ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ನಾಯಕರಿಗೆ
WFTW Body: 

ಸಭೆಯೊಂದು ಆತ್ಮಿಕವಾಗಿ ಬೆಳೆಯದೆ, ಬರೀ ಅದರ ಸಂಖ್ಯೆಯ ಬೆಳವಣಿಗೆ ಆಗುವ ಬಗ್ಗೆ ದೇವರಿಗೆ ಮೆಚ್ಚುಗೆ ಇರುವುದಿಲ್ಲವೆಂದು ನಾವು ನೆನಪಿಡಬೇಕು. ಕೊರಿಂಥದವರ ಮಾಂಸೀಕ(ಲೌಕೀಕ) ಸ್ಥಿತಿಗತಿಯ ಮೂಲಕ ದೇವರು ತನ್ನನ್ನು ದೀನನಾಗಿಸುವನೆಂದು ಪೌಲನು ಕೊರಿಂಥದ ಕ್ರೈಸ್ತರಿಗೆ ಹೇಳಿದನು (2 ಕೊರಿ. 12:20,21ನ್ನು ಓದಿ). ಕೊರಿಂಥದವರ ಪ್ರಾಪಂಚಿಕತೆಯ ಬಗ್ಗೆ ಪೌಲನು ಯಾಕೆ ದೀನನಾಗಬೇಕಿತ್ತು? ಯಾಕೆಂದರೆ, ಪೌಲನು ಅವರ ಆತ್ಮಿಕ ತಂದೆಯಾಗಿದ್ದನು. ಮಕ್ಕಳ ಆತ್ಮಿಕ ಸ್ತಿತಿಗತಿಗೆ ದೇವರು, ಅವರ ತಂದೆಯನ್ನು ಜವಾಬ್ದಾರಿ ಮಾಡುತ್ತಾನೆ. ನಮ್ಮ ಸಭೆಯಲ್ಲಿ ಪ್ರಾಪಂಚಿಕತೆಯನ್ನು ಕಾಣುವಾಗ, ನಾಯಕರಾಗಿ ನಮ್ಮ ಸೋಲನ್ನು ದೇವರು ನಮಗೆ ತೋರಿಸುತ್ತಾನೆ. ಸಹೋದರ-ಸಹೋದರಿಯರ ಮೇಲೆ ತಪ್ಪು ಹೊರಿಸುವ ಬದಲು, ನಾವು ನಮ್ಮನ್ನೇ ತಗ್ಗಿಸಿಕೊಳ್ಳಬೇಕು. ನಮ್ಮ ಮಕ್ಕಳಲ್ಲಿ ಲೌಕಿಕತೆಯನ್ನು ನೋಡುವಾಗ; ಅದರರ್ಥ ದೇವರು ನಮ್ಮ ದೋಷವನ್ನು ತೋರಿಸುತ್ತಿದ್ದಾರೆಂದು, ಆಗ ಮಕ್ಕಳನ್ನು ದೂಷಿಸದೆ ನಾವೇ ತಗ್ಗಿಸಿಕೊಳ್ಳಬೇಕು. ನಮ್ಮ ಸಹೋದರ-ಸಹೋದರಿಯರ ತಪ್ಪುಗಳನ್ನು ನೋಡಿದಾಗ ನಾವು ಸುಳ್ಳು ಕುರುಬರಾಗಿದ್ದರೆ ಅವರನ್ನು ಟೀಕಿಸುತ್ತೇವೆ. ಆದರೆ ನಾವು ದೇವ-ಜನರಾದರೆ, ನಮ್ಮನ್ನೇ ತಗ್ಗಿಸಿಕೊಳ್ಳುತ್ತೇವೆ ಮತ್ತು "ಕರ್ತನೇ ನಾನು ತಪ್ಪಿದ್ದೇನೆ. ನನ್ನನ್ನು ಕ್ಷಮಿಸು" ಎಂದು ಹೇಳುತ್ತೇವೆ.

