ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ ತಿಳಿಯುವುದು
WFTW Body: 

ಮತ್ತಾಯ 1ನೇ ಅಧ್ಯಾಯವು ಯೇಸು ಕ್ರಿಸ್ತನ ವಂಶಾವಳಿಯ ಕಥೆಯನ್ನು ವಿವರಿಸುತ್ತಾ ಹೋಗುತ್ತದೆ. ಯೆಹೂದ್ಯರು ಪುರುಷರ ಹೆಸರುಗಳನ್ನು ಮಾತ್ರ ತಮ್ಮ ವಂಶಾವಳಿಗಳ ಪಟ್ಟಿಯಲ್ಲಿ ನಮೂದಿಸಿದ್ದಾರೆ. ಹಾಗಿದ್ದರೂ ಸಹ, ಇಲ್ಲಿ ನಾಲ್ಕು ಹೆಂಗಸರ ಹೆಸರುಗಳು ಉಲ್ಲೇಖವಾಗಿರುವುದನ್ನು ನಾವು ಕಂಡುಕೊಳ್ಳುತ್ತೇವೆ - ಇದು ನಮಗೆ ಬೋಧಿಸುವುದೇನೆಂದರೆ, ಯೆಹೂದ್ಯರ ಮತ್ತು ಅಕ್ರೈಸ್ತರ ಸಮಾಜ ಹೆಂಗಸರಿಗೆ ಕೊಟ್ಟಿದ್ದ ಅತ್ಯಂತ ಕೆಳಮಟ್ಟದ ಸ್ಥಾನದಿಂದ ಮೇಲಿನ ಮಟ್ಟಕ್ಕೆ ಏರಿಸಲು ಯೇಸು ಬಂದರು. ಮುಂದುವರೆದು, ಈ ನಾಲ್ಕು ಹೆಂಗಸರುಗಳು ಪಾಪವುಳ್ಳ ಇತಿಹಾಸವನ್ನು ಹೊಂದಿದ್ದಾರೆ. ಇದು ನಮಗೆ ಬೋಧಿಸುವುದೇನೆಂದರೆ, ಯೇಸು ಅತೀ ಕೆಟ್ಟ ಪಾಪಿಗಳನ್ನು ರಕ್ಷಿಸಲು ಬಂದಿದ್ದಾರೆ ಎಂಬುದಾಗಿ.

ನಮೂದಿಸಿಸಲ್ಪಟ್ಟ ಮೊದಲ ಹೆಂಗಸಿನ ಹೆಸರು ತಾಮಾರಳು (ಮತ್ತಾಯ 1:3). ತಾಮಾರಳು ಯೆಹೂದನ ಸೊಸೆಯಾಗಿದ್ದಳು, ಈಕೆಯ ಮುಖಾಂತರ ಯೆಹೂದನು ಪೆರೆಚನನ್ನೂ ಪಡೆದನು, ಪೆರೆಚನು ಯೇಸುವಿನ ತಾಯಿಯಾದ ಮರಿಯಳ ಪೂರ್ವಿಕನು. ಈ ಘಟನೆ ನಡೆದಾಗ ಯೇಸು ಪರಲೋಕದಲ್ಲಿದ್ದರು (ಆದಿಕಾಂಡ 38:12-29) ಮತ್ತು ಈ ಪಾಪವುಳ್ಳಂತ ಪಂಕ್ತಿ ಮುಂದೆ ತನ್ನ ಭೂಲೋಕ ಕುಟುಂಬದ ಪಂಕ್ತಿಯಾಗಬೇಕು ಎಂದು ಯೇಸು ನಿರ್ಧರಿಸುತ್ತಾರೆ. ನಮ್ಮಲ್ಲಿ ಎಷ್ಟು ಜನ ಈ ರೀತಿಯ ಪಾಪವುಳ್ಳಂತ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳುತ್ತೀವಿ ಮತ್ತು ನಮ್ಮ ಜೀವನ ಚರಿತ್ರೆಯ ಮೊದಲ ಹಾಳೆಯಲ್ಲಿಯೇ ಈ ರೀತಿಯ ಸಂಬಂಧವುಳ್ಳವುಗಳನ್ನು ನಮೂದಿಸಲು ಇಷ್ಟಪಡುತ್ತೀವಿ?

