ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಪುರುಷರಿಗೆ
WFTW Body: 

ದೇವರ ಕಾರ್ಯದಲ್ಲಿ ನಾವು ಬಹಳ ಗೊಂದಲವನ್ನು ಸೃಷ್ಠಿಸುತ್ತೇವೆ ಮತ್ತು ಯಾವಾಗ ನಾವು ಮಾನವನ ತರ್ಕ(ಬುದ್ದಿ)ವನ್ನು ನಮ್ಮ ಸ್ವಂತ ಜೀವಿತದಲ್ಲಿ ಉಪಯೋಗಿಸುವಾಗ, ನಮ್ಮ ಸ್ವಂತ ತಿಳುವಳಿಕೆಯ ಮೇರೆಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. 

ದೇವರು ಅಬ್ರಹಾಮನಿಗೆ ‘’ಆಕಾಶದ ಕಡೆಗೆ ನೋಡು; ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷ್ಟಾಗುವುದು” ಎಂದು ಹೇಳಿದನು. ಅಬ್ರಹಾಮನ ಹೆಂಡತಿಯಾದ ಸಾರಳಿಗೆ ಮಕ್ಕಳಿರಲಿಲ್ಲ. ಸಾರಳು ಐಗುಪ್ತಳಾದ ಹಾಗರಳೆಂಬ ದಾಸಿಯನ್ನು ಕರೆದು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು ಮತ್ತು ಹಾಗರಳು ಅಬ್ರಹಾಮನಿಂದ ಇಷ್ಮಾಯೇಲನನ್ನು ಹೆತ್ತಳು. ಅಬ್ರಹಾಮನು ದೇವರಿಗೆ, ಇಷ್ಮಾಯೇಲನು ನಿನ್ನ ದಯೆ ಹೊಂದಿ ಬಾಳಲಿ ಎಂದು ಹೇಳುತ್ತಾನೆ. ಆದರೆ ದೇವರು ``ಹಾಗಲ್ಲ, ನಿನ್ನ ಪತ್ನಿಯಾದ ಸಾರಳಲ್ಲಿಯೇ ನಿನ್ನಿಂದ ಮಗನು ಹುಟ್ಟುವನು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು’’ ಎಂಬುದಾಗಿ ಹೇಳುತ್ತಾರೆ. (ಆದಿಕಾಂಡ 15:5, 16:1,3,16, 17:18,19) .

ಸಾರಳು ಬಂಜೆಯಾಗಿದ್ದರೂ ಸಹ, ಅಬ್ರಹಾಮನು ಲೆಕ್ಕವಿಲ್ಲದಷ್ಟು ನಕ್ಷತ್ರಗಳಿಗೆ ಸಮಾನವಾದ ಸಂತಾನಕ್ಕೆ ಮೂಲವಾಗುತ್ತಾನೆ ಎಂಬುದಾಗಿ ದೇವರು ಮಾಡಿದ್ದ ವಾಗ್ದಾನವು ಒಂದು ವೇಳೆ ನೆರವೇರಿಸಲ್ಪಡದಿದ್ದರೆ, ದೇವರ ನಾಮವು ಅಗೌರವಿಸಲ್ಪಡುವುದು ಎಂದು ಅಬ್ರಹಾಮ ಮತ್ತು ಸಾರಳು ಇಬ್ಬರು ಭಯಪಟ್ಟರು ಮತ್ತು ಇಂಥಹ ಕಠಿಣ ಪರಿಸ್ಥಿತಿಯಿಂದ ಹೊರ ಬಂದು, ದೇವರಿಗೆ ಸಹಾಯ ಮಾಡುವ ಸಲುವಾಗಿ, ಸಾರಳ ಸಲಹೆಯ ಮೇರೆಗೆ, ಅಬ್ರಹಾಮನು ಮತ್ತೊಬ್ಬ ಹೆಂಡತಿಯನ್ನು ಕರೆತಂದನು ಮತ್ತು ಆಕೆಯ ಮುಖಾಂತರ ಮಗನನ್ನು ಪಡೆದನು.

