WFTW Body: 

ಅರಣ್ಯಕಾಂಡದಲ್ಲಿನ ಅಧ್ಯಾಯ 13 ರಲ್ಲಿ, ಇಸ್ರಾಯೇಲ್ಯರಿಗೆ ದೇವರು ವಾಗ್ದಾನ ಮಾಡಿದಂತ ಜಾಗವಾದ ಕಾನನ್ ಗಡಿಯ ಕಾದೇಶ್-ಬರ್ನೇಯಗೆ ಇಸ್ರಾಯೇಲ್ಯರು ಬರುವುದನ್ನು ನಾವು ನೋಡಬಹುದು. ಅವರು ಐಗುಪ್ತವನ್ನು ಬಿಟ್ಟು ಆಗಲೇ ಎರಡು ವರುಷಗಳಾಗಿತ್ತು (ಧರ್ಮೋಪದೇಶಕಾಂಡ 2:14) ಮತ್ತು ದೇವರು ಅವರನ್ನು ಅದರೊಳಗೆ ಹೋಗಿ, ಆ ಜಾಗವನ್ನು ವಶ ಮಾಡಿಕೊಳ್ಳಲು ಹೇಳಿದರು. ಇಸ್ರಾಯೇಲ್ಯರು ತಮ್ಮ ಪಿತೃಗಳ ಗೋತ್ರದ ಪ್ರಕಾರ 12 ಮಂದಿಯನ್ನು ಆ ಜಾಗ ಪರೀಕ್ಷಿಸುವ ಸಲುವಾಗಿ ಕಳುಹಿಸಿದರು. ಈ ಎಲ್ಲಾ ಹನ್ನೆರಡು ಮಂದಿ ಹಿಂತಿರುಗಿ ಬಂದು, ಆ ಜಾಗವು ನಿಜವಾಗಿಯೂ ಅದ್ಬುತವಾದದ್ದು ಎಂದು ಹೇಳಿದರು. ಅದರಲ್ಲಿ 10 ಮಂದಿ, ”ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು, ಅವರನ್ನು ನಾವು ಜಯಿಸಲು ಆಗುವುದಿಲ್ಲ” ಎಂದು ಹೇಳಿದರು. ಆದರೆ ಅವರಲ್ಲಿನ ಮತ್ತಿಬ್ಬರಾದ - ಕಾಲೇಬ ಮತ್ತು ಯೆಹೋಶುವ - ಈ ಇಬ್ಬರು ಪ್ರತಿಕ್ರಿಯಿಸಿ ಈ ರೀತಿಯಾಗಿ ಹೇಳಿದರು - ”ಆ ಬಲಿಷ್ಠರನ್ನು ಸೋಲಿಸಲು ದೇವರು ನಮಗೆ ಸಹಾಯ ಮಾಡುತ್ತಾರೆ ” ಎಂಬುದಾಗಿ. ಆದರೆ 600,000 ಇಸ್ರಾಯೇಲ್ಯರು ಬಹುಮತದ (10 ಮಂದಿಯ) ಮಾತನ್ನು ಕೇಳಿದರು.

ಇದರಿಂದ ನಾವು ಏನನ್ನು ಕಲಿಯಬಹುದು? ಮೊದಲನೆಯದಾಗಿ, ಬಹುಮತವನ್ನು ಹಿಂಬಾಲಿಸುವುದು ಅಪಾಯವಾಗಿದೆ - ಏಕೆಂದರೆ ಈ ಬಹುಮತವು ತಪ್ಪು ತಿಳುವಳಿಕೆಯನ್ನು ಹೊಂದಿತ್ತು. ”ಜೀವದ ಮಾರ್ಗವು ಇಕ್ಕಟ್ಟಾಗಿದೆ, ಅದನ್ನು ಕೆಲವೇ ಮಂದಿ ಕಂಡು ಹಿಡಿದುಕೊಳ್ಳುವರು” ಎಂಬುದಾಗಿ ಯೇಸು ಹೇಳಿದ್ದಾರೆ. ಬಹುಮತವು (ಹೆಚ್ಚು ಜನರ ಅಭಿಪ್ರಾಯವು) ವಿಶಾಲ ಹಾದಿಯಾದ ನಾಶನಕ್ಕೆ ತೆರಳುತ್ತದೆ. ಹಾಗಾಗಿ ನೀವು ಬಹುಮತವನ್ನು ಹಿಂಬಾಲಿಸಿದರೆ, ನೀವು ನಿಶ್ಚಯವಾಗಿ ಆ ಬಹುಮತದೊಟ್ಟಿಗೆ ವಿಶಾಲ ಮಾರ್ಗವಾದ ನಾಶನಕ್ಕೆ ಅವರೊಟ್ಟಿಗೆ ತೆರಳುತ್ತೀರಿ. ದೊಡ್ಡ ಗುಂಪುಳ್ಳ ಸಭೆಯು ಆತ್ಮೀಕ ಸಭೆಯೆಂದು ಎಂದಿಗೂ ಕಲ್ಪಿಸಿಕೊಳ್ಳಬೇಡಿ. ಯೇಸುವಿನ ಸಭೆಯು ಕೇವಲ 11 ಮಂದಿಯನ್ನು ಮಾತ್ರ ಒಳಗೊಂಡಿತ್ತು.

