ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಆತ್ಮಭರಿತ ಜೀವಿತ
WFTW Body: 

ಅ.ಕೃತ್ಯಗಳು 1:5 ರಲ್ಲಿ, ನಮಗೆ ಒಂದು ವಾಗ್ದಾನವಿದೆ. ”ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವುದು” ಎಂಬುದಾಗಿ. ಸ್ನಾನಿಕನಾದ ಯೋಹಾನನು, ”ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಹೇಳಿದಾಗ, ಅವರು ತಕ್ಷಣ ಇಹಲೋಕದ ರಾಜ್ಯದ ಬಗ್ಗೆ ಯೋಚಿಸಿದರು. ಒಬ್ಬ ಹಳೆ ಒಡಂಬಡಿಕೆಯ ವ್ಯಕ್ತಿಯ ಮನಸ್ಸು ಯಾವಾಗಲೂ ಇಹಲೋಕದ ಸಂಗತಿಗಳ ಮೇಲೆ ಇರುತ್ತದೆ. ಅನೇಕ ಕ್ರೈಸ್ತರು, ”ದೇವರು ನನ್ನನ್ನು ಆಶಿರ್ವದಿಸಿದನು” ಎಂದು ಹೇಳಿದಾಗ, ಜನರು ಸಾಮಾನ್ಯವಾಗಿ ಈ ರೀತಿಯಾಗಿ ಯೋಚಿಸುತ್ತಾರೆ, ದೇವರು ಅವರನ್ನು ಭೌತಿಕವಾಗಿ ಹಣದ ಅಥವಾ ಒಳ್ಳೆ ಕೆಲಸದ ಅಥವಾ ಮನೆಯ ಮುಖಾಂತರ ಆಶಿರ್ವದಿಸಿದ್ದಾನೆ ಎಂದು. ಹಳೆ ಒಡಂಬಡಿಕೆಯಲ್ಲಿರುವ ಜನರ ಗುಣಲಕ್ಷಣ ಇದಾಗಿದೆ. ನಿಮ್ಮಲ್ಲಿ ಈ ರೀತಿಯ ಯೋಚನೆ ಇದೆ ಎಂದು ನೀವು ಕಂಡು ಹಿಡಿಯುವಾಗ, ನೀವು ಹಳೆ ಒಡಂಬಡಿಕೆಯ ಕ್ರೈಸ್ತನು ಎಂದು ಅದು ಸೂಚಿಸುತ್ತದೆ. ಇಹಲೋಕದ ಆಶಿರ್ವಾದಗಳು ದೇವರ ಆಶಿರ್ವಾದದ ಪ್ರಾಥಮಿಕ ಗುರುತು ಎಂದು ನೀವು ಕಲ್ಪಿಸಿಕೊಳ್ಳುವುದಾದರೆ, ಮಿಲಿಯನ್ ಗಟ್ಟಲೆ ನಾಸ್ತಿಕರು ನಿಮಗಿಂತ ಹೆಚ್ಚು ಆಶಿರ್ವಾದವನ್ನು ಪಡೆದುಕೊಂಡಿದ್ದಾರೆ - ಆ ರೀತಿಯಾಗಿ ಯೋಚಿಸುವಂತ ಒಂದು ವಿಧ ಹುಚ್ಚುತನದಿಂದ ಕೂಡಿದ್ದಾಗಿರುತ್ತದೆ. ಹೊಸ ಒಡಂಬಡಿಕೆಯ ಆಶಿರ್ವಾದದ ಗುರುತೇನೆಂದರೆ, ನಾವು ಹೆಚ್ಚು ಹೆಚ್ಚು ಕ್ರಿಸ್ತನ ರೀತಿಯಾಗುವುದಾಗಿದೆ.