`ದೇವರಿಗೆ ಇಂತಹ ಸಹಾಯದ ಅಗತ್ಯತೆ ಇರಲಿಲ್ಲ’ ಎಂಬುದಾಗಿ ಅಬ್ರಹಾಮನು ಏಕೆ ಗ್ರಹಿಸಲಿಲ್ಲ. ಆತನು ಇಷ್ಮಾಯೇಲನನ್ನು ಪಡೆದು, ದೇವರಿಗೆ ಸಹಾಯವನ್ನು ಮಾಡಲು ಪ್ರಯತ್ನಿಸಿದ್ದರಿಂದ, ಆತನ ಹೆಂಡತಿಗೆ ಮಾತ್ರವಲ್ಲದೇ, ಆತನ ಮಗನಾದ ಇಸಾಕನಿಗೂ ಮತ್ತು ಆತನ ಸಂತತಿಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡಿದನು.

  

ನಮ್ಮ ಸಹಾಯವಿಲ್ಲದೇ, ದೇವರ ವಾಗ್ದಾನವು ನೆರವೇರಿಸಲ್ಪಡುವುದಿಲ್ಲವೆಂದು ಹೇಗೆ ನಾವು ಹಲವು ಬಾರಿ ಭಾವಿಸುತ್ತೇವೆ. ದೇವರು ನಮಗೆ ನಡೆಯಬೇಡ ಮತ್ತು ಕೆಲಸ ಮಾಡಬೇಡ ಎಂದು ಹೇಳದಿದ್ದರೂ, ನಾವು ನಡೆಯುತ್ತೇವೆ ಮತ್ತು ಕೆಲಸ ಮಾಡುತ್ತೇವೆ. ದೇವರು ನಮಗೆ ಅಪ್ಪಣೆ ಕೊಡುವ ತನಕ, ಸಾಕಾದಷ್ಟು ಕಾಯುವಿಕೆಯಲ್ಲಿ ನಂಬದೇ, ದೇವರ ಕಾರ್ಯವನ್ನು ಮಾಡಲು ಮಾನವನು ಮಾಡಿದಂಥ ಯೋಜನೆಗಳಲ್ಲಿ ಮತ್ತು ಪರಿಶ್ರಮಗಳಲ್ಲಿ ನಾವು ನಂಬಿಕೆ ಇಡುತ್ತೇವೆ.

“ಯೇಸುವು ತಮ್ಮ ಜೀವಿತದಲ್ಲಿ ತನ್ನ ತಂದೆಯ ಚಿತ್ತ ಮತ್ತು ಮಾರ್ಗದರ್ಶನವನ್ನು ಹುಡುಕದೇ, ಏನನ್ನೂ ಮಾಡುತ್ತಿರಲಿಲ್ಲ’’ (ಯೋಹಾನ 5:19,30) ಆದರೆ ಎಷ್ಟೋ ವಿಶ್ವಾಸಿಗಳು ಈ ರೀತಿ ದೇವರ ಚಿತ್ತವನ್ನೂ ಮಾರ್ಗದರ್ಶನವನ್ನೂ ಹುಡುಕುವುದಿಲ್ಲ. ಏಕೆಂದರೆ ದೇವರಿಗಿಂತ ಹೆಚ್ಚಾಗಿ ಅವರಲ್ಲೇ ನಂಬಿಕೆ ಇಟ್ಟಿರುತ್ತಾರೆ.

