ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

ಅನೇಕ ವಿಶ್ವಾಸಿಗಳು ಪವಿತ್ರಾತ್ಮರಿಂದ ದೀಕ್ಷಾಸ್ನಾನ ಯಾಕೆ ಹೊಂದಿಲ್ಲ ಎಂಬುದಕ್ಕೆ ಐದು ಮುಖ್ಯ ಕಾರಣಗಳಿವೆ.

 

(1). ಅವರು ಹೊಸದಾಗಿ ಹುಟ್ಟಿದಾಗ, ಅವರು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಹೊಂದಿದ್ದರೆಂದು ಯಾವುದೋ ದೈವಶಾಶ್ತ್ರೀಯವಾದದಿಂದ ವೈಚಾರಿಕವಾಗಿ ಖಚಿತಗೊಂಡಿದ್ದಾರೆ. ಅವರು ಸೋತುಹೋಗಿದ್ದರೂ, ಬಲವಿಲ್ಲದವರಾಗಿದ್ದರೂ,  ಖಾಲಿ ಮತ್ತು ಫಲರಹಿತರಾಗಿದ್ದರೂ, ಅವರು ಈ ದೈವಶಾಶ್ತ್ರೀಯ ಮೋಸದ ನಂಬಿಕೆಯಲ್ಲಿ ಮುಂದುವರಿಯುತ್ತಾರೆ.

 

(2). ಅವರು ಪವಿತ್ರಾತ್ಮನ ದೀಕ್ಷಾಸ್ನಾನ ಪಡೆಯಲು ಅರ್ಹರಲ್ಲ ಎಂಬುದಾಗಿ ಅವರು ಭಾವಿಸುತ್ತಾರೆ. ವಾಸ್ತವವೇನೆಂದರೆ,  ವವಿತ್ರಾತ್ಮನನ್ನು ಪಡೆಯಲು ಎಷ್ಟು ಅನರ್ಹ ಎಂದು ನೀನು ಭಾವಿಸುತ್ತೀಯೋ ಮತ್ತು ಎಷ್ಟು ದೊಡ್ಡ ಪಾಪಿಯೆಂದು ನೀನು ನಿನ್ನನ್ನು ಪರಿಗಣಿಸುತ್ತೀಯೋ, ಪವಿತ್ರಾತ್ಮನನ್ನು ಪಡೆಯಲು ನೀನು ಅಷ್ಟೇ ಯೋಗ್ಯನಾದವನು - ಯಾಕೆಂದರೆ, ತನ್ನ ವರಗಳನ್ನು ಪಡೆಯಲು ಯಾರು  ತಮ್ಮನ್ನೇ ಅತೀ ಅಯೋಗ್ಯರೆಂದು ತಿಳಿದುಕೊಳ್ಳುತ್ತಾರೋ ಅಂಥವರಿಗೆ ದೇವರು ಅವನ್ನು ಕೊಡುತ್ತಾರೆ. ನೀನು ನಿನ್ನ ಪಾಪಗಳಿಗೆ ಮಾನಸಾಂತರ ಹೊಂದಿದ್ದಲ್ಲಿ, ನೀನು ಎಷ್ಟು ಅಯೋಗ್ಯ ಅಥವಾ ಅನರ್ಹ ಅಥವಾ ಪ್ರಯೋಜನವಿಲ್ಲದವನು ಎಂದು ತಿಳಿದಿದ್ದರೂ  ಪರವಾಗಿಲ್ಲ. ಆಲ್ಲೆಲೂಯ! 

 

(3) ತನ್ನನ್ನು ಕೇಳುವವರಿಗೆಲ್ಲ ದೇವರು ತನ್ನ ವರಗಳನ್ನು ಪುಕ್ಕಟೆಯಾಗಿ ಕೊಡುವ ಒಳ್ಳೆಯ ದೇವರೆಂದು ಅವರು ನಂಬುವುದಿಲ್ಲ. ಅದನ್ನು ಪಡೆಯುವ ಮುನ್ನ, ಅವರು ಉಪವಾಸ ಮತ್ತು ಪ್ರಾರ್ಥನೆಯಂಥಹ ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ ಬೆಲೆಯನ್ನು ಕೊಡಬೇಕು ಎಂದು ಅವರು  ಭಾವಿಸುತ್ತಾರೆ. ಆದರೆ ದೇವರ ವರಗಳು ಪುಕ್ಕಟೆಯಾಗಿ ಕೊಡಲಾಗುತ್ತವೆ - ಪಾಪಕ್ಷಮಾಪಣೆಯಾಗಲಿ, ಆತ್ಮದ ದೀಕ್ಷಾಸ್ನಾನವಾಗಲಿ. ದೇವರ ಯಾವುದೇ ವರಗಳನ್ನು ಕೊಂಡುಕೊಳ್ಳಲಾಗುವುದಿಲ್ಲ. ವಿಶ್ವಾಸ ಇರಿಸಿಕೊಳ್ಳುವುದೇ ಕಷ್ಟ ಎಂದು ಅನೇಕ ವಿಶ್ವಾಸಿಗಳು ಭಾವಿಸುತ್ತಾರೆ. ಆದರೆ, ಯೇಸುವು ವಿಶ್ವಾಸವನ್ನು ಕುಡಿಯುವುದಕ್ಕೆ ಹೋಲಿಸಿದನು (ಯೋಹಾ 7:37,38, "...ಕುಡಿ...ವಿಶ್ವಾಸಿಸು"). ಪವಿತ್ರಾತ್ಮನನ್ನು ಪಡೆಯುವುದು ಕುಡಿಯುವಷ್ಟು ಸುಲಭ. ಕೂಸಗಳಿಗೂ ಕುಡಿಯಲು ಗೊತ್ತು - ಹೊಸದಾಗಿ ಹುಟ್ಟಿದವರು ಪವಿತ್ರಾತ್ಮನಿಂದ ದೀಕ್ಷಾಸ್ನಾನ ಪಡೆಯಬಹುದು. ನಾವು ಅಪೋಸ್ತಲರ ಕೃತ್ಯಗಳಲ್ಲಿ ಓದುವಂತೆ - ಮೊದಲಿನ ದಿನಗಳಲ್ಲಿ ಅದು ಹಾಗಿತ್ತು.

