ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಅಸ್ಥಿವಾರದ ಸತ್ಯಗಳು
WFTW Body: 

ಹೊಸ ಒಡಬಂಡಿಕೆಯಲ್ಲಿ ರಕ್ಷಣೆಯು ಭೂತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲ, ಹೀಗೆ ಮೂರು ಕಾಲಗಳಲ್ಲಿ ವಿವರಿಸಲ್ಪಟ್ಟಿದೆ. ನಾವು ಹೊಸದಾಗಿ ಹುಟ್ಟಿದ್ದರೆ, ನಾವು ಪಾಪದ ‘’ಶಿಕ್ಷೆ’’ ಯಿಂದ ಈಗಾಗಲೇ ರಕ್ಷಿಸಲ್ಪಟ್ಟಿದ್ದೇವೆ. ಪಾಪದ “ಶಕ್ತಿ’’ಯಿಂದಲೂ ಸಹ ನಾವು ಈಗ ರಕ್ಷಿಸಲ್ಪಟ್ಟಿದ್ದೇವೆ ಮತ್ತು ಒಂದು ದಿನ, ನಮ್ಮ ಕರ್ತನು ಮಹಿಮೆಯೊಂದಿಗೆ ಹಿಂತಿರುಗುವಾಗ, ನಾವು ಪಾಪದ ಬಹು ಸಾನಿಧ್ಯದಿಂದ ರಕ್ಷಿಸಲ್ಪಟ್ಟವರಾಗಿದ್ದೇವೆ ಮತ್ತು ಈ ರೀತಿಯ ರಕ್ಷಣೆಯ ಪ್ರತಿಯೊಂದು ವಿಷಯಾಂಶಗಳು ದೇವರ ಕಾರ್ಯವಾಗಿದೆ. ಎಫೆಸ 2:8 ರಲ್ಲಿ ದೇವರ ವಾಕ್ಯವು “ನಂಬಿಕೆಯ ಮೂಲ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪೂಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದುದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ’’. ಎಂಬುದಾಗಿ ಸ್ಪಷ್ಟವಾಗಿ ಹೇಳುತ್ತದೆ.

ಯೋನ 2:9 ರಲ್ಲಿ, ಯೋನನು “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು” ಎಂಬುದಾಗಿ ಯಾವಾಗ ಅರಿಕೆ ಮಾಡಿದನೋ, ಆಗಲೇ ಆತನು ಮೀನಿನ ಹೊಟ್ಟೆಯಿಂದ ಬಿಡುಗಡೆಗೊಂಡನು. ನಂತರದ ವಚನ “ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಒಣನೆಲದಲ್ಲಿ ಕಾರಿ ಬಿಟ್ಟಿತು.”   ಎಂಬುದಾಗಿ ವಿವರಿಸುತ್ತದೆ. ಯೋನನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಾಗುವುದಿಲ್ಲ ಎಂಬುದಾಗಿ ಅರಿಕೆ ಮಾಡುವವರೆಗೂ ದೇವರು ಕಾದನು ಮತ್ತು ಅದೇರೀತಿ ಯಾವುದೇ ಪಾಪದಿಂದಾಗಲಿ ಅಥವಾ ಯಾವುದೇ ಕಠಿಣ ಪರಿಸ್ಥಿತಿಯಿಂದಾಗಲಿ ನಮ್ಮನ್ನ ನಾವು ರಕ್ಷಿಸಿಕೊಳ್ಳಲಾಗುವುದಿಲ್ಲ ಎಂಬುದಾಗಿ ನಾವು ಅರಿಕೆ ಮಾಡುವವರೆಗೂ, ಆತನು ಇನ್ನೂ ಎಷ್ಟೋ ಉನ್ನತವಾಗಿ ಕಾಯುತ್ತಾನೆ. ಆತನು ಯೋನನಿಗೆ ಮಾಡಿದಂತೆ, ಈಗ ನಮಗೂ ಸಹ ಆತನು ಬಿಡುಗಡೆಗೆ ಅಪ್ಪಣೆ ಕೊಡುತ್ತಾನೆ. ಯೋನನು ಇದ್ದಂತೆ, ಕಠಿಣ ಪರಿಸ್ಥಿತಿಯಲ್ಲಿ  ನಮ್ಮನ್ನ ನಾವು ಯಾವಾಗ ಕಂಡುಕೊಳ್ಳುವೆವೋ, ದೂರುಹೇಳುವುದರ ಮತ್ತು ಗೊಣಗುಟ್ಟುವುದರ ಬದಲಾಗಿ, ಕರ್ತನಿಗೆ ಕೃತಜ್ಞತಾ ಸ್ತುತಿಯೊಂದನ್ನು ಮಾಡುವುದನ್ನ ಕಲಿತರೆ ಮತ್ತು ರಕ್ಷಣೆಯು ಯೆಹೋವನೊಬ್ಬನಿಂದಲೇ ಉಂಟಾಗುವುದು ಎಂಬುದಾಗಿ ಅರಿಕೆ ಮಾಡಿದಾಗ, ಬಿಡುಗಡೆಯು ಬಹುಬೇಗನೆ ಬರುವುದನ್ನು ಕಂಡುಕೊಳ್ಳುತ್ತೇವೆ.