ನಮ್ಮ ಪ್ರಾರ್ಥನೆಯಲ್ಲಿನ ಕೊರತೆ ಮತ್ತು ನಮ್ಮ ಸ್ವಂತ ತಿಳುವಳಿಕೆಯ ಮೇಲಿನ ಒಲವು (ಅಥವಾ ಹೆಂಡತಿಯ ತಿಳುವಳಿಕೆ, ಮೇಲಿನ ಅಬ್ರಹಾಮನ ಸಂಗತಿಯಂತೆ) ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿರುವುದರಿಂದ, ನಮ್ಮ ಮನೆಗಳಲ್ಲಿ ಮತ್ತು ದೇವರ ಕೆಲಸಗಳಲ್ಲಿ ಅದು ಗೊಂದಲವನ್ನು ತರುತ್ತದೆ.

ದೇವರು ಮೋಶೆಗೆ “ಕಡಿದಾದ ಬಂಡೆಗೆ ನೀರು ಕೊಡಬೇಕೆಂದು ಅಜ್ಞಾಪಿಸು” ಎಂದು ಹೇಳಿದ ನಂತರವೂ, ಮೋಶೆಯು ತನ್ನ ಕೈಯಲ್ಲಿರುವ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ದೇವರು ಮೋಶೆಗೆ “ನೀವು ನನ್ನನ್ನು ನಂಬದವರಾಗಿರುವುದರಿಂದ, ಈ ಸಮೂಹದವರನ್ನು ನಾನು ಅವರಿಗೆ ವಾಗ್ದಾನ ಮಾಡಿದ ದೇಶದೊಳಕ್ಕೆ ಕರಕೊಂಡು ಹೋಗಕೂಡದು ಎಂದು ಹೇಳಿದನು” (ಅರಣ್ಯಕಾಂಡ 20:7-13) .

ದೇವರು ಮೋಶೆಗೆ ‘ಕಡಿದಾದ ಬಂಡೆಗೆ ಆಜ್ಞಾಪಿಸು’ ಎಂಬುದಾಗಿ ಮಾತ್ರ ಹೇಳಿದರು. ಆದರೆ ಮೋಶೆಯು ದೇವರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ, ಕಡಿದಾದ ಬಂಡೆಗೆ ಎರಡು ಬಾರಿ ಹೊಡೆದನು. ನಿಜವಾಗಿಯೂ ಹೇಳಬೇಕೆಂದರೆ, ಮೃದುವಾಗಿ ಹೊಡೆಯುವುದಕ್ಕಿಂತ (ಒಂದು ಬಾರಿ) ಗಟ್ಟಿಯಾಗಿ ಹೊಡೆಯುವುದು (ಎರಡು ಬಾರಿ) ಮಾನವ ಜನಾಂಗದ ಉದ್ದೇಶ ಎಂಬುದು ಎಷ್ಟು ಸತ್ಯ. ಆತನು ನಮಗೆ ಮೃದುವಾಗಿರಲು ಆಜ್ಞಾಸಿದರೂ ಸಹ, ದೇವರ ಉದ್ದೇಶಗಳು ವೇಗವಾಗಿ ನೆರವೇರಿಸಲ್ಪಡುವುದರ ಜೊತೆಗೆ ಸ್ವಲ್ಪ ಮನುಷ್ಯನ ಗಟ್ಟಿತನವು ಬೇಕು ಎಂಬುದಾಗಿ ನಾವು ಭಾವಿಸುತ್ತೇವೆ. (ಮತ್ತಾಯ 11:28,29) . ಆದರೆ ಆತನು ದಯಾಳುತ್ವದ ಮೂಲಕ ದೇವರು ತನ್ನ ಜನರನ್ನು ಪಶ್ಚಾತ್ತಾಪದ ಕಡೆಗೆ (ದೇವರ ಕಡೆಗೆ) ಮುನ್ನಡೆಸುತ್ತಾನೆ (ರೋಮಾ. 2:4) .