 

(4) ಅವರಿಗೆ ದಾಹವಿಲ್ಲ. ಆವರು (ಪವಿತ್ರಾತ್ಮನನ್ನು ಪಡೆಯಲು) ಸಾಕಷ್ಟು ತವಕಿಸುವುದಿಲ್ಲ. ತನಗೆ ಬೇಕಾದ್ದನ್ನು ಪಡೆಯುವ ತನಕ ತನ್ನ ನೆರೆಯವನ ಬಾಗಿಲನ್ನು ತಟ್ಟುತ್ತಾ ಇದ್ದವನ ಸಾಮ್ಯವನ್ನು ಯೇಸು ಹೇಳಿದರು. ನಮ್ಮ ಸ್ವರ್ಗೀಯ ತಂದೆಯೂ ಆ ವ್ಯಕ್ತಿಯಂತೆ ಕಂಡುಕೊಂಡು, ತಟ್ಟಿ, ಕೇಳುವವನಿಗೆ ಪವಿತ್ರಾತ್ಮನನ್ನು ಕೊಡುವನೆಂದು ಯೇಸು ಆಗ ಹೇಳಿದನು (ಮೊದಲಿನ ವಚನಗಳ ಸಂದರ್ಭದಲ್ಲಿ, 5 ನೇ ವಚನದಿಂದ ಮೊದಲ್ಗೊಂಡು, ಲೂಕ 11:13 ನ್ನು ಓದಿ).

 

(5) ಬೇರೆ ಯಾರೋಬ್ಬರು ಸಾಕ್ಷಿ ಹೇಳಿದಂಥಹ ಅನುಭವಕ್ಕೆ ಸರಿಯಾದ ಅನುಭವ ತಮಗಾಗಬೇಕೆಂದು ಅವರು ಅಂಥಹ ಅನುಭವಕ್ಕಾಗಿ ಕಾಯುತ್ತಾರೆ (ಭಾಷೆಗಳು, ರೋಮಾಂಚಕಾರಿ ಅನುಭವ ಇತ್ಯಾದಿ). ಅವರಿಗೆ ಆವ ಅತ್ಯುತ್ತಮವಾದ ವರ ಅಥವಾ ತೋರ್ಪಡಿಕೆ ಇರಬೇಕು(ಕೊಡಬೇಕು) ಎಂಬುದನ್ನು ನಿರ್ಧರಿಸಲು ದೇವರಿಗೆ ಬಿಡಲು ಅವರಿಗೆ ಮನಸ್ಸಿಲ್ಲ. ಪವಿತ್ರಾತ್ಮನನ್ನು ಸರಳವಾದ ವಿಶ್ವಾಸದಿಂದ ಸ್ವೀಕರಿಸುವುದಾಗಿದೆ. ಕೇಳು ಮತ್ತು ನೀನು ಪಡೆಯುವೆ. (ಗಲಾತ್ಯ 3:2; ಲೂಕ 11:9-13). ಭಾವನೆಗಳಿಗೆ ಕಾಯಬೇಡ. ಆದರೆ ನಿನಗೊಂದು ಭರವಸೆಯನ್ನು ಕೊಡಲು ದೇವರನ್ನು ಕೇಳು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಮತ್ತು ನೀನು ಆತನ ಮಗುವೆಂದು ಅವನು ನಿನಗೆ ಭರವಸೆ ಕೊಟ್ಟಿಲ್ಲವೇ? ಅದೇ ಪ್ರಕಾರ, ಅವನು ನಿನ್ನನ್ನು ಪವಿತ್ರಾತ್ಮನಿಂದ ತುಂಬಿದ್ದೇನೆಂದು ಅವನು ನಿನಗೆ ಭರವಸೆಯನ್ನು ಕೊಡಬಲ್ಲನು. ನಿನಗೆ ಬೇಕಾಗಿರುವುದು ಅನುಭವವಲ್ಲ, ಬಲ (ಅ. ಕೃ. 1:8).

   

ಆದ್ದರಿಂದ: ಬಾಯಾರಿಕೆಯುಳ್ಳವನಾಗು-ನಂಬು-ಹಾಗೂ ಸ್ವೀಕರಿಸು. ಈಗ ಸ್ವೀಕರಿಸಲ್ಪಟ್ಟ ಸಮಯ, ಈ ದಿನ ರಕ್ಷಣೆಯ ದಿನ.

 

"ಯೆಹೋವನ ಆತ್ಮವು ನಿನ್ನ ಮೇಲೂ ಬರುವುದರಿಂದ, ನೀನೂ ಮಾರ್ಪಟ್ಟು ಪ್ರವಾದಿಸುವಿ" (1 ಸಮು 10:6).