ದೇವರು ಒಬ್ಬ ಮನುಷ್ಯನೊಟ್ಟಿಗೆ ನಿಂತುಕೊಂಡಿರುತ್ತಾರೆ ಎಂಬುದನ್ನು ಹೇಗೆ ನೀವು ಗುರುತಿಸುತ್ತೀರಿ? ”ಆತನು ನಂಬಿಗಸ್ತಿಕೆಯ ಮಾತುಗಳನ್ನು ಆಡುತ್ತಾನೆ”

10 ಮಂದಿ ನಾಯಕರು ಒಂದು ಸಂಗತಿಯನ್ನು ಹೇಳುವಾಗ, ಇಬ್ಬರು ಸರಿಯಾಗಿ ವಿರುದ್ಧವಾದದ್ದನ್ನೇ ಹೇಳುತ್ತಾರೆ, ಯಾರ ಪರ ನೀವು ವಹಿಸುತ್ತೀರಿ? ದೇವರು ಇಲ್ಲಿ ಇಬ್ಬರ ಪರ ನಿಂತಿದ್ದರು, ಅಂದರೆ ಕಾಲೇಬ ಮತ್ತು ಯೆಹೋಶುವ ಪರ. ಅಪನಂಬಿಕೆ ಮತ್ತು ಸೈತಾನನು ಮಿಕ್ಕ 10 ಮಂದಿಯ ಪರವಿತ್ತು. ಆದರೆ ಇಸ್ರಾಯೇಲ್ಯರು ಮೂರ್ಖತನದಿಂದ ಬಹುಮತವನ್ನು ಹಿಂಬಾಲಿಸಿದರು - ಮತ್ತು ಅದಕ್ಕಾಗಿಯೇ ಅವರು ಅರಣ್ಯದಲ್ಲಿ ನಂತರದ 38 ವರುಷಗಳ ಕಾಲ ಅಲೆದಾಡಬೇಕಾಯಿತು. ದೇವರು ಯಾರ ಪರವಾಗಿದ್ದಾನೆ ಎಂಬುದನ್ನು ಗ್ರಹಿಸಲು ಅವರು ಸೂಕ್ಷ್ಮಗ್ರಹಿಕೆಯನ್ನು ಹೊಂದಿರಲಿಲ್ಲ! ಎಷ್ಟೋ ಮಂದಿ ಬಹುಮತವನ್ನು ಹೊಂದಿದ್ದರೂ, ಅದರ ವಿರುದ್ದವಾಗಿ ಕೇವಲ ಒಬ್ಬ ಮನುಷ್ಯನೊಟ್ಟಿಗೆ ದೇವರು ಸೇರಿಕೊಂಡರೆ, ಅದೇ ನಿಜವಾದ ಬಹುಮತ. ಹಾಗಾಗಿ ನಾನು ಯಾವಾಗಲೂ ದೇವರೊಟ್ಟಿಗೆ ನಿಂತಿಕೊಳ್ಳಲು ಇಚ್ಛಿಸುತ್ತೇನೆ. ವಿಮೋಚನಕಾಂಡ 32 ರಲ್ಲಿ ನಾವು ನೋಡಬಹುದಾದದ್ದೇನೆಂದರೆ, ಇಸ್ರಾಯೇಲ್ಯರು ಬಂಗಾರದ ವಿಗ್ರಹವನ್ನು ಆರಾಧಿಸುವಾಗ, ದೇವರು ಒಬ್ಬ ಮನುಷ್ಯನಾದ ಮೋಶೆಯ ಸಂಗಡ ಮಾತ್ರವೇ ಇದ್ದರು. ಆದರೆ ಎಲ್ಲಾ 12 ಗೋತ್ರದವರಲ್ಲಿ ಕೇವಲ ಲೇವಿಯ ಗೋತ್ರದವರು ಮಾತ್ರ ಇದನ್ನು ನೋಡಿದರು. ಆದರೆ ಇದೇ ಲೇವಿಯರು, ಪ್ರಸ್ತುತ ದೇವರು ಯೆಹೋಶುವ ಮತ್ತು ಕಾಲೇಬನ ಸಂಗಡ ಇರುವುದನ್ನು ಗ್ರಹಿಸಲು ಸಾಧ್ಯವಾಗಲಿಲ್ಲ!