ನಮೂದಿಸಲ್ಪಟ್ಟ ಎರಡನೇ ಹೆಂಗಸಿನ ಹೆಸರು ರಾಹಾಬಳು(ಮತ್ತಾಯ 1:5). ಇವಳು ಹೆಚ್ಚು ಗೊತ್ತಿರುವಂತ ಸೂಳೆಯಾಗಿದ್ದಳು ಮತ್ತು ಯೆರಿಕೋವಿನ ಒಂದು ಜಿಲ್ಲೆಯಲ್ಲಿನ ”ಸೂಳೆಯ ಮನೆ” ಯಲ್ಲಿ ಇಳುಕೊಂಡಿದ್ದಳು (ಯೆಹೋಶುವ 2:1). ಯೆಹೂದಿ ಮನುಷ್ಯನಾದಂತ ಸಲ್ಮೋನನು ಈ ಅನ್ಯಳನ್ನು ಮದುವೆಯಾದನು. ಯೆಹೂದಿಯು ಅನ್ಯಳನ್ನು ಮದುವೆಯಾಗಿದ್ದನ್ನು ಯೇಸು ಪರಲೋಕದಿಂದ ನೋಡಿ, ಈ ಪಂಕ್ತಿಯ ಮೂಲಕ ತಾನು ಬರಬೇಕೆಂದು ನಿರ್ಧರಿಸಿದರು.

ಮೂರನೇ ಹೆಂಗಸಾದ ರೂತಳು (ಮತ್ತಾಯ 1:5). ರೂತಳು ಮೋವಾಬ್ಯಳಾಗಿದ್ದಳು. ಈಕೆಯು ಮೋವಾಬ್ ವಂಶಾವಳಿಗೆ ಸೇರಿದವಳು. ಲೋಟನ ಹಿರಿಯ ಮಗಳು, ತನ್ನ ತಂದೆಯಾದ ಲೋಟನೊಟ್ಟಿಗೆ ಕೂಡಿದ್ದರಿಂದ ಆದ ಗಂಡು ಮಗುವೇ ಮೋವಾಬ್ (ಆದಿಕಾಂಡ 19:30-37). ಮತ್ತೊಮ್ಮೆ, ಯೇಸು ಈ ಸಂಗತಿಯನ್ನು ಮತ್ತು ರೂತಳು ಈ ಒಂದು ಕೂಡುವಿಕೆಯಿಂದ ಜನ್ಮ ತಾಳಿದ್ದಳು ಎಂಬುದನ್ನು ಪರಲೋಕದಿಂದ ನೋಡಿದರು. ಆದರೂ ಯೇಸು ಈ ಪಂಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದರು.

