ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಆತ್ಮಭರಿತ ಜೀವಿತ
WFTW Body: 

2 ಕೊರಿಂಥ 3:13-18 ರಲ್ಲಿ ಪೌಲನು ಹೊಸ ಒಡಬಂಡಿಕೆಯನ್ನು ಹಳೆ ಒಡಂಬಡಿಕೆಯೊಟ್ಟಿಗೆ ಹೋಲಿಸುತ್ತಾನೆ. ಮತ್ತೊಂದು ಅರ್ಥದಲ್ಲಿ ಮೋಶೆಯನ್ನು ಕ್ರಿಸ್ತನೊಟ್ಟಿಗೆ ಹೋಲಿಸುತ್ತಾನೆ. ಮೋಶೆಯು ದೇವರ ಸಾನಿಧ್ಯದಲ್ಲಿರುವಾಗ, ಪ್ರಭಾವವು ಆತನ ಮುಖದ ಮೇಲೆ ಪ್ರಜ್ವಲಿಸುತ್ತಿತ್ತು. ಆತನು ಬೆಟ್ಟದಿಂದ ಕೆಳಗೆ ಇಳಿದು ಬಂದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಳ್ಳುತ್ತಿದ್ದನು. ಯಾಜಕಕಾಂಡದಲ್ಲಿ ಹೇಳುವುದೇನೆಂದರೆ - ಆತನು ಮುಸುಕು ಹಾಕಿಕೊಳ್ಳುತ್ತಿದ್ದರಿಂದ ಜನರು ಆತನನ್ನು ನೋಡಲು ಭಯಪಡುತ್ತಿದ್ದರು ಎಂಬುದಾಗಿ. ಆದರೆ ನಮಗೆ ಇಲ್ಲಿ ಇನ್ನೊಂದು ಕಾರಣ ಕೊಡಲ್ಪಟ್ಟಿದೆ. ಸಮಯ ಕಳೆದ ಹಾಗೆ, ಮೋಶೆಯ ಮುಖದ ಮೇಲಿನ ಪ್ರಭಾವವು ಮುಸುಕಿನ ಒಳಗೆ ಕಡಿಮೆಯಾಗುತ್ತಿತ್ತು; ಕ್ರಮೇಣವಾಗಿ ಪ್ರಭಾವವು ಕಾಣದೆ ಹೋಗುವಂತದ್ದನ್ನು ಜನರು ನೋಡಬಾರದು ಎಂಬ ಸಲುವಾಗಿ ಆತನು ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಳ್ಳುತ್ತಿದ್ದನು (ವಚನ 13). ಅನೇಕ ಕ್ರೈಸ್ತರ ಖಾಸಗಿ ಜೀವಿತದಲ್ಲಿ ಇಂದು ಆ ಪ್ರಭಾವವು ಕಡಿಮೆಯಾಗುತ್ತಿದೆ. ಇಂದಿನ ಕೆಲವು 50 ವರುಷ ವಯಸ್ಸಿನ ಬೋಧಕರು 25 ವರುಷ ವಯಸ್ಸಿನವರಿದ್ದಾಗ, ದೇವರಿಗಾಗಿ ಬೆಂಕಿಯುಳ್ಳವರಾಗಿದ್ದರು. ಆದರೆ ಈಗ ಹಣದ, ಪಾಪದ ಮತ್ತು ಅನೇಕ ಬೇರೆ ಸಂಗತಿಗಳ ಕಡೆಗಿನ ಅವರ ನಡವಳಿಕೆಯು ಕ್ರಿಸ್ತನ ರೀತಿಯಲ್ಲಿ ಇರುವುದಿಲ್ಲ. ಇದೊಂದು ಹಳೆ ಒಡಂಬಡಿಕೆ ಸೇವೆಯ ಮುಖ್ಯ ಗುರುತಾಗಿದೆ - ಅಂದರೆ ಪ್ರಭಾವವು ಮಾಸಿ ಹೋಗುವಂತದ್ದರ ಗುರುತಾಗಿದೆ.

ಹೊಸ ಒಡಂಬಡಿಕೆಯ ಸೇವೆಯು ಇದಕ್ಕೆ ತದ್ವಿರುದ್ಧವಾಗಿದ್ದಾಗಿದೆ. ನಾವು ನಮ್ಮ ಮುಖದ ಮೇಲೆ ಮುಸುಕು ಹಾಕಿಕೊಳ್ಳುವ ಅವಶ್ಯವಿಲ್ಲ. ನಾವು ನಮ್ಮ ಖಾಸಗಿ ಜೀವಿತದಲ್ಲಿ ಯಾವುದನ್ನೂ ಮುಚ್ಚಿಡಬೇಕಾದ ಅವಶ್ಯಕತೆ ಇಲ್ಲ. ಯೇಸು ಎಂದಿಗೂ ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡು ಬಂದಿಲ್ಲ. ಏಕೆಂದರೆ ಹೊಸ ಒಡಂಬಡಿಕೆಯಲ್ಲಿ ಈ ಮುಸುಕು ತೆಗೆದುಹಾಕಲ್ಪಟ್ಟಿದೆ. ”ನೀವು ಕರ್ತನ ಕಡೆಗೆ ತಿರುಗಿಕೊಂಡಾಗ ಆ ಮುಸುಕು ತೆಗೆದುಹಾಕಲ್ಪಡುತ್ತದೆ” (2 ಕೊರಿಂಥ 3:16). ಈಗ ನಾವು ಯೇಸುವಿನ ಪ್ರಭಾವವನ್ನು ದೇವರ ವಾಕ್ಯದಲ್ಲಿ ನೋಡುವಾಗ, ಪವಿತ್ರಾತ್ಮನು ನಮ್ಮನ್ನು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ದಿನದಿಂದ ದಿನಕ್ಕೆ ನಡೆಸುತ್ತಾ, ಆ ಪ್ರಭಾವಕ್ಕೆ ಬದಲಾಗುವಂತೆ ಮಾಡುತ್ತಾನೆ. ಮತ್ತೊಂದು ಅರ್ಥದಲ್ಲಿ ನಾವು ಪವಿತ್ರಾತ್ಮನಿಗೆ ಸಂಪೂರ್ಣವಾಗಿ ಅಧೀನರಾದಾಗ, ನಮ್ಮ ಜೀವಿತದಲ್ಲಿನ ಅಭಿಷೇಕವು ಹಿಂದಿನ ಕೆಲ ವರುಷಗಳಿಗಿಂತ ಇಂದು ಅಧಿಕವಾಗಿರುತ್ತದೆ ಮತ್ತೂ 30 ವರುಷಗಳ ಹಿಂದೆ ಇದ್ದದ್ದಕ್ಕಿಂತ ಇನ್ನೂ ಅಧಿಕವಾಗುತ್ತದೆ. ಆದರೆ ನೀವು ನಂಬಿಗಸ್ಥಿಕೆಯಿಂದ ಇಲ್ಲದಿದ್ದರೆ, ನೀವು ಹಿರಿಯರಾಗುತ್ತಿದ್ದಂತೆ ನಿಮ್ಮ ಜೀವಿತದಲ್ಲಿ ಪ್ರಭಾವವು ಕಡಿಮೆಯಾಗುತ್ತಾ ಹೋಗುತ್ತದೆ. ಅತ್ಯಾಸಕ್ತಿಯುಳ್ಳಂತ ಅನೇಕ ಯೌವನಸ್ಥರು ಮದುವೆ ಆಗುತ್ತಿದ್ದ ಹಾಗೇ ಹಿಂಜಾರಿ ಬೀಳುವವರಾಗುತ್ತಾರೆ. ಏಕೆ ಆ ರೀತಿ ಆಗುತ್ತದೆ? ನೀವು ದೇವರ ಚಿತ್ತದಲ್ಲಿ ಮದುವೆಯಾದರೆ, ನಿಮ್ಮ ಅತ್ಯಾಸಕ್ತಿಯು ನೀವು ಯೌವನಸ್ಥರಾಗಿದ್ದಾಗ ಇದ್ದದ್ದಕ್ಕಿಂತ ಅಧಿಕವಾಗಿರುತ್ತದೆ. ಆದರೆ ಪ್ರಭಾವವು ಕಡಿಮೆಯಾಗಲು ಕಾರಣವೇನೆಂದರೆ, ನಿಮ್ಮ ಮನೆ, ನಿಮ್ಮ ಹೆಂಡತಿ ಕರ್ತನಿಗಿಂತ ಹೆಚ್ಚು ಮುಖ್ಯವಾದಾಗ. ಹೀಗಾದಾಗ ಇಂತಹ ಮನುಷ್ಯನು ಕರ್ತನ ಪ್ರಭಾವವನ್ನು ನೋಡುವದನ್ನು ನಿಲ್ಲಿಸುತ್ತಾನೆ ಮತ್ತು ಹಿಂಜಾರಲು ಪ್ರಾರಂಭಿಸುತ್ತಾನೆ.