    

ರಕ್ಷಣೆಯು ಸ್ವ-ಅಭಿವೃದ್ಧಿ ಕಾರ್ಯಕ್ರಮವಲ್ಲ. ಅದು ನಮ್ಮ ಹೊರಭಾಗವನ್ನು ಮಾತ್ರ ಬದಲಾವಣೆ ಮಾಡುತ್ತದೆ. ದೇವರ ಕಾರ್ಯವು ನಮ್ಮ ಒಳಭಾಗವನ್ನು ಬದಲಾಯಿಸುತ್ತದೆ.

ಮನುಷ್ಯ ತಾನು ಯಾವುದರಲ್ಲಿಯೂ ಮಹಿಮೆಪಡಿಸಿಕೊಳ್ಳಲಾಗುವುದಿಲ್ಲ, ಅಂಥ ಮಾರ್ಗದಲ್ಲಿ ದೇವರು ಕಾರ್ಯ ಮಾಡುತ್ತಾನೆ. ಒಂದು ವೇಳೆ ನಾವು ಸಹ ಪಾಪದಿಂದ ಪೂರ್ಣ ರಕ್ಷಣೆಯನ್ನು ಅನುಭವಿಸಬೇಕಾದರೆ. ಕರ್ತನು ನಮಗೆ ಮಾಡಿರುವ ಯಾವುದರಲ್ಲಿಯೇ ಆಗಲಿ, ಅದು ಆತನು ಕೊಟ್ಟಿರುವ ಪಾಪದ ಮೇಲಿನ ಜಯವೇ ಆಗಿರಲಿ, ನಾವು ಮಹಿಮೆಪಡೆಸಿಕೊಳ್ಳುವುದರಿಂದ ರಕ್ಷಿಸಲ್ಪಡಬೇಕು. ನಾವು ಚಿಕ್ಕವರಾದಾಗ (ನಮ್ಮ ಸ್ವಂತ ಕಣ್ಣಿಗೆ), 2 ಪೇತ್ರ 1:11 ರಲ್ಲಿ ತಿಳಿಸಿರುವಂತೆ - “ದೇವರ ರಾಜ್ಯಕ್ಕೆ ಸಮೃದ್ಧಿಯಾದ ಪ್ರವೇಶವನ್ನು” ನಾವು ಧಾರಾಳವಾಗಿ ಸಂಪಾದಿಸುತ್ತೇವೆ. (ಸೂಜಿಯ ಕಣ್ಣಿನ ಮೂಖಾಂತರ). ಮತ್ತು ಅದಕ್ಕೆ ಸಾಕ್ಷಿ ಏನಂದರೆ, ನಿಜವಾಗಿಯೂ ನಮ್ಮ ಕಣ್ಣಿಗೆ ನಾವು ಚಿಕ್ಕವರಾದಾಗ, ಆತನ ಧರ್ಮ ಅಥವಾ ಆತನ ಪಂಗಡ ಏನೇ ಆದರೂ ಅಥವಾ ಆತನ ಬೆಳಕಿನ ಕೊರತೆ (ಸತ್ಯವನ್ನು ನಾವು ಅರ್ಥಮಾಡಿಕೊಂಡ ಮೇರೆಗೆ) ಇರಬಹುದು. ನಾವು ಇನೊಬ್ಬ ಮನುಷ್ಯನನ್ನು ಎಂದಿಗೂ ಕೀಳಾಗಿ ಕಾಣುವುದಿಲ್ಲ. ನಾವು ಅತಿಕೆಟ್ಟ ಮನುಷ್ಯರನ್ನು ಸಹ ನೋಡುವಾಗ, ‘’ದೇವರ ಕೃಪೆಯ ನಿಮಿತ್ತ ಮಾತ್ರ ಅಲ್ಲಿ ನಾನು ಹೋಗುವೆ’’ ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ.

