WFTW Body: 

ಇದು ಪ್ರಕಟಣೆ 14:4 ರಲ್ಲಿ ಬರೆದಿದೆ : - "ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ; ಇವರು ಕನ್ಯೆಯರಂತೆ ನಿಷ್ಕಳಂಕರು. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮ ಫಲದಂತಾಗುವರು".

ಈ ವಚನದಲ್ಲಿ, ದೈಹಿಕ ಪರಿಶುದ್ಧತೆ ಅಥವಾ ದೈಹಿಕ ಜಾರತ್ವದ ಬಗ್ಗೆ ಪ್ರಸ್ತಾಪಿಸಿಲ್ಲ. ಬಾಬೆಲೆಂಬ ಮಹಾನಗರಿ, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ ಎಂದು ಪ್ರಕಟಣೆ 17:5 ರಲ್ಲಿ ಒಂದು ಸಲ ನಮೂದಿಸುವ ಮೂಲಕ ಸ್ತ್ರೀ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ.

ಈ 1,44,000 ಮಂದಿಯು ಆತ್ಮೀಕ ಜಾರತ್ವಕ್ಕೆ ಕಟ್ಟುಬಿದ್ದಿಲ್ಲ ಎಂದು ಈ ವಾಕ್ಯವು ಪ್ರಾರಂಭವಾಗುತ್ತದೆ. ಅವರು ತಮ್ಮನ್ನ ತಾವು ಕ್ರಿಸ್ತನಿಗೋಸ್ಕರ ಅಪ್ಪಟ್ಟ ಪರಿಶುದ್ಧರಾಗುವುದರ ಮೂಲಕ ನಿರ್ಮಲರಾಗಿಟ್ಟುಕೊಂಡಿದ್ದರು, ಅವರು ಲೋಕದ ಮತ್ತು ಶರೀರದೊಟ್ಟಿಗಿನ ಆತ್ಮೀಕ ವ್ಯಭಿಚಾರದಿಂದ ಅಪವಿತ್ರಗೊಳಿಸಿಕೊಂಡಿರಲಿಲ್ಲ. ಆತ್ಮೀಕ ವ್ಯಭಿಚಾರವು ಯಾಕೋಬ 4:4 ರಲ್ಲಿ ವಿವರಿಸಲ್ಪಟ್ಟಿದೆ. "ವ್ಯಭಿಚಾರಿಗಳು ನೀವು; ಇಹಲೋಕ ಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ?" ಇಂಥಹವರುಗಳು ಶೋಧನೆಯ ಸಮಯದಲ್ಲಿ ನಂಬಿಗಸ್ಥರಾಗಿದ್ದು, ಲೋಕದವುಗಳಿಂದ ತಮ್ಮನ್ನ ತಾವು ದೂರವಿಟ್ಟುಕೊಂಡಿರುತ್ತಾರೆ. ಇವರು ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಆತನನ್ನು ಹಿಂಬಾಲಿಸುವರು, ಇನ್ನೊಂದು ಅರ್ಥದಲ್ಲಿ, ಅವರು ಪ್ರತಿನಿತ್ಯ ಶಿಲುಬೆಯನ್ನು ಹೊತ್ತರು - ಅದು ಯಜ್ಞದ ಕುರಿಯಾದಾತನು ಈ ಲೋಕದಲ್ಲಿ ನಡೆದಂತೆ ಇವರು ನಡೆದರು.