ಕೆಲವು ಸಹೋದರರು, ಯಾರಿಗೂ ಗೊತ್ತಿಲ್ಲದಿರುವಾಗ, ಸಾಮಾನ್ಯ ಜನರಂತೆ ಇದ್ದುಕೊಂಡು ದೇವರಿಗೆ ಸೇವೆ ಮಾಡುವಾಗ ಅದ್ಭುತವಾದ ಅಭಿಷೇಕವನ್ನು ಮತ್ತು ಪ್ರಭಾವವನ್ನು ತಮ್ಮ ಜೀವಿತದಲ್ಲಿ ಹೊಂದಿರುತ್ತಾರೆ. ಆದರೆ ಅವರ ಸೇವೆಯು ಇತರೆಡೆ ಹರಡಿ, ಅವರು ಜನಪ್ರಿಯರಾದಾಗ, ಅವರು ತಮ್ಮ ಅಭಿಷೇಕವನ್ನು ಕಳೆದುಕೊಳ್ಳುತ್ತಾರೆ. ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ಅವರು ಹೆಚ್ಚು ಗಮನವನ್ನು ಕೊಡುತ್ತಿರುತ್ತಾರೆ. ಆದರೆ, ಅವರು ತಮ್ಮ ಸೇವೆಯನ್ನು ಪ್ರಾರಂಭಿಸಿದಾಗ, ಸ್ವಲ್ಪ ಹಣವನ್ನು ಹೊಂದಿರುತ್ತಾರೆ. ಆಗ ಅವರ ಹಣದ ವಿಷಯವಾಗಿ ತುಂಬಾ ಎಚ್ಚರಿಕೆಯುಳ್ಳವರಾಗಿರುತ್ತಾರೆ. ಆದರೆ ಹಣವನ್ನು ಪ್ರೀತಿಸುವಂತ ಬೇರೆ ಕ್ರೈಸ್ತರೊಟ್ಟಿಗೆ ಸೇರಿಕೊಂಡಾಗ, ಅವರಂತೆಯೇ ಆಗಿ ಬಿಡುತ್ತಾರೆ. ನಂತರ ಪ್ರಭಾವವು ಅವರ ಜೀವಿತದಲ್ಲಿ ಮಂಕಾಗುತ್ತಾ ಹೋಗುತ್ತದೆ.

