ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಎಲ್ಲಾ ಪ್ರವಾದಿಗಳು ದೇವರ ಜನರ ಮಧ್ಯದಲ್ಲಿ ಉಳಿದವರ ಬಗ್ಗೆ ಮಾತನಾಡಿದರು. ದೇವರ ಜನರ ಮಧ್ಯದಲ್ಲಿ ಆತ್ಮಿಕತೆಯು ಕ್ಷೀಣಿಸುವಂತಹ ಸಮಯದಲ್ಲಿ, ಕೆಲವು ಮಂದಿ ದೇವರಿಗೆ ನಂಬಿಗಸ್ಥರಾಗಿ ಹೇಗೆ ಉಳಿದುಕೊಳ್ಳುತ್ತಾರೆ ಎಂಬುದರ ಬಗ್ಗೆ ಅವರು ಮಾತನಾಡಿದರು.

ಹಳೆಯ ಒಡಂಬಡಿಕೆಯಲ್ಲಿ ಬರೆದಿರುವ ಸಂಗತಿಗಳು ನಮ್ಮ ಮಾರ್ಗದರ್ಶನಕ್ಕಾಗಿ ಬರೆಯಲ್ಪಟ್ಟಿವೆ (1ಕೊರಿ10:11). ಹಿಂದೆ ಇಸ್ರಾಯೇಲ್ಯರಲ್ಲಿ ಅವನತಿಯಿದ್ದಂತೆ, ಇಂದೂ ಕ್ರೈಸ್ತರಲ್ಲಿ ಅವನತಿಯಿದೆ. ಇಸ್ರಾಯೇಲ್ ಮತ್ತು ಯೂದ ಎರಡು ರಾಜ್ಯಗಳು - ಕ್ರೈಸ್ತ ಸಾಮ್ರಾಜ್ಯದ ಎರಡು ಪಂಗಡಗಳ ಚಿತ್ರಣವಾಗಿವೆ. ಹತ್ತು ಕುಲಗಳ ಇಸ್ರಾಯೇಲ್ ರಾಜ್ಯವು ಪ್ರಮುಖ ಕ್ರೈಸ್ತ ಪಂಗಡಗಳನ್ನು ಸಂಕೇತಿಸುತ್ತದೆ, ಮತ್ತು ಎರಡು ಕುಲಗಳ ಯೂದವು ಅನುರೂಪವಾಗಿರದ, ಸಣ್ಣ ಗುಂಪುಗಳನ್ನು ಸಂಕೇತಿಸುತ್ತದೆ. ಆದರೆ ಇವೆರಡೂ ಪಂಗಡಗಳು ಇಂದು ಅವನತಿಯನ್ನು ಕಾಣುತ್ತಿವೆ. ಹಳೇ ಒಡಂಬಡಿಕೆಯಲ್ಲಿ ಯೂದವು ಇಸ್ರಾಯೇಲಿನ ತಪ್ಪಿನಿಂದ ಪಾಠ ಕಲಿಯಲಿಲ್ಲ. ಅನುರೂಪವಾಗಿರದ ಗುಂಪುಗಳು ಇಂದು ದೊಡ್ಡ ಪ್ರಮುಖ ಪಂಗಡಗಳು ಮಾಡಿದ ತಪ್ಪುಗಳಿಂದ ಪಾಠ ಕಲಿತಿಲ್ಲ, ಅವರು ಮಾಡಿದ ತಪ್ಪುಗಳನ್ನೇ ಇವರೂ ಮಾಡಿದ್ದಾರೆ. ಅಂತಿಮವಾಗಿ, ಎರಡೂ ಗುಂಪುಗಳಿಂದ ಇಂದು ದೇವರು ಉಳಿದಿರುವವರನ್ನು