ಈ ನಿಮಿತ್ತದಿಂದ ದೇವರು ಆತನಿಗೆ ಕಡಿದಾದ ಬಂಡೆಗೆ ಹೊಡೆ ಎಂದು ಹೇಳುವುದಕ್ಕೆ ಮೊದಲು, ಪ್ರತಿಯೊಂದು ಸಮಯದಲ್ಲಿಯೂ ಇದು ಅದರಂತೆ ಇರಬಹುದೆಂದು ಮೋಶೆಯು ಭಾವಿಸಿದ್ದಿರಬಹುದು (ವಿಮೋಚನಕಾಂಡ 17:6) . ಅದೇ ರೀತಿ ಪವಿತ್ರಾತ್ಮರು ತಾವು ಮುಂಚಿತವಾಗಿ ಅಥವಾ ಬೇರೆಕಡೆ ಮಾಡಿದ್ದ ಹಾದಿಯಲ್ಲಿಯೇ ಯಾವಾಗಲೂ ಕಾರ್ಯ ಮಾಡಬೇಕು ಎಂಬುದಾಗಿ ಅನೇಕರು ಕಲ್ಪಿಸಿಕೊಳ್ಳುತ್ತಾರೆ ಮತ್ತು ಅವರು ‘’ಪುನರುಜ್ಜೀವನ’’ ತರುವುದು, ``ಕಾಯಿಲೆಯನ್ನು’’ ``ಗುಣಪಡಿಸುವುದು’’ ಮತ್ತು “ಅನ್ಯ ಭಾಷೆಯಲ್ಲಿ’’ ಮಾತನಾಡಲು ಜನರನ್ನು ಕರೆತರುವುದರ ಮುಖಾಂತರ ಮನೋವೈಜ್ಞಾನಿಕ ಗಿಮಿಕ್ಸ್ನು ಜೊತೆ ಆತನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಪವಿತ್ರಾತ್ಮನು ಭಿನ್ನವಾದ ಸಮಯದಲ್ಲಿ ಭಿನ್ನವಾಗಿ ಕಾರ್ಯಮಾಡುತ್ತಾನೆ ಮತ್ತು ಆತನ ವರಗಳನ್ನು ಸ್ಪಷ್ಟವಾಗಿ ತೋರಿಸುವುದರಲ್ಲಿ ಯಾವುದೇ ಸ್ವಾರ್ಥದ ಸಹಾಯದ ಅಗತ್ಯತೆಯಿಲ್ಲ ಎಂಬುದಾಗಿ ಅವರು ಏನನ್ನೂ ಗ್ರಹಿಸಿಕೊಳ್ಳುವುದಿಲ್ಲ.

“ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು. ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಈ ತಪ್ಪಿನ ಸಲುವಾಗಿ ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು” (2 ಸಮುವೇಲನು 6:6,7) .

ಉಜ್ಜನ ಉದ್ದೇಶ ಒಳ್ಳೆಯದಾಗಿತ್ತು. ದೇವರ ಸಾಕ್ಷಿಗೆ ಇದ್ದಂತಹ ಮಂಜೂಷವು ಕೆಳಗೆ ಬೀಳುತ್ತಿದ್ದದ್ದನ್ನು ಕಾಪಾಡುವುದು ಆತನ ಬಯಕೆಯಾಗಿತ್ತು. ಆದರೆ ಆತನು ಲೇವಿ ಆಗಿರಲಿಲ್ಲ ಮತ್ತು ಆ ಮಂಜೂಷವನ್ನು ಮುಟ್ಟಲು ಆತನಿಗೆ ಹಕ್ಕಿರಲಿಲ್ಲ. ಆತನು ತನ್ನ ಎಲ್ಲೆ (ಸರಹದ್ದು)ಮೀರಿ ಹೊರಗೆ ಹೋದನು. ಇದು ತುಂಬಾ ಗಂಭೀರವಾದ ವಿಷಯ. ದೇವರು ಆತನನ್ನು ಹತ ಮಾಡಿದನು. ನಾವು ದೇವರ ಧರ್ಮಶಾಸ್ತ್ರದ ಜೊತೆಗೆ ಲಘುವಾಗಿ ವರ್ತಿಸಲಾಗುವುದಿಲ್ಲ.

