WFTW Body: 

ಯೆರೆಮೀಯ 3:14,15 ರಲ್ಲಿ, ದೇವರು ಈ ರೀತಿ ವಾಗ್ದಾನ ಮಾಡುತ್ತಾರೆ. "ಒಂದು ಪಟ್ಟಣಕ್ಕೆ ಒಬ್ಬನಂತೆಯೂ, ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರೆತರುವೆನು. ಇದಲ್ಲದೇ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನ ವಿವೇಕಗಳಿಂದ ಪೋಷಿಸುವರು".

"ಚಿಯೋನ್" ಎಂಬುದು ಜೀವಿಸುವ ದೇವರ ನಿಜವಾದ ಸಭೆಯನ್ನು ಬಿಂಬಿಸುತ್ತದೆ. ದೇವರು ಪಟ್ಟಣದೊಳಗಿಂದ ಒಬ್ಬರನ್ನು ಮತ್ತು ಗೋತ್ರ(ಕುಟುಂಬ)ದಿಂದ ಇಬ್ಬರಂತೆಯೂ ತನ್ನ "ಚೀಯೋನಿ"ಗೆ ಕರೆತರುತ್ತಾರೆ ಮತ್ತು ನಾವು ಈ ಚೀಯೋನಿಗೆ ಬಂದಾಗ, ಅಲ್ಲಿ ದೇವರು ಕಟ್ಟುತ್ತಿರುವಂತಹ ಸಭೆಯಲ್ಲಿ, ಆತನ ಮನಸ್ಸು ಒಪ್ಪುವಂತಹ ಪಾಲಕರನ್ನು ಕೊಡುತ್ತೇನೆಂದು ದೇವರು ವಾಗ್ದಾನ ಮಾಡಿದ್ದಾರೆ. ಆ ಪಾಲಕರು ನಮಗೆ ದೇವರ ಜ್ಞಾನವನ್ನು (ಸತ್ಯವೇದದ ಜ್ಞಾನ ಮಾತ್ರವಲ್ಲ) ಮತ್ತು ದೇವರ ಮಾರ್ಗಗಳ ವಿವೇಕವನ್ನು (ತಿಳುವಳಿಕೆಯನ್ನು) ಕೊಟ್ಟು ಪೋಷಿಸುತ್ತಾರೆ (ಕೇವಲ ಸಿದ್ಧಾಂತದ ವಿವೇಕವಲ್ಲ).

ದೇವರ ನಿಜವಾದ ಸಭೆಯ ಪ್ರಾಥಮಿಕ ಗುರುತೇನೆಂದರೆ : ಆ ಸಭೆಯು ದೇವರ ಮನಸ್ಸು ಒಪ್ಪುವಂತಹ ಪಾಲಕರುಗಳನ್ನು ಹೊಂದಿರುತ್ತದೆ.

