ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಪೇತ್ರನು ತನ್ನ ಎರಡನೆಯ ಪತ್ರದಲ್ಲಿ (2 ಪೇತ್ರ 1:3,4) ನಮ್ಮನ್ನು ಹೀಗೆ ಎಚ್ಚರಿಸುತ್ತಾನೆ - ಯೇಸುವಿನ ದಿವ್ಯ ಶಕ್ತಿಯು ನಮಗೆ ಕೊಟ್ಟಂಥ ಜ್ಞಾನದಲ್ಲಿ, ಈ ಭೂಮಿಯ ಮೇಲೆ ಬಾಳಲು ನಮ್ಮ ಜೀವಕ್ಕೆ ಹಾಗೂ ಭಕ್ತಿಗೂ ಬೇಕಾದದನ್ನು ಕೊಟ್ಟಿದೆಯೆಂದು ತಿಳಿದಿದ್ದೇವೆ ಮತ್ತು 2 ಪೇತ್ರ 1:1 ರಲ್ಲಿ ಪೇತ್ರನು ಹೊಂದಿದ ನಂಬಿಕೆ ನಮ್ಮಲ್ಲಿ ಕೂಡಾ ಇದ್ದರೆ, ಪೇತ್ರನು ಹೊಂದಿದ್ದ ಕರ್ತನ ಕೃಪೆ ಮತ್ತು ಆತನ ಗುಣಸ್ವಭಾವದ ಪಾಲು ನಮಗೂ ಕೂಡ ದೊರೆಯುತ್ತದೆ, ಆಗ 2 ಪೇತ್ರ 1:5-11 ರಲ್ಲಿನ ಕರ್ತನ ಗುಣಲಕ್ಷಣಗಳಾದ - ಒಳ್ಳೆಯ ಗುಣ, ಜ್ಞಾನ, ದಮೆ(ಸ್ವನಿಯಂತ್ರಣ), ತಾಳ್ಮೆ, ಭಕ್ತಿ, ಸಹೋದರ ಸ್ನೇಹ ಮತ್ತು ಪ್ರೀತಿ. ಇವು ನಮ್ಮಲ್ಲಿದ್ದು ಹೆಚ್ಚುತ್ತಾ ಬರುತ್ತವೆ. ಮತ್ತು 2 ಪೇತ್ರ 1:8,9 ರಲ್ಲಿ ಹೇಳುವ ಪ್ರಕಾರ ಇದರಿಂದ ನಾವು ಆಲಸ್ಯಗಾರರೂ, ನಿಷ್ಪಲರೂ, ಕುರುಡುತನದಿಂದ ಮತ್ತು ದೂರದೃಷ್ಟಿಯಿಲ್ಲದಿರುವದರಿಂದ ನಮ್ಮನ್ನು ದೂರವಿಡುತ್ತದೆ. ಯೋಹಾನ 15:5 ರಲ್ಲಿ ಹೇಳುವ ಪ್ರಕಾರ ಯೇಸುವಿನಲ್ಲಿ ನೆಲೆಗೊಂಡಿರುವವನು ಹೆಚ್ಚು ಫಲಕೊಡುತ್ತಾನೆ. ಹಾಗು ಈ ಕ್ರಿಸ್ತನ ಗುಣಗಳು ನಮ್ಮಲ್ಲಿ ಹೆಚ್ಚೆಚ್ಚಾಗಿ ತೋರಿಸಲ್ಪಡದಿದ್ದರೆ, ನಾವು ಆತನಲ್ಲಿ ನೆಲೆಗೊಂಡಿಲ್ಲ ಮತ್ತು ನಾವು ಆತನ ನಿಜವಾದ ಕೃಪೆಯ ಅಡಿ(ಕೆಳಗೆ) ಜೀವನ ಮಾಡುತ್ತಿಲ್ಲ ಎಂದು ಅರ್ಥವಾಗುತ್ತದೆ.

