಿದ್ದಾಂತವೇನಲ್ಲ, ಆದರೆ ನಮ್ಮ ಪವಿತ್ರ ಜೀವಿತಗಳು ಮತ್ತೊಬ್ಬರ ಮೇಲೆ ಪರಿಣಾಮ ಬೀರಬೇಕು. ಹೊಸ ಒಡಂಬಡಿಕೆಯ ಸೇವಕರುಗಳು ಕೇವಲ ಮತ್ತೊಬ್ಬರಿಗೆ ಬೋಧನೆ ಮಾಡುವುದಿಲ್ಲ, ಅವರು ತಮ್ಮ ಮಾದರಿಯನ್ನು ಅನುಸರಿಸುವಂತೆ ಮತ್ತೊಬ್ಬರನ್ನು ಆಹ್ವಾನಿಸುತ್ತಾರೆ (1 ಕೊರಿಂಥ 11:1).

ನಮ್ಮ ಮಾದರಿ ಯೋಗ್ಯವಾಗಿಲ್ಲವೆಂದರೆ ನಾವು ಅಳಬೇಕು. ನಾವು ಅಭಿಷೇಕವಿಲ್ಲದಂತ ಸಂದೇಶಗಳನ್ನು ಕೊಟ್ಟು, ಜನರನ್ನು ಬೇಸರಗೊಳಿಸಿ, ಅವರನ್ನು ಒಣಗಿದಂತೆ ಮಾಡುತ್ತಿದ್ದೇವೆ ಎಂದರೆ, ನಾವು ನಮ್ಮ ತಲೆಯನ್ನು ನಾಚಿಕೆಯಲ್ಲಿ ತಗ್ಗಿಸಿಕೊಳ್ಳಬೇಕು. ನಾವು ಯೇಸುವನ್ನು ಹಿಂಬಾಲಿಸುವುದಾದರೆ, ನಾವು ತಣ್ಣಗಾಗುವುದು ಅಥವಾ ಅಹಂಭಾವವುಳ್ಳವರಾಗಿರುವುದು ಸಾಧ್ಯವಾಗುವುದಿಲ್ಲ. ನಾವು ಕೇವಲ ಕನಸ್ಸನ್ನು ಮತ್ತು ದರ್ಶನದ ಬಗ್ಗೆ ಮಾತನಾಡುವುದಾದರೆ, ಜನರನ್ನು ಪೋಷಿಸಲು ಕರ್ತನಿಂದ ಯಾವುದೇ ವಾಕ್ಯವಿಲ್ಲವೆಂದರೆ, ನಾವು ಯೇಸುವಿನಿಂದ ದೂರವಿದ್ದೀವಿ ಎಂದು ಅರ್ಥ. ನಾವು ಕರ್ತನಿಗಾಗಿ ಬೆಂಕಿಯುಳ್ಳವರಾಗಿರುವಾಗ ಜನರನ್ನು ಬೇಸರಗೊಳಿಸಲು ಸಾದ್ಯವಾಗುವುದಿಲ್ಲ.

ಯೇಸು ಮರಣದಿಂದ ಎದ್ದು ಬಂದಿದ್ದಾರೆ, ಹಾಗಾಗಿ ಆತನು ಎಲ್ಲದರಲ್ಲಿಯೂ ಮೊದಲ ಸ್ಥಾನವನ್ನು ಹೊಂದಬೇಕು (ಕೊಲಸ್ಸೆ 1:18). ಯಾರಿಗೆ ಈ ಮಹತ್ವಕಾಂಕ್ಷೆ ಇರುತ್ತದೋ, ದೇವರು ಅವರಿಗೆ ಬೆಂಬಲ ನೀಡುವ ಮೂಲಕ, ಅವರ ಬೆನ್ನ ಹಿಂದೆ ಇರುತ್ತಾರೆ. ಇದರ ಅರ್ಥ ಏನೆಂದರೆ, ನಮ್ಮ ಸ್ವಂತ ಯೋಜನೆಗಳನ್ನು ಮತ್ತು ಹಕ್ಕುಗಳನ್ನು ಬಿಟ್ಟುಕೊಟ್ಟು, ನಾವು ಏನು ಮಾಡಬೇಕೆಂದು ಯೇಸು ಹೇಳಲಿ ಎಂಬುವುದಾಗಿದೆ ಮತ್ತು ಹೇಗೆ ನಮ್ಮ ಹಣವನ್ನು, ಸಮಯವನ್ನು ಕಳೆಯಬೇಕು ಎಂಬುವುದನ್ನು ಯೇಸು ನಿರ್ಧರಿಸಲಿ ಎಂಬ ಮನೋಭಾವವನ್ನು ಹೊಂದಿರುವುದಾಗಿದೆ. ಇದು ಮಾತ್ರವೇ ನಿಮ್ಮ ಜೀವಿತದ ಮಹತ್ವಕಾಂಕ್ಷೆಯಾಗಿದ್ದರೆ, ನೀವು ನಿಶ್ಚಯಪಡಿಸಿಕೊಳ್ಳಬೇಕಾಗಿದ್ದೇನೆಂದರೆ, ನಿಮ್ಮ ಸ್ಥಳೀಯ ಜಾಗದಲ್ಲಿ ದೇವರು ಹೊಸ ಒಡಂಬಡಿಕೆ ಸಭೆಯನ್ನು ಕಟ್ಟಲು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾನೆ ಎಂಬುದಾಗಿ.