ಅನ್ಯರನ್ನು ಕ್ರಿಸ್ತನೆಡೆಗೆ ತಂದ ಪೌಲನಿಗೆ, ಅವರು, "ಪವಿತ್ರಾತ್ಮನ ಮೂಲಕ ಶುದ್ಧೀಕರಿಸಲ್ಪಟ್ಟು ಆತನಿಂದ ಅಂಗೀಕಾರವಾಗುವಂಥ ಅರ್ಪಣೆ ಮಾಡಬೇಕೆಂದು" ಅವರ ಬಗ್ಗೆ ಬಹಳವಾದ ಭಾರವಿತ್ತು (ರೋಮಾ.15:16). ಹಳೆಯ ಒಡಂಬಡಿಕೆಯಲ್ಲಿ ಜನರು ತಂದ ಪ್ರತಿಯೊಂದು ಬಲಿಯು ಯಾವುದೇ ದೋಷವಿಲ್ಲದ್ದು ಎಂಬುದಾಗಿ ಯಾಜಕನು ಪರೀಕ್ಷಿಸಬೇಕಾಗಿತ್ತು(ಧರ್ಮೋ. 17:1). ಅದು ಯಾಜಕನ ಜವಾಬ್ದಾರಿಯಾಗಿತ್ತು. ಯಾವ ಒಂದು ರೀತಿಯಲ್ಲಾದರೂ ಅದು ದೋಷಪೂರಿತವಾಗಿದ್ದರೆ, ಅದನ್ನು ಅವನು ದೇವರಿಗೆ ಅರ್ಪಿಸಲಾಗುತ್ತಿರಲಿಲ್ಲ (ದೇವರು ದೃಷ್ಟಿಯಲ್ಲಿ ಅದೊಂದು ಎಂಥಹ ಗಂಭೀರವಾದ ಪಾಪವೆಂದು ತಿಳಿಯಲು, ಮಲಾಕಿಯ 1 ಮತ್ತು 2ನ್ನು ಓದಿ). ಈಗ ಹೊಸ ಒಡಂಬಡಿಕೆಯಲ್ಲಿ, ದೇವರು ಸಭೆಯಲ್ಲಿ ತನ್ನ ಸೇವೆಗಾಗಿ ಕರೆದವರೆಲ್ಲರಿಗೆ ಇದೇ ಜವಾಬ್ದಾರಿಯಿದೆ. ಅವರು ದೇವರಿಗೆ ಒಪ್ಪಿಸುವ ಜನರು ದೇವರಿಂದ ಸ್ವೀಕರಿಸುವವರಾಗಬೇಕು. ಅದಕ್ಕಾಗಿಯೇ "ಕ್ರಿಸ್ತಯೇಸುವಿನಲ್ಲಿ ಪ್ರತಿಯೊಬ್ಬನನ್ನು ಪರಿಪೂರ್ಣನನ್ನಾಗಿ ಮಾಡುವಂತೆ" ಪೌಲನು ಕಷ್ಟಪಟ್ಟನು (ಕೊಲೊಸ್ಸೆ. 1:28).