ಅದೇ ರೀತಿ ಸಭೆಯಲ್ಲಿಯೂ ಸಹ, ದೇವರು ಭಿನ್ನವಾದ ಜವಾಬ್ದಾರಿಗಳನ್ನು ಭಿನ್ನವಾದ ವ್ಯಕ್ತಿಗಳಿಗೆ ಕೊಟ್ಟಿರುತ್ತಾರೆ ಮತ್ತು ಪ್ರತಿಯೊಬ್ಬರ ಸುತ್ತಲು ಒಂದು ಎಲ್ಲೆಯನ್ನು ಹಾಕಿರುತ್ತಾರೆ. ಕೆಲವೊಂದು ನಿಯಮಿತ ಪ್ರದೇಶದಲ್ಲಿ ಕೊರತೆಯನ್ನು ನೋಡುವಾಗ ಮತ್ತು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದರಿಂದ ದೇವರಿಗೆ ಸಹಾಯ ಮಾಡಲು ಹುಡುಕುತ್ತೇವೆ. ಒಂದು ವೇಳೆ ಇದನ್ನು ಮಾಡಲು ನನ್ನನ್ನು ಆತ್ಮವು ನಡೆಸುತ್ತಿದೆಯೆ? ಅಥವಾ ನಮ್ಮ ಸ್ವಂತ ಮಾನವ ತರ್ಕ(ಬುದ್ದಿ)ವು ಅದರ ಬಗ್ಗೆ ಏನಾದರೂ ಮಾಡಲು ಒತ್ತಾಯಪಡಿಸುತ್ತಿದೆಯೇ? ಎಂಬುದಾಗಿ ಮೊದಲು ನಮ್ಮನ್ನ ನಾವೇ ಕೇಳಿಕೊಳ್ಳಬೇಕು. ಒಂದು ವೇಳೆ ನಮಗೆ ಬೇಡವಾದರೂ, ದೇವರು ಪ್ರತಿಯೊಂದು ಎಲ್ಲೆಯನ್ನು ಗೌರವಿಸುತ್ತಾನೆ ಮತ್ತು ದೇವರಿಗೆ ನಮ್ಮಿಂದ ಯಾವುದೇ ಸಹಾಯದ ಅಗತ್ಯತೆ ಇಲ್ಲ. ಆತನು ನಮ್ಮ ಸುತ್ತಮುತ್ತಲು ಎಲ್ಲೆಯ ಹೊರ ಭಾಗವನ್ನು ಇಟ್ಟಿದ್ದಾನೆ. ಆ ಎಲ್ಲೆಯೊಳಗೆ ಮಾತ್ರ ನಾವು ದೇವರನ್ನು ಹುಡುಕಬಹುದು (ಅಪೋಸ್ತಲರ ಕೃತ್ಯಗಳು 17:26,27) . ಅದರ ಹೊರಭಾಗದಲ್ಲಿ ನಾವು ಸೈತಾನನ್ನು ಕಂಡುಕೊಳ್ಳುತ್ತೇವೆ (ಪ್ರಸಂಗಿ 10:8) . ಮೇಲ್ಕಂಡ ನಾನಾವಿಧವಾದ ಉದಾಹರಣೆಗಳಲ್ಲಿನ ಮೂಲತತ್ವದ ಮುಖ್ಯ ಅಂಶಗಳನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳೋಣ. ನಮ್ಮ ಸ್ವಂತ ಜೀವಿತ ಮತ್ತು ಸೇವೆಯ ವಿಷಯವಾಗಿ ಸಂಬಂಧಿಸಿದಂತೆ ಬೆಳಕನ್ನು ಕೊಡೆಂದು ದೇವರಲ್ಲಿ ಕೇಳಿಕೊಳ್ಳೋಣ.