ಪವಿತ್ರಾತ್ಮನಲ್ಲಿ ಸ್ನಾನವಾಗಿರುವುದರ ಗುರುತು ಏನು? ಅ.ಕೃತ್ಯಗಳು 1:8 ರಲ್ಲಿ ಯೇಸು ಹರಳಿನಂತೆ ಸ್ಪಷ್ಟವಾಗಿ ತಮ್ಮ ಮಾತಿನಿಂದ ಹೇಳಿದ್ದಾರೆ. ”ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ, ನೀವು ಬಲವನ್ನು ಹೊಂದುವಿರಿ”

ಪಂಚಶತ್ತಮ ದಿನದ ಮುಂಚೆ ಅಪೊಸ್ತಲರು ಇಹಲೋಕದ ಮನಸ್ಸುಳ್ಳವರಾಗಿದ್ದರು. ನಿಮಗೆ ಆದಷ್ಟು ಬೇಗ ಪವಿತ್ರಾತ್ಮನಲ್ಲಿ ಸ್ನಾನವಾಗುವುದು ಎಂದು ಕರ್ತನಿಂದ ಅವರು ಹೇಳಿಸಿಕೊಂಡಾಗ, ಅವರು ತಕ್ಷಣವೇ ಯೋಚಿಸಿದ್ದೇನೆಂದರೆ, ಇಹಲೋಕದ ರಾಜ್ಯವನ್ನು ಪಡೆದುಕೊಳ್ಳುತ್ತೇವೆ ಎಂಬುದಾಗಿ ಮತ್ತು ಅವರು ಕೇಳಿದ್ದೇನೆಂದರೆ, ”ಸ್ವಾಮಿ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರುಗಿ ಸ್ಥಾಪಿಸಿಕೊಡುವಿಯೋ?” ಎಂದು (ಅ.ಕೃತ್ಯಗಳು 1:6). ಆಗ ಕರ್ತನು ಪ್ರತಿಕ್ರಿಯಿಸಿದ್ದೇನೆಂದರೆ, ”ತಂದೆಯು ಸ್ವಂತ ಅಧಿಕಾರಿದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ” (ಅ.ಕೃತ್ಯಗಳು 1:7). ಅನೇಕರು ಪ್ರಕಟನೆ ಪುಸ್ತಕವನ್ನು ಓದುತ್ತಾರೆ, ಕಾರಣ ಕೊನೆಯ ದಿನಗಳ ಕ್ಷಣಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳಲು. ಯೇಸು ಯಾವಾಗ ಬರುತ್ತಾರೆ ಎಂದು ತಿಳಿದುಕೊಳ್ಳುವುದು ಮತ್ತು ಆತನ ರಾಜ್ಯವನ್ನು ನಿಲ್ಲಿಸುವುದು ನಮ್ಮ ಕೆಲಸವಲ್ಲ. ಆದರೆ ನಾವು ಏನು ಮಾಡಬೇಕೆಂದರೆ, ಪವಿತ್ರಾತ್ಮನ ಬಲವನ್ನು ತಿಳಿದುಕೊಳ್ಳಬೇಕು.