ಕ್ರಿಸ್ತನ ನ್ಯಾಯತೀರ್ಪಿನ ಆಸನದಲ್ಲಿ, ಎಲ್ಲವೂ ಪ್ರಕಟವಾಗುವುದು. ಪ್ರತಿಯೊಬ್ಬನು ತಾನು ದೇವರಿಗಾಗಿ ಬಹಳ ಶ್ರೇಷ್ಟವಾದ ಕೆಲಸವನ್ನು ಮಾಡುತ್ತೇನೆಂದು ಯೋಚಿಸಿದರೂ ಅಂದು ನಮ್ಮ ಎಲ್ಲಾ ಕೆಲಸ ಕಾರ್ಯಗಳು ಭೌತಿಕ ಅಥವಾ ಆಳವಿಲ್ಲದ್ದಾಗಿದ್ದರೆ ಪ್ರಯೋಜನವೇನು? ಸಾರ್ದಿಸಿನ ಹಿರಿಯನು ಜನರ ಗೌರವದಲ್ಲಿ ತೃಪ್ತಿಹೊಂದಿ, ಮೂರ್ಖನಾಗಿದ್ದನು. ನಮ್ಮ ಮಕ್ಕಳ ಮೂಲಕ ಹೆಸರನ್ನು ಸಂಪಾದಿಸಲು ಬಯಸುತ್ತೇವೋ? ಬಹುಶ: ಅವರು ಉತ್ತಮರಿರಬಹುದು. ಅದಕ್ಕಾಗಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ. ಆದರೆ ಇತರ ಜನರು, ಅದನ್ನು ಗಮನಿಸಿ ನಮಗೆ ಸ್ವಲ್ಪ ಗೌರವವನ್ನು ಕೊಡಬೇಕೆಂದು ಬಯಸುತ್ತೇವೋ? ನಾವು ನಮ್ಮ ಮಕ್ಕಳನ್ನು, ನಮ್ಮ ಸ್ವಂತ ಗೌರವಕ್ಕಾಗಿ ಬೆಳೆಸುತ್ತೆವೆಯೋ ಅಥವಾ ದೇವರ ಮಹಿಮೆಗಾಗಿ ಬೆಳೆಸುತ್ತೇವೋ? ನಮ್ಮ ಮಕ್ಕಳು ನಿಜವಾಗಿಯೂ ಪರಿಪೂರ್ಣ ಕ್ರೈಸ್ತರಾಗುವಂತೆ ನಾವು ಅವರನ್ನು ಬೆಳೆಸಬೇಕು. ಅದನ್ನು ದೇವರು ಮಾತ್ರ ಕಂಡರೆ ಸಾಕಾಗುವುದಿಲ್ಲವೋ? ಇತರ ಯಾವುದೇ ವ್ಯಕ್ತಿಯ ಮೆಚ್ಚುಗೆ ನಮಗೆ ಯಾಕೆ ಬೇಕು? ನಮ್ಮ ಮಕ್ಕಳು ಪ್ರಾಪಂಚಿಕರಾದವರೆಂದು ಇತರರು ಅಂದುಕೊಂಡರೆ ಅದರಿಂದ ನಮಗೇನಾಗುವುದು? ಅಂತಿಮವಾಗಿ ನಾವು ದೇವರಿಗೆ ಮಾತ್ರ ಉತ್ತರಿಸಬೇಕು. ನಮ್ಮ ಮತ್ತು ನಮ್ಮ ಸಭೆಯ ಬಗ್ಗೆ ನಮಗೆ ಸಾಧಾರಣವಾದ ಭಾವನೆ ಇರುವುದು ಒಳ್ಳೆಯದು.

ನಮ್ಮ ಕೆಲಸದ ಫಲಿತಾಂಶವನ್ನು ಇತರರಿಗೆ ತೋರಿಸಬೇಕೆಂಬ ದುರಾಸೆಯು ನಮ್ಮಲ್ಲಿದೆ. ನಾವು ಆ ಆಸೆಯನ್ನು ಸಾಯಿಸದಿದ್ದರೆ, ಸೈತಾನನು ನಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ. ಒಬ್ಬ ಹಿರಿಯನ ಹೃದಯದಲ್ಲಿ ಸ್ವ-ಪ್ರಸಿದ್ಧಿಯ ಮೋಹವಿದ್ದರೆ, ಸೈತಾನನು ಅವನನ್ನು ದುರುಪಯೋಗಪಡಿಸಿ, ಮೋಸಗೊಳಿಸುತ್ತಾನೆ. ಅವನು ಶಿಷ್ಯತ್ವದ ಬಗ್ಗೆ, ಪಾವಿತ್ರ್ಯತೆಯ ಬಗ್ಗೆ, ಮತ್ತು ಕ್ರಿಸ್ತನ ದೇಹದ ಬಗ್ಗೆ ಬೋಧಿಸುತ್ತಿದ್ದಾಗ್ಯೂ ಅಂಥಹ ಹಿರಿಯನು ಬಾಬೆಲಿನಂತಹ ಸಭೆಯನ್ನು ಕಟ್ಟುತ್ತಾನೆ !