"ಅವರು ಭೂ ಲೋಕದೊಳಗಿಂದ ಕೊಂಡು ಕೊಳ್ಳಲ್ಪಟ್ಟವರು" ಎಂದು ಮತ್ತೊಂದು ರೀತಿಯಲ್ಲಿ ವ್ಯಕ್ತಪಡಿಸಿರುವುದನ್ನು ಗಮನಿಸಿ. ಪ್ರಕಟಣೆ 14:3 ರಲ್ಲಿ ಅವರು ಲೋಕದಿಂದ ಸ್ವತಂತ್ರಿಸಲ್ಪಟ್ಟವರು ಎಂದು ನಾವು ಗುರುತಿಸಬಹುದು. ಅದು "ಲೋಕದ ನಿವಾಸಿಗಳ" ವಿರುದ್ಧವಾಗಿದ್ದರು. ಅವರು ಲೋಕದಿಂದ ಸ್ವತಂತ್ರಿಸಲ್ಪಟ್ಟವರು. ಅವರು ಭೂಲೋಕದ ಸಂಗತಿಗಳ ನಿಯಂತ್ರಣದಲ್ಲಿರಲಿಲ್ಲ. ಅವರ ಮನಸ್ಸುಗಳನ್ನು ಮೇಲಿನವುಗಳ ಮೇಲೆ ಅಂದರೆ ತಂದೆಯ ಬಲ ಭಾಗದಲ್ಲಿ ಕುಳಿತಿರುವಂತ ಕ್ರಿಸ್ತನ ಕಡೆಗೆ ತಮ್ಮ ಮನಸ್ಸುಗಳನ್ನು ನೆಟ್ಟರು. "ಈ ಲೋಕದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹೇಗೆ ಮಾಡುವುದೆಂದು ಮತ್ತು ನಾನು ಸತ್ತಾಗ ಪರಲೋಕ್ಕೆ ಹೋಗುತ್ತೇನೆಂದು? ಎಷ್ಟು ಸಾಧ್ಯವೋ ಅಷ್ಟು ನೆಮ್ಮದಿಯಿಂದ ಈ ಲೋಕದಲ್ಲಿ ಹೇಗೆ ಜೀವಿಸಲೆಂದು? ಆದರೂ ನಾನು ಸತ್ತ ಮೇಲೆ ಪರಲೋಕಕ್ಕೆ ಹೋಗುತ್ತೇನೆಂದು?" ಹೀಗೆ ಅವರು ಯೋಚಿಸಲಿಲ್ಲ. ಭೂಲೋಕದ ನಿವಾಸಿಗಳು ಇದೇ ಹಾದಿಯಲ್ಲಿ ಯೋಚಿಸುತ್ತಾರೆ. ಆದರೆ ಈ ಜನರು "ನನ್ನ ಭೂಲೋಕದ ಒಂದೇ ಜೀವಿತದಲ್ಲಿ ದೇವರ ಎಲ್ಲಾ ಚಿತ್ತವನ್ನು ಹೇಗೆ ಮಾಡಲೆಂದು? ನನಗೋಸ್ಕರ ಶಿಲುಬೆಯಲ್ಲಿ ಪ್ರಾಣಕೊಟ್ಟ ಕರ್ತನಿಗೆ ನಾನು ಹೇಗೆ ಕೃತಜ್ಞತೆಯನ್ನು ತೋರಿಸಲೆಂದು?" ಹೀಗೆ ಯೋಚಿಸುತ್ತಾರೆ. ಅವರು ರಾಜಿಯಾಗುವುದಿಲ್ಲ, ಅರ್ಧ ಹೃದಯದವರಲ್ಲ, ನಿರಾಸೆ-ಸಪ್ಪೆಯಾಗಿರುವುದಿಲ್ಲ, ಈ ದಿನಗಳಲ್ಲಿ ತಮ್ಮನ್ನ ತಾವು "ವಿಶ್ವಾಸಿಗಳೆಂದು" ಕರೆದುಕೊಂಡು, ಲೋಕದ ರೀತಿಯಲ್ಲಿರುವವರಲ್ಲ. ಅವರೆಲ್ಲರೂ ಒಟ್ಟಾಗಿ ವಿಭಿನ್ನ ವರ್ಗವುಳ್ಳವರು. ಅವರು ಲೋಕದಿಂದ ಬಿಡಿಸಿಕೊಂಡವರು (ಸ್ವತಂತ್ರವುಳ್ಳವರು). ಅವರ ಮನಸ್ಸು ಲೋಕದ ನೆಮ್ಮದಿಯಲ್ಲಾಗಲಿ ಅಥವಾ ಐಶ್ವರ್ಯಗಳಲ್ಲಾಗಲಿ ಅಥವಾ ಗೌರವದಲ್ಲಾಗಲಿ ನೆಟ್ಟಿರುವುದಿಲ್ಲ.