ಆರಿಸಿದ್ದಾನೆ. ಧಾರ್ಮಿಕ ಪಂಗಡಗಳಲ್ಲಿ ಮತ್ತು ಸ್ವತಂತ್ರ ಪಂಗಡಗಳಲ್ಲಿ ಇಂದು ಆತ್ಮಿಕ ಅವನತಿ ಇದೆ. ಆದರೆ, ಇವೆಲ್ಲದರೆ ನಡುವೆ, ದೇವರಿಗಾಗಿ ತಮ್ಮ ಹೃದಯವನ್ನು ಮೀಸಲಾಗಿಟ್ಟಿರುವ ಕೆಲವರು ಇನ್ನೂ ಇದ್ದಾರೆ. ಅವರೆಲ್ಲರೂ ಒಂದೇ ಪಂಗಡದಲ್ಲಿಲ್ಲ. ಅವರು ದೇವರನ್ನು ಪ್ರೀತಿಸಿ, ಎಲ್ಲಾ ವಿಷಯಗಳಲ್ಲಿ ಅವನನ್ನೇ ಸನ್ಮಾನಿಸಲು ಪ್ರಯತ್ನಿಸುತ್ತಿರುವ ಪರುಷ ಮತ್ತು ಸ್ತ್ರೀಯರು ಎಲ್ಲಾ ಪಂಗಡಗಳಲ್ಲಿ ಇದ್ದಾರೆ. ಅವರು ಶುದ್ದರು, ಪವಿತ್ರಾತ್ಮನಿಂದ ತುಂಬಿದವರು ಮತ್ತು ವಾಗ್ವದಗಳಲ್ಲಿ ಭಾಗಿಗಳಾಗುವವರಲ್ಲ. ಅವರು ತಮ್ಮ ನಾಲಿಗೆಯ ಉಪಯೋಗದ ಬಗ್ಗೆ ಜಾಗರೂಕರಾಗಿರುವವರು ಮತ್ತು ಹಣದ ಬಗ್ಗೆ ಬಹಳ ನಂಬಿಗಸ್ತರಾಗಿರುವವರು. ಈ ದಿನಗಳಲ್ಲಿ ದೇವರು ಇಂಥಹ ಜನರನ್ನು ತನ್ನ ಉಳಿದಿರುವವರನ್ನಾಗಿ ಒಗ್ಗೂಡಿಸುತ್ತಿದ್ದಾನೆ. ಪ್ರವಾದಿಗಳ ಮುಖ್ಯ ಉದ್ದೇಶವು ಯಾವಾಗಲೂ ಪುನ:ಸ್ಥಾಪನೆಯಾಗಿತ್ತು. ಉಳಿದಿರುವವರು ಯೇಸುವಿನ ಬರೋಣಕ್ಕೆ ಸಿದ್ಧತೆ ನಡೆಸಿದವರಾಗಿದ್ದವರು. ಕರ್ತನು ಹುಟ್ಟಿದಾಗ, ಅಲ್ಲಿ ಉಳಿದವರಿದ್ದರು - ದೇವಾಲಯದಲ್ಲಿ ಸಿಮಿಯೋನ ಮತ್ತು ಅನ್ನ, ಸ್ನಾನಿಕ ಯೋಹಾನ, ಕುರುಬರು, ಮತ್ತು ಪೂರ್ವದ ಕೆಲವು ಜ್ಞಾನಿಗಳು. ಇಂದು ಕೂಡ, ಕರ್ತನ ಬರುವಿಕೆಗೆ ಸಿದ್ಧತೆ ನಡೆಸುತ್ತಿರುವ ಕೆಲವರು ಕ್ರೈಸ್ತ ಸಾಮ್ರಾಜ್ಯದಲ್ಲಿ ಉಳಿದಿರುವವರು ಕೆಲವರಿದ್ದಾರೆ.

