WFTW Body: 

1 ಯೋಹಾನ 4:2 ರಲ್ಲಿ 1 ಯೋಹಾನದ ಬಗೆಗಿನ ಒಂದು ದೊಡ್ಡ ವಿಷಯವನ್ನು ಓದುತ್ತೇವೆ,. ಅದೇನೆಂದರೆ: ”ಮನುಷ್ಯನಾಗಿ ಬಂದ ಯೇಸು ಕ್ರಿಸ್ತನನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದದ್ದು” ಎಂಬುದಾಗಿ. 1 ಯೋಹಾನದ 3 ರ ದೊಡ್ಡ ವಿಷಯವೇನೆಂದರೆ, ದೇವರ ಆಜ್ಞೆಗಳಿಗೆ ವಿಧಯರಾಗುವುದು, ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಯೇಸು ಕ್ರಿಸ್ತನು ಮನುಷ್ಯನಾಗಿ ಬಂದನು ಎಂದು ಅರಿಕೆ ಮಾಡಿ, ಒಪ್ಪಿಕೊಳ್ಳುವುದಾಗಿದೆ.

ನೆನಪಿಟ್ಟುಕೊಳ್ಳಿ, ಯೇಹಾನನು 65 ವರ್ಷಗಳ ಕಾಲ ಸಭೆಯ ಬೆಳವಣಿಗೆಯನ್ನು ಗಮನಿಸಿದನು ಮತ್ತು ಈಗ ಆತನು ಹೇಳುವುದೇನೆಂದರೆ, ದೇವರು ಬಯಸುವ ರೀತಿಯಲ್ಲಿ ನೀವು ಸಭೆಯನ್ನು ಕಟ್ಟಬೇಕಾದರೆ, ಈ ಮೂರು ವಿಷಯಗಳಿಗೆ ನಿಶ್ಚಯವಾಗಿ ಒತ್ತುಕೊಡಬೇಕು : ಅವು ಯಾವುವೇಂದರೆ, ದೇವರ ಆಜ್ಞೆಗಳಿಗೆ ವಿಧಯರಾಗುವುದು, ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಯೇಸುವಿನ ದೀನತೆಯನ್ನು ಹೊಂದಿರುವುದು. ನಿಮ್ಮ ಸಭೆಯಲ್ಲಿ ಈ ಮೂರು ವಿಷಯಗಳಿಗೆ ಒತ್ತು ಕೊಡಲಾಗುತ್ತಿದಿಯೇ? ಇಲ್ಲವಾದಲ್ಲಿ, ಇದು ಕ್ರಿಸ್ತನ ದೇಹವಾಗಿ ಕಟ್ಟಲ್ಪಡುವುದಿಲ್ಲ.

ಯೇಸು ಈ ಲೋಕದಲ್ಲಿ ಇದ್ದಂತ ಸಂದರ್ಭದಲ್ಲಿ, ಆತನು ಕ್ರಿಸ್ತನ ದೇಹವಾಗಿದ್ದನು. ಜನರು ದೇವರನ್ನು ಯೇಸುವಿನಲ್ಲಿ ನೋಡಿದರು. ಈಗ ನಾವು (ಸಭೆಯಾಗಿ) ಕ್ರಿಸ್ತನ ದೇಹವಾಗಿದ್ದೇವೆ. ಜನರು ದೇವರನ್ನು ನಮ್ಮಲ್ಲಿ ನೋಡಬೇಕು

1 ಯೋಹಾನ 4:4 ರಲ್ಲಿ, ಯೋಹಾನನು ಈ ರೀತಿ ಹೇಳುವುದರಿಂದ ಪ್ರೋತ್ಸಾಯಿಸಿದನು, ಅದೇನೆಂದರೆ, ”ಪ್ರಿಯರಾದ ಮಕ್ಕಳೇ, ನೀವಂತೂ ದೇವರಿಂದ ಹುಟ್ಟಿದವರಾಗಿದ್ದೀರಿ ; ಮತ್ತು ಲೋಕದಲ್ಲಿರುವನಿಗಿಂತ ನಿಮ್ಮಲ್ಲಿರುವಾತನು ಹೆಚ್ಚಿನವನಾಗಿರುವದರಿಂದ ನೀವು ಈ ಸುಳ್ಳು ಪ್ರವಾದಿಗಳನ್ನು ಜಯಿಸಿದ್ದೀರಿ” ಎಂಬುದಾಗಿ. ಅದಕ್ಕಾಗಿಯೇ, ನಾವು ಎಲ್ಲಾ ಸಮಯದಲ್ಲಿಯೂ ಜಯಶಾಲಿಗಳಾಗಿರಬಹುದು ಮತ್ತು ನಾವು ಏಕೆ ದೆವ್ವಕ್ಕಾಗಲಿ ಅಥವಾ ಲೋಕದಲ್ಲಿ ಯಾರಿಗಾದರೂ ಭಯ ಪಡುವ ಅಗತ್ಯತೆಯಾದರೂ ಏನು.

