ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   Struggling
WFTW Body: 

ನ್ಯಾಯಸ್ಥಾಪಕರ ಪುಸ್ತಕದಲ್ಲಿ, ಅಧ್ಯಾಯ 3-16 ರಲ್ಲಿ,  ದೇವರು ಎಬ್ಬಿಸಿದ (ಕಳುಹಿಸಿದ) 13 ನ್ಯಾಯಸ್ಥಾಪಕರ ಬಗ್ಗೆ ನಾವು ಓದುತ್ತೇವೆ. ಹದಿನಾಲ್ಕನೆಯ ನ್ಯಾಯಸ್ಥಾಪಕನಾಗಿದ್ದ ಸಮುವೇಲನ ಬಗ್ಗೆ ನಾವು 1 ಸಮುವೇಲದಲ್ಲಿ ಓದುತ್ತೇವೆ. ಈ ಬಹುತೇಕ ನ್ಯಾಯಸ್ಥಾಪಕರ ಹೆಸರುಗಳು ಅಷ್ಟೊಂದು ಪ್ರಸಿದ್ಧಿಯಾಗಿಲ್ಲ. ಮೊದಲನೆಅ ನ್ಯಾಯಸ್ಥಾಪಕನಾದ ಒತ್ನೀಯೇಲನು ಕಾಲೇಬನ ಸೋದರಳಿಯ ಹಾಗೂ ಅಳಿಯನಾಗಿದ್ದನು (ನ್ಯಾಯ 3:9). ಇಲ್ಲಿ ಹೀಗೆ ಹೇಳಲಾಗಿದೆ: "ಯೆಹೋವನ ಆತ್ಮನು ಅವನ ಮೇಲೆ ಬಂದುದರಿಂದ ಅವನು ಇಸ್ರಾಯೇಲ್ಯರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು" (ನ್ಯಾಯ.3:10). ನ್ಯಾಯಸ್ಥಾಪಕರ ಪುಸ್ತಕದಲ್ಲಿ ಇದು ಪದೇ ಪದೇ ನಡೆಯಿತು. ದೇವರ ಜನರನ್ನು ಮುನ್ನಡೆಸಲು ದೇವರ ಆತ್ಮನು ಗಿದ್ಯೋನ್ ಮತ್ತು ಸಮ್ಸೊನರ ಮೇಲೆ ಇಳಿದನು (ನ್ಯಾಯ 6: 34; 14:6).  ದೇವರ ಆತ್ಮನ ಅಭಿಷೇಕ ಮಾತ್ರ ಇಸ್ರಾಯೇಲ್ಯನ್ನು ಆಳಲು ಅವರನ್ನು ಬಲಪಡಿಸಿದನು.  ಆ ಅಭಿಷೇಕವೇ ಇಂದೂ ದೇವರ ಜನರನ್ನು ಮುನ್ನಡೆಸಲು ನಮಗೆ ನೆರವಾಗುವುದು.

 