ಚೆಫನ್ಯನು ಹೇಳುತ್ತಾನೆ, "ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ ಕರ್ತನನ್ನು ಹುಡುಕಿರಿ, ನೀತಿಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ"(ಚೆಫನ್ಯ2:3). ಎಂಥಹ ಮಾತು? "ವಿನಯವನ್ನು ಹುಡುಕಿರಿ" ದೇವರು ವಿನಯವಂತರನ್ನು ಆಶೀರ್ವದಿಸುತ್ತಾನೆಂಬುದನ್ನು ಚೆಫನ್ಯನು ಅರ್ಥಮಾಡಿಕೊಂಡನು. ಒಂದು ಕಡೆ ಬಾಬಿಲೋನಿನ ಗರ್ವ ಮತ್ತು ಇನ್ನೊಂದು ಕಡೆ ಯೆರೂಸಲೇಮಿನಲ್ಲಿ ಉಳಿದವರ ದೀನತೆ. ಕಾಯಿನ ಮತ್ತು ಹೇಬೆಲನ ಕಾಲದಿಂದ ಮಾನವತೆಯಲ್ಲಿ ಎರಡು ತೊರೆಗಳು ಹರಿಯುತ್ತಿವೆ - ಬಾಬಿಲೋನ್ ಮತ್ತು ಯೆರೂಸಲೇಮ್. ಬಾಬಿಲೋನ್ ಭ್ರಷ್ಟ ಮತ್ತು ಧಾರ್ಮಿಕ ವ್ಯವಸ್ಥೆ. ಯೆರುಸಲೇಮ್, ದೇವರ ನಿಜವಾದ ದೇವರ ಸಭೆ. ಪವಾಡಗಳು, ಅದ್ಭುತಗಳು, ಈ ಸಭೆಯ ಗುಣಲಕ್ಷಣಗಳಲ್ಲ, ಬದಲಾಗಿ ದೀನತೆಯೇ ಅದರ ಗುಣಲಕ್ಷಣವಾಗಿದೆ. ಅಲ್ಲಿಯವರು ಇನ್ನೂ ಹೆಚ್ಚಾಗಿ ದೀನತೆಯನ್ನು ಕಂಡುಕೊಳ್ಳುವುದರಲ್ಲಿ ಪ್ರಯಾಸಪಡುವುದಿಲ್ಲ.

ಹಾಗಾದರೆ, ಉಳಿದವರಿಗೆ ಸೇರಲ್ಪಟ್ಟವರು ಎದುರಿಸುವ ಅಪಾಯವೇನು? ತಮ್ಮನ್ನೇ ಬೇರೆ ಸಭೆಗಳೊಡನೆ ಹೋಲಿಸಿ, ತಾವು ಅವರಿಗಿಂತ ಉನ್ನತವಾಗಿದ್ದೇವೆಂದು ತಮ್ಮನ್ನೇ ಮಹಿಮೆಪಡಿಸುವ ಅಪಾಯ ಅವರಿಗಿದೆ. ನೀನು ಆ ರೀತಿ ಯೋಚಿಸಬೇಕೆಂಬುದನ್ನೇ ಸೈತಾನನು ಬಯಸುತ್ತಾನೆ. ಯಾಕೆಂದರೆ, ನೀನು ಹಾಗೆ ಯೋಚಿಸಲು ಆರಂಭಿಸಿದಾಗ, ದೇವರು ನಿನ್ನ ವೈರಿಯಾಗುತ್ತಾನೆ ಮತ್ತು ನೀನು ಯಾರನ್ನು ಹೀಯಾಳಿಸುತ್ತೀಯೋ, ಅವರಂತೆಯೇ ನೀನೂ ಆಗುತ್ತೀಯ. ಎಷ್ಟು ಬೇಗ ಉಳಿದವರೂ ಬಾಬಿಲೋನಿನ ಭಾಗವಾಗಬಹುದೆಂಬುದನ್ನು ನೀನೇ ನೋಡು. ಆದ್ದರಿಂದ ನೀನು ದೀನತೆಯನ್ನು ಬೆನ್ನಟ್ಟು. ಸದಾಕಾಲವೂ ನಿನ್ನ ಮುಖವನ್ನು ಧೂಳಿನಲ್ಲಿಡು. ಇತರ ಜನರೊಂದಿಗೆ ನಿನ್ನನ್ನು ಎಂದಿಗೂ ಹೋಲಿಸಬೇಡ. ಯೇಸುವಿನೊಟ್ಟಿಗೆ ಮಾತ್ರ ನಿಮ್ಮನ್ನು ಹೊಲಿಸಿಕೊಳ್ಳಿರಿ. ಇಂದು ಉಳಿದವರೊಂದಿಗೆ ಸೇರಿದವರಿಗೆ ಇದೇ ನನ್ನ ಸಲಹೆ.