ಪವಿತ್ರಾತ್ಮನಲ್ಲಿ ಸ್ನಾನವಾಗಿರುವುದರ ಗುರುತು ಏನು? ಅ.ಕೃತ್ಯಗಳು 1:8 ರಲ್ಲಿ ಯೇಸು ಹರಳಿನಂತೆ ಸ್ಪಷ್ಟವಾಗಿ ತಮ್ಮ ಮಾತಿನಿಂದ ಹೇಳಿದ್ದಾರೆ. ”ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ, ನೀವು ಬಲವನ್ನು ಹೊಂದುವಿರಿ” ಎಂದು. ಅನ್ಯ ಭಾಷೆ (ವಾಣಿ) ಮಾತಾಡುವುದು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿರುವುದಕ್ಕೆ ಸಾಕ್ಷಿ ಎಂದು ಯೇಸು ಎಂದಿಗೂ ಹೇಳಿಲ್ಲ ಅಥವಾ ಅಪೊಸ್ತಲರು ಸಹ ಇದರ ಬಗ್ಗೆ ಒಂದು ಮಾತೂ ಹೇಳಿಲ್ಲ. ಆದರೂ ಸಹ ಅನೇಕ ಕ್ರೈಸ್ತರು ಇಂದು ಸಾರುತ್ತಿರುವುದೇನೆಂದರೆ, ”ಅನ್ಯ ಭಾಷೆಯಲ್ಲಿ ಮಾತನಾಡುವುದು (ಗೊತ್ತಿಲ್ಲದ ಭಾಷೆ)'' ಪವಿತ್ರಾತ್ಮನಿಂದ ತುಂಬಲ್ಪಟ್ಟಿರುವುದಕ್ಕೆ ”ಪ್ರಾರಂಭದ ಸಾಕ್ಷಿ” ಎಂದು. ಸತ್ಯವೇದದಲ್ಲಿ ಈ ರೀತಿಯಾಗಿ ಒಂದೇ ಒಂದು ವಚನದಲ್ಲಿ ಹೇಳದಿದ್ದರೂ ಸಹ, ಅವರು ಈ ರೀತಿಯಾಗಿ ಸಾರುತ್ತಿದ್ದಾರೆ.

ಅ.ಕೃತ್ಯಗಳು 19:2 ರಲ್ಲಿ, ಪೌಲನು ಎಫೆಸದಲ್ಲಿರುವ ಕೆಲವು ಶಿಷ್ಯಂದಿರಿಗೆ ಪ್ರಶ್ನೆಗಳನ್ನು ಈ ರೀತಿಯಾಗಿ ಕೇಳುತ್ತಾನೆ, ”ನೀವು ನಂಬಿದಾಗ ಪವಿತ್ರಾತ್ಮನ ವರವನ್ನು ಹೊಂದಿದಿರೋ”?. ಇಲ್ಲಿ ಪೌಲನ ಪ್ರಶ್ನೆ ನಮಗೆ ಸ್ಪಷ್ಟವಾಗಿ ಕಲಿಸುವುದೇನೆಂದರೆ :

  • 1. ಒಬ್ಬನು ಕ್ರಿಸ್ತನಲ್ಲಿ ನಂಬಿಕೆಯಿಡುವ ಸಮಯದಲ್ಲಿಯೇ ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳುವ ಸಾಧ್ಯತೆ ಇರುವುದು.
  • 2. ಯೇಸುವಿನಲ್ಲಿ ನಂಬಿಕೆಯಿಟ್ಟರೂ, ಇನ್ನೂ ಸಹ ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡಿಲ್ಲದೇ ಇರಲು ಸಾಧ್ಯವಿದೆ. ಇದರ ಅರ್ಥ ಒಬ್ಬ ನಿಜವಾಗಿಯೂ ಹೊಸದಾಗಿ ಹುಟ್ಟಿಲ್ಲದಿರುವಾಗ.
  • 3. ನಾವು ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡಿದ್ದೇವೋ ಅಥವಾ ಇಲ್ಲವೋ ಎಂದು ನಿಶ್ಚಿತತೆಯನ್ನು ಗೊತ್ತುಮಾಡಿಕೊಳ್ಳಬೇಕು.
  • ಅವರು ಪ್ರತಿಕ್ರಯಿಸಿ ಹೇಳಿದ್ದೇನೆಂದರೆ, ಪವಿತ್ರಾತ್ಮನ ಬಗ್ಗೆ ಕೇಳಿಯೂ ಇಲ್ಲ ಎಂಬುದಾಗಿ. ನಂತರ ಆತನು ಅವರಿಗೆ ಕೇಳಿದ್ದೇನೆಂದರೆ, ”ನೀವು ಯಾವದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು. ಇದು ತೋರಿಸುವುದೇನೆಂದರೆ, ಆ ದಿನಗಳಲ್ಲಿನ ಕ್ರೈಸ್ತರು ಯೇಸುವಿನ ಹೆಸರಿನಲ್ಲಿ ಮಾತ್ರವಲ್ಲ, ”ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸಿಕೊಂಡರು ಎಂಬುದಾಗಿ. ಅದನ್ನೇ ಪೌಲನು ಅವರಿಂದ ನಿರೀಕ್ಷಿಸಿದ್ದು, ಅವರು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ಪವಿತ್ರಾತ್ಮನ ಬಗ್ಗೆ ಕೇಳಿಸಿಕೊಳ್ಳಬೇಕು ಎಂಬುದಾಗಿ. ಅವರು ನಂತರ ಪೌಲನಿಗೆ, ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡೆವು ಎಂದು ಹೇಳಿದರು . ನಂತರ ಪೌಲನು ಅವರನ್ನು ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು. ನಂತರ ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮ ವರವು ಅವರ ಮೇಲೆ ಬಂತು; ಅವರು ನಾನಾ ಭಾಷೆಗಳನ್ನಾಡಿದರು ಮತ್ತು ಪ್ರವಾದಿಸಿದರು.