ನಮಗೆ ಇಂದು ಇವೆಲ್ಲಾ ಪಾಠಗಳಾಗಿವೆ. ಕ್ರೈಸ್ತತ್ವವು ಸಾಮಾನ್ಯವಾಗಿ ಪೂರ್ಣ ರಾಜಿ ಮಾಡಿಕೊಳ್ಳುವುದರಲ್ಲಿ ತೊಡಗಿದೆ ಮತ್ತು ಲೋಕದ ಸ್ವಭಾವವನ್ನು ಹೊಂದಿಕೊಂಡಿದೆ. ಅಲ್ಲಿ ಮತ್ತು ಇಲ್ಲಿ, ರಾಜಿಯಾಗದೇ ದೇವರ ವಾಕ್ಯದ ಸತ್ಯಕ್ಕಾಗಿ ನಿಂತ ಕೆಲವರನ್ನು ದೇವರು ಎಬ್ಬಿಸುತ್ತಿದ್ದಾರೆ. ನೀವು ಸೂಕ್ಷ್ಮಗ್ರಹಿಕೆಯನ್ನು ಹೊಂದಿಕೊಂಡವರಾದರೆ, ದೇವರು ಕೆಲವರೊಟ್ಟಿಗೆ ಮಾತ್ರವೇ ಇದ್ದಾರೆ ಎಂಬುದನ್ನು ಗ್ರಹಿಸಿಕೊಳ್ಳುತ್ತೀರಿ ಮತ್ತು ಬಹುಮತದ ವಿರುದ್ದವಾಗಿ ನಿಂತುಕೊಳ್ಳುತ್ತೀರಿ ಹಾಗೂ ನೀವೂ ಸಹ ಅವರೊಟ್ಟಿಗೆ ವಾಗ್ದಾನ ಮಾಡಲ್ಪಟ್ಟ ಜಾಗಕ್ಕೆ ತೆರಳುತ್ತೀರಿ.