ನಾಲ್ಕನೇ ಹೆಂಗಸಾದ ಬೆತ್ಸಬಳು. ಇವಳು ಊರೀಯನ ಹೆಂಡತಿಯಾಗಿದ್ದಳು (ಮತ್ತಾಯ 1:6). ದಾವೀದನು ಈಕೆಯೊಟ್ಟಿಗೆ ಕೂಡಿ, ನಂತರ ಮದುವೆಯಾದನು. ಮತ್ತೊಮ್ಮೆ, ಈ ರೀತಿಯ ಹೆಣ್ಣನ್ನು ನಾವಿಲ್ಲಿ ನೋಡಬಹುದು, ಈಕೆಯ ಇತಿಹಾಸವೂ ಪಾಪಮಯವಾಗಿತ್ತು. ಮೊದಲ ಮೂರು ಹೆಂಗಸರ ಹಾಗೆ, ಈಕೆಯು ಮರಿಯಳ ವಂಶಾವಳಿಗೆ ಸೇರಿದವಳಲ್ಲ. ಈಕೆಯು ಯೋಸೆಫನ ವಂಶಾವಳಿಗೆ ಸೇರಿದವಳು. (ನಾವು, ಲೂಕ 3 ರಲ್ಲಿ ಮರಿಯಳ ವಂಶಾವಳಿ ಜೊತೆಗೆ ಈಕೆಯ ವಂಶಾವಳಿಯನ್ನು ಹೋಲಿಸಿದಾಗ ಇದನ್ನು ಅರ್ಥಮಾಡಿಕೊಳ್ಳಬಹುದು). ಯೋಸೆಫನು ದಾವೀದನ ಅರಸನ ಪಂಕ್ತಿಯಲ್ಲಿದ್ದನು ಮತ್ತು ಮತ್ತಾಯ ಪುಸ್ತಕವು, ಈ ವಂಶಾವಳಿಗಳ ಮೂಲಕ ಸಾಕ್ಷೀಕರಿಸುವುದೇನೆಂದರೆ, ಯೇಸು ಇಸ್ರಾಯೇಲಿನ ನಿಜವಾದ ಅರಸನಾಗುವುದು ನ್ಯಾಯಯುತವಾಗಿತ್ತು.

ಯೇಸು ಯಾಕೆ ಈ ಪಾಪವುಳ್ಳಂತ ಪಂಕ್ತಿಯ ಕುಟುಂಬವನ್ನು ಆಯ್ದುಕೊಂಡರು? ಯೇಸು ನೀತಿವಂತರನ್ನು ಕರೆಯಲು ಬಂದಿದ್ದಲ್ಲಾ, ಆದರೆ ಪಾಪಿಗಳನ್ನು ಮಾನಾಸಾಂತರಕ್ಕೆ ಕರೆಯಲು ಯೇಸು ಬಂದರು ಎಂಬುದನ್ನು ಪ್ರಚುರಪಡಿಸಬೇಕೆಂಬ ಹಾಗೂ ಇದನ್ನು ನಾವು ಗುರುತು ಹಿಡಿಯಬೇಕೆಂಬ ಒಂದೇ ಕಾರಣಕ್ಕಾಗಿ ಪಾಪವುಳ್ಳಂತ ಮನುಷ್ಯರ ಸಾಲಿನೊಟ್ಟಿಗೆ ಯೇಸು ಸೇರಿದರು .

ಹಾಗಾಗಿ ನಾವು ನೋಡುವುದೇನೆಂದರೆ, ಯಾರು ಸಹ ಆತನ/ಆಕೆಯ ಕುಟುಂಬ ಸಾಲಿನ ಬಗ್ಗೆ ನಾಚಿಕೆಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಭಾರತದಲ್ಲಿ, ಜನರು ತಮ್ಮ ಕುಟುಂಬವೆಂಬ ಹೆಮ್ಮರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಆದರೆ ಕ್ರೈಸ್ತನು ಸಹ ಈ ರೀತಿ ಹೆಮ್ಮೆ ಪಡುವಾಗ, ತಾನು ಕ್ರಿಸ್ತನ ಆತ್ಮನನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದಾಗಿ ತನ್ನ ನಡವಳಿಕೆಯಿಂದ ತೋರಿಸುತ್ತಾನೆ. ಮರಿಯಳು ಗರ್ಭಿಣಿ ಎಂದು ಯೋಸೇಫನು ಕೇಳಿದಾಗ, ದೇವರು ಆಕೆಯ ಗರ್ಭದಲ್ಲಿ ಪ್ರಾಕೃತಿಕವಾಗಿ ಕೆಲಸ ಮಾಡಿದ್ದಾನೆಂದು ಯೋಸೇಫನು ಮೊದಲು ಅರ್ಥ ಮಾಡಿಕೊಂಡಿದ್ದಿಲ್ಲ. ವಚನ ಹೀಗೆ ಹೇಳುತ್ತದೆ, ”ಯೋಸೇಫನು ಸಜ್ಜನನಾಗಿದ್ದು, ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಆಕೆಯು ನಾಚಿಕೆಗೆಡುವಂತೆ ಮಾಡದೇ, ಅದು ಆಕೆಯ ಪಾಪವೆಂದು ಯೋಚಿಸಿ, ಅದನ್ನು ಮುಚ್ಚಿಡಲು ಬಯಸಿದನು'' (ಮತ್ತಾಯ 1:19).