ನಂತರದಲ್ಲಿ, ಯೋಹಾನನು ಒಬ್ಬರನ್ನೊಬ್ಬರು ಪ್ರೀತಿಸುವ ವಿಷಯದ ಬಗ್ಗೆ ಮಾತನಾಡುತ್ತಾನೆ. ಆತನು ಹೇಳುವುದೇನೆಂದರೆ, ದೇವರನ್ನು ಅರಿತಿರುವಂಥ ಒಬ್ಬ ವಿಶ್ವಾಸಿಯ ಪ್ರಾಥಮಿಕ ಗುರುತೇನೆಂದರೆ, ಆತನು ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಾನೆ
(1 ಯೋಹಾನ 4:7,8). 1 ಯೋಹಾನ 4:12 ರಲ್ಲಿ, ಯೋಹಾನನು ತನ್ನ ಸುವಾರ್ತೆಯಲ್ಲಿ ಈ ಮೊದಲು ಹೇಳಿದ್ದನ್ನು ಪುನರುಚ್ಚಿಸುತ್ತಾನೆ : ”ದೇವರನ್ನು ಯಾರು ಎಂದು ನೋಡಿಲ್ಲ” ಎಂಬುದಾಗಿ. ಈ ಹೇಳಿಕೆಯು ಸತ್ಯವೇದದಲ್ಲಿ ಎರಡು ಬಾರಿ ಮಾತ್ರ ಕಾಣಸಿಗುತ್ತದೆ. 1 ಯೋಹಾನ 1:18 ರಲ್ಲಿ ಮತ್ತು ಇಲ್ಲಿ. ನಾವು ಸತ್ಯವೇದದ ಈ ಎರಡು ಸಂದೇಶಗಳನ್ನು ಒಟ್ಟಾಗಿ ಸೇರಿಸುವಾಗ, ನಾವು ದೊಡ್ಡ ಸತ್ಯವನ್ನು ಕಲಿಯುತ್ತೇವೆ. ಯೋಹಾನ 1:18 ಹೀಗೆ ಹೇಳುತ್ತದೆ, : ”ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತ: ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು”. ಇಲ್ಲಿ 1 ಯೋಹಾನ 4:12 ರಲ್ಲಿ ಹೀಗೆ ಹೇಳುತ್ತದೆ : ”ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನಿಂದಾಗುವ ಪ್ರೀತಿಯು ನಮ್ಮಲ್ಲಿ ಸಿದ್ದಿಗೆ ಬರುತ್ತದೆ”. ಈ ಲೋಕವು ಇನ್ನೂ ಸಹ ದೇವರನ್ನು ನೋಡಿಲ್ಲ. ಆದರೆ ದೇವರು ತನ್ನ ಸಭೆಯನ್ನು ಇಲ್ಲಿ ಇರಿಸಿದ್ದಾನೆ, ಕಾರಣ ಜನರು ದೇವರು ಯಾವ ರೀತಿ ಎಂದು ನೋಡಲು. ಯೇಸು ಈ ಲೋಕದಲ್ಲಿ ಇದ್ದಂತ ಸಂದರ್ಭದಲ್ಲಿ, ಆತನು ಕ್ರಿಸ್ತನ ದೇಹವಾಗಿದ್ದನು. ಜನರು ದೇವರನ್ನು ಯೇಸುವಿನಲ್ಲಿ ನೋಡಿದರು. ಈಗ ನಾವು (ಸಭೆಯಾಗಿ) ಕ್ರಿಸ್ತನ ದೇಹವಾಗಿದ್ದೇವೆ. ಜನರು ದೇವರನ್ನು ನಮ್ಮಲ್ಲಿ ನೋಡಬೇಕು. ಅದಕ್ಕಾಗಿಯೇ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾವು ದೇವರ ಜೀವಿತವನ್ನು ಮತ್ತು ಆತನೊಟ್ಟಿಗಿನ, ಆತನ ಜನರೊಟ್ಟಿಗಿನ ಅನ್ಯೂನ್ಯತೆಯನ್ನು ಹುಡುಕುವಾಗ, ನಾವು ನಮ್ಮ ಮೂಲಕ ದೇವರು ಬೆಳಕು ಮತ್ತು ಪ್ರೀತಿ ಎಂಬುದನ್ನು ತೋರಿಸುತ್ತೇವೆ.