ನಾವು ನಮ್ಮ ಪ್ರಸಿದ್ಧಿಯನ್ನೇ ಬಯಸುವುದಾದರೆ, ಕ್ರಿಸ್ತನ ಸಭೆಯನ್ನು ಕಟ್ಟುವುದು ಅಸಾಧ್ಯ. ಜನರ ಮಧ್ಯದಲ್ಲಿ ಹೆಸರಿಗೆ ಅಥವಾ ಪ್ರಸಿದ್ಧಿಗೆ ಇಚ್ಚೆಯಿಲ್ಲದವನು ಮಾತ್ರ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಬಹುದು. ನೀನು ಸೂಜಿಕಣ್ಣಿನ ಕಿರುದಾರಿಯನ್ನು ಇನ್ನೂ ಅಗಲ ಮಾಡಲು ಬಯಸದೆ, ಬಹಳ ವರ್ಷಗಳ ಸೇವೆಯ ನಂತರ ನಿನ್ನ ಸಭೆಯಲ್ಲಿ ಕೇವಲ 3 ಪೂರ್ಣ ಹೃದಯದ ಶಿಷ್ಯರಿದ್ದರೆ, ನೀನು ಅದರ ಬಗ್ಗೆ ನಾಚಿಕೆಪಡಬೇಕಾಗಿಲ್ಲ. ಒಂದು ದಿನ ದೇವರು ಹೇಳುವನು, "ನಂಬಿಗಸ್ಥ ಸೇವಕನೇ, ನೀನು ಒಳ್ಳೇದನ್ನೇ ಮಾಡಿದ್ದೀ" ಎಂದು.

ಒಂದು ಪಟ್ಟಣದಲ್ಲಿ 3000 ಸಾವಿರ ಇಜ್ಜೋಡಾದ ಜನರಿಂದ ಕರ್ತನ ಹೆಸರು ದೂಷಿಸಲ್ಪಡುವದಕ್ಕಿಂತ, ಶುದ್ದ ಸಾಕ್ಷಿಯಿರುವ 3 ಶಿಷ್ಯರಿರುವುದು ಎಷ್ಟೋ ಉತ್ತಮ. ಸಂಖ್ಯೆಯು ಕಡಿಮೆಯಿರುವಾಗ ನಾವು ನಮ್ಮ ಸಂಖ್ಯೆಗಳಿಂದ ಇತರರನ್ನು ಮೆಚ್ಚಿಸಲು ನಾವು ನಮ್ಮ ಮಾಪನಗಳನ್ನು ಕೆಳಮಟ್ಟಕ್ಕೆ ತರುವ ಬಲವಾದ ಶೋಧನೆಯನ್ನು ಅನುಭವಿಸಬಹುದು. ನಾವು ಈ ಮೋಹವನ್ನು ಜಯಿಸದಿದ್ದರೆ, ಸಾರ್ದಿಸಿನ ಹಿರಿಯನಂತೆ ನಾವು ಕೊನೆಗಾಣುತ್ತೇವೆ.

ಈ ಮಾತುಗಳಲ್ಲಿ ತಪ್ಪಾಗಿ ಸಾಂತ್ವನ ಪಡೆಯಬಹುದಾದ ನಾಯಕರಿಗೆ ಇಲ್ಲೊಂದು ಎಚ್ಚರಿಕೆಯ ಮಾತನ್ನು ನಾನು ಸೇರಿಸಲಿಚ್ಚಿಸುತ್ತೇನೆ. ನಿನ್ನ ಸಭೆಯ ಸಂಖ್ಯೆಯು ಬೆಳೆಯದಿರುವುದಕ್ಕೆ ಕಾರಣವು, ಬಹುಶಃ ದೇವರೇ ಅದನ್ನು ದಾಹವಿರುವ ಜನರಿಗೆ ಶಿಫಾರಸು ಮಾಡದೇ ಇರಬಹುದು.