ಈಗ ನಾವು ನೋಡುವುದಾದರೆ, ಅವರು ಮನುಷ್ಯನಿಂದಲೂ ಮನುಷ್ಯನ ಅಭಿಪ್ರಾಯಗಳಿಂದಲೂ ಸ್ವತಂತ್ರರಾಗಿದ್ದಾರೆ. ಇದರ ಫಲಿತಾಂಶವೇನೆಂದರೆ, ಅವರು ದೇವರಿಗೆ ಮತ್ತು ಯಜ್ಞದ ಕುರಿಯಾದಾತನಿಗೆ ಪ್ರಥಮ ಫಲಗಳಾಗಿದ್ದಾರೆ.

ಮರದ ಮೇಲೆ ಮೊಟ್ಟ ಮೊದಲು ಹಣ್ಣಾಗಿ ಸಿಗುವಂತಹ ಆ ಫಲಗಳೇ ಪ್ರಥಮ ಫಲಗಳು. ಇಂತಹವರುಗಳೇ ಪವಿತ್ರಾತ್ಮನಿಗೆ ತಕ್ಷಣಕ್ಕೆ ಪ್ರತಿಕ್ರಯಿಸುವರು ಮತ್ತು ಅವರ ಭೂಲೋಕದ ಜೀವಿತಾವಧಿಯಲ್ಲಿ ಪರಿಪಕ್ವರಾದವರು ಆಗಿರುವರು. ಅವರು ತಮ್ಮ ಜೀವಿತವನ್ನು ವ್ಯರ್ಥ ಮಾಡುವುದಿಲ್ಲ. ಶಿಲುಬೆಯನ್ನು ಹೋರುವಂತೆ ದೇವರು ಅವರಿಗೆ ಕೊಡುವ ಸದಾವಕಾಶಗಳನ್ನು ಅವರು ವ್ಯರ್ಥ ಮಾಡುವುದಿಲ್ಲ. ಯಜ್ಞದ ಕುರಿಯಾದಾತನನ್ನು ಹಿಂಬಾಲಿಸುವಂತಹ ಸದಾವಕಾಶಗಳನ್ನು ಅವರು ವ್ಯರ್ಥ ಮಾಡಿಕೊಳ್ಳುವುದಿಲ್ಲ.

ಅವರ ಹಾದಿಯಲ್ಲಿ ಯೇಸುವನ್ನು ಹಿಂಬಾಲಿಸಲು ಮತ್ತು ಪವಿತ್ರಾತ್ಮನ ಮುನ್ನೆಡುಸುವಿಕೆಗೆ ವಿಧೆಯರಾಗಲು ತಮ್ಮನ್ನ ತಾವು ನಿರಾಕರಿಸಲು (ಸ್ವಾರ್ಥಕ್ಕೆ ಸಾಯಲು) ಬರುವ ಎಲ್ಲಾ ಅವಕಾಶಗಳನ್ನು ಅವರು ಬಳಸಿಕೊಂಡರು. ಇದರ ಫಲಿತಾಂಶವೇನೆಂದರೆ, ಅವರು ಬೇಗನೆ ಪರಿಪಕ್ವರಾದರು. ಇವರುಗಳೇ ಪ್ರಥಮ ಫಲಗಳು.

ಯಾಕೋಬ 1:18 ಹೀಗೆ ಹೇಳುತ್ತದೆ - "ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯಬೋಧನೆಯ ವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಆತನ ಸೃಷ್ಠಿಗಳಲ್ಲಿ ಪ್ರಥಮ ಫಲದಂತಾದೆವು".

