ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ಯೇಸುವಿನ ಮಾತು ಪರಿಶುದ್ಧವಾಗಿತ್ತು. ಯಾವತ್ತೂ ಕೆಟ್ಟ ಅಥವಾ ನಿಷ್ಪ್ರಯೋಜಕ ಮಾತು ಅವನ ಬಾಯಿಂದ ಹೊರಹೊಮ್ಮಲಿಲ್ಲ. ಅವನು ಯಾವಾಗಲೂ ಸತ್ಯವನ್ನೇ ಮಾತನಾಡಿದನು. ಅವನ ಬಾಯಿಯಲ್ಲಿ ಮೋಸವಿರಲಿಲ್ಲ. (ಒಬ್ಬನ ಅಗತ್ಯಕ್ಕಿಂತ) ಹೆಚ್ಚು ಹಣ ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಯಾರೂ ಯೇಸುವಿನೊಡನೆ ಸಂಭಾಷಣೆ ನಡೆಸಲು ಸಾಧ್ಯವಿರಲಿಲ್ಲ.ಅವನಿಗೆ ಅಂಥಹ ವಿಷಯಗಳಲ್ಲಿ ಆಸಕ್ತಿಯೇ ಇರಲಿಲ್ಲ. ಅವನ ಮನಸ್ಸು ಮೇಲಿನ (ಪರಲೋಕದ) ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತೇ ಹೊರತು ಈ ಲೋಕದ ಮೇಲಿನ ವಸ್ತುಗಳ ಮೇಲೆ ಅಲ್ಲ. ಅವನು ಈ ಲೋಕದ ವಸ್ತುಗಳನ್ನು ಉಪಯೋಗಿಸಿದನು ನಿಜ ಆದರೆ ಎಂದೂ ಆತ ಅವುಗಳನ್ನು ಪ್ರೀತಿಸಲಿಲ್ಲ ಅಥವಾ ಅವುಗಳಿಗೆ ಅಂಟಿಕೊಂಡಿರಲಿಲ್ಲ.

ಯೇಸು ಎಂದೂ ಇತರರನ್ನು ಕೀಳಾಗಿ ಕಾಣಲಿಲ್ಲ ಅಥವಾ ಇತರರನ್ನು ನೋಯಿಸುವ ಮಾತನ್ನಾಗಲೀ, ಜೋಕುಗಳನ್ನಾಗಲೀ ಆಡಲಿಲ್ಲ. ಅವನು ಎಂದೂ ಇತರರಿಗೆ ಕಿಂಚಿತ್ತಾದರೂ ನೋವುಂಟು ಮಾಡುವ ಹೇಳಿಕೆಗಳನ್ನು ನೀಡಲಿಲ್ಲ. ತನ್ನ ಶಿಷ್ಯರ ಬೆನ್ನ ಹಿಂದೆ ಅವರ ತಪ್ಪುಗಳ ಬಗ್ಗೆ ಅವನು ಮಾತನಾಡಲಿಲ್ಲ. ಮೂರು ವರ್ಷಗಳ ಕಾಲ ತನ್ನ ಇತರ ಹನ್ನೊಂದು ಶಿಷ್ಯರ ಮುಂದೆ ಯೂದನನ್ನು ಯೇಸು ಬಹಿರಂಗಪಡಿಸಲಿಲ್ಲ ಎಂಬುದು ನಿಜವಾಗಿಯೂ ಆಶ್ಚರ್ಯಕರವಾದುದು - ಕಡೇ ಭೋಜನದ ವೇಳೆಯಲ್ಲಿ ಕೂಡಾ ಅವರ ಗುರುವನ್ನು ಹಿಡುಕೊಡುವವನು ಯಾರೆಂದು ಹನ್ನೊಂದು ಜನ ಶಿಷ್ಯರು ಊಹಿಸಲಾಗಲಿಲ್ಲ.

ಯೇಸುವು ತನ್ನ ನಾಲಿಗೆಯನ್ನು ಇತರರನ್ನು ಪ್ರೋತ್ಸಾಹಿಸಲು ಮತ್ತು ಇತರರಿಗೆ ಬುಧ್ಧಿ ಹೇಳಲು ಉಪಯೋಗಿಸಿದನು. ಈ ರೀತಿಯಾಗಿ, ಅವನು ತನ್ನ ನಾಲಿಗೆಯನ್ನು ದೇವರ ಕೈಯಲ್ಲಿನ ಉಪಕರಣವೆಂಬಂತೆ ಉಪಯೋಗಿಸಿದನು. ಬಳಲಿಹೋದವರಿಗೆ ಸಂತೈಸುವ ಮಾತುಗಳನ್ನು ಆಡುವುದಕ್ಕೆ (ಯೆಶಾ. 50:4), ಹಾಗೂ ಅಹಂಕಾರಿಗಳನ್ನು ತುಂಡರಿಸಲು ಖಡ್ಗವನ್ನಾಗಿ(ಯೆಶಾ. 49:2) ತನ್ನ ನಾಲಿಗೆಯನ್ನು ಉಪಯೋಗಿಸಿದನು.