ಸಭೆಗೆ ಜನರನ್ನು ಸೇರಿಸುವವನು ಕರ್ತನೇ(ಅ.ಕೃ2:47). ಸಭೆಯ ಪ್ರಾರಂಭದ ದಿನಗಳಲ್ಲಿ, ದೇವರು ಅಧಿಕ ಸಂಖ್ಯೆಯಲ್ಲಿ ಜನರನ್ನು ಸಭೆಗೆ ಸೇರಿಸಿದನು (ಅ.ಕೃ. 6:7).

ನೀನು ಈ ರೀತಿಯಾಗಿ ಪ್ರಾರ್ಥಿಸುವುದು ಒಳ್ಳೆಯದು: "ಕರ್ತನೇ, ಅನೇಕ ಇಜ್ಜೋಡಾದ ಕ್ರೈಸ್ತರಿಂದ ನಮ್ಮ ಸಭೆಯ ಸಂಖ್ಯೆಯನ್ನು ಹೆಚ್ಚಿಸೆಂದು ನಾವು ಕೇಳಿಕೊಳ್ಳುತ್ತಿಲ್ಲ. ಆದರೆ ನಾವು ಪ್ರಾರ್ಥಿಸುದೇನೆಂದರೆ, ಈ ಪಟ್ಟಣದಲ್ಲಿ ದೈವಿಕ ಜೀವನವನ್ನು ಜೀವಿಸಲು ಇಚ್ಚಿಸುವವರಿಗಾಗಿ ನಾವು ಪ್ರಾರ್ಥಿಸುತ್ತೇವೆ. ದಯವಿಟ್ಟು ಈ ಮೂರು ವಿಷಯಗಳಲ್ಲಿ ಯಾವುದಾದರೊಂದನ್ನು ಮಾಡು. 1) ನಾವು ಅವರಿಗೆ ನೆರವಾಗುವಂತೆ ಅವರನ್ನು ನಮ್ಮ ಬಳಿ ನಡೆಸು ಅಥವಾ 2) ನಮ್ಮನ್ನು ಅವರ ಬಳಿ ನಡೆಸು ಅಥವಾ 3) ನೀನು ಅವರಿಗೆ ನಮ್ಮನ್ನು ಯಾಕಾಗಿ ಶಿಫಾರಸು ಮಾಡಲಾರೆ ಎಂಬುದನ್ನು ನಮಗೆ ತೋರಿಸಿಕೊಡು."

ಆಗ ಕರ್ತನು ಹೀಗೆ ಹೇಳಬಹುದು; ನಿನ್ನ ಸಭೆಯನ್ನು ಇತರರಿಗೆ ಶಿಫಾರಸು ಮಾಡುವುದಿಲ್ಲ, ಏಕೆಂದರೆ, ಅದು ಅತಿಯಾಗಿ ಕಾನೂನುಗಳಿಂದಲೂ, ಹಾಗೂ ಫರಿಸಾಯತನದಿಂದ ಕೂಡಿರುವುದಾಗಿದೆ’ ಎಂದು!! ಮತ್ತೂ ನಿನಗೆ ಹೇಳಬಹುದೇನೆಂದರೆ, ಆ ಸಭೆ ಆ ರೀತಿ ಇರುವುದಕ್ಕೆ ಕಾರಣವೇನೆಂದರೆ, ಹಿರಿಯನಾಗಿ ನೀನೇ ಆ ರೀತಿ ಇದ್ದೀಯೇ’ ಎಂದು! ಆಗ ನೀನು ಮಾಡಬೇಕಾದ ಒಂದೇ ಕೆಲಸವೆಂದರೆ, ಮಾನಸಾಂತರ ಪಡುವುದು ಮತ್ತು ಶೋಕಿಸುವುದು.