WFTW Body: 

ನಾವು ಕೆಲವೊಮ್ಮೆ ನಮ್ಮ ಜೀವಿತಗಳಲ್ಲಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ದೇವರ ಮಾರ್ಗದರ್ಶನವನ್ನು ಅರಿತುಕೊಳ್ಳಲು ಕಾತೂರವುಳ್ಳವರಾಗಿರುತ್ತೇವೆ, ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆತನ ಮಾರ್ಗದರ್ಶನಗಳನ್ನು ಹೊಂದಲು ನಾವು ಅಷ್ಟಾಗಿ ಉತ್ಸುಕತೆಯನ್ನು ಹೊಂದಿರುವುದಿಲ್ಲ. ಉದಾಹರಣೆಗೆ, ನಾವು ಯಥಾರ್ಥವಾಗಿ ಮದುವೆಯಲ್ಲಿ ದೇವರ ಚಿತ್ತವನ್ನು ಹುಡುಕಬಹುದು, ಆದರೆ ಕೆಲಸವನ್ನು ನೋಡುವಂತ ವಿಷಯದಲ್ಲಿ ದೇವರ ಚಿತ್ತವನ್ನು ಹುಡುಕುವುದಿಲ್ಲ ಅಥವಾ ಇದು ತದ್ವಿರದ್ದವೂ ಇರಬಹುದು ಅಥವಾ ನಾವು ನಮ್ಮ ತಿಂಗಳ ವಾರ್ಷಿಕ ರಜೆಗಳನ್ನು ಹೇಗೆ ಕಳೆಯುವುದು ಮತ್ತು ಎಲ್ಲಿ ಕಳೆಯುವುದು ಎಂಬುದರಲ್ಲಿ ದೇವರ ಮಾರ್ಗದರ್ಶನವನ್ನು ಹುಡುಕಬಹುದು, ಆದರೆ ನಮ್ಮ ಹಣವನ್ನು ಹೇಗೆ ವ್ಯಯಿಸಬೇಕು ಎಂಬುವುದರಲ್ಲಿ ನಾವು ದೇವರ ಚಿತ್ತವನ್ನು ಹುಡುಕಿರುವುದಿಲ್ಲ.

ಇದರಿಂದ ತಿಳಿಯುವುದೇನೆಂದರೆ, ನಮಗೆ ಅನುಕೂಲವಾಗುವ ರೀತಿಯಲ್ಲಿ ಮಾತ್ರ ದೇವರ ಮಾರ್ಗದರ್ಶನವನ್ನು ಹುಡುಕುವುದರಲ್ಲಿ ನಾವು ಒಲವನ್ನು ಹೊಂದಿರುತ್ತೇವೆ. ನಮಗೆ ಗೊತ್ತಿಲ್ಲದೇ, ನಮ್ಮ ಹೃದಯದಲ್ಲಿ ಸ್ವಾರ್ಥವುಳ್ಳಂತ ಉದ್ದೇಶವು ಕೆಲವೊಮ್ಮೆ ಅಡಗಿಕೊಂಡಿರುತ್ತದೆ. ಕೆಲವೊಂದು ವಿಷಯಗಳಲ್ಲಿ ನಾವು ದೇವರ ಚಿತ್ತವನ್ನು ಹುಡುಕುತ್ತೇವೆ, ಏಕೆಂದರೆ, ನಾವು ತಪ್ಪು ಮಾಡಬಾರದು, ಇದರಿಂದಾಗಿ ನಾವು ಏನನ್ನಾದರೂ ಕಳೆದುಕೊಳ್ಳುವ ಅಥವಾ ಬಾಧೆ ಪಡುವ ಸಂದರ್ಭವನ್ನು ಎದುರಿಸುತ್ತೇವೆ ಎಂದು. ಇದರ ಹಿಂದಿನ ಉದ್ದೇಶವು ನಾವು ದೇವರನ್ನು ಮೆಚ್ಚಿಸುವುದಾಗಿರುವುದಿಲ್ಲ, ಆದರೆ ಇದರ ಹಿಂದಿನ ಉದ್ದೇಶ, ನಾವು ಅನುಕೂಲತೆ ಹೊಂದಿರಬೇಕು ಮತ್ತು ಏಳಿಗೆ ಹೊಂದಬೇಕು ಎಂಬುದಾಗಿರುತ್ತದೆ. ಅದಕ್ಕಾಗಿ, ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳುವಲ್ಲಿ ನಾವು ಸೋಲುತ್ತೇವೆ, ಆತನು ಈ ರೀತಿಯಾಗಿ ವಾಗ್ದಾನ ಮಾಡಿದ್ದಾನೆ, ಯಾರು ಆತನ ಮಾರ್ಗಗಳನ್ನು ಸನ್ಮಾನಿಸುತ್ತಾರೋ, ಯಾರು ತಮ್ಮ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯರಾಗಿರುತ್ತಾರೋ, ಅಂತವರುಗಳು ಸಂತೋಷವಾಗಿ ತಮ್ಮ ಜೀವಿತಗಳಲ್ಲಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಾರೆ.