ಇಂತಹ ಸಂಗತಿಗಳು ನಮ್ಮ ಜೀವಿತದಿಂದ ಪ್ರಭಾವವನ್ನು ತೆಗೆದುಕೊಳ್ಳುವಂತದ್ದು ತುಂಬಾ ಸುಲಭವಾಗಿದೆ. ಅನೇಕ ಬೋಧಕರು ಮೋಶೆ ಮಾಡಿದಂತೆ, ಪ್ರಭಾವವು ಮಂಕಾಗುವಾಗ, ಅದನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅದು ನಿಮ್ಮ ಜೀವಿತದಲ್ಲಿ ಆಗದಿರುವಂತೆ ಎಚ್ಚರವಹಿಸಿ. ಏಕೆಂದರೆ ಅದು ದೇವರ ಚಿತ್ತವಲ್ಲ. ಅದು ನಮ್ಮ ಜೀವಿತದಲ್ಲಿ ಇದರ ವಿರುದ್ಧವಿದ್ದು, ಪ್ರಭಾವವು ಯಾವಾಗಲೂ ಹೆಚ್ಚುತ್ತಿರಬೇಕು. ಹಾಗಾಗಿ ದೇವರ ವಾಕ್ಯವನ್ನು ಧೃಢವಾಗಿ ನೋಡುವ ಮುಖಾಂತರ, ಯೇಸುವಿನ ಪ್ರಭಾವವನ್ನು ಯಾವಾಗಲೂ ನೋಡುವವರಾಗಿರಿ. ಈ ರೀತಿಯಾಗಿ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬೇಕು.

2 ಕೊರಿಂಥ 3:18ರಲ್ಲಿನ ವಚನದಲ್ಲಿ ಇಡೀ ಹೊಸ ಒಡಬಂಡಿಕೆಯಲ್ಲಿಯೇ ಪವಿತ್ರಾತ್ಮನ ಶ್ರೇಷ್ಠ ಸೇವೆಯನ್ನು ವಿವರಿಸಲಾಗಿದೆ. ಪವಿತ್ರಾತ್ಮನು ನಮ್ಮ ಜೀವಿತದಲ್ಲಿ ಕರ್ತನಾದಾಗ, ನಮಗೆ ಬಿಡುಗಡೆಯನ್ನು ತರುತ್ತಾನೆ. ” ಕರ್ತನ ಆತ್ಮನು ಯಾರಲಿದ್ದಾನೋ ಅವರಿಗೆ ಬಿಡುಗಡೆ ಉಂಟು” (ವಚನ 17). ಆತನು ಪ್ರಾಥಮಿಕವಾಗಿ ನಮ್ಮನ್ನು ಪಾಪದ ಬಲದಿಂದ ಬಿಡುಗಡೆಗೊಳಿಸುತ್ತಾನೆ. ಹಣದ ಮೇಲಿನ ಪ್ರೀತಿಯಿಂದ, ದೇವರ ವಾಕ್ಯಕ್ಕೆ ವಿರುದ್ದವಾದ ಹಿರಿಯರ ಮತ್ತು ಪಿತೃಗಳು ಆಚರಿಸುತ್ತಿದ್ದ ಸಂಪ್ರಾದಯಗಳಿಂದ ಬಿಡುಗಡೆ ಮಾಡುತ್ತಾನೆ. ಜನರ ಅಭಿಪ್ರಾಯಗಳಿಂದ ಮತ್ತು ಹಲವಾರು ಲೌಕಿಕ ವಿಷಯಗಳಿಂದ ನಮ್ಮನ್ನು ಬಿಡುಗಡೆಗೊಳಿಸುತ್ತಾನೆ. ಇದೊಂದು ನಿಜವಾದ ದೊಡ್ಡ ಸಾತಂತ್ರ್ಯವಾಗಿದೆ. ಆಗ ನಾವು ಮನುಷ್ಯನನ್ನು ಬಿಟ್ಟು ದೇವರನ್ನು ಸೇವೆ ಮಾಡುವವರಾಗುತ್ತೇವೆ.