ಯೇಸು ತಮ್ಮನ್ನು ತಾವು ಯಾವಾಗಲೂ ‘’ಮನುಷ್ಯನ ಮಗ’’ ಅಥವಾ ಇನ್ನೊಂದು ಪದದಲ್ಲಿ  ‘’ಒಬ್ಬ ಸಾಮಾನ್ಯ ಮನುಷ್ಯ’’ ಎಂದು ಉಲ್ಲೇಖಿಸಿಕೊಳ್ಳುತ್ತಿದ್ದರು. ಇದೇ ರೀತಿ ನಮ್ಮನ್ನ ನಾವು ಸಹ ಎಲ್ಲಾ ಸಮಯಗಳಲ್ಲಿ ಹೀಗೆ ಗುರುತಿಸಿಕೊಳ್ಳಬೇಕು. ನಾವು ಪಾಪದ ಶಿಕ್ಷೆಯಿಂದ ರಕ್ಷಿಸಲ್ಪಟ್ಟವರಾಗಿದ್ದರೆ, ಈ ರಕ್ಷಣೆಯನ್ನು ದೇವರ ಕರುಣೆಯೊಂದೇ ಕೊಡಲ್ಪಟ್ಟಿದೆ. ಈಗ ನಾವು ಪಾಪದ ಶಕ್ತಿಯಿಂದಲೂ ಸಹ ರಕ್ಷಿಸಲ್ಪಡುವುದಾದರೆ, ಇದರ ಫಲಿತಾಂಶವು ಸಹ ದೇವರ ಕರುಣೆ ಮತ್ತು ಉಚಿತಾರ್ಥವಾಗಿ ನಮಗೆ ಕೊಡಲ್ಪಟ್ಟಿರುವ ಕೃಪೆ. ಆದುದರಿಂದ ಈಗ ನಾವು ಏನು ಮಹಿಮೆಯನ್ನು ಹೊಂದಿದ್ದೇವೆ? ಶೂನ್ಯ. ಈ ದುಷ್ಠಾಂತವನ್ನು ಗಮನಿಸೋಣ, ನೀವು ಸುಂದರವಾಗಿ ಚಿತ್ರಿಸಿರುವ ಒಂದು ಚಿತ್ರಕಲೆಯನ್ನು ಯಾರಾದರೂ ಹೊಗಳಿದರೆ, ನಿಮ್ಮ ಚಿತ್ರಕಲಾ ಪಾಂಡಿತ್ಯದ ಸಲುವಾಗಿ ನೀವು ಹೆಮ್ಮೆ (ಅಹಂಕಾರ) ಪಟ್ಟುಕೊಳ್ಳಲು, ಶೋಧಿಸಲ್ಪಡಬಹುದು. ಆದರೆ ಅವರು ಇನ್ನೊಬ್ಬರ ಚಿತ್ರಕಲೆಯನ್ನು ಹೊಗಳಿದರೆ, ಹೇಗೆ ನೀವು ಹೆಮ್ಮೆ (ಅಹಂಕಾರ) ಪಡಲು ಶೋಧಿಸಲ್ಪಡುತ್ತೀರಿ. ದೇವರು ಹೇಗೆ ರಕ್ಷಣಾ ಕಾರ್ಯವನ್ನು ನಮ್ಮ ಜೀವಿತದಲ್ಲಿ ನೆರವೇರಿಸಿದ್ದಾರೆ ಎಂಬುದಕ್ಕೆ ಈ ದುಷ್ಠಾಂತವನ್ನು ಉಪಯೋಗಿಸೋಣ. ಒಂದು ವೇಳೆ ನಮ್ಮನ್ನ ನಾವು ಯಾರೋ ಅಭಿವೃದ್ಧಿ ಪಡಿಸಿಕೊಂಡಿದ್ದರೆ ಅಥವಾ ನಮ್ಮನ್ನ ನಾವು ಪವಿತ್ರ ಪವಿತ್ರಪಡಿಸಿಕೊಂಡಿದ್ದರೆ, ಆಗ ನಾವು ಇದಕ್ಕೆ ಹೆಮ್ಮೆ ಪಟ್ಟುಕೊಳ್ಳಬಹುದು. ಆದರೆ ದೇವರೊಬ್ಬಾತನೇ ನಮ್ಮಲ್ಲಿ ಈ ಕಾರ್ಯವನ್ನು ಮಾಡಿದ್ದರೆ, ಹೇಗೆ ನಾವು ಯಾವಾಗಲೂ ಇದರಲ್ಲಿ ಹೆಮ್ಮೆಪಟ್ಟುಕೊಳ್ಳಲು ಸಾಧ್ಯ?