ಯಾರು ಸ್ವಾರ್ಥವಿಲ್ಲದೇ ಮತ್ತೊಬ್ಬರ ಅಗತ್ಯತೆಗಳ ಬಗ್ಗೆ ಕಾಳಜಿವಹಿಸುತ್ತಾರೋ ಅಂಥವರಿಗೆ ದೇವರು ತನ್ನ ಮನಸ್ಸನ್ನು ಪ್ರಕಟಿಸಲು ಹರ್ಷಿಸುತ್ತಾರೆ

ಸತ್ಯವೇದದಲ್ಲಿನ ಅನೇಕ ಕ್ಷೇತ್ರಗಳಲ್ಲಿ ದೇವರ ಚಿತ್ತವು ಪ್ರಕಟಗೊಂಡಿದೆ. ಉದಾಹರಣೆಗೆ, ಸತ್ಯವೇದವು ಈ ರೀತಿಯಾಗಿ ಹೇಳುತ್ತದೆ - ನಾವು ಪವಿತ್ರರಾಗಿರಬೇಕು ಮತ್ತು ಕೃತಜ್ಞತರಾಗಿರಬೇಕು ಎಂಬುದಾಗಿ ದೇವರು ಬಯಸುತ್ತಾನೆ.

ದೇವರ ಚಿತ್ತವೇನೆಂದರೆ ನೀವು ಶುದ್ಧರಾಗಿ ಇರಬೇಕೆಂಬುದಾಗಿದೆ. ಆದುದರಿಂದ ಹಾದರಕ್ಕೆ ದೂರವಾಗಿರಬೇಕು. ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿ ಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ
(1 ಥೆಸಲೋನಿಕ 4:3, 5:18)

ಅದರಂತೆ, ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು, ಇದನ್ನು ದೇವರು ನಮ್ಮಿಂದ ನಿರೀಕ್ಷಿಸುತ್ತಾನೆ ಎಂಬುದಾಗಿ ನಮಗೆ ತಿಳಿಸಲ್ಪಟ್ಟಿದೆ (ರೋಮ 13:9). ನಾವು ದೇವರ ಕ್ಷಮೆಯನ್ನು ಮತ್ತು ರಕ್ಷಣೆಯನ್ನು ಸ್ವೀಕರಿಸಿಕೊಂಡಿದ್ದರೆ, ನಮ್ಮ ನೆರೆಹೊರೆಯವರಿಗಾಗಿ ನಾವು ಅದನ್ನೇ ಬಯಸುವವರಾಗಿರಬೇಕು. ದೇವರ ಚಿತ್ತವು ಹೊಸ ಒಡಂಬಡಿಕೆಯಲ್ಲಿ ಸ್ಪಷ್ಟವಾಗಿ ಪ್ರಕಟಿಸಲ್ಪಟ್ಟಿದೆ : ನಾವು ಆತನ ಸಾಕ್ಷಿಗಳಾಗಿರಬೇಕು (ಅ.ಕೃತ್ಯಗಳು 1:8). ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದು ಎಂಬುದರ ವ್ಯಕ್ತಪಡಿಸುವಿಕೆ ಏನೆಂದರೆ, ಅವರ ಆತ್ಮೀಕ ಅಗತ್ಯತೆಗಳಿಗಾಗಿ ನಾವು ಪ್ರಾಥಮಿಕವಾಗಿ ಕಾಳಜಿ ಹೊಂದಿದ್ದೀವಿ ಎಂಬುದನ್ನು ತೋರಿಸುವುದಾಗಿದೆ, ಆದರೆ ಇನ್ನೊಬ್ಬರ ಅಗತ್ಯತೆಗಳನ್ನು ನಾವು ತಳ್ಳಿ ಹಾಕಬಾರದು. ”ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮುಖ ತಪ್ಪಿಸಿಕೊಳ್ಳದಿರುವದು, ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ. ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು, ನಿಮ್ಮ ಕ್ಷೇಮವು ಬೇಗನೆ ವಿಕಾಸಿಸುವದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿ ಮುಂದೊರಿಯುವದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವದು. ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ, ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನೂ ಬೆರಳಸನ್ನೆಯನ್ನೂ ಕೆಡುಕಿನ ನುಡಿಯನ್ನೂ ಹೋಗಲಾಡಿಸಿ ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವದು ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ” (ಯೆಶಾಯ 58:7-11). ಯಾರು ಸ್ವಾರ್ಥವಿಲ್ಲದೇ ಮತ್ತೊಬ್ಬರ ಅಗತ್ಯತೆಗಳ ಬಗ್ಗೆ ಕಾಳಜಿವಹಿಸುತ್ತಾರೋ ಅಂಥವರಿಗೆ ದೇವರು ತನ್ನ ಮನಸ್ಸನ್ನು ಪ್ರಕಟಿಸಲು ಹರ್ಷಿಸುತ್ತಾರೆ.