ದೇವರು ಪ್ರೀತಿಯಾಗಿದ್ದಾನೆ ಮತ್ತು ಪ್ರೀತಿಯ ಪ್ರಾಥಮಿಕ ಗುರುತೇನೆಂದರೆ, ಅದು ತನ್ನದನ್ನು (ಸ್ವಾರ್ಥ) ಕಂಡುಕೊಳ್ಳುವುದಿಲ್ಲ. ಹಾಗಾಗಿ, ದೇವರ ಮನಸ್ಸು ಒಪ್ಪುವಂತಹ ಪಾಲಕರು ಯಾರೆಂದರೆ, ಅವರು ತಮ್ಮದನ್ನೇ (ಸ್ವಾರ್ಥ) ಕಂಡುಕೊಳ್ಳುವುದಿಲ್ಲ. ಇಂತಹ ಪಾಲಕರು ಯಾರಿಂದಲೂ ಹಣವನ್ನಾಗಲಿ ಅಥವಾ ಗೌರವವನ್ನಾಗಲಿ ಹುಡುಕುವುದಿಲ್ಲ. ಅವರು ಮನುಷ್ಯರನ್ನು ಮೆಚ್ಚಿಸುವುದನ್ನಾಗಲಿ ಅಥವಾ ತಮ್ಮನ್ನು ಮನುಷ್ಯರ ಮುಂದೆ ತೋರ್ಪಡಿಸುವುದನ್ನಾಗಲಿ ಮಾಡುವುದಿಲ್ಲ. ಇದರ ಬದಲಾಗಿ, "ದೇವರ ಮುಂದೆ ಎಲ್ಲರನ್ನು ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವಂತೆ" (ಕೊಲೊಸ್ಸೆ. 1:28) ದೇವರ ಸಭೆಯನ್ನು ಅವರು ಕಟ್ಟುತ್ತಾರೆ. ಎಲ್ಲಾದರೂ, ಯಾವುದೇ ಊರಿನಲ್ಲಾಗಲಿ ಅಥವಾ ಲೋಕದ ಯಾವುದೇ ಗ್ರಾಮದಲ್ಲಾಗಲಿ ದೇವರು ಈ ರೀತಿಯ ಬಯಕೆಯನ್ನು ಹೊಂದಿದವರನ್ನು ನೋಡುವಾಗ ಅವರ ಮೂಲಕ ತನ್ನ ಸಭೆಯನ್ನು ಕಟ್ಟುತ್ತಾನೆ.

ಮತ್ತೊಂದು ಕಡೆ, ಅನೇಕ ಕ್ರೈಸ್ತರು ಪ್ರಮುಖ ಕ್ರೈಸ್ತ ಪಂಗಡಗಳನ್ನು ಬಿಟ್ಟು, "ಹೊಸ ಒಡಂಬಡಿಕೆಯ ಮಾದರಿ"ಯನ್ನು ಅನುಸರಿಸಲು ಪ್ರಯತ್ನಿಸುವ ಸಭೆಯನ್ನು ಕಟ್ಟುತ್ತಾರೆ. ಅವರ ಸಿದ್ಧಾಂತಗಳೆಲ್ಲವು ಸರಿಯಾಗಿಯೇ ಇರುತ್ತವೆ. ಆದರೆ ಅವರು ಹಣವನ್ನು ಪ್ರೀತಿಸುವವರು ಮತ್ತು ಅವರು ತಮ್ಮದನ್ನೇ(ಸ್ವಾರ್ಥ) ನೋಡಿಕೊಳ್ಳುವವರಾಗಿರುತ್ತಾರೆ. ಹೀಗಿದ್ದರೂ ತಾವು ಕ್ರಿಸ್ತನ ದೇಹವನ್ನು ಕಟ್ಟುತ್ತಿದೇವೆಂದು ಅವರು ಕಲ್ಪಿಸಿಕೊಳ್ಳುತ್ತಾರೆ. ಅವರ ಶ್ರಮದ ಫಲಿತಾಂಶವೇನೆಂದರೆ - ಗೊಂದಲ ಮತ್ತು ಗಲಿಬಿಲಿ ಮತ್ತು ಕೊನೆಯದಾಗಿ ಅವರ ಶ್ರಮದಿಂದ ಯಾವಾಗಲೂ ಕಟ್ಟುವಂತದ್ದು ಬ್ಯಾಬಿಲೋನೇ ಆಗಿರುತ್ತದೆ.