ನಮ್ಮ ‘’ಪವಿತ್ರ ಮಾಡುವಿಕೆಯ’’ ಗುಣಮಟ್ಟ ಏನು? ಇದು ಕೇವಲ ನೀತಿವಂತಿಕೆಯ ಅಭಿವೃದ್ಧಿಯ? ಹಾಗಾದರೆ, ನಾವು ನಮ್ಮ ಜೀವಿತದಲ್ಲಿ ದೈವಿಕತೆ ಅಥವಾ ಅಲೌಕಿಕತೆಯನ್ನು ಅನುಭವಿಸಿಲ್ಲ, ಆದರೆ ಒಬ್ಬ ಮನುಷ್ಯ ತಾನು ಚಿಕ್ಕದಾಗಿ ಏನು ನಿಶ್ಚಯಿಸಿಕೊಳ್ಳುತ್ತಾನೋ, ಅದನ್ನು ಮಾತ್ರ ಮಾಡಬಹುದು, ಆದರೆ ಒಂದು ವೇಳೆ ದೇವರ ಯಥಾರ್ಥವಾದ ಕೆಲಸವು ನಮ್ಮ ಜೀವಿತದಲ್ಲಿ ಸ್ಥಾನ ಪಡೆದರೆ, ನಿತ್ಯಜೀವ (ದೇವರ ಸ್ವಭಾವ) ನಮಗೆ ಕೊಡಲ್ಪಟ್ಟಿರುತ್ತದೆ ಮತ್ತು ಅದು ದೇವರ ಉಚಿತಾರ್ಥ ವರವು (ರೋಮ 6:23) . (ದೇವರ ಸ್ವಭಾವವನ್ನು ನಮ್ಮಿಂದ ಯಾವುದೇ ಪರಿಸ್ಥಿತಿಯಲ್ಲೂ ತಯಾರಿಸಲಾಗುವುದಿಲ್ಲ) ಮತ್ತು ಇಂದು ನಾವು ಏನಾಗಿದ್ದೇವೋ, ಅದರ ಫಲಿತಾಂಶ ದೇವರ ಉಚಿತಾರ್ಥವರವು. ನಂತರ ಎಲ್ಲಾ ಜಂಭಕೊಚ್ಚಿಕೊಳ್ಳುವಿಕೆಯು ಹೊರ ಹಾಕಲ್ಪಡುವುದು. ಹಾಗಾದರೆ ಒಂದು ವೇಳೆ ನಿಮ್ಮ ಪಾಪದ ಮೇಲಿನ ಜಯಕ್ಕೆ ನೀವು ಹೆಮ್ಮೆ (ಅಹಂಕಾರ) ಪಡುವುದಾದರೆ, ಆಗ ಇದನ್ನು ನಿಮಗೆ ನೀವೆ ತಯಾರಿಸಲ್ಪಟ್ಟಿರಬೇಕು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಜಯವು ಉಪಯೋಗಕ್ಕೆ ಬಾರದಿರುವಂತದ್ದು ಮತ್ತು ಅದು ನಿಶ್ಚಯವಾಗಿ ಯಥಾರ್ಥವಾದ ಕಾರ್ಯವಲ್ಲ ಮತ್ತು ಆದಷ್ಟು ಬೇಗ ಅದನ್ನು ಹೊರ ಹಾಕಿದರೆ, ಒಳ್ಳೆಯದು. ಇದರ ಬದಲಾಗಿ ದೇವರ ಸ್ವಭಾವದಲ್ಲಿ ಪಾಲುಹೊಂದುವುದನ್ನು ಹುಡುಕಿರಿ. ಫಿಲಿಪ್ಪಿಯವರಿಗೆ 3:9 ರಲ್ಲಿ ಪೌಲನು “ಇದರಲ್ಲಿ ನನ್ನ ಉದ್ದೇಶವೇನೆಂದರೆ - ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ನೇಮನಿಷ್ಠೆಗಳ ಫಲವಾಗಿರುವ ಸ್ವನೀತಿಯನ್ನಾಶ್ರಯಿಸದೆ ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿ ಕಾಣಿಸಿಕೊಳ್ಳಬೇಕೆಂಬದೇ” ಎಂಬುದಾಗಿ ಹೇಳಿದ್ದಾನೆ.