ನಾವು ಹೊಸದಾಗಿ ಹುಟ್ಟಿರಬಹುದು ಮತ್ತು ಇದು ನಿಶ್ಚಯವಾಗಿಯೂ ಪವಿತ್ರ ಆತ್ಮನ ಕೆಲಸವಾಗಿದೆ. ಆದರೆ, ದೇವರ ಆತ್ಮನು ನಮ್ಮ ಮೇಲೆ ಬಂದು, ನಮ್ಮನ್ನು ಕರ್ತನ ಸೇವೆ ಮಾಡಲು ಬಲಪಡಿಸುವುದನ್ನು ನಾವು ತಿಳಿಯಲೇಬೇಕು. ಯಾವುದೇ ಒಂದು ಸಭೆಯಲ್ಲಿ ನಿಮಗಾದ ಭಾವನಾತ್ಮಕ ಅನುಭವದ ಬಗ್ಗೆ ಸಂತೃಪ್ತರಾಗದಿರಿ. ಅನ್ಯ ಭಾಷಾ-ವರದ ಬಗ್ಗೆಯೂ ಸಂತೃಪ್ತರಾಗದಿರಿ. ನೀವು ಭಾಷೆಗಳಲ್ಲಿ ಮಾತನಾಡುವವರಾಗಿದ್ದೂ ಕೂಡ ದೇವರಾತ್ಮನಿಂದ ತುಂಬಿಲ್ಲದವರಾಗದಿರಲು ಸಾಧ್ಯ. ದೇವರಾತ್ಮನ ಬಲವಿಲ್ಲದೆ ಎಂದಿಗೂ ಸಂತೃಪ್ತರಾಗದಿರಿ. ದೇವರಾತ್ಮವಿಲ್ಲದೆ ನೀವು ಎಂದೆಂದಿಗೂ ದೇವರ ಕೆಲಸವನ್ನು ಮಾಡಲಾಗುವುದಿಲ್ಲ. ಆತ್ಮದಿಂದ ಹುಟ್ಟಿದವನಾಗಿದ್ದು, ಮೂವತ್ತು ವರ್ಷಗಳ ಕಾಲ ದೇವರಿಗೆ ಸಂಪೂರ್ಣವಾಗಿ ವಿಧೇಯನಾಗಿ ಬಾಳಿದ ಯೇಸುವು ಕೂಡ, ತನ್ನ ತಂದೆಯ ಸೇವೆ ಮಾಡಲು ಹೋಗುವ ಮುನ್ನ, ದೇವರಾತ್ಮನಿಂದ ಅಭಿಷೇಕಿಸಲ್ಪಡಬೇಕಿತ್ತು. ಅವನು ಜೊರ್ದಾನ್ ನದಿಯಲ್ಲಿ ಪ್ರಾರ್ಥಿಸುತ್ತಿರುವಾಗ, ದೇವರಾತ್ಮನು ಅವನ ಮೇಲೆ ಇಳಿದು ಬಂದನು. ಅವನ ಉಧಾಹರಣೆಯನ್ನು ಅನುಸರಿಸಿರಿ. ಯಾವುದೇ ರೀತಿಯ ಜ್ಞಾನ ಅಥವಾ ಸ್ವಾಭಾವಿಕವಾದ ಪ್ರತಿಭೆಗಳು ಅಥವಾ ಕೌಶಲ್ಯಗಳು ದೇವರ ಆತ್ಮಕ್ಕೆ ಬದಲಿಯಾಗಿಲ್ಲ. ಹಾಗೂ ನಾವು ಈ ಅಭಿಷೇಕದಲ್ಲಿ ನಿರಂತರವಾಗಿ ಜೀವಿಸಬೇಕಿದೆ. ಸಮ್ಸೊನನ ಉಧಾಹರಣೆಯು ನಾವು ಹೇಗೆ ಒಮ್ಮೆ ಅಭಿಷೇಕಿಸಲ್ಪಟ್ಟು ನಂತರ ಹೇಗೆ ಅದನ್ನು ಕಳೆದುಕೊಳ್ಳಬಹುದೆಂಬುದರ ದುರಂತಮಯ ಅನುಭೋಧಕವಾಗಿದೆ(ಕಳೆದುಕೊಳ್ಳಬಹುದೆಂಬುದನ್ನು ದುರಂತಮಯವಾಗಿ ನೆನಪಿಸುವಂಥದ್ದಾಗಿದೆ).

 

ಒತ್ನೀಯೆಲ್ ಆಳಿದ ಎಲ್ಲ 40 ವರ್ಷಗಳಲ್ಲಿ, ಇಸ್ರಾಯೇಲಿನಲ್ಲಿ ಶಾಂತಿಯಿತ್ತು (ನ್ಯಾಯ 3:11). ಆದರೆ ಒತ್ನಿಯೇಲನು ಸತ್ತನು. ಮತ್ತೆ ಇಸ್ರಾಯೇಲಿನ ಜನರು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ಅವರು ಕೆಟ್ಟದ್ದನ್ನು ಮಾಡಿದಾಗ, ಮೋವಾಬ್ಯದ ಅರಸನು ಅವರನ್ನು 18  ವರ್ಷಗಳ  ಕಾಲ ದಾಸ್ಯತ್ವಕ್ಕೆ ಒಳಪಡಿಸುವಂತೆ ಕರ್ತನು ಮಾಡಿದನು (ನ್ಯಾಯ 3:14).

 