ಸರಿಯಾದ ಹಾದಿಯಲ್ಲಿ ಎಲ್ಲರೂ ಪ್ರತಿಕ್ರಯಿಸುವುದಿಲ್ಲ. ಆದರೆ ಇದರಲ್ಲಿ ಕೆಲವರಲ್ಲಿ ಯಾರು ಸರಿಯಾಗಿ ಪ್ರತಿಕ್ರಯಿಸುತ್ತಾರೋ, ಅವರು ಪ್ರಥಮ ಫಲವಾಗುತ್ತಾರೆ. 1,44,000 ಸಂಖ್ಯೆಯು ಅಕ್ಷರಾರ್ಥವಲ್ಲ. ಇದು ಕಡಿಮೆ ಜನಸಂಖ್ಯೆಯ ಗುರುತು. ನಿತ್ಯಜೀವದ ಹಾದಿಯು ಇಕ್ಕಾಟ್ಟದಾದ್ದು ಮತ್ತು ಇದನ್ನು ಕೇವಲ ಕೆಲವರು ಮಾತ್ರ ಕಂಡು ಕೊಳ್ಳುತ್ತಾರೆ, ಎಂದು ಯೇಸು ಹೇಳಿದ್ದಾರೆ.

ದೇವರ ಸಾನಿಧ್ಯದಲ್ಲಿ "ಯಾರಿಂದಲೂ ಎಣಿಸಲಾಗದಂಥ" ಮಹಾ ಸಮೂಹವು ಅಲ್ಲಿ ನಿಂತಿರುವುದು. ಇವರು ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಯನ್ನು ಶುಭ್ರ ಮಾಡಿಕೊಂಡವರು. ಪ್ರಕಟನೆ 7ನೇ ಅಧ್ಯಾಯದಲ್ಲಿ ನಾವು ಇದನ್ನು ನೋಡಬಹುದು. ಅವರುಗಳಲ್ಲಿ ಹಲವರುಗಳು ಎಲ್ಲಾ ಧರ್ಮದ ಜನರುಗಳ ಶಿಶುಗಳಾಗಿದ್ದು, ಅವರು ಅರ್ಥ ಮಾಡಿಕೊಳ್ಳುವ ವಯಸ್ಸಿಗೆ ಬರುವ ಮೊದಲೇ ಸತ್ತವರಾಗಿರುತ್ತಾರೆ. ಅವರುಗಳಲ್ಲಿ 20 ನೇ ಶತಮಾನದಲ್ಲಿದ್ದಂತ ಗರ್ಭಪಾತವಾದಂತ ದಶಲಕ್ಷ ಭ್ರೂಣಗಳಿರುತ್ತವೆ. ಕ್ರಿಸ್ತನ ಪರಿಪೂರ್ಣ ನೀತಿಯು ಅವರುಗಳ ಖಾತೆಗೆ ಹಾಕಲ್ಪಟ್ಟಿರುತ್ತದೆ. ಆದ್ದರಿಂದ ಅವರುಗಳು ಪರಲೋಕದಲ್ಲಿರುತ್ತಾರೆ. ಆದರೆ ಅವರು ಜಯಗಳಿಸುವಂತರಾಗಲೂ ಯಾವುದೇ ಸದಾವಕಾಶವನ್ನು ಪಡೆದಿರುವುದಿಲ್ಲ. ಆದರೆ ಮನಸ್ಸಾಕ್ಷಿಗನುಸಾರವಾಗಿ ನಿತ್ಯಜೀವಕ್ಕೆ ಮುನ್ನೆಡುಸುವಂತಹ ಇಕ್ಕಾಟ್ಟಾದ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವವರು ಎಣಿಸಲ್ಪಟ್ಟಂತ ಗುಂಪಾಗಿದ್ದಾರೆ. ಅವರು ತುಂಬಾ, ತುಂಬಾ ಕಡಿಮೆ. ಇವರುಗಳೋ ಮತ್ತಾಯ 5, 6 ಮತ್ತು 7 ಅಧ್ಯಾಯಗಳನ್ನು ಗಂಭೀರವಾಗಿ ತೆಗೆದುಕೊಂಡವರಾಗಿದ್ದಾರೆ. ಇವರುಗಳೇ ದೇವರಿಗೆ ಮತ್ತು ಯಜ್ಞದ ಕುರಿಯಾದಾತನಿಗೆ ಪ್ರಥಮ ಫಲಗಳಾಗಿದ್ದಾರೆ.