ಯೇಸು ಲೋಕದಲ್ಲಿರುವಾಗ ಹೇಳಿದ್ದೇನೆಂದರೆ, ”ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” (ಯೋಹಾನ 14:9). ಇಂದು ನಾವು ಕ್ರಿಸ್ತನ ಸಭೆಯಾಗಿರುವಾಗ ನಾವು ಈ ರೀತಿ ಹೇಳಲು ಸಾಮಾರ್ಥ್ಯವುಳ್ಳವರಾಗಿರಬೇಕು, ಅದೇನೆಂದರೆ, ”ನೀವು ನಮ್ಮನ್ನು ನೋಡುವಾಗ, ಸ್ವಲ್ಪ ಯೇಸುವಿನ ಹಾಗೇ ಮತ್ತು ಪರಲೋಕ ಹೇಗಿರುತ್ತದೆ ಎಂಬುದಾಗಿ ಕಾಣುತ್ತೀರಿ. ನೀವು ನನ್ನ ಮನೆಯಲ್ಲಿ ಜೀವಿಸುವುದಾದರೆ, ನೀವು ಸ್ವಲ್ಪವಾದರೂ ಪರಲೋಕದ ರೀತಿಯನ್ನು ಕಾಣುತ್ತೀರಿ. ನೀವು ನನ್ನೊಟ್ಟಿಗೆ ಅನ್ಯೂನ್ಯತೆಯನ್ನು ಮಾಡುವಾಗ, ಸ್ವಲ್ಪವಾದರೂ ನಾನು ಯೇಸುವಿನ ರೀತಿಯಾಗಿರುವುದನ್ನು ಮತ್ತು ಪರಲೋಕದ ರೀತಿಯನ್ನು ರುಚಿಸಿ ನೋಡುತ್ತೀರಿ” ಎಂಬುದಾಗಿ. ಇದು ನಮ್ಮ ಸಾಕ್ಷಿಯಾಗಿರಬೇಕು. ಇದು ನಮ್ಮ ಸಾಕ್ಷಿಯಾಗಿಲ್ಲವೆಂದರೆ, ನಾವು ದೇವರಿಗೆ ನಿರಾಸೆ ಮಾಡಿದ್ದೀವಿ ಎಂದು ಅರಿಕೆ ಮಾಡಬೇಕು. ನಾವು ಪ್ರಸಂಗ ಮಾಡಬಹುದು, ಸುವಾರ್ತೆ ಸಾರಬಹುದು ಮತ್ತು ಸತ್ಯವೇದವನ್ನು ಬೋಧಿಸಬಹುದು, ಆದರೆ ನಾವು ದೇವರ ಪ್ರೀತಿ ಮತ್ತು ಜೀವಿತವನ್ನು ನಮ್ಮ ಪ್ರತಿನಿತ್ಯದ ಜೀವಿತದಲ್ಲಿ ತೋರಿಸಲಿಲ್ಲವೆಂದರೆ, ನಮ್ಮ ಸಾಕ್ಷಿ ವಿಫಲಗೊಳ್ಳುತ್ತದೆ. ಏಕೆಂದರೆ, ನಮ್ಮ ಸುತ್ತ ಮುತ್ತಲಿರುವ ಜನರು ದೇವರು ಯಾವ ರೀತಿ ಎಂದು ನಮ್ಮಲ್ಲಿ ಇನ್ನೂ ನೋಡಿರುವುದಿಲ್ಲ. ಇದುವೇ ಇಂದಿನ ಕ್ರೈಸ್ತತ್ವದಲ್ಲಿನ ದುರಂತ.