ತನ್ನದನ್ನೇ(ಸ್ವಾರ್ಥ) ನೋಡಿಕೊಳ್ಳದಿರುವಂತ ಒಬ್ಬ ಮನುಷ್ಯನನ್ನು ದೇವರು ಎಲ್ಲಿಯಾದರೂ ನೋಡಿದಾಗ ಮಾತ್ರ, ದೇವರು ತನ್ನ ನಿಜವಾದ ಸಭೆಯನ್ನು ಅವರ ಮುಖಾಂತರ ಕಟ್ಟುತ್ತಾನೆ. ಈ ರೀತಿಯಾಗಿ ಒಬ್ಬ ಮನುಷ್ಯನು ಜನಗಳೊಂದಿಗೆ ದೇವರ ಹೃದಯದ ಕಾಳಜಿಯನ್ನು ಹಂಚಿಕೊಳ್ಳುತ್ತಾನೆ. ಇಂತಹ ಪಾಲಕರುಗಳು, ತಮನ್ನ(ಸ್ವಾರ್ಥ) ತಾವು ನೋಡಿಕೊಳ್ಳುವಂತಹ 1000 ವಿಶ್ವಾಸಿಗಳಿಗಿಂತ ದೇವರಿಗೆ ಅತಿ ಅಮೂಲ್ಯರಾಗಿರುತ್ತಾರೆ.

ದೇವರ ಮನಸ್ಸು ಒಪ್ಪುವಂತಹ ಪಾಲಕನಲ್ಲಿ ತ್ಯಾಗ, ಅನಾನುಕೂಲತೆ ಮತ್ತು ಯಾತನೆಯು ಒಳಗೊಂಡಿರುತ್ತದೆ. ಇದರ ಅರ್ಥವೇನೆಂದರೆ, ತಪ್ಪಾಗಿ ಅರ್ಥೈಸಿಕೊಳ್ಳುವುದರಲ್ಲಿ, ವಿರೋಧಗಳನ್ನು, ಪರಿಹಾಸ್ಯವನ್ನು ಮತ್ತು ದೂರು (ನಿಂದೆ)ಗಳನ್ನು ಸಂತೋಷವಾಗಿ ಸ್ವೀಕರಿಸಿಕೊಂಡು ಸಂಕಟಪಡುವವನಾಗಿದ್ದಾನೆ ಮತ್ತು ಒಂದು ವೇಳೆ ಇಂತಹ ಪಾಲಕನು, ತನ್ನದನ್ನ (ಸ್ವಾರ್ಥ) ನೋಡಿಕೊಳ್ಳದ ಹೆಂಡತಿಯನ್ನು ಹೊಂದಿದ್ದರೆ, ಅದು ಆಶೀರ್ವಾದದಾಯಕವಾದದ್ದಾಗಿದ್ದು, ದೇವರು ಬಯಸುವಂತದ್ದನ್ನು ಮಾಡಲು ಅವರ ಮನೆಗಳನ್ನು ಕರ್ತನಿಗಾಗಿ ತೆರೆದಿಟ್ಟಿರುತ್ತಾರೆ. ಆಗ ಅವರ ಜೀವಿತದ ಮುಖಾಂತರ ದೇವರು ಯಾವುದೇ ಕಡಿಮೆಯಿಲ್ಲದಂತೆ ಕಾರ್ಯ ಮಾಡುತ್ತಾನೆ.

ನಾನೀಗ ಅನೇಕ ಜನರು ಸೇರಿ ಬರುವುದರ ಬಗ್ಗೆ ಮಾತನಾಡುತ್ತಿಲ್ಲ. ಸಂಖ್ಯೆಗಳು ದೇವರ ಆಶಿರ್ವಾದದ ಗುರುತಲ್ಲ. ನಮಗೆ ಗೊತ್ತಿರುವಂತೆ, ಅನೇಕ ಸುಳ್ಳು ಬೋಧಕರ ಗುಂಪು ಎಲ್ಲ ಸಭೆಗಳಿಗಿಂತ ಹೆಚ್ಚಿನದ್ದಾಗಿರುತ್ತದೆ. ಅದು ಏನನ್ನು ಸಾಕ್ಷಿಕರಿಸಲು ಸಾಧ್ಯವಿಲ್ಲ. ಆದರೆ ನಾನೀಗ ಗುಣಮಟ್ಟದ ಬಗ್ಗೆ ಮಾತನಾಡುತ್ತಿದ್ದೇನೆ., ಪ್ರತಿಯೊಬ್ಬ ಸದಸ್ಯನು ದೇವರ ವೈಯುಕ್ತಿಕ ಜ್ಞಾನದೊಳಗೆ ಬರುವ ಮೂಲಕ ಕ್ರಿಸ್ತನ ದೇಹವನ್ನು ಕಟ್ಟುತ್ತಾನೆ.