ರೋಮಪುರದ ಪತ್ರಿಕೆಯಲ್ಲಿ, ಆಧ್ಯಾಯದಿಂದ ಆಧ್ಯಾಯಕ್ಕೆ ಸುವಾರ್ತಾ ಸಂದೇಶವು ಹೇಗೆ ಪ್ರಗತಿ ಸಾಧಿಸುತ್ತಿತ್ತು ಎಂಬುದಾಗಿ ನಾವು ನೋಡಬಹುದು. ಸಂಕ್ಷಿಪ್ತವಾದ ಮುಖ್ಯಾಂಶಗಳು ಇಲ್ಲಿವೆ:

ಅಧ್ಯಾಯ-1 ರಿಂದ 3     - ಮನುಷ್ಯನು ಮಾಡಿರುವ ಅಪರಾಧವು ಸ್ಪಷ್ಟವಾಗಿದೆ.

ಅಧ್ಯಾಯ 4           - ನಂಬಿಕೆಯಿಂದ ನೀತಿಕರಿಸಲ್ಪಡುವುದು (ನೀತಿಯು ದೇವರಿಂದ ಪ್ರಕಟಿಸಲ್ಪಟ್ಟಿದೆ)

ಅಧ್ಯಾಯ 5          -  ಈಗ ಕ್ರಿಸ್ತನ ರಕ್ತದ ಮುಖಾಂತರ ದೇವರ ಬಳಿಗೆ ಪ್ರವೇಶಿಸಲು ನಮಗೆ ಸ್ವಾತಂತ್ರ್ಯವಿದೆ.