    ಅ.ಕೃತ್ಯಗಳಲ್ಲಿ ಪವಿತ್ರಾತ್ಮನ ವಿಭಿನ್ನ ಕಾರ್ಯಚರಣೆಗಳನ್ನು ಗುರುತಿಸಿರಿ. ಅಧ್ಯಾಯ 2 ರಲ್ಲಿ, 120 ಜನರು ಪ್ರಾರ್ಥಿಸುತ್ತಿದ್ದರು ಮತ್ತು ಅವರ ಮೇಲೆ ಪವಿತ್ರಾತ್ಮ ಇಳಿದು ಬಂತು. ಅಧ್ಯಾಯ 8 ರಲ್ಲಿ, ಪೇತ್ರನು ಮತ್ತು ಯೋಹಾನನು ಸಮಾರ್ಯದವರ ಮೇಲೆ ಕೈಗಳನ್ನಡಿಲು ಅವರು ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡರು. ಅಧ್ಯಾಯ 9 ರಲ್ಲಿ, ಅನನ್ಯನು ಪೌಲನ ಮೇಲೆ ಕೈಗಳನ್ನಿಡಲು ಪೌಲನು ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡನು. ಅಧ್ಯಾಯ 10 ರಲ್ಲಿ, ಕೊರ್ನೇಲ್ಯನೆಂಬುವನು ಇನ್ನೂ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳದೇ, ಸಂದೇಶವನ್ನು ಕೇಳಿಸಿಕೊಳ್ಳುವಾಗ, ಯಾರು ಆತನ ಮೇಲೆ ಕೈಯನ್ನೂ ಇಡದೇ, ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡನು. ಅಧ್ಯಾಯ 19 ರಲ್ಲಿ, ಅವರ ಮೇಲೆ ಕೈಗಳನ್ನಿಡುವುದರ ಮೂಲಕ ಪವಿತ್ರಾತ್ಮನನ್ನು ಸ್ವೀಕರಿಸಿಕೊಂಡರು. ಇದು ನಮಗೆ ಬೋಧಿಸುವುದೇನೆಂದರೆ, ಪವಿತ್ರಾತ್ಮನನ್ನು ಕೈಗಳನ್ನಿಡುವುದರ ಮೂಲಕ ಅಥವಾ ಕೈಗಳನ್ನು ಇಡದೇ ಇರುವ ಮೂಲಕವೂ ಮತ್ತು ನೀರಿನ ದೀಕ್ಷಾಸ್ನಾನ ಮುಂಚೆ ಅಥವಾ ನಂತರವೂ ಸ್ವೀಕರಿಸಿಕೊಳ್ಳಬಹುದು ಎಂದು. ಯಾವ ”ರೀತಿ” ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳುತ್ತೀವಿ ಎಂಬುದು ಮುಖ್ಯ ಸಂಗತಿಯಲ್ಲ. ಮುಖ್ಯ ಸಂಗತಿ ಯಾವುದೆಂದರೆ ”ಸತ್ಯತೆ”.