ಜನರು ಯೇಸುವಿನ ಹೆಸರನ್ನು ಉಲ್ಲೇಖಿಸುವುದರಿಂದ, ಯೇಸು ಅವರ ಮಧ್ಯದಲ್ಲಿ ಇದ್ದಾನೆ ಎಂದು ಅನೇಕರು ಅಂದುಕೊಳ್ಳುತ್ತಾರೆ (ಮತ್ತಾಯ 18:20). ಆದರೆ ಅವರು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುತ್ತಿದ್ದಾರೆ. ಆತನು ನಿಜವಾಗಿಯೂ ಅವರ ಮಧ್ಯದಲ್ಲಿ ಇರುವುದಾದರೆ, ಯಾಕೆ ಅವರ ಕೂಟಗಳು ತುಂಬಾ ಬೇಸರದಿಂದ ಇರುತ್ತವೆ? ಯಾಕೆ ಅವರ ಜೀವಿತ ಬದಲಾಗುತ್ತಿಲ್ಲ? ನಿಜವಾದ ದೈವಿಕ ಮನುಷ್ಯನ ಜೊತೆ ಸ್ವಲ್ಪ ಸಮಯ ಸಹವಾಸ ಮಾಡಿದರೂ ಸಹ, ಅದು ನಮ್ಮ ಮೇಲೆ ತುಂಬಾ ಆಳವಾದ ಪರಿಣಾಮ ಬೀರುತ್ತದೆ ಮತ್ತು ನಮ್ಮ ಜೀವಿತದ ದಿಕ್ಕನ್ನೇ ಬದಲಾಯಿಸುತ್ತದೆ. ಹಾಗಿದ್ದಲ್ಲಿ, ಯೇಸುವಿನ ಜೊತೆ ನಾವು ಸ್ವಲ್ಪ ಸಮಯ ಕಳೆಯುವುದಾದರೆ, ನಮ್ಮ ಜೀವಿತದ ಮೇಲೆ ಎಷ್ಟೋ ಪರಿಣಾಮ ಬೀರಬೇಕಲ್ಲವೇ. ಸಭೆಯ ಕೂಟಗಳ ಮುಖಾಂತರ ನಮ್ಮ ಜೀವಿತಗಳು ಬದಲಾಗುತ್ತಿಲ್ಲವೆಂದರೆ, ನಾವು ಒಪ್ಪಿಕೊಳ್ಳಬೇಕು, ನಮ್ಮ ಕೂಟಗಳಲ್ಲಿ ಕರ್ತನ ಸಮ್ಮುಖ ಇಲ್ಲವೆಂದು. ಆಗ ನಾವು ಹೊಸ ಒಡಂಬಡಿಕೆ ಸಭೆಯಲ್ಲ.

ನಾವು ಈ ಲೋಕದಲ್ಲಿ ಪರಿಪೂರ್ಣ ಸಭೆಯನ್ನು ಕಟ್ಟಲು ಅಸಮರ್ಥರು. ಯೇಸು ಕಟ್ಟಿದ ಮೊದಲ ಸಭೆಯಲ್ಲಿ ಹನ್ನೆರೆಡು ಶಿಷ್ಯಂದಿರಿದ್ದರು, ಅಲ್ಲಿ ಒಬ್ಬ ವಿಶ್ವಾಸಘಾತಕನಿದ್ದನು. ಹಾಗಾಗಿ ನಾವು ಉತ್ತಮವಾದದ್ದನ್ನು ನಿರೀಕ್ಷೆ ಮಾಡಲಾಗುವುದಿಲ್ಲ. ಆದರೆ ಇಂದು ಯೇಸು ಎಲ್ಲಿ ತನ್ನ ಸಭೆಯನ್ನು ಕಟ್ಟುತ್ತಾನೋ, ಅಲ್ಲಿರುವಂತ ಸಭೆಯ ಜನರು ಆತನ ಮಹಿಮೆಯನ್ನು ನೋಡಿರುತ್ತಾರೆ ಮತ್ತು ಅದನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಅವರ ಹೃದಯವು ಬೆಂಕಿಯಿಂದ ಪ್ರಜ್ವಲಿಸುತ್ತಿರುತ್ತದೆ, ಸೈತಾನನು ಅದನ್ನು ಆರಿಸಲು ಸಾಧ್ಯವಾಗುವುದಿಲ್ಲ. ದೇವರ ಮಹಿಮೆಗಾಗಿ ಅವರ ಮುಖಾಂತರ ಕರ್ತನು ಹೊಸ ಒಡಂಬಡಿಕೆ ಸಭೆಯನ್ನು ಕಟ್ಟುತ್ತಾನೆ.