1 ಯೋಹಾನ 4:17 ರಲ್ಲಿ, ಯೋಹಾನನು ಮುಂದೆ ಹೀಗೆ ಹೇಳುತ್ತಾ ಹೋಗುತ್ತಾನೆ, ”ಕ್ರಿಸ್ತನು ಎಂಥವನಾಗಿದ್ದಾನೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ” ಎಂಬುದಾಗಿ. ಇದೊಂದು ವಿಸ್ಮಯಕಾರಿ ವಚನ. ನಾವು ಈ ಲೋಕದಲ್ಲಿ ಕ್ರಿಸ್ತನ ರೀತಿ ಇರುವಂತೆ ಕರೆಯಲ್ಪಟ್ಟಿದ್ದೇವೆ. ಇದರ ಇನ್ನೊಂದು ಅರ್ಥವೇನೆಂದರೆ, ಯೇಸು ಸೈತಾನನ ಮೇಲೆ ಅಧಿಕಾರ ಹೊಂದಿದ ಹಾಗೇ, ನಾವು ಸಹ ಆತನ ಮೇಲೆ ಅಧಿಕಾರ ಹೊಂದಿದ್ದೇವೆ. ನೀವು ಇದನ್ನು ನಂಬುತ್ತೀರಾ? ಈ ರೀತಿಯಾಗಿ ಮಾತ್ರವೇ ನಾವು ಘನತೆಯಲ್ಲಿ, ಧ್ಯರ್ಯವುಳ್ಳವರಾಗಿ ಮತ್ತು ವಿಶ್ವಾಸವುಳ್ಳವರಾಗಿ ಜೀವಿಸಿ ಭವಿಷ್ಯವನ್ನು ಎದುರಿಸಬಹುದು. ಈ ಒಂದು ವಚನವನ್ನು ಪ್ರತಿಯೊಂದು ಮನಪೂರ್ವಕವಾದ ದೇವರ ಮಗುವಿನ ಎದುರುಗಡೆ ಇಡಬಯಸುತ್ತೇನೆ, ಅದೇನೆಂದರೆ, ”ಕ್ರಿಸ್ತನು ಎಂಥವನಾಗಿದ್ದಾನೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ” ಎಂದು. ಈ ಒಂದು ಅಧಿಕಾರದಲ್ಲಿ ಜೀವಿಸಿ ಮತ್ತು ಯಾವುದೇ ಭಯದಲ್ಲಿ ಜೀವಿಸಬೇಡಿ. ದೇವರು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದು ನಾವು ಗ್ರಹಿಸುವಾಗ, ನಮ್ಮಲ್ಲಿ ಹೆದರಿಕೆ ಇರುವುದಿಲ್ಲ (1 ಯೋಹಾನ 4:18). ದೇವರು ಯಾವುದೋ ಒಂದಕ್ಕಾಗಿ ನಮ್ಮನ್ನು ಶಿಕ್ಷಿಸುತ್ತಾನೆ ಎಂದು ಯೋಚಿಸುವಾಗ ಮಾತ್ರ ಹೆದರಿಕೆ ಬರುತ್ತದೆ. ದೇವರು ನಮ್ಮನ್ನು ಮಿತಿಯಿಲ್ಲದೇ ಅಪರಿಮಿತವಾಗಿ ಪ್ರೀತಿಸುತ್ತಾನೆ ಎಂದು ಗ್ರಹಿಸುವಾಗ ಹೆದರಿಕೆ ಇರುವುದಿಲ್ಲ. ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ (1 ಯೋಹಾನ 4:19). ದೇವರು ನಮ್ಮನ್ನು ಪ್ರೀತಿಸುತ್ತಾನೆ ಎಂದು ಹೆಚ್ಚು ಗ್ರಹಿಸುವಾಗ, ನಮ್ಮ ಪ್ರೀತಿಯು ಸಹ ಆತನಲ್ಲಿ ಸ್ವಾಭಾವಿಕವಾಗಿ ಹೆಚ್ಚು ಬೆಳೆಯುತ್ತದೆ. ಪರಿಪೂರ್ಣ ಪ್ರೀತಿಯು ಹೆದರಿಕೆಯನ್ನು ಹೊರ ಹಾಕುತ್ತದೆ. ಆದರೆ ಯಾರು ಸಹ ಈ ರೀತಿಯಾಗಿ ಹೇಳಬಾರದು, ಅದೇನೆಂದರೆ, ಕ್ರಿಸ್ತನಲ್ಲಿ ಯಾವುದೇ ಸಹೋದರನನ್ನು ದ್ವೇಷಿಸಿ, ದೇವರನ್ನು ಪ್ರೀತಿಸುತ್ತೇನೆ ಎಂಬುದಾಗಿ. ಅಂಥಹ ವ್ಯಕ್ತಿಯು ವಿಶ್ವಾಸಿಯಲ್ಲ, ಸುಳ್ಳುಗಾರನಾಗಿದ್ದಾನೆ (1 ಯೋಹಾನ 4:20). ಇಲ್ಲಿ ಸಹೋದರನಿಗೆ ಉಲ್ಲೇಖಿಸಿ, ಹೀಗೆ ಬರೆಯಲಾಗಿದೆ ”ತಾನು ಕಂಡಿರುವ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು” ಎಂಬುದಾಗಿ (1 ಯೋಹಾನ 4:20). ನೀವು ಎಂದಿಗೂ ನೋಡದೇ ಇರುವಂತ ವಿಶ್ವಾಸಿಗಳನ್ನು ಪ್ರೀತಿಸುವುದು ಸುಲಭ. ಅಂದರೆ ದೂರದಲ್ಲಿರುವಂತ ವಿಶ್ವಾಸಿಗಳನ್ನು ಪ್ರೀತಿಸುವುದು ಸುಲಭ. ಆದರೆ ನೀವು ಪ್ರತಿಸಾರಿ ಭೇಟಿಯಾಗುವ ಸಹೋದರ ಮತ್ತು ಸಹೋದರಿಯರು, ನೀವು ದೇವರನ್ನು ಪ್ರೀತಿಸುತ್ತೀರೋ ಅಥವಾ ಇಲ್ಲವೋ ಎಂದು ಪರೀಕ್ಷಿಸುತ್ತಾರೆ.