ಚೆಫನ್ಯನು ಪ್ರವಾದಿಸಿದ್ದೇನೆಂದರೆ, ಫಿಲಿಷ್ಟಿಯರ ಸ್ಥಳಗಳು ನಿರ್ಜನವಾಗಿ, ಹಾಳಾಗುತ್ತವೆ, ಆದರೆ ಕೆಲವು ಬದುಕುಳಿದವರನ್ನು (ಪುನ:, ಉಳಿದವರು) ದೇವರು ಆರೈಕೆ ಮಾಡುತ್ತಾರೆ (ಚೆಫನ್ಯ 2:4,7). ಈ ಉಳಿದವರನ್ನು ಇತರರು ಹಂಗಿಸುವರು ಮತ್ತು ತಮಾಷೆ ಮಾಡುವರು (ಚೆಫನ್ಯ2:8). ದಾನಿಯೇಲನ ಮತ್ತು ಆತನ ಮೂರು ಜನ ಸ್ನೇಹಿತರಂತೆ ಮತ್ತು ಪ್ರವಾದಿಗಳು ಹೇಳಿದ ಉಳಿದವರಂತೆ, ನೀವು ದೇವರಿಗಾಗಿ ನಿಲ್ಲುವುದಾದರೆ, ರಾಜಿಯಾಗುವ ಅನೇಕ ಕ್ರೈಸ್ತರು ನಿಮ್ಮನ್ನು ಹಂಗಿಸುತ್ತಾರೆ ಎಂಬುದನ್ನು ನಾನು ನಿಮಗೆ ಖಚಿತವಾಗಿ ಹೇಳುತ್ತೇನೆ. ಅವರು ನಿಮಗೆ ಹೀಗೆ ಹೇಳುತ್ತಾರೆ. "ನೀನು ಈ ಸಣ್ಣ ಧರ್ಮಾಂಧರ (ಮತಾಂಧರ) ಗುಂಪಿನಲ್ಲಿ ಸೇರದೇ ಇದ್ದಿದ್ದರೆ, ಎಂತಹ ಅದ್ಭುತವಾದ ಸೇವೆಯನ್ನು ನೀನು ಹೊಂದಿರುತ್ತಿದ್ದೆ". ಯಾವಾಗ ನಾನು ವಿಶಾಲವಾದ ಸೇವೆಯನ್ನು ಬಿಟ್ಟು, ಸ್ವಲ್ಪ ಜನರೊಟ್ಟಿಗೆ ನಮ್ಮ ಮನೆಯಲ್ಲಿ ಸಭೆಯಾಗಿ ಕೂಟ ಪ್ರಾರಂಭಿಸಿದಾಗ (1975ರಲ್ಲಿ) ಅನೇಕ ಕ್ರೈಸ್ತರು ನನಗೆ ಹೀಗೆ ಹೇಳಿದ್ದಾರೆ. ಅವರಲ್ಲಿ ಯಾರೊಬ್ಬನಿಗೂ ನಾನು ಕಿವಿಗೊಡದೇ ಇದ್ದುದಕ್ಕೆ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಕರ್ತನಿಗೆ ಹೇಳಿದ್ದೇನೆಂದರೆ, "ಕರ್ತನೇ, ನಾನು ಒಬ್ಬ ಅಥವಾ ಇಬ್ಬರು ವಿಶ್ವಾಸಿಗಳೊಟ್ಟಿಗೆ ಮಾತ್ರ ಇದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ನೀನು ಎಲ್ಲಿದ್ದೀಯೋ ಅಲ್ಲಿ ನಾನಿರಬೇಕು ಮತ್ತು ನಾನು ನಿನ್ನ ವಾಕ್ಯದ ಪೂರ್ಣ ಸತ್ಯವನ್ನು ಸಾರಬೇಕು. ಹಿಂಜಾರಿದ ಕ್ರೈಸ್ತ ಸಾಮ್ರಾಜ್ಯದ ನಾಯಕರ ಅಭಿಪ್ರಾಯಗಳಿಗಾಗಿ ನಾನು ಕಿಂಚಿತ್ತೂ ಗಮನಕೊಡುವುದಿಲ್ಲ. ಈ ರೀತಿಯ ನಿಲುವನ್ನು ತೆಗೆದುಕೊಂಡರೆ, ನೀವು ಅನೇಕ ರೀತಿಯ ವಿರೋಧವನ್ನು ಎದುರಿಸುತ್ತೀರಿ. ಆದರೆ ನೀವು ಕೊನೆಯ ತನಕ ಬಾಳಿದರೆ ಮಾತ್ರ, ನಿಮ್ಮ ಗುರಿಯನ್ನು ನೀವು ಸಂತೋಷದಿಂದ ತಲುಪುತ್ತೀರಿ. ನಿಮ್ಮ ಕಣ್ಣನ್ನು ಕರ್ತನ ಮೇಲೆ ನೆಡಿರಿ. ಕರ್ತನು ಹೀಗೆನ್ನುತ್ತಾನೆ. "ನಿಮ್ಮನ್ನು ಟೀಕಿಸುವವರ ಬಗ್ಗೆ ನೀವು ಚಿಂತೆ ಮಾಡಬೇಡಿ. ನನ್ನ ಸ್ವಂತ ಸಮಯದಲ್ಲಿ ನಾನು ಅದರೊಂದಿಗೆ ವ್ಯವಹರಿಸುತ್ತೇನೆ". ಇಂದು, ನನ್ನ ಟೀಕಾಕಾರರು ಮೌನವಾಗಿದ್ದಾರೆ. ದೇವರು ನಮ್ಮ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ನೋಡಿ ಅವರು ಬೆರಗಾಗುತ್ತಿದ್ದಾರೆ. ಹಂಗಿಸಲ್ಪಡುವ ಸಂದರ್ಭದಲ್ಲಿ ನೀವು ದೇವರಿಗಾಗಿ ನಿಲ್ಲುವುದಿಲ್ಲವಾದರೆ, ನೀವು ಹೋರಾಟವನ್ನು ಬಿಟ್ಟುಕೊಟ್ಟು, ರಾಜಿಗಾರರನ್ನು ಸೇರಿಕೊಳ್ಳುತ್ತೀರಿ.

ಉಳಿದವರ ಕೆಲವು ಗುಣಲಕ್ಷಣಗಳನ್ನು ಗಮನಿಸಿ:

  • • "ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿ ಮಾಡುವೆನು" (ಚೆಫನ್ಯ 3:9). ಉಳಿದವರ ಮಾತು ಶುದ್ಧವಾಗಿರುತ್ತದೆ. ಯೆಶಾಯನು ಕರ್ತನ ಮಹಿಮೆಯನ್ನು ನೋಡಿದಾಗ, ತನ್ನ ಮಾತನ್ನು ಗ್ರಹಿಸಿಕೊಂಡನು. ನಾನು ಆಗಾಗ ಮಾತಿನ ಮತ್ತು ಹಣದ ಬಗ್ಗೆ ನಮ್ಮ ನಡುವಳಿಕೆಯ ಕುರಿತಾಗಿ ಮಾತನಾಡುತ್ತೇನೆ. ಏಕೆಂದರೆ, ಪ್ರವಾದಿಗಳು ಈ ಎರಡು ವಿಷಯಗಳ ಬಗ್ಗೆ ಹೆಚ್ಚಾಗಿ ಮಾತನಾಡಿದ್ದಾರೆ. ನಮ್ಮ ಮಾತು ಮತ್ತು ನಮ್ಮ ಹಣದ ಬಗ್ಗೆ ಎಚ್ಚರಿಕೆಯುಳ್ಳವರಾಗಿದ್ದರೆ, ನಾವು ಕರ್ತನ ವಕ್ತಾರನಾಗಬಹುದು.
  • • "ಆಗ ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಮಾಡುವೆನು" (ಚೆಫನ್ಯ 3:9). ಈ ಉಳಿದವರು ಒಂದು ದೇಹದಲ್ಲಿ ಒಗ್ಗಟ್ಟಾಗಿ, ಕರ್ತನ ಭಾರಗಳನ್ನು ಹೊರುವವರಾಗಿ ಹೆಗಲಿಗೆ ಹೆಗಲು ಕೊಟ್ಟು ಕರ್ತನ ಸೇವೆ ಮಾಡುವರು.