ನಾವು ಇಲ್ಲಿ ಎನೋ ಒಂದನ್ನು ಕಲಿಯಬಹುದು, ಅದು ನೀತಿವಂತಿಕೆಯ ಬಗ್ಗೆ. ಸುವಾರ್ತೆಯ ಸಂದೇಶದ ಅಗತ್ಯವು ಏನಾಗಿತ್ತೆಂದರೆ, ಹೇಗೆ ಅನೀತಿಯ ಮನುಷ್ಯನು ನೀತಿವಂತನಾಗುವುದು ಎಂಬುದಾಗಿತ್ತು. ಹೊಸ ಒಡಂಬಡಿಕೆಯಲ್ಲಿ ನೀತಿವಂತ ಮನುಷ್ಯ ಎಂದು ಕರೆಯಲ್ಪಡುವ ಮನುಷ್ಯನು ಯೋಸೇಫನಾಗಿದ್ದಾನೆ ಮತ್ತು ಆತನ ನೀತಿವಂತಿಕೆಯು, ಮತ್ತೊಬ್ಬ ವ್ಯಕ್ತಿಯ ಪಾಪವನ್ನು ಮುಚ್ಚಿಡಲು ಮನಸ್ಸು ಮಾಡುವುದಕ್ಕೆ ಸಂಪರ್ಕಹೊಂದಿದೆ ಮತ್ತು ಆ ವ್ಯಕ್ತಿಯ ಬಗ್ಗೆ ನಾಚಿಕೆ ಪಟ್ಟುಕೊಳ್ಳಬಾರದೆಂದು ಯೋಸೇಫನು ಇಚ್ಛಿಸುತ್ತಾನೆ. ನಿಜವಾದ ನೀತಿವಂತ ಮನುಷ್ಯನ ಆತ್ಮ ಇದಾಗಿದೆ.

”ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು”. ”ಯೇಸು” ಎಂಬ ಹೆಸರಿನ ಅರ್ಥ ಇದೇ ಆಗಿದೆ