ತಮ್ಮ ನಂಬಿಕೆಗಾಗಿ ಯೇಸುವಿನಿಂದ ಸಾರ್ವಜನಿಕವಾಗಿ ಹೊಗಳಲ್ಪಟ್ಟಾಗ, ಶತಾಧಿಪತಿ ಮತ್ತು ಕಾನಾನ್ಯದ ಸ್ತ್ರೀ ಎಷ್ಟೊಂದು ಪ್ರೋತ್ಸಾಹಿತಗೊಂಡಿರಬೇಕು (ಮತ್ತಾ.8:10, 15:28). ತನ್ನ ಪ್ರೀತಿಗಾಗಿ ಹೊಗಳಲ್ಪಟ್ಟ ದುರಾಚಾರಿ ಹೆಂಗಸು (ಲೂಕ. 7:47) ಮತ್ತು ತನ್ನ ತ್ಯಾಗದ ಕಾಣಿಕೆಗಾಗಿ ಹೊಗಳಲ್ಪಟ್ಟ ಬೆಥಾನ್ಯದ ಮರಿಯಳು (ಮಾರ್ಕ. 14:6)ಯೇಸುವಿನ ಮಾತುಗಳನ್ನು ಎಂದಿಗೂ ಮರೆತಿರಲಿಕ್ಕಿಲ್ಲ. ನಾನು ನಿನಗಾಗಿ ಪ್ರಾರ್ಥಿಸುವೆ ಎಂಬ ಯೇಸುವಿನ ಭರವಸೆಯ ಮಾತುಗಳಿಂದ ಪೇತ್ರನು ಎಷ್ಟು ಬಲವಂತನಾಗಿದ್ದಿರಬೇಕು (ಲೂಕ. 22:32). ಕೆಲವೇ ಮಾತುಗಳಾದರೂ ಅವು ಎಂಥಹ ಶಕ್ತಿ/ಬಲ ಮತ್ತು ಪ್ರೋತ್ಸಾಹವನ್ನು ಕೊಟ್ಟಿರಬೇಕು. ತಾನು ತನ್ನ ದಾರಿಯುದ್ಧ ಬಂದ ಬಳಲಿದ ಆತ್ಮಗಳಿಗೆ, ತಕ್ಕುದಾದ ಮಾತು ತನ್ನಲ್ಲಿರುವಂತೆ ಯೇಸುವು ಪ್ರತೀದಿನ ತನ್ನ ತಂದೆಯನ್ನು ಆಲಿಸಿದನು ಎಂದು ಯೆಶಾ. 50:4 ರಲ್ಲಿ ಹೇಳುವಂತೆ, ತಮ್ಮ ಬಳಲಿದ ಆತ್ಮವನ್ನು ಎತ್ತುವಂಥ (ಬಳಲಿದ ಆತ್ಮಗಳಿಗೆ ಸಾಂತ್ವನವನ್ನೀಯುವ) ಮಾತುಗಳನ್ನು ಅನೇಕರು ಯೇಸುವಿನಿಂದ ಕೇಳಿದ್ದಿರಬೇಕು. ಗೌರವದ ಸ್ಥಾನಗಳನ್ನು ಆಶಿಸಿದ್ದಕ್ಕೆ ಹಾಗೂ ಸಮಾರ್ಯದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದುದಕ್ಕೆ ಯೋಹಾನ ಮತ್ತು ಯಾಕೋಬನನ್ನು ಯೇಸುವು ಗದರಿಸಿದನು/ಬುದ್ಧಿ ಹೇಳಿದನು (ಮತ್ತಾ. 20:22,23 ; ಲೂಕ. 9:55). ತನ್ನ ಶಿಷ್ಯರ ಅವಿಶ್ವಾಸಕ್ಕಾಗಿ ಯೇಸುವು ಅವರನ್ನು ಏಳು ಸಲ ಗದರಿಸಿದನು.

ತನ್ನ ಹೃದಯದವು ಇತರರಿಗಾಗಿ ಪ್ರೀತಿಯಿಂದ ತುಂಬಿದ್ದರಿಂದ, ತನ್ನ ಸತ್ಯದ ಮಾತು ಇತರರನ್ನು ನೋಯಿಸುವಂಥದ್ದೇ ಆಗಿದ್ದರೂ, ಸತ್ಯವನ್ನು ಮಾತಾಡಲು ಎಂದಿಗೂ ಆತ ಹೆದರಲಿಲ್ಲ. ತೀಕ್ಷ್ಣವಾಗಿ ಮಾತಾಡುವುದರಿಂದ ತಾನು ದಯಾವಂತ ಎಂಬ ಪ್ರಸಿದ್ಧಿಯನ್ನು ತಾನು ಕಳೆದುಕೊಳ್ಳುವೆನೆಂದು ಅವನು ಯೋಚಿಸಲಿಲ್ಲ. ಅವನು ತನಗಿಂತ ಇತರರನ್ನು ಹೆಚ್ಚಾಗಿ ಪ್ರೀತಿಸಿದನು ಹಾಗೂ ಇತರರಿಗೆ ನೆರವಾಗುವ ಸಲುವಾಗಿ ತಾನು ತನ್ನ ಪ್ರಸಿದ್ಧಿಯನ್ನು ತ್ಯಾಗ ಮಾಡಲು ಅವನು ಸಿದ್ಧನಿದ್ದನು. ಅದಕ್ಕಾಗಿ ಜನರು ನಿತ್ಯಕ್ಕೂ ನಾಶಗೊಳ್ಳದಂತೆ, ಸತ್ಯವನ್ನು ದೃಢವಾಗಿ ಮಾತನಾಡಿದನು. ತನ್ನ ಬಗ್ಗೆ ಜನರ ಒಳ್ಳೆಯ ಅಭಿಪ್ರಾಯಕ್ಕಿಂತ ಅವರ ಒಳಿತೇ ಅವನಿಗೆ ಪ್ರಮುಖವಾಗಿತ್ತು.