  • • "ನೀನು ನನಗೆ ಮಾಡಿದ ನಾನಾ ದುಷ್ಕೃತ್ಯಗಳನ್ನು ಮುಂದಿನ ಆ ಕಾಲದಲ್ಲಿ ನಿನಗೆ ನಾಚಿಕೆಗೀಡಾಗವು; ಆಗ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವ ಪಡದೆ ಇರುವಿ. ದೀನ ದರಿದ್ರ ಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು" (ಚೆಫನ್ಯ 3:11, 12). ಉಳಿದವರಲ್ಲಿ ಕೇವಲ ದೀನವುಳ್ಳ ಜನರು ಮಾತ್ರ ಒಳಗೊಂಡಿರುತ್ತಾರೆ. ಏಕೆಂದರೆ ಕರ್ತನು ಪ್ರತಿಯೊಬ್ಬ ಅಹಂಕಾರಿಯನ್ನು ತೊಲಗಿಸಿಬಿಡುತ್ತಾನೆ. ಅನೇಕ ಜನರು ನನಗೆ ಕೇಳುವ ಮತ್ತೊಂದು ಪ್ರಶ್ನೆಯೆಂದರೆ - "ಸಹೋದರ ಝ್ಯಾಕ್ರವರೇ ನೀವು ಯಾಕಾಗಿ ದೀನತೆಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತೀರಿ?"ಎಂಬುದಾಗಿ . ನಾನು ಅವರಿಗೆ ಹೇಳುವುದೇನೆಂದರೆ, ಸತ್ಯವೇದವು ಪ್ರತಿ ಕಡೆಯಲ್ಲೂ ದೀನತೆಯ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿರುವದರಿಂದ ನಾನೂ ಅದರ ಬಗ್ಗೆನೇ ಮಾತನಾಡುತ್ತೇನೆ.
  • • "ದೀನ ದರಿದ್ರ ಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು" (ಚೆಫನ್ಯ3: 12 ). ಉಳಿದವರು ನಂಬಿಕೆಯುಳ್ಳ ಜನರಾಗಿರುವರು.
  • • "ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು: ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು" (ಚೆಫನ್ಯ 3:13). ಈ ಉಳಿದವರು ಸಮಾಧಾನವುಳ್ಳ ಜನರಾಗಿದ್ದು, ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತೊಬ್ಬರಿಗೆ ಮೋಸ ಮಾಡುವುದಿಲ್ಲ ಅಥವಾ ಮತ್ತೊಬ್ಬರಿಗೆ ನೋವು ಮಾಡುವುದಿಲ್ಲ. "ಚೀಯೋನ್ ನಗರಿಯೇ, ಹರ್ಷಧ್ವನಿಗೈ! ಇಸ್ರಾಯೇಲ್ಯರೇ, ಅರ್ಭಟಿಸು! ಯೆರೂಸಲೇಮ್ ಪುರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು! ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ" (ಚೆಫನ್ಯ 3:14,15). ಈ ಉಳಿದ ಜನರು ಸಂತೋಷವುಳ್ಳ ಜನರಾಗಿದ್ದು, ಅವರು ತಮಗೋಸ್ಕರ ಕರ್ತನ ಪ್ರೀತಿಯಲ್ಲಿ ಪರಿಪೂರ್ಣ ಭದ್ರತೆಯನ್ನು ಕಂಡುಕೊಂಡಿರುತ್ತಾರೆ.