ಯಾರೋ ಒಬ್ಬರು ಪಾಪ ಮಾಡಿದ್ದಾರೆ ಎಂದು ನೀವು ಕೇಳುವಾಗ, ನಿಮ್ಮ ತಕ್ಷಣದ ಪ್ರತಿಕ್ರಿಯೆ ಏನಾಗಿರುತ್ತದೆ? ನೀವು ನೀತಿವಂತ ಮನುಷ್ಯನಾಗಿದ್ದರೆ, ನೀವು ಮೊದಲು ಅದನ್ನು ಮುಚ್ಚಿಡಲು ಇಚ್ಛಿಸುತ್ತೀರಿ. ನೀವು ಅನೀತಿವಂತ ಮನುಷ್ಯನಾಗಿದ್ದರೆ, ನೀವು ಅದರ ಬಗ್ಗೆ ಇನ್ನೊಬ್ಬರ ಬಳಿ ಮಾತಾನಾಡುತ್ತೀರಿ. ಇಲ್ಲಿ ಯೋಸೇಫನನ್ನು ನಾವು ನೋಡಬಹುದು, ಆತನು ಪವಿತ್ರಾತ್ಮನನ್ನು ಹೊಂದಿರಲಿಲ್ಲ ಮತ್ತು ಹೊಸ ಒಡಂಬಡಿಕೆಯ ಕೆಳಗೆ ಇರಲಿಲ್ಲ. ಆದರೂ ಈತನು ಇಂದು ಹೊಸದಾಗಿ ಹುಟ್ಟಿದ್ದೀನಿ ಎಂದು ಕರೆದುಕೊಳ್ಳುವ ಮಿಲಿಯನ್ ಗಟ್ಟಲೆ ವಿಶ್ವಾಸಿಗಳಿಗಿಂತ ಹೆಚ್ಚು ನೀತಿವಂತನಾಗಿದ್ದನು. ಯೋಸೇಫನು ಹಳೆ ಒಡಂಬಡಿಕೆಯ ಗುಣಮಟ್ಟದೊಟ್ಟಿಗೆ ಇದ್ದರೂ, ತಾನು ಪಾಪವೆಂದು ತಿಳಿದಿದ್ದನ್ನು ಮುಚ್ಚಿಡಲು ನಿರ್ಧರಿಸಿದನು. ದೇವರಿಗೆ ಧನ್ಯವಾದಗಳು, ಏಕೆಂದರೆ ಆತನು ಮರಿಯಳ ಹೆಸರನ್ನು ಕೆಡಿಸಲಿಲ್ಲ. ಒಂದು ವೇಳೆ ಯೋಸೇಫನು ಆಕೆಯನ್ನು ತಪ್ಪಾಗಿ ಅರ್ಥಮಾಡಿಕೊಂಡು, ನಂತರ ಆತನು ಸತ್ಯವನ್ನು ಅರಿತುಕೊಂಡಾಗ ಅಂದರೆ, ಆಕೆಯು ಶೇ 100 ರಷ್ಟು ಶುದ್ದಳು ಮತ್ತು ಮುಗ್ದಳು ಎಂದು ಅರಿತಾಗ, ಆತನು ವ್ಯಥೆ ಪಡುತ್ತಿದ್ದನು ಮತ್ತು ತಪ್ಪಿತಸ್ತ ಮನೋಭಾವವನ್ನು ಹೊಂದಿರುತ್ತಿದ್ದನು ಎಂಬುದನ್ನು ನೀವು ಕಲ್ಪಿಸಿಕೊಳ್ಳಿ!! ಈ ಸಂಗತಿಗಳನ್ನು ನಮ್ಮ ತಿಳುವಳಿಕೆಗಾಗಿ ಬರೆಯಲ್ಪಟ್ಟಿವೆ.

ಹೇಗೆ ನೀವು ಒಬ್ಬರ ಹಿಂದಿನ ಕಥೆಗಳನ್ನು ತೆಗೆದುಕೊಂಡು, ಅದನ್ನು ಇನ್ನೊಬ್ಬರ ಬಳಿ ಹಂಚಿಕೊಂಡ ನಂತರ ಅದು ಸುಳ್ಳು ಎಂದು ತಿಳುಕೊಂಡರೆ ಹೇಗಿರುತ್ತದೆ? ನೀವು ಒಬ್ಬರಿಗೆ ಅದನ್ನು ಹೇಳಿದರೆ, ಅದು ನಿಶ್ಚಯವಾಗಿ ಇನ್ನು 10 ಜನರ ಬಳಿ, ನಂತರ ಇನ್ನೂ ಮುಂದೆ ಹಂಚಿ ಹರಿದು ಹೋಗಿರುತ್ತದೆ. ಹಾಗಾಗಿ ಹೊಸ ಒಡಂಬಡಿಕೆಯ ಮೊದಲ ಅಧ್ಯಾಯದಿಂದಲೇ ನಮಗೆ ಎಚ್ಚರಿಕೆ ಮತ್ತು ಉದಾಹರಣೆ ಕೊಡಲ್ಪಟ್ಟಿದೆ. ಮತ್ತೊಬ್ಬರ ಪಾಪಗಳನ್ನು ಮುಚ್ಚಿಡಿ. ಯೋಸೇಫನ ಉದಾಹರಣೆಗಳಿಂದ ಕಲಿತುಕೊಳ್ಳಿ. ”ಪ್ರೀತಿಯ ಬಹು ಪಾಪಗಳನ್ನು ಮುಚ್ಚುತ್ತದೆ”.