ನ್ಯಾಯಸ್ಥಾಪಕರ ಪುಸ್ತಕದಲ್ಲಿ ಇಂಥಹ ಚಕ್ರಗಳನ್ನು (cycles) ನಾವು ನೋಡುತ್ತೇವೆ. ನ್ಯಾಯಸ್ಥಾಪಕರ ಪುಸ್ತಕದಲ್ಲಿ ಇಂಥಹ ಏಳು ಚಕ್ರಗಳನ್ನು ನಾವು ನೋಡುತ್ತೇವೆ. ಹಿಂಜಾರುವಿಕೆ, ನಂತರ ಶಿಕ್ಷೆ, ನಂತರ ಅವರನ್ನು ರಕ್ಷಿಸಲು ದೇವರು ನ್ಯಾಯಸ್ಥಾಪಕನನ್ನು ಎಬ್ಬಿಸುವುದು. ಅನೇಕ ವಿಶ್ವಾಸಿಗಳು ತಮ್ಮ ಜೀವನವಿಡೀ ಇಂಥಹ ಚಕ್ರದಲ್ಲಿ ಜೀವಿಸುತ್ತಾರೆ. ಹಿಂಜಾರುವಿಕೆ, ಪ್ರಾಯಶ್ಚಿತ್ತ, ರಕ್ಷಣೆ, ಹಿಂಜಾರುವಿಕೆ ಇತ್ಯಾದಿ.  ಅವರು ಕೊನೆಯಿಲ್ಲದ ಚಕ್ರದಲ್ಲೇ ಸುತ್ತುತ್ತಾ ಇರುತ್ತಾರೆ. ಅವರು ಕೂಟಕ್ಕೆ ಹೋಗಿ ಪ್ರೇರೇಪಣೆಗೊಳ್ಳುತ್ತಾರೆ ಹಾಗೂ ತಮ್ಮನ್ನೇ ಸಮರ್ಪಿಸಿಕೊಡುತ್ತಾರೆ. ಉಜ್ಜೀವನ ಕೂಟದ ನಂತರ ಅವರ ಹಿಂಜಾರುವಿಕೆ ಮತ್ತೆ ಆರಂಭವಾಗುತ್ತದೆ. ಮತ್ತೊಂದು ದಿನ ಇನ್ನೊಬ್ಬ ಅಭಿಷೇಕಿಸಲ್ಪಟ್ಟ ಬೋಧಕನು ಬಂದು ಕೂಟಗಳನ್ನು ನಡೆಸುವಾಗ ಅವರು ಮತ್ತೆ ಪ್ರೇರೇಪಿಸಲ್ಪಡುತ್ತಾರೆ.

   

ನಾವು ಈ ರೀತಿ ಕೊನೆಯಿಲ್ಲದ ಚಕ್ರದಲ್ಲಿ ಜೀವಿಸಬೇಕೆಂದು ಕರ್ತನ ಇಚ್ಚೆಯೇ? ಖಂಡಿತವಾಗಿಯೂ ಅಲ್ಲ! ಇಂದು ಪವಿತ್ರ ಆತ್ಮನು ನಮ್ಮೊಡನೆ ಯಾವಾಗಲೂ ಇರಬಹುದು. ಆ ದಿನಗಳಲ್ಲಿ ಪವಿತ್ರಾತ್ಮನು ಕೇವಲ ಒಬ್ಬ ನಾಯಕನ ಮೇಲೆ ಇಳಿದು ಬರುತ್ತಿದ್ದನು ಹಾಗೂ ಇತರರು ಅವನ ಮೇಲೆ ಹೊಂದಿಕೊಂಡಿರಬೇಕಿತ್ತು. ಆದರೆ ಇಂದು ನಾವೆಲ್ಲರು ಪವಿತ್ರಾತ್ಮವನ್ನು ಪಡೆಯಬಹುದು ಹಾಗೂ ನಾವು ಯಾವುದೇ ವ್ಯಕ್ತಿಯ ಮೇಲೆ ಹೊಂದಿಕೊಂಡಿರಬೇಕಿಲ್ಲ. ಇಂದು ದೇವರ ಬೆಂಕಿಯು ನಮ್ಮ ಹೃದಯಗಳಲ್ಲಿ ಎಲ್ಲಾ ಸಮಯದಲ್ಲೂ ಉರಿಯುತ್ತಿರಬಹುದು.

   