ಅಧ್ಯಾಯ-6         -  ಕ್ರಿಸ್ತನೊಟ್ಟಿಗೆ ನಮ್ಮ ಹಳೇ ಮನುಷ್ಯನು ಹೂಣಲ್ಪಟ್ಟಿರುವುದರಿಂದ, ನಾವು ಪಾಪ ಮಾಡುವ ಅಗತ್ಯತೆ ಇಲ್ಲ.

ಅಧ್ಯಾಯ-7    -  ಕ್ರಿಸ್ತೀಯ ಜೀವಿತದ ದಿಕ್ಕಿನ ಕಡೆಯ ಸಲುವಾಗಿ, ನಾವು ಈಗ ಧರ್ಮಶಾಸ್ತ್ರ ಮತ್ತು ಕಾನೂನಿನ ಭಂಗಿಯಿಂದ ಬಿಡುಗಡೆಗೊಂಡಿದ್ದೇವೆ.

ಅಧ್ಯಾಯ-8  -ಈಗ ನಾವು ಆತ್ಮದಲ್ಲಿ ಜೀವಿಸುವವರಾಗಿ ಪ್ರತಿನಿತ್ಯ ನಮ್ಮ ದುರಾಶೆಗಳನ್ನು ಹೂಣಲ್ಪಡಬೇಕು.  

ಇಂಥ ರಕ್ಷಣೆಯ ಫಲಿತಾಂಶವು ‘’ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ” (ರೋಮಪುರದವರಿಗೆ 8:37) ಎಂಬುದಾಗಿದೆ. ಏನೇ ಆದರೂ, ಇದೆಲ್ಲದರ ಕೊನೆಯಲ್ಲಿ ಅಪಾಯವೇನೆಂದರೆ, ಈ ರಕ್ಷಣಾ ಕಾರ್ಯವು ನಮ್ಮಿಂದ ನೆರವೇರಲ್ಪಟ್ಟಿದೆ ಎಂಬುದಾಗಿ ಕಲ್ಲಿಸಿಕೊಳ್ಳುತ್ತೇವೆ ಮತ್ತು ರೋಮಪುರದವರಿಗೆ ಪತ್ರಿಕೆಯಲ್ಲಿ ಅಧ್ಯಾಯ 8 ರ ನಂತರದ 3 ಅಧ್ಯಾಯಗಳು ನಮಗೆ ಅದ್ಬುತವಾಗಿವೆ,  ಅವು ಪ್ರಾರಂಭದಿಂದ ಅಂತ್ಯದವರೆಗೂ, ರಕ್ಷಣೆಯೂ ದೇವರ ಕಾರ್ಯವಾಗಿದೆ ಎಂಬುದನ್ನು ವಿವರಿಸಲ್ಪಟ್ಟಿದೆ. ಆದಾಗ್ಯೂ ಈ ಅಧ್ಯಾಯಗಳು (9 ರಿಂದ 11) ಪ್ರಾಥಮಿಕವಾಗಿ ಹಳೇಯ ಒಡಂಬಡಿಕೆಯ ಕೆಳಗೆ, ದೇವರು ಇಸ್ರಾಯೇಲ್ಯರೊಟ್ಟಿಗೆ ಹೇಗೆ ವ್ಯವಹರಿಸಲ್ಪಟ್ಟಿದ್ದಾರೆ ಎಂಬುದನ್ನು ವಿವರಿಸಲ್ಪಟ್ಟಿದ್ದು, ಪವಿತ್ರಾತ್ಮನು ಈ ಸತ್ಯಗಳನ್ನು ಈ ದಿನ ನಮ್ಮ ಜೀವಿತದಲ್ಲಿಯೂ ಸಹ ಅನ್ವಯಿಸಲು ಹುಡುಕುತ್ತಿರುತ್ತಾರೆ.