ಮತ್ತಾಯ 1:21 ರಲ್ಲಿ, ಹೊಸ ಒಡಂಬಡಿಕೆಯಲ್ಲಿನ ಮೊದಲ ವಾಗ್ದಾನವನ್ನು ನಾವು ನೋಡುತ್ತೇವೆ : ”ಆತನು ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು”. ”ಯೇಸು” ಎಂಬ ಹೆಸರಿನ ಅರ್ಥ ಇದೇ ಆಗಿದೆ. ಯೇಸು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ ಎಂದು ವಾಗ್ದಾನ ಇಲ್ಲ, ಆದರೆ ಆತನು ನಮ್ಮ ಪಾಪಗಳಿಂದ ಬಿಡಿಸಿ ಕಾಯುತ್ತಾನೆ ಎಂಬುದಾಗಿ ಇದೆ. ಕ್ಷಮೆಯು, ನಮ್ಮ ಹಳೆಯ ಪಾಪಗಳ ಬಗ್ಗೆ ಇರುವ ಖಂಡನೆಯನ್ನು ತೆಗೆದು ಹಾಕುವುದಕ್ಕಾಗಿ ಇದೆ. ಪಾಪದಿಂದ ಬಿಡಿಸಿ ಕಾಯುವುದು ಎಂದರೆ, ಕೋಪದಿಂದ ಬಿಡಿಸುವುದು, ಕಣ್ಣಿನ ಮೋಹದಿಂದ ಬಿಡಿಸುವುದು, ದುರಾಶೆ, ದ್ವೇಷ, ಹೊಟ್ಟೆಕಿಚ್ಚು, ಇತರೆಗಳಿಂದ ಬಿಡಿಸುವುದಾಗಿದೆ. ಇದರ ಅರ್ಥವೇನೆಂದರೆ, ಪಾಪಕ್ಕೆ ಆಳಾಗಿರುವುದರಿಂದ ನಮ್ಮನ್ನು ಆತನು ಬಿಡಿಸುತ್ತಾನೆ.

ಹೊಸ ಒಡಂಬಡಿಕೆಯಲ್ಲಿನ ಎರಡನೇ ವಾಗ್ದಾನವು ಮತ್ತಾಯ 3:11 ರಲ್ಲಿ ಕಾಣುತ್ತೇವೆ : ”ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ಸ್ನಾನ ಮಾಡಿಸುವನು”.

ಹೊಸ ಒಡಂಬಡಿಕೆಯಲ್ಲಿ ಇವು ಮೊದಲ ಎರಡು ವಾಗ್ದಾನಗಳಾಗಿವೆ ಮತ್ತು ಇದರಲ್ಲಿ, ಸುವಾರ್ತೆಯ ಸಂದೇಶವೂ ಸೇರಿಕೊಂಡಿದೆ. ಈ ಎರಡು ವಾಗ್ದಾನಗಳನ್ನು ಪೂರೈಸುವುದರ ಅನುಭವವನ್ನು ನಾವು ಪಡೆದುಕೊಳ್ಳಬೇಕಾದ ಅಗತ್ಯತೆ ಇದೆ. ”ನಾವು ನಮ್ಮ ಪಾಪಗಳಿಂದ ಬಿಡಿಸಲ್ಪಡಬೇಕಾದ ಅಗತ್ಯತೆ ಇದೆ ಮತ್ತು ನಾವು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ಸ್ನಾನ ಹೊಂದುವುದರ ಅಗತ್ಯತೆ ಇದೆ''.