ದೇವರು ಒಬ್ಬ ಮನುಷ್ಯನೊಟ್ಟಿಗೆ ನಿಂತುಕೊಂಡಿರುತ್ತಾರೆ ಎಂಬುದನ್ನು ಹೇಗೆ ನೀವು ಗುರುತಿಸುತ್ತೀರಿ? ”ಆತನು ನಂಬಿಗಸ್ತಿಕೆಯ ಮಾತುಗಳನ್ನು ಆಡುತ್ತಾನೆ”. ಯೆಹೋಶುವ ಮತ್ತು ಕಾಲೇಬನು ನಂಬಿಗಸ್ತಿಕೆಯ ಮಾತುಗಳನ್ನು ಆಡಿದರು: ”ನಾವು ಜಯ ಹೊಂದುತ್ತೇವೆ” ಎಂಬ ಮಾತನ್ನು ಅವರಿಬ್ಬರು ಆಡಿದರು. ”ಕೋಪ, ಲೈಂಗಿಕತೆಯ ಆಶಾ-ಪಾಶ, ಹೊಟ್ಟೆಕಿಚ್ಚು, ಗೊಣಗುಟ್ಟುವಿಕೆ ಮತ್ತು ಹಣದ ಮೇಲಿನ ಪ್ರೀತಿ ಎಂಬ ದೈತ್ಯಗಳ ಮೇಲೆ ನಾವು ಜಯ ಹೊಂದುತ್ತೇವೆ. ನಾವು ಸೈತಾನನ್ನು ಜಯಿಸಬಹುದು. ದೇವರು ಸೈತಾನನ್ನು ನಮ್ಮ ಪಾದದ ಕೆಳಗೆ ಹಾಕುತ್ತಾನೆ”ಎಂಬ ನಂಬಿಗಸ್ತಿಕೆಯ ಮಾತುಗಳನ್ನು ಆಡುವಂತ ಒಬ್ಬ ಮನುಷ್ಯನೊಟ್ಟಿಗೆ ದೇವರು ನಿಂತಿಕೊಂಡಿರುವುದರ ಗುರುತು ಇದಾಗಿದೆ. ದೇವರ ಸಂಗಡ ಇರದೇ ಇರುವಂತ ಒಬ್ಬ ಮನುಷ್ಯನು ಹೀಗೆ ಹೇಳುತ್ತಾನೆ: ”ನಾವು ಸತ್ಯವೇದವನ್ನು ತುಂಬಾ ನಿಜವೆಂದು ತೆಗೆದುಕೊಳ್ಳಬಾರದು. ನಾವು ಕೇವಲ ಮಾನವರು. ನಾವು ನಮ್ಮ ಜೀವಿತದ ಕೊನೆಯವರೆಗೂ ಸೋಲುತ್ತಿರುತ್ತೇವೆ. ಮನುಷ್ಯನ ಮನಶ್ಯಾಸ್ತ್ರವನ್ನು ನೀವು ಅರ್ಥ ಮಾಡಿಕೊಳ್ಳಬೇಕು”. ನಿಮ್ಮ ಎದುರಿಗೆ ಪ್ರಮಾಣಿಕರಿಸಿ ಹೇಳುತ್ತೇನೆ, ”ನಾನು ಮಾನವನ ಮನಶ್ಯಾಸ್ತ್ರದ ಬಗ್ಗೆ ಕಾಳಜಿ ವಹಿಸುವುದಿಲ್ಲ”. ನಾನು ದೇವರ ವಾಕ್ಯವನ್ನು ನಂಬುತ್ತೇನೆ. ಮಾನವನ ತರ್ಕವನ್ನು ಉಪಯೋಗಿಸುವ ಮೂಲಕ, ಇಸ್ರಾಯೇಲ್ಯರ ರೀತಿಯಲ್ಲಿಯೇ ಅನೇಕ ಕ್ರೈಸ್ತರು ದಾರಿ ತಪ್ಪಿ ಹೋಗುತ್ತಾರೆ. ದೇವರು ಈ ಸತ್ಯಗಳನ್ನು ಬುದ್ದಿವಂತರಿಗೆ ಮತ್ತು ಚಾಣಕ್ಷರಿಗೆ ಮರೆಮಾಡಿ, ಬಾಲಕರಿಗೆ ಪ್ರಚುರ ಪಡಿಸುತ್ತಾರೆ. ನೀವು ಸತ್ಯವೇದವನ್ನು ಅಭ್ಯಾಸಿಸಲು ಮಾನವ ತರ್ಕ ಮತ್ತು ನಿಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿದರೆ, ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ, ನೀವು ದಾರಿ ತಪ್ಪಿ ಹೋಗುತ್ತೀರಿ. ನಿಮಗೆ ಪವಿತ್ರಾತ್ಮನ ಪ್ರಕಟನೆ ಅಗತ್ಯತೆ ಇದೆ: ಅದಕ್ಕಾಗಿಯೇ ಯೇಸು ಮೀನುಗಾರರನ್ನು ತನ್ನ ಶಿಷ್ಯಂದಿರನ್ನಾಗಿ ಆರಿಸಿಕೊಂಡರು ಮತ್ತು ದೊಡ್ಡ ಉಪನ್ಯಾಸಕರುಗಳಾದ ಗಮಲಿಯಲ್ ಮತ್ತು ಅವರ ವಿದ್ಯಾರ್ಥಿಗಳನ್ನು ಆರಿಸಿಕೊಳ್ಳಲಿಲ್ಲ. ನಂತರದಲ್ಲಿ ದೇವರು, ಈ ಉಪನ್ಯಾಸಕನ ವಿದ್ಯಾರ್ಥಿಯಾದ ಪೌಲನನ್ನು ಆರಿಸಿಕೊಂಡರು. ಆದರೆ ದೇವರು ಪೌಲನನ್ನು ಮೂರು ವರುಷಗಳ ಕಾಲ ಕಾಡಿಗೆ ತೆಗೆದುಕೊಂಡು ಹೋಗಬೇಕಾಗಿತ್ತು, ಏಕೆಂದರೆ ಆತನ ಎಲ್ಲಾ ಗರ್ವವನ್ನು ಕಡಿಮೆ ಮಾಡಿ, ಪ್ರಕಟನೆಯನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ ಏನು ಇಲ್ಲದವನಾಗಿರಿಸುವ ಸಲುವಾಗಿ.