2 ಕೊರಿಂಥ 3:18 ರಲ್ಲಿ ನಮಗೆ ಈ ರೀತಿಯಾಗಿ ಹೇಳಲ್ಪಟ್ಟಿದೆ. ಸತ್ಯವೇದದ ವಚನಗಳಲ್ಲಿ ಪವಿತ್ರಾತ್ಮನು ಯೇಸುವಿನ ಪ್ರಭಾವವನ್ನು ನಮಗೆ ತೋರಿಸುತ್ತಾನೆ ಎಂಬುದಾಗಿ (ದೇವರ ವಾಕ್ಯವು ಕನ್ನಡಿಯಂತಿದೆ - ಯಾಕೋಬ 1:23-25). ಕೆಲವು ಜನರು ಸತ್ಯವೇದವನ್ನು ಭಾನುವಾರದ ಕೂಟಗಳಿಗೆ ಸಂದೇಶಗಳನ್ನು ತಯಾರಿಸಿಕೊಳ್ಳಲು ಓದುತ್ತಾರೆ ಮತ್ತು ಸಿದ್ದಾಂತಗಳನ್ನು ಪರೀಕ್ಷಿಸಲು ಓದುತ್ತಾರೆ. ಆದರೆ ಪವಿತ್ರಾತ್ಮನು ಪ್ರಾಥಮಿಕವಾಗಿ ಸತ್ಯವೇದದಲ್ಲಿ ಯೇಸುವಿನ ಪ್ರಭಾವವನ್ನು ತೋರಿಸುತ್ತಾನೆ. ನಾವು ಆ ಪ್ರಭಾವವನ್ನು ನೋಡುವಾಗ, ಪವಿತ್ರಾತ್ಮನು ನಮ್ಮನ್ನು ಯೇಸುವಿನ ರೀತಿಯಲ್ಲಿ ಬದಲಾಯಿಸುತ್ತಾನೆ. ಕ್ರಿಸ್ತನ ರೀತಿಯಲ್ಲಿದ್ದುಕೊಂಡು, ಕ್ರಿಸ್ತನು ಸೇವೆ ಮಾಡಿದ ರೀತಿಯನ್ನು ಸಹ ಪವಿತ್ರಾತ್ಮನು ನಮಗೆ ತೋರಿಸುತ್ತಾನೆ. ಆಗ ನಾವು ಸಹ ಯೇಸು ಸೇವೆ ಮಾಡಿದ ರೀತಿಯಲ್ಲಿಯೇ ಸೇವೆ ಮಾಡಲು ಪ್ರಾರಂಭಿಸುತ್ತೇವೆ. ಯೇಸು ತನ್ನ ತಂದೆಯ ಸೇವೆ ಮಾಡುವ ಸಲುವಾಗಿ, ಹೇಗೆ ತ್ಯಾಗ ಮಾಡಿದನು ಎಂದು ಆತ್ಮನು ನಮಗೆ ತೋರಿಸುತ್ತಾನೆ ಮತ್ತು ನಾವು ಸಹ ಕರ್ತನ ಸೇವೆ ಮಾಡಲು ಅದೇ ತ್ಯಾಗವನ್ನು ಮಾಡುವಂತೆ ಆತ್ಮನು ನಮಗೆ ನೆರವಾಗುತ್ತಾನೆ. ನಾವು ಬದಲಾಗುವಂತೆ ನಮ್ಮ ಜೀವಿತದಲ್ಲಿ ಪವಿತ್ರಾತ್ಮನನ್ನು ಅನುಮತಿಸಿದಾಗ, ನಮ್ಮ ಜೀವಿತ ಮತ್ತು ನಮ್ಮ ಸೇವೆಯು ಪರಿಣಾಮಕಾರಿಯಾಗಿ ಬದಲಾಗುತ್ತದೆ. ಆಗ ನಾವು ಹೊಸ ಒಡಂಬಡಿಕೆಯ ಸೇವಕರಾಗುತ್ತೇವೆ ಮತ್ತು ಪ್ರಸ್ತುತ ನಾವು ಮಾಡುತ್ತಿರುವ ಲೌಕಿಕ ಕೆಲಸವನ್ನು ಸಹ ಬಿಡಬೇಕಾಗಿಲ್ಲ. ಸಭೆಯಲ್ಲಿರುವಂತ ಯಾವುದೇ ಸಹೋದರ ಅಥವಾ ಸಹೋದರಿ ಈ ರೀತಿಯ ಹೊಸ ಒಡಂಬಡಿಕೆಯ ಸೇವಕರಾಗಬಹುದು.