  • • "ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೋರನಾಗಿದ್ದಾನೆ. ನಿನ್ನನ್ನು ರಕ್ಷಿಸುವನು. ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು" (ಚೆಫನ್ಯ 3:17) ಉಳಿದವರ ಬಗ್ಗೆ ದೇವರು ಉಲ್ಲಾಸಿಸುತ್ತಾನೆ. ಪಾಪದಲ್ಲಿರುವ ಜನರ ಬಗ್ಗೆ ಆತನು ಉಲ್ಲಾಸಿಸುವುದಿಲ್ಲ. ತನ್ನ ಮಗನಿಗೆ, ಕ್ಯಾನ್ಸರ್, ಕುಷ್ಟರೋಗ ಅಥವ ಕ್ಷಯರೋಗ ಇದ್ದರೆ, ಒಬ್ಬ ತಂದೆಯು ಉಲ್ಲಾಸಿಸುವನೇ? ಇಲ್ಲ. ಪಾಪದಲ್ಲಿ ಜೀವಿಸಲಿಚ್ಚಿಸುವ ಮತ್ತು ಗುಣಹೊಂದಬಯಸದ ಜನರಲ್ಲಿ ದೇವರು ಉಲ್ಲಾಸಿಸಲಾರನು. ಆದರೆ ಈ ಪವಿತ್ರರಾದ ಉಳಿದವರಲ್ಲಿ ದೇವರು ಉಲ್ಲಾಸಿಸುವನು. ಬಹಳ ಸಂತೋಷದಿಂದ, ಆತನ್ನು ಅವರಲ್ಲಿ ಹರ್ಷಧ್ವನಿಗೈಯುವನು ಮತ್ತು ಅವರ ಬಗ್ಗೆ ಹಾಡನ್ನು ಹಾಡುವನು. ತನ್ನ ಜನರ ಬಗ್ಗೆ ದೇವರು ಹಾಡುವನು ಎಂದು ಸತ್ಯವೇದ ಇಲ್ಲಿ ಹೇಳುತ್ತದೆ. ದೇವರಿಗೆ ಸ್ತುತಿಗೀತೆಯನ್ನು ನಾವು ಹಾಡಬೇಕೆಂದು ಅನೇಕ ಸ್ಥಳಗಳಲ್ಲಿ ನಮಗೆ ಬೋಧಿಸಲಾಗಿದೆ. ಆದರೆ ಇಲ್ಲಿ ದೇವರು ನಮಗಾಗಿ ಹಾಡನ್ನು ಹಾಡುವವರಾಗಿದ್ದಾರೆ. ದೇವರು ಸಂತೊಷಪಡುವ ವ್ಯಕ್ತಿಯಾಗುವಂಥದ್ದು ಎಂಥಹ ಒಂದು ಪಂಥಾಹ್ವಾನ.
  • • "ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ಮುಣುಗಿ ಮೌನವಾಗಿರುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು ಎಂದು ಹೇಳೋಣವಾಗುವುದು" (ಚೆಫನ್ಯ 3:17). ಕರ್ತನು ಪ್ರೀತಿಯಿಂದ ನಮಗಾಗಿ ಯೋಜನೆಗಳನ್ನು ಮಾಡುತ್ತಾನೆ ಮಾತು ಬರುವ ದಿನಗಳಲ್ಲಿ ಆತನು ಸಂತೋಷದ ಆಶ್ಚರ್ಯಗಳನ್ನು ನಮಗಾಗಿ ಯೋಜಿಸಿದ್ದಾನೆ; ಯಾಕೆಂದರೆ ಆತನು ನಮ್ಮ ಪ್ರೀತಿಮಯ ತಂದೆಯಾಗಿದ್ದಾನೆ.
  • • "ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವನಿಗೆ ತಕ್ಕದ್ದನ್ನು ಮಾಡುವೆನು. ನಿನ್ನಲ್ಲಿ ಕುಂಟುವವರನ್ನು ಉದ್ಧರಿಸುವೆನು....ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರಕೀರ್ತಿಗಳನ್ನು ಉಂಟುಮಾಡುವೆನು...ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾದುವೆನು (ಚೆಫನ್ಯ 3:19, 20). ತಮ್ಮಲ್ಲಿ ಬಲಹೀನ ಮತ್ತು ನಿಸ್ಸಹಾಯಕರಾಗಿರುವವರು ಉಳಿದಿರುವ ಜನರಾಗಿರುತ್ತಾರೆ. ಕರ್ತನೇ ಅವರ ವೈರಿಗಳೊಡನೆ ಹೋರಾಡುವನು ಮತ್ತು ಆತನೇ ಅಂತಿಮ ದಿನದಲ್ಲಿ ತನ್ನ ಜನರಿಗೆ ಮಹಿಮೆಯನ್ನು ಕೊಡುವನು.