ದೇವರು ತನ್ನ ಚಿತ್ತವನ್ನು ಈಗಾಗಲೇ ಪ್ರಕಟಪಡಿಸಿದ ಕ್ಷೇತ್ರಗಳಲ್ಲಿ ನಾವು ವಿಧೇಯರಾಗಲು ಸೋತರೆ, ಬೇರೆ ಕ್ಷೇತ್ರಗಳಲ್ಲಿ ಆತನು ನಮಗೆ ಮಾರ್ಗದರ್ಶನ ಮಾಡುತ್ತಾನೆ ಎಂಬುದನ್ನು ನಾವು ನಿರೀಕ್ಷಿಸಲಾಗುವುದಿಲ್ಲ. ದೈವಿಕ ಮಾರ್ಗದರ್ಶನದ ತತ್ವ ಏನೆಂದರೆ, ಒಬ್ಬನಿಗೆ ದೊರಕಿರುವಂತ ಬೆಳಕನ್ನು ಆತನು ಅಲಕ್ಷ್ಯ ಮಾಡಿದರೆ, ದೇವರು ಮುಂದಿನ ಬೆಳಕನ್ನು ಆತನಿಗೆ ತೋರಿಸುವುದಿಲ್ಲ. ನಾವು ಮೊದಲ ಹೆಜ್ಜೆಯನ್ನು ತುಳಿಯದಿದ್ದರೆ, ದೇವರು 2ನೇ ಹೆಜ್ಜೆಯನ್ನು ತೋರಿಸುವುದಿಲ್ಲ. ”ನೀವು ಒಂದು ಹೆಜ್ಜೆಯಿಂದ ಮತ್ತೊಂದು ಹೆಜ್ಜೆಗೆ ಹೋಗುವಾಗ, ಒಂದೊಂದೇ ಮಾರ್ಗವನ್ನು ನಿಮಗಾಗಿ ತೆರೆಯುತ್ತೇನೆ” (ಜ್ಞಾನೋಕ್ತಿಗಳು 4:12 - ವಿವರಣೆ). ನಮ್ಮ ಪ್ರತಿಯೊಂದು ಹೆಜ್ಜೆಗಳಲ್ಲಿ ಆತನು ಆಸಕ್ತಿಯನ್ನು ಹೊಂದಿದ್ದಾನೆ. ”ಕರ್ತನಿಂದ ಒಳ್ಳೇ ಮನುಷ್ಯನ ಹೆಜ್ಜೆಗಳು ದೃಢವಾಗುತ್ತವೆ; ಆತನು ಅವನ ಮಾರ್ಗದಲ್ಲಿ ಸಂತೋಷಪಡುತ್ತಾನೆ” (ಕೀರ್ತನೆಗಳು 37:23) (ಕೆ.ಜೆ.ವಿ).