ದೇವರು, ಇಸ್ರಾಯೇಲ್ಯರಲ್ಲಿ ಯಾರು ತನ್ನ ಬಲದ ಮೇಲೆ ಅನುಮಾನ ವ್ಯಕ್ತಪಡಿಸಿದರೋ, ಅಂಥವರ ಮೇಲೆ ದೇವರು ಕೋಪವುಳ್ಳವರಾಗಿ, ಈ ರೀತಿಯಾಗಿ ಹೇಳಿದರು, ”ಯಾಕೆಂದರೆ ನನ್ನ ಮಹಿಮೆಯನ್ನು ಐಗುಪ್ತದಲ್ಲಿಯೂ ಅರಣ್ಯದಲ್ಲಿಯೂ ನಾನು ಮಾಡಿದ ಸೂಚಕ ಕಾರ್ಯಗಳನ್ನೂ ನೋಡಿದ ಈ ಸಕಲ ಮನುಷ್ಯರು ನನ್ನನ್ನು ಈಗ ಹತ್ತು ಸಾರಿ ಶೋಧಿಸಿ ನನ್ನ ಶಬ್ದವನ್ನು ಕೇಳದೆ ಹೋದದ್ದರಿಂದ, ನಾನು ಅವರ ಪಿತೃಗಳಿಗೆ ಪ್ರಮಾಣ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ; ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಸಹ ಅದನ್ನು ನೋಡುವುದಿಲ್ಲ” (ಅರಣ್ಯಕಾಂಡ 14:22,23)- (ಕೆ.ಜೆ.ವಿ ಭಾಷಾಂತರ), ”ಹತ್ತು ಸಾರಿ” ಎನ್ನುವುದು ಅತಿಶಯೋಕ್ತಿ ಏನೆಲ್ಲ. ಅವರು ನಿಜವಾಗಿಯೂ ಹತ್ತು ಸಾರಿ ಸಿಡಿದೆದ್ದರು.

ಇಸ್ರಾಯೇಲ್ಯರು ಹತ್ತು ಸಾರಿ ಸಿಡಿದೆದ್ದ ಸಂದರ್ಭಗಳ ಪಟ್ಟಿಗಳು ಈ ಕೆಳಕಂಡಂತಿದೆ :

1. ಐಗುಪ್ತದವರನ್ನು ಕೆಂಪು ಸಮುದ್ರದಲ್ಲಿ ಬೆನ್ನು ಹತ್ತಿದಾಗ (ವಿಮೋಚನಕಾಂಡ 14:11)
2. ಮಾರಾದಲ್ಲಿನ ನೀರು ಕಹಿಯಾಗಿ, ಅದನ್ನು ಇಸ್ರಾಯೇಲ್ಯರು ಕುಡಿಯಲಾರದೆ ಇದ್ದಾಗ (ವಿಮೋಚನಕಾಂಡ 15:24) .
3. ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ರೊಟ್ಟಿ ದೊರೆಯದಿದ್ದಾಗ, ಪಾಪ ಮಾಡಿದರು, ಅಂದರೆ ಗೊಣಗುಟ್ಟಿದರು (ವಿಮೋಚನಕಾಂಡ 16:2,3).