ಈ ರೀತಿಯ ಬೆಳವಣಿಯಿಲ್ಲದಂತ ಒಂದು ಗುಂಪು ಸ್ಥಳೀಯ ಪ್ರದೇಶದಲ್ಲಿ, ಒಬ್ಬ ಕುರುಡ ಮನುಷ್ಯನು ಮಿಕ್ಕ ಅನೇಕ ಕುರುಡರನ್ನು ಗುಂಡಿಯೊಳಕ್ಕೆ ಬಿಳಿಸಲು ನಡೆಸುವ ರೀತಿಯಲ್ಲಿರುತ್ತದೆ. ಅವರ ಎಲ್ಲಾ ಪ್ರಾರ್ಥನಾ ಕೂಟಗಳು ಗುಂಡಿಯೊಳಗೆ ಇರುತ್ತವೆ. ಅವರ ಸತ್ಯವೇದ ಅಧ್ಯಯನ ಕೂಡ ಗುಂಡಿಯೊಳಗೆ ಇರುತ್ತದೆ ಮತ್ತು ಅವರ ಸಮ್ಮೇಳನ ಕೂಟಗಳೂ ಸಹ ಗುಂಡಿಯಲ್ಲಿರತ್ತವೆ!!

ಯೇಸುವಿನ ಸಮಯದಲ್ಲಿ, ಆತನು ಸುತ್ತಮುತ್ತ ನೋಡಿದನು ಮತ್ತು ಜನರು ಕುರುಬನಿಲ್ಲದ ಕುರಿಗಳಾಗಿದ್ದಾರೆಂದು ಹೇಳಿದನು. ಇಂದು ಸಹ ಇದೇ ನಡೆಯುತ್ತಿದೆ.

ಇದು ತುಂಬಾ ಅಗತ್ಯವಾಗಿರುವಂತದ್ದಾಗಿದೆ - ದೇವರ ಮನಸ್ಸು ಒಪ್ಪುವಂತಹ ಪಾಲಕರುಗಳೆಂದರೆ ಸಭೆಯ ಹಿರಿಯನಾಗಿರುವುದು ಎಂಬುದರ ಬಗ್ಗೆ ನಾನು ಮಾತನಾಡುತ್ತಿಲ್ಲ. ಇಲ್ಲ. ಅನೇಕ ಸಂಖ್ಯೆಯಲ್ಲಿರುವಂತಹ ಸಭೆಗಳು ಅನೇಕ ಪಾಲಕರುಗಳನ್ನು ಹೊಂದಿರುವ ಅಗತ್ಯತೆ ಇದೆ. ಆ ಪಾಲಕರ ಹೃದಯವು ದೇವರ ಜನರಿಗಾಗಿ ಕಾಳಜಿ ವಹಿಸುತ್ತದೆ. ಇಂತಹ ಜನರು ಸಭೆಯ ಹಿರಿಯರಾಗಿರುವುದಿಲ್ಲ. ಆದರೆ ಅವರು ಸಭೆಯಲ್ಲಿರುವವರನ್ನು ಪೋಷಿಸುತ್ತಾರೆ ಮತ್ತು ಕುರಿಗಳನ್ನು ಪ್ರೋತ್ಸಾಯಿಸುತ್ತಾರೆ ಮತ್ತು ಅವರ ಸೇವೆಯನ್ನು ಸಂತೋಷವಾಗಿ ಮಾಡುತ್ತಾರೆ.