ವಿಧೇಯನಾಗುವವನಿಗೆ ಇಲ್ಲಿ ಮತ್ತೊಂದು ಮಾರ್ಗದರ್ಶನದ ವಾಗ್ದಾನವಿದೆ :

”ನಾನು ನಿನಗೆ ಬುದ್ಧಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡೆಸುವೆನು. ಆದ್ದರಿಂದ ವಿವೇಕವಿಲ್ಲದ ಕುದುರೆಯ ಹಾಗೆಯೂ ಹೇಸರ ಕತ್ತೆಯ ಹಾಗೆಯೂ ಇರಬೇಡಿರಿ” (ಕೀರ್ತನೆಗಳು 32:8, 9) (ಕೆ.ಜೆ.ವಿ). (ಕುದುರೆಯ ಗುಣಲಕ್ಷಣವೇನೆಂದರೆ, ತಾಳ್ಮೆಯನ್ನು ಕಳೆದುಕೊಂಡು ಯಾವಾಗಲೂ ಮುನ್ನುಗ್ಗುವಂತದ್ದಾಗಿದೆ, ಅದರಂತೆ ಹೇಸರ ಕತ್ತೆಯ ಗುಣಲಕ್ಷಣವೇನೆಂದರೆ, ಮೊಂಡುತನವುಳ್ಳದ್ದಾಗಿದ್ದು, ಮುಂದಕ್ಕೆ ಹೋಗಲು ನಿರಾಕರಿಸುತ್ತದೆ. ಈ ಎರಡು ನಡವಳಿಕೆಯನ್ನು ನಾವು ಅನುಸರಿಸಬಾರದು).

ನಾವು ಅವಿಧೇಯರಾದಗ ದೇವರು ನಮ್ಮ ಮನಸ್ಸಾಕ್ಷಿಯ ಮುಖೇನ ಮಾತನಾಡುತ್ತಾರೆ. ಆದ್ದರಿಂದ ನಾವು ಯಾವಾಗಲೂ ಮನಸ್ಸಾಕ್ಷಿಯ ಧ್ವನಿಯನ್ನು ಜಾಗ್ರತೆಯಿಂದ ಕೇಳಿಸಿಕೊಳ್ಳುವವರಾಗಿರಬೇಕು. ಯೇಸು ಹೀಗೆ ಹೇಳಿದ್ದಾರೆ, ”ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ; ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು” (ಲೂಕ 11:34). ಯೇಸು ಇಲ್ಲಿ ಕಣ್ಣು ಅಂತ ಉಲ್ಲೇಖಿಸಿರುವುದರ ಅರ್ಥ ಏನು? ಮತ್ತಾಯ 5:8ರಲ್ಲಿ, ಶುದ್ದತೆಯ ಹೃದಯದೊಟ್ಟಿಗೆ ಆತ್ಮೀಕ ದೃಷ್ಟಿಯನ್ನು ಇಲ್ಲಿ ಹೊಂದಿಸಲಾಗಿದೆ. ಹಾಗಾಗಿ ಕಣ್ಣು ಮನಸ್ಸಾಕ್ಷಿಗೆ ಹೋಲಿಸಲ್ಪಟ್ಟಿದೆ, ನಾವು ಸತತವಾಗಿ ವಿಧೇಯರಾದಗ, ಪರಿಶುದ್ದತೆಯ ಹೃದಯಕ್ಕೆ ಮುನ್ನೆಡೆಯುತ್ತೇವೆ.