18  ವರ್ಷಗಳ ಕಾಲ ಮೋವಾಬ್ಯನಿಗೆ ಸೇವೆ ಸಲ್ಲಿಸಿದ ಮೇಲೆ ಇಸ್ರಾಯೇಲ್ಯರು ಕರ್ತನಿಗೆ ಮೊರೆಯಿಟ್ಟರು. (ನ್ಯಾಯ 3:15).   ಮತ್ತು ಎಹುದನನ್ನು ಅವರ ರಕ್ಷಕನಾಗಿ ದೇವರು ಎಬ್ಬಿಸಿದರು. ಅವನು ಎರಡನೆಯ ನ್ಯಾಯಸ್ಥಾಪಕನಾಗಿದ್ದನು. ಅವರು ತಮ್ಮನು ಗುಲಾಮಗಿರಿಯಿಂದ ರಕ್ಷಣೆಗಾಗಿ ಕರ್ತನಿಗೆ ಮೊರೆಯಿಡುವ ಮೊದಲು 18  ವರ್ಷಗಳ ಕಾಲ ಯಾಕೆ ಕಾದರು  ಎಂಬುದಾಗಿ ನಾನು ಯೋಚಿಸಿದ್ದೇನೆ. ಗುಲಾಮಗಿರಿಗೆ ಒಳಗಾದ ಒಂದು ತಿಂಗಳಲ್ಲೇ ಯಾಕೆ ಅವರು ಕರ್ತನಿಗೆ ಮೊರೆಯಿಡಲಿಲ್ಲ? ಇಂದು ಒಬ್ಬ ವ್ಯಕ್ತಿಯು 18 ವರ್ಷಗಳ ಕಾಲ (ಅಥವಾ ಕೆಲವು ಸಂದರ್ಭಗಳಲ್ಲಿ 40  ವರ್ಷಗಳ ಕಾಲ) ಪಾಪದ ಮೇಲೆ ಜಯ ಹೊಂದುವ ಮೊದಲು ಪಾಪದಿಂದ ಸೋತವನಾಗಿ ಯಾಕಿರಬೇಕು? ಆಕೆಂದು ನನಗೆ ಗೊತ್ತಿಲ್ಲ. ಆದರೆ ಇದು ನಮ್ಮ ಸುತ್ತ ಮುತ್ತ ನಡೆಯುತ್ತಾ ಇದೆ. ಎಹುದನು ಮೋವಾಬ್ಯನನ್ನು 80  ವರ್ಷಗಳ ಕಾಲ ನಿಗ್ರಹಿಸಿದನು ಹಾಗೂ 80 ವರ್ಷಗಳ ಕಾಲ ಇಸ್ರಾಯೇಲ್ ಯಾವುದೇ ತೊಂದರೆಯಿಲ್ಲದೆ ಇತ್ತು (ನ್ಯಾಯ 3:30).   ಆದರೆ ಪುನ: ಅವರು ಹಿಂಜಾರಿದರು. ಮತ್ತು ದೇವರು ಶಮ್ಗರ್ ನನ್ನು ಎಬ್ಬಿಸಿದರು. ಅವನು ಎತ್ತಿನ ಮುಳ್ಳುಗೋಲಿನಿಂದ 600 ಫಿಲಿಷ್ಟಿನಿಯರನ್ನು ಕೊಂದನು. ನಂತರ ಸಮ್ಸೊನ ಮಾಡುವಂತೆ, ನಿಶ್ಚಯವಾಗಿಯೂ ಆತ್ಮದ ಅಭಿಷೇಕದಿಂದಲೇ ಅವನು ಇದನ್ನು ಮಾಡಿದನು.

   

ಆಗ ಇಸ್ರಾಯೇಲ್ಯಿನ ಜನರು ಕರ್ತನ ದೃಷ್ಟಿಯಲ್ಲಿ ಮತ್ತೆ ಕೆಡುಕನ್ನು ಮಾಡಿದರು ಮತ್ತು ಕರ್ತನು ಅವರನ್ನು ಕಾನಾನ್ಯದ ಅರಸ ಜಾಬಿನ್ ಗೆ ಅವರನ್ನು ಮಾರಿದನು. ಇಸ್ರಾಯೇಲ್ಯರು  ಕಾನಾನ್ಯದವರನ್ನು ನಿರ್ನಾಮ ಮಾಡಬೇಕಿತ್ತು. ಆದರೆ, ಈಗ ಅವರು ಇಸ್ರಾಯೇಲನ್ನು ಆಳುತ್ತಿದ್ದಾರೆ! ವಿಶ್ವಾಸಿಗಳು ಪಾಪವನ್ನು ಆಳಬೇಕಾದವರು. ಆದರೆ  ಬಹುತೇಕ ಸನ್ನಿವೇಶಗಳಲ್ಲಿ ಪಾಪವು ಅವರನ್ನು ಆಳುತ್ತದೆ. ಜಾಬಿನನ ಹತ್ತಿರ 900 ರಥಗಳಿದ್ದವು ಮತ್ತು ಅವನು ಇಸ್ರಾಯೇಲನ್ನು 20 ವರ್ಷಗಳ ಕಾಲ ಪೀಡಿಸಿದನು. ಆಗ ಅವರು ಕರ್ತನಿಗೆ ಮೊರೆಯಿಟ್ಟರು ಮತ್ತು ಕರ್ತನು ದೆಬೊರಳನ್ನು ಅವರ ನ್ಯಾಯಸ್ಥಾಪಕನಾಗಿ ಎಬ್ಬಿಸಿದನು (ನ್ಯಾಯ 3:3,4).