ಯಾರು ತಮ್ಮನ್ನು ತಗ್ಗಿಸಿಕೊಂಡಿರುತ್ತಾರೆ, ಅವರಿಗೆ ಪಾಪದ ಮೇಲೆ ಜಯ ಸಾಧಿಸಲು ಕೃಪೆ ದೊರೆಯುತ್ತದೆ. ಮತ್ತು ಇನ್ನೊಬ್ಬರ(ಸಹೋದರರ) ಜೊತೆ ಒಂದಾಗಲೂ ಕೃಪೆದೊರೆಯುತ್ತದೆ. ಯಾವ ರೀತಿಯಾಗಿ ಗಂಡ-ಹೆಂಡತಿ ಇಬ್ಬರೂ ಸಹಬಾಧ್ಯಸ್ಥರಾಗಿ ಕೃಪೆಯನ್ನು ಅನುಭವಿಸುತ್ತಾರೋ ಅದೇ ರೀತಿಯಲ್ಲಿ ಕರ್ತನ ದೇಹದ ಅಂಗಗಳಾಗಿರುವ ಸಹೋದರರ ಜೊತೆಯಲ್ಲಿಯೂ ಸಹಬಾಧ್ಯಸ್ಥರಾಗಿ ಕೃಪೆಯನ್ನು ಅನುಭವಿಸಬಹುದು.

ಯೋಹಾನ 17:22 ರಲ್ಲಿ ಹೇಳಿದ ಹಾಗೆ ಭೂಮಿಯ ಮೇಲೆ ಯೇಸುವಿನ ಕಡೆಯ ರಾತ್ರಿಯ ಸಮಯದಲ್ಲಿ ಯೇಸು- ತಾನು ಮತ್ತು ತನ್ನ ತಂದೆಯು ಒಂದಾಗಿರುವ ಹಾಗೆ ನಾವೂ ಕೂಡ ಒಂದಾಗಿರಬೇಕೆಂದು ಪ್ರಾರ್ಥಿಸಿದನು. ಮತ್ತು ಯೋಹಾನ 17:21,23 ರಲ್ಲಿ ಹೇಳಿದಂತೆ ನಾವು ಈ ಐಕ್ಯತೆಯನ್ನು ಭೂಲೋಕದಲ್ಲಿರುವಾಗಲೇ ಅನುಭವಿಸಬೇಕೆಂದು ಪ್ರಾರ್ಥಿಸಿದನು. ಇದು ನಮ್ಮ ಆಲೋಚನೆಗಳ(ತಿಳುವಳಿಕೆಯ) ಐಕ್ಯತೆಯಲ್ಲ, ಆದರೆ ಇದು ಆತ್ಮದಲ್ಲಿ ಒಂದಾಗಿರುವಂಥದ್ದು. ಏಕೆಂದರೆ ಪಾಪಗುಣಲಕ್ಷಣದಿಂದ ಮತ್ತು ಪಾಪದಿಂದ ನಮ್ಮ ಜ್ಞಾನವು ಸೀಮಿತ ಗೊಂಡಿರುವದರಿಂದ ನಾವು ಎಲ್ಲಾ ವಿಷಯದಲ್ಲಿ ಕಣ್ಣು ನೋಡಿ ಮಾತನಾಡಲು ಸಾಧ್ಯವಾಗುವದಿಲ್ಲ. ಆದರೆ ಇದರಿಂದ ನಮ್ಮ ಆತ್ಮದಲ್ಲಿ ನಾವೆಲ್ಲರೂ ಒಂದಾಗಿರಲು ಅಡ್ಡಿಯಾಗುವಂತಿಲ್ಲ. ನಮ್ಮ ಹೃದಯದಲ್ಲಿ ನಾವು ಒಂದಾಗಿರಬಹುದು.

ಒಗ್ಗಟ್ಟಿನ ಕೊರತೆ ಉಂಟಾಗಲಿಕ್ಕೆ ಕಾರಣವೇನೆಂದರೆ, ನಾವು ನಮ್ಮ ಚಿತ್ತವನ್ನು ಮಾಡಲಿಕ್ಕೆ ಹೋಗುತ್ತೇವೆ ಬದಲಾಗಿ ನಮ್ಮ ಶಿರಸ್ಸಾಗಿರುವ ಕ್ರಿಸ್ತನದಲ್ಲ. ಇದು ನಾವು ತಿಳಿದಿರುವ ಸಿದ್ಧಾಂತದ ಬಗ್ಗೆ ಏನೂ ಸಂಬಂಧವಿಲ್ಲ, ನಮ್ಮ ಚಿತ್ತವನ್ನು ಬದಿಯಲ್ಲಿಟ್ಟು ತಂದೆಯ ಚಿತ್ತವನ್ನು ಮಾಡುವದೇ ಆಗಿದೆ.