ಅದರಂತೆ, ಮನಸ್ಸಾಕ್ಷಿಯು ದೇವರ ಧ್ವನಿಯಲ್ಲ, ಇದು ಒಬ್ಬ ವ್ಯಕ್ತಿಯು ತನ್ನ ಜೀವಿತವನ್ನು ಜೀವಿಸಿದ ಮೇರೆಗೆ ತಯಾರು ಹೊಂದಿರುವಂತದ್ದಾಗಿದೆ ಮತ್ತು ಅದನ್ನೇ ನಿಶ್ಚಯಿಸಿಕೊಂಡಿರುತ್ತದೆ. ಆದರೆ ಇದು ಸತತವಾಗಿ ವಿಧೇಯವಾಗುವುದರಿಂದ, ಸತ್ಯವೇದದ ಅಧ್ಯಯನದ ಜೊತೆ ಸಂಪರ್ಕ ಬೆಳೆಸುತ್ತದೆ. ಆಗ, ಇದು ದೇವರ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲೂಕ 11:34 ರಲ್ಲಿ ಒಂದು ವಾಗ್ದಾನವಿದೆ, ಹಾಗಾಗಿ, ನಮ್ಮ ಮನಸ್ಸಾಕ್ಷಿಯನ್ನು ನಾವು ಶುದ್ಧವಾಗಿಟ್ಟುಕೊಂಡರೆ, ನಮ್ಮ ಜೀವಿತದಲ್ಲಿ ಸುರಿಯಲ್ಪಡುವ ದೇವರ ಬೆಳಕನ್ನು ಹೊಂದಿಕೊಳ್ಳುತ್ತೇವೆ - ಮತ್ತು ನಾವು ಆತನ ಚಿತ್ತವನ್ನು ಕಂಡುಕೊಳ್ಳುತ್ತೇವೆ. ನಮ್ಮ ಪ್ರತಿನಿತ್ಯದ ಜೀವಿತದಲ್ಲಿ ಮನಸ್ಸಾಕ್ಷಿಯ ಧ್ವನಿಯನ್ನು ಕೇಳುವುದರಲ್ಲಿ ನಾವು ಸೋತರೆ, ನಾವು ದೇವರ ಮಾರ್ಗದರ್ಶನವನ್ನು ಹುಡುಕುವಾಗ, ಆತ್ಮದ ಸ್ವರವನ್ನು ಕೇಳಿಸಿಕೊಳ್ಳುವುದರಲ್ಲಿಯೂ ಸಹ ನಾವು ಸೋಲುತ್ತೇವೆ. ಹಾಗಾಗಿ ಯಾವಾಗಲಾದರೂ ದೇವರು ಮಾತನಾಡುವಾಗ ನಾವು ವಿಧೇಯರಾಗುವುದಾದರೆ, ಅದುವೇ ಮಾರ್ಗದರ್ಶನದ ರಹಸ್ಯವಾಗಿರುತ್ತದೆ.

ಇತ್ತೀಚೆಗೆ, ನಾನು ಓದಿದ್ದೇನೆಂದರೆ - 15 ವರುಷದ ಹುಡುಗನು ಹುಟ್ಟಿನಿಂದ ಕುರುಡನಾಗಿದ್ದನು, ಆತನು ವಿಮಾನ ಹಾರಿಸುವುದನ್ನು ಮತ್ತು ಅದನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವುದನ್ನು ಕಲಿತುಕೊಂಡಿದ್ದನು. ವಿಮಾನ ನಡೆಸುವವನಿಂದ ಕೊಡಲ್ಪಟ್ಟ ಪ್ರತಿಯೊಂದು ಮಾರ್ಗದರ್ಶನಕ್ಕೆ, ಆದೇಶಕ್ಕೆ ಆ ಕುರುಡ ಹುಡುಗನು ತಕ್ಷಣವೇ ವಿಧೇಯನಾಗಿದ್ದರಿಂದಲೇ, ಈ ಗುರುತರ ಸಾಹಸ ಕಾರ್ಯವು ನೆರವೇರಿದ್ದು ಮತ್ತು ಸಾಧ್ಯವಾಗಿದ್ದು. ಜೀವಿತದ ಬಗೆಬಗೆಯ ಸಮಸ್ಯೆಗಳನ್ನು ನಾವು ಎದುರಿಸುವಾಗ, ಕುರುಡರಾಗಿದ್ದಂತೆ ನಾವು ಭಾವಿಸಿಕೊಂಡು ವಿಮಾನವನ್ನು ಗೊತ್ತಿಲ್ಲದೇ ಇರುವಂತ ಮತ್ತು ಅಗೋಚರ ನಿಲ್ದಾಣದಲ್ಲಿ ಕೆಳಗೆ ಇಳಿಸಿದಂತೆ ನಮಗೆ ಬಾಸವಾಗುತ್ತದೆ. ಆದರೆ ನಾವು ದೇವರ ಆದೇಶಕ್ಕೆ ತಕ್ಷಣವೇ ವಿಧೇಯರಾಗುವಂತ ಹವ್ಯಾಸವನ್ನು ನಾವು ಬೆಳೆಸಿಕೊಂಡರೆ, ನಾವು ಸುರಕ್ಷಿತವಾಗಿ ಕೆಳಗೆ ಇಳಿಸುವುದನ್ನು ನಾವು ಕಂಡುಕೊಳ್ಳುತ್ತೇವೆ.