4. ಇಸ್ರಾಯೇಲ್ಯರು ಭೋಜನವನ್ನು ರಾತ್ರಿಪೂರಾ ಇಟ್ಟುಕೊಂಡಾಗ (ವಿಮೋಚನಕಾಂಡ 16:20)
5. ಇಸ್ರಾಯೇಲ್ಯರು ಸಬ್ಬತ್ ದಿನದಂದು ರೊಟ್ಟಿಗಾಗಿ ಹುಡುಕಿಕೊಂಡು ಹೋದಾಗ (ವಿಮೋಚನಕಾಂಡ 16:27,28).
6. ರೆಫೀದೀಯಲ್ಲಿ ಕುಡಿಯಲು ನೀರು ಸಿಗದಿದ್ದಾಗ (ವಿಮೋಚನಕಾಂಡ 17:3).
7. ಇಸ್ರಾಯೇಲ್ಯರು ಬಸವನ ಮೂರ್ತಿಯನ್ನು ಪೂಜೆ ಮಾಡಿದಾಗ (ವಿಮೋಚನಕಾಂಡ 32).
8. ಇಸ್ರಾಯೇಲ್ಯರು ತಬೇರದಲ್ಲಿ ದೂರಿದಾಗ (ಅರಣ್ಯಕಾಂಡ 11:1).
9. ಇಸ್ರಾಯೇಲ್ಯರು ಮಾಂಸವನ್ನು ಕೇಳಿದಾಗ (ಅರಣ್ಯಕಾಂಡ 11:4, 33).
10. ಇಸ್ರಾಯೇಲ್ಯರು ಕಾನನ್ ದೇಶದೊಳಗೆ ಹೋಗಲು ನಿರಾಕರಿಸಿದಾಗ (ಅರಣ್ಯಕಾಂಡ 13).

ದೇವರು ಇಸ್ರಾಯೇಲ್ಯರಿಗೆ ಒಂಬತ್ತು ಅವಕಾಶಗಳನ್ನು ಒದಗಿಸಿದರು. ಇಂದು ಅನೇಕ ವಿಶ್ವಾಸಿಗಳು ಮಾಡುವ ಹಾಗೆ, ಅವರು ಆತನ ಕ್ಷಮೆಯ ಲಾಭವನ್ನು ತೆಗೆದುಕೊಂಡರು ಹಾಗೂ ಅನೇಕ ವಿಶ್ವಾಸಿಗಳು ಗ್ರಹಿಸಿಕೊಳ್ಳುವುದಿಲ್ಲ ಒಂಬತ್ತನೇ ಅವಕಾಶ ಕೊನೆ ಅವಕಾಶವೆಂದು. ದೇವರ ತಾಳ್ಮೆಯ ಸಮಯ ಮುಗಿಯುತ್ತಿರುತ್ತದೆ ಮತ್ತು ದೇವರು ತಿರುಗಿ ಬಿದ್ದಾಗ ಅವರು ಶಿಕ್ಷೆಗೆ ಒಳಪಡುತ್ತಾರೆ. ಅವರಿಗೆ ಮತ್ತೆ ಹಿಂತಿರುಗಿ ಹೋಗಲು ಮಾರ್ಗವೇ ಇರುವುದಿಲ್ಲ. ಅವರು ತಮಗೆ ಸಂಭವಿಸುವ ಶಿಕ್ಷೆಯನ್ನು ಕೇಳಿದಾಗ ಅವರು ದೇವರ ಕಡೆಗೆ ತಿರುಗಿಕೊಂಡರು ಮತ್ತು ಮತ್ತೊಂದು ಅವಕಾಶವನ್ನು ಕೇಳಿದರು. ಆದರೆ ಅದು ತುಂಬಾ ತಡವಾಗಿತ್ತು (ಅರಣ್ಯಕಾಂಡ 14:39-45). ಅನೇಕ ವಿಶ್ವಾಸಿಗಳು ಜಯದ ಜೀವಿತಕ್ಕೆ ಪ್ರವೇಶಿಸಲು ಒಂದು ದಿನ ಅವಕಾಶವನ್ನು ಪಡೆದುಕೊಳ್ಳುತ್ತಾರೆ, ಅದರಂತೆ ಆ ಅವಕಾಶವು ಯಾವಾಗಲೂ ಲಭ್ಯವಿರುವುದಿಲ್ಲ.