ಯೇಸು ತನ್ನ ತಂದೆಯಿಂದ ಕೇಳುವಂಥದೆಲ್ಲಾ ವಿಷಯದಲ್ಲಿ ವಿಧೆಯನಾದನು. (ಯೋಹಾನ 4:34) ರಲ್ಲಿ ಹೇಳಿದ ಪ್ರಕಾರ ಆತನ ಆಹಾರ(ಊಟ) ಕೇವಲ ದೇವರ ಚಿತ್ತಕ್ಕೆ ವಿಧೇಯನಾಗುವಂಥದ್ದಾಗಿತ್ತು. ಯೇಸು ತಂದೆಯ ಜೊತೆ ಒಂದಾಗಿದ್ದನು. ದೇವರ ನಿಜವಾದ ಕೃಪೆಯಿಂದ ನಾವೂ ಕೂಡ ಈ ಒಂದಾಗಿರುವ ಸಹಭಾಗಿತ್ವದಲ್ಲಿ ಪಾಲು ಹೊಂದಲು ಕರೆದಿದ್ದೇವೆ.

ಯೇಸು ಯಾವಾಗಲೂ ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿದನು. ಕೆಟ್ಟತನವು ಅವನ ಮೇಲೆ ಯಾವುದೆ ದೊರೆತನ(ಒಡೆತನ) ಮಾಡಲಿಲ್ಲ. ಏಕೆಂದರೆ ಆತನು ಒಳ್ಳೆತನ ಮಾಡುವದರಲ್ಲಿ ಬಹಳವಾಗಿ ನೆಲೆಗೊಂಡಿದ್ದನು. ರೋಮ 12:21ರಲ್ಲಿ ಹೇಳುವ ಪ್ರಕಾರ ಕೆಟ್ಟತನವನ್ನು, ಒಳ್ಳೆತನದಿಂದ ಗೆಲ್ಲುವದಕ್ಕೆ ವಿಧೇಯರಾದರೆ ನಾವೂ ಕೂಡ ಇದನ್ನು ಅನುಭವಿಸುತ್ತೇವೆ. ಕೆಲವು ಸಾರಿ ಜನರು ನಮ್ಮನ್ನು ಅಪಮಾನಿಸಿದರೆ ಅಥವಾ ದ್ವೇಷಿಸಿದರೆ, ಅವರಿಗೆ ಒಳ್ಳೆಯದನ್ನೆ ಮಾಡುವದರಿಂದ ಈ ಕೆಟ್ಟತನವನ್ನು ಗೆಲ್ಲುತ್ತೇವೆ. ಇದು ಕೇವಲ ದೇವರ ನಿಜವಾದ ಕೃಪೆ ಹೊಂದಿದಾಗ ಮಾತ್ರ ಸಾಧ್ಯ. ಹಾಗಿದ್ದರೆ ನಾವೂ ಕೂಡ ಯೇಸುವು ಯೋಹಾನ 17:16 ರಲ್ಲಿ ಪ್ರಾರ್ಥನೆ ಮಾಡಿದ ಪ್ರಕಾರ ಲೋಕದ ಕೆಟ್ಟತನದಿಂದ(ಶೋಧನೆಯಿಂದ) ತಪ್ಪಿಸಲ್ಪಡುತ್ತೇವೆ. ಮತ್ತು ನಾವು ಈ ರೀತಿಯಾದ ಮಾರ್ಗದಲ್ಲಿ ನಡೆಯುತ್ತಿರುವ ಸಹೋದರರಲ್ಲಿ ಒಂದಾಗುತ್ತೇವೆ.

ಯೇಸು ಕಟ್ಟುತ್ತಿರುವ ಸಭೆಯು ದೇವರ ನಿಜವಾದ ಕೃಪೆಯನ್ನು ಹೊಂದಿರುವಂಥದ್ದು. ಮತ್ತು ಕ್ರಿಸ್ತನನ್ನು ತೆಲೆಯನ್ನಾಗಿ ಮಾಡಿಕೊಂಡು ಐಕ್ಯತೆಯಲ್ಲಿ ಬೆಳೆಯುವಂಥದ್ದಾಗಿರುತ್ತದೆ. ಮತ್ತು ಅಂತಹ ಕ್ರಿಸ್ತೀಯ ಸಭೆಯನ್ನು ಪಾತಾಳ ಲೋಕದ ಬಲವು ಸೋಲಿಸಲಾರದು (ಮತ್ತಾಯ 16:18).